ಒಗೆವಳಿಗಳೊತ್ತೆ ವನವೇ
ಶ್ಯೆಗೆ
ಮಧುವಿಟನಟ್ಟಿದೊತ್ತೆ ಪೋಲ್ತುದು ಪೊಸಸಂ
ಪಗೆ
ಬೇಟಮನಱಸುವ ದೀ
ವಿಗೆ
ವಿರಯಿಯನಿಸಲೆ ಕಾಸಿದತನುವ ಸರಲಂ         ೫೧

ಕೆಂದಳಿರೆ ಮುಡಿದ ಮಾಂದಳಿ
ರಂದಮಲರ್ಗೊಂಚಲೊದವೆ
ಗುಂಜೆಗಳಂ ತೊ
ಟ್ಟಂದಮನಿಂದನುಕರಿಸೆ
ಪು
ಳಿಂದಿವೊಲೆಸೆದತ್ತಶೋಕವಲ್ಲರಿ
ವನದೊಳ್  ೫೨

ಎಂದಾವನಪಾಲಕಿಯರ್ಗೆ ಮಾಂದಳಿರಂ, ಮಾಮಿಡಿಗೆ ಪಚ್ಚೆಯ ಸಾರಮಂ, ಮಲ್ಲಿಗೆಗೆ ಮುತ್ತಂ, ಪಾದರಿಗೆ ದಾಳಿಂಬಸಾರಮಂ, ಸುರಯಿಗೆ ರನ್ನದೊಡವಂ, ವಸಂತವನಕ್ಕೆ ಸುವರ್ಣವಸ್ತುಮಯ ಮಂಡನಂಗಳಂ ಪಸಾಯಮನಿತ್ತು, ತಳಿರ್ಗಳಂ ಪೂಗಳಂ ಮುಡಿಯೊಳಿಟ್ಟು ಬಸಂತಂಗಿದಿರೆರ್ದು ಪೊಡೆವಟ್ಟು ಚೈತ್ರೋತ್ಸವಮೆ ಜವಂಬೊಯ್ದಂತೆ ಜೀವಿತೇಶ್ವರಂಬೆರಸು ವನಕೇಳಿಗುಜ್ಜುಗಂಗೆಯ್ದು ಪಡಿಯಱವಕ್ಕಿಯಂ ಕರೆದು ಸಖೀಜನಮಂ ಸಾಱಿ ಕರೆಯಿಮೆಂಬುದುಮದು ಬಂದು ಮಾವಿನ ತುದಿಗೊಂಬಂಮೆಟ್ಟಿ ಕರೆವುದುಮಾಧ್ವನಿಗೆ ತಳವೆಳಗಾಗಿ ತಮ್ಮಿನಿಯರಲ್ಲಿಗೆ –

ಅರೆಗರ್ಚಿಕೊಂಡು ಪಾಱಿದು
ವರಗಿಳಿಗಳಶೋಕಪಲ್ಲವಂಗಳೊಳಾಗಲ್

ಬರೆದುಗುರ್ಗಳಿನವಿನಾಣಂ

ಬೆರೆಸಟ್ಟಿದನಂಗಲೇಖಮಂ
ತರುಣಿಯರಾ    ೫೩

ಅಂತಟ್ಟಿದನಂಗಲೇಖಮನಿದಿರ್ಗೊಂಡು ಮನಂಗೊಂಡು ಬಂದು ಮನಃಪ್ರಿಯ ರ್ವೆರಸು –

ಬಂದು ಬನದೊಳಗದೊರ್ವ
ಳ್ಗೊಂದು
ತಳಿರ್ವಾರದಾಯ್ದೊಡಂದೊರ್ವಳ ಕೈ
ಗೊಂದು
ನನೆಯೆಯ್ದದೊರ್ವ
ಳ್ಗೊದಲರುಂ
ನೆಱಿಯದೆನಿಸಿ ನೆರೆದರ್ ಪೆಂಡಿರ್       ೫೪

