ಶ್ರೀರಮಣೀಪ್ರಿಯನಂ ಗಂ
ಭೀರತೆಯಿಂ
ಪೋಲ್ತು ವಾರ್ಧಿಯುಂ ಪೋಲ್ತುದಱಿಂ
ಧಾರಿಣಿಯ ಕಾವುದತಿ

ಸ್ಫಾರಂ
ತತ್ಪುರದ ಗಿರಿವಿಶಾಳಂ ಸಾಳಂ     ೧

ಕಾವುದಿದು ತನ್ನ ಪಡೆದ
ರಾವಳಯಮನೆಂದು
ಪುರದ ಕೋಂಟೆಗೆ ಧಾತ್ರಂ
ಜೀವಂಬೊಯ್ದಂತಿರೆ
ಪರಿ
ಖಾವಾರಿ
ತರಂಗಬಿಂಬ ತರಳಿತಮೆಸೆಗುಂ    ೨

ಕೋಟೆಯ ಕೊನೆದೆನೆ ನೆಗೆದಿಱಿ
ವಾಟಿಸೆಕುದುರೆಗಳನವಱ
ಕಾಲ್ ನಡುಮುಗಿಲೊಳ್
ನಾಟುತಿರೆ
ದಿನಕರಂ ಬರ
ಲಾಟಿಸುವಂ
ದಕ್ಷಿಣೋತ್ತರಾಯಣಯುಗದೊಳ್         ೩

ಮುಗಿಲಂ ಮುಟ್ಟಿದಪೊಂಗೋಂ
ಟೆಗೆ
ತರದಿಂ ತೆನೆಯ ತುಱುಗಲೆಡೆದೆಱಪುಗಳಿಂ
ಸೊಗಯಿಸಿದುವು
ನಡೆಗೆಟ್ಟಿರೆ
ಭಗಣಂ
ಸಲೆ ಬಟ್ಟೆಗೊಟ್ಟವೊಲ್ ಸುರರಾಜಂ  ೪

ಕೊನೆ ನಿಮಿರ್ದಟ್ಟಳೆಗಳ ಕೇ
ತನರಕ್ತಪಟಾಳಿ
ಕವಿಯೆ ಮೊಗದೊಳ್ ಮೊಗಸು
ತ್ತಿನನ
ಪಸುರ್ಗುದುರೆ ಕೋಂಟೆಯ
ತೆನೆಯೊಳ್
ಗಿಳಿವಿಂಡು ಕವಿವವೊಲ್ ಕರಮೆಸೆಗುಂ    ೫

ಬಿಸಿಲಂ ಪೊಂಗಳಸಂಗಳಚ್ಚವೆಳಗಿಂ ತಳ್ಕೈಸುತುಂ ತೞ್ತು ಚುಂ
ಬಿಸುತುಂ
ವ್ಯೋಮಮನುಚ್ಚಕೇತುಚಯದಿಂ ನೀಲಾಭ್ರಮಂ ಮೇಲೆ ನಿ
ರ್ಮಿಸುತುಂ
ಧೂಪಜಧೂಮದಿಂದ ಪಟಹಪ್ರಧ್ವಾನದಿಂ ಕೂಡೆ ಘೂ
ರ್ಣಿಸುತುಂ
ದೇವಕುಳಂ ಕುಳಾದ್ರಿಕುಳದಂತಲ್ಲಿರ್ಪುವವ್ಯಾಕುಳಂ

ಜಯವೊಡೆದಿಕ್ಷುಚಾಪಮೆನೆ ಜರ್ಬುವ ಪುರ್ಬು ಪೞಂಚೆ ಲೋಚನಾ
ಸಿಯ
ಪೊಳಪೇಱೆ ಪೀವರಕುಚಂ ಕರಿಕುಂಭದ ಚೆಲ್ವನೆಯ್ದೆ ಕೈ
ಗೆಯೆ
ಜಗಮಂ ಗೆಲಲ್ ಸಮಱಿದಂಗಜನೊಡ್ಡಣದಂತೆ ಸೂಳೆಗೇ
ರಿಯ
ಮಣಿಮತ್ತವಾರಣದೊಳಿರ್ಪುದು ವಾರವಿಳಾಸಿನೀಜನಂ   ೭

ಮದನನೃಪಂಗೆ ಬೀಸುವಲರ್ಚಾಮರಮಂಗಜಚಕ್ರವರ್ತಿಗೆ
ತ್ತಿದ
ವಿಪುಳಾತಪತ್ರಮತನುಕ್ಷಿತಿಪಾಲನ ರಾಜ್ಯಲಕ್ಷ್ಮಿಯೇ
ಱಿದ
ಮೃದುಪೀಠಮಾದ ನಗೆಗಣ್ಗಳ ವೃತ್ತಕುಚದ್ವಯಂಗಳ
ಗ್ಗದ
ವದನಾಂಬುಜಂಗಳ ಬೆಡಂಗಿಯರಲ್ಲಿಯ ಸೂಳೆಗೇರಿಯೊಳ್         ೮

ಅಂಗಳದೊಳ್ ಪೊದೞ್ದೆಸೆಯೆ ಕೌಮುದಿ ಮುಗ್ಧೆಯರಿಂದುಕಾಂತಗೇ
ಹಂಗಳ
ನೋಡಿ ಪೊಕ್ಕವಱ ಬೆಳ್ವೆಗಳಂ ಬೞಿಸಂದು ಬಂದ ಬೆ
ಳ್ದಿಂಗಳೆ
ಗೆತ್ತು ನೀಳನಿಳಯಂಗಳ ಕೞ್ತಲೆಯತ್ತ ಸಾರ್ದೊಡಾ
ಲಿಂಗಿಪರಲ್ಲಿ
ಮೆಯ್ಗರೆದ ವಲ್ಲಭರಾಱಿಸಲಂಗಜಾಗ್ನಿಯಂ          ೯

ನಡೆ ನೋೞ್ಪರ ಕಡೆಗಣ್ಣುಂ
ಕಡುನಲ್ಲರ
ಮನಮುವೊಡನೆ ಪೊತ್ತುವು ಪುರದೊಳ್
ಮಡದಿಯರ
ಮೊಲೆಯನಲ್ಲದೊ
ದುಡಿಯದೆ
ಬಳ್ವಳಿಕೆವಡೆದ ಬಡನಡು ಭರದಿಂ ೧೦

ಎಳಸೊರ್ಕಂ ಸೂಸೆ ಕೆಯ್ತಂ ಮುಗುಳನುಗುೞೆ ಮಂದಸ್ಮಿತಂ ಮೋದೆ ಕಂಪಿಂ
ದಳಿಯಂ
ವಕ್ತ್ರಾಮಿಂಪಂ ಕಱೆಯೆ ಕಳರವಂ ಬೀಱೆ ಸೌಭಾಗ್ಯಮಂ ಭ್ರೂ
ಚಳಿತಂ
ಕಂದರ್ಪಚಾಪಕ್ಕತನುನೃಪನ ತೋಳ್ಗೀಯೆ ಕೂರ್ವಾಳ ಬಂಬ
ಲ್ವೆಳಪಂ
ನೇತ್ರತ್ರಿಭಾಗಂ ಸುೞಿವುದು ಪೊೞಲೊಳ್ ವಾರನಾರೀಕದಂಬಂ         ೧೧

ಮೃಗಮದಮೆಯ್ದೆ ಕಣ್ಣ ಬೆಳಗಿಂ ಮಲಯೋದ್ಭವದಂತೆ ತೋಱೆ ತುಂ
ಬಿಗಳಿದಱಚ್ಚಗರ್ಪುಗಳನುಂಡೆಳಗರ್ಪನೆ
ಪೋಲ್ತುವೆಂಬವೋಲ್
ನೆಗೆಯೆ
ತೆರಳ್ದ ಕಂಪಿನೆಲರೊಳ್ ನಱುಸುಯ್ಗಳ ಗಾಳಿ ತೋಟಿಯಂ
ತೆಗೆದು
ಮಗುೞ್ಚೆ ಕತ್ತುರಿ ಮಗುೞ್ಚುವರಲ್ಲಿಯ ಘಟ್ಟಿವಳ್ತಿಯರ್     ೧೨

