ಶ್ರೀನಾಥನಂತು ಜೇವೊಡೆ
ದಾ
ನಿನದಂ ಪೊಡೆಯೆ ಕೆಲಕೆ ಕೆಡೆದಳುರ್ದುವೊವೈ
ಶ್ವಾನರನುರಿಯುದಯತಟೋ

ದ್ವಾನಮನೆನೆ
ಮೂಡಸಂಜೆ ಮೂಡಿದುದಾಗಳ್        ೧

ಧನುವಧರಿತವಿಲಯಾಂ
ಭೋಧರರವಮುರ್ವೆ
ಮೌವೀಯಿರವಂ ವೇಳೋ
ರ್ವೀಧರಮಂ
ಧೀಂಕಿಟ್ಟು
ಯೋಧಿಯೆ
ಕವಿದಂತೆ ಕೞ್ತಲೆ ಮಗುೞ್ದುಂ      ೨

ಅದಿರೆ ನೆಲನುದಿರೆ ತಾರಗೆ
ಬೆದಱೆ
ಸುರರ್ ಕೆದಱೆ ದನುಜರೊದಱೆ ಫಣೀಂದ್ರಂ
ಮದಿಲಡರ್ವ
ಭೇಕದಂತೆವೊ
ಲುದಯತಟಾಗ್ರದಿನುರುಳ್ದನಿನನಂಬುಧಿಯೊಳ್
        ೩

ತುಮುೞ್ಕಲ್ಕೈರಾವತಂ ದರ್ಪಮನೆರ್ದೆಯೊಡೆಯಲ್ಪುಂಡರೀಕಂ ಪಣುಂಕಲ್
ಕುಮುದಂ
ಕುಂಬಿಕ್ಕಲಾ ಅಂಜನನಳವುಗಿಡಲ್ವಾಮನಂ ಪುಷ್ಪದಂತಂ
ತಮಳಲ್
ತತ್ಸಾರ್ವಭೌಮಂ ಸುಗಿಯಲಗಿಯಲಾ ಸುಪ್ರತೀಕಂ ಸುರುಳ್ದಂ
ಸಮದಿಂದ್ರಂವಹ್ನಿ
ಕಾಲಂ ದನುಜನುದಧಿಪಂ ವಾಯುಯಕ್ಷಂ ತ್ರಿಯಕ್ಷಂ   ೪

ಧ್ವನಿ ಪೊಣ್ಮಿ ಪೊಯ್ಯಲುದಿರ್ದಂತೆವೊಲಿರ್ದುದು ತಾರಕಾಳಿ ತಾ
ರಾಧ್ವದೊಳಸ್ತಶೈಲಶಿಖರರಾಗ್ರದೊಳಿರ್ದುದು
ಚಂದ್ರಮಂಡಲಂ
ಸಾಧ್ವಸದಿಂದುರುಳ್ದುದೆನಲೆತ್ತಿದ
ತನ್ನೃಪತಿಪ್ರತಾಪತುಂ
ಗಧ್ವಜದಂತೆ
ಮೂಡಿದುದು ಮೂಡಣ ದಿಕ್ಕಿನೊಳರ್ಕಮಂಡಲಂ  ೫

ಅಂತು ಯುದ್ಧಸನ್ನದ್ದನಾಗಿ ಧನುರ್ಗುಣಕ್ವಣಿತಕರಣಪ್ರಣಯಪಾಣಿಯಪ್ಪ ಮಂತ್ರಿ ಪುತ್ರಂಬೆರಸು ರಾಕ್ಷಸರಣಕಳಕಳಕ್ಕೆ ಲಕ್ಷ್ಮಣಂ ಬೆರಸು ನಡೆವ ರಾಘವನಂತುದಾತ್ತರಾಘವಂ ಗಾವಳಿಯ ಬೞಿಯನೆ ನಡೆಯೆ ನಡೆಯೆ –

ಮಿದುಳಳಱಿಂದಮೊಕ್ಕ ಕರುಳಿಂದಮಗುರ್ಬಿಪ ಬಿಕ್ಕಿನಿಂದಮೊ
ಟ್ಟಿದ
ನೆಣದಿಂ ಪೊರಳ್ವ ಪೆಣದಿಂ ಬಿಡೆ ಬಿಕ್ಕುವ ಮಸ್ತಕೌಘದಿಂ
ಕೆದಱಿದ
ಮಾಂಸದಿಂದೆ ಮಡುಗಟ್ಟಿದ ರಕ್ತದೆ ಕೆತ್ತುತಿರ್ಪ ಖಂ
ಡದೆ
ಜವನುಂಡು ಕಾಱಿದವೊಲಿರ್ದುದು ಮಾರ್ಗಮದೆತ್ತನೋಱ್ಪೊಡಂ    ೬

ಮಿಡಿಯಿಂ ಬೆಂಬರಮೆಯ್ದೆ ಸೀೞ್ದ ಶಬಸಂಘಾತಂಗಳಂಗುಷ್ಟದಿಂ
ತೊಡೆಯಂ
ತಾಪಿನಮೆಯ್ದೆ ಪೋೞ್ದಪೆಣಗಳ್ ಬೆರ್ವಟ್ಟೆಯಂ ಮುಟ್ಟಿ ಮೆ
ಯ್ವಿಡೆಭಾಳಾಗ್ರಮನೆಯ್ದೆ
ಬಿಟ್ಟ ಕುಣಪವ್ರಾತಂಗಳಾ ಬಟ್ಟೆಯೊಳ್
ಮಡದಿಂ
ಪೆರ್ಬರಿಗೆಯ್ದ ಲಿರ್ದಮೃತಕವ್ಯೂಹಂ ಕರಂ ಭೀಕರಂ   ೭

ಕದಳಿಯ ಕಂಭಮಂ ಕಡಿದು ತಿಂದವೊಲದ್ಬುತಮುರ್ಬಿದೂರುಗಳ್
ಬಿದಿರನಡುರ್ತುಮೇದು
ಬಿಸುಟಂತೆ ಭಯಂಕರಮಾದ ಕೈಗಳ
ಳ್ಮೆದುಳಿಗೆಗೆಡ್ಡೆಯಂ
ಮಸಗಿ ಮೆಲ್ದವೊಲಾಸುರಮಾದ ಮಂಡೆಗಳ್
ಬೆದಱಿಸೆ
ನೋೞ್ಪರಂ ಪೊರಳುತಿರ್ದುದು ಪಾಮರವೃಂದಮೆತ್ತಲುಂ       ೮

