ಪದರಾಗಂ ಪಲ್ಲವಂ ಪೆರ್ಮೊಲೆಗೊಲೆ ನಳಿತೋಳ್ಕೊಂಬು ಕೇಶಂ ತಮಾಳಂ
ವದನಂ
ಪದ್ಮಾಕರಂ ಮೆಯ್ ಲತೆ ತೊಡೆ ಕದಳೀಸ್ತಂಭಮಾಗಲ್ಕೆ ಮೆಯ್ವೆ
ರ್ಚಿದಮಾರ್ಗ
ಶ್ರಾಂತಿಯಿಂದ ಬರಲಱಿಯದ ಭೂಲೋಕ ಕಂದರ್ಪದೇವಂ
ಗಿದಿರ್ವರ್ಪುದ್ಯಾನಲಕ್ಷ್ಮೀವಧುವಿವಳೆನೆ
ತತ್ಕಾಂತೆ ಕಣ್ಗೆಡ್ಡಮಾದಳ್        ೫೧

ಆಕೆಯ ಲಾವಣ್ಯಾಮೃತ
ಸೇಕದೆ
ತೃಷೆ ಮೞ್ಗಿತರ್ಕುಮಲ್ಲದೊಡಂತ
ದ್ವ್ಯಾಕುಳಿತಚಿತ್ತನವನವ

ಳೋಕಿಸುವನೆ
ಸೋಲ್ತನಂತೆ ಮಾನವಮದನಂ        ೫೨

ಅಲ್ಲಿಂ ಪೆಱಗೆ –

ತಳೆದೆಳಗೆಂಪಿಂ ಪಳಿಕಿನ
ಕಳಶಂ
ಕಸುಗಲ್ಲ ಕಳಶದಂತಿರೆ ತಳೆದು
ತ್ಪಳದಳಧವಳವಿಳೋಚನೆ

ವಿಳಾಸದಿಂ
ಮತ್ತಮೊರ್ವಳಂಗನೆ ಬಂದಳ್   ೫೩

ಒಳಗಳ್ಳಾಡುವ ಜಳದಿಂ
ಕಳಶಂ
ಕಣ್ಗೆಸೆದುದಾಸ್ಯರುಚಿತಸ್ಕರನೀ
ಖಳನೆಂದು
ಪಿಡಿದೊಡಾ ಕೋ
ಮಳೆ
ಭಯದೆರ್ದೆವೊಯ್ವ ತುಹಿನಕರಬಿಂಬದವೋಲ್  ೫೪

ಆಕೆವೆರಸಾಕಾಂತೆಯೆಯ್ದೆವಂದು ತೃಪಾನಳತಪ್ತನಾಗಿರ್ದ ಚಂದ್ರೋದಯನ ಮೇಲೆ ಸೊದೆವೞೆಯಂ ಸೂಸುವಂತೆಯುಂ, ಘನಸಾರಾಸಾರದಿಂ ಸವನಂಗೆಯ್ವಂತೆಯುಂ, ಚಂದನಚರ್ಚೆಯಂ ಚೆಲ್ಲುವಂತೆಯುಂ ಅತಿದೀರ್ಘಧವಳ ವಿಳೋಚನಂಗಳಿನಡರೆ ನೋಡಿ ನೀಡಿಲ್ಲದೆ ತೋರ್ಪ ಋಷ್ಯಾಶ್ರಮದ ಮುನಿಕುಮಾರಿಯರೆ ವಿವಿಧಮಹಾನುಭಾವ ಭಾಗನುದನ್ಯಾಂಗನಾಲಿಂಗಿತ ಕಂಠನಾದಂತೆ ತೋಱಿದಪನೀ ಕಳಶಜಳದಿನೀ ಕುಳರತ್ನಕಲಶನ ಬೞಲ್ಕೆಯಂ ಕಳೆದೆಮ್ಮ ವನವಿಹಾರವಿನೋದಮಂ ಸಫಲಂಮಾಡಿದೆಮಗಕೃತಾರ್ಥತಾಕಳಂಕಮಂ ತೊಳೆದು ಕಳೆವುದೆಂದು ಕೆಳದಿಯ ಕೈಯ ಕಳಶಮಂ ಕೊಂಡು ನೀಡೆ ಮಕರಂದಂ ತಳೆದುಕೊಂಡು –

ಕುಳಿರ್ವ ಜಳಕಳಶಮದು ಕರ
ತಳವಂ
ಸೋಂಕುವುದುಮಾಲಿಗೊಂಡು ಶರೀರಂ
ಪುಳಕಿಸೆ
ನಾಳದೊಳಾ ಕೋ
ಮಳೆ
ತೀವಿದ ಕಮಳನಾಳಮಂ ಕಳೆವಾಗಳ್ ೫೫

ನೆಕ್ಕ ಕದಂಪು ಪತ್ತಿಪೆಡೆಗೊಂಡ ಕೊರಲ್ಪುಣಿಚೆರ್ದ ಕೀನಿವಲ್
ಪೊಕ್ಕಡಗಿರ್ದ
ಕಣ್ಕುರುಳಿಗೊಂಡರೆಬತ್ತಿದ ಬಾಯ್ ಬೞಲ್ದ ಮೆ
ಯ್ಯಕ್ಕುೞಿಸಿರ್ದ
ಪೆರ್ಬಸಿಱಗುರ್ವಿಸೆ ಬಂದನದೊರ್ವ ಪಾರ್ವನ
ಲ್ಲೊಕ್ಕಿೞಿತರ್ಪ
ಕೈಪೆವೆಮರಂ ತುದಿನಾಲಗೆಯಿಂದೆ ನಕ್ಕುತುಂ  ೫೬

