ಉಗುಱೆ ಮದಾಳಿ ನೆಯ್ದಿಲ ಮಧುದ್ರವಮಂ ಮನದೊಳ್ ಪಿಕಂ ಸರಂ
ದೆಗೆಯೆ
ಸರಂಗಳುಂ ಶಿಶರಮಂ ಬಿಸಿಲಾಯ್ದು ಕುಱುಂಕೆ ಮೆಲ್ಲನ
ಲ್ಲುಗೆ
ಕೞಿವಂದ ಕುಂದದಲರ್ಗಳ್ ಗಿಳಿತತ್ತಿಯನಿಕ್ಕಿ ಪಕ್ಕಮಂ
ನೆಗೆದೆಲೆದೊಂಗಲೊಳ್
ತೊಡೆಯೆ ತೀಡಿದುದೊಯ್ಯನೆ ದಕ್ಷಿಣಾನಿಳಂ     ೬೧

ತದುಕು ತಳಿರ್ತುದಿಕ್ಕಿದುದು ಪಾದರಿ ಪಣ್ಣೆಲೆಯಂ ನಯಕ್ಕೆ ಬಂ
ದುದು
ಲತೆವಾಗಿ ತೂಗಿದುದು ಪೂಗುಡಿಯಿಟ್ಟದಿರ್ಮುತ್ತೆ ಮೂಡಿ ಮು
ತ್ತದ
ಮುಗುಳೊಪ್ಪಿ ತೋಱಿದುವಶೋಕೆಯ ಕೆಂದಳಿರುರ್ಚುತಿರ್ದುವೊ
ತ್ತಿದುವೆಲೆ
ಗಂಟನೊತ್ತವಿಸಿ ಕೋರಕಮಂ ನವಕರ್ಣಿಕಾರಕಂ     ೬೨

ಸಿರಿಸದ ಕೇಸರಂ ಮುಱಿಯೆ ಪಾಯ್ದುದು ತೂಱುವ ತುಂಬಿ ಮಾವು ಪೀ
ವರಮೆನೆ
ಸೂಸಿದತ್ತು ಬಿರಿದಂಕುರಮಂ ಕಿಱುಗೊಂಬುಕೊಂಬಿನೊಳ್
ಸುರಯಿ
ಮುಗುಳ್ತು ಮುಂಚಿದುದು ಕೀೞೆಸೞೊಳ್ ಕಳಿವಂಡನುತ್ಪಳಂ
ಸುರಿದೆಸೞಿಕ್ಕಿದತ್ತು
ಶಿಶಿರಾತ್ಯಯಚೈತ್ರನವಪ್ರವೇಶದೊಳ್      ೬೩

ಶ್ರೀ ತೊಱೆದುತ್ಪಲಾವಳಿಯನಂಬುಜದೊಳ್ ನಿಲೆ ಮೊಲ್ಲೆಯುಂ ಕರಂ
ಬೀತಿರೆ
ಕೂರ್ತರೆಂಬ ಪೊಣರ್ವಕ್ಕಿಗಳೋತೊಡಗೂಡೆ ಶೀತಕಾ
ಲಾತಿಶಯೇಂದುವಸ್ತಮಿಸೆ
ಮಾಸರಮಾದುದು ಸಂಜೆಯೆಂಬಿನಂ
ಚೂತವನಂ
ತಳಿರ್ತುದು ನವೋದಯದೊಳ್ ಮಧುಮಾಸಮಿತ್ರನಾ      ೬೪

ಪೊರೆವಿಡೆ ಸೋಂಕಿ ತೆಂಕಣೆಲರೂದಲೊಡಂ ಸ್ಮರದಗ್ಧಭೂಜಂ
ಕುರಿಸಿರೆ
ಚಿತ್ತಜನ್ಮನ ಲಸದ್ಭುಜಶಾಖೆಯೊಳೇಕೆ ವೀರಮಂ
ಕುರಿಸದೆ
ಬೇಟಮಂ ಬಳೆದು ಬಾೞ್ವ ಜನಂಗಳ ಚಿತ್ತಬೀಜಮಂ
ಕುರಿಸದೆ
ಚೂತಮೊಂದೆ ಪೊಸತಂಕುರಿಸಿತ್ತೆ ವಸಂತಮಾಸದೊಳ್        ೬೫

ಕೊನರನೆಕಾರ್ದ ಕೋಗಿಲೆಯ ಸತ್ತಸರಂ ಪೊಸತಾಗಿ ಪುಟ್ಟಿತೆಂ
ಬಿನಿತೆ
ಬನಂಗಳೊಳ್ ಕೊನರ್ವ ಕನ್ನಡವಕ್ಕಿಯ ನಾದಮೆತ್ತ ರು
ದ್ರನ
ಮುನಿಸಿಂದೆ ಬೆಂದತನುವುಂ ಮಱುವುಟ್ಟಿಗನಾದನಂದು ಮಾ
ವಿನ
ಕಳಿಕಾರಸಂ ನವಸುಧಾರಸಮಲ್ಲವೆ ಚೈತ್ರಮಾಸದೊಳ್   ೬೬

ಕಲಿಕೆ ಕವಲ್ತು ಮೂಡಿದುದು ಮಾಮರದೊಳ್ ಬನದೊಳ್ ಪೊರಳ್ದು ಸಾ
ಯಲೆ
ಪೊಲಗೆಟ್ಟು ಪೊಕ್ಕುದು ವಿಯೋಗಿಮೃಗಾವಳಿ ಕೊಲ್ವುದೆಂದು ಮು
ನ್ನುಲಿಯದೆ
ಕೊಂಬುಗೊಂಡುೞಿದ ಕೋಗಿಲೆ ಕರ್ಬಿನ ಬಿಲ್ಗೆ ಕೂರ್ತಕ
ರ್ಬೆಳನನೆಗೊಬ್ಬಿನಿಂ
ಕರೆವವೊಲ್ ಕರೆದತ್ತು ವಸಂತಮಾಸದೊಳ್        ೬೭

ಚಂಚುವಿಘಾತಜಾಳವಿಳಸದ್ವಿವರಂ ಸಹಕಾರಕೋರಕಂ
ಬಂಚದ
ಭಂಗಿಯೊಳ್ ಬೆರಸೆ ಸೂಸೆ ರಸಂ ಮೊಗಮಿಟ್ಟು ರಾಗದಿಂ
ಪಂಚಮದಿಂಚರಂ
ನಿಮಿರೆ ಪಂಚ ಸರಂ ಭಯದಿಂದೆ ಕೇಳ್ದು ರೋ
ಮಾಂಚಮನಾಂತು
ಮೆಚ್ಚುತಿರೆ ಕೇಳಸಿದಂ ಕಳಕಂಠವಾಂಶಿಕಂ ೬೮

