ಶ್ರೀಕುಲತಿಲಕಂ ಸ್ಮಿತಪ
ದ್ಮಾರಕನಭಿಜಾತಸುರಭಿವಲ್ಲೀಲಾಸ್ಯಂ

ಮಾಕಂದಂ
ಶುಭವಕುಳನ
ಶೋಕಂ
ವನದೊಳಗೆ ತೊಳಪುದೊಂದಚ್ಚರಿಯೇ       ೧

ಮಲ್ಲಿಗೆಯಲ್ಲಿ ಪೂತ ಲತೆಯಲ್ಲಿ ಮುಗಿಲ್ಗಡವಲ್ಲಿ ಮಾಲತೀ
ವಲ್ಲರಿಯಲ್ಲಿ
ಸೋಗೆನವಿಲಲ್ಲಿ ಸುಗಂಧಸಮೀರನಲ್ಲಿ ಮಾ
ವಲ್ಲಿ
ಮದಾಳಿಯಲ್ಲಿ ಗಿಳಿಯಲ್ಲಿ ಪಿಕಾವಳಿಯಲ್ಲಿ ವಲ್ಲಿಕಾ
ರಲ್ಲಿ
ಬಸಂತವಲ್ಲಿಯೆನೆ ಕೊಲ್ಲದೆ ಕಾಮಿಯನಾವನಂ ವನಂ      ೨

ಪೊಸದಳಿರುಟ್ಟುದುಜ್ಜಳಿಸೆ ಸೋಲಿಸೆ ಪೀಲಿಯ ಕರ್ಣಪೂರಮಾ
ನಿಸೆ
ನವಫುಲ್ಲಕಂಕಣಮೊಡಂಬಡೆ ಕತ್ತುರಿಯಣ್ಪು ತೀವೆ ತೊ
ಟ್ಟಸುಕೆಯ
ಪುಷ್ಪಮಂಜರಿಯ ಗುಂಜಿಯ ಭೂಷಣಮಂ ವನೇಚರೀ
ವಿಷರದೆ
ವೇಷದಿಂದಮೊಸೆದಾಡುವರಾ ವನದೊಳ್ ಮೃಗಾಕ್ಷಿಯರ್       ೩

ಎನಿಪಾ ವನದೊಳ್ ವಿನಯವನವಸಂತಂ ವಸಂತನಂತೆ ಸಂತಸದಿಂ ಕಿಱಿದಂತರಮಂ ಬರುತ್ತುಮಿರೆ –

ಸೊನೆ ಸುರಿಯುತ್ತುಮಿರ್ದುಪುದು ಕೆಂದಳಿರ್ಗೊಂಬಿನೊಳೀ ಬೞಲ್ದ ಮಾ
ವಿನ
ಪೊಸಗೊಂಚಲೊಳ್ ಬಱುದೊಡಂಬೆಗಳಿರ್ಪುವೆ ಕೞ್ತು ಸೂಸೆಯುಂ
ವನಜಮರಲ್ದುವೊಂದೆರಡು
ಕೈರವಮೊಂದೆರಡೀಗಳೊಯ್ಯನೊ
ಯ್ಯನೆ
ಮುಗಿಯುತ್ತುಮಿರ್ದಪುವು ಕೂಡೆ ಕಲಂಕಿದ ಪೂಗೊಳಂಗಳೊಳ್   ೪

ಅದಲ್ಲದೆಯುಂ –

ಪಿಡಿದೊಳ್ಗೊಂಬಿನ ಕೆಯ್ಯಕುಂಕುಮರಸಂ ವಕ್ತ್ರಾಂಬುಜಸ್ವೇದಮಂ
ತೊಡೆದೀಡಾಡಿದ
ಪಲ್ಲವಂ ಕುರವಕಸ್ಕಂಧಂಗಳೊಳ್ ಕೋರಕಂ
ಬಡೆದುದ್ಯತ್ಕುಚಕುಂಭದಣ್ಕೆ
ಪೊಱಮಟ್ಟಂಭೋಷಂಡಂಗಳಿಂ
ನಡೆದಿರ್ಪಾಱದ
ಗುಜ್ಜುವಜ್ಜೆಗಳಿವೇನೆತ್ತಂ ಬೆಡಂಗಾದುವೋ      ೫

ಎಂದು ಸರುಭಿಸಮಯೋಚಿತಕುಸುಮಾಪಚಯಪ್ರಕಾರಮಲ್ತೇನಾನುಮೊಂದು ನಿಮಿತ್ತಂ ತರುಣೀಜನಂ ತರುಣಕಿಸಲಯಕುಸುಮಕುಮುದಕಮಳಮೃಣಾಳನಾಳಂಗಳನಾಯ್ದುಕೊಂಡು ನಿಲ್ಲದೆ ಪೋದಂದಮೆಂದು ಮಕರಂದಂ ಭಾವಿಸುತ್ತುಂ ಮತ್ತಮಿನಿಸಂತರಮಂ ನಡೆದು ನಿರವಿಸೆ –

ನನೆ ಮಸಿವಣ್ಣಮಾದುವು ಮುಗುಳ್ ಮಿಗೆ ಸೀದುವು ಬಂಡು ಸೋರ್ದ ಪೂ
ವಿನ
ಪೊಸಗೊಂಚಲುಂ ಕೊರಗಿ ಪೋದುವು ಕೋರಕಪಲ್ಲವಂಗಳುಂ
ಮೊನೆ
ಪೊಗೆಯುತ್ತುಮಿರ್ದಪುವು ಬೀಸುವೆಲರ್ ಬಿಸುಸುಯ್ಯನೆತ್ತಿ ಸೋಂ
ಕಿನೊಳಳುರ್ದಪ್ಪುದೀ
ಬನದೊಳಿರ್ದಪರಕ್ಕುಮನಂಗತಾಪಸರ್

ಎಂದು ರಾತ್ರಿವೃತ್ತಕಮುಮಂ ಭಾವಿಸುತ್ತುಮಿದು ಮದೀಯವಯಸ್ಯಂ ವಲ್ಲಭಾ ವಿರಹವಹ್ನಿ ವಿಲಸಿತಮಾಗಲೆವೇೞ್ಕುಮೆಂದುಮನುಮಾನಿಸುತ್ತಾಮಾನೀ ಬನಕ್ಕೆ ಮನೋಜಜ್ವಾಲಾವಲೀಢನಂ ತಗಂದುದು ಬೆಟ್ಟಬೇಸಗೆಯಿಂ ಬೆಂದ ಜನಕ್ಕೆ ಕಾೞ್ಕಿರ್ಚಂ ತಂದಂತಾದುದಿಲ್ಲಿಗೀ ಸ್ಮರಪರವಶಂ ಶಿಶಿರೋಪಚಾರಮಂ ಬಯಸಿ ಬಂದುದು ಬಡಬಾಗ್ನಿಯ ಕಡುಗೊರ್ಬಿದ ಕಡಲಲ್ಲಿಗೆ ನೀರಡಿಸಿ ಬಂದಂತಾದುದೆಂದು ಬಗೆಯೊಳೆ ನಗುತ್ತುಮರಸನಂ ಮಗುಳ್ಚಿ ಪುಷ್ಪಪಲ್ಲವಪಯೋಜಾತನಿಕುರುಂ ಬಮಪ್ಪ ತದ್ವನಪ್ರದೇಶಕ್ಕೆ ಕೊಂಡುಪೋದಂ ಅಲ್ಲಿಯಲ್ಲಿಂ ಮುನ್ನಮೆ –

