ಅಲರ್ಗೊಂಬನೇಱಿಯಿೞಿದ
ಜಲಜಾನನೆ
ಭೃಂಗಭಯಮನಿತ್ತಿನಿಯನಮೇ
ಲಲಘುಕುಚ
ಬೆರ್ಚಿ ಬಿರ್ದಳ್
ಮೊಲೆಯುರಮಂ
ನಾಮಟಿ ಬೆನ್ಗೆ ಬಳೆವಿನಮೊರ್ವಳ್   ೧೦೧

ಒಂದು ಕುಚಮುರದೊಳುರ್ಚಿರೆ
ಚಂದನಧವಳಿತನನಪ್ಪಿ
ಪೂಗೊಯ್ದಳ್
ಳ್ತಿಂದುಧರನಂಗದಿಂ
ಮುಳಿ
ಸಿಂದಂ
ಮಿಗೆ ಮುರಿದು ಮಗುೞ್ದ ಗಿರಿಜೆವೊಲೊರ್ವಳ್  ೧೦೨

ಆಗಳೊರ್ವ ಧೃಷ್ಟಂ –

ಎಲೆ ಜಲಜಾಸ್ಯೆ ನಿನ್ನ ನಯನೋತ್ಪಲಮಂ ಮಱಿದುಂಬಿ ಪತ್ತವಿ
ತ್ತಲೆ
ಕವಿದಪ್ಪುದೆಂದವಳ ಕಣ್ಗೆ ನಿಮೀಲನಮಂ ನಿಮಿರ್ಚಿ ಕಾ
ದಲಳಧರಾಗ್ರಮಂ
ಸವಿದು ಪೀಡಿಸಿತೀಕೆಯ ವಕ್ತ್ರಪದ್ಮಮಂ
ನಲಿದಳಿಯೆಂದು
ತಾಂ ಪುಸಿದನಾಕೆಗೆ ನಲ್ಲಳ ಸೀತ್ಕೃತಂಗಳಂ  ೧೦೩

ಮತ್ತಮೊರ್ವನನುಕೂಲಂ –

ಪೊಯ್ದುದು ಮಾಯ್ದಲರ್ತಿಱಿಯಲೀಯದೆ ದೂಳಿಯನೆಂದು ಗಾಳಿಯಿಂ
ಪಾಯ್ದ
ಪರಾಗಮಂ ತೊಡೆಯುತುಂ ನಿಡುಗಣ್ಗಳನೊತ್ತಿ ಮುಚ್ಚಿಕೊಂ
ಡೊಯ್ದತಿ
ಮುಗ್ಧವಲ್ಲಭೆಯ ಕಣ್ಬೊಣರಂ ಪತಿ ತುಂಬಿ ಪೀರ್ವವೋಲ್
ನೆಯ್ದಿಲನೂದಿಯೂದಿ
ಪರಿಚುಂಬಿಸಿದಂ ನಗುತುಂ ನೀಜೇಚ್ಛೆಯಿಂ         ೧೦೪

ಅಲರಾಯ್ದು ಬೞಲೆ ನೊಸಲೊಳ್
ಜಲಜಲಿಸುವ
ಬೆಮರನೊರಸಿ ಕಳೆವಿನಿಯನ ಮೆ
ಲ್ಪಲವ
ತಳೆದಲೆಪದಿಂ ತೆಂ
ಬೆಲರಲೆಯೆ
ಮುಗುಳ್ತ ಲತೆವೊಲೆಯ್ದೆ ಬೆಮರ್ತಳ್      ೧೦೫

ತರುಣಿಗೆಳದಳಿರ್ಗಳಿಂ ಸೊನೆ
ಸುರಿವಿನಮುಗಿದುದಿರ್ದ
ಫಲಮೆ ಫಲಿಯಿಸಿತೆಂಬಂ
ತಿರೆ
ಪಡೆದಳ್ ಶ್ರಮಲಲಿತಾ
ಧರಕಿಸಲಯಭಗಂಮಂ
ನಿಜೇಶನಿನೊರ್ವಳ್ ೧೦೬

ಮೊಗಮೀಸೆ ಬಾರದೋಪರ್
ಸೊಗಯಿಸಿ
ಪೆಣ್ಬರಿಜನಿಟ್ಟು ಬರೆ ಪೂದಿಱಿವ
ಚ್ಚಿಗದಿಂದಮೆಯ್ದೆ
ಮೆಚ್ಚಿದ
ಬಗೆಯಿಂ
ಸ್ಮರಕೇಳಿಗೆಳಸಿದರ್ ಪುಂಶ್ಚಲಿಯರ್         ೧೦೭

ಅಂತು ಪೂಗೊಯ್ದು ಬೞಲ್ದೊಂದೆಡೆ ನೆರೆದು ಕುಸುಮಾಪಚಯ ಕ್ರಮದಿಂ ರಕ್ತಾಶೋಕದ ತಣ್ಣೆೞಲೊಳ್ ಕಂದರ್ಪನ ತೋಳಂ ಮಲಂಗಿದ ವೀರಶ್ರೀಯಂತೆ ರೂಪಕಂದರ್ಪನ ತೋಳಂ ಮಲಂಗಿ ಕುಳ್ಳಿರ್ದ ಲೀಲಾವತಿಯಲ್ಲಿಗೆ ಬಂದು ಆಕೆಯಂ ತಮ್ಮ ತಮ್ಮ ತಂದ ಪೂಗಳಿಂ ಪಸದನಂಗೊಳಿಸುವಾಗಳ್ –

