ಶ್ರಿರಮಣೀನಯನೋತ್ಸವ
ನಾರಾಯಣನಾಜಿವಿಜಯವಾರಣವಿಳಸ

ದ್ವಾರಿ
ನಡೆದಂ ಕಳಾರ್ಣವ
ತೀರಂ
ಪುರುಷಾರ್ಥಪುಳಿನತಳಕಳಹಂಸಂ   ೧

ಅಂತು ನಡೆದೊಳಗುಂ ಪೊಕ್ಕು ತನ್ಮಂದಿರಮಧ್ಯಸ್ಥಿತಕಾಂಚನಮಂಚದೊಳ್ ಚಂದ್ರಿಕಾಚ್ಛಧವಳದುಕೂಲ ಪ್ರಚ್ಛಾದಾಚ್ಛಾದಿತಹಂಸತೂಳತಲ್ಪದೊಳೊಯ್ಯನೆ ಮೆಯ್ಯನೀಡಾಡಿ ಕರ್ಪೂರಸಾರ ಪರಿಕಲಿತಪರಿಮಳಪೋಷಿತ ಕ್ರಮುಕಕಮನೀಯ ಕಲಶಪೂರಿತಫುಲ್ಲಕಪೋಲಫಲಕಂ ದಂತಾಗ್ರದಳಿತಮಕರಂದದೀಯಮಾನ ನಾಗವಲ್ಲೀಧವಳದಳವೀಟಿಕಾವಿಳಸಿತವದನನಿನಿ ಸುಬೇಗಮಿರ್ದು ಮೆಲ್ಲನಿಂತೆಂದಂ –

ಬಗೆವುಗಲಿಂತು ತೋಱುಗುಮೆ ವಾಸವನೋಲಗದೊಳ್ಪನಿಂತು ತೋ
ಱುಗುಮೆ
ಸುರಾಂಗನಾಸರಸಲಾಸ್ಯವಿಳಾಸಮನಾತನಿಂತು ತೋ
ಱುಗುಮೆ
ಬೞಿಕ್ಕವಳ್ ಬಯಸಿ ನೀಂ ಬೆಸಗೊಂಡವೊಲಾಗಳಂತಿರಾ
ಮೃಗಧರವಕ್ತ್ರೆಯಂ
ಮೊಗಸಿ ಮನ್ಮೃದುಮಾನಸರಾಜಹಂಸಿಯಂ          ೨

ತೆಗೆದೆನ್ನಂ ಕನಸಿಂದೆ ಸುಂದರಿಯ ರೂಪಂ ತೋಱಿ ಬೆಳ್ಮಾಡಿ
ತ್ತೆ
ಗಡೇಂ ತೋಱಿದನಿಂದ್ರಜಾಲದೊಳಿದಿನ್ನೇನಾಗಲೆಂದಿರ್ದುದೋ
ಬಗೆದೇಂ
ಪೋಗದೊ ಪೇೞಗಲ್ಚಿದಪನೆನ್ನಂ ಧಾತ್ರನವ್ಯಾಜದಿಂ
ಮೃಗಮಂ
ಸೋಯೆ ಬೞಲ್ಚುವಂತೆ ಮೃಗತೃಷ್ಣಾದರ್ಶನವ್ಯಾಜದಿಂ        ೩

ಅಲ್ಲದೋಡಿಜಗತ್ಪ್ರಯದೊಳಗ್ಗಳಮೊಪ್ಪುವ ರಾಜಪುತ್ರಿಯಂ
ಸಲ್ಲಲಿತಾಂಗಿಯಂ
ಪದೆದು ಕಂಡೊಡೆ ತೋಱಿಮೆನಲ್ಕೆ ತೋಱಿಯುಂ
ನಿಲ್ಲದೆ
ತಾನಿದಾರ ಮಗಳೀ ವಧುವೆಂಬಿನಿತರ್ಕೆ ಮಿಕ್ಕ ವಿ
ದ್ಯುಲ್ಲತೆವೋಲವಳ್
ಬೆರಸು ಜೋಗಿಣಿಯಾಗಳೆ ಮಾಯಮಪ್ಪಳೇ        ೪

ಎಂದು ಮತ್ತಮಿನಿಸಾನುಂ ಭಾವಿಸಿ –

ಸತಿ ಮುನ್ನ ಕಂಡ ತೆಱನಲ್ಲದೆ ಬಂಬಲ ಮಾಡಿ ಕೊಂಡು ಮು
ನ್ನೇಸಱ
ಚಂದ್ರಲೇಖೆಯವೊಲಿರ್ದುದನನ್ಯನೊಳಾತ್ಮ ಚಿತ್ತಮಂ
ಸೂಸಿದಳೆಂದೆ
ಭಾವಿಸಿ ಮದೀಯ ಮನಂ ಬಿಸಿಲಿಂದೆ ಬೆಂದರಂ
ಕೇಸುರಿಯಿಂದೆ
ಕಾಸಿದವೊಲಾದಪುದೀಗಳದೆಂತು ಸೈರಿಪೆಂ    ೫

ಪಡಿಯಿಟ್ಟು ತೋಱುವವೊಲಾ
ಗಡೆ
ತೋಱಿದರಲ್ತೆ ಮಾಯ್ದ ಮಾಯಾವಿಗಳೇಂ
ಪಡಿಯಾದರೆ
ಕಾಮನ ಕೈ
ಪಿಡಿಯಂತೆಸೆವವಳ
ನೆೞಲೊಳಂ ಸುರವಧುವರ್      ೬

ಎನೆ ಸಚಿವಸುತನಿಂತೆಂದಂ –

ಸ್ತ್ರೀರತ್ನಂ ಭುವನತ್ರಯ
ಸಾರಮದಲ್ಲದೊಡೆ
ನಿನ್ನನೊಲಿಸುವುದಿೞಿದೇ
ಶ್ರೀರಮಣಿಯಲ್ಲದಂಗನೆ

ನಾರಾಯಣನಂ
ಮರುಳ್ಚಲೇನಾರ್ತಪಳೇ    ೭

ತಾಂ ಗಡ ಮೆಚ್ಚನಾಂ ಪಡೆದ ಪೆಂಡಿರನೆಂದಭಿಮಾನಮೇಱೆ ಚೆ
ಲ್ವಿಂ
ಗೆಡೆಗೊಂಡು ನಿನ್ನ ನವಯೌವನರೂಪವಿಳಾಸದರ್ಪಮಂ
ಭಂಗಮನೆಯ್ದಿಪೊಂದು
ಬಗೆಯೊಳ್ ಬಳೆದಾಗ್ರಹದಿಂದ ಪೆತ್ತನಾ
ಅಂಗನೆಯಂ
ಸರೋಜಭವನಲ್ಲದೊಡಾ ಕೃತಿಯಿಂತುಟಕ್ಕುಮೇ  ೮