ಅತಿಮಾತ್ರಂ ಚಕ್ರವಾಕಂಗಳ ವಿರಹಮಹೋಗ್ರಾನಳಂ ತನ್ನ ಚೇತೋ
ಗತಮಾದಂತಾಗಾಳುರ್ಬೆರ್ದ
ತನುವಿರಹದಿಂ ಬೇವಳಂ ತಂದು ಲೀಲಾ
ವತಿಯಂ
ಪದ್ಮಾವತೀದೇವಿಯ ಪದಕಮಲೋಪಾಂತದೊಳ್ ನೂಂಕಿ ಬಾಷ್ಪ
ಪ್ಲುತನೇತ್ರಾಂಭೋಜೆಯರ್
ತತ್ಸಖಿಯರನಿಬರುಂ ಮೆಯ್ಯನೀಡಾಡಿ ನೀಡುಂ       ೭

ದೇವಿ! ನೀನಪ್ಪೊಡನವರತ ವರಪ್ರಾಸಾದವರ್ಷಿಯುಮಮೋಘ ವಚನೆಯುಮೀಕೆಯುಂ ತ್ವಚ್ಚರಣೈಕಶರಣೆಯುಮಕರುಣಕರುಣೋದ್ರೇಕಕಾರಣೆಯುಮಪ್ಪುದಱಿಂ ನೀನೀಕೆಯಂ ಕಾವುದೆಂದು ಪೇೞ್ವುದುಂ ಕೌಮುದಿನಿಗೆ ಕುಮುದಿನಿಯಂ ಕೆಯ್ಯೆಡೆವೇೞ್ವಂತಕ್ಕುಮಾದೊಡಂ ನೀನಂತೆ ಕಾಡಿ ಕೊಲ್ಲದೆ ನಲ್ಲನೊಳ್ ಕೂಡಿ ಕಾವುದೆಂದಾ ಪಾದಪೀಠದೊಳ್ ಪೊರಳ್ದು ಪರಕೆಯಂ ನುಡಿದು ದೇವಿಯ ಮೆಯ್ಯ ಮಳಯಜಮಂ ಬಳಿದುಕೊಂಡಬಲೆಯಂಗದೊಳ್ ತೊಡೆದು ಮಕುಟದ ಪೂವಂ ಮುಡಿಯೊಳ್ ಸೆಕ್ಕಿ ರಕ್ಷೆಗೊಟ್ಟಲ್ಲಿಂದಮೆತ್ತಿಕೊಂಡು ಪೋಗಿ ಪೊಸವೆಳ್ದಿಂಗಳಿಂ ಪೊಱಪೊಣ್ಮಿದಗೊಂಚಲ್ವನಿಗಳಿನಾಲಿಕಲ್ಲ ಜಗಲಿಯಂತಿರ್ದ ಚಂದ್ರಕಾಂತಶಿಲಾತಲದೊಳ್ ಕೆಳದಿಯನಿರಿಸಿ ಕಳಾವತಿಯನಿರವೇೞ್ದು ತತ್ಸಖೀನಿಕರಂ ಶಿಶಿರೋಪಚಾರಮಂ ಮಾಡಲ್ ಮಸಗಿ ಮಿಸುಕಿ ಮಿಸುಗುವೆಳದಳಿರ್ಗಳುಮಂ ಮಂಜರಿಗಳುಮಂ ತಿಱಿದು ತರಲೆಂದು ಪೋಗಿ –

ಎಳದಳಿರೆಂದು ಕೊಂಬಿನೊಳೆ ಪಾಯ್ದೆಳನೇಸಱ ಕಾಂತಿಗಳ್ಗೆ ಪೂ
ಗೊಳದೊಳಗಬ್ಜಮೆಂದಡರೆ
ಮಾರ್ಪೊಳೆವಾತ್ಮಮುಖಾಂಬುಜಕ್ಕೆ ಕೋ
ಮಳಬಿಸಕಾಂಡಮೆಂದೆಸೆವ
ತಮ್ಮಯ ತೋಳ ನೆೞಲ್ಗೆ ಕೆಯ್ಯನೊ
ಯ್ದೆಳಸಿ
ಬೞಲ್ದರಾರ್ತವಿತತಾನಳದಗ್ಧೆಯರಲ್ಲಿ ಮುಗ್ಧೆಯರ್       ೮

ಮುಗಿವ ಕುಮುದಂಗಳಿಂ ಮಿಗೆ
ಮಗಮಗಿಸುವ
ತನ್ನ ಬಾಯ ಕಂಪಿಂಗಳಿಗಳ್
ಮೊಗಸುತಿರೆ
ತಿಱಿಯಲೀಯದೆ
ತಗುಳ್ದುವೆಂದಗಿದು
ತೆಗೆದಳೊರ್ವಳ್ ಕರಮಂ         ೯

ಮತ್ತಮೊರ್ವಳ್ –

ನೋಡಿ ನಸು ಬಿರ್ಚುವೆಸೞ್ಗಳೊ
ಳಾಡುವ
ತುಂಬಿಗಳೆ ದನಿಗಳಿಂದಂ ತನ್ನೊಳ್
ಕಾಡಿದುದೆಂದೇ
ತಿಱಿಯಲ್
ನೀಡಳೆ
ಪಂಕಜಕೆ ಮುಗ್ಧೆ ಕರಪಂಕಜಮಂ     ೧೦

