ಅದಱೊಳ್ ಕೋಮಳಕಲ್ಪವೃಕ್ಷದಗೆಯಂ ತಂದಿಟ್ಟು ಪೀಯೂಷಮಂ
ಮೊದಲೊಳ್
ಪೊಯ್ದನುರಾಗದಿಂ ಪೊರೆಯುತುಂ ಜೈನಾರ್ಚನೋದ್ಯೋಗದಿಂ
ಮುದಮಂ
ಪೆರ್ಚಿಸುತುಂ ಲತಾಭವನದೊಳ್ ನೀರೇಜಷಂಡಗಳೊಳ್
ಪದೆಪಿಂದಿರ್ಪುದು
ನಾಕಮಂ ಮಱೆದು ನಿಚ್ಚಂ ದೇವದೇವೀಜನಂ ೫೧

ಆ ವನಮನೆಯ್ದಿವಂದು ವಂದಿಜನಚಿಂತಾಮಣಿಯುಂ ಸಚಿವಶಿರೋಮಣಿಯುಂ ಮುಂದೆ ಮಂದೈಸಿದ ಮರದುಱುಗಲ ಕೞ್ತಲೆಯಂ ತಲೆಯೆತ್ತಲೀಯದಂತೆ ತೊಳಗುವ ನಿಜಮರೀಚಿಮಂಜರಿಗಳಿಂ ಪೊಸವಿಸಿಲ ಪಸರಮಂ ಪಸುರ್ವಣ್ಣಮಾಗಿ ಕುಡಿಮಿಂಚಂ ಕಡಿದು ಮಾಡಿದ ಕಡುರಯ್ಯಮಾದ ಮೊದಲ್ಗಳೊಳಂ ಕಿಕ್ಕಿಱಿಗಿಱಿದು ಕಿಱುಗೊಂಬಂ ಬಿಡುವಂತೆ ಕೆಂದಳಿರಂ ಕಱೆವ ಕೊಂಬುಗಳೊಳಂ, ದೆಸೆಗಳಂ ಪಸಲೆಗವಿಸುವ ಪೊಸವಿಸಿಲಂ ಪಸುರ್ವಿಸಿಲೆ ಗೆಯ್ವ ಪಸುರ್ವರಲ ಬಣ್ಣ ಮನಸಕಳಿವ ಪಸುರೆಲೆಗಳೊಳಂ, ಕುಂಕುಮರಸದೊಳ್ ತೊಯ್ದಂತೆ ಸಿಂಧುರರಜದೊಳಲೆವಂತಿರೆ ಅಲತೆಗೆಯೊಳೂಡಿದಂತಿರೆ ತರುಣಿಯರ ತೊಳಗುವಧರದ ಕೆಂಪಿನೊಳರ್ದಿದಂತೆ ಪವಳದ ಬಣ್ಣಮಂ ಬಸಿಯಿಟ್ಟಂತೆ ಮಿಸುಜೊಂಪಮನೆಡಕಿಕ್ಕಿದಂತೆ ದಂಡೆಯಂ ಪವನಿಗೆಯಂ ಮಾಡಿದಂತೆ ಕೞಿವೋಗಿ ಕೞಲದೆ ಬೞಲ್ವ ಪೂಗೊಂಚಲ್ಗಳೊಳಂ, ಮಿಸುಪಪೊಸದಳಿರ್ಗಳೊಳ, ತಳಿರ್ವೆರಲ ತರತರಕೆಯ ತುಂಬಿಯ ತಳರ್ವಕ್ಕಿಯ ಕುಸುಂಕುರುಗೊಂಡೆಸೞ ಬಾೞ್ವೇಲಿಯ ಕೇಸರದ ಕಕ್ಕುಂದರಿಯ ಕಾಪಿನ ಕಂಪಿನ ಕೋಶಮಿರ್ಪಂತೆ ಪೊಸವಾಸಿಗಮನೆತ್ತಿದಂತೆಯುಮಿರ್ಪ ಗೊಂಚಲ್ಗಳೊಳಂ, ಎಲರಿನುದಿರ್ದಲರ್ವುಡಿಯ ಜಗಲಿಯ ಮೇಲೆ ವಿದ್ಯಾಧರಿಯರೞ್ತಿಯಿಂ ಪೂಜಿಸುವ ಪಂಚರತ್ನದ ಪಂಚಪರಮೇಷ್ಠಿಗಳ ಪ್ರತಿಮೆಗಳ್ಗೆ ಫಲಾವಳಿಯಂ ಕಟ್ಟಿದಂತೆ ತುಱುಗಲ್ಗೊಂಡು ತೂಗಿ ತೊನೆವ ಕಾಯ್ಗೊನೆಗಳಿಂ ಕಣ್ಗೊಳಿಸುವ ಕಲ್ಪತರುಗಳಂ ನೋಡುತ್ತುಂ ಹರ್ಷಹಸಿತ ವದನಾರವಿಂದರುಂ ವಿಸ್ಮಯವಸ್ಫಾರಿತವಿಲೋಚನರು ಮಾಗಿ ಮೆಚ್ಚಿ ಬಿಚ್ಚಳಿಸುತ್ತುಮ ಬರ್ಪಾಗಳ್ –

ಎಲ್ಲಿಲ್ಲದ ಪೊಸಕಳಿಕೆಗ
ಳೆಲ್ಲಿಲ್ಲದ
ತಳಿರ ತುಱುಗಲೆಲ್ಲಿಲ್ಲದ ಪೂ
ವೆಲ್ಲಿಲ್ಲದ
ಕಾಯುಂ
ಣ್ಣಲ್ಲಿಯೆ
ನೆಲಸಿದುವೊಲೆಸೆದುದಂಬಿಕೆಯ ಬನಂ        ೫೨