ಪುಸಿಯೆಂದು ಬಗೆಯೊಳಂ ಭಾ
ವಿಸದಿರು
ಪುಸಿಯಾದೊಡದನೆ ವಿದ್ಯಾಧರಿ ತೋ
ಱಿಸುಗುಮೆ
ಪುಸಿಯಣಮಲ್ಲಿದು
ಪುಸಿಗೇಂ
ಸಂವಾದಮುಂಟೆ ಸತ್ಯಪತಾಕಾ    ೯

ಕಾರಣಮೇನಾನುಮನಿದು
ಕಾರಣಮೆಯ್ದಿಸದೆ
ಮಾಣದಲ್ಲದೊಡೆ ಚಮ
ತ್ಕಾರಿಗಳೊರ್ಮೆಯೆ
ಮಾಯಾ
ಕಾರಮನಾಕರಿಪುದರ್ಕೆ
ಕಾರಣಮೇನೋ     ೧೦

ಎನೆ ಮತ್ತಮರಸನಿಂತೆಂದಂ –

ಇಂಪೇೞದೆ ನಿಲೆ ಹೃದಯದೊ
ಳಿಂಪೇೞದೆ
ಪೋಕುಮೆಂದೆ ಪೇೞ್ವೆಂ ಕೇಳಾಂ
ಪೆಂ
ಪಗಲೆ ಧೃತಿಯನೆರ್ದೆಯಿಂ
ಪೆಂಪಗಲೆ
ಸುಧಾಂಶು ಮೂಡಿದಿರುಳಳವೞಿವೇಂ      ೧೧

ನೆನೆದವಳಂ ಸತ್ತಪೆನಾ
ನೆನೆ
ದಯೆಯಿಂ ತಂದು ಕುಡುವನಾವನೊ ಮುನಿದೆ
ನ್ನನೆ
ಗೋರಿಗೊಳಿಸಿದತನುವ
ನನೆಗೋಲ
ಮೊಗಕ್ಕೆ ತಪ್ಪಿ ಪೋದೊಡೆ ಸಾಲ್ಗುಂ        ೧೨

ಗುರುನಿತಂಬೆಯಿ ಭೂ
ಭಾಗದೊಳಿರದೆತ್ತಲಿರ್ದಪಳ್
ಬಗೆಯೆ ನಿರು
ದ್ಯೋಗಿಗೆ
ದೈವಸಹಾಯಮು
ಮೇಗೆಯ್ಗುಮೊ
ಪೋಪಮಱಸಿ ಮಧ್ವಲ್ಲಭೆಯಂ ೧೩

ಎನಗಿಲ್ಲಿರ್ದೊಡೆ ಪೊೞ್ತು ಪೋಗದಸಮಾಸ್ತ್ರವ್ಯಾಧಿಯುಂ ಪಿಂಗದಾ
ವನಿತಾವಾರ್ತೆಯುವಾಗದಾವ
ದೆಸೆ ರಮ್ಯೋದ್ದೇಶಮುಂ ರಮ್ಯನಂ
ದನಮುಂ
ರಮ್ಯನದೀನದಪ್ರಕರಮುಂ ರಮ್ಯಾದ್ರಿಯುಂ ರಮ್ಯದೇ
ವನಿವಾಸಂಗಳುಮುಳ್ಳುದಾದೆಸೆಗೆ
ಮುಂ ಪೋಪಂ ವಯಸ್ಯೋತ್ತಮಾ    ೧೪

ಸುಖಮೀವುದೆ ರಾಜ್ಯಂ ಪ್ರಿಯ
ಸಖ
ರಾಜ್ಯಮೆ ದುಃಖಮಪ್ಪುದಪ್ಪೊಡೆ ರಾಜ್ಯಂ
ಸುಖಮಲ್ತು
ರಾಜ್ಯದಿಂದಂ
ಸುಖಮಿಲ್ಲದೊಡೇಕೆ
ರಾಜ್ಯಮಾರಾಜ್ಯದೊಳೇಂ         ೧೫