ತಳಿರಂ ತಾಳ್ದಿ ಬೞಲ್ದು ಪೊತ್ತು ನನೆಯಂ ಪೂಗೊಂಚಲಂ ಪೇಱಿ
ಳ್ವಳನಲ್ಲಾಡುವ
ಭೃಂಗಕೋಕಿಳಶುಕವ್ರಾತಂಗಳಿಂ ಬಳ್ಕುವೀ
ಸೆಳೆಗೊಂಬುಂ
ಕೊನೆಗೊಂಬುಮೆಂತು ಫಳಭಾರಕ್ಕಾರ್ಪುವೆಂದಾಂತವೋ
ಲೆಳಮಾವಂ
ಮಳಯಾನಿಳಂ ಬಳಸಿಕೊಂಡಿರ್ದತ್ತು ಚೈತ್ರಾದಿಯೊಳ್     ೬೯

ಗಿಳಿ ತಳಿರಂ ಮುದಂ ಮುಗೞ್ದ ಕೋಗಿಲೆ ಕೋರಕಮಂ ಮದಾಳಿಪೂ
ಗಳನರೆಗರ್ಚಿ
ಪಾಱಿದುವು ನೂತನಮಂ ನವವಸ್ತು ಜಾತಮಂ
ಬಳೆದೊಲವಿಂದಮೋಲಗಿಸಿ
ಬಂದ ಬಸಂತದ ಸೊಂಪನೞ್ತಿಯಿಂ
ತಳೆದಱೆಪಲ್ಕೆ
ಪೋಪ ವನಪಾಲಕರಂತೆ ಮನೋಜರಾಜನಾ    ೭೦

ನನೆಯ ಪುಣುಂಬುಮಂ ಮುಗುಳನಿಟ್ಟಿಯುಮಂ ಮಱಿದುಂಬಿ ಪಾಯ್ದ ಪೂ
ವಿನ
ಕವಲಂಬುಮಂ ತೊಡದ ಮುನ್ನಮೆ ಮನ್ಮಥನುರ್ಬಿ ಬಂದ ಮಾ
ವಿನ
ಮುಗುಳ್ವೆತ್ತ ಮಲ್ಲಿಗೆಯ ಪೂತದಿರ್ಮುತ್ತೆಯ ಕಂಪೆ ಕಂಪಮಂ
ಕೊನರಿಸಿ
ಕೊಂದು ಕೂಗಿದುವು ತಾಗಿ ವಿಯೋಗಿಗಳಂ ವಸಂತದೊಳ್    ೭೧

ಪೂಗಣೆತ್ತಿಗೆತ್ತಿದಂತೆ ಪೊಗರಂ ಪೊಸಗಾಡಿಗೆಗೂಡಿದಂತೆ ಚೆ
ಲ್ವಾಗಿ
ವಿಲೋಚನಕ್ಕೆ ವಿರಹಾನಳನಿಂ ಮಸಿವಣ್ಣಮಾಗಿ ಬಂ
ದೇಗಿ
ವಿಯೋಗಿಚಿತ್ತತತಿ ಕಾಮಶರಾಂಘ್ರಿಯೊಳಗಿರ್ದಂತೆ ಪಾ
ಯ್ದೋಗರಗಂಪನುಂಡುವೆಳಮಾವಿನ
ಪೂವಿನೊಳುನ್ಮ ದಾಳಿಗಳ್         ೭೨

ತಾವರೆ ನೂಂಕುವಂತೆ ಮಧುಬಿಂದುವನಂದು ವಿಳಾಸವಾರ್ಧಿಯೊಳ್
ಸೀವರಮೆತ್ತವಂತೆ
ತೆರೆಗಳ್ ಮೊದಲೊಳ್ ಮುಗುಳೊತ್ತುವಂತೆ ಶಾ
ಖಾವಳಿ
ಕಾಮಿನೀಜನದ ವಕ್ತ್ರವಳಿತ್ರಯಬಾಹುಮೂಲದೊಳ್
ತೀವಿ
ಮಡಲ್ತು ಮೂಡಿದುವು ಮಂಜರಿಗಳ್ ನವಘರ್ಮಬಿಂದುವಾ         ೭೩

ಮುನ್ನಮೆ ಬೆಮರ್ತು ಮುತ್ತಿನ
ಕನ್ನಡಿವೊಲ್
ತೊಳಪ ತರುಣಿಯರ ವದನಂಗಳ್
ಮನ್ನಿಸದೆ
ಸೆಳೆದುಕೊಂಡುವು
ಚೆನ್ನಂ
ರೋಹಿಣಿಯನಪ್ಪಿದಮೃತದ್ಯುತಿಯಾ  ೭೪

ಎಲೆಯಿಕ್ಕಿದಂತೆ ಪೊರೆವಿಡೆ
ಸುಲಿದೆಡೆಗರ್ಪಲ್ಲಿ
ಪಲ್ಲವಂ ಪುಟ್ಟಿದವೋಲ್
ಜಲಜಲನೆ
ಕೆಂಪನುಗುೞ್ದುವು
ಲಲಿತಲತಾಂಗಿಯರ
ಪಳಚನೆಸೆವಧರಂಗಳ್ ೭೫

ಪಳಚನೆ ಪೊಳೆವೆಳವೆಂಡಿ
ಬಿಳಿಯಲರ್ಗಣ್ಣವರ
ಚೆಲ್ವನೆಳಕುೞಿಗೊಂಡಂ
ತಳರ್ದು
ತೊಳಗಿದುವು ಕುಮುದಂ
ಗಳ
ಸಿರಿಯೋಸರಿಸಿದತ್ತು ಶಿಶಿರಾಂತ್ಯಯದೊಳ್       ೭೬

ಅವತರಿಸಿ ತಾಮ್ರಮಂಜರಿ
ಕಿವಿಯಂ
ತೀವುತ್ತೆ ಪರ್ಚುವಂತಳಿಗಣಿಕಾ
ರವಮನದೇಂ
ತಳೆದುದೊ ಕೇ
ಳ್ವವೊಲಬಲಾಜನದ
ಮಾನಮದಮಂ ಮಧುವೋಲ್  ೭೭

ವಾಸಿಸಿತು ಘರ್ಮಗಂಡಝ
ಳಾಸವಮಂ
ಸೇದೆವಟ್ಟವೋಲ್ ವನಿತಾಕ
ರ್ಣಾಸಕ್ತಮಧುಪಕಬಳಿತ

ಕೇಸರಸುಕುಮಾರಶಿಖ
ಶಿರೀಷಸ್ತಬಕಂ       ೭೮

ಪಜ್ಜಳಿಸಿದಮೃತಜಳಧಿಯ
ಸಜ್ಜೆಗೆವಂದಿಂದುಲೇಖೆವೋಲ್
ಸುಲಲಿತಯೋ
ಷಿಜ್ಜನತತಿ
ಸಾಯಂತನ
ಮಜ್ಜನದಿಂ
ವಿಮಳಮಳಯಜಸ್ಥಾಸಕದಿಂ     ೭೯

