ಶ್ರೀರಾಮೆಯೊಳೊಡಗೂಡಲ್
ನಾರಾಯಣನೊಸೆದು
ಪಸದನಂಗೊಂಡವೊಲೇಂ
ರಾರಾಜಿಸಿದನೊ
ಸದಲಂ
ಕಾರಾಲಂಕಾರಭೂಮಿಪಾಲಕಮುಕುರಂ
      ೧

ಅಂತಾ ವಧೂವರರಂ ಮಂಗಳಪಸದನಂಗೊಳಿಸಿ ತಂದು ಜೀರಿಗೆಯಂ ಬೆಲ್ಲಮುಮಂ ಕೆಯ್ಯೊಳ್ ಕೊಟ್ಟು ಕನ್ನೆಯರ್ ಕನ್ನಡಂ ಪಿಡಿಯಲೆಂದು –

ಇದಿರೊಳ್ ನಿಱಿಸುವುದುಂ ಪೊಸ
ಮದವಳುಮಾಕೊಳ್ವ
ಗೊವರನುಂ ನಡೆದೇಂ
ತ್ತಿದರೊ
ಪದೆದಾಸಖೀಜನ
ಮೃದುಸ್ಮಿತಂ
ತಮಗೆ ಸೇಸೆಯೆನೆ ಸೂಸುವಿನಂ        ೨

ಆ ಪ್ರಸ್ತಾವದೊಳ್ –

ರಮಣಾಭೀರಾಮರಮಣೀರಮಣೀಯಕುಚಾಗ್ರಿಮಾಗತಂ
ಹಾರಲತಾಂಶವೇನೆಯುತಿರ್ದುದೊ
ಪಾಣಿಪಯೋಜದೊಳ್ ಮನೋ
ಹಾರಿ
ಮನೋಜನುತ್ಸವದೆ ಪೊಂಗಳಸಂಗಳನೆತ್ತಿಕೊಂಡು ಕೈ
ನೀಱೆವಂದೆವೊಂದೆ
ವನಿತಾಜನಚಿತ್ತ ಚಕೋರಚಂದ್ರನಂ        ೩

ಅಲ್ಲಿಂಬೞಯಮಲರ್ವಸೆಯೊಳಿರಿಸಿ ಪೊಸಮುತ್ತಿನ ಸೇಸೆಯಂ ಮುಡಿಯೊಳಾಂತು ತುಱುಂಬಿನೊಳ್ ತೀವಿ –

ಗಂಧವಹಂಗಳ್ ಮಂಗಳ
ಗಾಂಧರ್ವಮನೆಸೆಗೆ
ಮಧುರಭೃಂಗೀರವದಿಂ
ಗಂಧರ್ವ
ವಿವಾಹಮನಾ
ಬಂಧೂಕಾಧರೆಯರವರ್ಗೆ
ಮಾಡಿದರೊಲವಿಂ

ತದನಂತರಂ ಬೂವಮನರ್ಚಿಸಿದಿಂಬೞಿಯಮರಸನನರಲ ಸಜ್ಜೆವನೆಯೊಳಿರಿಸಿ –

ಮದನಂಗಭ್ಯುದಯಂ ಮನೋಜಗಜಕುನ್ಮತ್ತೋಪಚಾರಂ ಬಸಂ
ತದ
ಬಲ್ಸೊರ್ಕಲರಂಬುರ್ಕು ನನೆಲ್ಗುಂಚ್ಚಂಡಿಮಂ ಚಂದ್ರಬಿಂ
ಬದ
ಸಂತಾಪದ ಶಕ್ತಿಯಂ ತೊಳೆದ ದರ್ಪಂ ತೆಂಬೆಲರ್ ತೀಡಿಕೊ
ಳ್ವದಟೇನೆತ್ತಣಿನಾದುದೆತ್ತಣಿನದೆಂಬಂತುಣ್ಮೆ
ಕಾಂಚೀ ರವಂ     ೫

ನಡೆಯಿಸಿದರ್ ಮದನಂಗಂ
ನಡೆಯದುದಂ
ನಡೆಯಿಪಂತೆ ಪತಿಯಲ್ಲಿಗೆ ಮೆಯ್
ನಡುಕದೊಳಂ
ಕಟಿಭರದೊಳ್
ಮುಡಿಯಂ
ತಡವಿಡುವ ಮಡದಿಯಂ ಪೊಸವೆಂಡಿರ್   ೬

ನಡೆಯಿಸಿ ನಲ್ಲನ ಕೆಲದೊಳಿರಿಸಿ –

ಕೆಳದಿಯ ಕಣ್ಣಱಿದು ಸಖೀ
ಕುಳಮೆಲ್ಲಂ
ಪೋಗೆ ಪೋಗದಿರೆ ಬಾಲಕಿಯರ್
ಬಳಸಿರೆ
ವಿನೋದವಿಹಗಾ
ವಳಿ
ಕರೆದಂ ಮಗುಳೆಕರೆದನಾಕಾಂತೆಯರಂ

ಅಂತು ಕರೆಯೆ ತಮಾಳಿಕೆಯೊರ್ವಳೆ ಮಗುೞ್ದುವರೆ –

ಎಱೆ ಹಾಲಂ ಹಂಸೆಗಾಸ್ಯಾಂಬುಜಕೆ ಬಳಸಿಬಂದಪ್ಪುದಂಭೋಜದೊಳ್ ನೀಂ
ಸೆಱೆಗೆಯ್
ಮತ್ತಾಳಿಯಂ ಪಾಯ್ದಪುದಿನಿಯಳ ನಿಶ್ವಾಸದೊಳ್ ಸೋಗೆಕೊಂದ
ಲ್ವೊಱೆಯಂ
ಕಾಳೋರಗಂಗೆತ್ತೆಳಸಿದಪುದು ಧಾರಾಗೃಹಂ ತೋಱು ಪಣ್ಣಂ
ತಿಱಿದೀಯ್
ಕೀರಂಗೆ ಬಿಂಬಾಧರಕೆ ಬಯಸಿ ಸಾರ್ದಪ್ಪುದೆನ್ನಂದದಿಂದಂ  ೮

