ಶ್ರೀಯುವತಿನಾಯಕಂ ಯತಿ
ನಾಯಕನಂ
ಬಲದೊಳಿಕ್ಕಿ ಜಾತಸುಖಾಭಿ
ಪ್ರಾಯಂ
ನವಮಧುಕರಚಾಂ
ಪೇಯಂ
ಪೋತರೆ ಮನೋನುರಾಗದಿನಾಗಳ್         ೧

ಸುರಿವ ಮದಧಾರೆ ಮಿಂಚಿನ
ದೊರೆಯೆನಿಸುವ
ದಂತಮಿಡಿದ ಮೆಯ್ಗರ್ಪಳವ
ಟ್ಟಿರೆ
ಕಾರ್ಮುಗಿಲ್ಗಳಿಕ್ಕಿದ
ಕುರುಣೆಗಳೆನೆ
ಕರಿಗಳಿರ್ದುವಾ ಗಿರಿತಟದೊಳ್         ೨

ಸೊವಡಿಂ ಸೊರ್ಕಿಸುತುಂ ಕರೇಣುಕುಳಮಂ ಸಾರ್ದಾರ್ದು ಸಾಮೋದಪ
ಲ್ಲವಮಂ
ಮೇವುತೆ ತಿಂಬ ತುಂಬಿಗಳನುದ್ಯದ್ಗಲ್ಲದಿಂದಗ್ರಪ
ಲ್ಲವದೊಳ್
ಸೋವುತೆ ಸೋರ್ವ ದಾನಜಲದಿಂದಂ ಸಲ್ಲಕೀಕಾನನೋ
ದ್ಭವಮಂ
ಮಾಡುತುಮಾಡುತಿರ್ದುವಗದೊಳ್ ಕೋಡಿಟ್ಟು ಕಾಡಾನೆಗಳ್

ಮತ್ತಮೊಂದು ವಿವಿಕ್ತದೇಶದೊಳ್ –

ಕೊಳದೊಳ್ ಬಾಳಮೃಣಾಳಿನೀಕಬಳಮಂ ಕಿೞ್ತೆತ್ತಿ ಹಸ್ತಾಗ್ರದಿಂ
ತಿಳಿನೀರಂ
ತೆಗೆದೊಯ್ಯನೂಡಿಸಿ ಪರಿಮ್ಲಾನಾಸ್ಯದೊಳ್ ಶೀಕರಂ
ಗಳನೀಡಾಡಿ
ಪೊದೞ್ದ ಪಚ್ಚೆ ಗೊಡೆಯೆಂಬಂತೆತ್ತಿ ಪಂಕೇಜಿನೀ
ದಳಮಂ
ಬಾಳಕರೇಣುವಂ ಬಯಕೆಯೊಳ್ ಕೊಂಡಾಡುತಿರ್ದತ್ತಿಭಂ       ೪

ಮತ್ತೊಂದೆಡೆಯೊಳ್ –

ಹದನಂ ಹಸ್ತಾಗ್ರದಿಂ ಘ್ರಾಣಿಸಿ ಬೆದೆವಿಡಿಯಂ ಮೆಚ್ಚಿ ಮೇತಕ್ಕೆ ಮೆಯ್ದಾ
ಱದೆ
ನೀಡುಂ ನಿದ್ದೆಯಂ ತೀನುಮನಱೆಯದೆ ನೀರೂಡದುರ್ವೀರುಹವ್ರಾ
ತದ
ಪೊಯ್ಲಿಂ ಕೂಡಿ ಮೆಯ್‌ಸುಕ್ಕೆನೆ ಸುಲಿಯೆ ಮದಂ ಮೆಯ್ಯೊಳೞ್ಕೂಡೆ ಕಾಡೊಳ್
ಮದನವ್ಯಾಸಂಗದಿಂದಿರ್ದುದು
ಗಿಡಿಗಿಡಿಜಂತ್ರಂಬೊಲಂದೊಂದಿಭೇಂದ್ರಂ          ೫

ಮತ್ತೊಂದೆಡೆಯೊಳ್ –

ತಳಿರಿಂದಂ ತೊಡೆ ದಾಸ್ಯಮಂ ತುಡುಕಿ ಮೆಲ್ಪಿಂ ಗಲ್ಲಮಂ ಚೆಲ್ಲದಿಂ
ದೆಳಸುತ್ತೊಯ್ಯನೆ
ಪೇಚಕಕ್ಕೆ ಕರಿ ಕೈಯಂ ನೀಡಿ ನಿಂದತ್ತು ಭೂ
ತಳದೊಳ್
ಪೊಯ್ದ ಪದಕ್ಕೆ ಪೋಪ ಪಿಡಿಯಂ ಮತ್ತೊಂದು ನಾಗಂ ಮನಂ
ಗೊಳಿಸಿತ್ತೊಂದೆಡೆಗೊಡ್ಡುಗೂಡಿಸುವವೊಲ್
ಕಾಮಾಗಮಾಚಾರಮಂ     ೬

ಮತ್ತೊಂದೆಡೆಯೊಳೊಡೆದ ಕರಟದಿಂ ಪೊಱಮಡುವ ಪೊಸಮದದ ಪೊನಲ್ವೊನಲನಟ್ಟೆ ನಟ್ಟು ಸೋರ್ವ ನಿರ್ಝರದಿಂ ಮುೞುಂಗಿದ ಕರಿಯ ಗಿರಿಯಂತೆ ಕರಿ ಪತ್ತೆ ಪತ್ತೆ ಸಾರ್ದು ಮೊಗದೊಳ್ ಮೊಗಮನಿಟ್ಟು ಪುಳಕಿತಮಾದ ಕರಟತಟಮಂ ತುಡುಂಕಲೊಡನೆ –

ಮದಧಾರಾಜಳದಿಂದೆ ನಾಂದ ನಿಜಗಂಡಕ್ಕಾಗಿ ಝಮ್ಮೆಂದು ಮು
ತ್ತಿದ
ಮತ್ತಾಳಿಗೆ ಬೆರ್ಚಿ ಪೋಗೆ ಬೞಿಸಂದಾತ್ಮೇಶ್ವರಂ ನೋಡೆ ನೋ
ಡದೆ
ಮೇಪಂ ಮುಱಿದೀಯೆ ಕೊಳ್ಳದೆ ಕನಲ್ದೌತ್ಸುಕ್ಯದಿಂ ಪೊರ್ದೆ ಪೊ
ರ್ದದೆ
ಪೋಯ್ತೊಳ್ಪಿಡಿ ಧೂರ್ತಸಂಗತಿಯಿನೇಂ ಕಾದಲ್ಮೆ ಕೇಡೆಯ್ದದೇ      ೭

ಮತ್ತಮೊಂದೆಡೆಯ ಕೊಳನ ತಡಿಯೊಳ್ ಕುಳಿರ್ಕೋಡುವ ಗಾಳಿಗೆ ಮೆಯ್ಯನೊಡ್ಡಿ ಮುಱಿದೊಟ್ಟಿ ಬೆಟ್ಟದ ಕೆಂದಳಿರಂ ಮೆಟ್ಟಿ –

ನವನೀರೇಜಮನೊಟ್ಟಿಕೊಂಡು ವಿಕಟೋತ್ಕರ್ಷಸ್ರವಚ್ಚಂದನ
ದ್ರವದಿಂ
ನಾಂದು ಕರಾಂಬುಶೀಕರದೆ ತನ್ನಂ ತೊಯ್ದು ಕರ್ಪೂರವೇ
ಣುವನಾಂತೊಯ್ಯನೆ
ನೆರ್ಮಿ ಸಾಲತರುವಂ ಶ್ವಾಸಾನಿಳೋತ್‌ಪ್ಲುಷ್ಟಪ
ಲ್ಲವದಿಂ
ಬೀಸಿಕೊಳುತ್ತುಮಿರ್ದುದು ವಿಯೋಗಮ್ಲಾನ ವನ್ಯ ದ್ವಿಪಂ         ೮