ಅಂತೆಸೆವ ಮುಗ್ಧೆಯರುಮತಿಶಯವಿದಗ್ಧೆಯರು
ಮಲರ್ಗೊಳಗಳೊಳ್
ಪೊಕ್ಕು ಬಿಸಲತೆಗಳಂ ಮಿಕ್ಕು
ಪಾವಸೆಗಳಂ
ಪೞಿದು ನೀರ್ವೂಗಳಂ ತಿಱಿದು
ಕೊಳವೇರ್ಗಳಂ
ಕಿೞ್ತು ಮೊಱೆವ ನೆವದಿಂದೞ್ತು
ಮುಸುಱುವಳಿಯಂ
ಬಡಿದು ಕಮಲದೆಲೆಗಳನುಡಿದು
ಕರೆಯುತಿರೆ
ಕಡುಬೆರ್ಚಿ ಯಂಚೆಗೌಡಂ ಕರ್ಚಿ
ಯಡಿಗಳಂ
ತಡವಿಟ್ಟು ಕೊಳದಿಂದೆ ಪೊಱಮಟ್ಟು
ಕೊಳ್ಕು
ಬಳ್ಕೆನೆ ನಡೆದು ನೊಸಲ ಬೆಮರಂ ತೊಡೆದು
ಬನಮಂ
ತೊೞಲ್ದಂದು ತುದಿಗಾಲ್ಗಳಿಂ ನಿಂದು
ತೊಡೆ
ನಡುಗೆ ನಡು ನಿಮಿರೆ ಕೊಂಬಿಂಗೆ ಕೆಯ್ನಿಳ್ಕಿ
ಬಿಟ್ಟಮುಡಿ
ಬರಿಗೆ ವರೆ ಮುರಿದು ಲತೆಗೊಳವಳ್ಕಿ
ಮಧುವಿಂ
ಕುರುಳ್ ನಾನೆ ಪೂಗೊನೆಗಳಿಂತಾನೆ
ಮೊಲೆ
ಕಲಿಸೆ ಗೊಂಚಲೊಳು ಪೂಗುಡಿಗೆ ನಸುಬಾಗಿ
ಮೆಟ್ಟಿದೆಳಗೊಂಬಿನೊಳೆ
ತಳಿರೊಗೆಯೆ ಕೆಯ್ನೀಡಿ
ಮಿಸುಗುವಸುಗೆಯ
ತಳಿರ್ಗಳ ತಿಱಿದು ಪೊಱೆಮಾಡಿ
ಸೋಂಕೆ
ನೆಗೆದಂಕುರಂಗಳ್ ತಾಗೆ ಕಡುನೊಂದು
ಸೀತ್ಕರಿಸಿ
ಕರತಲದಿನೊರಸೆ ಮೊಲೆಗಳನಂದು
ಕುರವಕದ
ಕಳಿಕೆಗಳನುಡಿದುಡೆಗಳೊಳ್ ಪಾಯ್ದು
ಜಲಜದಳದೊಳ್
ತೀವಿ ಪಸುರ್ನನೆಯನಾಯ್ದಾಯ್ದು
ವಕುಳಕುಳದೊಳ್
ಚೆಲ್ಲಿ ಪಲ್ಲಚವಿಯಂ ಪರಿದು
ಬಿರಿಮುಗುಳ್ಗಳಂ
ಕೊಯ್ದು ಬಾೞೆಯೆಲೆಯೊಳ್ ಸುರಿದು
ಕಱುಕೆಯೆಸೞಿಂ
ಕಮಳನಾಳದಿನವಂ ಸುತ್ತಿ
ಕಪ್ಪುರವರಂಗಳೆಲೆಗಳನುಗಿದು
ಪೊರೆಯೆತ್ತಿ
ಪೊಳೆವ
ಬಟ್ಟಲನೆಡದ ಕೆಯ್ಯೊಳೊಯ್ಯನೆ ಸಾರ್ಚಿ
ಪಚ್ಚೆಯ
ಪರಲ್ಗಳಂದದ ಪಗಿನನಿರದುರ್ಚಿ
ತಳಿರ
ಮುಡೆಯೊಳೆ ಮಲ್ಲಿಗೆಯ ಮುಗುಳ್ಗಳನೊಟ್ಟಿ
ಮಿಕ್ಕ
ಮುಗುಳಂ ಮೇಲುದಿಂ ಮೊಟ್ಟೆಯಂ ಕಟ್ಟಿ
ಪೂಗೊಂಚಲಂ
ಮುಱಿದು ಮೋಳಿಗೆಗಳಂ ಬಿಗಿದು
ಕಮಳದುತ್ಪಳದ
ಕಾವಿನ ಪೊಱೆಗಳಂ ಪೊತ್ತು
ಕುಚಭರದಿನೊಂದನಾಂತೊಂದಂ
ಪೆಗಲ್ಗಿತ್ತು
ಚೂತ
ಪಲ್ಲವಚಂದನಂಗಳಂ ತೞ್ಕೈಸಿ
ಬಿೞ್ದ
ಬಾಳಮುಮನೆಲೆಯುಮನಾಯ್ದು ತೞ್ಕೈಸಿ
ಸೋರ್ದ
ಮುಡಿಗಳ್ ಸಡಿಲಿ ಬಿಡೆ ಬೆನ್ನನಪ್ಪಳಿಸೆ
ಕೊಡದನ್ನಮಪ್ಪ
ಮೊಲೆಗಳ್ ಜಡಿಯೆ ನಡೆಗಲಿಸಿ
ಕುಸಿದ
ಕೊರಲಿಂಗಬಾಗೆ ಘನನಿತಂಬಂ ಪೊಡರೆ
ಕಂಗಳೊಳ್
ಕೆಂಪಡರೆ ಕಾಲ್ ಬಳೆಯೆ ನಡು ನಳಿಯೆ
ಕೞಲುತುಂ
ಬೞಲುತುಂ ದಡದಡಿಸಿ ನೀರಡಸಿ
ಸುಯ್ಯುತುಂ
ಪೊಯ್ಯುತುಂ ನೀರ್ದಡಿಗೆ ಮರದಡಿಗೆ
ಸಾರುತುಂ
ಮಾರುತುಂ ಕುಸುಮಸುಕುಮಾರಿಯರ್
ಸುಲಲಿತಾಕಾರೆಯರ್
ಶಿಶಿರೋಪಚಾರಮಂ
ಕೆಳದಿಗುಪಚಾರಮಂ
ಮಾಡುವುದ್ಯೋಗದಿಂ ಬಂದರತಿವೇಗದಿಂ          ೧೧

ಅಂತು ಬರ್ಪಾಗಳ್ –

ಮದಹಂಸೀನಾದಮಂ ಮೀಂಗಳನಮಳಜಳೌಘಂಗಳಂ ನೂಪುರೋದ್ಯ
ನ್ಮೃದುನಾದಂ
ಪ್ರಸ್ಫುರಲ್ಲೋಚನಮವಯವಸಂಪೂರ್ಣಲಾವಣ್ಯಮಂದು
ಬ್ಬದೆಗಂ
ಬೋಲ್ತೊಪ್ಪೆ ಲೀಲಾವತಿಯ ವಿರಹಮಂ ಮೞ್ಗಿಸಲ್ ಬಂದ ಗಂಗಾ
ನದಿಬಂದಂತೊಪ್ಪೆ
ಬಂದಳ್ ಧವಳಕಮಳಮಂ ಕೊಂಡು ಕಂಜಾಸ್ಯೆಯೊರ್ವಳ್

