ಸುರತತೀಶ್ವರನಂಗಮನೀಕೆಗಳ್
ಸುರತತೀವ್ರತೆಯಿಂ
ನಡೆ ನೋಡಲೈ
ಸರಲ
ಮಾೞ್ಕೆಯ ಕಣ್ಗಳೆ ನಟ್ಟುವೀ
ಸರಲಮಾನಸರಕ್ಷಿಗಳೆಂಬಿನಂ
       ೧೦೧

ಅವಧರಿಸಿ ನೋಡು ನೃಪಸುತ
ಕವಲ್ತು
ಕಣ್ಬೆಳಗು ಬಳಸಿ ಬಳ್ವಳ ಬಳೆದೊ
ತ್ತುವ
ಕತದಿನೆಮೆಯನಿಕ್ಕದೊ
ಡವರಿಯರೆಮೆಯಿಕ್ಕರೆಂಬುದಱಿಯದೆ
ಲೋಕಂ        ೧೦೨

ವನಿತೆಯರೊಳ್ ಸಾರಂ ಯೌ
ವನಮಾ
ಯೌವನಮೆ ತಮ್ಮೊಳೊಡವುಟ್ಟಿ ರಸಾ
ಯನಸಿದ್ಧಿವಡೆದುದೆನಲಿಂ

ಮನೋಜಸುಖರಸರಸಾಯನಂ
ಪೆಱತುಂಟೇ         ೧೦೩

ಇಲ್ಲಿ ಯುವತೀರಸಾಯನ
ಮೊಲ್ಲದೆ
ಸುರಸುಖಕೆ ಬಯಸಿ ಬಯಸಂ ಗದಮಾ
ತಿಲ್ಲೆನಿಸೆ
ತೊಱೆದ ತಾವಸ
ವಲ್ಲಭರಱಿವರೆ
ಸುರಾಂಗನಾವಿಭ್ರಮಮಂ    ೧೦೪

ಎಂದು ಮಕರಂದನರಸನ ವಿದ್ಯಾಮೋಹಮಹೇಂದ್ರಜಾಲದೊಳ್ ತೊಡರ್ದ ಮನಮಂ ಬಿಡಿಸಲುಂ ಮಱೆಯಿಸಲುಮೆಂದು ಮಹೇಂದ್ರಜಾಲದರ್ಶಿತಸುರಸದ ಸ್ಸುಂದರಿಯರ ರೂಪಾತಿಶಯಮಂ ನಿರೂಪಿಸಿ ಪೊರೞುತಿರ್ಪುದುಮಾಗಳಲ್ಲಿ –

ದನಿಗೆಯ್ದುದು ಮಱೆದೊಱಗಿದ
ಮನಸಿಶಯನನೆತ್ತುವಂತೆ
ಭೋರ್ಗರೆದು ತಟಿ
ನ್ನಿನದಮನೊಡನಡರ್ದು
ಘನ
ಧ್ವನಿಯೆನಿಸಿ
ಘನಾವನದ್ದವಾದಿತನಿವಹಂ     ೧೦೫

ಅಲ್ಲಿಂ ಬೞಿಯಿಂ –

ಕಿಸುಸಂಜೆ ತೊಲಗೆ ತೊಳಗುವ
ಶಶಿಲೇಖೆ
ಮಯೂಖನಿಕರಮಂ ಕೆದಱುವವೋಲ್
ಕುಸುಮಾಂಜಳಿಯಂ
ತೆಳ್ಪಿನ
ಪೊಸಜವನಿಕೆ
ತೊಲಗೆ ಪೂಳೆದದೇಂ ಕೆದಱಿದಳೋ   ೧೦೬

ಕೆದಱಿ ಕರರುಹದ ರುಚಿಯಂ
ಕೆದಱಿದಳೆನೆ
ಬಿಳಿಯ ಕಣ್ಣ ಬಂಬಲ್ವೆಳಗಂ
ಕೆದಱಿ
ನವಭಾವರಸಮಂ
ಕೆದಱಿದಳೆನೆ
ಕುಣಿದು ರಂಭೆ ರಂಗಂಬೊಕ್ಕಳ್         ೧೦೭

ಆಂಗಿಕಮಾಸುರಕೈಶಿಕೆ
ಸಂಗಳಿಸಿದ
ಭಂಗಿ ಭಾವಮೊಪ್ಪಿಸಿದೊಪ್ಪಂ
ಶೃಂಗಾರಮಿತ್ತ
ನಯಮಮ
ರಾಂಗನೆಗಮರ್ದುದು
ವಿಳಾಸಲಾಸ್ಯೋದಯದೊಳ್  ೧೦೮