ಅದಂ ನೋಡಿ ಮಾನವಮದನನೀ ಮದರಕರಿಯುಮೆನ್ನ ವಂದಿಗನೆಂದು ನೋಡುತ್ತುಂ ಬರೆವರೆ –

ಇತರೇಭಾರ್ಪಿತಬಾಲಪಲ್ಲವಮನಾದಂ ಮೆಚ್ಚದೀಡಾಡಿ
ಮ್ಮತಿಯಿಂ
ಮೇದು ಮುದಿರ್ದ ಪಚ್ಚೆಲೆಗಳಂ ಮತ್ತಂ ಮದಾಮೋದವಾ
ಸಿತಶೀತಾಂಬುವನೊಲ್ಲುದಗ್ರರದನವ್ಯಾಘಾತಭಿನ್ನಾಂಬುದ

ಸ್ರುತಸೋಷ್ಣಾಂಬುವನೂಡಿತೊಂದಿಭಮಿದೇಂ
ಮಾನೋನ್ನತಂಗೊಪ್ಪದೇ

ಅದನವಳೋಕಿಸಿ ಕವಿಧವಳನಿದುವುಂ ಮಚ್ಚರಿತಮೆಂದು ಮೆಚ್ಚುತ್ತುಂ ನಡೆಯೆ ನಡೆಯೆ –

ನಾದೇಯಾಂಬುಮೊಲರ್ದಿ ಕೊಂಡು ಶಿರದೊಳ್ ಕರ್ಪೂರಮಂ ಪೊಯ್ದುಕೊಂ
ಡಾದಂ
ವಾಸನೆಗೊಂಡು ಕಿೞ್ತು ಕುಮುದಾಂಭೋಜಾತಮಂ ಚಂದನ
ಚ್ಛೇದಸ್ಯಂದನದಿಂದೆ
ನಾಂದುಕೊಳುತುಂ ಪೋದತ್ತು ಚೂತಚ್ಛದೋ
ನ್ಮಾದಂ
ಮುಗ್ಧಮದಾಳಿಗೀತರಸಿಕಂ ಮತ್ತೊಂದು ಗಂಧದ್ವಿಪಂ  ೧೦

ಪೊರೆದಿರೆ ಪತಿಯ ಮದಂ ನಿಜ
ಕರಟದೊಳರೆಗರ್ಚಿ
ಬಿದಿರ ಕೞಿಲೆಯನೆರಡಂ
ಬರುತುಮದೇಂ
ಕರಮೆಸೆದುದೊ
ಕರೇಣು
ಮದಕಳಭದಂತೆ ಕಡುಪಿಂದಾಗಳ್  ೧೧

ತೆರಳೆ ತನು ತುಳ್ಕೆ ಮೂತ್ರಂ
ಸುರಿಯೆ
ತಳಿರ್ ಸೃಕ್ವದಿಂದೆ ಕಣ್ಗಳ್ ಸುಖದಿಂ
ದರೆಮುಗುಳೆ ಮುಱಿದು ಕರಿದಂ
ಕರೇಣು
ಮೊಲೆಯುಂಬ ಮಱಿಯನೇಂ ತುಡುಕಿದುದೋ         ೧೨

ಪರಿಪರಿದು ನಲಿದು ಮೊಲೆಗಳ್
ತೊರೆದಿರೆ
ತಣಿಯುಂಡು ಪಾಲ್ಗಳಂ ಪುಷ್ಕರದಿಂ
ಬರೆತೆಗೆದು
ಮುಱಿದು ನೋಡುವ
ಕರಿಣಿಯ
ಮೊಗದೊಳ್ ತುಳುಂಕಿತೊಂದಿಭಕಳಭಂ    ೧೩

ನೀಡದೆ ನಿಜಪತಿ ಪದೆಪಿಂ
ನೀಡಿದ
ಪೊಸದಳಿರ್ಗೆ ಕಮಳಮೃದುಪುಷ್ಕರಮಂ
ನೀಡಿ
ನಲಿದುಡುಕುತುಂ ಮೊಲೆ
ಯೂಡಿದುದು
ಕರೇಣು ಕಳಭಮಂ ಕಾನನದೊಳ್       ೧೪

ಉಡಿಯೆ ಕರಿ ಚಂದನದ ತಳಿ
ರ್ಗುಡಿಯಂ
ಭಯದಿಂದೆ ಬಿೞ್ದು ಪರಿವೆಳವಾವಂ
ಪಿಡಿ
ಪಿಡಿಯೆ ಪಿಡಿಯ ಪೋತಂ
ಪಿಡಿದೋಡಿದುದಂದು
ಫೂತ್ಕೃತಕ್ಕಗಿದಗದೊಳ್        ೧೫

ಪೂವಿಂದೆ ಪಿಡಿದ ತೀವಿದ
ಮಾವಿನ
ಕೆಂದಳಿರನುಡಿದು ಕುಡೆ ಬಿಸುಟಳಿಗ
ಳ್ಗೇವೈಸಿ
ಮೇವ ಕಮಳದ
ಕಾವೆಂದೆಳಮಿಡಿಯ
ಪಲ್ಲನೆೞೆದುದು ಕಳಭಂ  ೧೬

ಮಿಳಿರೆ ಕಿವಿಗಳ್ ತಮಾಳದ
ತಳಿರಂತಿರೆ
ಪೊಳೆಯೆ ಪವಳದಂತಿರೆ ಬಾಯ್ ಕೈ
ಗಳನೆತ್ತಿ
ಪರಿದು ಪೋರ್ದುವು
ಕಳಭಂಗಳ್
ನಲಿದು ನೋಡುತಿರೆ ತಾಯ್ವಿಡಿಗಳ್      ೧೭

ಕಾಲೊಳ್ ತೊಡರ್ದುತ್ಪಲದಳ
ಮಾಲೆಗಳುಲಿ
ಗೆಜ್ಜೆಯೆನಿಸೆ ಮಾಂಗಾಯೆನೆ
ರ್ಣಾಲಂಬಿಕಮಳಮುಕುಳಂ

ಬಾಲೇಭಂ
ಬಸೆಯ ಪೆಱಗೆ ಬಂದುದು ಕೊಳದಿಂ        ೧೮

ತುಂಬಿಗುರುಳಲೆಯೆ ಕೈಯಲ
ಗೆಂಬಿನಮಲರ್ಗೊಂಬು
ಪೊಳೆಯೆ ಪಲ್ಗಳ ಛವಿ ಮಿಂ
ಚಂ
ಬೀಱೆ ಬೀಱೆ ಸಮದ
ಸ್ತಂಬೇರಮಮೆಸೆದುದೊಂದು
ಮೈಲಾರನವೋಲ್     ೧೯

ಹರಿ ಬೇದಂಗೆಯ್ಯೆ ಬಿರ್ದೋಪನ ಪಡಿಮೊಗದೊಳ್ ತುಂತುಱುಂ ತೂಱಿಸುಯ್ಯಂ
ಕರದಿಂದಾರಯ್ದು
ಬಾಯೊಳ್ ತದುಕಿನ ತಳಿರಂ ತೂಂತಿ ರಕ್ತಾದ್ರಮುಕ್ತೋ
ತ್ಕರಮಂ
ಮತ್ತಾಯ್ದು ಪುಣ್ನೆತ್ತಿಯೊಳೆ ಹುದುಗಿ ಬಾಷ್ಪಪ್ಲುತಾಲೋಕೆ ಶೋಕಾ
ತುರೆ
ದುಃಖೋದ್ರೇಕದಿಂದಂ ಬಸೆ ಪರವಸೆ ಬೀಸಿತ್ತು ಕರ್ಣಾಗ್ರದಿಂದಂ    ೨೦

ಅದಂ ನೋಡಿ ನೋಡಲಾಱದೆ ಕರುಣದೊಳ್ ಬಿಱಿಬಿಱಿದಳುವರಸನಂ ಬಱುಂಟಿ ಬರೆತೆಗೆದು ಮಕರಂದಂ ಸುಟ್ಟಿಸಿ ತೋಱೆ –

