ತಿಳಿಪುವೊಡೆ ಮೊಗ್ಗೆ ಮುದ್ದುಂ
ಕಳಂಕಮುಂ
ತಿಳಿಯದಿರ್ಪ ದೆಸೆಗಳುಮಂ ನೀ
ರ್ಗಳುಮಂ
ತಿಳಿಪಿದ ಸರಮುಂ
ತಿಳಿಪಿದುದೆ
ಕಳಂಕಗತಿಯನಮೃತದ್ಯುತಿಯಂ         ೫೧

ಎಂಬತಿಪ್ರಿಯಸಖನ ಮಾತಂ ಕೆಳಗಿವಿಗೇಳುತ್ತುಂ ಲೀಲಾವತಿಯಂ ತಿಳಿಪಿ ತರಲಾಱದುದುಮಂ ಕಂಡು ಕುಜನಿಕುಂಜಗುಲ್ಮಲತಾಶಾಖಾಂತರಾಳ ಪ್ರಸಾರಿತ ಸರಳತಿರ್ಯಗಧೋಗೋಚರಲೋಚನನಾಗಿ ಕೆಳದಿಯರ ಸುೞಿವುಮಂ ಕಾಣದೆ ಕಲುಷೋನ್ಮತ್ತ ನಲ್ಲಿಂದಮೆರ್ದು ಮಕರಂದಾನುಗಮ್ಯಮಾನಂ ಮಾನಿನಿಯರಲತೆಗೆಯಡಿ ವಜ್ಜೆಗಳ ಸಾಲ್ಗಳಿಂ ನಿಜಪ್ರಿಯೆಯ ಕೋಪರಸವಿಸರಮೆ ಪೊನಲ್ವರಿವಂತಿರ್ದ ಮಾರ್ಗಂ ಬಿಡಿದು ನಡೆದು ನೋಡಿ –

ಯುವತೀಸ್ಮೇರಮುಖಾಬ್ಜಿನೀವಿರಹಿತಂ ವಾರಾಂಗನಾಕೋಕಿಲಾ
ರವಮೂಕಂ
ರಮಣೀರುಚಿಪ್ರಸವನಶೂನ್ಯಂ ಕಾಮಿನೀಪಾಣಿಪ
ಲ್ಲವಹೀನಂ
ಪ್ರಮದಾಲತಾಂಗವಿಕಳಂ ತಾನಾಗಿ ನೋಟಕ್ಕೆ ಚಿ
ತ್ತವನಕ್ಕೇನೆಣೆಯಾಯ್ತೊ
ಬಂದ ವನಮುಂ ಶ್ರೀರೂಪಕಂದರ್ಪನಾ          ೫೨

ಅದಲ್ಲದೆಯುಂ –

ಅಬಲಾಲೋಚನಚಂದ್ರಿಕಾವಿರಹಿತಂ ವ್ಯೋಮಂ ಸಖೀನೂಪುರಾ
ರವಲಾವಣ್ಯತರಂಗಿಣೀವಿರಹಿತಂ
ದಿಗ್ಜಾಳಮಾಳೀಪದ
ಚ್ಛವಿ
ಪಂಕೇಜದಳಾರ್ಚನಾವಿರಹಿತಂ ಧಾತ್ರೀತಳಂ ಬಿನ್ನಗಾ
ದವೊಲೊಪ್ಪಂಗಿಡೆ
ವಲ್ಲಭಾವಿರಹಿತಂ ಬೆಂದಿರ್ದನುವೀಶ್ವರಂ    ೫೩

ಅಂತು ಪೋದ ಬಟ್ಟೆಯೊಳ್ ನೋಡಿ ಕಾಣದೆ ಚಕಿತಚಿತ್ತನಾಗಿರೆ –

ಲತಿಕಾಮಂಡಪದೊಳ್ ಮನೋಜಗೃಹದೊಳ್ ಪಂಕೇಜಿನೀಕುಂಜದೊಳ್
ರತಿಶಿಕ್ಷಾವನದೊಳ್
ತಮಾಲತಲದೊಳ್ ಪದ್ಮಾವತೀಕೂಟದೊಳ್
ಸ್ಮಿತಪುಷ್ಟಾಟವಿಯೊಳ್
ನದೀಪುಳಿನದೊಳ್ ಕ್ರೀಡಾದ್ರಿಯೊಳ್ ಮಲ್ಲಿಕಾ
ವೃತಿಯೊಳ್
ವಲ್ಲಭೆಯಂ ತೊೞಲ್ದಱಸಿದಂ ವಿದ್ಯಾವಧೂವಲ್ಲಭಂ ೫೪

ಅರಸಂ ಪೊಕ್ಕವಿನಾಣದಿಂದಱಸಿದಂ ಪದ್ಮಾಸ್ಯೆಯಂ ಪದ್ಮಿನೀ
ಸರದೊಳ್
ಬಾಲಲತಾಂಗಿಯಂ ಸ್ಮಿತಲತಾಸಂದೋಹದೊಳ್ ಪಾಟಲಾ
ಧರೆಯಂ
ಪಾಟಲಪಙ್ತಿಯೊಳ್ ಮಧುರಚೂತಾಮೋದೆಯಂ ಚೂತವ
ಲ್ಲರಿಯೊಳ್
ಚಂಪಕಚಾರುನಾಸಿಕೆಯನುದ್ಯಚ್ಚಂಪಕೋದ್ಯಾನದೊಳ್      ೫೫

ಪುರುಡಿಂ ಪೋದಳದೆತ್ತವೋದಳೊ ಪುರ್ಕಕೇಂ ಪೋದಳೋ ಕೋಪದಿಂ
ದುರಿದೇಂ
ಪೋದಳೊ ಪಾಱಿ ಪೋದಳೊ ಪೊದೞ್ದಂದೇವದಿಂ ನೀರ್ಗಳೊಳ್
ನರೆದೇಂ
ಪೋದಳೊ ಪೋಕೆ ಮನ್ಮನದಿನೇಂ ಪೋದಪ್ಪಳೇ ಪಲ್ಲವಾ
ಧರೆ
ಭೊಂಕಲ್ ಪರೆದೆಲ್ಲಿಪೋದರೊ ಪಯಿಂಛಾಸಿರ್ವರಬ್ಜಾಕ್ಷಿಯರ್        ೫೬