ಕಿಱಿವುಲ್ಲೆ ಪಸಿಯ ನೇತ್ರದ
ಸೆಱಗಂ
ಸೆಱೆಗೆಯ್ದು ಪಸಿಯ ಪುಲ್ಗೆತ್ತಿದು ಬಾ
ಯ್ಮಱೆದಪುದೀಗಳೆಯರಗಿಳಿ

ಯೆಱಕೆಯ
ಪಸುರೆಸೆವ ಪಸಲೆಗುಯ್ ಮೃಗನಯನೇ   ೯

ಎಂದವಳಂ ಕಳುಪಿ –

ನಸು ಸೋಂಕೆ ನಾಣ್ಚಿ ಬಚ್ಚನೆ
ಬಸಿಯುತ್ತುಂ
ಬೆಮರಿನಿನನ ಕಣ್ದುಂಬಿ ಕರಂ
ಮುಸುಱೆತೆನೆ
ಬೆರ್ಚಿ ಸೆಱಗಿಂ
ಮುಸುಂಕಿದಳ್
ಕುಸುಮನಯನೆ ನಿಜತನುಲತೆಯಂ   ೧೦

ಬೆಂಗೊಟ್ಟು ನಡುವ ನಲ್ಲನ
ಪಾಂಗಕ್ಕಶ್ರುವನೞಲ್ದು
ಕಡುಪಿಂಬಿಡುತಂ
ದೇಂ
ಗೆಲ್ದುವೂ ಹಿಮಕರನ
ರಂಗಲಿಸೆಗೆ
ಬೆಮರ್ವ ನೆಯ್ದಿಲಂ ನಿಡುಗಣ್ಗಳ್ ೧೧

ಸ್ಮರನಲರ್ವಿಲ್ಲ ಬಾಸಣಿಗೆಯಂ ಕಳೆವಂತೆ ಮುಸುಂಕನೋಪನೋ
ಸರಿಸೆ
ಮುಸುಂಕಿದಳ್ ಮಗುಳೆ ಮೆಯ್ಲತೆಯಂ ಪುಳಕಾಂಕುರಂಗಳಿಂ
ದರಹಸಿತಂಗಳಿಂ
ವದನಪಂಕಜಮಂ ಮಱಪೆಂಬ ಮುಚ್ಚುಳಿಂ
ದರೆ
ಮುಗುಳ್ವಚ್ಚಿಯಂ ಸವಿಯ ಮುಚ್ಚಿದ ಮುಚ್ಚೆಯಿನಾಕೆ ಚಿತ್ತಮಂ        ೧೨

ಪದಯಿಸಿ ಪಿಂಡುಗೆಯ್ದು ಸೆಳೆದುಕೊಳ್ಳುಡೆಯಂ ತೊಡೆಯಿಂದಿಱುಂಕಿ ಸೋಂ
ಕಿದೊಡಲರ್ಗಣ್ಣೊಳವ್ವಳಿಸಿ
ಮೇಳದ ಮೇಲನಿವಕ್ಕೆ ಸೋಲ್ಗಳಂ
ಕದಳಿಸೆ
ಕೆಯ್ಯನೊಯ್ಯನಣೆ ನಾಣೊದವಿಂ ಕುಚಮಂ ಕರಂಗಳಿಂ
ಪೊದೆಯಿಸಿ
ಕಾಂತೆಯೇಂ ಪಡೆದಳೋ ಮನಕಾದಮಲಂಪನೋಪನಾ    ೧೩

ಗೞಿಲನೆ ಜಘನಾಚಳದಿಂ
ದಿೞಿತಂದ
ಮನೋಜನಿರ್ಝರಪ್ಲವಮೊದವಿಂ
ದೆೞೆದುಯ್ವಂತೆವೊಲುಟ್ಟುದು

ಕೞಲ್ದು
ತೊಲಗಿದುದು ತರಳತರಲೋಚನೆಯಾ        ೧೪

ಚೆಲ್ಲದೊಳೆ ನುಡಿದು ಪೊಸಸವಿ
ಯಲ್ಲ
ಮನಿತ್ತಗಲೆ ನೂಂಕಿ ತಳೆದಂ ಚದುರಂ
ನಲ್ಲರೊಳೆ
ನೆರೆಯಲೀಯದ
ನಿರ್ಲಜ್ಜೆಯೆ
ಲಜ್ಜೆಯೆಂಬ ಪೞಗುಂಟಣಿಯಂ   ೧೫

ತೆಂಬೆಲರಂತೆ ಸೋಂಕಿ ಖಗದಂತಿರೆ ಮೇಳಿಸಿ ತುಂಬಿಯಂದದಿಂ
ಚುಂಬಿಸಿ
ಸೊಕ್ಕನಿಕ್ಕಿ ಮಱಪಿಕ್ಕಿ ಪದಂಬಿಡೆ ಚಿತ್ತಮೆಯ್ದೆನಾ
ಣಂ
ಬಿಡೆ ಬಿಟ್ಟಮೆಯ್ಯಱಿದು ಮೆಯ್ನ ವಿರುರ್ಚೆ ಪೊದೞ್ದ ಲಜ್ಜೆಮೆ
ಯ್ಯಂ
ಬಿಗಿದಪ್ಪಿ ಬಾಲೆಯ ಭಯಂಗಳೆದಂ ನವಸಂಪ್ರಯೋಗದೊಳ್      ೧೬

