ಶ್ರೀಕಾಂತಾಕಾಂತನಿಳಾ
ಲೋಕಸ್ತುತನೊಪ್ಪಿದಂ ಕುಬೇರನ ಕೆಳೆಯಿಂ
ಶ್ರೀಕಂಠನೊಪ್ಪುವಂತೆವೊ

ಲಾ
ಕೆಳೆಯನ ಕೂಟದಿಂದ ಕೃತಿಕುಲದೀಪಂ  ೧

ಅಂತಾ ಸಹಾಯಂ, ಸಾಹಸದಂತೆ ಸಮರಸಹಾಯನುಂ, ಉದ್ಯೋಗದಂತರ್ಥಸಹಾಯನುಂ, ಶ್ರುತದಂತೆ ಬುದ್ಧಿಸಹಾಯನುಂ, ತ್ಯಾಗದಂತೆ ಕೀರ್ತಿಸಹಾಯನುಂ, ಕಾಮನಂತೆ ಕಾಮಸಹಾಯನುಂ, ದಯಾಗುಣದಂತೆ ಧರ್ಮಸಹಾಯನುಂ, ವಿಭವದಂತೆ ವಿನೋದಸಹಾಯನುಮಾಗೆ ಚೂಡಾಮಣೀಕೃತ ಚೂಡಾಮಣಿ ಪದನಖಮಣಿಮಯೂಖನಭಿರಾಮತಾರೂಢಯೌವನಂ ಯುವರಾಜಲಕ್ಷ್ಮೀಸುಖಸಮುದ್ರದೊಳ್ ಮೂಡಿ ಮುೞುಗಾಡುತ್ತುಂ ಕಂದರ್ಪದೇವನಿರ್ಪಿನದೊಂದು ದಿವಸಂ –

ಕುವಲಯದೀರ್ಘನೇತ್ರ ಮಲರುತ್ತಿರೆ ಮೂಡುವ ಮಿಂಗಳಾಕೆಯೊ
ಪ್ಪುವ
ಮುಖಪದ್ಮದೊಳ್ ಮೊಡವಿ ಮೂಡಿದವೋಲಿರೆ ಕಾಳಮೆಂಬ ಶಂ
ಭುವಿನ
ಶರೀರದೊಳ್ ಪುದಿದ ಗೌರಿಗೆ ರಾಗಮನೊಟ್ಟಿಕೊಂಡು ಮೂ
ಡುವ
ಮೊಲೆಯಂತೆ ಮೂಡಿದುದು ಮೂಡಣ ದಿಕ್ಕಿನೊಳಿಂದುಮಂಡಲಂ   ೨

ಸೋಂಕಲೊಡಂ ನಿಶಾತರುಣಿಯಂ ಶಶಿ ಸೋರ್ದುದು ಸಂಜೆ ಸೀರೆವೋಲ್
ಪಂಕಜಲೋಚನಂ
ಮುಗಿದುವೆರ್ದುವು ಬಲ್ಬೆಮರಂತೆ ತಾರಕಾ
ಸಂಕುಳಮಿಂದುಕಾಂತವಿತತಾಚಳತುಂಗನಿತಂಬಬಿಂಬದಿಂ

ದಂ
ಕೊಳನಾಗಿ ತುಳ್ಕಿದುವು ತೆಳ್ವದದಂತೆ ನವದ್ರವಾಂಬುಗಳ್

ನನೆಯಿಂ ನೆಯ್ದಿಲಿನಾಲಿನೀರ್ದಳಿಪದಿಂ ಕಾಮಾಗ್ನಿಯಂ ಮಗ್ಗಿಸಲ್
ಮನಮಂ
ತಂದ ವಿಯೋಗಿಜಾಲದೆರ್ದೆಯೊಳ್ ನಟ್ಟುರ್ಚಿ ಗಾಱೇಱೆ ಬೆ
ಚ್ಚನೆ
ಪಾಯ್ತಂದು ಪೊದೞ್ದ ರಕ್ತಜಲದಿಂದಂ ತೊಯ್ದ ಕಂದರ್ಪದೇ
ವನ
ಚಕ್ರಕ್ಕೆಣೆಯಾಯ್ತು ರಕ್ತರುಚಿಯಿಂ ಬಿಂಬಂ ಸುಧಾಸೂತಿಯಾ         ೪

ಮುಡಿಗವಿದಿರ್ದ ಮಾಣಿಕದ ಮಂಡನದಂತಿರೆ ತಾರಕಾಳಿ
ಳ್ತಡರ್ದರುಣಾಂಸುಗಳ್
ಕುರುಳ ಕುಂಕುಮದಂತಿರೆ ರೂಢಿಸಿತ್ತು ಕೆಂ
ಪಿಡಿದ
ಬೆಡಂಗಿನಿಂದಮೆ ನಿಶಾಪ್ರಸವೋತ್ಸವದೊಳ್ ವಿಳಾಸದಿಂ
ಮುಡಿದ
ಮಹೇಂದ್ರದಿಗ್ವಧುವ ಬಣ್ಣದ ತೊಂಡಲನಿಂದುಮಂಡಲಂ         ೫

ಕಳಸದ ಬಾಯ ಕೆಂದಳಿರನಂಗಜವಿಪ್ರನ ಹೋಮಕುಂಡದೊಳ್
ಬಳೆದುರಿಯಂ
ನಿಶಾಂಗನೆಯ ಬಟ್ಟಲ ಕುಂಕುಮಮಂ ಮನೋಜನ
ಗ್ಗಳಿಕೆಯ
ಗಂಧಸಿಂಧುರದ ನೆತ್ತಿಯ ಸೆಂದುರಮಂ ಪೊದೞ್ದು ಪೋ
ಲ್ತಳವಿಗಳುಂಬಮಾದುದು
ಸುಧಾಕರಬಿಂಬದ ರಾಗವೇೞ್ಗೆಯೊಳ್          ೬

