ಲಲನೆಯರಿನ್ನೆಂದುಂ
ಪ್ಪಲಾಗ
ನೀನೆಮ್ಮ ಕೆಳದಿಗೆಂದಲರಂಬಿಂ
ತಲೆಯೊಳ್
ಕೆಯ್ಯಿಡುವಂತೆವೊ
ಲಲರಂಬಿಂದಬ್ಜಮುಖಿಗೆ
ನೆಯ್ಯೇಱಿಸಿದರ್    ೫೧

ಅದಲ್ಲದೆಯುಂ –

ಏಱಿಸಿ ವೇಣಿಯೊಳ್ ಮುಡಿದ ಮನ್ನಣೆಗಂಬುಗಳಾಗಿ ಕೊಂಡು ಕೈ
ದೋಱಿದ ಪೂಗಳಿಂ ಸತಿಯ ಕಾಲ್ಗೆಱಗಿರ್ಪವೊಲೊಪ್ಪೆ ಕಾಲ್ಗೆ ಮು
ನ್ನೇಱಿಸಿ ಪೂವಿನಂಬಿನೊಳೆ ಪೆರ್ಮೊಲೆಯೊಳ್ ತಲೆಯೊಳ್ ಬೞಿಕ್ಕೆ ನೆ
ಯ್ಯೇಱಿಸಿ ದೋರ್ಲತೆಗೇಱಿಸೆ ಕರ್ಬಿನ ಬಿಲ್ಲನಂಗಜಂ  ೫೨

ಅಲ್ಲಿಂ ಬೞಿಯಂ –

ಜಲದೊಳ್ ಲಾವಣ್ಯಪುಣ್ಯಾಂಬುವನೆ ಬೆರಸುತಂ ಲೋಚನಚ್ಛಾಯೆಯಿಂ ನೈ
ದಿಲ
ಪೂವಂನಾಂಟಿಸುತ್ತುಂ ಶಶಿಮುಖಿ ಪೊಸನೀರ್ಗೊಂಡದೊಳ್ ಮಿಂದಳಾಗಳ್
ಕೊಳನಂ
ಸುತ್ತಿರ್ದಮಾಧ್ಯದ್ಗಜಗಮನೆಯರಾ ಕೊಂಡದೊಳ್ ಕೂಡೆ ಬಿಂಬ
ಚ್ಛಲದಿಂ
ಸೌಭಾಗ್ಯರಾಗಂ ಬಯಸಿಸತಿಯ ಮಿನ್ನೀರೊಳಿರ್ದಂತಿರ್ದರ್     ೫೩

ಅಲ್ಲಿಂ ಬೞಿಯಮಮತೀರ್ಥೋದಕಪೂರ್ಣಸ್ವರ್ಣಕುಂಭಂಗಳನೆತ್ತಿ –

ಎಳಮೀನಂತಿರ್ಪ ಕಣ್ ಮೆಯ್ಗರೆಯದೆ ತೆರೆಯಂತಪ್ಪ ತೋಳ್ ತುಂಬಿಯಂತಿ
ರ್ಪಳಕಂ
ನೀರ್ವಕ್ಕಿಯಂತಿರ್ಪಲಘುಕುಚಭರಂ ಪದ್ಮದಂತಿರ್ಪ ವಕ್ತ್ರಂ
ತಿಳಿನೀರಂತಿರ್ಪ
ತೆಳ್ಮೆಯ್ವೆಳಗು ಪೊಳೆಯೆ ಲಾವಣ್ಯಮಂ ಲೀಲೆಯಿಂ ಪೂ
ಗೊಳನಂ
ಪೋಲ್ತಂದು ಲೀಲಾವತಿಗೆ ತರುಣಿಯರ್ ಮಜ್ಜನಂಮಾಡುತಿರ್ದರ್       ೫೪

ಪಳಿಕಿನ ಪೀಠದೊಳುಜ್ವಳ
ಮಳಯಜರಸದಿಂದಮಾಕೆ
ಮಿಂದಳ್ ಮುಳಿಸಿಂ
ದಳುರ್ದ
ವಿಧುಬಿಂಬಮಂ ಮೆ
ಟ್ಟಿ
ಲಲನೆ ಬೆಳ್ದಿಂಗಳಿಂದೆ ಮೀವಮೊಲಿರ್ದಳ್ ೫೫