ಆ ಪಾರ್ವನ ಬರವಂ ಕಂಡರಸನೀ ದ್ವಿಜಂ ಬಾಳದ್ವಿಜದಂತೆ ನೀರಡಸಿ ಬಾಯಂ ಬಿಡುತೆ ಬಂದಪ್ಪನೆಯ್ದೆ ಬಂದೆನ್ನ ಮೊಗಮಂ ದೀನದೃಷ್ಟಿಯಿಂ ನೋಡದನ್ನೆಗಂ ಕೃಪಣೋಕ್ತಿಗಳಂ ಕಿವಿಗೀಡಾಡದನ್ನೆಗಂ ಸನ್ನೆಗೈದಾದೊಡಮೀತನ ತೃಷಾಗ್ನಿಯಂ ಮೞ್ಗಿಸೆಂಬುದುಮಾರ್ಯ ಪುತ್ರನಂತೆಗೆಯ್ವೆನೆಂದಿರ್ಪನ್ನೆಗಂ ಬೇಡದೆ ಬೆಸೆಗೊಳ್ಳದಾ ಬ್ರಾಹ್ಮಣಂ ಬಂದು ಮುಂದೆ ಕುಕ್ಕುರಿಸಿ ಕುಳ್ಳಿರ್ದು ಕೊರಲಂ ನೀಡಿ ಸುರ್ಬುಗೊಂಡ ಗಡ್ಡಮುಮಂ ಮೀಸೆಯುಮನಗಲೆ ನೂಂಕಿ ಪೀಱಿದ ತಲೆಯೇಱಂತಿರ್ದ ಬಾಯೊಳಡ್ಡಗೈಯನಿಡುವುದುಂ ಮಕರಂದಂ –

ಎಱೆಯ ಸಿಡಿಲ್ವ ಸೀವರದ ಸೀರ್ಪನಿಗಳ್ಪೊಱಸೋರ್ಗುಮೆಂಬಿನಂ
ತುಱುಗಿರೆ
ಮೀಸೆಯೊಳ್ಮಗುಳೆ ಕಣ್ಮಲರ್ಗಳ್ ಮಲರ್ದಳ್ಳೆ ಪೊಯ್ಯೆ ಮೆ
ಯ್ಯೊಱಗೆ
ಕೆಲಕ್ಕೆ ಕಂಟಣಸೆ ಮೆಯ್ನವಿರೊಯ್ಯನೆ ಕಂಠಕಂದಳಂ
ತೆಱೆದು
ಮಿಡುಂಕೆ ಮೂಗಲರೆ ಪೀರ್ದನಸುಂಗೊಳೆ ಪಾರ್ವನಂಬುವಂ    ೫೭

ಅಂತು ಕಳಶದ ನೀರನೊಂದು ಪನಿಯುಮನುೞಿಪದೆ ತೆಗೆದು ತೇಗಿ ತಲೆಯಂ ತೂಗಿ ತಾಂಬೂಳಯಾಚನಾನಂತರಂ ಹೃಷ್ಟನುಂ ಸಂತುಷ್ಟನುಮಾಗಿ ಮಹೀಪತಿಯಂ ಪಲವು ಸೂೞ್ ಪರಸಿ ಮತ್ತಮಾ ವಿಪ್ರನಿಂತೆಂದಂ –

ಮುಂಚುವುದೆರೆವನನೀವಂ
ಕಿಂಚಾನರ್ಘ್ಯಂಯದವಸರೇ
ದತ್ತಮೆನು
ತ್ತುಂ
ಚಲದಿನೀವುದಲ್ಲದೊ
ಡೇಂ
ಚಾಗಮೆ ದಾನಿ ನೀನೆ ದಾನವಿನೋದಾ ೫೮

ಮೆಚ್ಚದೊಡೇನಿತರಜನಂ
ಮೆಚ್ಚದ
ಪೆಣ್ ಮೆಚ್ಚೆ ಸೊಬಗನೆನಿಪುದರಿಗಣಂ
ಮೆಚ್ಚೆ
ಕಲಿಯೆನಿಪುದೆರೆವಂ
ಮೆಚ್ಚೆ
ಮಹಾದಾನಿಯೆನಿಪುದೀವರ ದೇವಾ    ೫೯

ಎಂದಾ ಪಾರ್ವಂ ಪೋಪುದುಮುಚಿತವಚನಂಗಳಂ ನುಡಿದು ನೃಪತನೂಜಂ ನಿಜೋದಾತ್ತವೃತ್ತಿದತ್ತವಿಸ್ಮಯಸ್ಮೇರಮುಖಿಯರಾಗಿರ್ದ ಮುನಿತನೂಜೆಯರಂ ನಿಜ ನಿವಾಸಕ್ಕೆ ವಿಸರ್ಜಿಸಿ ಬೞಿಯಮಲ್ಲಿಂ ತಳರ್ದಾ ಕುಮಾರಿಯರ ಬಂದ ಪಜ್ಜೆವಿಡಿದು ಪೋಗೆವೋಗೆ –

ಅವಗಾಹಂಗೈದು ಪೋದದ್ರಿಜಕರಿಗಳ ಕೈದುಂತುಱಿಂ ಕಾಯದಿಂದಂ
ಕವಿದೆತ್ತಂ
ಪೊಕ್ಕು ನೀರೊಳ್ ಬೆರಸಿ ಬಸಿವ ನೀರ್ದಂದಲಿಂ ಗಲ್ಲವುಣ್ಗಳ್
ಕವಿವನ್ನಂ
ತಿಂಬ ಪೆರ್ದುಂಬಿಗಳನಿರಿಸುತುಂ ಕೊಲ್ಲದೀಡಾಡಿದುತ್ಕೈ
ರವಕಂಜಪ್ರಾಯ
ಪುಷ್ಪಪ್ರಕರದ ಪುದುವಿಂ ಮೆಲ್ಲಿತಾದತ್ತು ಮಾರ್ಗಂ       ೬೦

