ಶ್ರೀವರನಾ ಜಿನನಿಳಯದೊ
ಳಾವೊತ್ತುಂ
ತಳರದಾ ಮುನೀಶ್ವರಪದರಾ
ಜೀವಮನೋಲಗಿಸುತ್ತುಂ

ಭಾವಕನಿಕರಂ
ಕೃತಾರ್ಥನಿರೆ ಕೆಲದಿವಸಂ    ೧

ನೀಳಲ ಕಂಪನೊಟ್ಟಿ ನಳಿನಂಗಳನಳ್ಕಿಸಿ ಬೆಳ್ಮಗಿಲ್ಗಳಂ
ತೂಳಮನೆತ್ತುವಂತೆೞೆದು
ಸೋಗೆಯ ಪೀಲಿಯ ಬೇರನೆತ್ತಿ ಹಂ
ಸಾಳಿಯ
ತುಪ್ಪುೞಂ ತುೞಿದು ಪಶ್ಚಿಮದಿಂ ಬಡವಾಗಿದ ಬರ್ಪ ಮೆ
ಲ್ಗಾಳಿಯನೊತ್ತಿ
ತೀಡಿದುದು ಮೂಡಣ ಗಾಳಿ ಹಿಮಪ್ರವೇಶದೊಳ್         ೨

ಇಂದಾರಂ ಕುಳಿರ್ದಪ್ಪುದಿಂದು ಪಗಲುಂ ಮೆಯ್ಕೋಡಿತಿಂದೊಳ್ವಿಸಿಲ್
ನಾಂದಂತಿರ್ದಪುದಿಂದು
ಪಾಲ ಬಸಿಱಿಂ ಬಂದಂತಿರಿಂದಿಂತು ನೀರ್
ಪೊಂದಿತ್ತಿಂದರೆಜಾವಮಾಯ್ತು
ಮುಗಿದತ್ತಿಲ್ಲುತ್ಪಳಂ ಪಂಕಜಂ
ಕುಂದಿತ್ತಿಂದೆಲೆ
ಪೊಕ್ಕುದಕ್ಕುಮಿಳೆಯೊಳ್ ಹೇಮಂತಮೇ ಮಂತಣಂ      ೩

ಕರಿಣೀಪೇಚಕಮಂ ತುಡುಂಕದೆ ವನೇಭಂ ಕಾಮುಕರ್ ಕಾಮಿನೀ
ಪರಿರಂಭಸ್ಪೃಹರಾಸೆಗೆಯ್ಯರೆ
ರತವ್ಯಾಪಾರದಿಂ ಪುಲ್ಲೆಯಂ
ಹರಿಣಂಗಳ್
ನಡೆನೋಡಲೊಲ್ಲವೆ ಹಿಮವ್ಯಾಪಾರದಿಂ ಬಿಲ್ಗೆ ಕೆ
ಯ್ದರಲೇನಾಱನೊ
ಪೂವಿನಂಬು ತನಗಿಲ್ಲಾಗಿರ್ದನೋ ಮನ್ಮಥಂ         ೪

ಒಂದೆ ಕುಂದಲಮಲರ್ದತ್ತು ಗಾಳಿಗೊ
ಲ್ದೊಂದಿತೊಂದೆ
ಗುಣಮಧ್ವಗವ್ರಜ
ಕ್ಕೊಂದೆ
ಮಗ್ಗುಲಮರ್ದತ್ತು ಪೊತ್ತಡ
ರ್ದೊಂದೆ
ಬೆಳ್ಳಿ ಬೆಳಗಿತ್ತು ಮಾಗಿಯೊಳ್      ೫

ಮುಗಿಯೆ ಕರದ ಕಂಜಂ ವಾಜಿಗಳ್ ಸುರ್ಕೆ ಸೂತಂ
ಸುಗಿದು
ಪೆೞವನಾದಂತೈಕಿಲಿಂ ಪೆರ್ನರಂಗಳ್
ತೆಗೆಯೆ
ರಥದ ಕೀಲಂ ಕಿೞ್ತು ಪೊತ್ತಿಕ್ಕೆ ಕಣ್ಣೊಳ್
ಪುಗೆ
ಪೊಗೆ ರವಿ ಸಾರ್ತಂದೂದುವಂ ಪೋಪ ಕಿಚ್ಚಂ    ೬

ತುಹಿನಂ ತಾಗುಗುಮಂಭೋ
ರುಹಮಂ
ಕರಗತಮನೆಂದು ಕೊಂಡಾಡುವವೋ
ಲಹಿಮಕರಂ
ಪೊಡೆಯಿಸುವಂ
ದಹನಾಶೆಗೆ
ರಥಮನರುಣದಿಂ ದಿನಮುಖದೊಳ್      ೭

ಮಾಸರಮೆನೆ ಪಾರದದಿಂ
ಪೂಸಿದವೋಲ್
ಪೊನ್ನ ಮುಕುರಮಂ ಹಿಮಲಿಪ್ತಂ
ನೇಸಱ
ಬಿಂಬಂ ತಿಂಗಳ
ಕೂಸಿನವೋಲ್
ಕೋಡುತಿರ್ದುದಂದಿನ ದಿನದೊಳ್    ೮

ಚಳಿಗಳ್ಕಿ ಕಱಿಯ ಪೊಸಕಂ
ಬಳಿಯಂ
ಮುಸುಕಿದವೊಲಗ್ನಿಯುಪಗತತಾರ್ಣಾ
ನಳರಾಶಿಯೆಸೆದುವಂತ

ರ್ಜ್ವಳದುಲ್ಮುಕಮೊಟ್ಟಿ
ಪೋಗೆ ಪಥಿಕರ್ ಪಥದೊಳ್    ೯

ಬಿಸಿಲೆಂದು ಸಾರ್ದು ಕೊಂಬಿನ
ಕಿಸಲಯಮಂ
ಕೊಂಚೆ ನಲುಗೆ ಸುರಿವೆಲೆಯ ಹಿಮ
ಪ್ರಸರದೊಳೆ
ನಾಂದುದೇಂ ಲಂ
ಘಿಸಲಾರ್ತುದೆ
ಕೋಡನೋಡಿ ತುಹಿನಾಗಮದೊಳ್    ೧೦

ಕೊಂಕೊಳಲೆಗಳಡಿಯಿಟ್ಟು ಕು
ಱುಂಕಿದ
ನಱುಗೆಱೆಯ ಮೀನುಮಂ ಮಿಡಿಚೆಯುಮಂ
ಸಂಕಮೆನೆ
ಕಾಯ್ತವೊಲ್ಬೆ
ಳ್ಳಂಕಿಗಳಂ
ಪೊತ್ತುವದಱ ತಟರುಹತತಿಗಳ್ ೧೧

ಕೊಂಕೊಳಲೆ ಕೊಳಲೆ ನಡೆಯಲೊ
ಡಂ
ಕೆಸಱಿನಿಸುೞಿಯೆ ಸುೞಿಯೆ ನೀರ್ಮುೞುಗಿದ ಮೀ
ನುಂ
ಕಳಲೆ ಕಳಲೆ ಚಂಚುಪು
ಟಂ
ಕರ್ದುಕಿದ ಜಗುಳೆ ಜಗುಳೆ ಸಾರ್ದತ್ತು ಬಕಂ       ೧೨