ಅಲ್ಲಿಂಬೞಿಯಮನೇಕರತ್ನಗರ್ಭಾಂಭಃಪೂರ್ಣ ಪುಣ್ಯ ಕಲಧೌತಕಲಶಂಗಳಂಕೆಂದಳಂಗ ಳೊಳಾಂತುಕೊಂಡು –

ಮಸುಳ್ದ ಮೊಗಕ್ಕೆ ಮಾಸಿದಳಕಕ್ಕೆ ಬೆಳರ್ತಧರಕ್ಕೆ ಬಣ್ಣಮಂ
ಪೊಸೆಯಿಸುವಂತೆ
ಮೌಕ್ತಿಕದ ನೀಲದ ಕೆಂಬರಲುಳ್ಳ ಬಣ್ಣಮಂ
ಬಿಸಿಯುದಕಂಗಳಿಂ
ಮಿಸಿಸಿದರ್ ಮದನಾತುರೆಯಂ ಲತಾಂಗಿಯಂ
ಮಿಸಿಸುವರಂತೆ
ಗಾಂಗಜಳಯಾಮುನಜೀವನಶೋಣವಾರಿಯಿಂ         ೫೬

ಅಂತು ಕುಸುಮಬಾಣಪ್ರಣೀತೆಯಂ ಮಂಗಳಮಜ್ಜನಂಬುಗಿಸಿ ಬೇಗಮಾಕೆಯೊಳೆ ಕೈಗೈಯೊಳೆ ಕೈಗೆಯ್ಸುವಾಗಳ್ –

ತೊಳಗುವುಗುರಿಂದೆ ತೆಗೆತೆಗೆ
ದೆಳಗರ್ಪಿನ
ಪತ್ತುವಿಡಿದ ಕಂಪಿನ ಬಿೞ್ತಂ
ತಳೆವಂತಿರೆ
ತಲೆನವಿರೊಳ್
ತಳೆದು
ತಳಂ ತೀವೆ ಪಿಡಿದು ಪುಡಿಗತ್ತುರಿಯಂ         ೫೭

ಪಿಡಿವೊಡೆ ತಕ್ಕೆಗಮಧಿಕಂ
ಪಿಡಿದೇಂ
ಸುತ್ತುವೊಡೆ ತೋಳ್ಗಮಗ್ಗಳಮಳಕಂ
ಪಿಡಿದುಂ
ಸುತ್ತಿಯುಮೇನಳ
ವಡೆ
ಮುಡಿಯಿಪುದರಿದೆನುತ್ತೆ ಸಖಿ ಚಿಂತಿಸಿದಳ್       ೫೮

ಅಂತಾಕೆಯ ಮನಮಱಿದು ತೊಲಗು ತೊಲಗೆಂದು ಮತ್ತಮೊರ್ವಳ್ ತಮಾಳದ ತಳಿರಂ ತಳಿರ್ಗೊಂಬಿನಿಂ ತೞ್ಕೈಸುವಶೋಕಲತೆಯಂತೆ ನಳಿ ತೋಳ್ಗಳಿಂ ಕೇಶಪಾಶ ಮನಳವಡಿಸಿ ಪಿಡಿದು –

ಮುಡಿಯಿಸಿ ನನೆಯಂ ತೀವಿದ
ಳಿಡಿದಂಗನೆ
ತೀವುವಂತನಂಗನ ದೊಣೆಯಂ
ಮುಡಿಯೊಳ್
ಮಡಲ್ತ ಶೋಭೆಗೆ
ಮುಡಿಗವಿದಂತೆಱಗೆ
ತುಱುಗಿ ತುಂಬಿಯ ಮಱಿಗಳ್    ೫೯