ಪಲ್ಲವಲಲಿತಾಧರೆಯರ್
ಫುಲ್ಲಾಕ್ಷಿಯರಧಿಕಮಧುರೆಯರ್
ಮಧುಕರಧ
ಮ್ಮಿಲ್ಲೆಯರೆಳಮಾವಿಂಗಂ

ಮಲ್ಲಿಗೆಗಂ
ಪುಟ್ಟಿದಂತೆ ಕರಮೆಸೆದಿರ್ದರ್     ೫೫

ಪಿಣಿಲಿಂತೊತ್ತಿತ್ತು ವೃತ್ತಸ್ತನಕನಕಘಟದ್ವಂದ್ವಸಂದೋಹದಿಂ ಸಂ
ದಣಿ
ತುಂಗಶ್ರೇಣಯಿಂದೆರ್ದಿಡೆ ವದನಸುಧಾಸೂತಿಸಂತಾನದಿಂ ತಿಂ
ತಿಣಿ
ತೀಕ್ಷ್ಣಾಪಾಂಗಶಸ್ತ್ರಂಗಳಿನೊರಸೊರಸಂಗಪ್ರಭಾಭೂಷ್ಯಭೂಷಾ
ಮಣಿರೋಚಿರ್ಜಾಲದಿಂ
ನುಣ್ಮಣಿಯೆನೆ ನೆರೆದತ್ತಂದು ನಾರೀನಿಕಾಯಂ    ೫೬

ಮುಡಿಗೆಡೆಯಿಲ್ಲದಂತಿರೆ ಬೞಲ್ಮುಡಿಗಳ್ ಮೊಲೆ ಪರ್ಬಲೆಲ್ಲಿಯುಂ
ಪಡೆಯದವೋಲ್
ಪೊದೞ್ದುಡಿದು ಪರ್ಬಿರೆ ಕಾಂತಮುಖೇಂದುಕಾಂತಿಯಂ
ಕುಡುಕುಗೊಳಲ್ಕೆ
ಪಾಱಲೆಡೆಯೆಯ್ದದವೋಲ್ ಘನಪಕ್ಷ್ಮಪಕ್ಷಮಂ
ಪೊಡರಿಸೆ
ದೃಕ್ಚಕೋರತತಿ ಸಂದಣಿಗೊಂಡುದು ಸುಂದರೀಜನಂ ೫೭

ಅಂತು ನೆರೆದು ಬಂದು ತಮಾಳಿಕೆಯುಂ ಕಳಾವತಿಯುಂ ಮುಖ್ಯಮಾದ ಸಖೀಜನಂ ರತಿಗಂ ಕಾಮಂಗಂ ಪೊಡೆಮಡುವಂತೆ ಲೀಲಾವತಿಗಂ ಕಂದರ್ಪದೇವಂಗಂ ಪೊಡೆಮಟ್ಟು ನಿಲ್ವುದುಂ; ದೇವಕಾಂತೆಯರ್ ಬಳಸಿದಿಂದ್ರಾಣಿ ಇಂದ್ರಂಬೆರಸು ನಂದನವನವಿಹಾರಕ್ಕೆ ತಳರ್ವಂತೆ ವಾಸವ ವಿಳಾಸಂಬೆರಸು ವಾಸವದತ್ತೆ ಕುಸುಮಾಕರೋದ್ಯಾನದೊಳಗಂ ತಳರ್ದು ಬರೆ ; ತೊಟ್ಟನೆ ಕಟ್ಟಿದಿರೊಳ್ –

ಸರದ ಕೊರಲ್ ಪಿಕಸ್ವರದೊಳಾದ ತೊದಳ್ ಬೆಮರ್ವಾಯ್ ಪೊದಳ್ದು ಬೆ
ಕ್ಕರಿಸಿದ
ಪಣ್ ಬೞಲ್ದ ತಳಿರುಳ್ಳುಡೆ ಪೂವಿನ ಕಂಪು ಪಣ್ಣ ಕೆಂ
ಪರಗಿಳಿ
ಬಾಯ ಕೆಂಪಿನಿಸು ಪತ್ತಿದ ಪಚ್ಚೆಯ ಸಿಪ್ಪೆನಲ್ಕೆ ಸುಂ
ದರಮೆನಿಸಿತ್ತು
ಚೂತಲತೆ ಚೇತರಿಪಂತೆ ಮಧುಪ್ರಮೋದದಿಂ    ೫೮

ಅದಂ ಲೀಲಾವತಿ ಕಣ್ಬೆಳಗಿನ ಬೆಳ್ದಿಂಗಳಿಂ ಬಾಸಣಿಸುವುದಂ ಕಂಡು –

ಬನದೊಳಾಗಾವ ಭೂರುಹಮುಮಾನದೆ ನಿಪ್ಪೊಸತಪ್ಪ ಪಣ್ಣ ಪೂ
ವಿನ
ತನಿಗಂಪನುಬ್ಬರಿಪ ಕೋರಕದಲ್ಲಿಯೆ ಕಂಪು ಪುಟ್ಟುತುಂ
ಕೊನರೊಳೆ
ಕಂಪು ಪಂದಳಿರೊಳಂ ನಸುಗಾಯೊಳಮೆಯ್ದೆ ಕಂಪು ಪೋ
ನನೆಯೊಳೆ
ಕಂಪೆನಲ್ಕೆ ಪೊಸಮಾವಿದು ಕಂಪಿನ ಪಿಂಡಮಲ್ಲಮೇ ೫೯