ಎರಡೆರಡು ಪೋೞ್ಗಳಾಗಿರೆ
ಕರಗಸದಿಂ
ಪೋೞ್ದತೆಱದೆ ಬಿರ್ದಿರ್ದ ಭಟೋ
ತ್ಕರಮಂ
ಕಾಣುತ್ತಮೆ ಸೂ
ಕರಸಮರಮಿದೆಂದು
ಬಗೆದನಾ ರಣಧೀರಂ   ೯

ಪಂದಿ ಪೊಯೆ ಪಱಿಯೆ ಕೈ ಕಾ
ಲೊಂದೆಡೆಯೊಳ್
ಕೆಡೆದ ಬೇಂಟೆಕಾಱರ್ ಭರದಿಂ
ಕುಂದದೆ
ಮೃಗಮಂ ಕೊಂದಪ
ರೆಂದದು
ದಂಡಿಸಿದ ತೆಱದೆ ಪೊರಳುತ್ತಿರ್ದರ್ ೧೦

ಪಾಯ್ದು ಪೊಯೆ ಪಂದಿ ಬಾಳಿಂ
ಪೊಯ್ದಂತಿರೆ
ಕಡಿದು ಕೆಡೆಯೆ ಮಿಡಿ ತೊಡೆ ನಡುಗಳ್
ಕಾಯ್ದು
ಕೃತಾಂತಂ ಪಣಿದಂ
ಬೊಯ್ದಂತಿರೆ
ಬೇಂಟೆಕಾಱರರೆ ಬಿರ್ದೆರ್ದರ್  ೧೧

ಮುಱಿಯೆ ನಡು ಕೊಱೆಯೆ ಕಾಲರೆ
ಮುಱಿಯೆ
ಮೊಗಂ ಸುಱಿಕಿಱುತ್ತೆ ಪುಣ್ಗಳನಕ್ಕು
ತ್ತೊಱೆವ
ಪೆಱವಾಯ ನೆತ್ತರ
ನೊಱಗಿರ್ದುವು
ತೞಿಯ ನಾಯ್ಗಳೋರೊಂದೆಡೆಯೊಳ್         ೧೨

ಪಿಡಿದುಗಿಯೆ ಕಿೞ್ತು ಪಂದಿಯ
ಪೆಡದಲೆಯೊಳ್
ಸಿಲ್ಕಿ ಪಲ್ಗಳೆಡಮೊಗದೊಳ್
ಪ್ಪಡದಂತೆ
ಕೂಡಿ ಜೋಡಂ
ಪಡೆದುೞಿದುವು
ವಿಶ್ವಕದ್ರುಗಳ್ ಕೆಲವೆಡೆಯೊಳ್        ೧೩

ಅಂತು ಜವನೊಕ್ಕಲಿಕ್ಕಿದಂತೆಮುಂ, ಮಾರಿ ಮಸಗಿ ಚಿಗುಳಿದುೞಿದಂತೆಯುಂ, ಕಿಱುದೊಡೆ ಕೊಯ್ತೆವೋಗೆ, ಕಡೆವಾಯ್ ಕಡಿವೋಗೆ, ಕೊರಲ್ ಬಳೆವೋಗೆ, ಮೋಱೆ ಮುಕ್ಕುವೋಗೆ, ಬಸವೞಿವ ಜವವೞಿವ ಬಾಯ್ವಿಡುವ ದೆಸೆಗಿಡುವ ಬಿಱುತೋಡುವ ನೀರಂ ಬೇಡುವ ತಲ್ಲಣಿಸುವ ಮಲ್ಲಣಿಸುವ ಬೞಲ್ದು ಬೀೞ್ವ ತಡದಡಿಸುತ್ತೇೞ್ವ ಗೋವರ ಗೊಂದಣಮುಮನಂಜದಿರಿಮಂಜದಿರಿಮೆಂದು ಮುಟ್ಟೆವಂದು ಬೀದಿವರಿದು ಕೆಂಗಲ್ಮಸಗಿ ಕೊಲ್ವ ಕೃತಾಂತನ ಕೋಣನಂತೆ ಕೆಳರ್ದುಕೊಲುತ್ತಮಿರ್ಪ,

ಸೂಕರನಂ ಕಂಡಂ ಕಲಿ
ಮೂಕವರಾಹನನೆ
ಕಾಣ್ಬವೋಲರ್ಜುನನು
ದ್ಭೀಕರನಂ
ಕ್ರೋಧಾರುಣ
ಕೇಕರನಂ
ಸಂಯುಗಾರ್ಜುನಂ ಕಟ್ಟಿದಿರೊಳ್ ೧೪