ಆ ಮಾರ್ಗಂಬಿಡಿದು ಬಿೞ್ದಿರ್ದ ಸರಸಸರಸಿಜಶಾಲೂರಶಕಲಶೈವಾಲಂ ಗಳೊಳಡಿಯಿಡುತ್ತು ಮಿರ್ವರ್ ಕಿಱಿದಂತರಮಂ ನಡೆದು ಮುಂದೆ ಮುಂದುಗೊಂಡು ಪೊಂದಗಡಿನ ಕಡಾರಮಂ ಕಾದಿರ್ಪಂತೆ ಕಂಪಂ ಪೀರ್ದು ಕೆಂಗಱಿಯ ಪೊಱೆಯಂತಪ್ಪ ಪೂಗಳಂ ಸುೞಿದು ಬಿರಿದ ಸುೞಿಯಂ ಸುತ್ತಿ ನೇಲ್ದು ಜೋಲ್ದುಗೆವಣ್ಣಂ ಮುಗುಳ್ದು ಮಿಗೆ ಮಗಮಗಿಸುವೆಳವೂಗಳಿಂ ಪರಿಮಳದ ಬೀಡಲಂ ಬಿಟ್ಟಂತಿರ್ದ ಪೊಂಗೇದಗೆಯ ಬಾೞ್ವೇಲಿಯನೊಳಪೊಕ್ಕಂತೆ ಪೊಡೆ ತನಿಗಂಪನುಂಡು ಬಿಡೆಯುಂ ಪೊಱಮಡುವ ಮಱಿದುಂಬಿಗಳಿಂ ರತ್ನಗರ್ಭೆ ನೀಲದ ಪರಲನುಗುೞ್ವ ಚೆಲ್ವು ನೆಲಸೆ ಬಿಱಿಯೆ ಬೇರಿಂ ಪಣ್ತ ಬಕ್ಕೆವಲಸುಗಳುಂ, ಗಾಳಿಯ ಕೋಳಿಂ ಕೞಲ್ದು ಪಳಿಕಿನ ಪಾಸಱೆಯೊಳ್ ಘೞಿಲನೆ ಬಿೞ್ದು ಬಿಕ್ಕನೆ ಬಿರಿದು ತೋರಗಾಯ್ಗಳಿನೊಕ್ಕ ತಿರುಳಂ ನಕ್ಕಿ ನಾಲಗೆಯಂ ನಕ್ಕುವಂತೆ ತೋರ್ಪ ನಿಜಪ್ರತಿಬಿಂಬಕ್ಕೆ ಪುರ್ಬನಿಕ್ಕಿ ಪಲ್ಲಂ ಕಿಱಿವ ಪುಲ್ಗೋಡಗಂಗಳ ಮುದ್ದಿಂಗೆ ಮೆಚ್ಚಿದಂತೆಳನೀರನವಱ ಬಾಯೊಳ್ ಬಸಿವ ಬೆಳ್ದೆಗಂಗುಗಳುಂ, ವಿಪುಳಫಳಕುಚಭರಂಗಳೆಳನೀರ್ವಾಲ್ಗಳಂ ಬಾಲಸಸ್ಯಂಗಳನೂಡುವ ಚೆಂದೆಂಗುಗಳಂ, ಏೞೆಲೆವಾೞೆಗೊಯ್ಕುಗಳಿಂ ಬಂದಪುವೆಂಬ ಭಯಮಾದಂತೆ ಮಂದಾನಿಲನಂ ಕೊರಲ್ಕುಸಿವಿನಂ ಪೊಱಿಸಿ ಸರಸಶಿತಳಪರಿಮಳಮಂಪಾವುಗಳಿರ್ದಲ್ಲಿಗೆ ಪಾವುಡಂಗಳುಪುವ ಮಳಯಜತರುಗಳುಂ, ಶೀಕರಾಸಾರಸುರಭಿ ಮಾರುತನಿಂ ವನಕರಿಕಳಭಂಗಳುಮಂ ಶಬರಿಮನೋಮದಕರಿಗಳುಮನೊಡನೆ ಸೊರ್ಕಿಸುವ ಸಲ್ಲಕಿಗಳುಂ, ಮದಕರ್ದಮಮಂ ಬಿಡುವ ಮದಕರಿಗಳಂತೆ ಪಣೆ ಮಗುೞೆ ನಿರ್ಯಾಸಮನೊಕ್ಕು ಸೂಸುವ ಗುಗ್ಗುಳಂಗುಳುಂ, ಕಣೆಕಾಲುದ್ದಮಾಗೆ ಪಗಿನ ಪರಲಂ ಪರಪುವ ಕರ್ಪೂರಂಗಳುಂ, ರಜಮುಮೆಸಳುಂ ಮೊೞ ಕಾಲ್ವರಮಾಗೆ ಬಿರಿಮುಗುಳಂ ಸುರಯಿಗಳುಂ, ಪೊಂನ ಸಿಪ್ಪಂ ಸೂಸುವಂತೆಸಳನಿಕ್ಕುವ ಕೊಸಗುಗಳುಂ, ಚಿನ್ನ ಪೂಗಳಿಂ ಚೆಲ್ಲುವಂತರಲ ಸಂಕುಳಮಂ ಕೆದಱುವ ಸುರಹೊನ್ನೆಗಳುಂ, ಕೈವೊಯ್ದುನಗುವಂತೆ ತಳಿರ್ಗೊಂಬಂ ತಳಿರ್ಗೊಂಬು ತಾಗೆ ಪೂತು ತುಱುಗಿದ ಕಾಂಚಿವಾಳಂಗಳುಂ, ಪೊನ್ನ ಪುಡಿಯಂ ತಳಿವಂತೆ ಪರಾಗಮಂ ಸೂಸುವ ಸಂಪಗೆಗಳುಂ, ಪಣ್ಣಪಣಿಗೆಯ ಬಿಣ್ಪು ತಿಣ್ಣಮಾದಂತೆ ಕೆಲದ ಕುಜಂಗಳೊಳೆಳದೋಳ್ಗಳನಿೞಿಪುವ ಪೊಂಬಾೞೆಗಳುಂ, ಕೋಟೆ ವಾಟಿಸಿದ ಕೞ್ತಲೆಯಂ ಸುತ್ತಿ ಮುತ್ತಿದ ಬೆಳ್ದಿಂಗಳೆ ಬೀಡುವಿಟ್ಟಂತೆ ಕೞ್ತಲಿಸುವೆಲೆವಳ್ಳಿಯಂ ಬಳಸಿ ಕಳಿಯೆ ಪೂತ ಮಲ್ಲಿಗೆಗಳುಂ, ಮಲ್ಲಿಗೆಯ ಮುಗುಳಂ ರಾಸಿಗೆಯ್ದಂತೆ ಪೂವನೊಟ್ಟಿದಿಪ್ಪೆಗಳುಂ, ಇಪ್ಪೆಯ ಕಂಪಿಂಗೆ ಕುರುಳೆರ್ದು ಕರಮುಂಡು ನೀರಂ ಕಾಱುವಂತೆ ಸಾರಂ ಕಱೆವ ತಾಳ್ಗಳುಂ, ಕಿಸುಗಲ್ಲ ಪರಲ್ಗಳನುಗುೞ್ವಂತೆ ಬಿರಿಇದು ಮುತ್ತಂ ಬಿಡುವ ದಾಡಿಮಂಗಳುಂ, ಪೊಂಗೊಡಂಗಳಂ ಸಾರ್ಚಿದಂತೆ ಫಲಂಗಳಂ ಮುಂದೆಗೊಂಡ ಮಾದುಫಲಂಗಳುಂ, ಕಾಯ್ತುಕುಸಿವ ಕೌಂಗುಗಳುಂ, ಪಣ್ತು ಬಳ್ಕುವ ನಾರಂಗಂಗಳುಂ, ತಳಿರ್ತೊಱಗುವಶೋಕೆಗಳುಂ, ನನೆತೆೞಲ್ವ ಜಾದಿಗಳುಂ, ಮುಗುಳ್ತು ಮುಱಿವ ಮೊಲ್ಲೆಗಳುಂ, ಬಂದು ಬೞಲ್ವ ಬಾಳಚೂತಂಗಳುಂ, ತಳ್ತಡರ್ವ ಲತೆಗಳುಂ, ಕೈವಿಟ್ಟ ಸಿರೆಗಳುಂ, ಸೋರ್ವ ಸೋನೆಗಳುಂ, ಒಱೆದುಗುವ ಪನಿಗಳುಂ, ಎೞಲ್ವ ಪೊಂಬಾೞೆಗಳುಂ, ಬೀೞ್ವ ಬಾೞೆಗಳುಂ, ನೇಲ್ವ ಪಣ್ಪಳಂಗಳುಂ, ಅಲೆವ ಗೊನೆಗಳುಂ, ಮಲೆವ ಗೊಂಚಲ್ಗಳುಂ, ಅಲರ್ದುಗುವ ಲರ್ಗಳುಂ, ಅಲುಗುವ ಸೆಳೆಗೊಂಬುಗಳುಂ, ಕೋಳ್ವ ಬಂಡುಗಳುಂ, ಪನಿವ ತನಿರಸಂಗಳುಂ, ಏೞುಮುಂಡಮನಗುೞ್ದು ನೋಡಿದೊಡಂ ನೆಲೆದೋಱದ ಕುಸುಮರಜಂಗಳುಂ, ತಾಳುದ್ದಮಂ ತೋಡಿ ನೋಡಿದೊಡಂ ಮಧುರಸದಿಂ ನೀರ್ಗಾಣ್ಬ ನೆಲನುಂ, ನಡದಡಕೆಯ ಸಸಿಗಳುಂ, ತಡಿವಿಡಿವ ನವಿಲ್ಗಳಂ, ಮರದಿಂ ಮರಕ್ಕೆ ಲಂಘಿಸುವ ಕಪಿಗಣಂಗಳುಂ, ತಳಿರಿಂ ತಳಿರ್ಗೆ ತಳರ್ವ ಕೋಗಿಲೆಗಳುಂ, ಪೂವಿಂ ಪೂವಿಂಗೆ ಪಾಯ್ವ ತುಂಬಿಗಳುಂ, ಪಣ್ಣಿಂ ಪಣ್ಗೆ ಪಾಱುವರ ಗಿಳಿಗಳುಂ ಕೊಂಬಿಂ ಕೊಂಬಿಂಗೆ ನಿಳ್ಕುವ ಪುರುಳಿಗಳುಮೆಸೆಯೆ, ಕಿಕ್ಕಿಱಿಗಿಱಿದೆಸೆವಲರ್ದುಱುಗಲಿಂ ತಳಿರ ಕೆಂಪುಮಲರ ಬೆಳ್ಪುಮಲ್ಲದೆ ಬಿಸಿಲುಂ ಬೆಳ್ದಿಂಗಳುಂ ಮುಚ್ಚದ ಬನದೊಳಗೆ ಬರ್ಪಾಗಳ್ –

