ಎಂಬುದುಮಾಕೆ ನಗುತಿಂತೆಂದಳ್ –

ನಗೆಗಣ್ಣಂ ಪೋಲ್ತುದೆಂದೆನ್ನಯ ಮೊಗರಸಮಂ ಪೋಲ್ತುದೆಂದೆತ್ತಿ ಕಂಪಂ
ಮಿಗೆಸುಯ್ಯಂಪೋಲ್ತುದೆಂದೇಕೆಯಮಗಮಗಿಪ
ಪೂವಿಂಗೆ ತೆಂಗಾ
ಳಿಗೆ
ಕಾಯ್ದೀ ನಿನ್ನನಾಪೂಗಳೆ ಮನಸಿಜನಂಬಾಗಿಯಾಚಂದ್ರನಲ್ತೇ
ಬಗೆದುಂ
ಕಿಚ್ಚಾಗಿಯಾತೆಂಬೆಲರೆ ಮುನಿದು ನಂಜಾಗಿ ಕೊಂದಪ್ಪುವೀಗಳ್ ೫೧

ಎನೆ ನಾಗರಿಕವಿದಗ್ಧೆ ಮನಮನಾಱಿಸುವ ನೆವದಿನೀಕೆಯ ರೂಪುಮಂ ನಿನ್ನ ಸೊಬಗುಮಂ ಪೊಗೞ್ದಪ್ಲಳೆಂದರಸನಂ ನಾಣ್ಚಿಸಿದಂ ಮತ್ತಮೊರ್ವಳ್ ಮಾತು ಮಾತಿಂದೆ ಕೌಮುದೀವ್ಯಾವರ್ಣನಮಾಗಿ ತನ್ನ ಗಂಡಂಗಿಂತೆಂದಳ್ –

ಪಗಲೆಂದುಂ ತಲೆಯೆತ್ತಲಣ್ಮಳೆನಸುಂ ಚಂದ್ರಂಗೆ ಕೂರ್ತಂತೆ
ತ್ತುಗೆಗುಂದಳ್
ನಿಸೆಯಪ್ಪುದುಂ ಪರಿದು ದುಗ್ಧಾಂಭೋಧಿಯೊಳ್ ಕೂಡುವಳ್
ನಗುವಳ್
ನೈದಿಲೊಳೀೞ್ದು ಚುಂಬಿಸೆ ಚಕೋರಂಗೊಲ್ವಳೊಲ್ವಾಸೆಯಿಂ
ಪುಗುವಳ್ಕೌಮುದಿಯೆಂಬ
ಪೊಚ್ಚಪೊಸವೆಣ್ಣೇನೆಂಬ ನಾಣ್ಜೋಡೆಯೋ      ೫೨

ಅದಂ ಕೇಳ್ದು ವಿದೂಷಕನೀಕೆಯ ಮನಮುಮೆನ್ನ ಪೆಂಡತಿಯ ಮನಮುಮೊಂದೆಯೆಂದರಸನ ಮೊಗಕ್ಕೆ ಮುಗುಳ್ನಗೆಯನಿತ್ತು ಮತ್ತೊಂದೆಡೆಯೊಳೆಂದೆ ನೋಟದೊಂದೆ ಮೈಯೊಂದೆ ಮನದೆಮ್ಮಂದಿಗರ್ ಮಂದಭಾಗ್ಯೆಯರ್ ನಿನಗೇ ವರೆಂದು ನೊಂದು ನುಡಿದ ನಿಜವಲ್ಲಭೆಗೆ ತನ್ನ ಮುನ್ನುಡಿದ ಪೊಲ್ಲಮೆಯಂ ತೊಡೆಯಲೆಂದತಿ ಚತುರನಿಂತೆಂದಂ –

ತರಳಾಕ್ಷಿದ್ವಂದ್ವಮೊಂದೊಂದೆರಡೆ ದರಚಳಾಪಾಂಗಮೊಂದೊಂದೆ ನೋಡ
ಲ್ಕೆರಡೇಚೆಲ್ವೊಲ್ಮೆಯೊಂದೊಂದೆರಡೆ
ಸರಲಮೀದೋರ್ಲತಾಯುಗ್ಮದೊಂದೊಂ
ದೆರಡೇತಣ್ಪಿಂಪಿದೊಂದೊಂದೆರಡೆಸೆವ
ನತಭ್ರೂಯುಗಂ ನೋಳ್ಪೊಡೊಂಒಂ
ದೆರಡೇಚಾರ್ವಾಸ್ಯಮೊಂದಾದೊಡಮೆರಡೆ
ಲಸಚ್ಚುಂಬನಂ ಚಂಡಿ ನಿನ್ನಾ ೫೩

ಮತ್ತಮೊರ್ವಳ್ ವಾಸಕಸಜ್ಜಿಕೆ –

ಮುಕುಳಂ ಮಾದಲರಾಯ್ತು ಮೆಯ್ಯರಿಸಿನಂ ಕಂಪೋಡಿತೀ ಬೆಂದ ದೀ
ಪಿಕೆಯುಂ
ಕರ್ಗುಡಿವಟ್ಟುದೆನ್ನಿಯನಿನ್ನುಂ ಬಾರನೇಕೆಂದು
ರ್ಪಕದಾವಾನಲದಗ್ಧತುಂಗಕುಚಶೈಲಾಗ್ರಕ್ಕೆ
ಸುಯ್ದಂಬಕಾಂ
ಬುಕಣಾನೀಕಮನಿಕ್ಕಿದಳ್
ಮದನಮೋಹಾಸಾರಮೆಂಬಂತೆವೋಲ್       ೫೪

ಮತ್ತಮೊರ್ವಳ್ ಪೊಸವೇಟಮಂ ಪಸರಿಸುವಂತೆ ಬಿರಿದ ಮಲ್ಲಿಗೆ ಬಳೆದ ಬೆಳ್ದಿಂ ಗಳ್ಗಂ ಕರೆವ ಕೋಗಿಲೆಗಂ ತೀಡುವ ತಂಗಾಳಿಗಂ ಮತಿಮಱೆದಿಂತೆಂದಳ್ –