ಸೊಪ್ಪಡಗಿರ್ದ ಕಾದಲನ ತಳ್ಪಿನ ಕಾಳೆಸಗಾೞೆ ಪೊಕ್ಕ ಮೆ
ಯ್ಯೊಪ್ಪಿರೆ
ಸುತ್ತಿ ಪತ್ತಿ ನಳಿತೋಳ್ ನುಸುೞೊಂದಿರೆ ಕೊಂಡುವೀ ಕುಚಂ
ಚಪ್ಪಲರ್ದಾೞೆ
ನಟ್ಟೆರ್ದೆಯೊಳೞ್ದಿರದೆಂಬ ನಿಜೇಶನೂರುವಂ
ತೊಪ್ಪನೆ
ತೊಯ್ದು ಕಾಮರಸದಿಂ ರಸದಿಂ ಲಲಿತಾಂಗಿಯೊಪ್ಪಿದಳ್       ೧೭

ಬಿಡುತಲೆ ತಿಂಬೊಡಂ ಮಿಡಿಯುತುಂ ಮದನಾತುರವಾಂತು ಲಿಂಗಮಂ
ಪೊಡೆವಿನಮೋಪನೂಱಿ
ನೆಱನಂ ನಡೆ ಪಾಯೆ ಕನಲ್ದೊನಲ್ವ ಕೂ
ಗಿಡುವುಡಿವೊಡ್ಡನೋಡಿಸುವ
ನೋಡುವ ಕೊಟ್ಟುಗಿಯಿಪ್ಪ ಬಾಯ್ಗೆ ಬಂ
ದೆಡೆಯನೆ
ಕೊಯ್ದುತಿಂಬ ಬೆಮರಂ ಕುಡಿಮೋಪಳಳುರ್ಕೆ ಮೊಕ್ಕಳಂ      ೧೮

ಮುಕ್ಕುವವೊಲ್ ಮರಲ್ದಡರೆ ನೋಡುವ ನೋಡಿಸಿ ಮೆಯ್ಗೆ ಮೆಯ್ಯನ
ಣ್ಪಿಕ್ಕುವವೊಲ್
ತಳಲ್ದು ನೆಗೆದಪ್ಪುವ ಬತ್ತೆ ಬೆಳರ್ತ ಬಾಯನಾಂ
ತಿಕ್ಕಿಸಿಕೊಳ್ವ
ಕೊಂಡೊಡೆದ ನಾಲಗೆಯಿಂ ಸವಿವಾಱಿ ಕೀಱಿ ಕೂ
ಟಕ್ಕೆ
ಕಡಂಗುವೋಪಳಳಿಪಿಂಗಲರ್ದಂ ರತಿರಾಗದೋಹಳಂ     ೧೯

ತೆಱಪಱಿದೋಪನಪ್ಪಿದೊಡೆ ಮೆಯ್ಮಱ್ಮೆವಪ್ಪು ಸಡಿಲ್ದುದಕ್ಕೆ ಮೆ
ಯ್ಯಱಿವ
ಪೊದೞ್ದ ಬಾಯುಗಿಗೆ ಮೆಯ್ಮಱೆವಂತದು ಮೆಲ್ಲನಾಗಿ ಮೆ
ಯ್ಯಱಿವ
ಜವಂ ಜವಂಗಿಡಿಸೆ ಮೆಯ್ಮಱೆವಾಸನಪಲ್ಲಟಕ್ಕೆ ಮೆ
ಯ್ಯಱೆವೆಡೆ
ಸಾವ ಪುಟ್ಟುವೆಡೆಯಾದುದವಳ್ಗೆ ರತಾತಿರೇಕದೊಳ್          ೨೦

ಒದೆದುಗುರಿಂದೆ ಬಾರುಗಿದುದೆಯ್ದದೆ ಕುತ್ತಿದಳಪ್ಪಿ ಕಂಟಕೌ
ಘದಿನಳಿ
ಪಾಱದವ್ವಳಿಸಿ ಕೆಂದಳದಿಂದೊಳಪೊಯ್ದು ಪೊಯ್ದುದೆ
ಯ್ದದೆ
ಕುಚಕುಂಭದಿಂದಿಱಿದಳೋವದೆ ಬಾಸಿಗದಿಂದೆ ಮೋದಿತೆ
ಯ್ದದೆ
ಕಡೆಗಣ್ಗಳಿಂ ಪಡೆದಳೋಪನನೋಪನಳಂಗಯುದ್ಧದೊಳ್          ೨೧

ಒದೆದು ಕಲಂಕಿ ಪಾಯ್ವ ಪದದೊಳ್ ಪದವೆತ್ತು ಪುಡುಂಕುನೀರನ
ರ್ದಿದಳುರೆ
ಮೋದಿ ಮುಂದಲೆಗೆ ಪಾಯ್ದು ಪೊರೞ್ಚಿದಳುರ್ಚಿ ಬಾಹುಪಾ
ಶದೊಳೆ
ತೊಡರ್ಚಿದಳ್ ಕರದ ಕೂರುಗುರಿಂದಮೆ ಬೆನ್ನಬಾರನೆ
ತ್ತಿದಳವಳಾಱದೋವದವನಂ
ವನಿತಾಜನಚಿತ್ತಚೋರನಂ       ೨೨

ಕಾದಲನಂಟಿ ತಿಂದ ತುಟಿವುಣ್ಮಿಗೆ ಚುಂಬಿಸಲೆಂದು ಬಾಯ್ಗೆ ಬಾ
ಯಾದವೊಲೊಪ್ಪೆ
ನೋೞ್ಪರಕೆಯಿಂ ಪೊಱಪೊಣ್ಮುವ ಬೆಳ್ಪು ಕಣ್ಗೆ
ಣ್ಣಾದವೊಲೊಪ್ಪೆ
ತೋಳನೆೞಲೋಪನ ಮೆಯ್ಯೊಳಗಾಗೆ ತೋಳ್ಗೆ ತೋ
ಳಾದವೊಲೊಪ್ಪೆ
ತಳ್ತು ಮನಕಂ ಮನವಾದವೊಲಾಕೆ ಕೂಡಿದಳ್          ೨೩