ಅಲೆದಮೃತದೊಡನೆ ತಾರಾ
ಲಲನೆಯರಡಿದಳಿರನೂಡಲೆಂದು
ಪದಂಗೆ
ಯ್ದಲತಗೆಯ
ಪಡಲದಂತೆವೊ
ಲಲೆದುದು
ಪರಿಪಕ್ವಬಿಂಬಮಂ ವಿಧುಬಿಂಬಂ  ೭

ವಿರಹಿಗುರಿ ನಲ್ಲರೊಳ್ ನೆರೆ
ದರನಾಱಿಸುವಮೃತಮೆಂಬುದಂ
ತೋಱಿಸುವಂ
ತಿರೆ
ಶಶಿಯುದಯದ ಕೆಂಪುಂ
ಕರಮೆಸೆದುದು
ಬೞಿಕಮಳವಿಗೞೆದೆಳವೆಳಗುಂ        ೮

ಮೃಗಲಕ್ಷ್ಮಂ ಸಂಜೆಗೆಂಪಿಂ ಪುದಿದುದಯಿಸಿ ಸರ್ವೋರ್ವಿಗಾನಂದಮಂ ವಾ
ರ್ಧಿಗೆ
ಪೆರ್ಚಂ ಮಾಡಿ ಮುನ್ನಂ ಬೞೆಕೆರ್ದೆಗೞೆಯಂ ತೋಱೆಯುಂ ಕಂಡು ಲೋಕಂ
ಬಗೆಗೊಂಡಾಲಂ
ಮೊಲಂ ಪುತ್ತೆರಲೆಯೆನುತದಂ ಕೂರ್ತು ಕೈಗೈಯೊಳಿನ್ನುಂ
ಪೊಗೞ್ದಪ್ಪರ್
ಭಾಪು ಲೋಕಕ್ಕುಪಕರಿಸುವನೊಳ್ ದೋಷಮುಂ ಸ್ತುತ್ಯಮಲ್ತೇ      ೯

ತಿಳಿಗೊಳದಲ್ಲಿ ತೋಱುವಸಿತೋತ್ಪಲಮಂ ಫಣಿರಾಜತಲ್ಪದೊಳ್
ತೊಳಗುವ
ಕೃಷ್ಣಕಾಂತವಪುವಂ ರತಿದೇವಿಯ ಕೇಳಿಗಿಟ್ಟನು
ಣ್ಬಳುಕಿನ
ಬಟ್ಟವಂಜರದ ಕೋಗಿಲೆಯಂ ಗೆಲೆವಂದುದಿಂದುಮಂ
ಡಳದ
ಕಳಂಕಲೇಖೆಯಮರೇಂದ್ರವಧೂಮುಖಪತ್ರವಿಭ್ರಮಂ    ೧೦

ಇಂದುಪ್ರಾಲೇಯಶೈಲದ್ಯುನದಿ ಶಶಿಶರನ್ಮೇಘಮುಕ್ತಾಂಬುಧಾರಾ
ವೃಂದಂ
ಜ್ಯೋತ್ಸ್ನಾಪ್ರವಾಹಂ ಕವಿದುದು ವಿಧುಶಕ್ರೇಕ್ಷಿತಂ ಶೀತರೋಚಿಃ
ಕುಂದೋದ್ಯನ್ಮಂಜರೀನಿರ್ಗತನಿಬಿಡರಜಂ
ಚಂದ್ರರುದ್ರಾಟ್ಟಹಾಸ
ಸ್ಪಂದಂ
ಪ್ರೋದ್ಭಿನ್ನ ಸೋಮಾಮರಕರಟಿಶಿರೋವಾಂತಮುಕ್ತಾಚ್ಛವರ್ಷಂ  ೧೧

ಹಿಮರೋಚಿರ್ಮಂಡಲಂ ಕುಂಡಲಿತಕುಸುಮಕೋದಂಡಮಂ ಪೋಲೆ ಶೃಂಗಾ
ರಮಯಂ
ಭೂಲೋಕಮಪ್ಪಂತುಟು ವಿರಹಿಗೆ ಶಶ್ವದ್ಧನುರ್ವೇದವಿದ್ಯಾ
ಶ್ರಮಮಂ
ತೋಱಲ್ ಕಳಂಕ ಸ್ಮರಿನಿಸೆ ತುಱುಗಲ್ಗೊಂಡು ಪಾಯ್ವುಲ್ಲಸತ್ಕೌ
ಸುಮಬಾಣಾಸಾರದಂತೇಂ
ಸುರಿದುದೊ ನವನೀಹಾರ ಕಾಂತಿಪ್ರವಾಹಂ ೧೨

ಎಲೆ ಶೃಂಗಾರಾರ್ಣವಂ ಸಗ್ಗದಿನಿೞೆದುದತಿಶ್ವೇತಮೆಂಬನ್ನೆಗಂ
ೞ್ತಲೆಯಂ
ಬೆಂಕೊಳ್ವವೋಲೆಣ್ದೆಸೆಯನನಿತುಮಂ ಬೇಱೆವೇಱೆಲ್ಲ ತಾರಾ
ವಲಿಯಂ
ತಳ್ಕೈಸುವಂತಾಗಸಮನನಿತುಮಂ ಪರ್ವಿದತ್ತೊರ್ಮೊದಲ್ ನೆ
ಯ್ದಿಲನೆಲ್ಲಂ
ಚುಂಬಿಪಂತುರ್ವರೆಯನನಿತುಮಂ ಚಂದ್ರಪಾದಪ್ರವಾಹಂ    ೧೩