ಎಂದು ಮಕರಂದನನೊಡಂಬಡಿಸಿ ಬಡಗಮೊಗದೆ ಪಯಣಂಬೋಗಲ್ಮೊಗಸಿ ರ್ಪುದುಮನ್ನೆಗಂ ವಿಗತವಸುವಾಗಿ ಪಶ್ಚಿಮಗಿರಿಶಿಖರಕಾನನದೊಳಿೞಿದು ಭಾಸ್ಕರಂ ತಸ್ಕರನಂತಿ ರೆಸೆವರುಣಮಣಿವಿರಾಜಿತಮಪ್ಪ ವರುಣನಿಳಯಮಂ ಪುಗುವುದುವಮರ್ಧ ಮುಕುಳಿತಕಮಳಕಾನ ನೋತ್ಪತಿತದ್ವಿರೇಫಪಟಳ ಪಕ್ಷಾನಿಲದಳಿತಮಾದಂತಿರುತ್ಪಳಕುಳಮುಳ್ಳಲರೆ, ತಿಮಿರತಮಾಳಪಲ್ಲ ವನವಕರ್ಣಪೂರಕಮನೀಯದಿಕ್ಕಾಮಿನೀ ಮುಖಕುಂಕುಮದಂತೆ ಕೆಂಕಮಾಗಿ ಪಡುವಣಸಂಜೆ ರಂಜಿಸೆ, ಚತುಃಪ್ರಹರಚರಮ ಕಹಳಾನಾದಪ್ರಹತಪಟಹಪಟುರವಾನುಗಮ್ಯ ಮಾನಸಾಂಧ್ಯಶಂಖಧ್ವನಿಯೊಡನೆ ಶಯ್ಯಾತಳದಿನಿಳಾತಳತಿಳಕನೆೞ್ದು ನಿರ್ದಳಿತಸಂವಿದಿತಸಂತ ತಮಸೃಣದ ಶಾನಿಪೀತಗಂಧ ತೈಲಪರಿಣತ ಪರಿಮಳಜ್ವಾಳೋದ್ಗಾರಿ ಪೊಱಮಟ್ಟು ಪುಣ್ಯ ಪಾಠಪ್ರಕರಪಠ್ಯಮಾನನಾನಾನವದ್ಯಪದ್ಯಗದ್ಯಪದಾರ್ಥಾಕೀರ್ಣಕರ್ಣಾಂತಃಕರಣಂ ತತ್ಸಮಯ ಸಮುಪಗತಪ್ರಗಲ್ಭತರುಣಪ್ರಾಯಪರಿಜನಪರಿವೃತಂ ತಮಿಸ್ರಾತ್ರಸ್ತಶರಣಾಗತ ಸಹಸ್ರ ಕಿರಣಸಂಕುಚಿತ ಕಿರಣಾಯಮಾನಕರದೀಪಿಕಾಸಹಸ್ರಪರಿವೇಷ್ಟಿತನಭಿನವಾಂಕುರಿತಾ ಕರಾಳ ತರಣಿತೇಜಃಕಲ್ಪಕರತಳಚಾಲಿತಚ್ಛುರಿಕಾಚ್ಛುರಿತ ಮರೀಚಿಕವಚಿತಕಮನೀಯ ಕಾಯನತಿತ್ವರಿ ತಗತಿಯಿಂ ಬಂದತಿ ಬಹಳ ಕಾಳಾಗರು ಧೂಪಧೂಮಪಟಲನಿಪೀತಪೀತ ಪ್ರಭಾಪ್ರಸರಪ್ರದೀಪ್ತದೀಪಮಂಜರೀಮನೋಹರಮುಂ ದರದಲಿತಮಾಲತೀಮಲ ಯಜದ್ರವದತ್ತ ಪರಿಮಳಪಾನಮತ್ತ ಮಧುಕರನಿಕರ ಝಂಕಾರಮುಖರಿತಮುಮಪ್ಪ ಶೀತಲನಾಥಜಿನಾಳಯಮಂ ತ್ರಿಚತುರಜನಸಮೇತಂ ಪೊಕ್ಕು ಪರಿಶುದ್ಧ ಪ್ರಬುದ್ಧ ಬಾಹ್ಯಾಂತರಂಗನಾಗಿ ಭಾಳಭೂಷಿತಕರಕಮಳಮುಕುಳಿತಂ ನವೀನಕರತಳ ನಖತಾ ರಕಿತಜಿನಪತಿಪಾದಪಲ್ಲವರಾಗಂ ರಮಣೀಯಸ್ತುತ್ಯ ನಿತ್ಯಶುಭಸಂಧ್ಯಾವಂದನಂಗೆಯ್ದು ಬಂದಾಸ್ಥಾನಮಂಡಪಮಧ್ಯಸ್ಥಿತಸಿಂಹಾಸನಾರೂಢಂ ಸಕಲಸುಕವಿ ಸಚಿವ ಸಾಮಂತವಿಳಾ ಸಿನೀಜನವಳಯಿತನಾಗಿಕಿಱಿದುಬೇಗಮಿರ್ದೋಲಗಮಂ ವಿಸರ್ಜಿಸಿ ಮಕರಂದದ್ವಿತೀಯಂ ಕರುಮಾಡದ ನೆಲೆಯನೇಱಿ ಕುಸುಮದೆಸಳಿಂ ಪಾಸಿದಪಾಸಿನೊಳ್ ಪಟ್ಟಿರ್ದು ಭೂತಳತಳ್ಪದೊಳೊಱಗಿಯೂರುಗಳನೊತ್ತುತ್ತುಂ ತೂಂಕಡಿಸುತ್ತುಮಿರ್ದು ಸಚಿವಸುತ ನನನುವಿಸಿ ಸವಿಸ್ತರಂ ಸ್ವಪ್ನವೃತ್ತಾಂತಮನುಕ್ತ ಪುನರುಕ್ತಮನನುರಕ್ತಿಯಿಂ ನಟ್ಟಿರುಳಿೞಿವಿನಂ ಪೇೞ್ದು ಪೇೞ್ದು ಸುಖದಿಂ ಮೂರ್ಛೆವೋದಂತೆ ಕಣ್ಮುಚ್ಚಿ ಮನಂ ಮಱೆಯ ದುದಱಿನಿನಿಸಾನುಂಬೇಗದಿಂ ಗಮ್ಮನೆೞ್ಚತ್ತು ನಿಜಸಖನುಮನೆೞ್ಚಱಿಸಿ ಕರುಮಾಡ ದಿನಾರುಮಱಿಯದಂತಿರಿೞಿದು ಮನುಜ ಮನೋಭವಂ ಮನೋಹರಿಯೆಂಬ ಪೆಸರಾ –

ಬೆಳಗಪ್ಪ ಜಾವದೊಳ್ ಪೂ
ಗೊಳದಿಂ
ಪೊಸಪೂವನಱಸಿ ಪೊಱಮಡುವಳಿವೋಲ್
ಚಳಮತಿ
ಮಕರಂದಸಮು
ನ್ಮಿಳಿತಂ
ಪೊಱಮಟ್ಟನರಸನಾ ಪುರದಿಂದಂ  ೧೬

ಅಂತು ಪೊಱಮಟ್ಟು ಪುರದಿಂ
ಸಂತತಮಾ
ಕಾಂತೆಯಲ್ಲಿಗೆಡೆಯಾಡುವ ಚಿ
ತ್ತಂ
ತುರಿಪದಿನೊಡಗೊಂಡು
ಯ್ವಂತಿರೆ
ವಧುವಿರ್ಪ ದೆಸೆಗೆ ಪಯಣಂಬೋದಂ       ೧೭

ಬಳಿಯಂಬು ಪೂವಿನಂಬೆನೆ
ತೊಳಗುವ
ಪದವಿಲ್ಲೆ ನನೆಯ ಬಿಲ್ಲೆನೆ ಬೆನ್ನೊಳ್
ತಳೆದು
ನಡೆತರ್ಪ ತನ್ನಯ
ಕೆಳೆಯಂ
ಮಧುವೆನೆ ಮನೋಜನಂತಿರೆ ನಡೆದಂ       ೧೮

ಆಸಮಯದೊಳ್ ಪ್ರಮದೋದ್ಯಾನದೊಳ್

ಅನಿಲಾಂದೋಳಿತಪಾದಪಾಗ್ರವಿಗಳತ್ಪುಷ್ಪೋತ್ಕರಂ ಸೇಸೆಯಾ
ಗೆ
ನವೋದ್ಭಿನ್ನ ಸರೋಜಮಂದಮಧುಗಂಧಭ್ರಾಂತಭೃಂಗಾಂಗನಾ
ನಿನದಂ
ಮಂಗಳಗೀತಮಾಗೆ ಪಿಕಕೋಕಾನೀಕನಾನಾವಿಧ
ಧ್ವನಿಗಳ್
ವಾದ್ಯನಿನಾದಮಾಗೆ ನಡೆದಂ ಸಂಗೀತಗಂಗಾಧರಂ  ೧೯

