ಬಸವಾಗದೆ ತಾನೆಂತುಂ
ಬಸದಾಗಿಸುವುದು
ಸಮಸ್ತ ಪರಿಜನಮುಮನೊ
ಡ್ಡಿಸುವಿಂದ್ರಿಯವಿಸರಮುಮಂ

ಬಿಸರುಹಮುಖಿಯರುಮನಱಿವೊಡಿದೆ
ಸಿದ್ಧಾಂತಂ     ೫೧

ಉದಯಿಪ ನೇಸಱಿಂ ಕಿಡದ ಕೞ್ತಲೆ ಕಿತ್ತಲಗಿಂ ಕಱುತ್ತು ಕು
ತ್ತದ
ಕಲಿವೇನೆಯಂತಕನ ಬಾರಿಗೆ ಬಾರದ ಸಾವು ಕಳ್ಳನು
ಣ್ಣದ
ಕಡುಸೊರ್ಕು ಕಿಚ್ಚಿನುರಿ ಪತ್ತದೆ ಪೊತ್ತುವ ಬೇಗೆ ಪಾವು ತಿ
ನ್ನದೆ
ತನಿನಂಜು ತನ್ವಿಯರೊಳಾದಳುಪಿಂ ಪೆಱತುಂಟೆ ಲೋಕದೊಳ್    ೫೨

ಒದವಿದ ಪೆಂಪನೊಲ್ಲದೊಡೆ ನೀತಿಯನೊಲ್ಲದೊಡೋತ ಸೈಪನೊ
ಲ್ಲದೊಡೆ
ಜಸಕ್ಕೆ ಜವ್ವನಮನೊಲ್ಲದೊಡಾಯತಿಗಾದ ಪೆರ್ಚನೊ
ಲ್ಲದೊಡೆ
ವಿವೇಕಸಂಪದಮನೊಲ್ಲದೊಡೊಲ್ವರ ಪೇೞ್ದ ಮಾತನೊ
ಲ್ಲದೊಡೆ
ಕುಲಕ್ರಮೋನ್ನತಿಯನೊಲ್ಲದೊಡೊಲ್ವುದು ಪೆಣ್ಗೆ ಮಾನವಂ      ೫೩

ಅವಸಂತೋದ್ಧತಕಾಮಮಶ್ರಮನಿಮಿತ್ತಾರೂಢಸಮ್ಮಾರ್ಛಮ
ಶ್ರವಣಾಭಾವವಿಬದ್ದಬಾಧಿರಮಸೀಧು
ಸ್ವಾದಿತಕ್ಷೀಬಮ
ದ್ರವಿಣೋದ್ರೇಕವಿವರ್ಧಿತಾಂಧಿಮಮಪಂಕಕ್ಷೋಭಕಾಲುಷ್ಯಸಂ

ಭವಮೇನಲ್ಲ
ವೆ ಮಾದ್ಯದಿಂದ್ರಿಯಗಜಕ್ರೀಡವನಂ ಯವ್ವನಂ     ೫೪

ಅತನು ಗಡಾ ಭಟಂಗೆ ನನೆವಿಲ್ಗಡ ಪೂವೆ ಸರಲ್ಗಡಂ ಹಿಮ
ದ್ಯುತಿ
ಗಡ ಬಂದ ಮಾವು ಗಡ ತೆಂಬೆಲರುಂ ಗಡ ತುಂಬಿಗಳ್ ಗಡಂ
ಲತೆ
ಗಡ ಸೈನಿಕಂ ಗಡಮವಂಗೆ ಗಡಕ್ಕಟ ಸೋಲ್ತು ತಾಂ ಗಡು
ದ್ಧತರುಮನಿಕ್ಕುವಂ
ಗಡ ನೃಪಂ ಗಡ ಪೇೞಿದು ಕೇಳತಕ್ಕುದೇ   ೫೫

ಅವಿವೇಕಂ ಮೃಗತೃಷ್ಣೆವೋಲ್ಪೊಳೆವಿನಂ ಗಾಂಭೀರ್ಯವಾರಾಶಿ
ತ್ತುವಿನಂ
ಧೈರ್ಯಧರಾಧರಂ ಬಿರಿವಿನಂ ವಿದ್ಯಾವನಶ್ರೇಣಿ ಪೊ
ತ್ತುವಿನಂ
ತಪ್ತಶರೀರಸೂರ್ಯಮಣಿಯಿಂ ಜ್ವಾಲಾಕಳಾಪಂಗಳು
ಣ್ಮುವಿನಂ
ಪೊಣ್ಮಿದುದೀ ಜಗತ್ತ್ರಯದೊಳಂ ಕಾಮೋಗ್ರಘರ್ಮಾಗಮಂ    ೫೬

ಅದನದಿರದೊದವಿ ಬೇಗಂ
ಬೆದಱಿಸುವೊಡೆ
ದಮಪಯೋಧರಾಗಮಮೆ ವಲಂ
ಬೆದಱಿ
ಪುದದಱಿಂ ನಯಕೋ
ವಿದನೆನಿಪಂ
ದಮಸಮೇತನಾಗಲೆವೇೞ್ಕುಂ  ೫೭

ಎಂದು ನುಡಿದ ಮಕರಂದನನುಮಾನದಿಂ ಮನದೊಲವರಮನಱಿದುದರ್ಕೆ ಮನದೊಳೆ ಬೆರ್ಚಿ ಬಸಮಲ್ಲದ ಬೇವಸದ ಬಿಣ್ಪು ಪಸುಗೆವೋಗೆ ಲಾಘವಮನಪ್ಪುಕೆಯ್ದಂತಿರೀಷದುನ್ಮಿ ಷಿತವದನಾರವಿಂದನಾಗಿ –