ಕೆದಱಿದ ಕೇಸರಂ ಕುಸಿದ ಪಿಂದೊಗೆದೊಡ್ಡಿಡ ಕಂದಮೇಱೆ
ಟ್ಟಿದ
ಬಸಿಱೆತ್ತಿದೇಕಚರಣಂ ತೆಱೆದಾನನವಾಳೆ ಸುತ್ತಿ
ತ್ತಿದ
ಕುಡಿವಾಲಮೊಪ್ಪೆ ಕಿವಿಗಳ್ ಕಿಱಿಪುತ್ತಿರೆ ಪಾಯ್ದು ದೇವಕೂ
ಟದ
ಕಱುವಿಟ್ಟ ಕೇಸರಿವೊಲಿರ್ದುದು ಕೇಸರಿ ಕುಂಭಿಕುಂಭದೊಳ್          ೨೧

ನೆಗೆದ ಮಿದುಳ್ಗಳಿಂ ಸ್ಫುಟಸಟಾಟವಿ ಪೆರ್ಚೆ ನಿಷಿಕ್ತರಕ್ತದಿಂ
ದ್ವಿಗುಣಿಸಿ
ಬಾಯ ಕೆಂಪು ಪೊಸಮುತ್ತಿನ ಪತ್ತುಗೆಯಿಂದೆ ಪಲ್ಗೆ
ಲ್ಲೊಗೆದವೊಲಾಗೆ
ಲಂಘಿಸಿ ನಖಾಂಕುರದಿಂ ಕುಡುದಾಡೆಯಿಂ ಕನ
ಲ್ದುಗಿಬಗಿಮಾಡುತಿರ್ದಪುದು
ಕೇಸರಿ ಕುಂಜರಕುಂಭದೇಶದೊಳ್ ೨೨

ಅಗಜಗಜಲೋಹಿತಾಹಿತ
ವಿಗಳದರುಣರಣವಿಕಾಸಿಕೇಸರಿ
ಪರಿ ಪಾ
ಯ್ದುಗಿದಪುದುಗುರಿಂ
ಮುತ್ತಿನ
ಪಗೆವಂ
ತೆಱೆವಂತೆ ಕುಂಭಕುಂಭಸ್ಥಳಮಂ    ೨೩

ಕೊರಲೊಳ್ ತಳ್ತಗ್ಗಳಂ ತೊಂಗಲ ಪೊರಜೆವೊಲಿಂಬಾಗೆ ಬಾಲಂ ಬಳುಂಕು
ತ್ತಿರೆ
ಗಾತ್ರಂ ನೆತ್ತಿಯೊಳ್ ನಟ್ಟುಗುರುಗಿಯೆ ನಿಶಾತಾಂಕುಶಶ್ರೀಯಿನುದ್ಯ
ತ್ಕರಿಯಂ
ಪಾಯ್ದೇಱಿ ಬಂಬಲ್ವಱಿಯಿಸಿ ಗಿರಿಯೊಳ್ ಪೋಱಿ ಸುತ್ತುಂ ಸರತ್ಕೇ
ಸರಿ
ಕಾಸಾರಕ್ಕೆ ಕೊಂಡುಯ್ದಪುದಿದು ಮೃಗರಾಜಂಗೆ ಪೇೞಂದಮಲ್ತೇ     ೨೪

ಎನುತುಂ ಪೋಗೆವೋಗೆ –

ಎಳವುಲಲನಾಯ್ದು ಮೇವೊಂ
ದೆಳವುಲ್ಲೆಯನೆಱಗಿಕೊಂಡು
ಕುಕ್ಕುಟಸರ್ಪಂ
ಗಳನೆಱಗಿಕೊಂಡು
ಪೋಯ್ತಾ
ಗಳೆ
ಪವ್ವನೆ ಪಾಱೆ ನೃಪನ ಮನಮುಂ ಕೃಪೆಯುಂ     ೨೫

ಅಂಬರದೋಳದಱ ವಿಕಳಾ
ಡಂಬರರವಮೊಗೆಯೆ
ನೆಗಪಿ ಕೊರಲಂ ಬೆನ್ನೊಳ್
ಕೊಂಬುಗಳ
ಕೊನೆಯಿನುಗೆ ನಯ
ನಾಂಬುಗಳೀಕ್ಷಿಸಿದುದಾತ್ತ
ಕರುಣಂ ಹರಿಣಂ  ೨೬

ತುಂಡಯುಗಂಗಳಿಂ ನೆಗಪಿ ಕೊಂಡೆರಡುಂ ಮಿಗೆ ಪಾಱಿ ಪೋಪ ಭೇ
ರುಂಡನ
ತುಂಡದೊಂದು ಶರಭಂ ಜಗುಳ್ದೊಯ್ಯನೆ ಬೀೞೆ ಬೇಗದಿಂ
ಚಂಡಿಸಿ
ಪಾಱದೊಂದೆಱಗಲೊಂದೆೞಲುತ್ತಿರೆ ವಕ್ತ್ರಮಾ ನಭೋ
ಮಂಡಲದಲ್ಲಿ
ನಿಂದುದನಭೀಕ್ಷಿಸಿದಂ ಕವಿರಾಜಕುಂಜರಂ         ೨೭

ಅಲ್ಲಿಂ ಪೋಗೆವೋಗೆ ತೊಟ್ಟನೆ ಕಟ್ಟಿದಿರೊಳ್ –

ತಳಿರ ಸವಂಗ ಪೂತ ಸೆಳೆಗೊಂಬಿನ ಬಿಲ್ ನವಪುಲ್ಲ ಕಂಕಣಂ
ಬಿಳಿಯಸಿಯಂಬು
ಮಾಂದಳಿರ ಕೈಪೊಡೆ ತೋರದುಱುಂಬಿನೊಳ್ ತೆಱಂ
ಬೊಳೆವಲರ್ಗೊಂಚಲೊಪ್ಪೆ
ತನು ನೀಲಶಲಾಕೆವೊಲಾಗೆ ಕಾಮನಂ
ತಳವಡೆ
ಬಂದಳಂದು ಮೊಲೆ ಬಾರದ ಬಾಲೆ ಪುಳಿಂದೆ ಲೀಲೆಯಿಂ        ೨೮

ಆಕೆಯನಾ ಕುಮಾರಂ ಕಂಡು ತನ್ನಂ ಗುಱಿಮಾಡಲಱಸಿ ಬರ್ಪ ಕನ್ನೆಯೆಗೆತ್ತು ಭಯಮುತ್ತು ಮತ್ತೊಂದು ರೂಪಾಗಿ ಕುಱುಕುಱುಮೆಟ್ಟಿ ಕಿಱಿದಂತರದೊಳ್ ಕೆಲಕ್ಕೆ ತೊಲಗಿ ಕಲ್ಲೈಸಿ ಪುಲ್ಲೆಯಂತೆ ಪುಲ್ಲಂ ಸೋಂಕದರೆ ಪಾಱಿ ಬೆರ್ಚಿ ನೋಡುತುಮಾ ಪುಳಿಂದಿ ಪೋಪುದುಮನಿಮಿತ್ತ ನಿಜಮನೋವೃತ್ತಕಪ್ರಿಯವರಸ್ಯ ದರಸ್ಮಿತ ದರ್ಶನದತ್ತಲಜ್ಜನರಸನಲ್ಲಿಂದಂ ನಡೆಯೆ ನಡೆಯೆ –

ನೀಲಾಂಬುದಲೇಖೆಗಳೆನೆ
ಶೈಲದ
ಸಾನುವಿನೊಳೆಸೆದರತಿಚಪಲತಟಿ
ನ್ಮಾಲಾಮಂಜರಿಯಂತೆ
ವಿ
ಲೋಲಾಕ್ಷಿಗಳಡರೆ
ಪೊಳೆವಿನಂ ವನಚರಿಯರ್         ೨೯