ನೆಗೆದ ಬೆಮರ್ವನಿಗಳೆಳಮು
ತ್ತುಗಳೊಗೆದವೊಲೆಸೆಯೆ
ಸಮರಕೇಸರಿಯುಗುರಿಂ
ದುಗಿವಡೆದ
ಸತಿಯ ಘನಕುಚ
ಯುಗಳಮೆ
ಮದನೇಭಕುಂಭಮಪ್ಪುದು ಪುಸಿಯೋ     ೨೪

ಸುಸಿಲ ಜತಿವಿಡಿದು ಪತಿಗಾ
ಟಿಸೆ
ಬೆರಸಿಂ ಬೆರಲ ಸರದಿನೆಸೆವ ಸರಂ
ಣ್ಣಸರಂ
ಕೊರಲ್ಗಿದೆನೆ ಕೂ
ಜಿಸಿದಳ್
ಲಾವಗೆಯ ಗೂಡನಲ್ಲಾಡಿದವೋಲ್ ೨೫

ಅದನೇನಂ ಪೇೞ್ವೆನಿಂ ಪೇೞ್ದವಳ ಮಣಿತಮಂ ಬಾಲಸಂಭೋಗದೊಳ್
ತ್ತಿದ
ಬಾಯಂ ತೋಯಲಾಸ್ವಾದಿಸಿದ ಕಳಿಕೆಯಂ ಪೀರ್ದು ಪುಷ್ಪಂಗಳಂ
ರ್ಚಿದರೊಂದಂ
ಕರ್ಚಿ ಬಂಡುಂಡೆಸೆದು ಸವಿದು ಪುಂಸ್ಕೋಕಿಲಂ ಬಾಲಭೃಂಗಂ
ಮದಹಂಸಂ
ಕಲ್ತುದಂದಿಂಚರಮನದೆ ಜಗಕ್ಕಾಗೆ ಸಮ್ಮೋಹನಾಸ್ತ್ರಂ       ೨೬

ತಳಿರುಯ್ಯಲ್ ತಳ್ತ ತೋಳ್ ಮಲ್ಲಿಗೆ ನಗೆ ನಱುಸುಯ್ ತೆಂಬೆಲರ್ ಬಂದ ಮಾವು
ತ್ಪುಳಕಂ
ಪ್ರಸ್ವೇದಮಂಗಂ ಮೊಗಮಲರ್ದ ಕೊಳಂ ಕಣ್ಣ ಬೆಳ್ಪಚ್ಚವೆಳ್ದಿಂ
ಗಳೆನಲ್ಕಿಂಬಾಗಿ
ಬಂದೋಪಳ ಸುರತಕಲಾಚೈತ್ರದೋಲ್ ಸೂಕ್ಕಿ ಪುಂಸ್ಕೋ
ಕಿಳನಿಂಬಿಂ
ಕೂಜಿಸುತ್ತಂದಧರಕಳಿಕೆಯಂ ಕರ್ಚಿತುತ್ಸಾಹದಿಂದಂ         ೨೭

ಗಳನಾದಂ ತಳ್ತ ನೀರ್ವಕ್ಕಿಗಳುಲಿ ಚಲಚೂರ್ಣಾಳಕಂ ಭ್ರಾಂತಭೃಂಗಾ
ವಳಿ
ಸಸ್ವೇದಪ್ರಕಂಪಂ ಮೊಲೆ ನೆಗೆವ ರಥಾಂಗಂಗಳಾಗಲ್ಕೆ ಸಂಭೋ
ಗಳಸತ್ಕಾಂತಾಸ್ವರೂಪಂ
ಸೊಗಸಿನ ಕೊಳನಂ ಪೋಲೆ ತಾಂ ಪೀರ್ದನೊಲ್ದು
ಳ್ಳಲರ್ದಾಸ್ಯಾಂಭೋಜದಿಂಪುಳ್ಳಧರದಳಮನಾನಂದದಿಂ
ರಾಜಹಂಸಂ   ೨೮

ಬರಮಿತ್ತತ್ತಿಂಬಿನಿಂ ಚುಂಬಿಸುವಿನಿಯನ ಚಿತ್ತಕ್ಕೆ ಸಂಪ್ರೀತಿಯಿಂ
ಳ್ತುರಮಂ
ವಕ್ಷೋಜದಿಂ ನೂಂಕುವ ಸತಿಯ ಸಸೀತ್ಕಾರಮಾಸ್ಯಂ ಸಕಂಪಂ
ಕರಕಂಜಂ
ಸಾಶ್ರುಗರ್ಭಂ ಮುಕುಳಿತನಯನಂ ಸಂಭ್ರಮಂ ಭ್ರೂಯುಗಂ
ಸ್ಫುರಿತಂ
ಬಿಂಬಾಧರಂ ಸಂಪ್ಲವಮತನುರಸಂ ಸಪ್ರಹಾಸಂ ಕಪೋಲಂ   ೨೯

ಚಲಿತಭ್ರೂಚಾಪದಂಡಂ ನಿಶಿತಕರಜಹೇತಿಕ್ಷತಂ ಮುಕ್ತನೇತ್ರೋ
ತ್ಪಲಬಾಣಾಸಾರಮಾಲೋಹಿತಹತಕುಚದಂತಚ್ಪದಚ್ಛೇದಮುಚ್ಪೃಂ

