ಅಂತವರ್ ಸುಖದಿನಿರೆ, ಮತ್ತೊಂದು ದಿವಸಂ –

ಉದಧಿಘನಪಾತ್ರವಿದಿತಾ
ಸ್ಪದದೊಳ್
ಜಲತೈಲಪಾಲಿತಜ್ವಾಲದೊಳು
ರ್ವಿದ
ವಡಬಾನಳವಿಪುಳ
ಪ್ರದೀಪದೊಳೆ
ಪಾಯ್ದು ಬಿೞ್ದು ದೆಯ್ದೆ ಪತಂಗಂ          ೧೦೧

ಏಂ ಪಯಿಸಿದುದೋ ಬಿಸರುಹ
ಸಂವರ್ತಿಕೆಯೊಳ್
ಪರಾಗದೊಳ್ ಪೊರೆದಳಿ ಕೃ
ಷ್ಣಂ
ವಿಳಸಿತ ಪೀತಾಂಬರ
ಸಂವೀತಂ
ಸರಿಯ ಸೂಱ್ಗೆವಂದವೊಲಾಗಳ್ ೧೦೨

ಏನೆಸೆದುದೊ ರವಿಯಪರಪ
ಯೋನಿಧಿಯೊಳ್
ಮುೞುಗೆ ಸುರತನಿದ್ರಾಲಸಭೃಂ
ಗೀನಿನದೆ
ಸರಸಿ ಸಂಧ್ಯಾ
ಮೌನಮನಾಂತೇಕೆ
ಮುಕುಳಿತಾಂಬುಜಕರದಿಂ        ೧೦೩

ಇಕ್ಕಿದತ್ತು ಸಿರಿಯಂ ಸರಸೀಜಂ
ಜಕ್ಕವಕ್ಕಿಗಳಗಲ್ದುವು
ನೆಯ್ದಿಲ್
ನಕ್ಕುದೆಯ್ದೆ
ತಮಮೆಂಬ ತಮಕ್ಕೊ
ಮ್ಮುಕ್ಕುಳಾದುದು
ಜಗದ್ವಿಧುಬಿಂಬಂ ೧೦೪

ಅಂತಭಿನವಾವಿಷ್ಕಾರತರಳತಾರಾವತೀರ್ಣ ಕಿರಣತಂತೂದ್ಗಾರಗೌರಮಪ್ಪ ಗೌರಿಯೆಂಬ ಜಾವದೊಳಾ ಕುಸುಮಪುರಕ್ಕಮನತಿದೂರದೇಶದೊಳಿರ್ಪ ಗಂಧಗಿರಿಗಧೀಶ್ವರಂ ವಸಂತಶೇಖರನೆಂಬ ವಿದ್ಯಾಧರನ ಮನೋಹರಿ ಮದನಮಂಜರಿಯೆಂಬಳ್ –

ಲಾವಣ್ಯರೂಪವಿಭ್ರಮ
ಭಾವಕ
ಬಿಬ್ಬೋಕ ಲಲಿತ ಕಿಲಕಿಂಚಿತ ಲೀ
ಲಾವಿಹೃತಿಗಳಿಂದಾ
ಲೀ
ಲಾವತಿಗಂ
ನಾಲ್ವೆರಲ್ಗೆ ತಾಂ ಮಿಗಿಲೆನಿಪಳ್  ೧೦೫

ಅಂತಾಕೆ ಕಂದರ್ಪದೇವಂಗೆ ಕಿವಿವೇಟಂಗೊಂಡು ಗಂಡನ ಕಣ್ದಪ್ಪಿ ಬಂದು, ವಾಸವದತ್ತೆ ಸಾಯಂತನಮಜ್ಜನಕ್ಕೆ ಪೋದ ಪೆಱಗೆ, ಮಲ್ಲಿಕಾಮಂಡಪದಿಂ ಪೊಱಮಟ್ಟು ವಿಹಾರವಿನೋದದಿಂ ವನದೊಳಗೊರ್ಬನೆ ಬರ್ಪ ಮಾನವಮದನನಂ ಕಂಡು ಕೈಗೞಿಯೆ ಕಣ್ಸೋಲ್ತು ಕಾಮಕಾತರೆ ಯಾಗಿ ತುಱಿಪಗಾರ್ತಿ ಕೂರ್ತು ನಿತ್ತರಿಸಲಾಱದೆ ಕತ್ತಲೆಯೆಂಬ ಕಾರ್ಮುಗಿಲೊಳಗಣಿಂ ಪೊಳೆದು ಪಾಯ್ವೆಳಮಿಂಚಿನಂತೆ ಮೇಲ್ವಾಯ್ದು ಲತಾವೇಷ್ಟಿತದೊಳ್ ಪರಿಣತೆಯಪ್ಪುದಱಿಂ ಪತ್ತೆಪಾಯ್ದು ಅಂತೆ ಮುರಿದಡರ್ದು ಪತ್ತಿ ಕುಚ ಕುಂಭದಿನುರಮನಿಱಿದು ಮಿಡಿವ ಮದನಮಂದಿರ ದಿನುಡೆಯನೊತ್ತಿ ಬಿಡುವ ನಿತಂಬದಿಂ ತೊಡೆಯಂ ತೊಯ್ದು ಬಲದ ತೋಳಿಂ ಕೊರಲನಪ್ಪಿಯೆಡದ ಕೆಂದಳಮಂ ಹನುವಿಂಗೆ ಸಾರ್ಚಿ ಸೆಳ್ಳುಗುರ್ಗಳಿಂ ಗಲ್ಲಮಂ ಸೆೞೆದು ಬೆರಲ್ಗಳಿಂ ಬಾಯಂ ಬರೆ ತೆಗೆದು ನಿಡಿಯ ಕಡೆಗಣ್ಗಳಿಂ ಮೊಗಮನೆಳವಿ ಬಿಂಬಾಧರಮಂ ಬಾಯಿಂದಮಡಿಸಿ ಪಿಡಿದಾಗಳ್ –

ಪೆರ್ಮೊಲೆ ಕಾಯ್ದ ಕರ್ಬೊನದ ಬಟ್ಟುವೊಲಾಯ್ತುಱೆಪಾವಿನಂತೆವೊಲ್
ಸೋರ್ಮುಡಿಯಾಯ್ತು
ಕಣ್ಣ ಕಡೆ ಕೇಸುರಿಗೊಂಡವೊಲಾಯ್ತು ಕಂಡು ಪಾ
ಯ್ದೊರ್ಮೊದಲಪ್ಪಿದಾ
ಖಚರಿ ಕಾಸಿದ ಲೋಹದ ಬೊಂಬೆಯಿಂದೆ ಮು
ನ್ನೂರ್ಮಡಿಯಾದಳೇನೆಸೆವ
ಶೌಚದ ಪೆಂಪೊ ಗುಣಾವಲೋಕನಾ        ೧೦೬