ಅಂಗಮನಂಗನ ಜನಿಯಿಸು
ವಂಗಮಪಾಂಗಮೆ
ದಲಂಗಜನ ಚತುರಂಗಂ
ಶೃಂಗಾರಯೋನಿಗದೆ

ಪ್ತಾಂಗಂ
ಪ್ರತ್ಯಂಗಮಾಸುರೇಂದ್ರಾಂಗನೆಯಾ         ೧೦೯

ಎಲರಲೆಪದಿನೊಲೆದಾಡುವ
ಜಲರುಹಮೆನೆ
ಭಾವರಸಮನೊದವಿಸಿತಾಸ್ಯಂ
ಕೆಲಕೆ
ನಸುಬಾಗುವಂಚಿತ
ವಲೆಗುಂ
ಮನಮೊಲೆವ ಲೋಳಿತಂ ನಚ್ಚಣಿಯಾ       ೧೧೦

ಚತುರಿಕೆಯಭಿನಯಿಸಿದ
ವಾಚಿಕಮಾಹಾರ್ಯಮಾಂಗಿಕಂ
ಸಾತ್ವಿಕಮೆಂ
ಬೀ
ಚತುರಂಗಮೆ ತಾನಾ
ಯ್ತಾ
ಚತುರಂಗಂ ಮನೋಜರಾಂಗಾಗಳ್    ೧೧೧

ದಳದಳಿಸಿರೆ ಮುಕ್ಕುಳಿಸಿದ
ಬೆಳುದಿಂಗಳನುಗುೞ್ವ
ನೆಯ್ದಿಲಲರ್ಗಳ ಸಿರಿ
ಮ್ಮೊಳೆ
ದಳ್ಳಿಸೆ ಬೆಳ್ವೆಳಗಮ
ರ್ದೆಳಸುವ
ಸುಸ್ನಿಗ್ಧದೃಷ್ಟಿಗಳ್ ಸುರವಧುವಾ  ೧೧೨

ನಸುಮುಚ್ಚುವ ಬಿಚ್ಚುವ ಪೊಳೆ
ಸುೞಿವ ಬಳಸುವ ಬೞಲ್ವ ತೆರೆಮಸಗಿ ಮರ
ಲ್ದೆಸೆವ
ರಸಭಾವದೃಷ್ಟಿಗ
ಳಸದಳಮೆನಿಸಿದುವು
ನೃತ್ಯದೊಳ್ ನರ್ತಕಿಯಾ       ೧೧೩

ಅತಿಶಯಶೃಂಗಾರರಸ
ಪ್ಲುತಚಳಶೈವಾಳಲತೆಗಳೆನೆ
ಸತಿಗೆಸೆಗುಂ
ಚತುರೋತ್ಕ್ಷಿಪ್ತನಿಕುಂಚಿತ

ಪತಿತಸಮಭ್ರುಕುಟಿರೇಚಿತಭ್ರೂಲತೆಗಳ್
      ೧೧೪

ಅತಿಲಲಿತಕರ್ಣಪತ್ರ
ದ್ಯುತಿಲೇಖಾಲಾಸ್ಯಲಲಿತಮೇನೆಸೆದುದೊ
ಕಂ
ಪಿತಫುಲ್ಲಪೂರ್ಣಸಮಕುಂ

ಚಿತಕಾಂತಕ್ಷಾಮಗಂಡಮಂಡಳಮವಳಾ
     ೧೧೫

ಮುಕುಳಿಸಿತೆಲರೆಳಸಿದ ಚಂ
ಪಕಮುಕುಳದ
ಚೆಲ್ವನೆಸೆವ ಲಸಿತಸ್ವಾಭಾ
ವಿಕನತಮಂದೋಚ್ಛ್ವಾಸ

ಪ್ರಕರ್ಷನಾಸಾವಿಳಾಸಮಾ
ನರ್ತಕಿಯಾ     ೧೧೬

ಕಂದಿದಪುದಿದಱ ಕೆಂಪೆಂ
ದೊಂದಿರೆ
ಬೆಳ್ದಿಂಗಳಿಂದೆ ಬಾಸಣಿಸಿದವೊಲ್
ಸಂದ
ನಿಜಾಧರಮೆಸೆದುದು
ಸುಂದರದಶನಾಂಶುಧವಳಿತಂ
ನರ್ತಕಿಯಾ  ೧೧೭

ನಸು ನಳಿದು ನಿಮಿರೆ ತೋಳ್ಗಳ್
ಲಸಿತತ್ರಿಪತಾಕದಿಂ
ಲತಾಕರಮೆಸೆಯಲ್
ಪೊಸದಳಿರಂ
ಪೊತ್ತೆಳಲತೆ
ಮಿಸುಗುವ
ಕುಡಿಯೆರಡನೆೞಲೆ ಬಿಟ್ಟವೊಲೆಸೆದಳ್      ೧೧೮