ಮತ್ತಮೊಬ್ಬಳ್ –

ಅಮರ್ದಿರೆ ದುಕೂಲದುಳ್ಳುಡೆ
ಯಮಳ್ವ
ಮಂಜಿನವೊಲೆಯ್ದೆ ಕೊರಗೆ ಮುಖಾಬ್ಜಂ
ಹಿಮಸಮಯಮಯಶ್ರೀವೊಲ್

ಕುಮುದಂಗಳನಾಂತು
ಬರ್ಪಳೇನೊಪ್ಪಿದಳೋ        ೧೨

ಕೆಳವಿಳಸತ್ಕಳಾಪಿನಿಗೆ ಪೀನಪಯೋಧರಭೂರಿಭಾರೆಗು
ಜ್ವ್ವಳಚಪಾಳಕ್ಷಿಗಾದುದು
ಗಡಂ ಗಜತಾಪಮದೆಂತು ಸೈರಿಪೆಂ
ಮುಳಿಯದೆ
ಪೇೞಿಮೆಂದಿರದೆ ಬರ್ಪ ಘನಾಗಮಲಕ್ಷ್ಮಿಯಂತೆ ಶೀ
ತಳಕರಕಾಂಬುವಾಹಿನಿ
ಸರೋವರದಿಂ ಬರುತಿರ್ಪಳೊಪ್ಪಿದಳ್

ಸುರಭಿಶ್ವಸಿತಾಕುಳೆ ಮಧು
ಕರಕುಂತಳೆ
ಮೃದುಳಪಾಣಿಪಲ್ಲವೆ ಲತೆಯಂ
ತಿರೆ
ತನ್ವಿ ಬರುತುಮೆಸೆದಳ್
ಬಿರಿಮುಗುಳಂ
ಪೊತ್ತು ಕುಸಿಯುತುಂ ಮತ್ತೊರ್ವಳ್    ೧೪

ಚಳಿತಂ ವಕ್ಷೋಜಚಕ್ರಾಹ್ವಯಮಮರ್ದಿರೆ ತುಳ್ಕಾಡೆ ಹಾರಾಂಶುನೀರಂ
ನಳಿತೋಳೆಂಬೂರ್ಮಿಯಿಂ
ತಾವರೆಯನುರದೆಗೊಂಡಂಚೆ ಮಂಜೀರಿಕಾಮಂ
ಜುಳನಾದಕ್ಕಾಗಿ
ಬೆನ್ನೊಳ್ ಕೆಳದಿಯ ವಿರಹೋಗ್ರಾಗ್ನಿಯಂ ಮೞ್ಗಿಸಲ್ ಪೂ
ಗೊಳನಂ
ತೞ್ಕೈಸಿ ತರ್ಪಂತಸದಳಮೆಸೆದಳ್ ಕಾಂತೆ ಮತ್ತೊರ್ವಳಾಗಳ್         ೧೫

ಅಂತು ಬಂದು ಸೌಂದರ್ಯಕ್ಕೆ ಸೆಣಸಿ ಬರ್ಪ ವಸಂತಲಕ್ಷ್ಮಿಯ ಸರ್ವಸ್ವಮಂ ಸೂಱೆಗೊಳ್ವಂತೆ ತಂದ ಬನದೊಡಮೆಯಂ ಮುಂದಿಡುವುದುಂ ಕಂಡು ಕಳಾಪತಿ ಎನ್ನತಾಯ್ವಿರ್ ತಂದಿರೆಂದು ತಂದಿರಂತೆ ಬೞಲ್ಕೆಯಂ ಬಗೆಯದೆ ಸಂತಾಪಶಾಂತಿ ಕರಂಗಳಪ್ಪ ಪರಿಕರಂಗಳಂ ಕೈಗೆಯ್ಯೊಳೆ ಸಮೆದು ನಿಮ್ಮ ಕೆಳದಿಗೆ ತಡೆಯದೆ ತಣ್ಪುಗೆಯ್ಯಿಮೆಂಬುದುಮಾಕೆಗಳ್ ಪೆಸರ್ವೆಸರೊಳೆ ಕರೆದು –

ಮುರಿ ಬಾಸಿಗಮಂ ಮುಗುಳ್ಗಳ
ಕರಡಿಗೆಯೊಳ್
ಪಿಂಡು ಸರಲಪಲ್ಲವರಸಮಂ
ವಿರಚಿಸು
ತಳಿರಂ ಬಾೞೆಯ
ತಿರುಳೆಲೆಯಿಂದೆಲರನಿಟ್ಟು
ಬಿಜ್ಜಣಿಗೆಗಳಿಂ     ೧೬

ಜಳಜಗಳಂ ತೊಳೆ ಮಳಯಜ
ಜಳದೆಳಗಳಿಕೆಗಳನರ್ದು
ಹಿಮರಸದೊಳ್ ಶೀ
ತಳಿಕೆಗಳ
ಮೇಲೆ ತೆಳ್ಳನೆ
ತಳಿ
ಕೆಲದೊಳ್ ಕುಳಿರ್ವ ಶೀತಸಾರಾಂಬುಗಳಂ       ೧೭

ಬೇಱಿರಿಸರಲಂ ಪದವಡಿ
ಸಾಱಿದ
ಚಂದನಮನುದಕಯಂತ್ರದ ಗಿಳಿಯಂ
ಪಾಱಿಸು
ದಿ‌ಕ್ಚಂದ್ರಿಕೆಯಂ
ಕಾಱಿಸು
ಬಿಂದುಗಳ ನಿಮ್ಮ ಮಣಿಪುತ್ರಿಕೆಯಿಂ ೧೮

ಕಿಸುಗಲ್ಲ ಕಾಂತಿಯೆಂಬೆಳ
ವಿಸಿಲಂ
ಕುಡಿಯಿಸಿ ಚಳಚ್ಚಕೋರಿಗಳಿಂ ಕಾ
ಱಿಸು
ಬೆಳ್ದಿಂಗಳನಳಿಗಳ
ಮುಸುಂಬಿನಿಂ
ಪನಿವ ಮಧುಗಳಂ ಪಿಡಿ ತಳಿರೊಳ್    ೧೯

ನನೆಯ ತೊಡವಂ ಮಾಡೀ ಪಂಕೇಜಪತ್ರಮನೊತ್ತು ಮಾ
ವಿನ
ತಳಿರುಮಂ ಪಾಸೀಪೂವಿಂದೆ ಪಚ್ಚಡಿಸುತ್ತು ಮೀ
ದಿನಕರಕರಂಗಳ್
ನೋಡಲ್ ಬಂದುತ್ಪಲಮಾಲೆಯಂ
ಪನಿಯಿಸದಿರೀ
ಜ್ಯೋತ್ಸ್ನಾಜಾತಿಸ್ಮಿತಂಗಳನಬ್ಜದೊಳ್          ೨೦

ಸರಂದೆಗೆಯರಲ್ದ ಮಲ್ಲಿಗೆಯ ಪೂಗಳಂ ಬೇಗದಿಂ
ತರಂಬಿಡಿದ
ಗಂಧತೋಯಕಲಶಂಗಳಂ ತಣ್ಪುಗೆಯ್
ಪೊರೞ್ಚು
ಪಿರಿದಪ್ಪ ಕಪ್ಪುರದ ಧೂಳಿಯೊಳ್ ಪುಷ್ಪಚಾ
ಮರಂಗಳನಲರ್ಚು
ಕೃತ್ರಿಮಸುಧಾಂಶುವಿಂ ನೆಯ್ದಿಲಂ ೨೧