ಅಂತು ನಿರ್ಗಮಸಮಯನಿಸರ್ಗ ಶುಭಮಂಗಳಾಚಾರಂಗಳುಮನಭಿನವೋದಯ ಪ್ರಭಾಪಟಳಜಾಳಪಲ್ಲವಭೂಷಣವಿಭೂಷಿತಪೂರ್ಣಸುವರ್ಣಕುಂಭಮು ಮನಿದಿರ್ಗೊಳುತ್ತುಂ ಶುಭಶಕುನಂಗಳುಮಂ ಕೈಕೊಳುತ್ತುಂ ಸಮಾವೇಲ್ಲಿತಾನೂನ ಧಾನ್ಯಧನಕನಕಸಮೃದ್ಧಿವಲ್ಲಿಗಳಪ್ಪ ಪಲ್ಲಿಗಳುಮನನವರತವಿವಿಧಜನಾಗ ಮಂಗಳಪ್ಪನೈಗಮಂಗಳುಮನಪಹಸಿತ ಕುಬೇರನಗರಿಗಳುಮಪ್ಪ ಶೋಭಾನಗರಿಗಳುಮಂ ನಿಸ್ಸೀಮ ಸಕಳಭೋಗಸಾಮ್ಯಸಮುದ್ದಾಮಂಗಳಪ್ಪ ಗ್ರಾಮಂಗಳುಮಂ ಸಮಸ್ತ ಸಮಯ ಸಂಪತ್ಸನಾಥಂಗಳಪ್ಪ ಪತ್ತನಂಗಳುಮಂ ಪ್ರವಿಶತ್ಪ್ರಜಾಪೂರ ನಿಬಿಡಿತ ಗೋಪುರಂಗಳುಮಪ್ಪ ಪುರಂಗಳುಮಂ ಭೂಸುರಪುವರ್ಯಂಗಳಪ್ಪ ಸರ್ವನಮಸ್ಯಂಗಳುಮಂ ವಿಶದವೇಶವೇಶ್ಯವಾಟಂಗಳಪ್ಪ ಖೇಟಕಂಗಳುಮಂ ಕಥಕಕೌತೂಹಕಕುಹಕೆ ಹೇರಂಬ ಚಂಡಭೈರವಚಂಡಚಂಡಿಕಾರೂಪಕೋಪ ಜೀವಕಶಂಖಶೃಂಗಸಮುಡ್ಡ ಮರಡಮರು ಡಿಂಡಿಮಾರಾವಮುಖರಿತವೀಧೀವಿಡಂಬಂಗಳಪ್ಪ ಮಡಂಬಂಗಳುಮಂ ನೋಡುತ್ತುಂ ಕೌತುಕರಸ ದೊಳೋಲಾಡುತ್ತಂ ಸಮುಚಿತಾಶ್ರಯಂಗಳಪ್ಪಾಶ್ರಮಂಗಳೊಳ್ ವಿಶ್ರಮಿಸುತ್ತುಂ ಮನೋಹರವನಪ್ರದೇಶಂಗಳೊಳ್ ಭ್ರಮಿಸುತ್ತುಂ ಬರ್ಪ ರೂಪ ಕಂದರ್ಪದೇವಂಗೆ ದೇಶಯಾತ್ರಾಸುಖೋತ್ಸವಮನವಟಯಿಸುವಂತೆ –

ಸರಿತ್ಸ್ರೋತೋರಮ್ಯಂ ಕ್ಷಿತಿ ತೊಳಗೆ ಸಸ್ಯಪ್ರಸೆದಂ
ಶರಾರೂದ್ಯತ್ಕಾಮಿದ್ವಿಪಕಳಭಯಮಂದಾಗೆ
ಸರದಂ
ಪರಾಗಶ್ರೀ
ನೆಯ್ದಿಲ್ಗೊದವಿ ಬರೆ ಬಂದತ್ತು ಸರದಂ       ೨೦

ನೀರದವಿಟಂಗೆ ವಿದ್ಯು
ನ್ನಾರಿಯ
ವಿರಹಂ ಪೊಣರ್ಚೆ ಬಡವಾಗಿ ಕರಂ
ದೂರಿಸಿ
ಬೆಳರ್ತ ತೆಱದಿಂ
ಶಾರದಜಳಧರದ
ತುಱುಗಲೊಗೆದುವು ನಭದೊಳ್     ೨೧

ಗಗನಶಿಲಾತಳದೊಳ್ ಘನ
ಖಗಸಂಕುಳವಚ್ಚನಿಕ್ಕಿ
ಪೋದುವೊ ಮಿಗೆ ಬಾಂ
ಜಗುನೆಗೆ
ನೆಗೆದುವೊ ನೊರೆಯೆನೆ
ಬಗೆಗೊಂಡುವು
ಬಾನೊಳೊಗೆದ ಬಿಳಿಯ ಮುಗಿಲ್ಗಳ್   ೨೨

ಜೀವನಮುಳ್ಳಿನಮಿತ್ತಿಖಿ
ಳಾವನಿಗಂ
ಕೀರ್ತಿಶೇಷಮಾಯ್ತೆನೆ ತುಂಗಾ
ಬ್ದಾವಳಿ
ಬೆಳರ್ತು ಬಾನಂ
ತೀವಿದುವು
ಪರೋಪಕಾರಿ ಕೆಟ್ಟೆಡೆಯುಂಟೇ   ೨೩

ಶರನಿಧಿಯನಡಕಿ ತೇದೊಡೆ
ಸುರಿದಪುವೋ
ಪೊತ್ತು ತಂದು ಮುತ್ತುಮನೆಂಬಂ
ತಿರೆ
ಬಿಸಿಲೊಳೆಸೆವ ಪೊಸವೆ
ಳ್ಸರಿಯಂ
ಸುರಿದುವು ಸಡಿಲ್ದ ಬಿಳಿಯ ಮುಗಿಲ್ಗಳ್       ೨೪

ತಿಳಿದುವು ನೀರ್ಗಳ್ ತಿಂಗಳ್
ತೊಳೆದಂತೆ
ಪಳಚ್ಚನಾಯ್ತು ಗಗನಂ ಮುಸುಕಂ
ಕಳೆದಂತೆ
ಪೋಗೆ ಮೇಘಂ
ತೊಳಗಿದುವು
ದಿಶಾಮುಖಂಗಳಂದಿನ ದಿವಸಂ        ೨೫