ಎಂದು ಕವಿರಾಜಮಲ್ಲಂಗೆ ಕೊಲ್ಲಿನೋಟಮಂ ಪಸಾಯಮಿತ್ತು ಲೀಲಾವತಿಯಿಂತೆಂದಳ್ –

ಬಳವಳ ಬಳ್ಕಿ ಬಂದ ಪೊಸಪೂವಿನ ಪಣ್ಗಳ ಕಂಪು ಮಾಣ್ಗೆ ಕಾ
ಯ್ಗಳ
ಕನರ್ಗಂಪದನ್ನೆ ವರಮಿಕಲಂರ್ಗಂಪಿನ ನುಣ್ಪು ಮೊಗ್ಗೆ ಪಂ
ದಳಿರ್ಗಳ
ಕಂಪುಮಂ ಪಡೆವ ಸೈಪಿೞಿದೇ ಕಡೆಪಟ್ಟ ಚಿಕ್ಕ ಕೆಂ
ದಳಿಕೆಯ
ಕಂಪನಾಂತಲರ್ಗಂಮೇಂ ಗಳ ನೋಂತುವೊ ಭೂಜರಾಜಿಗಳ್ ೬೦

ಅಂತಲ್ಲಿಂ ತಳರ್ದು ತನ್ನ ಕಣ್ದುಂಬಿಗಳಂ ಬರೆದೆಗೆದು ಮಲ್ಲಿಗೆಯ ಮುಂದೆ ನಿಂದು ಮಂದಸ್ಮಿತಧವಳಾಪಾಂಗದಿಂ ಕವಿಧವಳನ ಮೊಗಮಂ ಮೊಗಸಿ ನೋಡಿ –

ತೀವಿದ ಗಂಧಗರ್ಭಭರದಿಂ ನಸುಪೊಂಗಿ ಪೊದೞ್ದ ಮಲ್ಲಿಕಾ
ದೇವಿಯ
ಮೆಯ್ ಬೆಳರ್ತೆಸೆದುದೊಪ್ಪಿದುದೀಕೆಗೆ ಮಾಕರಂದನಿ
ಷ್ಠಿವನಮೆತ್ತಿದಾ
ಗುಳಿಗೆಯಂ ತಳಿರ್ವಾಸ್ಯದೊಳರ್ತಿಗೀಯೆ
ರ್ಪಾವರಿಸಿರ್ದ
ಮಣ್ಣ ಮುಱಿಯಂತೆಱಗಿರ್ದಪುದಲ್ತೆ ಷಟ್ಟದಂ     ೬೧

ಅದಂ ಕೇಳ್ದು ಕಳಾವತಿಯಿಂತೆಂದಳ್ –

ಮಳಯಜದ ಸವತಿ ಸುರಯಿಯ
ಕೆಳದಿ
ಮನೋಭವನ ವೀರಲಕ್ಷ್ಮಿಯ ತಾಯ್
ಳ್ತಳಿವಿಟನ
ಸೂಳೆ ಕಾದಲ
ರ್ಗೆಳವೇಟದ
ದಾದಿ ಬಿರಿದ ಮಲ್ಲಿಗೆಯ ವಲಂ ೬೨

ಎಂದ ಕಳಾವತಿಯಕಾವ್ಯಕಳಾವಿಳಾಸಕ್ಕೆ ಸುಕರಕವಿಶೇಖರಂ ಮೆಚ್ಚಿ ತಿಲಕಮಂ ತೋಱಿ –

ಪೊತೆಸೆಯೆ ತಿಲಕಮಂಗಜ
ನೋತಂ
ಮಧು ಮುನ್ನಮೋತನೆರಡಿಲ್ಲದೆ ತಾ
ನೋತುದು
ಭುವನಂ ವನಸಿರಿ
ಗೀ
ತಿಳಕಮೆ ವಶ್ಶತಿಳಕಮಾಗಲೆವೇೞ್ಕುಂ    ೬೩

ಎಂದು ಕಳಾವತಿ ಕೆಳದಿಯ ಕುಸುಮಾಪಚಯೋತ್ಸುಕತೆಯಂ ಕಂಡು ಪೂಗಿಡುಗಳನಹಮ ಹಮಿಕೆಯಿಂ ಪೂಜಿಸಿ ಪೂಗೊಯ್ಯಲೆಂದು ದೇವಿಯ ಬೆಸದಿಂ ಕೈವೀಸುವುದುಂ –

