ಶ್ರೀವಿನಯವಿಳಾಸನ ಕೈ
ದಾವರೆಯುಂ
ಸಿರಿಯ ಸೈಪು ತನಗುಳ್ಳೊಡಮೇಂ
ದೈವದಿನಮುಖಮದಿಲ್ಲದೊ

ಡಾವಳ್ಗಂ
ಪಿಡಿವುದರಿದು ಪಂಕಜವದನೇ      ೧

ಕಿನ್ನರಖಚರಸುರಾಸುರ
ಪನ್ನಗಪೂಜಿತೆಯೆನಿಪ್ಪ
ಪದ್ಮಾವತಿಯಂ
ಸನ್ನಿಹಿತೆಯನಾರಾಧಿಸು

ನೀನ್ನೆರೆವೊಡೆ
ಮನದೊಳಿರ್ದ ಮಹಿಮಾರ್ಣವನೊಳ್  ೨

ನೀನುಮಾದೇವಿಯ ಪಸಾಯದಣುಗಿನ ಕೂಸಪ್ಪುದಱಿಂ ನಿನ್ನವಸ್ಥೆಯಂ ಕಂಡು ಕಡೆಗಣಿಸಲಱಿಯದಿನ್ನೆವರಂ ನಿನ್ನಿಯನಂ ತನ್ನ ಸಾಮರ್ಥ್ಯದಿಂದಿಲ್ಲಿಗೆ ಬರಿಸುವುದುಂ ದೊರೆಕೊಳ್ವುದೆಂದು ಪೇೞ್ದ ಸಖಿಯ ಮಾತು ಮನಃಪ್ರಿಯನಂತೆ ಮನಂಬುಗೆಪೋಗಿ ದೈವಮೆ ದಯಿತನಾದಂತೆ ಶಿಶಿರೋಪಚಾರಕ್ಕಂ ದೇವತಾಪೂಜೋಪಚಾರಕ್ಕಂ ಏಕಸ್ಪದಮಾದ ಕುಸುಮಪುರದ ಪೊಱವೊಱಲ ವಸಂತಕರೋದ್ಯಾನದ ನಡುವೆ ವಸಂತಲಕ್ಷ್ಮಿಯಿರ್ಪಂತೆ ನೆಲಸಿ ನಿಂದ ಪದ್ಮಾವತಿಯಂ ಲೀಲಾವತಿ ಬಲಂಗೊಂಡು ಪಿಡಿವೂವನೀಡಾಡಿ ನಿಜಪ್ರತಿಬಿಂಬದೊಳ್ ಮುಂಡಾಡುವಂತೆ ಮಣಿಪೀಠದೊಳ್ ಪೆಱೆನೊಸಲನಿಟ್ಟು ಪೊಡೆವಟ್ಟು ಕೆಯ್ಗಳಂ ಮುಗಿದು ಮುಂದೆನಿಂದು

ಸೋವಾಗಕೆಱೆಯಳಿಂದೀವರಲೋಚನೆ
ದೇವಸ್ತ್ರೀ
ಚಿಕುರಪರಿವೃತಪಾದೆ
ದ್ಮಾವತಿ
ವರದೆಯೆಮಗಕ್ಕೆ

ಎಂದು –

ಕತ್ತುರಿಯ ಸಾರವಣೆ ಬಿಡು
ಮತ್ತಿನ
ಕಡೆ ಕಂಪುವಿಡುವ ಕಪ್ಪುರವುಡಿಯಿಂ
ದೊತ್ತಿದ
ಲತೆ ಪೂವಟ್ಟೆಯಿ
ನೊತ್ತಿರಿಸಿದ
ಬಂಧವೆಸೆಯೆ ದೇವಿಯ ಗೃಹದೊಳ್      ೪

ಪೊಂಪುೞಿಯೆನೆ ಕರ್ಪೂರದ
ಕಂಪು
ಮೃಗೋದ್ಭವದ ಕಂಪು ಮಲಯರುಹದ
ಣ್ಗಂಪರಲ
ಕಂಪು ಘುಸೃಣದ
ಕಂಪು
ಕಳಾವತಿಯನಬಲೆಯಾರಾಧಿಸಿದಳ್  ೫

ಮಡದಿ ಮನವೊಸೆದು ಪೂವಿನ
ತುಡಿಗೆಗಳಿಂ
ಮುಗುಳ ನನೆಯ ತುಡಿಗೆಗಳಿಂ ಪೊಂ
ದೊಡಿಗೆಗಳಿಂ
ಪೊಸಮಾಣಿಕ
ದುಡಿಗೆಗಳಿಂ
ದಿವ್ಯಸತಿಯನೊಸೆದರ್ಚಿಸಿದಳ್

ಪೊದೆಯಿಸಿದ ದುಗುಲಮೆಲರಲೆ
ಪದಿನಿನಿಸಲ್ಲಾಡುವಂತೆ
ದಿವ್ಯಾಂಗದೊಳಿ
ಕ್ಕಿದ
ಧೂಪದ ಬೞಿಯೊಳ್ ಪೊಗೆ
ಪುದಿದಿರೆ
ಸತಿ ಶೀಲವತಿಯನಾರಾಧಿಸಿದಳ್   ೭

ಮಾಲೆಜೊಡರ್ ನವಚಂಪಕ
ಮಾಲೆಯವೊಲ್
ಮೊಲೆಯ ಮೇಲೆ ಮಾರ್ಪೊಳೆಯೆ ಕರಂ
ಲೀಲಾವತಿ
ಪತಿಯಿಪ್ಸಾ
ಲೋಲತೆಯಿಂದೊಸೆದು
ದೇವಿಯಂ ಪೂಜಿಸಿದಳ್      ೮

ಪೂವಿನ ಪಾಶಮಂ ವಿಪುಳಹೇಂಫಲಂಗಳನಿಂಬುವೆತ್ತ ಪೊಂ
ಗಾವಿನ
ವಜ್ರದಂಕುಶಮನಂಕಿತ ಕುಂಕುಮಪದ್ಮ ಪುಷ್ಪಮಂ
ತೀವಿ
ತಳಂಗಳೊಳ್ ಕರಚತುಷ್ಟಯಮೊಪ್ಪಮನಪ್ಪುಕೆಯ್ಯೆ
ದ್ಮಾವತಿಯಂ
ವಿಳಾಸವತಿ ಪೂಜಿಸಿದಳ್ ಪತಿಲಾಭಕಾಂಕ್ಷೆಯಿಂ