ಆ ವನದೊಳಭಿನವಸುರತರುಗಳ ತನಿವಣ್ಣ ತನಿರಸದ ಕವಿವ ಕಾೞ್ಪುರಮನುಂಡು ಬಳೆದೆಳವಸುರ್ ತೊಲಗದೆಲೆಗಳಿಂ ಕೆಂಪು ಕಿಡಿದಳಿರ್ಗಳಿಂ ಕಂಪಿಡಿದ ಪೂಗಳಿಂ ತೀವಿ ತಾಮುಂ ಕಲ್ಪಭೂಜಂಗಳಾದ ಬಾಳಚೂತಂಗಳುಮಂ, ಮಾಲೆಗೊಂಡು ಗುಂಡಿಗೆಗಟ್ಟಿದಂತೆ ತುಂಬಿಗಳ್ ತುಂಬಿ ಮುಸುಱೆ ತೆಂಬೆಲರೆತ್ತಿ ತೆಱಂದಿಱಿವ ಪೂಗೊಂಬುಗಳೆಂಬುಯ್ಯಲ್ಗಳಿಂ ಗಲ್ಗಲಿಸಿ ಸೋರ್ದೆಲೆದೋಣಿದಡಿವಿಡಿದು ಪರಿವ ಪುಷ್ಪರಸದ ಬಱಿವೊನಲೊಳೆ ಬೆಳೆದು ಸರ್ವಾಂಗ ಸುರಬಿಗಳಾಗಿ ಪರಿಮಳಪಿಂಡದ ಮರಂಗಳಿರ್ಪಂತಿರ್ದ ಪಾರಿಜಾತ ತರುಷಂಡಂಗಳುಮಂ, ಒಱಸಿಕೊಳ್ವ ಮದಕರಿಯ ಕಟತಟದಿನೆರ್ದ ಮದಕರ್ದಮದಿಂ ಕದಡುಗೊಂಡು ಕತ್ತುರಿಯ ಕೊಳದಂತೆ ಕೊಳ್ವ ರಸದ ಮುಸಕದಿಂ ಕತ್ತುರಿಮರಂಗಳಂತೆ ಚಂದಮಾದ ಚಂದನತರುಗಳುಮಂ, ಕುಂಕುಮದ ಗಿಡುಗಳಡಿಯೊಳೊಟ್ಟಿ ಬೆಟ್ಟದ ಕೇಸರದ ನುಣ್ಪುಡಿಯಂ ಪದವಡಿಸುವಂ ತಿರೆಡೆವಿಡದೆ ಕೊಂಬುಕೊಂಬನೊಱಸಿ ರಸದ ಸರಿವೞೆಯಂ ಸುರಿವ ಘನಸಾರಭೂರುಹಂಗಳುಮಂ, ಸುರತರುಗಳೊಡನೆ ಗಡಣದಿಂ ಸಗ್ಗಕ್ಕೆ ಪಾಱಿಪೋಗಲ್ ಶ್ರಮಂಗೆಯ್ವಂತೆ ಸುತ್ತಿ ಸುೞಿದೆತ್ತುವ ಸುೞಿಗಾಳಿಗಳನುಗಿದು ನೆಗೆವೆಲೆಗಳಿಂ ಪೇಱಿದ ಸುಗಂಧದಳದಿಂ ಪೊಳಪಾದ ಪಾದಪಂಗಳುಮಂ, ಕರ್ಪೂರಮರಗಳಿನುಬ್ಬರಿಸಿ ಸುರಿದು ಕುಪ್ಪಿಸಿದ ಕಪ್ಪುರವರಲ ರಾಸಿಗಳಂ ಚೌಕಂಗೆಯ್ದು ಜಗಲಿಯನಿಕ್ಕಿ ಗಂಧರ್ವ ವಿವಾಹಮಿರ್ಪ ಗಂಧರ್ವಗಣಿಕೆಯರ್ಗೆ ಪೂವೆರಸಿದ ಪಸುರ್ವಂದರಾದ ಜಾದಿಯ ಜೊಂಪಂಗಳುಮಂ, ಆಳವಾಳದೊಳಮರತರುಣಿಯರದಕೆ ಪೊಯ್ವಮರ್ದನುಂಡು ನಂಜು ನಾೞ್ಕಡಿವೋಗೆ ನಿಡುಗೊಂಬುಗಳನಡರ್ದು ಸುತ್ತಿ ಸುಯ್ವ ಸರ್ಪಸಂಕುಳ ನಿಶ್ವಾಸಸುಧಾಸೇಕದಿಂ ಶುಷ್ಕಶಾಖೆಗಳ್ ಚಿಗುರನುಗುೞೆ ಮಿಳಿರ್ದು ಮಿಳ್ಳಿಸುವ ಮಳಯಜಕುಜಂಗಳುಮಂ, ಸುರಪಿಕಂಗಳೊಡನಾಡಿ ಸುರಕುಜದ ಕಳಿಕೆಗಳಂ ಕರ್ಚಿ ತನಿ ರಸದ ರಸಾಯನಮನುಂಡು ಅಜರಾಮರತೆಯನಪ್ಪುಕೆಯ್ದು ಪಂಚಮದಿನಿಂಚರಂಗೆಯ್ವ ಜವ್ವನಗೋಗಿಲೆಗಳುಮಂ, ಕಲ್ಪವೃಕ್ಷದ ಕನರ್ಗಾಯಂ ಕರ್ದುಂಕಿ ತೊದಳಿಸದೆ ಸುರಗಣಿಕೆಯರ ಸರಮನೆತ್ತಿ ದೇವಭಾಷೆಗಳಂ ಗೞಗೞನೆ ಗಳಪುವರಗಿಳಿಗಳುಮಂ, ಮಂದಾರಮಂದಮಧುವನೀಂಟಿ ಗಂಧರ್ವಗಣಿಕೆಯರೊಡನೆ ಗಾಂಧಾರಗ್ರಾಮಮನಾಳಾಪಿಸಿಯೆ ಮುಪ್ಪುದಪ್ಪಿದ ವಿಕರದುಂಬಿಗಳುಮಂ, ಅಮರಗಣಿಕೆಯರ್ಗೋಲಗಸಾಲೆಯಾದ ಮಲ್ಲಿಕಾಮಂಡಪಂಗಳುಮಂ, ವಿದ್ಯಾಧರೀವಿಳಾಸಿನಿಯರ್ಗೆ ಕೇಳೀಭವನಮಾದ ಮಾಧವೀಮಂದಿರಂಗಳುಮಂ ನೋಡುತ್ತುಂ ವಿಸ್ಮಯವಿರಚಿತರವರಿರ್ಬರುಮೊರ್ಬರೊರ್ಬರೊಳ್ ನುಡಿವುದನುೞೆದು ನಡೆಯೆ; ತದುದ್ಯಾನದ ನಟ್ಟನಡುವೆ –

ಚರಿತಮನೋದುವ ದೇವಿಯ
ಬಿರುದಂ
ಪಾಡುವ ವಿನೇಯರಲ್ಲದರಂ
ಪ್ಪರಿಸಿ
ಪುಗಲ್ ಪುಗಲೆನುತಿ
ರ್ಪರಗಿಳಿಗಳಿನಳಿಯ
ಬಳಗದಿಂ ಪಿಕರವದಿಂ  ೫೩

ಮಿಗೆ ನಯವೇಱಿ ಬಂದ ಪಲವಂದದ ಕೆಂದಳಿರಿಂ ಕವಲ್ತ ಕೊಂ
ಬುಗಳ
ಪೊದಳ್ಕೆಯಿಂ ಬೆರಕೆವೂಗಳಿನಿಟ್ಟೆಡೆಯಾದ ಬಣ್ಣವ
ಣ್ಣಿಗೆಯ
ಫಲಂಗಳಿಂದೆ ಸೆಳೆಗೊಂಬಿನ ಬಲ್ಪೊಱೆವೊತ್ತು ಮೆಲ್ಲಮೆ
ಲ್ಲಗೆ
ಸುೞಿಗೊಳ್ವ ಮೆಲ್ಲೆಲರಿನೊಪ್ಪುವ ಕೋಮಳಕಲ್ಪವೃಕ್ಷದಾ    ೫೪

ಮೊದಲಿದು ಬೇಡಿದ ವರಗಳ
ಮೊದಲಿದು
ಬಯಸಿದ ಫಲಂಗಳನುನ್ನತಿಕೆಯ ಬಾ
ೞ್ಮೊದಲಿದು
ಬೆಡಂಗುಮೂಡಿದ
ಮೊದಲಿದು
ತಾಂ ಮೊದಲೊಳನೆಸಿ ಮಿಸುಗುವ ಮೊದಲೊಳ್   ೫೫

ನೆಱೆದ ಮಗನೇಱಿ ಸಿಂಗದ
ಮಱಿಯಂ
ಕರಮೊಪ್ಪಿ ತೋಱಲವನಪ್ಪಿಂ ನೇ
ರ್ಗಿಱಿಯ
ಮಗನಂ ಪನೆನಗೆಗಳ
ಕಿಱುಮೊಳೆಯೆನೆ
ನಗುತೆ ಸೋಂಕಿ ಸೋಗಿಲೊಳೆಸೆಯಲ್       ೫೬