ತೀಡಿತ್ತೊಂದೊಂದಱಿಂ ತಣ್ಗೆಱೆದುಱುಗುಲ ತಾರ್ಮುಟ್ಟಿನೊಳ್ ಸಂದುಸಂದೋ
ಲಾಡುತ್ತುಂ
ಕೂಡೆ ನೀರ್ವಕ್ಕಿಗಳುಲಿಪುಗಳಂ ಕರ್ಣದೊಳ್ತಂದು ತಂದೀ
ಡಾಡುತ್ತುಂ
ತೀರದೊಳ್ ತಳ್ತೆಳಲತೆಗಳ ಪೂಗೊಂಚಲಂ ನಿಂದು ನಿಂದ
ಲ್ಲಾಡುತ್ತಂ
ನೀಲನೀರೇರುಹ ಸುರಭಿರಸಂ ಸಾರಸಂ ಮಾತರಿಶ್ಚಂ         ೬೧

ಅಂತು ಕಂದರ್ಪದೇವಂಗಿದಿರ್ವರ್ಪಂತೆ ಬಂದ ಮಂದಾನಿಳಂ ತಳ್ತಪ್ಪೆ ತಣ್ಣನೆ ತಣಿದು ರೂಪಕಂದರ್ಪದೇವಂ ಪೋಗೆವೋಗೆ –