ಪರಿತಂದುತ್ಸಾದಿಂದರ್ಚಿಸಿದರೊಸೆದು ವಾಸಂತಿಯಂ ಸಾಂದಿನಿಂ ಮಾ
ಮರನಂ
ಶ್ರೀಖಂಡದಿಂ ಮಲ್ಲಿಗೆಯನಗರುವಿಂ ಚಂಪಕಾನೀಕಮಂ
ತ್ತುರಿಯಿಂ
ಕಂಕೇಳಮಂ ಕಂಪಿಡಿದ ಕಳಭದಿಂ ನಾಗಮಂ ನೆಲ್ಲಿಯಿಂ ಪಾ
ದರಿಯಂ
ಕಾಶ್ಮೀರದಿಂ ಕೇಸರಮನಮಳಕರ್ಪೂರದಿಂ ಕಾಂತೆಯರ್ಕಳ್   ೬೪

ಅಂತರ್ಚಿಸೆಯವರವರ ಬಯಕೆಯಂ ಕುಡಲೆಂದು ನೋಡಿ –

ವಕುಳಂ ಕುಟ್ಮಲಕೋಟಿಯಂ ದರದಳದ್ವಾಸಂತಿಕಾವಲ್ಲರೀ
ಮಕರಂದಾಸವಕೇಸದಿಂ
ಕುರುವಕಂ ಪೂಗೊಂಚಲಂ ಮಲ್ಲಿಕಾ
ಮುಕುಳೋಚ್ಚ
ಸ್ತಬಕ ಸ್ತನಾಗ್ರ ಹತಿಯಿಂ ತಾಳ್ದಿತ್ತು ಕಂಕೆಲ್ಲಿ ಕೋ
ರಕಮಂ
ಚೂತಲತಾಪ್ರವಾಳವಿಳಸತ್ಪಾದಪ್ರಹಾರಂಗಳಿಂ       ೬೫

ಎಂದು ನಮ್ಮನಮ್ಮ ಪಾದ ಪ್ರಹಾರಾದಿಗಳ್ ನಮ್ಮನಲ್ಲರ ನೋಂಪಿಯ ಫಲದಿಂ ಮರಂಗಳೊಳಾದೊಡಂ ಬೀಸಱಮಾದುವಿಲ್ಲೆಂದ ಪೂಗೊಯ್ಯಲ್ ಮಸಗಿದಲ್ಲಿ –

ಅರ್ಚಿಸದಾಯಲಾಗ ಪೊಸಪೂಗಳನಂದಿವೆ ಚಂದನಚ್ಛಟಾ
ಚರ್ಚೆಗಳೆಂಬವೋಲಡಸಿ
ನೋಡಿ ನಖಾಂಕುರಕಾಂತಿದಾಮದಿಂ
ದರ್ಚಿಸುವಂತೆ
ನೀಡಿ ನಳಿತೋಳನಲಂಪಿನೊಳಾಯ್ದು ಕೊಯ್ದು ಕೈ
ಮರ್ಚಲ
ತೋರುಮಲ್ಲಿಗೆಗಳಂ ತಳಿರ್ವಟ್ಟಲೊಳೊರ್ವಳೊಟ್ಟಿದಳ್        ೬೬

ವದನದ ಕಂಪನೊರ್ಮೆ ಸೆಳೆಗೊಂಬಿನ ಪೂಗಳನೊರ್ಮೆ ಸೂಳಸೂ
ಳದೆ
ಮುಸುಱುತ್ತುಮಿರ್ಪ ಮಱಿದುಂಬಿಯನೀಯದೆ ಸುಯ್ಯೆ ನಾಸಿಕಾ
ವಿದಳಿತ
ಚಂಪಕಶ್ವಸಿತ ಸೌರಭಮೊರ್ವಳಪೂರ್ವರೂಪಿನಾ
ಗದ
ನಗೆವೂಗಳಂ ಬಯಸಿ ಬೆಚ್ಚದೆ ಬಿಚ್ಚತಮಾಯ್ದಳೞ್ತಯಿಂ     ೬೭

ಮತ್ತಮೊರ್ವಳ್ –

ಸುರವನಿತಾವಿಳಾಸದಲರ್ಗೊಂಚಲನೀಕ್ಷಿಸಿ ಜೋಲ್ವ ಕೊಂಬನೊ
ಪ್ಪಿರೆ
ಮುರಿದಪ್ಪಿದಂಗಲತೆ ನಾಗಿಣಿಯಂದಮನಾಗುಮಾಡೆ ಖೇ
ಚರಿಯ
ಬೆಡಂಗನಾಗಳೊಗೆದಾಡುವ ಕಾಲಭಿನೈಸಿ ಪೊಯ್ದ ಪಾ
ದರಿಯೆಳಗೊಂಬನೇಂ
ಪಿಡಿದು ನೆಯ್ದಿಲನಾಯ್ದಳೊ ಕಾಂತೆ ಕಾಂಕ್ಷೆಯಿಂ   ೬೮