ಪೊಸತಿಕ್ಕುವಂತೆ ಕಾಮನೆ
ಪೊಸನಿಧಿಯಂ
ಕಾಮಕಾಳಸರ್ಪಂಗೊಲವಿಂ
ಪೊಸಮಲ್ಲಿಗೆಯುಮನಡಕೆಯ

ಸಸಿಯುಮನೊಸೆದೊರ್ವಳಿಕ್ಕಿದಳ್
ಸೋರ್ಮುಡಿಯೊಳ್        ೧೦೮

ಅಂತಾ ಕಾಂತೆಯಂ ಕೈಗೆಯ್ಸುವ ಕೆಳದಿಯರಂ ನೀಮಱಿಯಿರೆಂದು ನಿವಾರಿಸಿ –

ಕವಿಧವಳಂ ಕುವಲಯಮಂ
ಕಿವಿಯೊಳ್
ಕುಡೆ ನೂಂಕಿದುದು ಕದಂಪಿನ ಪುಳಕಂ
ಯುವತಿಗೆ
ಬೇಱೇಕೆಯೊ
ನ್ನವುರಂ
ಕೆಡಗಣ್ಗಳಿರ್ದವೋಲೆಂಬಿನೆಗಂ      ೧೦೯

ಅಡಸಿ ಪೊದೞ್ದ ಪೆರ್ಮೊಲೆಗೆ ಕುಟ್ಮಲಹಾರಮನಾಂತಳೞ್ತಿಯಿಂ
ಕುಡುವ
ಪದಕ್ಕೆ ಮುನ್ನಮೆನಗೀವುದು ಕಾಂಚಿಯನೆಂದು ಬಂದವೋ
ಲುಡೆಯನಡುರ್ತು
ನೂಂಕೆ ನೆಗೆದಾ ರಮಣೀರಮಣಕ್ಕೆ ಮುನ್ನಮೇಂ
ಕುಡುವುದುಪಂಗೆ
ಬಲ್ಮುಗುಳಕಾಂಚಿಯನಾ ರತಿರಾಗದೋಹಳಂ          ೧೧೦

ಆಗಳಲ್ಲಿ –

ಇನಿಯರ್ ಕೈಗೆಯ್ಸುವ ಕಾ
ಮಿನಿಯರ
ಮೈಮೆಯನೆ ನೋಡಿ ಮಾಡಿದ ಪೊಸಪೂ
ವಿನ
ತೊಡವಂ ತೊಡಲೊಲ್ಲದೆ
ಮನದೊಳ್
ಕಡುನೊಂದು ನಲ್ಲಱಿದಂಗನೆಯಾ        ೧೧೧

ಅಲ್ಲಿಂ ಬೞಿಯಂ ಬೞಲ್ದುದುಮಲ್ಲದೆ ರೋಮಕೂಪಂಗಳೊಳ್ ಪೊಱಪೊಣ್ಮುವ ಘರ್ಮ ಜಲಂಗಳನೀಂಟುವಂತೆ ನಟ್ಟಾಗಸದಿನಿನಿಸಿೞಿದೆಲರಿನೊಲೆವೆಲೆದೆಱಪುಗಳಿಂ ನಿಱಿವ ನೇಸಱ ಕಾದ ಕದಿರ್ಗಳ ಕೋೞ್ಗೆ ಮೆಯ್ಗಳಂ ಕೊಂಡೋಡುವ ಕೆಳದಿಯರಂ ಕಂಡು ಕಳಾವತಿಯಿಂತೆಂದಳ್ –

ಬನದಲರಂ ಬಱಿಕೆಯ್ಸಿದ
ಬಿನದದ
ಪೊಲ್ಲಮೆಯನಿಂದೆ ಕಳೆವೊಡೆ ನಿನ್ನೀ
ವನಿತಾಜನಮುಖವನರುಹ

ವನದಿಂದಮೆ
ತೀವು ಕೆಳದಿ ಕೋಡುವ ಕೊಳನಂ        ೧೧೨

ಎಂದವಸರದಿಂ ಮುನ್ನಮೆ ಹಂಸಹಾರಮೆಂಬ ಲೀಲಸರಕ್ಕೆ ಲೀಲಾವತಿ ಜಲಕೇಳಿಗೆಳಸಿ ಬರ್ಪಾಗಳ್ –

ವನಕೇಳೀಶ್ರಾಂತಕಾಂತಜನದ ಮುಖಸರೋಜಂಗಳೊಳ್ ಪಾಯ್ದು ತುಂತು
ರ್ವನಿಯಂ
ಪೇಱುತ್ತೆ ಮತ್ತಶ್ರಮಸುರಭಿಪಯೋಬಿಂದುವಂ ತಂದು ನೀರ್ವೂ
ವಿನ
ಕಂಪಂ ಕೊಟ್ಟು ಪರ್ಬಿತ್ತಭಿನವಮಧುರಾಮೋದನಿಶ್ವಾಸದಿಂ
ಣ್ಣನೆ
ತೀಡಿತ್ತೊಂದು ಭೃಂಗದ್ವಿಗುಣಿತಗಣಿಕಾಕೇಶಭಾರಂ ಸಮೀರಂ       ೧೧೩

ಆ ತಣ್ಣೆಲರ್ ತಾಮೆತ್ತಲಾಱದ ಮೊಲೆಗಳುಮಂ ನೆಗಪಲಾಱದ ಜಘನಮುಮಂ ಪೊಱಲಾಱದೆ ಪೆರ್ಮುಡಿಯುಮಂ ನೆರಮಾಗಿ ಪೊತ್ತೆತ್ತಿದುದುಮಲ್ಲದೆ ಮೃದು ಪರಷ್ಟಂಗದಿಂ ಪರಿಶ್ರಮಮನಿನಿಸು ತೊಲಗಿಸೆ ತರುಣಿಜನಮೆಯ್ದೆವಂದಾ ಕೊಳನ ತಡಿಯೊಳ್ ನೆರೆದು ನಿಲೆ –