ತಡಿವಿಡಿದು ನಡೆದು ಮೆಲ್ಲಗೆ
ತಡಾಗಜಳದೊಳಗೆ
ಪೊಳೆವ ನಿಜಚಂಚುಗಳಂ
ಮಿಡುಕುವ
ಮೀನ್ಗೆತ್ತೊಡರಿಸಿ
ತುಡುಕಿದುವಡಿಗಡಿಗೆ
ಬಾಳಖಗಸಂತತಿಗಳ್ ೧೩

ಕೊಳಗಳೊಳಗಿಂದೆ ಪೊಱಮ
ಟ್ಟೆಳವಿಸಿಲಂ
ಕಾಯುತಿರ್ದುವಾವೆಗಳೆಳೆಮೀನ್
ಪೊಳೆದೊಡಮೊಳಪುಗದಿರ್ದುವು

ಜಳಾಶಯಪ್ರಾಂತದೊಳ್
ಬಕೋಟಕುಟುಂಬಂ        ೧೪

ಖಂಡಿಸೆ ಬಿಸಕಳಿಕೆಗಳಂ
ತುಂಡಂ
ಕುತ್ತಿಱಿಯೆ ಬಿದಿರ್ದು ಬಳ್ಕಿಸಿ ತಲೆಯಂ
ಕೊಂಡೋಡಿ
ತೊಡೆದುಕೊಂಡುವು
ಮಂಡಳಿಸಿದ
ಪಕ್ಕದಲ್ಲಿ ಕಳಹಂಸಂಗಳ್      ೧೫

ಮಱಿದುಂಬಿಗಳಂಬುರುಹದ
ನಱುಗಂಪಿಂ
ಬಳೆದುಮವಱ ಸಿರಿ ತೊಲಗಲೊಡಂ
ಮಱೆದೆಱಗಿ
ನೋಡದುತ್ಪಲ
ಕೆಱಗಿದುವು
ವಿಜಾತಿಯಲ್ಲಿ ಗುಣಮಱಸುವುದೇ          ೧೬

ನೆನೆಯಲೊಡಮೆತ್ತಿ ಮನದೊಳ್
ತನಿಗಿರ್ಚಂ
ಹಿಮಮನೋಡಿಸುವ ನವಯುವತೀ
ಸ್ತನಭರಮಂ
ತೆಗೆದಪ್ಪಿನ
ಮನುಜರದೇನಱಿವುದರಿದೆ
ಮಾಗೆಯಂ ಮೂಗಂ      ೧೭

ನಡುಗುತ್ತುಂ ನೆನೆದಂತೆ ವಲ್ಲಭೆಯರಂ ತೞ್ಕೈಸುವರ್ ತಾಮೆ
ಮ್ಮೊಡಲಂ
ಮೆಯ್ನವಿರುರ್ಚೆ ತಮ್ಮಧರಮಂ ತಾಮೀೞ್ದು ದಂತಾಗ್ರದಿಂ
ಪಿಡಿವರ್
ಪಾಂಥರೆನಲ್ಕೆ ತಳ್ತು ತರುಣೀಸೋಷ್ಣಸ್ತನದ್ವಂದ್ವಮಂ
ಬಿಡಲೇನಾರ್ಪರೆ
ಪುಣ್ಯವಂತರೞಿಪರ್ ತಾಮಂತೆ ಹೇಮಂತದೊಳ್      ೧೮

ನಂದುವ ಪುಲ್ಲ ಕಿಚ್ಚಿನೊಳೆ ಕಪ್ಪಡಮಂ ಪರಿದಿಕ್ಕಿ ಪಾಂಥನುಃ
ಪೆಂದಿರದೂದೆ
ಪೊಣ್ಮಿ ಪೊಗೆ ಕಣ್ಣೊಳಗಂ ಪುಗೆ ಬಾಷ್ಪಬಿಂದು ಬೀ
ೞ್ತಂದು
ತದಗ್ನಿಯಂ ನದಿಪಿದತ್ತಕಟಾತನ ಬೆನ್ನ ಕಪ್ಪಡಂ
ಬೆಂದುದು
ಬಂದುದಾಗಳೆ ಹಿಮಾನಿಳನಿಂತುಟು ಪಾಂಥರುಬ್ಬಸಂ         ೧೯

ಪೊಸಪುಲ್ಲೊಳ್ ಕಿಚ್ಚನಿಟ್ಟೂದಿದೊಡುರಿದು ರಿ ಕೂರ್ಚಾಗ್ರಮಂ ಪತ್ತೆಕೆಯ್ಯಂ
ಪೊಸೆದುಂ
ವಸ್ತ್ರಾಗ್ರದಿಂ ಮೋದಿಯುಮುಗುಳ್ವೞೆಯಿಂ ಮೊಕ್ಕಳಂ ನಾಂದಿಯುಂ ನಂ
ದಿಸಲೆಂತುಂ
ಪಾಂಥನಂದಾಱದೆ ನಡುಮಡುವಂ ಪೋಗಿ ಬಿರ್ದೈಕಿಲಿಂ ಕಂ
ಪಿಸುತಿರ್ದಂ
ಪುಲ್ಲ ಕಿರ್ಚುಂ ಪೊಲೆಯನ ಕೆಳೆಯುಂ ಮಾಡದಾವಂಗೆ ಕೇಡಂ        ೨೦

ತಳಿರೊಳ್ ಮುಚ್ಚಿಟ್ಟು ಕೂಸಂ ಶಬರಿ ತೆಗೆದು ನಿಶ್ಚೇಷ್ಟಮಾಗಿರ್ದೊಡಂ
ಣ್ಗಳ
ನೀರಂ ತೀವಿ ಬೇಗಂ ತೊಡೆದು ಹಿಮಕಣಾನೀಕಮಂ ತೇಂಕುದಾಣಂ
ಗಳನಂಟಂಟೆಲ್ಲಿಯುಂ
ಕಾಣದೆ ಹರಣಮನತ್ಯುಷ್ಣದಿಂ ಸು‌ಯ್ಯೆ ಸುಯ್ಯಿಂ
ದೆಳಗೊಸೆೞ್ಚತ್ತು
ಕಾವ್ಕಾವೆನೆ ತೊಱೆದ ಕುಚಾಗ್ರಂಗಳಂ ನೀಡುತಿರ್ದಳ್   ೨೧

ಜಡನೆಂದಜನಂ ನುಡಿವರ
ನುಡಿಗಕ್ಕೆ
ಶುಭೋದಯಂ ಸ್ವಜನಕಾಂಬುಜಮಂ
ಕಿಡಿಸುವ
ಶಿಶಿರಾಗಮಮಂ
ಪಡೆದಪನಿನ್ನವು
ವಿವೇಕವಿಕಳತೆಯೊಳವೆ     ೨೨

ಕಮಳಿನಿಯ ಸಿರಿಯನಿನನ
ಸ್ತಮಿಸಲೊಡಂ
ಕವರೆ ಶಿಶಿರರಾಜಂ ಪಿರಿದುಂ
ತಮಗುತ್ಸವಮಾದಂತಿರೆ

ಕುಮುದಂಗಳ್
ಪಳಚನಲರ್ದುವಜ್ಜರ ಕೆಲದೊಳ್      ೨೩

ಗಿರಿಗಳ್ ಜಂಗಮವಪುಗಳ್
ಸಿರದೊಳ್
ಸಸಿದರಲೆಯಂತೆ ಮುಸುಱಿದ ಮಂಜಿಂ
ನರೆಯಂ
ಪೊತ್ತವೊಲಿರ್ದುವು
ನಿರವಸ್ಥಿತದಶಘನಗುಹಾಮುಖತತಿಗಳ್
      ೨೪

