ಶ್ರೀಯಂ ಸರಸತಿಯಂ ಜಯ
ಜಾಯೆಯನುರದೊಳ್
ಮುಖಾಬ್ಜದೊಳ್ ಭುಜದೊಳ್ ತಾ
ಳ್ದಾ
ಯುವಮನಕ್ಕೆ ಬಿದಿ ಪೊ
ಯ್ದಾಯುವೊಲಿರೆ
ತಳ್ತನೊಳಗೆ ಮಾನವಮದನಂ      ೧

ಪೆಱತು ನುಡಿ ಪೆಱತು ಭಾವನೆ
ಪೆಱತೆಸಕಂ
ಪುಗದು ತರುಣಿ ತೀವಿದ ಮನದೊಳ್
ಪೆಱತೇಂ
ತನ್ನುಮನಂದೇಂ
ಮಱೆದನೊ
ಪರವಶತೆಯಿಂದ ವಿತರಣಮುಗ್ಧಂ         ೨

ಮದನಂ ಕಾರುಣ್ಯದಿಂದಂ ಬೆಸಸಿದ ತೆಱದಿಂದ್ರಯಂ ಪೇಸಿ ಪೇೞಂ
ದದೆ
ಹಾಹಕ್ಕಳ್ಳಿ ಮೋಹಂ ನಡಪಿದಳವಿಯಂ ಸ್ವಪ್ನಸೂಚ್ಯಂ ದಿಟಂ ತೋ
ಱಿದ
ಪಾಂಗಿಂ ಮೆಚ್ಚುಗೆಯ್ದಿಚ್ಚೆಯೆ ರಣರಣಕಂಮಾಡಿದಂತಾಡಿದಂ ಮಾ
ಣದೆ
ನಾನಾನಾಟಕಂ ತನ್ನೊಳೆ ನಲಿವಿನೆಗಂ ರೂಪಕಂದರ್ಪದೇವಂ      ೩

ಪರತಂತ್ರನೆನಿಸಿದೆನಗಿ
ನ್ನರಸೇವುದೊ
ಹಾಸ್ಯಮೆಂಬವೊಲ್ ರಾಜ್ಯದೊಳಂ
ಭರಮಂ
ಬಿಸುಟಿರೆ ಬೇಱೊಂ
ದರಸುತನಂ
ಪೊಸತು ನೆಗೞ್ದುದರಸಂಗಾಗಳ್         ೪

ಗುರು ಕಾಮಂ ಮಂತ್ರಿವರ್ಗಂ ಕರಣಸಮುದಯಂ ಸೇನೆ ಸಂಕಲ್ಪಜಾಳಂ
ಪರಿಚಾರಂ
ಚಿಂತೆ ದೂತಂ ಮನಮನುಚರನಾಶಾನುಬಂಧ ಸಹಾಯಂ
ಪರಿತಾಪಂ
ಕಾಪು ಸುತ್ತುಂ ತಳರದ ತರುಣೀರೂಪು ಕಣ್ಗಳ್ ಪ್ರತೀಹಾ
ರರ
ತಂಡಂ ಸುಯ್ಯೆನಲ್ಕೇನಲೆದುದೊ ನಿಜಸಾಮ್ರಾಜ್ಯಮಂ ರಾಗರಾಜ್ಯಂ          ೫

ಅಂತುಮಲ್ಲದೆಯುಂ,

ಧೃತಿ ದುಃಖೋದ್ರೇಕಮಂ ಚಾತುರಿ ತರಳತೆಯಂ ಪ್ರಾಭಮಂ ದೈನ್ಯಮಂ
ನ್ಮತಿಮಿಥ್ಯಾಮೋಹಮಂ
ಮಾನಿತೆಯ ತನುವಿಕಾರೋರ್ಮಿಯಂ ತನ್ನ ಗಂಭೀ
ರತೆ
ಗಾಢೌತ್ಸುಕ್ಯಮಂ ಮಿಕ್ಕಱಿವು ವಿನಯಮಂ ಮಾನಗರ್ವಂ ವಿವೇಕ
ಚ್ಯುತಿಯಂ
ಸೌಭಾಗ್ಯದರ್ಪಂ ನಿಜವಿಕಳತೆಯಂ ನೀತಿ ನಾಣ್ಗಾದ ಕೇಡಂ  ೬

ಬವರಂಗೆಯ್ದಿಱಿವವೊಲವ
ಯವದಿಂ
ಪೊಱಪೊಣ್ಮಲೀಯದಿರೆ ಕೃತ್ರಿಮಸೌ
ಷ್ಠವದಿಂ
ಸಲಿಲಮುಮಂ ಬಾ
ಡವನುಮನೊಳಕೊಂಡ
ಕಡಲನರಸಂ ಪೋಲ್ತಂ       ೭