ಲಲನೆಯ ಪೋದ ಪಜ್ಜೆಗಳುಮಂ ನೆಱೆ ಕಂಡಪೆನಿಲ್ಲದೆಂತು ಪೋ
ದಳೊ
ಪೊಣರ್ವಕ್ಕಿಯಂತೆ ಗೆಡೆಗೊಂಡಿರದೆನ್ನನಗಲ್ದದೆಂತು ಪೋ
ದಳೊ
ಪೊಱವಾಱ ಪೆರ್ಮೊಲೆಯ ಬಿಣ್ಪೊಱೆಯಿಂ ಪೊಱಲಾಱದೆಂತು ಪೋ
ದಳೋ
ಸುಕುಮಾರಮೂರ್ತಿ ಗಜಗಾಮಿನಿ ಬೇಗಮದೆಂತು ಪೋದಳೋ  ೫೭

ಬಿಡು ಬಲ್ಪಂ ಕುಡು ಮೆಲ್ಪನೆಲ್ಲಿ ಮಱೆದೈ ನಿನ್ನಿಂದುಮೇನೆಂದೆ ನಾ
ಲ್ಕಡಿವಂದೆಂ
ಪೞಿಕೆಯ್ದೆನಲ್ಲೆ ನಸುಗಳ್ ಪೋದಪ್ಪುದೇಕಿರ್ಪೆಯೊ
ಲ್ವೆಡೆಯೊಳ್
ಸಂಗಮೆ ಭಂಗಮಕ್ಕೆ ನಗೆಕೇಳ್ ಲೀಲಾವತೀ ನಿನ್ನ ಕಾ
ಲ್ವಿಡಿವೆಂ
ತೋಱಗೆ ಮುಗ್ಧೆ ಮುದ್ದುಮೊಗಮಂ ಮಾತಾಡು ನೀಂ ಬೇಡಿದೆಂ ೫೮

ರಮಣೀ ಮೆನ್ಮನದಿಂದಮುಂ ಮುನಿದು ನೀಂ ಪೋದಪ್ಪೆಯೆಂಬಂದು ಜೀ
ವಮಿದಂ
ಮೂರ್ಚ್ಛಿಸಿದಪ್ಪುದಿಲ್ಲಱಸಿಯುಂ ಕಾಣ್ಬಾಸೆಯಿಂ ದೃಷ್ಟಿದೀ
ಪಮಿದುಂ
ಪೋದಪುದಿಲ್ಲ ದುಃಖ ದೃಢವಜ್ರಾಘಾತದಿಂದೆನ್ನ ಕಾ
ಯಮಿದುಂ
ಬಿರ್ದಪುದಿಲ್ಲ ನಿನ್ನ ವಿರಹಕ್ಕಾನೆಂತು ವೆಯ್ಯೊಡ್ಡುವೆಂ ೫೯

ಎಮೆ ಮಱೆಯಾಗೆ ನೋಡುವೆಡೆಯೊಳ್ ಸಱುಸೈಕನೆ ನಿನ್ನ ಮೆಯ್ನವಿರ್
ನಿಮಿರ್ದೆಡೆಯಾಡೆ
ತಣ್ಪಿನೆಡೆಯೊಳ್ ಸುಖವಿಶ್ರಮಮಾಗೆ ಕೂಟದಿಂ
ಪಮರ್ವೆಡೆಯೊಳ್
ಸರೋಜಮುಖಿ ಸೈರಿಸಿಯೆನ್ನನಗಲ್ದು ನೀಂ ಪರಿ
ಭ್ರಮಿಪೆಡೆಯಾದುದೀ
ಯೆಡೆಯೊಳೆಂತುಗೆ ಸೈರಿಸಿದೈ ಮನಃಪ್ರಿಯೇ       ೬೦

ಉರಿದಪುದೆನ್ನ ಮೆಯ್ಯಳಿಪುಮೇಕೆಯೊ ಬೇಯದು ದುಃಖದಿಂ ಮನಂ
ಬಿರಿದಪುದೆನ್ನ
ರಾಗರಸಮೇಕೆಯೊ ಸೋರದು ಮರ್ಮಮಂ ಸ್ಮರಂ
ನಿರಿದಪನೆನ್ನ
ಜೀವಿತಮಿದೇಕೆಯೊ ಪೋಗದು ಮಾಯ್ದ ಸಗ್ಗಮಂ
ನಕರಮನೀ
ಶರೀರದೊಳೆ ಕಂಡೆನೆಲೇ ಪ್ರಿಯ ನಿನ್ನ ದೂಸಱಿಂ   ೬೧

ಮಱೆದು ತೊೞಲ್ವೆನಗಮರ್ದಿನ
ತೊಱೆಗಳನೀಸುವವೊಲಾಯ್ತು
ನಿನ್ನನೆ ತೊೞಲು
ತ್ತಱಪೆನಗೆ
ತೋರಗೆಂಡದ
ತೊಱೆಗಳನೀಸುವವೊಲಾದಪುದು
ಮದಿರಾಕ್ಷೀ         ೬೨

ಸುದತೀ ನಿನ್ನ ಮುಖಾಬ್ಜಮಿಲ್ಲದೆ ಸತೀ ನಿನ್ನೋಷ್ಠಪೀಯೂಷಮಿ
ಲ್ಲದೆ
ಲೀಲಾವತಿ ನಿನ್ನ ಯೌನನವನೇಜಾತಾಕರಕ್ರೀಡೆಯಿ
ಲ್ಲದೆ
ಮನ್ನೇತ್ರಮದಾಳಿ ಮತ್ಸುಕೃತಿಮಜ್ಜೀವಾಮರಂ ಮನ್ಮನೋ
ಮದಹಂಸಂ
ನಿಲಲಾಱದೇಕೆ ಮುಳಿದೈ ನಿಷ್ಕಾರಣಂ ಕಾಮಿನೀ  ೬೩

ಸರಿಸಂ ನಿನ್ನಧರಕ್ಕೆ ಪಾದರಿಯಲರ್ ತಾಂ ಚುಂನಕ್ಕೆನ್ನದೇಂ
ಸರಿಸಂ
ತಾಂ ಸರಿ ನಿನ್ನ ಕಣ್ಗೆ ಕುಮುದಂ ನೀನೊಲ್ದನೋಟಕ್ಕದೇಂ
ಸರಿ
ನಿನ್ನೀಚರಣಕ್ಕೆ ತಾಂ ದೊರೆ ತಳಿರ್ ಪಾದಪ್ರಹಾರಕ್ಕದೇಂ
ದೊರೆ
ನೀಂ ಪೇೞಗೆ ನೋಡಿಯಾಡದೊಡವಂ ಸೈರಿಪ್ಪೆನಬ್ಜಾನನೇ        ೬೪