ಕೃತಶೀಘ್ರಸ್ನಾನಮುನ್ನರ್ತನವಿಕೃತಕರಾಕೃಷ್ಟವಸ್ತ್ರಾಂತರಂ ವಿ
ಸ್ತೃತದರ್ಭಂ
ಗದ್ಗದೋಚ್ಚಾರಿತಜಪಮುಪಸಂಜಾತರೋಮಾಂಚಮಾ ಕುಂ
ಚಿತಗಾತ್ರಂ
ವಹ್ನಿಸಂದೀಪನಪಟು ಪಟುರಕ್ತೇಕ್ಷಣಂ ನೀರತೀರ
ಸ್ಥಿತಮಿರ್ದತ್ತಂದು
ವೈಭಾತಿಕವಿಧಿವಿಹಿತಾಮೋಘಮಾಘಂ ದ್ವಿಜೌಘಂ     ೨೫

ಸರಸೀತೀರಂಗಳೊಳ್ ಬೆಳ್ಗೆಱೆಗಳ್ ತಡಿಯೊಳ್ ಸಿಂಧುಕೂಲಂಗಳೊಳ್ ಶೀ
ಕರಮುಂ
ನೀಹಾರಮುಂ ಮುತ್ತಿನ ಮಿಱುಪನಣಂ ಮೆತ್ತಿದಂತೊಪ್ಪೆ ಮೆಯ್ಯೊಳ್
ಪರಮಾತ್ಮಧ್ಯಾನವಹ್ನಿಜ್ವಳಿತರಚಳಿತರ್
ಜೈನಯೋಗೀಶ್ವರ್ ಭಾ
ಸ್ಕರಪಾತೋತ್ಥಾನವೇಳಾವಿಹಿತನಿಯಮದಿಂದಂದು
ಕೆಯ್ಯಿಕ್ಕಿ ನಿಂದರ್   ೨೬

ಸರಸೀವಾರ್ಬಿದುವಂ ಪೊತ್ತಡಕಿ ಗಡಣದಿಂ ಗಾಳಿಗಳ್ ಪಾಯ್ದು ಪೊಯ್ಯು
ತ್ತಿರೆ
ನಿಹಾರಾಂಬುವಲ್ಲಲ್ಲುಗುತಿರೆ ಪುಳಕಸ್ಪಂದಶೂನ್ಯಂಗಳಪ್ರ
ಸ್ಫುರಿತಂಗಳ್
ಬೆಳ್ಳವಾಸಂಗಳೊಳಚಳಶಿಳಾಸ್ತಂಭಸಂಘಾತಮೆಂಬಂ
ತಿರೆ
ಕೆಯ್ಯಿಕ್ಕಿರ್ದಯೋಗೀಶ್ವರವರವಪುಗಳ್ ಕಾವುವಕ್ಕೆಮ್ಮನೆಂದುಂ      ೨೭

ಅಂತು ಬಂದ

ಹೇಮಂತಶಿಶಿರಂಗಳಿಂ ಯಶೋಮರುನ್ನದಿಯ ಹಿಮವಂತನೆಂತಾನು
ಮಂತರ್ಜ್ವಳದನಂಗದಹನನತಿಕ್ರಮಿಸಿ
ಮಿಸುಗುವಿಂದ್ರ ಕೂಟಜಿನಾಲಯದಿಂ ತಳರ್ದು
ದೇವಗಿರಿಗೆ
ಬಂದು ಜಿನಬಿಂಬಕದಂಬಕಮಂ ವಂದಿಸಿ

ವಿತರತು ಧೃತಿಮನವರತಂ ವಿತತಶುಭಸ್ಸುರಮಹೀಧರೋ ಮಹ್ಯಂ
ಧೃತಜಿನಬಿಂಬಕದಂಬಂ
ಸತಾಮಿವಾತ್ಯುಜ್ವಲಶ್ಚೇತಃ

ಎಂದು ದೇವಗಿರಿಯಂ ಸ್ತುತಿಸಿ ಬಲದೊಳಿಕ್ಕಿ ಪೋಪಂಗಾ ಗಿರಿಯ ಲತೆಯ ಕುಡಿಗಳ ಡ್ಡಂಬಾಯ್ದೀ ಗಿರಿಯ ತರುಶಾಖೆಗಳನಡುರ್ವುವೀ ಗಿರಿಯ ನಿರ್ಜರಜಲಶೀಕರ ನಿಕರಂಗಳಾ ಗಿರಿಯ ಸೂರ್ಯಮಣಿಶಿಖಿಕಣಂಗಳಂ ನದಿಪುವಾರಿಗಿರಿಯ ಮಣಿಮರೀಚಿಗಳಾಗಿರಗುಹೆಯ ತಿಮಿರಂಗಳನಳಱಿಸುವುದೀ ಗಿರಿಯ ಮುಗಿಲ್ಗಾಗಿರಿಯ ನವಿಲ್ಗಳಾಡುವುವೆನಿಸಿ –

ತೊಳಗಿದುದಂಬರಕ್ಕೊಗೆದು ಪಚ್ಚೆಯ ಕಾಂತಿ ಪಸುರ್ತ ಪಲ್ಲವಾ
ವಳಿಯೆನೆ
ವಜ್ರಕಾಂತಿ ನನೆಯುರ್ಬೆನೆ ಮೌಕ್ತಿಕಕಾಂತಿ ಪುಷ್ಪಸಂ
ಕುಳಮೆನೆ
ನೀಳಕಾಂತಿ ಮಱಿದುಂಬಿಯ ಪಿಂಡೆನೆ ಶೋಣಕಾಂತಿ ಕೆಂ
ದಳಿರೆನೆ
ನಾಕದಿಂದಿೞಿವ ನಂದನದಂತೆ ಮಯೂಖನಿರ್ಝರಂ  ೨೮

ಆ ಮಯೂಖನಿರ್ಝರಮೆಂಬ ರತ್ನಶೈಲಮಂ ಶಿಲಾಮಣಿಸುರ ಶೈಲನಾ ದೇವಶೈಲಮಹೀಪಾಲನ ಮಾಣಿಕದ ಮಲಗೆಂದೇ ಬಗೆಯುತ್ತುಮೆಯ್ದಿವರೆ –

ಜ್ವಳದರ್ಕಗ್ರಾವಮಂ ತಿಗ್ಮಕರನಮಳಮಾಣಿಕ್ಯಸಂತಾನಮಂ ನಿ
ರ್ಮಳ
ಜಾತಿ ಜ್ಯೋತಿರೌಘಂ ಮೃಗಮೊಱಗಿದ ಚಂದ್ರಾಶ್ಮಮಂ ಚಂದ್ರಬಿಂಬಂ
ಪೊಳೆಯುತ್ತುಂ
ಪೋಲೆ ನೀಳಾಚಳಮನಡಕಿಲಿಟ್ಟಂತೆ ತೋರ್ಕುಂ ತದುಚ್ಚಾ
ಚಳಚೂಡಾ
ಚಕ್ರದೊಳ್ ಚುಂಬಿತಜಲಧರದಿವ್ಯಾಪಗವ್ಯೋಮಮೆಂದುಂ   ೨೯