ಅಲ್ಲಿಯೊರ್ವಳ್ ತಳ್ತಿರ್ದಶೋಕೆಯ ತಣ್ಣೆೞಲೊಳ್ –

ನನೆವೆರಸುಟ್ಟು ಮಾಂದಳಿರನೊಪ್ಪಿರೆ ಕಾಡಲರಂ ತುಱುಂಬಿ ಚಂ
ದನದೊರಳಲ್ಲಿ
ಪೊಯ್ದು ಬಿದಿರಕ್ಕಿಯನುನ್ಮದದಂತಿದಂತದೊಂ
ದೊನಕೆಯನೆತ್ತಿ
ನುಣ್ದನಿಯ ಸುವ್ವಿಯ ಗಾವರದೊಳ್ ತೊಡರ್ಚಿದೋ
ಪನಿಗೆ
ಪುಳಿಂದಿ ಪಾಡಿದಳೊಱಲ್ದು ಗುಣಪ್ರಿಯನಂಕಮಾಲೆಯಂ  ೩೦

ಆಕೆಯ ಕೂರಿತಪ್ಪ ಕಡೆಗಣ್ಣ ಕೊನೆಯೇಱಂ ಮೆಱುತ್ತುಮಾ ಯೌವನವನ ಕಿರಾತನುಮಲ್ಲಿಂ ತಳರೆ ಮತ್ತೊಂದು ಬಾಳತಮಾಳದೊಳ್ –

ಇಂಚರದ ಮರ್ದಿನ ಸವಿಯ ಪು
ಳಿಂಚಿನ
ಕಿವಿಗಳ್ಗೆ ವೃತ್ತಕುಚೆ ಪತಿಯುರಮಂ
ಮಿಂಚಿನಮೊಲಪ್ಪಿ
ಮಿಡಿದ ವಿ
ಪಂಚಿಯೆನೆ
ಪುಳಿಂದಿ ಪಾಡಿದಳ್ ಮಾನವನಂ          ೩೧

ಮತ್ತೊಂದು ಕುಸುಮಿತವನಾಂತರದೊಳವಳ ದನಿಯೊಳ್ ದನಿ ಬಂದು ಬೆರಸೆ ಬಂದ ಮಾವಿನ ಬೞಲ್ದ ಸೆಳೆಗೊಂಬಂ ನೆಮ್ಮಿ –

ದನಿಯ ಪೊಗರ್ ಮನೋಭವನ ಬಾಳ್ವೊಗರಂತಿರೆ ಚಿತ್ತಮಿತ್ತು ಮೇ
ಪನೆ
ಮಱೆದಾಲಿಸುತ್ತೆಸೆವ ಪುಲ್ಲೆಯುಮಾಗಳದರ್ಕೆ ಸಾರ್ದ ಬೇ
ಡನುಮಿರೆ
ಚಾಪಮಂ ತೆಗೆದು ಚಿತ್ರಿಸಿದಂತೆ ಮನೋನುರಾಗದಿಂ
ವನಚರಿ
ಪಾಡಿದಳ್ ಮಧುರಗೀತಿಗಳಂ ಕವಿರಾಜಮಲ್ಲನಾ      ೩೨

ಮತ್ತೊಂದು ಕುಳಿರ್ವ ಕೊಳನ ತಟಿಯೆ ವಿಪುಳ ಪುಳಿನತಳದೊಳ್ –

ಬೀಣೆಯ ದಂಡಿಗೆಯಂತಿರೆ
ಮಾಣದೆ
ಮೊಱೆವಳಿಗಳಿಂ ಸನಾಳಾಂಬುಜಮಂ
ಜಾಣಿಂದೆ
ಪಿಡಿದು ಪಾಡಿದ
ಳೇಣೀದೃಶೆ
ಶಬರಿ ಸುಕರಕವಿಶೇಖರನಂ     ೩೩

ಮತ್ತೊಂದು ಕುಸುಮಿತವನಾಂತರದೊಳ್ –

ರಾಗರಸಂ ಪೊನಲ್ವೊನಲನಟ್ಟುವಿನಂ ಕವಿತಂದು ತೊಯ್ದವೊಲ್
ತೂಗುವ
ಕೆಂದಳಿರ್ ತೊಲಗೆ ತುಂಬಿಯ ಬಣ್ಣದ ಮೆಯ್ಯ ಬಣ್ಣದಿಂ
ಕೋಗಿಲೆಯಂತೆ
ಕಣ್ಗೊಳಿಸುತುಂ ಕಳಕಂಠಿಕೆ ಕೊಂಬನೇಱಿ ಕಾ
ೞ್ಪೂಗಳನಾಯ್ವುತುಂ
ಶಬರಿ ಪಾಡಿದಳಾ ಕವಿತಾವಿಳಾಸನಂ    ೩೪

ಮತ್ತೊಂದು ತರುಣಕುಜಕುಂಜಪ್ರದೇಶದೊಳ್ –

ವನಚರಿ ಪಾಡೆ ಪಾಡೞಿದು ಸಾರ್ದೊಲಿದಾಲಿಸುತಿರ್ಪ ದಂತಿಯುಂ
ವನಚರನೆಚ್ಚೊಡೈದೆ
ಬಿರಿದಾನೆಯ ಕುಂಭದಿನುನ್ನಮನ್ನಿಜ
ಸ್ತನಭರಕುಂಭಮಂಡಲಕೆ
ಸೋಲ್ತುದು ಸೇಸೆಯನಿಕ್ಕುವಂತೆ ಮು
ತ್ತಿನ
ಸರಿ ಸೋಱಿ ಹಾರರಚನಾತುರೆಯಾದಳವಳ್ ವಿಳಾಸದಿಂ ೩೫

ಪೊಳೆದು ಕದಂಪನಪ್ಪಳಿಸಿ ಪಾಲೆಯೊಳೊಪ್ಪುವ ದಂತದೋಲೆಯೊಂ
ದಳವಡೆ
ಲೀಲೆಯಿಂ ಪಸಿಯ ಬಣ್ಣದ ಬೇಡಿತಿ ತಳ್ಪಲೊಳ್ ತಳ
ತ್ತಳಿಸುವ
ತೋರಮುತ್ತುಗಳನಾಯ್ದಳಗಂ ಮುಗಿಲಂ ಪಳಂಚೆ ಬಿ
ರ್ದೆಳೆಯುಡುಜಾಲಮಂ
ಹಿಮಕರಂಬೆರಸಾಯ್ವ ನಿಶಾವಧೂಟಿವೋಲ್    ೩೬

ಮತ್ತೊಂದು ಕೆಂದಳಿರ ಕಾವಣದೊಳ್ –

ಆನೆಯ ನೆತ್ತಿಯಂ ಬಿರವಿನಂ ಪರಿದೆಚ್ಚುದಿರ್ದಚ್ಚಮುತ್ತನೇಂ
ತಾನೆ
ವಿನೋದದಿಂ ತುಡಿಸವೇ ಮೊಲೆಬಾರದೆ ಮುನ್ನಮೀಗಳಾ
ಯ್ತೇನೆಸಕಂ
ನಿನತ್ತು ಪೊಸಜವ್ವನದೊಳ್ ನಿಜೋನ್ನಮ
ತ್ಪೀನಕುಚಂಗಳೊಳ್
ಬಿರಿದ ಮುತ್ತಿನ ಹಾರಮನಿಕ್ಕುತಿರ್ದಪಂ   ೩೭

ಎಂದು ಕೆಳದಿಯಂ ಕೊರಲಂ ನೋಡಿ ನಗುತ್ತುಂ ನುಡಿಯದಂತೆ ನುಡಿದ ಬೇಡಿತಿಯಂ ನೋಡಿ ಮನದಭಿಪ್ರಾಯಮಂ ಮೆಚ್ಚುತ್ತುಮವರಿರ್ವರುಂ ಪೋಗೆವೋಗೆ –