ಉಜ್ಜಳಿಸುವ ಮಳಯಜದಿಂ
ಮಜ್ಜನಮಂ
ಮಾಡಿ ಮುಡಿಗೆ ಪೊಸಮಲ್ಲಿಗೆಯಂ
ಗೊಜ್ಜಿಗೆಯುಮನೇಱಿಸಿ
ಸಲೆ
ವಿಜ್ಜೋದರಿ
ದಿವ್ಯಸತಿಯನಾರಾಧಿಸಿದಳ್     ೧೦

ಕಳೆಯಂ ಪತ್ತಿಸಿ ಜೀವೆಯಂ ನಿಱಿಸಿ ಮೆಲ್ಪಿಂ ತಂತಿಯಂ ತೀಡಿ ಕಾ
ಕಳಿಯೊಳ್
ವೀಣೆಯನಾಗುಮಾಡಿ ಮಿಡಿಯುತ್ತಾರಯ್ವ ನುಣ್ಗಾವರ
ಕ್ಕಳಿ
ಪೂವಂ ಗಿಳಿ ಪಣ್ಣನೇರೞಿಸೆ ಲಸಚ್ಚೂತಾಂಕುರಾಸ್ವಾದಮಂ
ಕಳಕಂಠಂ
ಬಿಡೆ ಬಾಲೆಯಾಲಪಿಸಿದಳ್ ತ್ರಿಸ್ಥಾನಸಂಶುದ್ಧಿಯಿಂ  ೧೧

ಸುತಿಯಂ ಕಾಕಳಿ ತಾನಮಂ ಲಯವಿತಾನವ್ಯಕ್ತಿಯಂ ಧಾತುಗಳ್
ಜತಿಯಂ
ಸ್ಥಾನಕ ವೀಣತಂತಿಯ ಸರಂ ಶಾರೀರದಿಂಪಿಂ ಕರಂ
ಶ್ರುತಿಯಂ
ಸೋಲಿಸೆ ಬಾಲೆ ಬಾಜಿಸುತೆ ಜಾಣಿಂ ಬೀಣೆಯಂ ಗಾನದೇ
ವತೆವೋಲ್
ಕೇಳಿಸಿದಳ್ ಕಳಾಕುಶಲೆಯಂ ಪದ್ಮಾವತೀದೇವಿಯಂ       ೧೨

ಅಂತು ಪಾಡುವಾಗಳ್ –

ದೇವಿಯ ವದನಾಂಬುಜದೊಳ್
ತೀವಿದ
ಕಪ್ಪುರಕೆ ಪಾಯ್ದು ಪಾಯ್ದಳಿನಿವಹಂ
ಗಾವರಿಸೆ
ರಾಗದಿಂ
ದ್ಮಾವತಿಯುಂ
ಕೂಡೆ ಪಾಡುವಂದದಿನೆಸೆದಳ್         ೧೩

ಜಲಜದ ಕನ್ನವುರಂ ತೆಂ
ಬೆಲರಲೆಪದಿನಲುಗುವಂದಮೇನೆಸೆದುದೊ
ಕಾ
ಕಲಿಗೆ
ಕರಮೊಸೆದು ದೇವತೆ
ತಲೆಯಂ
ತೂಗಿದವೊಲಾಗಳಾ ಕಳರವೆಯಾ ೧೪

ಆಗಳಿಂಚರದೊಳ್ ಬೆರಸಿದ ತನ್ನ ಕಸರನೆ ಕಿಱುಮಿಂಚಿನ ಬಳ್ಳಿಯ ಮೊೞಗುವೆತ್ತು ಮೂರ್ಛೆವೋಗಿ ಕಮಳಿನಿಯಂ ಮಲಂಗುವ ಮದಮುಗ್ಧಮದಾಳಿಯಂತಿರೆ ಆಲಪಿಸುವ ತನ್ನಿಂಚರಮುಮಂ ವಿಪಂಚಿಯ ನುಣ್ಚರಮುಮಂ ಮನಮಂ ತಾಗುವ ಮನಸಿಜನ ಪಂಚಶರಮೆಂದೇ ಕಡುನೊಂದು ಕೆಲದೊಳಿರ್ದ ಕಳಾವತಿಯ ಮೇಲೆ ಮಱೆದೊಱಗಿದ ಲೀಲಾವತೀದೇವಿಯ ದರ್ಶನದೊಳ್ ದೇವಿಯಿಂತೆಂದಳ್ –

ಸುಂದರಿಯೆಳೆಗಂ ಮೂರ್ಛೆಗೆ
ಸಂದಿರಲುತ್ಪಲಿನಿಗಮೃತಕಿರಣಂ
ಬರ್ಪಂ
ತಿಂದಿರುಳೊಳ್
ನಿನ್ನಿನಿಯಂ
ಬಂದಪನಿದನಿಂತೆ
ನಂಬು ಕಮಲದಳಾಕ್ಷೀ    ೧೫

ಮೆಯ್ದೆಗೆಗೆ ಮಱುಕಮಱಿಕೆಯ
ನೆಯ್ದುಗೆ
ಬಗೆ ನಿನ್ನ ಕನ್ನೆಮಾಡದೊಳೊಪ್ಪಂ
ಗೆಯ್ದಪರಾಂಗಣದೊಳ್
ಕೈ
ಗೆಯ್ದಿರು
ಕೈಗಯ್ದಿದಪ್ಪನಿಂದು ನಿಜೇಶಂ       ೧೬