ನೀಳದ ಸರಿಗೆತ್ತೆಱಗಿದ
ಬಾಳಮಯೂರಿಗಳನೆತ್ತಿ
ನೆಗೆವುವು ನಗದೊಳ್
ಗಾಳಿ
ಕೊಳೆ ತಳರ್ವ ಜಳಧರ
ಜಾಳಂ
ಕೆಳೆತನಕೆ ಮೆಚ್ಚಿ ಕೊಂಡಾಡುವವೋಲ್        ೩೦

ಮುತ್ತುವ ಮುಗಿಲಿಂದುಗುವೆಳ
ಮುತ್ತುಂ
ಕಿಸುಗಲ್ಲುಮಲ್ಲಿ ಬನಗೞ್ತಲೆ
ರ್ಬುತ್ತಿರೆ
ಖಚರರ್ ಬೆಳಗಿನ
ಬಿತ್ತುಗಳಂ
ತಳಿದ ತೆಱದೆ ತೊಳಗಿದುವದಱೊಳ್       ೩೧

ಸೋಗೆಯ ಸೋಕಕ್ಕೆಂದುಂ
ಪೋಗದ
ಬಹುರತ್ನರುಚಿರರುಚಿ ಸುರಚಾಪ
ಶ್ರೀಗಂ
ಬಯಸಿರ್ಪಂತೆವೊ
ಲಾಗಳುಮಗಲವು
ಮುಗಿಲ್ಗಳಾ ನಗತಟಮಂ ೩೨

ಒಣಗಿಸುವರ್ಕಂಗಗಿದೊಂ
ದಣಿಯರಮೊಂದೆವನಿವಿಡುವ
ಮುಗಿಲಿಂ ಮುಸುಱಿ
ರ್ದಣೆಯ
ಮಱೆವೊ‌ಕ್ಕ ದುರ್ವಾ
ರಣಮೆನೆ
ಮರಕತದ ಕಲ್ಗಳೊಪ್ಪಿದುವದಱೊಳ್         ೩೩

ನೀಳದ ಕೋಡುಂಗಲ್ಗಳ
ಲೋಳದ್ಯುತಿ
ಮುಸುಱೆ ಮಸುಳೆ ಮೇಗಣಿನಿಂ ತಾ
ರಾಳಿಯ
ಹಾರಿಯ ಬಟ್ಟೆಗೆ
ಶೈಳಂ
ಬರ ತೊಲಗಿದಂತೆ ಕೆಲದೊಳ್ ತೋರ್ಕುಂ    ೩೪

ಕತ್ತುರಿಮಿಗಗಳ ಮಗಮಗಿ
ಸುತ್ತುಂ
ಸೊವಡೆರ್ದ ಪಕ್ಕೆದಾಣದ ಪುಲ್ಲಂ
ಮುತ್ತಿದ
ಮದಾಳಿ ಚೆಲ್ವಂ
ಮುತ್ತಿದುದಗತಟದೊಳೊಗೆದ
ತೃಣಮಣಿಗಣದಿಂ       ೩೫

ಪರಿದಡರ್ದ ಪಂಚರತ್ನದ
ಮರೀಚಿಯಿಂ
ನೀಳ್ದ ಪಳಿಕಿನೊಡ್ಡುಂಗಲ್ಗಳ್
ಬರೆದಿರ್ದ
ಭಿತ್ತಿಯಂತಿರೆ
ಬರಮಂ
ಕುಡುವುವು ನಿರೀಕ್ಷಣಕ್ಕಗತಟದೊಳ್         ೩೬

ಕೋಡಿಸುವ ಚಂದ್ರಕಾಂತದ
ಕೋಡುಂಗಲ್ಗಳಿನೊಸರ್ತ
ರಸದ ಪೊನಲ್ಗಳ್
ಸೇಡುವಡೆ
ಕವಿಯೆ ಗಿರಿಗೆಡೆ
ಯಾಡುವ
ವಿಧು ನಾಂದು ನನೆದು ಹಿಮಕರನಾದಂ

ಪೂಗೊಯ್ವ ಖಚರಿ ಶಿಖರದ
ಪೂಗಿಡುಗಳ
ಕೊಂಬಿನಲ್ಲಿ ತೊಡರ್ದಿರೆ ಮೀನ್ಗಳ್
ಪೂಗೆತ್ತು
ತುಡುಂಕುವಳೆನ
ಲಾ
ಗಿರಿಯುನ್ನತಿಯನಿನ್ನದೇವನಂ ಪೊಗೞ್ವೆಂ          ೩೮

ಅಪ್ಪಿದೊಡಗಶಿಖರದ ಕೊಳ
ದುಪ್ಪಳಮಂ
ಕಂಪುವತ್ತಿ ಪಾಯ್ವಳಿತತಿ ತಾ
ನಪ್ಪುದಿದೆನ್ನದೆ
ಮಱಿದುಮಿ
ದಪ್ಪೊಡೆ
ಕಱೆಯೆನ್ನೆನಿಂದುಬಿಂಬದ ಕುಱುಪಂ ೩೯

ಕಱೆದಾಲಿವರಲ್ಗಳನಣೆ
ದೆಱಪ
ಮುಗಿಲ್ದುಱುಗಲೆಸೆದುವಗಶಿಖರಂ
ಳ್ತಿಱಿಯೆ
ಸುರಿದುಡುಗಳಂ ಪಱಿ
ವಱಿದೊಯ್ಯನೆ
ಬೀೞ್ವಿ ಗಗನಭಂಗಂಗಳವೊಲ್        ೪೦

ಮಱೆದು ಗಿರಿತಟದಲೊಳೆಲ್ಲಿಯು
ಮೊಱಗಲೊಡಂ
ಪೊರೆದು ಪೊನ್ನ ರಜದಿಂ ಮೆಯ್ಗಳ್
ಮಿಱುಮಿಱನೆ
ಮಿಱುಗೆ ಪೊಸಪೊ
ಮ್ಮಱಿಯಂತಿರೆ
ಪರೆವುವಲ್ಲಿ ಹರಿಣಗಣಂಗಳ್ ೪೧

ಗಡಣದೊಡನೆಱಗಿ ಮುಗಿಲೊಡೆ
ದೊಡೆ
ಪಱಗಿರಲಗಿದು ಗಗನಚರಿಯರ್ ಬಿನದಂ
ಬಡೆದು
ಗಿರಿಶಿಖರದಿಂದಂ
ಕುಡುಮಿಂಚಂ
ಪಿಡಿದು ಬಿಟ್ಟವೋಲ್ ಪೊಳೆದೊಗೆವರ್  ೪೨

ಅಂತೆನಿಪ ಗಿರಿಯಿಂ ದೇವಗಿರಿಗೆ ಗೊಂದಣದೆ ಪಾಱುವ ವಿಯಚ್ಚರೀವಿಯಚ್ಚರರ ಕೞಿದ ಪೂಮಾಲೆಗಳಿನಲ್ಲುಗುವ ಕುಸುಮರಸದ ಸೊನೆಯಿಂ ನಾಂದು ಪರಮಾನಂದದಿಂ ನಿಂದು ಮಕರಂದನುಂ ಗುಣಮಕರಂದಮಧುಕರನುಂ ಆಗಳ್ ಮೇಗಂ ನೋಡುತ್ತುಂ ನಡೆಯೆ ನಡೆಯೆ –