ಆಱದಿರೆ ತೆಗೆಯಲಿನಿಯಂ
ಮಾಱಲ್
ಪೋದಳ್ ಮಿಗಕ್ಕೆ ಬಿಲ್ಲಂ ಬಿಲ್ಲ
ರ್ಗೇಱಿದ
ಜವ್ವನಸಿರಿಯಂ
ಬೀಱಲ್
ಪೋಪಂತೆ ಶಬರಿ ಶಬರಾಲಯದೊಳ್        ೩೮

ಏಣಿಗಳಂ ಚಕಿತವಿನಿ
ದ್ರಾಣವಿಲೋಚನವಯಸ್ಯೆಯರನಿಸುವೆಸಕಂ

ಮಾಣಿಸುವವೊಲಿನಿಯರ

ಪ್ರಾಣತೆಯಂ
ತೆಗೆವರಪ್ಪಿ ಶಬರಿಯರಗದೊಳ್         ೩೯

ತಕ್ಕಿಸಲೆ ತಕ್ಕ ಶೋಭೆಗೆ
ಪಕ್ಕಾದೊಡಮರಸನಲ್ಲಿ
ಪುಗಲೊಲ್ಲದೊಡಂ
ಪಕ್ಕಣಮಂ
ಬಲ್ಪಿಂದಂ
ಪೊಕ್ಕುವು
ನಿಯಮಿಸುವರಾರೊ ಕಣ್ಣಂ ಮನಮಂ       ೪೦

ಅಂತನೇಕಾತಿಶಯನಿಯಮಮುಮನೇಕಮಣಿಶಿಲಾಸಮೂಹನಿಯಮಮುಮೇಕಾನೋಕಹ ಕುಹರಗಹನೆಗುಹಾಗಹ್ವರಾವಗಾಹಗೇಹಮುಮನೇಕವಿಷ್ಕಿರನಿಕರ ಪತತ್ರ ಪಾತಪ್ರಭೂತಪವನ ಪ್ರೇಂಖೋಳಿತಲತಾಪಲ್ಲವಸಮೂಹಮುಮನೇಕ ಮೃಗ ಜಾತಿಸಹಜಾತಿ ಸ್ನೇಹಸಾಹಸಕ್ರೀಡಾ ವಿಹಾರವೈರಸ್ಥಾನಮುಮನೇಕ ವನಚರೀ ವಿನೋದವಿಧಿ ನಿಧಾನಮುಮಪ್ಪ ವಿಂಧ್ಯಾಚಳಮಂ ತಮ್ಮುತಿರ್ವರುಮತಿಕೌತುಕದಿಂ ನೋಡುತ್ತುಮಲ್ಲಿಗಲ್ಲಿಗೆ ನಿಂದು ಮಾತಾಡುತ್ತುಂ ಮತ್ತಮದಱ ತಳ್ಪಲ ಪುಲ್ವಟ್ಟೆವಿಡಿದು ಪೋಗಿ ಪೆರ್ಬಟ್ಟೆಗೊಂಡು ಕಿಱಿದಂತರಮಂ ಕೀಱಿ ಪೋಗೆ –

ವಿಟಪಾಗ್ರಾಂಕುರಲಿಖ್ಯಮಾನಮದವದ್ದಿಕ್ಕುಂಭಿಕುಂಭಸ್ಫುಟೋ
ತ್ಕಟಮಂ
ತುಂಗಶಿಖಾಸಹಸ್ರ ವಿಚರಚ್ಚಂದ್ರಾರ್ಕ ಸಂಚಾರಸಂ
ಕಟಮಂ
ಭೀಮತಮಸ್ತಮಾಳಮಳಿನಚ್ಛಾಯಾವವತ್ಕೋಟರಾ
ವಟಮಂ
ಕಂಡನಖಂಡಪರ್ಣವಟಮಂ ಸೌಂದರ್ಯ ಸಂಕ್ರಂದನಂ        ೪೧

ಮತ್ತಮದು ಮೊದಲ್ಗೊಂಗುಗಳಿನಿೞಿದಿಳೆಯೊಳ್ ಬಿೞ್ದು ಬೇಱೂಱಿ ಬೆಳೆದ ಬೀೞಲ್ಗಳೊಂದೊಂದನೊತ್ತಿ ಪತ್ತಿಸುತ್ತಿ ಸಂದಣಿಸಿ ನೆಲದಗಲವನೆಡೆಗೊಂಡು ಮೊದಲ್ಗಿಡಿಸಲ್ ಮೊದಲ್ಗೊಂಡಂತಿರ್ದ ಮೊದಲೊಳ್ ಮೊದಲಿಂ ಕವಲ್ತು ಕೊರ್ಬಿ ಬೂದವೇಱಿ ಬೆಳೆದು ಬೆಳಗಾಯ ಬಣ್ಣಮಾಗಿ ಮಿಳಿಸುತ್ತಿಂಗಮಗ್ಗಳಮಾಗಿ ಮುಗಿಲಂ ಸಱುಸೈಕನೆ ಬೆಳೆವೊಡುದ್ದಮೆಯ್ದಿತೆಂಬಂತೆಯುಂ, ಮೇರೆಯಿಲ್ಲದ ದೆಸೆಗಳಂ ಮರನೆ ಮಾಱಿಟ್ಟು ನೋೞ್ಪಂತೆಯುಂ, ನೀಳ್ಪುವರಿದಡ್ಡಂಬಾಯ್ದಳ್ಳೆಗೊಂಬುಗಳೊಳ್ ಬಾದುಗೈದು ಬಳೆದು ಮುಗಿಲಂ ಮುಟ್ಟಿ ಮಗುಳ್ವಂತೆ ನಸುಬಾಗಿನಿಂದ ಕೀೞ್ಗೊಂಬುಗಳೊಳಂ, ಕೀೞ್ಗೊಂಬುಗಳ ಕೀೞೆಲೆ ಕೂರೇಣುಗಳಿಂ ಕತ್ತರಿಯಂತೆ ಕೊಱೆದು ಕೊಳೆ ಪರಿದು ಸಿಲ್ಕಿದ ಬಿಸುಗದಿರ್ಗಳಂತಿರ್ದ ಬೀೞಲ್ಗಳೊಳಂ, ಣಿಲ್ಗಳೊಳಮಣಿಲೇರಙದಂತಿರೂದಿ ಬಿಟ್ಟಂತುದ್ದಮಾದ ತುದಿಗೊಂಬುಗಳೊಳಂ ಪಾವುಗೆತ್ತು ಪತ್ತುವ ಮುಂಗುಲಿಗಳಂತೆ ಬಾಲಮಂ ಬಿದಿರುತ್ತೆ ಮಣಿಕುವರೆದಡರ್ವ ತುದಿಗೊಂಬುಗಳ ಕೊನೆಯೊಳ್ ಕವಲ್ತು ಪಾಲ್ವಱಿಯೆ ಬಲ್ವಲಾದ ಕಿಱುಗೊಂಬುಗಳೊಳಂ, ಕಿಱುಗೊಂಬುಗಳೊಳ್ ತುಱುಗಿ ಪಸುರ್ವೊನ್ನ ಬಣ್ಣಮಾದ ಪಣ್ಣೆಲೆಗಳೊಳಂ, ಪಣ್ಣೆಲೆಗಳಂ ಪಿಂದಿಕ್ಕಿ ಪುದಿದು ಪಚ್ಚಿಯ ದಳಮಂ ದಳಂಬಿಡಿದು ಕಡಿದು ಮಾಡಿದಂತಿರ್ದ ಪಚ್ಚೆಲೆಗಳೊಳಂ, ಪಚ್ಚೆಲೆಯ ಸುೞಿಯೊಳಡಸಿ ಪೊಚ್ಚ ಪೊಸಪವಳದ ಮುಗುಳಂತಿರ್ದ ಪಣ್ಗಳೊಳಂ, ಪಣ್ಗೆ ಪೊಯ್ದು ಸೆಳೆಗೊಂಬಿಂಗೆ ಸೂೞ್ ಪುರ್ಬನಿಕ್ಕಿ ಪಲ್ಲಂತೆಱೆವ ಪುಲ್ಗೋಡಗಂಗಳೊಳಂ, ಪುಲ್ಗೋಡಗಂಗಳುಗರ್ ತಾಗೆ ಸೊನೆವಿಟ್ಟು ಮಿಳಿರ್ದು ಮೊಲಗಿವಿಯ ಬಣ್ಣಮಪ್ಪ ನುಣ್ಣೆಲೆಗಳೊಳಂ, ನುಣ್ಣಲೆಯ ತೊಂಗಲ ನಡುವೆ ಮೂಡಿ ತೋಱುವ ಕೋೞಿಯಾರೆಯಂತೆ ಕೋಮಳವಾದ ಕಳಿಕೆಗಳೊಳಂ, ಮಾಣಿಕದಿಂ ಸಮೆದ ಮರದಂತೆ ಸೊಗಯಿಸಿದುದಂತುಮಲ್ಲದೆಯುಂ –

