ಶ್ರೀಕರ ಕರಯಂತ್ರಪಯ
ಶ್ಶೀಕರಭರಸಿಕ್ತವಲ್ಲಭಾಭ್ರಮುಮಿಂದ್ರಾ

ಶಾಕರಿಯವೊಲಾದಂ
ವಿಮ
ಲಾಕೃತಿನೀರಾಟದೊಳ್
ಕಳಾರ್ಣವತೀರಂ

ಆಗಳ್ ಲೀಲಾವತಿ ಲೀಲೆಯಿಂ ಲಲನಾಸಹಸ್ರಂಬೆರಸು ಬಂದು ಚಂದ್ರಕಾಂತ ಕುಂಭಮಂ ಕರಕಮಲಂಗಳಿಂದಮೆತ್ತಿ –

ಇದು ಚಂದ್ರಂ ಕಾಮದೇವಂಗಿದು ಕುಸುಮಶರಂಗಿಕ್ಷುಚಾಪಂ ಮನೋಜಂ
ಗಿದು
ಬಾಣಂ ಕಂತುರಾಜಂಗಿದು ಪರಿಜನಮೆಂದಾನಭ್ರೂಲತಾದೃ
ಕ್ಸುದತೀಸಂದೋಹಮಂ
ಮುಂದಿರಿಸಿ ನಿಱಿಸುವಂತಗ್ರದಗ್ಧಾಂಗಜಶ್ರೀ
ಪದದೊಳ್
ಕಂದರ್ಪದೇವಂಗಬಲೆಯಭಿಷವಂಗೊಟ್ಟಳಚ್ಛಾಂಬುವಿಂದಂ   ೨

ಸರಸೀ ನೀಂ ಕುಡು ನಿನ್ನ ಕೈರವಕಮಂಭೋಜಕ್ಕಮಾಸತ್ತ ಪೆಂ
ಡಿರ
ನೀರಾಟದೊಳಾದ ಪೆರ್ಚಿದೆನುತುಂ ಕೊಟ್ಟಂತೆ ನೇತ್ರಾನನಾಂ
ಬುರುಹಂಗಳ್
ಕಿಡೆ ತಮ್ಮ ಬಣ್ಣದಿನಿದೆನ್ನಿಂದಂಚೆಗೆದೊಪ್ಪುವಿಂ
ಚರಮಂ
ಕೊಟ್ಟವೊಲಾಳ್ದುದಗ್ರ ಮಣಿಕಾಂಚೀಸಂಚಯಂ ಮೌನಮಂ      ೩

ವಿಳಸಚ್ಚಂದನಪಾಂಡುವಾರಿ ಮೃಗಭೂಶ್ಶಾಮೋದಕಂ ಕುಂಕುಮೋ
ಜ್ವಳನೀರಂ
ಕೊಳನೀೞ್ದುಕೊಂಡ ತೆಱದಿಂ ಬಣ್ಣಂಗಳಂ ಕಣ್ಗೆ ಕೆಂ
ಬೆಳಗೇನಾಯ್ತೊ
ಪಳಂಕಿದತ್ತೊ ಪೊಳೆದೇಮ್ಮಯ್ಯಾಂತ ಕಾಂತಾಜನಂ
ಗಳ
ಬಿಂಬಾಧರಮೇಂ ಬೆಳರ್ತೆಸೆದುವೋ ನೀಡುಂ ಜಲಕ್ರೀಡೆಯೊಳ್     ೪

ಮಾಲಿನ್ಯಂ ವಿಮಲದೊಳಾಗಲಾಗದೆಂಬಂ
ತಾ
ಲೀಲಾವಿಮಲಸರೋವರಂ ತರಂಗ
ವ್ಯಾಲೋಲಂ
ತಳೆದುದು ಕಜ್ಜಳಾಳಿಯಂ
ದ್ಬಾಲಾಲೋಚನಕುಮುದಂಗಳಿಂದಮಾಗಳ್

ಅಲ್ಲಿಂ ಬೞಿಯಂ ಲೀಲಾವತಿ –

ಗುರುಕುಚಕಂಭದ್ವಯತಟ
ಕರಜಪದಾವನತ ಮಗ್ರಪಲ್ಲವಮೆನೆ ಪಂ
ಕರುಹದಳಯುಗಳಮಂಗಜ

ಕರೇಣುವೋಲ್
ಕಮಲಷಂಡದಿಂ ಪೊಱಮಟ್ಟಳ್       ೬

ಬಸಿಯೆ ಜಳಬಿಂದು ಕೇಶ
ಪ್ರಸರಮನೆಗಡೆಯ್ಯೊಳಡಸಿ
ಪಿಡಿದೆಸೆದುದು ಕಾ
ಱಿಸುವವೊಲಂಗಜನಸಿಯು

ಬ್ಬಸಮಾಗಿರೆ
ಪೀರ್ದ ವಿರಹಿಜನಜೀವನಮಂ  ೭

ರಾಹು ಪೀರ್ದಮೃತದ್ಯುತಿದೀಧಿತ್ಯಂಬುಕಣಾವಳಿ ಪಿಂತಣಿಂ
ದೇಹಮಿಲ್ಲದೊಡಲ್ಲುಗುವಂತಲ್ಲೊಕ್ಕುವು
ನಿರ್ಮಳವಾಃಕಣ
ವ್ಯೂಹಮೊಪ್ಪುವ
ಪೆರ್ಮುಡಿಯಿಂ ಪದ್ಮಾಕರತುಂಗತಟೋದಯಾ
ರೋಹರಾಜಿತಪೂರ್ಣಮುಖೇಂದುಭ್ರಾಜಿತಯೌವತವರ್ಗದಾ
    ೮