ಅಂತುಮಲ್ಲದೆಯುಂ –

ನಾದಿಪಂಚೆಗೆ ಸರೋರುಹಮಂ ನೀ
ಡೋದುತಿರ್ಪ
ಗಿಳಿಗೀಯಗೆ ಪಣ್ಣಂ
ಕಾದಿ
ಕೇಗುವ ನವಿಲ್ಗಹಿವೋಲಿಂ
ಬಾದುದಂ
ಕುಡುಗೆ ನೆಯ್ದಿಲ ಕಾವಂ  ೨೨

ಕರೆವ ಕೋಗಿಲೆಗಿಕ್ಕುಗೆ ಮಾವಿನಂ
ಕುರವನೀಗಳೆ
ಸೂಸುಗೆ ಪೂಗಳಂ
ಮೊರೆವ
ತುಂಬಿಗೆ ತಾಗಿವಱಾಱಿದಿಂ
ಬರಕೆ
ಬೆಚ್ಚಿದಪಳ್ ಸಖಿ ಕಾಣಗೆ      ೨೩

ಎಂದು ಕೃತಪರಿಕರೆಯರಾಗಿ ಶಿಶಿರೋಪಚಾರಮಂ ಮಾಡುವಾಗಳ್ –

ಪೊಸಪೂವನಿಱಿಸಲಾಕೆಯ
ಬಿಸುಸುಯ್ಯಿಂ
ಗರಿಲೆನುರಿಯೆ ಸಂಭ್ರಮದಿನದಂ
ಬಿಸುಟು
ಸೆಱೆಗೊಂಡು ನಿಜಕರ
ಕಿಸಲಯಮಂ
ಶಿಶಿರಜಲದೊಳರ್ದಿದಳೊರ್ವಳ್        ೨೪

ನೀರನದಂ ನೀರಡಸಿದ
ಕೀರಂ
ನಸುದುಡುಕೆ ಬೇಯೆ ಚಂಚುಪುಟಂ ಕೀರ್
ಕೀರೆನುತ
ಪೋಯ್ತು ಕೊಂಬಿನ
ಕೋರಕಮಂ
ಕರ್ಚಿ ಸುಟ್ಟುದೆನ್ನದೊ ವಿರಹಂ  ೨೫

ಮತ್ತಮೊರ್ವಳ್ –

ತಂದಿಕ್ಕಿದರಾರೆರ್ದೆಯೊಳ್
ಮಾಂದಳಿರಲ್ಲದುದನೆಂದು
ಸುದತಿಯ ಸುಯ್ಯಿಂ
ಕಂದಿದೊಡಬಳೆ
ತಮಾಳದ
ಪಂದಳಿರೆಂದೆೞೆದು
ಕಳೆದಳಾಮ್ರದ ತಳಿರಂ  ೨೬

ಬಾಡಿದಪುದೆಂದು ಮರನಂ
ಸೂಡುವ
ಬಾಸಿಗದ ಮೇಗೆ ತಳಿವಂತೊರ್ವಳ್
ಸೂಡಿರ್ದೆಳೆಯಳ
ಮೆಯ್ಯೊಳ್
ಕೋಡುವ
ತಿಳಿನೀರನಬಲೆ ತಳಿಯುತ್ತಿರ್ದಳ್ ೨೭

ಕೇಸುರಿಯನುಗುಳ್ದುದೋ ನಿ
ಶ್ವಾಸದಿನಿವಳೆರ್ದೆಯ
ಮದನಶಿಖಿಯೆನೆ ಕುಚದೊಳ್
ಸೂಸಿದಶೋಕೆಯ
ತಳಿರ್ಗಳ್
ಬೀಸುವ
ಬಿಜ್ಜಣಿಗೆಯೆಲರಿನೇನಗ್ಗಳಮೋ      ೨೮

ತರತರದೆ ತರಳಗುರುತರ
ಕರಕಾಂಬುಕಣಂಗಳಮರ್ದುವೆಡೆಯೊಳ್
ಕಾಯ್ಪಿಂ
ಕರಗಿದುವೊ
ಕೊರಲ ಮುತ್ತಿನ
ಸರಮೆನೆ
ಸರಸಿರುಹಸರಲದಳ ಲೋಚನೆಯಾ        ೨೯

ವಿರಹಶಿಖಿಯಳುರೆ ಜಳಶೀ
ಕರನಿಕರಮೆ
ಬಲಿತ ತೆಱದಿನಬಲೆಯ ಮೆಯ್ಯೊಳ್
ಕರಮೆಸೆದಿರ್ದುವು
ಸಖಿಯರ್
ಕರತಳದಿಂ
ತಳಿಯೆ ತೊಳಪ ಮುತ್ತಿನ ಮುಱಿಗಳ್     ೩೦

ಅಳುರ್ದಪುವೆಳವೆಱೆ ತಣ್ನೆೞ
ಲಳುರ್ದಪುದಾನಳುರದಿರ್ಪುದೇನೆಂಬವೊಲಾ

ಕೆಳದಿಯರ
ತಳಿವ ಶೀತಳ
ಜಳಮಳುರ್ದುದು
ಕಾಯ್ದು ಕಾಯತಾಪದಿನವಳಾ      ೩೧

ತರುಣಿಯ ವಿರಹಾನಳನಿಂ
ಕರಿಂಕು
ತಗುಳ್ದಲರ ದೂಳಿ ದೂವೆಯ ತೆಱಮೋ
ಸರಿಸೆ
ಮಿಸುಕಿದುವು ಬೆಳುಪಿಂ
ದೊರೆದಾವಗೆದೆಱೆದ
ಕೊಡಗಳೆನೆ ಮೊಲೆಗೊಡಗಳ್    ೩೨

ಮಳಯಜಜಳಭರಶೀತಳ
ಕಳಶಮನೇಂ
ಕುಚದೊಳೊತ್ತುತಿರ್ದಳೊ ಹೃದಯಾ
ನಳನೊಳಳವಟ್ಟು
ತೋಱಲ್
ಕಳನೇಱಿಸಿದಂತೆ
ಕರ್ಕಶಾಶ್ಮಾಂತಿಕದೊಳ್ ೩೩

ತನ್ನಂ ಬೇಯಿಪ ಶಶಿಯಂ
ಪನ್ನತನೆಂದೆರ್ದೆಯ
ಕಿಚ್ಚಿನೊಳ್ ತುಱುಕುವವೋಲ್
ಕನ್ನೆ
ನವಚಂದ್ರಕಾಂತದ
ಕನ್ನಡಿಯಂ
ಪೊತ್ತುವೆರ್ದೆಯೊಳೊತ್ತುತ್ತಿರ್ದಳ್          ೩೪