ನೆರೆವಳ್ ತಂಗಿಯನಟ್ಟೆ ತಾನೆ ಬರಲೊಲ್ಲಂ ಲಜ್ಜೆಯಿಂದಾತನಂ
ಕರೆಯಲ್
ವೈಶಿಕವಂದಪಂ ಸಖಿ ಸರಣ್ಬೊಕ್ಕೆಂ ಗಡಾ ನಲ್ಲಂ
ಬರಿಸೆನ್ನಲ್ಲಿಗೆ
ತೋರಮಲ್ಲಿಗೆಯೆಲೇ ಬೆಳ್ದಿಂಗಳೇ ನಿಮ್ಮನಾ
ನೆರೆವೆಂ
ಕೋಗಿಲೆ ನಿನ್ನ ಕಾಲ್ವಿಡಿದಪೆಂ ತೆಂಗಾಳಿ ತೊೞ್ತೌದಪೆಂ ೫೫

ಮತ್ತಮೊಂದೆಡೆಯೊಳ್ –

ಮಗಮಗಿಸಿತ್ತು ಕತ್ತುರಿಯ ಕಿತ್ತಲಗಂತದು ಪಲ್ಲ ಮಿಂಚು
ಲ್ಲಿಗೆಯ
ತುಱುಂಬು ಮೆಯ್ಯ ಪಸುರೊಪ್ಪಿದುದಾತನ ವಾರಿಯಿಂದು ವೇ
ಳೆಗೆ
ಬರುತಿರ್ದಪಂ ಸಿತಗನೆಂಬುದುಮಂಜಿ ಬೊಜಂಗನೆರ್ದು ಮೆ
ಲ್ಲಗೆ
ಪೊಱಮಟ್ಟು ಪೋಗೆ ನಗುತಪ್ಪಿದಳಾಗಳೆ ಧೂರ್ತೆ ಧೂರ್ತನಂ        ೫೬

ಮತ್ತಮೊಂದೆಡೆಯೊಳ್ –

ಪೊಸವನಿದಾವನಾದಪುದು ಕಂಡಱಿವಂತೆವೊಲೆಲ್ಲಿ ಕಂಡೆವೀ
ರಸಿಕನನಂದು
ಕಂಡ ತೆಱಲನಲ್ಲಿದು ತಾಂ ಬಱೆದೆಂತು ಬಂದನೀ
ಬಿಸಿಲೊಳಿದೇಕೆ
ಮೆಯ್ಯರಿಸಿನಂ ಪಿರಿದಕ್ಕಟ! ತಳ್ತ ಬಾಸುಳುಂ
ಪಸಿಯವು
ನೊಂದನೆಂದು ನುಡಿದಳ್ ತಡೆದೊಯ್ಯನೆ ಬಂದ ನಲ್ಲನಂ     ೫೭

ಮತ್ತಮೊರ್ವಳ್ –

ಮಾಡದೆ ಮಂದನಿಶ್ಚಸಿತದಿಂ ತೆರೆಯಂ ತಿಳಿದಿರ್ದ ಕಳ್ಳನ
ಳ್ಳಾಡದೆ
ಪೂವನಲ್ಲಿ ಪಱಿದಿಕ್ಕದೆ ಪೀಱದೆ ಕಳ್ಳ ಬಟ್ಟಲೊಳ್
ನೋಡುತುಮಿರ್ದೊಳೊರ್ಬಳೊಲವಿಂದರನೇಱಿಲ
ಪಣ್ಣ ಬಣ್ಣಮಂ
ಱೋಡಿಸೆ
ಕಾದಲಂ ಪಿಡಿಯೆ ಪೊಂಗಿ ಪೊದೞ್ದಧರೋಷ್ಠಮಧ್ಯಮಂ         ೫೮

ಮತ್ತಮೊರ್ವಳ್ ಕನ್ನಡಿಯಂ ನೋಡುವಾಗಳಱಿಯಲೀಯದೆ ಪೆಱಗನೆ ಬಂದು ನಲ್ಲಂ ನಿಂದಿರಲೊಡನೆ

ಕಡೆಗಣ್ಮಾಣದೆ ನೋಡಲೞ್ತಿವಡುಗುಂ ಚಿತ್ತೇಶನಂ ನೋಡಲುಂ
ಕುಡದೆನ್ನಂ
ಕಡುಲಜ್ಜೆಯೆಂದು ಮಱುಗುತ್ತಿರ್ಪಾಕೆ ತಾಂ ಕಂಡು
ನ್ನಡಿಯೊಳ್
ನಾಡೆನಿಜೇಚ್ಛೆಯಿಂ ಮುಖರಸಪ್ರಸ್ಯಂದಮಂ ತೃಷ್ಣೆಯಿಂ
ಕುಡಿವಂತೇನತಿಮುಗ್ಧೆ
ಚುಂಬಿಸಿದಳೋ ಪ್ರಾಣೇಶವಕ್ತ್ರೇಂದುವಂ ೫೯

ಮತ್ತಮೊರ್ವಳಾಕೆಯ ನೆರೆಮನೆಯೊಳಿರಲ್ತಕ್ಕಾಕೆ ಬಂದ ಬಳೆಗಾಱಂಗೆ ತಂಬುಲಮಂ ಕೊಟ್ಟಿಂತೆಂದಳ್ –

ತುಡಿಸುವುದೇಕೆ ನಿಲ್ಲ ಪಲವುಂ ಬಳೆಯಂ ಬಳೆಗಾಱ ನಿನ್ನ ಕಾ
ಲ್ವಿಡಿದಪೆನಿತ್ತಪೆಂ
ನಿನಗೆ ಬೇಡಿತನೆನ್ನಿನಿಯಂ ಕನಲ್ದು ಪೋ
ದೊಡೆ
ಬಳೆ ಕೈಗಳಿಂದೞಿದು ಬೀೞ್ವುವು ಬರ್ಪುದುಮಾಗಳಂತೆ
ಳೊಡೆವುವು
ನನ್ನ ನಿನ್ನ ಬಳೆಯಂ ಬಳೆದೊಟ್ಟರನಣ್ಣ ಕಾಣಿರೇ     ೬೦

ಮತ್ತಮೊರ್ವಳತಿಧೂರ್ತೆ –

ಪುರುಡಿಂ ಕೊಂಡವರಾರೊ ನಿನ್ನಣಲ ಪಲ್ಲಂ ಪೆಂಡಿರಾರ್ ಮಂಡೆಯೊಳ್
ನರೆಯಂ
ಪೊಯ್ದವಳಾವಳಿಟ್ಟೊಱಸಿದಳ್ ಕೂರ್ತಾಸ್ಯದಿಂ ಮೋಱೆಯೊಳ್
ತೆರೆಯಪ್ಪಂತೆಮೊಲೆಮ್ಮ
ಕಮ್ಮಮಿನಿತುಂ ನಿಮ್ಮತ್ತೆ ಮತ್ತೊರ್ವಳೊ
ಳ್ಬರಮಂ
ಮಾಡುವುದೆಂದದೇಂ ಮುದುಪನಂ ವಕ್ರೋಕ್ತಿಯಿಂ ಮಾಣ್ದಳೋ          ೬೧