ಅಂತಪ್ಪಿದಂತಪ್ಪಿಸಿಯಳಂ ಪಚ್ಚಪಸಿಯ ಪುಸಿಯ ನುಡಿಗಳಿನೊಡಂಬಡಿಸಿ ಬಿಡಿಸಿ ಕೊರಲಂ ಪತ್ತಿದ ಕಾಲಪಾಶಮುಮಂ ಬಿಡಿಸಿದಂತಾಗಿ ತಾಗಿದಂತೆ ಪೆಱಮೆಟ್ಟಿಪಾಣ್ಪರ ಮಲ್ಲನಿಂತೆಂದಂ –

ಪುರುಷವ್ರತಕ್ಕೆ ಭಂಗಂ
ಪರವಧುವಂ
ನೋಡಿದಂದುಮಳಿಪಿಂ ಪರಸುಂ
ದರಿ
ನೇನೆಂಬುದನೀ ಕಾ
ತರತೆಯೆ
ಪೇೞ್ದಪುದು ಪಿಂಗು ಪಾತಕಿ ಬೇಗಂ ೧೦೭

ನೀನಾಳ್ವುದು ನೆರೆಯದೆ ನಾ
ರೀ
ನರಕಾರ್ಣವದೊಳಕ್ಕಟ ಕಟೀಭರದಿಂ
ದೀ
ನಿಬಿಡಸ್ತನಭರದಿನಿ
ದೇನೆನ್ನುಮನೞ್ದಲರ್ವನಿಂ
ಮನಸಂದೌ       ೧೦೮

ಬಟ್ಟ ಮೊಲೆಯಂತೆ ಕೊರಲೊಳ್
ಕಟ್ಟಿಕ್ಕಲ್
ನರಕಕೂಪದೊಳ್ ಮುೞುಗಲೊಡಂ
ಬಟ್ಟೊಡನೆ
ಸಗ್ಗವೇಱುವ
ಬೆಟ್ಟಲ್ಲವೆಯೊಲ್ಲದಿರ್ದೊಡನ್ಯಾಂಗನೆಯಂ
     ೧೦೯

ಬಿಸಮೇಂ ಸವಿಯಲ್ಲವೆ ಸೇ
ವಿಸುವಾಗಳ್
ಮೊದಲೊಳನಿತೆ ಪರಪುರಷಸ್ತ್ರೀ
ವ್ಯಸನಂ
ಸೀಯೆನೆ ಬೞಿಕು
ಬ್ಬಸಮಕ್ಕುಂ
ನರಕದುಃಖಮಂ ತಿಂಬಾಗಳ್  ೧೧೦

ಎಮೆಯಿಕ್ಕುವನಿತೆವರಮ
ನ್ಯಮಾನಿನೀಸುರತಸುಖಮದರ್ಕೆ
ದುರಾತ್ಮರ್
ನಮೆದಹಹ
ಸುದುಸ್ಸಹದುಃ
ಖಮನುಣ್ಬರ್
ನರಕಬಿಲದೊಳಾಚಂದ್ರಾರ್ಕಂ ೧೧೧

ಎಂದು ಬೆಟ್ಟವೆಟ್ಟಿನ ಬೆಟ್ಟಿತ್ತಾಗಿ ನುಡಿದ ಮಾನವಮದನಂಗೆ ಮದನ ಮಂಜರಿ ಯಿಂತೆಂದಳ್ –

ಶೌಚಗುಣಕ್ಕೆ ನೀಂ ಪೆಱಗೆ ಪಟ್ಟಮೆಯಿಂದ್ರನಹಲ್ಯೆಗೊಲ್ದುದಂ
ಸೂಚಿಸರೆ
ಪೆಱರ್ ಪರಮಧರ್ಮಮೆ ತೀವಿದ ನಿನ್ನ ಕರ್ಣಕೇಂ
ಗೋಚರಮಲ್ಲದೇ
ಶುಚಿಯಛಾಯೆಗೆ ಕೂರ್ತುದು ಕೂಡ ನೀಂ ನಿರಾ
ಲೋಚನೆ
ಪಾಪಕರ್ಮ ನಿನಗೋಸುಗಮಾಂ ಸಯೆ ದೋಷಮಲ್ಲದೇ       ೧೧೨

ಸ್ಮರನುಮನೊರ್ಮೆಗೆ ಬೆರಸಲೆ
ಬರೆ
ಮೊಱೆಯಲ್ತೆಂಬೆನವಳೆ ನಾಣೞಿದಳಿಪಿಂ
ಬರೆಯುಂ
ಧರ್ಮಸ್ರವಣ
ಸಿರಿ
ಬರೆ ಮೊೞಕಾಲನಾಂಪನಾವನೊ ಗಾಂಪಂ       ೧೧೩

ಪುದಿದ ಗುಣಮೆಂಬುದಂ
ಗ್ಗದ
ಸುಖಮಂ ಕೊಳಲೆವೇಡ ಪೆಣ್ಣೊಲವಿಂ ಬಂ
ದುದೆ
ಸಗ್ಗಮಲ್ತೆ ಕಡು ಸೋ
ವದೆ
ತನಗಿಂತೇಕೆ ಕಿತವ ಪಱಿವಱಿಯಪ್ಪೈ   ೧೧೪

ಬಾರದ ಭವಮಂ ಬರ್ಪರ್
ಕೂರಿಸಲಬಲೆಯರನವರೆ
ಕೂರ್ತೆಱಗಿದೊಡಾ
ಭಾರಕ್ಕೆ
ತಲೆಯನೂಱುವ
ರಾರುಂ
ಪುರುಷರನೆ ಪೇೞ್ದು ಪಾತಕರೊಳರೇ ೧೧೫

ಪಾರದರವೆಡೆಯ ಕಡೆಯ ಕು
ನಾರಿಯರಿಂದಾಯ್ತೆ
ಸಕಲಲೋಕಸ್ತುತೆಯಿಂ
ಗೌರಿಯಿನಾಯ್ತದನೀಗಳ್

ಬಾರಿಸಲತಿಜಡರಿದೇಕೆ
ಪೆರ್ಕಳಿಸುವರೋ    ೧೧೬

ಎಂದತಿಸುಗುಣಂ ಚೋರಲಕ್ಷಣಮೆಂಬುತೀಗಡಿನ ಗಂಡರ ನಾಲಗೆಯ ನನ್ನಿಯುಂ ಕಚ್ಚೆಯ ಶೌಚಮುಮಿವೆಲ್ಲ ನಿಲಲಱಿವುದೆ ? ಮಱುಗಿಸದೆ ಕೂಡೆಂದು ಕಾಲ್ವಿಡಿದುಮೆಂತುಂ ನುಡಿದುಮಾಱದೆ ಸಿಗ್ಗಾಗಿ ಕೊಳ್ದಪ್ಪಿದುರಗಕಾಂತೆಯಂತೆ ಕಿಡಿಕಿಡಿವೋಗಿ –