ಮುಡಿದ ತಳಿರ ತೊಂಗಲ್ ಜೋಲ್ದು ಬಂದಗ್ರದೊಳ್ ತಾಂ
ತೊಡರೆ
ತಳವಿಳಾಸಂ ತಳ್ತ ವಾರ್ಬಿಂದು ಚೆಲ್ವಂ
ಪಿಡಿಯೆ
ನಖನಿಕಾಮಂ ಕಾಮಹಸ್ತಂಬೊಲಿಂಬಾ
ಯ್ತಿಡಿದು
ತೊಳಪ ಕರ್ಪಿಂ ಕಾಮಿನೀಕೇಶಹಸ್ತಂ         ೯

ಮಯೂರೋತ್ಕರಂ ನುಂಗಿದುತ್ಪಾರದಾಂಭ
ಶ್ಚಯಂ
ಪಿಂತಣಿಂ ಸೂಸುವಂತಾದುದಾ ಸ್ನಾ
ತಯೋಷಾಲಸತ್ಕೇಶಪಶಾಗ್ರಹದಿಂದಂ

ಪಯೋಬಿಂದುಗಳ್ ಬಿೞ್ದುವತ್ಯಜ್ವಲಂಗಳ್    ೧೦

ಮುಗಿಲ ಪಯೋಬಿಂದುಗೆ ಚಾ
ದಗೆಗಳ್
ಪರಿವಂತೆ ಪಾಲ ಪನಿಗೆತ್ತಬಲಾ
ವಿಗಳಿತಕಚಾಗ್ರಜಲಬಿಂ

ದುಗೆ
ಚುಂಚುವನಾಂತು ಪರಿದುವಂಚೆಯ ಮಱಿಗಳ್  ೧೧

ನಾರಿಯರ್ ವಿಕಚಘನಕಚ
ಭಾರಂಗಳ್
ಪರಿದ ತರಳಜಳಕಳಿಕೆಗಳಿಂ
ಕಾರ
ಪನಿಯಿಂದೆ ನಾಂದ
ಯೂರಂಗಳ
ಚೆಲ್ವನೇಂ ಪುದುಂಗೊಳಿಸಿದುವೋ       ೧೨

ಬಿಟ್ಟೆಸೆದುದು ಪೊಱವಾಱಂ
ಮುಟ್ಟಿದ
ತರುಣೀಸುಗಂಧಕೇಶಂ ತೆಗೆದಿಂ
ಕಟ್ಟಿದಪರೆಂದು
ಬಾಷ್ಪಂ
ಬಿಟ್ಟೊಡನೆ
ಬೞಲ್ದುವೞ್ವವೋಲಳಿರವದಿಂ     ೧೩

ಜಳಕೇಳಿಯ ಬಾಕುಳಿಯೊಳ್
ಪೊಳೆವಾರಂ
ಪಱಿಯೆ ಸೂಸಿ ಕಂಟಕದೊಳ್ ಕೋ
ದೆಳಮುತ್ತುಗಳೆನೆ
ನಿಂದುವು
ಜಳಬಿಂದುಗಳಂನಾಪಯೋಧರತಟದೊಳ್
  ೧೪

ಬಲ್ಗೊಡದನ್ನಿವೀ ಮೊಲೆಯ ಬಿಣ್ಪೊದವಲ್ ಸುಕುಮಾರಿಯರ್ಗೆ ನೀ
ರ್ಗಲ್ಗಳ
ಹಾರದೊಂದು ಪಱೆಯೇಕೆನುತುಂ ಜಲದೇವಿ ಕೊಟ್ಟವೊಲ್
ಗಲ್ಗಲನಾವಗಂ
ಬಲಿದು ಬೆಟ್ಟಿದುವಾಗದ ಬಿಂದುಮೌಕ್ತಿಕಂ
ವಲ್ಗದುರೋಜಮಂಡಲದೊಳೇಂ
ತುಱುಗಿರ್ದುವೊ ಕಾಂತೆಯರ್ಕಳಾ      ೧೫

ಜಳಧಿಯ ಸಿಪ್ಪಿಯೊಳ್ ಸುರಿದು ಬೆಟ್ಟಿದುವಾಗಿ ಬೞಿಕ್ಕೆ ವೆಜ್ಜಮಂ
ಕಳೆಯೆ
ಕಳಲ್ದು ಕೋದೆೞಲೆ ಕಟ್ಟಿಸಿ ಕೊಂಡಘವಟ್ಟು ಕಾಮಿನೀ
ಕಳಶಕುಚಕ್ಕೆ
ಸಾರ್ವ ಜಲಬಿಂದುಗಳಂ ನಗುವಂತೆ ಲೀಲೆಯಿಂ
ಬಳಸಿ
ಕುಚಂಗಳೊಳ್ ತೊಳಗುತಿರ್ದುವು ತಳ್ತು ನವೋದಬಿಂದುಗಳ್    ೧೬

ತೀಡೆ ತುಷಾರವಾಯು ನಡೆ ಕೋಡಿ ಕಡಂಗಿ ಜಲ
ಕ್ರೀಡೆಯೊಳಂತೆ
ಸೇರುವಡೆದೊಪ್ಪಿದವೊಲ್ ವಿಪುಳಂ
ವ್ರೀಡೆಯದುಗ್ಗತೋಷ್ಮ
ಕುಚದೊಳ್ ಕುಡೆ ಸತ್ತಿಗಮಂ
ಕೂಡಿದುದೊಪ್ಪದೊಳ್
ಪುಳಕಿ ಬಾಹುಭುಂಗಚಯಂ    ೧೭