ನೆಗಪುತ್ತುಂ ಬೆಮರಂ ವಿಯೋಗಿಜನದೊಳ್ ಕಾಂತಾಮುಖಾಂಭೋಜಮಂ
ನಗಿಸುತ್ತಂ
ಸ್ಮರಸೂರ್ಯ ಕಾಂತಶಿಖಿಯಂ ಸೂಸುತ್ತುಮೆತ್ತಂ ಚಕೋ
ರಿಗಳೊಳ್
ತೃಷ್ಣೆಯನೆತ್ತುತುಂ ನೆರಪುತುಂ ಪ್ರೇಯೋರಥಾಂಗಂಗಳಂ
ಪಗಲಂ
ಪುಟ್ಟಿಸುವಂತೆ ಪೊಕ್ಕಿರುಳೊಳೇಂ ಪರ್ಬಿತ್ತೊ ಚಂದ್ರಾತಪಂ      ೧೪

ತವಕದಿನಪ್ಪಲುತ್ಪಳಿನಿಯಂ ಕರವಾದುವು ಕೊಳ್ವಭಿಕ್ಷವಾ
ದುವು
ಪೊಣರ್ವಕ್ಕಿಗಿಕ್ಕಿ ವನಜಾಳಿಯಂ ತುೞಿಯಲ್ಕೆ ಪಾದಮಾ
ದುವು
ಸಲೆ ಕೇತುವಾದುವು ವಿಯೋಗಿಗೆ ಲೋಕದ ಕಣ್ಗೆ ದಾಮಮಾ
ದುವು
ಸುಧೆಯಾದುವೀಂಟುವ ಚಕೋರಿಗೆ ಚಂದ್ರನ ಚಾರುಕಾಂತಿಗಳ್    ೧೫

ಅಮರೇಂದ್ರಾಶಾವಧು ಚಂ
ದ್ರಮುಖಿ
ಸುಧಾರಶ್ಮಿ ಮಧುರರಸಧಾರೆಯನಂ
ದುಮುಳೆ
ನಭಃಕೇಸರಮೆ
ಯ್ದೆ
ಮುಗುಳ್ತಂತಡರೆ ತೊಳಗಿದುವು ತಾರಗೆಗಳ್       ೧೬

ಚಂದ್ರಿಕೆ ಸುರವರಕರಿಯೆನೆ
ಚಂದ್ರಂ
ತತ್ಕರಿಯ ಕುಂಭಮನೆ ತಾರಗೆಗಳ್
ರುಂದ್ರನಯನಂಗಳೆನೆ
ವಿಯ
ದಿಂದ್ರನದೇಂ
ಭುವನ ಜನಕೆ ಕಣ್ಗೊಳಿಸಿದನೋ         ೧೭

ಮದಚಲಚಕೋರಚಂಚೂ
ವಿದಳನದಿಂದಮೃತರಸದ
ಪೊನಲಿಡುತಂ ಸೂ
ಸಿದ
ಬೆಳ್ದಿಂಗಳ ತಿರುಳಂ
ದದಿನಸದಳಮೆಸೆದುದೊಸರ್ವ
ಶಶಿಮಣಿವಿಸರಂ       ೧೮

ಅತ್ತೞಲೆ ರಥಾಂಗಾಸುರ
ರಿತ್ತೀಂಟೆ
ಚಕೋರ ದಿವಿಜನಾಯಕರುಂ ಸೂ
ಸಿತ್ತಾಗಗನಸ್ಥಲಹರಿ

ಯೆತ್ತಿದ
ವಿಧುಕುಂಭದಮೃತಕರಧಾರೆಗಳಂ   ೧೯

ದಾಂಗುಡಿಯಿಟ್ಟುದಿಂಗಡಲ ಬೆಳ್ಪುಕರಂ ಮೊಳೆವೋದುದಿಂದುಕಾಂ
ತಂಗಳ
ಬೆಳ್ಪು ಮೂಡಿದುದು ನೆಯ್ದಿಲ ಬೆಳ್ಪು ಮಡಲ್ತುದಚ್ಚವೆ
ಳ್ದಿಂಗಳ
ಬೆಳ್ಪು ಬಳ್ಳಿವರಿದತ್ತೆಳವೆಂಡಿರ ಕಣ್ಣ ಬೆಳ್ಪು ಸೌ
ಧಂಗಳ
ಬೆಳ್ಪು ಪರ್ಬಿದುವು ಬೆಳ್ಪಿನ ಬೆಳ್ಸರಿಯಿಂ ಸುಧಾಂಶುವಾ ೨೦

ಇದು ಮತ್ತೇನೆಂಬೆ ಬೆಳ್ದಿಂಗಳ ಬೆಳತಿಗೆಯಂ ಪಂಸೆ ಪಾಲ್ಗೆತ್ತು ಸಾರ್ದ
ಪ್ಪುದೊ
ಮಲ್ಲೀಮಾಲೆಗೆತ್ತೇನೆಱಗಿದಪುದೊಭೃಂಗಂ ಬಿಸಭ್ರಾಂತಿಯಿಂದಂ
ಕರ್ದುಕಲ್ಕೈಗಯ್ಯೊಳಾರೈದಪುದಿಭಕಳಭಂ
ಸಾಂದ್ರ ಚಂದ್ರಾಂಶುವಂ ಜಾ
ಱೆ
ದುಕೂಲಂ ಲೀಲೆಯಿಂದಂ ತೆಗೆದಪುದೊ ಕುಚಾಗ್ರಕ್ಕೆ ಕಾಂತಾಕದಂಬಂ          ೨೧