ಅಂತು ಬಲಿದೊಡ್ಡಿದವನೀ
ಕಾಂತನ
ದೃಢತುಂಗಧೃತಿಧರಾಧರಮುಂ
ತ್ಕಾಂತಾಸ್ಫುರದಪ್ರತಿಹತ

ಚಿಂತಾಶನಿಯುರ್ಚೆ
ನುಚ್ಚುನೂಱಾಯ್ತಾಗಳ್

ಮಗುೞ್ದುಂ ಮಗುೞ್ದುಂ ಕನಸಿಂ
ಮಗುೞ್ದುಂ
ವಧುವೆಂದು ನೆಲೆಯನೇಱುವನೊಳಗಂ
ಪುಗುವಂ
ಪವಡಿಸಿ ಕಣ್ಣಂ
ಮುಗಿವಂ
ಮುಸುಕಿಡುವನಸಿಯಳಂ ಭಾವಿಸುವಂ      ೯

ಭಾವಿಸೆ ತನ್ನಯ ನಯನೇಂ
ದೀವರದೊಳ್
ಸುೞಿಯೆ ಕನ್ನೆತಾನದು ಕನಸೆಂ
ದೋವುವನೊಯ್ಕನೆ
ಕಿವಿಯಂ
ತೀವುವ
ಕಳಕಳಕೆ ಕಿನಿಸಿ ಕಂಗನೆ ಕನಲ್ವಂ    ೧೦

ಪುಸಿನಿದ್ದೆಗೆಯ್ವನೆಮೆಯಂ
ನಸುದೆಱೆಯಲ್
ಕಣ್ಣನಿನಿಸು ಮಿಡುಕುವನೆರ್ದೆಯಂ
ಕುಸುಮಶರಂ
ಮಸಕದಿನಿಸೆ
ಬಿಸುಸುಯ್ಯುತ್ತೆರ್ದು
ಸುತ್ತಿ ಸುೞಿಯುತ್ತಿರ್ಪಂ ೧೧

ಪ್ರಿಯಮಿನಿಸಿಲ್ಲದೊರ್ಮೆ ನೆಗೞ್ದೋಲಗಸಾಲೆಯೊಳೊರ್ಮೆ ಚಿತ್ರಶಾ
ಲೆಯೊಳಿನಿಸೊರ್ಮೆ
ಮಂತಣದ ಸಾಲೆಯೊಳಂದಿರದೊರ್ಮೆ ಚಂದ್ರಶಾ
ಲೆಯೊಳಿನಿಸೊರ್ಮೆ
ಸಂದ ಸುತಸಾರದ ಶಾಲೆಯೊಳೊರ್ಮೆ ನಾಟ್ಯಶಾ
ಲೆಯೊಳಿನಿಸೊರ್ಮೆ
ಕೇಳಿಗೃಹಶಾಲೆಯೊಳೊರ್ಮೆ ವಿನೋದಶಾಲೆಯೊಳ್          ೧೨

ಬಿನದದಿನೊರ್ಮೆ ಬೀಣೆಯಿನದೊರ್ಮೆ ಸುಗೀತದಿನೊರ್ಮೆ ವಾದ್ಯವಾ
ದನದಿನದೊರ್ಮೆ
ನೃತ್ಯದಿನದೊರ್ಮೆ ಕಥೋಕ್ತಿಯಿನೊರ್ಮೆ ಕಾವ್ಯಬಂ
ಧನದಿನದೊರ್ಮೆ
ನಾಟಕದಿನೊರ್ಮೆ ಪುರಾಣದಿನೊರ್ಮೆ ಜೂದಿನೊಂ
ದು
ನೆವದಿನೊರ್ಮೆ ಕುಬ್ಜಖಗಯುದ್ಧದಿನೊರ್ಮೆ ನಿಯುದ್ಧಕೇಳಿಯೊಳ್      ೧೩

ಕೊಳಗಳೊಳೊರ್ಮೆ ಕೋಡುವೆಳಮಾವಿನ ಜೊಂಪದೊಳೊರ್ಮೆ ಜಾದಿಯೊ
ಳ್ಮೆಳೆಗಳೊಳೊರ್ಮೆ
ತಣ್ಬುೞಿಲೊಳೊರ್ಮೆ ತಮಾಳದ ಸಾಲೊಳೊರ್ಮೆ ಶೀ
ತಳಕದಳೀಗೃಹಾವಳಿಯೊಳೊರ್ಮೆ
ಕುಳಿರ್ಕೊಳುತಿರ್ಪ ಕೇತಕೀ
ತಳದೊಳದೊರ್ಮೆ
ಪೊೞ್ತುಗಳೆವಂ ಕವಿತಾಕಳಿಕಾಮ್ರಕೋಕಿಳಂ ೧೪