ಅಳವಿಗೞಿದಾ ಮಹೀಜದ
ಬಳವಿಗೆ
ತಾಯಾದ ತೋರವೇರೊಂದೆ ರಸಾ
ತಳಮನೊಡೆದುರ್ವಿ
ಬಳೆದವೊ
ಲಿಳೆಯಂ
ತಳೆದಿರ್ದ ನಾಗನೊಪ್ಪಮನೀಗುಂ ೪೨

ಅದಱ ತುದಿಗೋಡ ಪಣ್ಣಂ
ವಿಧುವ
ಮೃಗಂ ಮೇದು ಪಿಕ್ಕೆಯಿಕ್ಕಿದ ಬೀಜಂ
ಸುಧೆಯಿಂದೆ
ಮೊಳೆತೊಡಾಯ್ತದ
ಱುದರದ
ವಟವೃಕ್ಷಮೆನಿಪುದಾ ವಟವೃಕ್ಷಂ     ೪೩

ಆಲಮನಳುರ್ವ ದವಾನಲ
ನಾಲದ
ತಣ್ಣೆೞಲೊಳಾಲಿ ಕೋಡೆ ತದೀಯ
ಜ್ವಾಲೆ
ಸುರಲಾಱದಿರ್ದವೊ
ಲಾಲದೆ
ತಳತಳಿಸುತಿರ್ದುವೆಳದಳಿರ್ದುಱುಗಲ್       ೪೪

ತೀನೆರ್ದೊಡುರ್ದೆ ಕರಟಮ
ನಾನೆಗಳೊಱೆದುಗುವ
ಪಾಲ್ ಜಿಗಲ್ತಿರೆ ಪತ್ತಿ
ರ್ದೇನೆಸೆದುದೊ
ಬಿದಿ ಗಿರಿಗಳ
ನಾನಿಸಿದವೊಲೆಂದುಮೊಱಗದಂತಾ
ವಟಮಂ         ೪೫

ಎನೆ ಸೊಗಯಿಪುದನ್ರ ನ್ಯಗ್ರೋಧದ ತಣ್ಣೆೞಲೊಳ್ –

ಆಲದ ಪಣ್ಣ ಬಣ್ಣದಧರಂ ಪೊಳೆದೊಪ್ಪುವ ಮಿಂಚುವೋಲ್ ಬೆಡಂ
ಗೋಲಗಿಸುತ್ತುಮಿರ್ಪ
ನಿಡುಗಣ್ಣೆಳವಚ್ಚೆಯ ಮೆಯ್ಯಬಣ್ಣಮು
ನ್ಮೀಲಿಪ
ಭೂಷಣಾಂಶು ನವರತ್ನ ಮಹಾಮಕುಟಂ ಚತುರ್ಭುಜಂ
ಲೀಲೆಯನೀಯೆ
ನಿಂದನಘಯಕ್ಷನನೀಕ್ಷಿಸಿದಂ ಕುಮಾರಕಂ      ೪೬

ಅಂತೀಕ್ಷಿಸಿ ಯಕ್ಷನಂ ತ್ರಿಃಪ್ರದಕ್ಷಿಣಂಗೆಯ್ದು ಮುಂದೆ ನಿಂದು ಕೆಯ್ಗಳಂ ಮುಗಿದು –

ರಕ್ಷ ಯಕ್ಷ ಜಿನಶಾಸನರಕ್ಷಾ
ದಕ್ಷ
ದಕ್ಷಿಣ ಗುಣಪ್ರಿಯ ವಿಘ್ನಾತ್
ಈಕ್ಷಣೀಯಶುಭಲಕ್ಷಣ
ಲಕ್ಷ್ಮೀಂ
ಯಕ್ಷ
ರಕ್ಷ ಮದು ವಾಙ್ಮಯಮೂರ್ತೇ

ಅಂತನಘಯಕ್ಷನಂ ತನಗೆ ವರದನಪ್ಪಂತು ಸಜ್ಜನಸಂಸ್ತುತಂ ಸ್ತುತಿಗೆಯ್ದು ಮರದ ತಣ್ಣೆೞಲೊಳ್ ತಳಿರಂ ಪಾಸಿ ವಿಶ್ರಮಿಸಿ ತಪನತಾಪಮಂ ಕಳೆದು ಸ್ಮರಪರಿತಾಪಮಂ ಪೆರ್ಚಿಸುವ ಪಾದಪಚ್ಛಾಯೆಯೊಳ್ ನಿಲಲೊಲ್ಲದಲ್ಲಿಂ ತಳರ್ದು ತಳಿರ್ಗೊಂಬಂ ತೞೆವಿಡಿದು ವಯಸ್ಯ ನುಮಾ ನವವಯೋವಯಸ್ಯನುಂ ಪಯಣಂ ಬೋಗಿ –

ತ್ರಿದಶೇಂದ್ರಾರ್ಚಿತಚಂದ್ರಕಾಂತಜಿನಬಿಂಬವ್ರಾತಪಾದೋದಯಾ
ಸ್ಪದೆಯಂ
ಪಾವನಜೀವನಪ್ರಸವೆಯಂ ಪಾಪೋಗ್ರತಾಪೋಚ್ಚಯ
ಚ್ಛದೆಯಂ
ತುಂಗ ತರಂಗಪುಣ್ಯಪವಮಾನಸ್ಪರ್ಶೆಯಂ ದೇವಶೈ
ಲದ
ತಾೞೊಳ್ ಪರಿಗೊಂಡ ಗಂಧನದಿಯಂ ಕಂಡಂ ಮಹೀಮಂಡನಂ    ೪೭