ಗಣಿಕೆಯರ ಗಡಣದಿಂ ನಾ
ಗಿಣಿಯರ್
ನೀರಾಟಮಾಲೊಗೆದವೊಲಿರೆಯುಂ
ರಣಕುಟಿಲಂಗಳ್
ತರುಣೀ
ಗಣದಸಿಯ
ನೆೞಲ್ಗಳೆಸೆದುವಬ್ಜಾಕರದೊಳ್   ೧೧೪

ಅಲ್ಲಿಂ ಬೞಿಯಂ –

ಜಳಪಕ್ಷಿವ್ರಾತಕೋಲಾಹಲಮೊಗೆವಿನೆಗಂ ಪಕ್ಕವಾದ್ಯಂಬೊಲುದ್ಯ
ನ್ನಳಿನೀಕಿಂಜಲ್ಕ
ಪುಂಜಾಮೃತಿ ಜವನಿಕೆವೋಲ್ ಪಿಂಗೆ ಸುಯ್ಗಾಳಿಯಿಂ ಪೂ
ಗೊಳನಂ
ಪೊಕ್ಕಂತು ರಂಗಂಬುಗುವ ತೆಱದೆ ನೇತ್ರಪ್ರಭಾಜಾಳಾಪುಷ್ಪಾಂ
ಜಳಿಯಂ
ಸೂಸುತ್ತೆ ಕಾಂಆಜನಮದು ಜಲಕೇಳ್ಯುಜ್ವಲಲ್ಲಾಸ್ಯಲೋಲಂ    ೧೧೫

ತುಡಿಸುತ್ತುಂ ನೀರನಂಗದ್ಯುತಿಯಿನವಯವಚ್ಛಾಯೆಯಿಂ ತಮ್ಮನಂದಿ
ರ್ಮಡಿಸುತ್ತುಂ
ನೇತ್ರನೀಲೋತ್ಪಲದ ನೆೞಲ ಬಂಬಲ್ಗಳಿಂ ನೆಯ್ದಿಲಂ ನೂ
ರ್ಮಡಿಸುತ್ತುಂ
……….
…………ಪೊಕ್ಕುದಬ್ಜಾಕರಮನೊಲವಿನಂ
ಕಾಂತಕಾಂತಾಕದಂಬಂ       ೧೧೬

ತೆರೆಗಳ್ ವಕ್ಷೋಜಘಾತಕ್ಕಗಿದು ತೆಗೆವವೋಲ್ ಮೀಱೆ ಮರ್ಯಾದೆಯಂ ವಾ
ರಿರುಹಂಗಳ್
ವಕ್ತ್ರಚಂದ್ರಪ್ರಭೆಗೆ ಬೆಗಡುಗೊಂಡಂತೆ ನೀರೊಳ್ ಮುೞುಂಗು
ತ್ತಿರೆ
ಹಸ್ತಾಬ್ಜಂಗಳಿಂದುತ್ಪಲದಳಿಕುಳಮಂ ಸೋವುತುಂ ಪೊಕ್ಕುದಬ್ಜಾ
ಕರಮಂ
ಕಾಂತಾಜನಂ ಪೆರ್ಚಿಸುತುಮಲಘುಕಾಂಚೀಪದಾಪೂರದಿಂದಂ  ೧೧೭

ಸುದತಿಯರೊಡವುಗೆ ಮೆಯ್ಗಡ
ರ್ವುದಭಾರಂ
ಬರ್ಪ ಕುಚರಥಾಂಗಚಯಕ್ಕಂ
ವದನವನೇರುಹವಿತತಿಗ

ಮಿದಿರ್ವರ್ಪಂತಯ್ತು
ಪೂಗೊಳಂ ಸಂಭ್ರಮದಿಂ         ೧೧೮

ಪುದಿದಿರೆ ಪಕ್ಕದವೊಲ್ ಮೃಗ
ಮದಪತ್ರಂ
ಕಾಂತಕರಜಕುಲಿಶಕ್ಷಿತಿಗ
ೞ್ಕಿದವೊಲ್
ಪೊಕ್ಕುವು ಕೊಳನೆಂ
ಬುದಧಿಯನಬಲೆಯರ
ಕಠಿನಕುಚಕುಲಗಿರಿಗಳ್        ೧೧೯

ಇದು ಜಲಜಾತಮೆಂಬಿದು ಸಖೀ ಮುಖಮೆಂಬಿನಿಂತುಂ ವಿವೇಕಮಿ
ಲ್ಲದೆ
ಜಲಮಂ ತುಳುಂಕುವಲಬಾಜನದೊಂದಲೆಪಕ್ಕೆ ಪೆರ್ಚಿದಂ
ದದೆ
ಜಲಜಾಳಿಗಳ್ ಮುೞುಗಿ ಪಿಂಗಿದುವಾಕೆಗಳುರ್ಬಿಪರ್ಬಿಕೊ
ರ್ಬಿದ
ಕುಚಕುಂಭಮಾವರಿಸೆ ತೀವಿ ತುೞುಂಕುವ ಪದ್ಮಷಂಡದೊಳ್       ೧೩೨೦

ಪ್ಲವದಾಸ್ಯಾಬ್ಜಂಗಳಿಂ ಜಂಗಮಕಮಲಚಿತಂ ದೋರ್ಲತಾಜಾಲದಿಂದಂ
ದ್ರವೀಚೀಚ್ಛನ್ನಮಾ
ಕಾಂತೆಯರ ಚಿಕುರಭಾರಂಗಳಿಂದಂ ಭ್ರಮದ್ಭೃಂ
ಗವಿಕೀರ್ಣಂ
ಕಣ್ಗಳಿಂ ಶಿಕ್ಷಿತಕುಮುದವೃತಂ ವೃತ್ತವಕ್ಷೋಜದಿಂದು
ತ್ಸವಮಾನಾನೇಕ
ಕೋಕದ್ವಯಮಯಮೆನಿಸಿತ್ತುಗಳಂಭೋಜಷಂಡಂ    ೧೨೧