ನೋಡದ ಚಿತ್ರಮಾಡದೆಡೆ ಕೇಳದ ಬೇಟದ ಮಾತು ಮೆಯ್ಯನೀ
ಡಾಡದ
ತಣ್ಬುೞಿಲ್ ಬಗೆಗೆ ಬಾರದ ಕಲ್ಪನೆ ಕಾಡದಿಚ್ಚೆಯೋ
ಲಾಡದ
ಪೂಗೊಳಂ ಪುಗದ ನಂದನಮಿಲ್ಲೆನೆ ಕಾಮದೇವನೊ
ಲ್ದಾಡಿಪ
ಜಂತ್ರಮಿತನೆನಲಾಡಿದನಾ ರತಿರಾಗದೋಹಳಂ       ೧೫

ಅಂತು ಕುಸುಮಶರನ ಕೂರ್ಗಣೆಗಳ್ ತಾಗದ ತಾಣಮುಮನಂಗ ಸಂತಾಪವಾ ಗದೆಡೆಯುಮನಱಸುವಂತೆ ಮಱುಗಿ ಮನವೆಳದುವರಿಯೆ ಸುೞಿದಾಡುತ್ತಂ ಕೇಳೀವನದ ಕೆಲದೊಳ್ ಶಶಿಕಾಂತದಿಂ ಕಡೆದು ಮಾಡಿದುದಱಿಂ ಕಾಮನ ಕರುಮಾಡದಂತೆ ಕರಮೆಸೆಯೆ ಬೆಳ್ಮುಗಿಲ ಬೆಳ್ಳಿವೆಟ್ಟಮಂ ಪುಗುವ ಪೀಯೂಷಮಯೂಖನೊಪ್ಪಮನುಪ್ಪುಕೆಯ್ದು –

ವ್ಲುತಲೀಲಾಮೃಗಜಾಳಮಂ ಶುಕಪಿಕವ್ಯಾಹಾರಸಂಪಾದಿತ
ಪ್ರತಿನಾದೋದಯಮಂ
ವಿನೋದವನಿತಾನೇತ್ರಪ್ರಭಾಕೌಮುದೀ
ಸ್ರುತವಾರ್ನಿರ್ಝರಪೂರಮಂ
ಮದಮಯೂರೀಲಾಸಿಕಾರಂಗಮಂ
ಕೃತಕಾದ್ರೀಂದ್ರದ
ಶೀತಕೋಶ ಗುಹೆಯಂ ಪೊಕ್ಕಂ ಮಹೀವಲ್ಲಭಂ         ೧೬