ನೆರೆದು ಚಕೋರಪ್ರಕರಂ
ಖರಚಂಚುವಿನುಡಿದು
ತಿನೆ ಸುಧಾಕರಕಿರಣಾಂ
ಕುರನಿಕರಮನಮರ್ದಿನ
ಸೊನೆ
ಸುರಿದಪುದೆನೆ
ಪಸರಿಸಿತ್ತು ಪೊಸವೆಳ್ದಿಂಗಳ್  ೨೨

ಇಂದು ಜಡನಿಧಿಯ ಬಸಿಱೊಳ್
ಬಂದುದು
ಪುಸಿ ಕಾಣ ಪೂರ್ಣಚಂದ್ರನ ಬಸಿಱೊಳ್
ಬಂದುದೊ
ಪೇೞಿಂಗಡಲೆಂ
ಬಂದದಿನೇಂ
ಪಸರಿಸಿತ್ತೊ ಪೊಸವೆಳ್ದಿಂಗಳ್  ೨೩

ಎಳವೆಳ್ದಿಂಗಳ ಬಳೆದು
ಜ್ಜಳಿಕೆಯಿದೇಂ
ಕರಮೆ ಕೂರ್ತು ಕಣ್ಗಾಣದರ್ಗಂ
ಪೊಳಿಪಿನೊಳತನುವನೆ
ತಳಾ
ಮಳಕಂ
ಮಾಡಿದುದು ಬಗೆವೊಡಚ್ಚರಿಯಲ್ತೇ  ೨೪

ಎನೆ ಚೆಲ್ವುವಡೆದ ಚಂದ್ರೋದಯದೊಳ್ ಚಂದ್ರೋದಯಂ ಪುರ ಪುರಂಧ್ರೀ ಜನದ ಚಂದ್ರಿಕಾಮಹೋತ್ಸವಮಂ ನೋಡಲುತ್ಸುಕನಾಗಿ ನಾಗರಕವಿಟವಿದೂಷಕಪೀಠಮರ್ದ ಕರುಮತಿಚತುರವಿಟನಪಪ್ ಮಕರಂದನುಂಬೆರಸರಮನೆಯಂ ಪೊಱಮಟ್ಟು ವೇಶ್ಯಾವಾಟಮಂ ಮುಟ್ಟೆವರೆ –

ಮುಗುಳ್ಗಳ ಕಂಪಿದಚ್ಚನನೆಗಂಪಿದು ಪೂಗಳ ಕಂಪಿದಿಲ್ಲಿ
ಲ್ಲಿಗೆಗಳ
ಕಂಪಿದುಬ್ಬರಿಪ ಜಾತಿಯ ಕಂಪಿದು ಬೇಱೆವೇಱೆ ಸಂ
ಪಗೆಗಳ
ಕಂಪಿದೆಂಬವೊಲೊಳಿಸ್ವನಮೊಪ್ಪಿರೆ ಬಂದು ಕಂಪನೋ
ಲಗಿಸಿದುದೆತ್ತಿ
ಭೂಪತಿಗದೇನೆಲರೋ ಪೊಸಮಾಲೆಗಾಱನೋ   ೨೫

ಆ ತಣ್ಣೆಲರೆಂಬ ಕಂಪಿನ ಕಡಲನೀಸಿಯುಂ ಬೞಲದೆ ಬಂದು –

ನೆನೆದರ ಚಿತ್ತಮುಂ ನೆರೆಯೆ ಕಮ್ಮನೆ ನೋೞ್ಪರ ಕಣ್ಣ ಬೆಳ್ಪುಕ
ಮ್ಮನೆ
ಮಿಗೆ ಮಾತನಾಡುವರ ಮೆಲ್ನುಡಿ ಕಮ್ಮನೆ ಮೆಯ್ಗಳೆಯ್ದೆ
ಮ್ಮನೆ
ದೆಸೆ ಕೂಡೆ ಕಮ್ಮನೆ ಕರಂ ನವಕೌಮುದಿ ಕಮ್ಮನಾಗೆ ಕಂ
ಪಿನ
ಪೊನಲೆತ್ತಲುಂ ಪರಿವ ಪೂವಿನ ಸಂತೆಯನೆಯ್ದಿದಂ ನೃಪಂ ೨೬

