ಶ್ರೀ ಜನಪತಿ ಪುಗೆ ಶುಭಗುಣ
ಭಾಜನನಂದೆಯ್ದೆವಂದು
ಪಸುರ್ವಂದರನೇಂ
ರಾಜಿಸಿದುದೊ
ಬದ್ದವಣಂ
ಬಾಜಿಸಿದವೊಲೊಗೆದ
ಸಮದಶುಕಪಿಕನಿನದಂ         ೧

ಅವನಂ ಶೃಂಗಾರದಿಂ ಪುಟ್ಟಿಸಿ ಬಳೆಯಿಸಿ ಹೃಚ್ಛಯ್ಯೆಯೊಳ್ ಯೌವನಂ ತೀ
ವುವುದಂ
ಕಂಡೞ್ಕಱಿಂ ಪೂಮುಡಿವೞಯಿಗೆಯಂ ಪುರ್ಬುವಿಲ್ಲಂ ಕಟಾಕ್ಷೇ
ಷುವನೀಯಲ್ಕೆಂದು
ಕಂದರ್ಪನನಭಿಮತರಾಜ್ಯಾಭೀಷೇಕಕ್ಕೆ ತರ್ಪಂ
ತೆವೊಲಾಗಳ್
ತಂದುರುದ್ಯತ್ಕುಚಕಲಶಭರಾಕ್ರಾಂತೆಯರ್ ಕಾಂತೆಯರ್ಕಳ್       ೨

ಲತೆಯೊಡ್ಡುಂ ಕಾಮನುಂ ಚಂದ್ರನ ಭಲಭರಮುಂ ಕಾಮನುಂ ಮೀನಕೇತು
ದ್ಯುತಿಯೊಡ್ಡುಂ
ಕಾಮನುಂ ಕೋಕದ ಬಳಭರಮುಂ ಕಾಮನುಂ ಬರ್ಪವೊಲ್ ದೋ
ರ್ಲತಿಕಾಲಂಕಾರೆಯರ್
ವಿಸ್ಫುರಿತವದನೆಯರ್ ಸಂಚಳನ್ನೇತ್ರೆಯರ್ ಪ್ರೋ
ನ್ನತವಕ್ಷೋಜಾತಯರ್
ಪೋ ಬರೆ ಕರಮೆಸೆದಂ ಭಾರತೀಚಿತ್ತಚೋರಂ   ೩

ಇರುಳ ಮೆಯ್ಯೊಳೆ ನಿದ್ರೆಯೊಳಿರ್ದ ಸೌಂ
ದರಿಯ
ಚಿತ್ತಮನೀತನೆ ಕಳ್ದನೆಂ
ದರಸನಂ
ಪಿಡಿದೋವದೆ ತರ್ಪವೋಲ್
ತರುಣಿಯರ್
ತರುತುಂ ಕರಮೊಪ್ಪಿದರ್      ೪

ಮುರಿದು ಕದಿರ್ವರಿದು ರಣಕೇ
ಸರಿಯಂ
ಸುತ್ತಿಱಿದು ಗರವಸಂಗೊಳ್ವಬಲಾ
ಸ್ಫುರಿತಾಕ್ಷಿ
ರುಚಿಗಳಸಿಪಂ
ಜರದೊಳ್
ಸೆಱೆಗೆಯ್ದು ತರ್ಪವೊಲ್ ಸೊಗಯಿಸುಗುಂ

ರಮಣನ ಪರಾಂಗಶೋಭೆಯ
ನೆಮೆಯಿಕ್ಕದೆ
ನೋಡುತೆಯ್ದೆ ಬರುತಿರ್ಪಬಲಾ
ಸಮುದಯಮೆಸೆದುದು
ಕಣ್ಣಿಂ
ದಮೆ
ಕೂಂಕಿ ಕಡಂಗಿ ನೂಂಕಿ ತರ್ಪವೊಲವನಂ        ೬

ಆಗಳ್ ಗರವಸಂಗೊಳ್ವ ಮುಖಮಯೂಖಂಗಳಿಂ ಬೆಳ್ದಿಂಗಳ್ ಬೆಳ್ಳಂಗೆಡೆದಂತೆಯುಂ, ಮಿಡುಕುಗೊಳ್ವ ಕುಡುವುರ್ವುಗಳಿಂ ಕಾಮನ ಬಿಲ್ವಡೆಯಂ ಕೈವೀಸಿದಂತೆಯುಂ, ಬಂಬಲ್ಗೊಳ್ವ ಬಿಂಬಾಧರದೀಧಿತಿಗಳಿಂ ರಾಗಸಾಗರದ ಪೆರ್ವೊನಲೆ ಪರ್ಬಿದಂತೆಯುಂ ಉಲ್ಲಟಂಗೊಳ್ವ ಚಲ್ಲೆಗಣ್ಗಳಿಂ ಚಕೋರದ ಪಿಂಡನೆೞ್ಬಿಸಿಯುಂ, ಸುರ್ವುಗೊಳ್ವ ಸೋರ್ಮುಡಿಗಳಿಂ ಕಾಮಾಂಧಕಾರಂ ಕವಿದಂತೆಯುಂ, ಮಿಡುಕುಗೊಳ್ವ ಕೆಂದಳಂಗಳಿಂ ಕೆಂದಳಿರ ಕಾವಣಮನಳ್ಳಾಡಿದಂತೆಯುಂ, ತಳ್ಕೆಗೊಳ್ವ ತೋಳ್ವಳ್ಳಿಗಳಿಂ ಮದನಲುಬ್ಧಕಂ ಕೋೞ್ಮಿಗಕ್ಕೆ ಮೊಲೆಮೊಲೆಯನೊಱಸೆ ನೆಗೆದ ಕುಂಕುಮರಜಂಗಳಿಂ ತಂಬಿಸಿಲ್ ರಜಂಮಸಗಿದಂತೆಯುಂ, ಪೊಸಕುಸುಮದಿನಲ್ಲುಗುವ ಪರಾಗಪಟಲದಂತೆ ತೋಳ್ ತೞ್ಪೊಯ್ಯೆ ಪೊಣ್ಮುವ ಮಲಯಜರಜದಿಂ ಪುಡಿವೆಳ್ದಿಂಗಳೆೞ್ದಂತೆಯುಂ, ಮುಡಿದ ಸಂಪಗೆಜೊಡರ ಕಾಡಿಗೆವುಡಿ ನೆಗೆವಂತೆ ಮುಡಿಮುಡಿಯಂ ತಾಗೆ ನೆಗೆವ ಪುಡಿಗತ್ತುರಿಯಿಂ ದೂಳಿಗೞ್ತಲೆ ದಳ್ಳಿಸಿದಂತೆಯುಂ, ಮೊಲೆವೆಟ್ಟದ ಮೇಲೆ ಮಂಜು ಮುಸುಕಿದಂತೆ ಮುಸುಱುವ ಸುಲಿಪಲ್ಲ ಚವಿಗಳಿಂದಧರಾಮೃತ ಮನುಗುೞ್ವಂತೆಯುಂ, ಕರಕಮಲಂಗಳ್ ಮಧುರಧಾರೆಯಂ ಸುರಿವಂತೆ ಬೆಳಗಿನ ಬೆಳ್ಸರಿಯಂ ಸುರಿವ ಸೆಳ್ಳುಗುರ್ಗಳಿನನಂಗಜಂಗಮಧಾರಾಗೃಹಂಗಳಂತೆಯುಮಂತುಮಲ್ಲದೆ –