ಅಂತಾಕೆಗಳಾ ಕೊಳದಿಂ ಪೊಱಮಟ್ಟು ಮಗುೞ್ದು ನೋಡೆ –

ರಮಣೀವೃಂದದ ಮೆಯ್ಗಳೊಟ್ಟಿದಗರುಶ್ರೀಖಂಡಕರ್ಪೂರಕುಂ
ಕುಮಕಸ್ತೂರಿಗಳಿಂ
ಕೆಸರ್ಮಸಗಿ ಕೊಂಡಂಭಃಪತದ್ಬೃಂಗವಿ
ಭ್ರಮಮಾಳ್ದತ್ತು
ವಸಂತಕಾಂತೆ ಪರಿಕರ್ಮಾಪೇಕ್ಷೆಯಿಂ ಯಕ್ಷಕ
ರ್ದಮಮಂ
ತೀವಿದ ಚಂದ್ರಕಾಂತಚಷಕಶ್ರೀಯಂ ಸರೋಜಾಕರಂ         ೧೮

ಅಂತುಮಲ್ಲದೆ –

ನಾರೀವಿಕೀರ್ಣನವಕಾ
ಶ್ಮೀರಂ
ಕಿಂಜಲ್ಕಮಂಗರಾಗವಿಮಿಶ್ರಂ
ವಾರಿ
ಮಧುವಾಗೆ ಕೊಳನಂ
ಭೋರುಹಮಂ
ಪೋಲ್ತುದಂದು ಪರೆದಳಿಪಟಲಂ        ೧೯

ಆಗಳಲ್ಲಿ –

ಎಸೞಂ ಪೆರ್ಮೆಟ್ಟೆ ಕೆಂಪಿಂಗುರಿದು ಚರಣದಿಂ ಕೇಸರಾಗ್ರಂಗಳಂ ಸಂ
ಧಿಸಿ
ಮತ್ತಂ ತುಂಡದಿಂದಂ ತುಡುಕಿ ರಸನೆಯಿಂ ನಾಂದಿ ಪುಷ್ಪಾಂಬುವಂ ಭಾ
ವಿಸಿ
ಕಾಂತಾಕೀರ್ಣಪಿಷ್ಟಾತಕಪಿಹಿತಲತಾಂತಂಗಳೊಳ್ ಪಾಯ್ದು ಮೆಯ್ ಶಂ
ಕಿಸೆ
ಕಂಪಂ ಕಂಪಮಾನಂ ಸವಿದುದು ಚಪಲಂ ಚಂಪಕಭ್ರಾಂತಿಯಿಂದಂ  ೨೦

ಆ ಸಮಯದೊಳ್ –

ಕಡಲೊಳ್ ಪುಟ್ಟಿದೊಡೇನವಂ ಕೊಳಾದೊಳಾನುಂ ಪುಟ್ಟೆನೇ ವೈರಮಂ
ಬಿಡೆನೆಂದುಂ
ಖಳನಬ್ಜನೆನ್ನೊಳವನಂ ನೀಂ ಗೆಲ್ದು ಸರ್ವಸ್ವಮಂ
ಪಿಡಿದೆನ್ನಿಂಬರಮಾರೊ
ಮಿತ್ರರೆನಗೆಂದಂಭೋರುಹಂ ಕೂರ್ತು ಕಾ
ಲ್ವಿಡಿದಿತ್ತಂತಿರೆ
ತನ್ನ ಚೆಲ್ವನೆಸೆದತ್ತಾಸ್ಯಂ ಸರೋಜಾಸ್ಯೆಯಾ    ೨೧

ಎಂಬುತ್ಪ್ರೇಕ್ಷೆಗಮಗ್ಗಳಮೆನಿಸಿ ನಿರೀಕ್ಷಣಾತಿಥಿಯಾದ ಲೀಲಾವತಿಯ ಮಜ್ಜನವಿಮಲ ಮುಖಚಂದ್ರಮಂಡಲಮಂ ಮನೋಹರನೆಮೆಯಿಕ್ಕದಂತು ನೋಡಿಯುಂ ತಣಿಯದೆ ಕಳಾವತಿಗೆ ಕಳಾ ಕಾಂತನಿಂತೆಂದಂ –

ಪ್ರಣುತಸುಧಾಗರ್ಭಮೆಕಾ
ರಣಮಿ
ಕೋಮಳೆಯ ಮುಖಸುಧಾರುಚಿಗೞಿದಂ
ತೆಣೆಗೊಂಡು
ತೊಳಗುತುಂ ಪಾ
ರ್ವಣಶಶಿಬಿಂಬಕ್ಕೆ
ಕೃಶತೆಯೆತ್ತಣಿನಾಯ್ತೋ    ೨೨

ಎಂದು ಕಂಪರ್ದದೇವಂಗೆ ಮೆಚ್ಚಿ ಪಚ್ಚಮಾದುದೆನಿಸಿದ ಪರಾರ್ಥ್ಯಮಣಿ ಮಂಡನಂಗಳುಮಂ ದಿವ್ಯವಸನಕುಸುಮಮಾಲಾನುಲೇಫನಂಗಳುಮನವಟೈಸಿ ಕೆಳದಿಯುಂ ತಾನುಂ ಕೈಗೈದು ಕಂದರ್ಪನುಮಂ ರೂಪಕಂದರ್ಪನುಮಂ ಪೂಜಿಸುವ ಸಂತಸಮಂ ನೀರೋತ್ಸವದೊಳ್ ಪುದುಂಗೊಳಿಸಿ ಮಗುಳ್ದು ಮಲ್ಲಿಕಾಮಂಡಪಕ್ಕೆ ಬಂದು ರಾಗಸಾಮ್ರಾಜ್ಯಸುಖಮಂ ಭೋಗಭೂಮಿಜರಂತೆ ಕೆಲದಿಯರೆಂಬ ಕಲ್ಪಲತೆಗಳ್ ಬೆಸಕೆಯ್ಯುತ್ತುಮಿರೆ ನಿರಂತರ ಸುಖಮನನುಭವಿಸುತ್ತುಮಿರ್ಪುದುಮೊಂದುದಿಸವಂ –