ದೆಸೆಯಂ ಮಸುಳಿಸಿದ ಮುಗಿ
ಲ್ಗೆಸಱಂ
ತೊಳೆದೆತ್ತಿ ಕಳೆವವೊಲ್ ಕವಿದು ಪೊನ
ಲ್ಮಸಗಿತು
ಪೊಸವೆಳ್ದಿಂಗಳ್
ಜಸಮಂ
ಪರ್ಬಿಸುವ ತೆಱದೆ ಕವಿಶೇಖರನಾ  ೨೬

ಪಸುವೋಡುವಿನಂ ಹರಣಂ
ಹಸರಿಸುವಿನಮೀಂಟಿದಂತೆ
ಬೆಳ್ದಿಂಗಳುಮಂ
ಬಿಸಿಲುಮನೇನೆಸೆದಿರ್ದುವೊ

ಪೊಸನೆಯ್ದಿಲ
ಪೂವುಮಲರ್ದ ತಾವರೆವೂವುಂ         ೨೭

ಎಲರೆತ್ತೆ ಸುರಿದು ನೀರ್ಕಿ
ನ್ನೆಲದಂತಿರೆ
ಪರೆದು ಪುದಿಯೆ ಕಿಂಜಲ್ಕಂಗಳ್
ಚಲರುಹದಲರ್ಗಳದೇಂ
ಜಲ
ಜಲಿಸಿದುವೋ
ಬಯಲೊಳಲರ್ದ ಜಲರುಹದಲರ್ವೋಲ್        ೨೮

ಎಲೆದುಱುಗಲಿಡಿದು ಪಚ್ಚೆಯ
ನೆಲಗಟ್ಟಂ
ಕಟ್ಟಿದಂತೆ ಪಜ್ಜಳಿಸಿರೆ ಪೂ
ವಲಿಗೆದಱಿದಂತಿರೆಸೆದುವು

ಜಲಜಂಗಳ್
ಕೊಳಗಳೆಂಬ ಸಿರಿಯರಮನೆಯೊಳ್     ೨೯

ಅಂಬುಜಮುಖಿಯರ ತನುಲತೆ
ಗಾಂಬಂತಿರೆ
ತೆರೆಯನಿಱೆಯೆ ಮೊಲೆತಡಿತಡಿಗೊಂ
ಡಿಂಬಾಗೆ
ಪೊಳೆವ ಪಚ್ಚೆಯ
ಕೊಂಬುಗಳಂ
ಪಿಡಿದು ನಿಳ್ಕಿ ನೆಯ್ದಿಲನಾಯ್ದರ್         ೩೦

ಸಿಂಜಾನಸಮದಷಟ್ಚರ
ಣಂ
ಜೇವೊಡೆಯೆನಿಸೆ ಪುಳಿನತಳದೊಳ್ ಸುಮನೋ
ಮಂಜರಿಯಂ
ಮುಸುಕಿದ ನವ
ಮಂಜುಲಲತೆ
ಮದನಚಾಪಲತೆಯನೆ ಪೋಲ್ಗುಂ       ೩೧

ನೆಗೆದಂಚೆಗಳೇೞ್ತಂದುವು
ಗಗನಾಗ್ರದಿನಿೞಿದ
ಬೆಳ್ಮುಗಿಲ್ಗಳ ಮಱಿವಿಂ
ಡುಗಳೆನೆ
ಬೆಳ್ದಾವರೆಯೊ
ಳ್ಮುಗುಳೆನೆ
ಮಾನಸದ ಹಂಸಿಗಳ್ವೆರಸಾಗಳ್ ೩೨

ಕಂದಂಗಳಂತಿರಂಚೆಗ
ಳಂದೇೞ್ತರೆ
ತೊಱೆದ ಮೊಲೆಗಳಂತಿರೆ ನಳಿನೀ
ಕಂದಂಗಳಿಂದಮೊಡನೊಗೆ

ತಂದುವು
ನವಕುಂದಧವಳಕೋರಕನಿಕರಂ   ೩೩

ವನರುಹಕಂದದ ಕೊನರ್ಗಳ
ಕೊನರ್ತ
ತನಿರಸಮನೀಂಟಿ ಗರ್ಗರರವದಿಂ
ದನಿಯೊಡೆಯೆ
ಕರೆದುವೋಡುವ
ಘನಸಮಯಮನಾರ್ವ
ತೆಱದೆ ಕಳಹಂಸಗಳ್         ೩೪

ಪಿಂದೆ ತಲೆದೆಗೆದ ಕದಿರ್ಗಳ್
ಸಂದಣಿಗೊಂಡರ್ಕಬಿಂಬದಿಂ
ಪೊಱಪೊಣ್ಮು
ತ್ತೊಂದೊಂದನೊರಸಿ
ಕಿಡಿವಿಡು
ವಂದದೆ
ಕಡುವಿಸಿಲ ಪೊಳೆಪುವಡೆದುದು ಕಾಯ್ಪಂ      ೩೫

ಅಳುರೆ ಶರದದ ಬಿಸಿಲ್ ಕೋ
ಮಳಿಕೆಯನುೞಿದಿನಿಸು
ಬಾಡಿ ಕಂದಿರ್ದಳ್ ಕಂ
ದಳತಾಕುಮಾರಿ
ಮುಗುಳ್ವೊ
ಳ್ಮೆಳೆತೊಡೆ
ಮೆಯ್ಕಾಯ್ದು ಬಡಬಡಾದಂತಾದಳ್      ೩೬

ಮುನ್ನುಂಗಿ ದಹನನಂ ತಪ
ನನಂ
ನೆಗೆದುಗುೞ್ವಂತೆ ಬಿಸುಗದಿರ್ನೆತ್ತರ್ ಕಾ
ಯ್ವನ್ನಂ
ಸುಡುತಿರೆ ಪಥಿಕರ್
ಬೆನ್ನಂ
ಕೊಂಡೋಡಿ ಮೆಳೆಯ ನೆೞಲಂ ಸಾರ್ದರ್      ೩೭

ಅರಗಿಳಿಯ ಪಿಂಡು ಬಂದುಗೆ
ಯರಲಂದದ
ಚಂಚುವಿಂದೆ ಕೞಮೆಯ ತೆನೆಯಂ
ಬರೆಕರ್ಚಿ
ಪಾಱುತಿರ್ದುವು
ಶರದಂ
ಪುಗೆ ಪಾಱಿ ಪೋಪ ಸುರಚಾಪದವೋಲ್      ೩೮