ಸಮವಾಯಂ ಧರೆಯೈದ ಯೌವತಮಯಂ ನೀರೈದೆ ಲಾವಣ್ಯವಾ
ರಿಮಯಂ
ಪೋ ಬೆಳಗೈದೆ ಚಾಪಳಚಳನ್ನೇತ್ರಪ್ರಭಾಪುಂಜರೂ
ಪಮಯಂ
ಮಾರುತನೈದೆ ಮಂದಸುರಭಿಶ್ವಾಸಾನಿಲಾಸಾರಸಾ
ರಮಯಂ
ವ್ಯೋಮವಿಭಾಗಮೆಯ್ದೆ ಘನವೇಣೀನೀಲರೋಚಿರ್ಮಯಂ      ೭

ಸ್ತ್ರೀ ರೂಪಮೆ ರೂಪಂ ಶೃಂ
ಗಾರಮೆ
ರಸಮತುಳಸುರತಗಂಧಮೆ ಗಂಧಂ
ಸಾರಸ್ಪರ್ಶಂ
ಗುರುಕುಚ
ಭಾರಸ್ಪರ್ಶಂಗಳಪ್ರಶಬ್ದಮೆ
ಶಬ್ದಂ   ೮

ಮತ್ತಂ ಕುಸುಮಧರ್ಮಮೆ ಧರ್ಮಂ ; ಪ್ರಿಯದರ್ಶನಮೆ ದರ್ಶನಂ; ವಸಂತ ಸಮಯಮೆ ಸಮಯಂ ; ಕಾಮಾಗಮಮೆ ಪರಮಾಗಮಂ; ಪ್ರೇಯಸೀಪ್ರಸಾದ ಪ್ರಣಾಮಮೆ ಪ್ರಣಾಮಂ ; ಚಿತ್ತೇಶ್ವರಾರಾಧನಮೆ ಪರಮಾರಾಧನಂ ; ಅತನು ತಾಪಮೆ ತಾಪಂ, ಅಳಕವ್ರಜದಾನಮೆ ದಾನಂ; ಸಂಭೋಗಮೆ ಭೋಗಂ ; ಮಾನಮೋಕ್ಷಮೆ ಮೋಕ್ಷಂ ; ಪ್ರಿಯಸಂಗತಿಯೆ ಸಂಗತಿ ; ಸುರತಸುಖಮೆ ಸುಖಂ ; ವಿರಹದುಃಖಮೆ ದುಃಖಂ ಎಂಬಂತೆ ಮಾಡಿದ ಪದ್ಮಸಂಭವನ ಸೃಷ್ಟಿಯನಿೞಿದು ಮಾಡುವಂತೆಯುಂ ಅನಂತಶೋಭಾನಿಲಯಮಾಗಿ –

ಬಿಸಿಲಂ ಲಾವಣ್ಯದಿಂ ಮಿಂಚಡರೆ ಬೆಳಗುತುಂ ನೀಳ್ದಪಾಂಗಂಗಳಿಂ ನು
ಣ್ಣಿಸುತುಂ
ದಿಕ್ಕಾಮಿನೀಸಂಕುಳಮನಮಳಹಾಸಪ್ರಭಾಪೂರದಿಂ ಪು
ಟ್ಟಿಸುತುಂ
ತಳ್ತಚ್ಚವೆಳ್ದಿಂಗಳನವಯವಶೃಂಗಾರವಾರಾಶಿಯೊಳ್ ತೇಂ
ಕಿಸುತುಂ
ವಕ್ತ್ರೇಂದುವಂ ಬಂದುದು ನೆರೆದಿದಿರಂ ವಾರನಾರೀನಿಕಾಯಂ  ೯

ಪಂಡಿತವನೇಜವನಮಾ
ರ್ತಂಡಗಾಲಂಬಿಹಾರಸುಮನೋಮಾಲಂ

ಪೆಂಡಿರ
ಕುಚಕೋಕಚಯಂ
ಪಿಂಡಚ್ಚನೆಯಾಡುವಂತೆ
ನರ್ತಿಸಿತಾಗಳ್    ೧೦

ಅಂತು ನೆರೆದು –

ಎಳಮಿಂಚಿಂ ಪೂೞ್ವವೋಲೆಣ್ದೆಸೆಗಳನೆಳೆಯಂ ನೈದಿಲಿಂ ತೀವುವಂತಾ
ಗಳೆ
ಬಾನಂ ಮೀಂಗಳಿಂದಂ ಮುಸುಕುವ ತೆಱದಿಂ ಕಾಂತೆಯರ್ ನೋೞ್ಪುದುಂ
ಣ್ಬೆಳಗಾಶಾದಂತಿದಂತದ್ಯುತಿ
ಬಳಸಿದುದೆಂಬಂತೆ ದುಗ್ಧಾಬ್ಧಿಪೂರಂ
ಬಳೆದತ್ತೆಂಬಂತೆ
ಮಂದಾಕಿನಿಯೆ ಕವಿದುದೆಂಬಂತೆ ಪರ್ಬಿತ್ತಗುರ್ಬಿಂ      ೧೧