ಮಂದಸ್ಮಿತಮಂ ಮೆಲ್ಲನೆ
ಮುಂದೆ
ಪಸಾಯಮನೆ ಕುಡುವ ತೆಱದಿಂ ಕಡೆಗ
ಣ್ಣಿಂದಡರೆ
ನೋಡಿ ನೃಪಸುತ
ನೆಂದನುಪಾಲಂಭನಿಭಗಭೀರೋಕ್ತಿಗಳಂ
      ೫೮

ಏನೆಂದನ್ಯಪರೋಕ್ತಿಯಂ ಪರಪುವೈ ಪೋ ಸಾಲ್ಗುಮಾಕಾರವಿ
ಜ್ಞಾನಂ
ನಿನ್ನೊಳೆ ನಿಂದುವಲ್ತೆ ಪೆಱನಾವಂ ನಿನ್ನವೊಲ್ಕಾಣ್ಬನೆ
ನ್ನೀ
ನಿರ್ವೇದಮನೋದಿನಿಷ್ಟದೊಳೆ ಮಾತುಂ ಬಲ್ಮೆಯಂತಲ್ಲದಂ
ದಾನುದ್ಯಾನವಿಹಾರಖಿನ್ನನೆನದಂ
ನೀನಿಂತಿರುತ್ಪಾದಿಪೈ        ೫೯

ಎಂದುಸಿರದಿರೆ ನೃಪಂ ಮಕ
ರಂದಂ
ನಗುತೆಂದನಿಂಗಿತಜ್ಞತೆಯೆನ್ನೊಳೆ
ಕುಂದಿದುದೆ
ದೇವ ನೀನೇ
ನೆಂದೊಡಮಂತೆನಲೆವೇೞ್ಕುಮಾದೊಡಮಿಗಳ್
        ೬೦

ಎನಗಱಿವುಂ ಬೇಱೆಲ್ಲಿತೊ
ನಿನಗೆ
ಮನಂಮಾಡಿ ನಡಪಿದೈ ನೀನೆನ್ನಂ
ಮನಮಱಿವುದಱಿವೆ
ಮಱೆಯಿಸಿ
ಮನಮಂ
ಪೊಱಮಾಱಿ ಕಳೆವ ದೇವನುಮೊಳನೇ     ೬೧

ಎನಗಿನಿಸೊಂದುಮಂ ಬೆಸಸಿದಿರ್ದೊಡಮಂಗಜತಾಪಮಂ ಪಳ
ಚ್ಚನೆ
ಪಿಸುಣಾಡುತಿರ್ದ ಪುವಿವೊಯ್ಯನೆ ನಿನ್ನಯ ಮೆಯ್ಯೊಳಾಱುವೀ
ಪನಿಗಳುಮೆನ್ನುಮಂ
ಸುಡುವ ಸುಯ್ಗಳುಮೀ ಬಿಸುಗಯ್ಯ ಪುಲ್ಗಳೊ
ಯ್ಯನೆ
ಪೊಗೆ ತಂದು ತಾಱೆ ಮೊಗಮಂ ಕೆಲಕುಯ್ವ ಮೃಗೀಮೃಗಂಗಳುಂ ೬೨

ಆನಿದನಱಿಯಲೆ ನಿನಗಿ
ತ್ತೀನಳಿನಮುಮುರಿಗೆ
ತೋಱಿದಲರಂತಿರೆ ಪರಿ
ಮ್ಲಾನಮಿನಿತಾಯ್ತು
ನೋಡಿದೆ
ನೇನೆಂದೆಲೆ
ಬಯಲ ಬಯಲೊಳಗಡಗಲ್ ಬಗೆವೈ     ೬೩

ಎಂಬುದುಂ ಬಗೆಯ ಬೈಕೆಗೆ ನಾಲಗೆ ಪಿಸುಣನೆಂಬಂತೆ ಕುಸುಮಮಂ ಮುಡಿದೀಡಾಡಿ ಕೇಶದ ಕಂಪಱಿದು ಪೋಕೆಂಬಂತೆನ್ನಂ ಪಾಣ್ಬೆಯೆಂಬಳನೆನ್ನ ದೂತಿಗೆ ತೊೞ್ತುಮಾಡು ವೆನೆಂಬರಸನಿಂತೆಂದಂ –

ಮದನಾಗ್ನಿಜ್ವಾಲೆಯೆನ್ನಂ ಸುಡುವನಿತುವರಂ ಬೇಡಬೇಡಲ್ಲಿಗಾಂ ಕೊ
ರ್ವಿದ
ಕಿರ್ಚುಂ ಗಾಳಿಯುಂ ಕೂಡಿದ ಮಸಕಮಿದೆಂಬಂತೆ ಕಾಲಾಗ್ನಿಯುಂ ಕಾ
ಮದ
ಕಾಯ್ಪಂ ಕೊಂಡು ಚಂದ್ರದ್ಯತಿಯುಮಲೆವ ತಣ್ಗಾಳಿಯುಂ ಸುಟ್ಟುವೆಂದೆಂ
ಬುದನೆಂದಾಸ್ಯಾಬ್ಜಮಂ
ಸಸ್ಮಿತಮನೊಱಗಿದಂ ಲಜ್ಜೆಯಿಂ ರಾಜಪುತ್ರಂ   ೬೪

ಅಂತೊಱಗೆ ದರಸ್ಮಿತಮುಖಂ ಮಕರಂದನಿಂತೆಂದಂ –

ಮನದನ್ನನೆನಿಸುವೆನ್ನೊಳ
ಮಿನಿತುವರಂ
ನಾಣ್ಚಲೇಕೆ ಮಿಥ್ಯಾಮೋಹ
ಕ್ಕಿನಿವಿರಿದು
ವಿಕಳನಪ್ಪುದೆ
ಕನಸಿನ
ಭತ್ತಕ್ಕೆ ಗೋಣಿಯಾಂತೈ ನೃಪತೀ    ೬೫