ತೊಳಗುವ ವಜ್ರದೋಲೆ ಪೊಸಮುತ್ತಿನ ಲಂಬಣಮಾಯ್ದ ಮಾಣಿಕಂ
ಗಳ
ಮಿಸುಪೈಸರಂ ಪಸಿಯ ನೇತ್ರದ ಬಲ್ನಿಱಿ ತೋರ್ಪ ಮಿಂಚುವ
ಲ್ಗಳ
ಬೆಳಗುಳ್ಳ ಬಾಯ್ದೆಱೆ ಬೞಲ್ಮುಡಿ ಸಾಂದಿನ ಬೊಟ್ಟು ಚೆಲ್ವಿನ
ಗ್ಗಳಿಕೆಯನೀಯೆ
ಕಣ್ಗೆಸೆವ ಯಕ್ಷಿಯನಬ್ಜದಳಾಯತಾಕ್ಷಿಯಂ      ೫೭

ಅಂತು ಕವಿತಾವಿಲಾಸಂ ಕಂಡು ಬಲಂಗೊಂಡು ಮುಂದೆ ನಿಂದು ಮುಕುಳಿತ ಕರಕಮಲನಾಗಿ –

ಬಿಂಬೋಷ್ಠಿ ಮೇ ಮಹಾಕಾವ್ಯಂ ಕಂಬುಕಂಠಿ ತವಾಜ್ಞಯಾ
ಚುಂಬಿತಂ
ದೇಹಿ ಸೌಭಾಗ್ಯಮಂಬಿಕೇ ಜಗದಂಬಿಕೇ

ಎಂದಂಬಿಕೆಯಂ ಬೇಡಿ ವರಂಬಡೆದು ಕವಿರಾಜಮಲ್ಲನಲ್ಲಿಂ ತಳರ್ದು ಪೋತರೆ –

ತಪದೆಸಕದಿಂದೆ ಪಿಂಛಾ
ತಪತ್ರಮಂಬರದೊಳಿರ್ದುದೆನೆ
ಯತಿಪತಿಯಾ
ತಪದೊಳೆ
ಕೆಯ್ಯಿಕ್ಕಿರೆ ಸೋ
ಗೆ
ಪಱಪಿದುದು ಪಾಱಿ ಪಾಱಿ ಪೀಲಿಯ ಪೊದಱಂ      ೫೮

ಮರಮೊದಲೊಳ್ ನಿಂದ ಯತೀ
ಶ್ವರನಂ
ಪೂಗೊಂಚಲಿಂದೆ ಪೂಜಿಸಿ ಪಲವುಂ
ಸರಸಫಲದಿಂದಮರ್ಚಿಸಿ

ಚರಣಂಗಳನೊತ್ತುತರ್ಪ
ಕಪಿಚಪಲಂಗಳ್    ೫೯

ಜಿನಮುನಿಸಮುದಾಯಂಗಳ್
ವನಚರ್ಯಾಮಾರ್ಗದಿಂದೆ
ಬರೆ ಬಟ್ಟೆಗಳೊಳ್
ಘನಮಾಗಿ
ಪರೆದ ಪೂಗಳ
ನನುನಯದಿಂದುಡುಗಿ
ಕಳೆಯುತಿರ್ದುದು ಪವನಂ     ೬೦

ಪ್ರತಿಮಾಯೋಗದೊಳೊಪ್ಪುವ
ಯತಿಪತಿಗಳ
ಕುರುಳ ಬಂಬಲೊಳ್ ಚಳಶಾಖಾ
ತತಿ
ತೂಗಿ ತೊಡರೆ ಬಿಡಿಸಿದು
ದತಿಸಂಭ್ರಮದಿಂದಮೆಯ್ದಿ
ಮರ್ಕಟನಿಕರಂ   ೬೧

ತಾಱಿ ತಪದಿಂದೆ ಮೆಯ್ಮಲ
ವೇಱಿದ
ತಪಸಿಯನೆ ಕೊರಡುಗೆತ್ತವಯವದಿಂ
ಮಾಱುದ್ದಿಕೊಳ್ವ
ಮಱಿಯಂ
ಮೋಱೆಯಿನೇಂ
ಹರಿದು ಹರಿಣಿ ನಡೆನೂಂಕಿದುದೋ   ೬೨

ಅವೆಲ್ಲಮನಾನಂದದಿಂ ನಿಂದು ನೋಡುತುಂ ನಾಡಾಡಿಯಲ್ಲದ ತೀರ್ಥ ಸಾಮರ್ಥ್ಯಮಂ ಸಮರ್ಥಿಸುತುಂ ಮಹಾಮುನಿಗಳ ಮಹಿಮೆಯಂ ಮನದೆಗೊಳುತ್ತುಂ ಮನುನೀತಿ ಮಾರ್ಗಂ ಸೊಪ್ಪಾದ ಮಾರ್ಗಂಬಿಡಿದು ನಡೆಯೆ ನಡೆಯೆ –

ಜಳದಿಂದಂ ನಾಂದು ಕಾಶ್ಮೀರದ ಪರಿಮಳದೊಳ್ ತೊಯ್ದು ಶಾಲ್ಯಕ್ಷ ತೌಘಂ
ಗಳ
ಕಂಪಂ ಕೊಂಡು ಮಂದಾರದ ಪೊಸಸೊವಡಂ ಪೊತ್ತು ದಿವ್ಯಾನ್ನಗಂಧಂ
ಗಳ
ನಾಂತುದ್ದೀಪಿಕಾಸೌರಭದೊಳೊದವಿ ಧೂಪೋದ್ಧೃತಾಮೋದಿ ಪುಣ್ಯಾ
ನಿಳನಂದೆಯ್ತಂದುದಾಗಳ್
ಸುರಸಫಲಸುಧಾವಾಸಿತಂ ವಾಸತೇಯಂ   ೬೩

ಅದನಱಿದಾ ಪುಣ್ಯಪವನಸ್ಪರ್ಶದಿಂ ಪಿರಿದು ಮಾಡಿದ ಪರಮಭಕ್ತಿಯಿಂ ಭವ್ಯ ನಿರ್ವಾಣಂ ಭಾಳಭೂಷಿತಕರಕಮಳಮುಕುಳಿತನಾಗಿ ಮಕರಂದಂಬೆರಸು ಬರೆ ; ದೇವಗಿರಿಯೆ ಪಶ್ಚಿಮಪ್ರಾಕಾರಮಾಗೆ, ಗಂಧಾಕರೋದ್ಯಾನಮೆ ಬಾೞ್ವೇಲಿಯಾಗೆ, ಗಂಧನದಿಯೆ ಪರಿಖಾವಳಯಮಾಗೆ –

ಚರಿತ ಪುರಾಣಮನೋದು
ತ್ತಿರೆ
ಪಂಡಿತ ಕೀರನಖಿಳ ಶುಕಪಿಕ ನಿಕರಂ
ಪರಿವೇಷ್ಟಿಸಿಕೊಂಡಿರ್ದ್ದುದು

ಭರದಿಂ
ಕೇಳುತ್ತೆ ಚೂತಶಾಕಾಂತರದೊಳ್   ೬೪

ಪತಿತ ರವಿರುಚಿಗೆ ಫಣಿಫಣ
ತತಿಯಂ
ಕವಿದೆತ್ತಿ ಬಣ್ಣಮಂ ಬನದ ಪಸು
ರ್ಪತಿ
ಸೈಸೆಪಾರ್ಶ್ವದೇವ
ಪ್ರತಿಮೆಯವೊಲ್ನಿಂದ
ಯತಿಗೆ ಪತಿ ಪೊಡವಟ್ಟಂ        ೬೫

ಕನಕಪ್ರಾಕಾರರೋಚಿರ್ಜಳದ ಪರಪಿನೊಳ್ ಚಂದ್ರಸೂರ್ಯೋಪಲಸ್ತಂ
ಭನಮಾಸ್ತಂಭರುಙ್ನೀರದ
ತಿಳಿಗಡಲೊಳ್ ರತ್ನಕೂಟಪ್ರಭಾಜೀ
ವನಿಸಿಂಧುಸ್ರೋತದೊಳ್
ತೇಂಕಿಸುತುಮೆಳೆಯನತ್ತರ್ದುತುಂ ವ್ಯೋಮಮಂದಿ
ಗ್ವನಿತಾನೀಕಕ್ಕೆ
ನೀರಾಟಮನೊದವಿಸುತುಂ ಚೆಲ್ವನಾಯ್ತಿಂದ್ರ ಕೂಟಂ    ೬೬