ಇನಬಿಂಬೋದಯಕಾಲದೊಳ್ ಪ್ರಿಯಸಖಂ ತಂದೀಯೆ ಕಾಳಾವಲೋ
ಕಿನಿಯಂ
ನೋಡಿ ನರೇಂದ್ರನಾ ಪಲಗೆಯಂ ಮತ್ತಂತೆ ತನ್ಮಂತ್ರಿಪು
ತ್ರನ
ಕೆಯ್ಯೊಳ್ ಕುಡೆ ಕೊಂಡು ಕಂಡು ಮುಳಿಸಿಂ ಲೀಲಾವತೀದೇವಿ ಕೊ
ಲ್ವನಿತುಂ
ಕಾಯ್ದು ಕನಲ್ವಳೋಪರೆಡೆಯೊಳ್ ಮುಚ್ಚಚ್ಚಿಗಂ ಮಾಡದೇ     ೨೩

ಅಂತು ತನ್ನಂ ನೋಡಲೀಯದೆ ನೋಡುವುದುಮಂ ಕೆಳೆಯನ ಕೆಯ್ಯೊಳ್ ಕುಡುವುದುಮಂ ಕಂಡು ಕಿಡಿಕಿಡಿವೋತಿ ಕಟ್ಟುಕೆಡೆದು ಕಡುಪಿನಿಂ ಸೈರಿಸಲಾಱದೆ –

ಇನಿಯನನುಭವಿಸಿದಳ್ ಪೇ
ೞೆನಗಂ
ಮಡಗುವುದಿದೇನೋ ತೋಱೆಂದಳ್ ನೊ
ರ್ವಿನಿಸಿ
ಕಿನಿಸಿದಳವಳ್ ದಿನ
ಪನುದಯದೊಳ್
ಕಾಯ್ದಳರ್ಕಮಣಿಪುತ್ರಿಕೆವೋಲ್     ೨೪

ಬೇಡದಿರಾಗ್ರಹದಿನಿದಂ
ನೋಡದಿರೊಳ್ಪಪಿೞಿಗುಮೆಂದು
ಮಕರಂದಂ ಬಾ
ಯ್ಮಾಡೆಯುಮುೞಿಯದೆ
ಚಲಮಂ
ಬೇಡೆನೆ
ಬೆನ್ನಿತ್ತ ಚಲಮುಮಾಗಳೆ ಮಗುಳ್ಗುಂ ೨೫

ಅಣಕಿಸುಗುಮೆ ತನ್ನನಿತುಂ
ತಣಿಯದೆ
ಕಡುನಲ್ಲನೆಱೆದೊಡಂ ಕುಡನೇ ಕಾ
ರಣಮಿದನೆನ್ನದೆ
ಕೋಪಾ
ರುಣಲೋಚನೆಯದಳೊಲ್ವರೇನಂ
ಬಲ್ಲರ್    ೨೬

ಅಂತಾಗಿ ಕೋಪಗಳದುದ್ವೇಗ ಗದ್ಗದಕಂಠೆ ಕೆಳದಿಯರಂ ಕರೆದೆನ್ನುಮಂ ವಂಚಿಸಿ ಪೋಪ ಹಾಸದಿನೀಮಾಯಾಶಿಷ್ಯನ ಕೆಯ್ಯೊಳಸಾರ್ದು ದುಷ್ಟಂ ಕೊಟ್ಟಂತಿಟ್ಟ ವಲಗೆಯಿರ್ದಪುದನೀ ಮಾನ್ಯಂಗೆ ತಕ್ಕ ಮನ್ನಣೆಯಂ ಮಾಡಿ ಬೇಡಿಕೊಳ್ವುದೆಂದು ಕೆಳದಿಯರಂ ಕಣ್ಸನ್ನೆಗೆಯ್ವುದು ಮಾಕೆಗಳಾತನನೆಕ್ಕಿಟಿಗಱೆದು –

ಕೇಶವನೊರ್ವಳಂ ಕುಶಮನೊರ್ವಳಗುರ್ವಿಪ ಕೆಯ್ಯನೊರ್ವಳೊ
ಳ್ಮೀಸೆಯನೊರ್ವಳುರ್ಚಿ
ಪಿಡಿದಾ ಮಕರಂದನ ಕಕ್ಷಕೋಣವಿ
ನ್ಯಾಸಿತಸೂರ್ಯ
ಕಾಂತಫಲಕೋಪಲಮಂ ಸೆಱೆದಾಗಳೀೞ್ದು ಕೊ
ಡಾ
ಸಖಿಯರ್ ಸರೋಜಮುಖಿಗಿತ್ತವನೀಪತಿಗಿತ್ತರೇವಮಂ      ೨೭