ಅದು ಕಮ್ಮಱರಡೆಯಂ ಕೊಱೆದಂತಿರ್ಪ ಪೆರ್ಬಾಯುಂ, ನಿಟ್ಟೆಲುವನಡ್ಡಗರ್ಚಿದಂತಪ್ಪ ದಾಡೆಗಳುಂ, ಪಲವುಂ ಪೆಣಂಗಳನಡಸಿ ಕೊಂಡಿರ್ದಂತಪ್ಪಣಲ್ಗಳುಂ, ಪೊಡವಿಯಂ ಪೊಡೆದು ಕೊಲಲೆತ್ತಿದ ಮಾರಿಯ ಮಿೞ್ತುವಿನ ಕಯ್ಯ ತಳಂಗಳಂತಿರ್ದ ಕಿವಿಗಳುಂ, ಕಱಿಯ ಪಿರಿಯ ಪಾವಂ ನುಣ್ಣನೆನುಂಗಿ ಪಾಯ್ಸುವಂತಿರ್ದ ಬಾಲಮುಂ, ಉರ್ಕಿನ ಕಣಿಯೊಳ್ ಸೂಜಿಯೆ ನೆಗೆದಂತಿರ್ದ ಮೆಯ್ಯ ರೋಮಮುಮಗುರ್ವುವಡೆಯೆ ದಬ್ಬಣದಂತೆ ನಿಬ್ಬಣಮಾದ ಕೂದಲ್ಗಳೊಳ್ ಕೋದ ಪೆಣಂಗಳಿಂ ಪೋತ್ರಮೆಯ್ದರೆ ಪಡೆಯಂ ಪಿಡಿದು ಪೊಡೆಯೊಳ್ತೂಂಕುವಂತೆಯುಂ, ಮೊಱೆವ ಪೆಣನನಡಿಸಿ ತಿನೆ ಕಡೆವಾಯೊಳ್ ಸುಱಿವ ನೊರೆನೆತ್ತರಿಂದುಡಿದು ಪೊಱಮಡುವ ಕೋಡೆಲ್ವುಗಳಿಂ ತಿಱ್ಱನೆ ತಿರಿವ ಕೋರೆದಾಡೆಗಳಿಂ ಕೃತಾಂತನ ಕಗ್ಗಲ್ಲ ಗಾಣದಂತೆಯುಂ ಕೈದುವೆರಸುಮಾನಸರಂ ಮೆಲ್ವಲ್ಲಿಬಾಯೊಳ್ ಸೋರ್ವ ಬಳ್ಳಿಗರುಳಿ ನಲ್ಲೊಗುವಲಗಿನುಡಿಗಳಿಂ ನಾಳಂಬೆರಸು ನೆಯ್ದಿಲಂ ಮೇವ ಮದಕರಿಯಂತೆಯುಂ, ಕಿಚ್ಚಿನ ಗೂಂಟಮಂ ಬೆಟ್ಟಿದಂತೆ ದಡಿಗವೆಣದ ನಟ್ಟೆರ್ದೆಯೊಳೆ ನಟ್ಟ ಕಾಲಿಂ ತಾಂ ತಿಂಬ ಜಗಮಂ ತವೆ ತಿಂದಪುದೆಂದು ಕಾಲಂ ಮುಳಿದು ಕೋಣನಂ ಕೋಳದೊಳಿಕ್ಕಿದಂತೆಯುಂ, ಗಂಟಲೊಳ್ ದೊಡ್ಡವೆಣನಡ್ಡಂ ಸಿಲ್ಕೆಮೆಲ್ಕಂ ಮಗುೞ್ಚುವುದುಂ ನೆತ್ತರುಂ ನೆಣನುಂ ಕರುಳುಂ ಕಬ್ಬಸಮುಮೆಲ್ವುಮಡಗುಮೊಡಗಲಸಿ ಸುರಿದು ಮುಂದೆ ಕುಪ್ಪಿಸಿ ಕು‌ಪ್ಪೆಯಾಗಿ ಮಾನಸರಂ ತೆಗಿಸಿ ರಕ್ಕಸರ ಮುಂದೆ ರಾಸಿಗೆಯ್ದಂತೆಯು ಮಾಸುರಮಾಗಿ ಕೇಸರಂಗೆಯ್ದು ಕಿವಿಗೆಯ್ದಿದ ರಣಧೀರನ ಧನುರ್ಗುಣಧ್ವನಿಗೆ ಕಂಗನೆ ಕನಲ್ದು ಕಿಡಿಕಿಡಿವೋಗಿ ಕಿಡಿಯಂ ಕಾಱುವಂತೆ ದಾಡೆಗುಟ್ಟಿ ಪುಟ್ಟಿದ ಕೆಂಡದಿಂ ಮೊಗದ ಕೂಂದಲ್ ಕವುಱುನಾಱೆ ಕೀಱಿ ಬರ್ಪರಿಬಲಪ್ರಳಯಕಾಲನ ಗಾಳಿಗೇವೈಯ್ಸಿ ಬಾಯ್ಗುಟ್ಟಿ ಬೆಚ್ಚನೆ ಬಿಟ್ಟ ದಿಟ್ಟಯನಟ್ಟಿ ಮೂಗಂ ತೂಗಿ ಮೊಗವನೆತ್ತಿ ಮೆಯ್ಯಂ ನಿಮಿರ್ದು ಅದಿರದಿದಿರೇಱುವೆಕ್ಕಲ ವಂದಿಯಂ ಕಂಡು ಕಿಟಿಕಾದ್ರವೇಯಸೌಪರ್ಣಂ

ಭೂ ಕಂಪಂಗೊಳ್ವಿನೆಗಮಹಿಯಂ ಪುತ್ತಿನಿಂ ತೋಡಿಕೊಳ್ವಂ
ತಾಕೃಷ್ಣಂಗೆಯ್ದಿರದೆ
ದೊಣೆಯಿಂ ನಾರಿಯೊಳ್ ಪೊಯ್ದು ಲೋಕ
ಪ್ರಾಕಾರಾಂಕಂ
ಪಲಸಿನೆಲೆಯಂ ಪೋಲ್ವ ಶಾತಾಸ್ತ್ರಮಂ ಕಾ
ಯ್ದಾಕರ್ಣಾಂತಂ
ಮಲರೆತೆಗೆದಾ ಕ್ರೋಡನಂ ಕೋಡದೆಚ್ಚಂ      ೧೫

ಅಂತಿಸುವುದುಂ –

ನೊಸಲಂ ಕೋಲ್ ತಾಗೆ ಕೋಲಂ ತಿರಿದುದು ಪೆಱಗಣ್ಗುರ್ಚೆ ಬಾಣಂ ವರಾಹಂ
ಮಸಕಂಗುಂದಿತ್ತು
ತನ್ನೇರ್ವೆಸನನೆಸಕದಿಂ ತೀರ್ಚಿ ಬರ್ಪಂತೆ ಬಂದೆ
ಯ್ದೆ
ಸರಲ್ತತ್ಸೂಕರಂ ಸುರ್ಕೞದುದು ಪೊಡವಟ್ಟಂತೆ ತತ್ಪಾದಪಂಕೇ
ಜಸಮಿಪಕ್ಕಾಗಿಕಾಂಡಂ
ಕೆಡೆಯೆ ಕೆಡೆಯುತುಂ ಪಂದಿ ಬೆನ್ನಿತ್ತುದಾಗಳ್    ೧೬