ಅಂತು ಪೊಕ್ಕು ಕಿಱಿದಂತರದೊಳಿಂದೂಪಳದ ಪೆತ್ತ ಪಲವೆಳಗುಗಳ್ ಪೊಱಗೆ ಪೊಣ್ಮುವ ಪೊಸವೆಳಗಂ ಪೊತ್ತು ನೂಂಕೆ ಜರಿದು ಬಿರ್ದು ಬಲಿದಂತಿರಿರ್ದ ಮೌಕ್ತಿಕಶಿಲಾತಳಮಂ ನಿತಂಬತಳಕ್ಕೆ ಪಕ್ಕುಮಾಡದದಱ ಮುಂದೆ ಮಂದಯಿಸಿ ಪಚ್ಚೆಯ ಪಾಸಱೆಯೆಂತಿರ್ದ ಪಸಲೆಯನಲಂಕರಿಸಿ ಪೂರ್ವಪರಿಚಯಕ್ಕೆ ಪರಿತಂದು ಕರತಳದೊಳ್ ತೀವಿದ ಮರಕತಮುದ್ರಿಕೆಯ ಪಸುರ್ವೆಳಗುಗಳನಾ ಪಸುರ್ವುಲ್ಲೆಗೆತ್ತು ಮುಸುಂಡಿನೊಳಾರಯ್ವ ದೀವದ ಪುಲ್ಲೆಯ ಕೊಣಸುಗಳ್ಗೆ ಪುಲ್ಲೆಸಳಂ ಸೆೞೆದು ನೀಡುತಂ ದ್ವಾರದೇಶದೊಳ್ ನಿಱಿಸಿದ ಪಿಂಛಾತಪತ್ರಕ್ಕೆ ಮುತ್ತಿನ ಸತ್ತಿಗೆಯ ಚೆಲ್ವನೊಳಗುಮಾಡಿಯುಂ, ನುಣ್ಬಸಲೆಗೆ ಪನಿಪುಲ್ಲ ಪಸಲೆಯ ಪೊಸಸಿರಿಯನಾಗುಮಾಡಿಯುಂ, ಚಾಮರದಿಂ ಬೀಸುವ ಬೀಸುಗಾಳಿಯ ತಣ್ಬಿನಿಂ ತೊಯ್ದುಂ ನನೆಲತೆಗಳ ಮೇಳದ ಮನ್ನಣೆಯ ಕನ್ನೆಯರ ಲತಾಂಗಂಗಳೊಳ್ ಲಾವಣ್ಯರಸವಿಸರದ ಬಿಂದುಗಳ್ ತಲೆದೋಱಿದುವೆಂಬ ಕೌತುಕಮಂ ಕೊನರಿಸಿಯುಮಾ ವಿಳಾಸಿನಿಯರ ವಿಲೋಚನಚಂದ್ರಿಕೆಯ ಕೋೞಿಂ ಚಂದ್ರಕಾಂತದ ಕಲ್ಗಳೊಸರ್ತುವೆಂಬ ಸಂದೆಗಮಂ ಮಾಡಿಯುಂ ಮಾಣದೆ ಪಳಿಕಿನ ಶಿಲೆಯೊಳಪ್ಪಳಿಸಿ ಬೀಳ್ವ ಕೃತಕನಿರ್ಝರಜಲಧಾರೆಗಳೋರಂತೆ ತೂಱೆ ತುಱುಗುವ ತುಂತುರ್ವನಿಗಳ್ಗೆ ಮೆಯ್ಯನೊಡ್ಡಿ ಮುತ್ತಿಂ ಮಾನಸನಾದಂತೆ ಮುತ್ತಿನ ಸಿಲೆಯಂ ಮಲಂಗಿರ್ದ ಭೂಲೋಕಕಂದರ್ಪದೇವನನತಿ ದೂರಾಂತರದೊಳ್ –

ನೋಡಿ ಕಂಡು ಮಕರಂದನೆಂದನ
ೞ್ಕೂಡಿದಂತೆ
ಮತಿ ವಕ್ತ್ರಪಂಕಜಂ
ಬಾಡಿದಂತೆನಗೆ
ತೋಱಿದಪ್ಪುದ
ಲ್ಲಾಡಿತೆಂತೊ
ಹೃದಯಂ ಮದೀಶನಾ         ೧೭

ಬಗೆಯುಂ ಕಣ್ಣುಂ ಕರಂ ಕೆಯ್ಮಱೆದುವು ಮೊಗರಾಗಂ ಮೊಗಂಗೊಟ್ಟುದಿಲ್ಲೀ
ಮೊಗದಂದಕ್ಕೆಂದಿನಂತಲ್ಲದು
ನೃಪನ ತೆಱಂ ಸೌಷ್ಠವಂ ಮೆಯ್ಗಳಿಂ ಮೆ
ಯ್ದೆಗೆದತ್ತಾಳಾಪಮುಂ
ಮೇಳದ ವಧುವರೊಳಂ ಕೇಳಲಾಯ್ತಿಲ್ಲ ಸುಯ್ ಕೈ
ಮಿಗೆ
ಪೊಣ್ಮುತ್ತಿರ್ಪುದಂ ಪೇೞ್ದಪುವು ಪೊಡರ್ವ ಹೃತ್ಕಂಠನಾಸಾಪುಟಂಗಳ್         ೧೮

ಅದಲ್ಲದೆಯುಂ –

ತಾಂಬೂಲೀದಳಕೆಂದು
ರಾಂಬುಜಮಂ
ಬೇಱದೊಂದು ದೆಸೆಗುಯ್ದಪನೊ
ತ್ತಂಬದೆ
ನುಡಿಯಿಪರಂತಿರೆ
ತಾಂ
ಬಱಿದತ್ತೊಂದು ದೆಸೆಗೆ ಕಿವಿಯೊಡ್ಡಿದಪಂ         ೧೯