ಪುಲ್ವಿಡಿಯೆ ಸಚಿವತನಯಂ
ಕಾಲ್ವಿಡಿಯೆ
ನಿಜೇಶನವಳಗಲ್ಕೆಗಳೊಂದಂ
ಕಲ್ವಂತೆ
ಪಲಗೆವಿಡಿದಳ್   ೨೯

ಅೞಿಪಿಂ ತನ್ನೋಪನನ್ಯಾಂಗನೆಯನೆ ಬರೆದಾಲೋಕಿಪಂಗೆತ್ತು ತನ್ನೊ
ಳ್ನೆೞಲಂ
ವಾಮಾಕ್ಷಿಮುದ್ದಿಂ ತನಗೆ ಸವತಿಯಂ ಮಾಡಿ ಕಣ್ನೆಯ್ದಿಲೊಳ್ ಕಾ
ಯ್ದೞಲಿಂದಂ
ಮೋದೆ ತದ್ರೂಪಕಮುಮಕಟ ಕೋಪಾಗ್ನಿಯಂ ಸೂಸುವಂತಾ
ಯ್ತೆೞೆವುತ್ತರ್ಕಾಂಶುವಕ್ಷೋಪಲಫಲಕದೊಳಂದೆತ್ತಿದಾತ್ತಸ್ಫುಲಿಂಗಂ
        ೩೦

ಅಂತು ತನ್ನ ನೆೞಲನೆ ಮತ್ತೊರ್ವಳ ರೂಪೆಂಬ ಶಂಕೆಯುಮಂ ಬಱಿಕೆಯ್ಯದ ಬಗೆಗೆ ಬಾಧಕಬೋಧಂ ಪುಟ್ಟಿರೆ –

ಪೆಮ್ಮರುಳ ಮೇಗೆ ಸೊರ್ಕೆನೆ
ತಾಮ್ಮುನ್ನಮೆ
ಮುಗ್ಧೆಯದಱ ಮೇಗುದಯಿಸೆ ಕೋ
ಪಮ್ಮಿಗೆ
ತನ್ನ ನೆೞಲ್ಗಂ
ಸಮ್ಮನಿಸಳೆ
ಕೂರ್ತು ಕಣ್ಣ ಕಾಣ್ಬವರೊಳರೇ  ೩೧

ಮುಸುಕಿದ ನಯನಾಂಶುಗಳಿಂ
ಮಸುಳ್ದುದು
ತಚ್ಛಾಯೆಯವಳ ಮುನಿಸಱಿದೇಂ
ಟ್ಟಿಸಿದುದೊ
ಪಲಗೆಯನೆನೆ ಬಾ
ಷ್ಟಸಲಿಲಮಂ
ತಳಿದು ನೇತ್ರಪುತ್ರಿಕೆ ಕರದಿಂ   ೩೨

ಅದನೇವೇೞ್ವೆನೊ ಮುಗ್ಧೆಗಾದ ಪುರುಡಂ ಪಾದಾಗ್ರದಿಂ ತೇದು ಕಾ
ಯ್ದೊದೆದಳ್
ಕೆಮ್ಮಡದಿಂದಮಿಟ್ಟೊರಸಿದಳ್ ಹಸ್ತಾಬ್ಜದಿಂ ಮೋದಿ ತೀ
ಡಿದಳಾತ್ಮ
ಪ್ರತಿಬಿಂಬಮಂ ಪಲಗೆಯೊಳ್ ಕಾಣುತ್ತೆ ಮತ್ತೇಕೆ ಪೋ
ಗದೋ
ಪೇಱೆಂದು ಸಕಂಪೆ ಕೋಪವಶದಿಂದೀಡಾಡಿದಳ್ ಕೂಪದೊಳ್   ೩೩

ಅಂತೀಡಾಡಿ ನಿಲ್ಲದೆ ದಿವದಿಂ ದೇವಾಪಗೆಯಂತೆ ಸುೞಿಸುೞಿಗೊಂಡೀಶನ ತಲೆವಾಯದೆ ಕಾರ ಕಾದಂಬಿನಿಯಂತೆ ಗರ್ಜಿಸಿ, ಅನಲವನಿತೆಯಂತೆ ಕನಲ್ದು, ಬಿಸಿಲೇಱಿದ ತಪನೋಪಲಪುತ್ರಿಕೆಯಂತೆ ಕಾಯ್ದು, ಕೊಳ್ದಪ್ಪಿದುರಗಕಾಂತೆಯಂತೆ ಕಡುಬಿಸಮನುಗುೞ್ದು ಸೊಂಕು ಸೋಲಿಸುಗುಮೆಂಬಂತೆ ಪೊಯ್ಯದೆ ಪೆಸರೆ ನಾಲಗೆಯನೊಲಿಸಿ ನಿಲಿಸುಗುಮೆಂಬಂತೆ ಬಯ್ಯದೆ, ನಟ್ಟದಿಟ್ಟಿಯನುಗಿವುದರಿದೆಂಬಂತೆ ನೋಡದೆ ಮನಮೆ ಮರುಳಾಗಿ ಮಗುೞ್ಚಗುಮೆಂಬಂತೆ ನೆನೆಯದೆ, ಕೈಗೆ ಕಂಪನಮನಿತ್ತು ನಾಲಗೆಯ ನೆೞಲೊಳೊಣಗಿಸಿ, ಕಣ್ಗಳನಶ್ರುಪೂರದಿಂ ಪೂೞ್ದು, ಮನಮಂ ಮುನಿಸಿಂ ಮುಸುಂಕಿ, ಮಾಮಸಮಸಗಿ, ನೆಲನೆ ಬಾಯ್ದೆಱಿ ಪೊಕ್ಕಪೆನೆಂಬಂತೆ, ದೆಸೆದೇವತೆಗಳಿರ ಬಸಿಱೊಳೆಡೆಗುಡಿಮೆಂಬಂತೆ, ಆಗಸಮೆ ಈ ಸಗಣಿ ಗಾಱೆನೆನ್ನನೊಳ ಕೊಳ್ಳೆಂಬಂತೆ ಕೆರಳ್ದು ಕಳವಳಿಸಿ ಪೋಪ ಕೆಳದಿಯ ಬೞಿಸಂದು, ಕಳಾವತಿ ಕೆಯ್ಯಂ ಪಿಡಿಯೆ ; ತನ್ನ ಪಲ್ಲಂ ಪೆಱಗೆ ಪರಿತಂದು ಪಿಡಿದನೆಂದೇ ಬಗೆದು –