ತನಿಗಂಪನೆತ್ತಿ ಪುಗಲರಿ
ದೆನಿಸುವ
ಸುರಿದರಲ ಬಂಡು ಕಣೆಕಾಲುದ್ದಂ
ಜನಕೆನಿಸುವ
ಪೆಂಪಿನ ಪೂ
ವಿನ
ಸಂತೆ ಕರಂ ಮನೋಹರಂ ಪುರವರದೊಳ್       ೧೩

ತರಳಾಪಾಂಗಂಗಳೊಳ್ ಮಚ್ಚರಿಪಲರ್ಗಣೆಯಂ ಕಟ್ಟಿ ತೂಪಂದದಿಂ ಚಾ
ಮರಮಂ
ವಕ್ಷೋಜಪೀಠಸ್ಥಿತಮದನನೃಪಂಗೆತ್ತುವಂತೆತ್ತಿ ಪೂವಂ
ದರಹಾಸಶ್ರೀಯನೀವಂತಿರೆ
ಪೊಸನನೆಗಳ್ಗಂತವಂ ಸುಯ್ಯ ಕಂಪಿಂ
ಪೊರೆವಂತಾ
ಸಂತೆಯಿಂದಂ ತೊಲಗದು ಸತತಂ ಪುಷ್ಪಲಾವೀಕದಂಬಂ ೧೪

ಎಲೆ ತಮ್ಮ ಕದಂಪಿನ ಮಾ
ರ್ತಲೆಯೆಂದೀಕ್ಷಿಸಿದ ಮಾಲೆಗಾರ್ತಿಯರಲರ್ಗ
ಣ್ಮಲರ್ವೆಳಗು
ನಟ್ಟವೋಲ್ ಬಿಳಿ
ಯೆಲೆಗಳ್
ತಂಬುಲಿಗವಸರರೊಳ್ ಕರಮೆಸೆಗುಂ      ೧೫

ಪಸರಿಸುವ ಘಟ್ಟಿವಳ್ಳರ
ಪಸರದ
ಪೊಸಗಂಪನಲಸೆದುಂಡೞ್ಕಮೆಯಂ
ಪೊಸೆದು
ಕಳೆವಂತೆ ಗಂದಿಗ
ವಸರದ
ಗಂಧಕ್ಕೆ ಪಾಯ್ವುವಳಿಗಳ ಬಳಗಂ   ೧೬

ಆಗಸಮನುಗಿವ ಮನೆಗಳ
ದೇಗುಲದಿಡಿವುಗಳೊಳಡಿಯನಿಡಲಱಿಯದೆ
ತಾ
ರಾಗಣಮಿಳೆಗಿೞಿದಂತೆವೊ

ಲಾಗಿರ್ಕುಂ
ಪುರದ ಕಂಚಗಾರಱ ಪಸರಂ     ೧೭

ಶರನಿಧಿಯೆಂಬ ಕೆಯ್ಯ ಬೆಳಸಂ ಬಿದಿಯೊರ್ಬುಳಿಮಾಡಿ ಕೂಡಿದಂ
ತಿರೆ
ನವರತ್ನರಾಶಿನಿಕರಂ ಕನಕಾಚಳಮರ್ಕರಶ್ಮಿಯಿಂ
ಕರಗಿದೊಡಚ್ಚು
ವೆಟ್ಟಿದಮೊಲೊಟ್ಟಿರೆ ಪೊಂಗಳ ಬೆಟ್ಟು ಮುಂದೆ
ಜ್ಜರವಸರಂಗಳಚ್ಚರಿಯನೀವುವು
ನೋಡೆ ಕುಬೇರ ಲಕ್ಷ್ಮಿಗಂ      ೧೮

ಆ ಬಜ್ಜರಸಿರಿಗೆ ಪೊಚ್ಚಪೊಸ ಪಸದನಮೆನಿಸಿ –

ತೊಳಗಿದುವು ಪಂಚರತ್ನದ
ಬೆಳಗಂ
ಕೊಯ್ದೊಟ್ಟಿದಂತಿರೊಟ್ಟಿದಪಟ್ಟಾ
ವಳಿಯ
ದಿಕೂಲದ ಚೀನದ
ತಳಿರ್ವಟ್ಟೆಯ
ಪೞಿಯ ವೞಿಯ ದೂಸಿಗವಸರಂ       ೧೯

ಅಂತು ಪೊಗೞ್ತೆಗೆ ನೆಲೆವನೆಯಾಗಿ ಸಿರಿಗೆ ನೆಲೆಯಪ್ಪುದಱಿಂ ಪಾಲ್ಗಡಲಂತಾಗಿ, ಕಲ್ಪಕುಜಾಸ್ಪದಮಾದ ಮೈಮೆಯಿಂ ಮೇರುಗಿರಿಯಂ, ಅಂತರ್ಗತತ್ರಿಭುವನ ವಿಭವಮಾದ ಕಾರಣದಿಂ ಕೇವಳಜ್ಞಾನಮಂ, ಸದಾನಗಜಾಳಂಕೃತಮಾದ ಪೆರ್ಮೆಯಿಂ ಪಶುಪತಿಪ್ರತಿಮೆಯಂ, ನಿರಂತರೋಚ್ಚತುರಂಗಾಕೀರ್ಣಮಾದ ಕೀರ್ತಿಯಿಂ ಕೇಳೀನಿಕೇತನಮಂ, ಅಂಗನಾಭಿರಾಮಮಾದ ಪೆಂಪಿನಿಂ ಪ್ರಾಜ್ಯ ರಾಜ್ಯಾಂಗದಿರವಂ, ನಿರುಪಮನರಾವತಾರಮಾದ ನೆಗೞ್ತೆಯಿಂ ಪಾಂಡುಕುಳಮಂ, ದೇವಕುಲಾಧಿಷ್ಠಿತಮಾದ ವಿಖ್ಯಾತಿಯಿಂ ನಾಕಲೋಕಮಂ, ವಿಧಿಸನಾಥಮಾದ ದೆಸೆಯಿಂ ದಶರೂಪಕಮಂ ಪೋಲ್ತು ಸೊಗಯಿಸಿದುದಂತುಮಲ್ಲದೆಯುಂ –

ಅಗೞಂಭೋರಾಶಿ ಸಾಳಂ ಬಳಸಿ ಬಳೆದ ವೇಳಾಚಳಂ ವೀಧಿಗಳ್ ಸಿಂ
ಧೂಗಳತ್ಯುತ್ತುಂಗ
ದೇವಾಲಯತತಿಗಳೆ ತೞ್ತದ್ರಿಗಳ್ ರಮ್ಯಗೇಹಾ
ಳೀಗಳೂರ್ಗಳ್
ಪೆರ್ಮೆಯಿಂ ತಾನೆನೆ ಜನಮೊದವಿರ್ದಾ ಪುರಂ ಪೆಂಪು ತನ್ನೊಳ್
ಮಿಗೆ
ಜಂಬೂದ್ವೀಪಮಂ ಪೋಲ್ತಿರೆ ಸುರಗಿರಿವೋಲ್ ರಾಜಿಕುಂ ರಾಜಗೇಹಂ        ೨೦

ಬಗೆಗೊಳ್ಗುಂ ಮದದಂತಿಶಾಲೆಗಳಿನತ್ಯುತ್ತುಂಗಜಾತ್ಯಶ್ವಶಾ
ಲೆಗಳಿಂ
ಸುತ್ತಿದ ಜೇನಸಾಲೆಗಳಿನೊಪ್ಪಂಬೆತ್ತ ಸಂಗೀತಶಾ
ಲೆಗಳಿಂ
ವಿಶ್ರುತಮಂತ್ರಶಾಲೆಗಳಿನೊಳ್ಪಂ ತೀವಿದಾಸ್ಥಾನಶಾ
ಲೆಗಳಿಂ
ಕೌತುಕಕೇಳಿಶಾಲೆಗಳಿನಾ ರಾಜೇಂದ್ರರುಂದ್ರಾಲಯಂ  ೨೧