ಒದೆದೆಲರೆತ್ತಿದಂಬುಜರಜಃಪಲಂ ಬೆರಸಿರ್ದು ತುಂಬಿವಿಂ
ಡೊದವಿರೆ
ಸೇಂದ್ರಚಾಪಚಪಲಾಭ್ರಮೆಗೆತ್ತವೊಲಂಚೆವಿಂಡು ಸೂ
ಸಿದುದೆಳಸಂಜೆಯೊಳ್
ಕವಿದ ಕೞ್ತಲೆಗೆತ್ತಗಿದಂತೆ ಬೆರ್ಚಿ ಬಿ
ರ್ಚಿದ
ಚಲಚಕ್ರವಾಕಚಯಮಿರ್ದುದು ಸಾರ್ದಬಲಾಕುಚಂಗಳಂ  ೧೨೨

ಮುರಿದೆಲರೆತ್ತೆ ಮೆಯ್ದಿರಿದು ತೋರಮನಾಳ್ದು ಪೊದೞ್ದು ನೀಳ್ದ ಪಂ
ಕರುಹಪರಾಗಮುಂ
ಜವದೆ ಮಂದರಮಾಗೆ ಸರೋವರಾಬ್ಧಿಯಂ
ಸ್ಮರಸುರವಲ್ಲಭಂ
ಪೊಸೆದು ಪುಟ್ಟಿಸುವಿಂದುಗಳಂದದಿಂದದೇಂ
ಕರಮೆಸೆದಿರ್ದುವೋ
ಮುೞುಗಿ ಮೂಡುವ ಮುಗ್ಧೆಯರಾನನೇಂದುಗಳ್    ೧೨೩

ತುಂಗನಿತಂಬದಿಂ ಕುಚದ ಬಿಣ್ಪೊಱೆಯಿಂ ಪೊಡರಲ್ಕಮಾಱದಿ
ರ್ಪಂಗನೆಯರ್
ಸರೋಜಲದೊಳಂದವು ನೊಪ್ಪಿದುವಾಗೆ ರಾಗದಿಂ
ಪೊಂಗಿ
ಪೊದೞ್ದು ಪಾಱಿ ಪೊಳೆದಾಡಿದರಂತೆ ಜಡಪ್ರಸಂಗದಿಂ
ದೇಂ
ಗಳ ಲೋಕದೊಳ್ ಗುರುಗಮಾಗಳೆ ಲಘವಮಾಗದಿರ್ಕುಮೇ       ೧೨೪

ಉನ್ನತಪೀನಸ್ತನಯುಗ
ಳನ್ನೀರೊಳ್
ತೇಂಕೆ ತೆರೆಯೊಳುರಮಿಕ್ಕಿದಳು
ರ್ಕಿನ್ನಲಿದು
ಜಕ್ಕವಕ್ಕಿಯ
ಬೆನ್ನೊಳ್
ಬಿರ್ದೀಸಿಯಾಡುವಂತೊಪ್ಪಿರ್ದಳ್ ೧೨೫

ಕಡುನಲ್ಲಳ ನಡುಬೆನ್ನಂ
ಪಿಡಿದೀಸಿಸುವೋಪನೊಪ್ಪಿದಂ
ರಾಗದ ಪೆ
ರ್ಗಡಲೊಳಗೆ
ಮುೞುಗುತೊಯ್ಯನೆ
ಪಿಡಿದಂತೆವೊಲಾಪ್ರಮಾದವಲಗೆಯನಾಗಳ್
೧೨೬

ರಂಭೋರು ಜಗದ್ವಿಜಯಾ
ರಂಭಿ
ಮನೋಭವಕರೇಣುವಂತೊರ್ವಳ್ ಕಿ
ೞ್ತಂಭೋಜದಲರ್ಗಳಂ
ಕುಚ
ಕುಂಭಂಗಳೊಳೊಟ್ಟಿಕೊಳ್ವಳೇನೊಪ್ಪಿದಳೋ
೧೨೭

ಅಲರ್ದೆಯ್ದುವ ಕಿಂಜಲ್ಕಮ
ನೆಲರೆತ್ತಿದೊಡಗಿದು
ಮುಗಿವ ಕಣ್ಗಳ್ ಕಂಜ
ಕ್ಕಲರ್ವ
ಮುಗಿವೊಂದು ಚೆಲ್ವಂ
ಕಲಿಪವೊಲಿರೆ
ನಲಿದು ನೋಡಿದಳ್ ನೀರಜಮಂ        ೧೨೮

ಮುೞುಗಿ ಮಿಗೆ ಪೊಳೆವ ಕಣ್ಗಳಿ
ನೆಳಮೀನಂ
ಗೆಲಿಸುವಂತೆ ನೆಗೆದೊರ್ವಳ್ ಬೆ
ಬ್ಬಳಿಸಿ
ಬಳೆದಲರ್ವ ಕಣ್ಣಿಂ
ಜಳರುಹಮಂ
ಗೆಲಿಸುವಂತಿರೆಸೆದಳ್ ಕೊಳದೊಳ್     ೧೨೯

ಗೆಲಲಾಗದು ಮುಗಿದುವನೆಂ
ದಲರಿಸಿ
ಗೆಲಿಸುವವೊಲಕ್ಷಿಯಿಂ ರಜದಿಂ ಬೈ
ತಲೆದೀವುವಬಲೆ
ನೆಯ್ದಿಲ
ನಲರ್ಚಿದಳ್
ಪಿಕ್ಕಿ ಪಿಕ್ಕಿ ಕರಪಲ್ಲವದಿಂ        ೧೩೦