ಕಱುಕೆ ತವೆ ಮಱುಗಿ ಮೊಗಮಂ
ತುಱುಕುವ
ಮೃಗಶಿಶುಗೆ ಕರದ ತಂಬುಲದೆಲೆಯಂ
ಮಱೆದಿತ್ತಪನದುಮಲ್ಲದೆ

ಬಱಿಗಯ್ಯಂ
ನೀಡುತಿರ್ದಪಂ ನೃಪತಿಲಕಂ   ೨೦

ಕಡುನೊಂದುದೆನ್ನ ಚಿತ್ತಂ
ನಡೆ
ನೋಡೆಂದೆನಗೆ ತೆಱೆದು ತೋಱುದ ತೆಱದಿಂ
ದಡಿಗಡಿಗಾಗುಳಿಸಿದಪಂ

ತೊಡರ್ದಲಸಿಕೆ
ನೆಲಸಿ ನಿಂದ ಕಾರಣದಿಂದಂ ೨೧

ಕೋಗಿಲೆಯ ಗಿಳಿಯ ತುಂಬಿಯ
ಸೋಗೆಯ
ಸೊಗಯಿಸುವ ಸಣ್ಣ ದನಿಗಳ್ ಕಿವಿಯಂ
ತಾಗಲೊಡಂ
ಪೆಳಱಿದಪಂ
ಪೋಗಿದು
ಕುಸುಮಾಸ್ತ್ರನಾಟಕವಾಗಲೆವೇೞ್ಕುಂ        ೨೨

ಈರೂಪೀ ನವಯವ್ವನ
ಮೀ
ರಸಿಕತೆಯಿ ಸ್ವಭಾವಮಧುರತೆ ಮಚ್ಚಿ
ರ್ದೀ
ರಾಜಪುತ್ರನಿರೆ
ತ್ತಾರೊಳ್
ಮೆಱೆವನೊ ಮನೋಜನಾತ್ಮೋಯಮಂ   ೨೩

ಆರಱಿವಂ ಮೆಱೆದಪರಿ
ನ್ನಾರಾರ್
ಸೌಭಾಗ್ಯಗರ್ವದಿಂ ಬೆಕ್ಕರಿಪರ್
ಮಾರಂ
ಮುನಿದವರೆರ್ದೆಯೊಳ್
ಕೂರಂಬಂ
ತೆಗೆಯದೇಕೆ ಕಡೆಗಣಿಸಿರ್ಪಂ     ೨೪

ಪುರುಳಂ ಮರುಳಂ ಮಾೞ್ಪಂ
ಶರನಿಧಿಯಂ
ಬೆಂಚೆಮಾಡುವಂ ಕೇಸರಿಯಂ
ನರಿ
ಮಾೞ್ಪನಣಕಮಲ್ಲಿದು
ವರಸಲ್ಲನೆ
ಕಾಮಿಜನಕೆ ಕುಸುಮಪತಾಕಂ    ೨೫

ಫುಲ್ಲಶರಾಳಿಗೆ ಪೂವಿಂ
ಮೆಲ್ಲಿದುವಂ
ಮನಮನಱಸಿ ಗುಱಿಮಾೞ್ಪಂತೇಂ
ಬಲ್ಲನೊ
ಮನೋಜನಾತಂ
ಕಲ್ಲೆರ್ದೆಗಳನೆಚ್ಚು
ಮಟ್ಟಮಾಡಲ್ ಮರುಳೇ  ೨೬

ಎಂದು ನಿರೂಪಿಸಿ –

ಕುಸುಮಶರಹತಿಗೆ ಹೃದಯಂ
ಪಿಸುೞ್ದವೋಲ್
ತೋಱೆದಪುದು ದುಸ್ಸಹ ತಾಪ
ಕ್ಕಸದಳಮೊಟ್ಟಿದ
ಚಂದನ
ರಸಕರ್ದಮಮೊಣಗಿ
ಬಿರಿದು ಭೂಭುಜನೆರ್ದೆಯೊಳ್   ೨೭

ಪೊಳೆವಿಂದೂಪಳರುಚಿಗಳ್
ಬಳಸಿ
ನೃಪಾತ್ಮಜನನಂಗಜನ್ಮನ ಬೆಸದಿಂ
ಬೆಳಪ
ಶಶಿ ಕಾಪುವೇೞ್ದೊಡೆ
ಬಳಸಿದ
ಬೆಳ್ದಿಂಗಳಂತಿರೇಂ ತೊಳಗಿದುವೋ ೨೮