ಬಿಡು ಪಿಡಿಯಲ್ಕದಾಪಲಗೆಯಲ್ತಸತೀಪ್ರಿಯ! ನೀನದೇಕೆ ಕೆ
ಯ್ವಿಡಿದೆಯೊ
ನಿನ್ನ ಕಾೞ್ಮನದ ಕೆಯ್ವಿಡಿದಾಕೆಯುಮೆಲ್ಲಿಮೆಂದವಳ್
ನುಡಿವುದುಮಂಗಜಂಗಮಮೆಮಗಂ
ಸಖಿ ಕೈಪಿಡಿ ನೀಂ ಗಡೆಂದವಳ್
ನುಡಿಯಿಸೆ
ನಕ್ಕು ನಮ್ರಮುಖಿಗಾ ಸಖಿಯೆಂ ದಳತಿಪ್ರಬಂಧದಿಂ  ೩೪

ತಳೆದು ದರಹಾಸರಸಮಂ
ಮೊಳೆತೆಳವೇಟಮನಲರ್ಚಿ
ಸುಸಿಲೆಲರಿಂದಂ
ಬಳೆಯಿಪುದುಗೆಟ್ಟು
ಮಾನಿನಿ
ಮೊಳೊಯೊಳ್
ಮುರುಟಿಪುದೆ ಮುಳಿಸುಗಿರ್ಚಿನೊಳಯ್ಯೋ      ೩೫

ಬಗೆಯ ತೊಡರ್ಪು ಪಿಂಗುವಿನಮಂ ಜವಗುಂದದೆ ಪಿಕ್ಕಿ ದೋಷಮಂ
ನೆಗಪದೆ
ಬೇಟಪಲ್ಲಟಕೆ ಬೆರ್ಚದೆ ಗೆಲ್ಲಮನೞ್ತಿಗಾದೊಡಂ
ಬಗೆಯದೆ
ಪತ್ತಿ ತನ್ನ ಸುಖಮಂ ಸವಿಪಾಕೆಯೆ ಜಾಣೆಗಂಡರೊ
ಲ್ಮೆಗೆ
ಮಿಗೆ ಮುಯ್ವನಾಂತು ಪುರುಡಂ ಕಱೆವೋಗಿಸುವಾಕೆ ಜಾಣೆಯೇ    ೩೬

ಎನೆ ಮತ್ತೊರ್ವಳ್ ಮಾತುಗಾರ್ತಿ –

ಬಗೆವೊಡೆ ಗಂಡರಂ ಹರೆಯವಾಳ್ವುದು ಪೇೞ್ವೊಡೆ ಪೆಣ್ಣ ಜವ್ವನಂ
ಮುಗಿಲದನಂತೆ
ನಚ್ಚಿ ಪತಿಗಿಲ್ಲದ ದೋಷಮನಿಟ್ಟು ತೋಟಿಯಂ
ತೆಗೆವ
ಚಲಕ್ಕೆ ಮೆಯ್ದೆಗೆವ ಮೀಱುವ ಕಣ್ದೆಗೆವಾರ್ದು ಕಂತು ಬಿ
ಲ್ದೆಗೆಯೆ
ಬೞಿಕ್ಕೆ ಕೈದೆಗೆವ ಗಾವಿಲೆಗೇವುದೋ ಬೇಟದಚ್ಚಿಗಂ     ೩೭

ಎನೆ ಮತ್ತೊರ್ವಳರ್ತಿಗಾರ್ತಿ ಇಂತೆಂದಳ್ –

ಕೞಿದೊಡೆ ಕಂಡರಾರುರದ ಬೇಟಮೆ ಮಂಚದೊಳಿಲ್ಲ ಮಂಚದಿಂ
ದಿೞಿದೞಿವೇಟಮುಂ
ಮನೆಯೊಳಿಲ್ಲದಱಿಂದುರದಿಂದಮೞ್ಕಱಿಂ
ದಿೞಿಪದೆ
ಮಂಚದಿಂದಿರೞಿಪದೋಪವನಂ ಮನೆಯೊಳ್ ಪೊಸಂತಿಲಿಂ
ದಿೞಿಪದೆ
ಬೇಟಮಂ ಪ್ರಿಯದಿನಾಳ್ವಳೆ ಸಗ್ಗಮನಾಳ್ವಳಲ್ಲವೇ     ೩೮

ಎನೆ ಮತ್ತೊರ್ವಳ್ ಚದುರೆ –

ಭಾವಿಸೆ ಬೇಟಮೇಂ ಸತಮೆ ಕಂಟಿಸುವಚ್ಚಿಗದಿಂದಮೊಂದೆರ
ೞ್ಜಾವಮನೊಂದರೆೞ್ಗಳಿಗೆಯಂ
ಪುರುಡಿಂ ಮುಳಿಸಿಂದಮೊಂದಿರುಳ್
ತೀವಿದ
ತಿಂಗಳೊಪ್ಪುವಿರುಳಂ ಕೞಿದಕ್ಕ ವಿಯೋಗವಹ್ನಿಯಿಂ
ಬೇವುದು
ಬುದ್ಧಿಯಲ್ತು ಕೆನೆಯಂ ಕಳೆದಕ್ಕಟ ಕೆಚ್ಚುದಿಂಬುದೇ     ೩೯