ಎಯ್ದಿ ಕಾಮನ ಕಯ್ಪೊಡೆಯನೆತ್ತುವಂತೆ ಬಣ್ಣದ ಬಾಸಿಗಂಗಳಂ, ಮಿನಕೇತನಮನೆತ್ತುವಂತೆ ಬಿಳಿಯ ಬಾಸಿಗಂಗಳಂ, ಸ್ಮರಶರಚಾಪಮನೆತ್ತುವಂತೆ ಕಿಸುಗಣಿಗಿಲೆಯ ಪಸುರ ಬೆರಕೆವಾಸಿಗಂಗಳಂ, ನನೆವಿಲ್ಲನೆತ್ತುವಂತೆ ನನೆಯ ನಿಡಿಯ ದಂಡೆಗಳಂ, ಅಲರಂಬನಂಬಿನ ಮುಡಿಗೆಯನೆತ್ತುವಂತೆ ಪೊಸಗೇದಗೆಯ ಪೂಗಳಂ ಕೈಗೆಯ್ವ ಮನಸಿಜಂಗೆ ಮುತ್ತಿನ ಸರಮನೆತ್ತುವಂತೆ ಮುಗುಳ ಮಾಲೆಗಳಂ, ಚಿತ್ತಜಂ ಬರೆವ ಚಿತ್ರಪಟಮನೆತ್ತುವಂತೆ ನಾನಾವಿಧಬಂಧಬಂಧುರಂಗಳಪ್ಪ ಪೊಸಪೂಮಾಲೆಗಳನೆತ್ತುವ ಮಾಲೆಗಾರ್ತಿಯರ ಕಟಾಕ್ಷಕುಸುಮ ಮಾಲೆಗಳಂ ಸೌಂದರ್ಯಧನದಿಂ ಮಾಱುಗೊಳುತ್ತರಸಂ ಬರೆವರೆ ಪೂವಿನ ಸಂತೆಯಿಂ ಪೊಱಗೆ –

ತೆಗೆಯೆ ಚಕೋರಿ ಕರ್ಚಿ ಶಶಿಮಂಡಲದಿಂದಮೆ ಕಿೞ್ತು ಬಿೞ್ದರ
ಶ್ಮಿಗಳೆಡೆಯಂತೆ
ತೋಱೆದುದು ನುಣ್ಗಱೆಯಾ ಕೆಡೆದುನ್ಮಯೂಖಮಾ
ಲೆಗಳನೆ
ಚಂದ್ರಮಂಗೆ ಕುಡಲೆತ್ತಿದವೋಲೆಸೆದಿರ್ದರಲ್ಲಿಗ
ಲ್ಲಿಗೆ
ಮಿಗೆ ತೋರಮಲ್ಲಿಗೆಯ ಮಾಲೆಯನೆತ್ತಿದ ಮಾಲೆಗಾರ್ತಿಯರ್       ೨೭

ಆಕೆಗಳ ಕೈಯ ಮಾಲೆಯಂ ಮಾಱು ಮಾಡಿಕೊಂಡು ಬಾಯೆಂದರಸಂಗೆ ವಿದೂಷಕನಿಂತೆಂದಂ

ಅರಸುತನಕ್ಕೆ ಮೆಚ್ಚಿ ನಿನಗೀಯದೊಡೀವರೆ ತಮ್ಮ ದೀರ್ಘಕೇ
ಕರಸಿತಮಾಲೆಯಂ
ಪಿಡಿದ ಮಾಲೆಯ ಕಂಪನೆ ತಮ್ಮ ಕುಂತಳ
ಕ್ಕಿರದಳಿ
ತಮ್ಮ ಚೆಲ್ವಿಕೆಯನೀಯದೋಡಿಯದ ಸುಯ್ಗೆ ಗೆಲ್ಲಮಂ
ಸುರಭಿಸಮಿರಣಂ
ಬೆಲೆಯನೀಯದೊಡೀಯದ ಮಾಲೆಗಾರ್ತಿಯರ್       ೨೮

ಎನೆ ಮಾನವಮದನಂ ಮುಗುಳ್ನಗೆನಗುತ್ತುಂ ಸೂಳೆಗೇರಿಯಂ ಪುಗುತರ್ಪಾಗಳ್ –

ಸಮುದಂ ಸದ್ಗೃಹಷಡ್ಜಷಟ್ಚರಣಮಂದ್ರನ್ಯಾಸಮುತ್ಕೀರಮ
ಧ್ಯಮತಾರಂ
ಮೃದುತಾಡಿತೌಡವನವೋದ್ಭಿನ್ನ ಪ್ರಸೂನಂ ಸಪಂ
ಚಮ
ಚಂಚತ್ಕಳಕಂಠಕಂಪಿತರುತಂ ತಾನೆಂಬ ಹಿಂದೋಳರಾ
ಗಮೆ
ತಾನಾದ ವಸಂತಮೇನೆಸೆದುದೋ ಸಂಪೂರ್ಣಸೋಮೋದಯಂ  ೨೯

ಈ ರಾಗಮಾರ್ಗಂ ಹಿಂದೋಳರಾಗಾಂಗಸಂಭವಮಪ್ಪ ದೇಶೀಯ ಹಿಂದೋಳಮಿದು
ಶೃಂಗಾರಯುಕ್ತಮಪ್ಪುದಱಿಂ ಶೃಂಗಾರಕಾರಾಗೃಹನಪ್ಪ ನಿನಗೆ ಕೇಳಲ್ತಕ್ಕುದೆಂದು ರೂಪಕಂದರ್ಪದೇವನೊಳ್ ಮಕರಂದಂ ನುಡಿಮುತ್ತುಂ ಬರೆ ಮತ್ತೊಂದುತ್ತುಂಗ ಮತ್ತವಾರಣದೊಳ್ –

ಶೃಂಗಾರಾರ್ದ್ರಂ ಕಕುಭಜನಿತಂ ಧೈವತಂ ಸಂಗ್ರಹನ್ಯಾ
ಸಾಂಗಂ
ತಾರಂ ಸರಿಗಮಪಧನ್ಯುತ್ತರಾಭೋಗವರ್ಧ
ನ್ಯಂಗಂ
ಸಂಕಂಪಿತಮಿದಿದಱೊಳ್ ಮಧ್ಯಮಂ ಮಂದ್ರಮೆಂಬೀ
ಪಾಂಗಿಂ
ವೇಳಾವಳಿಯನೊಲವಿಂ ಪ್ರೌಢೆ ಪಾಡುತ್ತುಮಿರ್ದಳ್   ೩೦