ಎಂದು ಬಾಯೞಿದೞಲ್ದು ತೊೞಲ್ದಱಸುತ್ತು ಬಂದು, ಮಡಲ್ತ ಮಾವಿನ ಮಱೆಯೊಳ್ ಮಧುಬಿಂದುಬಾಷ್ಪಲಿಪ್ತಪುಷ್ಪಲೋಚನೆಯಂ ಕದಳೀದಳಾವ ಗುಂಫಿತಲತೆಯಂ ಕಂಡು ಪಸಿಯ ನೇತ್ರದಿಂ ಮುಸುಂಕಿ ಮುನಿದವಿದಿರ್ದ ನಿಜಮನೋಹರಿಯೆಂದು ಬಗೆದು ಕಾಲ ಮೇಲೆ ಕವಿದು ಬಿರ್ದು –

ಬಗೆಗಲವೆಂದಿದಂ ಬಗೆದೆಯಪ್ಪೊಡಿದೊಪ್ಪದು ನಿನ್ನಧೀನವೀ
ಬಗೆಯೆನಗುಳ್ಳುದೊಂದೆ
ಬಗೆಯಾ ಬಗೆಯಂ ನಿನಗೆಂದೊಡಾವುದಾ
ಬಗೆ
ಪೆಱತೆನ್ನದೆನ್ನ ನಿನ್ನ ಗಡ ನಿನ್ನನೆ ತಾಂ ಬಗೆದೆನ್ನನೀಗಳೀ
ಬಗೆ
ಬಗೆದಂದುಮೀ ಬಗೆಗೊಡಂಬಡು ಬೇಡಿದಪೆಂ ಮನಃಪ್ರಿಯೆ  ೬೫

ಚಿತ್ತಚಕೋರಿ ಬಾಯ್ವಿಡುತುಮಿರ್ದಪುದಂಗಜರಾಗಸಾಗರಂ
ಬತ್ತಿ
ಬೆಲಂಗಿ ಪೋದಪುದು ಕಣ್ಗೆ ತಮಂ ಕವಿದಪ್ಪುದೆನ್ನ ಮೆ
ಯ್ವೊತ್ತಿ
ಸುಡುತ್ತು ಮಿರ್ದಪುದು ದುಃಖಮಹಾತಪತಾಪಮಾಗದಿಂ
ಸತ್ತಪೆನೇಕೆ
ಕಾಡಿದಪೆಯೋಪಳೆ ತೋಱು ಮುಖೇಂದುಬಿಂಬಮಂ         ೬೬

ಕಾಲ್ವಿಡಿದಿರ್ದೊಡಾಂ ಚರಣಪಲ್ಲವದಿಂದೊದೆದೆತ್ತಿಸುತ್ತಿ ಬಂ
ಬಲ್ವರಿಗೊಂಡು
ನೀಳ್ದು ಕಿಸುಪೇಱಿದ ಕೇಕರಕಾಮಪಾಶದಿಂ
ಕೊಲ್ವವೊಲಗ್ಗದಾನೆಗೊಲೆಯಂ
ಮೊಲೆಯಿಂದಿಱಿದಪ್ಪಿ ದರ್ಪದಿಂ
ಕೊಲ್ವುದನೊಕ್ಕು
ಕಾಡಿ ಕೊಲಲಕ್ಕುಮೆ ನಿನ್ನ ಪದಾಬ್ಜದಾಸನಂ   ೬೭

ಮುಳಿದಿರ್ದುಂ ನೀಣೆ ಮಾತಾಡಿಸುವೆಯಳಿಪಿನಿಂ ನೋಡುವೈ ಪಿಂದುಗೆಯ್ದು
ಮ್ಮಳದಿಂ
ಪೂವಿಂದೆ ಪೊಯ್ವೈ ಮುಳಿವುದೆ ತಡವುದ್ವೇಗದಿಂ ನೀನೆ ಮತ್ತಂ
ತಿಳಿವೈ
ಮುನ್ನಿಂ ಸುಖಂ ನೂರ್ಮಡಿಸೆ ಕಡುಪಿನಿಂ ಕೂಡುವೈ ಪಾದಪಾತಂ
ಗಳೊಳಂ
ಕಾಣ್ಬನ್ನಮೆನ್ನಾನನಸರಸಿಜಮಂ ತುಂಬುಕಂಬಾಯುತಿರ್ಪೈ   ೬೮

ತನಿಸೋಂಕಿಂ ನಿನ್ನ ಕಾಲ್ಗಾನೆಱಗೆ ಮಱವೆಯಂ ಮೋಹದಿಂ ಮಾನಮಂ
ಣ್ಬನಿಯಂ
ಕೋಪಾಗ್ನಿಯಿಂ ಮಳ್ಗಿಸುವೆಯಳಕಂ ಸುತ್ತಿ ಪಾದಾಗ್ರಸಂದಂ
ಶನದಿಂ
ನೀನೆತ್ತುವೈ ಪೊಲ್ಲಮೆಯಿನತುವರಂ ಮಾಡಿತೆನ್ನಿಂದಱೊಳ್ ಸು
ಮ್ಮನಿದೇಕಿರ್ದಪ್ಪೆಯಾಂ
ಮುಂದಡಿಯೊಳೆ ಪೊರಳುತ್ತಿರ್ದೊಡಂ ಪಂಕಜಾಕ್ಷೀ       ೬೯

ಆಗಳಲ್ಲಿಗಲ್ಲಿಗೆತ್ತಾನುಮಱಸುತ್ತುಂ ಕಿಱಿದಂತರಮಂ ಪೆಱಗುೞಿದು ಬರ್ಪ ಮಕರಂದನರಸನವಸ್ಥೆಯಂ ಕಂಡು ದುಃಖಕ್ರಕಚದಾರಿತ ದಾರುದಾರುಣಕರುನಾಕೃಷ್ಟಬಾಷ್ಪಜಲ ಲುಳಿತಲೋಚನಂ ಬಂದು ನೆಗಪೆ –