ಖಲಪಾದಾಘಾತಮುನ್ನೂಪುರರವಜಯತೂರ್ಯಸ್ವನಂ
ಕಾಮಲೀಲಾ
ಕಲಹಂ
ತಳ್ತೋಪರೊಳ್ ಕುಂದದಿರೆ ಕುಣಿದನಂಗೋದ್ಭವಬ್ರಹ್ಮಪುತ್ರಂ    ೩೦

ಅಂತು ನೆರೆದುಮಾಱದಳ್ಕಱಳುರ್ಕೆಯಿಂ ಕಾಯ್ಪುಡುಗದ ಕಾತರಿಕೆಯಿಂ ಕೇಳೀವನಮಂ ಪೊಕ್ಕು ಮುನ್ನಂ ತನ್ನ ಶಿಶಿರೋಪಚಾರದೊಳ್ ಸ್ವಕೀಯ ಸಖೀಜನನಖ ಲೂನಕೋರಕಂಗಳಾದ ಕುರವಕಂಗಳಂ ರತಿಶ್ರಾಂತನುಲತಾಶ್ಲೇಷದಿನಂಕುರಿಸಿಯುಂ, ಕಾಮಿನೀಕರಜಾವ ಚಿತಕುಸುಮಂಗಳಾದ ಮಾಲತೀಮಂಡಪಂಗಳಂ ರತಿಪರಿಮಳ ಪಶ್ಚಿಮಾನಿಳನಿಂ ಕುಸುಮಿಸಿಯುಂ, ನಿಜಾಳೀಜನನಿರ್ಮೂಲಿತಮೃಣಾಳ ಕುಮುದ ಕಮಲಂಗಳಾದ ಸರೋವರಂಗಳಂ ರತಾವಸಾನಿಕ ಸಲಿಲಕೇಳೀಸಮಯ ಸಂಕುಲಿತ ಸಖೀನಿಕುರುಂಬದುರ್ಲಲಿತ ದೃಗ್ವದನಬಿಂಬಂಗಳಿಂ ಮುನ್ನಿನೊಪ್ಪಮನೊಪ್ಪಿಸಿಯುಂ, ನಿಜೋಷ್ಣ ನಿಶ್ವಾಸಶ್ವಸನಸಂಧುಕ್ಷಣಾಪಚಿತಚೂತಲತೆಗಳಿಂಸುರತಶ್ರಮಸಮುಚ್ಛ್ವಾಸಸುರಭೀಪವನನಿಂಬರಿಯೆ ಬರಿಯಿಸಿಯುಂ, ದುಸ್ಸಹವಿರಹ ಪಾರವಶ್ಯಪರಿಲುಳಿತನಿಜದೇಹದಾಹಗಂಧಧೂಮಾಯಿತ ವಿಪುಳಪುಳಿನತಳಂಗಳಂ ಸ್ಮರರಸಸರಿತ್ಪ್ರವಾಹದಿಂದಾಱಿಸಿಯುಂ, ನಿಜಶಯ್ಯಾಸೃಷ್ಟಿಮೋದಿತಮೃದುಕಿಸಲಯ ಮುಗ್ಧಾಶೋಕಲತೆಗಳಂ ತತ್ತರುಣೀಶಾಖಾತಿರೋಹಿತಪ್ರಣಯಕಲಹಪಲಾಯಿತ ಪ್ರಿಯಾಂಗಸ್ಖಲಿತಪಾದಘಾತದಿನವಂ ನವಪಲ್ಲ ವಮಂ ಪೇಱಿಸಿಯುಂ, ಮನೋಜಜ್ವಲನ ಜಾಜ್ವಲ್ಯಮಾನನಿಜಾಂಗಾಲಿಂಗನದಿಂ ಕಂದಿದ ಕನಕಕದಳೀಸ್ತಂಭಂಗಳಿಂ ನಿಧುವನ ಕದನ ಭೇದದಿಂ ಮಲಂಗಿ ಮಲಯರುಹರಸವಿಶದಸ್ವೇದ ಸಲಿಲದಿಂ ಬಣ್ಣಂಮಗುೞ್ಚಿಯುಂ, ಆತ್ಮತನುತನುತಾಪಪ್ಲೋಷಶೋಷಿತಸತತಾವಗಾಹಗೇಹಮಹಾಸರಸಿಗಳಂ ಸುರತಾಂತಮಜ್ಜ ನಸಮುಜ್ಜಳಮುಖಕಾಂತಿಕೌಮುದೀಮೃದೂಕೃತ ಹಿಮಕರೋಪಲ ಸೋಪಾನಫಲಕವಿಶ್ರಮ ರಸಪ್ರವಾಹದಿಂ ಪೆರ್ಚಿಸಿಯುಂ, ಸುರತಾಯತತೃಷ್ಣೆಯಿಂ ಮಧುಕರಮನೋಹರಿಯಂತೆ ಸಮದವಧುಕರಪಕ್ಷಪಾತ ನವಪತಿತದರದಳಿತ ಮಾಧವೀಮಧುರಮಧುಧಾರೆಳಂ ಒತ್ತಿದ ಬಾಯಾಂತು ಕುಡಿದುಂ, ನಾಗಿಣಿಯಂತೆ ನಾಗಬಂಧಬಂಧುರಪರಿಷ್ವಂಗತೃಷ್ಣಾಪ್ಲೋಷ ಶೋಷಿತಪಿಪಾಸೆಯಿಂ ಪರಸ್ಪರ ಪರಿಸ್ಪಂದ ಮೃದಿತಮಂದರಸಸಂದೋಹಸ್ಯಂದಿಚಂದನ ಸುಕುಮಾರಶಾಖಾ ಪ್ರರೋಹ ಪಲ್ಲವ ಪ್ರಸೂತಿಶೀತಲಾಮೋದಿ ಮೃದುಲಪವನಂ ಪೀರ್ದುಂ, ಕಲಹಂಸಿಯಂತೆ ಕಲಸ್ಖಲಿತ ಮಣಿತರಣಿತಾಯಾಸನೀತರಸರಸನೆಯಂ ರಸದಿಂ ತೋಯಲೆಂದು ತೋಯರುಹ ನಿರಂತರದಳಿತದಳ ಸಂದೋಹ ಸಂಧಿವಿಗಳಿತ ಮಕರಂದಬಿಂದು ಫಲಪಾತಮಣಿತ ಮೃಣಾಳನಾಳ ಕದಂಬಮಂ ಕಾರ್ದುಮಿಂತೋಪನೊಳ್ ನೆರೆವ ತನ್ನ ನೆರವಿಯ ಸಗ್ಗದ ಸೊಗದ ನೆರವಿನ ನೆರೆಮನೆಯಾಗೆ, ಕಾಮಸುಖಾಮೃತಮನಾ ಕಾಮಿನಿಯನುಭವಿಸಿ ಮಲ್ಲಿಕಾಮಂಡಪದ ಮುಂದಣದದಿರ್ಮುತ್ತೆಯ ಮತ್ತವಾರಣದೊಳ್ –