ಫಲಿಯಿಸಿದುದು ಕೆಯ್ಯೊಳ್ ಪರ
ಲಲನಾಪರಿರಂಭಮೊಲ್ಲದಿರ್ದೊಡಮೆನೆ
ಭೂ
ತಲತಿಳಕನನಾ
ಖಗಕುಳ
ಕಲಂಕೆ
ವಿದ್ಯೆಯೊಳೆ ಮಾಡಿದಳ್ ಕುರವಕಮಂ         ೧೧೭

ಅಂತು ಮಾಡಿ, ತಿಂದ ತೇೞಿನಂತೆಯುಂ ಪೊಡೆದ ಸಿಡಿಲಂತೆಯುಮಾ ಮದನಮಂಜರಿ ತಟಿನ್ಮಂಜರಿಯಂತೆ ಕಂಚುಮಿಂಚಾಗಿ ಪೋದಳ್, ಇತ್ತ ಲೀಲಾವತಿ ನಿಜವಲ್ಲಭಂ ಮಲ್ಲಿಕಾ ಮಂಡಪದೊಳಿಲ್ಲದುದಂ ಕಂಡು ತೆಕ್ಕನೆಪೋಗಿ ಜಕ್ಕವಕ್ಕಿಯಂತಿರುಳೆಲ್ಲವೂ ವನಂಗಳೊಳಂ ಲತಾಭವನಂಗಳೊಳಮಱಸಿ ಕಾಣದೆ, ಕಣ್ ನಂದಿ ಬರೆ ಬಸವೞಿದು ಬಿೞ್ದು ತನಗೆ ತನ್ನ ಜೀವಿತೇಶ್ವರ ಜೀವಮೆಂಬುದನಱಿಪುವಂತೆ ಮೂರ್ಛೆವೋಗೆ ಮತ್ತಿದೆತ್ತಣ ಮಿೞ್ತುವಾಯ್ತೆಂದು ನೊಂದು ಸಖೀ ಸಂದೋಹಂ ಬಂದು ತಳಿದ ಚಂದನಶೀತಲ ಸಲಿಲಬಿಂದುಗಳೊಳಂ ಮಂದಾ ನಿಲನಲೆಪದೊಳಂ ಆ ನಳಿನಮುಖಿಯೆಚ್ಚತ್ತು ಕಿಱಿದುಬೇಗಂ ನುಡಿಯಲುಂ ನೀರ್ಗುಡಿಯಲು ಮಾಱದಂತು ಬೞಲ್ದು ಬೞಿಕಮೇೞಲುಂ ಬಾೞಲುಮಾಱದೆ ಕಳಾವತಿಗಿಂತೆದಳ್ –

ಕರೆದು ಹದಕ್ಕೆ ಹಾಲನೆಱೆ ಹಂಸೆಗೆ ಸಾರಿಕೆಯಂ ಸರಾಗದಿಂ
ಪೊರೆ
ಕುಟುಕಿಕ್ಕಿ ಸಂಸ್ಕೃತ ಮನೋದಿಸು ಬಾಳಶುಕಾಳಿಯಂ ನವಾಂ
ಕುರಮನೆ
ಕೊಟ್ಟು ಮೂಗುವಡೆದಂತಿರೆ ಮಾಡು ಸಖೀ ಪಿಕಂಗಳಂ
ಹರಿಣಿಯಿದಿಂದು
ನಾಳೆ ಪೆಱಲಿರ್ದಪುದೀನಿಸು ನೋಡಿ ಬೇಡಿದಂ ೧೧೮

ಪುಗಿಸೆಳಸಂಜೆಯೊಳ್ ಸುಱಿವ ಪಾರಿವಮಂ ಸಖಿ ಗೂಡಿನೊಳ್ ಮಯೂ
ರಿಗೆ
ಲಗತಂಗಳಂ ಕಲಿಸು ಚಂದ್ರಿಕೆಯಿಲ್ಲದೆ ನಿಲ್ಲದೀ ಚಕೋ
ರಿಗೆ
ನಯನಾಂಶುವಂ ಕೆದಱಿದೊಂದನೆ ಬೇಡಿದೆನಕ್ಕ ಜಕ್ಕವ
ಕ್ಕಿಗೆ
ಶಿಶಿರೋಚಾರಮನೆ ಮಾಡಿರುಳಪ್ಪುದುಮಂಬುಜಾನನೇ    ೧೧೯

ಅಱಿಕೆಯ ಕೀರನಾಂ ಪರಸೆ ಪುಟ್ಟಿದುದೀ ಶುಕಶಾಬಮಿಂದು
ಣ್ದೆಱೆದುದು
ಸಂಜೆಯೊಳ್ ನಿವಳಿಸಾದರದಿಂ ಸೊಡರಕ್ಕೆಯಿಟ್ಟು ತೂ
ಪಿಱಿನಡೆಗಲ್ವ
ಕಾಲದೊಳಮೆನ್ನೊಡನಾಡಿದ ರಾಜಹಂಸಿ ಬಂ
ದಱಸಿದೊಡೋಪನೊಳ್
ನೆರೆಯುತಿರ್ದಪಳೆಂಬುದು ನಂಬಿದೆಂ ಸಖೀ    ೧೨೦

ಎಂದು ತೀವಿದ ಕಣ್ಬನಿಯಂ ತೊಡೆಯಲೆಂದು ಮೊಗಂ ಮುರಿದೆಡೆದ ಕೆಯ್ಯ ಮೇಲುದಱ ಸೆಱಂಗಿನಿಂದಮುಂ ಕಣ್ಣನೊತ್ತಿಲೊಳ್ವ ಕೆಳದಿಯರುಮಂ, ಪ್ರಾಣಪರಿತ್ಯಾಗಕ್ಕೆ ಪೂಣಿಸಿ ಪತ್ತೆಸಾರ್ದು ಸುರಿವ ಬಾಷ್ಪಬಿಂದುಗಳಿಂ ಕೋಡೆಱಂಕೆಯ ಮೊದಲುಗಳುಮಂ ಕಂಠದ ತುಪ್ಪುೞುಮಂ ನಾಂದುತ್ತುಮಿರ್ದ ನವವಿಪಂಚಿಯುಮಂ, ಚೂತಪ್ರಿಯನುಮಂ, ಕುಸುಮಕುಂತಳೆಯರುಮಂ ಕಮಳಿನೀಕುಚೆಯು ಮನಿಂತೆಂದಳ್ –

ವಿರಹಿಗೆ ನೋವನಾಗಿಸದಿರಿಂಚರದಿಂ ಪಿಕ ಕೀರ ಶಾರಿಕಾ
ತರುಣಿಗೆ
ಪೊಲ್ಲಕೆಯ್ಯದಿರು ಸಂಪಗೆಯೊಳ್ ಮಱಿದುಂಬಿ ಪಾಯದಿರ್
ನೆರೆದಿರು
ಚಕ್ರವಾಕಿ ನಿಜವಲ್ಲಭನೊಳ್ ಪಡುನೇಸಱಪ್ಪುದುಂ
ಪರಿವೆಳಗೆಂಬ
ನುಣ್ಬಿಸಿಲಿದೆಂಬ ಸುವರ್ಣದ ಕನ್ನೆಮಾಡದೊಳ್   ೧೨೧