ಮಲ್ಲಿಗೆಮುಗುಳಿಂ ತಳಿರಂ
ಮೆಲ್ಲಗೆ
ಮುಸುಕಿದವೊಲಂಗನೆಯರಧರಲಸ
ತ್ಪಲ್ಲವಮಂ
ಸುಲಿಪಲ್ಲಿಂ
ದಲ್ಲುಗುವೆಳವೆಳಗಿನಿಂದದೇ
ಮುಸುಕಿದರೋ ೮೦

ಬಗೆವುಗೆ ತೊಡದರ್ ಕುಡಿಮಿಂ
ಚುಗಳಿಂ
ನೀರಂಜಿಪಂತೆ ನೀರಜಮುಖಿಯರ್
ಮಿಗೆ
ಕುಂಕುಮದಣ್ಪಿಂ ಸಂ
ಪಗೆವಣ್ಣಂ
ಮುಗುಳ್ದ ಮೆಯ್ಗಳೊಳ್ ಮಳಯಜಮಂ     ೮೧

ಅಲ್ಲಿಂ ಮುನ್ನಮೆ –

ನೂಂಕಿತರ ತೇರ ನೂಂಕುವ
ತೆಂಕಣೆಲರ್
ಬರ್ಪಿನಂತೆ ಭಯಮುತ್ತವೊಲೇ
ಣಾಂಕನೆಡದೊಲಗಿ
ಬರುತಿರೆ
ಪಂಕಜಸಖನುತ್ತರಾಯಣಕ್ಕೇೞ್ತಂದಂ
         ೮೨

ಕರಮೊತ್ತಿ ಕುತ್ತಿ ಖರಕರ
ಕಿರಣಂಗಳ್
ಪೊಸೆಯೆ ಪುಟ್ಟಿದಗ್ನಿಕಣಂಗಳ್
ಕರಗಿಸಿದುವು
ಪೊರೆಯೆತ್ತಿದು
ವುರುಪಿದುವರ್ಕಾಶ್ಮದಲ್ಲಿ
ಪತ್ತಿದ ಹಿಮಮಂ    ೮೩

ಮೀಂಗಳ್ ಮಿಗೆ ಮೋಕ್ಷ ಸ್ನಾ
ನುಂಗುಡುವವೊಲೊಡನೆ
ಮುೞುಗೆ ತಾನುಗುೞ್ದುದು ಮುಂ
ನುಂಗಿದ
ದಿನಕರನಂ ಮಿಗೆ
ಪಿಂಗುತ್ತುಂ
ರಾತ್ರಿರಾಹು ಶಿಶಿರಾತ್ಯಯದೊಳ್ ೮೪

ಭರವಸದೆ ಕವಿವ ಖರಕರ
ಕಿರಣಂಗಳ್ಗಳ್ಕಿ
ಪುಲ್ಗಳಂ ಕರ್ಚಿದವೋ
ಲರುಣಿತತುಷಾರಜಳಶೀ

ಕರಮೆನೆ
ಪನಿ ಪುಲ್ಲ ಪನಿಗಳಲುಗಿದುವೆಲರಿಂ ೮೫

ಸೊಪ್ಪು ಸೊವಡಾಗದೆಸೞೆಸ
ೞ್ದಪ್ಪದೆ
ಮೊಗಮಿರಿದು ಕಾರ್ದು ಚಪ್ಪಲರ್ವಿನೆಗಂ
ಸಿಪ್ಪಿಟ್ಟು
ಕರೆದು ಕೊಂಡುವು
ಸಪ್ಪದಮುಪ್ಪಳದಿನೊಱೆವ
ನಱುವಂಡುಗಳಂ ೮೬

ಶ್ರೀ ಪದ್ಮದೊಳೊದವೆ ಮನ
ಸ್ತಾಪಂ
ಪಟ್ಟಿದುದೊ ತಮಗೆ ರುಜೆಯಾಯ್ತೊ ದಿವಾ
ಸ್ವಾಪದಿನೆನೆ
ನಯಮಿೞಿದವೊ
ಲೊಪ್ಪಿದುವು
ಮಧುಪ್ರವೇಶದೊಳ್ ಕುಮುದಂಗಳ್     ೮೭

ಪೊಸೆಯಿಸಿ ನಸುಮಿಸುಪೇಱಿದ
ಬಿಸಿಲಱಿಯೆ
ಬೆಮರ್ತು ಬಿಂದುಬಿಡುವವೊಲೆನಸುಂ
ಪೊಸಮುಗುಳಂ
ಪೊತ್ತೆಸೆದುದು
ವಸಂತದೂತಿಕೆ
ವಸಂತಮಾಸದ ಮೊದಲೊಳ್        ೮೮

ಅಂತುಮಲ್ಲದೆ –

ನೀರಸಮಾದೆಲೆಯಂ ಸಲೆ
ಸೈರಿಸದಿವೆ
ನೂಂಕಿ ಕಳೆದುವೆನೆ ಕಳಿಕೆಗಳುಂ
ಕೋರಕದ
ತುಱುಗಲುಂ ಸಹ
ಕಾರದ
ಕೊಂಬುಗಳೊಳೊಡೆದದೇಂ ಮೂಡಿದುವೋ   ೮೯

ನಳನಳಿಸಿ ಮೊಗಸಿ ಪೊರೆವಿಡು
ವೆಳಗೆಂಪಂ
ತಳೆದ ಪಸುರನಾಳ್ದಂಕುರದಿಂ
ದೆಳದಳಿರಿಂ
ನಿಱಿದಳಿರಿಂ
ಸೆಳೆಗೊಂಬುಗಳೊಱಗೆ
ತುಱುಗಿ ಬಂದುದು ಚೂತಂ    ೯೦

ಅಸಿಯ ಬೆರಲ್ಗೊನೆಗೊಂಬಿಂ
ಪೊಸದಳಿರೆನೆ
ಚೂತಲತಿಕೆಯೆಳದಳಿರ್ದಳದೊಳ್
ಮಿಸುಪಲರ
ಗೊಂಚಲೊಳ್
ಣ್ಗೆಸೆದಿರ್ದುವು
ಕಾಮಚಾಮರಗ್ರಾಹಿಣಿಯೋಲ್          ೯೧

ಕೊನರಾಱೆ ಪೊತ್ತೆ ಕಿೞ್ಗೊಂ
ಬಿನೊಳನಿಲನಿನೊಲೆದ
ಕೊಂಬುಗೆಯ್ಯಿಂ ಪೊಸಪೂ
ವಿನ
ಪುಡಿಯನೊಟ್ಟಿಕೊಂಡ
ತ್ತನಂಗಕರಿಧೂಳಿಮದಕೆ
ಬಂದವೊಲಾಮ್ರಂ  ೯೨