ಪೊಳೆವ ಬಿಸಿಲ್ಗೆ ಮೆಯ್ವೆಳಗು ಚಂದನಪಾಂಡುಪಯೋಧರಾಗ್ರದಿಂ
ಬಳೆದಿೞಿತರ್ಪ
ಬೆಳ್ಸರಿಗೆ ಹಾರಮೆಸಾಲಿರೆ ಪೋಲ್ವೆಯಿಂ ಸಮು
ದ್ದಳಿತಸರೋಜಗಂಧಿ
ಕಳಹಂಸಮನೋಹರಯಾನೆ ಸಸ್ಮಿತೋ
ತ್ಪಳಧವಳಾಕ್ಷಿಯೇಂ
ಸುರಿದಳೋ ಶರದಂಗನೆ ಕಣ್ಗೆ ಶೋಭೆಯಂ         ೩೯

ತೊಳೆಪ ಬಿಸಿಲ್ ತಳತ್ತಳಿಸಿ ಕಾಯ್ದುಪೊದೞ್ದಿರೆ ಮೆಯ್ಯಬೆಂಕೆವೋಲ್
ತಳಿವ
ಹಿಮಾಂಬು ಬೆಳ್ಸರಿ ಚಳದ್ದಳವೀಜಿಕೆ ಪಾಱುತಿರ್ಪ ಪೆ
ಣ್ಗಿ
ಳಿಗಳೆಱಂಕೆಯಾಗೆ ನವಪಾಂಡುಪಯೋಧರೆ ದರ್ಶಿತಾಶೆಯು
ತ್ಪಳಕುಲಭೂಷೆಯೇಂ
ವಿರಹಿಯಂತೆ ಶರದ್ವಧು ಕಣ್ಗೆವಂದಳೋ  ೪೦

ಅಂತು ಬಂದ ಶರತ್ಸಮಯದೊಳ್

ಕೆಸಱಿಂ ಕುೞಿಯಿಂ ನಾನಲಿ
ನಸಿದಾಗಿರೆ
ಕೊಂಕಿ ಪೋದ ಬಟ್ಟೆಗಳೆಲ್ಲಂ
ಪಸಲೆಗವಿದಂದು
ಸೈತಿರೆ
ವಸುಧೇಶನುಮಾರ್ಯಸುತನುಮೊಯ್ಯನೆ
ನಡೆದರ್   ೪೧

ಅಡಿಗೆ ಕಡುಮೆಲ್ಪನೊಪ್ಪಿಸು
ವೆಡೆ
ಕಣಿಕೈಯಡಿಯನೂಱೆ ನಸುಗೆಸಱಿಂ ಕೇ
ಸಡಿಯೆಸೆದುವು
ಕತ್ತುರಿಯಂ
ತೊಡೆದಂತಿರೆ
ನಡೆವ ಸುಕರಕವಿಶೇಖರನಾ  ೪೨

ಅಂತು ನಡೆಯುತ್ತುಮಲರ್ದ ಕಮಳಕುಮದಕಾನನಂಗಳಿಂ ಕೆಂಪಡರ್ದ ಕಳಮಕೇದಾ ರಂಗಳಿಂ ತೀವಿ ತಿಳಿದು ತೆರೆಗಟ್ಟುವ ತಟಾಕಸರೋವರಂಗಳಿಂದೆಸೆವ ದೇಶಂಗಳಂ ನೋಡುತ್ತುಂ ಕುಱುಕುಱುಮೆಟ್ಟುತ್ತುಂ ಬರ್ಪ ರೂಪಕಂದರ್ಪದೇವನಂ ಮಕರಂದನಿಂತೆಂದಂ –

ಧವಳಾಬ್ಜ ಸಿತಚ್ಛತ್ರಂ
ನವೀನಕಳಹಂಸಧವಳಚಾಮರನಿದಿರ್ವ

ರ್ಪವೊಲೆಸೆವಂ
ನಿನಗುತ್ಪಲ
ಧವಲಂ
ಶರದವನಿಪಾಲಕಂ ಕವಿಧವಳಾ      ೪೩

ತೋಱೆ ಪೊಸಬಾಸೆವೋಲ್ ಪಸು
ರೇಱಿದ
ವನಲೇಖೆ ತೋರಮೊಲೆ ಬೆಳ್ಮುಗಿಲಂ
ಪೇಱಿದ
ಗಿರಿಯೆನೆ ಜವ್ವನ
ವೇಱಿದವೊಲ್
ಧರಣಿಕಾಂತೆಯೇನೊಪ್ಪಿದಳೋ        ೪೪

ಸರಸಿಜದೆಲೆಯುಂ ರಜಮುಂ
ಸುರಧನುವೆನೆ
ಪೊಳೆವ ಮಿಂಗಳೆಳಮಿಂಚನೆ ಪೋ
ಲ್ತಿರೆ
ಪೋಲ್ತುವು ಪೆರ್ಗೆಱೆಗಳ್
ಶರದಂ
ಪೊಯೆ ಪರಿದು ಬಿೞ್ದ ಮುಗಿಲನಧೀಶಾ         ೪೫

ಪಸರಿಸಿದ ಬಯಲ್ಮಡು ಪಾ
ವಸೆಗೊಂಡಿರೆ
ಗಡಣದಾಡುವೆಳವೆಂಡಿರ್ ನು
ಣ್ಬಸಲೆಯೆ
ಗೆತ್ತೆಯ್ತರೆ ಮಗು
ಳಿಸಿದಪ್ಪುವು
ಪಾಱಿ ಪೊಳೆವ ಪಾಠೀನಂಗಳ್  ೪೬

ಮಡುಗಳೊಳೆ ನೀಳ್ದ ನೀರ್ಗ
ನ್ನಡಿಯೊಳ್
ತೆನೆಮೊಗದ ಚೆಲ್ವನವಲೋಕಿಪವೋ
ಲಿಡಿದಡರೆ
ಕೊಂಡ ಫಲದಿಂ
ಕಡುವಾಗಿದುವರಸ
ಗಂಧಶಾಲಿವನಂಗಳ್    ೪೭