ತೊಳಗುವ ನಗೆಮೊಗಮಿದು ನಿ
ರ್ಮಳವಲ್ಲದು
ಬರ್ದಿರೆಮ್ಮುಮಂ ಪೋಲ್ತೊಡೆನು
ತ್ತೆಳೆಯಳ
ಕನ್ನವುರದ ನವ
ನಳಿನಮನಲೆವಂತೆ
ಕರಿಕರಂ ಕರಮೆಸೆಗಂ   ೧೧೯

ಗರ್ಭೇಶ್ವರಿಯ ಕುಚಂಗಳ್
ನಿರ್ಭರದಿಂದುರಮನೆಯ್ದೆ
ಪರ್ಬಿರೆ ಸಮಸಂ
ದರ್ಭಾಹಿತಕಂಪಿತವರ

ನಿರ್ಭುಗ್ನಾಭುಗ್ನವಕ್ಷಮೇಂ
ವೃಧೆಯಾಯ್ತೋ    ೧೨೦

ವೃತ್ತಸ್ತನದೊಡನೊಡನ
ತ್ತಿತ್ತಸುವರೆಯಾಗೆ
ನೃಸುರನೇತ್ರಾಳಿ ಪರಾ
ವೃತ್ತಾ
ರೋಚಿತಕಂಪನಿ
ವೃತ್ತೋನ್ನತಘನನಿತಂಬಮೆಸೆದುದು
ನಟಿಯಾ         ೧೨೧

ಸತಿ ಜಘನದ ಭರದಿಂದೇ
ಕತಲದೊಳಿರಲಱಿಯದಗ್ರತಳಸಂಚಾರಾಂ

ಚಿತಕುಂಚಿತಸೂಚ್ಯುದ್ಘ

ಟ್ಟಿತಮಂ
ಪಡೆದಂತೆ ಪಾದಪಲ್ಲವಮೆಸೆಗುಂ   ೧೨೨

ತಳೆಯೆ ಮೊಗಮೊಗೆಯೆ ನೆಲೆಮೊಲೆ
ಬಳೆಯೆ
ಬಲಕ್ಕಲಘುಜಘನಮಮರ್ದಾಯತಮಂ
ಕೊಳುತುಮವಹಿತ್ಥಮಂ
ಕೊಂ
ಡೆಳೆಯಳ್
ಸುರಸಭೆಯ ಮನಮನಿೞ್ಕುಳಿಗೊಂಡಳ್   ೧೨೩

ತೀವಿ ಮೊಗರಸದೊಳೊದವಿದ
ಭಾವರಸಂ
ಬಸಿಗುಮೆಂಬಮೊಲ್ ಸಂಹತಮಂ
ಸಾವಗಿಸಿದ
ಮೈಯ್ಯೊಳ್ ಶೋ
ಭಾವತಿ
ಸಮಪಾದಚಾರಿಯಂ ಕೈಕೊಂಡಳ್  ೧೨೪

ಅಡಿದಳಿರ್ಗಳ್ ತಳಿರಂ ಸಾ
ಲಿಡುವಂತಿರೆ
ಕೆಂಪು ಕೆದಱೆ ಪದಪಲ್ಲವದೊಳ್
ತೊಡರ್ದಮರರ
ಕಣ್ಬಲೆಯಂ
ಬಿಡಿಸುವ
ತೆಱದಿಂದೆ ಚಾಪಗತಿಯಂ ಮೆಱೆದಳ್        ೧೨೫

ಉಗುರ್ವೆಳಗು ಬಿಣ್ಣಿತೆಂದದ
ನುಗುೞ್ವಂತಿರೆ
ತೋಱುವಂತೆ ತಳದೆಳೆಗೆಂಪಂ
ಬಗೆಗೊಳಿಸುವಡ್ಡಪುರಿಯಂ

ಪುಗುತುಂ
ಪುರಿಯಂ ವಿಳಾಸವತಿ ಪೊಱಮಟ್ಟಳ್       ೧೨೬

ಮೆಱೆಯೆ ಕುಚಮಂಡಲಂ ನಸು
ದೆಱೆಯೆ
ನಿವೃತ್ತೋರುಮಂಡಲಂ ರಸದಿಂ ಮೆ
ಯ್ಮೆಱೆಯೆ
ಸಭಾಮಂಡಲಮೇಂ
ಮೆಱೆದಳೊ
ಮಂಡಲಮನಾಕೆ ಚಾರಿಗಳಿಂದಂ          ೧೨೭

ಅರುಣಸರೋರುಹದಲರಂ
ಮುರಿಮುರಿದೀಡಾಡುವಂತೆ
ನಿಟ್ಟಿಸಿ ನೋಡಲ್
ಕರಮರಿದೆನೆ
ಕರಮಿವು ಸಾ
ಸಿರಮೆನೆ
ರೇಚಿಸಿದಳಾಕೆಯೆಡಕಂ ಬಲಕಂ    ೧೨೮