ಅಳಿ ಬಳಸೆ ಸೊನೆಯ ಕಂಪಂ
ಬಳೆದೊಟ್ಟವೊಲೆಸೆವ
ಸರಳ ಶಾಖಾಭುಜದೊ
ಳ್ದರಿರೊಳ್
ಗಳಪುವ ಗಿಳಿಯಿಂ
ಗಿಳಿಯೋದಿಸುವಂತೆ
ಚೂತಲತೆ ಕರಮೆಸೆಗುಂ         ೯೩

ಮಾವಿನ ಸೆಳೆಗೊಂಬುಗಳೊಳ್
ಪೂವಿನ
ಗೊಂಚಲ್ಗಳೆಸೆದುವಳಿಗಳ ಬಳಸಿಂ
ಭಾವಿಸಿ
ಮಧುವಲರ್ಗಣೆಯಿಂ
ತೀವಿದ
ತೂಣೀರದಂತೆ ಪುಷ್ಪಾಯುಧನಾ     ೯೪

ಅಲರ್ಗೊಂಚಲೊಂದು ಪಕ್ಕದೊ
ಳಳಿವೆರಸಿರೆ
ಕಳಿಕೆಯೊಂದು ಪಕ್ಕದೊಳಿರೆ
ಳ್ತಲುಪ
ಸೆಳೆಗೊಂಬು ಮಿಸುಕಿದು
ವಲರ್ಗಣೆಯಂ
ಗುಱಯನಿಟ್ಟವೋಲ್ ತೋಮರದಿಂ    ೯೫

ಪರಿಚುಂಬಿಸಿ ನವಕಳಿಕಾ
ಧರರಸಮಂ
ಪೀಱೆ ಪರಭೃತಂ ಚೂತಲತಾ
ತರುಣಿಗೆಸೆದತ್ತು
ಶಾಖಾ
ಕರಕಂಪಂ
ತನ್ನಿನಾದನಿಭಸೀತ್ಕಾರಂ         ೯೬

ಚಳ ಶಾಖಾದಳಹತಿ ಕರ
ತಳತಾಳಮನಿೞಿಸೆ
ವಿರುವದಳಿಕುಳ ವಳಯಾ
ಕುಳ
ಕೋಕಿಳಕಳರವದಿಂ
ಗಿಳಿಸೋವಬಲೆಯವೊಲಾಮ್ರಲತೆ
ಕರಮೆಸೆಗುಂ      ೯೭

ಒಡೆದಲರ ನಡುವೆ ಮಿಡಿ ಪೊಱ
ಮಡೆ
ಸಿಡಿಮಿಡಿಗೊಂಡು ಪಸಿದು ಪೊಸಬಂಡನುಣಲ್
ಪಡೆಯದೆ
ಸವಿಗಂಡುದು ಮಾ
ಮಿಡಿಯಂ
ಕಡಿದೊಸರ್ವ ಸುರಭಿರಸಮಂ ಭೃಂಗಂ     ೯೮

ಮಿಡುಕುವ ವಿಯೋಗಿಯೆರ್ದೆಯಂ
ನಡೆಗೊಂಡಲರ್ಗಣೆಗಳ
ಲಸಿ ಬಲ್ಮಿಟ್ಟೆಗಳಂ
ಪಡೆದು
ಕಿಡುವಂತೆ ಕಂತುಗೆ
ಪಡೆದುವು
ಮಿಡಿಯಂ ಮಡಲ್ತ ಮಾವಿನ ಪೂಗಳ್       ೯೯

ತರಳಜಳಬಿಂದು ಸಿಪ್ಪಿನ
ಪೊರೆಯೊಳ್
ಮುತ್ತಾದುದರ್ಕೆ ಬಿರಿಮುಗುಳಿಂದು
ಬ್ಬರಿಪ
ಮಧುಬಿಂದು ಪಚ್ಚೆಯ
ಪರಲಾಯ್ತೆನೆ
ಮಿಡಿಗಳೊಗೆದುವಿಮ್ಮಾವುಗಳೊಳ್      ೧೦೦

ಬಿರಿಯಿಯೆರ್ದೆ ಬಿರಿಯೆ ಭರದಿಂ
ಬಿರಿಮುಗುಳಿಂದೆಚ್ಚು
ಕೂಗಿ ಬಾಗುವಿನಂ ಮಾ
ಮರದೊಳ್
ಮಿಡಿಯುಬ್ಬರಿಸಿರೆ
ಬೆರಲಂ
ಮಿಡಿದವರ ಮಿಟ್ಟಿದೊಟ್ಟಂ ಮದನಂ ೧೦೧

ಅಲರ್ವೆರಸಲುಗುವ ತಳಿರೊಳ್
ಕಲಸಿದ
ಮಾಂಗಾಯ್ಗೆ ಪಾಯ್ದು ಮಧುಮಾಸದೊಳ್
ಗ್ಗಲಿಸಿದ
ನಲಿವಿಂ ತಳಿರು
ಯ್ಯಲಾಡಿದುವು
ಗಿಳಿಯ ಮಱಿಮುಮೆಳಗೋಗಿಲೆಯುಂ          ೧೦೨

ಪಸರಿಸು ಚೂತ ಕಟ್ಟು ಗುಡಿಯಂ ಪೊಸಮಲ್ಲಿಗೆಗಾಯ್ತು ನೂತನ
ಪ್ರಸವವಿಭೂತಿ
ನಿನ್ನರಸಿಗೆಂದೆಡೆವೇೞ್ವವೊಲತ್ತಣಿಂದೆ ಬಂ
ದೊಸೆದಳಿಕಾಂತೆಯೇಂ
ಸೆಳೆದುದೊಂದೆ ನವೀನದಳೋತ್ತರೀಯಮಂ
ಪೊಸೆಯಿಸಿ
ಸೂಱೆಗೊಂಡುದಲರ್ಗಂಪುಗಳಂ ಸಹಕಾರಕಾಂತನಾ        ೧೦೩

ಪಿರಿದುಮನಂಗನಾದರಿಸಿ ತಮ್ಮನೆ ಕೂರ್ಗಣೆ ಮಾಡೆ ನಲ್ಲರಂ
ಬಿರಯಿಗಳಂ
ಮನಂಬಿರಿಯೆ ತಾಗಿ ಕರಂ ಬಿರಿವಂತೆ ಬೇಗದಿಂ
ಬಿರಯಿಯ
ಚಿತ್ತಮಂ ಪಿರಿದು ನುಂಗಲೆ ಬಾಯ್ದೆಱೆವಂದದಿಂದಮೇಂ
ಬಿರಿದುವೊ
ತೋರಮಲ್ಲಿಗೆಗಳಬ್ಬರಮಾಗಿ ವಸಂತಮಾಸದೊಳ್ ೧೦೪