ಅಂತು ಸುತ್ತುಂ ಬಳಸುಮಿದಿರುಂ ಬೞಿಯುಂ ತಾಱುಂ ತಟ್ಟುಮೀಸಿಯಾಡಿ ತಮ್ಮ ಕಳಕಳಮೆ ಕಳಕಳಮಾಗೆ ದುಡುಮ್ಮಿಱಿದಾಡಿ ಜಳಯಂತ್ರಂಗಳಂ ಕಳಸಂಗಳಂ ಕಳೆದುಕೊಂಡು ಮೇರೆದಪ್ಪಿ ತುಳುಂಕಿಯಾಡುವಾಗಳ್ –

ಜಳಮಂ ಕಾಂತನ ಮೊಗದೊಳ್
ತುಳುಂಕಲೆಂದಗಿದು
ಮೊಗೆವ ಕಾಮಿನಿ ಕಯ್ಯಿಂ
ಕಳಸಂ
ಜಗುೞ್ದೊಡೆ ಮುೞುಗುವ
ಕೆಳದಿಯ
ಪೆರ್ಮೊಲೆಗೆ ಪಾಯ್ದಳಬ್ಜಾಕರದೊಳ್         ೧೩೧

ನಾರಿಯ ಮೊಗಮಿನನೊತ್ತುವ
ಧಾರಾಪಾತಕ್ಕೆ
ಬೆರ್ಚಿ ಜಿತವಾರಿರುಹಂ
ವಾರಿರುಹದ
ಮಱೆವೊಕ್ಕುದು
ಭೀರುವನೋಲಗಿಸದಂಗೆ
ಪೇೞ್ ಬಲಮುಂಟೇ         ೧೩೨

ಜಲಯಂತ್ರದಿನರುಣೋಜ್ವಲ
ಜಲಮಂ
ಪ್ರಿಯನೊತ್ತೆ ಬೆದಱಿ ಬಿರ್ದಳ್ ಕೊಳದೊಳ್
ಜಲರುಹಮನುಡಿವ
ಕೋಮಲೆ
ಜಲರುಹಮನುಡಿದ
ಕೋಮಲೆ
ಜಲಜಪ್ರಿಯಕಾಂತಿಕುಂತಮುರ್ಚಿದ
ತೆಱದಿಂ  ೧೩೩

ಧೂರ್ತಂ ತುಳುಂಕೆ ಕತ್ತುರಿ
ನೀರ್ತುಱುಗಿದ
ಮೊಗದಿನಲೆದುವಬಲೆಯ ಮೊಲೆಗಳ್
ಸಾರ್ತಂದಗಲ್ಚಲುರ್ಚಿದ

ಕೞ್ತಲೆಯಂ
ಕುಡುಕುಗೊಳ್ವ ಕೋಕದ್ವಯಮಂ ೧೩೪

ಕತ್ತುರಿಯ ನೀರನರಮಗ
ನೊತ್ತಲೊಡಂ
ಕರಿಯ ಕಿಱಿಯ ಬಾಲಕಿ ಬಣ್ಣಂ
ಬೆತ್ತಿರೆ
ರಾಜಾವರ್ತದ
ಪುತ್ತಳಿಕೆ
ಬೆಮರ್ತ ತೆಱದಿನೇನೊಪ್ಪಿದಳೋ   ೧೩೫

ಮೃಗಮದಮನೊತ್ತೆ ದಂಪತಿ
ಮೊಗದೊಳ್
ಮೂಗುತಿಯ ಮುತ್ತು ನೀಲದ ಪರಲಂ
ನಗುತಿರೆ
ಕಜ್ಜಲಕಳಿಕೆಯ
ನುಗುೞ್ವಂತಿರೆ
ಕಾಂತೆಯಧರದಳಮಣಿದೀಪಂ         ೧೩೬

ಬರೆ ತೆಗೆದಿನನೊತ್ತುವುದುಂ
ಬೆರಲಿಂ
ಕಣ್ಬೊಣರನೊತ್ತುವಾಕೆಯ ಮೊಗದಿಂ
ಸುರಿದುದು
ಕತ್ತುರಿನೀರ್ ಮೃಗ
ಧರಬಿಂಬಂ
ನಿಜಕಳಂಕಮಂ ಕಾಱುವವೋಲ್ ೧೩೭

ಅಲೆವನ್ನಂ ಚೌರಿಯೊಳ್ ಬಿರ್ಚಿದ ಬಹಳಕಚಂ ಸಾರಕಸ್ತೂರಿಕಾಪಂ
ಕಿಲಮಂಭೋಧಾರೆ
ಕೊಪ್ಪಿಂದಿೞಿದು ಬಳೆವಿನಂ ಕಾಂತನಂದೊತ್ತಿ ರಾಗಾ
ಕುಲೆ
ಬೇಗಂ ಬಾಗಿದಳ್ ತುಂಬಿಯ ತಿರುಗೊಲೆಯೊಳ್ ಕೋದ ಕಂದರ್ಪಕೋದಂ
ಡಲತಾಸೌಭಾಗ್ಯಮಂ
ಸೂಸುವ ತನುಲತೆ ಚೆಲ್ವಾಗೆ ತನ್ವಂಗಿಯೊರ್ವಳ್ ೧೩೮

ತಗುಳ್ದಿನಿಯೊತ್ತೆ ಮಂದಮೃಗನಾಭಿಮಿಶ್ರಾಂಬುಧಾ
ರೆಗಳ್
ಮುಡಿಯನುರ್ಚಿ ಬಿರ್ಚಿ ಕವಿದಾಸ್ಯಪಂಕೇಜದೊಳ್
ಮೊಗದಿಂಱಿದು
ಬೀೞೆ ಬಾಳಕಿ ವೇಣೀಭರಂ
ಮೊಗಕ್ಕೆ
ಕದಿದಂತೆಗೆತ್ತು ಕರಕಂಜದಿಂದೆತ್ತಿದಳ್        ೧೩೯