ಪದವಿಡಲೋಪಳೆತ್ತಿದಳೆಗೆತ್ತು ಮಹೀಪತಿ ಪಾಯ್ದ ತೋಳ
ಳ್ಬಿದಿರ್ಗೊಳೆ
ತಳ್ತು ಕಂಡು ಮಕರಂದನನೆಲ್ಲಿದಳೆನ್ನ ನಲ್ಲಳೆಂ
ಬುದುಮವನೆಂದನಾ
ಪ್ರಮದೆಯಿರ್ದೊಡೆ ನೀಂ ಲತಿಕಾಂಘ್ರಿಯೊಳ್ ಪೊರ
ೞ್ವುದನೆಲೆ
ಕಂಡು ಸೈರಿಪಳೆ ಪೇೞ್ ನಿನಗೀಯಳೆ ಪಾದಘಾತಮಂ        ೭೦

ಎನೆ ; ಮತ್ತಮರಸನಿಂತೆಂದಂ –

ಸ್ಮಿತಮಂ ಪೂವಿಂಗೆ ರೂಪಂ ಲತೆಗೆ ವಿರುತಮಂ ಕೋಕಿಲಶ್ರೇಣಿಗಾಲೋ
ಕಿತಮಂ
ಕೊಟ್ಟೇಣಿಗಿಂದೆನ್ನೊಡನೆ ನಗದೆ ಮೆಯ್ದೋಱಿ ಮಾತಾಡದೆನ್ನೊಳ್
ಸ್ಮಿತಮಂ
ಕಂಡಂತಿರಾಲೋಕಿಸದೆ ಮುಳಿಸಿನಿಂದಿಕ್ಕೆ ತಾಂ ತನ್ನ ಲೀಲಾ
ಗತಮಂ
ಪೆಣ್ಣಂಚೆಗಿತ್ತೆಂತಲಘುಕುಚಭರಾಕ್ರಾಂತೆ ಮತ್ಕಾಂತೆ ಪೋದಳ್  ೭೧

ಬಳಸಿ ತೊೞಲ್ದೆನ್ನಡಿಗಳ್
ಚಳಿತುವು
ಕಣ್ ನಂದಿ ಬಂದಪುದು ಕಾಣೆಂ ಕೋ
ಮಳೆ
ನಿನ್ನನಱಸಿಯುಂ ನಿಜ
ಕಳರವಮಂ
ತೊಱಿದು ತಡೆಯದೆಂಬುದುಮಾಗಳ್    ೭೨

ಪರಭೃತವಧು ಚೂತವನಾಂ
ತರದೊಳ್
ಸರಮೆತ್ತೆ ಕೇಳ್ದು ತನ್ನಿನಿಯಳ ನು
ಣ್ಚರಮೆಂದು
ಪರಿದು ಪರಭೃತ
ತರುಣಿಯನಾ
ನೃಪತಿ ಕಂಡು ಬೆಚ್ಚನೆ ಸುಯ್ದಂ         ೭೩

ಅಂತು ಸುಯ್ದೆನ್ನ ಸುಯ್ಯೊಳ್ ಕಂದಿದಂತಿರ್ದ ಕೋಕಿಲಕುಮಾರಿಯುದ್ದಗೊಂಬ ನೇಱಿರ್ದಪುದಿಲ್ಲ ಪೋದೊಡಮೆನ್ನ ನಲ್ಲಳಂ ಕಾಣದಿರದೆಂದರಸನಿಂತೆಂದಂ –

ಎಲೆ ಕಳಕಂಠಿ ಕಂಡ ಕಳಭಾಷಿಣಿಯಂ ಮದಿರಾಕ್ಷಿ ಕಂಡ ಚಾ
ಪಲಮದಿರಾಕ್ಷಿಯಂ
ಕುವಲಯಾಕೃತಿಕೋಮಲೆ ಕಂಡ ಪುಷ್ಪಕೋ
ಮಲೆಯನನಂಗಚಾರುಲತಿಕಾತಿಲಕೋಪಮೆ
ಕಂಡ ಕಾಮಿನೀ
ತಿಲಕಮನಂದು
ಕಂಡಗೆ ಪಿಕಪ್ರಿಯೆ ಮತ್ಪ್ರಿಯೆಯಂ ವನಾಂತದೊಳ್      ೭೪

ಆಗಳದು ತನ್ನ ಮಾತನುಱದಂತೆ ಪೆಱಗುಗೆಯ್ದು ಕಳಿಕೆಯಂ ಕರ್ಚಿ ಕಳಕಳಿಪುದಂ ಕಂಡು ಕಡುಮುಳಿದು –

ನಲಿದಪೆಯೆನ್ನ ನಲ್ಲಳ ಕಲಧ್ವನಿ ನಂದಿದುದಾಗಿ ಸೊಂದಿಗೋ
ಗಿಲೆ
ಬಗೆ ನಿನ್ನ ದರ್ಪಮನಡಂಗಿಪೆನೀಗಳೆ ನೋಡಿ ತಂದು ನಿ
ರ್ದಳಿತಮದಂಗತಾಪಕುಲೆಯಂ
ಕಲಗರ್ಜಿತ ತರ್ಜ್ಯಮಾನಕೋ
ಕಿಲರವೆಯಂ
ಸಮುನ್ನತಪಯೋಧರೆಯಂ ಚಪಲಾಯತಾಕ್ಷಿಯಂ          ೭೫

ಅನ್ನೆಗಂ ತೆಗೆದು ಮೊಗೆದೆಲರೆತ್ತಿ ತಂದ ಸಂಪಗೆಯ ಕಂಪನೋಪಳ ನಱುಸುಯ್ಯಕಂಪೆಗೆತ್ತು ಪರಿತಪ್ಪರಸಂ ತೊಟ್ಟನೆ ಕಟ್ಟಿದಿರೊಳೆಳ ಮಾವಿನೆಳಗೊಂಬಿನೊಳ್ ಪುಗಿಲ್ ಪುಗಿಲೆಂದು ಬಿಡೆ ಬಗ್ಗಿಸುವ ಕಿಸುಗಣ್ಣನ ಜಡಿಪಕ್ಕಗಿದು ನಿಂದು –