ಮೃಗಶಿಶುನೇತ್ರೆಯರ್ ನೆರೆದು ಬಂದು ಸುಧಾರಸದಿಂದೆ ಮಜ್ಜನಂ
ಬುಗಿಸುವವೊಲ್
ಬೞಲ್ದ ನೃಪನಂ ನಡೆನೋಡಲೊಡಂ ದುಕೂಲ ದಂ
ಗಿಗೆ
ತನುವಿಂಗೆ ಮುತ್ತಿನ ಸರಂ ಮಿಸುಪೊಂದು ಕೊರಲ್ಗೆ ತೋರಮ
ಲ್ಲಿಗೆ
ತುಱುಬಿಂಗೆ ಚಂದನರಸಂ ಪಣೆಗಾದುದು ನೇತ್ರಕಾಂತಿಗಳ್ ೧೨

ಆಕೆಗಳ ಕಣ್ಗಳ ಕಾಂತಿಪ್ರವಾಹದೊಳ್ ಪಾಲ್ಗಡಲೊಳ್ ಮುೞುಂಗಿ ಪೋಪ ಚಂದ್ರಮನಂತೆ ಚಂದ್ರೋದಯಂ ಮುೞುಂಗಿ ಕಿಱಿದಂತರಮಂ ಪೋಗೆವೋಗೆ ; ಮುಂದೆ ಮಂದೈಸಿ ನಿಂದಿರ್ದ ಮುಗ್ಧೆಯರ ಮುಖಮಂಡಲಂಗಳಿಂ ಚಂದ್ರಲೋಕಮವತರಿಸಿದಂತೆಯುಂ, ಸೋರ್ಮುಡಿಗಳಿಂ ಸೋಗೆನವಿಲ ಪಟ್ಟಿಯಂತೆಯುಂ, ಬಿಂಬಾಧರಂಗಳಿಂ ಪವಳದ ಪಗವಂ ತೆರೆದಂತೆಯುಂ ಮುಗುಳ್ನಗೆಗಳಿಂ ಬಿಡುವೆಳ್ದಿಂಗಳ ಭಂಡಾರದಂತೆಯುಂ, ನಱುಸುಯ್ಗಳಿಂ ಸುರಭಿಪವನನ ಸೆಱೆವನೆಯಂತೆಯುಂ, ಪೊಳೆವ ಕದಂಪುಗಳಿಂ ರತಿಯ ದರ್ಪಣನಿಳಯದಂತೆಯುಂ, ಕುಚಕಳಶಂಗಳಿಂ ಕಾಮನಭಿಷೇಕಕಲಶಗೃಹದಂತೆಯುಂ, ಮಿಸುಪಸಿಯ ಮೆಯ್ಗಳಿಂ ಮನಸಿಜನ ಜೇನ ಸಾಲೆಯಂತೆಯುಂ, ಸರ್ವಾಂಗಮಾಧುರ್ಯದಿಂ ಮದನನ ಜೇವಣಸಾಲೆಯಂತೆಯುಂ, ಲಾವಣ್ಯರಸದ ಪೊನಲಿಂ ನೇತ್ರಪಥಿಕರ್ಗಱವಟ್ಟಿಗೆಯಂತೆಯುಮೆಸೆವ ಪಸುರ್ವಂದರೊಳಗಂ ವಿಸ್ಮಯದಿಂ ನೋಡುತ್ತುಮರಸಂ ಬರ್ಪಾಗಳ್ –

ಜಲಕನೆ ಕೆಂಪು ಬಾಯ್ದೆಱೆಯಿನೊಕ್ಕವೊಲೊಪ್ಪಿದುವಲ್ಲಿಗಲ್ಲಿಗಾ
ದಲತಗೆವಜ್ಜೆಗಳ್
ತಳಿರ ಚಂದನದೊದ್ದೆಗಳಾಮೃಣಾಳಕೋ
ಮಲೆಯರ
ಕಣ್ಣ ಬೆಳ್ವೆಳಗೆ ತೀವಿ ತುಳುಂಕಿದವೋಲ್ ವಿಳಾಸಮ
ಗ್ಗಲಿಸುವಿನಂ
ಬೆಳರ್ತೆಸೆವುದಾ ಪಸುರ್ವಂದರ ಭೂಮಿಭಾಗದೊಳ್       ೧೩

ಜಂತದ ಪಾಪೆಗಳ್ ತಳಿರ ತುಂತುರನೋಸರಿಸುತ್ತೆ ಕೈಗಳಿಂ
ದಂ
ತರುಣೀಸಮೂಹದ ವಿಳಾಸರಸಾಬ್ಧಿಯೊಳಾಗಳೀಸಿ
ರ್ಪಂತಿರೆ
ಪರ್ಬಿದಾಕೆಗಳ ಕಣ್ಬೆಗಳಂ ಬಗಿದೊತ್ತಿ ನೂಂಕಿ
ರ್ಪಂತಿರೆ
ಬರ್ಪ ಭೂಮಿಪತಿ ಪೂಗೊಳದೊಳ್ ಬರುತಿರ್ಪ ಹಂಸನಂ      ೧೪