ದಾವಣಿಗಟ್ಟಿದ ಮಧುಕರ
ಜೀವದನಕ್ಕಿಕ್ಕುವಂತೆ
ಮೇಪಂ ಸಖಿ ಲೀ
ಲಾವತಿಯ
ಪಂತಿಗುರುಳೊಳ್
ಪೂವಿನ
ಕೇಸರದ ರಜಮನೊರ್ವಳ್ ತಳಿದಳ್         ೬೦

ಅಱಿಯದೆ ಸಂಪಗೆವಂಡಂ
ಮಱಿದುಂಬಿಗಳುಂಡು
ಕಾಱುವಂತಿರೆ ಕೆಂಪಂ
ಕಱೆಯುತಿರೆ
ತೋರಗುರುಳೊಳ್
ತುಱುಗಿಟ್ಟಳ್
ತೊಳಪ ಚಿನ್ನಪೂಗಳನೊರ್ವಳ್         ೬೧

ಶಶಿಯಂ ಲಾವಣ್ಯಾಮೃತ
ರಸದಿಂ
ತೊಯ್ದಂತಪಾಂಗದಿಂದಿನಿಯನನೀ
ಕ್ಷಿಸಿ
ಬೆಮರ್ವ ವದನಚಂದ್ರನ
ನೊಸೆದೊರ್ವಳ್
ಚಂದ್ರಕವಳದಿಂದಂ ತೊಡೆದಳ್     ೬೨

ಅಲರ್ಗಣ್ಣೊಳಚ್ಚಿದಳ್
ಜ್ಜಲಮಂ
ಚಲತಾರನೇತ್ರೆ ರಾತ್ರಿ ವಿಕಾಸಂ
ತೊಲಗಿದಪುದೆಂದು
ಪೊಸನೆ
ಯ್ದಿಲಲರ್ಗೆ
ಕತ್ತಲೆಯ ಕಾಪನಿಡುವಂತೊರ್ವಳ್        ೬೩

ಮೊಗಮನೆಡೆಗೊಳ್ಳದಂತಾ
ಣೆಗುಡುವ
ಕುಸುಮಾಸ್ತ್ರ ಮಂತ್ರದೇವತೆ ಗೆಱೆಯಂ
ತೆಗೆವಂತೆ
ಕಣ್ಗೆ ನುಣ್ಗಾ
ಡಿಗೆಗುಡುಪಿಂ
ರೇಖೆಗುಡುವಳೇನೊಪ್ಪಿದಳೋ          ೬೪

ಪಕ್ಕದೊಳಿೞಿಪಿದಳಾಕೆ
ೞಿಕ್ಕಿನಿಯನನಾಕೆ
ನೋೞ್ಪ ನೋಟಂಗಳುಮಂ
ಲೆಕ್ಕಮಿಡಲ್ಕೆಡೆಗಾಣವೆ

ಲೆಕ್ಕಣಿಕೆಯನಿೞಿಪುವಂತೆ
ಕಾಡಿಗೆಗುಡುಪಂ   ೬೫

ಕಾಡಿಗೆಯನೆಚ್ಚು ಕಣ್ಣೊಳ್
ಕೂಡಿದ
ನಸುಗೆಂಪು ನಲ್ಲನಂ ಕಡೆಗಣ್ಣಿಂ
ನೋಡುವೆಡೆಯೊಳೆರ್ದೆಯಂ
ಕಡಿ
ಯಾಡಿದ
ಕಡುಪಿಂಗೆ ಕುಪಿತೆಯಾದವೊಲೆಸಗುಂ       ೬೬

ನೀಲದ ತಲೆದುಡುಗೆಯ ನಡು
ವಾಲಂಬಿಪ
ತೋರಮುತ್ತಿದೆನೆ ಮಳಯಜದಿಂ
ಬಾಲಕಿ
ತಿಲಕಮನಿಟ್ಟಳ್
ಬಾಲಭ್ರಮರಕದಿನೆಸೆವ
ಕಾಂತೆಯ ನೊಸಲೊಳ್      ೬೭

