ಶ್ಲೋಕ || ಶ್ರೀಮತೇ ನೇಮಿನಾಥಾಯ ನಮಃ ಸ್ಯಾದ್ವಾದಸಿಂಧವೇ
ಯಸ್ಮಿನ್ನುದಿತ
ಬೋಧೇಂದೌ ತ್ರೈಲೋಕ್ಯಂ ಲಕ್ಷಣಾಯತೇ

ಶ್ರೀಯಂ ಶ್ವೇತಾತಪತ್ರಂ ಪ್ರಥಿತವಿಭವಮಂ ಚಾಮರಂ ಬೋಧಮ ವಾ
ಕ್ಪೀಯೂಷಂ
ಪೆರ್ಮೆಯಂ ಭಾಸುರ ಸುರ ಪಟಹಂ ಶಕ್ತಿಯಂ ಸಿಂಹಪೀಠಂ
ಸ್ವಾಯತ್ತಂ
ಮಾೞ್ಪಿನಂ ಭಾವಳಯ ವಿಳಸಿತಾಶೋಕ ಮಂದಾರವರ್ಷ
ಚ್ಛಾಯಾಚ್ಛನ್ನಾಂಗನಾದಂ
ತ್ರಿಭುವನ ವಿನುತಂ ನೇಮಿ ರಕ್ಷಿಕ್ಕೆ ನಮ್ಮಂ     ೧

ಲೀಳಾ ಘ್ರಾತೈಕ ಮಲ್ಲೀಮುಕುಳಮೆನಿಸೆ ನಾಸಾಗ್ರದೊಳ್ ಪಾಂಚಜನ್ಯಂ
ವ್ಯಾಳಂ
ಶಯ್ಯಾತಳಂ ಪೂಗಣೆಯ ದೊಣೆ ಧೃತಂ ಕರ್ವುವಿಲ್ಲಾಗೆ ಶಾರ್ಙ್ಗಂ
ಹೇಳಾಕೃಷ್ಟಂ
ಸುಕೃಷ್ಟಂ ಹರಿಮದಹರನಪ್ಪಂತೆ ಕಂದರ್ಪದರ್ಪ
ವ್ಯಾಳೋಳಕ್ರೀಡೆಗಾದಂ
ಕುಡುಗೆಮಗೆ ಮಹೋತ್ಸಾಹಮಂ ನೇಮಿನಾಥಂ

ವಿಮಳಜ್ಞಾನಾಳಿ ನಾಳಂ ಸುಖಮಯ ಮಕರಂದಾರಕರಂ ಮುಕ್ತಪಾಪ
ಭ್ರಮರಂ
ಸಂಸಕ್ತ ಸೂಕ್ಷ್ಮೋಜ್ವಲಗುಣಮವಗಾಹಾವಹಂ ಭದ್ರಮುನ್ನಿ
ದ್ರಮಪಾರಂ
ಪಾವನಪ್ರಸ್ತುತಗತಿ ಭುವನಾಗ್ರಸ್ಥಿತಂ ತೋರ್ಕೆನಿಚ್ಚಂ
ನಮಗಿಂತತ್ಯಂತ
ಲಕ್ಷ್ಮೀಲಲಿತಲಪನಮಂ ಸಿದ್ದನೀರೇಜಷಂಡಂ

ಆಚಾರಂ ನಿಸದಾಗಿ ಸದ್ಗುಣಗಣಂ ಮುಂತಾಗಿ ಮಂತ್ರಕ್ರಿಯಾ
ಳೋಚಂ
ನಿರ್ವ್ಯಭಿಚಾರಮಾಗಿ ಜಿನರಾಜಪ್ರಾಜ್ಯಸಾಮ್ರಾಜ್ಯದೊಳ್
ಸಾಚಿವ್ಯೋಚಿತ
ಭಾಗ್ಯಲಕ್ಷ್ಮಿ ತಮಗೇಕಚ್ಛತ್ರಮಾಯ್ತೆಂದುಮೆಂ
ಬಾಚಾರ್ಯರ್
ನಮಗೀವರಕ್ಕೆ ನಯನಿಕ್ಷೇಪ ಪ್ರಮಾಣಂಗಳಂ   ೪