ಅಂತು ಪೋಲ್ತು ಮತ್ತಮಿನಿಸಂತರಮಂ ಬರೆವರೆ –

ಮದನನ ರಾಜ್ಯಲಕ್ಷ್ಮಿಯೊದವಿಂತಿದು ಕಾಮನ ಪೆಂಡವಾಸಮಿಂ
ತಿದು
ಕುಸುಮಾಸ್ತ್ರಚಕ್ರಿಯ ಜಗತ್ರಯಜೈತ್ರವಧೂನಿಕಾಯಮಿಂ
ತಿದು
ಮಧುಮಿತ್ರತಾಪತಪದಿಂ ಪಡೆವಗ್ಗದ ಸಗ್ಗಮಿಂತಿದೆಂ
ಬುದನೆನೆಸಿತ್ತು
ಸುತ್ತಿಱಿದು ಸಂದಣಿಗೊಳ್ವಬಲಾಕದಂಬಕಂ      ೧೫

ತನಿಸೊರ್ಕಿಂ ಪೊಸವೇಟಮಂ ಪಡೆವ ಕೂರ್ಪಿಂ ನಲ್ಲರಂ ಕಾವ ಕಾ
ಮಿನಿಕಾಯಂಗಳನುರ್ಕಿ
ಕೊಲ್ವೆಸಕದಿಂದಬ್ಜಾಸನಂ ಚಿತ್ತಭೂ
ಜನಕತ್ವಂ
ವಿಷಮೇಕ್ಷಣಂ ತನಗೆನಲ್ಕಾ ಮೂವರಂ ದೇವರಂ
ವನಿತಾನೀಕದ
ಕಣ್ಗಳೇನಿೞಿಸವೇ ಪೇೞ್ ಮೂಱು ಬಣ್ಣಂಗಳಿಂ   ೧೬

ದೇವರ್ಗಿತ್ತು ಕಳಾಳಿಯಂ ಸವೆಯಲೇನಾತಂಗೆ ಪೋ ಮಾಡಿದಂ
ಕಾವಂಗೋಲಗಿಸಲ್ಕೆ
ಚಂದ್ರನಱಿವಂದೀ ಕಾಮಿನೀಲೋಕಮಂ
ತೀವಿತ್ತಲ್ಲದೊಡೀ
ಲಸನ್ಮದಮೃಗ ಸ್ಮೇರಾಕ್ಷಿವಿಕ್ಷೇಪಮಿ
ಲಾವಣ್ಯಾಮೃತಪೂರಮೀ
ವಟಫಲೋಷ್ಠವ್ರಾತಮೆಂತಾದುದೋ ೧೭

ಕೆದಱಿದ ಚಿನ್ನಪೂಗಳ ಕುರುಳ್ವೆಡೆವಿಂಡು ಬೞಲ್ದು ನೀಳ್ದು
ರ್ವಿದ
ಮುಡಿದಾವೆ ನಾಗಿಣಿಯರಂ ನಗಲೆಯ್ದೆದೆ ಕೊಂಕಿ ಪಾಯ್ದು ಚೆ
ಲ್ಲದಿನೆಮೆಯಿಕ್ಕಿದೊಂದೆ
ನಿಮಿಷಂ ನಡೆ ನೋಡುವ ನೋಟಮೊಂದೆ ಸಾ
ಲದೆ
ಸುರಕಾಮಿನೀಜನಮನೋಡಿಸಲೀ ರಮಣೀಸಮೂಹದಾ   ೧೮

ಇದು ಹರಿಯೊತ್ತೆಯಿಟ್ಟ ವನಮಾಲೆಯಿದಂಗಜವೈರಿ ಲಂಚಮ
ಟ್ಟಿದ
ಶಶಿಲೇಖೆ ಪದ್ಮಮಿದು ಪದ್ಮಜನೇಱುವಿದೆಂದು ತೋಱುವಂ
ದದೆ
ಕುಚದೊಚ್ಚರಂ ಮುಡಿಯೊಳಾಗಡೆ ಕುತ್ತಿದ ಕೇತಕೀದಳಂ
ಕೆದಱಿ
ಕರಾಬ್ಜದಿಂ ತಿರಿಪುವಬ್ಜಮದೇನೆಸೆದತ್ತೊ ಪೆಂಡಿರಾ       ೧೯

ಆಲದ ಪಣ್ಣಿಗೆತ್ತು ತುಟಿಯಂ ಗಿಳಿ ತಿಂದುದು ಹಂಸೆ ತೋಳ್ಗಳಂ
ಬಾಲಮೃಣಾಳಮೆಂದುಗಿದು
ಸೀೞ್ದುದಿರುಳ್ ಕುಚಮಂ ರಥಾಂಗಿಯೀ
ಬಾಲೆಯ
ಮೇಲೆ ಪಾಯ್ದು ಪತಿಶಂಕೆಗೆ ಚುಂಬಿಸಿತೆನ್ನ ನನ್ನಿಯೆಂ
ದಾಲಿಯರಾಳಿಗೊಂಡು
ವಿಟರಂ ಹುಸಿವರ್ ಸುರತಕ್ಷತಂಗಳಂ   ೨೦

ಕಾಂತರನಿಂದು ಕಾಂತನಖರೇಖೆಯಿನಾದಮಲಂಪಿನಿಂದಮೇ
ಕಾಂತದೊಳೊಯ್ಯನೋಸರಿಸಿ
ಮೇಲುದನೀಕ್ಷಿಸುವಾಗಳುನ್ನ
ತ್ಕಾಂತಕುಚಂಗಳೊಳ್
ಪೊಳೆದು ತೋಱುವ ತಮ್ಮ ನೆೞಲ್ಗಳಂಗನಾ
ಭ್ರಾಂತಿಯನೀಯೆ
ನೋಡಲಣಮಣ್ಮದೆ ನಾಣ್ಚುವರಲ್ಲಿ ಮುಗ್ಧೆಯರ್        ೨೧