ಮಂಗಳಮಾಗಳುಂ ನೆಲಸಿದಾ ಜಿನಗೇಹದ ಪಂಚರತ್ನ ಕೂ
ಟಂಗಳ
ತಳ್ತ ಮೇಚಕಮರೀಚಿಲತಾಳಿಯ ಪರ್ವಿನಿಂ ನಭೋ
ರಂಗಮದೊಪ್ಪಿ
ತೋಱಿದುದು ಪದ್ಮಜನಾ ಜಿನಮಂದಿರಕ್ಕಮು
ತ್ತುಂಗವಿಚಿತ್ರ
ವಸ್ತ್ರಮಯಮಂಟಪಮಂ ಸಮೆದಂತೆ ಸಂತತಂ   ೬೭

ನೆರೆದು ನಿರಂತರಂ ಜಿನನಿಕೇತನಮಂ ಬಲಗೊಂಡು ಬರ್ಪ ಖೇ
ಚರಿಯೆ
ಚಾರುಹಾಸಮುಖಮಂಡಲಮುಂ ಕರದೀಪಮಾಲಿಕಾ
ವಿರಚನೆಯುಂ
ವಿಳಾಸದಿದಿರ್ಗೊಳ್ವುವು ಕಾಂಚನಶೈಲಮಂ ಸುಧಾ
ಕಿರಣಸಹಸ್ರಮುಂ
ತರಳತಾರೆಗಳುಂ ಬಲಗೊಳ್ವ ಶೋಭೆಯಂ  ೬೮

ತರತರದಿಂ ಜಿನಾಲಯದ ಪೊಂಗಳಸಂಗಳೊಳೊಪ್ಪಮಪ್ಪಿನಂ
ವಿಚರನೆಗೆಯ್ದ
ಕೆಂಬರಲ ಮುತ್ತಿನ ನೀಲದ ನೀಳ್ದು ನಿಂದ ಮೂ
ವೆರಕೆಯ
ಕಾಂತಿಗಳ್ ತೊಳಗುತಿರ್ದುವು ತೀರ್ಥಮಹಾ ಪ್ರಭಾವದಿಂ
ನೆರೆದುವು
ಪೊಂಬಿಸಿಲ್ ಶಶಿಕರಾವಳಿ ಕೞ್ತಲೆಯೆಂಬಿವೆಂಬಿನಂ   ೬೯

ಪೊಳೆವ ಬಿಸಿಲ್ಗೆ ಬೆಳ್ಪನೆಳದಿಂಗಳ ಕಾಂತಿಗೆ ಕೆಂಪನಿತ್ತು
ಣ್ಗೊಳಿಸುವ
ಮೌಕ್ತಿಕಧ್ವಜಮರೀಚಿಗಳಿಂದೆ ಸಹಸ್ರ ಕಾಂಚನೋ
ಜ್ವ್ವಳಕಳಶಂಗಳಿಂದಮಿರುಳಂ
ಪಗಲುಂ ತಡವಿಕ್ಕೆ ಕೈರವಂ
ಗಳ
ಕಮಲಂಗಳುಳ್ಳಲರ್ವುದುಂ ತಡವಿಕ್ಕುವುದಾ ಜಿನಾಲಯಂ  ೭೦

ತಮಂ ತಲೆಯನೆತ್ತದಂತು ಮಸುಳ್ವಂತು ಸೂರ್ಯೇಂದುಗಳ್
ಸಮಸ್ತಮಣಿಕೂಟಕೋಟಿಗಳ
ಕಾಂತಿಗಳ್ ಸಂತತಂ
ನಿಮಿರ್ಕೆವಡೆದೊಪ್ಪೆ
ಕುಂಜಕುಮುದೋತ್ಸವಂ ಮಾಡುಗುಂ
ವಿಮಿಶ್ರದಿನರಾತ್ರಿಭೇದನಮನಾ
ಜಿನಾವಾಸದೊಳ್    ೭೧

ಬಿರಿಯದ ಮಲ್ಲಿಗೆ ಮುಗುಳ್ಗಳ
ಸರಿವೞೆ
ಕೊಳ್ವಂತೆ ಶಿಖರದಳ್ಳೇಱುಗಳಿಂ
ಬಿರಿದು
ಬಿಡುತಿರ್ಪ ಮುಗಿಲಿಂ
ಸುರಿವುದು
ಜಿನಗೃಹದ ಮೇಗೆ ಮುತ್ತಿನ ಸರಿಗಳ್       ೭೨

ಕುಳಗಿರಿಕುಳಮಂ ಕೊಱೆದಂ
ಮುಳಿಸಿಂ
ಹರಿಯೆಂಬರಱಿಯದವರದನುಮನಾ
ಕುಳಿಸದೊಳೆ
ಕಡೆದು ಸಮೆದಂ
ಬಳೆದಿವನೆನೆ
ತೊಳಪುವಲ್ಲಿ ಜಿನನಿಳಯಂಗಳ್         ೭೩

ಜಿನನಿಳಯಮನಾರಾಧಿಸಿ
ಯನಿಮಿಷಚಾಪಂಗಳಧ್ರುವೋದಯಮಂ
ಮೊ
ಟ್ಟನೆ
ತೋಱಿ ನಿಂದುವೆನಿಸಿದು
ವನೇಕಮಣಿಕೂಟಕೋಟಿ
ಜಿನನಿಳಯಂಗಳ್  ೭೪

ನೀಳಶಿಖರಾಂಶುಜಾಳದ
ಕಾಳದ
ಕೞ್ತಲೆಯೊಳಿಂದು ಕಣ್ಗೆಟ್ಟು ಜಿನೇಂ
ದ್ರಾಳಯದೊಳೆ
ನಿಂದಂತೆವೊ
ಲಾಳೋಕಿಸೆ
ಚಂದ್ರಶಾಲೆ ಸೋಲಮನೀಗುಂ ೭೫

ಪಸಿವಂ ಪರಿವುದನುೞಿದುವೊ
ಲಸದೃಶಜಿನಮಹಿಮೆಯಿಂದೆ
ಹಸಲೆಗಳೆಡೆಯಿಂ
ಬಸದಿಯ
ಪಚ್ಚೆಯ ಮಾಡದ
ಪುಸರ್ವೆಳಗನೆ
ಸೆಳೆವುನಲ್ಲಿ ಮುಗ್ಧಮೃಗಂಗಳ್         ೭೬

ಜಿನನಾಥನಿತ್ಯನಿಳಯದ
ಕನಕಕನತ್ಕಲಶದಗ್ರದೊಳ್
ಕಣ್ಗೆಸೆಗುಂ
ಜನವಿನುತಧರ್ಮ
ಚಕ್ರಮಿ
ದೆನೆ
ಮಧ್ಯಂದಿನದೊಳೆಸೆವ ಭಾಸ್ಕರಬಿಂಬಂ ೭೭

ಶ್ರಿಜಿನಮಂದಿರಮಂ ಸುರ
ರಾಜನ
ಬೆಸದಿಂದೆ ಸಮೆದನೆನೆ ಧನಪತಿ ನಾ
ನಾಜಿಹ್ವೆಯುಳ್ಳೊಡೇಂ
ಫಣಿ
ರಾಜನುಮಾರ್ತಪನೆ
ಪೊಗೞಲೇಕಪ್ರತಿಭಂ   ೭೮