ಅದಂ ಕೇಳ್ದೀಯಾಳಾಪಿಸುವ ವಿದಗ್ಧೆ ವಿಪ್ರಲಂಭವೈಶ್ವಾನರದಗ್ಧೆಯೆಂಬುದ ನೀ ರಾಗಪ್ರಯೋಗಮೆ ಪೇೞ್ದಪ್ಪುದೆಂದು ಸಂಗೀತಗಂಗಾಧರಂ ಸಂತತಂ ಮೆಚ್ಚುತಂ ಪೋಗೆ ಮುಂದೊಂದು ಮಣಿಮತ್ತವಾರಣದ ಮುಂದಣ ಪೊಸಬೆಸದ ಮಣಿಮಯಸ್ತಂಭಮಂ ತ್ರಿಭಂಗಿಯಿಂ ಸಾಲಭಂಜಿಕೆಯಂತೆ ನೆಮ್ಮಿ –

ಊಱಿ ಕುಚಾಗ್ರದೊಳ್ ಸೊರೆಯನೆತ್ತಿದ ಕೆಂದಳದಿಂದಮೌಂಕಿ ಪೊ
ಯ್ದೇಱಿ
ವೆರಲ್ಗಳಿಂದಿೞಿಯೆ ತಂತಿಗಳಂ ಮಿಡಿದಿಂಪು ರಾಗಮಂ
ಬೇಱೆ
ಲಯಕ್ಕೆ ಬೀೞೆ ಬಹುಳಕ್ರಿಯೆಗಳ್ ಜತಿಗೂಡೆ ಧಾತು ಮೈ
ದೋಱಿದ
ಮೆಯ್ಯೊಳಾ ಲವಣಿಯಂ ವನಜಾನನೆ ಬಾಜಿಸೋಜೆಯಿಂ      ೩೧

ಅದಂ ಕೇಳ್ದು ಮೆಚ್ಚುತ್ತುಂ ಪೋಗೆವೊಗೆ ಮುಂದೆ ಚಂದನದ ಚೌಕಿಗೆಯ ಮುಂದೆ ಮರಕತದೊರಲೊಳ್ ಮುತ್ತಿನಕ್ಕಿಯಂ ಪೊಯ್ದು ಕನಕದೊನಕೆಯಂ ನಳಿತೋಳ್ಗಳಿಂ ನೆಗಪಿ –

ಅಂಗಜನೈದು ಶರಂಗಳ ಬಂದ
ನಂಗಳ
ಪುೞೆಲ ತಳಿರುಯ್ಯಲಚ್ಚವೆ
ಳ್ದಿಂಗಳ
ಮೇಲೆ ಸಿರಿ ನಿಲ್ಕೆ  ೩೨

ಮನಮನಂಟುವ ರೂಪು ದನಿ ನಗೆ ಮೆಲ್ಪು ತಂ
ಪನುಗುಣಮುಳ್ಳ
ವಧುವಿರೆ ಮತ್ತೆ ಪೂ
ವಿನ
ಸರಲದೇಕೆ ಮದನಂಗೆ         ೩೩

ಜಾತಿ ಸೂಳೆಗೆ ರಣಭೀತನ ಪುಸಿನುಡಿ
ವಾತನ
ಖಳನ ಕೆಳೆಯನ ಬದಗನ
ಬೂತಿನ
ಮಾತು ದಿಟಮಲ್ತು         ೩೪

ಪತ್ತಿದ ಗಂಡರ ಚಿತ್ತವ ಕಿಡಲೀಯ
ದಿತ್ತುದೇ
ಕೋಟಿ ತನಗೆಂಬ ಸೂಳೆಯ
ಹಿತ್ತಿಲಲ್ಲಿರದೆ
ಸುರಭೂಜ   ೩೫

ಎಱಗಿಸುವುದದುಗೆಟ್ಟು ಪೆಱರ್ಗೆ ತಾ
ನೆಱಗೆ
ಪೋಗೆ ಪೋಗಿ ಮೂಗಱೆವಡೆದರ
ತೆಱನಪ್ಪುದೆಲಗೆ
ಬೆಲೆವೆಣ್ಣೆ  ೩೬

ಬೇಟದ ಪದನೆಂದು ಕೂಟದ ಮದವೆಂದು
ನೋಟದೊಳ್ಗಂಡರಱೆವೊಡೆ
ಹಡಹಿನ
ತೋಟಿಯೇಕೆಲಗೆ
ಬೆಲೆವೆಣ್ಣೆ          ೩೭

ಕಂಪೋಡಿದಲರ್ಗಳನಿಂಪೋಡಿದೊಲುಮೆಯಂ
ಸಂಪತ್ತು
ಪೋದ ಬೊಜಗನ ಪಿಡಿದಿರ್ಪ
ಗಾಂಪು
ನಿನಗೇಕೆ ಬೆಲೆವೆಣ್ಣೆ ೩೮

ಬಿಯಕಾರನೊಪ್ಪುವ ಪ್ರಿಯತಮನಾಗೆ ಪೆ
ರ್ಮೆಯ
ಬೆಳಸು ಫಳಮಾ ಪೆಣ್ಣು ನೋಂತ ನೋಂ
ಪಿಯ
ಫಲಮೆಲಗೆ ಬೆಲೆವೆಣ್ಣೆ          ೩೯