ಅರಲಂ ಕಣ್ಣೆತ್ತೆ ಮೊತ್ತಂಗಿಡದೆಳವೆಳಗಿಂ ತಾಗೆ ತುಂಗಸ್ತನಂ ಮಂ
ಜರಿಯೊಳ್
ವಕ್ತ್ರಾಬ್ಜಗಂದಂ ವಿಕಸಿತಕುಸುಮಾಮೋದಮಂ ಮೋದೆ, ಬಂಬ
ಲ್ಗುರುಳುನ್ಮತ್ತಾಳಿಯೊಳ್
ತಳ್ತಿಱಿಯೆ ಪೊಡೆಯೆ ಹಸ್ತಾರುಣಚ್ಛಾಯೆ ಬಾಳಾಂ
ಕುರಮಂ
ಪೂಗೊಯ್ದಳೊರ್ವಳ್ ಪೊಸಲತೆಯೊಳ್ ಕಪ್ಪಮಂಕೊಳ್ವಪಾಂಗಿಂ       ೬೯

ಪರಭಾಗಂ ಪೊಣ್ಮುವನ್ನಂ ತನುಲತೆ ಲತೆಯೊಳ್ ಕೂಡೆ ತುಂಗಸ್ತನಂ ಮಂ
ಜರಿಯೊಳ್
ಮುಂಡಾಡೆ ಕಣ್ಗಳ್ಬೆರಸೆ ಕುಸುಮದೊಳ್ ಕುಂತಳಂ ತುಂಬಿಯೊಳ್
ಳ್ತಿರೆ
ಪುಷ್ಪಾಮೋದದೊಳ್ ಸುಯ್ ಕಲಸೆ ಕರತಳಚ್ಛಾಯೆ ತೞ್ಕೈಸೆ ಬಾಲಾಂ
ಕುರುಮಂ
ಪೂಗೊಯ್ದಳೊರ್ವಳ್ ಲತೆಲತೆಗೊಲವಿಂ ಬಿರ್ದುವಂದಂತಿರಿರ್ದಳ್     ೭೦

ಕುಡೆ ಮಧ್ಯಂ ಬೆಂಗೆ ಬಳ್ಕಂ ವಳಿಯುಮನಳಕಕ್ಕಾನನಾಬ್ಜಂ ಕುಚಾಗ್ರಂ
ನಡೆ
ಬೆನ್ನೀವಂತಿರುದ್ದಂ ಕುಸಿಯೆ ಕೊರಲ್ ಕೊಂಡು ಜೋಲ್ದತ್ತೆನಲ್ ಸೋ
ರ್ಮುಡಿ
ಪುರ್ವಂ ಪತ್ತೆ [ಪಕ್ಷ್ಮ] ಪ್ರಕರಮಭೀಮತಾಪಾಂಗಮಂ ಮಿಂಚುಮಂ ಚೆ
ಲ್ವಿಡಿವನ್ನಂ
ನಾಭಿಮೂಲಂ ಕ್ಷಿತಿವಿನಿಹಿತಪಾದಾಗ್ರೆ ಪೂಗೊಯ್ದಳೊರ್ವಳ್  ೭೧

ಪೊಱವಾಱಂ ಮೆಟ್ಟುವಂತುಬ್ಬರಿಪ ಮುಗುಳ ಗೊಂಚಲ್ಗಳಂ ಮೆಟ್ಟಿ ಪೂವಂ
ತಿಱಿವುದ್ಯಚ್ಚಂದ್ರಬಿಂಬಾನನೆಯ
ಘನಕುಚದ್ವಂದ್ವಮಂ ಪೊತ್ತು ಚೆಲ್ವಿಂ
ದೆಱಗುತ್ತಿರ್ಪುಜ್ವಲನ್ಮಾಧವಿ
ಮಧು ನೃಪನೇೞ್ತಂದೊಡಾನಂದದಿಂದಂ
ಮಿಱುಗುತ್ತಿರ್ಪನ್ನೆಗಂ
ಕನ್ನಡಿ ಪೊಣರ್ಗಳಸಂಬೊತ್ತವೋಲ್ ಪೆತ್ತುದಿಂಪಂ ೭೨

ಸೋರೆಡೆದ ಕೈಯಿದನೆ ಕುಚ
ಭಾರಂ
ಬಿಟ್ಟೆೞಲೆ ಬಾಳೆ ಪೊಂಬಾೞೆಗೆ
ಳ್ತೋರಂತಡರ್ದಡಕೆಯ
ಸಸಿ
ಸೀರೆಯನಭಿನಯಿಸುವಂತಿರೇನೊಪ್ಪಿದುದೋ
          ೭೩