ಪಸುರೊಳಸೋಱೆ ಬೆಳ್ಪು ಬಳೆಯುತ್ತಿರೆ ತೆಂಕಣಗಾಳಿಯಿಂ ಸಡಿ
ಲ್ವಸುಪೊರೆಯಾಗೆ
ಸಂಜನಿತಕಾಮಶಿಲೀಮುಖಪಾತದಿಂ ರಸಂ
ಪೊಸತು
ಪೊದೞ್ದು ಪೊಣ್ಮೆ ವಿರಹಾತುರೆಯಂತವೊಲೇಂ ಸುಗಂಧವಿ
ಶ್ವಸಿತಮನೆತ್ತಿತೋ
ಬಿರಿದ ಮಲ್ಲಿಗೆ ಬಂದ ವಸಂತಮಾಸದೊಳ್ ೧೦೫

ಎತ್ತಿದ ಮುರಜಮನೆಳಮಾ
ವೆತ್ತಿದವೋಲ್
ತಳಿರ ಪುದುವಿನೊಳ್ ಮಧುವಿಸರಂ
ಮತ್ತೆನಿಸಿರೆ
ಬೆಳ್ದಿಂಗಳ
ಬಿತ್ತಂ
ಕಟ್ಟಿದಮೊಲಿಡಿದ ಮಲ್ಲಿಗೆಮುಗುಳ್ಗಳ್   ೧೦೬

ಎಳವೆಂಡಿರ ಕಡೆಗಣ್ಗಳ
ಬೆಳಗಂ
ಸ್ಮರನುರುಳಿಗೆಯ್ದೊಡವು ಚಪಳತೆಯಿಂ
ಕಳಕಳಿಸಿ
ನಗುವವೋಲಳಿ
ಗಳ
ರುತಿವೆರಸಿರ್ದುವಲರ್ದ ಪೊಸಮಲ್ಲಿಗೆಗಳ್        ೧೦೭

ಬಿರಿಯಿಗೆ ತೆಗೆಬಗೆ ಕಂಪುಗೆ
ಬಿರಿದುದು
ಮಲ್ಲಿಗೆ ಮರಲ್ದು ಪುಗೆ ಮಧುಮಾಸಂ
ಕುರುಳ
ಮುಗಳ್ನಗೆ ಕಂಪಿನ
ಕರಿಡಗೆ
ವನಸಿರಿಗೆ ಸರಿಗೆ ಬಗರಗೆ ಮಧುವಾ  ೧೦೮

ಬಸನಿಗೆಯರೊಸಗೆಮುತ್ತಿನ
ಹಸಿತಂ
ಬೆಳ್ವೆಳಗಿನುರುಳಿ ಬೆಳ್ದಿಂಗಳ ಬೆ
ಳ್ವಸದನಮೆನಲೇಂ
ಬಿರಿದುದೊ
ಪೊಸಮಲ್ಲಿಗೆ
ಜಸದ ಬಿೞ್ತು ಕುಸುಮಾಯುಧನಾ        ೧೦೯

ಮಲ್ಲಿಗೆಯನೊಲಿಸುವಳಿಪಿಂ
ಮೆಲ್ಲನೆ
ಪೂವಾದುದೆನಿಸಿ ಮಾವಿನ ಕೊನರಿಂ
ದಲ್ಲುಗುವ
ಸೊನೆಯಿನೇಂ ಕಂ
ಕೆಲ್ಲಿ
ಕರಂ ನಾಂದು ನನೆದು ಮಗಮಗಿಸಿದುದೋ       ೧೧೦

ಫುಲ್ಲಶರಶಿಖಿಯ ಪೊಗೆಯೆನೆ
ಪಲ್ಲವಿಸಿದಶೋಕೆಯಿಂದೆ
ಪುಗೆ ಬಂದಳಿಗಳ್
ಮಲ್ಲಿಗೆಯಲರ್ಗಣ್ಗಳೆನಲ

ಲಲ್ಲೊಕ್ಕುವು
ಬಾಷ್ಪಬಿಂದುವೆನೆ ನವಮಧುಗಳ್         ೧೧೧

ಆನೆ ಮದನಂಗೆ ಪೊಸಮದ
ದಾನೆ
ಜಗದ್ವಿಜಯಿಗೆಂದು ಮುಡಿಗಿಕ್ಕುವನೋ
ಲೇನಿಕ್ಕಿದುದೊ
ವಸಂತಾ
ಸ್ಥಾನಿಕೆಯೊಳ್
ಪಾಟಳದ್ರು ಜಠರಚ್ಚದಮಂ   ೧೧೨

ಬರುತುಮೆ ಬಸಂತಕಾಂತಂ
ಬರಸೆಳೆಯೆ
ಸಡಿಲ್ದವೋಲ್ ಜರಚ್ಛದನಂ ಬೀ
ೞ್ತರೆ
ತನ್ನಯ ಮೆಯ್ಯಿಂ ಪಾ
ದರಿಪೊಸೆಯಿಸಿತೊಡನೆ
ಕುಸುಮಗುಚ್ಛೋತ್ಕರದಿಂ     ೧೧೩

ಪಾದರಿಗೆ ಪುಷ್ಪವತಿಗೊಳ
ಗಾದುದುಮಲ್ಲದೆ
ಮಗುಳ್ದು ಚಂಡಾಳಿಕೆಯೊಳ್
ಪೋದ
ಪೊಲೆಗಲಸಿದಂತಿರೆ
ನಾದುದು
ಸಂಪಗೆ ಸುಗಂಧದಿಂ ಮಧುಕರನಂ         ೧೧೪

ರತಿಯ ಬೞಲ್ಮುಡಿಗಾಕೆಯ
ಪತಿಯ
ತುಱುಂಬಿಂಗೆ ಮಧುವೆ ಮೀಸಲ್ಗೞೆದಂ
ಚತುರತೆಯಿನಲ್ಲದಂದಳಿ

ವಿತತಿಗಳೇಕೆಱಗವಲರ್ದ
ನವಚಂಪಕದೊಳ್ ೧೧೫

ತೋರಿದುವಾದ ಮಲ್ಲಿಗೆಯ ಮೊಗ್ಗೆಗಳೊಳ್ ಮೊಗವೂಱಿ ಬಿೞ್ದುಭೋ
ರ್ಭೋರೆನೆ
ವಾಯ್ದು ಬಂಡಿನೊಳೆ ಬೆಂಡೊಗೆದೊಯ್ಯನೆ ತೆಂಬೆಲರ್ ತೆಱಂ
ದೀರಿದುವಾದೆಱಂಕೆಗಳನೆತ್ತಿ
ಮಗುಳ್ತರೆ ಬೀಸಿಕೊಂಡೆಲ
“ರ್ನೀರನೆರಲ್ದು
ಕಾಱಿ ಕಡಲಿಟ್ಟುವು ಮತ್ತಮಧುವ್ರತಾಳಿಗಳ್      ೧೧೬