ನೆಲೆಮೊಲೆಯುಳ್ವಿನಂ ನೆಲೆಯುಕ್ಕು ಪೋಪವರ್ಗೆ
ಎಲೆ
ಪಣ್ತು ಬಿರ್ದ ಬಟ್ಟೆಯ ಮರನಂತೆ
ಮೊಲೆ
ಬಿರ್ದ ಬೞೆಕೆ ಬೆಲೆವೆಣ್ಡಿರ್    ೪೦

ಪರಿಹಾಸಮೊಪ್ಪಮಾದರಮೆಲೆ ಗೀತಮ
ಕ್ಕರಗೊಟ್ಟಿಯಲ್ಲದಿರೆ
ನಾಡ ಕೋಟಲೆಯ ಕೊ
ಟ್ಟರವದು
ಸೂಳೆವನೆಯಲ್ತು          ೪೧

ಎಂದಿರ್ವರೊಂದಾಗಿ ಸೂಳೆಸಿದ್ಧಾಂತಮನೊನಕೆವಾಡಂ ಮಾಡಿ ಪಾಡುವ ಪೆಂಡಿರ ವಿನೋದಕ್ಕೆ ವಿನೋದನದೀಸಮುದ್ರಂ ನಸುನಗುತ್ತಂ ಪೋಗೆವೋಗೆ –

ಕತ್ತರಿಯಡ್ಡಬೊಟ್ಟೆಸೆಯೆ ಮುತ್ತಿನ ಮೂಗುತಿಯೊಪ್ಪೆ ಚುಂಚುಗಳ್
ಕತ್ತರಿವೀಲಿಯಂತಲೆಯೆ
ಜೋಲ್ದಿರೆ ಚೊಲ್ಲೆಯಮೊರ್ಮೆ ನೀಱರಂ
ಸುತ್ತುತಮೊರ್ಮೆ
ಕನ್ನಡಿಯನೀಕ್ಷಿಸುತುಂ ಕಡೆಗಣ್ಣೊಳಾಗಳಂ
ದೊತ್ತೆಗೆ
ನೀರು ವೃತ್ತಕುಚೆಯಂ ನಡೆ ನೋಡಿದನಾ ಕುಮಾರಕಂ ೪೨

ಆಗಳೊರ್ವಳರಸನುಮಂ ಮೊಲೆಯೊಳೊಱಸಿ ಮಲೆದು ನೋಡುತ್ತುಂ –

ದುಗುಲಮನುಟ್ಟು ತೊಟ್ಟು ಪೊಸಮುತ್ತನೆ ಚಂದನದಣ್ಪನಿಕ್ಕಿ
ಲ್ಲಿಗೆಯ
ಸರಂಗಳಂ ಮುಡಿದು ಚಂಪಕಮಾಲೆಯನೆತ್ತಿ ಮೇಲೆ ತಂ
ಬಿಗಳೊಲೆದಾಡದಂತಱಿಯಲಾಗದವೋಲ್
ನವಚಂದ್ರಿಕಾಚ್ಛವೀ
ಚಿಗಳೊಡಗೂಡಿ
ಪೋದಳಭಿಸಾರಿಕೆ ಮುತ್ತಿನ ಬೊಂಬೆಯೆಂಬಿನಂ         ೪೩

ಆ ಪೋಪಳನರಸಂ ಮಕರಂದನಂ ತುಱಿಸಿ ತೋಱುತ್ತುಂ ಪೋಪಾಗಳ್ –

ನೆರೆದಳಿ ಪಾಱುವಂತಿರೆ ಕುರುಳ್ ಮೊಲೆಗಳ್ ಪೊಣರ್ವಕ್ಕಿ ಪಾಱುವಂ
ತಿರೆ
ಪೊಳೆವಕ್ಷಿಗಳ್ ಚಳಚಕೋರಯುಗಂಗಳೆ ತಳ್ತು ಪಾಱುವಂ
ತಿರೆ
ಶಿಖಿ ಪಾಱುವಂತಿರೆ ಬಳಲ್ಮುಡಿ ತಾನಲರಂಬು ಪಾಱುವಂ
ತಿರೆ
ಮಿಗೆ ಕೀಱೆ ಪಾಱೆ ಗಗನೇಚರಿಯಂತೊಲೆದುಯ್ಯಲಾಡಿದಳ್         ೪೪

ಮತ್ತೊರ್ವಳ್ –

ಬೀಱಿದುದೊಂದೆ ಬಾಯಿನಮೆ ಬಾಲಕಿ ಬಾಲಕಿಯರ್ಗೆ ಗಾಡಿಯಂ
ನೀಱರ
ಕಣ್ಗೆ ಸೋಲ್ತ ಸುತಿಗಿಂದೊಳಮಂ ನನೆವಿಲ್ಗಪಾಂಗಮೆಂ
ಬಾಱನೆಯಂಬನಾಸ್ಯರುಚಿಯಂ
ನವಚಂದ್ರಿಕೆಗಿಂಪನಾಳ್ದು ತಂ
ಪಾಱದ
ಬಾಯ ಕಂಪನೆಳದುಂಬಿಗೆ ಬೀಱುತುಮುಯ್ಯಲಾಡಿದಳ್          ೪೫