ಮತ್ತವೊರ್ವಳ್ ನಗೆನಗೆಯೊಳ್ನೀನೀಗಳೆನಿತು ಬೇಟಮಂ ತಳೆದೆಯೆಂದು ಕಾದಲಂಗಿತೆಂದಳ್ –

ಅಗಿದೆನಗಿಂತು ಸಂಜೆಯನೆ ಸಾಧಿಸಿ ಸೂರುಳಿದಾಗಳೇಂ ಗಳೂ
ೞಿಗವೆಲೆ
ಕಂಡ ಪೊೞ್ತು ಗುಣದಿಂ ನಿನಗೊಲ್ದುದು ಮಾತೆ ಕಾಮನಾ
ಣೆ
ಗಡೆಳಮಾವಿನಾಣೆ ಗಡ ಮಲ್ಲಿಗೆಯಾಣೆ ಗಡಿಂದುಬಿಂಬವಾ
ಣೆ
ಗಡ ಬಸಂತನಾಣೆ ಗಡ ಬಲ್ಲೊಡವಾನೞಿಗಂಡರೆಂಬುದಂ    ೬೨

ಅದಲ್ಲದೆಯುಂ –

ಸೂಳೆಯರ್ಗುಳ್ಳುದೇನೆಲವೊ ಕೂರದೊಡಂ ಕಡುಗೂರ್ತರಂದದಿಂ
ಮೇಳಿಸಿ
ಗಂಡರಿಂ ಪಡೆವುದರ್ಥಮನಲ್ಲದೊಡೆಮ್ಮ ಪೆರ್ಮೆಗಂ
ಪಾಳಿಗಮೊಲ್ದು
ಕೊಟ್ಟಪರೆ ಕೂರ್ತೊಡಮೇಂ ಬೆಲೆವೆಣ್ಗೆ ಬೇಟಮೇಂ
ತಾಳಿದಮಕ್ಕುಮೋ
ಕೞವೆಯೋಗರಮಕ್ಕುಮೊ ತುಪ್ಪಮಕ್ಕುಮೋ         ೬೩

ಮತ್ತಮೊರ್ವಳ್ ಕಡುಗೂರ್ತುದಂ ಕಂಡು ಕಾಡುವ ಮಾಯದ ಬೊಜಂಗಂಗಿಂತೆಂದಳ್ –

ಇದೆ ಕಡಿದಿತ್ತ ಕಾಲ್ಬೆರಲ ಕಪ್ಪಡಮುಂ ಬಿಡದೀಗಳಿಂತೆ ತೀ
ವಿದೆಯಿಱಿದೇಱಿನೊಳ್
ಬಸಿವನೆತ್ತರುಮೆನ್ನುರದೊಳ್ ಕಲೆಗಟ್ಟಿಯಿನ್ನುಮಿ
ಕ್ಕಿದ
ಪೆಸರಕ್ಕರಂ ಮುಳಿಸುವೇೞ್ಪುದೆ ಬೇೞ್ಪೊಡೆ ಬೇಡದೇನನೀ
ವುದೊ
ಪೊಸಲಂಚಮಂ ಹರಣಮಂ ಪಿಡಿಯಿಂ ಪೆಱತೇನನಿತ್ತಪೆಂ         ೬೪

ಮತ್ತಮೊಂದೆಡೆಯೊಳ್ –

ಜಱಿಗೊಂಡಳ್ಳರ್ದೆಯಿನ್ನುಮಾಱದಲರ್ಗಣ್ಣಿಂದತ್ತ ಕೆಂಪಿನ್ನುಮೋ
ಸಱದೆತ್ತಂ
ಬಿಸುಸುಯ್ವ ಬೆಂಕೆಯಲೆಪಿಂ ಪಳ್ವಿರ್ದ ಬೆಳ್ವಾಯ
ರ್ದುಱಮೇಂ
ಮಾಣ್ದುದೆ ತಾಂ ಗಡಕ್ಕಟುೞಿವಂ ಮತ್ತಿಂತು ಸಂತಾಪದಿಂ
ಸಱಿಪೋಪೆಂ
ಪ್ರಿಯ ನಿನ್ನ ರೂಪನೆಡೆಯೊಳ್ ಪೇೞ್ನೋಡಲಿನ್ನೇವೆನೋ   ೬೫

ಎಂದಲಗಣಸಂ ತೋಱಿ ನಿಲಿಸಿದಳ್. ಮತ್ತೊಂದೆಡೆಯೊಳೊರ್ವಳ್ ಸಱಿಯಂ ತಳ್ಕೈಸಿದಂತಪ್ಪ ಕಲಿಗೂಂಟಣಿ

ಅೞಿದ ಕುರುಳ್ಗಳೇನುರುಳಿಗೊಂಡುವೆ ಯೊಂದೆರಡಾದ ಸುಯ್ಗಳೊಳ್
ಕೞಿದಸುವೀಗಳೇಂ
ಮಗುೞೆ ಬರ್ಪುದೆ ಬೆಂದಲರ್ವಿಲ್ಲನಿನ್ನುಮೇ
ನಿೞಿಪಿದನೇಕರಂ
ಕೊಲೆಯ ಮೇಲೆ ಕವರ್ತೆಯೆ ಎನ್ನ ಕೂಸನಿ
ನ್ನುೞಿದೊಡೆ
ನಿನ್ನ ಕಯ್ಯೊಳೞಿವೆಂ ಗಡ ! ನೋಡಿಮಿದೊಂದು ಗೊಡ್ಡಮಂ ೬೬

ಎಂದು ದರಿಯಂ ಪಾತಾಳಮಂ ತೋಱಿದಳೊ ಒಂದೆಡೆಯೊಳೊರ್ವಳೊಲ್ಲದೆ ಕಾಡುವ ನಲ್ಲನನಿಂತೆಂದಳ್ –

ಮನೆಗೆಲ್ಲಂ ಪಗೆಯಾದೆನೞ್ತಿಗೆ ಕರಂ ಗೆಂಟಾದೆನಿಂ ಮೆಚ್ಚದಂ
ಗನೆಯರ್ಗೊಳ್ಳಿದಳಾದೆನೋಪ
ಗುಱಿಯಾದೆಂ ಪಂಚಬಾಣಕ್ಕೆ
ದ್ಮಿನಿಯಾದೆಂ
ವಿಧುವಿಂಗೆ ನಿನ್ನ ಕತದಿಂ ಕೇಳೞಿ ಕಾಱಂಗೆ ಕೂ
ರ್ತೆನಗಿಲ್ಲಿಂ
ಪಿರಿದಕ್ಕುಮೆಂದು ಸುರಿದಳ್ ಭೋರೆಂದು ಬಾಷ್ಪಾಂಬುವಂ   ೬೭