ವಸತಿಯ ಸಿರಿಯಂ ಜಿನ
ದೇವಂಗಾಳಾಗಿ
ವೇಳೆತನಮಂ ತೋಱಲ್
ಕಾವನೆ
ಋತುತತಿಸಹಿತಂ
ಕಾವಂ
ಕೆಯ್ಯಿಂದಮಿೞಿಪನಂಬಂ ಬಿಲ್ಲಂ       ೭೯

ಎನಿಪ ಪೊಗೞ್ತೆಗಂ ನೆಗೞ್ತೆಗಂ ನೆಲೆಯಾಗಿ ಸಕಳತ್ರಿಭುವನಸಾರಲಕ್ಷ್ಮಿಗೆ ನೆಲೆಯಾದಿಂದ್ರಕೂಟಜಿನಾಲಯಮಂ ಗುಣಗಣಾಲಯನೆಯ್ದೆವಂದು ಮುಕ್ತಿ ಕಾಮಿನೀಕ್ರೀಡಾನೀಡಮೆನಿಸಿದ ಬಾಗಿಲ್ವಾಡಮುಮಂ ಸಕಳಮಂಗಳಾಕಾರಮೆನಿಸಿದ ಮಕರತೋರಣಮುಮಂ ಮನಸಿಜನನಿಱಿದು ನಿಱಿಸಿದ ವಿಜಯಸ್ತಂಭಮೆನಿಸಿದ ಮಾನಸ್ತಂಭಮುಮಂ ನೋಡುತ್ತುಂ ಬಂದು –

ಪ್ರಾಕಾರಮನಾ ಲೋಕ
ಪ್ರಾಕಾರಂ
ಪೊಕ್ಕು ಪೊಕ್ಕವೋಲ್ ತ್ರಿಭುವನಪು
ಣ್ಯಾಕರಮಂ
ಸಕಳಸುಖ
ಕ್ಕಾಕರನಾದಂ
ಕೃತಾರ್ಥನುನ್ನತನಿಳಯಂ    ೮೦

ಅಂತು ಪೊಕ್ಕು ಫಲಭರದಿನಲ್ಲಾಡುವ ಬಳ್ಳಿವನದ ಬಾೞ್ನೆಲದಿಂ ತೆರಳ್ದು ತೆರೆಗಟ್ಟುವ ಕರ್ಮಡುವಿನಂತಿರ್ದ ಮರಕತದ ಕುಟ್ಟಿಮಮುಮಂ, ಕುಟ್ಟಿಮದೊಳ್ ಮಾರ್ಪೊಳೆವ ಪಣ್ಗಳಂ ಪಣ್ಗಳೆಗೆತ್ತು ಪಾಯ್ದು ತಾಗಿ ಕಲ್ಲಂ ತಾಗಿದ ಮಿಟ್ಟೆಯಂತೆ ಮಗುಳ್ದು ಪಾಱಿಪೋಗಿ ಪೂಗೊಂಚಲೊಳ್ ಮಗುಳೆ ಮಗುಳ್ವರಗಿಳಿಗಳುಮಂ, ಗಿಳಿಗಳ ನೆೞಲ್ಗಳನಿಳೆಯೊಳ್ಪರಿವ ಗಿಳಿಗಳ್ಗೆತ್ತು ಪರಿದ ಗಿಳಿಗೆತ್ತು ಪರಿದು ಪಿಡಿದು ಸಿಗ್ಗಾಗಿ ಸುತ್ತಲುಂ ನೋಡಿ ನಸುನಗುವಂತಿರ್ಪ ಚಿತ್ರಿಕೆಗಳ ನಗೆಮೊಗಕ್ಕೆ ನಾಣ್ಚಿ ಮುದ್ದುಮೊಗಮಂ ಬಾಗುವ ಮನುಜವನಿತೆಯರುಮಂ, ಮನುಜವನಿತೆಯರಲತಿಗೆಯಡಿವಜ್ಜೆಯನಲರ್ದ ಕೆಂದಾವರೆಗೆತ್ತು ಮುಸುಱುವ ಮಱಿದುಂಬಿಗಳುಮಂ, ಮಱಿದುಂಬಿಗಳಿಂಚರಂಗಳನಾಲಿಸಿ ಸೋಲ್ತು ಬೆಱಗಾಗಿರ್ದ ಸಾಲ ಭಂಜಿಕೆಗಳುಮಂ, ಸಾಲ ಭಂಜಿಕೆಗಳೋಳಿಯಿಂ ಪಾಱುವಂತಿರ್ಪ ನಿಱೆಯ ಸೆಱಗಂ ಸೆಳೆಯಲ್ ಸಾರ್ವ ಚಪಳಕಪಿಗಳಂ ಕಂಡು ಭಯಂಗೊಂಡು ಬೆಮರ್ತು ಬಿಂದು ಬಿಡುವಂತಿರ್ಪ ಮುತ್ತಿನ ಪುತ್ತಳಿಗಳುಮಂ, ಪುತ್ತಳಿಗಳ್ ಬಾಜಿಸುವಂತಿರ್ಪ ಬೆರಲಂ ಪತ್ತಿಸಿದ ಬೀಣೆಯ ತಂತ್ರಿಗಳಂ ಗಾಳಿ ತಾಗೆ ನೆಗೆವ ನುಣ್ಚರಕ್ಕೆ ಸೋಲ್ತ ಮೃಗಾಳಿಗಳಂತೆ ಸೊಗಯಿಸುವ ಮೃಗಾವಳಿಗಳುಮಂ, ಮೃಗಾವಳಿಗೆ ಮೇಪಂ ಸೂಸುವಂತೆ ಪಸುರ್ವೆಳಗಂ ಸೂಸುವ ಮರಕತ ಕಪೋತಂಗಳುಮಂ, ಕಪೋತಪಾಲಿಕೆಗಳೊಳ್ ಪಂತಿಗೊಂಡ ಕೃತ್ರಿಮುಖಗಾವಳಿಗಳೊಳಗೆ ದನಿಗೆಯ್ದಡಗಲಾಱದಂತಿರ್ದ ಪಾರಾವತಂಗಳುಮಂ, ಪಾರಾವತಂಗಳ ಪಕ್ಷಾನಿಳನಿನಲ್ಲಾಡುವಂತೆ ಲಲಿತಹಾರ ಲತಾವಳಿಗಳುಮಂ, ಲತಾವಳಿಗಳ್ಗೆ ಕೇಸಡಿಗಳ ಕೆಂಪಿನಿಂ ಪೊಸದಳಿರಂ ದಯೆಗೆಯ್ದಂತಿರ್ಪ ದಿಶಾಪ್ರತಿಮೆಗಳುಮಂ, ದಿಶಾಪ್ರತಿಮೆಗಳಂ ಮುಗುಳ್ನಗೆಯ ಮುಗುಳ್ಗನರ್ಚಿಸುವ ಕೃತಕಚಾಮರಗ್ರಾಹಿಣಿಯರುಮಂ, ಚಾಮರಗ್ರಾಹಿಣಿಯರ ತೀವಿದ ಕುಚಕಲಶಮಂ ತಾವು ಪೋಲೆವೆಂದವಱ ಸಂದೆಗಮಂ ಕಳೆವಂತೆ ಕೆಲದೊಳ್ ತೊಳಗುವ ಕಳಧೌತಕಲಶಂಗಳುಮಂ, ಕಳಶದ ಬಾಯ ಕೆಂದಳಿರ್ಗಳಂತೆಯುಂ ಪೊಂಬಟ್ಟೆಯಂ ಸೂಸಕಂಗಟ್ಟಿದಂತೆಯುಂ ಸುತ್ತಲುಂ ತೆತ್ತಿಸಿದ ಪೊನ್ನ ಬೊಂಬೆಗಳಂತೆ ಬಂಬಲ್ಗೊಂಡು ಬೞಲ್ದು ಪೊಳೆವ ಬೆಳಗಿನ ಗೊಂಚಲ್ಗಳಂ ಬೆಳಗಿನ ಕೊಂಚಲ್ಗಳಿಂ ಕಾಂತೀಕೃತ ಪ್ರಾಸಾದಂಗಳಂತಿರ್ಪ ಪ್ರಾಸಾದಂಗಳುಮಂ ಪ್ರತಿದೀರ್ಘವಿಕಸಿತವಿಲೋಚನಪುಂಡರೀಕನುಂ, ತೋಷತು ಷಾರವರ್ಷಿತವದನಚಂದ್ರನುಮಾಗಿ ಚಂದ್ರೋದಯಮನವಳೋಕಿಸುತ್ತುಂ ಬಂದು, ಮುಂದೊಂದೆಡೆಯೊಳಮೃತಕೊಂಡಂತೆಯುಂ, ಮುತ್ತಿನ ಬೆಳಗಂ ಬಱಿಕೆಯ್ದು ಕೊಂಡಂತೆಯುಂ, ಪಳಿಕಿನ ಕಾಂತಿಯಂ ಪಿೞಿದುಕೊಂಡಂತೆಯುಂ, ಕಾಂತೆಯರ ಕಣ್ವೆಳಗನೊಱಗಿ ಕೊಂಡಂತೆಯುಂ, ವೈಡೂರ್ಯದ ಬಣ್ಣಮಂ ಬಾರ್ದುಕೊಂಡಂತೆಯುಂ ತೊಳಗುತ್ತಿರ್ದ ತಿಳಿಗೊಳನಂ ಕಂಡು, ಧೌತಕರಚರಣಕಮಳನಾಗಿ –