ಜತಿ ತೊಡರೆ ರಣಿತನೂಪುರ
ರುತಿಗಳ
ಬೞಿವಿಡಿಯಂ ವಾದಕಂ ಬಾಜಿಸಿದಂ
ಧೃತದಾವುಜ್ಜಮದಾರಸ

ವತಿಯುಂ
ನೃತ್ಯಾಂಗಮೆಂಬೊಲಾಗಿರೆ ವಾದ್ಯಂ        ೧೨೯

ಕರಣದೊಳೊಂದುಂ ಭಾರತಿ
ಕರಣಮಿದಂ
ಮೆಚ್ಚರೆನಿಪುದಿಲ್ಲೆನೆ ಮೆಲ್ಪಿಂ
ಪರಿವಿಡಿಯಿಂ
ಪರಿಶೋಭಿಸಿ
ಪರಿವಿಡಿಯಿಂದಂಗರಾಗಮಂ
ಪೊಸಯಿಸಿದಳ್         ೧೩೦

ಒತ್ತಿದ ಶೃಂಗಾರದ ರಸ
ದೊತ್ತೆನೆ
ಕವಿತಂದು ರಸದ ಕವಿತೆಯ ನೆಲೆಯಂ
ಪೆತ್ತು
ಜಡಿಯುತ್ತೆ ಶೋಭಿಸೆ
ವೃತ್ತಸ್ತನಿ
ಲಾಸ್ಯಲೇಖೆಯಿಂ ಶೋಭಿಸಿದಳ್    ೧೩೧

ಮತ್ತಮೇಕಪಾದಸ್ಥಾನಮಂ ಕೈಕೊಂಡಲ್ಲಿ

ಚರಣಾಗ್ರಂ ಜಾನುವಂ ಜಕ್ಕುಲಿಸಡರೆ ನಿತಂಬಕ್ಕೆ ಪಕ್ಕಾಗಿ ಮಧ್ಯಂ
ಮುರಿವನ್ನಂ
ದಕ್ಷಿಣಕವ್ವಳಿಸಿದ ಕುಚದೊಳ್ ಕೈದಳಿರ್ಕೂಡೆ ವಾಮಂ
ಕರಕಂಜಂ
ಕಾಂತಿಯಂ ತಳ್ತಳುರ್ದು ಮಿಳಿರೆ ವಕ್ತ್ರಾಂಬುಜಂ ಕೊಂಕಿ ಚೆಲ್ವಾ
ಗಿರೆ
ಕಾಮೋತ್ಪತ್ತಿಯಂ ಕಾಮಿಸಿ ತರುಣಿ ತಪಂಗೆಯ್ವವೋಲ್ ಕಣ್ಗೆವಂದಳ್         ೧೩೨

ಅದಲ್ಲದೆಯುಂ –

ಬಲಗಾಲ್ ಸೈತೊಪ್ಪೆ ವಾಮಂ ಕೆಲಕೆ ತೊಲಗೆ ವಕ್ಷಸ್ಸ್ಥಿತಂ ಮುಟ್ಟಿ ಚೆಲ್ವಾ
ಗೆ
ಲತಾಖ್ಯಂ ಕೈ ಕರಂ ಕಣ್ಗೊಳೆ ನೆಗೆಯೆ ಕುಚಂ ಕೊಂಕೆ ಮಧ್ಯಂ ದಳತ್ಕು
ಟ್ಮಲನೇತ್ರಂ
ಬೀಱೆ ಬೆಳ್ಪಂ ಪ್ರಹಸಿತವದನಂ ಶೋಭೆಯಂ ಸೂಸೆ ಲೀಲಾ
ಲಲಿತಾಸ್ಯಕ್ರಾಂತದಿಂ
ನಿಂದಮರನರಸಭಾಚಿತ್ತದೊಳ್ ಕಾಂತೆ ನಿಂದಳ್  ೧೩೩

ವಿವಿಧಾಲಂಕೃತಿ ಕೂಡೆ ಕೊಂಡ ಗಮಕಂ ಮಂದ್ರಾದಿಯುಂ ಮುಂದೆ
ರ್ಣವಿಭಾಗಂ
ಪವಣಾಗೆ ರಾಗರಮಣೀಯಚ್ಛಾಯೆಯುಂ ಕೂಡೆ ನೀ
ಡುವ
ವೀಣಾಕಲ ಕೋಮಳಕ್ಜಣಿತದೊಳ್ತಳ್ಪೊಯ್ದು ಕೈಗಣ್ಮೆ ಪೊ
ಣ್ಮುವ
ಗೀತಕ್ಕೆ ಮೃಗಾಕ್ಷಿಯಾಡಿ ಮೆಱೆದಳ್ ಗೀತಾನುಗಪ್ರೌಢಿಯಂ        ೧೩೪