ಆಸವಮುಂಡು ಮೆಯ್ಮಱೆದ ನಂದನಲಕ್ಷ್ಮಿಯ ವಕ್ತ್ರಮುಕ್ತನಿ
ಶ್ವಾಸಮೆನಿಪ್ಪ
ತೆಂಕಣೆಲರೆತ್ತುವ ತನ್ನ ಬಿಭಿನ್ನ ಕುಟ್ಮಳಾ
ಗ್ರಾಸವಗಂಧದಿಂ
ಕಳಿಯೆ ಸೊರ್ಕಿಸಿತೀ ಜಗಮಂ ಸುಗಂಧನಿ
ಶ್ವಾಸಿತಕೌಸುಮಾಸವಕುಳಂ
ವಕುಳಂ ಮುಕುಳಂ ವಸಂತದೊಳ್       ೧೧೭

ಪುದಿದ ಪರಾಗಮಂ ಪರಿಪಿಯುಂ ಪೊರೆಯೆತ್ತಿಯುಮೊತ್ತಿ ಪೊನ್ನ
ಣ್ಣದ
ನವಕರ್ಣಿಕಾರಕುಸುಮಕ್ಕೆಱಗಿರ್ದ ಮದಾಳಿ ಕಂಪುಗಾ
ಣದೆ
ಕೞಿದತ್ತು ಪೆಣ್ಣ ಪೊಸ ರೂಪಿನ ಪಾಪೆಗೆ ಪಾಸಿ ಬಿರ್ದ
ೞ್ದೊದವಿಸಿದಿಂಪುಗಾಣದೞಲಿಂ
ಪೆಱಪಿಂಗುವ ಕೇಳನಂದದಿಂ    ೧೧೮

ಎಂಬ ಪೊಗೞ್ತೆಗಳುಂಬಮಾಗಿ –

ವಿಕಸತ್ಪುಷ್ಪಾಟ್ಟಹಾಸಂ ಸ್ಮಿತಕುಸುಮರಜೋಭಸ್ಮ ವಿಭ್ರಾಜಿ ಮಾದ್ಯ
ತ್ಪಿಕನಾದಂ
ಭೃಂಗಸಿದ್ಧಾಂಜನರಸಘುಟಿಕಂ ಪಲ್ಲವೋದ್ಯಜ್ಜಟಂ
ಯ್ಯ
ಕಪಾಲಂ ಚಂದ್ರಬಿಂಬಂ ತನಗೆನೆ ಜಗತೀಚಕ್ರಮಂ ಚೈತ್ರಕಾಪಾ
ಲಿಕನೆಂಬಂ
ಬಂದದೇಂ ಮೋಹಿಸಿದನೊ ಮಧುಬಿಂದೂದ್ವ ಮದ್ಗಂಧವಾಹಂ        ೧೧೯

ಅಂತು ಮದನದಹನಕ್ಕುದ್ದೀಪನಮಾಗಿ ಬಂದ ಬಸಂತದೊಳ್ ಕೋಗಿಲೆಯ ಸರಮಂ ಕೇಳಲಾಱದಂತೆ ಪೂವಿನ ಕಂಪಂ ಕೊಳಲ್ ತಳೆಯದಂತೆ ಸುರಭಿಪವನನ ಸೋಂಕಂ ಸೈರಿಸದಂತೆ ಬಂದ ಬಸಂತನ ಬನಮಂ ನೋಡಲಂಜಿದಂತೆ ಮಾನವ ಮದನಂ ಮದನಮೂರ್ಚ್ಛಾಪರ ವಶತೆಯಿಂ ಪಗಲುಮಿರುಳುಂ ಕೞಿಯುತ್ತುಮಿರೆ –

ಅತ್ತಲಸವಸದೆ ವಾಸವ
ದತ್ತೆ
ಗುಣಪ್ರಿಯನ ರೂಪನಿರುಳುಂ ಪಗಲುಂ
ಚಿತ್ತದೊಳೆ
ಬಗೆದು ಭಾವಿಸಿ
ಚಿತ್ತಜತಾಪದೊಳೆ
ತರುಣಿ ಕಡುಬಡವಾದಳ್ ೧೨೦

ಅವೞಿಗಯವಾದ ವಿರಹದೊ
ಳವರ್ಗಳ
ಪಸೆಗಳೊಳೆ ಪೊರೞ್ವೞ್ವಳ್ ಭಾವೋ
ದ್ಭವನೆಡೆಯುಡುಗದೆ
ಕಾಯ್ದಿಸೆ
ತವದಂಬುಗುಡಾಗಿ
ಬಿರ್ದವೋಲ್ ಬಸವೞಿದಳ್       ೧೨೧

ನಾಟುವ ನನೆಗಣೆ ಚಿತ್ತಮ
ನಾಟಮಿಟಂಬರಿಸಿ
ನೆನೆಹದಿಂ ಪೊಸವೇಟಂ
ಕೋಟಿ
ತೆಱನಾಗೆ ಕಾಮಿನಿ
ಬೇಟದ
ಕಥೆಗಳನೆ ಕೇಳಲೞ್ತಿಗೆಯಾದಳ್     ೧೨೨

ಅಗಿವೆರ್ದೆಯೊಳಿಡಿದ ನನೆಯಂ
ಬುಗಳಿಡಿದವೊಲುಗಿದು
ಬಗೆದು ಬಗೆಯದೆ ಬಿಸುಪಂ
ಮೊಗಸೆ
ಮಱಿದುಂಬಿ ಮಿಗೆ
ಮ್ಮಗೆ
ಸುಯ್ಗಳ ಕುಡಿ ನಿಮಿರ್ಕೆಗೊಂಡುವು ವಧುವಾ    ೧೨೩

ಕಾಮನೆ ಕೃತಾಂತನೊಪ್ಪುವ
ಕೌಮುದಿಯೆ
ಕನಲ್ವ ಬಿಸುವಿಸಿಲ್ ನಿದ್ರೆಯೆ ಚಿಂ
ತಾಮಣಿ
ಚಿಂತೆಯೆ ಸಖಿಯಾ
ಯ್ತಾಮಹಿಳೆಗೆ
ಮನದೊಳಾಗೆ ಮಾನವಮದನಂ       ೧೨೪

ಅಸಿಯಳ ಸಣ್ಣನಪ್ಪ ನಡುವೊಪ್ಪುವಿನಂ ಮಿಗೆ ಸಣ್ಣಮಾಗೆ ಬೆ
ಳ್ಪೆಸೆಯೆ
ಮುಖೇಂದುಮಂಡಳಕೆ ಮೆಯ್ ಮಱುಗುತ್ತಿರೆ ಚಿತ್ತಜಾಗ್ನಿ
ಳ್ಳಿಸೆ
ಬಲಿದಂತೆ ಕರ್ಕಶಕುಚಂ ಬಡವಾಗದೆ ತಾನೆ ತೋಱೆ ಬೇ
ಱಸದಳಮಾಯ್ತು
ಚೆಲ್ವು ಕಮಳಾಸ್ಯೆಗೆ ಕಾಮಕಳಾವತಾರದೊಳ್         ೧೨೫