ಮಾಸಹಮೆಲ್ಲಿಯುಂ ನೆರೆವ ಖೇಚರದಂಪತಿಗಳ್ಗೆ ಕಂತು ಕಾ
ವೀಸಲೊಡಂ
ತಿರಸ್ಕರಣಿಯಪ್ಪುವು ಬಾಯ್ದೆಱೆಯೊತ್ತೆ ವಾರಿಯಂ
ಸೂಸುವ
ವಾರಿಯಂತ್ರಚಯಮಪ್ಪುವು ಚಿತ್ತಜತಾಪಮೆತ್ತೆ ನೀ
ರ್ವಾಸುಗಳಪ್ಪುವೀ
ನಗರನೀಲಮಣಿಪ್ರಭನೀರದಾದಿಗಳ್        ೪೩

ಬಾಡಿದ ಮಾಲೆವೂವೊಡೆದು ಸೂಸಿದ ಕೈವಳೆ ಘರ್ಮಗಂಧದಿ
ರ್ಪೋಡದ
ಸುಯ್ಯೆಲರ್ ಸುರತಸೌರಭಮಂ ಬಲವರ್ಪ ತುಂಬಿಯ
ೞ್ಕಾಡಿದ
ತಂಬುಲಂ ಕೆದಱಿ ಪೋದಲರ್ವಾಸಿನ ಕುಂಕುಮಂ ರತ
ಕ್ರೀಡೆಯನೆಯ್ದೆ
ಸೂಚಿಸುವುವಲ್ಲಿಯ ಚೂತಲತಾಗೃಹಂಗಳೊಳ್ ೪೪

ತಳೆದು ಪೆಗಲ್ಗಳಿಂದೆ ವಿಪರೀತರತಶ್ರಮಂದಿರೆ ಪಾಱಲಾ
ರ್ಪಳವೞಿದಿರ್ದ
ಖೇಚರಿಯರಂ ನಖಜಕ್ಷತದಿಂದೆ ಬಾಸುೞೆ
ರ್ದೊಳುದೊಡೆಯಂ
ಕಟಾಕ್ಷದೊಳೆ ಮೆಯ್ಮಱೆದೀಕ್ಷಿಸುತಂ ನಿಜಾಲಯಾ
ವಳಿಗಳ
ಬಟ್ಟೆದಪ್ಪಿ ಮಿಗೆ ಪಾಱುವರೀ ಗಿರಿಯೊಳ್ ನಭಶ್ಚರರ್    ೪೫

ಸವಿ ಸಮನಾಗೆ ಸುತ್ತಿೞಿದ ತೋಳ್ ಸತವಾದೆರ್ದೆಯಿಂ ಪಲಂಪನ
ಪ್ಪುವ
ಬಗೆ ಬೀಗಿ ಬಾಯೊಳಗೆ ಸಿಲ್ಕಿದ ಬಾಯ್ ಬೆಱಗಾದ ಬೇರ್ಗೆ ನೋ
ಡುವ
ಜವವೋಡಿದಚ್ಚರತದಚ್ಚುಡಿದಂತಿರೆ ಕಾಮಸೌಖ್ಯದಿಂ
ಸವೆದವೊಲಿರ್ಪುವಲ್ಲಿ
ಗಗನೇಚರದಂಪತಿಗಳ್ ರತಾಂತದೊಳ್ ೪೬

ಮುಳಿದು ಕನಲ್ದಗಲ್ದಿನಿಯರಂ ಬರೆದಂಗಜಮೋಹದಿಂ ಶಿಳಾ
ಫಳಕಮನಪ್ಪಿ
ಮೆಯ್ಯ ಬೆಮರಿಂದಮೆ ನಲ್ಲರ ಮೆಯ್ಯನಾವಗಂ
ತೊಳೆದವೊಲಾಗಿ
ಪೋಗೆ ಮಗುೞ್ದೀಕ್ಷಿಸಿ ಕಾಣದೆ ಮಾದಂತದುಂ
ಮುಳಿದೆಲೆ
ಪೋದುದೆಂದಱಿದಪರ್ ಗಿರಿಯೊಳ್ ಸುರಸಿದ್ಧಿಮುಗ್ಧೆಯರ್    ೪೭

ತರಳತಟಿಲ್ಲೋಚನದಿಂ
ಗಿರಿಗೆಱಗುವ
ಮುಗಿಲ ನೋಡಿ ಮಿಗೆ ನಾಣ್ಚಿಕೆಯಿಂ
ಪುರುಷಾಯತದಿಂ
ಪ್ರಿಯರೊಳ್
ನೆರೆವ
ನಭಶ್ಚರಿಯರಗಿದು ಪಾಱುವರಿದಱೊಳ್         ೪೮

ಸುರತಶ್ರಮದಿಂ ಪಾಱುವ
ಭರಮಿರ್ಕೋರಡಿಯನಿಡಲುಮಳವಿಲ್ಲದೆ
ಖೇ
ಚರವರಮಿಥುನಂಗಳ್
ಭೂ
ಚರವರಮಿಥುನಂಗಳಾದುವೀ
ಗಿರಿವರದೊಳ್ ೪೯

ಬೆರಸದಿರೆ ನಣ್ಪನಿಂ ಕಿ
ನ್ನರಿಯಿಂಚರದೊಡನೆ
ತನ್ನ ಕಿನ್ನರಿಯ ಸರಂ
ಬೆರಲಂ
ಮಿಡಿಯದೆ ಮಱೆದುಂ
ಬೆರಲಿಂ
ಮಿಡಿದಪರೆ ಕಿನ್ನರರ್ ಕಿನ್ನರಿಯಂ    ೫೦

ನಸುಸೋಂಕಿ ಪಾಡಿ ಕಿನ್ನರಿ
ರಸಮೊಸರ್ವಿನಮೊಸರ್ವ
ಬೆಮರ ಬೆರಲ್ವನಿಯಂ
ಣ್ಣಸಗೊಂಡ
ತಂತಿಗಳನಾ
ಱಿಸುವರ್
ಬಿಸುಸುಯ್ದು ಕಿನ್ನರರ್ ಬೀಣೆಗಳಂ ೫೧

ಪರಿಭವಿಸೆ ತಮ್ಮನೀ ಕಿ
ನ್ನರಿಯರ
ದನಿ ಮೂಗುವಟ್ಟ ಕೋಕಿಲೆ ಮಧುಚೂ
ರಸಾಸ್ವಾದನಮದದಿಂ
ಕರೆವುವು
ಕಡುಸೊರ್ಕಿದವರ್ಗೆ ಲಜ್ಜೆಗಳೊಳವೆ ೫೨