ನೀಱೆ ನಿರೀಕ್ಷಿಸುತ್ತೆ ಮಣಿದರ್ಪಣಮಂ ಮುಗುಳಿಂ ಬೞಲ್ದು ಕಂ
ಪಾಱದೆ
ತಳ್ತ ತೋರಗುರುಳಂ ತೆಗೆಯುತ್ತಿರಲಲ್ಲಿ ಪಾಯ್ದ ಪೆ
ಣ್ಣಾಱಡಿ
ಪಾಱೆ ಕೂರುಗುರ ಕೋಳ್ಗಗಿದಾಗಳೆ ತನ್ನ ಕುಂತಳಂ
ಪಾಱಿತೆಗೆತ್ತು
ಪಾರೞಿದು ಪಾಱಿದಳೇಂ ಕರಮಾಕೆ ಮುಗ್ಧೆಯೋ ೨೨

ಕೆಂದಳದ ಕೆಂಪು ತಳದೊಳ್
ಕೆಂದಳಿರಿರ್ಪಂತ
ತೋಱೆ ಕಣ್ಗಂ ಮುಡಿಗಂ
ಕೆಂದಳಿರಂ
ಮಿಸುಪಸುಕೆಯ
ಕೆಂದಳಿರಂ
ಮುಡಿದ ಮುಗ್ಧೆಯೆಡೆಯಾಡಿಸಿದಳ್         ೨೩

ಕಾಡಿಗೆಯನೆಚ್ಚಿ ಕನ್ನಡಿ
ನೋಡುವ
ಮುಗ್ಧಾಕ್ಷಿ ಕಣ್ಣ ಬೆಳತಿಗೆವೆಳಗಂ
ಕಾಡಿಗೆ
ಮಱೆವುಗೆ ಕಾಡಿಗೆ
ಗೂಡದಿದೇಕೆಂದು
ಕೆಳದಿಯಂ ಬೆಸಗೊಂಡಳ್ ೨೪

ಅಂತನೇಕಭಾವರೂಪಾತಿಶಯಾಕ್ರಾಂತೆಯರಪ್ಪ ಕಾಂತೆಯರಂ ಕಡೆಗಣ್ಣೊಳಡರೆ ನೋಡಿ ಕೌತುಕಂಬಡುತ್ತುಂ –

ಕಯ್ಯೊಳ್ ಕರ್ಬಿನ ಚಾಪಮಿಲ್ಲದರಸಂ ಪುಷ್ಪಾಯುಧಂ ಬರ್ಪವೋಲ್
ಮೆಯ್ಯೊಳ್
ಲೋಚನಮೊಂದುಮಿಲ್ಲದಮರಂ ವಜ್ರಾಯುಧಂ ಬರ್ಪವೋಲ್
ರಯ್ಯಂ
ಬಂಬಳ ಬಾಡೆಯುಂ ವಿರಹದಿಂ ಕಾಂತಾಜನಸ್ವಾಂತದೊಳ್
ಪೊಯ್ಯುತ್ತುಂ
ಪೊಸತೊಂದು ರಾಗರಸಮಂ ಬಂದಂ ಮನೋಜಾಯುಧಂ         ೨೫

ಮಾಸದ ಮಲಯಜರೇಖಾ
ನ್ಯಾಸಂ
ಕರಮೆಸೆದುದಾ ವಿಳಾಸಿನಿಯರ್
ಣ್ಪಾಸಿಗದೆ
ಮುಳಿದು ಮೋದಿದ
ಬಾಸುಳಿವೆನೆ
ಮೆಯ್ಯೊಳಾ ನರೇಂದ್ರಾತ್ಮಜನಾ         ೨೬

ಬಳಸಿದಬಳೆಯರ ಘನಕುಚ
ಕಳಶಂಗಳ
ನಡುವೆ ನೃಪತಿ ಲಾವಣ್ಯಮಹಾ
ಜಳಧಿಯೊಳಮಿರ್ದಲಾಬೂ

ಫಳತತಿಗಳ
ತೆಪ್ಪದಿಂದೆ ಬರ್ಪವೊಲೆಸೆದಂ   ೨೭

ವನಿತಾವದನಜ್ಯೋ
ತ್ಸ್ನಾವಿಳಸಿತದಿಂದೆ
ಮೆಯ್ಯ ಸಾಸಿರಮುಂ
ಣ್ದಾವರೆ
ಮುಗಿಯೆಯುಮೊಪ್ಪುವ
ದೇವೇಂದ್ರನ
ತೆಱನನವನಿಪಾಲಂ ಪೋಲ್ತಂ  ೨೮

ಮನೋಜನಿವನಪ್ಪನಲ್ಲವೆನುತಿರ್ಪ ಸಂದೇಹಮಂ
ತನೂದರಿಯ
ಚಿತ್ತದಿಂ ತೊಲಗಿಪಂತಿರೊಪ್ಪಿತ್ತು ಕಾ
ಮಿನೀಜನದ
ಸಂಕ್ರಮಶ್ರಮ ಜಲಾರ್ದ್ರದೊಳ್ ಪೀವರ
ಸ್ತನದ್ವಯದ
ಮಧ್ಯದೊಳ್ ತೊಳಪ ರೂಪು ಭೂಪಾಲನಾ        ೨೯

ಅಂತು ಬರೆ –

ಕಿವಿಯಂ ನೋಡೆಂದು ಕಣ್ಗಳ್ ತೆಗೆವ ತೆಱದೆ ಕರ್ಣಾಂತಮಂ ತಾಗೆ ನೀಂ ಕೂ
ರ್ತವನೀಶಂ
ಭಾವಿಸೆಂದಾಕೆಯನಲುಗುವವೋಲ್ ಚಿತ್ತಮಲ್ಲಾಡೆ ತಾಂ
ರ್ದವಿಸುತ್ತಂ
ಕಣ್ಗಳಿಂ ಹೃತ್ಕುಮುದಮೆ ಪೊಱಮಟ್ಟಂತೆ ನೇತ್ರಪ್ರಭಾಕೈ
ರವದಾಮಂ
ನೀಳ್ಕೆ ಲೀಲಾವತಿ ನೃಪಸುತನಂ ದೂರದೊಳ್ ನೋಡಿ ಕಂಡಳ್      ೩೦