ಇನಿತೊಂದುದ್ದಾಮಸೌಭಾಗ್ಯದ ಗುಣದೊದವಿಂಗಾವಳೋ ನೋಂತಳಾವ
ಳ್ವನಿತಾನಿಷ್ಪಾದನಕ್ಕುಜ್ಜವಣೆವಡೆದಳೋ
ಪದ್ಮಜಂಗಾವಳೋ ಪೇಱ್
ನನೆವಿಲ್ಲಂ
ಪೂಡುವಾಯಾಸಮ ನುಡುಗಿಸಿದಳ್ಕಾಮನಿಂದಾರುಮಂ ರೂ
ಪಿನೊಳೆಂದುಂ
ಮೆಚ್ಚದಿರ್ಪೀ ನೃಪಸುತನೆಸಕಕ್ಕಾವಳೋ ಕೇತುವಾದಳ್  ೨೯

ಸವಿಯಂ ನೋಟದೊಳಿತ್ತಳಕ್ಕುಮವಳಂ ಲಾವಣ್ಯಸರ್ವಸ್ವದಿಂ
ಸವೆದಂ
ಪದ್ಮಜನಕ್ಕುಮಾಕೆ ಸೊಬಗಿಂಗುತ್ಪತ್ತಿಯಕ್ಕುಂ ಮನೋ
ಭವನಾಕಾಂತೆಗೆ
ವೇಳೆಗೊಂಡು ಬೆಸನಂ ಪೂಣ್ದಿರ್ಪನಕ್ಕುಂ ಮರು
ಳ್ದಿವನಿಂತಲ್ಲದೊಡೇಕೆ
ಸೇದೆವಡುಗುಂ ಶೃಂಗಾರಕಾರಾಗೃಹಂ   ೩೦

ಮತ್ತಮಿದೆಂತಾದುದೆಂದು ಬಗೆದು ಭಾವಿಸಿ ನೋಡಿ –

ಅನುರಾಗಂ ತಲೆದೋಱುಗುಂ ಶ್ರವನದಿಂದಾ ಲೋಕದಿಂ ಪೇೞ್ವನಾ
ವನುಮಿಲ್ಲೀತನ
ಕಣ್ಗೆವರ್ಪ ವಧುವುಂ ಮುನ್ನಿಲ್ಲ ಮುನ್ನೇಸಱೇ
ೞ್ವಿನೆಗಂ
ತಳ್ವಿದನಿಂದು ಸಜ್ಜೆವನೆಯೊಳ್ಪೋ ಕಂಡನಕ್ಕುಂ ವರಾಂ
ಗನೆಯಂ
ಸ್ವಪ್ನದೊಳೆಂದನೇಂ ಸಚಿವಪುತ್ತಂ ನೀತಿನಿಷ್ಣಾತನೋ ೩೧

ಅಂತು ವಿಶದಪ್ರಜ್ಞಾಪ್ರದೀಪದಳಿತಮನಸ್ತಮಸ್ತೋಮನಾಗಿ ದವದಹನದಗ್ಧ ಧರಾಧರಕ್ಕೆ ಅಭಿನವಜಳಧರಮುಂ ತೀವ್ರತಪನ ತಾಪತಪ್ತತರುಣತರುಣತಿಳಕಕ್ಕೆ ಗಾಳಿಯುಂ ಬರ್ಪಂತೆ ಬಂದು ವಿಜಯಸ್ವವಚನಮನುಚ್ಚರಿಸಿದ ಮಕರಂದನಂ ಗುಣಮಕರಂದಮಧುಕರಂ ಕೆಲಕ್ಕೆ ಕರೆದು ಕುಳ್ಳಿರಿಪುದುಮಾ ಮಂತ್ರಿಪುತ್ರನ ಕಣ್ಣಱಿದು ವಿಳಾಸಿನೀಜನಂ ಕಾಮ ಸಂಚಾರಚ್ಛಲದಿಂ ತೊಲಂಗೆಯುಂ ವೇತ್ರ ಲತಾಥರರ್ ದೂರಾಂತರದೊಳ್ ತಿರ್ಯಗ್ವಳಿತವದನರಾಗಿ ಗುಜುಗುಜುಗೊಳುತ್ತಿರೆಯುಮರಸನುಮಾತನ ಮೊಗಕ್ಕೆ ನಾಣ್ಚಿ ತಲೆಯಂ ಬಾಗಿ ಬಿನ್ನನಿರೆಯುಂ ಕಿಱಿದು ಬೇಗಮಿರ್ದು –

ಅಳವಿಗೞಿದಳುರ್ವ ಮದನಾ
ನಳನಂ
ನದಿಪಲ್ಕೆ ಪಲವುಮಮೃತದ ಪನಿಯಂ
ತಳಿವಂತೆ
ದಂತರುಚಿಗಳ್
ತುಳುಂಕೆ
ನೃಪಸುತನನಾರ್ಯಸುತನಿಂತೆಂದಂ       ೩೨