ಅಪ್ಪು ಕಣಿಸಿದುವು ಕಂಪಿನ
ಕುಪ್ಪಿಗೆಗಳೆನಲ್ಕೆ
ಕರಮೆ ಕಣ್ಗೆಸೆದು ಬೆಳ
ರ್ಪ್ಪುಪ್ಪಳಮನಾಯ್ದುಕೊಂಡು
ಬೆ
ಳಪ್ಪ
ಸರೋವರದಿನವನಿ ಪತಿ ಪೊಱಮಟ್ಟಂ  ೮೧

ಅಂತು ಪೂಗಳಂ ಕೊಂಡು ಪದ್ಮವನದಿಂ ಪೊಱಮಟ್ಟು ಸುರಭಿಭೃಂಗಾರಸೌರ ಭಮಾನಾತ್ರಿಭುವನಪತಿಭವನಮಂ ತ್ರಿಃಪ್ರದಕ್ಷಿಣಂಗೆಯ್ದು –

ಅಮೃತಶ್ರೀಕೃತಿಮೋಹಮಂ ಸಕಲ ವಿದ್ಯಾಮೋದ ಮಂದಪ್ರವಾ
ಹಮನುನ್ಮೀಲಿತವಾಹಮಂ
ವರವಚೋಮಾಂಗಲ್ಯಶೃಂಗಾರಗೇ
ಹಮನಾ
ಶ್ರೀ ಜಿನಗೇಹಮಂ ಪದೆಪಿನಿಂದಂ ವಿಸ್ಫುರಚ್ಚಂದ್ರನಾ
ಥಮುಖಾಲೋಕನಜಾತಪುಣ್ಯತಿಲಕಂ
ವಾಗ್ವಲ್ಲಕೀವೈಣಿಕಂ      ೮೨

ಅಂತು ಪುಗುವಾಗಳ್ –

ಎಳವೆಳಗಿನ ತಣ್ಬೆಳಗಿನ
ತಳಿರ್ವೆಳಗಿನ
ಬೆಳ್ಳಿವೆಳಗಿನೊಳ್ವೆಳಗಿನ
ಲ್ವೆಳಗಿನ
ಬಳಗದ ಬಳಸೆನೆ
ತೊಳತೊಳತೊಳಗಿದುದು
ಮೂರ್ತಿ ಚಂದ್ರಪ್ರಭನಾ    ೮೩

ಜನನಾಭಿಷೇಕಮಾನದೊ
ಳನಿಮಿಷಕರಿ
ತನ್ನನಾಂತು ಬೞಿಯಂ ಬಿಳಿದಾ
ಯ್ತೆನೆ
ವಾಣೀಸ್ಮಿ ತಧವಳನ
ಮನಮಂ
ಬೆಳಗಿದುದು ಮೂರ್ತಿ ಚಂದ್ರಪ್ರಭನಾ        ೮೪

ಪಳಿಕಿನ ರುಚಿಯೊಳ್ ಮಿಂದವೊ
ಲೆಳಮುತ್ತಿನ
ಕಾಂತಿಯಿಂದೆ ನುಣ್ಬಿಕ್ಕಿದವೋಲ್
ಮಳಯಜದೊಳ್
ಮುಳುಗಿದವೋಲ್
ತೊಳತೊಳತೊಳಗಿದುದು
ಮೂರ್ತಿ ಚಂದ್ರಪ್ರಭನಾ    ೮೫

ತಳಿವಂತೆ ಪುಣ್ಯಚಯಮಂ
ತುಳುಂಕುವಂತೆಱಗಿದವರ್ಗೆ
ಶಿವಸುಖಮಂ ನಿ
ರ್ಮಳತೆಯನೊಪ್ಪಿಸುವಂತಿರೆ

ತೊಳತೊಳತೊಳಗಿದುದು
ಮೂರ್ತಿ ಚಂದ್ರಪ್ರಭನಾ    ೮೬

ಸೆಳೆವಂತೆ ಸಿರಿಯ ಪೊಳಪಂ
ಕಳೆಯಿತ್ತೆಂಬಂತೆ
ಶಿವನ ನಗೆಯ ಹೈಮಾ
ಚಳದೇಶದ
ನಗುವಂತಿರೆ
ತೊಳತೊಳತೊಳಗಿದುದು
ಮೂರ್ತಿ ಚಂದ್ರಪ್ರಭನಾ    ೮೭

ಅನುದಿನಮಮೃತಶ್ರೀ
ನ್ನನೆ
ಭಾವಿಸಿ ವಿಶದೆಯಾದಳೆನೆ ಬೆಳಗುವ ನೂ
ತನಮೌಕ್ತಿಕಮಣಿಧವಳನ

ಮನಮಂ
ಬೆಳಗಿದುದು ಮೂರ್ತಿ ಚಂದ್ರಪ್ರಭನಾ        ೮೮

ಅನುದಿನಮೊಸೆದೀಕ್ಷಿಸಿ
ನ್ನನೆ
ಸುರಲಲನೆಯರ ಲೋಚನಾವಳಿ ಬಿಳಿದಾ
ಯ್ತೆನೆ
ಪೊಳೆದು ಕುಮುದಧವಳನ
ಮನಮಂ
ಬೆಳಗಿದುದು ಮೂರ್ತಿ ಚಂದ್ರಪ್ರಭನಾ        ೮೯

ಸಿರಿಯ ತವರಮೃತದಾಗರ
ವರಮೌಕ್ತಿಕರುಚಿಯ
ಪೆತ್ತ ತಂದೆಯಿದೆಂಬಂ
ತಿರೆ
ಬೆಳಗಿಂ ಪಾಳ್ಗಡಲಂ
ಸುರಿದುದು
ಕರಮೆಸೆವ ಸಿರಿಮೊಗಂ ಜಿನಪತಿಯಾ      ೯೦