ಎಂದು ಮತ್ತಮೆಲ್ಲ ಕೆಳದಿಯರ್ಗಂ ಕೆಯ್ಗಳಂ ಮುಗಿದು –

ನೆನೆವುದು ಕೂಟದಿ ನಿಮ್ಮೊಳ್
ಮನಮಚ್ಚರಮಿಲ್ಲದೊಸೆದು
ಸುಖಮಿರಿಮೆನ್ನೋ
ಪನನಣಮೆ
ಕಾಣದೀ ಹತ
ತನುವಿನೊಳಾಂ
ಪಿಡಿಯಲಾಱಿನೀ ಜೀವನಮಂ        ೧೨೨

ದಿನಪತಿ ಪೋದೊಡೆ ಕಾಣ್ಬಿರೆ
ದಿನಲಕ್ಷ್ಮಿಯನೆನ್ನ
ಮನಮಿದೇಂ ಬೆಟ್ಟಿತೊ
ಲ್ಲನೆ
ಪಿಂಗಿ ಪೋದೊಡಂ ಜೀ
ವನಮಂ
ಬಿಡಲಾಱೆನೊಲ್ಮೆಗಿದು ತೆಗಳಲ್ತೇ   ೧೨೩

ಎಲೆಗಳ ನೀನೆ ಜೀವವೆನಗೆಂಬಿನವಂಗವನಲ್ತೆ ಪೋದನೀ
ಪೊಲೆ
ಪುಸಿಯಂ ವಿಚಾರಿಸಲೆ ಬಂದವನೀಗಳೆ ಬೆಂದ ಜೀವನಂ
ನೆಲಸಿರೆನೋಡಿ
ನಕ್ಕು ಪೊಸವೆಂಡಿರ ಮಾತುಗಳಿನ್ನವೆಂದು ಮೂ
ದಲಿಸಿ
ಬೆಡಂಗಿನಿಂ ಬಿಡದ ಮುನ್ನಮೆ ಬಿಟ್ಟಪೆನೆನ್ನ ಜೀವಮಂ     ೧೨೪

ಓವುವುದಾಂ ಸಲಹಿದ ಹೊ
ಮಾವಂ
ಮಲ್ಲಿಗೆಯನೆನ್ನ ಕೆಳದಿಯರಿರ ಲೀ
ಲಾವತಿಯಿರ್ದಂತಿರೆ

ದ್ಭಾವದಿ
ಮಾಡುವುದವರ್ಕೆ ಮದುವೆಯನೊಲವಿಂ      ೧೨೫

ನಿಮ್ಮತ್ತಂ ನಿರ್ಮಳಿಕೆಯಮರ್ಚಿಂಗಮೀ ವನಮಾಲೆಯ ಪೆರ್ಚಿಂಗಮೊಂದು ಹಿತೋಪದೇಶಮಂ ಪೇೞ್ವೆನೆಂದಿತೆಂದಳ್ –

ತರಳಾಪಾಂಗಪ್ರಹಾರಂ ಕುಚಭರಪರಿಘಾತಂ ಲಸತ್ಪಾದಪಾತಂ
ಸ್ಮರದಗ್ಧಸ್ತ್ರೀಯರಿಂದಂ
ತಿಲಕಕುರವಕಾಶೋಕಭೂಜಂಗಳೊಳ್ ಸುಂ
ದರಮಲ್ತಾದಂದು
ಪೂವಂ ವೊಸನನೆ ಪೊಸೆದಂತಕ್ಕುಮಾದಂಕುರಂ ನೀ
ಕರವೋಕುಂ
ಕೋರಕಂಗಳ್ ಕೊರಗುಗುಮೆನೆ ಕೆಳ್ದಾದಮೌತ್ಸುಕ್ಯದಿಂದಂ ೧೨೬

ಆಗಳಂತೆ ತರುಣತರು ಸಂದೋಹಕ್ಕೆ ದೋಹದ ಕಾಲಮನೀವ ಬೆಸನಂ ಪೂಣ್ದು ಪೋಗಿ ಬಂದ ಸುಂದರಿಯರೊಳಗೆ ಕಳಭಾಷಿಣಿಯಿಂತೆಂದಳ್ –

ತರುಣಿಯರಾರಪ್ಪಿದೊಡಂ
ಗುರುಕುಚಮಿವು
ಗುಜ್ಜುಗೊಂಡುವಲ್ಲದೆ ತಾನಂ
ಕುರಿಸದು
ಬಯಸದೆ ಮಾಣದು
ಕುರವಕಮೊಂದರಸಿ
ನಿನ್ನ ಪರಿರಂಭಣಮಂ   ೧೨೭

ಎಂಬುದುಮಂಬರಚರಿಯದಱ ಬಯಕೆಯಂ ಮುನ್ನಮೆ ತೀರ್ಚಿ ಬೞಿಕ್ಕಮೆನ್ನ ಬಯಕೆಯಂ ತೀರ್ಚುವೆನಂತುಮಲ್ಲದೆ –

ಕುರುವಕಮನಪ್ಪಿ ನೆನೆದೆ
ನ್ನರಸನನಸಕೞಿಯೆ
ಸೊರ್ಕಿ ಸುಖದಿಂ ಬಿಡುವೆಂ
ಹರಣಮನೆಳಲತೆಯಿಂದಂ

ಕೊರಲಂ
ಬಿಗಿದಗಿದು ನೇಲ್ದು ಸಾವವಳಲ್ತೇ   ೧೨೮

ಬೆದಱಿ ವಿಯೋಗದೊಳಿರಲಾ
ಱದೆ
ಕೊರಲೊಳ್ ಸುತ್ತಿ ಬಳ್ಳಿಯಂ ಸತ್ತ ಮಹಾ
ಸುದತಿಯರಂ
ಬೇಟಂ ಕೊಂ
ದುದೆ
ಬಗೆವೊಡೆ ಬಳ್ಳಿ ಕೊಂದುದಲ್ಲದೆ ಪೇೞಿಂ          ೧೨೯

ಎಂದಲ್ಲಿಂದಮೆರ್ದು ಕೆಳದಿಯರ್ವೆರಸು ಕಳಭಾಷಿಣಿಯ ಬೞಿವಿಡಿದು ನಡೆದು ಆಕೆ ತೋಱಿದ ಕುರವಕಮನಾ ಕುರವಕೆ ಕಂಡು ಮನಂಗೊಂಡು –