ಅಂತು –

ಅಚ್ಚರಿಯ ನಚ್ಚನಂ ಬಗೆ
ಗಚ್ಚರಿಯಂ
ಪಡೆಯೆ ನೃಪಸಭಾಸದರ ಮನಂ
ಮೆಚ್ಚಿ
ಮಱೆದೊಱಗೆ ಕಣ್ಗಳ್
ಬೆಚ್ಚಂತಿರೆ
ಮುಗುಳ್ದುವಿಲ್ಲ ವಿಸ್ಮಯದಿಂದಂ    ೧೩೫

ಇಂದ್ರನೀತನೆ ಮತ್ತಮಿವರ್ ದಿಕ್ಪಾಳರೆ ಬೋಳೆಯರೀಕೆಯರ್
ಚಂದ್ರವಕ್ತ್ರೆಯರಗ್ಗದ
ದೇವಸ್ತ್ರೀಯರೆ ನರ್ತಕಿಯೀಕೆ ದೇ
ವೇಂದ್ರನಂ
ಸಲೆ ಮೆಚ್ಚಿಸುತಿರ್ಪಾ ರಂಭೆಯೆ ಪೋ ಪುಸಿಯಲ್ಲದೆಂ
ದಿಂದ್ರಜಾಲಮನೀಕ್ಷಿಸಿ
ಜೋದ್ಯಂಬಟ್ಟುದು ಭೂಪಸಭಾಜನಂ    ೧೩೬

ಅಂತು ಸಹಸ್ರಲೋಚನನುಮಂ ಬಸದಾಗಿಪ ರಂಭೆಯಾಟಮುಂ
ಕಂತುವನಾದೊಡಂ
ಮರುಳಿಸಲ್ ನೆಱೆವಗ್ಗದ ದಿವ್ಯಕಾಮಿನೀ
ಸಂತತಿಯುಂ
ಕುಮಾರನ ಮನಂಬುಗಲಾಱವೆ ಭಾವಿಪಂದು ಪೇ
ೞೇಂ
ತೆಱಪಾಗಲಾರ್ಕುಮೆ ಘನಸ್ತನಿ ಪೊಕ್ಕೆಡೆಗೊಂಡ ಚಿತ್ತದೊಳ್        ೧೨೭

ಅಂತು ನೋಡಿ ನರಪತಿ “ಸಚಿಂತನ ಚಿತ್ತೋಹಿ ತರುಣೀಮಣಿಮಂತ್ರೌಷಧೀನಾಂ ಪ್ರಭಾವಃ” ಎಂಬಿನಿತನೆ ನುಡಿದಾದರಸ್ಪಂದಮಂದ ಮುದ್ರಾಮನೋಹರಂಗಳಪ್ಪ ಕಣ್ಗಳಂ ಕೆಲಕ್ಕೆ ತೆಗೆಯೆ

ಅರಸನ ಮನಮೆಱಗದುದಂ
ನಿರುತಂ
ಮಾಯಾಭುಜಂಗನಿಂಗಿತವಿದಿತಂ
ಪರಿಭಾವಿಸಿ
ಬೞಿಕದನುಪ
ಹರಿಸಿದನಾಯಿಂದ್ರಜಾಲಮಂ
ತತ್‌ಕ್ಷಣದೊಳ್         ೧೩೮

ಎಂತು ನಭದಲ್ಲಿ ತೋಱಿದ
ನೆಂತು
ಸಭಾಸದರ ಚಿತ್ತದೊಳ್ ಪುಗಿಸಿದನಂ
ದಂತಮರರ್
ಬೆರಸಮರೀ
ಸಂತತಿ
ಚಿಂತಾವಶೇಷಮಾದತ್ತಾಗಳ್       ೧೩೯

ಬೆರಲಂ ಮಿಡಿದು ಕದಂಪಂ
ಕರತಳದಿಂದಾಂತು
ವಿಸ್ಮಯಸ್ಮಿತನೇತ್ರಾಂ
ಬರುಹದಿನಾ
ಮಾಯಾವಿಯ
ನರಸನ
ಸಭೆ ನೋಡಿ ತಲೆಯನೇಂ ತೂಗಿದುದೋ     ೧೪೦

ಮಕರಂದಂ ಜೋಗಿಗೆಂದಂ ಕುತುಕಕಳೆಗಳಂ ಕೇಳ್ವುದಂ ಕಂಡೆವೀ ಕೌ
ತುಕಮಂ
ನಿನ್ನಿಂದಮಿನ್ನೊಂದೆಮಗೆ ಸಮನಿಸಿತ್ತೀಕ್ಷಣಾಪೇಕ್ಷೆ ನೀಂ ವ್ಯಾ
ಪಕನೈ
ಮೂಲೋಕದೊಳ್ ಮೇಲೆನಿಸುವ ವನಿತಾರತ್ನಮಂ ರಾಜವಂಶಾ
ಧಿಕಮಂ
ನೀಂ ಕಂಡುದುಂಟಾದೊಡೆ ತಡೆದಿರವೇಂ ತೋಱು ಸಾಮರ್ಥ್ಯದಿಂದಂ   ೧೪೧