ನಗೆಗಣ್ ಮಿಂಚಿನ ಗೊಂಚಲಂ ವಳಿ ತರಂಗಶ್ರೇಣಿಯಂ ವೇಣಿ ಕಾ
ರ್ಮುಗಿಲಂ
ಭ್ರೂಲತೆ ಶಕ್ರಚಾಪಲತೆಯಂ ಬಿಂಬಾಧರಂ ಸಂಜೆಯಂ
ಮಿಗೆ
ಚಾಂಚಲ್ಯಮನಾಂತ ಕಾಂತೆಯರ ಸತ್ಯಸ್ನೇಹಮುಂ ಸ್ವಪ್ನದಂ
ತೆ
ಗಡೆಂಬರ್ಬುಧರಂತದುಂ ಕನಸೆನಲ್ಕಾರ್ಮೆಚ್ಚುರ್ನಚ್ಚುವರ್   ೬೬

ಎಂದಿವು ಮೊದಲಾಗಿ ಪಲವುಂ ಪ್ರಸನ್ನ ಪುರುಷಪ್ರಾಯಂಗಳುಂ ಸ್ಮರಶರಪರಿ ಶ್ರಮಶಮಕರಂಗಳುಮಪ್ಪ ಹಿತಮಿತಪ್ರಚುರವಚನಂಗಳಿಂದಮುಂ ಪುರಾಣಪುರುಷ ಚರಿತಕೃತಕೌತುಕಕಥಕಥಾನಂಗಳಿಂದಮುಂ ಆ ಮಕರಂದನಾಮಹೀಪತಿಸುತನ ಮನಮನಾಱಿಸಿ ಪರಕಾಯಪ್ರವೇಶಂಗೆಯ್ವಂತೆ ಮನಕ್ಕೆ ಮನಮನಾಂಕೆಗೊಟ್ಟು ಮದಕರಿಯ ಮೇಗಣ ಬದಗನಂತೆ ಮೆಯ್ವಳಿಗೆ ಸಂದಳಕೆಗೊಳಿಸುವನಂತೆ ತನ್ನಿಚ್ಚೆಗೆ ತಂದು ಮತಿಯಂ ಮೊದಲ್ಗಿಡಲೀಯದೆ ಮದನವಿಕಾರಮನೊದವಲೀಯದೆ ಧೈರ್ಯಮಂ ದೂರಂಬೋಗಲೀಯದೆ ಮಜ್ಜನಭೋಜನ ತಾಂಬೂಲಭೂಷಣವಸನಕುಸುಮಾಂಗರಾಗದೊಳಂ ವಿರಾಗಮನಾಗಲೀಯದೆ ನೆೞಲಂತೆ ಬೞಿಯನುೞಿಯದೆ ಸುಕೃತದಂತೆ ಸೋಂಕಿನೀ ತೊಲಗದೆ ಶರೀರದಂತೆ ಸುಖದುಃಖ ಭಾಗಿಯಾಗಿ ತಾನೆ ಮರಮರಹಸ್ಯಭೂಮಿಯುಂ ಪರಮಮಿತ್ರನುಮಪ್ಪುದಂ ತಪ್ಪಿಲ್ಲದೆ ತೋಱಿ ತೆಱಪುಗುಡದೊಳಪೊಕ್ಕಳವಡಿಸಿ ಕಾದುಕೊಂಡಿರ್ಪುದುಮೊಂದು ದಿವಸಂ ವಿದಳಿತಕಮಳ ಕೋಶಪರಿಮಳಮಜ್ಜನಾಮೋದಿತಮುಗ್ಧಮಯೂಖಾಗ್ರನಪ್ಪ ದಿವಸಕರನುದಯಿಸುವ ಸಮಯದೊಳ್ ಸಮುಚಿತಾಸ್ಥಾನನಾಗಿ ಕಂದರ್ಪಲೀಲೆಯಿಂ ಕಂದರ್ಪದೇವನಿರ್ಪುದುಮಾ ಪ್ರಸ್ತಾವದೊಳ್ –

ಅಳಿನೀಲೀಕಂಚುಕಂ ದಳ್ಳಿಸೆ ಮೊಲೆಯಲೆಪಿಂ ಕಯ್ಯ ಸೋಂಕಿಂದೆ ಕೆಂಪಂ
ತಳೆದೊಪ್ಪಂಬೆತ್ತ
ಪೊಂಬೆತ್ತದ ಸೆಳೆಗೆ ತಳಿರ್ಮೂಡಿದಂತಾಗೆ ಪುರ್ವಿಂ
ಸೆಳೆಯುತ್ತುಂ
ಗಾಡಿಯಂ ನೋಡಿಯೆ ಮಿಡುಕಿದೊಡಂ ನೇತ್ರವೇತ್ರಾಗ್ರದಿಂದ
ಪ್ಪಳಿಸುತ್ತುಂ
ಸುತ್ತಿದುರ್ವೀಶ್ವರರನೆಸೆದು ಬಂದಳ್ ಪ್ರತೀಹಾರಿಯೊರ್ಬಳ್ ೬೭