ಎಂಬ ದೇವಿಯ ನುಡಿಯೆಂಬ ತಣ್ಣೆಲರ ತೀಟದೊಳೆೞ್ಚತ್ತು ತುಂಬ ಕೆಣಕಿದ ಕಂಪಿನಂತೆ ಭೋಂಕನೆೞ್ದು ನೀರೊಳ್ ಮುೞುಗಿ ನೆಗೆದಂತೆ ಬೆಬ್ಬಳಿಸಿ ನೋಡಿ ಕವಿಯಂತೆ ಪರಿಭಾವಿಸಿ ಕಲಂಕಿದ ತೊಱೆಯಂ ಕಂಡಂಬಿಗನಂತೆ ದೇವಿಯ ವರಮನಱಿದು ನವಗರ್ಭಿಣಿಯಂತೆ ಬಯಕೆಗೂಡಿ ಬೇಸಗೆದೊಱೆಯಂತೆ ತಣ್ಣೀರ ಪರಿಯುಡುಗೆ ಕಲಿಯಂ ಶರಣ್ಬೊಕ್ಕ ಭೀರುವಿನಂತಿರೆರ್ದೆಯೞ್ಗಿ ಮೞ್ಗಿ ತೀವ್ರ ಜ್ವರಮಂ ತಂಪುಗೆಯ್ದಂತೆ ಸಂತಾಪಮೊಳಸಾರೆ ಸೊಗಸಿನ ಪದ್ಮದಂತೆ ಮೊಗಮಲರೆ ಅಮರ್ದಿನೊಳೞ್ದಿದ ನೆಯ್ದಲಂತೆ ನಯನಕಾಂತಿಯಿಂ ನಯವೇಱಿ ಮಗುೞ್ಚಿದ ದೀಪ ಕಳಿಕೆಯಂತೆ ಕೊರ್ಬಿ ಕಾರ್ಗಾಲದ ನವಿಲಂತೆ ನಲಿದು ಸುಗ್ಗಿಯ ಕೋಗಿಲೆಯಂತೆ ರಾಗಿಸಿ ಪಗಲ ಮೊಗಂಗಂಡ ಜಕ್ಕವಕ್ಕಿಯಂತೆ ಸಂತಾಪದಂತಮನೆಯ್ದಿ ಸಿಂಗರಂಗೆಯ್ದಳಂತಿರಾನಂದಂಬಡೆದೆನೆಂದು ಮೇಳಕಾರ್ತಿಯಂತಿರಾಳಿಗುಸಿರ್ದು ಮೀಸಲ್ಗಳೆವರಂತೆ ದೇವತೆಗೆ ಪೊಡೆಮಟ್ಟು ಪಾರಿವದಂತೆ ನೆಲೆಮಾಡಕೆ ಪೋಗಿ ಕಾಲೂರ ಸೂಳೆಯಂತೆ ರಜನಿಯ ಬರಮಂ ಪಾರುತ್ತುಮಿರ್ಪಿನಮಸ್ತಗಿರಿಶಿಖರಮೆಂಬ ಸಂಕೇತ ಸದನಕ್ಕೆ –

ಬಿಸುಪಿಂದಂ ಸೋಂಕಿ ಬಾೞ್ನೆಯ್ದಿಲನೊಣಗಿಸುತುಂ ಮೆಯ್ಯನೀಡಾಡಿ ಮೆಯ್ಗಂ
ದಿಸುತುಂ
ತಾರಾಪ್ರಸೂನಂಗಳನೆಳವಿ ನವೀನಪ್ರವಾಳಂಗಳಂ ಬಾ
ಡಿಸುತುಂ
ಕೈಗುತ್ತಿಕೊಂಡುರ್ಕಿಸುತುಮಖಿಳ ತೋಯಂಗಳಂ ತದ್ವಿಯೋಗಾ
ವಸಿತಂ
ಬರ್ಪಂತೆ ಬಂದಾಱಿದನಪಗತಸಂಧ್ಯಾಪ್ರಸಂಗಂಪತಂಗಂ

ಪೂಡುವ ಕುದುರೆ ಬೆಸಂಗೊಂ
ಡೋಡುವ
ತೇರ್ಗೊಂದೆ ಗಾಲಿಯೆಸಪಂ ಪೆೞವಂ
ಕೇಡಿನ್ನಲಸಿದೊಡಕ್ಕುಮೆ

ನೋಡಿರೆ
ರವಿ ಕೆಡೆದನಸ್ತಗಿರಿಮಸ್ತಕದೊಳ್   ೧೭

ಸೋಂಕೆ ಕರಗುತ್ತೆ ಸಂಜೆ
ರಂ
ಕಡುಪಿನೊಳಪ್ಪೆ ನೆಗೆದ ರೋಮಾಂಚಂಗಳ್
ನೂಂಕಿ
ಕಳೆದಂತೆ ಕೆಡೆದಂ
ಪಂಕಜಸಖನಾಗಳಪರಜಳನಿಧಿಜಳದೊಳ್
   ೧೮

ಪರಿಣತದಿನಶಿರದಂತಿರೆ
ಖರಕಿರಣಂ
ಕಾಲಚಕ್ರಹತಿಯಿಂ ಕೆಡೆಯಲ್
ಸುರಿದು
ಪರೆದರುಣಜಲದಂ
ತಿರೆ
ಪಸರಿಸುತಿರ್ದುದಪರಸಂಧ್ಯಾರಾಗಂ    ೧೯

ಅಂತುಮಲ್ಲದೆ –

ಅಂಬರಮಣಿ ಮುೞುಗಿದನಿಂ
ತುಂಬುವಿನಂ
ಹಿಮಕರಾಂಶಗುಳ್ ಪತ್ತುವುವೆಂ
ದಂಬರಹರಿ
ಪೊದೆಯಲ್ ಪೀ
ತಾಂಬರಮಂ
ತೆಗೆದನೆನಿಸೆ ಸಂಧ್ಯಾ ರಾಗಂ ೨೦

ಅಲ್ಲಿಂ ಬೞಿಯಂ –

ಕಿಸುಸಂಜೆ ಕಿಚ್ಚುವೋಲ್ ಪೊ
ತ್ತೆ
ಸುರನಿಕೇತನಮನಂದು ನಂದಿಸಲಿಂದ್ರಂ
ಬೆಸಸಿದ
ನೀಲಾಂಭೋಧರ
ವಿಸರಮಿದೆನೆ
ಮೂಡ ಮೂಡುತಿರ್ದುದು ತಿಮಿರಂ      ೨೧

ಬಯಲೊಳ್ ತಕ್ಕಂಗೆ ಪೇೞ್ತಕ್ಕುದೆ ಕುಲವಧುವೊಳ್ ಕೂಡಲೆಂದುಚ್ಚವೀಚೀ
ಶಯನೀಯಶ್ರೀಯನಂದಾ
ವರುಣಶರಣಂ ರತ್ನದೀಪಪ್ರಭಾಸಂ
ಚಯಮಂ
ಕೈಸನ್ನೆಗೆಯ್ಯುತ್ತಿನನೊಳವುಗೆ ಬೆಂಬೆನ್ನನುದ್ಭೂತರಾಗೋ
ದಯೆ
ಸಂಧ್ಯಾದೇವಿಯುಂ ಪೊಕ್ಕವೊಲಡಗಿದಳೇನೆಂಬೆನಾಶ್ಚರ್ಯದುರ್ಬಂ         ೨೨