ಸಿತಮಂದುರಾಗ್ರಜನಿತ
ಪ್ರತಿಬಿಂಬಮನಿತರ
ತುರಂಗಮೆಂದಿನ ಹಯಸಂ
ತತಿ
ಶಿಳಿಱೆ ಕಿಳಿರ್ದಪುವು ಧೈ
ವತಮತಿಶಯಮಾಗೆ
ರಾಜವಾಜಿಗಳವಱೊಳ್         ೨೨

ತುಱುಗಿ ತುಂಬಿಗುರುಳ ಬಂಬಲಿದೆ ಕಪೋಲರಂಗದೊಳ್
ತುೞುಂಕೆ
ಪೊಂಗರಂಗದೊಳ್ ಮಲಂಗೆ ವಿಜಯಮಂಗದೊಳ್
ಮಿಱುಗೆ
ಪಲ್ಲ ಚವಿಗಳೊಲೆದು ನೆಲಸೆ ಚೆಲ್ವುಯಾನದೊಳ್
ಬೆಡಂಗು
ಬಳೆಯೆ ಮಾನದೊಳ್ ಮನಂ ತೊಡಂಕೆ ಗಾನದೊಳ್
ನೆಱೆಯೆ
ನವಪಯೋಧರೋತ್ಥಕುಂಭಮುಲಿಯೆ ಪಾದದೊಳ್
ಚಳಾಂದುಕಂ
ವಿನೋದದೊಳ್ ಕಡಂಗೆ ಮಧುರಮೋದದೊಳ್
ಮೆಱೆದು
ಪುಗುಗುಮಂಗನೆಯರುಮಂಕದಾನೆಯುಂ ನಮ
ನ್ನಿಕಾಮನಿಖಿಳಭುವನಮಂ
ತದೀಯರಾಜಭವನಂ     ೨೩

ತರುಣೀಲೋಚನಚಂದ್ರಿಕಾಮಳಯಜಪ್ರಕ್ಷೋದಮಂ ಕಾಮಿನೀ
ದರಹಾಸೋಜ್ಜ್ವಲಮಲ್ಲಿಕಾಮುಕುಳಮಂ
ಕಾಂತಾಮುಖೇಂದುಪ್ರಭಾ
ತರಲೋದ್ದಾಮದುಕೂಲದೀರ್ಘಪಟಮಂ
ತಳ್ಕೈಸಿ ತದ್ರಾಜಮಂ
ದಿರಲಕ್ಷ್ಮೀವಧು
ಕೂಡೆ ಬೆಳ್ವಸದನಂಗೊಂಡಂತೆ ಕಣ್ಗೊಪ್ಪುಗುಂ   ೨೪

ತರುಣೀನೇತ್ರಪ್ರಭಾಕೌಮುದಿಯಿನುದಿರ್ವ ಚಂದ್ರೋಪಳಾಗಾರಬಿಂದೂ
ತ್ಕರದಿಂದಂ
ನಾಂದು ನೀಡುಂ ಶುಕಹರಿತಹರಿದ್ವೇದಿಕಾಶಾಡ್ವಲಕ್ಕಾ
ತುರಿಸುತ್ತುಂ
ನರ್ತಕೀಕೇಕರತರುಣ ತಟಿನ್ಮಂಜರೀಸ್ಮೇರನೀಳೋ
ಪರಿಮಪ್ರಾಸಾದಸಂಗೀತಕ
ಮುರಜರವಕ್ಕಾಡುಗುಂ ಕೇಕಿವೃಂದಂ        ೨೫

ಬಿರಿಮುಗುಳಚ್ಚ ಪೂವಲಿಗೆ ಸೌಸವದಡ್ಡಿಗೆ ಸೂಸುತಿರ್ಪ
ಪ್ಪುರದ
ಪರಲ್ಗೆ ನೀೞ್ತಳಿದ ಕತ್ತುರಿಗೊತ್ತಿರುಸುತ್ತೆ ಪೋಪ ಪೆಂ
ಡಿರ
ಕುಚಕುಂಭದಿಂದುದಿರ್ವ ಕುಂಕುಮರೇಣುಗೆ ಪಾಯ್ವ ತುಂಬಿಯೀಂ
ಚರದೊಳೆ
ತಳ್ತು ಮೂರ್ಛಿಸುವುದರಲ್ಲಿ ಪೞಂಚಿ ವಿಪಂಚಿಯೀಂಚರಂ      ೨೬

ಪೊಳೆದು ಪೊದೞ್ದು ಪರ್ಬಿದ ಸುಧಾಂಶುಗಳಾಗಸಗಂಗೆ ಮೇಗೆ
ಳ್ವಳ
ಬಳೆದಂತೆ ಪಜ್ಜಳಿಸೆ ಬೆಳ್ಮುಗಿಲೇಂ ಬಳಸಿರ್ದುದೋ ಹಿಮಾ
ಚಳಮನೆನಲ್ಕೆ
ಸುತ್ತಿಱಿದ ರಾಣಿಯ ವಾಸದ ಬಳ್ಳಿಮಾಡದಿಂ
ತೊಳಗುತುಮಿರ್ಪುದಲ್ಲಿ
ಕರುಮಾಡಮನೇಕತಳೋನ್ನತೋದಯಂ       ೨೭

ಅನಿತೆಸೆದುವು ಕರುಮಾಡದ
ಕೊನೆವೆಳಗುಗಳಂಗನೆಯರ
ನಯನೋತ್ಪಲನಂ
ದನದ
ಸಿರಿ ತೊಲಗದಂತರ
ಮನೆಯಂ
ಬೆಳ್ದಿಂಗಳಿಂದೆ ಬಾಸಣಿಸಿದವೊಲ್ ೨೮

ಪಿರಿದುಂ ನಲಿವುದು ದೀಹದ
ಹರಿಣಂ
ಶಶಿಬಿಂಬದೊಳಗೆ ಸಿಲ್ಕಿದ ಹರಿಣಂ
ಕರುಮಾಡದಿನಿಱಿದಂತಿರೆ

ಮಠಕತಕುಟ್ಟಿಮವಿಶಾಲಶಾಡ್ವಲತಲದೊಳ್
೨೯

ಕರುಮಾಡದೊಳಿರ್ಪಂ
ನಾಕವಿಮಾನದೊಳೆ
ದಿವಿಜನಾಯಕನಿರ್ಪಂ
ತಾ
ಕೃತಿನಿರ್ಜಿತಮಕರಪ
ತಾಕಂ
ಶೃಂಗಾರಶೇಖರಂ ಖಚರೇಂದ್ರಂ     ೩೦

ಕಮಠಂ ದುರ್ದರ್ಶನಂ ಭೀಷಣವಿಷವದನಂ ಶೇಷನತ್ಯಂತಮೂರ್ಖಂ
ಸಮದಾಶಾವಾರಣಂ
ಕರ್ಕಶಮಖಿಳಕುಳಾದ್ರೀಂದ್ರಮೆಂದೊಲ್ಲದೆಂದುಂ
ಕಮನೀಯಂ
ಪೂರ್ಣಚಂದ್ರಾನನನತಿಚತುರಂ ಸ್ನಿಗ್ಧನೆಂದೊಲ್ದು ಧಾತ್ರೀ
ರಮೆಯಿರ್ಪಳ್
ತನ್ನರಾಧೀಶನ ಗುರುಭುಜದೊಳ್ ಪೆಂಡಿರಿಂತಾಗವೇಡಾ ೩೧