ಬಿದಿ ನೊನ್ನೊಳ್ ನೆರೆದಿರ್ಪ ಸೈಪನೆನಗಿಂತೀ ಮೆಯ್ಯೊಳಾ ಪಾಪಿ ಮಾ
ಡಿದನಲ್ಲಿಂ
ಮಱುಮೆಯ್ಯೊಳಾದೊಡಮೆಲೇ ಪ್ರಾಣೇಶ ನೀಂ ಪಿಂಗದಿ
ರ್ವುದು
ತಳ್ತೆನ್ನೊಡನೆಂದು ಮಾಡಿ ಮರನಂ ಕಂದರ್ಪನಂ ಕಾಂತ ಭಾ
ವದಿನೊಲ್ದಪ್ಪಿದೊಡಾದುದಾ
ಕುರವಕಂ ಸೌಂದರ್ಯಸಂಕ್ರಂದನಂ        ೧೩೦

ಪುಲಕಾಂಕುರಮೊಗೆತರೆ ಕೋ
ಮಲೆಯಪ್ಪಿದ
ಕಾಂತುಕುರವಕಂ ಕಣ್ದೆಱೆದಾ
ಕುಲಟೆಯೆ
ತಳ್ತಳೆಗೆತ್ತು
ಮ್ಮಳಿಸಿದನಿಂತಪ್ಪ
ಪಾಪಭೀರುಗಳೊಳರೇ   ೧೩೧

ಅಂತುಮ್ಮಳಿಸಿ ಪಿಂಮೆಟ್ಟಿನೋಡಿ ನಿಜವಲ್ಲಭಯೆಂದಱಿದು ನಿಲಲಾಱದೆ –

ಬೆದಱಿ ಮದೀಯಮಾನಸಮೊಡಂಬಡದಿರ್ದೊಡಮನ್ಯನಾರಿಯ
ಪ್ಪಿದ
ಪೊಲೆ ಪೋಪಿನಂ ಪುದಿದು ಶುದ್ಧನೆನಿಪ್ಪಿನಮೋಘಮೆಂದು ಕಾ
ಸಿದ
ಪೊಸ ಪೊನ್ನ ಪುತ್ರಿಕೆಯನಪ್ಪಿದವೊಲ್ ಪದೆಪಿಂದಮಪ್ಪಿದಂ
ಮದನಮಹಾಗ್ನಿಯಿಂ
ಕರಮೆ ಕಾಯ್ದಮನಃಪ್ರಿಯೆಯಂ ಗುಣಪ್ರಿಯಂ       ೧೩೨

ಅಂತು ಪುಣ್ಯವಂತರ್ಗೆ ಮಣ್ಣಂ ಪಿಡಿದೊಡಂ ಪೊನ್ನಕ್ಕುಮೆಂಬಂತಿರಾ ಚಂದ್ರಮುಖಿ ಮರನನಪ್ಪೆ ಚಂದ್ರೋದಯನಾದುದಂ ಕಂಡು ಚಂದ್ರೋದಯಮಂ ಕಂಡ ಚಕೋರಿಗಳಂತೆ ಚರಿತಾರ್ಥೆಯರಾಗಿ ರಾಗಿಸಿ ರಮಣಿಯಂ ಬೇಱೆವೇಱೆ ತೆಗೆದು ತೞ್ಕೈಸಿ ತೂಪಿಱಿದು ದೇವಿ ಲಕ್ಕದೀವಳಿಗೆಗಾಣು ; ನಿನ್ನೋಲೆ ಕಲ್ಲೋಲೆಯಕ್ಕೆ; ನಿನ್ನ ನೋಂತ ನೋಂಪಿಗಾವುದು ಪಿರದು ಎಂದು ಪರಸಿಯಾ ನಲ್ಲರಂ ತಾಮೆಲ್ಲರುಂ ಮಲ್ಲಿಕಾಮಂಡಪಕ್ಕೊಡಗೊಂಡುಪೋಗಿ ಪಸೆಯಂ ಪಾಸಿ ಕುಳ್ಳಿರಿಸಿ ಸೇಸೆಯನಿಕ್ಕಿ ನಿವಾಳಿಸಿ ನಿಮ್ಮಿರ್ವರುಮೂರ್ವಶೀಪುರೂರವರಂತೆ ಪಾರ್ವತೀಪರಮೇಶ್ವರರಂತಿರಿನ್ನೆಂದುಮಗಲದಿರಿಮೆಂದು ಮಗುಳೆ ಮಗುಳೆ ಪಠಸಿ ಸಖೀಜನಂ ನಿಜನಿವಾಸಂಗಳ್ಗೆ ಪೋಗಿ ತಂತಮ್ಮ ಕಾಂತರೊಡನಾ ಕತೆಯೆ ಕತೆಯಾಗಿ ಕಣ್ಮುಚ್ಚದಿರ್ದರ್ ಅನ್ನೆಗಂ –

ದಿಗ್ನಾಗಪ್ರಹತೋತ್ಪತತ್ಪತಿತಲೀಲಾಕಂದು ಕಂತರಕಾ
ಭಗ್ನಾಂಭೋಜನಭಸ್ಸರೋವರ
ತಟೀನಿಷ್ಕ್ರಾಂತಹಂಸೋಪಮಾ
ಲಗ್ನಂ
ಭಾಸ್ಕರತಸ್ಕರಾಗ್ರಕರದಂಡೋ‌ತ್‌ಕ್ಷಿಪ್ತ ರೋಚಿಃಪಟೀ
ನಗ್ನಂ
ನೀಗಿದಳುತ್ಪಳಿನ್ಯನಿಮಿಷೇಕ್ಷಾನಂದಮಂ ಚಂದ್ರಮಂ     ೧೩೩

ವಿಗತಾಂಶು ನಿಕರವಸನಂ
ಪ್ರಗಲ್ಭನಿಷ್ಪ್ರಕಟ
ಕರನುರೋನೀರಮಲ
ಪ್ರಗುಣನುಪಶಾಂತಕಾಯಂ

ದಿಗಂಬರಂಗುಪಮೆಯಾದನಂದಮೃತಕರಂ
  ೧೩೪

ಅಲ್ಲಿಂಬೞಿಯಂ –

ಮಿತ್ರಂ ಪ್ರತಾಪಹಿತಚ
ರಿತ್ರಂ
ವರಪರ್ಣಿ ಬರುತುಮಿರೆ ಘನಪಥನ
ಕ್ಷತ್ರಪ್ರಸೂನಮಂ
ದ್ರುತ
ಪತ್ರಂಗಳಿನರುಣನುಡುಗಿದಂ
ತಕ್ಕ್ಷಣದೊಳ್  ೧೩೫