ಎನೆ ಮತ್ತೊಂದೆಡೆಯೊಳ್ –

ಸುಡುವುಣ್ಣಾದಪುದಿಂದು ನಿನ್ನಧರಮಪ್ಪುಂಗೆಯ್ದದಂತಾಗಿ ಮೆಯ್
ಬಡವಾಯ್ತಕ್ಕಟದಾರೊಳಾಯ್ತು
ವಿರಹಂ ಪೇೞ್ಕಣ್ಣ ನೀರೀಗಳುಂ
ಕಡುಗಾಯ್ತೆಂದನನಪ್ಪಿ
ಪಾಯ್ದಿನಿಯನಂ ಬಾಷ್ಪಾಂಬುವಿಂ ನಾಂದು ತಾಂ
ಪಿಡಿದಳ್
ಪೀಡಿಸಿದಳ್ ಪೊದೞ್ದಧರಮಂ ತಾನುತ್ತರಂಗೊಟ್ಟಪಳ್         ೬೮

ಮತ್ತಮೊರ್ವಳ್ ಕಾದಲಂ ಕನಲಿಸಿ ಕಾಲ್ವಿಡಿಯೆ ಕೆಳದಿಗಿಂತೆಂದಳ್ –

ಕರಹಂ ಪೆಂಡಿರದೈದೆ ತನ್ನದುೞಿವಿಂ ಕಟ್ಟಾಯದೊಳ್ ನಿಂದನೇ
ಕರುಣಂ
ತನ್ನದು ಕೂರ್ಮೆ ಪೆಂಡಿರದು ಬಿಂಕಂ ತನ್ನದಾಶಂಕೆ ಪೆಂ
ಡಿರದಿಂಪಿಂ
ನೆರೆವಿಚ್ಚೆ ಪೆಂಡಿರದು ಕೂಟಂ ತನ್ನದಂತಲ್ತು ಪೆಂ
ಡಿರದೆಂದುಂ
ಮುಳಿಸೀ ಪ್ರಸಾದಕರುಣಂ ಕೇಳ್ತನ್ನದೆಂದುಂ ಸಖೀ ೬೯

ಮತ್ತಮೊರ್ವಳ್ ಸೂಳೆಗೊಟ್ಟಿಯೊಳ್ ಬೊಜಂಗವಾತಾಗಿ ತನ್ನ ಕೆಳದಿಗಿಂತೆಂದಳ್ –

ಎಳಮೆಯೊಳೆಲ್ಲಿ ಕಲ್ತಳಿದನೀಯದೊಡಂ ನೆರೆದೀಯನೆಂದು
ಲ್ಲಳೆ
ಮಿಗೆ ಲೋಭಗೂಂಟಣಿಯುಮೊಲ್ಲದುದಂ ವಿಟನೊಲ್ಲನೆಂದು
ಲ್ಲಳೆಯೆಳವೇಟದಾಕೆಯುಮಿದಚ್ಚರಿಯೊಲ್ವೊಡಮೊಲ್ವನೆಂದು

ಲ್ಲಳೆ
ಕಡುದೇಸೆಯುಂ ಚದುರಿದಿಂಪಿದು ಪೆಂಪಿದು ಕೀರ್ತಿಕಾಂತನಾ       ೭೦

ಅವನಾವನೆಂದಱಿಯದಿಂತೆಂದ ಕೆಳದಿಗೆ ಮತ್ತಮಿಂತೆಂದಳ್ –

ಪಿರಿದೀವಂ ಕಲಿ ಕೂರೆ ಕೂರ್ಪನುಱುವಂ ನೀಱಂ ಕರಂ ಭಾವಕಂ
ಬೆರಸಲ್ತಕ್ಕನುದಾತ್ತನಿತ್ತು
ನೆರೆವಂ ನಿರ್ಗಾವಿಲಂ ಭೋಗಿ ನಾ
ೞ್ಕರಸಂ
ಗೀತದ ಗೊಟ್ಟಿಗೊಲ್ವನಿನಿಯಂ ತೋಳ್ಗೊಪ್ಪುವಂ ಸೂಳೆಗೈ
ಸಿರಿಯಂತೊಪ್ಪುವನಾವನೀಗಳಱಿದೆಂ
ಶೃಂಗಾರಕಾರಾಗೃಹಂ   ೭೧

ಆ ಪ್ರಪಂಚಮನಾಲಿಸಿ ವಿದೂಷಕನೆನ್ನುವನೊರ್ವಳಿಂತೆಂಬಳಿಲ್ಲಕ್ಕುಂ ; ಇರ್ಪಂದು ಬಂಟನಾದಪೆನೆಂದಂ. ಮತ್ತೊರ್ಬಳ್ಬೇಂಟದ ಮಾತನಾಡಿ ನಗಿಸುತ್ತಂ –

ಬಿರುದರ ಬಿಂಕಮಂ ಪೊಗೞ್ವ ಕೂಂಟಣಿತೋಳ್ಗೆಳಸಿರ್ಪ ಸೂಳೆವಂ
ಟರ
ಸೊಬಗಿಂಗೆ ಮೈಮಱೆದು ಮೆಚ್ಚುವ ಬಿಂಕದ ಬರ್ದೆಗೆಯ್ತದೊಳ್
ಬೆರಸಿದೊಡಂದೆ
ಬರ್ದೆನೆನುತಿರ್ಪ ಭುಜಂಗನೆ ತೋಳೊಳಿರ್ಕೆ ಸಾ
ಯಿರ
ವರಸಂಬರಂ ಸುಡುವೆನಾಂ ಗಡ ! ಮತ್ತಿನ ಪಾಱುಗಂಡರಂ        ೭೨