ಅಡರ್ದ ಮೊಲೆಗೊಡದ ಬಿಣ್ಪಿಂ
ನಡು
ಬಳ್ವಳ ಬಳ್ಕೆ ನಿಳ್ಕಲಾಱದೆ ತಳಿರಂ
ತುಡುಕುವ
ಕೆಳದಿಯ ಕಚಮಂ
ಪಿಡಿದೆತ್ತಿದಳೊರ್ವಳಬಲೆ
ಸಂಭ್ರಮದಿಂದಂ   ೭೪

ಕಾವಿಕ್ಕಿದಯಸ್ಕಾಂತದ
ಪೂವಂ
ಚುಂಬಿಸುವ ಪಚ್ಚೆವಟ್ಟುಗಳವೊಲಿಂ
ದೀವರದಿನಬಲೆ
ಗೊಂಚಲ
ಪೂವುಗಳಂ
ಪೊಡೆಯೆ ಪತ್ತಿ ಮುತ್ತಿದುವಳಿಗಳ್         ೭೫

ಗಾವಳಿಗೊಂಡೆಱಗಿದ ಭೃಂ
ಗಾವಳಿಯಂ
ಸೋವಲಿಂದುಬಿಂಬದ ಕಱಿಯಂ
ಸೋವ
ಶರಲ್ಲಕ್ಷ್ಮಿವೊಲಿಂ
ದೀವರದಳನಯನೆ
ಮಲ್ಲಿಕಾಮಂಜರಿಯಂ    ೭೬

ನೀರೇಜವದನೆ ತಿಱಿದಳ್
ತೋರಿದ
ಮಲ್ಲಿಗೆಯ ಮುಗುಳನಾಗಳ್ ಕಾಶ್ಮೀ
ರಾರುಣಕರಪಲ್ಲವದಿಂ

ತಾರಗೆಯಂ
ತಿಱಿವ ಪೂರ್ವಸಂಧ್ಯಾಂಗನೆವೋಲ್     ೭೭

ಮೃಗಲೋಚನೆಯೊರ್ವಳ್ ಸಂ
ಪಗೆಯೊಳ್ಮುಗುಳಾಯ್ದು
ಮಗುೞಿ ಚಳಕೇಕರಕಾಂ
ತಿಗಳಿಂ
ಪೂಣ್ದಳ್ ಮುಯ್ವಂ
ಮುಗುಳಂ
ಕೊಂಡಲರನೀವವೋಲ್ ಮಲ್ಲಿಗೆಯಂ      ೭೮

ಸೋರ್ಮುಡಿ ಮುಗುಳ್ವಂತೆೞೆಯೆ
ಳಿರ್ಮುಸುಕೆ
ಕಮಲದೊಳಗೆ ಪುಗುತರ್ಪಾಗಳ್
ನೆರ್ಮಿದುದಂಗನೆಯ
ಮೊಗಂ
ಕಾರ್ಮುಗಿಲಂ
ಪುಗುವ ಚಂದ್ರಬಿಂಬದ ಚೆಲ್ವಂ ೭೯

ತಳಮಂ ತಳಿರ್ಗೆತ್ತಲೊಡಂ
ತಳಿರೆಲರಿಂದತ್ತ
ತೊಲಗೆ ಕಂಜಾಕ್ಷಿಯ ಕೆಂ
ದಳದ
ಸೊಬಗಿಂಗೆ ಸೋಲ್ತೆಳ
ದಳಿರೋಡುವ
ತೆಱನನಾಗಳೇನಿೞಿಸಿದುದೋ          ೮೦

ಮಾಸರಮಸುಗೆಯ ತಳಿರಂ
ಸೂಸಿದಳೊರ್ವಳ್
ಕುಚಾಗ್ರದೊಳ್ ಮದನಗಜಂ
ಕೀಸಿ
ಬಸವೞಿದ ಬಿರಯಿಯ
ಕೇಸಡಗಂ
ಪೇಱದಂತೆ ಪೆರ್ಗೊಂಬುಗಳಿಂ    ೮೧

ಪೂಗಣೆಯನ ಚಾಮರಮಂ
ಸೀಗುರಿಯಂ
ಪಿಡಿವಳಂತೆ ಸೆಳೆಗೊಂಬುಗಳಿಂ
ಬಾಗೊತ್ತಿ
ಗುಜ್ಜುಮಾವಿನ
ಪೂಗೊಂಚಲನುಡಿದು
ಪಿಡಿದಳಳಿವೆರಸೊರ್ವಳ್       ೮೨