ಜಳನಿಧಿಯಲ್ಲಿ ಪುಟ್ಟಿ ಜಳಜಾಕ್ಷನ ಪೇರುರಮೆಂಬ ತೊಟ್ಟಿಲೊಳ್
ಬಳೆದು
ವಿಳಾಸದಿಂ ಜಳಜದೊಳ್ ನಲಿದಾಡಿ ಬೞಿಕ್ಕೆ ಯೌವನಂ
ಮೊಳೆವುದುಮಾರುಮಂ
ಬಗೆಯದಾ ನೃಪನೊಳ್ ಸಿರಿ ಕೂರ್ತುಬಂದು ಕೋ
ಮಳೆ
ನೆರೆದಿರ್ದಳಂತೆ ವಧು ಕೂರ್ತೊಡೆ ಪೆತ್ತರ ಮಾತುಗೇಳ್ವಳೇ         ೩೨

ಸುರುಚಿರಪತ್ರಲೇಖೆ ಲಲನೋಚ್ಚಕುಚಕ್ಕೆ ಶಶಾಂಕಲೇಖೇ ಶಂ
ಕರಮಕುಟೋದಯಕ್ಕೆ
ಮದಲೇಖೆ ಗಜಕ್ಕೆ ಮಯೂಖಲೇಖೆ ಭಾ
ಸುರಮಣಿಗೊಪ್ಪುವಂತಿರೆ
ಮನಃಪ್ರಿಯೆ ಕಾಮಿನಿಯಾಗಿ ತನ್ಮಹೀ
ಶ್ವರತಿಳಕಂಗನೂನಗುಣವಿಭ್ರಮ
ವಿಭ್ರಮಲೇಖೆಯೊಪ್ಪುವಳ್     ೩೩

ಮದನಂ ಕರ್ವಿನ ಬಿಲ್ಲೆಗೆತ್ತವಳ ಪುರ್ಬಂ ಗರ್ವದಿಂದೇಱಿಸಲ್
ಪದೆವಂ
ನೀಳ್ದಲರ್ಗಣ್ಣ ಚೆಲ್ವುವೆಳಗಂ ಬಾಣಾಳಿಗಳ್ಗೆತ್ತು ಮಾ
ಣದೆ
ಕೈ ನೀಡುವನೊಡ್ಡುಗೊಂಡು ಕಬರೀಪ್ರಾಗ್ಭಾರಮಂ ತೋರ್ಕೆಗೆ
ತ್ತಿದ
ಜೈತ್ರಧ್ವಜಮೆಂದೆ ಗೆತ್ತು ಮೆಱೆವಂ ಮೀನಧ್ವಜಸ್ತಂಭಮಂ    ೩೪

ಆಕೆಯಾ ಖಚರನ ಮನೋಮಾನಸಕ್ಕೆ ರಾಜಹಂಸಿಯುಮಾ ರಾಜಹಂಸನ ಯೌವನಮದಕ್ಕೆ ಮದಮಧುಕರಿಯುಮಾ ಸುರತಮಧುಮಧುಕರನ ತನುಚೂತಕ್ಕೆ ನವಮಾಲಿಕೆಯ ಮೆನಿಸಿರ್ದೊಂದು ದಿವಸಂ ಪಸುರ ಬಣ್ಣದ ಬಿಳಿಯಲರ್ಗಣ್ಣ ಪೊಳೆವಡಿದಳಿರ ತುಂಬಿಗುರುಳ ಪೀನಸ್ತನಸ್ತಬಕದರುಣಾಧರಪಕ್ವಫಲದ ಸುಭಗಭುಶಾಖೆಯ ಲತಾಂಗಿಯರ್ವೆರಸೆತ್ತಿದ ಪಲವು ಪೀಲಿಗೊಡೆಗಳನಿಕ್ಕಿ ಸೊಗಯಿಸುವ ಸೀಗುರಿಗಳುಮೆಸೆಯೆ ವನಲಕ್ಷ್ಮಿಗೆ ಬಿರ್ದುವರ್ಪ ವಸಂತಲಕ್ಷ್ಮಿಯಂತೆ ಲೀಲೆಯಿಂ ಬಂದು ಕುಸುಮಶರನ ಕಪ್ಪದಂತಿರ್ದ ಕುಸುಮಾಕರೋದ್ಯಾ ನಮಂ ಪೊಕ್ಕು ಬರೆವರೆ ತೊಟ್ಟನೆ ಕಟ್ಟಿದಿರೊಳ್ –

ಸುರಿವ ಮಧುದ್ರವಂ ಸುರಭಿ ಲಾಲೆಗಳಂತೆ ಪರಾಗಮಂಗದೊಳ್
ಪೊರೆದ
ರಜಂಗಳಂತೆ ಮಱಿದುಂಬಿಯ ಬಂಬಲೆ ಬಲ್ಗುರುಳ್ಗಳಂ
ತಿರೆ
ಹಸುಗೂಸಿನಂತೆ ಹಸಿತಂ ಮಿಗೆ ಸೋಂಕಿಲೊಳೊಪ್ಪಿ ಪುಷ್ಪಮಂ
ಜರಿ
ಪೊರಳುತ್ತುಮಿರ್ಪ ಲತೆಯಂ ಲಲಿತಾಂಗಿ ಮರುಳ್ದು ನೋಡಿದಳ್     ೩೫

ಅದಱ ಕೆಲದೊಳ್ –

ಜರಿದದನೆ ನೋಡಿ ನವಮಂ
ಜರಿಯಂ
ತಾಂ ಪೆಱದ ಮಱುಕದಿಂ ಕಣ್ಬನಿಯಂ
ಸುರಿವಂತೆ
ಸುರಿಯೆ ಸೊನೆ ಕೇ
ಸುರಿಗೊಂಡಂತಿರ್ದ
ಚೂತಲತೆಯಂ ಕಂಡಳ್          ೩೬

ಅಂತು ಕಂಡು ಸಂತತಿವಡೆದ ಸೌಭಾಗ್ಯೆಯರುಮುೞಿದ ಮದ್ವಿಧೆಯರಪ್ಪ ಮಂದಭಾಗ್ಯೆ ಯರುಮೀಯಂದಮೆಂದೆ ಮನದೊಳ್ ನೊಂದು ತಾನುಂ ಪೆಣ್ಣಂ ಪಡೆಯಲೞ್ತೆಗೆಯ್ದು ಮತಿಚತುರೆಯಪ್ಪುದಱಿಂದದಱ ಮುಂದೆ ನಿಂದು ನೊಂದು ನೋಡಿ ನಿಡುಗಣ್ಮೀಂಗಳಂ ನೀರಾಟಮಾಡಿಸುತಿರ್ಪನ್ನೆಗಮಲ್ಲಿ ಬಾಲಚೂತ ಶಾಖಾಂತರದೊಳ್ –

ಪಡೆಯದೆ ಮಿಂಚನುದ್ದಮೊಗೆವಂಬುದಮಾಲೆಯ ಚಂದ್ರಲೇಖೆಯಂ
ಪಡೆಯದ
ಪೂರ್ವಯಾಮಿನಿಯ ಮಂಜರಿಯಂ ಮಧುರಸ್ಮಿತಾಸ್ಯೆಯಂ
ಪಡೆಯದ
ಚೂತವಲ್ಲರಿಯ ಚಿತ್ತಜನಾಜ್ಞೆಯೆನಿಪ್ಪ ಬಾಳೆಯಂ
ಪಡೆಯದ
ರಾಜವಲ್ಲಭೆಯ ಪೆಂಪಿನೊಳೇಂ ಕವಿರಾಜಕುಂಜರಾ  ೩೭

ಎಂಬ ನೀತಿಯನರಗಿಳಿಯೋದುವುದುಂ ಕೇಳ್ದಿರ್ಮಡಿಸಿದೞಲ ಬಲ್ವೊಱೆಯಂ ಪೊತ್ತು ನಿಂದಿರಲಾಱದೆ ಚಂದನಲತೆಯನೆಯ್ದಿ ತಣ್ಣೆೞಲಂ ಸಾರ್ದು ಕೆಳದಿಯರ್ ಬೆರಸು ಕುಳ್ಳಿರ್ಪುದುಂ ; ಅನ್ನೆಗಂ ಹಿಮಂಬೊಯ್ದ ಪದ್ಮಿನಿಗೆ ಚಂದ್ರೋದಯ ಮಪ್ಪಂತೆ –