ಪೊಸತಳಿರಿಂದೆ ಬೀಸಿ ಕಳೆದಂತಿರೆ ಕಾಂತೆಯ ಕಾಯಕಾಂತಿಯಂ
ಬಿಸುಡೆ
ಪಸುರ್ಪು ಸೂಸಿ ಮಳಯೋದ್ಭವಮಂ ಸಲೆ ಪೂವಿನೊಳ್ ಪೊರ
ಳ್ದಸದಳಮಾಗೆ
ಮಾಡಿದಮೊಲುಜ್ವಳಮಪ್ಪೆಳವೆಳ್ಪು ಪೊರ್ದೆ ಮೆ
ಯ್ಮಸೆದಸಮಾಸ್ತ್ರನೊಪ್ಪುವಸಿಯಂತಸಿಯಾದುದನಂಗತಾಪದಿಂ
         ೧೨೬

ಕದಪಿನೊಳಿಟ್ಟ ಕೆಯ್ಯ ಪೊಸ ಪಚ್ಚೆಯನಂಗನ ಪೊಯ್ದ ಬಾಸುಱಂ
ದದಿನಿರೆ
ಪೂವಿನೊಳ್ ಪೊರಳೆ ಪತ್ತಿದ ಪೂಗಳೆ ಕೊಂಡ ಕಾಮಬಾ
ಣದ
ದೊರೆಯಾಗೆ ಮೆಯ್ಯ ಮಳಯೋದ್ಭವದಣ್ಪುಗಳೇಱ ಬಾಯೊಳಿ
ಕ್ಕಿದ
ಕವಳಂಬೊಲಾಗೆ ಲಲಿತಾಂಗಿ ಮೞಲ್ವಳನಂಗತಾಪದಿಂ   ೧೨೭

ಹಾರಮೆ ಭೂಷಣಂ ಮಳಯಜಾತಮೆ ಮೆಯ್ಗೆಸೆವಣ್ಪು ಸಾರಕ
ರ್ಪೂರಮೆ
ತಂಬುಲಂ ತಳಿರ ಜೊಂಪಮೆ ಬಾೞ್ವನೆ ಕಲ್ಪನಾಮೃತಾ
ಹಾರಮೆ
ಜೀವನಂ ಸಲಿಲಕೇಳಿಯೆ ಕೇಳಿ ನವಪ್ರವಾಳಸಂ
ಸ್ತಾರಮೆ
ಸಜ್ಜೆಯಾಯ್ತು ತರಳಾಕ್ಷಿಗೆ ತದ್ವಿರಹಾತಿರೇಕದೊಳ್    ೧೨೮

ಸಕೃದಾಯಾತಾರ್ಧನಿದ್ರಂ ಕ್ಷಣಮುಕುಳಿತನೇತ್ರೋತ್ಪಳಂ ನಿರ್ಣಿಮೇಷಾ
ಧಿಕಶೂನ್ಯಾಳೋಕಮಪ್ರಸ್ತುತಪರಿಮಿತವಾಚಂ
ವೃಥೋತ್ತಾನಯಾನೋ
ತ್ಸುಕುಚಿತ್ತಂ
ಮೂಕವೀಣಾಪ್ರಯತದರಶಿರಃಕಂಪನಂ ದೂರವಿಚ್ಛಿ
ನ್ನಕಥಾಹೂಂಕಾರಮೇಂ
ಶೋಭಿಸಿದುದೊ ತರುಣೀಚೇಷ್ಟಿತಂ ಮೋಹಮುಗ್ಧಂ      ೧೨೯

ಬಿಸುಸುಯ್ ಮೆಯ್ವೆರ್ಚೆಯುಂ ಕಂದಿರದಧರಲಸತ್ಪಲ್ಲವಂ ಕಾಯ್ದ ಕಣ್ಣೀ
ರೆಸಱೊಳ್
ತುಳ್ಕಾಡೆಯುಂ ಬಾಡದ ನಯನಯುಗೇಂದೀವರಂ ಚಿತ್ತಜಾಗ್ನಿ
ಪ್ರಸರಂ
ತಳ್ತೞ್ವೆಯುಂ ಸೀಯದ ಗುರುಕುಚಕೋಕದ್ವಯಂ ಶೋಭಿಕುಂ ಸೂ
ಚಿಸುವಂತಾ
ಕಾಮಿನೀದುರ್ಧರವಿರಹತಪಃಪ್ರೌಢಸಾಮರ್ಥ್ಯದುರ್ಬಂ     ೧೩೦

ಮೊಲೆಗಳೊಳಿಕ್ಕಲಬ್ಜದ ವಿಶಾಳದಳಂಗಳನಾಳ್ದು ನೀಳ್ದ
ಣ್ಮಲರ್ಗಳೊಳೊತ್ತಲುತ್ಪಳದ
ನಿಟ್ಟೆಸೞಂ ಕುಚಕುಂಭಮಧ್ಯದೊಳ್
ಸಲಿಸಲೆ
ಶಂಕೆಯಿಂದಸಿಯ ಬಾಳಮೃಣಾಳಮನಾದ ದೀರ್ಘಿಕಾ
ಜಲದೊಳಮೆಯ್ದೆ
ಪೊಕ್ಕರಸಿ ಕಾಣದೆ ಕಾಯ್ದುದು ತತ್ಸಖೀಜನಂ  ೧೩೧

ನೀರೂಡುವಂತೆ ಮದನವ
ಕೂರಸಿಯಂ
ಚುಯ್ಯೆನುತ್ತೆ ಪೊಗೆ ಪಾಯ್ವಿನೆಗಂ
ನೀರೇಜವನದೊಳರ್ದುವ

ನೋರಂತಿರೆ
ವಿರಹದಹನದಗ್ಧೆಯರವಳಂ     ೧೩೨

ಸವನಂ ಸವನಂ ಕೃತಕಂ
ಜವನಂ
ಜವನಂತೆ ವನಿತೆಗಾಯ್ತು ಕೊಲಲ್
ರ್ಪವನಂ
ಪವನಂ ಪೋಲ್ತುದು
ದವನಂ
ದವನಂತೆ ವಿಷಮಮಾಯ್ತನವರತಂ ೧೩೩

ಸುರಿವುವು ಕಣ್ಬನಿಗಳ್ ಪುಗೆ
ಪರಮಾಣುವಿನನಿತು
ರಜಮುಮವಳಶ್ರುಜಳಂ
ಸುರಿಪುದು
ಚಿತ್ರಮೆ ಸುೞಿಯು
ತ್ತಿರೆ
ಪೊಕ್ಕಭಿಮಾನಮಂದರಂ ಕಣ್ಬೊಣರೊಳ್         ೧೩೪