ಅಂತು ಬಂದು ಕುಚಭರದಿಂ ಕುಸಿದು ಬೀೞ್ವಂತೆ ದೂರಾಂತರದೊಳ್ ಬಾಗಿ ಬೀಗಿ ಬಳೆದೀ ಮೊಲೆಗಳೆನಗೆಡೆಗುಡದೆ ನೂಂಕಿ ಕಳೆದಪುವೆಂದು ಪುಯ್ಯಲ್ಚಿ ಮೆಯ್ಯನಿಕ್ಕುವಂತೆ ಮಣಿಹಾರಂ ಘಳಿಲನೆ ತಾಗಿ ಮಣಿಕುಟ್ಟಿಮದೊಳ್ ಕುಪ್ಪಳಿಸಿ ಪಿಡಿವೂವನಿಕ್ಕಿ ಪೊಡೆವಡುವಂತಿರುಗುರ್ವೆಗಳು ಮುಂದೆ ಕೆದಱಿ ಮಹೀತಳನಿಹಿತಕರತಳೆಯಾಗಿ ಸವಿನಯದಿಂ ಮೆಲ್ಲನಿಂತೆಂದಳ್ –

ಜನಪತಿ ಬಿನ್ನಪಂ ಜಗದ ಮಾಯೆಗಿವಂ ನೆಲೆ ಕೌತುಕಕ್ಕಿವಂ
ಜನನಗೃಹಂ
ಚಮತ್ಕೃತಿಗಿವಂ ಕಣಿ ವಿದ್ಯೆಗಿವಂ ವಿಧಾತ್ರನೆಂ
ಬಿನಮದೆ
ಮಂತ್ರಸಿದ್ಧಿಗಮರೇಂದ್ರನನಳ್ಳಿಱಿವಂತೆ ನೀಳ್ದಗು
ರ್ವಿನ
ಗೞಿಯೆತ್ತಿ ಬಂದನವನೊರ್ವನಪೂರ್ವಿಗನಿಂದ್ರಜಾಲಿಗಂ  ೬೮

ಬಂದು ದೇವ ದಾರವಟ್ಟದೊಳಿರ್ದಪನವನ ಪೆಸರ್ ಮಾಯಾಭುಜಂಗನೆಂದವಳ್ ಬಿನ್ನವಿಸೆ ವಸುಧಾವಲ್ಲಭನುಲ್ಲಸಿತಲೋಚನವಾಗಿ ಮಕರಂದನ ಮೊಗಮನವಳೋಕಿ ಪುದುಮಾತನರಸನ ಕಣ್ಣಱಿದು ಕುತೂಹಳಮುಳ್ಳೊಡೆ ಕಾಣಲಕ್ಕುಮಿಗಳೆ ಪುಗಿಸೆಂಬುದಂ ಪೊಡೆವಟ್ಟು ಪೋಗಿ ಪಡಿಯಱತಿ ಪುಗಿಸಿದಾಗಳ್ –

ತಿರಿಪುತ್ತುಂ ಕುಂಚಮಂ ಸೆಳ್ಳುಗುರೆಳವೆಳಗಂ ಸೂಸುತಂ ಪಲ್ಲ ಮಿಂಚಂ
ಪರಪುತ್ತುಂ
ಭಾಳಬದ್ಧಾಕ್ಷತಮನಮರೆ ಪತ್ತೊತ್ತುತುಂ ಯೋಗಪಟ್ಟೋ
ದರಮಂ
ಸೈತಿಕ್ಕುತುಂ ಕುಂಕುಮರಜನಿರಜೋರಂಜಿತಾಂಗಂ ಮದಪ್ರ
ಸ್ಫುರಿತಾಕ್ಷಂ
ಬಂದು ಪೊಕ್ಕಂ ನೃಪಸಭೆಯನಹಂಕಾರಿ ಮಾಯಾಭುಜಂಗಂ         ೬೯

ಪುಲಿದೊವಲೆಸೆದುದು ಜೋಗಿಗೆ
ಸಲೀಲಗತಿಯಿಂದೆ
ಬರ್ಪ ಪದದೊಳ್ ವಿದ್ಯಾ
ಬಲದಿಂ
ಹರನುಟ್ಟುದುಮಂ
ಸುಲಿದುಟ್ಟಭಿಮಾನಮವನೊಳಭಿನಯಿಸುವವೋಲ್
    ೭೦

ಎಳಮಿಂಚನರೆಂದು ಸಣ್ಣಿಸಿ
ಬೞಿದಂತಿರೆ
ತೊಳಪ ಮೆಯ್ಯೊಳಿರೆ ನೋೞ್ಪರ
ಣ್ಬೞಿಯ
ಬೆಳಗಿಂದ್ರಜಾಲಮ
ನಿಳೆಗಿಂದ್ರನ
ತೋಱಲೆಂದು ಬಂದವೊಲೆಸೆಗುಂ        ೭೧

ಜೋಗಿಯ ಕೊರಲೊಳ್ ಕರಮಿಂ
ಬಾಗಿರ್ದುದು
ಪೊಳೆವ ಪೊನ್ನ ಪಟ್ಟಿಗೆ ನಿಜವಿ
ದ್ಯಾಗರ್ವದಿಂದೆ
ಮಿಸ
ಲ್ಪೋಗದ
ಕುಡಿಮಿಂಚನಮರೆ ಮುಱಿದಿಕ್ಕಿದವೋಲ್    ೭೨

ತಳ್ಪೊಯ್ದು ಸಂಜೆಗೆಂಪಿನ
ತೆಳ್ಪಮರ್ದಿರೆ
ಪೊರೆಯನೆತ್ತಿ ಪೊಲಿಸಿದ ತೆಱದಿಂ
ದೊಳ್ಪಿನ
ಪೊಸಟೊಪ್ಪರಮಿನ
ಕಳ್ಪಂಗಾ
ಜೋಗಿಗೆಸೆದುದಸದಳಮಾಗಲ್    ೭೩