ಎಂದ ಮಾತಿಂ ಮುನ್ನಮೆ ಮಾಯಾಭುಜಂಗಂ ಜೋಗಿಣಿಯ ಮೊಗಮಂ ನೋಡೆ –

ಆಕೆ ಮನಸಿಜನ ವಿಜಯಪ
ತಾಕೆಯನೆತ್ತುವವೊಲೆತ್ತಿ
ಚಿತ್ರಮನತನು
ವ್ಯಾಕುಲೆಯಂ
ತೋಱಿದೊಡಂ
ದಾ
ಕನ್ನಿಕೆಯೆನೆ ನಭೋವಿಭಾಗದೊಳೊಗೆದಳ್        ೧೪೨

ಬಿಸುಸುಯ್ಯಿಂ ನಸುಗಂದಿ ಬಾಡಿದಧರಂ ಕಣ್ಣೀರ ಬಾನಲ್ಗಳಿಂ
ಬಸಿವಾಸ್ಯಂ
ತಳಗಯ್ಯ ಪಜ್ಜೆ ಪಸರಂಗೊಂಡಿರ್ದ ಗಂಡಸ್ಥಳಂ
ಪೊಸವೆಳ್ಪಂ
ಮಿಸುವಂಗಯಷ್ಟಿ ನೊಸಲೊಳ್ ನೀಳ್ದಿರ್ದ ನೀಲಾಳಕಂ
ಪಿಸುಣಾಡಿತ್ತಸಮಾಸ್ತನಸ್ತಹತಿಯಂ
ತತ್ಕಾಮಿನೀರೂಪಕಂ      ೧೪೩

ಅದಲ್ಲದೆಯುಂ –

ಅಲರ್ವಸೆಯೊತ್ತೆ ಪತ್ತಿದೆಸಳಿಂದೆಸೆವಂಗದ ಗಂದೆ ಗಂಧಶೀ
ತಲಜಲಬಿಂದುಗಳ್
ಕುಚದೊಳೊಟ್ಟಿದ ಚಂದನದೊದ್ದೆಗೆಯ್ದ ಶೀ
ತಲಿಕೆಯೊಳದ್ದಿದೊಳ್ದುಗುಲಮಂಬುಜನಾಳದ
ಹಾರವಾಕೆಯು
ತ್ಪಲವಲಯಂಗಳೇಂ
ನೆಱೆಯೆ ಪೇೞ್ವವೊ ತಚ್ಛಿಶಿರೋಪಚಾರಮಂ         ೧೪೪

ಅಂತಾ ಕಾಂತೆಯ ಕಂತುಸಂತಾಪಕ್ಕೆ ಶಶಿಕಾಂತಮುಂ ನವನಿಶಿತ ಕಾಮ ಕುಂತುಮುಂ ಸಕಲತ್ರೈ ಲೋಕ್ಯಸಾರಮುಂ ಶಿಶಿರೋಪಚಾರಚಾರುಶೃಂಗಾರಮುಮಪ್ಪತಿಶಯರೂಪಮಂ ಸತ್ಯಸ್ವರೂಪಮಂ ನೋೞ್ಪಂತಾ ಸಭಾಜನಂ ವಿಸ್ಮಯರಸಭಾಜನಮಾಗಿ ನೋಡುತ್ತುಮಿರೆ –

ನೆಗೆದು ಮದನಾಗ್ನಿ ಸುಡುತಿರೆ
ಮಿಗೆ
ಸಿಡಿಮಿಡಿವಂದು ಬೆಂದು ತನ್ನಯ ಮನದಿಂ
ದಗಿದು
ಪೊಱಮಟ್ಟು ಗಗನ
ಕ್ಕೊಗೆದಂತಿರೆ
ಕಂದಿ ಕುಂದಿದಾಕೋಮಳೆಯಂ         ೧೪೫

ಅಂತು ಕಾಣಲೊಡನೆ ಝಲ್ಲೆಂದ ಮೆಲ್ಲೆರ್ದೆಯುಂ ಮೆಲ್ಲೆರ್ದೆಯೊಡನೆ ಸಮುಲ್ಲಸಿತವಾದ ಮೆಯ್ನವಿರುಂ ಮೆಯ್ನವಿರನವಿರತಂ ಮುೞುಂಗಿಸಿದ ಘರ್ಮಜಲಕಳಿಕೆಗಳುಂ ಘರ್ಮಜಲಕಳಿಕೆಗಳುದಿರೆ ಕಂಪಿಸುವ ಕಾಯಮುಂ ಸ್ಮರಶರಪ್ರಹಾರದಿಂ ನುಚ್ಚು ನೂಱಾದಂತೆಯುಂ ಮಗುೞ್ದೆೞ್ಚತ್ತಂತೆಯುಂ ಮೋಹರಸಮೊಸರ್ತಂತೆಯುಂ ಭಯಂ ಬೆತ್ತಂತೆಯುಮಾಗೆ ಮತಿಮಱೆದ ಕುಮಾರನಂ ಕಂಡು ಈಕೆಯೀತನ ಮನದಾಕೆಯೆಂದಱಿದು –