ವರವಿದ್ಯ ರಾಜವಿದ್ಯಾ
ವಿರಿಂಚನೆನಿಸಿರ್ಪ
ನಿನಗೆ ನೀತಿಯ ಮಾತಂ
ವಿರಚಿಸಿ
ಪೇೞ್ವುದು ತುಂಬಿಗೆ
ಪರಿಮಳಮಂ
ಕೊಂಡು ಕೊನೆದು ಪೇೞ್ವವೊಲಕ್ಕುಂ    ೩೩

ನೀಂ ಸಹಜಬುದ್ಧಿಯೈ ನಿ
ನ್ನಂ
ಸಮಱುವೆನೆಂಬನಾವನಖಿಳನೃಪಾಲೋ
ತ್ತಂಸ
ಪಯೋರಸದಿಂಪಂ
ಹಂಸಂಗುಪದೇಶಮಿವ
ಗಾಂಪನುಮೊಳನೇ  ೩೪

ಆದೊಡಮಱಿಪಿದಪೆಂ ನಯ
ದಾದಲೆಯಂ
ನಿನಗೆ ನಳಿನ ವಿಕಸನದೊಳ್ ಸೂ
ರ್ಯೋದಯಕೆ
ಸಹಾಯತ್ವಮ
ನೂದುವ
ತಣ್ಣೆಲರುಮಲಸದೇಂ ಪುದುವುಗದೇ         ೩೫

ಅಯನಯಪರನೆನಿಸಿದ ನಿ
ನ್ನಯ
ದೆಸೆಯುಮನಮರಮಾನುಷವ್ಯಸನಂಗಳ್
ನಿಯತಂ
ಪೊರ್ದವು ವಿಜಿತೇಂ
ದ್ರಿಯನಂ
ನಾಂಟುಗುಮೆ ಕಾಂತೆಯರ ಕಡೆಗಣ್ಗಳ್      ೩೬

ನನ್ನಿ ವಿನಯಂ ನಯಂ ಜಯ
ಮುನ್ನತಧೃತಿ
ಸತ್ವಮೆಂಬ ರಾಜಗುಣಂಗಳ್
ನಿನ್ನೊಳ್
ನೆಲಸಿದುವಿನ್ನುಂ
ಮುನ್ನಂ
ನಿನ್ನನ್ನರೊಳರೆ ರಾಜಕುಮಾರಾ      ೩೭

ಬಯಸಲ್ ತಕ್ಕಂದಬ
ರ್ದೆಯರೊಲವಿಂ
ಬಯಸಿ ಬಂದೊಡಂ ಬಗೆಯದ
ಲ್ಮೆಯನುಳ್ಳ
ಸುಭಗನೈ ನೀಂ
ಬಯಸಲ್
ಮಾನಿನಿಯರೊಳರೆ ಮಾನವಮದನಾ      ೩೮

ಅನುರಕ್ತಂ ಪ್ರಕೃತಿ ಪದಾ
ವನತಂ
ರಿಪುನೃಪಕುಲಂ ನಿಯೋಗಿನಿಕಾಯಂ
ವಿನಯನಯನಿಪುಣಮೆನೆ
ನೀಂ
ಮುನಿವೊಡಮೆಡೆಯಿಲ್ಲ
ಸತ್ವಗುಣಮಣಿಜಳದೀ         ೩೯

ಅನುವಿಸಿ ಕರೆದೞ್ತಿಗೆ ಸೊ
ರ್ಕಿನ
ಸಿಂಧುರಮನಿಲಜವದ ವಾಜಿ ಪದಂಗಾ
ಸಿನ
ಪೊಂಗಳಲ್ಲದೀಯದ
ನಿನಗೆಂತುಂ
ಲೋಭಮುಂಟೆ ದಾನವಿನೋದಾ         ೪೦

ಸರಳಸ್ವಭಾವನಂದಿತ
ದುರಾಗ್ರಹಗ್ರಾಹ
ಸೂಕ್ತಿಮಣಿಮಯ ಕರ್ಣಾ
ಭರಣ
ಭವದೀಯಬುದ್ಧಿಗೆ
ಬರಲಱಿಗುಮೆ
ಮಾನದುರ್ವು ಮಾನಿತಸುಜನಾ        ೪೧

ಸೊರ್ಕಿನೊಡವುಟ್ಟಿಯುಂ ಸಿರಿ
ಸೊರ್ಕಿಸಲಾಱದೆನೆ
ಸೊರ್ಕುಗಿಡಿಸುವ ಪೆಱರಂ
ಸೊರ್ಕಿಸುವಱಿವುಂ
ರೂಪುಂ
ಸೊರ್ಕಿಸಲಾರ್ತಪುವೆ
ನಿನ್ನನುನ್ನತನಿಳಯಾ  ೪೨