ಅಂತಳವಿಗೞಿದ ಲೀಲಾವತಿಯ ವಿರಹಮುಮನಸಕಳಿದ ವಸಂತಸಮಯಮುಮಂ ಕಂಡು ಕಾಳೋರಗಂ ಕೊಂಡವರ್ಗೆ ನಂಜಿನ ಮೞಿ ಕೊಂಡಂತಾದುದೆಂದು ಭಯಂ ಗೊಂಡು ವಾಸವದತ್ತೆಯನಱಿಯಲೀಯದೆ ಕಳಾವತಿಯೇಕಾಂತದೊಳ್ ಪೇೞ್ವುದುಮಂತೆಗೆಯ್ವೆನೆಂದು ವನವನಂದಪ್ಪದೆ ಚೂತಪ್ರಿಯಂ ಮೊದಲಾಗಿ ಗಿಳಿಗಳುಮಂ ಚೂತಪ್ರಿಯೆ ಮೊದಲಾದ ತುಂಬಿಗಳುಮಂ ವನವಿಪಂಚಿ ಮೊದಲಾದ ಕೋಗಿಲೆಗಳುಮಂ ಆಗಳೆ ಕರೆದು ಕಳಿಪಿ –

ಅರಗಿಳಿ ಕರ್ಚಿ ಪಾಱಿದೊಡೆ ಕೆಂದಳಿರಂ ಮಱಿದುಂಬಿ ಪೂವಿನೊಳ್
ಪೊರೆದೊಡೆ
ಕೋಕಿಳಂ ಕಳಿಕೆಗರ್ಚಿ ಕಳಸ್ವನದಿಂದಮೊರ್ಮೆಯುಂ
ಕರೆದೊಡೆ
ತಳ್ತು ಬಂದ ತಳಿರುಯ್ಯಲನೇಱಿ ವಸಂತರಾಗದಿಂ
ತರುಣಿಯರಾಡಿ
ಪಾಡಿದೊಡೆ ಪೂಸಿದೊಡಂ ಹರಿಚಂದನಂಗಳಂ ೧೩೫

ಪೂವಿನ ಕಂಪನೆತ್ತಿದೊಡೆ ತೆಂಕಣ ಗಾಳಿ ವಿಳಾಸಿನೀಜನಂ
ಮಾವಿನ
ಗೊಂಚಲಂ ಕಿವಿಯೊಳಿಟ್ಟೊಡೆ ಬಂದುದು ಸುಗ್ಗಿ ಬೆಂದವಂ
ಸಾವಿನಮೆಚ್ಚಪಂ
ಬಿರಯಿಯಂ ಸ್ಮರನೆಂದೊಡೆ ದಂಡಮುಂಟು ಲೀ
ಲಾವತಿಯಾಣೆಯೆಂದು
ಕಳಭಾಷಿಣಿ ಸಾಱಿಸಿದಳ್ ಪ್ರಮೋದದಿಂ          ೧೩೬

ಅಂತು ಸಾಱೆಯುಂ ಸಾಱಿ ಕೊಲ್ವ ಮಾವುರಿಗಂಗೆ ದೋಷಮಿಲ್ಲೆಂಬಂತೆ ಜಯವೊಡೆದಿಸುವ ವಿಷಮಶರನ ಶರಪ್ರಹಾರದಿಂ ಕಿಡಿವಿಟ್ಟಂತೆಯುಂ, ಸಂಕಲ್ಪಕಾಷ್ಠದಿಂ ಪೊತ್ತಿದಂತೆಯುಂ, ಚಿಂತಾನಳನಿನುರಿದಂತೆಯುಂ, ಅರಿದೆನಿಸಿ ಸಖೀಜನಂ ಮಾೞ್ಪ ಶಿಶಿರೋಪಚಾರದಿಂದಮುಮಾಱದೆ ಮೀಱಿ ವಿಷವಹ್ನಿಯಂತಿರಾವರಿಸುವ ವಿರಹ ವಹ್ನಿಯಿಂ ಕಿಚ್ಚಿನೊಳ್ ಬಿರ್ದ ಕೀಡಿಯಂತೆ ಕಱಗಿ ಕೊರಗುವ ಕಾಂತೆಯನೇಕಾಂತ ದೊಳ್ ಕಳಾವತಿಯಿಂತೆಂದಳ್ –

ಇಂಗಿತಮಱಿವರ್ ಬಲ್ಲರ್
ಭಂಗಿಗಳಂ
ಕೆಳದಿ ನಿನಗೆ ಪಿರಿದುಂ ಕೂರ್ಪರ್
ಪಿಂಗಿಸಿದಪರೆಂತುಂ
ನಿ
ನ್ನಂಗಜವೇದನೆಯನೀ
ನಿಜಪ್ರಿಯಸಖಿಯರ್  ೧೩೭

ಆದೊಡಮೊಂದನೆಂಬೆನೆ ಸಖೀ ಬಱಿದೇಕೆ ಸಖೀಜನಕ್ಕೆ ಪಂ
ಗಾದಪೆಯಾಗಾದಾರ
ದೆಸೆಯಿಂದಮುಮಪ್ಪೊಡೆ ದೈವಯೋಗದಿಂ
ದಾದಪುದಾರಿದಂ
ಮೊದಲೊಳಂ ಸಮಕಟ್ಟಿದರಿಲ್ಲಿ ಸಂದೆಗಂ
ಗೋದಿರವೇಡ
ದೈವಬಲಮುಳ್ಳವರ್ಗಾಗದುದುಂಟೆ ಲೋಕದೊಳ್        ೧೩೮

ಅನುಪಮಕೀರ್ತಿಕಾಂತನ ಮನೋಹರರೂಪನ ಮಾನಮೇರುಶೈ
ಲನ
ಕಮನೀಯನಾಯಕನ ಸಜ್ಜನಸೇವ್ಯನ ಸೂಕ್ತಿಕರ್ಣಪೂ
ರನ
ಸಹಜಪ್ರಮೋದನ ಕಳಾರ್ಣವತೀರ್ಣನ ಕೋಮಳಸ್ವಭಾ
ವನ
ಕವಿರಾಜಮಲ್ಲದ ವಿನೀತನ ನೂತನದಾನಧೀರನಾ         ೧೩೯

ಇದು ವಿದಿತ ವಿವಿಧ ಪ್ರಬಂಧ ವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಳೋಚ್ಚಳಿತ ನಖಮಯೂಖ ಮಂದಾಕಿನೀ ಮಜ್ಜನಾಸಕ್ತ ಸಂತತೋತ್ಸಿಕ್ತ ದಾನಾಮೋದಮುದಿತ ಬುಧಮಧುಕರ ಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತೀ ಮಹಾಪ್ರಬಂಧದೊಳ್ ವಸಂತಸಮಯ ವರ್ಣನಂ

ನವಮಾಶ್ವಾಸಂ