ಎನ್ನ ಕರಂಗಳಿಂದಿನಿತವಸ್ಥೆಗೆ ತಂದೆನಿವಳ್ಗೆ ಮಾೞ್ಪುದೇ
ನಿನ್ನೆನಗೀವುದೋ
ಬೆಸನನೀಗಳೆ ಕೊಂದಪೆನೆಂದು ಚಂದ್ರಮಂ
ಬಿನ್ನವಿಸಲ್ಕೆ
ಚಿತ್ತಜನ ಸಾರ್ಕೆಗೆ ಬಂದವೊಲೊತ್ತಿಕೊತ್ತಿಕೊಳ್ವ
ಣ್ಗನ್ನಡಿ
ಕನ್ನೆಯುಳ್ಳೆರ್ದೆಯ ಬೆಂಕಿಯೊಳೆಂ ಕಡುಗಂದಿ ತೋಱಿತೋ       ೩೫

ಸುಡುಪುಡಿ ನಾಳಿಯರ್ ತಳಿದ ನೀರ್ವನಿಗಳ್ ಬಿಸುಸುಯ್ಯ ಗಾಳಿಯಿಂ
ದೆಡೆಯೊಳ್
ಬತ್ತೆ ಬೇವೆರ್ದೆಯೊಳಂದೆರ್ದೆಯೊತ್ತುವ ಚಂದನದ್ರವಂ
ಸಡಿಲದೆ
ಸೀವ ಪೂವಸೆಯ ಪೆರ್ವೊಗೆಯಿಂ ಕಳಿತಪ್ಪ ಕಣ್ಣ ನೀ
ರ್ಗಡಲೊಳಮಾಱದಾಯ್ತಬಲೆಯಂಗಜತಾಪಮದೇನೞುಂಬಮೋ
        ೩೬

ಒಂದು ಕದಂಪಿನೊಳ್ ಕರಮೆ ಕಂದಿದ ಚಂದನಸಾಂದ್ರಪಂಕದಿಂ
ದೊಂದು
ಕದಂಪಿನೊಳ್ ಸಖಿಯರಾಗಡೆ ಪೊಯ್ದ ಹಿಮಂಬುಪೂರದಿಂ
ದೊಂದಿದ
ಕಣ್ಣ ನೀರ ಕಡಲೇಂ ಕವಿತಂದುದೊ ತಳ್ತುರಕ್ಕೆ ಕಾ
ಳಿಂದಿಯುಮಂ
ಮರುನ್ನದಿಯುಮಂ ತೆಗೆದಂತವಳಂಗತಾಪಧಿಂ ೩೭

ಮೃಗಶಿಶುನೇತ್ರೆಯರ್ ತಳಿಯೆಯುಂ ತಿಳಿನೀರ್ಗಳನಂಗತಾಪದಿಂ
ಪೊಗೆವ
ಮೃಣಾಳಮಂಡನದ ಮೆಲ್ಪೊಗೆಯುಂ ಮಿಗೆ ಪೀಲಿಗಣ್ಗಳುಂ
ನೆಗಪಿದುವಕ್ಕುವಶ್ರುಗಳನೆಂಬಿನಮಂಬುಳಿಂದೆ
ನಾಂದು ಸೋ
ಗೆಗಳೆನೆ
ಬೆರ್ಚಿ ಬೀಸಿದುವು ದೀಪದ ಸೋಗೆಗಳಾ ಮೃಗಾಕ್ಷಿಯಂ ೩೮

ದರದಳಿತನವೋದ್ಯನ್ಮಲ್ಲಿಕಾಮಾಲೆಯಾ ಪಂ
ಕರುಹಮುಖಿಯ
ಕಂಠಾಲಂಬಿಯಿಂಬಾದುದಾಗಳ್
ಸುರಭಿಸಲಿಲಸೇಕಸ್ಮೇರವಾರಾಂತರಂಗ

ಸ್ಮರಶಿಖಿಯಿನರಲ್ವೋದಂತೆ
ಮುಕ್ತೋರುಹಾರಂ       ೩೯

ಪೆಣೆದೆತ್ತಂತೇೞ್ವ ಬಾಷ್ಪಾಂಬುವೊಳವಳ ಕುಚಂ ಬೇಗುಮೆಂದಾಗಳುಂ ಬಾ
ಸಣಿಸಿಟ್ಟಂತೊಟ್ಟಿದಂಭೋರುಹದೆಲೆಗಳೊಳಾಳೀಜನಂ
ಸೂಸಿದಂಭಃ
ಕಣಜಾಲಂ
ಕಂಪಿಸುತ್ತೊಪ್ಪಿದುವು ಹೃದಯತಾಪಾನಳಂ ತಮ್ಮನೇಕ
ಕ್ಷಣದಿಂದಂ
ಪೀರ್ಗುಮೆಂಬೀ ಭಯಮೆ ಬಳೆದವೋಲಿನ್ನದಾಶ್ಚರ್ಯಮುಂಟೇ         ೪೦

ಸುದತಿಯ ಸುಯ್ಗಳಿಂ ಬನಮೆ ಬೆಂದುದು ಬೇಯದೊಡೇಕೆ ಕೆಚ್ಚನಾ
ದುದೊ
ತನಿವಣ್ಗಳಂ ಸವಿದ ಕೀರದ ಚಂಚುವದೇಕೆ ಮೂಗುವ
ಟ್ಟುದೊ
ಮಧು ಪೋಪುದುಂ ಕಳಿಕೆಗರ್ಚಿದ ಕೋಗಿಲೆಯೇಕೆ ಪಾಱಿ ಪೋ
ದುದೊ
ಶಿಶಿರಾಂಬುಜಾಕರಕೆ ತುಂಬಿ ತುಡುಂಕಿ ನವಪ್ರಸೂನಮಂ         ೪೧

ಕಿವಿಗಳ್ ಬೆಂದಪ್ಪುವೆಂಬಂತಿರೆ ಕರತಳದಿಂ ಮುಚ್ಚುಗುಂ ಕೇಳ್ದು ಕಿರ್ಚೆ
ರ್ದವೊಲಾಗಳ್
ಪಾಯ್ದು ವೋವೋ ಎನುತುಮೆರ್ದೆಗಳಂ ಚಿಂತೆಗೆಯ್ದಂತದಂ ಭೂ
ಭುವನಂ
ತಾನೆಂದೊಡಿನ್ನಾಂ ಪೊಗೞ್ವುದೆ ಪಿರಿಯಂ ಭೀತಿಯಾದಪ್ಪುದೆಂ ಬೀ
ಯವೊ
ಪೇೞ್ ಲೀಲಾವತೀದೇವಿಯ ವಿರಹಮದಿಂತೆಂಬ ಜಿಹ್ವಾಂಕುರಂಗಳ್       ೪೨