ವನಲಕ್ಷ್ಮೀದೇವಿಯಂ ಪೆತ್ತಮೃತನಿಧಿಯೊ ವಿಂಧ್ಯಾದ್ರಿಚಂದ್ರೋಪಳಂ ಚಂ
ದ್ರನ
ಪೆರ್ಚಿಂದುರ್ಕಿದಂಭೋವಿಸರಮೊ ವಿಪಿನಧ್ವಾಂತಮಾಕ್ಷೇಪದಿಂ ಕಾ
ಪಿನೊಳಿಟ್ಟಿಂದುಪ್ರಭಾಪೂರಮೊ
ಹರಿ ಗರುಡೋದ್ಭೀತಿಯಿಂ ಬಯ್ತ ಪೀಯೂ
ಷನಿಧಾನಶ್ರೀಯೊ
ಪೇೞೆಂಬಿನಮಮಳತರಂ ರಯ್ಯಮಾಯ್ತಬ್ಜಷಂಡಂ    ೬೨

ಅದು ಶಂಖಶ್ರೇಣಿ ಮೇಣಲ್ದದು ಕುಮುದಕುಳಂ ಪೊಕ್ಕ ಭೀತಾದ್ರಿ ಮೇಣ
ಲ್ಲದು
ಬಿಂಬವ್ಯಾಸದಿಂ ತೋರ್ಪಚಳಮೆಱಗುವಂಭೋಧರೋನ್ಮಾಳೆ ಮೇಣ
ಲ್ಲದು
ತೀರೋದ್ಯತ್ತಮಾಳಂ ಪವಳದ ಕಣಿ ಮೇಣಲ್ಲದಬ್ಜಾತಕಿಂಜ
ಲ್ಕದೆ
ಪುಂಜಂ ಬಿಂಜದೊಳ್ ಪರ್ಬುವ ಜಳನಿಧಿ ಮೇಣಲ್ಲದಂಭೋಜಷಂಡಂ        ೬೩

ತಿಂತಿಣಿಯಾಗಿ ತಾವರೆಯುಮುತ್ಪಲಮುಂ ಪೆಣೆದೊಂದನೊಂದು ನಾ
ಳಂ
ತಡವಪ್ಪಿನಂ ತುಱುಗಿ ಪುಟ್ಟಿದುವೀ ಕೊಳದೊಳ್ ಪೊದೞ್ದಿವ
ರ್ಕೆಂತಲರ್ವಂದಮೆಂದು
ಪಗಲರ್ಕನಿರುಳ್ವಿಧುಬಿಂಬಮಿಂಬುಮಾ
ೞ್ಪಂತೆ
ಮುಗುಳ್ಚುಗುಂ ಕುಮುದಕಾನನಮಂ ಕಮಳಪ್ರತಾನಮಂ         ೬೪

ಕೂರ್ಪೊಗೆದದ್ರಿಕೂಟಮದನಳ್ಳಿಱಿಯುತ್ತಿರೆ ಪಲ್ಲೆ ವೋಗಿ ಮೈ
ದೋರ್ಪ
ಕಳಂಕಮೆಂಬ ನೆವದಿಂದೆ ಸುಧಾಕರಬಿಂಬಮೊಕ್ಕು ಕೊಂ
ಡಿರ್ಪರ್ಮಂಮಾಯ್ತಿದು
ಸರೋವರಮಲ್ಲದೊಡಿಂದುರಶ್ಮಿಗ
ಳ್ಗಿರ್ಪಣಮಿಲ್ಲದೇಕೆ
ಜರೆ ತೋರ್ಪುದದೇಕೆ ಚಕೋರಚಕ್ರದೊಳ್   ೬೫

ಸ್ಮಿತನೀಲೋತ್ಪಲಪುಂಜದಿಂ ವಿಮಲತಾಸೌರಭ್ಯದಿಂ ದರ್ಪಣಾ
ಕೃತಿಯಿಂದೊಪ್ಪುವ
ತತ್ಸರೋಜವನದೊಳ್ ಪೋ ಪುಟ್ಟಿದಂ ರೋಹಿಣೀ
ಪತಿಯಂತಲ್ಲದೊಡಾ
ಮದಾಳಿಕಳಭಶ್ಯಾಮಾಂಕಮಾ ಸ್ಚಚ್ಛದೀ
ಧಿತಿಯಾವೃತ್ತದ
ಚಂದ್ರಮಂಗೆ ಪಿರಿದುಂ ಪೇೞೆತ್ತಣಿಂದಾದುದೋ          ೬೬

ಬಾಳಾರ್ಕದ್ಯುತಿ ಪತ್ತೆ ಪಲ್ವಲಪಯಃಪಾನಕ್ಕೆ ಮಗ್ನಾಂಗಜ
ಜ್ವಾಳಾಲಗ್ನ
ಸಟೊಪಮಾನಶಬರೀಕ್ಷಾಮಾಂಗಕೋದ್ದಾಮಧೂ
ಮಾಳಿಂಗಂ
ನೆರಮಾಗೆ ಕುಂದಿದುದಿದರ್ಕಾಯುಷ್ಯಮೆಂಬಂತೆವೋಲ್
ವ್ಯಾಳೇಭಾವಳಿ
ಕೀೞ್ವುದಾ ಕೊಳದೊಳಂಭೋಜಾತಜಾಳಂಗಳಂ        ೬೭

ನಳಿನಾಕರದೊಳ್ ಕಾ
ಡಾನೆಗಳಿರೆ
ನೀರನೂಡುತುಂ ತಡಿವಿಡಿದಂ
ದೇನೆಸೆದುವೊ
ನೆಲನಂ ಪೊ
ತ್ತಾನೆಗಳುಂ
ನೀರನೂಡುವಂತೆ ನೆೞಲ್ಗಳ್    ೬೮

ಕರಿ ಮುೞುಗೆ ತತ್ಕರಾಗ್ರಮ
ನರವಿಂದಮೆಗೆತ್ತು
ಸೆಳೆದು ಸೆಳೆಪಟ್ಟತಿಕಾ
ತರ
ಕರಿ ಕಳಭಮುಮುೞಿದಂ
ಬುರುಹಮುಮಂ
ಮುಟ್ಟಲಣ್ಮದಾ ತಿಳಿಗೊಳದೊಳ್    ೬೯