ಪಡಿಯಱನಿತ್ತಳೇ ನಿನಗೆ ಮತ್ಪ್ರಿಯೆಯಾಂ ಬರೆ ಬಾರಿಸೆಂದು ನೀಂ
ಜಡಿದೆಡೆದೋಱಿದೈ
ಪ್ರಿಯೆಗೆ ಪೇೞ್ವನಿದಂ ಪರಿಭಾವಿಸೇಕೆ ನಿ
ನ್ನೊಡನೆ
ವಿರೋಧಮೋಪಳ ಮನಂಬಡೆವೆಂ ನಿನಗಿಂದೆ ಲಂಚಮಂ
ಕುಡುಮೆನಪಾಕೋರಕಮನೇಕೆ
ಪುಗಿಲ್ ಪುಗಿಲೆಂದಪೈ ಪಿಕಾ    ೭೬

ಎಂಬುದುಮಾಗಳಾ ಕಳಕೋಕಿಳಂ ಕಳಿಕಾಕಬಳನಾಕುಳತೆಯಿಂ ಕಲಕ್ವಣಿತಮನುೞಿದಿರೆ, ತನ್ನ ನುಡಿಯನೊಡಂಬಟ್ಟುದುಗೆತ್ತಾ ಚಂಪಕವನಮಂ ಪುಗುವಾಗಳ್ ಪಾಱುತನದಿಂ ಮೇಲೆ ಕೆಡೆದು ಕವಿತಂದ ದರದಳಿತಚಂಪಕಮುಕುಳಮಕರಂದಕ್ಕೇವೈಸಿ ಕೆಲಕ್ಕೆ ಪಾಯ್ದು ಪೋಪ ತುಂಬಿಯ ಬಂಬಲಂ ಕಂಡು ತನ್ನ ತರುಣಿಯ ಕುರುಳ ಬೆಡಂಗನಲ್ಲಿ ಕಂಡು ನಿಲ್ಲದೆ ಗಱಿಸೋಂಕಿದೊಡದಪ್ಪುದೆಂದು ಬಗೆದು –

ತೆಗೆದು ಮದೀಯಕಾಮಿನಿಯ ಕುಂತಲಶೋಭೆಗೆ ಸೋಲ್ತು ಚಿಕ್ಕತುಂ
ಬಿಗಳಿರ
! ಪಾೞಿ ಪೋಗದಿರಿಮಾಕೆ ಮನಂಗುಡೆ ಕೂಡಿ ತಳ್ತದುಂ
ಡುಗುರುಳ
ಸುರ್ಕುಗೊಂಡ ಸಿರಿಯಂ ಕಳೆದೀಗಡೆ ನಿಮ್ಮ ಭೀತಿಯಂ
ಮಿಗೆ
ಕಳೆದೂಡುವೆಂ ಸತಿಯ ಸೊಚ್ಛ್ವಸಿತಾಸ್ಯಸರೋಜಗಂಧಮಂ        ೭೭

ಎಂಬಿನಮಾಗಳಂಚೆಯಿಂವರಮನೋಪಳ ನೂಪೂರರವಮೆಂದು ಬಗೆದು ಪರಿದು ಪೋಪ ಬಾಳಮರಾಳನಂ ಕಂಡು ಕಡುಮುಳಿದಡ್ಡಂ ಬಂದು –

ಕುಡುಕಳಹಂಸೆ ಮತ್ಪ್ರಿಯೆಯನುತ್ಪಳನೇತ್ರೆಯನಿತ್ತೊಡಲ್ಲದೊಂ
ದಡಿಯಿಡಲೀಯೆನಾಂ
ಪಸಿಯ ಕಳ್ಳನೆ ನೀಂ ಪುಸಿದಂದು ಸಂಗವಿ
ನಡೆ
ನಿನಗೇಕೆ ಪೇೞ್‌ಪೇೞಿಸಿಯೊಪ್ಪಿಸೆರೞ್ಕಿವಿಗೇಳದನ್ನಮೀ
ನಡೆಯನೆ
ನಂಬು ಮತ್ತೆ ನಿನಗಿತ್ತಪೆನಂಬುಜಗರ್ಭಗಂಧಿಯಂ    ೭೮

ಆರಯೆ ನೀಂ ಮಾಡಿದುದುಪ
ಕಾರಂ
ನಡೆವಿಡಿದು ಪಿಡಿದೆಯೋಪಳನುೞಿದಂ
ತಾರೀಯೆಡೆಯೊಳ್
ಪಿಡಿದರ್
ಬಾರಿಪೆ
ಪ್ರಾಣಾಭಿಮಾನಕೀವುದು ವಧುವಂ   ೭೯

ಎಂದು, ನಿನ್ನೊಳೇಂ? ನೀನಿಪ್ಪಸದನಮಂ ಸೋದಿಸಿ ನೋೞ್ಪೆನೆಂದು ಸರೋವರಕ್ಕೆ ಬಂದು –

ಪರಿಪೂರ್ಣಾಮೋದಮಂ – ಸುಂದರದರದಳಿತಾಂಭೋಜಮಂ ಮೊತ್ತದಿಂ
ಟ್ಚರಣಂಗಳ್
ಮತ್ತ ಮತ್ತೊಂದೆಲರಿನಲೆವ ರಕ್ತಾಂಬುಜಾಮೋದಿ ಸೋವು
ತ್ತಿರೆ
ಕಂಡಾಸ್ಯಾಬ್ಜಗಂಧಕ್ಕಳಿಸಗಳೆಳಸಿ ನೀರಾಟದೊಳ್ ತನ್ನ ನಲ್ಲಳ್
ಕರದಿಂ
ಸೋವಂದಮಂ ಭಾವಿಸಿ ಬಸವೞಿದಂ ಭಾರತೀಚಿತ್ತಚೋರಂ    ೮೦

ಅಂತದಂ ತನ್ನ ನಲ್ಲಳ ನಗೆಮೊಗಮೆಂದು ಬಗೆಯೆ ಬಗೆಯೆ –

ಮದಕಲಿಮರಾಳನಾ ನಳಿ
ನದಳಮನಳಿಪಿಂದೆ
ಬಂದು ಖಂಡಿಸೆ ಕಂಡು
ಣ್ಮಿದ
ಪುರುಡಿನಿಂದಮರಸಂ
ಬೆದಱಿಸಿದಂ
ಘನಗಭೀರನಿಜಗರ್ಜಿತದಿಂ     ೮೧