ಅಲಿ ಮಾಗೆಯಲ್ಲಿ ಮಲ್ಲಿಗೆ
ಯಲರಂ
ಪಡೆವಂತೆ ಭೂಪನಿರೆ ಕುರುಡಂ
ಣ್ಮಲರಂ
ಪಡೆದವೊಲೆಸೆದಂ
ಪೊಲಗೆಟ್ಟಂ
ಬಟ್ಟೆಗಂಡವೊಲ್ ಮಕರಂದಂ   ೧೪೬

ಆಗಳ್ ಕಂದರ್ಪನ ಕಾಟದಿಂ ಪೂಸೆದ ಪೊವಿನಂತಿರ್ದ ತರುಣಿಯಂ ಪರವಶೆಗೆತ್ತು ಪುರುಡಿಸಿ ಪರಿಕುಪಿತನಾಗಿ ನೊಸಲನಡರ್ದು ಪೊಡರ್ದು ಗಂಟಿಕ್ಕಿದ ಪುರ್ಬಂ ನಸುಗೆತ್ತುವಧರಮುಮೆಸೆಯೆ ಪೊಸಗೆಂಪು ಪಸರಿಸಿದ ಕಣ್ಗಳಂ ಬಲ್ಪಿಂ ಬರೆತೆಗೆದು ಮಾನವಮದನಂ ಪರಾವೃತ್ತವದನನಾಗೆ ಮಂದರಾಗಿಣಿಯಾದಂತಾ ಜೋಗಿಣಿಯುಂ ಜೋಗಿಯುಂ ಧ್ವಜಧರನುಮಿಂದ್ರಜಾಳಂಬೆರಸು ಪದ್ಮಾವತಿಯ ಮಾಯೆಯಪ್ಪು ದಱಿಂದದೃಶ್ಯಮಪ್ಪುದುಂ –

ಬೆಱಗಾದಂ ಭೂಪತಿ ಮತಿ
ಮಱೆದಂ
ಮಕರಂದನಿಂತಿದೇನಕ್ಕುಮೆನು
ತ್ತಱಿವು
ತಱಿಸಲ್ಲದೞಿದಿರೆ
ನೆಱೆಯೆ
ಸಭಾಸದರುಮೊಲ್ದು ಕೌತುಕಮುತ್ತರ್         ೧೪೭

ಅಲ್ಲಿಂ ಬೞಿಯಂ ದ್ವಿಗುಣಿತವಿರಹದುಃಖನುಂ ತಾಂಬೂಲದಾನಮಾತ್ರ ವಿಸರ್ಜಿತರಾಜ ಲೋಕನುಂ ವಿನಯವಚನವಿದಳಿತಭ್ರೂಲತಾವಿಸರ್ಜಿತ ಸಚಿವಸಾಮಂತ ಸೀಮಂತಿನೀ ಸಮಾಜನುಮಾಗಿ ಸಜ್ಜೆಗುಜ್ಜುಗಂಗೆಯ್ದು ಪೋಪುದಂ ಕಂಡು –

ಅವು ನೋಡಂಚೆಗಳಬ್ದಪತ್ರತತಿಯೊಳ್ ಕುಳ್ಳಿರ್ದು ಕಣ್ಮುಚ್ಚಿದ
ಪ್ಪುವು
ಕಾಯ್ಪೇಱಿದ ಸೌಧಕೂಟತಟದಿಂ ಪಾರಾವತಂ ಪಾಱಿ ಪೋ
ಪುವು
ಪಾಯ್ದಾಡುವರುಯ್ಯಲಿದಂದೊಗೆವ ಬಂಬಲ್ದುಂತುಱಂ ಪಾರ್ದು ಚಂ
ಚುವನುದ್ಧಂ
ತೆಱೆಯುತ್ತೆ ಸಾರ್ದಪುವು ತಾಪೋದ್ರೇಕದಿಂ ಕೇಕಿಗಳ್       ೧೪೮

ದೇವ ನಿರೀಕ್ಷಿಸು ನೀಂ ರಾ
ಜೀವಸಖಂ
ಸಜಳಜಳಧರಶ್ಯಾಮಾಭ್ರ
ಶ್ರೀವತ್ಸಾಂಕನ
ಪೊರ್ಕುೞ
ಪೂವೆನೆ
ಕೆದಱಿದಪನಮಳಕರಕೇಸರಮಂ    ೧೪೯