ಎಂದು ಪಾಱಿ ಪೋಪ ನವೀನವಿದ್ಯಾಧರಿಯರನೀರಿಕ್ಷಿಸುತ್ತುಂ ವಿವೇಕ ವಿದ್ಯಾಧರನಾ ಭೂಧರನಿತಂಬಮಂ ನಿಜಮನೋಹರೀಪಯೋಧರನಿತಂಬಮಂ ಮುಟ್ಟುವಂತೆ ಮುಟ್ಟಿ ಪರಮಾನಂದಮಂದಮಾನಸವಾಗಿ ಮುಂದೆ ಮುಂದೈಸಿದ ಮಾಣಿಕವೆಟ್ಟದ ಬೆಳಗುದೊಱೆಯೊಳ್ ಪಱಿಗೋಲಂತೆ ಪರಿವ ಕರಿಯ ಮುಗಿಲ್ಗಳನೇಱಿಸಿ ಭೂಚರ ತರುಣಿಯರ್ಗೆ ಗಗನಗಮನ ಮನಭ್ಯಾಸಂಗೆಯ್ಸುವ ಗಗನೇಚರಚತುರೆಯರುಮಂ, ಜಲಕ್ರೀಡೆಯಾಡಿ ಪೋದ ಕಿನ್ನರ ಕನ್ನೆಯರ ಕುಚಮಲಯಜದಿಂ ಬೆಳರ್ವಟ್ಟು ತೆರೆಗುಟ್ಟಿದ ತಿಳಿಗೊಳಂಗಳುಮಂ, ಪಳಿಕಿನ ಪಾಸಱೆಗೆತ್ತು ಪಾಱಿ ಬಂದೆಱಗಿನ ಕಮಳಮನಗೆಯಿಡುವಂತೆ ಕಾಲನಿಟ್ಟಗಿದು ನೆಗೆದು ಕೆಲದ ಮುತ್ತಿನ ಪಡುಸೆಳೆಗೊಳ್ ಮುಡಿಯ ಮುಗುಳನೀಡಾಡಿಯವತರಿಸುವ ವಿದಗ್ಧವಿದ್ಯಾಧರಿಯರುಮಂ, ಬಱಿದೆ ಮುಳಿದು ಪಾಱುಗೆಯ್ತದಿಂ ಕಣ್ದಪ್ಪಿ ಪಾಱಿ ರತ್ನ ಭಿತ್ತಿಗಳೊಳ್ ಪರಿವ ತಮ್ಮ ನೆೞಲ ಬೞಿಯನುೞಿಯದೆ ಪರಿದೋಪರ್ ಪಿಡಿಯೆ ಪಿಡಿದಂತೆ ನಿಂದೆ ನೆೞಲ್ಗಳ ಕಾಲ ಮೇಲೆ ಕವಿದು ಬಿೞ್ದಚ್ಚಿಗಂಗೊಳ್ವಿಚ್ಚೆಗಾಱರ ಕಣ್ಣಂ ಮುಚ್ಚುವ ಧೂರ್ತವಿ ಯಚ್ಚರಿಯರುಮಂ, ಆತ್ಮನಾಥನು ಟ್ಟುದಂ ಸೆಳೆದು ಕಳೆಯೆ ಕೆಲದ ಮುಗಿಲನುಟ್ಟು ಕೊಳಲೊಪ್ಪ ಮುಗ್ಧನಭಶ್ಚರಿಯರುಮಂ, ಕೇಳೀಕಲಹದಿಂದುೞಿದ ನೀಱೆಯನಱಸಿ ಮುಗಿಲ ಮಱೆಯೊಳ್ ಪೊಳೆವೆಳಮಿಂಚನಪ್ಪುವ ಕಾಮಾಂಧಖಚರರುಮಂ, ಮುನಿದು ಪೋದ ಮನಃಪ್ರಿಯರುನ್ನತಮಣಿಗಂಡಶೈಲಮನೇಱಿ ಕೊರಲಂ ನೀಡಿ ನೋಡೆ ನಸುದೋರ್ಪ ಕುಂಕುಮಾಂಕಿತಮುಖಮಂಡಲಮಂ ಮೂಡುವ ಚಂದ್ರ ಮಂಡಲಮೆ ಗೆತ್ತು ಸುಗಿದು ಪಾಱುವ ಕಾಮಾರ್ತ ಖೇಚರರುಮಂ, ಒರ್ವನನಪ್ಪಿ ಮದನ ಮೂರ್ಚ್ಛೆಯನಿಕ್ಕಿ ಮತ್ತೊರ್ವನಂ ಚುಂಬಿಸುವ ಗಂಧರ್ವಗಣಿಕೆಯರುಮಂ, ಭೂಜಲತೆಯಂ ನೆಮ್ಮಿದ ಭುಜಗಂಗೆ ನಿಜಾನುರಾಗಮನನುಕರಿಸುವ ನೆವದಿನಿಂದುಕಾಂತದ ಕೇರ್ಗಳೊಳ್ ಪೊಳೆವಾತನ ನೆೞಲಂ ನದಿದಪ್ಪಿ ಚುಂಬಿಸಿ ಪತಿಯ ಪೊರೆಯೊಳ್ ಪರಪುರುಷಪರಿಷ್ವಂಗಮಂ ದ್ವಿಗುಣಿಸುವಂತೆಯುಂ ನಿಜಸ್ವಭಾವಮನವಂಗೆ ತೋರ್ಪಂತೆಯುಮಿರ್ಪ ಕಿಂಪುರುಷವೇಶ್ಯೆಯ ರುಮಂ, ನೀಳರುಚಿಯ ಡಾಳಮಂ ಪೊಕ್ಕಗಲ್ದು ಪೋಗಿ ಮಣಿಶಿಲೆಯೊಳ್ ಮಾರ್ಪೊಳೆವ ತನ್ನ ನೆೞಲನಿನಿಯಳ್ಗೆತ್ತು ಚುಂಬಿಸುವ ಚಕ್ರವಾಕಂಗೆ ಪುರುಡಿಸಿ ಪರಿತಂದು ಚರಣಪ್ರಹಾರಮನೀನ ಚಕ್ರವಾಕಿಗಳುಮಂ, ಸುರಸುಂದರಿಯರ್ ಸೆಂದುರಮಂ ತೇದ ಪಚ್ಚೆಯ ಕಿಗ್ಗಲ್ಗಳಂ ಗಿಳಿಗಳೆತು, ಸಾರ್ವ ಸಾರಿಕೆಗಳುಮಂ, ಬಂದು ಪಿಡಿದು ಕರ್ದುಂಕುವ ಕಳಾಪಿಗಳುಮಂ, ಸುರತಸುರಭಿಗಳಪ್ಪಂಬರಚರಿಯರ ಬೆಮರ್ವನಿಯಂ ನುಂಗಿ ಮುಗಿಲ ಪನಿಗೆ ಮೊಗಸಲಾಱದಿರ್ಪ ಚಾದಗೆಗಳುಮಂ, ಮನುಜವನಿತೆಯರ ನಡೆಯನೞ್ತಿವಟ್ಟು ನೋಡಿ ತಾಮುಮಲತಗಯೊಳ ಡಿಯೂಡಿ ನಡೆಗಲ್ವ ವಿಯಚ್ಚರಿಸುವ ಪಜ್ಜಳಿಪ ಪಜ್ಜೆಗಳಿಂ ಕೆಂದಾವರೆಗೊಳಂಗಳಂತಿರ್ಪ ನೀಳಮಣಿಶಿಳಾತಳಕ್ಕೆ ಭೋರೆಂದೆಱಗುವ ಕೊಳರ್ವಕ್ಕಿಗಳುಮಂ, ಕಂಠನಾಳಮನಾಡಿಸುತ್ತು ಮಿಕ್ಕೆಲನನಲಸದವಲೋಕಿಸಿ ಕಿಸುಗಲ್ಲ ಸೆಱೆಯಂ ಸರಿಗೆಯ್ದು ರಾಜಾವರ್ತಕ್ಕೆ ಜೀವಂಬೊಯ್ದಂತಿ ರ್ದ ಜೀವಕ ಮಿಥಿನಂಗಳುಮಂ, ವಜ್ರವೇದಿಕೆಯೊಳ್ ವಿದ್ಯಾಧರಿಯರ ವದನಬಿಂಬಂಗಳನಂಬಜಂ ಗಳ್ ಗೆತ್ತು ಖಂಡಿಸಿ ಕನಲ್ವ ಕಳಹಂಸಂಗಳುಮಂ, ಚಂದ್ರಕಾಂತದ ಬೆಳಗಂ ಬೆಳ್ದಿಂಗಳೆಂದೆ ಕಾದುಕೊಂಡಿರ್ಪ ಚಕೋರಿಗಳುಮಂ, ಕಪ್ಪುರದಿಱುಂಬುಗಳೊಳ್ ಬೆರಸಿ ಸೂಸಿ ಕರಗಿ ತಮ್ಮ ನಱಿಪುವಾಲಿವರಲ್ಗಳಿಂ ಪೊಂಬಣ್ಣದ ಗಂಧಮೂಷಕಂಗಳ್ ತೋಡಿದ ಪೊನ್ನರಜದ ಕುಜಪ್ಪೆಗಳುಮಂ, ಉರ್ವಿ ಬೀೞ್ವ ಪೆಱದರಿಯಿಂ ಬಿಱಿದು ಬಾಯ್ದೆಱೆದ ತೞ್ಪಲೊಳ್ ಮಾಣಿಕದ ಪಗವಂ ತೆಗೆವಂತೆ ಕುಳ್ಳಿರ್ಪ ಮದನನಿವಾರಣನಾ ದೇವಿಯನಾರಾಧಿಸುತಿರ್ಪ ವಿದ್ಯುಲ್ಲೇಖೆಯುಂ ಚಂದ್ರಲೇಖೆಯುಮೆಂಬ ವಿದ್ಯಾಧರಿಯರ್ ಕಂಡು ಪಾಡಿವದ ಪೆಱೆಯಂ ಕಂಡಂತೆಱಗಿ ಪೊಡೆಮಟ್ಟಲ್ಲಿಗೆ ಸಮೀಪದೊಳಿರ್ದ ಚಂದ್ರಕಾಂತಗುಹಾಗೇಹಕೊಡಗೊಂಡು ಪೋಗಿ ಪಿರಿದುಮೊಸೆದಭ್ಯಾಗತ ಪ್ರತಿಪತ್ತಿಯಂ ಕುಡೆ ಕೈಕೊಂಡು ಬಂದಾ ದೇವತೆಯ ಮುಂದಣುತ್ತರಂಗಳೊಳ್ ಬರೆದಿರ್ದ ಸದ್ಧಾದೇಶಮನೋದಿ ನೋಡಿ ಮಱುದೆವಸಂ ಕೃಷ್ಣ ಚತುರ್ದಶಿಯಾಗೆ –