ಅಂತು ಪೊಕ್ಕ ಪಿಂದುಂ ಪೊಱಮಟ್ಟ ಮುಂದುಂ ಪೆಡಂಗಾಲೊಳಡಂಗಿದಬಾಲಮುಂ, ಕಿವಿಯುಂ, ಜಂತ್ರದ ಪಂದಿಯ ಬಾಯಂತೆ ಬಿಟ್ಟೆೞಲ್ವಬಾಯುಂಬೆರಸು ನಾಲ್ಕುಂ ತಳಮಂ ತೋಱುತ್ತುಂ ಸರಳಿಸಿ ಪಾಯ್ದು ಪೋಪಪೊಳ್ಳೆವಂದಿಯಂ ಕಂಡು ಮುಂದೆ ಬಿದ್ದಿರ್ದ ಬಾಣಮಂ ಬಾಗಿಕೊಂಡು ಮಣ್ಣಂ ತಿಮಿರ್ದು ಕಳೆದು ಕೆಳೆಯನಂ ಕೂಡಿಕೊಂಡು ರಕ್ಕಸನಂ ಬೆಂಗೊಳ್ವ ಲಕ್ಷ್ಮಣನಂತದಂ ಬೆಂಗೊಂಡು ಬೞಿಯನುೞಿಯದೆ ಪರಿಯೆ ಕೆಯ್ವೊಲನುಮಂ ಬೆಯ್ವೊಲನುಮಂ ಕಱುಂಬುಮನಿಱುಂಬುಮಂ ತಾಗುಮಂ ಬಾಗುಮಂ ಪಳಮುಮಂ ಕೊಳ್ಳಮುಮಂ ನೆಳಱುಮಂ ಕಳಱುಮನೆಱುಗಲುಮಂ ಗಿಡುದುಱುಗಲುಮಂ ದರಿಯುಮಂ ಕುಮ್ಮರಿಯುಮಂ ಮೊರಡುಮಂ ಕೊರಡುಮಂ ನುಳಿಯುಮಂ ಕುಳಿಯುಮಂ ಮೆಳೆಯುಮಂ ನಾನಲುಮಂ ಬಾನಲುಮಂ ಸಡಿಂಬಮನಿಡಿಂಬಮಂ ಪರಲುಮಂ ಪುರಿವರಲುಮಂ ಕಿಸುಗಾಡುಮಂ ನೆಗ್ಗಿಲ್ಗಾಡುಮಂ ನಿಡುವುಲ್ಲುಮಂ ಪೊಡೆವುಲ್ಲುಮಂ ಮಣಲುಮಂ ಮಣ್ಮಣಲುಮಂ ತರಿವಣಲುಮಂ ಗುಗ್ಗರಿಗಲ್ಲುಮಂ ಗುಂಡುಗಲ್ಲುಮಂ ಮುಳ್ಮರಗಾಡುಮಂ ಪೆರ್ಮರಗಾಡುಮಂ ಬೆಟ್ಟಮಂ ಘಟ್ಟಮಂ ಬಿದಿರುಮಂ ಖದಿರುಮಂ ಬೆತ್ತಮುಮಂ ಮುತ್ತಮುಮಂ ಬಳ್ಳಿಯುಮಂ ಕಳ್ಳಿಯುಮಂ ಕಳೆದು ಪೋಗಿ –

ಸಾಟೋಪಭೂಪಚಾಪ
ಜ್ಯಾಟಂಕಾರಕ್ಕೆ
ಸುಗಿದು ಸಮದೇಭಕರೋ
ನ್ಮೋಟಿತಮಹೀಜಮಂ
ವಿಂ
ಧ್ಯಾಟವಿಯಂ
ಪೊಕ್ಕುದಾ ಮಹೋಗ್ರವರಾಹಂ         ೧೭

ಅಂತು ಪೊಕ್ಕು ಸೂಜಿ ಸಲ್ಲದ ಪೆರ್ಮರಂಗಳೊಳಗೆ ಮುದುಕಿ ಮಾಯಮಾಗಿ ಪೋಪುದುಂ ನಿಂದು ಪರಿಭಾವಿಸಿ ಪಿರಿಯ ಮರದ ನೆೞಲ್ಗೆ ಸಾರ್ದು ಬಿಲ್ಲನೂಱಿ ಕೊಪ್ಪಿನೊಳ್ ಕೈಯಂ ಸಾರ್ಚಿ ನಟ್ಟದಿಟ್ಟಿಯಂ ಜಾನಿಸಿ ಬಿಲ್ಲುಂ ಬೆಱಗುಮಾಗಿ ತನ್ನನುಚಿತಾವೇಗಕ್ಕಂ ಯಥಾಯಥೋದ್ವೇಗಕ್ಕಂ ಮನದೊಳೆ ನಕ್ಕು ಕುರುಳ ಸುರ್ಬಿಂ ಪುರ್ಬಿಂಗಿೞುವ ಬೆಮರ ಬರಿವೊನಲಂ ಸುಟ್ಟುಂಬೆರಲಿಂ ತೊಡೆದೀಡಾಡುತ್ತುಂ ತನ್ನ ಬರವಂ ನೋಡುತ್ತುಂ ನಾಡೆಯುಂ ಬೞಲ್ದು ಜೋಲ್ದು ಜಾನಿಸುತಿರ್ದ ರೂಪ ಕಂದರ್ಪದೇವನಂ ಮಕರಂದನೆಯ್ದೆವಂದು ಕೆಲದೊಳ್ ನಿಂದು ತಿಱೆದು ತಂದ ತಳಿರಿಂ ಬೀಸಿ ಮುಗಳ್ನಗೆಯಂ ಮೊಗಕ್ಕೆ ಸೂಸಿ ಮೆಲ್ಲನಿಂತೆಂದಂ –

ಇಂ ಧ್ಯಾನಿಸಲೇಂ ಕೃತನಯ
ನಾಂಧ್ಯಮನರುಣಾಶ್ಮರಶ್ಮಿ
ಸೂತಪ್ರಾತ
ಸ್ಸಂಧ್ಯಮನವಲೋಕಿಪಮೀ

ವಿಂಧ್ಯಮನಿದನುೞಿದು
ಬಿನದಮಾವುದುಮುಂಟೇ      ೧೮

ನಡುವಗಲಾದುದು ನೀಂ ನೀ
ರಡಸಿದೆಯುದಕಾಶ್ರಯಂಗಳಂ
ಕಾಣ್ಬನ್ನಂ
ನಡೆವಮೆನುತ್ತಲ್ಲಿಂದಂ

ನಡದರ್
ಬಿಂಮೆಂಬ ಬಿಂಜದಡವಿಯೊಳವರ್ಗಳ್       ೧೯

ಅಲ್ಲಿ ಮರವಾ‌ಯ್ದು ಕೊರ್ಬಿದ
ಪುಲ್ಲಿಂ
ಪೆರ್ಮರನನಡರ್ದು ಪರ್ಬಿದ ನಾನಾ
ವಲ್ಲಿಗಳಿಂ
ಕೞ್ತಲೆ ತನ
ಗಲ್ಲದೆ
ಮಾವರ್ಮಲೆವುದಿಂದುಗಂ ದಿನಪತಿಗರ         ೨೦