ಪವಳದ ಕುಡಿವೆರಸಮೃತಾ
ರ್ಣವದೊಳ್
ಪೊಱಮಡುವ ಚಂದ್ರನಂತಿರೆ ತೀವಿ
ರ್ದವಯವ
ಮರೀಚಿಯೊಳ್
ಲ್ಲವಾಧರಂ
ತೊಳಗಿದತ್ತು ಜಿನಮುಖಚಂದ್ರಂ ೯೧

ತ್ರಿಭುವನವಿಭಕ್ಕೇಕ
ಪ್ರಭುವೆಂಬುದನೆಯ್ದೆ
ಸೂಚಿಪಂತಿರೆ ಚಂದ್ರ
ಪ್ರಭಜಿನಪತಿಗೊಪ್ಪಿರ್ದುವು

ಶುಭದಚ್ಛತ್ರತ್ರಯಂಗಳತಿಧವಳಂಗಳ್
        ೯೨

ಜಿನಮುಖಚಂದ್ರಿಕೆಯಿಂದಂ
ಪನಿಗಳನುಗುೞ್ವಂತೆ
ಚಂದ್ರಕಾಂತದ ಕೊಡೆಗ
ಳ್ಗೆ
ನಸುಂ ಸೊಗಯಿಸಿದುವು ಮು
ತ್ತಿನ
ಸೂಸಕದೊಳಗೆ ಸೂಸುತಂ ಕಿಱುವೆಳಗಂ         ೯೩

ತನುರುಚಿರರುಚಿಗಳಂ ಪಾ
ಲ್ವೊನಲೆಂದಾಸೆಯೊಳೆ
ಸಾರ್ದ ಹಂಸಾವಳಿಯೆಂ
ಬಿನಮೆಸೆದು
ಪೊಳೆಯುತಿರ್ದುವು
ಜಿನಪತಿಯಿಕ್ಕೆಲದೊಳಮಳಚಾಮರತತಿಗಳ್
೯೪

ಜಿನಪನನೋಲಗಿಸಿಯೆ ಸುರ
ಧನುವುಂ
ಮಿಂಚುಗಳುಮಧ್ರುವೋದಯಮಂ ಮೊ
ಟ್ಟನೆ
ಮಾಡಿದುವೆನೆ ಮಣಿಕಾಂ
ಚನಮಯಭಾಮಂಡಳಪ್ರಭಾವಳಿಯೆಸೆಗುಂ
  ೯೫

ಬ್ರಂಹಿಮವಚ್ಚಳಲಕ್ಷ್ಮಿಯ
ಸಿಂಹಂಗಳನಂತಬಳನ
ಪಾದಾಂತಿಕದೊಳ್
ಸಂಹತಿಗೊಂಡಿರ್ದಪುವೆನೆ

ಸಿಂಹಾಸನಮೆಸೆದುದಮಳಮಣಿಖಚಿತಂಗಳ್
೯೬

ಅಂತನಂತಶೋಭಾಸ್ಪದಮಾದ ಪರಮೇಶ್ವರನಂ ಬೆಳಗಿನ ಬೆಟ್ಟಮಂ, ಪಾಂಡುರತೆಯ ಪಿಂಡಮಂ, ಪುಣ್ಯದ ಪುಂಜಮಂ, ಗುಣದ ಕಣಿಯಂ, ಕರುಣದ ಕರುವಂ, ಸೌಖ್ಯದ ರಾಶಿಯಂ, ರಸಾಯನದ ಕಡಲಂ, ಶಾಂತಿಯ ಸುಧಾ ಸಮುದ್ರದ ನೊರೆವಿಂಡಂ ನಯನಾನಂದನಮಂ ಕಾಣ್ಬಂತೆ ಕಂಡು ಸಿರಿಯಂ ಬರಂಬಡೆಯಲೆಂದು ಪೊಡಮಡುವಂತೆ ಶ್ರೀಪಾದಪದ್ಮಂಗಳಂ ಪದ್ಮದ ಪೂಗಳಿಂ ಪೂಜಿಸಿ, ಶಾಂತಿ ತೀರ್ಥದೊಳ್ ಮುೞುಂಕುವಂತೆ ಪಾದಪೀಠದೊಳ್ ಮುೞುಗಿ, ಪಿರಿದುಂ ಪೊತ್ತುಂ ಪೊತ್ತ ಪುಣ್ಯದ ಪೊಱೆಯನೆತ್ತಲಾಱದಂತಿರ್ದು ತಲೆಯೊಳ್ ಕೆಯ್ಯನಿಟ್ಟು ನಖಾಂಶುಗೆಳೆತ್ತಿದಂತೆ ತಾನುಮೆರ್ದಪಾರ ಸುಖಸ್ವರೂಪನ ರೂಪಾತಿಶಯ ನಿರೀಕ್ಷಣಚ್ಛಲದಿಂ ರುಚಿಸುಧಾರಸಮಂ ನೇತ್ರಯಂತ್ರದಿಂ ತೆಗೆದು ಕುಡಿದು ತಣ್ಣನೆ ತಣಿದಂತೆ ಚಿತ್ತಂ ಕುಳಿರ್ಕೋಡೆ ತಲೆಗಾವುದೆಂದು ತೋರ್ಪಂತೆ ಮೌಳಿಮಿಳಿತ ನಿಮೀಳಿತಕರಕಮಲನಾಗಿ –

ಶ್ರೀಪಾದಾಗ್ರಭುವಿ ಪ್ರಣಾಮನಿಪುಣಾ ಯಸ್ಯೇಶ್ವರ ಸ್ಯಾದರಾ
ದೈಂದ್ರೀಭಾವತ
ತಿಸ್ಸಹಸ್ರನಯನಾಪ್ರೀತಿಪ್ರಬೋಧಾಮಳಾ
ಮಾಮಾಂ
ದೇವಿ ವಿಹಾಯ ಗಚ್ಛವರದಾಕ್ವಾಪೀತಿ ಘಾತದ್ವಿಪ
ಶ್ಚಂದ್ರಸ್ಯೇವ
ಕುಮುದ್ವತೀಶ ಭಗರ್ವಾ ಚಂದ್ರಪ್ರಭಃ ಪಾತುವಃ

ಎಂದೆಂದಿಂದ್ರವಂದ್ಯನಭಿಷ್ಟುತಿಗೆಯ್ದು ಅಭೀಷ್ಟಫಲಮಂ ಪಡೆದು ಕಡಲ ತಡಿಯ ಭೈತ್ರದಂತೆಯುಂ, ಅರಸನ ಕಾಲದ ಮಂತ್ರಿಯಂತೆಯುಂ, ಉಪಾಧ್ಯಾಯನ ಕೆಲದ ಶಿಷ್ಯನಂತೆಯುಂ, ಚಂದರನ ಪೊರೆಯ ಬುಧನಂತೆಯುಂ, ಸಮ್ಯಜ್ಞಾನದ ಪೊರೆಯ ದರ್ಶನದಂತೆಯುಂ, ಅನುಮಾನದ ಪತ್ತುಗೆಯ ಪ್ರತ್ಯಕ್ಷದಂತೆಯುಂ, ನಿಧಿಯ ಸನ್ನಿಧಿಯುಪನಿಧಿಯಂತೆಯುಂ, ಆ ಸಮಸ್ತ ಗುಣನಿಧಿಯ ಭ್ಯರ್ಣದೊಳಭೀರಾಮತೆಯನಪ್ಪುಕೆಯ್ದು ಬರೆ; ನವಪದಾರ್ಥಮಂ ಕಾಣ್ಬವರ್ಗೆ ಕಣ್ಗಳಿವರಂ ಕಂಡಪರೆ ಭವಮೆಂಬ ಕಡಲ ಕಡೆಯಂ ಕಂಡಪರಿವರಿಂದಮಿಂದ್ರನ ಸಿರಿಯಾರಂ ಸಾರದಿವರ್ಗೆಱಗಿದವರೆ ಲೋಕಮನೆಱಗಿಸುವರಿವರತ್ತಣಿನುತ್ತಮಪದವೇೞ್ತರ್ಪುದಿವರ ಕೇಸಡಿಗಳೆ ಕರ್ಮದುರಿತಕರಿಕೇಸರಿಗಳಿವರೊಳ್ ಸಕಲಶ್ರುತಮುಂ ಪೊತ್ತಗೆಯಕ್ಕರದಂತೆ ಪತ್ತಿ ನಿಂದುವೆನಿಪ ಪೆಂಪಂ ಪಡೆದು ತಾರಾಗಣದ ನಡುವಣ ಕಳಾಧರನಂತೆ ಸಕಲಮುನಿಗಣಧರರ ನಡುವೆ –