ಮತ್ತಮೊರ್ವಳ್ –

ಕುಡುವ ಗುಣಕ್ಕೆ ತಾನೊಡೆಯನೊಲ್ಮಗೆ ತಾನೊಡೆಯಂ ಚಲಕ್ಕೆ ತಾ
ನೊಡನೆರೆವಲ್ಲಿ
ತಾನೊಡೆಯನೞ್ತಿಗೆ ತಾನೊಡೆಯಂ ದಲೆಂಬ ನಾ
ಣೊಡೆಯನನಪ್ಪಿಯುಂ
ಮಗುೞೆ ತಾನೞಿಗಂಡರನಪ್ಪುತಿರ್ಪ ಪೆ
ಣ್ಗಡಣದ
ಮುನ್ನಿನುಳ್ಳ ಶಿಶುಭಾಗ್ಯ ಮುಮೇನರೆಯಾಗಿ ಪೋಗದೇ          ೭೩

ಮತ್ತಮೊರ್ವಳ್ ನೀನಿವನನೊಲ್ಲದಿರ್ದೊಡಂ ಕುಡುವೊಡವೆಗಂ ಕರೆಯಲೆವೇೞ್ಕುಮೆಂದ ಕೆಳದಿಗಿಂತೆಂದಳ್ –

ಬಸನಿಗನಾದೊಡಂ ಸುಲಭನಾದೊಡವಕ್ಕನೆ ಬೇಡ ಕರ್ಕಶಂ
ಕಿಸುಗುಳಿಗಂ
ವಿಕಾರಿ ಕಡುನಾಣಿಲಿ ಜಬ್ಬುಲಿ ಬೂತು ಕಾತರಂ
ಪುಸಿವನೊಡಂಬಡಂ
ಸುಸಿಲನಿಂ ಪಗೆಯಾವನೊ ಪೆಣ್ಗೆ ಗಂಡರೇಂ
ಪಸನೆ
ಸುಡಾತನಂ ನುಡಿಯವೇಡವನೇವನೊ ಲಕ್ಕಮೀವೊಡಂ ೭೪

ಅದಲ್ಲದೆಯುಂ –

ಅವನೊಡನೊಂದಿರುಳ್ನೆರೆದಳಾದೊಡೆ ಸೂಳೆಗೆ ಸಾವು ಬೇಱೆವೇ
ೞ್ಕುವೆ
ಮನಮಾಗದೊಂದೆವಸಮೇೞ್ಚಱಲುಂ ಕಲೆಯಲ್ಕೆ ಕಣ್ಗಳಾ
ಗವು
ಮಱೆದಪ್ಪೊಡಂ ತೆರೆಯಲೈದೆವಸಂ ಹಡಹಿಂಗೆ ಮೆಯ್ಗಳಾ
ಗವು
ಬೞಿಕೆಂದುಮಾ ಪೊಲೆಯನೀವುದನಿಕ್ಕುಗೆ ಕಾನಕಾಡಿನೊಳ್         ೭೫

ಮತ್ತಮೊಂದೆಡೆಯೊಳ್ –

ಜಡಿದೊಡೆ ಪೊಂಗಿ ಪಂದೊವಲಮೊಲ್ಪೊಱೆಯೇಱುವ ಸೊರ್ಕಿದಾನೆವೊಲ್
ಪಿಡಿದುಗಿಗೊಂಡೊಡಗ್ಗಳಿಪ
ಬಗ್ಗಿಸಿ ಪೊಯ್ದೊಡೆ ಬೂತಿನಂತೆ ಪಾ
ಯ್ವೊಡನೆ
ಝಲುಂಮೆನಲ್ಸೆಡೆಯೆ ಚಾಳಿಪ ಜಾಯಿಲನಂತೆ ಮೊಕ್ಕಳಂ
ಬಡುವ
ಬದಂಗನಂ ಬೆಸನಿಯಲ್ಲದಳಾತನನೊಟ್ಟಿ ಸುಟ್ಟಪಳ್    ೭೬

ಮತ್ತಮೊಂದು ಕೂಂಟಣಿಗೊಟ್ಟಿಯೊಳ್ ಸೂಳೆವಾತಿನೊಳೊರ್ವಳಿಂತೆಂದಳ್ –

ಜಗಳಂ ದೇವನ ವಾರಿಗೀಕೆ ನಡೆವಾಗಳ್ ತೋಟಿ ಮಾಱಾಳಿಯೊ
ತ್ತೆಗೆ
ನಿಂದಲ್ಲಿ ವಿಲಾಸಮುಜ್ಜಳಿಸೆ ಭೋಗಕ್ಕೆಂದು ಪೋಪಲ್ಲಿ ಕಾ
ಳೆಗವೆಂದುಂ
ಬೊಜಗರ್ಗೆ ಪೋಗಳಿವಳೀಗಳ್ ವಾರಿಗಂ ನಿಲ್ಲಳೊ
ತ್ತೆಗೆ
ಭೋಗಕ್ಕಗಿದೆನ್ನ ತಂಗಿ ನಡೆಯಳ್ ಸೌಭಾಗ್ಯಮಿಂತಕ್ಕುಮೇ         ೭೭

ಮತ್ತಮೊರ್ವಳ್ ತನ್ನ ತಂಗಿಯ ಸೌಭಾಗ್ಯಮಂ ಪೊಗೞ್ದಳೆಂತೆನೆ –

ಎತ್ತಿದ ಬರ್ದೊ ಮೇಣ್ ಬದಗೊ ಪೇೞಿಮಿದೀಕೆಯ ಕೂರ್ಪೊ ಮೆಲ್ಪೊ ಚಿ
ಕ್ಕೊತ್ತೆಗೆ
ಕೊಟ್ಟವಂ ಕುಡುವನಾಗಳೆ ಪೞ್ಕೆಗೆ ಪೞ್ಗೆಗರ್ಥಮಂ
ತೆತ್ತನೆ
ನಣ್ಪಿನೊಳ್ ನಡೆವನಾ ಕಡುನಣ್ಪಿನ ಗಂಡನೋಹಿಯೊಳ್
ಪತ್ತುವ
ನೋಹಿಗಿತ್ತವನೆ ಸಜ್ಜನಕಿತ್ತಪನೆಂದು ಸುತ್ತುವಂ ೭೮

ಮತ್ತಮೊರ್ವಳ್ –

ನೋಡುವೊಡಿಲ್ಲ ಕಣ್ಣಲಸಿ ನಿಪ್ಪೊಸತಂ ಮನವಂ ಗುಣಕ್ಕೆ ಬಂ
ದಾಡುವುದಿಲ್ಲ
ಗಾಡಿ ಸೆಱೆಗೆಯ್ದುದು ಕಂಡೊಡೆ ಕೊಟ್ಟು ಪತ್ತುವರ್
ಬೇಡುವರಿರ್ದರಿತ್ತಗಲರಿತ್ತುೞಿದಕ್ಕ
ಬೞಿಕ್ಕೆ ಸಾರ್ವರೀ
ನೀಡುವರೊತ್ತೆಯಂ
ಮನೆಯ ಬಾಗಿಲೊಳಗ್ಗಮಾಸೆಮಾಡುವರ್ ೭೯