ಅಮೃತಕರನಾತ್ಮ ಕರನಿಕ
ರಮುಮಂ
ಪೊಱೆಗಟ್ಟಿ ತಂದು ಜಲದೊಳ್ ನೈರ್ಮ
ಲ್ಯಮನೊಂದಿಸಲಿಕ್ಕಿದವೋ

ಲಮರ್ದುವು
ಬಿಸಲತೆಯ ತುಱುಗಲಾ ತಿಳಿಗೊಳದೊಳ್         ೭೦

ಎಲರೆತ್ತಿಕೊಂಡವೊಳ್ ಶೀ
ತಲತೆಯನಿನಿಸಿನಿಸು
ಬಿಸುಪುವೆರೆದುದು ಬಿಸಿಲೊಳ್
ಕಲಸಿದ
ನೀರ್ ಕೊಳರ್ವಕ್ಕಿಗ
ಳುಲಿದುವು
ಪುಯ್ಯಲ್ಚುವಂತಿರಾ ತಿಳಿಗೊಳದೊಳ್      ೭೧

ಪೊರ್ದಿದ ಮರದುಱುಗಲೆ ಮುಸು
ಱಿರ್ದಂತಳ್ಪಿಂದಮಬ್ಜವನಮುಮನರ್ಕಂ

ಪೀರ್ದಪನೆಂದದು
ಮೆಯ್ಗರೆ
ದಿರ್ದಂತೆವೊಲಿರ್ದುಮಿಲ್ಲದಂತೆವೊಲೆಸೆಗುಂ
೭೨

ಬನದ ನೆೞಲ್ ಕರಮೆಸೆದುದು
ವನಲಕ್ಷ್ಮಿಯೆ
ಮಜ್ಜನಕ್ಕೆ ಪೊಕ್ಕಂತಿರೆ ಪೂ
ವಿನ
ತುಱುಗಲುದಿರ್ದುವಾಕೆಯ
ಕೊನೆಮುಡಿಯಿಂದುದಿರ್ದ
ಪೂಗಳೆನೆ ಪೂಗೊಳದೊಳ್ ೭೩

ಕಿಂಜಲ್ಕದ ಕದಡುತ್ಪಲ
ಪುಂಜದ
ಕೋೞ್ಕಂಪಿನೊಳ್ಗೆಸರ್ ನವವಿಕಸ
ತ್ಕಂಜಮಧುವಿಂದಮೊಗೆದೊಗೆ

ದೇಂ
ಜಲರುಹವನಮದಾಗಿಯುಂ ಸೊಗಯಿಸಿತೋ   ೭೪

ಮತ್ತಮದು ಮೆಲ್ಲನಲೆವ ಮೊಲ್ಲೆಯಲರಂ ತೂಱಿ ತುಱುಗಿದ ತರಳತರಂಗಧವಳ ಚಾಮರಂಗಳಿರ್ಕೆಲದೊಳೆಸೆಯೆ ತಣ್ಬುಂಡ ಪುಂಡರೀಕದ ನೆೞಲೊಳ್ ವಿರಾಜಿಸುವ ರಾಜಹಂಸಂಗಳೊಳಂ, ಪಚ್ಚೆಯ ಬಟ್ಟಲೊಳ್ ಶಂಖದ ಮುರುಡನಿೞಿಪಿದಂತೆ ತಾವರೆಯೆಲೆ ಯೊಳೆವೆಮಿಡುಕದೆ ಕುಳ್ಳಿರ್ಪ ತರುಣಮರಾಳಂಗಳೊಳಂ, ಜಲದೇವತೆಯರೊಱಗಿ ಕೊಂಡ ಮಧುರಸದ ಪಸುರ್ಗಾಜಿನ ಬಟ್ಟಲ್ಗಳಂತೆರ ಪೊಸತಲರ್ದ ಬಿಸರುಹದೆಸಳೆಡೆಯಿನೊಸರ್ತು ಪನಿತು ಮಗಮಗಿಸುವ ಮಧುರಸದಿಂ ತೆಕ್ಕನೆ ತೀವಿದ ಪಚ್ಚೆಲೆಗಳೊಳಂ, ಕಾಡಾನೆಗಳ್ ಕಿೞ್ತೀಡಾಡೆ ತೀರದೇಶದೊಳ್ ಬಿರ್ದುಬಿಡೆ ನೊಂದು ಬಿಡುವ ಬಂಡಿನಿಂ ತೊಯ್ದು ತಾಯ್ದಾವರೆಗಳಂ ನಡುನೀರೊಳ್ ತೇಂಕಾಡುವ ಕೇದಗೆಯೆಸಳ್ದೋಣಿಗಳಂ ದೊಣೆಯಿಟ್ಟೇಱುವಂತೆ ತೆರಳ್ದು ಕವಿದೆಱಗಿ ತೆರೆವೊಯ್ಲಿನಿಂ ತಡಿಗೆ ಸಾರ್ವ ತೊಂಡುದುಂಬಿಗಳೊಳಂ ಒರ್ಮೊದಲೆ ನೆಗೆವ ನೀರ್ವಕ್ಕಿಗಳ ಗಱಿಗೊನೆಯಿನುಗುವ ತುಂತುರ್ವನಿಗಳಿಂ ತಂದಲ್ಮಸಗೆ ಮುಸುಱಿ ಮುಗುಳ್ದುಱುಗಲಂತೆ ಕಿಕ್ಕಿಱಿಗಿಱಿದು ಕಮಳವನದ ಕಂಪಿಂಗೆ ಕವಿದ ಕಾಡುದುಂಬಿಗಳೊಳಂ, ಮೆಲ್ಲೆಲರಲೆಪದಿಂ ಸುರಿವ ಸರಸಿಜದ ರಜಂಬೊರೆದು ಪೊಂಬಣ್ಣಮಾದ ತೋರದೆಱೆಗಳೊಳಂ, ಜಾಂಬೂನದಸರೋವರದಂತೆ ಮನೋಹರಮೆನಿಸಿದುದಂತುಮಲ್ಲದೆಯುಂ –