ಆರಾಧಿಸಿದಂ ದೇವಿಯ
ನಾ
ರಾತ್ರಿಯೊಳಮಳಗಂಧಪುಷ್ಪಾದಿಗಳಿಂ
ಭೋರೆನವಟಯಿಸೆ
ಖಚರಕು
ಮಾರಿಯರುಂ
ಕೆಳೆಯನುಂ ಕಳಾರ್ಣವತೀರಂ         ೫೩

ಆಗಳ್ ಗರ್ಜಿಸಿ ಪಾಯ್ವ ಪುಲಿಗಳುಮಂ, ಕೊಂದು ತಿಂಬ ಕುಕ್ಕುಟಸರ್ಪಂಗಳುಮಂ, ಸೀೞ್ದು ಪರಪುವ ಸಿಂಗಂಗಳುಮಂ, ತೀಡಿಯುಗಿವ ಸೀೞ್ನಾಯ್ಗಳುಮಂ, ನುಂಗಿಯುಗುಳ್ವಜಗ ರಂಗಳುಮಂ, ಸುಯ್ವ ಪಾವಂ ಪೊಯ್ವ ಸಾಧಕರುಮಂ, ಬೊಬ್ಬಿಱಿವ ಭೂತಂಗಳುಮಂ, ಬಾಯ್ದೆಱೆವ ಭೇತಾಳಂಗಳುಮಂ, ಬಿಸುನೆತ್ತರಂ ಪಾರ್ವ ಕಾಳರಕ್ಕಸಿಯರುಮಂ, ಬೆಟ್ಟಮನಿಕ್ಕುವ ಜಟ್ಟಿಗರುಮಂ, ಪೊಟ್ಟೆಯೊಳ್ ಬಾಯಂ ತೆಱೆವ ಪೂತನಿಯರುಮಂ, ಉರಿಯನುಗುೞ್ವ ಕಾಮುಕರುಮಂ, ಪೊಡೆವ ಸಿಡಿಲಂ ಕಱೆವ ಕಾರ್ಮುಗಲ್ಗಳನೇನೆಂದಱಿಯದೆ ತನ್ನನೆ ತಾನಱಿ ದಗುರ್ವಿಸುವ ವಿಗುರ್ವಣೆಯಂ ಬಗೆಯದೆ ಶ್ರೀಪಾರ್ಶ್ವಭಟ್ಟಾರಕರನೆ ಬಗೆದು ಕುಳನಗದಂತನಾ ಕುಳನಾಗಿ, ಕೆಯ್ಯಿಕ್ಕಿರ್ದಭಿಮಾನಮೇರುವಿಂಗೆ ಕ್ಷಣಕ್ಕೆ ಮುಕ್ತಿ ಕುಚಮುಕ್ತಾಮಣಿಯಪ್ಪುದನಱಿದೀ ಕಾಲದೊಳ್ ಕರ್ಮಕ್ಷಯಮಾಗೆ ಪರಮಾಗಮಕ್ಕೆ ಪುಸಿ ಪೊರ್ದರೆಂದು ಬೆಚ್ಚಿದಂತೆ ಚಕ್ರೇಶ್ವರಿ ಘೋರೋಪಸರ್ಗಮಂ ಪಿಂಗಿಸಿ ಪ್ರತ್ಯಕ್ಷೆಯಾಗಿ ಕೆಯ್ಯೆತ್ತುವುದೆಂದು ಕೆಯ್ಯೊಡ್ಡಿ ಬೇಡಿಕೊಂಡ ಪಂಡಿತರ್ ಕಂಡೊಡೆ ಕಾಳಾವಲೋಕಿನೀಪ್ರಭಾವಂ ಕಿಡುಗುಮೆಂದು ಕುಡದೆ –

ಪಡೆದಂ ಸಿದ್ಧರಸದ ಪೊಂ
ಗೊಡನುಮನಾಗಾಮಿಕಾಳಮೂರ್ತಿಗೆ
ಮಣಿಗ
ನ್ನಡಿಯೆನೆ
ತೋರ್ಪಕ್ಕರವೆಡೆ
ಯುಡುಗದ
ಕಾಳಾವಲೋಕಿನೀಫಳಕಮುಮಂ         ೫೪

ಅಂತು ಪಡೆದು ಕವಿಚಕ್ರವರ್ತಿಯಾ ಚಕ್ರೇಶ್ವರಿಯ ಭವನದಿಂ ಬೆಳಗಾಗಲೊಡನೆ ಪೊಱಮಡುವಾಗಳ್ ಕಾಳ ತೊಡರೆ ಕೊರಲ ವೇಷದ ಕೊಯ್ದುರದ ಕಡಿದ ಬೆರಲ ಮೊಗದರಿಸಿನದ ಕೊಱೆದ ಮೂಗಿನ ವಿಡಂಬಮೆ ತೊಡವಾಗೆ ಸಪ್ತವ್ಯಸನದಿಂ ಸಮೆದಂತೆ ಬರ್ಪ ಬಯಲು ಭಟ್ಟರುಂ, ಕೌಂಕುೞ ಸಿವಡಿಯ ಕೆಲದಡಪದ ಪಿಡಿದ ಕೊಡೆಯ ಪಟಾಟೋಪದಾಡಂಬರ ಮಗುರ್ವುವಡೆಯೆ ಲೋಕದ ಕಥೆಯುಂ ಕಬ್ಬಮುಂ ಮಾತುಂ ಬಾಯ್ವಣ್ಣೆಯಾಗೆ ಧೂರ್ತವೃತ್ತಿಯೆ ದಾೞಿಯಾಗೆ ಬಳೆದು ಕೈವಾರಕ್ಕೆ ಕಾದಿ ಕಲಿಯುಮೋದಿ ಪಡೆದೆತ್ತಿಸಿದ ಬಿರುದಂ ಬೆರಸು ಬರ್ಪೊಳ್ಳಕ್ಕರಿಗರುಂ ಬಳಸಿ ಬರೆ –