ಸವಿ ತಲೆಗಾದುದೀಯಧರದಿಂ ಪುಳಕಾಮಕುರಮಾಯ್ತುಮಾಯ್ತು ಮೆ
ಯ್ಗವಳ
ಕುಚಕ್ಕೆ ಕರ್ಕಶತೆ ಜೀವನಮಾಯ್ತುೞಿದಂತಿರೆನ್ನ ಬಾ
ಯ್ವಿವರದೊಳೆನ್ನ
ತೋಳ್ವೊಣರ ತೊತ್ತುೞಿಯೊಳ್ ಕಡಿಕೆಯ್ದವಿಂತು
ೞ್ದುವೆ
ಪೊಣರ್ವೆನ್ನುರೋಹತಿಯೊಳೆಂಬವೊಲೀಕ್ಷಿಸುತಿರ್ದ ನಲ್ಲನಾ        ೩೧

ಪೆಗಲಂ ತೞ್ಕೈಸಿ ತೋಳಿಂ ತೊಡೆಗೆ ಗುರುನಿತಂಬಾಗ್ರಮಂ ಸಾರ್ಚಿ ಮುಂ ವೀ
ಳಿಗೆಯಂ
ಬಾಯ್ಗಿತ್ತು ಪಲ್ಲಿಂದಳಿಪಿ ಸೆಳೆಯುತುಂ ಗಲ್ಲಮಂ ಚೆಲ್ಲದಿಂ ಕೂ
ರುಗುರಿಂದಂ
ಕೂಂಕುತುಂ ಪೆರ್ಮೊಲೆಯಿನಿಱಿಯುತುಂ ವಕ್ಷ ಮಂ ನೀಡಿ ಕಾಲಂ
ತೆಗೆಯುತ್ತುಂ
ತಳ್ತ ಕಾಲಿಂ ನಗುತವೆ ಮೊಗಮಂ ನೋಡುತುಂ ನಿರ್ನಿಮೇಷಂ       ೩೨

ಪಲ್ಲಟಿಸಿ ಕರ್ಚಿದೆಲೆಯಂ
ಮೆಲ್ಲದೆ
ಕಕ್ಕರನೆ ಕರಿಯೆ ಖಾರದಿನಧರಂ
ಪಲ್ಲಂ
ದಷ್ಟಾಧರಮದು
ನಲ್ಲನ
ಪಲ್ಗಳ್ಕಿ ಕರ್ಗಿತೆನೆ ತೋರ್ಪವಳಂ      ೩೩

ವಿಮಲಚಲನೇತ್ರನಕ್ಷ
ತ್ರಮಾರ್ಗಮುಂ
ಕೀಱಿ ಬಳೆವ ಕುಚಮಿನ್ನೆನಗಂ
ರಮಣಾಲಿಂಗನಕಳಶಜ

ವಿಮರ್ದಿತಂ
ಕುಸಿಯೆ ಮಿಸುಪ ವಿಕಸಿತಮುಖಿಯಂ    ೩೪

ಕೆದಱಿದ ಕುಂತಳಂ ಕುಸಿದುಕೊರ್ಬಿದ ಪೆರ್ಮೊಲೆ ದೊಂಡೆದೊಂಗುವೊಂ
ಗಿದ
ತುಟಿ ತಳ್ಪಿನಿಂ ಮುಱಿದ ಮೆಯ್ನವಿರೋಪನ ತಳ್ತ ತೋಳ್ಗಳೊ
ತ್ತಿದ
ಬೞಿಮೆಯ್ಯ ಕೂರುಗುರ ಬಾಸುೞೆ ಭೂಷಣಮಾಗಳುಂ ರತಾಂ
ತದೊಳೆನಗೆಂಬವೋಲ್
ತುಡದೆಯುಂ ತೊಡವಂ ಕರಮೊಪ್ಪುತಿರ್ದಳಂ   ೩೫

ಅದಲ್ಲದೆಯುಂ –

ಪಸಿಯುಗುರೊತ್ತಿನಿಂ ನೊಸಲೊಳೊಪ್ಪಿರೆ ಪತ್ತಿದ ಕುಂತಳಂಗಳಿಂ
ಬಸವೞೆವಂಗದಿಂ
ಬಸಿವ ಘರ್ಮಜಲಂಗಳಿನಾಱೆ ಪಲ್ಲ ನು
ಣ್ಮಸೆ
ಮಿಗೆ ಪತ್ತೆ ಜರ್ಜರಿತಮಾಗಿ ಬೆಳರ್ತಧರೋರಷ್ಠದಿಂ ರತಿ
ವ್ಯಸನಮಹಾಹಿ
ನುಂಗಿಯುಗುೞ್ವಂತೆವೊಲಿರ್ದ ನಿಮೀಲಿತಾಕ್ಷಿಯಂ       ೩೬