ಬೆಳರ್ತಧರಬಿಂಬದೊಳ್ ಬಯಸಿ ಬಣ್ಣಮಂ ಪೊಯ್ದವೋಲ್
ಪಳಂಚಿದ
ಮುಖಾಬ್ಜಮಂ ಬಿಸಿಲ ಬಂಬಲಿಂ ತೊಯ್ದವೋಲ್
ವಿಳಾಸಮಿರೆ
ಕುಂಕುಮದ್ರವಮನಂಗನಾವಕ್ತ್ರದೊಳ್
ತುಳುಂಕಿದನೆೞಲ್ವಿನಂ
ಕನಕಶೃಂಗದಿಂ ಸಂಗತಂ      ೧೪೦

ಸುಳಲಿತಕಿಂಕಿರಾತನವಮಂಜರಿಯಂತಿರೆ ಕರ್ಣಪಾಳಿ ಕೆಂ
ದಳಿರ
ತುಱುಂಬಿನಂತೆಸೆಯೆ ಸೋರ್ಮುಡಿ ಮೂಡುವ ಚಂದ್ರನಂತೆ
ಜ್ಜಳಿಸೆ
ಮುಖೇಂದು ಪೊಂಗಳಸದಂತಿರೆ ಪೆರ್ಮೊಲೆ ಕಾಂತೆ ಪೊನ್ನ ಪು
ತ್ತಳಿಕೆವೊಲೊಪ್ಪಿನಂ
ತಳಿದನೋಪಳನೊಪ್ಪುವ ಕುಂಕುಮಾಂಬುವಿಂ      ೧೪೧

ಪ್ರತಿಕಾಂತಾಕರಶೃಂಗಕುಂಕುಮರಸಾಚ್ಛೋದಚ್ಛಟಾಭಾರಭೂ
ಷಿತನಾದೋಪನ
ಮೇಗೆ ಮುಗ್ಧೆ ಪುರುಡಿಂ ಪೊಯ್ದಳ್ ಹರಾಭೀಳಬಾ
ಳತಟಜ್ವಾಳಿಶಿಖಾವಳೀಕಬಳಿತಾನಂಗಾಂಗದೊಳ್
ಕೋಪದಿಂ
ರತಿ
ಪೊಯ್ವಂತಿರೆ ಕುಂಭಸಂಭೃತ ಹಿಮಚ್ಛೇದಾಚ್ಛ ತೋಯಂಗಳಂ       ೧೪೨

ಪ್ರಕಟಿಸಿದುವುದಾತ್ತೆಯ
ರ್ಪಕದಾಹಮನಮಳಜಳಮನೊತ್ತಿದ
ಧೂರ್ತಂ
ಗಕುಟಿಲೆಯ
ಕಠಿನಕುಚಕುಂ
ಭಕೂಟಮಂ
ತಾಗೆ ಮಗುೞ್ದು ತಾಗಿದ ಪನಿಗಳ್         ೧೪೩

ಪರವಧುವ ಪೆಸರೊಳೋಪಂ
ಕರೆಯೆ
ಸಖೀಜನದ ಮುಂದೆ ಲಜ್ಜಾರೋಷ
ಜ್ವರಮೊದವೆ
ಕರಗಿ ನೀರೊಳ್
ನೆರೆವಂತೆ
ಬೆಮರ್ತಳೊರ್ವಳಬ್ಜಾಕರದೊಳ್  ೧೪೪

ಮೃಗಮದಜಲಮಂ ಸವತಿಯ
ಮೊಗದೊಳ್
ಪತಿ ಸೂಸೆ ಸತಿಯ ಮೊಗದೊಳ್ ಮಿಗೆ
ರ್ಪೊಗೆದು
ಪೊಗೆ ಮಗುೞ್ದು ದಾಕೆಯ
ಮೊಗಮುಜ್ವಳಮಾಯ್ತು
ಬಗೆವೋಡೆನಚ್ಚರಿಯೋ       ೧೪೫

ಬರೆ ತೆಗೆದೊತ್ತೆ ಜೀರ್ಕೊೞವೆನಿಂ ಪ್ರಿಯನೊತ್ತಿದ ವಾರಿಧಾರೆ ನೀ
ಳ್ದಿರೆ
ಚಳಚೂಚುಕಾಗ್ರದೊಳೆೞಲ್ತರೆ ಕರ್ಚಿ ಮೃಣಾಳನಾಳಮಂ
ಬೆರಸಿದ
ಜಕ್ಕವಕ್ಕಿ ಕುಣಿದಾಡುವವೋಲ್ ಕುಚಯುಗ್ಮನರ್ತನಂ
ತರಳತರಂಗರಂಗದೊಳದೇನೆಸೆದಿರ್ದುದೊ
ದೀರ್ಘನೇತ್ರೆಯಾ ೧೪೬

ಜಘನವಿಘಟ್ಟನೋಚ್ಚಳಿವೀಚಿಗಳೊಳ್ ಬಗಿದಿರ್ದ ಮೇಲುದಂ
ವಿಘಟಿಸಿ
ಕಾಂತನರ್ದೆ ಪರಮುಗ್ಧವಧೂಕುಚಮಂ ವಿಚಿತ್ರನೇ
ತ್ರಘನವಿಮುಕ್ತವಾರಿಭರದಿಂದೆ
ಮೞುಂಗಿದವೋಲ್ ಪ್ರಕಂಪಿತಾ
ಲಘುಕುಚಕಂಭಮುಂ
ಮುೞುಗಿದತ್ತು ಸರೋವರದೊಳ್ ಸರೋಷೆಯಾ   ೧೪೭