ಪ್ರಿಯತರಮಾಯ್ತು ಕಣ್ಗೆ ವನಲಕ್ಷ್ಮಿಯ ಕನ್ನಡಿ ಕಂಜದೇೞ್ಗೆ ಗಾ
ಳಿಯ
ಗುಣದಾಗರಂ ನೆರೆದ ತುಂಬಿಯ ಜೇವಣಸಾಲೆ ಜಕ್ಕವ
ಕ್ಕಿಯ
ಸುರತಾಲಯಂ ಸಿರಿಯ ಸೆಜ್ಜೆ ದಿನೇಶನೆ ಪೆಂಡವಾಸವಂ
ಚೆಯ
ಬೆಳಗೆಯ್ ಸುಧಾಕರನ ಸೋದರವಾವಿಳಸತ್ಸರೋವರಂ ೭೫

ಜಳಕೇಳೀದ್ರವದಿಂದೆ ನಾಂದ ತೆಱದಿಂದೋಲಾಡಿ ಪೂಗೊಯ್ದು ಪೂ
ಗೊಳದಿಂದಂ
ಪೊಱಮಟ್ಟು ನಿಂದು ಶಬರೀಸಂದೋಹದಾಮೋದಿಯ
ಪ್ಪಳಕಾನೀಕದಿನೊಕ್ಕ
ನೀರ್ವನಿಗಳಿಂ ತೀರಂ ಸದುಂಬಾಗೆ ಪೊ
ಯ್ದಳಿಜಾಳಂಗಳಿನಿಂದ್ರನೀಲಮಣಿಯಂ
ಕಟ್ಟಿರ್ದವೋಲೊಪ್ಪುಗುಂ         ೭೬

ಸಂತಸದ ಬಳವಿಯಂ ಕಾ
ಣ್ಬಂತೆ
ಮನೋರಥದ ಸೀಮೆಗಾಣ್ಬಂತೆ ಮಹೀ
ಕಾಂತಂ
ಚೆಲ್ವಿನ ಕಡೆಗಾ
ಣ್ಪಂತಾ
ಕುಮುದಾಕ್ಷಿಯೆಂಬ ಕೊಳನಂ ಕಂಡಂ         ೭೭

ಆಗಳ್ ಮಕರಂದನಿಂತೆಂದಂ –

ಅೞ್ದಿಕೊಳುತ್ತುಮಿರ್ಪ ಕರಿಕುಂಭಮುಮಂಬುಜದಲ್ಲಿ ಮಾಲೆಗೊಂ
ಡೞ್ದಳಿಯುಂ
ತೆರಳ್ಚಿ ತೆರೆದೋಱುವ ಸೀಕರಮುಂ ವಿಳಾಸಮಂ
ತಾಳ್ದಿದುವೊಪ್ಪೆ
ತೋರಮೊಲೆಗಳ್ ಜಲದೇವಿ ಕಟಾಕ್ಷ ವೀಕ್ಷಣಂ
ನೀಳ್ದಿರೆ
ನೋಡುತುಂ ನಿನಗೆ ಮುತ್ತಿನ ಸೇಸೆಯನಿಕ್ಕುವಂದದಿಂ  ೭೮

ಅದೆ ಕಳಹಂಸೆ ಸಾರ್ದಪುದು ಬಾಳಮೃಣಾಳಮಿದೆಂದು ತುಂಬಿ ಮಾ
ಣದೆ
ಮುಸುಱುತ್ತುಮಿರ್ದಪುದು ಪದ್ಮಮಿದೆಂದು ಪುಳಿಂದಿ ನಿಂದು ನೋ
ಡಿದಪಳಿದಾವೆಯೆಂದು
ಕೊಳದೊಳ್ ನಲಿದರ್ದಿಕೊಳುತ್ತುಮಿರ್ಪ ಪೋ
ತದ
ರದನಾಗ್ರಮಂ ಪೊಳೆವ ಪುಷ್ಕರಮಂ ನಸದೋರ್ಪ ಕುಂಭಮಂ      ೭೯

ನೆಯ್ದಿಲೆಂದಚ್ಚಿಯೊಳೆ ಪಾಯ್ದ ತುಂಬಿಯೆಗೆತ್ತು
ಕಾಯ್ದು
ನೀರ್ಗುಡಿವ ವನಚರಿ ಸುಪಕ್ಷ್ಮದಿಂ
ಪಾಯ್ದಪ್ಪಳಲೆವ
ಚಿಕುರಮಂ         ೮೦

ಎನೆ ಮನಮಿತ್ತು ಕೇಳುತ್ತಂ –

ಎಯ್ದೆವೋಪಿನಮಳವೆಯ್ದದೆಂದಲರ್ಗಣ್ಣಿಂ
ದೆಯ್ದೆ
ಪೀರ್ವಂತೆ ಬಗೆವರಸನ ನೋಟ
ಕ್ಕೆಯ್ದದಾಯ್ತಂದು
ತಿಳಿಗೊಳಂ       ೮೧

ರಾಗದೆ ರಭಸೋದ್ಧತಗಡು
ರಾಗದೆ
ನೃಪಸಚಿವಪುತ್ರ ರೀಕ್ಷಿಸುತದಱಿಂ
ಪೂಗೊಳಕಂ
ಬರಮಣಿಯೆನೆ
ಪೂಗೊಳನಂ
ಪೊಗೞ್ವನಾವನೆನುತಂ ಪೊಕ್ಕರ್        ೮೨

ಪೊಕ್ಕಲರ್ವುಡಿಯಂ ನೂಂಕಿ ಕೆ
ಲಕ್ಕೆ
ಪರಿಕ್ಷಾತಾಂಘ್ರಿಮುಖಕರಕಮಳರ್
ಮುಕ್ಕುಳಿಸಿಯುಗುೞ್ದು
ನೀರಂ
ದಿಕ್ಕುಂಭಿಗಳೂಡುವಂತೆ
ಮುದದಿಂ ಪೀರ್ದರ್ ೮೩