ಪುಸಿಯಂ ಪೊರ್ದದಿರಾರ್ತಮಂ ಬಿಸುಡು ಸಂಸಾರಕ್ಕೆ ಪೇಸೊಳ್ಪನ
ರ್ಚಿಸು
ನೀಂ ದರ್ಶನಶುದ್ಧನಾಗು ದುರಘವ್ಯೂಹಕ್ಕೆ ಬೋಧಾಸಿಯಂ
ಮಸೆ
ಲೇಸಾಗಿ ದಯಾತರಂಗಿಣಿಯೊಳೋಲಾಡೆಂದುಪಾಧ್ಯಾಯರೋ
ದಿಸಿ
ಕೈಗನ್ನಡಿಯಂದದಿಂ ಬೆಳಗುಗಂದಂದಿಂಗೆ ಮಚ್ಚಿತ್ತಮಂ     ೫

ಶ್ರೋತ್ರಂಗಳ್ ಪರಮಾಗಮಕ್ಕೆ ಮತಿ ಸಮ್ಯಗ್ದರ್ಶನಜ್ಞಾನಚಾ
ರಿತ್ರಂಗಳ್ಗೆ
ದಯಾವಲೋಕನಕೆ ಕಣ್ಗಳ್ ಮಾಱುವೋದಂತೆ ಚಿ
ನ್ಮಾತ್ರಕಂ
ಪರಭಾವದೊಳ್ಪೊರೆಯದಿರ್ಪೇಕಾಂತಶಾಂತಂ ಕ್ಷಮಾ
ಪಾತ್ರಂ
ಸಾಧುಸುಧಾಂಶುವಂಶಮೆಮಗೀಗತ್ಯಂತ ಸಂಶುದ್ಧಿಯಂ         ೬

ಆಯತಿಯಂ ನಿಮಿರ್ಚುವರುಹಂತರ ಕೇವಲಬುದ್ಧಿ ಸಿದ್ಧರಾ
ತ್ಮಾಯತ
ಬೋಧಸಿದ್ಧಿ ವರಸೂರಿಗಳುತ್ತಮವೃತ್ತಿ ಸಂದುಪಾ
ಧ್ಯಾಯರ
ಪಾವನಪ್ರತಿಭೆ ಸಾಧುಗಳಿರ್ದ ವಿಶುದ್ಧದರ್ಶನಾ
ಮ್ನಾಯಮತಿಪ್ರಕರ್ಷಮೆಮಗೀಗೆ
ಸಮಸ್ತಮತಿ ಪ್ರಕಾಶಮಂ      ೭

ಜವದಿಂ ಪಾಪದ ಪಿಂಡಿನಂತಳಿಕುಳಂ ಬಿಟ್ಟೋಡೆ ಕೊಟ್ಟಗ್ರಪ
ಲ್ಲವಘಾತಕ್ಕೆ
ಸಮಸ್ತಯಕ್ಷತಿಳಕಂ ಸರ್ವಾಹ್ಣನಾರ್ದೇಱಿ ತೋ
ಱುವುದುಂ
ಗಂಧಗಜೋತ್ತಮಂ ತುೞಿದು ಕಿೞ್ತೀಡಾಡುಗಾನಂದಚಂ
ದ್ರವಿರುದ್ಧಸ್ಥಿತಿಯಂ
ವಿಶುದ್ಧಜಿನಧರ್ಮದ್ರೋಹ ಪಂಕೇಜಮಂ     ೮

ನಲುನಗೆಯಂ ಶುಭಂಕರನೊಳಲ್ಲುಗುತುಂ ಕಡೆಗಣ್ಣೊಳೊತ್ತಿ
ಕ್ಕುಲಿಸುತುಮಾ
ಪ್ರಭಾಕರನನೆಯ್ದೆ ಕೊನರ್ತು ತಳಿರ್ತು ಪೂತು ಕಾ
ಯ್ತಲಸದೆ
ಕಲ್ಪಪಾದಪದ ತಣ್ನೆೞಲಲ್ಲಿ ವಸಂತಲಕ್ಷ್ಮಿವೋಲ್
ನೆಲಸಿದ
ಯಕ್ಷಿಯಕ್ಷರೆಮಗೀಗೊಲವಿಂದೆ ದಯಾವಲೋಕಮಂ   ೯