ಪೊಕ್ಕ ಪುಗಿಲೊಳೆ ಪೊನಲ್ವರಿ
ದೊಕ್ಕೆಱೆಯದ
ನೆತ್ತರಂತೆ ಸಂಜೆ ಕರಂ ಕೈ
ಮಿಕ್ಕೊದೆನೆ
ರಾತ್ರಿರಾಕ್ಷಸಿ
ನಕ್ಕಿದಳೆನೆ
ಮಾಯಮಾದುದಂತಾ ಕ್ಷಣದೊಳ್         ೨೩

ಓಸರಿಸೆ ಸಂಜೆ ಜವನಿಕೆ
ಯೋಸರಿಸಿದ
ತೆಱದೆ ರಾತ್ರಿನರ್ತಕಿ ಪುಗುತುಂ
ಸೂಸಿದ
ಪುಷ್ಪಾಂಜಳಿಯೆನೆ
ಭಾಸಿಸಿದುವು
ಗಗನರಂಗದೊಳ್ ತಾರಗೆಗಳ್          ೨೪

ಇನಿಸಿನಿಸೆಳಗೞ್ತಲೆಯುಮ
ದಿನಿಸಿನಿಸಿೞಿವೆಳಗುಮೊಡನೆ
ಕಲಸಿರೆ ಕದಡಿ
ತ್ತೆನಸುಂ
ಪ್ರದೋಷಮಹಿಷನಿ
ನೆನಿಸಿದುದು
ದಿಗಂತಸೇತುಭುವನತಟಾಕಂ  ೨೫

ಅಂಗಂಗಳ್ ನಸುದೆಱೆಯೆ ದಿ
ಗಂಗನೆಯರ
ಮೇಲೆ ಕವಿದತೆಳ್ಗೞ್ತಲೆ ಚೆ
ಲ್ವಿಂಗುಟ್ಟ
ಕರಿಯ ಕಾಗಿನ
ಭಂಗಿಯನನುಕಿರಿಸುತಿರ್ದುದಂತಾ
ಕ್ಷಣದೊಳ್         ೨೬

ದಿವಿಜೇಂದ್ರೇಭಪ್ರಭೇದಂ ದಹನಬಹಳಧೂಮಂ ಯಮೋಚ್ಚೈರ್ಲುಲಾಯ
ಚ್ಛವಿಕಂ
ಕ್ರವ್ಯಾದಕಾಯದ್ಯುತಿ ವರುಣಗ್ರಹಸ್ಥಾಸ್ನು ಕೃಷ್ಣಪ್ರಕಾಶಂ
ವನೋದ್ಯತ್ಕೃಷ್ಣಸಾರಪ್ರಭೆ ಧನದಪುರೀನೀಳಶಾಳಾಂಶುಜಾಳಂ
ಭವಕಂಠಚ್ಛಾಯೆ
ಪರ್ಬಿತ್ತೆನೆ ದೆಸೆದೆಸೆಯಂ ಮರ್ಬು ಪರ್ಬಿತ್ತಗುರ್ಬಿಂ      ೨೭

ಭಗಣಲತಾಂತಸಂತತಿಗೆ ಪಾಯ್ವ ವನೇಜನವನಂ
ಮುಗಿಯೆ
ಮರಲ್ದು ಬಿಟ್ಟು ಬಿಸುಟೆಯ್ದೆ ಮದಶ್ರಮಮಂ
ದಿಗಿಭದ
ಕರ್ಣತಾಳಕಗಿದೆೞ್ದಳಿಜಾಳದ ವೋಲ್
ಗಗನದೊಳುರ್ವಿಯೊಳ್
ನೆಱೆಯೆ ಪರ್ಬಿದುದಂದು ತಮಂ       ೨೮

ದೆಸೆಯಿಂದು ಭೂವಲಯಮಿದಾ
ಗಸಮಿದು
ತಾನೆಂಬ ಭೇದಮಿಲ್ಲೆನೆ ತಮಮು
ಬ್ಬಿಸಿದುದು
ಜಗಮಂ ಕೃಷ್ಣಂ
ಬಿಸಿಱೊಳಗಿಟ್ಟಂತೆ
ರಜನಿಚರಭಯದಿಂದಂ   ೨೯

ಮತ್ತಮಿನಿಸಾನುಂ ಬೇಗದಿಂ –

ಉಡುಪತಿ ಪತಿ ಪಿಂತನೆ ಬಂ
ದಡಸಿ
ಮುಸುಂಕಿರ್ದ ತಿಮಿರನೀಳಾಂಬರಮಂ
ಪಿಡಿಯೆ
ಭಯಮುತ್ತವೋಲ್ ಬೆ
ಳ್ಪಡರ್ದುದು
ವದನಕ್ಕೆ ಪೂರ್ವದಿಗ್ಬಂಧಕಿಯಾ ೩೦

ಊದಿದ ಸುಟ್ಟುರೆಯುದಯತ
ಟೋದಿತವನದಿಂದೆ
ಸುತ್ತಿ ಸುೞಿದೆತ್ತಿದ ಪೊಂ
ಗೇದಗೆಯ
ದೂಳಿಯೆನೆ ಚೆ
ಲ್ವಾದುದು
ನೆಗೆದಮೃತಕರನ ಕರನಿಕರಂಗಳ್          ೩೧

ಅಲ್ಲಿಂಬೞಿಯಂ –

ಶಿರದೊಳ್ ತಾರಾಕಪಾಲಂ ಪೊಳೆಯೆ ಕರಜಟಾಜೂಟಮಿಂಬಾಗೆ ಜೊನ್ನಂ
ಸುರಸಿಂಧುಸ್ರೋತಮಂ
ಪೋಲ್ತಿರೆ ತೊಲಗೆ ತಮೋರಾಕ್ಷಸಂ ಚರ್ಮಚಿತ್ರಾಂ
ಬರಖಂಡಂ
ಕೂಡೆ ಕಾಮಂ ಕರಮುರಿವಿನೆಗಂ ಮಂಡಳಂಗೊಂಡು ಪರ್ಬು
ತ್ತಿರೆ
ಸಂಧ್ಯಾರಾಗನೇತ್ರಾನಲನುದಯಿಸಿದಂ ಚಂದ್ರಚಂದ್ರಾರ್ಧಚೂಡಂ   ೩೨