ಆಗಳ್ ಬೀಸುವ ಚಾಮರಂಗಳ ಗಾಳಿಯಿನಗ್ಗಳಿಸಿದಂತೆಯುಂ, ಪಾಱಿಸುವ ಪಯೋಯಂತ್ರಶುಕಪಿಕಪಕ್ಷಾನಿಳನಿನಳವಿಗೞಿದಂತೆಯುಂ, ಬನದೊಳಗೆ ಬಾಯ್ಸವಿಯಪ್ಪ ತಳಿರುಮಂ ಪೂವುಮನೆಲ್ಲಿಯುಂ ಪಡೆಯದೆ ಪಸಿದು ಬಂದಸಿಯಳ ಮೆಯ್ಯೊಳ್ ಪೊಕ್ಕವಳುರ್ದು ಕೊಳ್ವ ವನವಹ್ನಿಯಂತೆಯುಂ, ಕಡುಗಾರಮಪ್ಪ ಕಡಲ ನೀರರೋಚಕಮಾಗೆ ಕೆಳದಿಯರ್ ತುಳುಂಕುವ ಶೀತಳಾಮೋದಸ್ವಾದುಸಲಿಲಾಸಾರಕ್ಕೆ ಬಯಸಿ ಬಾತು ಬಂದು ಬಡಬಾಗ್ನಿ ಬಾಲಕಿಯೊಡಲೊಳಡಂಗಿದಂತೆಯುಂ, ಮನಸಿಜಂಗೆ ಮನಮನೆಡೆಗೊಟ್ಟಳೆಂಬ ಮುನಿಸಿನಿಂ ಮಾನಿನಿಯನುರಿಪುವ ಹರಹುತಾಶನನಂತೆಯುಂ, ಮಿಡಿದೆಡೆಗಿಱಿದ ಪಯೋಧರಂಗಳುಪಿನೊಳ್ ಸಿಡಿಲ್ದುದಱಿಂ ಸಿಡಿಲ ಕಿಚ್ಚಿನಂತೆಯುಂ, ಕುಚಮೆಂಬ ಕುಲಗಿರಿಗಳಿಂ ತಿಸರಮೆಂಬ ತೊಱೆಗಳಿಂ ಮೊಗಮೆಂಬ ಪೂಗೊಳಂಗಳಿಂ ದೇಶಾದಿಪ್ರದೇಶಂ ಗಳಿಂದಾಬಿಂಬಾಧರಿಯೆಂದೇ ಬಗೆದು ವಿಳಯವೈಶ್ವಾನರಂ ಸುಡುವಂತೆಯುಂ ಅಸಕಲಿತದುಸ್ಸಹವಿರಹದಹನದಾಹಕ್ಕೆ ಸೈರಿಸಲಾಱದೆ ನನೆಯ ಪೂವಿನ ತಳಿರ ತುಡುಗೆಗಳಂ ಪರಿದೀಡಾಡಿ ಪೊರಳ್ದು ತೆರಳ್ದು ತೆರೆಮಸಗಿ ಮಱುಗಿ –

ಮಗಮಗಿಸುತ್ತೆ ಪೊತ್ತಿ ಪೊಗೆವಂಗದ ಚಂದನದಣ್ಪು ಧೂಪಮಂ
ತೆಗೞೆಸೆ
ತಾಪದಿಂದುರಿವ ಕಪ್ಪುರಮೊಪ್ಪುವ ದೀಪದಂದಮಂ
ಪೊಗೞಿಸೆರಾಸಿಗೆಯ್ದ
ನನೆಕೇಸಡಿಗಿಂದೆಣೆಯಾದ ಕೆಂದಳಿರ್
ಸೊಗಯಿಸೆ
ಮೋಹದೇವತೆಗೆ ತನ್ನನೆ ತಾಂ ಬಲಿಗೊಟ್ಟಳೆಂಬಿನಂ         ೪೩

ಅಂತಿರ್ದಳಂ ಕಂಡು ಕಳಾವತಿ ಕೆಯ್ಗಳನೆತ್ತಿ ಕೆಳದಿಯರನೋಹೋ ಎಂದು ಮಾಣಿಸಿ –

ತಳಿರ್ಗಳ್ ಮೆಯ್ವೆಂಕೆಯಿಂದಂ ತೆಗಪಿದ ತಳಿರಂತಾದುವಾದಂ ಮೃಣಾಳೀ
ಪಳಯಂ
ಕೆಯ್ವೆಂಕೆಯಿಂದಂ ಕರಿಯ ಬಳೆಗಳಂತಾದುವೀ ಮಲ್ಲಿಕಾಕೋ
ಮಳೆಯಂಗಂ
ಸೋಂಕೆ ಸೇವಂತಿಗೆಯರಲನಿತುಂ ಬಾಯ ಕಂಪಿಂಗೆ ಪಾಯ್ತಂ
ದಳಿಗಳ್
ಸುಯ್ವೆಂಕೆಯಿಂ ಸೀದವೊಲೆ ಕೊರಗಿ ಕೊಂಡಿರ್ದುವೇನೆಂಬ ಕಾಯ್ವೋ    ೪೪

ಕಪ್ಪುರದ ರಜಮನುರಿಯಿಪು
ದೊಪ್ಪುಗುಮೀ
ತಳಿರ ಕುಳಿರ್ವ ತಿಳಿನೀರ್ಗಳುಮಂ
ಪುಷ್ಪಕಮಾಗಿ
ಕನಲ್ದಳು
ರ್ದಪ್ಪುದು
ಕಾಮಿನಿಯ ಮೆಯ್ಯ ಬೆಂಕೆಯದಣಕಂ       ೪೫

ಅಸಿಯಳ ಕೆಯ್ಯಂಬುಜಮಂ
ಮುಸುಱುವ
ಕಣ್ಬನಿಯ ಮಂಜು ಕೊರಗಿಪುದುಚಿತಂ
ಬಿಸುಸುಯ್ಯಿಂ
ನೆಯ್ದಿಲನಾ
ಸ್ಯಸುಧಾಕರಬಿಂಬಮೇಕೆ
ಕೊರಗಿಸಿದಪುದೋ ೪೬

ನಾಸಾಚಂಪಕಸೋಷ್ಣ
ಶ್ವಾಸದೊಳಳಿ
ಮೞ್ಗಿ ಮೂರ್ಛಿಸುಗೆ ಸಖಿಯ ಮುಖಾ
ಬ್ಜಾಸವಸೌರಭಸರಳ

ಶ್ವಾಸದೊಳದು
ಪಾಯ್ದು ಮೂರ್ಛೆವೋದುದು ಚೋದ್ಯಂ         ೪೭

ಒದೆವಡೆದಸುಗೆ ತಳಿರ್ತೆರ್ದೆ
ಗುದಿಪಮನೊದವಿಸುವೊಡಾರೊ
ಬಾರಿಪರೊಲ್ದ
ಪ್ಪಿದ
ಕುರವಕಮಂಕುರಿತಂ
ಸುದತಿಗೆ
ಕುರುವಾದುವಿನ್ನು ಮತಿರುತಮುಂಟೇ        ೪೮