ಮತ್ತಮಿನಿಸಾನುಂ ಬೇಗದಿಂ –

ಅಂಬುಧಿವೇಷ್ಟಿತಾವನಿಗೆ ಲಕ್ಷ್ಮಣದೇವನೆ ದೇವನೆಂದು ರಾ
ಜಾಂಬಿಕೆಯಪ್ಪ
ಪುಣ್ಯಸತಿ ಚಂದಲದೇವಿಯೆ ರಾಣಿಯೆಂದು ಸೇ
ವ್ಯಂ
ಬುಧನೇಮಿಚಂದ್ರನೆ ಕವೀಶ್ವರನೆಂದಿಳೆಗಿಂದ್ರನೆಂದು ದಿ
ವ್ಯಂಬಿಡಿವಂತೆ
ಮೂಡಿದುದು ಮೂಡಣ ದಿಕ್ಕಿನೊಳರ್ಪಮಂಡಲಂ         ೧೩೬

ಆ ಪ್ರಸ್ತಾವದೊಳ್ –

ರಸೆಯಂ ಪೊತ್ತಿರ್ದ ನಾಗೇಂದ್ರನ ಪೆಡೆವಣಿಯಂ ಪೊಯ್ಯೆ ಪೊಯ್ಯುತ್ತುಮೆಂಟುಂ
ದೆಸೆಯೊಳ್
ನಿಂದಿರ್ದ ನಾಗಂಗಳ ಕಿವಿಕಿವಿಯೊಳ್ ತಾಗೆ ತಾಗುತ್ತುಮಂದಾ
ಗಸದೊಳ್
ಬರ್ಪರ್ಕನಶ್ವಂಗಳ ತಲೆತಲೆಯಂ ಮೋದೆ ಮೋದುತ್ತದೊಂದಾ
ರಸಿತಂ
ತೞ್ಕೈತಾಕಸ್ಮಿಕಮೆ ಸಕಳಮಂ ಭೂರಿಭೇರೀ ಪ್ರಸೂತಂ          ೧೩೭

ಅದಂ ಕೇಳ್ದು ಲೀಲಾವತಿಯ ಕೆಳದಿಯರೆಲ್ಲಂ ವಿಸ್ಮಯಮುಂ ಚಪಲತೆಯುಂ ಸ್ತ್ರೀಸ್ವಭಾವಮಪ್ಪುದಱಿಂ ಕೂರ್ತು ತಳ್ತ ಕಾದಲನೀಡಾಡಿ ಮುಡಿಯನೊಂದು ಕೆಯ್ಯಿಂ ಪಿಡಿದು ಪರಿದು ಪೂಮರಂಗಳುಮಂ ತಳಿರ ಕಾವಣಂಗಳುಮಂ ಲತೆಯ ಮನೆಗಳು ಮನಡರ್ದೇಱಿ ತಳತಳನೆ ಪೊಳೆದು ಪಳಂಚಿ ಕಣ್ಣೊಳುಳ್ಕುವೆಳವಿಸಿಲ್ಗೆ ಕೆಂದಳಿರ್ಗಳುಮಂ ಕೆಂದಳಂಗಳುಮಂ ಮಱೆಮಾಡಿ ನೋಡುವಾಗಳ್ ಮಲ್ಲಿಕಾ ಮಂಡಪಮನೇಱಿ ನೋಡುವ ಲೀಲಾವತಿಗೆ ಕಳಾವತಿಯಿಂತೆಂದಳ್ –

ಮುಗಿಲಂ ಮುಟ್ಟಿತ್ತಿದೇಂ ಸಿಂದುರದ ನೊರೆಯ ಕೆಂದೂಳಿ ಕೆಂದೂಳಿಯೊಳ್ ಕೆ
ಮ್ಮುಗಿಲೊಳ್
ತೋರ್ಪಿಂದುಲೇಖೋತ್ಕರಮೆನೆ ಕರಿದಂತಂಗಳಾ ತೋರ್ಪುವಾ ದಂ
ತಿಗಳೆಂಬಭ್ರಂಗಳೊಳ್
ಮಿಂಚಿದಪುವರರೆ ಬಾಳ್ಮಿಂಚುಗಳ್ ಬಾಳಮಿಂಚಂ
ನಗುವಂತಿರ್ದಪುದಾಶಾಮುಖಮುಖಿಳಮುದಗ್ರಾಶ್ವಹೇಷಾವಕೀರ್ಣಂ
     ೧೩೮

ಬಳೆದ ರಜಃಪಟಳಂ ಬಾ
ಳ್ವೆಳಗುಗಳೊಳ್
ಬೆರಸಿ ತೀವಿದಂಬರದೊಳ್
ಣ್ಗೊಳಿಸಿದಪುದದೆ
ಕಲಂಕಿದ
ಕೊಳದೊಳಗಲರ್ದಬ್ಜಷಂಡಮೆನೆ
ಕೊಡೆದುಱುಗಲ್     ೧೩೯

ಎಂದು ಮತ್ತಂ ಕುಸುಮಪುರದತ್ತ ಸುಟ್ಟಿಸಿ ತೋಱಿ –

ತರುಣೀಸಂದೋಹಮಾಯೇಱಿದಪುದು ಗೃಹಸೌಧಂಗಳಂ ಪೌರರಾ ನೋ
ೞ್ಪರೆ
ವಪ್ರಾರೂಢರಾ ಕಟ್ಟಿದಪರೆ ಗುಡಿಯಂ ತೋರಣಸ್ತಂಭಮಂ ಭೋ
ರ್ಗರೆದೀಗಳ್
ಬೇಗಮಾಯೆತ್ತಿದಪರೆ ಪಱೆಯಂ ಕೇಳಿಮಾ ಪೊಯ್ವರಾ ಗೋ
ಪುರದಿಂ
ತತ್ಸೈನ್ಯಮಾ ಪೊಕ್ಕಪುದೆ ನಗರಮಂ ನಾಮಿತೋದ್ಯತ್ಪತಾಕಂ  ೧೪೦

ಅಂತಾಗಳ್ ನಮ್ಮ ಪುರಮುಮೊಳಗಾಗಿ ಕೆಂದೊಳಿಯಿಂ ಕಾಣಲ್ಬಾರದೆಂದು ಪೇೞುತ್ತುಮಾಕೆ ವನದ್ವಾರದೇಶದತ್ತ ದೃಷ್ಟಿಯಾಗಿ –

ಮತ್ತಿತ್ತ ನೋಡು ಪೀಲಿಯ
ಸತ್ತಿಗೆಯುಂ
ನಡೆಯಪತ್ತಿಯುಂ ಚಮರಮುಮೊಂ
ದಿತ್ತಲ್
ಬಂದಪುದೀಕೆ ನೃ
ಪೋತ್ತಂಸನ
ಚಮರದಾಕೆಯಾಗಲೆವೇೞ್ಕುಂ  ೧೪೧