ಆಗಳ್ ಚತುರಚತುರಿಕಾಪ್ರಶ್ನೋತ್ತರಂಗಳ್ ನೆಗೞ್ದುವದೆಂತೆನೆ –

ಯುವತೀನೇತ್ರೋತ್ಪಲಂ ಮುಂತಲರೆ ಕುವಲಯಂ ಪಿಂತೆ ಚೇತಶ್ಚಕೋರೀ
ನಿವಹಂ
ಮುಂತಾ ಚಕೋರಪ್ರತತಿ ನಲಿಯೆ ಪಿಂತುರ್ಬೆ ಭೂಲೋಕರಾಗಾ
ರ್ಣವ
ಮೆಲ್ಲಂ ಮುಂತೆ ಪಿಂತರ್ಣವಮೊಗೆವುದಿದೇಂ ರೋಹಿಣೀಮಾನಮುಕ್ತ
ಪ್ರವಿಲಗ್ನಾಪಾಂಗರಕ್ತದ್ಯುತಿಲಲಿತಲಸಚ್ಚಂದ್ರಿಕಾ
ಚಂದ್ರಬಿಂಬಂ  ೩೩

ಪಿರಿದುಂ ಲೀಲಾವತೀದೇವಿಯ ನಿಜವದನಜ್ಯೋತ್ಸ್ನೆಯಂ ಕೊಳ್ಳೆನಾನೆಂ
ದುರಿಯಂ
ತೞ್ಕೈಸಿ ದಿವ್ಯಂಬಿಡಿವವೊಲುದಯಾವಸ್ಥೆಯೊಳ್ ಸಂಜೆಗೆಂಪಾ
ವರಿಸಿತ್ತಲ್ಲಿಂ
ಬೞಿಕ್ಕೇೞಡಿ ನಡೆದದನೀಡಾಡಿ ನಿಂದಂತೆ ಬೆಳ್ಪು
ಬ್ಬರಿಸಿತ್ತಲ್ಲಿಂ
ಬೞಿಕ್ಕೇನೆಸೆದುದೊ ಶಶಿಯೊಳ್ ಸೋಲ್ತು ಬೆಂದಂತೆ ಚಿಹ್ನಂ ೩೪

ಇದು ನಾನಾಕೈರವೌಘಸ್ಮಿತದಿನೊದವಿತೋ ಕ್ಷೀರವಾರಾಶಿಪೂರಂ
ಪುದಿಯಲ್
ಪೆರ್ಚಿತ್ತೊ ಚಿತ್ತೋತ್ಸವಕರತರುಣೀಲೋಚನಜ್ಯೋತ್ಸ್ನೆಯಿಂ
ಕೊರ್ಬಿದುದೋ
ಪೇೞೆಂಬವೋಲೊರ್ಮೊದಲೆ ಕವಿದ ಚಂದ್ರಾತಪಸ್ರೋತದೊಳ್ ತೀ
ವಿದುದಾದಂ
ತೇಂಕಿದಂತಿರ್ದುದು ಸಕಲದಿಶಾವ್ಯೋಮಭೂಮಿಪ್ರತಾನಂ ೩೫

ಅಂತು ಪಸರಿಸಿದ ಪೊಸವೆಳ್ದಿಂಗಳ್ಗೆ ಪಸದನಮೆನಿಸಿ ಪಸದನಂಗೆಯ್ದು –

ನಸುಬಿರಿದಚ್ಚ ಮಲ್ಲಿಗೆಯ ಸೋರ್ಮುಡಿಯಿಂ ಸಿರಿಗಂದದಣ್ಪಿನಿಂ
ಮಿಸುಗುವ
ಮುತ್ತಿನಾಭರಣದಿಂ ಸುಲಿಪಲ್ಗಳ ಸೂಸುವೆಳ್ಪಿನಿಂ
ದೆಸೆವ
ದುಕೂಲದೊಂದುದೆಡೆಯಿನಂದಮೃತಾಂಶುಮರೀಚಿಯಿಂದೆ ನಿ
ರ್ಮಿಸಿದವೊಲೊಪ್ಪಿದಳ್
ಧವಳಲೋಚನೆ ವಾಸವದತ್ತೆ ದೇಸೆಯಿಂ        ೩೬

ಮಸೆದೆಳಮಿಂಚೊ ರಂಜಿಸಿದ ರತ್ನಶಲಾಕೆಯೊ ಕಾಮದೇವನ
ರ್ಚಿಸಿದಲರಂಬೊ
ಪೂತ ಲತೆಯೋ ನನೆಯೇಱಿ ಮಡಲ್ತ ಮಾವೊ ನು
ಣ್ಣಿ
ಸಿದಮೃತಾಂಶುಲೇಖೆಯೊ ವಿಲೋಚನಮಿಟ್ಟ ಸಜೀವಚಿತ್ರಮೋ
ಪೊಸನನೆದೊಟ್ಟ
ಪದ್ಮಿನಿಯೊ ಕೈಗೆಯೆ ಕಣ್ಗೆಸೆದಿರ್ದ ಕಾಂತೆಯೋ         ೩೭

ಅಂತು ಕೊರ್ಬೆಂಬ ಕಿಟ್ಟಮುದುರೆ ಪಸುರ್ವಣ್ಣವೆಂಬ ಕಾಳಿಕೆ ಕೞಲೆ ವಿರಹಾಗ್ನಿಯಿಂ ಕಾಯ್ಸಿ ಕುಸುಮಕಾಂಡದಿಂ ಪೊಯ್ದು ನೀರ್ದಳಿಪದಿಂ ನೀರೂಡಿ ತಳಿರಿಂ ತೊಡೆದು ಬೆಳ್ದಿಂಗಳಿಂ ಪುಳಿಗರ್ಚಿ ಕುಸುಮಶಯನ ಶಾಣದೊಳ್ ಪೊಸವೆಳ್ಪು ಪಸರಿಸಿ ಕುಸುಮಶರನೆ ಮಿಸುಗೆ ಮಸೆದಸಿಯಂತಿರೆಸೆವಸಿಯ ಮೆಯ್ಗೆ ಮೆಯ್ಸಿರಿಯಾದ ಬೆಳ್ವಸನದಿಂ ತುಹಿನಕರಕಾಂತಿ ಕವಿದ ಕುಮುದಿನಿಯಂತೆ ಕಣ್ಗೆವಂದು ಕೆಳದಿಯರ್‌ವೆರಸು ದೇವಿಯ ವರಮಂ ತಿಳಿಪಲ್ ಬಾಂದಳವೇಱುವಂತೆ ಮಾಡಮನೇಱಿ ಮಿಂಚಿಂ ಕಡೆದಂತೆ ಕಣ್ ಕೋರಸೆಯುಂ ಕಿರ್ಚಂ ಪುಗುವಂತೆ ಮೆಯ್ಯಗುರ್ಬಿಸೆಯುಂ ಕಾದಲನೊಳ್ ಕೂಡುವಾಸೆಯಿಂ ಮನಂಬಲಿದು ಬೆಳ್ದಿಂಗಳೊಳ್ ಪೊಕ್ಕು ಪರಾಂಗಣದೊಳ್ ಪೊಚ್ಚಪೊಸವಡಿಯಿಂ ಪಚ್ಚವಡಿಸಿದ ಹಂಸತೂಳತಳ್ಪಮಂ ಸಿರಿ ಸಿತಸರಸಿಜದ ಸಜ್ಜೆಗೇಱುವಂತೇಱಿದ ಬೇಗದಿಂ ಕೆಳದಿಯರಂ ಕೆಯ್ತದಿಂದಮೆ ಕಳಿಪಿ –