ಆದಿತ್ಯನ ಮಂಡಲದೊಳ್
ತೇದರುಣನನಮರೆ
ಬೊಟ್ಟನಿಟ್ಟಂತೆ ಬೆಡಂ
ಗಾದುದು
ಜೋಗಿಯ ನೊಸಲೊಳ್
ಮೂದೆರೆಗೊಂಡೊಪ್ಪುವರುಣಚಂದನಗಂಧಂ
೭೪

ಸಿಡಿಲಂ ಕಿಱಿಕಿಱಿದಾಗಿರೆ
ಕಡಿದು
ತೊಡರ್ಚಿದವೊಲಾತನೆಡಗಾಲೊಳ್ ಪೊಂ
ದೊಡರಲೆದು
ಘಣ್ಮುಘಳಿಲೆಂ
ದೊಡನಲೆದುದು
ಮಲೆವ ರಿಪುಚಮತ್ಕಾರಿಗಳಂ        ೭೫

ಮುಂಚಿ ಮಿಱುಮಿಱನೆ ಮಿಂಚಿ
ಳಂಚುವ
ಪೊಱಮಡುವ ಪೊಳೆವ ಪಲ್ಗಳ ಪಲವುಂ
ಗೊಂಚಲ್ವೆಳಗುಗಳಿಂದೆಳ

ಮಿಂಚಂ
ಮುಕ್ಕುಳಿಸಿಯುಗುೞ್ವವೊಲ್ ಕರಮೆಸೆಗುಂ   ೭೬

ಉಗುರಿಸಿ ಬೆಂಗೆ ಬಿಟ್ಟ ಪಿಣಿಲೊತ್ತಿದ ಬೈತಲೆ ಸಣ್ಣಪುರ್ಬು ನು
ಣ್ಪೊಗೆದ
ಕದಂಪುನೀಳ್ದಸಿಯ ಕಣ್ ಸೆಳೆಯೊಳ್ನಡು ಪೀವರಸ್ತನಂ
ಬಗೆವುಗೆ
ಕಯ್ಯ ಸಿಪ್ಪು ಸೆಳೆ ಮೆಟ್ಟಿದ ಪಾವುಗೆ ತೊಟ್ಟ ಜೋಗವ
ಟ್ಟಿಗೆ
ತೆಗೆದುಟ್ಟ ಸೋಗೆ ಕರಮೊಪ್ಪಿರೆ ಜೋಗಿಣಿ ಬರ್ಪಳೊಪ್ಪಿದಳ್         ೭೭

ಸಿಂದುರದ ಬೊಟ್ಟು ನುಣ್ಣನೆ
ಮಿಂದರಿಸಿನವರುಣಕುಸುಮದಾಮಂ
ಕಿವಿಯೊಳ್
ಕೆಂದಾವರೆ
ಬೈತಲೆಯೊಳ್
ಕುಂದದ
ಸೇಸಕ್ಕಿ ಸೊಗಯಿಕುಂ ಜೋಗಿಣಿಯಾ        ೭೮

ಮುಡಿಯೊಳೆೞಲಿಕ್ಕಿದಸುಕೆಯ
ಕುಡಿದಳಿರಿಂದೆಸೆದಳಾಕೆ
ಕೇಸುರಿಯಂ ಕೊಂ
ಡುಡಿದು
ಮುಡಿದಂತೆ ವಿದ್ಯಾ
ವಿಡಂಬಮಂ
ತೋಱಲೆಂದು ತತ್ಸಭೆಗಾಗಳ್  ೭೯

ಅಲ್ಲಿಂ ಪೆಱಗೆ –

ಗರುಡನೆಱಂಕೆಯಂ ಮುಱಿದು ಕೆಂಬಿಸಿಲಂ ತಿಱಿದಿಂದುಬಿಂಬಮಂ
ಬರೆತೆಗೆದಿಟ್ಟು
ಕಟ್ಟಿದಮೊಲೊಪ್ಪಿಗೆ ಸೀಗುರಿ ರಕ್ತಚಾಮರಂ
ಸುರುಚಿರದರ್ಪಣಂ
ತುದಿಯೊಳುತ್ಪಟ ಚಿತ್ರಪಟಂ ಬೆಡಂಗನಾ
ಳ್ದಿರೆ
ಕಳಕಿಂಕಿಣೀಕ್ವಣಿತಮದ್ದುತಮಾದುದು ಕೌತುಕಧ್ವಜಂ       ೮೦

ಜಟಿಳಿತಕೇಶಂ ವೇಷ್ಟಿತ
ಪಟಚ್ಪದಂ
ದೀರ್ಘದೇಹಿ ಜಟ್ಟಿಗನೆಂಬೋಲ್
ಕುಟಿಲಗತಿ
ಬರುತುಮಿರ್ದಂ
ಭಟನೊರ್ಬಂ
ಪೊತ್ತು ಬೆಮರುತುಂ ತದ್ಧ್ವಜಮಂ       ೮೧

ಅಂತು ಬಂದ ಮಾಯಾಭುಜಂಗಂ ಬಿರುದಿನ ಗೞೆಯಂ ದೂರದೊಳಿರಿಸಿ ವಿದ್ಯಾಧರಿಯೆಂಬ ಜೋಗಿಣಿವೆರಸು ರಂಗಮಂ ಪೊಕ್ಕು ಕಟಿತಟನಿವೇಶಿತವಾಮಕರ ಕಂಜತಳಂ ಕುಂಚಿಕಾಚಾಳನ ಚತುರಮಪ್ಪ ಸವ್ಯೇತರಹಸ್ತಮಂ ನಭಕ್ಕೆ ನೆಗಪಿ