ಉಡಿದೆಳದಳಿರಂ ಕುಂಭದೊ
ಳಿಡುವತನುಕರೇಣುವಂತ
ಕೈನೀಡಿ ಪೊದ
ೞ್ದಿಡಿದದಿರ್ದ
ಕುಚದೊಳೊಟ್ಟಿದ
ಳುಡಿದುಡಿದೆಳಮವಿನೆಳೆಯ
ಕೊನರಂ ತಳಿರಂ         ೮೩

ಗಿಳಿವೆರಸಲರ್ವೆರಸಂದೆಳ
ದಳಿರ್ವೆರಸಂದಿಡಿದ
ಮಿಡಿಯ ಗೊಂಚಲ್ವೆರಸೇಂ
ಸೆಳೆಗೊಂಬನುಡಿದು
ಪಿಡಿದಳ್
ತೊಳಪಂಗಜತೀರ್ಥಕರನ
ಯಕ್ಷಿಯೊಲೊರ್ವಳ್       ೮೪

ಅತ್ತ ತೊಲಗಿದುವು ಬಿಡೆ ಭಯ
ಮುತ್ತವೊಲಳಕದೊಳೆ
ಸೆಣಸುವಳಿಗಳ್ ಪೂವಿಂ
ಗೆತ್ತಿದ
ಕರಕಿಸಲಯಮಿಱಿ
ಯುತ್ತಿರೆ
ನಿಱಿದಳಿರನುಗುರ್ಗಳಿಂ ತರುಣಿಯರಾ        ೮೫

ಎಳಲತೆಯನಂದದಿಂ ಕೋ
ಕಿಳಮಂ
ಕಳರವದಿನಾಕೆ ಗೆಲೆಯಲರ್ವೞೆಯಂ
ತಳಿದುದೆನೆ
ನಿಳ್ಕಲಾಱದೆ
ಸೆಳೆಗೊಂಬಂ
ಲಲನೆಯಲುಗೆ ಸೂಸಿದುವಲರ್ಗಳ್     ೮೬

ಪ್ರಗಲ್ಭತೆಯಿನಾಯ್ದವೋಲ್ ಬೆಳಗುವೂಗಳಂ ಗಾಳಿ ದುಂ
ಬಿಗಳ್
ಬಗೆದು ಮೊಲ್ಲೆ ಮಲ್ಲಿಗೆಯ ಮಾಲೆ ಮೆಲ್ಪಿಂಗೆ ಪಾ
ಯ್ತೆ
ಗೆತ್ತೆಱಗೆ ತಾಗಿದಳ್ ಗಱಿಯು ಗಾಳಿಯಿಂ ಪಾಯ್ದುವ
ಶ್ರುಗಳ್
ಸೊನೆಗಳಂದದಿಂ ಬಿಳಿಯ ಕಣ್ಗಳಿಂ ಬಾಲೆಯಾ         ೮೭

ಏಱಿಸಿ ನಲ್ಲರನೆರ್ಚೇಂ
ಸಾಱಿದನೊ
ಪೂವುವಿಲ್ಲನಲರಾಯ್ದೆಡೆಯೊಳ್
ನೀಱೆಯ
ತಿಳಿಪಿದೊಡಂ ಪದಿ
ನಾಱಿಚ್ಚಂ
ಪುಷ್ಪಬಾಣನೆಂ ಬಿನ್ನಣಿಯೋ       ೮೮

ತರುಶಾಖೆಯನತಿಭರದಿಂ
ತರುಣನನೀಕ್ಷಿಸುವ
ತರಳಲೋಚನೆಯಲುಗು
ತ್ತಿರೆ
ಸುರಿದುವಲರ ಸರಿಗಳ್
ಸುರಿವಂತಿರೆ
ಸರಲ ಸರಿಗಳಸಮಾಯುಧನಾ ೮೯

ಕಡುನಲ್ಲಂ ಮುಡಿಯಿಸಲೊಡ
ಮುಡಿದ
ತಳಿರ್ ಪೊತ್ತಿದತ್ತು ಕಾಯ್ಪಿಂದಂ ಕಾ
ಲ್ವಿಡಿಯಲೊಡಮೊಡನೆ
ಬರ್ದುಕಲ್
ಪಡೆದುದು
ಕಾಮಿನಿಯ ಕೆಯ್ಯ ಕಿಱುಬೆಮರಿಂದಂ       ೯೦

ನವಕಂಟಕಮಡಿಯಂ ನಡೆ
ಸವತಿಯನಪ್ಪಿದುದನಱಿದು
ಪತಿ ಪೆಗಲಿಂ ಪೊ
ತ್ತವಳಿಗಿದಳ್
ಕರಗತಪ
ಲ್ಲವಮುಗುತರೆ
ಕೋಪದುರಿಯ ನಾಲಗೆಗಳವೊಲ್     ೯೧