ದೂತೀಪ್ರೇಷಣಕೃತಸಂ
ಕೇತಾದಿಗಳೊಂದುಮಿಲ್ಲ
ನಲ್ಲನ ಬರವಿಂ
ಗಾ
ತರುಣಿ ಪಾರ್ದಳಾಪ್ತರ
ಮಾತುಗಳಂ
ನಂಬಿದವರ್ಗೆ ಸಂದೆಯಮುಂಟೇ        ೩೮

ಅಂತು ಪಾರುತ್ತುಮಿರ್ದು ಚಕೋರಿಗಳಂ ಚೆಲ್ಲಮಾಡಿಸುವಂತೆ ನವಚಂದ್ರಿಕೆಯ ನೋಲಗಿಸುವಂತೆ ಮೆಯ್ಯನಿಕ್ಕಿದಾರಮಣಿಯಮೃತಕರಬಿಂಬಮನವಲೋಕಿಸುತ್ತು ಮಿನಿಯನಂ ಮನದೊಳ್ ಭಾವಿಸುತ್ತುಮಿರೆಯಿರೆ –

ಮೃಗಮದದೊಳ್ ಪೊರಳ್ದು ಪೊಸಸೌಸವದೊದ್ದೆಯೊೞ್ದಿ ಬಿೞ್ದು
ಲ್ಲಿಗೆಯ
ಪರಾಗದೊಳ್ ಪೊರೆದು ಕಪ್ಪುರದೊಳ್ ಸುೞಿಗೊಳ್ವ ಧೂಪದೊ
ಳ್ಪೊಗೆಗಳನೆತ್ತಿ
ಪೂವಲಿಗೆ ಪಾಯ್ವ ಮದಾಳಿಯ ಬಾಯ ಕಂಪನಾ
ವಗಮೆಡೆ
ಸೂಱೆಗೊಂಡೆಸಗಿತಿಮ್ಮಗೆ ಕಮ್ಮಗೆ ಮಂದಮಾರುತಂ ೩೯

ಸ್ತನಚೀನಾಂಶುಕಭಾರಮಂ ಸೆಳೆಯುತುಂ ರೋಮಾಂಚಮಂ ಮೆಯ್ಗಳೊಳ್
ಮೊನೆಸುತ್ತುಂ
ಕುರುಳಂ ಚಲಂದೆಗೆಯುತುಂ ಶೃಂಗಾರಸಾರಸ್ಮಿತಾ
ನನಪಂಕೇಜದ
ಕಂಪನೀೞ್ದುಕೊಳುತುಂ ಮಂದಾನಿಳಂ ಸೋಂಕೆ
ನ್ನಿನಿಯಂ
ಬಂದಮರ್ದಪ್ಪಿದಂತೆ ಸುಖದಿಂ ಕಣ್ಗೆಯ್ದಳಿರ್ಪನ್ನೆಗಂ  ೪೦

ಅಂತು ಮಯೂಖನಿರ್ಝರಿಗಿರಿಯೊಳ್ ಹಿಮಕರಕಿರಣಂಗಳ ಕೋೞಿಂ ಕಾಯ್ದ ರವಿಕಾಂತದೊಳ್ಗಿರ್ಚಿನಂತೆ –

ಅತ್ತುರ್ವೀಪಾಳಕೆಂಗುರ್ವಿದ ಮದನಮಹಾತಾಪಮಂ ಕಾಣುತುಂ ಬೆ
ಳ್ಕುತ್ತಂಭೋಜಾಕರಕ್ಕಂಬುಜದಲರ್ಗಳನಾಯಲ್ಕೆ
ಪೋದಂ ಪ್ರಧಾನೋ
ಚ್ಚಿತ್ತಂ
ತನ್ನಂತ್ರಿಪುತ್ರಂ ಪೆಱಗಪರಪಯೋರಾಶಿ ಫೋಷಪ್ರಭಂ ಪೊ
ಣ್ಮಿತ್ತಾಗಳ್
ರತ್ನಕೂಟಾದ್ರಿಯೊಳಜಿತಜಿನ ಸ್ಥಾನಭೇರೀನಿನಾದಂ          ೪೧

ಅದಂ ಕೇಳ್ದು ಕಾರಮೊೞಗಂ ಕೇಳ್ದ ನವಿಲಂತೆಯಾನಂದಿಸಿ ನಂದೀಶ್ವರಪರ್ವ ಪೂಜಾನಿರ್ವೃತ್ತನಮೆಂದಱಿದು ಪೂಜಾವಲೋಕನೋತ್ಸುಕೆಯರಾಗಿ ರಾಗದಿನಾ ಚಂದ್ರಲೇಖೆಯುಂ ವಿದ್ಯುಲ್ಲೇಖೆಯುಂ ಪೋಗಲುದ್ಯೋಗಂಗೆಯ್ದು ಪೂಗಣೆಯ ಪುಣ್ಬೇನೆಯಿಂ ಪೊರೞ್ದು ಮೂರ್ಛೆವೋದ ಮಹೀಪತಿಯಂ ಕಂಡು ಏಕಾಕಿಯನೇಕೀಡಾಡಿ ಪೋಪಮೆಂದು ಪರ್ಣಲಘವಿದ್ಯೆಯಿಂದೆತ್ತಿಕೊಳಿಸಿ –