ಮತ್ತಮೊರ್ವಳ್ ಕಿಸುಗಂಪನೂಡಿ ಸಂಪಗೆಯ ಬಂಡನುರುಳಿಮಾಡಿಯಾರಿಸಿದಂತಿಂಗಲೀಕಮ ನೂಡಿದಂತೆ ಕಂಪಿನ ಕಣಿಯನೊಡೆದಂತೆ ಕೆಂಪಿನ ಕಂಪಿನ ಮಂಜರಿಯಂತೆ ಮಂಜರಿಸಿ ಮಗಮಗಿಸಿ ಮರಿಪುಗೊಂಡು ಸೊಬಗು ಕೊಂಬುಗೊಂಡರಿಸಿನದ ಕೊಂಬುಗಳನಂ ಸೊಪ್ಪುಗುಟ್ಟಿ ಸೋಗೆಯೊಳ್ ನೂಂಕಿ ಮೂರ್ಚ್ಛಿಸಿದ ಕಂಪನೆತ್ತುವಂತೆ ಪಸಿಯರಿಸಿನಮಂ ಪಿಡಿಕೊಂಡು ಕರ್ವಾಳಮಂ ಪಿೞಿದುಕೊಂಡ ರಸಮುಮಂ ತಳಿದು ತಳದಿಂದೊತ್ತಿ ಕರಕಾಮೋರಗಯುಗದಿಂ ಪಿಡಿಪಡೆದಂತೆ ಪಸುರೇಱೆ ಲೋಚನಸುಧಾಸೇಕದಿಂ ವಿಷಂ ಪರೆದಂತೆ ಕಂಪು ತಿಳಿದ ಕುಂದಂ ಕೆಂದಳಂಗಳಿಂ ದೌಂಕಿ ಪಸುರ್ಮಣಿಯಸುವೆಯೊಳು –

ಒಲೆದಲುಗಿದೊಡಲಘುಸ್ತನ
ಕಲಶಂ
ತೀವಿರ್ದ ವಿಮಲಲಾವಣ್ಯಜಳಂ
ಜಲಜಲನೊಸರ್ದಪುದೆನೆ
ಮೊಲೆ
ಗೆಲದೊಲ್
ಬೆಮರೊಗೆಯೆ ತರುಣಿಯರಿಸಿನವರೆದಳ್  ೬೮

ತಿಮಿರ್ವರಿಸಿನಮೇನುದಿರ್ದುದೊ
ರಮಣಯ
ತನು ಚಂಪಕೋಪಮಂ ಕೊಂಡುಂಗೆ
ಲ್ಲಮನದಱ
ಕೆಂಪುಮಂ ಕಂ
ಪುಮನೀೞ್ಕುಳಿಗೊಂಡು
ನೂಂಕಿ ಕಳೆದವೊಲಾಗಳ್ಟ     ೬೯

ಕಳೆದಿಕ್ಕಲೆಂದು ಕೇಡಿನ
ಕೆಳೆಯಂ
ಕುಡುಮಿಂಚನಮರ್ದನೂಡುವ ತೆಱದಿಂ
ತೊಳಗಿ
ಪೊಳೆವವಳ ಮೆಯ್ಯೊಳ್
ಮಳಯಜರಸದಿಂದಮಣ್ಪನಿಕ್ಕಿದಳೊರ್ವಳ್
  ೭೦

ಅದಲ್ಲದೆಯುಂ –

ಸ್ಮರಚಿತ್ರಮನಖಿಳನಖಾಂ
ಕುರತೂಲಿಕೆಯಿಂದೆ
ವಲ್ಲಭಂ ಬರೆದಪನೆಂ
ದರಸಿಯ
ಕುಚದೊಳ್ ತೊಡೆವಂ
ತಿರೆ
ಶಂಕಮನಾಕೆ ಪೂಸಿದಳ್ ಮಲಯಜಮಂ         ೭೧

ಮತ್ತಮೊರ್ವಳ್ ಬಾಲೆಯ ಪಾಲೆಯೊಳಲಂಕರಿಸಿ –

ರಮಣಿಯ ಹೃದಯಸ್ಥಿತ
ವಾರಿಯೊಳಂಗಜಗಜೇಂದ್ರಮಂ
ಕಟ್ಟುವ
ಲ್ಹಾರವರತ್ರೆಯಿದೆನೆ
ಮಣಿ
ಹಾರಂ
ಮುಖಕಮಲನಾಳಮೆನೆ ಸೊಗಯಿಸುಗುಂ     ೭೨