ಸ್ಮರಸಂತಾಪಾನಲಂ ದಳ್ಳಿಸೆ ಕಿಡಿವಿಡುವೀ ಕಣ್ಬೊಣರ್ ತಾಗೆ ಚಿತ್ತೇ
ಶ್ವರನಂಗಂ
ಬೇಗುಮೆಂಬಂತಳವಿೞಿದತಿಕ್ಷುಬ್ಧಚಿತ್ತಾಬ್ಧಿಯಿಂ ಮೋ
ಹರಸಂ
ಕಣ್ಣಿಂ ತುಳುಂಕಿತ್ತೆನೆ ಕರಮಗುೞ್ದಾನಂದಬಾಷ್ಪಾಂಬುವಿಂ
ಣ್ಮರಲಂ
ನಾಂದುತ್ತೆ ಚಂದ್ರೋದಯನನೊಲವಿನಿಂದಾಕೆ ನೋಡುತ್ತಮಿರ್ದಳ್      ೩೧

ನೊರೆವಿಂಡಂ ಮೀನುಮುಳ್ವಂತಿರೆ ಬಿಳಿಯೆಳನೆಯ್ದಿಲ್ಗಳಂ ನೆಯ್ದಿಲೆಂಬಂ
ತಿರೆ
ನುಣ್ಬೆಳ್ದಿಂಗಳಂ ಕೋಮಳಚಪಳಚಕೋರದ್ವಯಂ ಕಾಱುತಿರ್ಪಂ
ತಿರೆ
ನೀಡುಂ ನೋಡಿ ಚಂದ್ರೋದಯನನಬಲೆಯರ್ ಕಂಡು ಸೋಲ್ತಪ್ಪರೆಂಬೀ
ಪುರುಡಿಂ
ಕಾಯ್ದಂದದಿಂದೇಂ ಮುಸುಕಿದಳೊ ವಿಶಾಲಾಕ್ಷಿ ನೇತ್ರಾಂಶುವಿಂದಂ     ೩೨

ಆ ಪ್ರಸ್ತಾವದೊಳ್ –

ಪಡೆದುದು ಚೆಲ್ವಂ ಕೇಳಲ್
ಪಡೆಯದೆ
ನಡೆನೋಡಿಯಾದೊಡಂ ಕಿವಿವೇಟಂ
ಬಡೆಯವೆ
ಕಿವಿಗಳ್ ಕಣ್ಣಂ
ಪಡೆದಂತೆವೊಲವಳ
ಕರ್ಣಪೂರದ ನೆಯ್ದಿಲ್  ೩೩

ಅಂತಾಕೆ ನೋಡುತ್ತುಮಿರೆ –

ಎಳಗೆಸಱೆರ್ದ ಕತ್ತುರಿಯ ನೀರೊಳೆ ಕುಂಕುಮವೆತ್ತಿಕೊಂಡ ನೀ
ರೊಳೆ
ನವಚಂದನಂ ನೆರೆದ ನೀರೊಳೆ ಪೋಲಿಸಲಾದ ನೀಳಕುಂ
ತಳೆಯರ
ನೀಳಶೋಣಮಣಿ ಮೌಕ್ತಿಕಮಂಡನದಿಂದೊಸರ್ತ ನು
ಣ್ಬೆಳಗಿನ
ಬೆಂಚೆಯೊಳ್ ಮುೞುಗಿ ನಿಂದ ಮನೋಭವತಾಪತಪ್ತೆಯಂ     ೩೪

ಒದವಿ ಫನಾಗಮಂ ಪಿಡಿದ ಕೌಮುದಿಯಂತೆ ಬಿಸಿಲ್ಗೆ ಮೆಯ್ಯನೊ
ಡ್ಡಿದ
ಲತೆಯಂತೆ ಬೇಸಗೆಗೆ ಸಿಲ್ಕಿದ ನಿಮ್ನಗೆಯಂತೆ ಮಾಗೆಮು
ಟ್ಟಿದ
ದಿನಲಕ್ಷ್ಮಿಯಂತೆ ಮಿಗೆ ಮಂಜಿಱಿದಬ್ಜಿನಿಯಂತೆ ಕನ್ನೆವೇ
ಟದ
ಪೊಸಗಿಚ್ಚಿನೊಳ್ ಪೊರಳುತಿರ್ದು ಕರಂ ಕೊರಗಿರ್ದ ಕಾಂತೆಯಂ    ೩೫

ಸಮನಿಸಿದುದನಿಮಿಷತೆ ವಿರ
ಹಮಹಾತಪದಿಂದಮೀಕೆಗೆಂಬಂತಿರೆ
ಸೋ
ಲ್ತೆಮೆಯಿಕ್ಕದೆ
ನೋೞ್ಪ ಮನೋ
ರಮೆಯಂ
ಕಂಡಂ ನರೇಂದ್ರಚೂಡಾರತ್ನಂ    ೩೬

ಮತ್ತಮಾಗಳ್ –

ಬಿಡದೆರ್ದೆ ಗೊಳ್ವ ಕಾದಲನ ತಸ್ಕರಲೋಚನಮೆಲ್ಲಿ ಬಿರ್ದೊಡಂ
ನಡುವಿನಮಂಗಜಂ
ಬಸಿದ ಸೂಲಮನಿಕ್ಕನೆ ಮೆಯ್ಯೊಳಿಟ್ಟ ಕೈ
ಸಿಡಿವಿನಮಳ್ವಿಕೊಳ್ವ
ವಿರಹಜ್ವರದುಗ್ರತರಾತಿರೇಕದಿಂ
ತಡಹರಮೆರ್ದುವೆಂಬಿನೆಗಮೆರ್ದುವು
ಮೆಯ್ನವಿರಾ ಮೃಗಾಕ್ಷಿಯಾ          ೩೭