ಆ ಮಹಾನದಿಯ ಮಹಿಮೆಯಂ ಪೇೞ್ವೊಡೆ ಚತುರ್ಯೋಜನೋತ್ಸೇಧದೊಳಂ ದ್ವಿಯೋಜನಾಯತದೊಳಂ ಏಕಯೋಜನವಿಸ್ತಾದೊಳಮಳಮಟ್ಟು ಮಳಯಜಕರ್ಪೂರ ರೇಣುವಂ ರಾಸಿಗೆಯ್ದು ಹಿಮಕರ್ದಮಮಂ ಮಿದಿದು ಮುದ್ದೆಮಾಡಿ ಗೋಡೆಯೇಱಿಸಿ ಬೆಳತಿಗೆಮಿಂಚಿನಿಂ ಮಿಂಚಿಟ್ಟು ಮುಕ್ತಿವಧುವರೊಳ್ ಮದುವೆನಿಲ್ವ ಜಿನವರರ್ಗೆ ಜಳಜಭವನೆ ಜಗಲಿಯಿಕ್ಕಿದಂತೆಯುಂ, ಪಾಲ್ಗಡಲೆ ಬಡಬಾನಳನಿಂ ಬೆಂದಾಱೆ ಬೆಟ್ಟಿತಾಗಿ ಬೆಟ್ಟಾದಂತೆಯುಂ, ಬೀೞಲ್ವಿೞ್ದು ಬೆಳ್ದಿಂಗಳ್ ಇಳೆಯೊಳ್ ಬೇರೂಱಿ ಬಳ್ವಳ ಬಳೆದಂತೆಯುಂ, ಬಗೆಗೊಳಿಸುವ ಬೆಳ್ಳಿವೆಟ್ಟದಂತಿರ್ದ ಪಳಿಕಿನ ಬೆಟ್ಟಮೆ ಬೞಿವೆಟ್ಟಮಾಗೆ ಬಳಸಿದ ಕಾಂಚನಪಂಚರತ್ನ ಕೂಟಕೋಟಿಗಳ ಕೋಂಟೆಯಾಗೆ ನೆಲಸಿ ನಿಂದನಿಂದಿತನಿರ್ಮಳಪ್ರಭಾಪಟಲಪಿಹಿತ ಕಕುಭ್ಕುಹರಂಗಳುಂ, ವದನಧವಳದೀಧಿತಿಪುವಾಹವಿಧು ವಿಧೂಕೃತದಿನಕೃದ್ಬಿಂಬಂಗಳುಂ, ಸಕಳಸುರಾಸುರ ಸಿದ್ಧ ಗಂಧರ್ವಖಚರಕಿನ್ನರ ಪನ್ನಗ ಪತಿಸಹಸ್ರಮಣಿಮಕುಟ ಕೋಟಿಕಾಂತಿ ವಿಮಳಜಳಸೇಕಸಂತತಾಂಕುರಿತಚರಣನಖಕಿರಣಂಗಳಪ್ಪ ಸಂಖ್ಯಾತ ಚಂದ್ರಕಾಂತ ಜಿನಬಿಂಬಕದಂಬ ಪಙ್ತಿಗಳ ದಕ್ಷಿಣ ಪ್ರದೇಶಮನಳಂಕರಿಸಿರ್ಪ ನಳಿನನಾಭಿಯೆಂಬ ನಳಿನಾಕರದ ಕೋಡಿಯೊಳ್ ಪುಟ್ಟಿ ಪುಟಂನೆಗೆದು ಪಟು ಪ್ರವಾಹನಿವಹದಿಂ ನಿಜಜಡತೆಯಂ ಜಡಿದು ಕಳೆವಂತೆಯುಂ ಪಾವನತೆಯಂ ಪೊಯ್ದು ಕೊಳ್ವಂತೆಯುಂ, ತೀರ್ಥಕರ ಪರಮದೇವರ ಪುಣ್ಯಪಾದಪಜ್ತಿಯೊಳ್ ಪಾಯ್ದು ಬಿೞ್ದವಱೊಳ್ ವಿದ್ಯಾಧರಿಯರರ್ಚಿಸೆ ಬಳೆದೊಟ್ಟಿ ಬೆಟ್ಟಾದ ವಿಮಳಮಳಯಜ ಕುಂಕುಮಕರ್ಪೂರ ಕುಸುಮಾಲೆಗಳನೆೞೆದು ಪಱಿದು ಪರಿಮಳದೊಳ್ ಪೊರೆದು ತದ್ಗಿರಿಶಿಖರದಿಂ ಧರಣಿಗಿೞಿತಂದುದಱಿಂ ತೀರ್ಥತಿಳಕೆಯುಂ ಗಂಧನದಿಯುಂ ಮಹೀಮಂದಾರಮಾಲೆಯುಮೆಂಬನ್ವರ್ಥಾಭಿ ನಾಮಂಗಳಂ ಪಡೆವಂತೆ ಪಡೆದು –

ಜಿನಬಿಂಬವ್ರಾತದಂಶುದ್ಯುತಿಯೊ ನಖನಿಕಾಯೇಂದುಬಿಂಬಪ್ರಭಾಸ್ಯಂ
ದನಮೋ
ಶ್ರೀಪಾದಪುಣ್ಯಶ್ರಮತತಿಯೊ ನದೀಭಾವಮಂ ಪೊರ್ದಿದತ್ತೆಂ
ಬಿನೆಗಂ
ನೈರ್ಮಲ್ಯದಿಂ ಶೀತಲತೆಯಿನಘವಿಚ್ಛೇದಸಾಮರ್ಥ್ಯದಿಂ ಪೆಂ
ಪಿನ
ಬಿಣ್ಪಂ ಪೊತ್ತ ಗಂಧಾಪಗೆಯ ಮಹಿಮೆಯಂ ಬಣ್ಣಿಸಲ್ ಬಲ್ಲನಾವಂ   ೪೮