ಎನೆ ಮತ್ತರ್ವಳಿಚ್ಚೆಗಾರ್ತಿ –

ಬೇಟದ ಸುಗ್ಗಿ ನಾಲ್ಕೆ ದಿನವಾದೆಸೆಯೊಳ್ ಬಸಮಾದ ಗಂಡರಿಂ
ಗೂಟಮೆ
ತೋಟಿಯೆಂದುಸಮಸಂದೆಮೆಯುಂ ಮಱಿಯಾಗದಂತು ಬಾಯ್
ನಾಟಿರ
ಬಾಯೊಳಪ್ಪುಡುಗದಂತು ತೊಡಂಕಿರದೇಕೆ ತೋಟಿಯಂ
ಪಾಟಿಸೆ
ತಾವೆ ತಮ್ಮಗಳನಾರಡಿಗೊಳ್ವರೊ ನಾಡ ಗೊಡ್ಡೆಯರ್ ೪೦

ಎನೆ ಮತ್ತೊರ್ವಳ್ ಬೇಟಕಾರ್ತಿ –

ಪಡೆವೊಡೆ ಮೊಗ್ಗೆ ಪೊಚ್ಚ ಪೊಸವೇಟಮದಂ ಬಡವಂ ನಿಧಾನಮಂ
ಪಡೆದವೊಲೋವಿ
ಕಾವುದು ಗುಣಂಗಿಡದಿರ್ಪುದು ತನ್ನ ಮೈಮೆಯಂ
ಬಿಡುವುದು
ಬೇಡಿತಂ ಕುಡುವುದಿಚ್ಚೆಗೆ ಸಲ್ವುದು ನಾಣನಾವಗಂ
ಸುಡುವುದು
ಬೇಟಮಿಲ್ಲದಳ ಪಾೞ್ಮೊಗಮಂ ನಡೆನೋಡಲಕ್ಕುಮೇ       ೪೧

ಎನೆ ಮತ್ತೊರ್ವಳಱಿಕೆಯ ತೇಪೆ –

ಸೊಗಯಿಸಿ ಗೊಟ್ಟಿಯೊಳ್ ಪಿರಿದ ಸದ್ಗುಣಗಂಧಮೆನಿತ್ತು ಮೆಲ್ಲಮೆ
ಲ್ಲಗೆ
ರಸಮಂ ಪುದುಂಗೊಳಿಸಿ ಮೆಲ್ಪು ಮನಂಬುಗೆ ಗಂಡನೆಂಬ ತುಂ
ಬಿಗೆ
ನಗೆವೆಳ್ಪನೋಲಗಿಸುತಿರ್ಪುದು ಮಲ್ಲಿಗೆಯಂತೆ ಕಾಯ್ದು ಕೆ
ಚ್ಚಗೆ
ಮೊಗಮಾಗೆ ಸಂಪಗೆವೊಲೇಂ ಬಗೆಯಾಂಪುದೆ ಬುದ್ಧಿವಂತೆಯರ್    ೪೨

ಎನೆ ಮತ್ತೊರ್ವಳ್ ಬೆಸನದ ಬಾಕುಳಿ –

ಪೂವಿನ ಸುಗ್ಗಿಯಲ್ತೆ ಪೊಸವೇಟಮದಾದೊಡೆ ಕಣ್ಣೊಳೋಪರಂ
ಕಾವುದು
ಸುತ್ತಿ ಪತ್ತಿ ಸವಿಯೊಳ್ ಸೆಱಿಗೆಯ್ವುದು ಜೀವಮಂ ತಡಂ
ಗಾವುದು
ಮೆಚ್ಚಿತಂ ನಲ್ಲರ ಮೆಯ್ಸುಖಕೆಂದೆ ದೇಹಮಂ
ತೇವುದು
ತಾನೆ ತನ್ನ ಪಗೆಯಪ್ಪುದೆ ಬರ್ಪುದೆ ಪೋದ ಜವ್ವನಂ   ೪೩

ಎನೆ ಮತ್ತೊರ್ವಳ್ ನೆವಕಾರ್ತಿ –

ಬೇಸಱಿಸದವನ ನಸುವಿಂ
ಬಾಸಣಿಸುವುದೊಲ್ಲದಳಿಪಿ
ಪೞಿಕೆಯ್ವವನಂ
ಬೀಸಿ
ಬಿದಿರ್ದಿಕ್ಕಿ ಕಳೆವುದು
ಲೇಸಂ
ವೃಥೆಗಳೆವೊಡೇಕೆ ದೈವಮೆಗಂಡರ್  ೪೪

ಎನೆ ಮತ್ತೊರ್ವಳ್ ಸೌಭಾಗ್ಯಕಾರ್ತಿ –

ಅಲ್ಲಿಯಳಿ ಮಡಿಗುಮಲ್ಲದೆ
ಸಲ್ಲದು
ಸಂಪಗೆಯೊಳೆಳಸಿದಳಿಯುೞಿದಲರ್ಗಿಂ
ನಲ್ಲಳಿರೆ
ಪೆಱರದೇಕೆಗ
ಮಲ್ಲಿಗೆಯಂ
ಮುಡಿದು ಮುಡಿವುದೇ ಗೋರಟೆಯಂ     ೪೫

ಅದಲ್ಲದೆಯುಂ –

ದೇವರ್ಗಂ ದೊರೆಕೊಳ್ಳದೊ
ಳೀವುದು
ಕೂರೆಯುಮದೇಕೆ ಪಂಬಲಿಸುವನಾ
ಗೋವಂ
ಪೇೞ್ ಪೆಱರಂಪ
ಟ್ಟಾವಳಿಯುಟ್ಟುಡೆಯೊಳುಡುವುದೇ
ಕಾಸಟಮಂ       ೪೬