ಪೞಿಯ ಝೞಂಬಮುಜ್ಜಳಿಪ ಮುದ್ರಿಕೆ ಬಣ್ಣದ ಸೀರೆ ಹೇಮಶೃಂ
ಖಳೆ
ಮಣಿಮಾಳೆ ದೂಳೆಯದ ಕಂಕಣಮಿಟ್ಟ ತ್ರಿಪುಂಡ್ರವಣ್ಪು ತೋ
ಳ್ವಳೆ
ತಲೆಸುತ್ತು ಪಲ್ಲವದ ಸತ್ತಿಗೆ ಕೀರ್ತಿಪತಾಕೆ ತನ್ನೊಳೊ
ಳ್ಪಳವಡೆ
ಬಂದನಂದು ಗಜಭಟ್ಟನೆನಿಪ್ಪನಪೂರ್ವವಿಭ್ರಮಂ      ೫೫

ಅಂತು ಬಂದು ಶುಭೋದಯಮೆಂದು ಮುಂದೆ ನಿಂದು –

ಶ್ರೀಮನ್ಮಾನಾವತಾರೋ ವಿತರಣತರುಣಾಃ ಪ್ರಾಚ್ಯ ಶೈಲಾವತಾರಃ
ಕೀರ್ತಿಃ
ಕಾಮಾವತಾರೋ ವಿಭವಸುಮನಸೋ ಗಂಧಗರ್ಭಾವತಾರಃ
ಬುದ್ಧೋ
ರೂಪಾವತಾರೋ ಗುಣಮಯವಪುಷಃ ಪೂರ್ಣಜೀವಾವತಾರಃ
ಕಸ್ತೇ
ಕಂಥಾವತಾರೋ ಜಯತಿ ಬುಧಪತಿರ್ಬಾಣಭಾಗ್ಯಾವತಾರಃ        ೫೬

ಯಜ್ಜನ್ಮಶ್ರೀವಿವೇಕಪ್ರಣಯಗುಣಲಸತ್ಕೋಕಯೋಸ್ಸು ಪ್ರಭಾತಂ
ಯತ್ಕೀರ್ತಿಸ್ಸೂರಿಚೇತೋಮೃದುಕರಮಣಿಸೌಖ್ಯಶ್ರುತೇಶ್ಚಂದ್ರಮೂರ್ತಿಃ

ಯದ್ಭಾಗಂ
ಬೋಧನಾಥಸ್ಸುಕವಿಮಣಿಜನೇಃ ಕಾವ್ಯವೈಡೂರ್ಯಸೂತಿಃ
ಸೋಯಂ
ಸೌಜನ್ಯಸಿಂಧುರ್ಜಯತಿ ವಿಜಯತೇ ಕಾವ್ಯಕರ್ಣಾವತಂಸಃ   ೫೭

ಆಗಸೇಣಿಂದ ಮಾಹಿಂದಸಿವಿಸಸಿಯಣಂ ಮೇರಣೋಪಾಯರಂಭಂ
ಕಿಂಭೇದಂ
ಬಂಧಕಂಪಂ ಪಸವಸಿಹಿಯಯೇ ರಾಹುಣೋ ಹೋಸಿದಂಕೋ
ಯೆಂಕೇ
ಹಿಂಸೋ ಜಸೇಹಿಂ ಣಯವಯಣಸುತಾಸಂಛನೋ ಹಿಂಗುಣೇಹಿ
ಝ್ಘೀಣಂ
ಜಾಯಂ ಪಿಜಾಯೇ ಜಯಯಿ ಜಯಯಿ ವಣ್ಣೇ ಪಿಚಂದೋ ಕವೀಂದೋ  ೫೮

ವಿಹಾಯ ವಿಷ್ಣುದಾತಾರೌ ನೇಮಿಚಂದ್ರೇಣ ಸಂಗತೇ
ಶ್ರೀವಾಚೌಶಂಭರಾಲೋಕ್ಯ
ದೇಹಾರ್ಧೇಕೃತ ಪಾರ್ವತೀಂ       ೫೯

ಎಂದೋದಿದಕ್ಕರಿಗಂಗೆ ವಿತರಣಮುಗ್ಧಂ ಮಕರಂದನಿಂ ಸಿದ್ಧರಸಂದೀವಿದ ಪೊಂಗೊಡನುಂ ಕುಡಿಸಿ –

ಪುದಿದ ಭವದ್ಯಶೋವಿಶದಸಿದ್ಧರಸಂ ಸಲೆ ಸೋಂಕೆ ನಿತ್ಯಮಾ
ದುದು
ದೆಸೆ ಕಾಂಚನಾದ್ರಿಯೆನಿಸಿತ್ತು ಸುರಾದ್ರಿ ಸುವರ್ಣವರ್ಣಮಾ
ದುದು
ರವಿರಶ್ಮಿ ತನ್ನ ಸಮಮಾಯ್ತೆನೆ ಚಂದ್ರಿಕೆ ಪೇೞ್ ಪರಾರ್ಥಮ
ಪ್ಪುದು
ಪಿರಿದಾಯ್ತೆ ನೀಂ ಪಡೆದ ಸಿದ್ಧರಸಂ ಕವಿರಾಜಕುಂಜರಾ   ೬೦

ಎಂದು ಪೊಗೞ್ದಕ್ಕರಿಗಂ ಪೋಗೆ ಕಂದರ್ಪದೇವನಾ ಮಯೂಖನಿರ್ಝರಗಿರಿಯ ಮನೋಹರತೆಗಮಾ ವಿದ್ಯುಲ್ಲೇಖೆಯುಂ ಚಂದ್ರಲೇಖೆಯುಂ ಮಾೞ್ಪ ನಿರುಪಾಧಿ ವಿಶುದ್ಧ ಬಂಧೂಕೃತ್ಯಕ್ಕಮಾ ನಿಜಾಂತರಂಗ ಲಗ್ನಸ್ಮರವೈಶ್ವಾನರ ಪ್ರಶಮಕರ ಶಿಶಿರೋಪಚಾರಕ್ಕೆ ನೆಱೆವ ನವನಂದನವನಾಭಿವಕುಸುಮಕಿಸಲಯಚ್ಛಾಯಾಚ್ಛ ಜಳಜಳರುಹನಿವಹಬಹಳಿಕೆಗಮಗಲ ಲಾಱದ್ಲಲಿಯುಂ ಕೆಲದಿವಸಂ ವಿವಿಧವಿಹಾರವಿನೋದಮನೊದವಿಸುತಿರ್ಪಿನಮಾತನ ಮಾನಸಾನಳನನುದ್ದ ಮುರಿಪುವಂತೆ –