ವನನಾಗಾನಂದದಿಂದಂ ವನವಿಹರಣಲೀಲಾಸರೋಮಗ್ನನಲ್ಲಿ
ರ್ದ
ನಿಜೇಶಂ ಕೂಡೆ ಕೇಳ್ದಾ ಶುಕಪಠನವನಿನ್ನೊರ್ಮೆಯಿನ್ನೊರ್ಮೆಯೆಂತೆಂ
ತೆನುತಾಗಳ್
ಬರ್ಪುದಂ ಕಂಡೆರ್ದೆ ಪಡಿದೆಱೆದಂತಾಗೆ ತಾಂ ಲಜ್ಜೆಯಿಂ ತೆ
ಕ್ಕನೆ
ಪೋದಳ್ ಕಾಂತೆ ತನ್ನುನ್ನತಿಯದಿನಿಯರಿಂದತ್ತಮತ್ತುಂಟೆ ದೈನ್ಯಂ ೩೮

ಅಂತೆನುತೆ ನಸುನಗುತುಂ ಬಂದು, ಮುನ್ನ ಮನದೊಳ್ ತಾನಱಿಯೆ ತನ್ನ ಮನಃಕಾಮ್ಯೆಯಾ ಗಿರ್ಪ ಕಾಮಿನಿಯಂ ಕಂಡು ತನ್ನ ನಿಜನಿರಾಲೋಚಿತಾಳಾಪಕ್ಕೆ ಚಂದ್ರಶೇಕರನೆನೆ ಶೃಂಗಾರಶೇಖರಂ ವಿಷಾದಿಯಾಗಿ ಮುನ್ನೇಸಱ ಶಶಿಲೇಖೆ ಯಂತಿರ್ದ ವಿಭ್ರಮಲೇಖೆಯಂ ಮದಲೇಖೆಯಂ ಸಾರ್ವ ಮಧುಕರನಂತೆ ಸಾರ್ದು ಮದಮಧುಕರಮಧುರನಿನದದಿಂ ನಿನಗಿನಿತು ತನುಜೆವಡೆವ ಶಕುನವನೆನ್ನನಿದಿ ರ್ಗೊಳೆಂಬಂತೆ ಮಿಸುಕುವ ತನ್ನ ಕೆಯ್ಯ ಕೇಳೀಮಂಜರಿಯನಾ ಸೌಂದರ್ಯ ಮಂಜರಿಯ ಕರಕಂಜಕ್ಕೆ ನೀಡಿ ನೀಡಿಲ್ಲಿದೆ ಕೆಲದೊಳ್ ಕುಳ್ಳಿರ್ದು ಎಂದಿನಪರಿಯಿಂ ತನ್ನತ್ತ ಪರಿಯದೆ ಲತೆಯತ್ತಲೆ ಪರಿವ ಕಡುನಲ್ಲಳ ಕಡೆಗಣ್ಣ ಪರಿಯಂ ಭಾವಿಸಿ ನವಮಂಜರಿಯಂ ಪೆತ್ತೀ ನವಮಾಳಿಕಾ ಲತೆ ಲತಾಕೋಮಳೆಯ ಕುಮಾರಿಯಂ ಪಡೆವ ಬಗೆಯ ಬಯಕೆಯನೆಲ್ಲರ್ಗಂ ನೆಗಪಿ ತೋಱಿದುದು. ಈ ಭೀತಚೂತಲತೆಯುಮಾ ನೀತಿಯನೋದಿದರ ಗಿಳಿಯುಮೆನ್ನ ಮರ್ಮಭೇದಿಯಪ್ಪ ಮಾತುಗಳುಮೀ ತಳೋದರಿಯಳವಿಗೞಿದೞಲ ಕಿಡಿಯನುಬ್ಬರಮುರಿ ಪಿದುವೆಂದಾತ್ಮಗತದೊಳ್ ಬಗೆದು –

ಮುಗಿಲಿರ್ದಂತೆಳಮಿಂಚುಗಳ್ ಕಱೆವವೋಲ್ ವಾರ್ಬಿಂದುವಂ ಬಂದು ತೋ
ರಗುರುಳ್
ತಳ್ತಿಡಿದೊಪ್ಪೆ ಕಣ್ಮಲರ್ಗಳಿಂ ಪಾಯ್ತರ್ಪ ಬಾಷ್ಪಾಂಬುಬಿಂ
ದುಗಳಂ
ಪದ್ಮದೊಳೊಂದಿ ನಿಂದ ಹಿಮಬಿಂದುವ್ರಾತಮಂ ನೂಂಕುವಂ
ತೊಗೆದರ್ಕಂ
ಕರದಿಂದಮಂದು ತೊಡೆದಿಂತೆಂದಂ ನೃಪಂ ನಲ್ಲಳಂ       ೩೯

ಎಂದು ಸರಸ್ವತಿ ಕೆಳದಿಯಾಗಿಯುಂ ಕಳೆಯಂ ಪಡೆಯದಂತೆ, ಸಿರಿ ಸಖಿಯಾಗಿ ಯಮರ್ಥಸಿದ್ಧಿಯಾಗದಂತೆ, ವಸಂತಲಕ್ಷ್ಮಿ ವಯಸ್ಯೆಯಾಗಿಯುಂ ಪೂವಂ ಪಡೆಯದಂತೆ ದಯೆ ದಯಿತೆಯಾಗಿಯುಂ ಶಾಂತಿವಡೆಯದಂತೆ, ನಮ್ಮ ಕುಲವಿದ್ಯಾದೇವತೆಯಪ್ಪ ಪದ್ಮಾವತಿ ಸಕಲತ್ರಿಭುವನವರದೆ ನಿನಗಧಿದೇವತೆಯಾಗಿಯುಂ ಸುತೆಯಂ ಪಡೆಯದೞಲಂ ಪಡೆವುದುಂ ಕುಳಿವುಗದೆ ನಾಣ್ಚಿ ನಿನ್ನೊಡಲೊಳ್ ನೀನೋಡಿ ಪುಗುವುದುಂ, ನನೆಯಕ್ಕಿಯಂ ಬೀಱದೆನ್ನ ಮನಕ್ಕೆ ಬೇಗೆಯಂ ಬೀಱುವುದುಂ ಮಗಳಂ ಮುದ್ದಾಡಿಸದೆ ಕಣ್ಣನೀರಂ ಬಟ್ಟಾಡಿಸುವುದುಂ, ಎನಗಚ್ಚಮುಂ ತುಚ್ಚಮುಮಚ್ಚರಿಯಾದಪುದೆಂದು ಅರಸನುಸಿರದಿರೆ; ಪೊಲಗೆಟ್ಟ ಮಧುಕರಿ ತೀಡಿದೆಲರ ಕಂಪಿಂ ಬನದ ಬಟ್ಟೆಗಂಡಂತೆ ಸಂತಸಂಬಟ್ಟೀ ಬೆಸಕ್ಕೆ ಪಸಾದಮೆಂಬಂತೆ ನೂಪುರಾರಾವಮೊಡನೇೞೆ ಭೋಂಕನೆರ್ದು ದೇವತೆಯನಾರಾಧಿಸಿ ತಾಂ ಬರವಂ ಪಡೆವುದರ್ಕೆ ಸಕ್ಕಿಯನುಯ್ವಂತೆ ನಾಥನ ಕಣ್ಣಂ ಮನಮಂ ಬೞಿಯೊಳಿಕ್ಕಿಕೊಂಡಾ ಬಾೞೆಯ ಬಾಳೋದ್ಯಾನದ ನಡುವೆ ಪೂವಿನ ಪುಡಿಯೊಟ್ಟಿ ಬೆಟ್ಟಾಗಿರ್ದಂತಿರ್ದ ಪೊನ್ನ ಬಸದಿಗೆ ಪೋಗಿ ಪೂಗೊಳದೊಳ್ ತಾನುಂ ತನ್ನ ಕೆಳದಿಯರುಂ ಕಾಲ್ಮೊಗಂಗಳಂ ತೊಳೆದು ತಳಿರುಮಂ ನನೆಯುಮನರಲುಮಂ ಫಲಂಗಳುಮಂ ತಿಱಿದುಕೊಂಡಾ ಬಸದಿಯೊಳ್ ಪೊಕ್ಕು ಬಿದಿಬಯ್ತ ಭುವನಭಾಗ್ಯದೇವತೆಯಂತಿರ್ದ ಪದ್ಮಾವತಿಯ ಪಾದಪೀಠಮೆಂಬೇೞ್ಗೆವೆಟ್ಟಮಂ ವೆಟ್ಟಮಂ ವಿಭ್ರಮಲೇಖೆ ನೊಸಲೆಂಬ ಶಶಿಲೇಖಯಿನಳಂಕರಿಸಿ ಪಲತೆಱದ ರ್ಚನೆಗಳಿನರ್ಚಿಸಿ ಪಲವುಸೂೞ್ ಪೊಗೞ್ದು ಕಯ್ಗಳಂ ಮುಗಿದು –