ಆಗಳಾ ಕೊಳದೊಳಗೆಳವಾವಸೆಯ ಬಳ್ಳಿಯೊಳ್ ತೊಡರಡರೆ ಗಂಟಿಕ್ಕಿ ಪೊಳೆವ ಮೀನ್ಬೊಣರಂ ತನ್ನಿನಿಯಳ ಕಣ್ಬೊಣರೆಂದೇ ನಟ್ಟು ನಿಂದು ನಿಟ್ಟಿಸಿ ನೋೞ್ಪನ್ನೆಗಮೊಂದು ಬಕೋಟನಾಟಂದಾ ಮೀಂಗಳಂ ಮುೞುಂಗಿಸೆ ಮುಳಿದರಸನಿಂತೆಂದಂ –

ಖಳಬಕ ಬಿಂಕದಿಂ ಮುಗುಳ್ವ ಮೀಂಗಳ ಮೆಯ್ಯನೆ ಸಾರ್ದು ಪಾರ್ದು ನೀ
ರೊಳಗೆ
ಕರಂ ಮುೞುಂಗಿಸಿದೆಯೆಂದೆನಲೆನ್ನದೆ ದುಃಖವಾರ್ಧಿಯೊಳ್
ಮುೞುಗಿಸಿದೈ
ಕರ್ದುಂಕಿಯವನೆನ್ನಯ ಕಣ್ಬೊಣರಂ ಕರ್ದುಂಕಿ ಮೇಣ್
ಪೊಳೆವೊಡೆ
ಪೇೞದೇಂ ಬಗೆವೊಡೋಪಳಬಾಕುಳ ಲೋಚನಂಗಳಂ      ೮೨

ಅಳಿಕಳಭಮುಗಿದು ಮುಱಿದು
ತ್ಪಳಮಂ
ಚುಂಬಿಸುವುದಂ ನಿರೀಕ್ಷಿಸಿ ಗತಕು
ಟ್ಮಳಿತಮನೋಪಳ
ನಯನೋ
ತ್ಪಳಮಂ
ಚುಂಬಿಸುವ ತನ್ನನರಸಂ ನೆನೆದಂ ೮೩

ಇನಿಯಳನಾರಯಲ್ಕೆಲರನಟ್ಟುವೊಡೊಳ್ಮುಡಿಗಂಡು ಕಾಳಸ
ರ್ಪನ
ತನುವೆಂದೆ ನೊಂದಪುದು ತುಂಬಿಯನಟ್ಟುವೊಡೆಯ್ದೆ ಬಾಯ ಕಂ
ಪಿನ
ಸವಿಗಂಡು ನಿಂದಪುದು ಹಂಸೆಯನಟ್ಟುವೋಡೀರ್ಷೈಯಿಂದೆ
ಕ್ಕನೆ
ಜಱಿದೆಯ್ದೆ ನೊಂದಪುದು ಕಂಡೊಡೆ ಕಾಂತೆಯ ಮಂದಯಾನಮಂ ೮೪

ಕರೆದು ರಥಾಂಗಕಾಮುಕನಟ್ಟುವೊಡಾದಮಿರುಳ್ ವಿಯೋಗದಿಂ
ಬಿರಿದುದನುಕ್ರಮಮಂ
ಪಗಲಗಲ್ಚುವುದೋಪರೊಳೀಗಳಂತೆ ತಾಂ
ನೆರೆದುದು
ಮುಂತೆ ನಲ್ಲರನಗಳ್ಚಿದ ದೂಸಱಿನಲ್ತೆ ಬೇಟದೊಳ್
ಬಿರಿಯಿಸಿದಪ್ಪ
ನಿನ್ನಱಸಲಾ ನಳಿನಾಕ್ಷಿಯನಾರನಟ್ಟುವೆಂ        ೮೫

ಎಂದಾಸರೋವರದೊಳಗಂ ನೋಡೆ ನೋಡೆ –

ಹಾ! ಮಕರಂದ ಮನ್ನಯನಚಂದ್ರ ಮನೋಹರಶೀಲ ನೀತಿವಿ
ದ್ಯಾಮಯ
ನಿನ್ನಪಾಯದೊಳೆ ಕೂಡಿದೆನೋಪಳೊಳಾಕೆ ಪೋದೊಡಂ
ಕಾಮದ
ನೀನೆ ತಂದಳಙಲನಾಱಿಪೆಯೆಂಬನಿತರ್ಕೆ ನಿನ್ನುಮಂ
ಭೀಮವಿಧಾತ್ರನರ್ದಿದನೆ
ತುಂಗತರಂಗಮಹಾಹಿವಕ್ತ್ರದೊಳ್     ೮೬

ಎಂದು ಬಾಯೞಿದೞಲೆ ಕೇಳ್ದು ಪೆೞಗನೆ ಗಳಗಳಿಸಿ ಬರ್ಪ ಕೆಳೆಯನಂ ಪಟು ಪದಶಬ್ದನಿರ್ವರ್ತಿತನಗಿದು ನೋಡಿ –

ನಿಲ್ ನೀನಾರವನೇಕೆ ಬೆನ್ನನುೞಿಯೆ ನೀನಾರ್ಗದಾನಾರ್ಗೆ ಬಾ
ರಲ್
ನೀನಾರ್ ಮಕರಂದ ಬಂದಪನಿವಂ ಮಾಯಾವಿ ತಾನೊರ್ವನ
ತ್ತಲ್
ನೂಂಕೆಂದು ಸಖಾಯನಂ ಬಗೆದು ಕಂಡೞ್ಕರ್ತು ಕಣ್ಣೆಂಬ ನೆ
ಯ್ದಿಲ್
ನೀರಾಟಮನಾಡೆ ನೋಡಿ ಪದೆಪಿಂ ತಳ್ಕೈಸಿದಂ ಮಾನದಂ        ೮೭