ಚಕ್ಕೞಿದ ಮೊಲೆಗಳುಂ ಕೈ
ಮಿಕ್ಕಂಕುರದುಗಿಯುಮಲೆಯೆ
ಸೆಳೆಗೊಂಬು ನೊಸ
ಲ್ಗೊಕ್ಕಳಕಮುಮಿನಿಯನ
ರೋ
ಸಕ್ಕೆಡೆಯಾಯ್ತಪ್ಪೆ
ತರುಣಿ ಕುರವಕತರುವಂ  ೯೨

ಗುರುಕುಚಪರಿಪೀಡನಪ್ರರೂಢಾಂ
ಕುರಪುಳಕಾಹತಿಚಿಂತ್ಯಮಾನಚಿತ್ತೇ

ಶ್ವರಪರಿರಂಭೆ
ನಿಮಿರ್ಚಿ ಮೂರ್ಛೆವೋದಳ್
ಕುರವಕದಪ್ಪಿಗೆ
ವಿಪ್ರಲಬ್ಧೆಯೊರ್ವಳ್ ೯೩

ಕೂಡಿತೊೞಲ್ವಿನಿಯನೊಳ
ಕ್ಕಾಡಿದ
ಕಣ್ಣಾಕೆ ಕೆಳದಿಯಾವಕ್ಕಿನಿಸಂ
ನೋಡಲೊಡಮಲ್ಲಿಗಲ್ಲಿಗೆ

ಮೂಡಿದುವೊಂದೆರಡು
ಕಳಿಕೆ ತಿಳಕದ್ರುಮದೊಲ್      ೯೪

ನಾಗನಿಭಮೆನಿಪ ಲತೆಯೆಳ
ವೂಗುಡಿ
ಕರಮೆಸೆಯೆ ಕರದೊಳಿನಿಯನ ಸೋಂಕಿಂ
ಪೋಗೆ
ಜಗುೞ್ದುಟ್ಟುದೊರ್ವಳ್
ಜೋಗಿಣಿವೋಲ್
ಜಘನಕುಚಭರಂಗಳಿನೆಸೆದಳ್       ೯೫

ಸ್ತನಮುರದೊಳುರ್ಚಿತೆನೆ ಮಿಗೆ
ಮೊನಸಿದ
ಮೆಯ್ನವಿರೆ ನಾಂಟಿತೆನೆ ಕೊಂಬಿನ ಪೂ
ವನೆ
ತೋಱಿ ತಿಱಿಯಲೆತ್ತನೆ
ತನು
ಬಿಗಿವಿನಮಪ್ಪಿಯನಭಿಮತಂ ನವವಧುವಂ       ೯೬

ನನೆಯಂ ತಿಱಿದಪೆನೆತ್ತಂ
ದನುವಿಸಿ
ಪತಿ ಪತ್ತಿ ನೆಗಪಿದಬಲೆ ಬೆಮರ್ತಳ್
ನನೆಗೊಯ್ವ
ಗಸಣಿಯಂ ನೆನೆ
ನೆನೆದು
ಬೞಲ್ವಂತೆ ಸಹಜಸುಕುಮಾರತೆಯಿಂ         ೯೭

ಅನುವಿಸಿ ನನೆದಿಱಿದಪೆನೆಂ
ದಿನಿಯಂ
ತರೆ ಬಂದು ತೋಳನೆತ್ತದೆ ಕುಚಕುಂ
ಭನಖಾಂಕದತ್ತ
ಲಜ್ಜಾ
ವನತಾನನೆ
ನಿಂದ ಭಾವಮಂ ಬಯಸದರಾರ್         ೯೮

ಎಡಗಯ್ಯೊಳೊಯ್ದು ಮೇಲುದು
ಸಡಿಲ್ದು
ಬರೆ ಬರಿಗೆ ಬಳೆದು ನವನಖಪದಮಂ
ಬಿಡುಮುಡಿ
ಮುಸುಂಕೆ ಮುಱಿದೇ
ನೂಡಿದಳೊ
ಕುಡಿದಳಿರನಲಘುಕುಚೆ ಪತಿಯಿದಿರೊಳ್  ೯೯

ನವನಖಪದಕುಚತಟೆ ತೊಳ
ಗುವ
ತೋಳಂ ನೆಗಪೆ ಕರಜಖಂಡಿತನವಪ
ಲ್ಲವಮುಂ
ಕೊರಗಿದುವೊರ್ಮೆಯೆ
ಸವತಿಯ
ವದನಾಬ್ಜರಾಗರಸಪಲ್ಲವಮುಂ    ೧೦೦