ಎಲವದ ಬೇಲ ಚೆನ್ನಗೆಯ ಪೊನ್ನೆಯ ಕಮ್ಮರದಾರ ಕೇರ ನೇ
ಳಲ
ಸಿರಿತಾಳೆಯಿಂಗುಳದ ನೆಲ್ಲಿಯ ನೀವದ ಸೋಲೆಯಾಲದಿಂ
ಚಿಲಕರಿಬೇವಿನಂಬಟೆಯ
ತಾಱೆಯ ತಂಡಸಿನಾಸಿನಾನೆಬೊ
ಬ್ಬುಲಿಯರನೇಱಿಲಂಕೊಲೆಯ
ಸೆಳ್ಳ ತಮಾಳದ ಪಾರಿವಾಳದಾ ೨೧

ತದಕಿನ ತಾಳ ತೆಂಗಿನ ತಳಂಕಿನ ತುಂಬುರ ಚಿಲ್ಲ ಬೆಲ್ಲವ
ತ್ತದ
ಬಿಳಿಯತ್ತಿಯಿಪ್ಪೆಯ ಮರಂಗಳ ಕೊಂಬುಗಳಂಬರಂಬರಂ
ಪುದಿದು
ಪೊದೞ್ದು ಸುರ್ಬಡರೆ ಪರ್ಬಿರೆ ಕಾರಿರುಳೋಳಿ ಕೊಂಬುಗೊಂ
ಡುದೆನೆ
ಕಱಂಗಿ ಕೞ್ತಲಿಸುತಿರ್ದುದು ಕಾನನವೆತ್ತ ನೋೞ್ಪೊಡಂ  ೨೨

ಫಳಿನೀ ಮೀಳತ್ತಮಾಳದ್ಯುತಿಮಳಿನತೆಯಿಂ ನೀಳಶೈಳಾಂಬುದಶ್ಯಾ
ಮಳಸಂಕೀರ್ಣಾಂಶುವಿಂ
ಕಬಳಶಬರೀಕೇಶಕೃಷ್ಣಪ್ರಭಾಸಂ
ಕುಳದಿಂ
ಭಲ್ಲೂಕಕಾಳೋರಗಕುಳಕಳಿತೋನ್ಮೇಷಕಲ್ಮಾಷಮಾಷಾ
ವಿಳಕಾಂತಿವ್ರಾತದಿಂ
ನೂರ್ಮಡಿಸಿದುದು ವನಾಗಾರ ಘೋರಾಂಧಕಾರಂ ೨೩

ಬಿಟ್ಟ ಕೆಲದಿಂದಮೇ ಬೂ
ತಟ್ಟಿದುದೆನೆ
ದಿನಕರಂಗೆ ತತ್ಕಾನನದೊಳ್
ಮುಟ್ಟಿದುದಜಗರಮುಖದಿಂ

ಪುಟ್ಟಿದ
ವಿಷವಹ್ನಿಯುಗುೞ್ವ ಕರ್ಬೊಗೆ ಮುಗಿಲಂ        ೨೪

ತಲೆವಣಿಯ ಫಣಿಗಳುಂ ಸುಲಿ
ಮೊಲದಡಗಂ
ಪೊತ್ತ ಬೇಡರುಂ ಮರಗಳ
ೞ್ತಲೆ
ತಲೆಮುಟ್ಟಿಡಿದಿರೆ ಮುಂ
ದಲೆಯೊಳ್
ಸೊಡರಿಟ್ಟು ನಡೆವ ತೆಱದಿಂ ನಡೆದರ್     ೨೫

ಪುದಿದಡವಿಯ ಕೞ್ತಲೆ ಸೂ
ಲದೊಳಿಕ್ಕಿದೊಡಿೞಿದು
ಸೋರ್ವ ತಿಂಗಳ ಪೆಣದಂ
ದದಿನಿರ್ದುದುರ್ವಿ
ಕೆಳಗು
ರ್ಕಿದ
ನೆಯ್ಯಿಂ ಜೇನ ಪುಟ್ಟಿ ಪೆರ್ಮರಗಾಡೊಳ್         ೨೬

ಎನಿತದು ಕೞ್ತಲಿಸಿದೊಡಂ
ವನೇಚರರ್
ಸುೞಿವರಡರೆ ಪೊಳೆದಡಗದ ಮಿಂ
ಚಿನ
ಗೊಂಚಲಂತೆ ಮಿಂಚುವ
ವನಚರಿಯರ
ಬಿಳಿಯ ಕಣ್ಣ ಬೆಳಗಿಂ ಬನದೊಳ್        ೨೭

ನಳನಳಿಸಿ ನಯದೆ ಬರುತಿ
ರ್ಪೆಳವರಗಳ
ಕೊಂಬುಗೊಂಡು ಮುಱಿಯದ ತೆಱದಿಂ
ತಳೆದೆತ್ತುವಂತೆ
ಬಾನಂ
ತಳಿರಿಂ
ಮೋದಿದುವು ಮುಗಿಲನಲ್ಲಿಯ ಮರಗಳ್       ೨೮

ಮುಗಿಲಂ ಮರಗಳ ತುದಿಗೋ
ಡುಗಳೊಳೆ
ದಳ್ಳಿಱಿದೊಡದಿರ್ದು ಕೆದಱಿದ ಕಿಱುದಾ
ರೆಗಳೆನಿಪುವು
ಕಾನನದೊಳ
ಗೊಗುಮಿಗೆ
ಪರೆದಿರ್ದ ಪಿರಿಯ ನೆಲ್ಲಿಯ ಕಾಯ್ಗಳ್      ೨೯

ಹರಿಜೃಂಭಾಭಾತ್ಕ್ರತಂ ಫೇರವಪಟುಪೃಥುನಾದೂತ್ಕೃತಂ ಚರತ್ಸೂ
ಕರಸೇನಾಸೂತೃತಂ
ಕೌಶಿಕಘಟಿತಪುಟೋಘತ್ಕೃತಂ ಚಂಡಶಾಖಾ
ಚರಚೀರೀಚಿಲ್ಲಿಭಿಲ್ಲೀಚಮರಮೃಗಚಮೂಚೀತ್ಕೃತಂ
ಪೆರ್ಚಿನಿಚ್ಚಂ
ಪಿರಿದೊಂದಾಕಂಪಮಂ
ಕಾಡೊಡೆಯನೆರ್ದೆಗಮಾಕಾಡು ಮಾಡುತ್ತುಮಿರ್ಕುಂ      ೩೦