ಎಂದಾಕೆ ಪೇೞುತ್ತೆ ಮಲ್ಲಿಕಾಮಂಡಪದಿಂ ಲೀಲಾವತಿಯನಿೞಿಪುವನ್ನೆಗಂ ಶೃಂಗಾರಶೇಖರನ ಚಾಮರಗ್ರಾಹಿಣಿ ಚಿತ್ರಲತಿಕೆಯೆಂಬಳ್ ಬಂದು ವೇಸರಿಯಿಂದಮಿೞಿದು ಬಲದ ಮುಯ್ವಿನೊಳ್ ಸಾರ್ಚಿದ ಚಾಮರಂ ಬೆನ್ನೊಳಲೆಯೆ ಕ್ಷಿತಿತಲನಿಹಿತ ಲಲಾಟಲೇಖೆಯಾಗಿ ರಾಗದಿಂ ರಾಜಪುತ್ರಿಗೆ ಪೊಡೆಮಟ್ಟೆಂದಳ್ ದೇವಿ! ನಿಮ್ಮ ಜನಕನಜ್ಜಪಜ್ಜರೊಳಮಾಗದ ಪಿರಿಯ ಸಿರಿಯ ಪೆಂಪಿನೊಳ್ಸೈಪಂ ಪೇೞ್ವೊಡೆ –

ಪರಿತಂದೊರ್ವನಪೂರ್ವರಾಜಪುರುಷಂ ರಾಜೀವಪತ್ರಾಕ್ಷಿನ
ಮ್ಮರಸಂಗಾನತನಾಗಿ
ಬಿನ್ನವಿಸಿದಂ ಕೇಳಿಂದದೇನೆಂಬ ಚಾ
ರರನಾರೈದಱಿದಿಲ್ಲ
ತನ್ನ ತನಯಂ ಕಂದರ್ಪನಿರ್ದಂದಮಂ
ಭರದಿಂದೀ
ಬರುತಿರ್ದಪಂ ಖಗಪತೀ ಚೂಡಾಮಣಿಕ್ಷೋಣಿಪಂ   ೧೪೨

ಎಂದು ರಾಜಪುತ್ರಂಗೆ ಪಸಾಯನಮನಿತ್ತು ತಾಂ ತಮಾಳಿಕೆಯಿಂ ವಿದಿತ ವೃತ್ತಾಂನಪ್ಪುದಱಿಂ ಸಂತಸದಂತನೆಯ್ದಿ ಸಮಸ್ತಸಾಮಗ್ರಿವೆರಸಿದಿರ್ವೋಗಿ ತಂದು ರಾಜಮಂದಿರಮಂ ಪುಗಿಸಿ ಚೂಡಾಮಣಿಯಂ ಸಿಂಹಾಸನಾಚಳಚೂಡಾಮಣಿಮಾಡಿ, ನಿಮ್ಮತ್ತೆಯಪ್ಪ ಪದ್ಮಾವತಿಯಂ ವಿಭೃಮಲೇಖೆಯಿನಿದಿರ್ಗೊಳಿಸಿ, ಬೞಿಯಂ ಕಣ್ಣ ಸನ್ನೆಯಿನೆನ್ನಂ ಕರೆದು,ಕ ಕಿವಿಯಂ ಪರ್ಚಿ, ಪೋಗು ನೀಬೇಗಂ ಕಂದರ್ಪದೇವನುಮಂ ಲೀಲಾವತಿಯುಮನೊಡಗೊಂಡು ಬಾ ಎಂದು ಕಳಿಪಿದಳೆಂದು ಪೇೞ್ವನಿತರ್ಕೆ ಪೆಱಗೆ ಪಣ್ಣಿ ಬಂದ ಪಿಡಿಗಳುಮಂ ಕಟ್ಟಿ ಬಂದ ಕುದುರೆಗಳುಮಂ ಕಂಡು ಮನಂಗೊಂಡು, ಲೀಲಾವತೀದೇವಿ ಭೇರೀರವಾನುಮತೆ ನಿಜನತಾಗಮನನುಂ ಲಜ್ಜಾನುರಾಗರಸ ಮಗ್ನನುಮಾಗಿರ್ದ ಕಂದರ್ಪದೇವನುಂ ತಾನುಮೊಂದು ಪಿಡಿಯನೇಱಿ ಮೆಱವುಮಱಿಕೆಯ ಪಿಡಿಗಳುಮಂ ಕೆಳದಿಯರೆಲ್ಲರುಮೇಱಿ ಬರೆಯತಿವಿಳಾಸದಿಂ ಪುರಮಂ ರಾಜಮಂದಿರಮಂ ಪೊಕ್ಕು ಮಾವಂಗಮೈಯಂಗಂ ಪತಿವೆರಸು ಪೊಡೆಮಟ್ಟು ಪೆಂಡವಾಸಕ್ಕೆ ಪೋಗಿ ತಮ್ಮತ್ತೆಗಮಬ್ಬೆಗಂ ವಿನಮಿತಮಸ್ತಕೆಯಾಗಿ ಪರಕೆಗಳನಾಂತು ಸಂತಸದಿನಿರ್ಪುದುಂ; ಆ ದೆವಸಂ ಚೂಡಾಮಣಿಮಹಾರಾಜಂಗೆ ಶೃಂಗಾರಶೇಖರಂ ಸಮಸ್ತಸತ್ಕಾರಮಂ ಮಾಡಿ, ಮತ್ತಂ ಕೆಲವಾನುಂ ದಿವಸಮಿರಿಸಿ ವಿವಿಧ ವಿನೋದಂಗಳಂ ತೋಱಿ, ಮತ್ತೊಂದು ಶುಭವಾಸರದೊಳ್ ಮಗಳ್ಗಮಳಿಯಂಗಂ ಬೊಳ್ಗೊಡೆಯುಂ ಸಿಂಹಾಸನಮುೞಿಯೆ ಸಮಸ್ತವಸ್ತುವಾಹನಂಗಳುಮಂ ಕಲಾವತಿಯುಂ ತಮಾಲಿಕೆಯುಂ ಮೊದಲಾಗಿ ಸಕಲ ಪರಿಜನಂಗಳುಮಂ ಬೞಿವೞಿಗೊಟ್ಟು ಕಳಪೆ ; ಕತಿಪಯಣಪ್ರಯಾಣಂಗಳಿಂದೆಯ್ದುವನ್ನೆಗಂ ಮುನ್ನಮೆ ಮುಂ ಪೋದ ನಿಜಜನಕಂ ಪುರಶ್ರೀಯಂ ಸಕಲಶೋಭೆಯಿಂ ಪಸದನಂಗೊಳಿಸಿ –

ತರುಣೀಸಂದೋಹವೆತ್ತಂ ಬರೆ ಕರಿಣಿಗಳಂ ತೀವಿ ತಳ್ತೇಱಿ ಪೊನ್ನಾ
ವರೆ
ಪೂತಂತಾರ್ಯನಿಂ ತಾಂ ಪೆಱಗೆಡಗಡೆಯೊಳ್ ನಲ್ಲಳಿಂಬಾಗೆ ಕುಂಭೀ
ಶ್ವರಪೃಷ್ಠಪ್ರೋಲ್ಲಸತ್ಪುಷ್ಪಕಮನೊಲವಿನಿಂದರೇಱಿ
ಪೊಕ್ಕಂ ಜಯಂತೀ
ಪುರಮಂ
ಪೌರಾಂಗನಾದೃಕ್ಕುಮುದವನಲಸಚ್ಚಂದ್ರ ಕಂದರ್ಪದೇವಂ     ೧೪೩