ಪರಸದ ದೈವಕ್ಕೆಲ್ಲಂ
ಪರಸಿ
ಪರಿಶ್ರಮಮನೆಯ್ದಲೆಂ ನಿನ್ನ ಪದಾಂ
ಬುರುಹಕ್ಕೆ
ತುಂಬಿಯಾದೊಡೆ
ದೊರೆಕೊಳ್ಳವೆ
ಕಂಪಿನಂತೆ ಬೇೞ್ಪ ವರಂಗಳ್ ೪೦

ಕೆಡೆದನಿತಱೊಳೇಂ ಕುಡುಗುಮೆ
ಪೊಡವಿಯ
ಕಲ್ಲೆಲ್ಲಮೆಱಗೆ ಬೇಡಿದ ವರಮಂ
ಕುಡುವಂತಿರೆ
ನಿನ್ನಯ ಕೇ
ಸಡಿಗಳ
ನಖಮಣಿಗಳೆಂಬ ಚಿಂತಾಮಣಿಗಳ್ ೪೧

ಲೋಕಸ್ತುತೆ ಮಣಿಕನಕ
ತಾಕೆಯಿನರ್ಚಿಸುವೆನೆಸೆಯೆ
ನಿನ್ನೀ ನಿಲಯ
ಪ್ರಾಕಾರಮಂ
ಮನೋಜಪ
ತಾಕೆವೊಲೊಪ್ಪುವಳನೆನಗೆ
ಕುಡು ತನುಭವೆಯಂ      ೪೨

ಸಕಲಕಲಾಧರೆ ಮಣಿದೀ
ಪಿಕೆಯಿಂ
ಬೆಳಗಿದಪೆನಮಲನಿಜಗೃಹಮಂ ಪು
ತ್ರಿಕೆಯಂ
ಕುಡೆನಗೆ ಕುಲದೀ
ಪಿಕೆಯಂ
ಸುರದನುಜಖಚರಪೂಜಿತಚರಣೇ  ೪೩

ತನುಭವೆಯನೀವುದೆನಗ
ರ್ಚನೆಮಾಡುವೆನೊಲ್ದು
ದೇವಿ ನಿನಗಾಂ ನಲಿದ
ರ್ಚನೆಮಾಡುವಿನಂ
ರತಿಯುಂ
ಮನೋಜನುಂ
ಗೆಲ್ದೆವೆಂದು ಭುವನತ್ರಯಮಂ         ೪೪

ನನೆಯಂ ಸುರಿವೆಂ ನಿನ್ನಯ
ಕೊನೆಮುಡಿಯೊಳ್
ದೇವಿ ಕುಡುವುದೆನಗಾತ್ಮಜೆಯಂ
ನನೆಯಂಬುಗಳಂ
ಸುರಿಗುಂ
ಮನೋಭವಂ
ಮನದೊಳಾವಳಂ ನೋೞ್ಪವರಂ       ೪೫

ದೇವಿ ಕುಡು ಸುತೆಯನೆಲೆ
ದ್ಮಾವತಿ
ನಿಜಕರದೊಳೆಸೆಯೆ ವಜ್ರಾಂಕುಶಮಂ
ತೀವುವೆನಂಕುಶಮಾದಪು

ದಾವಳ
ಕಣ್ ಚಿತ್ತಮತ್ತದಂತಿಗೆ ಪತಿಯಾ     ೪೬

ಕಟ್ಟಿದಪೆನಮಳಮಣಿಮಯ
ಪಟ್ಟಮನಾಂ
ನಿನ್ನಬಾಳಪಟ್ಟದೊಳೊಳ್ಪಂ
ಕೊಟ್ಟತನುಚಕ್ರವರ್ತಿಗೆ

ಪಟ್ಟಂಗಟ್ಟಿಸುವ
ಮಗಳನೀವುದು ದೇವೀ      ೪೭

ಕುಡುವುದು ಪಿಡಿವೆಂ ಮುತ್ತಿನ
ಕೊಡೆಯಂ
ಚಾಮರಮನಿಕ್ಕುವೆಂ ನಿನಗೊಪ್ಪಂ
ಪಡೆದತನುಗೆ
ಬೆಳ್ಗೊಡೆಯಂ
ಪಿಡಿಯಿಪ
ಚಾಮರಮನಿಕ್ಕಿಸುವ ಬಾಳಕಿಯಂ ೪೮

ಕುರುಳಂ ಕೊಯ್ದೇಱಿಸುವರ್
ಮರುಳ್ಗಳಜ್ಞಾನದೇವತೆಯರ್ಗಾಂ
ನಿನ್ನೀ
ಚರಣದೊಳೆ
ಪೂವನಿಡುವೆಂ
ಕುರುಳ್ಗಳಂತೆಱಗೆ
ತುಂಬಿ ಕುಡುವುದು ವರಮಂ        ೪೯

ಎಂದಾದೇವಿಗೆ ಪೊಡಮಟ್ಟು ಬಂದು ಶ್ರೀಮತ್ಯಾರ್ಯಕಾಸಮಕಕ್ಷದೋಳಾ ಕಾಮಿನಿ ಕಾಮದಂಗಳಪ್ಪ ನೋಂಪಿಗಳುಮಂ ನಿಯಮಂಗಳುಮಂ ಕೈಕೊಂಡು ದಾನದೊಳ್ ಧನಮಂ ಪೂಜೆಯೊಳ್ ಪೊೞ್ತಂ ಉಪವಾಸದೊಳ್ ವಾಸರಮಂ ತವಿಸುತ್ತುಮಿರೆಯಿರೆ ಮತ್ತೊಂದು ದಿವಸಂ –

ಪಾಯ್ವ ಕುಚಂಗಳಂ ಮಿಡಿದು ನೋಡುತೆ ಕೌಂಕುಳನೆತ್ತಿ ಕಂಪನಾ
ರಯ್ವುತುಮೊತ್ತುತುಂ
ಮೊಡವಿಯಂ ಮೊಗಮಂ ಮೃಗನೇತ್ರೆ ದರ್ಪಣ
ಕ್ಕುಯ್ವುದುಮೆಲ್ಲಮಂ
ಕಳೆದು ಮಾಣಿಕಮಂ ಪೊಸಪೊಂಗಳಿಂದ ಕೈ
ಗೆಯ್ವುದುಮಾಕೆ
ಕೆಯ್ಗೆ ಸೆಳೆಯಂ ಸಖಿ ಕೊಟ್ಟಳದೇಂ ಪ್ರಗಲ್ಭೆಯೋ        ೫೦