ಅಂತು ಪೀರ್ದು ಪಿಪಾಸಾನಲಂ ನಂದಿದಿಂಬೞಿಯಮದಱ ಮನೋಹರತೆಯನಾನಂದದಿಂ ನಿಂದು ನೋೞ್ಪ ಮಾನವಮದನಂಗೆ ಮದನತಾಪತೃಷ್ಣೆ ನೂರ್ಮಡಿಸೆ ಬೞಲ್ಕೆ ನಾಲ್ಮಡಿಸೆ ಬೇಗಮಲ್ಲಿಂ ಪೊಱಮಟ್ಟು ಮಲ್ಲಿಕಾವನದೊಳಗಣಿಂ ನಡೆದಾ ಕೊಳಕ್ಕನತಿ ದೂರದೇಶದೊಳ್ ಪುದಿದ ತರುಷಂಡಕ್ಕೆ ಮಂಡನಮೆನಿಸಿ ಮಾವನಪ್ಪೆ ನಿಪ್ಪೊಸತಪ್ಪಮಲ್ಲಿಕಾಮಂಡಪದೊಳ್ ಮಕರಂದನುಡಿದು ತಂದು ಪಾಸಿದ ಪೊಸದಳಿರ ಪಸೆಯೊಳ್ ಬಿಸುಸುಯ್ಯುತ್ತುಂ ವಿಶ್ವವಿದ್ಯಾವಿನೋದಂ ವಿಶ್ರಮಿಸಿರ್ಪುದುಮನ್ನೆಗಮಾತಂ ಸುಪಕ್ವಸರಸಾಮೋದಿಮೃದು ಮಧುರಫಲಂಗಳನಾಯ್ದು ತಂದು ಅರಸಂಗನುವಿಸಿತಾನುಂ ಮೆಲ್ದು ಮೆಲ್ದಳಿರೊಳರವಿಂದಮಂ ಮುಂಡಾಡಿಸುವಂತೆ ಪತಿಯ ಪದತಳಂಗಳನಾತ್ಮಕರತಳಂಗಳಿಂದೊತ್ತುತುಮಿರ್ಪನ್ನೆಗಂ –

ತೊಲಗೆ ಬಿಸಿಲ್ ನೆೞಲ್ಗೆ ತೆಲಯಂ ಮರಗೋಡೆಲೆ ಕೂಡೆ ಕುತ್ತಿ
ೞ್ತಲೆ
ಕವಿದಂದದಿಂ ಕವಿಯೆ ಕೂಡೆ ನೆೞಲ್ಗಳಿನಾ ಕರಂಗಳಿಂ
ದೆಲರಡಿಯೆತ್ತೆ
ಸುತ್ತುಡುಗಿವಂದ ಸರೋಜದ ಕೋಶದೇಶದಿಂ
ದಲಿ
ಪೊಱಪಾಯೆ ಕಣ್ಗೊಳಿಸಿ ಬಂದುದು ಬೈಗಿನ ಪೊೞ್ತು ಬೇಗದಿಂ         ೮೪

ಅಡರೆ ನೆೞಲಿೞಿವ ಬಿಸಿಲಿಂ
ಬೆಡಂಗುವಡೆದತ್ತು
ಗಡಣದಿಂ ತಿಮಿರದ ಮುಂ
ಗುಡಿ
ಕವಿತರೆ ಭಯದಿಂ ಬೆಂ
ಗುಡುವಂತಿರೆ
ತಿಮಿರಹರಣನಿೞಿವವಸರದೊಳ್……   ೮೫

ಮತ್ತಮಿನಿಸಱಿಂ –

ಮುನಿಹಸ್ತಾಂಬುಜದಿಂದಮರ್ಘ್ಯಜಳಜಾಳಂ ಬೀೞೆನೀಳಾಬ್ಜಕಾ
ನನದೊಳ್
ಪಾಯ್ದಳಿ ಬೀೞೆ ಜಾರರೆರ್ದೆಯೊಳ್ ರತ್ಯುತ್ಸವಂ ಬೀೞೆ
ದ್ಮಿನಿ
ಬೆಂಬೀೞೆ ಬೞಲ್ದು ಬೀೞ್ವ ಹತಕೋಕಾನೀಕದುರ್ವೆೞ್ದಕ
ಣ್ಬನಿಗಳ್
ಭೋರೆನೆ ಬೀೞೆ ಬಿೞ್ದನಪರಾಂಭೋರಾಶಿಯೊಳ್ಭಾಸ್ಕರಂ       ೮೬

ಆಗಳ್ –

ದೂಸರಮಾದುದು ಗಗನಂ
ಮಾಸಿದುದಮರೇಂದ್ರದಿಙ್ಮುಖಂ
ಮೃತಮಾದಾ
ವಾಸರದ
ದೆಸೆಗೆ ಚುರ್ಚಿದ
ಕೇಸುರಿಯೆನೆ
ನೆಗೆದುದಪರಸಂಧ್ಯಾರಾಗಂ   ೮೭

ಅಲ್ಲಿಂ ಬೞಿಯಂ –

ಖರಕರನ ಸಹಸ್ರ ಕರೋ
ತ್ಕರದಾಂಕೆ
ಕೞಲ್ದು ಕಿಡೆ ನಿರಾಲಂಬನಮಂ
ಬರತಳಮೆ
ನೆಲಕೆ ಬಿೞ್ದಂ
ತಿರೆ
ಪಸರಿಸಿ ಮರ್ಬುಮುರ್ಬಿ ಪರ್ಬಿತ್ತಾಗಳ್  ೮೮

ಪ್ರಾಚೀಮುಖಮೃಗಮದಮು
ರ್ವೀಚಳದಳಕಂ
ನಭಸ್ಸ್ಥಳೀನಿಳಯವಿಭೂ
ಷೋಚಿತಮರೀಚಿ
ಬರೆವರೆ
ಸೂಚೀನಿರ್ಭೇದ್ಯಮಾದುದಂದಿನ
ತಿಮಿರಂ    ೮೯

ಮತ್ತಮಿನಿಸಾನುಂ ಬೇಗದಿಂ –

ಆರಯ್ಯದೆ ಖರಕರನೊಳ್
ವಾರುಣಿ
ವಸುವಿಭವಹೀನನೊಳ್ ನೆರೆಯೆ ದರ
ಸ್ಮೇರಾನನೆಯಾದೈಂದ್ರೀ

ನಾರಿಯ
ನಗೆಯಂತೆ ನೆಗೆದುವಿಂದುಕರಂಗಳ್         ೯೦