ಮತ್ತಮೊರ್ವಳ್ ಕಂಪಿಂಗೆ ಪಾಯ್ದ ಪಱಮೆಯ ಗಱಿ ತಾಗೆ ತಱ ತುಱುಗೆಪರೆದ ರೇಖೆಯಂ ನಖಾಗ್ರದಿಂ ತೊಡೆದು ತಿರ್ದಿ ಜಗಮಂ ಕಡೆಗಣಿಸಿ ಗೆಲ್ದ ಕಡೆಗಣ್ಗಳ ಗೆಲ್ಲಮಂ ಶಾಸನಂಬರೆವಂತೆ ಬರೆಯೆ –

ನಯನಾಗ್ನೇಯಾಸ್ತ್ರಮಂ ಪೆರ್ಮುಡಿಯವೞಯಿಗೆಯಂ ಭ್ರೂಲತಾಚಾಪಮಂ ದಿ
ಗ್ಜಯಜಾತೋತ್ಸಾಹದಿಂದರ್ಚಿಸೆ
ಮಣಿಸೊಡರೆಂಬಂತೆ ಬಿಂಬಾಧರಂ ಕೈ
ಗೆಯೆ
ಚೆಲ್ವಿಂ ದರ್ಭಶಯ್ಯಾಗ್ರದೊಳೊಱಗಿದ ಕಾಮಂಬೊಲಿಂಬಾದುರಾ ರಾ
ಮೆಯ
ರೋಮಾಂಚಂಗಳಂ ಪೊತ್ತೆಲೆಗದಪಿನ ಕಸ್ತೂರಿಕಾ ಪತ್ರಭಂಗಂ    ೭೩

ಅದಂತಲ್ಲದೆಯುಂ –

ಜನರಂಜನಂಗೆ ಚಳಲೋ
ಚನಯುಗಳಂ
ಕಾಣಲೊಡನೆ ಸೋಲ್ತಯಿಸಿದ ಶಾ
ಸನಮಂ
ಬರೆದಂತೆ ಕದಂ
ಪಿನ
ಮೃಗಮದಪತ್ರಭಂಗಮೊಪ್ಪಿದುದವಳಾ  ೭೪

ಪಪ್ಪುಕಮಪ್ಪಂಗನೆಯ ತೊ
ಳಪ್ಪಡಿದಳಿರ್ಗೆಯ್ದೆ
ಸೋಲ್ತು ತಳಿರ್ಗಳ್ ಕೆಂಪಂ
ಕಪ್ಪಂಗುಡುವವೊಲೂಡಿದ

ಳೊಪ್ಪಿರೆ
ಕೆಂದಳದೊಳೞ್ದಿಕೊಂಡಲತೆಗೆಯಂ

ಕಡುಪಿಂ ರತಿಕಲಹದೊಳೊದೆ
ದೊಡೆ
ರಮಣನ ಮೆಯ್ಯ ಕಂಟಕಂಗಳ್ ತಳಮಂ
ನಡೆದಂತಿರಡಿಗೆ
ಕವಚಂ
ದುಡಿಪವೊಲಲತೆಗೆಯನೂಡುವವಳೆಸೆದಿರ್ದಳ್
        ೭೬

ಮತ್ತಮೊರ್ವಳ್ ಸೌಭಾಗ್ಯಮಂ ಬರಂಬಡೆಯಲ್ ಬಗೆದಂತಾ ಮನೋಜ ರಾಜ್ಯಾಧಿದೇವತೆಯ ರೂಪಲಕ್ಷ್ಮಿಯನಕ್ಷಿಪ್ರಭಾಪುಷ್ಪಂಗಳಿಂ ಪೂಜಿಸಿ –