ಸಜ್ಜೆಗೆ ಬಿಜಯಂಗೆಯ್ವುದೆ
ಕಜ್ಜಮೆ
ಸೇವಕನ ತೆಱದೆ ಬಂದೋಲಗಿಪೀ
ಮಜ್ಜನಕಾಲಮನುದಿತಜ

ಗಜ್ಜನಮನುಸರಿಸವೇೞ್ಪುದುತ್ತಮಸತ್ತ್ವಾ
      ೧೫೦

ಎಂಬುದುಂ ಮಕರಂದನ ಮಾತಂ ಮಿಱಲಱಿಯದರಿಕಮಳಕಾನನಕರಿಕಳಭಂ ಕರೇಣುಕಾಮುಕನಪ್ಪ ಕರಿಕಳಭಂ ಕೂರಂಕುಸವಸದಿಂ ಮಜ್ಜನಂಬುಗುವಂತೆ ಮಜ್ಜನಂಬೊಕ್ಕು ಮತಿಶೀತಳತೆಯನಪ್ಪುಕೆಯ್ಗುಮೆಂಬಂತೆ ಕರ್ಪೂರಪರಿಮಳರಜೋವಿಮಿಶ್ರಮಳಯಜದ್ರವದ ರಜಃ ಕೋಶಕುಸುಮಜಾತದಿಂ ಶೀತಳನಾಥಶೀತಳಪದನಳಿನಮನರ್ಚಿಸಿ ತದ್ದಳಾಲಂಕೃತೋತ್ತ ಮಾಂಗನಿನಿಸಾನುಂ ಮನದ ಬೇಗೆಯಂ ನೀಗಿ ಮುನ್ನಮಾವರಿಸಿದ ಮೋಹರಸಮನರಸಂ ಸೈರಿಸದಂತಿರನಧಿಗತರಸಾಸ್ವಾದನಾಮೋದಿತಮಧುರಮನೋಹರಾಹಾರಮನಾರೋಗಿಸಿ ಯಕ್ಷ ಕರ್ದಮಪರಿಮೃದಿತ ಪಾಣಿಪಲ್ಲವನಡಸಿದಾಪತ್ತಿನಲ್ಲಿಗೆ ನೀನಲ್ಲದೆಮಗೆ ಹಸ್ತಾವಳಂಬ ಮಿಲ್ಲೆಂಬಂತೆ ಮಕರಂದ ಪ್ರಸಾರಿತಪ್ರಕೋಷ್ಠನಿಷ್ಠಿತ ವಾಮಕರತಳನುಂ ಬಿಸುಸುಯ್ದ ಬೆಂಕೆಯಿಂ ಕರಿಂಕುವರಿಗುಮೆಂಬಂತಿರೆ ಕರಕಮಲಾಂಗುಳೀದಳಸಮಿಕೃತಶ್ಮಶ್ರುಶಿಖರನುಂ ರಾಗಾಂಧತೆ ಯಿಂ ಮುಂದುಗಾಣದೆ ಮಾರ್ಗಮಂ ಗುಣಿಯಿಪಂತೆ ಸವಿನಯಪ್ರತೀಹಾರಿನಿವೇದಿತ ಮಾರ್ಗದತ್ತದೃಷ್ಟಿಯುಮಾಗಿ –

ಜಳಯಂತ್ರೋದ್ಗತದುರ್ದಿನಕ್ಕೆ ಘನಸಾರಾಂಭಶ್ಛಟಾಸೇಕಶೀ
ತಳಚಂದ್ರೋಪಳಕುಟ್ಟಿಮಕ್ಕೆ
ಸಲಿಲಕ್ಷಾಳಿತಸ್ತಂಭಸಂ
ಕುಳಸಂಶೋಭೆಗೆ
ಚಂದನದ್ರವದಳತ್ಪುಷ್ಪೋಪಹಾರಕ್ಕೆ ನಿ
ರ್ಮಳವಿಶ್ರಾಮಗೃಹಕ್ಕೆ
ಸದ್ಗುಣಗೃಹಂ ಶೃಂಗಾರಕಾರಾಗೃಹಂ    ೧೫೧

ಇದು ವಿದಿತ ಪ್ರಬಂಧವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಲೋಚ್ಚಲಿತ ನಖಮಯೂಖಮಂದಾಕಿನೀ ಮಜ್ಜನಾಸಕ್ತ ಸಂತತೋತ್ಸಿಕ್ತದಾನಾಮೋದಮುದಿತಬುಧ ಮಧುಕರಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತಿಯೊಳ್

ಇಂದ್ರಜಾಲವರ್ಣನಂ

ಚತುರ್ಥಾಶ್ವಾಸಂ