ಶರಭದ್ವೀಪಿದ್ವಿಪೇಹಾಮೃಗಮಹಿಷವೃಕಕ್ರೋಡಖಳ್ಗಾಬುಭುಕ್ಸಂ
ಬರಗೋಳಾಂಗೂಳಗೌಧೇಯಕಕಳಕಳಿತಂ
ಕೋಕಕೋಯಷ್ಟಿ ಘರ್ಮು
ತ್ಕರಟವ್ಯಾಘ್ರಾಟಕಂ
ಕುರ್ಕುರಕುರರರದವ್ಯೂಹದಂಶಾಹಿಕಾತಿ
ತ್ತಿರಿಕೇಕೀಭಾಷ
ಕಾದಂಬಕಬಕಕೃತಕೋಳಾಹಳಂ ತದ್ವನಾಂತಂ         ೩೧

ಹರಿಜೃಂಭಾರವಭೀತಕುಂಭಿಕಳಭಂ ಶೈಲಿ ಸ್ವನಾತಂಕಿ
ತ್ತಿರಿಕಾರಕ್ಷವರೂಕ್ಷಗಂಧಗಹನಾಪಕ್ರಾಂತಭಲ್ಲೂಕಭೀ

ಕರದರ್ವೀಕರವಕ್ತ್ರಮುಕ್ತವಿಷಮಹ್ನ್ಯುದ್ದಾಮಭೀಮಾವೃತೋ

ದರ
ತಿರ್ಯಗ್ಬಿಲನಿರ್ಗತೋಂದುರದರಗ್ರಾಸಾರ್ಜಿಮಾರ್ಜಾರಕಂ          ೩೨

ವಿಕಿರಾಕೀರ್ಣ ವರಾಹದಂತದಳಿತಂ ವ್ಯಾಘ್ರಾಕರಂ ವ್ಯಗ್ರಜಂ
ಬುಕಭಗ್ನದ್ವಿರದಾಂಘ್ರಿರುಗ್ಣವಿಗಳತ್ತಾರಾಗ್ರ
ಕಾಳೇರವಂ
ವೃಕವೃಂದಾವೃತಸಿಂಹಸಂಹತಿ
ಕಿರತ್ಕಿನ್ನಾಮಿಷಾಲಭ್ಯಲು
ಬ್ಧಕಕೌಳೇಯಕುಳಾಕುಳಕ್ವಣಿತಸಂತ್ರಸ್ತ್ರೈಣಿಕಂ
ತದ್ವನಂ        ೩೩

ಗಿರಿಘಾತದ್ವಿಪದಂತಭಗ್ನವಿಶದಂ ಶಾರ್ದೂಲಸಂದಷ್ಟಶಂ
ಬರರಕ್ತಾಹಿತಲೋಹಿತಂ
ರುರುಗಳಗೃದ್ದಾಹಿತೋಚ್ಚರ್ಮಮ
ರ್ಮರಕಾಳಾಹಿಕಳೇವರಾವಿಳಯಮನೇಕಶ್ಚಾಪದಾನೀಕನಿ

ಷ್ಠುರತುಂಡತ್ರುಟಿತಾವಕೀರ್ಣದರವೃತ್ತಾಕಾನನಂ
ಕಾನನಂ      ೩೪

ಅಂತು ಭೀತಿಯ ವಿಭೂತಿಭವನಮುಮಪಾಯದುಪಾಯಾಸ್ಪದಮುಮೆನಿಸಿ ಪೊಲಗಿಟ್ಟು ಪೊಕ್ಕ ಭೂತಕೋಟಿಗಂ ಭಯಜ್ವರಮನಾಗಿಸುವ ಮನೋಹರತೆಗೆ ಬಂಜೆಯಾದ ಬಿಂಜದಡವಿಯೊಳಗೆ ಕಾಳಿಂದಿಯ ಮಡುವಿನೊಳ್ ಮುೞುಗಿ ಪೋಪನಂತೆಯುಂ ತಮಿಸ್ರ ಗುಹೆಯಂ ಪೊಕ್ಕು ಪೋಪಂತೆಯುಂ ಕಾಡಿಗೆಯ ಬೆಟ್ಟಮಂ ಬಗಿದು ಪೋಪಂತೆಯುಮೆತ್ತಾನುಂ ಪಿರಿದಂತರಮಂ ಪಾಯ್ದು ಪೋಗಿ –

ಸುಡುವಡಗಿಂ ಕರಂ ಪೊಗೆವ ಪರ್ಬುವ ಕರ್ಬೊಗೆ ಪೆಕ್ಕಮಪ್ಪ ಪೆ
ರ್ಬಡಿಕೆಯ
ನಾತಮಾನೆಗಳ ಬಲ್ವೆಣನಂ ಬಗುಳುತ್ತೆ ಮುತ್ತಿ ಕೀ
ವಡುತೆ
ತಗುಳ್ವಿನಂ ತೆಗೆವ ನಾಯ್ಗಳಗುರ್ವಿಸುತಿರ್ಪ ತೋರ್ಪ ಪೇ
ರಡವಿಯ
ಬೇಡವಳ್ಳಿಗಳನೀಕ್ಷಿಸುತುಂ ನಡೆದಂ ನರಾಧಿಪಂ      ೩೫

ಉಗುೞಿಪ ಮೂಗಂ ಮುಚ್ಚಿಪ
ಮೊಗಮಂ
ಮೂದಿರಿಕನಾಗಿ ಪುದ್ಗಾರಮನಾ
ವಗಮೊಗೆಯಿಪ
ಬೇಡರ
ಳ್ಳಿಗಳಂ
ಪತಿ ಪಾಯ್ದು ಪೋಗೆ ಕಿಱಿದಂತರಮಂ        ೩೬

ತೊಡೆ ಮಗುಳ್ದುದು ತೋಳ್ ಸೆಡೆದುದು
ಪೆಡದಲೆ
ಸುರ್ಕಿದುದು ಕೈಗೆ ಕೆಂಪಿೞಿದುದು ಪಿಂ
ನಡು
ತಡೆವಂತಾದುದು ಮೆ
ಲ್ಲಡಿ
ಚಳಿತುದು ಪೋಪ ವಿಪುಳವಿದ್ಯಾಧರನಾ ೩೭

ಮೊನೆವರಲೊತ್ತೆ ಮೆಲ್ಲಡಿಗಳಿಂ ಬಿಸಿಲೞ್ವೆ ಬೞಲ್ದ ಮೆಯ್ಯ ಬಿ
ಱ್ಱನೆ
ಬಿಱುಗಾಳಿ ಬೀಸುತಿರೆ ಮೆಲ್ದುಟಿ ನಿಷ್ಠುರಮಾಗೆ ಗಂಟಲು
ಳ್ಳನಿತುವರಂ
ತೆರಳ್ದೊಣಗೆ ನಾಲಗೆ ನಿಬ್ಬರಮಾಗೆ ಕಣ್ಜೊಡರ್
ಕನಲದೆ
ನಂದೆವೊಯ್ದ ತೆಱನಾಗೆ ತೃಷಾತುರನಾದನಾ ನೃಪಂ  ೩೮