ಮತ್ತವೊರ್ವಳ್ –

ಇದು ನಿನ್ನೀಯೇಣನೆನ್ನೀಕ್ಷಣಕೆ ಸೆಣಸಿ ತಾಂ ಬೆರ್ಚಿ ನೋೞ್ಪೊಂದು ದರ್ಪ
ಕ್ಕಿದು
ನಿನ್ನೀಯಾಲವೆನ್ನಿಯಧರದಳದೊಳಾದೀರ್ಷೆಯಿಂ ಪಣ್ತ ಗರ್ವ
ಕ್ಕಿದು
ನೀನೆನ್ನಾಸ್ಯದೊಳ್ ಮಚ್ಚರಿಸುವ ಮಱುಕಕ್ಕೆಂದು ಕಾಲ್ಗಾಲೊಳೀವಂ
ದದೆ
ಚಂದ್ರಂಗುತ್ಪ್ರ ಹಾರಂಗಳನೊದೆದೊಲವಿಂದುಯ್ಯಲಾಡುತ್ತುಮಿರ್ದುಳ್        ೪೬

ಮತ್ತಮೊಂದೆಡೆಯೊಳೆಳಮಾವಿನ ತಳಿರುಯ್ಯಲನೇಱಲಂಜಿ ನಡುಗುವ ನಲ್ಲಳ ನಪೂರ್ವರೂಪಸೌಂದರ್ಯಸದನಂ –

ಇವಳೀಲೋಚನಮೆನ್ನ ಬಾಣದಿವಳೀ ಪೂರ್ವೆನ್ನ ಪೂವಿಲ್ಲ ಮಾ
ಯ್ದಿವಳೀ
ಸೋರ್ಮುಡಿಯೆನ್ನ ಕೇತನದ ಚೆಲ್ವಂಕೊಂಡೊಡೇನೊಂದು ದೋ
ಷವೆ
ಎನ್ನೋಪಳ ರೂಪನೀಕೆ ಗೆಲಲೇಕೆಂದಂಗಜಂ ಕಟ್ಟಿ ತೂ
ಗುವವೊಲ್ತೂಗಿದನುಯ್ಯಲೇಱಿಸಿ
ವಿಟಂ ವಿಭ್ರಾಂತೆಯಂ ಕಾಂತೆಯಂ      ೪೭

ಆಕೆಗಳನಾ ಕುಮಾರಂ ನೋಡುತ್ತೆನಡೆಯೆ –

ಕುಡುವುರ್ವಿಂ ಕೂಂಕುತುಂ ಕಾಮುಕರ ನಿಕರಮಂ ನೀಱರೊಳ್ ಸೋಲಮಂ ಸಾ
ಲಿಡುತುಂ
ಬಲ್ಗೈತದಿಂ ಬಾಯ್ದೆಱೆಯಿನುಗುವ ಕೆಂಪಿಂ ಮನೋರಾಗಮಂ ಮುಂ
ದಿಡುತುಂ
ಕಂದರ್ಪಕಾಲಾನಲನೆ ಪರಿವವೋಲ್ ನೀಳ್ದಪಾಂಗಂಗಳಿಂ ಕಿ
ಚ್ಚಿಡುತಂ
ಕಾಮಾರ್ತಚೇತೋವಿಪಿನದೊಳಿದಿರಂ ಪೋಯ್ತು ಕಾಂತಾಕದಂಬಂ      ೪೮

ಎಂದು ಕೌಮುದೀಪ್ರಮೋದಮಂತ್ರಾಯಾತಮದನಮದಾವೇಶಪರಿಭ್ರಾಂತಮೆಂದು ಮಾನವಮದನಂ ಮಕರಂದನೊಳ್ ನುಡಿಯುತ್ತುಂ ಪೋಗೆ –

ಸ್ಮರಕೇತುಶ್ರೀಗೆ ಮಿನಂ ನಿಱಿಸಿದಕಡೆಗಣ್ ಪುಷ್ಪಬಾಣಕ್ಕೆ ಚಿತ್ತಂ
ಬರಿವನ್ನಂ
ಕೊಳ್ವ ಕೂರ್ಪಂ ಕಲಿಸಿದ ಕಡೆಗಣ್ಕಾಮಚಾಪತ್ಮಮಂ
ರ್ಬೊರೆಯಲ್
ಕೂರ್ತಿತ್ತ ಪುರ್ವಂಗಜವಿಜಯಸಹಾತ್ವಮಂ ಚಂದ್ರಮಂಗಂ
ಬರಲಿತ್ತಾಸ್ಯೇಂದುಬಿಂಬಂ
ತಮಗೆನೆ ಕರಮೊಪ್ಪಿತ್ತು ವೇಶ್ಯಾಸಹಸ್ರಂ      ೪೯

ಅಲ್ಲಿಯೊರ್ವಳ್ ಕೆಳದಿಯ ಕಾಲ ಮೇಲೆ ಕವಿದು ಬಿರ್ದು –

ನೆಱೆ ಬಂದೀ ಮಧುವೆನ್ನನಂಗಭವನೆನ್ನಂ ಚಂದ್ರನೆನ್ನಂ ದಲೆಂ
ದಱಿಯೆಂ
ಕೇಳವನೆನ್ನನೆಂದಱಿಯದಂಗೀಗಳ್ ವಿಯೋಗಾರ್ತೆಯಂ
ನೆಱೆ
ಬಂದೀ ಮಧುವೆನ್ನನಂಗಭವನನ್ನಂ ಚಂದ್ರನೆನ್ನಂ ಕೊಲಲ್
ತಱಿ
ಸಂದಿರ್ದಪರಾತನೊಳ್ ನೆರಪು ನೀಂ ಶ್ರೀರೂಪಕಂದರ್ಪನೊಳ್    ೫೦