ಎಳೆಯಳೆ ನಲ್ಲನೀ ಬರುತುಮಿರ್ದನೆ ತಳ್ತಿರಲೆಂದು ನೊಂದು ದು
ರ್ವಳತೆಯನಾಂತ
ಮೆಯ್ಯ ವಿರಹಾನಲನಾಳಿಯರೊಂದಹರ್ನಿಶಂ
ತಳಿಯೆ
ತೆಮಳ್ದು ಪೀರ್ದ ಪೞನೀರ್ಗಳನೞ್ಕಿ ಸಲಾಱದೆಯ್ದೆ ಕಂ
ಟಳಿಸಿ
ಮಗುಳ್ಚಿದಪ್ಪುದೆನಲುಮ್ಮನೆ ಕಾಮಿನಿಯೇಂ ಬೆಮರ್ತಳೋ         ೩೮

ಚಳಭೃಂಗಾರಂಗಳೊಳ್ ಮಾಣಿಕದ ಮುಕುರದೊಳ್ ಕಾಮಿನೀ ಕಾಂತ ಗಂಡ
ಸ್ಥಳದೊಳ್
ಮೆಯ್ದೋಱೆ ವಿದ್ಯಾಧರಿಯ ಸುಲಲಿತಚ್ಛಾಯೆಗಳ್ ನಲ್ಲನಂತಾಂ
ಪಲವುಂ
ಕಣ್ಣಿಂದೆ ನೋಡಲ್ ಪಲವುಮಲಸದೋರ್ವಲ್ಲಿಯಿಂ ತಳ್ತು ಕೂಡಲ್
ಪಲವುಂ
ವಕ್ತ್ರಾಬ್ಜದಿಂ ಚುಂಬಿಸಲೆ ಪಲವು ರೂಪಾದವೊಲ್ ಕಣ್ಗೆ ವಂದಳ್  ೩೯

ಈಗಳೆ ಕಿಚ್ಚಿನಂತಳರ್ದು ಕೊಂದಪುದೋ ವಿಧು ಪೆರ್ಚಿದಂದದೇ
ನಾಗಳೆ
ಕೊಲ್ಗುಮೆಂದು ಶಶಿಲೇಖೆಯನಾ ಕಮಲಾಕ್ಷಿ ಕೋಪದು
ದ್ವೇಗದ
ಸೀೞ್ವವೋಲೆಸೆವ ಸೆಳ್ಳುಗುರಿಂದಮೆ ಸೀೞುತಿರ್ದಳಿಂ
ಬಾಗಿರೆ
ನೀಳ್ದ ಕೇದಗೆಯ ನುಣ್ಗಱಿಯಂ ಪಿಡಿದೊಂದು ದೇಸೆಯಿಂ          ೪೦

ಮೃಗಶಿಶುನೇತ್ರೆ ನಲ್ಲನನೆೞಲ್ದೆಮೆಯಿಕ್ಕದೆ ನೋಡೆ ನೀಳ್ದು ಕೇ
ದಗೆಯೆಸೞಂತೆ
ಪಾಯ್ದು ಕಡೆಗಣ್ಣಳಿಗಳ್ ಕಿವಿಯುತ್ಪಲಂಗಳಂ
ಬಗೆಯದೆ
ಬಿಟ್ಟು ಪಾಯ್ದು ಮಱೆಯಾದೊವಂ ಬಿಡೆ ಬೆರ್ಚಿ ನೋಡುವ
ಚ್ಚಿಗದೊಳೆ
ಪಕ್ಷ್ಮದಿಂ ಪೊಡೆದ ಭಾವಮನಾವನೊಱಲ್ದು ನೋಡಿದಂ        ೪೧

ಅದಲ್ಲದೆಯುಂ –

ಕುಸುಮಾಸ್ತ್ರಾಹತಿಗೊಡ್ಡಿದಂತಿರೆರ್ದೆಯೊಳ್ ಕೈ ಜಾನದಿಂದಾನನಂ
ಶ್ವಸಿತಂಗುಂದಿರೆ
ಬೆಂಕೆಗೆತ್ತಿಗಿದವೊಲ್ ಬೆಳ್ದಿಂಗಳಿಂ ಬೇವುತುಂ
ಪೊಸಯಿಪ್ಪಂತಿರೆ
ಪಾಂಡುರಚ್ಛವಿ ಗಳದ್ಬಾಷ್ಪಾಂಬುವಿಂ ನಾಂದು ಪಾ
ವಸೆಗೊಂಡಂತಿರೆ
ಗಂಡಮುನ್ಮದಮಿಳಲ್ಲಂಬಾಳಕಂ ಬಾಳೆಯಾ ೪೨

ಅಮರ್ದ ಕುಚದೆಡೆಯಿನೆರ್ದೆಯಿಂ
ದಮರ್ದಿದ
ಮದನಾಗ್ನಿ ಪರಿದ ಪಜ್ಜೆಯಿದೆನೆ ಬಾ
ಮದಾಳಿ ನೀಳವರ್ಣಂ
ರಮಣಿಯ
ನವರೋಮರಾಜಿಯೇಂ ರಾಜಿಸಿತೋ       ೪೩

ಲಲನೆಯ ಕನ್ನವುರದ ನಯ
ದಿಲೊಳೆ
ಬೞಲ್ದಿರ್ಪ ನೇತ್ರಪುತ್ರಿಕೆಗಳ್ ಕಾ
ದಲನಂ
ಕಾಣದೆ ವಿರಹಾ
ನಲನಿಂ
ಪೊರೞುತ್ತುಮಿರ್ಪವೋಲ್ ಕರಮೆಸೆಗುಂ      ೪೪

ಕರಗಣ್ಮಿ ಪೊಣ್ಮುವಶ್ರುವ
ಬರಿವೊನಲೊಳ್
ತೇಂಕಿ ಕಣ್ಣಪಾಪೆಯ ಪೊಣರುಂ
ಬೆರೆಯಿಸಿ
ಸಲೆ ಪೊಯ್ನೀರೊಳ್
ಪೊರೞ್ವವೋಲ್
ಪೊರೞುತಿರ್ದುವಾ ಬಾಲಕಿಯಾ      ೪೫