ತೊಳಗುವ ಮೆಯ್ಗಳೊಳ್ ತಿಮಿರ್ದ ಕುಂಕುಮದಿಂದಮರ್ದುಟ್ಟ ಮೆಳ್ಪಿನಿಂ
ದಳವಡೆ
ತೊಟ್ಟ ಪೊಂದೊಡಿಗೆಯಿಂ ಚಳಕೋಮಳಹಸ್ತಶಾಳಖೆಯೊಳ್
ತಳೆದಳಗೊಂಬಿನಿಂದ
ಪೊಳೆದೊಂದು ವಿಳಾಸದಿನಗ್ಗಳಂ ತಳಿ
ರ್ತೆಳಲತೆಯಂತೆ
ತೋಱಿದರುಣಾಧರೆ ಪುಷ್ಪಿತೆಯೆಂಬುದೊಪ್ಪದೇ        ೫೧

ಸುಯ್ಗೆಱಗುವ ಮಗಮಗಿಸುವ
ಮೆಯ್ಗೆಱಗುವ
ಜಘನಕೆಱಗುವಳಿ ಪೇೞ್ದುವು
ೞ್ತಯ್ಗಣೆಯನ
ಜಯಲಕ್ಷ್ಮಿಯ
ತಾಯ್ಗಱವೆನೆ
ಮಿಸುಪ ಸತಿಯ ಪುಷ್ಪೋದಯಮಂ    ೫೨

ಮುಟ್ಟಲ್ ಪಡೆಯದೆ ಬೆಮರಂ
ಬಿಟ್ಟಂ
ನಡೆನೋಡೆ ಮದನತಾಪದಿನೋಪಳ್
ಮಿಟ್ಟನೆ
ಮಿಡುಕದೆ ಮನದೊಳ್
ಕಿಟ್ಟಳದೊಳಮಿರ್ದೊಡಂದು
ಮಿಂದವೊಲಧಿಪಂ        ೫೩

ಅಂತು ಋತುಸಮಯಮಾಗಿ ಚತುರ್ಥದಿನದೊಳ್ ಬಿಸಿಲಂ ಕಳೆದು ಬೆಳ್ದಿಂಗಳಂ ತುಡುವ ಗಗನಲಕ್ಷ್ಮಿಯಂತೆ ಕೆಂಪಿನ ಪಸದನಮಂ ಕಳೆದು ಪಲ್ಲಂ ಸುಲಿದು ತಲೆನೀರ್ ಮಿಂದು ಚಂದನಮಂ ತೊಡೆದು ಜಾದಿಯಂ ಮುಡಿದು ಮುತ್ತಂ ತೊಟ್ಟು ಬೆಳ್ಮಡಿಯನುಟ್ಟು ಬಳಪದೋಲೆಯನಿಟ್ಟು ಶ್ವೇತಮಾಲೆಯನೆೞಲೆ ಬಿಟ್ಟು ಕೈಗೈಯೆ –

ಅಗ್ಗದ ರಾಜಹಂಸೆಗಳ ಯಾನಮನಲ್ಲದೆ ಕಾಯಕಾಂತಿಯಂ
ಸುಗ್ಗಿಯ
ತೋರಮಲ್ಲಿಗೆಯ ಗಂಧಮನಲ್ಲದೆ ಮೆಯ್ಯ ಬೆಳ್ಪುಮಂ
ಸಗ್ಗದ
ಸಾರಮಪ್ಪಮರ್ದಿನಿಂಪುಮನಲ್ಲದೆ ನಿರ್ಮಲತ್ವಮಂ
ಬಗ್ಗಿಸಿಕೊಂಡವೋಲೆಸೆದುದಂಗನೆಗಾ
ಧವಳಪ್ರಸಾಧನಂ        ೫೪

ಸೊಗಯಿಸುವಚ್ಚ ಬೆಳ್ನಗೆಯ ತಾಯ್ಗಱು ಕಾಮನ ಕೀರ್ತಿ ಚಂದ್ರಲೇ
ಖೆಗೆ
ಬರವಂ ಸುಧಾರಸಮನಿತ್ತಧಿದೇವತೆ ತನ್ನ ಕಣ್ಣ ಬೆ
ಳ್ಪುಗಳೆನೆ
ಬೇಱೆ ಬೆಳ್ಪಸದನಂ ತನಗೆಂದೊಡೆ ಚೆಲ್ವಿನೇೞ್ಗೆಯಿಂ
ನಗುವುದುದೊಂದು
ವಿಸ್ಮಯಮೆ ವಿಭ್ರಮಲೇಖೆ ಮೃಣಾಳಲೇಖೆಯಂ      ೫೫

ಎನೆ ಬೆಳ್ಪಸದನಂಗೊಂಡು ಬಾಲೇಂದುಶೇಖರನ ಸೂೞ್ಗೆವರ್ಪ ಭಾಗೀರಥಿಯಂತೆ ಶೃಂಗಾರಶೇಖರನ ಸೂೞ್ಗೆವಂದು, ಪುಷ್ಪಮಧುಜಳಮಂ ಪೇಱಿ ಪೊಱಪೊಣ್ಮುವ ತೆಳ್ಮುಗಿಲ ಮುಱಿಗಳಿಂ ಮಿಱುಗಿ ನೆಲಸಿ ನಿಂದ ಪಾವುಗಳ ಪೆಡೆವಣಿಯ ಬೆಳಗಿಂ ಬೆಳಗುವ ಬೆಳ್ಳಿವೆಟ್ಟಮಂ ಪುಗುವಂತೆ ಮಗಮಗಿಸಿ ಪೊಱಮಡುವ ಸುಗಂಧ ಧೂಪದ ಪೊಗೆಯ ಪರ್ಬುಗೆಯ ಕಜ್ಜಳಿಕೆ ಮಸುಲೆ ಜಲಜಲಿಸಿ ತೊಳಪತಾಣದೀವಿಗೆಗಳಿಂ ಕರಮೆಸೆವ ಕರುಮಾಡಮಂ ಪೊಕ್ಕು, ಶಶಿಮಣಿಶಿಲಾತಲಮನಲಂಕರಿಸುವಂತೆ ನಿರ್ಮೋಕನಿರ್ಮಲದುಕೂಲ ಪ್ರಚ್ಛದಾಚ್ಛಾದಿತಹಂಸ ತೂಲತಲ್ಪ ಸನಾಥ ಶ್ರೀಮಂಚಮನಲಂಕರಿಸಿ, ಕಂಪಿನಿಂದ ಪೊರೆದು ಪೊಱಮಡುವ ಮನೋಹರಮಾದ ಮಲ್ಲಿಕಾಮಂಡಪದೊಳ್ ಮನಸಿಜನ ಸೂೞ್ಗೆವಂದು ಕುಸುಮದೆಸೞ ಸಜ್ಜೆಯನೇಱಿದ ರತಿಯ ರಮಣೀಯತೆಯಂ ನಸುನಗುವಂತೆ ನಲ್ಲನ ನಗೆಮೊಗದೊಳ್ ಮುಗುಳ್ನಗೆಯಂ ನಗುತುಮಳಿಪಿಂ ನೋಡುವುದುಂ, ಕುಸುಮಚಾಪಲತೆಗೆ ಕೈನೀಡುವ ಕಾಮನಂತೆ ನಿಜತನುಲತೆಗೆ ಕೈನೀಡಿದ ಕಾದಲನ ತೋಳ್ವೞಿವಿಡಿದು ಪೊಕ್ಕು ಪಿರಿದು ಮಂಜರಿಯಿಂಮೋದಿ ಮಾವನಪ್ಪಿದ ಮಲ್ಲಿಗೆಯಂತೆ ಮೊಲೆಯಿನುರಮನೀಡಿಱಿದು ನೀಱನನಮರ್ದಪ್ಪಿ ಚಕೋರಂಗಳಿಂ ಚಂದ್ರಮಂಡಲಮಂ ಚೆಲ್ಲವಾಡಿಸುವಂತೆ ದಯಿತನ ದರಹಸಿತವದನಮಂ ಕಡುಪಂ ಕಱೆವ ಕಣ್ಣ ಕೂರ್ವೆಳಗೆಂಬ ಕೂರಲಗಿಂ ಕೂಂಕಿ ಕೆಂದಳಿರಂ ಕರ್ಚಿ ಕೂಜಿಸುವ ಕೋಗಿಲೆಯಂತೆ ಕಾಂತನಧರದಳಮನಡಸಿ ಪಿಡಿದು ಗಳಕಳರವಮಂ ಕೆದಱಿ ಬಲ್ಪಿನಿಂ ಬಾಯಿಂ ಬಾಯಂ ಬಿಡಿಸಿ ಬಾಯ್ಗೆಪಾಯ್ದು ಪತ್ತೆವೊಯ್ದಂತೆ ಪತ್ತಿ ತೞ್ತ ತೋಳ ತೊಡಂಕಂ ತಪ್ಪಿಸಿ ನಾಂಟಿದ ಮೊಲೆಯನುರ್ಚಲೀಯದೆ ತೆಗೆದಪ್ಪುವ ಸೂಳೆವಂತಾಳ್ದಿ ನಟ್ಟು ಕಣ್ಣೊಳವುಗದ ಕಣ್ಣ ಬೆಳಗಂ ಕಿೞ್ತುಕೊಳ್ವಂತೆ ನೋಟದೊಳ್ ನೋಟಮಂ ಗಂಟಿಕ್ಕಿ ಬೆರಸಿ ಬರಸೆಳೆವ ವಲ್ಲಭನೊಳ್ ಕಲ್ವವೋಲಡಿಯುಂ ಮೇಗುಮಡ್ಡಮುಂ ತಿಗಟಮುಂ ತಾಱುಂ ತಟ್ಟುಮಿದಿರುಂ ಬೞಿಯುಂ ಬಿೞ್ದುಂ ಬೞಲದೆ –