ಸ್ಫುಟವಾದಂ ಪವಣಾಗೆ ಜಾತ್ಯಭಿನಯಂ ಚೆಲ್ವಾಗೆ ಸದ್ದರ್ಶನಂ
ದಿಟಮಾಗುತ್ತಿರೆ
ಕೂಡೆ ಕೋಮಳಪದೋನಪನ್ಯಾಸಮುದ್ದಂಡ ವಾ
ಕ್ಪಟುಗಳ್
ಸೋಲೆ ವಿಭೂಷಣಂ ತೊಳಗೆ ತತ್ಸ್ಯಾದ್ವಾದ ವಿದ್ಯಾನಟೀ
ಲಟಹಂ
ರಂಜಿಸುತಿರ್ಕೆ ತಾರ್ಕಿಕಮುಖಾಂಬೋಜಾತ ರಂಗಾಗ್ರದೊಳ್    ೧೦

ಸಕಲಾಘೌಘ ಪತಂಗ ವಧ್ಯಶಿಲೆಯೊಳ್ ತತ್ಕೇವಲ ಜ್ಞಾನದೀ
ಪಿಕೆಯೊಳ್
ಮಂಗಳಕಾರಣ ಪ್ರಭೆಯೊಳಂತರ್ದ್ಧ್ವಾಂತ ವಿಚ್ಛಿತ್ತಿಗು
ತ್ಸುಕನೆಂ
ಮನಾತ್ಮಪಾತ್ರಗತಮಂ ಸುಸ್ನಿಗ್ಧಮಂ ಚಿತ್ತವ
ರ್ತಿಕೆಯಂ
ಪತ್ತಿಸಿ ರಾಗದಿಂ ಬೆಳಗುವೆಂ ಬೋಧಾಮಲ ಜ್ಯೋತಿಯಂ     ೧೧

ಜೀವನಮಂ ಜಲನಿಧಿಯೊಳ್
ತೀವಿದ
ಮುಗಿಲಂತೆ ಜಿನವಚೋಮೃತಮಂ
ವ್ಯಾವಳಿಗೆ
ಕಱೆವ ಗಣಧರ
ದೇವರ್
ದಯೆಗೆಯ್ಗೆ ನಮಗೆ ಸಕಲಶ್ರುತಮಂ ೧೨

ಇದು ಚೋದ್ಯಂ ಜಿನಸಮಯದ
ಮೊದಲಿಗರೆನಿಸಿರ್ದ
ಗೃಧ್ರಪಿಂಛಾಚಾರ್ಯರ್
ಮುದಮೊದವೆ
ಬರೆದ ತತ್ವಾ
ರ್ಥದ
ಸೂತ್ರದ ವೃತ್ತಿಯಾದುದಱಿವರ್ಗೆಲ್ಲಂ   ೧೩

ಧೈರ್ಯನಿಧಿ ಕೊಂಡಕುಂದಾ
ಚಾರ್ಯರ
ಚರಣಂಗಳೊಲೆದು ನೆಲಮುಟ್ಟದ ತಾ
ತ್ಪರ್ಯಮನಱಿದೆಂ
ನಿಜಸೌ
ಕರ್ಯಮದೆಂದಿರ್ಪುದೆನ್ನ
ಮನದೊಳ್ ಸತತಂ         ೧೪

ಜಿನರ ಪುರಾಣಂಗಳೊಳೊಂ
ದನೆ
ಬರೆದೊಡೆ ಬರೆದೆವೆಂಬರೀ ಭುವನಂ ಜೀ
ಯೆನೆ
ಬರೆದಿರಿಸಿದರಿರ್ಪ
ತ್ತುನಾಲ್ಕುಮಂ
ಪೊಗೞ ಸುಕವಿ ಪರಮೇಶ್ವರರಂ       ೧೫