ಭರದಿಂದೆ ಪಾಱಿ ಪೋಗು
ತ್ತರವಿಂದಾನನೆಯರಾ
ನಿತಂಬಿನಿಯಿರ್ದಾ
ಸಿರಿಮಂಚದೊಳವನಿಪನಂ

ಕರತಳದಿಂ
ವಿದ್ಯೆಯಿಂದಮಿಡಾಡಿಸಿದರ್      ೪೨

ಅಂತು ಬಾಳಮರಾಳಿ ಪವಡಿಸಿದ ಪುಳಿನತಲದೊಳ್ ರಾಜಹಂಸನನೀಡಾಡಿ ಪೋಪಂತಿರಾಕೆ ಪವಡಿಸಿದೆ ಸಜ್ಜೆಯೊಳರಸನನಾ ವಿದ್ಯೆಯಿಂ ಮೆಲ್ಲನೀಡಾಡಿ ಪೋಪುದು ಮಾಸಪ್ಪುಳ್ಗಂದೆ ಭೋಂಕನೆೞ್ದು –

ವನಿತೆ ಮುರಿದೇೞೆ ಕುಚಚಂ
ದನಶಿತಳಸೇಕದಿಂದಮೆೞ್ಚಿತ್ತನೊ

ಣ್ಣ
ನೆ ತೀಡುವೆಲರಿನೆೞ್ಚ
ತ್ತನೊ
ಪೇೞೆನೆ ನೃಪತಿ ಮೂರ್ಛೆಯಿಂದೆೞ್ಚತ್ತಂ         ೪೩

ಅಂತೊಡನೆೞ್ಚತ್ತು ಬೆರ್ಚಿ ಭೋಂಕನೆ ನಿಡುಮಿಡುಕನೆ ಕಂಡು ತಳವೆಳಗಾಗಿ ತಲ್ಲಣಿಸಿ ತನುವೆಲ್ಲಮಂ ಪರ್ವುವಂತಿರೆರ್ದೆ ಪವ್ವನೆ ಪಾಱೆ ತೆಗೆಯಲುಂ ಪಡೆಯದೆ ಮೆಯ್ಮೆಯ್ಯನೊಱಸೆ ಬೆರಸಿ ಕುಳ್ಳಿರ್ದು ಮರುಳ್‌ಮಸಗಿದಂತೆ –

ಓರೊರ್ವರ ಕೊರಲಿಂ ಮಣಿ
ಹಾರಮುಮಂ
ತೆಗೆದು ಮುಗುಳ ಮಾಲಯುಮಂ ಚೇ
ತೋರಾಗರಸದೆ
ಮೆಯ್ಮಱೆ
ದೋರೊರ್ವರ
ಕೊರಲೊಳಿಕ್ಕಿದರ್ ಸಂಭ್ರಮದಿಂ       ೪೪

ಪದೆದಾಲಿಂಗಿಸುವಂತೆ ಮೋಹರಸದಿಂಪಂ ಸೂಸುವಂತೊಂದನೊಂ
ದಿದಿರ್ಗೊಳ್ವಂತೆ
ಕಡಂಗಿ ತಮ್ಮೊಳೆನಸುಂ ಗಂಟಿಕ್ಕುವಂತಾಗಲು
ಣ್ಮಿದ
ಲಜ್ಜಾಂಬುವನೀಂಟುವಂತೆ ಹೃದಯಂ ಕೋೞ್ವೋಯ್ತು ಕೈಕೊಳ್ವುದೆಂ
ದೊದವಿಂ
ಕೈಗುಡುವಂತೆ ಕಣ್ಗಳೊಲವಿಂ ಮೇಲ್ವಾಯ್ದುವೋರೋರ್ವರೊಳ್         ೪೫

ಆಗಳಗ್ಗಲಿಸಿದ ವಿಸ್ಮಯರಸತರಂಗದೊಳಂತರಂಗಂ ಮುೞುಂಗೆ ಪೊದೆಯಲ್ ಪಡೆಯದಂತೆ ಕಾಯಂ ಕಂಪಮಾಗೆ ಸೋಂಕಿನ ಸೊರ್ಕಿದಂತೆ ತುಂಬುಗಣ್ಪಾಯೆ, ಕಾಮಜ್ವರಂ ಬಿಡುವಂತೆ ಬಿಂದುವಿಡೆ, ಪರಸ್ಪರ ಸ್ಪರ್ಶನ ಲೋಲುಪ್ತಿಯಿಂ ಮನಮೆ ತನುವಾದುದನಱಿಪುವಂತೆ ನಯನಾಯಸ್ಕಾಂತಸಂದರ್ಶನದಿಂ ಮುನ್ನಮೊಳಗೆ ಸಿಲ್ಕಿದ ನನೆಯ ಪುಣಂಬುಗಳ ತಪ್ಪು ತೆಱೆದು ಪೊಱಮಡುವಂತೆ ಮೆಯ್ನವಿರ್ ಮೊಗಸೆ, ಕನಸಿನ ಸೋಲಮಂ ಕೊನರಿಸುವ ಕಣ್ಸೋಲಮುಂ, ಎಮೆಯಿಕ್ಕಲ್ ಮಱೆಯಿಸುವಂತರೋರ್ವರನೊಡಲೊಳಡಸಿ ಕೋಳಲ್ ಕಡಂಗಿಸುವ ಕಡ್ಡವಣೆಯುಂ, ಮನಮನನುವಿಸಲಾಱದಂತೆಯುಸಿರ್ ಮಿಟ್ಟೆಗೊಳಿಸುವ ಸವಿಯುಂ, ಮೇಲ್ವಾಯಲ್ ಮಸಗಿಸುವಸವಸಮುಮೆನುತ್ತೆ ಸೋಲ್ತುಂ ತಣಿಯದೆ ತಲ್ಲಳಿಸಿ ತಳ್ಳಂಕುಗುಟ್ಟು ವಳುರ್ಕೆಯುಮಿರ್ದ ರೂಪನಿರ್ದಂತಿರೆರ್ದೆಯಂ ಕುದಿಯಿಸಲ್ ಕುಡುಂಗುವ ಕಡುಪಂ ನುಂಗಿ ನೀರ್ಗುಡಿಯಿಸಲ್ ಪಡೆವ ಬಸನದ ಪಸಿವುಂ ಬಿಗಿದು ಪುಗಲನುವಿಸುವ ಲವಲವಿಕೆಯುಂ, ಕೂಡಿ ಕರಗಿಸಲ್ ಕಾಯ್ವರ್ ಕಾಯ್ಪುಂ ಬೆರಸಿ ಬೆಚ್ಚಂತಿರಲ್ ಬಯಸುವ ಬಗೆಯುಂ, ಪತ್ತಿ ಪಣಿದಣಿಯಿಸುವಳಿಪುಂ ಅಳವಿಗಳಿಯೆ ; ಸರ್ವಾಗದೊಳಂ ಸುಸಿಲ ಸವಿಯಂ ತವಿಸದ ತವಕಮನನುಭವಿಸಿ ನಸುಸೋಂಕಿನೊಳಂ ಮೆಯ್ಮೆಯ್ಯೊಳ್ ಪತ್ತಿದಂತೆ ಮನಂ ಮನದೊಳ್ ಸಿಲ್ಕಿಂದತೆ ಕಣ್ ಕಣ್ಣೊಳ್ ತೊಡರ್ದಂತೆ ಮದನ ಮಂತ್ರವಾದಿ ಗಾತ್ರಸ್ತಂಭಂಗೆಯ್ದಂತಿರೆ ಮಿಡುಕದೆ ಮನಮಂ ಸೂಱೆಗೊಂಡುದರ್ಕೆ ಕಣ್ಗಾಳೆಗಮಂ ಕಾದುವಂತೆಯುಮಿರ್ಬರು ಮೋರೊರ್ವರಿಂಪನೆ ಸವಿನೋೞ್ಪಂತೆಯುಂ ಸ್ವಪ್ನಾನುಭೂತ ರೂಪಾತಿಶಯದಿಂದ ಮತ್ಯತಿಶಯಮಾದ ರೂಪಾಕೃತಿಕೌತುಕ ಪ್ರತಿಪತ್ತಿಯುಮಂ ಪ್ರೀತಿಯುಮಂ ಪೊಸ ಪೊಸತು ಮಾಡೆ ತಮ್ಮುತಿರ್ಬರಂಗಲತೆಗಳೊಳ್ ತೊಡರ್ದ ಬಗೆಯಂ ತೆಗೆಯಲಾಱದೆ ನೀಡುಂ ಭಾವಿಸಿ ನೋಡುವಾಗಳ್ –