ತೇಜಕ್ಕೆನ್ನೊಳ್ ಸೆಣಸುವ
ನೀ
ಜನಪತಿಯೆಂದು ಕಾಯ್ದ ತೆಱದಳುರ್ದಂ ನೀ
ರೇಜಸಖಂ
ಕಾಯ್ದ ಕದಿ
ರ್ಸೂಜಿಗಳಿಂದೊತ್ತಿನೆತ್ತಿಯಂ
ಕುತ್ತುವವೋಲ್          ೩೯

ಕಡುವಿಸಿಲಳುರ್ವಂತಿರೆ ಕೆಂ
ಪಡರ್ದುದು
ಮೊಗಮಿರ್ಪು ಸಾರ್ವವೊಲ್ ಕೊರಲೆಡೆಯಂ
ದೆಡೆಯುಡುಗದೆ
ಬೆಮರ್ವನಿಗಳ್
ಬಿಡೆ
ಬಱಬಱ ಬತ್ತಿದತ್ತು ಬಾಯ್ದೆಱೆ ನೃಪನಾ   ೪೦

ಕುಸಿಯುತ್ತುಂ ಕೂಂಟುತುಂ ನುಣ್ಮೞಲೊಳಡಿಗಳಂ ಪಾಸಿ ಮೆಟ್ಟುತ್ತುಮೆಂಟುಂ
ದೆಸೆಯಂ
ರಕ್ತಾಲಸಾಪಾಂಗದಿನೆಳವಿ ಜಲೋದ್ದೇಶಮಂ ಭಾವಿಸುತ್ತಂ
ಬಿಸುಸುಯ್ಯಂ
ಸುಯ್ಯುತುಂ ಪೆರ್ಮೆಳೆಗಳ ನೆೞಲಂ ಪೊರ್ದುತುಂ ಕುಳ್ಳಿರುತ್ತುಂ
ವಸುಧೇಶಂ
ಕ್ಲೇಶದಿಂದಂ ನಡೆದನಡವಿಯೊಳ್ ದುಃಖಮೇಂ ಸೀಯನುಂಟೇ        ೪೧

ನೆವದಿಂ ನೀರ್ದಾಣಮಂ ಸೂಚಿಸುತೆಲೆಗೊಡೆಯಂ ಸಾರ್ಚುತುಂ ಸ್ವೇದಬಿಂದು
ಪ್ಲವಮಂ
ಸೀಂಟುತ್ತೆ ಕುಳ್ಳಿರ್ದೆಡೆಯೊಳಡಸಿ ನೆರ್ಮಾಗುತುಂ ಮಾರ್ಗದೊಳ್
ಲ್ಲವಮಂ
ಪಾಸುತ್ತೆ ತನ್ನಾಸಱನಱಿಯದೆ ಸಂತೈಸುತುಂ ಕೈಗುಡುತ್ತಂ
ದವನೀಶಂಗಾಸೆಯಾದಂ
ಪ್ರಿಯಸಚಿವಸುತಂ ಭೃತ್ಯನಿಂತಾವೇಡಾ       ೪೨

ಅಂತಳವಿಗಳಿದ ಪಿಪಾಸೆಯುಂ ಪಸಿವುಮಸಮಯಂಬಡೆದು ಮುನ್ನಂ ತನ್ನ ಮನಮನಳುರ್ದು ನೂಂಕಿ ಕಳೆದು ಕಾಮಾನಳನಳರ್ದು ಕಳೆವಂತಳುರೆ ಬೞಲ್ದೞಲ್ದುಂ ಧೃತಿಯನವಳಂಬಿಸಿ ಬಿಸಿಲಂ ಬೆನ್ನೊಳಿಕ್ಕಿ ನೀರ್ನೆೞಲನಱಸಿ ಗುಗ್ಗರಿಗಲ್ಲವರಿವರಲ ತರಿಮೊರಬಿನ ನುಚ್ಚುವಣಲ ನೀರಱಿದಸು ಪರಿದು ದಿಂಟೆಯ ದರಿಯ ಕುಳಿಯ ಕುತ್ತುಱ ಕುೞಿವಳ್ಳಮಂ ಕಂಡದಱ ಬೞಿವಿಡಿದು ಬೆಳೆದ ಬಳ್ಳಿಯ ಪಸಿಯ ಪುಲ್ಲ ಪೂಲಿಯನಾನಲನಱಿದು ನಡೆವಾಗಳೊಂದೆಡೆಯೊಳ್ –

ಮಿಱುಗುವ ಬೆಳತಿಗೆಗಣ್ಬೊಣ
ರೊಱತೆಯ
ಜಲದೊಳಗೆ ಪೊಳೆಯೆ ನೀರ್ಗುಡಿವುದುಮಂ
ಮಱಿದೆಳಮೀನ್ಗಳ್ಗೆತ್ತೇಂ

ಕಿಱುವೇಡಿತಿ
ತುಡುಕಿ ಶಬರನಂ ನಗಿಸಿದಳೊ ೪೩

ಅದಂ ಕಂಡವನಿಪಾಳನಿವಳುಮೀ ಜಳಮುಂ ದೃಶ್ಯಮಲ್ಲದೆ ಪರಿಸ್ಪೃಶ್ಯಮಲ್ಲೆಂದಲ್ಲಿಂ
ತಳರ್ದು ನಡೆಯೆ ಮತ್ತೊಂದೆಡೆಯೊಳ್ –

ಮೊಗದೊಳ್ ಕಣ್ ಪೊಳೆಯುತ್ತಿರೆ
ಬಗರಗೆಯೊಳ್
ಪೊಳೆವ ಮೀನ್ಗಳಂ ಕಂಡರಸಂ
ಮೊಗೆವೊಡೆ
ನೀರ್ನೆಱೆಯವೆನು
ತ್ತಗಲ್ದನಲ್ಲಿಂದೆ
ಕರುಣಮಾಱಿಸೆ ತೃಷೆಯಂ    ೪೪