ಪಣಮಹಮನಿಂದಚಳಣೇ ಮಹಣಿಜ್ಜಾ ಕೋದುಹಲ್ಲೇಣ
ಅಣ್ಣಾ
ತಿಹುವಣಮಜ್ಜೇ ಸಂತೋಸೋವೋ ಸುಹಂ ಸಜ್ಜೋ      ೮೨

ಎಂದು ಮಹೇಂದ್ರನಂ ಸ್ತುತಿಸಿ ಮಹೀಪಾಳಮುಖಕಮಲದತ್ತದೃಷ್ಟಿಯಾಗಿ ದೇನ ನೀನಪ್ಪೊಡೆ ನಿಖಿಳಕಳಾಕೋವಿದನೈ ಕೃತಾವಳೋಕಿತ ಕುತೂಹಳನೆಯದಱಿಂ ನೀನಱಿಯದ ವಿದ್ಯೆಯಿಲ್ಲಂ ನೀಂ ಕಾಣದ ಕೌತುಕಮಿಲ್ಲ ನಿನ್ನೋಲಗಮಂ ಪುಗದಿಂದ್ರಜಾಲಿಗನಿಲ್ಲಾದೊಡಂ ನಿನ್ನ ಚಿತ್ತಕ್ಕೆ ಚಮತ್ಕಾರಮಪ್ಪ ಚಮತ್ಕಾರಮಂ ತೋರ್ಪೆನೆನ್ನ ಪೆರ್ಮಾತಂ ಪೇೞ್ವೊಡೆ ಮಂತ್ರದೊಳಾಜ್ಞಾಸಿದ್ಧನೆಂ ತಂತ್ರದೊಳ್ ಪ್ರಯೋಗಸಿದ್ಧನೆಂ ಯುಕ್ತಿಲಾಘವಮೆಂಬೆರಡೞೊಳಂ ಬೆಱಗುಗಿಡದೆ ಪತ್ತಿದ ಬಗೆಯುಮಂ ಪರಿವ ಕಣ್ಣುಮಂ ಪೊಲಗಿಡದೆ ಪಿಡಿಯಲೆನ್ನ ಬಿರುದಿನ ಗೞೆವಿಡಿವನ ಕೆರ್ಪಂ ಪಿಡಿದನೆ ಬಲ್ಲನಂತುಮಲ್ಲದೆ –

ಉರಿಪುವುದೋ ಪೊದೞ್ದುರಿಗಳಿಂ ಜಳಮಂ ತಿಮಿರಂಗಳಿಂ ದಿವಾ
ಕರನನಡುರ್ತ
ಬೆಂಕೊಳಿಪುದೋ ಮಣಿದರ್ಪಣಮಾಗೆ ಮಾೞ್ಪುದೋ
ಪರಿಣತಚಂದ್ರನಂ
ನಿನಗೆ ತಾರಗೆಯಂ ತಳದಿಂದೆ ಕೋದಳಂ
ಕರಿಪುದೊ
ದೇವ ನಿನ್ನ ವನಿತಾಜನಪೀನಪಯೋಧರಂಗಳಂ     ೮೩

ಜಳನಿಧಿಯನೆೞೆದು ತರ್ಪುದೊ
ಕುಲಗಿರಿಯನುರುಳ್ಚಿ
ತರ್ಪುದೋ ನಭಕೆ ಮಹೀ
ತಳಮಂ
ನೆಗೆಪುವುದೊ ನಭ
ಸ್ಥಳಮುಮನಿೞಿಪುವುದೊ
ಮಹಿಗಿದರ್ಕೇವೇೞ್ಕುಂ      ೮೪

ಮಿಗೆ ಗೞಪುವುದೇನೊಡ್ಡೋ
ಲಗದೊಳ್
ದಿವಿಜೇಂದ್ರನಿರ್ಪ ವಿಭವಮುಮಂ ಚೆ
ಲ್ವೊಗೆವಮರೀಲಾಸ್ಯಮುಮಂ

ಗಗನದೊಳಾಂ
ತೋರ್ಪೆನರಸ ನೋಡುವುದಿನಿಸಂ    ೮೫

ಎನೆ ಸಾಭಿಪ್ರಾಯನಾಗಿ ಮಕರಂದಂ ನರೇಂದ್ರನಿಚ್ಚೆಯನಱಿದಿಂದ್ರನೋಲಗಮನೆ ತೋರ್ಪುದೊಪ್ಪುಗುಮೆಂಬುದುಂ –

ಗಗಮಕುಸುಮಮನೆ ಪಡೆವಂ
ತೊಗೆವುಗುರ್ಗಳ
ಬಿಳಿಯ ಬೆಳಗು ಬಳೆದಡರ್ದಿರೆ ಕುಂ
ಚಿಗೆಯನವಂ
ಬೀಸಲೊಡಂ
ಸೊಗಯಿಸಿದುದು
ಭೋಂಕೆನಮರಪತಿಸಭೆ ನಭದೊಳ್          ೮೬