ಅಂತು ತಳ್ಕೈಸೆ ಮಕರಂದನರಸನ ಕರುಣಕ್ಕೆ ಮುನ್ನು ಮಿಕ್ಕು ಮಱಿದು ಕಿಱಿಕಿಱಿದುಬೇಗದಿಂದಱಿದರಸನಂ ಸಂತೈಸಿ ಮತ್ತಮೆತ್ತಾನು ಮಾಕೆ ಮಲ್ಲಿಕಾಮಂಡಪಕ್ಕೆ ಮಗುಳ್ದು ಬರ್ಕುಮೆಂಬಾಸೆಯೊಳ್ ಒಡಗೊಂಡು ಪೋಗೆ ಪೋತರುತುಮೊಂದು ತರುಣತರುಷಂಡಾಂತರದೊಳ್ –

ದರಹಾಸಶ್ರೇಣಿಯಂ ಸೂಸದೆ ಕುಸುಮಕಟಾಕ್ಷಣಂಗಳಿಂ ಸಾರ್ದು ಶಾಖಾ
ಕರದೀಮ
ತಳ್ಕೈಸಿದನ್ಯಾವನಿಜಮನಳಿಕಾಂತಾಳಕಂ ನಾಡೆ ತಾಂ ನೀ
ಳ್ದಿರೆ
ನೀಡುಂ ಪ್ರೋಲ್ಲಸತ್ಪಲ್ಲವಗತಪವನಾಶ್ಚಾಸಮಂ ಸೂಸಿ ಮಾಕಾ
ತುರೆಯಂತರ್ಕಾಂಶುವಿಂ
ಬಾಡಿದ ಪೊಸಲತೆಯಂ ಕಂಡನಾ ರಾಜಪುತ್ರಂ ೮೮

ಬಾಲಸುಕುಮಾರಶಾಖಾಂ
ದೋಳಿತಪಲ್ಲವಕೆ
ಪಾಯೆ ಗಿಳಿಯೆಳಲತೆಯೊಂ
ದಾಳತಿಕೆಯ
ಕೆಲದೊಳ್ ತಾಂ
ಬೂಳಂಬಿಡಿವಂತೆ
ಪಿಡಿದುದರಸನ ಮನಮಂ ೮೯

ಸೋಗೆ ಸೆಳೆಗೊಂಬಿನಗ್ರದೊ
ಳೇಗಿದ
ನವಲತಿಕೆ ಲತೆಗಳರಸಿಯ ಕೆಲದೊಳ್ ಸೀಗುರಿಯನಿಕ್ಕುವವೊಲಿಂ
ಬಾಗಿರ್ದುದು
ನೋೞ್ಪ ನೃಪನ ಕಣ್ಗಂ ಮನಕಂ ೯೦

ಸಫಲಮೆನೆ ನೃಪನ ಲೋಚನ
ಶಫರಕ್ಕೊದವಿಸಿದುದುತ್ಸುಕಾಮೃತಮಂ
ದ್ವಿ
ತ್ರಿಫಲಮನಡಪಂಬೊತ್ತಂ

ತೆ
ಪನಸಲತೆ ಪೊತ್ತು ಲತಿಕೆಯ ಕೆಲದೊಳ್   ೯೧

ಶಿರದೊಳ್ ಮುಸುಱಿದ ಮದಮಧು
ಕರನಿಕರಮನಲೆವ
ಪವನ ಸಂಚಲಶಾಖಾಂ
ಕುರಮೆಸೆದುದೊಂದು
ಪೊಸಲತೆ
ಕುರುಳಂ
ತೆಗೆವಂತೆ ಪೆಱಗೆ ಪುದಿದುದೊ ಲತೆಯಂ     ೯೨

ಅಂತು ಸುತ್ತಲುಮಿರ್ದ ಲತೆ ಚೂತಲತೆ ಲಲಿತಸಖೀನಿಕರಮೆ ಬೆಸಗೆಯ್ವಂತಿರ್ದ ಲೀಲಾವತೀಲತೆಯ ಕಣ್ಣೆಳದುವರಿಯೆ ಕಂಡು ಮನಮೆಳದುವರಿಯೆ ನಿರವಿಸಿ –

ನಿರಲಂಕಾರನಿಕಾಮಮಾಕೃತಿ ತದಾಕಾರಂಬೊಲಸ್ಮತ್ಪ್ರಿಯಾ
ಧರದಂದಕ್ಷತಕೋಮಲಂ
ಕಿಸಲಯಂ ಬಿಣ್ಗೊಂಚಲಾಶ್ಲೇಷನಿ
ಷ್ಠುರಮುದ್ಯತ್ಕುಚದಂತಿರೀ
ಲತಿಕೆಯಂ ಲೀಲಾವತೀದೇವಿ
ದ್ವಿರಹೋದ್ವೇಗದಿನಿರ್ದವೋಲೆಸೆದುದೆಂದೌತ್ಸುಕ್ಯದಿಂ
ನೋಡಿದಂ        ೯೩

ಅಂತು ನೋಡಿ ನಿಲಲಾಱದರಸಂ ಲೀಲಾವತಿ ಲೀಲಾವತಿಯೆಂದು ಕರೆದು ಮೇಲ್ವಾಯ್ದು ತಳ್ಕೈಸೆ

ಸೊಡರ್ಗುಡಿಯಂ ಕಾಣಲೊಡಂ
ಕಿಡುವಂತಿರೆ
ತಿಮಿರಮಾ ಮಹಾಭಾಗನ ತೋಳ್
ತೊಡರಲೊಡಮವಳ
ವಿದ್ಯಾ
ವಿಡಂಬನಂ
ಬಿಟ್ಟು ಪಾಱಿ ಪೋದತ್ತಾಗಳ್     ೯೪

ಸಿತಪುಷ್ಪಂ ಸ್ಮಿತನೇತ್ರಮಾಯ್ತೆಳದಳಿರ್ ಬಾಯಾಯ್ತು ಬಿಣ್ಗೊಂಚಲು
ನ್ನತವಕ್ಷೋರುಹಮಾಯ್ತು
ತುಂಬಿ ಕುರುಳಾಯ್ತೊಳ್ಗೊಂಬು ತೋಳಾಯ್ತು
ಲ್ಲತೆ
ಲೀಲಾವತಿಯಾಯ್ತಿದೇನಮೃತಮೋ ಘರ್ಮಾಂಬುವಾಲಿಗಂಗನಂ
ಮೃತಸಂಜೀವನಮೋ
ರಸಂ ಹರಣಮೋ ಶ್ರೀರೂಪಕಂದರ್ಪನಾ          ೯೫