ಮಿಂಚಂ ಪೋಲ್ತಿರ್ದುದುದ್ಯತ್ಸಹಜಧವಳದಂತಾಂಶುವಾಚಾರ್ಯಚಿಹ್ನಂ
ಕುಂಚಂ
ಪೋಲ್ತಿರ್ದುದಾಖಂಡಲದೃಢಧನುವಂ ಪೊಣ್ಮಿ ಪೋಲ್ತಿರ್ದುದಾಶೋ
ದಂಚದ್ವ್ಯಾಖ್ಯಾನಮಾದಂ
ಮೊೞಗನಮಳಧರ್ಮಾಮೃತೋದ್ಧಾಮಧಾರಾ
ಮುಂಚದ್ವಕ್ತ್ರಂ
ಮುನೀಂದ್ರಂ ಜಳದ ಸಮಯಮಂ ಕೂಡೆ ಪೋಲ್ತಿರ್ದನಾಗಳ್       ೯೭

ಅಡಿಗೆಱಪ ಜನಕ್ಕಾಗಳೆ
ಕುಡಲೆ
ಸಹಸ್ರಾಕ್ಷಲಕ್ಷ್ಮಿಯಂ ಮುನಿಕೆಯ್ಯೊಳ್
ಪಿಡಿದಿರ್ಪಂತೆವೊಲೆಸೆದ

ತ್ತಿಡಿದೊಪ್ಪುವ
ಕಣ್ಣ ಪಿರಿಯ ಪೀಲಿಯ ಕುಂಚಂ ೯೮

ತೊಳಗಿದುದು ಯತಿಯ ಕೆಲದೊಳ್
ಪಳುಕಿನ
ಗುಂಡಿಗೆ ತದೀಯಪದಯುಗಸೇವಾ
ಫಳದಿಂ
ತನ್ನಯ ಕುಂದಂ
ಕಳಂಕಮಂ
ಪತ್ತುವಿಟ್ಟ ವಿಧುಬಿಂಬದವೋಲ್  ೯೯

ಅಮರ್ದಿರೆ ನೇಱಿದ ಲಂಬೂ
ಷಮೆ
ಬಾಲಂ ಠವಣೆ ಕೋಲೆ ಕಾಲ್ಗಳಿವೆನೆ ಬೇ
ೞ್ಪಮೃತಮನೆಱೆಯುತ್ತಿರ್ದುದು

ವಿಮಳಶ್ರುತಕಾಮಧೇನು
ಮುನಿಪುಂಗವನಾ  ೧೦೦

ಕಣ್ಮಲೆದಂ ಮುನಿ ಮನಮಂ
ನುಣ್ಮುಗಿಲೊಳ್ಪೊರೆಯಿನಿನಿಸು
ತೋಱುದ ರವಿವೋಲ್
ಉಣ್ಮಿದ
ಮಲದಿಂ ನಸುಪೊಱ
ಪೊಣ್ಮೆ
ತಪಸ್ತಪ್ತಕಾಯಕನಕದ್ಯುತಿಗಳ್       ೧೦೧

ಅಂತಿರ್ದ ಬೋಧಸಿಂಧುಗಳೆಂಬ ಭಟ್ಟಾರಕರ್ಗೆ ಸಮುದ್ರಕ್ಕೆ ಮುಗಲೆಱಗುವಂತೆ ತಾವರೆಗೆ ತುಂಬಿಯೆಱಗುವಂತೆ ನಿಧಾನಕ್ಕೆ ದೀಪವರ್ತಿಯೆಱಗುವಂತೆ ಲೇಸಿಂಗೆ ಮನಮೆಱಗುವಂತೆ ಭಕ್ತಿಯಿಂದಮೆಱಗಿ –

ನಮೋಸ್ತು ನಮತಾಂ ಕಾಮಧೇನವೇ ಮುನಿಭಾನವೇ
ಅನಿಮಿತ್ತಾಯ
ಭವ್ಯಾನಾಂ ಬಂಧವೇ ಬೋಧಸಿಂದವೇ

ಎಂದು ವಂದಿಸಿ ಚಿಂತಾಮಣಿ ವಂದಿಸುವುದುಮಾ ಮುನಿವೃಂದಾಕರಂ ಧರ್ಮ ವೃದ್ಧಿಪುರಸ್ಸರಂ –

ಲಕ್ಷ್ಯಾಪದಂ ನಿಧಿರಸಾವಮೃತಸ್ಯಧಾತೋ
ರತ್ನತ್ರಯಸ್ಯ
ಭುವನತ್ರಿತಯಸ್ಯಸೀಮಾ
ಚಂದ್ರೋದಯಾಯ
ಸುಕವೀಶ್ವರಶೇಖರಾಯ
ದೇಯಾಚ್ಛುಭಂನಿರವಧಿರ್ಜಿನಭೋಧಸಿಂಧುಃ

ಎಂದೀಯೆ ತಚ್ಚರಣಾರ್ಪಿತ ಪುಷ್ಪಮಾಲೆವೆರಸು –

ಪದೆಪಿಂ ಸೌಂದರ್ಯಸಂಕ್ರಂದನನಧಿಕತೆಯಂ ವಿಶ್ವವಿದ್ಯಾವಿನೋದಂ
ನಿಧಿಯಂ
ಶೃಂಗಾರಕಾರಾಗೃಹನಮಳತೆಯಂ ರೂಪಕಂದರ್ಪದೇವಂ
ಮುದಮಂ
ಸಂಗೀತಗಂಗಾಧರನಮಳತೆಯಂ ನಿತ್ಯಚಂದ್ರೋದಯಂ ಸಂ
ಪದಮಂ
ಕೊಳ್ವಂತೆ ಕೊಂಡಂ ಮುನಿಯ ಪರಕೆಯಂ ಕಾವ್ಯಕರ್ಣಾವತಂಸಂ        ೧೦೨

ಇದು ವಿದಿತಪ್ರಬಂಧವನವಿಹಾರಪರಿಣತಪರಮಜಿನಚರಣರಮ್ಯ ಹರ್ಮ್ಯಾಚಳೋಚ್ಚಳಿತ ನಖಮಯೂಖಮಂದಾಕಿನೀಮಜ್ಜನಾಸಕ್ತ ಸಂತತೋತ್ಸಿಕ್ತದಾನಾಮೋದಮುದಿತ ಬುಧಮಧುಕರಪ್ರಕರ ಕವಿರಾಜಕುಂಜರವಿರಚಿತಮಪ್ಪ ಲೀಲಾವತೀ ಮಹಾಪ್ರಬಂಧದೊಳ್ ಇಂದ್ರಕೂಟಜಿನಾಲಯವರ್ಣನಂ

ಅಷ್ಟಮಾಶ್ವಾಸಂ