ಗುಡುಗುಡನೆ ಪರಿವ ಕಣ್ಣೀ
ರ್ಗಡಲಂ
ಕುಚಕುಂಭಸಂಭವಂ ಪರಿತಾಪಂ
ಕುಡಿದುಂ
ಕಡೆಗಾಣಿಸಿದುದೆ
ಕಡುವಿರಿದಾಗಿಯುಮಡಂಗದೀ
ವಿರಹಿಣಿಯಾ ೪೯

ಸರಸಮೆನಿಪ್ಪ ಮಾನಸದೊಳಲ್ಲದೆ ಪುಟ್ಟದು ದರ್ಶನಾಮೃತಂ
ಸ್ಮರಣ
ಸರತ್ಪ್ರವಾಹದೊಳೆ ಪೊತ್ತುವುದಂತೆ ಹಿಮಾಂಶುಬಿಂಬದಿಂ
ದುರಿವುದು
ತಣ್ಪುಗೆಯ್ಯೆ ತನಿವೆರ್ಚುವುದಾಳಿಯರಂತರಂಗಮಂ
ಕೊರಗೆ
ಕವಲ್ತುದೀ ವಿರಹವಹ್ನಿಯದೇಂ ವಿಪರೀತವೃತ್ತಿಯೋ     ೫೦

ಅದುಕಾರಣದಿಂ –

ಬೀಸಿದೊಡೇಕೆ ನಂದುಗುಮೊ ಕಿಚ್ಚದಱಿಂ ಕದಳೀದಳಂಗಳಿಂ
ಬೀಸದಿರಾದುದೇಂ
ಪೊಸತೆ ಪೇೞಿದು ಪೂಗಣೆಯಿಂದೆ ಪೂಗಳಿಂ
ಪಾಸಿ
ಬೞಲ್ದು ಬೀೞದಿರು ಮಾಣದು ಕಾಣಗೆ ಶೀತಳಾಂಬುವಂ
ಸೂಸದಿರಕ್ಕ
ರಾಗರಸದಿಂದವೆ ಮುನ್ನಿದು ಮಾಡಿತಲ್ಲವೇ        ೫೧

ಎಂದು ನಿವಾರಿಸಿ ನೀವೀಕೆಗೆ ಕೂರ್ಪಿರಪ್ಪೊಡೆ ಪೋಗಿ ನಮ್ಮೀಚಂದ್ರಕಾಂತಮಯಮಪ್ಪ ಮಯೂರ ಮೇಘಮೆಂಬ ಕೇಳೀಶೈಲದ ಹಿಮಹಾಸಮೆಂಬ ಗುಹಾಗೇಹದ ಮುಂದೆ ಜಘನದ ಘ್ನೆಯುಂ ಕುಮುದಕಂಠಿಕೆಯುಮೆಂಬ ಕ್ರೀಡಾಕಮಲಾಕರಂಗಳನೊಳಗುಮಾಡಿ ಪರಾಗಪುಳಿನಿಯೆಂಬ ಕೃತಕತರಂಗಿಣಿಯ ತಡಿಯೊಳ್ ತಳಿರ್ವಂದರಕ್ಕಿಯದಱೊಳಗೆ ಪುಷ್ಪಮಂಡಪಮಂ ಮಾಡಿ ಶಿಶಿರೋಪಚಾರಪರಿಕರಂಗಳನಳವಡಿಸಿಂ, ಅದಲ್ಲದೀಕೆಯ ಮದನತಾಪಮನಾಱಿಸಲ್ ನೆಱೆಯದೆಂಬುದುಂ; ಆಕೆಗಳ್ ಪೋಗಿ ಬೇಗದಿಂ ಸಮೆಯೆ –

ಬರ್ಮನುಮಾ ವಿಶ್ವಕರ್ಮನುಂ ಶೋಭೆಯಂ
ನಿರ್ಮಿಸಲೆಂದು
ವಧೂವರರೂಪಾಗಿ
ನಿರ್ಮಿಸಿದಂತೆ
ಮಿಸುಗಿತ್ತು ೫೨

ಅದೆಂತೆಂದೊಡೆ – ಪಸಿಯರಿಸಿನದ ಪಿಡಿಯೆಲೆಯ ಪಿಂಡಿಗೆಯಿಂ ಕರ್ಬಾಳದ ಕಟ್ಟುಗಳಿಂ ಸುರ್ಬುಗೊಂಡ ಕರ್ಬಿನ ತಟ್ಟಿಗಳಿಂ ಬಿಸಿಲ್ ಪತ್ತೆ ಬಿಸುಗಂಪಂ ಬಿಡುವ ಬಿಳಿಯ ಬಾಳದ ಕೇರ್ಗಳೊಳಂ ಸೋಗೆಯಂ ಸಮಱಿ ನಟ್ಟ ಕರಿಯ ಕರ್ಬಿನ ಕಿಱುಗಂಬಂಗಳೊಳಂ ಪೊಂಬಾೞೆಯ ಪೊಸಗೊಲೆಯ ಪೊರೆಯನಿೞಿಪಿದಡಕೆಯ ಸಸಿಯ ತೋರಗಂಭಂಗಳೊಳಂ ತಳಿರ ನನೆಯ ಪೂವಿನ ಕಾಯ ಗೊನೆಗಳ್‌ವೆರಸಿದೆಳಮಾವಿನ ಬಲ್ಗೊಂಬುಗಳ ಬೆಳಗುಗಳೊಳಂ ತಾವರೆಯ ತೋರಗಾವುಗಳ ಗೞುಗಳೊಳಂ ಉತ್ಪಲನಾಳ ಪುಂಜದ ಪಂಜರದೊಳಂ ಅಸುಗೆಯ ಪೊಸದಳಿರ ಪೊದಕೆಯೊಳಂ ಚಂದನ ಪಲ್ಲವದ ಚುಂಚುಲೋವೆಯೊಳಂ ಮೊಲ್ಲೆಯ ಮುಗುಳ ಮತ್ತವಾರಣಂ ಗಳೊಳಂ ಕೊಸಗಿನಲರ ಪೊಸಗೊಂಚಲ ಪೊಸಂತಿಲೊಳಂ ಪೊರೆಗಳೆದ ತೋರವಾೞೆಯ ದಾರವಂದದೊಳಂ ಬಕುಳದ ಮೊಗ್ಗೆಯ ಗುೞಗಳೊಳಂ ಪದ್ಮಪತ್ರದ ಪಡಿಗಳೊಳಂ ದವನದೊದಿಗಳೊಳಂ ಕೇದಗೆಯೆಸೞ ಕಟ್ಟುವಂಜರದೊಳಂ ಸಿರಿಸದಲರ ಸಜ್ಜೆಗಳೊಳಂ ಕುಂಕುಮದ ಕುಟ್ಟಿಮಂಗಳೊಳಂ ಕುಸುಮರಜದ ಜಗಲಿಗಳೊಳಂ ಎಳವಾೞೆಯ ತಿರುಳೆಲೆಯ ತೆರೆಸುತ್ತಿನೊಳಮೆಸೆವ ಪಸುರ್ವಂದರೊಳಗೆ –