ಅಂತು ವನಪಾಲಿಕೆಯರ್ ಬಂದು ಕಂಡು ದೂರಾಂತರದೊಳ್ ಪೊಡೆಮಟ್ಟಿತ್ತ ಬನ್ನಿ ಮೆಂದರಸಂ ಕರೆಯೆ, ಸಾರೆ ವಂದು ತಮ್ಮ ತಂದ ಮಾವಿನ ಗೊಂಚಲುಮನದಱ ಕೆಂದಳಿರುಮಂ ಅಸುಕೆಯ ನಿಱಿದಳಿರುಮನದಱ ಗೊಂಜಲುಮಂ ಸುರಯಿಯ ಬಿರಿಮುಗುಳುಮನದಱ ಪೂವುಮಂ ಮಲ್ಲಿಗೆಯ ಮುಗುಳುಮನದಱ ಪಸುರ್ನಗೆಯುಮಂ ಪಾದರಿಯರಲುಮನದಱ ಮೊಗ್ಗೆಗಳುಮಂ ಕುರವಕದಂಕುರಮನದಱ ಬಿರಿಗಳಿಕೆಯುಮಂ ಕೊಸಗಿನ ಕುಸುಮಮನದಱ ಕೇಸರದ ರಜಮುಮಂ ಮುನ್ನಮೋಲಗಿಸಿ ಬೞಿಕೆಮದಿರ್ಮುತ್ತೆಯ ಪೂಗೊಂಚಲುಮಂ ಸಂಪಗೆಯ ಮುಗುಳುಮಂ ಮಾವಿನ ಮಿಡಿಯ ಗೊಲೆಯುಮನಡಕೆಯ ಪಾಳೆಗಳೊಳಮೆಳವಾೞೆಯ ಬಿಳಿಯ ಪೊರೆಗವಳಿಗೆಗಳೊಳಂ ತಾವರೆಯೆಲೆವಟ್ಟಲ್ಗಳೊಳಮೊಟ್ಟಿ ಕಟ್ಟಿ ತಂದುವನೆವಗೆ ತವಗೆಂದು ತವಕದಿಂ ಕೈನೀಡಿದ ಲೀಲಾವತಿಗಂ ಕಂದರ್ಪದೇವಂಗಂ ಬೇಱೆವೇಱೆ ಬೀಱೆ –

ದೇವಿ ಬಿನ್ನಪಮೀ ಬನಕಾಂತಂ ಬಂದು ಸಹಾಯಸಮನ್ವಿತಂ
ಜೀವದಂತಿರೆ
ನಿನ್ನೊಳನೂನಂ ಕೂಡಿದವೋಲ್ ಮಳಯಾನಿಳಂ
ತೀವಿ
ತನ್ನೊಡವಂದಿರೆ ಮೆಲ್ಪಿಂ ದರ್ಪಕನಾಜ್ಞೆಯನಾಂತು ಬಂ
ದಾ
ವಸಂತಕನಂ ಕಡುಪಿಂದಂ ಕೂಡಿದನೀ ವನಲಕ್ಷ್ಮಿಯೊಳ್    ೩೭

ಅದೆಂತೆನೆ –

ನಿಱಿನಿಱಿಗೊಂಡ ಕೆಂದಳಿರ ಕೆಂದಳಿರ್ಗಳ್ ಪಱಿವನ್ನಮುರ್ಬಿನಿಂ
ಪೊಱಮಡುತಿರ್ಪ
ಕೋರಕದ ಕೋರದೊಳ್ ನನೆಕೂಡಿ ಕೊಳ್ವಿನಂ
ತುಱುಗಿ
ಪೊದೞ್ದ ಪೂಗೊನೆಯ ಬಂಬಲ ಬಲ್ಪೊಱೆಯಿಂದಮೇಂ ಬೞ
ಲ್ದೊಱಗಿದುದೋ
ಶುಕಸ್ತುತಿವಿನಮ್ರತೆವೆತ್ತವೊಲಾಮ್ರಭೂರುಹಂ ೩೮

ತೊವರ್ಗಂಪಂ ತನಿಗಂಪನೇಕೆ ಕನರ್ಗಂಪಂ ಪೊತ್ತುವೇ ಕೋರಕ
ದ್ರಮಮುಂ
ತನ್ನಲರ್ಗೊಂಚಲುಂ ಮಿಡಿಗಳುಂ ತಮ್ಮತ್ತಲೇಂ ಕೂಗಿ ನೋ
ಡವುವೇ
ಕೋಗಿಲೆಯೆಂದು ಸೊಕ್ಕಿದಳಿಯೆಂದೋವೆಂದು ಪೋ ಬಂದುಮೇ
ವುವೊ
ಮಾವಲ್ಲದವೆಂಬವೋಲ್ ಬಳೆದುದೆತ್ತಂ ಕೀರಕೋಳಾಹಳಂ       ೩೯

ಕೋಗಿಲೆ ಕರ್ಚಿಕೊಳ್ವ ಕಳಿಕಾರಸದಿಂ ಗಿಳಿ ಪಾಯ್ದು ಬೇಗದೊಳ್
ಪೂಗೊನೆ
ತೂಗುತುಂ ಬಿಡುವ ಬಂಡುಗಳಿಂ ಮಿಡಿಯಂ ಶುಕಾನನಂ
ತಾಗೆ
ತಗುಳ್ದು ಸೋರ್ವ ಸೊನೆಯಿಂ ಸದು ಬೀೞೆ ಮನೋಜರಾಜಧಾ
ರಾಗೃಹದಂತದೇನೆಸೆದುದೋ
ಮಧುಮಾಸದೊಳಾಮ್ರಭೂರುಹಂ        ೪೦