ಸಿಕ್ತಾನ್ಯಪ್ರಮದಾಕುಚಂ ಪ್ರಿಯತಮಂ ಪೊಯ್ದಂಬುಗಳ್ ಶೃಂಗನಿ
ರ್ಮುಕ್ತಂಗಳ್
ಕವಿತಂದು ತಾಗೆ ತರುಣೀಹೃತ್ಕೋಪಸಂತಾಪಸಂ
ಸಕ್ತಸ್ನೇಹರಸಂ
ಸಡಿಲ್ದುಲಿದವೋಲಾಲೇಪಕಾಶ್ಮೀರರಾ
ಗಾಕ್ತಂಗಳ
ನೆಗೆತಂದುವಂದು ಕಠಿನೋತ್ತುಂಗ ಸ್ತನಾಭೋಗದಿಂ ೧೪೮

ವಾರಿಭರಂಗಳಿಂ ಗಳಿತಮಾಗೆ ಮನೋಹರಿಯಂಗರಾಗಮು
ದ್ಗಾರಿತರಕ್ತರಾಗನಖರೇಖೆಗಳಂ
ಪ್ರತಿಪಕ್ಷಯೋಷಿದೀ
ರ್ಷ್ಯಾರುಣಲೋಚನಾನಳನಿಪಾತಭಯಂ
ಬರೆ ಮುಂಚುವಂತೆ
ಕ್ಷೋರುಹಕುಂಭಮಂ
ತಳಿದನುಜ್ವಳಕುಂಕುಮಪಂಕದಿಂ ಪ್ರಿಯಂ ೧೪೯

ಮೊಲೆಯೊಳ್ ತಳ್ತ ನಖಕ್ಷತಾವಳಿಗಳಂ ಬದ್ದಾರ್ದ್ರನಿರ್ಮೋಕನಿ
ರ್ಮಳಿನಕ್ಷೋಮಮಡಂಗಿ
ತೋಱಿಸೆ ತರಂಗೋನ್ಮಗ್ನೆಲಜ್ಜಾರಸಾ
ಕುಳೆಯೊರ್ವಳ್
ಮಱಿಯೊಡ್ಡಿದಳ್ ರಮಣಿಯಂತ್ರೋನ್ಮುಕ್ತಮುಕ್ತಾಲತಾ
ವಿಳಸದ್ವಾರಿನಿವಾರಣಚ್ಛಲದಿನದಂಭೋಜಪತ್ರಂಗಳೆಂ
೧೫೦

ಆದರದಿಂದೆ ಕಾಂತೆ ಕೊಳನಂ ಪುಗುತುಂ ಕುಚಮಂ ನಖಕ್ಷತಾ
ಚ್ಛಾದನಬುದ್ಧಿಯಿಂ
ತೊಡೆದ ಕುಂಕಮಮೈದೆ ತರಂಗಪಾತದಿಂ
ಪೋದೊಡೆ
ಕಾಂತಕೇಕರಸುಧಾನಮಜ್ಜನೆ ಲಜ್ಜೆಯಿಂದವಂ
ಸ್ವೇದಕಣೋಜ್ವಲನ್ಮುಕುಳಮಂಜರಿಯಿಂದಮೆ
ಮುಗ್ಧೆ ಮುಚ್ಚಿದಳ್         ೧೫೧

ಮನಃಪ್ರಿಯಂ ಸವತಿಯ ಮೆಯ್ಯೊಳೊತ್ತೆ ಚಂ
ದನಾಂಬುವಂ
ಕುಪಿತೆಗೆ ನಾಭಿದಘ್ನಮಾ
ಯ್ತನಿತ್ತೆ
ಮತ್ತವಳ ವಿಲೋಚನಾಂಬುವಿಂ
ಸ್ತನದ್ವಯಂ
ಸಮಸಮಮಾಯ್ತು ಪೂಗೊಳಂ  ೧೫೨

ತುಳ್ಕೆ ಸಪತ್ನಿ ಕುಂಕುಮರಜಂಗಳನೋಪನ ಮೇಲೆ ಚಲ್ಲಮಂ
ತುಳ್ಕುವ
ಕಣ್ಗಳೊಳ್ ಮಿಳಿರ್ದು ನಿಳ್ಕಿ ವಿಳೋಕಿಸುವಾಕೆಯಕ್ಷಿಗಳ್
ನಿಳ್ಕಿ
ಸರೋಜಮಂ ಸರಜಮಂ ಗೆಲೆವಂದುವು ಮಾಯ್ದಸೂಯಕ
ರ್ಮಾೞ್ಕೆಮ
ದೂಷಣಂ ಮಧುರದರ್ಶಿಗೆ ಭೂಷಣಮಾಗದಿರ್ಕುಮೇ        ೧೫೩

ಅಲರ್ದಂಭೋಜವಿಲಾಸಮಂ ಗೆಲೆ ಮುಖಾಂಭೋಜಂ ಸುಖಸ್ಮೇರಮು
ತ್ಪಲಮಂ
ಸೂರಮರೀಚಿಕುಟ್ಮಲಿತಮಂ ನೇತ್ರೋತ್ಪಲಂ ಭೀತಿಕು
ಟ್ಮಲಿತಂ
ತಾಂ ಗೆಲೆ ಪೊನ್ನ ಜೀರ್ಕೊೞವಿಯಂ ಪ್ರಾಣೇಶ್ವರೀವಕ್ತ್ರದೊಳ್
ನಲವಿಂದೊತ್ತಿದನೊರ್ವನುಜ್ವಳಜಳವ್ಯಾಮಿಶ್ರಕಾಶ್ಮೀರದಿಂ
      ೧೫೪