ಮತ್ತೊಂದೆಡೆಯೊಳ್ –

ಸುಱಿಸುಱಿದು ನೀರನಿರದೌ
ಡಿಱಿದಂಬೂಕೃತದಿನುರ್ಕಿದುಗುಳ್ಗಳ
ನೊರೆಯಂ
ಪಱಿದಿಕ್ಕಿದಂತೆ
ತುಱುಗಿ
ರ್ದೊಱತೆಯನಿದು
ಕರಡಿ ಕುಡಿವ ತೆಱನೆಂದಱಿದಂ     ೪೫

ಮತ್ತೊಂದೆಡೆಯೊಳ್

ಪುಲಿ ನೀರುಣುತಿರೆ ಪಾಯ್ದೆ
ಕ್ಕಲವಂದಿ
ತದೀಯ ವಿಪುಳಗಳವಿಗಳದಸೃ
ಗ್ಜಲದಿಂ
ಬಗರಗೆ ತೀವಿದೊ
ಡೆ
ಲವಲಿಕೆಯಿನೂಡಿ ಪೋದುದೆಂದಱಿದರಸಂ         ೪೬

ಅಂತು ಪೋಪಿನಮೊಂದೆಡೆಯೊಳಿಡಿದ ಮೞಲೇಱಿಗೊಂಡು ಬಳಸಿ ತಿಳಿದ ತೆಳ್ಳೊಱತೆಯೊಳ್ –

ನಿಮಿರ್ದ ಕೊರಲ್ ಮರಲ್ದು ಮಡಿದೂಱಿದ ಮುಂದಣ ಕಾಲ್ಗಳೆರ್ದ
ಶ್ಚಿಮತನು
ಜೋಲ್ದುರಂ ಪೆಱಗನಪ್ಪಿನ ಕೊಂಬುಗಳಾಲಿಸುತ್ತೆ ವಿ
ಶ್ರಮಿಸುವ
ಕರ್ಣಮುಳ್ಮಗುಳ್ದ ಕಣ್ ಮಿಡುಕೋಡುವ ಕಂಠನಾಳಮಂ
ದಮರ್ದಿರೆ
ನೀರನುಂಬೆರಲೆಯಂ ಬರಲೊಲ್ಲದೆ ನೋಡಿದಂ ನೃಪಂ        ೪೭

ಅದಂ ಕಲಕಿಕ್ಕಿ ಪೋಗೆ ಮುಂದೊಂದು ಮಮ್ಮರದವೊಲ್ ಬಿಗಿದ ಬಗರಗೆಯೊಳ್ –

ಕಡುಬಡವಾಗಿ ಮುಂಬಯಕೆಯಿಂ ಬಿಸಿಲೞ್ವೆ ಕರಂ ಬೞಲ್ದು ಮೆ
ಲ್ಗುಡುಕು
ಗೊಳಲ್ಕಮೊಲ್ಲದಿರೆ ಮೆಲ್ಲಗೆ ತಂದು ಪೊದೞ್ದ ಪೀಲಿಯಂ
ಪಿಡಿದು
ಮೊಗಕ್ಕೆ ನೀಡಿ ಕೊರಲಂ ತಿಳಿನೀರ್ಗಳನೀಂಟಿ ಕೊಂಡು ಬಾ
ಯ್ವಿಡುವ
ಮಯೂರಿಗೇಂ ಮುಱಿದು ನೀಡುತುಮಿರ್ದುದೊ ಸೋಗೆ ಬೇಗದಿಂ       ೪೮

ಅದಂ ನೋಡುತ್ತುಂ ನಡೆಯೆ ಮತ್ತೊಂದೆಡೆಯೊಳ್ –

ಕುಡಿದು ಚಳಲ್ಚಳಲ್ಗರೆಯೆ ನಾಲಗೆಯಂ ಮಿಗೆ ನೀಡಿ ನೀರನೋ
ಗಡಿಸಿ
ಮರಲ್ದು ನಕ್ಕಿ ತುಟಿಯಂ ಕಡೆವಾಯ್ಗಳನಗ್ರಪಾದದಿಂ
ತೊಡೆದು
ತಡುಂಬಿ ತಾತೊಡಬಗೆತ್ತುವ ಮಾಗುಳಿಸುತ್ತೆ ಬಿಟ್ಟು
ಣ್ಜೊಡರ್ಗಳನಿಕ್ಕೆಲಕ್ಕಡಸಿ
ಪೋಪ ತರಕ್ಷುವನುದ್ಬುಭುಕ್ಷುವಂ      ೪೯

ಅದಂ ಪಿಂತಿಕ್ಕಿಯಾಪಳ್ಳದೊಳೊಳುಳ್ಳ ನೀರನೆಲ್ಲಿಯುಂ ಪಡೆಯದೆ ಪೊಱಮಟ್ಟು ಬಟ್ಟೆಗೊಂಡು ಪೋಗಿ ಪೊಗಲಾರದಸಕೞದ ಪಿಪಾಸೆಯಿಂ ಬಸವೞಿವ ಮಾನವ ಮದನನಂ ಮಕರಂದಂ ಮೆಲ್ಲನೆ ಮೆಳೆಯೆ ನೆೞಲ್ಗೆ ತಂದು ನೆಮ್ಮಿಸಿಕೊಂಡು ನಿರ್ಮಾನುಷಮಪ್ಪ ಕಾನನದೊಳ್ಪಾನೀಯಮನಱಸುವುಪಾಯಮಾವುದೆಂದು ಕಿಂಕರ್ತವ್ಯತಾಮೂಢಂ ದಿಗವಳೋಕನಂಗೆಯ್ಯುತ್ತಿರೆ ತೊಟ್ಟನೆ ಕಟ್ಟಿದಿರೊಳ್ –

ತಿಗ್ಮಾಂಶುದ್ಯೋತಿಗಡ್ಡಂ ಮಱೆವಿಡಿದುಡಿದಂಭೋಜಮಂ ಭ್ರಾಜಿವೇಣೀ
ಸ್ರಗ್ಮಗ್ನಾಳಿಬ್ರಜಂ ಪೀಲಿಯ ಪೊಸದಳೆಯಂ ಪೋಲೆ ಭೂಪಾಳಲೋಳ
ದೃಗ್ಮೀನಂ ತನ್ನ ಲಾವಣ್ಯದ ತಿಳಿಗಡಲೊಳ್ಸೂಟಿವಂದಾಡೆ ಬಂದಳ್
ದಿಗ್ಮೂಳೋಪಾಂತದೊಳ್ ಪಜ್ಜಳಿಸಿ ಪರಪುತುಂ ಕಾಂತಿಯಂ ಕಾಂತೆಯೊರ್ಬಳ್   ೫೦