ವಿಕಚಾನನೆಯರ್ಚಿಸಿದಳ್
ಪ್ರಕೋಷ್ಠಮಂ
ರತ್ನವಲಯದಿಂ ಬೆರಲಂ ಮು
ದ್ರಿಕೆಯಿಂ
ನಿತಂಬಮಂ ಕನ
ಕಕಾಂಚಿಯಿಂ
ಪಾದಪದ್ಮಮಂ ನೂಪುರದಿಂ   ೭೭

ಬಾಗಿರೆ ಪತಿಯಳಕಮನಿಂ
ಬಾಗಿರೆ
ಮುಳಿಸಾಱುವನ್ನೆಗಂ ಸಿಲ್ಕಿಸುಗೀ
ಪಾಗಡೆಯೆಂದೊದವಿರೆ
ಪೆಂ
ಪಾಗಡೆ
ಪದಪದ್ಮದೊಳ್ ಪೆಱಳ್ ಪದಮಿಟ್ಟಳ್         ೭೮

ಅಂಗೀಕೃತಮಳಜಯಸ
ರ್ವಾಂಗಿ
ಶುಚಿಸ್ಮಿತಮನೋಜ್ಞೆದುಗುಲಮನುಟ್ಟಾ
ಭೃಂಗಚಳಾಳಕಿ
ಪೊಸವೆ
ಳ್ದಿಂಗಳನುತ್ಪಲಿನಿಯೞ್ತಿಗುಟ್ಟವೊಲೆಸೆದಳ್
   ೭೯

ಅಲ್ಲುಗುವಧರಾಮೃತಮೆನೆ
ಫುಲ್ಲಾಸ್ಯೆಯ
ನಗೆಯ ತಂದಲೆನೆ ಸುಲಿಪಲ್ಗಳ್
ಪಲ್ಲಚ್ಛವಿ
ಪದ್ಮಂ ಪೊಸ
ಮಲ್ಲಿಗೆಯಂ
ಪೂತುದೆನೆ ಕರಂ ಸೊಗಯಿಸಿದಳ್       ೮೦

ಸ್ಮರಸಾಧಕನಾರಾಧಿಸೆ
ಪಿರಿದುಂ
ಪ್ರತ್ಯಕ್ಷೆಯಾದಳೋ ಭುವನವಶೀ
ಕರಣಾಧಿದೇವತೆಯೆನಲ್

ನಿರುಪಮ
ರೂಪಾಂಗಿ ಪಸದನಂಗೊಂಡೆಸೆದಳ್       ೮೧

ಅಂತತಿಸಂಭ್ರಮದಿನಾ ವಿಭ್ರಮವತಿಯರ್ ಅತಿಶಯದಿಂ ಕ್ರಮಕ್ರಮಮೆನ್ನ ದೊಸಗೆಮರುಳ್ಗೊಂಡು ಪಸದನಂಗೊಳಿಸೆ ಮತ್ತವೊರ್ವಳ್ –

ಕೆಯ್ತಮತನುವಿನ ಪತ್ತಿಯ
ಕೆಯ್ತಮನಮರ್ದಿಂಗೆ
ಸತಿಯ ತುಟಿದಳಿರೆಂದುಮ
ಬಯ್ತಲೆಯಿದು
ಪರಿಕಾಲಂ
ಬಯ್ತಲೆ
ನಿಮಿರ್ವನಕ ನೀನು ಕವಿ ಕವಿಧವಳಾ ೮೨

ಎಂದುಮಾನಕೆಯ ನವಯೌವನರೂಪಾತಿಶಯಮಂ ಪರಿಭಾವಿಸಿ –

ಕುವಲಯ ಗರ್ಭಕೋಮಲೆಯನೀಕೆಯನೊಡ್ಡಿಸಲೆಂತು ಕೆಯ್ಗಳೆ
ರ್ದುವೊ
ಗುಱಿಪೂಡುವಾಗಳೆರ್ದೆಯೆಂ ಮಲರ್ದೀ ಮೊಲೆಗೊಂಡುಮೇಕೆ ಸೋ
ಲವೊ
ನಯನಂಗಳಿಕ್ಕಾವನ ಗಾಡಿಯನೊಯ್ದುರಿವಗ್ನಿಯಲ್ಲಿ ದೈ
ವವಶದಿನಕ್ಕ
ತಾಂ ದಿಟಕೆ ಚಿತ್ತಮುಮೇಕೆ ಬೆಂದುದೇ   ೮೩