ಪದೆದಾಲಿಂಗಿಸೆ ಜೀವಮಾ ಲತಿಕೆಗಾಯ್ತೆಂದಂದು ರೋಮಾಂಚಮ
ಪ್ಪುದು
ಕಾಯಂ ಮಿಗೆ ಕಂಪಮಪ್ಪುದು ಬೆಮರ್ ಪಾಯ್ತಪ್ಪುದುತ್ಕಂಪಮ
ಪ್ಪುದು
ಕಾಮಂ ಸ್ಮರಭೇದಮಪ್ಪುದಬಲಾನೀಕಕ್ಕೆ ವೈವರ್ಣ್ಯಮ
ಪ್ಪುದು
ಪುಷ್ಪಂ ವಿಲಯಂಗಳಪ್ಪುದರಿದೇ ತಳ್ಪಿಂ ಕಳಾಕಾಂತನಾ ೯೬

ಅಲ್ಲಿಂಬಳಿಯಂ –

ಲತಿಕೆಯನೊಂದನಾ ತರುಣಿಯಪ್ಪೆ ಕಳಾವತಿಯಾದುದಾ ಕಳಾ
ವತಿ
ಲತೆಯೊಂದನಪ್ಪಿರೆ ತಮಾಳಿಕೆಯಾಯ್ತವಳಪ್ಪೆ ಲೀಲೆಯಿಂ
ಲತೆ
ಪೆಱಳೋರ್ವಳಾದುದವರಿಂತು ಸಖೀಜನಮೆಲ್ಲಮಪ್ಪಿನಂ
ಲತೆಗಳನಪ್ಪಿದರ್
ಪರಿದು ತೋಱುವವೋಲ್ ಮದನೇಂದ್ರಜಾಲಮಂ     ೯೭

ಅಂತೆಲ್ಲರುಂ ಲತಾಕೃತಿಗಳಂ ಬಿಟ್ಟಾ ನಿಜಾಕೃತಿಗಳಂ ಕೈಕೊಂಡು ನಿಮ್ಮ ಪುಣ್ಯ ಪ್ರಭಾವದಿಂ ಮಗುಳೆ ಮಾನಸಲೋಕಮಂ ಕಂಡೆವೆಂದು ಕಂದರ್ಪದೇವನಂ ಪರಸಿ, ಪರಮೋತ್ಸವದಿಂ ಸುರತತೃಷ್ಣಾತುರರಾಗಿರ್ದ ಲೀಲಾವತಿಯುಮನವನೀಪತಿಯುಮಂ ಮಲ್ಲಿಕಾಮಂಡಪಕ್ಕೆ ಕಳಿಪಿ, ಕಳಾವತಿಯುಂ ಮಕರಂದನುಮನ್ಯೋನ್ಯಾನುರಾಗ ರಸಮಗ್ನರೊಂದು ಲತಾಭವನಮಂ ಪೊಕ್ಕು ಮನೋಭವಸುಖಸಾಗರದೊಳ್ ಮೂಡಿ ಮುೞುಂಗಾಡುತಿರ್ದರ್. ಉಳಿದ ಕೆಳದಿಯರೆಲ್ಲರುಂ ತಂತಮ್ಮ ಲತಾನಿಕೇತನಂಗಳೊಳ್ ನಿಜಪ್ರಿಯರೊಳ್ ನೆರೆದು ನಿರಂತರಂ ಸುರತಸುಖಮಂ ಸುರಕಾಂತೆಯರನುಭವಿಸುತ್ತಿರ್ದರ್. ಅಲ್ಲಿಂಬೞಿಯಂ ಮುಳಿಸಂ ಮೊಳೊಯೊಳೆ ಚಿವುಂಟಿ ಕನಲ್ಕೆಯಂ ಕೊನರಲೀಯದೆ ಸಲ್ಗೆಯಂ ಸೊಪ್ಪಾಗಲೀಯದೆ –

ಅತಿಮಗ್ನಾಪಾಂಗಭೃಂಗಂ ಮುಖಸರಸಿಜದೊಳ್ ತನ್ನ ಬಾಹಾಭುಜಂಗಂ
ಸುತನುಶ್ರೀಕಂಡಶಾಖಾಂತರದೊಳಧರಸದ್ವಿದ್ರುಮಂ
ದಂತಮುಕ್ತಾ
ತತಿಯೊಳ್
ಪಾಣಿಪ್ರವಾಲಂ ಕುಚಕಲಶದೊಳಿಂಬಾಗೆ ತಳ್ತಿರ್ದನಿಂದ್ರ
ಪ್ರತಿಮಂ
ಲೀಲಾವತೀದೇವಿಯ ಹೃದಯದೊಳಾ ರೂಪಕಂದರ್ಪದೇವಂ  ೯೮

ಪುಳಕಂ ಪಕ್ಕಗೆ ಸಾರದಂತು ಬೆಮೆರೆಂದುಂ ಪತ್ತದಂತರ್ಧಕು
ಟ್ಮಳಿತಂಗಳ್
ನಯನಂಗಳುಳ್ಳಲರದಂತೊಂದೊಂದಱೊಳ್ ಪತ್ತಿ ಮೆ
ಯ್ಗಳಲಂಪಿಂ
ಬಿಡದಂತು ಸುಯ್ ಸವೆಯದಂತಾನಂದವಾರಾಶಿಯೊಳ್
ಮುೞುಗುತ್ತಳ್ಳರ್ದೆ
ಮೂಡದಂತು ಕುವರಂ ಕೂಡಿರ್ದನಬ್ಜಾಕ್ಷಿಯೊಳ್      ೯೯

ಮುದಮೋರೊರ್ವರದೊಂದು ಕೂಟಮಲರ್ಗಣ್ಣೋರೊರ್ವರಾಕಾರಮ
ಲ್ಲದೆ ತಳ್ತೋಪರಲಂಪನಾಳ್ದ ಮನಮೊಲ್ದೋರೊರ್ವರಿಂ ಪಲ್ಲವಾ
ವದಿಯೋರೊರ್ವರನಿಚ್ಚೆ ವೇಟಜಗಳಂ ತಾನಲ್ಲದೊಳ್ಮೆಯ್ ಕರಂ
ಕುದಿವೋರೊರ್ವರ ಸೋಂಕನಲ್ಲದಱಿಯರ್ ಮತ್ತೊಂದನೇನೊಲ್ಲವೇ     ೧೦೦