ಮತ್ತೊರ್ವಳ್ –

ಬಿಯಮಂ ಬೇಡಿತನೀವರಗ್ಗದ ಬೊಜಂಗರ್ಕೂರ್ತು ಕಣ್ಗಾಣರೊ
ತ್ತೆಯ
ಮೇಲೊತ್ತೆ ಬರುತ್ತುಮಿರ್ಪುದುೞಿದರ್ಪೊಕ್ಕಾವಗಂ ಕೊಟ್ಟುಕೋ
ಟಿಯುಮಂ
ಕಾದೊಡನಿರ್ಪರಿಲ್ಲ ಪಡಪಿಂದೀ ಕೇರಿಯಂ ಬಿಟ್ಟು ಸೂ
ಳೆಯರೆಲ್ಲಂ
ನೆರೆಪಳ್ಳಿವೋದರಿವಳೀ ಮಾಧುರ್ಯಮಿನ್ನೆಂತುಟೋ         ೮೦

ಮತ್ತಮೊರ್ವಳ್ –

ಬೆರಕೆಗೆ ಪೇಸುವಳ್ ಬೊಜಗರಪ್ಪರ ನಂಟರೊಳಂಗಹೀನರುಂ
ತರುವಲಿಗಂಡರುಂ
ಮನೆಗೆ ಬಂದೊಡೆ ನಾಣ್ಚುವಳೈದೆ ಬೇಟದೊಳ್
ಕರಮೊಳಗಾಗೆ
ಕೂರಿಸಿದವಂಗೆರವಂ ನಡೆ ನೋಡಳೊರ್ಮೆಯುಂ
ನೆರೆವನೆಯೆಂತುಟೆಂದೞಿಯಳೀಕೆಯದೇಂ
ಕರವಾಯಕಾರ್ತಿಯೋ       ೮೧

ಎಂದು ತನ್ನ ತಂಗಿಯಂ ಪೊಗೞ್ದಳ್. ಮತ್ತೊರ್ವಳ್ –

ಅವಧರಿಸದೇನನಿತ್ತೊಡ
ಮವಚತ್ತವೊಲಿರ್ಪಳೋಪನೊಳ್
ನೆರೆವೊಡೆ ನೋ
ವವಗೞಿಯಮೀಕೆಗಲಸಿಕೆ

ಯಿವಳಿಂದಂ
ಬಿಟ್ಟು ಬೀಯಕಾರ್ತಿಯರೊಳರೇ         ೮೨

ಪಿರಿದುಂ ನುಡಿಯಳ್ ಬಗೆಯಳ್
ಸಿರಿವಂತನನೊಲಸಿದವನುಮಂ
ಕೈಕೊಳ್ಳಳ್
ಕರಮೆಂದುಂ
ಮಾಡಳ್ ಸಿಂ
ಗರಮಂ
ರೂಪಿಂಗೆ ಕೂರ್ಪರೆಲ್ಲರುಮಿವಳಾ   ೮೩

ತೊಡೆಯುತ್ತಲ್ಲದೆ ಗಂಧಮಂ ಪಡೆವರಾರ್ ಮೈ ಸೋಂಕುಮಂ ಲಂಚಮಂ
ನುಡಿದುಂ
ನೀಂ ದಯೆಗೆಯ್ವುದೆಂದವಳ ಕಾಲೊಳ್ ಬಂದು ಬಿೞ್ದಲ್ಲದಾ
ವೆಡೆ
ಬಾಯ್ಗೂಟಮದೆಂಟು ತಿಂಗಳೊಡವಾಳಂಬಟ್ಟೊಡಂ ಕಾಲ್ಗಳಂ
ಪಿಡಿಕೈಸುತ್ತಮೆ
ಸೋಂಕಿದಲ್ಲದುೞಿದಂತಾರ್ಕಂಡರಿಂಗೂಟಮಂ ೮೪

ಎಂದು ತನ್ನ ತಂಗೆಯ ಕೆಯ್ತಮನೆತ್ತಿ ನುಡಿದಳ್. ಮತ್ತೊರ್ವಳ್ –

ತನು ತವುವನ್ನಮೋತಗಲದಿರ್ಕಿವನೆನ್ನೊಳೆ ನೋಡದಿರ್ಕಿವಂ
ಕನಸಿನೊಳಪ್ಪೊಡಂ
ಪೆಱರನಿಂ ಮಱುಮೆಯ್ಯೊಳಮಕ್ಕೆ ಗಂಡನೀ
ತನೆ
ತನಗೆಂದು ಮಲ್ಲಿಗೆಯ ಮಾವಿನ ರೋಹಿಣಿಯೇೞ್ಗೆವೆತ್ತ ಚಂ
ದ್ರನ
ನೆರೆದೊಪ್ಪುವಾರತಿಯ ಕಾಮನ ನೋಂಪಿಗಳೀಕೆಗಾಗಳುಂ ೮೫

ಎಂದು ತನ್ನ ತಂಗೆಯನಾಕೆಯ ನಲ್ಲನುಮಂ ತೋಱಿ ನುಡಿದಳ್ ಮತ್ತೊರ್ವಳ್ –

ನಲ್ಲಂಗೆ ಬಯಕೆ ಸುರತಂ
ಪಲ್ಲಟಿಸದು
ತನ್ನ ಬೇಟಮುೞಿದವರಂ
ಣ್ಚೆಲ್ಲದೊಳೆ
ಗೆಲ್ವಳಿನ್ನಿವ
ಳಲ್ಲದೆ
ಜಗದೊಳಗೆ ಚೆಲ್ಲಗಾರ್ತಿಯರೊಳರೇ  ೮೬

ಮತ್ತಮೊರ್ತಳ್ –

ಧನಮುಳ್ಳನುಮಿಲ್ಲದನುಂ
ಮನದಾಣ್ಮನುಮೊತ್ತೆಯಾಣ್ಮನುಂ
ನೆರೆವೆಡೆಯೊಳ್
ತನಗೆ
ಸರಿಯೆನಿಪ ಬರ್ದಿನ
ವನಿತೆಗೆ
ಸಲೆ ಸಂದುದುೞಿದರೊಳ್ ಸಂದಪುದೇ       ೮೭