ಅಲ್ಲಿ ಶೈಶವದಶೆಯ ಪರಿಣಾಮದಶೆಯ ದೆಸೆಯುಮನಱಿಯದೇಱುಂಜವ್ವನಮನುಱೆ ಸೆಱೆವಿಡಿದ ಸುರಕಾಂತೆಯರ ಸರಸಕಿಸಲಯಸ್ನಿಗ್ದ ಸುಕುಮಾರ ಕರಚರಣಾರುಣಕಿರಣಜಲದಿಂ ಕಿಸುಸಂಜೆ ಪಸರಿಸದಂತೆಯುಮಾಕೆಗಳ ಲಾವಣ್ಯರಸಪ್ರವಾಹದಿಂ ಗಗನಗಂಗಾಪ್ರವಾಹಂ ಕವಿದಂತೆಯುಮಾಕೆಗಳ ಪುಷ್ಪಮಂಜರೀಮಂಜುಳ ಪುಂಜಾಯಮಾನಪದನಖನಿಕಾಯದಿಂ ತಾರಾಗಣಂಗಳ್ ತೆಕ್ಕೆಗೊಂಡಿೞಿದಂತೆಯುಮಾಕೆಗಳ ಚಕಿತಚಕೋರಚಪಳವಿಳೋಚನ ವಿಳಸಿತಂಗಳಿಂ ಸಮುದ್ದಾಮವಿದ್ಯುದ್ದಾಮಂಗಳ್ ದಿಂಡುಗೆಡೆದಂತೆಯುಂ, ಆಕೆಗಳುನ್ನತನಿತಂಬದಲಘುಜಘನಸ್ತನವಿತಾನದಿಂದಮಾಗಸದ ಮಹತ್ವಮೋಸರಿಸೆಯುಮನೇ ಕನಾಕಿನೀಕರಮಕುಟತಟಪ್ರಾಂತ ಪದ್ಮರಾಗಮಣಿ ಪ್ರಭಾಪಟಲದಿಂ ದಿವಸಕರಮರೀಚಿಮಾಳೆ ಮಾಂಸಳಮಾಗೆಯುಮಿಂತಸದೃಶಸೌಂದರ್ಯಸಾರಶೃಂಗಾರಗೌರವ ಸಹಜಸಕಳೈಶ್ವರ್ಯ ಸಂಕರಸಂಕೇತಸ್ಥಾನಮೆನಿಸಿದಿಂದ್ರನಾಸ್ಥಾನಮಂ ನರೇಂದ್ರನಾಸ್ಥಾನಂ ಚಿತ್ರಿತಾಸ್ಥಾನದಂತೆ ವಿಸ್ಮಯ ಸ್ಮೇರಹೃದಯಮೆಮೆಮಿಡುಕದನಿಮಿಷದರ್ಶನದಿಂ ತಮಗನಿಮಿಷತ್ವಮಾದಂತಿರೆ ಮೆಯ್ಯಿಕ್ಕದೆ ಸಜ್ಜನಮಾಗಿಯುಮದ್ಗ್ರೀವಮಾಗಿಯುಂ ನೋಡುತ್ತಿರ್ಪುದುಮಾಗಳರಸಂಗೆ ಸುಟ್ಟಿ ತೋಱಿ ಮಕರಂದನಿಂತೆಂದಂ –

ಜನನಾಥ ನೋಡಿವಂ
ಕ್ರನ
ಸಭೆಯಂ ತೋಱುವೊಂದು ನೆವದೊಳ್ ನವ ನಂ
ದನವನಮಂ
ತೋಱಿದವೊಲ್
ಕೊನರ್ತಪುದು
ಕೌತುಕಕ್ಕೆ ಕೌತುಕಮಿಗಳ್   ೮೭

ಅದೆಂತೆನೆ –

ಒದವಿದ ಪಾದಪಪ್ರಕರದಂತದೆ ದೇವಸಮಾಜಮೊಪ್ಪಮಂ
ಕೆದಱಿ
ಕವಲ್ತು ಪೂತ ಲತೆಯಂತದೆ ದಿವ್ಯವಿಳಾಸಿನೀಜನಂ
ಪುದಿದ
ಸಹಸ್ರಲೋಚನದ ಕಾಂತಿಗಳಿಂದಮೆ ಪೂತ ಪಾರಿಜಾ
ತದ
ಮಹಿಜಾತದಂತಧಿಕಮಾ ಯೆಸೆದಿರ್ದನೆ ದೇವವಲ್ಲಭಂ     ೮೮

ಬಿಸುಪಂ ಬಿಸುಟ್ಟು ಜಲಜಲ
ನೆಸೆದಿರೆ
ಜಡೆಗೊಂಡು ನಿಮಿರ್ವ ಕೇಸುರಿ ಮೆಯ್ಯೊಳ್
ಪಸರಿಸೆ
ಪೊಸದಳಿರಂ ಪೊ
ತ್ತಸುಕೆಯ
ಸಸಿಯಂತೆ ತೋಱುತಿರ್ಪವನನಲಂ        ೮೯

ಕಾಳಿಂದಿಯೊಳಗೆ ಪೊಳೆವೆಳ
ವಾಳೆಗಳೆನೆ
ಪೊಳೆಯೆ ಹರಿಯ ಲೋಚನಜಾಳಂ
ನೀಳತನುರುಚಿಯೊಳೆಸೆವ

ಮಾಳದ
ಮೊಳೆಯಂತೆ ತೋಱುವಂ ಯಮರಾಜಂ    ೯೦

ತೊಳಪ ಕುಡುದಾಡೆಗಳ್ ಪೊಳೆ
ವೆಳವೆಱೆಗಳನಣಲೊಳಡಸಿದಂತಿರೆ
ತೀಕ್ಷ್ಣಾ
ತುಳಮೂರ್ತಿ
ಕೇದಗೆಯ ಕೋ
ಲ್ಬೆಳೆಯಂತಿರೆ
ನಿರುತಿ ನಿರುತಮೇನೆಸೆದಪನೋ       ೯೧

ಮಿಗುವರುಣಮಣಿಯ ಮೆಯ್ದುಡು
ಗೆಗಳಿಂ
ಸುಕುಮಾರಕಾಯದಿಂ ಸುಗ್ಗಿಯ ಸಂ
ಪಗೆಯ
ಸಸಿಯಂತೆ ವರುಣಂ
ಬಗೆಗೊಂಡಪನೇಕಚಿತ್ತದಿಂ
ನೋಡು ನೃಪಾ   ೯೨