ಕಾಲ್ವಿಡಿದು ಕೆಳಗೆ ಪೊಸನೆ
ಯ್ದಿಲ್ವೂಗಳ್
ಬಾಯನಾಂತವೋಲಿರೆ ಕಂಪಂ
ಪಾಲ್ವನಿಗಳನುಗುೞ್ದಪುವೆನೆ

ಚೆಲ್ವಿಂ
ಬಾಗಿದುವು ನೋಡಿ ಕಳಮವನಂಗಳ್ ೪೮

ವಿನತನವಗಂಧಶಾಲಿಯ
ತೆನೆಗಳನೊಳಕೊಂಡು
ಮುಗಿದ ಕುಮುದಂಗಳ್ ನೋ
ಡನುಕರಿಸಿದಪುವು
ತೀವಿದ
ತನಿಗಂಪಂ
ಪೀರ್ವ ತೆಱನನುನ್ನತನಿಳಯಾ   ೪೯

ಹರಿತದಳಪಾಕ ಪರಿಪಿಂ
ಜರಕಣಿಶವಿಕಾಸಕಳಮವನಕವನಿಪ
ನೋ
ಡರಗಿಳಿಯ
ಪಿಂಡು ಪಾಯ್ವುದು
ಮರುಳ್ದು
ಸಮವರ್ಣರುಚಿಗೆ ಪಾಯ್ದೆಱಗುವವೋಲ್     ೫೦

ಕೆಮ್ಮೀಸೆವಿಟ್ಟು ಗಿಳಿಗಳ್
ತಮ್ಮಂ
ತುಡುಕದವೊಲಾಯುಧಂಬೇಱೆದವೋಲ್
ಕಮ್ಮಗೞವೆಗಳನಂಗನ

ಕಮ್ಮಕದಂತೆಸೆದುವೊಸೆದು
ನೋಡಿವನರಸಾ         ೫೧

ಸಂಪಗೆವಣ್ಣ ಮನುಗುೞ್ವೆಳ
ಗೆಂಪೊಂದಿದ
ಪಸುರನಾಳ್ದ ತುದಿನಡುಮೊದಲೆಂ
ಬಿಂಪುಳ್ಳೆಸಳ್ಗಳ
ಮೆಯ್ಯಿಂ
ಕಂಪಂ
ಕೆದಱಿದಪುವರಸ ಕೞಮೆಯ ಕೆಯ್ಗಳ್ ೫೨

ಬಲ್ಗಿಳಿಗಳ್ ಬೞಲ್ದು ತೆನೆಗಳ್ ತೊನೆಯುತ್ತಿರೆ ಪಾಯ್ದು ಪಾಯ್ದು ಪಾ
ಲ್ನೆಲ್ಗಳನಗ್ರತುಂಡದೊಳೆ
ಖಂಡಿಸೆ ಗಲ್ಗಲನೊಕ್ಕ ಪಾಲ ತಂ
ದಲ್ಗಳಿನಾವಗಂ
ಮಡಿಯ ನೀರ್ ಕಡುವೆಳ್ಪನೊಳೊಂದೆ ಪದ್ಮಜಂ
ಪಾಲ್ಗಳನೊಯ್ದು
ಪೊಯ್ದು ಬಳೆಯಿಪ್ಪವೊಲಿರ್ದುವು ನೆಲ್ಲಗರ್ದೆಗಳ್        ೫೩

ಎಂದು ಮಕರಂದನೋರಂದದಿಂ ಪೊಗೞ್ದು ಪಲತೆಱದಿಂ ಪೊಲನ ಸಿರಿಯನರಸಂಗೆ ನಿರವಿಸುತ್ತುಂ ಬರೆವರೆ ಮುಂದೊಂದೆಡೆಯೊಳಿಡಿದು ಪಾಲ್ಗೊಳ್ವ ಪದನಾಗಿ ಕಣ್ಮಲರ್ಗೇಕೋದಾರಮಾದ ಕೇದಾರದೊಳ್ –

ಅನಿಲಾಯತ್ತೋಚ್ಚಲಚ್ಛಾಳಿಯೊಳವಯವದಿಂ ಪಾಯ್ದು ಕಾಲ್ ಜಾಱೆ ತೂಗುಂ
ದೆನೆಯಂ
ತಳ್ಕೈಸಿ ಕೀರ್ಕೀರೆನುತಡಿಗೆಸಱೊಳ್ ಬಿೞ್ದು ಬಲ್ಗೆಡ್ಡೆಯಂ ಸಾ
ರ್ದೊನಲುತ್ತ
ಚ್ಛಾಂಬು ವೊಳ್ ಚುಂಬಿಸುವ ಕಣಿಶಮಂ ಕರ್ಚಿ ತುಂಡಾಗ್ರ ಮಂ ನೂ
ತನ
ಪಕ್ಷಪ್ರಾಂತದೊಳ್ ಮಾರ್ದೋಡೆದುದು ಧೃತ ಜಂಬಾಲಮಂ ಬಾಲಕೀರಂ     ೫೪

ಅದಂ ನೋಡಿ ನಕ್ಕು ಅತಿತರಳಂಗೆ ಕೈಸಾರ್ದ ಕಜ್ಜಮುಂ ಕಿಡುವುದಾವ ಕೌತುಕಮೆಂದು ನುಡಿಯುತ್ತುಂ ನಡೆಯೆ ನಡುವೊಲಕ್ಕೆ ತೊಡವೆನಿಸಿ ಪರ್ಬಿಕೊಂಡಲುಗುವ ಸುರ್ಬು ಪುರ್ಬಿಕ್ಕುವಂತಿರ್ದು ಪೆರ್ಬಟ್ಟೆಯ ಪುರ್ಬಿನೊಳ್ –

ಕೀರ್ಣಪರಾಗಪಿಂಜರಿತತೀರಜಳಂ ಪೊಳೆಯುತ್ತು ಮಿರ್ಪ ಸೌ
ವರ್ಣಸುಪತ್ರದಂತೆಸೆಯೆ
ತೀವಿದ ಕೈರವಕಂಜಸಂಕುಲಂ
ಪೂರ್ಣಪಯೋಜಪುಂಜಕುಮುದೋತ್ಕರದಂತಿರೆ
ಧಾರಿಣೀ ಕನ
ತ್ಕರ್ಣದ
ಚೆಲ್ವನಾಂತರಿಮನೋಹರಮಾದುದು ನೀರಜಾಕರಂ   ೫೫

ತುಂಬಿಯ ಬಣ್ಣಮುಂ ಕಱಿಯ ನೆಯ್ದಿಲ ಬಣ್ಣಮುಮಂಚೆವಿಂಡ
ಳ್ತಿಂ
ಬೆಳರ್ವಣ್ಣಮುಂ ಬಿಳಿಯ ಕಂಜದ ಬಣ್ಣಮುಮೊಂದಳುಂಬಮುಂ
ತುಂಬಮುಮಾಗೆ
ತಿಂಬಿದುದು ಕೞ್ತಲೆಗಂ ಶಶಿಕಾಂತಿಗಳ್ಗಮಾ
ಅಂಬುಜಷಂಡಮಿಜಗದೊಳಿಲ್ಲದ
ಕೂಟಮನುಂಟುಮಾೞ್ಪವೋಲ್         ೫೬