ಅಳಸುವ ಬಯ್ವ ಬಗ್ಗಿಸುವ ಬತ್ತುವ ಬಾಯ್ದೆಱೆಗೊಳ್ವ ನುಂಗುವ
ವ್ವಳಿಸುವ ಮುದ್ದುಗೆಯ್ಯ ಮುಗುಳೊತ್ತುವ ಬೆಂಡೊಗೆವಕ್ಷಿ ಕಂಕಣಂ
ಗಳ ರವಮುಣ್ಮೆ ಪೊಯ್ದುಗಿವ ನಾಣೆಡೆಗೆಯ್ದುವ ಹಸ್ತಶಾಖೆ ಕಂ
ಟಳಿಸುವ ಗಂಟುಗೊಳ್ವೆಡರೆ ಜರ್ಬುವ ಪುರ್ಬೆಸೆಯಲ್ಕೆ ಕೂಡಿದಳ್        ೫೬

ಅಂತು ಕೂಡಿದಿಂಗಡಲೊಳಳ್ಕಾಡಿದಿಂದೊಱೆಯಂತೆ ಇನಿಯನಂಗಂಗಳೊಳಂಗಂಗಳ್ ಬೇರ್ಕೆಯಲ್ ಬಗೆದಂತೆ ಬೞಲ್ದು ಬೆರಸಿ ಸಮರತ ಶ್ರಾಂತಿಯಿಂ ಸುಖ ಸುಪ್ತೆಯಾಗಿ ಬೆಳಗಪ್ಪ ಜಾವದೊಳ್

ಕೊಳನಂ ಕನ್ನಡಿಯಂ ಕನತ್ಕಳಶಮಂ ಪೆಣ್ಣಂಚೆಯಂ ಮತ್ತಕೋ
ಕಿಳಮಂ
ಕರ್ಬಿನ ಬಿಲ್ಲನೈದು ನನೆಯಂ ಬೆಳ್ದಿಂಗಳಂ ತಳ್ತು ಬಂ
ದೆಳಮಾವಂ
ಮಲರ್ದಿರ್ದ ಮಲ್ಲಿಗೆಯನೊರ್ಬಳ್ ಲೀಲೆಯಿಂ ಪುಷ್ಪಕೋ
ಮಳೆ
ಪೂಮಾಲೆಯನೀವುದಂ ಕನಸಿನೊಳ್ ಕಂಡಳ್ ಮಹೋತ್ಸಾಹದಿಂ ೫೭

ಅಂತು ಕಂಡು ತನ್ನ ನಿದ್ರೆಯೊಡನೆ ಕೞ್ತಲೆಯುಂ ಪರೆಯೆ ತನ್ನ ಮುಖದೊಡನೆ ದಿವಸಮುಖಮುಜ್ಜ್ವಲಿಸೆ ತನ್ನ ಕಣ್ಮಲರೊಡನೆ ಕಮಲದಲರುಮಲರೆ ತನ್ನ ಮನದೊಡನೆ ಜಕ್ಕವಕ್ಕಿಗಳುಂ ನಲಯೆ ತನ್ನ ಮನೋರಥದೊಡನೆ ರವಿರಥೋದಯಮಾಗೆ ತನ್ನ ಪಿಂಡುಗಂಖನದೊಡನೆ ಕೊಳರ್ವಕ್ಕಿಗಳುಲಿಯೆ ಸಜ್ಜೆಯಿನುಜ್ಜುಗದಿನೆರ್ದುವೈಭಾತಿಕವಿಧಿಯಂ ನಿರ್ವರ್ತಿಸಿ ಶೃಂಗಾರಗೇಹದೊಳ್ ಶೃಂಗಾರಂಗೆಯ್ಯುತಿರ್ಪನ್ನೆಗಂ –

ಎಡದ ಕರದೊಳ್ಗಂಧಂ ಪೂಮಾಲೆ ಸಿರ್ಪಿನ ಸೇಸೆ ಪೊಂ
ಬಡಲಿಗೆಯೊಳೊಳ್ಗಂದಂ
ಚೆಲ್ವಾಗೆ ಗಂಧಜಳಂಗಳಂ
ಪಿಡಿದು
ಕಳಸಂ ಕೆಯ್ಯೊಳ್ ಮತ್ತೊಂದಱೊಳ್ ಮಿಗೆ ಶೋಭೆಯಂ
ಪಡೆಯೆ
ಪದೆಪಿಂದೊರ್ವಂ ಬಂದಂ ಪ್ರಗಲ್ಭಪುರೋಹಿತಂ        ೫೮

ಅಂತು ಬಂದು, ದೇವರ ಬರವಂ ಕಾಣ್ಬಂತೆ ತನ್ನ ಬರವಂ ಕಂಡಿದಿರೆೞ್ದು ಕೆಯ್ಗಳಂ ಮುಗಿದ ರಾಜವಲ್ಲಭೆಯ ಮುಂದೆ ನಿಂದು –

ಶ್ರೀಯಂ ದೇಯಾತ್ತುಭ್ಯಂ ತ್ರಿಭುವನಮಿದಂ ಕರ್ಮಕಠಿನಂ
ಸಮಾಕರ್ಷಲ್ಲೋಹಪ್ರತಿಮಮತುಲಂ
ಯೋ ವಿಜಯತೇ
ಅಯಸ್ಕಾಂತಂ
ಕಾಂತ ನಮದಮರಿಕಾಕುಂತಳತಳ
ಚ್ಛವಿಶ್ಯಾಮಶ್ಶ್ರೀಮಾನ್
ಜಿನಚರಣಚಂಚನ್ನಖಚಯಃ    ೫೯

ಎಂದೋದಿ ಗಂಧೋದಕಮಂ ಸಿದ್ಧಸೇಸೆಯುಮಂ ಕುಡುವುದುಂ ಕೊಂಡು ಕುಳ್ಳಿರಲೊಡನೆ ತನ್ನ ಕಂಡ ಕನಸನನುಕ್ರಮದಿಂ ಪೇೞೆ ಕೇಳ್ದು –

ಕೊಳದಿಂ ಜಳಜಾಕ್ಷಿಯನು
ಜ್ಜ್ವಳದರ್ಪಣದಿಂದನಂಗಮಂಗಳನಿಧಿಯಂ

ಕಳಶದಿನಧರದಳಾರ್ಚಿತ

ವಿಳಾಸರಸಪೂರ್ಣಕನಕಕಳಶಸ್ತನಿಯಂ
      ೬೦