ಮತ್ತಮೊರ್ವಳ್ ತನ್ನ ಮಗಳ ಮೊಗದೊಳ್ ದಾಕ್ಷಿಣ್ಯಮಿಲ್ಲದಿಂತೆಂದಳ್ –

ಚೆಲ್ಲಕ್ಕಲಸುವಳಲಸಳ್
ಗೆಲ್ಲಕ್ಕೆನೆ
ನೋಡೆ ಕಣ್ಣ ಕಾಡಿಗೆಯಂ ಕೊಂ
ಡಲ್ಲದೆ
ನಿಲ್ಲಳ್ ನುಡಿದೊಡೆ
ಕಲ್ಲವಿಲಂ
ಮಾಡಿ ಬಾಯ ಕೆಂಪಂ ಕೊಳ್ವಳ್   ೮೮

ಪೊಸಗಂಪಾದೊಡಮಕ್ಕುಮೆಂದೆ ಪೆಱರಿಂ ಕಿರ್ಗಾಳಿಯೊಳ್ ನಿಲ್ವಳೀ
ಕ್ಷಿಸಿದೊಳ್ಪಿಂದೆಲೆಗೊಂಡೊಡಲ್ಲದಿವಳಾರ್ಗಂ
ಸುಣ್ಣಮಂ ತನ್ನಸಂ
ತಸದಿಕ್ಕಳ್
ಸವಿದಲ್ಲದನ್ಯವಧುಗೊಲ್ದೊಳ್ಗಂಡರಂ ಕಂಡು ಕಂ
ದಿಸುವಳ್ಕೂಡಿಸಿ
ಗೆಲ್ವ ಕೈತವಮಿದೇನೀ ಪೆಣ್ಗೆ ಕಣ್ಗೂರ್ತುದೋ    ೮೯

ಮತ್ತಮೊರ್ವಳ್ –

ಏಱಿದ ಜವ್ವನಂ ನಸು ಬೞಲ್ದುದು ಬೇಟದ ಬೆಂಕೆಯಿಂದೆ ಬೆಂ
ದಾಱಿದುದೈದೆ
ಚಿತ್ತಮತಿಚಿತ್ರರತಂಗಳೊಳಿಚ್ಚೆಯಾಗಳುಂ
ನೀಱರನೀಗಳಾಯ್ದುಱಸುತಿರ್ದಪುವೀಕೆಯ
ಕಣ್ಗಳೀಕೆ ಕಾ
ಯ್ದಾಱಿದ
ಪಾಲವೊಲ್ಸವಿಯನಿನ್ನುಪಭೋಗಿಸಲಾರ್ಗೆ ಮಾಡಳೋ         ೯೦

ಎಂದು ತನ್ನ ಮಗಳ ಮೇಳಪ್ಪ ಹಡಹಿಂಗೆ ಮುಯ್ಯಾಂತಳ್. ಮತ್ತೊರ್ವಳತಿ ಚತುರೆಯಿಂತೆಂದಳ್ –

ಮುಗುಳಿಂ ತೋರದುಱುಂಬನಿಕ್ಕಿ ಬರೆದಾ ಕಸ್ತೂರಿಯಿಂ ಗಡ್ಡಮಿ
ಸೆಗಳಂ
ಗಂಡುಡೆಯುಟ್ಟು ಮಿತ್ತಜನದೊಳ್ಮಾತಾಡುತುಂ ಕಾಡುತುಂ
ನಗುತುಂ
ನೋಡುತುಮಾತನಂತಿರಲಗಂ ತೂಗುತ್ತೆ ತನ್ನಿರ್ಪ ಚೌ
ಕಿಗೆಯಂ
ಪೊಕ್ಕೊಡೆ ಸಸ್ಪೃಹಂ ಸವತಿ ತಂದಳ್ಕಾಲ್ಗೆ ನೀರಂ ಸಖೀ         ೯೧

ಮತ್ತಮೊರ್ವಳತಿ ಚತುರೆ ತನ್ನ ಕೆಳದಿಯ ವೃತ್ತಾಂತಮನಿಂತೆಂದಳ್

ಸೀಯನೆ ಪೇೞ್ವ ಕಾದಲನ ಮಾತನೆ ಭಾವಿಸಿ ಕೇಳ್ವ ಭಾವಮೊ
ಲ್ದೀಯೆ
ನಿಜೇಶನಂ ಮನಮನೀಕ್ಷಿಸಿ ನಾಣ್ಚುವ ಪೇೞ್ವತಂಗೆಯಂ
ಬಾಯೊಳೆ
ಬಾಯನಿಟ್ಟು ನಱುದಂಬುಲಮಿಕ್ಕುವ ಮುಗ್ಧೆಯಂ ದುಮೊ
ಟ್ಟಾಯತದಿಂದಮಾನಱಿದೆನಾಕೆಯ
ವಲ್ಲಭನಾತನೆಂಬುದಂ     ೯೨

ಮತ್ತಮೊಂದು ವಿಟಗೋಷ್ಠಿಯಳೊರ್ವಂ ಸೂಳೆಗಾಱ ಬೊಜಗಂ

ನಿಱಿಗಳನಿಕ್ಕಿ ದಾಂಟಿಸದೆ ದುಂಡಿಸುವಾಕೆಯನೊತ್ತೆಗೊಳ್ಳದಂ
ತೆಱೆಯದೆ
ತೇಪೆಗುಳ್ಳ ಬಳಿನೀರ್ಗಳನಗ್ಗದ ಪೆಣ್ಗೆ ಮೆಯ್ಯನೆ
ಯ್ದಿಯ
ದೆಮತ್ತೆ ಪೇಸಿ ಪೆಱರಪ್ಪದವೋಲ್ ಸ್ಮರಭೈರವಂಗೆ ಪೆ
ಣ್ಗುಱಿಗಳನಿಕ್ಕದೊಂದೆರಡನೇಂ
ವಿಟವೃತ್ತಿಗೆ ಮುಯ್ವನಾಂಪುದೇ ೯೩

ಮತ್ತೊರ್ವನಗಡಿನ ಪೆಂಡಿರೊಳ್ ವ್ಯವಹಾರಮಲ್ಲದೆ ಬೇಟಮಿಲ್ಲೆಂದ ನಿರ್ಗೇಡಿ ಬೊಜಗಂಗೆ ಸೊಬಗುಬೊಜಂಗನಿಂತೆಂದಂ –