ಆಗಳೊರ್ವಳ್ ವಾಸಕಸಜ್ಜಿಕೆ –

ಬಿರಿವಿನಮೆನ್ನ ಚಿತ್ತಮಿರುಳುಂ ಪಗಲುಂ ಖಳ ನಿನ್ನ ದೂಸಱಿಂ
ಸ್ಮರಿನಿಸೆ
ತಳ್ತು ತಾಗುವಲರಂಬುಗಳೆಯ್ದನವೆ ನೀನದೇಕೆ ನಿ
ಷ್ಕರುಣ
ಕರಾಬ್ಜಯಂತ್ರಮುಖಮುಕ್ತ ಸಿತಾಂಬುಗಳಂ ಬೆಗಳ್ವನಂ
ಸುರಿದಿನಿಸಿಲ್ಲದೆನ್ನೆರ್ದೆಯನೋವದೆ
ನೋಯಿಸುವೈ ಮನಃಪ್ರಿಯಾ        ೧೫೫

ಎಂದವಳ್ ಮತ್ತಮೊರ್ವಳೋಕುೞಯ ನೆವದೊಳಪ್ಪಿಕೊಂಡಳೆಂಬಂತೆ –

ಕಿಂಜಲ್ಕಂ ಮಿಗೆ ಕೆದಱುವ
ಕಿಂಜಲ್ಕದೆ
ಮೋದುವಂತೆ ಕೆಂದಳದಿಂದಂ
ಲಂಜಿಕೆ
ನವರಜ ನೀರಜ
ಮಂಜರಿಯಂ
ಮೊಗೆದು ಮೋದಿದಳ್ ಮಾನದನಂ     ೧೫೬

ಅಲರ್ಗಣೆಯಂ ಬೆಳ್ದಿಂಗಳ್
ಕೊಲಿಸುವ
ಸೆಣಸಿಂದಮೊಡನೆ ನಡುವಂತಿರೆ
ಲ್ಲಿಲಿತೆಯಲರ್ಗಣ್ಣುಮೊತ್ತಿದ

ಮಲಯಜಮುಂ
ನಟ್ಟುವೊಡನೆ ಚಂದ್ರೋದಯನಂ     ೧೫೭

ಮತ್ತಮೊರ್ವಳ್ –

ಇಟ್ಟಳಮಿಟ್ಟೞಮುಳಿಸಿಂ
ದಿಟ್ಟಳ್
ಕವಿರಾಜಮಲ್ಲನಂ ಕಡೆಗಣ್ಗಳ್
ನಟ್ಟ
ಬೞಿವಿಡಿದು ನನೆಗಣೆ
ನಟ್ಟಮೊಲಿರೆ
ತಳದೊಳಡಸಿ ತೀವಿದ ನನೆಯಿಂ         ೧೫೮

ಸ್ಮೇರಮುಖನೆತ್ತಿ ಸರಸೀ
ತೀರಕ್ಕೆಂತಾನುಮುಯ್ದನಾಗಳ್
ನೆವದಿಂ
ನೀರಂ
ಕೊಳ್ವ ಮುೞುಂಗುವ
ನೀರಜಲೋಚನೆಯನಪ್ಪಿ
ಭಾವಕಮುಕುರಂ  ೧೫೯

ಅದಲ್ಲದೆಯುಂ ಲೀಲಾವತಿಯಂ ಕರೆದು –

ಎಲೆ ಚಿತ್ತೇಶ್ವರಿ ನಿನ್ನ ವಕ್ತ್ರಹಿಮಕೃದ್ಬಿಂಬಂ ಕಲಂಕಿರ್ದೊಡಂ
ಜಲದೊಳ್
ತಾಂ ತೆಗೆದಪ್ಪುದೆನ್ನ ಬಗೆಯಂ ನೋಡೆಂದು ಕಣ್ಣಿಂದೆ ಕಾ
ದಲಿಸುತ್ತಂತೆ
ಮುೞುಂಗಿ ಬಂದಬಲೆಯಾ ವಕ್ತ್ರಾಬ್ಜಮಂ ಪೀರ್ದನಂ
ದೊಲವಿಂದೇಂ
ಸ್ಮರಕೇಳಿಶೀಲನೋ ಕರಂ ಶೃಂಗಾರಕಾರಾಗೃಹಂ        ೧೬೦

ಚಳಚಕ್ಷೂರಾಗದಿಂ ಬೆಂದೊಳಗೊಳಗೆರ್ದೆವೊತ್ತುತ್ತುಮಿರ್ಪಂಗನಾಸಂ
ಕುಳಮಂ
ತೞ್ಕೈಸಿ ನೀರೊಳ್ ಮುೞುಗಿ ಮೊಲೆಗಳಿಂ ಮೋದುವೆತ್ತಂಗಮಂ ತಾಂ
ಜಳ
ಕೇಳೀವ್ಯಾಜದಿಂದಂ ತಳಿದನೆ ಜಳದಿಂದೊಂದಱಂ ಚಿತ್ತಮಂ ತಾಂ
ತಳೆದಂ
ಸಂಭೋಗಸೌಖ್ಯಾಮೃತರಸಭರದಿಂ ಭಾರತೀಚಿತ್ತಚೋರಂ     ೧೬೧

ಇದು ವಿದಿತ ವಿವಿಧ ಪ್ರಬಂಧ ವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಳೋಚ್ಚಳಿತ ನಖಮಯೂಖ ಮಂದಾಕಿನೀ ಮಜ್ಜನಾಸಕ್ತ ಸಂತತೋತ್ಸಿಕ್ತ ದಾನಾಮೋದಮುದಿತ ಬುಧಮಧುಕರ ಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತೀ ಪ್ರಬಂಧದೊಳ್ ವನಜಲಕೇಳೀವರ್ಣನಂ

ತ್ರಯೋದಶಾಶ್ವಾಸಂ