ಪಿರಿದುಂ ಹರ್ಷಂ ಧರೆಗು
ಬ್ಬರಿಸಿರೆ
ಸಿರಿಗರಸನೆನಿಸಿದೈ ನೀಂ ಪೆಱರಂ
ದೊರೆಗಿಡಿಪ
ಕೇಡನೊಡರಿಪ
ಹರಿಸಂ
ಬೆರಸುವುದೆ ನಿನ್ನನುತ್ತಮ ಸತ್ವಾ     ೪೩

ಅದಱಿನೊಳವಗೆಗಳಾಱುಮ
ನದಿರ್ಪಿದೈ
ದೇವ ಮಗುೞ್ದುಮವು ಕೂಡದವೋಲ್
ಪದುಳಿಗನಪ್ಪುದು
ತಪ್ಪಿದೊ
ಡದಱಿಂ
ಪಿರಿದಪ್ಪ ದೈನಯಮಾವುದುಮುಂಟೇ        ೪೪

ಅರಿಷಡ್ವರ್ಗಮನೆಯ್ದೆ ಮೞ್ಗಿಸುವವಂ ಕಾಂತಾರತಾಸಕ್ತನಾ
ಗಿರೆ
ಕೆಟ್ಟಿರ್ಕುಮದಾಡಂದೆ ಮೊದಲೊಳ್ಮೆಯ್ಪತ್ತುಗುಂ ಕಾಮಮು
ಬ್ಬರಕುಂ
ಕ್ರೋಧಮಿದಿರ್ಚಿ ಚಪ್ಪರಿಸುಗುಂ ಲೋಭಗ್ರಹಂ ಮಾನಮಾ
ವರಿಸಿರ್ಕುಂ
ಮದಮುರ್ಬಿ ಮುಂದುಗಿಡಿಕುಂ ಹರ್ಷಂ ಮರುಳ್ಮಾಡುಗುಂ   ೪೫

ನೀಱೆಯರ ನಿಡಿಯ ಕಡೆಗ
ಣ್ಣೇಱಿಂದೆರ್ದೆ
ಬಿರಿಯೆ ಬೞಿಕ ಮಲರಂಬುಗಳಿಂ
ಮೀಱಿ
ಮಿಳಿರ್ದಿಸದೆ ಮಸಕದೆ
ತೋಱದೆ
ಮಾಣ್ದಪನೆ ತನ್ನ ಸೊಬಗನನಂಗಂ ೪೬

ಹರನುರಿಪದೊಡುರಿಪಮನೆ
ಲ್ಲರ
ಮೆಯ್ಗಂ ಪಚ್ಚುಗುಡುವವೋಲ್ ಪುಗುತಿರ್ಪಾ
ಸ್ಮರನಂ
ಪುಗಲಿತ್ತೊಡೆ ಮನ
ಮುರಿವುದುಮಂಗಂಗಳುರಿವುದುಂ
ವಿಸ್ಮಯಮೇ       ೪೭

ಸರಸತೆ ಕೊರಗದ ವಿದ್ಯೆಯ
ಪರಹಿತಮೋಸರಿಸದಧಿಕಲಕ್ಷ್ಮಿಯ
ಪಿರಿದುಂ
ಪರವಶತೆ
ಪೊಣ್ಮದೊಲವಿನ
ಪರವರಿಯಂ
ಬಲ್ಲನುಳ್ಳೊಡಾತನೆ ಬಲ್ಲಂ      ೪೮

ಪಾಱೞಿಯದ ಮನಮಂ ಪೊಱ
ಮಾಱುವ
ಸಕಳೇಂದ್ರಿಯಂಗಳಂ ಪ್ರಕೃತಿಯ ನಿ
ಟ್ಟೇಱಿದ
ಮದಾಂಧಗಜಮಂ
ಮಿಱಿ
ಬರ್ದುಂಕುವರುಮೊಳರೆ ಮಾನವಮದನಾ      ೪೯

ಫುಲ್ಲಶರನೆಸಕಮುಂ ಹೃದ
ಯೋಲ್ಲಾಸಮುಮಿಂದ್ರಿಯಂಗಳಿಚ್ಛೆಯ
ಸವಿಯುಂ
ಸಲ್ಲದೊಡಂ
ತನ್ನಿಂದವು
ಬಲ್ಲಿದುವೆನಿಪೊಡಮಸಾರಮಿ
ಸಂಸಾರಂ     ೫೦