ಆವೆಡೆ ಬೇಟವಿಂದಿನವರ್ಗಂದಿನ ಮಾಳತಿಯಂತೆ ಮಿಕ್ಕ
ತ್ನಾವಳಿಯಂತಿರೆನ್ನದಿರಿಮಿಂದಿನ
ಚಂದ್ರಿಕೆ ಕಂದು ನಾರ್ತುದೋ
ಗಾವರದಿಂಪದೇಂ
ಪೞಸಿತೋ ರತಿ ಮುತ್ತುದೊ ಮೊಟ್ಟನಾದುದೋ
ಕಾವನ
ಕೈದು ತೆಂಬೆಲರ ತೀಡದೊ ಪೂವಿನ ಕಂಪು ಕೆಟ್ಟುದೋ  ೯೪

ಮತ್ತಮೊರ್ವ ನೆವಕಾಱನಿಂತೆಂದಂ –

ಪಣವೆ ದಿಟಕ್ಕೆ ಸೂಳೆವನೆಗಲ್ಲದದೆತ್ತ ಗುಣಂ ಧನಂಗಳಂ
ಗಣಿಯಿಸದಿತ್ತು
ಸಾರಸುಖಮುಳ್ಳೊಡೆಯಂತದು ಮಾತೆ ಕೂರ್ತವಂ
ರಣಸಿವಡುತ್ತೆ
ಪತ್ತುವೊಡಮರ್ಥಿಗೆ ಕತ್ತಿಗೆ ಸೂಳೆ ಡಾಳೆ ಕೂಂ
ಟಣಿತಣಯಂತೆ
ಮತ್ತೆ ಮನೆ ತೀನ ತವರ್ಮನೆಯೆಂತು ಪತ್ತುವರ್         ೯೫

ಮತ್ತಮೊರ್ವನತಿಪ್ರೌಢಂ –

ಕಡೆಗಣ್ಕೂಂಟಣಿವಾತು ದೂದವಿ ಮನಂ ತಾಯ್ತಂದೆ ಬಲ್ಗೆಯ್ತಮೊ
ಲ್ದೊಡವಂದಂ
ಸಲೆ ತನ್ನ ಬರ್ದುಬಳಮರ್ದೊಪ್ಪಾಯಿಲಂ ಕೂರ್ಮೆ ಕೈ
ಮಡಕಂ
ವಂಚನೆ ಮಿಕ್ಕಮಾನಸಿಕ ಮಂಚಮಂಚಲಂ ತಾನೆ ತಾಂ
ಗೆಡೆವಳ್
ಪತ್ತದರಾರೊ ಧೂರ್ತ ವಿಟಹೃತ್ಸಂತಾಪೆಯುಂ ತೇಪೆಯುಂ     ೯೬

ಪಣಗೊಳ್ವಳ್ ಚೆಲ್ಲದಿಂದಂ ಚದುರನ ಸೇಸೆಗೊಳ್ವಳ್ ರತಂ ತೋ
ರಣವೆಂಬಂತೀಕೆ
ಸೋಲ್ತೊರ್ಬಸದ ಬಸನಿಯಂ ಕೂರ್ತನಂ ತೊಂಡಿನಿಂ ಕುಂ
ಟಣಿ
ಮಾೞ್ಪಳ್ಕೇಣದಿಂ ನಾಣೊಡೆಯನನೆಡೆಯೊಳ್ನಿರ್ಧನಂ ಮಾೞ್ಪಳಿಂತೀ
ಗಣಿಕಾಸಂದೋಹದೊಳ್ತೇಪೆಯೆ
ಪುರುಷಗುಣಶ್ರೀಗಳಗ್ರಾಹಿಯಲ್ತೇ         ೯೭

ಗುಣದಿಂ ಕೂರಿಸಿ ಗಂಡರಂ ಕವರ್ದುಕೊಂಡುಳ್ಳರ್ಥಮಂ ಬೇಟ
ಚ್ಚಣಮಂ
ಮುನ್ನಿನದೇನುಮಿಲ್ಲ ತೊವಲೆಂಬಂತಾಗೆ ಮೆಯ್ಯೊಳ್ನಖ
ವ್ರಣಮಂ
ಮಾೞ್ಪುದೆ ತೇಪೆಗುಳ್ಳ ಬಿನದಂ ಮುಂಗಯ್ಗಳೊಳ್ ಜ್ಯಾಲತಾ
ಕಿಣಮಂ
ಮಾಡಿದಳೀಕೆಯಲ್ಲಳೆ ಸಮಾಕೃಷ್ಟೇ ಕ್ಷುಕೋದಂಡನಾ  ೯೮

ಮತ್ತಮೊರ್ವಂ ಸ್ತ್ರೀಪುರುಷಜೀವಗುನಗಣವಿಧುರಂ –

ಗಂಡರ ಚಿತ್ತಮಂ ಪಡೆದೊಡಲ್ಲದೆ ಕೇಳ್ಪಡಪಿಲ್ಲ ಸೂಳೆಯೊಳ್
ಪೆಂಡಿರೊಳಲ್ಲದಿಲ್ಲ
ಸುಖಮೆಲ್ಲಿಯುಮೇದೊರೆಯಂಗಮಿಕ್ಷು ಕೋ
ದಂಡನನಿಕ್ಕಿ
ಗೆಲ್ದು ಗೞೆಯೆತ್ತಿಸಿದುತ್ತಮವೀತರಾಗನುಂ
ಕಂಡನೆ
ಮುಕ್ತಿಯೊಳ್ನೆರೆಯದನ್ನೆಗಮೇಂ ಗಡನಂತಸೌಖ್ಯಮಂ   ೯೯

ಎಂದೆಲ್ಲರ್ಗಭಿಮತನಾದಂ, ಮತ್ತೊರ್ವಂ ನೀನೀಗಳಾಕೆಯ ಮನೆಯತ್ತಲೇಕೆ ಪೋಗೆಯೆಂದತಿಪ್ರಿಯವಯಸ್ಯಂಗೆ –

ಒಗೆದುಗಿದಲ್ಲದೇಂ ಪಿಡಿವಳೇ ನೆಱೆ ನಾಣ ತಾಣಮಂ
ಬೆದಕದೆ
ಸೈತೆ ಸೋಂಕುವಳೆ ಬೂತುತನಂ ಪೆಱಗಾಗೆ ಮಾತುಗು
ಟ್ಟಿದಪಳೆ
ಬೀದಿಯೊಳ್ಬಗಿದು ಮುಂದಲೆಯೊಳ್ ಕಿಱುನೆಕ್ಕನಿಕ್ಕದ
ಲ್ಲದೆ
ಮಱೆದಾಕೆ ನಕ್ಕಱೆವಳೇ ಸುಡುವಳ್ ಗಳ ಗಾಳುಗಂಡನಂ  ೧೦೦