ಮಗಮಗಿಸುವ ಮಂದಾರದ
ಮುಗುಳ್ಗಳಿನುಬ್ಬಿರಿಸಿ
ಕವಿವ ನವಪರಿಮಳಮಂ
ತೆಗೆದು
ಮೊಗೆದೊಟ್ಟಿಕೊಂಡೇಂ
ಸೊಗಯಿಸುವನೊ
ಮಧುರಮೂರ್ತಿಯಿಂ ಪವಮಾನಂ          ೯೩

ತೊಳತೊಳತೊಳಗುವ ಪೊಸಪೊಂ
ಗಳ
ತೊಡವಂ ತೀವೆ ತೊಟ್ಟ ಮೆಯ್ಸಿರಿಯಿಂ
ಣ್ಗೊಳಿಸಿದಪನಮಳಕುಸುಮೋ

ಜ್ಜ್ವಳಕೋಮಳಕರ್ಣಿಕಾರದಂತೆ
ಕುಬೇರಂ    ೯೪

ಕೆಂದಳಿರೆನೆ ನಿಡುಗೆಂಜಡೆ
ಮಂದಾಕಿನಿಯಡರ್ದು
ಪೂತೆ ಮಲ್ಲಿಗೆಯೆನೆ ತಾಂ
ಬಂದೆಳಮಾವಿನ
ತೆಱದಿಂ
ದಿಂದುಧರಂ
ಕುಸುಮಧವಳನೇನೊಪ್ಪಿದನೋ         ೯೫

ಅಂತುಮಲ್ಲದೆಯುಂ,

ಕುಳಗಿರಿಗಳಂತೆ ತುಂಗಾ
ನಳ
ಯಮದನುಜಾಬ್ಧಿಪತಿಮರುದ್ಧನದೇಶರ್
ಬಳಸಿರೆ
ಸಹಸ್ರನಯನಂ
ಚಳತಾರಕೆ
ಮುಸುಱೆದಮರಗಿರಿಯವೊಲೆಸೆವಂ       ೯೬

ಅಂತುಮಲ್ಲದೆ –

ದಳಿತೋದ್ಯತ್ಪುಂಡರೀಕಂ ಕೊಳನಮಳಚಳನ್ಮೀನಮಂಭೋನಿಧಾನಂ
ವಿಳಸತ್ತಾರಾಪರೀತಂ
ಗಗನಮಸೆವವೋಲ್ ಬಾಸಿಗಂಗಟ್ಟಿ ಭಿನ್ನೋ
ತ್ಪಳಮಂ
ಮೇಗೊಟ್ಟಿಕೊಂಡಂತಿರೆ ತೊಳಗೆ ಸಹಸ್ರಾಕ್ಷಿಗಳ್ನಾಡೆಯುಂ
ಣ್ಗೊಳಿಸಲ್ಪಾರ್ದಿರ್ದಪಂ
ನೋಡಮರಪರಿವೃಢಂ ವಿಶ್ವವಿದ್ಯಾವಿನೋದಾ   ೯೭

ಜಿನಜನ್ಮಾಭಿನವಾಭಿಷೇಕದೊಳೆ ಮೆಯ್ಯಾಳ್ಸಿಲ್ಕಿ ಬಲ್ದೋರ ಪಾ
ಲ್ವನಿಗಳ್
ಪೋಗದೆ ಪತ್ತಿದಂತೆಸೆವಿನಂ ದೃಗ್ಜಾಳಕಂ ದೇವದೇ
ವನ
ಮುಂದಾಡಿದನಂದು ಮಾಣದೆ ಪಯಃಕುಂಭಂಗಳಂ ಪೊತ್ತು ಜೊ
ಮ್ಮನೆ
ಜೋವೇಱಿದ ತೋಳ್ಗಳಂ ನಿಮಿರ್ವವೋಲಿಂದ್ರಂ ಸುರಾದ್ರೀಂದ್ರದೊಳ್      ೯೮

ಅಲ್ಲಿಂಬೞಿಯಮಾ ಬಲವಿರೋಧಿಯಂ ಬಳಸಿದಬಳೆಯರಂ ತೋಱೆ –

ಊಡದೆ ಕೆಂಪು ಮೂಡಿದಡಿ ತಿರ್ದದೆ ಕೊಂಕಿದ ಪುರ್ಬು ಪೂಗಳಂ
ಸೂಡದೆ
ಕಮ್ಮಿತಾದ ಮುಡಿ ಕಾಡಿಗೆಯೆಚ್ಚದೆ ಕರ್ಪನಾಳ್ದ ಕಣ್
ಕೂಡದೆ
ತಂಬುಲಂ ತೊಳಪ ಬಾಯ್ದೆಱೆ ತುೞ್ಕುವ ರಾಗಮೊರ್ಮೆಯುಂ
ಬಾಡದ
ಬಣ್ಣಮಿಕೆಗಳೊಳೆಂದೊಡೆ ಬಣ್ಣಿಸಲಾರ್ಗೆ ಗೋಚರಂ     ೯೯

ಹಿಮರುಚಿ ಲೋಕಮಂ ಬೆಳಪ ಬಿಂಕಮನಿಂದಱಿದಂ ಸಲೀಲಮಿ
ರಮಣಿಯರೊರ್ಮೆಯುಂ
ಮುಕುರಮೆಂದು ನಿರೀಕ್ಷಿಸಿ ನೀಳ್ದ ಕಣ್ಗಳಿಂ
ನಿಮಿರ್ದು
ಪೊದೞ್ದು ಪಜ್ಜಳಿಪ ಕಾಂತಿಗಳಾತನ ಬಿಂಬದಲ್ಲಿ ಸಂ
ಕ್ರಮಿಸಿದುವಲ್ಲದಂದಿನಿತು
ದೀಧಿತಿಗಳ್ ಶಶಿಗೆಂತು ಸಾರ್ದುವೋ ೧೦೦