ಎಂದು ಕಂದರ್ಪನಂ ನಿಂದಿಸಿ ಸುಂದರಿಯ ಕಟ್ಟಿದಿರೊಳ್ ಮುಖಚಂದ್ರಮನೊಳ್ ಚಂದ್ರಬಿಂಬಮಂ ಪಡಿಯಿಟ್ಟು ನೋೞ್ಪಂತೆ ಚಂದ್ರಕಾಂತ ದರ್ಪಣಮಂ ಪಿಡಿಯೆ –

ಸರಸಮನೋಹರನತ್ತಲೆ
ಪರಿದುದು ದರ್ಪಣದ ನುಣ್ಪಿನಿಂ ಜಾರಿದವೋಲ್
ತರುಣಿಯ ತರಳಕಟಾಕ್ಷಂ
ಸರಸಿಜಪರಿಮಳಕೆ ಪರಿವವೋಲಳಿಕಳಭಂ   ೮೪

ಪರಪುರುಷದರ್ಶನಕ್ಕೋ
ಸರಿಸುವುದಚ್ಚರಿಯೆ ತನತು ಗಾಡಿಯುಮಂ ನೋ
ಡಿರೆ ನೋಡದೆ ಪರಿದುದು ಕೇ
ಕರಲೋಚನಮಿನಿಯಿತ್ತಮಾ ಬಾಲಕಿಯಾ    ೮೫

ತೊಡವು ಮೊಗಕ್ಕೆ ರಾಗಮಧರಸ್ಫುರಿತಂ ಪೊಳವೆಳ್ಪ ಬಾಯ್ಗೆ ಬ
ಲ್ದೊಡವು ವಿಕಾಸವೊಳ್ದೊಡವು ಕಣ್ಮಲರ್ಗುತ್ಪುಲಕಾಳಿ ಮೆಯ್ಗೆ ಮೆ
ಯ್ದೊಡವೆಡೆಗೊಳ್ವಿದೇಂ ತೊಡವೆ ಕನ್ನಡಿಯೆನ್ನದೆ ನೋಱ್ಪೊಡೆಂದವಂ
ತುಡುವವೊಲಾಕೆ ಕನ್ನಡಿಯನೀಕ್ಷಿಸದೀಕ್ಷಿಸಿದಳ್ ಕುಮಾರನಂ    ೮೬

ವನಿತೆಯ ನೆೞಲೊಳಗಿರೆ ಲೋ
ಚನಚಂದ್ರಿಕೆಯಿಂದಮೊಸರ್ವ ಶಶಿಮಣಿಮುಕುರಂ
ನೆನೆಯಿಸಿತು ಹೃದಯಮಂ ಕಾ
ಮಿನಿ ಪುಗೆ ನಡೆ ನೋಡಿ ಸೋಲ್ತು ಬೆಮರ್ಪುದು ಪತಿಯಂ        ೮೭