ಎನೆ ಕಮನೀಯಮಾದ ಕಮಳಾಕರಮುಮಂ ಕುಮಾರನ ಪಥಪರಿಶ್ರಮಪರಿ ಮ್ಲಾನಮುಖಕಮಲಾಕರಮುಮಂ ಕಂಡು ಮಕರಂದಂ ಕಡೆಗಣಿಸಲಱಿಯದೆ –

ಗಿಳಿಗಳ್ ಬಿಟ್ಟುವು ಗಂಧಶಾಲಿವನಮಂ ಗೋಪೀಕಪೋಲಾಗ್ರದೊಳ್
ಪೊಳೆಯುತ್ತಿರ್ದುವು
ಘರ್ಮವಾಃಕಣಿಕೆಗಳ್ ಪದ್ಮೋತ್ಕರಕ್ಕಂಚೆಗಳ್
ತಳರುತ್ತಿರ್ದಪುವೊಪ್ಪಿ
ಚಿಬ್ಬಸಲೆಯಿಂ ನೀರ್ದಾಣಮಂ ಸಾರ್ದು ಗೋ
ಕುಳಮಾ
ಪೋದುದು ಕಾಯ್ದಪಂ ತಪನನುತ್ತೀವ್ರಂ ಲಲಾಟಂ ತಪಂ       ೫೭

ಅದುಕಾರಣದಿಂ –

ಬಿಸಿಲಿೞಿವನ್ನೆಗಮಿರ್ದೀ
ಬಿಸರುಹವನದೊಳ್
ಬೞಲ್ಕೆಯಂ ಕಳೆದು ಬೞಿ
ಕ್ಕಸಮಾಸ್ತ್ರರೂಪ
ಪೋಪಂ
ರಸಿಕಂ
ನವಲಲಿತವಸ್ತುವಂ ಬಿಸುಡುವುದೇ   ೫೮

ಪ್ರಿಯಸಖನಿಂತೆನೆ ಸಲಿಲಾ
ಶಯಕ್ಕೆ
ತದ್ರಾಜಹಂಸನೊಯ್ಯನೆ ಮುದಿತಾ
ಶಯನಾಗಳ್
ನಡೆದಂ ಬಗೆ
ಬಯಸಿದುದನೆ
ನುಡಿಯೆ ನೆಗೞಲೊಲ್ಲದರೊಳರೇ      ೫೯

ಎಂದು ನಡೆದಾ ನಳಿನಾಕರ ತೀರದೊಳ್ ತಱತಱಂಗೊಂಡು ತುಱುಗಿ ಕವಲ್ತ ಕಿಱುಗೊಂಬುಗಳ ಪರ್ಬಿಂ ಸುರ್ಬುಗೊಂಡು ಶೋಭೆಗೆ ಪಿರಿದಾದ ಚಾದಿಯ ಪೊದೞ್ದ ಪೊದಱ ಸುತ್ತಿಂ ಸೊಗಯಿಸಿ ನೀರ್ಗುಡಿಯಲ್ ಗಡಗಣದಿಂ ಬಂದು ಬೞಲ್ದು ಕುಳ್ಳಿರ್ದ ಪಾಮರಿಯರ ಪೆರ್ಮುಡಿಯಿನಲ್ಲೊಕ್ಕು ನಸುವಾಡಿದನೆಲ್ಲ ನಿಡುವೊಡೆಗಳಿಂ ತುಱುಕಾರ್ತಿಯರ್ ತಿಱಿದುತಂದು ಪಾಱುತನಕ್ಕೆ ಪರಪೆ ಪರೆದು ಕೊರಗಿರ್ದ ಕಱಿಯ ನೆಯ್ದಿಲ್ಗಳಿಂ ಅವಂದಿರ್ ಬೀಸಿ ಬಿಸುಡೆ ಕಂದಿ ಕೆದಱಿರ್ದ ಕಮಲಪತ್ರಂಗಳಿಂ ಪಥಿಕರ್ ಪಾಸಿ ಪಟ್ಟಿರೆ ನಸುಮಾಸಿದ ಪೊಸದಳಿರ ಪಸೆಗಳಿಂ ಮನೋಹರಮಾದ ಮಾಧವೀಮಂಪಟದ ಮೊಗಸಾಲೆಯೊಳ್ ಕುಳ್ಳಿರ್ದು ತೆಂಗಾಳಿಗೆ ಮೆಯ್ಯನೊಡ್ಡಿ ಬೆಮರನಾಱಿಸುತ್ತುಮರಸನಿರ್ಪುದುಂ ಪದ್ಮಪತ್ರಪುಟಿಕೆಯಿಂ ಕುಳಿರ್ವ ತಿಳಿನೀರ್ಗಳುಮಂ ಕಮಳಮೃಣಾಳಂಗಳುಮಂ ಮಕರಂದಂ ತಂದು ನೀಡೆ ಬೇಡೆಂದು ಮನೋಹರತೆಗೆ ಮನವೆಳದುವರಿಯೆ ಮಾನವಮದನಂ ತಾನೆ ಪೋಗಿ ಪೂಗೊಳನಂ ಪೊಕ್ಕು ರಮಣೀನಿತಂಬಫಲಕಮಂ ಪಳಿಕಿನ ಸೋಪಾನಕ್ಕೆ ಪಕ್ಕುಮಾಡಿ ಸೀವರದ ಸೀರ್ಪನಿಗಳ್ ಪನಿತು ಶರೀರದೊಳ್ ಪುಳಕಮಂ ಪುಟ್ಟಿಸೆ ತೊಡೆಯನಪ್ಪಳಿಸೆ ನೀರೊಳಗೆ ಕಾಲಂ ನೀಡಿ –

ಅಗಲೆ ಮಿಗೆ ನೂಂಕಿ ತಪ್ತಾಂ
ಬುಗಳಂ
ತಳದಲ್ಲಿ ಕುಳಿರ್ವ ನೀರ್ಗಳನಾಗಳ್
ಮೊಗೆಮೊಗೆದು
ತೆಗೆದು ಭೂಪಂ
ಮೊಗಮಂ
ತೊಳೆವುದುಮನಂತರಂ ಸಚಿವಸುತಂ     ೬೦