ಕುಸುಮಾಸ್ತ್ರೋದಯದಿಂಬೆಳರ್ತಿನಿಯನಂಗಾಚ್ಛಾಯೆ ತಳ್ತಂತೆ ಮೆ
ಯ್ಬಿಸುಪಿಂ
ಬೆಂದು ಕರಂಗಿದಂತಿರೆರ್ದೆಯಂ ನಟ್ಟುರ್ಚೆ ರಕ್ತಾಂಬುವಂ
ಬಸಿವಂತುಬ್ಬಸಮಾದ
ಕಣ್ಬೊಣರ ಬೆಳ್ಪುಂ ಕರ್ಪುಮೊಳ್ಗೆಂಪುಮೇಂ
ಪೊಸತಾಗಿರ್ದುವೊ
ನೋೞ್ಪ ಕಾಯ್ಪುಡುಗದಿರ್ದೆಂಭೋಜಪತ್ರಾಕ್ಷಿಯಾ   ೪೬

ಅಂತುಮಲ್ಲದೆ –

ಅಲವರಿಸಿ ನೋಡಿದಳ್ ಕೋ
ಮಲೆ
ಕಣ್ಣೊಳ್ ಮೂಱು ವರ್ಣಮೆಸೆದಿರೆ ಕರ್ನೆ
ಯ್ದಿಲ
ಕಿಸುನೆಯ್ದಿಲ ಬೆಳ್ನೆ
ಯ್ದಿಲ
ಪೂವಿಂ ಮೋದುವಂತೆ ಚಂದ್ರೋದಯಮಂ     ೪೭

ಪೊಸಮುತ್ತಂ ತೊಟ್ಟವೋಲ್ ಪೊಣ್ಮುವ ಬೆಮರ್ವನಿಯಿಂ ತಳ್ತ ರೋಮಾಂಚದುರ್ವಿಂ
ದಸಮಸ್ನೇಹಾಕುಳಾಲೋದಿನೆಸೆವ
ಲಸದ್ಗಂಧನಿಶ್ವಾಸದಿಂ ಕಂ
ಪಿಸುತುಂ
ಕಣ್ಗೊಪ್ಪಿದಳ್ ಕುಟ್ಮಳ ದಳಕಳಿಕಾಪುಷ್ಪಚಾರಂ ಕರಂ ಶೋ
ಭಿಸುವನ್ನಂ
ತೆಂಬೆಲರ್ ತೂಗುವ ಪೊಸಲತೆವೋಲ್ ಕಾಂತೆ ಕಣ್ಸೋಲದಿಂದಂ     ೪೮

ಮಿಗೆ ಜಾಣಿಂ ಪದ್ಮಜಂ ಮಾಡಯುಮತನುವೆ ಕೈವೀಸಿದಂ ಮತ್ತೆನಲ್ ಕಾಂ
ತೆಗೆ
ಸೋಲಂ ಶೋಭೆಯಂ ನೂರ್ಮಡಿಸಿದುದುದಿತಸ್ವೇದಸೋತ್ಕರ್ಷಲಾವ
ಣ್ಯಗುಣಂ
ಬೇಱೊಂದು ಚೆಲ್ವಂ ತನುನವಪುಳಕೋದ್ಭೇದಿ ಬೇಱೊಂದು ಚೆಲ್ವಂ
ನಗೆಗಣ್
ಬೇಱೊಂದು ಚೆಲ್ವಂ ಪ್ರಹಸಿತವದನಂ ಬೀಱೆ ಬೇಱೊಂದು ಚೆಲ್ವಂ         ೪೯

ಆಗಳಗುಳದೆ ನಿದಾನಂಗಂಡಂತೆಯುಂ, ಓದದೆ ಚದುರಾದಂತೆಯುಂ, ದವಾಗ್ನಿಯೊಳ್ ಬೇವಂಗಕಾಲವರ್ಷಮಾದಂತೆಯುಂ, ವಿಷಮವಿಷವಿಷೋದಿತಂಗಾಕಸ್ಮಿಕ ಸುಧಾಸೇಕಂ ಸಮನಿಸಿದಂತೆಯುಂ, ಆನಂದಕಂದಳಿತಹೃದಯನುಂ ವಿಸ್ಮಯ ವಿಸ್ಮೃತಶರೀರನುಮಾಗಿ –

ಬೀಸುವವೊಲ್ ಬೆಳ್ನೆಯ್ದಿಲ
ಬಾಸಿಗದಿಂ
ಮಳಯಜಾಂಬುವಂ ಸೂಸುವವೋಲ್
ಬೇಸತ್ತಿನಿಯಳನರಸಂ

ಬಾಸಣಿಸಿದನಲಸಲಸಿತಲೋಚನರುಚಿಯಿಂ
  ೫೦