ಅನ್ನೆಗಮಲ್ಲಿ ಮಲ್ಲಿಕಾಮೋದನುಂ ಸುರಸಿಂಧುವಿನೊಳ್ ನೊರೆಯನೊಟ್ಟಿ ಕೊಳ್ವೈರಾವತದಂತೆ ಸಿರಿಕಂಡದೊಳ್ಗಂಪನಿಕ್ಕಿ, ಬೆಳ್ಮುಗಿಲನುಟ್ಟ ಬೆಳ್ಳಿವೆಟ್ಟದಂತೆ ಬೆಳ್ಳುಂಬಟ್ಟೆಯನುಟ್ಟು, ತೋಳ್ಗೊಂಬುಗಳಂ ತೞ್ಕಿಸುವಂತೆ ಅರುಣಮಣಿಕಂಕಣಮನಿಕ್ಕಿ, ಜಯಲಕ್ಷ್ಮಿಗುಂಗುರಮನಿಕ್ಕುವಂತೆ ಕೞ್ತಲೆಯ ನುಂಗಿದ ನಕ್ಷತ್ರನಿೞಿಪ ನೀಲದುಂಗುರಮನಿಟ್ಟು ವೀರವನಿತೆಯೆಂಬ ಮದವಳ ಮದುವೆಯೊಳೊದವೆ ಪಾಯ್ದ ಪಸಿಯ ಸಸಿಯ ಪೊಸಜಾಗಂಗಳಂತೆಸೆಯೆ ಪಸುರ್ಮಣಿಯ ಕೇಯೂರಮಂ ಭುಜಸ್ತಂಭದೊಳವಲಂಬಿಸಿ, ಸೌಂದರ್ಯಸಂಕ್ರಂದನನೆಂಬ ತನ್ನ ಪೆಸರನನ್ವರ್ಥಮಂ ಮಾಡುವಂತೆ ಪೇರುರದೊಳಿಂದ್ರಾಣಿಯನಪ್ಪಿ, ಲಲಾಟಪಟ್ಟಮೆಂಬಷ್ಟಮೀಚಂದ್ರಂಗೆ ಚಂದ್ರಿಕೆಯನುಂಟುಮಾಡುವಂತೆ ಚಂದನತಿಲಕಂ ತಳೆದು, ಮುಗುಳ ಮಂಜರಿಯ ನಿಡುವಂತೆ ಮುತ್ತಿನೋಲೆಯನಿಟ್ಟು, ಬಾಂದೊಱೆಯಂ, ತುಱುಂಬುವ ಗಂಗಾಧರನಂತೆ ಸಂಗೀತಗಂಗಾಧರಂ ಮಲ್ಲಿಗೆ ಮಾಲೆಯಂ ತುಱುಂಬಿ, ರೂಪಿನ ಮನ ಮಚ್ಚರದಿಂ ಪುಷ್ಪಾಯುಧಂಗೊರೆಯಂ ಕಟ್ಟುವಂತೆ ಪೂವಿನ ಸುರಿಗೆಯಂ ಕಟ್ಟಿ, ಬಾಂದೊಱೆಯ ಮಳ್ಪೊನಲ ಮೇಲ್ಪೊಯ್ದ ಹಿಮವಂತನಂತೆ ದುಕೂಲಯುಗಲಮನುತ್ತರೀಯಮನಿಕ್ಕಿ, ಕಂದರ್ಪಂ ಕೈಗೈದಂತೆ ಭೂಲೋಕಕಂದರ್ಪದೇವಂ ರಯ್ಯಮಾಗಿ ಕೈಗೆಯೆ –

ಸಸಿಯನೊರಲ್ದು ನೋಡದಿರಿಮೋಪನ ರೂಪಸಿಯೆಂಬ ಮಾತನಾ
ಲಿಸದಿರಿಮಂಗಜಂ
ಜಗಮನೊರ್ವನೆ ಸೋಲಿಸುತಿರ್ಪನೆಂದು
ಣ್ಣಿಸದಿರಿಮೆಂಬವೊಲ್
ಮಿಸುಪ ಮೆಯ್ವೆಗಳುಂ ಪರಿಜುಂ ಬೆಡಂಗುಮೇಂ
ಪಸದನಮಾದುವೋ
ಪಸದನಕ್ಕೆನಸುಂ ಕವಿರಾಜಮಲ್ಲನಾ      ೮೮

ಇದು ವಿದಿತ ಪ್ರಬಂಧ ವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಳೋಚ್ಚಳಿತ ನಖಮಯೂಖ ಮಂದಾಕಿನೀ ಮಜ್ಜನಾಸಕ್ತ ಸಂತತೋತ್ಸಿಕ್ತ ದಾನಾಮೋದಮುದಿತ ಬುಧಮಧುಕರ ಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತೀ ಪ್ರಬಂಧದೊಳ್ ನಾಯಿಕಾಪ್ರಸಾದನ ವರ್ಣನಂ

ದ್ವಾದಶಾಶ್ವಾಸಂ