ಅಂತು ಬಂದು ಪೊಕ್ಕು ನಿಜಯುವರಾಜಮಂದಿರದೊಳ್ –

ನಿಖಿಳಕ್ಷೋಣೀತಳಂ ತೋಳ್ವಲದೊಳಿರೆ ಕರಂ ತಳ್ತು ತನ್ನಂಘ್ರಿಚಂಚ
ನ್ನಖನಕ್ಷತ್ರಾಂಶು
ಭೂಭೃನ್ಮಕುಟದೊಳಿರೆ ಲೀಲಾವತೀನಿರ್ಮಲಶ್ರೀ
ಮುಖದೊಳ್
ನೇತ್ರಂಗಳೆಂದುಂ ತೊಲಗದಿರೆ ಲಸಲ್ಲಾಸ್ಯಸಂಗೀತಸಂಗಂ
ಸುಖಮಿರ್ದಂ
ಭವ್ಯತುಂಗಂ ಸರಸಕೃತಿಕಲಾನರ್ತಕೀನೃತ್ಯರಂಗಂ       ೧೪೪

ಬಗೆಬಗೆಯೊಳ್ ಬರೆಯಿಂ ರಾ
ಗಿಗಳೋದಲ್
ತಕ್ಕ ಕೃತಿಯನೆನೆ ಕೃತಿಕುಳಮೊಂ
ದೆ
ಗಡ ಬರಿಸಕ್ಕೆ ಬರೆದಂ
ಬಗೆದಿದನೇಂ
ನಿಶಿತಮತಿಯೊ ಕೃತಿಕುಲದೀಪಂ        ೧೪೫

ಬಹಳರತ್ನ ರಾಜದ
ಕೂಬಾರಾವೃತಧರಿತ್ರಿಯೀ
ಕೃತಿರತ್ನ
ಕ್ಕೇಬೆಲೆಯೆನಿಸಿದುದೆನೆ
ಕವಿ
ತಾಬಳವಾರಳವು
ಸುಕರಕವಿಶೇಖರನಾ     ೧೪೬

ಲಳಿತಾಲಂಕಾರೆಯಂ ಚಾತುರವಚನೆಯನತ್ಯಾಯತೋತ್ಪ್ರೇಕ್ಷೆಯಂ ಕೋ
ಮಳೆಯಂ
ವೃತ್ತಸ್ತನಾಕ್ರಾಂತೆಯನಖಿಲಕಲಾಪ್ರೌಢೆಯಂ ಕಾಮ ಕೇಳೀ
ಕಳೆಯೊಳ್
ಜಾಣ್ಬೆತ್ತುವಂದೀ ಕೃತಿಯುವತಿಯನಾರ್ ಕಂಡು ಕಣ್ಬೇಟದಿಂ ತಾ
ಮೊಳಗಾಗರ್
ಕೂರ್ತು ಕೇಳ್ದಾರ್ ಬಗೆವುಗೆ ಕಿವಿವೇಟಕ್ಕೆ ಪಕ್ಕಾಗದಿರ್ಪರ್ ೧೪೭

ಮಧುರಂ ಮಾರ್ಗಾಗತಂ ಬಂಧುರಮಮೃತಮಯಂ ಸ್ತುತ್ಯಮತ್ಯಂತಕಾಂತಂ
ಬುಧಸೇವ್ಯಂ
ಶ್ರವ್ಯಮಬ್ಜೋದರಮೃದುಪದಸಂದರ್ಭಮುರ್ವೀಶಚೂಡಾ
ವಿಧೃತಂ
ಮುತ್ಕಾವ್ಯಮಾ ಗಂಗೆಯ ಪೊನಲುವೊಲೆಂದಿಲ್ಲಿ ಶೃಂಗಾರತೃಷ್ಣಾ
ವಿಧುರಂ
ಸಾರಜ್ಞದಿಕ್ಕುಂಜರನಿಕರಮಲಂಪಿಂದಮೋಲಾಡುಗೆಂದುಂ      ೧೪೮

ಅಮೃತಪ್ರಸ್ಯಂದದಿಂ ಜೀವಿಸೆ ಚತುರಚಕೋರೋತ್ಕರಂ ಸೂರಿಚಂಚ
ತ್ಕುಮುದಕ್ಕಿಂಬಾಗೆ
ರಾಗಂ ಖಳಕರಿನಮನಶ್ಚಂದ್ರಕಾಂತಂ ರಸೋದ್ರೇ
ಕಮನಿಂಬಿಂ
ಬೀಱೆ ಬೇಱೊಂದೆಳವೆಳತಿಗೆಯಂ ನೇಮಿಚಂದ್ರಾಸ್ಯಚಂದ್ರೋ
ಪಮಚಂಚದ್ಭಾರತೀಚಂದ್ರಿಕೆ
ಬೆಳಗುಗೆ ಭೂಲೋಕಮಂ ಕೂಡೆ ನಿಚ್ಚಂ     ೧೪೯

ಧರೆಯಂ ರಕ್ಷಿಸುತಿರ್ಕೆ ಲಕ್ಕಬರಿಸಂ ಲಕ್ಷ್ಮೀಧರೋರ್ವೀಶ್ವರಂ
ಸಿರಿಯಂತಾತನ
ತೋಳೊಳಿರ್ಕೆ ಸತತಂ ಶ್ರೀಚಂದ್ರಿಕಾದೇವಿ ಸಾ
ಸಿರಮಂ
ಕಾವ್ಯಮನೊಲ್ದು ಪೇೞ್ಗೆ ಸುಖದಿಂ ಚಂದ್ರೋದಯಂ ಸಪ್ತಸಾ
ಗರಪರ್ಯಂತ
ಧರಿತ್ರಿಯೊಳ್ ನೆಲಸುಗೀ ಕಾವ್ಯಂ ಶುಭಂ ಮಂಗಳಂ      ೧೫೦

ಇದು ವಿದಿತ ಪ್ರಬಂಧ ವನವಿಹಾರಪರಿಣತ ಪರಮಜಿನಚರಣ ರಮ್ಯ ಹೈಮಾಚಲೋಚ್ಚಳಿತ
ನಖಮಯೂಖಮಂದಾಕಿನೀ
ಮಜ್ಜನಾಸಕ್ತ ಸಂತತೋತ್ಸಿಕ್ತದಾನಾಮೋದಮುದಿತ ಬುಧಮಧುಕರ ಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತೀ ಪ್ರಬಂಧದೊಳ್ ನಾಯಿಕಾ ಪುರ ಪ್ರವೇಶವರ್ಣನಂ

ಚತುರ್ದಶಾಶ್ವಾಸಂ

ಸಂಪೂರ್ಣಂ