ಅಲರ್ಗೆ ಪೊಸಮಿಡಿಗೆ ಕಳಿಕೆಗೆ
ನಲಿದಳಿಯುಂ
ಗಿಳಿಯ ಬಳಗಮುಂ ಕೋಗಿಲೆಯುಂ
ಬಲವಂದೆಱಗಿದುವೊಲವಿಂ

ಬಲಗೊಂಡೆಱಗುವವೊಲೆಱಗಿ
ಬಂದೆಳಮಾವಂ         ೪೧

ತುಂಬಿಗಳೆಳಮಾವಿನ ಸೆಳೆ
ಗೊಂಬುಗಳಂ
ಕರ್ಚಿ ಮೊರೆದು ಪಾಱಿದುವಲರ್ಗಂ
ತುಂಬಿ
ತೆಗೆದೆಚ್ಚ ಪೊಸಗಱಿ
ಯಂಬುಗಳೆನೆ
ಮಧುಮದಾಂಧನೆನಿಪತನುವಿನಾ      ೪೨

ಬನದ ಪೊಱಗಾಮ್ರಮೆಸೆದುದು
ಸೊನೆವರದಿಂ
ಕೆಯ್ಯನಗ್ರಪಲ್ಲವದಿಂ ಕೊಂ
ಬಿನ
ಕೊನೆಯಿಂ ಲತಿಕಾಬಂ
ಧನದಿಂ
ನಡುಪಟ್ಟ ಗಜದವೋಲಂಗಜನಾ    ೪೩

ಸುತ್ತುಂ ನವಪಲ್ಲವಮೆೞ
ಲುತ್ತಿರೆ
ಮುತ್ತಿದ ಮದಾಳಿಕುಳದಿಂ ಮದನಂ
ಗೆತ್ತಿದ
ಪೊಸಕಣ್ಬೀಲಿಯ
ಸತ್ತಿಗೆಯೆನಿಸಿದುದು
ಪೂತಚೂತಕುಜಾತಂ   ೪೪

ಕಾಣಿಸಿದುದಸಮಬಾಣನ
ಬೀಣೆಯ
ಚೆಲ್ವಂ ಪ್ರಗಲ್ಭಕೋಕಿಲಕಲನಿ
ಕ್ವಾಣಂ
ನಿಕಾಮಕೋರಕ
ಕೋಣಂ
ವಿಲಸತ್ಪ್ರವಾಳಮಾಮ್ರಮಹೀಜಂ   ೪೫

ಸೀಳದಿರವಿದಿರ ಕೋರಕ
ಬಾಲಕರಂ
ಪಿಕನಿಶಾಟರೆಂದಳ್ಕಿದವೋಲ್
ಬಾಲಸಹಕಾರಶಾಖಾ

ಬಾಲಿಕೆ
ನಿಱಿದಳರ ನಿಱಿಯಿನೇಂ ಮುಸುಕಿದಳೋ     ೪೬

ರಂಜಿಸಿದುದಾಮ್ರಸುಮನೋ
ಮಂಜರಿಯಳಿಮಳಿನಮಖಿಳಕಾಮುಕನಳಿನೀ

ಕುಂಜರನ
ಕಂತುರಾಜನ
ನಂಜೂಡಿದ
ಕಣೆಗಳಂತೆ ಚೈತ್ರಾಗಮದೊಳ್ ೪೭

ನೆರೆದಾಗಳ್ ಮಲಯಾನಿಲೋಪಪತಿಯೊಳ್ ಮೀಲನ್ಮಧುಸ್ವೇದಮಂ
ಸುರಿಯುತ್ತುಂ
ಪರೆಪುತ್ತೆ ಕಂಪನಲರ್ಗಣ್ಣಂ ಚೆಲ್ಲುತುಂ ಬಿಚ್ಚತಂ
ಬರೆ
ಮಲ್ಲೀವಧು ಕಂಡು ಕೊಂಡು ಪುರುಡಿಂ ಚೂತಪ್ರಿಯಂ ಕಾಯ್ದವೋಲ್
ಕುರುಳಂ
ಮಲ್ಲಿಗೆಯಿಂದೆ ಪಾಯ್ದುವದಱೊಳ್ಗೊಂಬಿಂಗೆ ಭೃಂಗಾಳಿಗಳ್     ೪೮

ಎಱಗಿ ಮಧುವ್ರತಂ ಸ್ತಬಕಕಂಠದೊಳೊಳ್ಗೆಱೆಯಂತೆ ತೋಱಿ ಮೇ
ಗೊಱಗಿದಶೋಕಪಲ್ಲವಮೆ
ಕೆಂಜೆಡೆಯಂತಿರೆ ಬಂದ ಬಂಡು ಬಾಂ
ದೊಱೆಯೆನೆ
ಸೂಱೆಗೊಂಡು ಪೆಱೆಯಂ ಮಧುಧೂರ್ಜಟಿಯಂ ಸ್ಮರಾರಿಯಂ
ಸೆಱೆವಿಡಿದಂತೆವೋಲ್
ವಿಚಕಿಳಂ ತೊಳಗಿತ್ತು ಪರಾಗಪಾಂಡುರಂ        ೪೯

ಪೊಡೆದುದೆಳದಳಿರ್ಗಳಿಂದಳ
ರ್ವುಡಿಯೊಳ್
ಪೊರೆದಾಡುವಮ್ಮ ನಿಮ್ಮಾವೆಂದಾ
ಱಡಿಯಂ
ದೂಱುವವೋಲಂ
ಬಿಡೆ
ಮಧು ಕಡೆವಾಯ ನಲಿದುದೋ ಮಲ್ಲಿಗೆಯೊಳ್   ೫೦