ಎಂದು ತಂತಮ್ಮ ಬಗೆಗೆ ತಕ್ಕುದನೆ ಬೇಱೆವೇಱೆ ನುಡಿಯೆ –

ಕಂಡುದನೆ ನುಡಿದು ಕಲ್ಪಿಪ
ಪೆಂಡತಿಯರ
ನುಡಿಯನುಱದೆ ಮನದನುವಿಂಗಾ
ಚಂಡಿಪ
ಚಪಲೆಯ ನುಡಿಗೇ
ಗೊಂಡಳ್
ಹಿತಮತಮನೇಕೆ ಕೇಳವೊ ಕಿವಿಗಳ್        ೪೭

ಅಂತು ತನ್ನ ಬಗೆಯನ್ನರಪ್ಪನ ಬಗೆಯಂ ಬಗೆಯದೞಿವಗೆಯನೆ ಕಿಱಿಕಿಱಿದಂತರಮಂ ವನದೊಳಗೆ ನಡೆದು, ಪೃಥುಜಘನಸ್ತನಭೃವ್ಯಾಜದಿಂ ನಿಂದು ನಿಂದು, ಬಾಷ್ಪಬಹಳಬಿಂದುಗಳಂ ತೊಡೆದು ತೊಡೆದು, ಪೆಗಂ ಮಗುಳ್ದು ಸುಯ್ದು ಸುಯ್ದ ನಾದೊಡೆರಡಱಿಯದೆನ್ನೊಲ ವನಱಿದುಂ ಪೊಲ್ಲಕೆಯ್ದುಮೆ ಕೆಯ್ದೆವಂದಾ ಕೈದುವಕಾಱನೆನ್ನನಿನ್ನುಂ ತಿಳಿಪಿದನಿಲ್ಲೆಂದು ಸಿಗ್ಗಾಗಿ ನಲ್ಲನೊಳಾ ದೇವಂ ತಿಣ್ಣಮಾಗೆ ಕಣ್ಣ ಬೇನೆಗಾಱದೆ ತಲೆಯಂ ತಿವಿಸಿಕೊಂಡರೆಂಬಂತೆ, ಪಱಮೆಗಾಱದೆ ಪೂಗಿಡುಗಡಿದರೆಂಬಂತತಿ ಪರುಷರೋಷಿತೆಯಾಗಿ –

ಲತೆಯಾದಳ್ ವಿದ್ಯೆಯಿಂದಾ ಖಚರಿ ಚರಣದೊಳ್ ಬಿರ್ಮ ಚಿತ್ತೈಸುಗುಂ ವಾ
ಕ್ಚತುರಂ
ಬಂದೆನ್ನನೆಂದುಂ ಬಿರಯಿಸಲಣಮಿನ್ನಾಱೆನಾನೆಂದುಮಲ್ಲಾ
ಡುತುಮಿರ್ಕುಂ
ಮಾನವೀ ಚೇತನೆ ತನುವಿನೊಳಿರ್ಪನ್ನಮೆಂದುಂ ಸ್ಮರಾಮ
ರ್ಶಿತೆಯಿಂದಾ
ಮುಗ್ಧೆಯಿಂದೇನವದರಿಪವರ್ಗ ಕೋಪಮಾಪತ್ತನೀಗುಂ    ೪೮

ಕಂಡು ಕಳಾವತೀಪ್ರಮುಖಮಾದ ಸಖೀಜನಮೇಕೆ ಚಂಡಿಗೀ
ಚಂಡತೆಯೆಂದು
ಬೆಂದ ಬಿದಿ ಬಲ್ಲಿದನೆಂದು ಸಬಾಷ್ಪಲೋಚನರ್
ತಂಡದಿನೊಂದಿ
ನಿಂದೆಮಗಮಿಕೆಯ ಲೋಕಮೆ ಲೋಕಮೆಂದು ಕೈ
ಕೊಂಡುದು
ಸಲ್ಲತಾ ಕೃತಿಯನಲ್ಲದೊಡೇಕೆ ಸಖಿತ್ವದಚ್ಚಿಗಂ      ೪೯

ಅನ್ನೆಗಮಿತ್ತ ಕಿಂಕರ್ತವ್ಯತಾಮೂಢನುಂ ವಿಸ್ಮಯವಿಸ್ಮೃತಾಧ್ಯವಸ್ತಾಯನುಂ ಪ್ರಿಯಾಭಿನವ ಮ ಮೌಗ್ಧ್ಯಮನೋಹರಮಾನ ಚಕಿತಚಂಕ್ರಮಣ ಸ್ಖಲಿತಪದಪಲ್ಲವಲಾವಣ್ಯರಾಗಾರ್ಚಿತಪದ ಪಥದತ್ತ ದೃಷ್ಟಿಯುಂ ಕಲಾವತೀ ವಚನಮಾತ್ರ ಮಿತ್ರಸುಖಸಾಧ್ಯಮಾನ ಮಾನಿನೀಪ್ರಸಾದ ಸಿದ್ಧೀಭವಿತವ್ಯತಾದೀನಮಾನಮಾನಸನುಮಾಗಿರ್ದ ಮಾನವಮದನನಂ ಮಕರಂದನಿಂತೆಂದಂ –

ಮಿಥ್ಯಾಸ್ವರೂಪಮೆಂಬುದೊ
ತಥ್ಯಮೆ ತಮಗಕಟ! ತಥ್ಯಮೆಂಬುದೆವಾದೆಂ
ಮಿಥ್ಯೆಯನೆ ತಿಳಿಪಲಾರ್ಗಂ
ತಥ್ಯಮೆ ಮುಗ್ಧೆಯರ ಮತಿಯುಮಘಜನತತಿಯುಂ     ೫೦