ಸ್ತನದೊತ್ತಿಂ ಮಡುಗಟ್ಟಿದ
ವನಿತೆಯ
ಕಣ್ಬನಿಗಳೊಳಗೆ ಸುೞಿದಳಿಗುರುಳಿಂ
ನನೆಗಳ್
ತೇಂಕುತ್ತಿರ್ದುವು
ನನೆಗುಡಿಗೊಳ್ವಂತೆ
ಮಱುಗಿ ಪಾಯ್ವೆರ್ದೆಯವಳಾ     ೪೬

ಕಡುಗೂರ್ಪುದರ್ಕೆ ನಿನಗಾಂ
ಸುಡುತಿರ್ಪ
ಶಶಿಯೆ ದಿವ್ಯಮೆಂದಬಳೆಯದಂ
ಪಿಡಿವಂತೆ
ಪತಿಗೆ ಸಿರಿಗ
ನ್ನಡಿಯಂ
ಪಿಡಿದೆತ್ತಿದಳ್ ಕರಂ ಸಂಭ್ರಮದಿಂ  ೪೭

ಅಂತೇಕಕ್ಷಣದೊಳನೇಕವಿಧ ಕಾಮವಿಕಾರಂಗಳಾಗೆ –

ಇೞಿದ ಕುರುಳ್ ಬೞಲ್ದ ಮುಡಿ ಬತ್ತಿದ ಬಾಯ್ ಸತವಾದ ದೇಸೆ ಕೆಂ
ಪೞಿದಧರಂ
ಪೞುಂಕಿದ ತನುಚ್ಛವಿ ಪಾಯ್ವೆರ್ದೆ ಸೂಸಿ ಪಾಯ್ವ ಸುಯ್
ಕೞಿಯೆ
ಬೞಲ್ದ ಕಣ್ ತಳಿರ ಪಾಸುಗಳೊತ್ತೆ ಪೊದಳ್ದ ಬಾಸುಳಂ
ದುೞುಗಿಸೆ
ಚಿತ್ತಮಂ ವಿರಹ ವಲ್ಲಭನೊಳ್ ನೆರೆದಿರ್ದ ನಲ್ಲಳಂ    ೪೮

ಅಂತು ಕಂಡು ಪುರುಡಿಸಿ ಪರಿದು ನಟ್ಟದಿಟ್ಟಿಯಿಂ ಬರತೆಗೆದೊಳಗಿಟ್ಟಂತೆಯುಂ, ಆಕೆಯ ಕಟಾಕ್ಷ ಕುಂತದಿಂ ಕುತ್ತುವಡೆದು ಕೆಡೆದಂತೆಯುಂ ಅರಸಂ ಮೂರ್ಚ್ಛೆವೋಪುದುಮಲ್ಲಿಂ ಮುನ್ನಮೆ –

ಉದಯಿಸಿ ರಾತ್ರಿಯೊಳ್ ಕಿರಣಕುಂತದಿನೆನ್ನನೆ ಕುತ್ತಿ ಕೊಂದುದೆ
ಯ್ದೆ
ಪಗಲುಂ ಕಡಂಗಿ ಕೊಲಲೀ ಕವಿತಂದನೆ ಮಾಯ್ದ ಚಂದ್ರನೇಂ
ದಿದಿರೊಳೆ
ಭೂಪನಾನನಮನೀಕ್ಷಿಸಿ ಭೀತಿ ಬೞಲ್ಚಿ ಮುಚ್ಚೆಗೆ
ಯ್ದಿದಳನೆ
ಮುಚ್ಚೆವೋದಳವಳಚ್ಚರಿಗೊಳ್ವಿನೆಗಂ ಸಖೀಜನಂ     ೪೯

ಅಂತವರಿರ್ವರುಂ ಮುಚ್ಚೆವೋಪುದುಮಱಿದತ್ತ ಕಳಾವತಿ ಮೊದಲಾದ ಕೆಳದಿಯರುಮಿತ್ತ ಮಕರಂದಂಬೆರಸು ಬರ್ಪ ಬಾಲಿಕಾನಿಕಾಯಮುಂ ಶೀತಲಕ್ರಿಯೆಯಿನೆೞ್ಚಱಿಸಿ ಮಾಲತಿಯೊಳ್ ಮಾಧವನಂ ಕೂಡಿದ ಕಾಮಾಂಧಕಿಯಂತೆಯುಂ, ಜಕ್ಕವಕ್ಕಿಗಳಂ ಕೂಡುವ ಸುಪ್ರಭಾತವೇಳೆಯಂತೆ ಯುಂ, ಅಲ್ಲದೆ ಶುಭಸ್ವಪ್ನದರ್ಶನ ದತ್ತಾನುರಾಗಮಪ್ಪ –

ಗುಣಿಗಳನಿವರಂ ಪೊನ್ನೊಳ್
ಮಣಿಯಂ
ಕೂಡುವವೊಲಿಂತು ಕೂಡುವಳೇಕಾ
ಗ್ರಹಿಯೆತ್ತಣ
ಕೋಗಿಲೆಯೆ
ತ್ತಣ
ಮಾಮರನುಂಟೆ ದೇವಿಗರಿದುಂ ಪಿರಿದುಂ         ೫೦

ಎಂದು ಪದ್ಮಾವತಿಯ ಪ್ರಭಾವಕ್ಕೆ ಬೆಕ್ಕಸಂಬಟ್ಟು ವಧೂವರರ ಸಮಾನುರೂಪಾನುರಾಗಕ್ಕೆ ಸಂತೋಷಂಬಟ್ಟು ಬಗೆದು ಗಂಧರ್ವವಿವಾಹಮಂ ಮಾೞ್ಪ ಮನಮಂ ತಂದು ದಂಪತಿಗಳಂ ಬೇಱೆವೇಱೆ ಮಂಗಳವಸದನಂಗೆಯ್ಸಲುತ್ಸುಕೆಯರಾಗಿ –