ಮತ್ತಮಧುಮದೋನ್ಮತ್ತತೆಯಿನೊಲೆದು ನಲಿದಾಡುವ ಸುರಕಾಂತೆಯರ ಸೋರ್ಮುಡಿಗಳಿಂ ಸುರಿದ ಸುರಯಿಯ ಸಂಪಗೆಯ ಸಿಂಧುವಾರದ ಮಂದಾರದ ಪಾರಿಜಾತದ ಪೊರೆವಿಡುವ ಬಿಡುವೂಗಳ ಕೇಸರದ ಕಿಸುವುಡಿವೆರಸುಕೊಳ್ವ ಕೋೞ್ಗಂಪಿನಿಂ ಕದಡುಗೊಂಡು ಹರಿಚಂದನರಸಪ್ರವಾಹದಂತೆ ಪರಿವ ಪೂರಂಗಳೊಳಂ; ನೀರೊಳ್ ಸೋರ್ದ ನೀರಜದ ಬಂಡುನುಂಡು ಬೆಂಡುನೆಗೆದ ಮೀನ್ಗಳೆ ಮುಗುಳ್ದ ಕಣ್ಗಳಾಗೆ, ತುಱುಗಿ ನೆಗೆದ ತುಂತುರ್ವನಿಗಳೆ ಪುಳಕಂಗಳಾಗೆ, ಮಜ್ಜನಂಬುಗುವ ಬಿಂಬಾಧರೆಯರ ತೋರಮೊಲೆಗಳಂ ತೆರೆಗೆಳೆಂಬ ತೋಳ್ಗಳಿಂ ತಕ್ಕೈಸಿಕೊಳ್ವ ತಣ್ಮಡುಗಳೊಳಂ, ಅರ್ದಿಕೊಳ್ವ ಮದಕರಿಗಳ ಮದಕರ್ದಮದ ಕೂಟದಿಂ ಕರ್ಗಿಕೊಂಡು ನಿಜಮಳಿನತೆಯಂ ಕಳೆಯಲೆಂದು ಕಾಳಿಂದಿಯೆ ಬಂದವಗಾಹಂಗೆಯ್ದಂತಿರ್ದ ಮಹಾಪ್ರವಾಹಂಗಳೊಳಂ; ಕೇಸರಿಗಳಂ ಪಿಡಿದು ಪುಡುಕು ನೀರೊಳೞ್ದುವಂತೆ ಸುಕರಿಗಳುಡಿದೀಡಾಡಿದ ತೀರಭೂರುಹಂಗಳೊಳೆಳದಳಿರ್ಗಳ ನೆೞೆದು ಪರಿದು ತಿಱ್ಱನೆ ತಿರುಗಿಸುೞಿಸುೞಿದು ಸುೞಿಗೊಂಡರ್ದುವ ಸುೞಿಗಳೊಳಂ; ಕಡುಗಡಲ ನಡುವಣೊಡ್ಡುಂಗಲ್ಗಳಂ ಯಕ್ಷನಾರಿಯರ್ ನೀರಸೀಸೆ ನಸುಬೆಮರ್ತು ಪಳಂಚಿ ತೊಳಪ ತೋಳ್ವಳ್ಳಿಯಂ ಬಿಸವಲ್ಲಿಯೆಗೆತ್ತು ಕರ್ದುಂಕುವ ಕಳಹಂಸಂಗಳೊಳಂ; ಆ ಕರ್ದುಂಕುವಂ ನವನಖಕ್ಷತಮೆಗೆತ್ತು ರಕ್ತಕಟಾಕ್ಷದಿಂ ಕನಲ್ದೀಕ್ಷಿಸುವ ಯಕ್ಷ ವಲ್ಲಭರ ಮೆಯ್ಯಬಿಸುಪಿಂ ತೊಱೆಯಿೞಿದಂತೆ ನೀರ ನಡುವಣ ಸಿಕತಿಳತಳಂಗಳೊಳಂ ; ಮೂಡಿ ಮುೞ್ಕಾಡುವ ಕಿನ್ನರಕನ್ನೆಯರ ಕೆಂಪಡರ್ದ ಕಣ್ಗಳೊಡನೆ ಮಿಗೆ ಪೋಲದಿರ್ಪುದು ಪರಿಭವಮೆಂಬಂತಿರಾಕೆಗಳ ಕುಚಕುಂಕುಮಂಗಳೊಳ್ ಪೊರೆದ ಪನಿನೀರೊಳ್ ಪೊರಳ್ದು ಪೊರೆದರುಣತೆಯನಾಗುಮಾಡಿ ಬೆಡಂಗಿನಿಂ ಬಾೞ್ಮೊದಲಾದ ಬಾಳೆಮೀನ್ಗಳೊಳಂ; ಪರಸ್ಪರಪಾತದಿಂ ತೆರಳ್ದು ತಾಗುವ ತೆರೆಗಳ ಮೊತ್ತಕ್ಕೆ ತೆಕ್ಕೆಗೊಂಡಾರ್ವಂತಿರಿರ್ತ್ತಡಿವಿಡಿದು ಭೋರೆನಲುಲಿವ ಸಾರಸಕಳಹಂಸ ಕ್ರೌಂಚ ಚಕೋರ ಚಕ್ರವಾಕಾದಿವಿಷ್ಕಿರನಿಕರಂಗಳೊಳಂ; ತೆರೆವೊಯ್ಲಿನಿಂ ತೆರಳ್ದು ತಡಿಗೆ ಸಾರ್ದ ಫೇನಪಿಂಡಂಗಳಂ ಹಂಸೆಯ ಹಿಂಡುಗೆತ್ತು ಕೂಜಿಸಿ ಕೆಲಕ್ಕೆ ಸಾರ್ದು ತುಂಡದಿಂ ತುಡುಂಕುವ ಬಾಳಮರಾಳಂಗಳೊಳಂ; ತಲೆಮಟ್ಟು ತೊಲಗದೆಯ್ತಂದ ಕೞ್ತಲೆವೊಲೆಯನೊಲ್ದು ಮುಟ್ಟಿದ ಪೊಲೆಯಂ ತೊಳೆದು ಕಳೆಯಲೆಂದು ತಾರಾಗಣಂಗಳ್ ಶುಚಿಸ್ನಾನಕ್ಕೆ ಪೊಕ್ಕಂತೆ ಪುದಿದು ಕಮನೀಯಮಾದ ಕಮಲಕುಮುದ ಕುವಲಯ ಕಲ್ಹಾರಕುಳಂಗಳೊಳಂ; ರವಿಕಿರಣಕಾತರತೆಯಿಂ ಕೞ್ತಲೆ ನೀರನೋಡಿ ಪೊಕ್ಕಂತಿರಿರ್ದ ಕರ್ಮಡುಗಳೊಳ್ ಧುಡುಂಮಿಱಿದಾಡುವ ಬಿಜ್ಜೋದರಿಯರ ಮೊಲೆಗೊಡಂಗಳ ತೋಡುಗಳೊಳ್ ತೊಡೆದ ತಮ್ಮ ಮೆಯ್ಯ ಕುಂಕುಮಪಂಕಂ ಪೋಕುಮೆಂದು ನೀರಂ ಪುಗಲೊಲ್ಲದೆ ನೆರೆದು ತಡಿಯೊಳ್ ತೆರಂಬಿಡಿದು ಕುಳ್ಳಿರ್ಪಂತಿರ್ದ ಜಕ್ಕವಕ್ಕಿಯ ಪೊಣರ್ಗಳೊಳಂ ; ಮನೋಹರಮೆನಿಸಿ ಬೆಳ್ಪೀವಬೆಳಸುಂ ಗಂಪಿನ ಪೊಂಪುೞಿಯುಮಿಂಪಿನ ಕಣಿಯುಂ ತಂಪಿನ ತವರುಂ ನೈರ್ಮಲ್ಯದ ನಿರ್ವಾಣಸೀಮೆಯುಂ ಪರಭಾಗದ ಪರಿವರಿಯುಂ ಪಾಪಕ್ಷಯದ ರೂಪಪರಾವರ್ತಮುಮೆನಿಸಿರ್ದುದು. ಅಂತುಮಲ್ಲದೆಯುಂ –

ಅವಗಾಹಂಗೆಯ್ವ ಗಂಧದ್ವಿಪಚಯಮಚಲಾನೀಕಮಂ ನೀಳನೀರೇ
ಜವನಂ
ಶ್ರೀ ಕೃಷ್ಣನಂ ಚಂದಿರಮಣಿ ನಿಸೃತಾಂಭಃಪ್ಲವಂ ಪೆರ್ಚನೋಲಾ
ಡುವ
ದಿವ್ಯಸ್ತ್ರೀಸಮೂಹಂ ಸಿರಿಯ ನೆರವಿಯಂ ಪೋಲೆ ತಾನೊಂದು ದುಗ್ಧಾ
ರ್ಣವಮೆಂಬೀ
ಮಿಕ್ಕ ಮಾತಂ ಕಿಱಿದೆನಿಸುವುದಾ ಸಿಂಧುಶುಭ್ರಾಂಬಶೋಭಂ       ೪೯

ಆ ಪುಣ್ಯ ತೀರ್ಥಮಂ ಪರಾರ್ಥತೀರ್ಥತಾಪಸಂ ಚೆಲ್ವಿನ ಸೀಮೆಯಂ ಸೈಪಿನ ಬಯ್ಕೆಯಂ ಕಾಣ್ಬಂತೆ ಕಂಡು ಕೆಯ್ಗಳಂ ಮುಗಿದು –

ಸಮಸ್ತರಜಸಾಂ ದ್ವಿಷಂ ಸಕಲತಾಪತೃಷ್ಣಾಮುಷಂ
ಸಮೃದ್ಧಶುಭದರ್ಶನೀಂ
ಭುವನಪಾವನಸ್ಪರ್ಶನೀಂ
ಮುಮುಕ್ಷಗಣನಿರ್ಮಳಾಂ
ವಿಮಳಕೌಮುದೀಕೋಮಳಾಂ
ನಮಾಮಿ
ಸುರನಿಮ್ನ ಗಾಮುದಯದಾಯಿಕಾರ್ಹನ್ನಗಾಂ

ಎಂದಾ ಸುರನದಿಗೆ ಸ್ತುತಿಗೆಯ್ದುನ್ನತನಿಳಯನುತ್ತರಿಸಿಯುತ್ತರತೀರಂಬಿಡಿದು ಬರೆವರೆ –

ಹರಿತೋದ್ಯದ್ವರ್ಣದಿಂದಂ ತೊಲಗದ ತಿಮಿರವ್ರಾತಮೆಂಬಂತೆ ಬಾಳಾಂ
ಕುರಜಾಳಚ್ಛಾಯೆಯಿಂದಂ
ಕರಗದರುಣಸಂಧ್ಯಾಭ್ರಮೆಂಬಂತೆ ಪುಷ್ಪೋ
ತ್ಕರಶಾಖಾನೀಕದಿಂದಂ
ಪರೆಯದೆ ಪೊಸವೆಳ್ದಿಂಗಳೆಂಬಂತೆ ದೂರಾಂ
ತರದೊಳ್
ಗಂಧಾಕರೋದ್ಯಾನದ ಸಿರಿ ಸೆರಗಂ ಪಾರ್ಥಿವಂಗಿತ್ತುದಾಗಳ್ ೫೦