ಸುಕವಿ ಪರಮೇಷ್ಠಿಗಳ ನಾ
ಟಕವೆನಿಸಿದ
ಭುವನವಂದ್ಯವರವಿದ್ಯಾತೀ
ರ್ಥಕರತ್ವ
ಪುಣ್ಯಲಕ್ಷ್ಮಿಗೆ
ಸಕಳಶ್ರುತದೇವಿ
ಯಕ್ಷಿಯಕ್ಷಂ ಬ್ರಹ್ಮಂ         ೧೬

ಕುಂದದಿವರ್ ಪೇೞ್ದೋದಿಂ
ಗೊಂದು
ಮೊಗಂ ನೆಱೆಯದೆಂದು ಬಹುಮುಖನಾದಂ
ಸಂದ
ಪಿತಾಮಹನೆನೆ ಸಲೆ
ಸಂದರ್
ಜಿನಸೇನ ವೀರಸೇನಾಚಾರ್ಯರ್   ೧೭

ನೆಱೆಯಲ್ ಮಹಾಪುರಾಣಮ
ನಱೆವಳವಡೆ
ಪೇೞ್ದ ವದನಮಿರೆ ತಮಗೊಲ್ದಾ
ನೆಱಗೆ
ಗುಣಭದ್ರದೇವರ
ಮಿಱುಪಂಘ್ರಿಗಳಿತ್ತುವೆನಗೆ
ಕವಿತೆಯನಣಕಂ  ೧೮

ಕಲಿಕಾಲದ ಜಿನರಂ
ಮ್ರಲೋಕರಂ
ಪುಷ್ಪದಂತಮಲಧಾರಿಗಳಂ
ಬಲಗೊಂಡು
ಪಾಡಿ ಮಾಡುವೆ
ನಲಘುಗುಣಸ್ತವನ
ಪುಣ್ಯ ಪುಷ್ಪಾಂಜಲಿಯಂ  ೧೯

ಲಪನಂ ಕಾರುಣ್ಯಮಂ ಕನ್ನಡಿಸೆ ಸಹಜಸಂಶುದ್ಧಿಯಂ ಮಾನಸಂ ತಾ
ನುಪದೇಶಂಗೆಯ್ಯೆ
ಸತ್ವಾವಳಿಗಭಯಸುಧಾಸಾರಮಂ ಸೂಸೆ ನೋಟಂ
ತಪಮಾ
ವೈಧವ್ಯ ದೀಕ್ಷಾವಿಧಿಯನೆ ರತಿಗಾರ್ತೀಯೆ ಸಂದಿರ್ದ ಯೋಗೀಂ
ದ್ರಪದಾಂಭೋಜಂಗಳೊಳ್
ರಂಜಿಸುಗೆ ಮಧುರ ಮದ್ವಾಕ್ಯ ಪುಷ್ಪೋಪಹಾರಂ     ೨೦

ಒಳಗಾದಳ್ ಶ್ರುತದೇವಿ ನೇಮಿಗೆ ಗುಣಶ್ರೀ ಮದ್ಗುಣಸ್ತೋತ್ರಮಂ
ಗಳ
ಮಂತ್ರಂಗಳಿನಾಕೆಗೀ ಜಿನಕಥಾನಾಂದೀಮುಖಂ ಮುಖ್ಯಮಂ
ಗಳಮರ್ಹತ್ಪತಿ
ಮಂಗಳಂ ಸಕಳ ಸಿದ್ಧರ್ ಮಂಗಳಂ ಸಾಧುಮಂ
ಗಳಮರ್ಹರ್ನ್ಮುಖಚಂದ್ರಚಂಚದಮೃತಂ
ಧರ್ಮಂ ಮಹಾಮಂಗಳಂ      ೨೧

ಪರಮತಮತ್ತ ಹೈಹಯ ಮುಖಚ್ಯುತೆ ವಿಶ್ರುತ ಜೈನ ಶಾಸನಾ
ಮರ
ಭುವನ ಪ್ರತಿಷ್ಠಿತ ವೃಷಾನುಭವೋಚಿತೆ ವತ್ಸಲತ್ವದಿಂ
ತೊರೆದ
ಕುಚಂಬೊಲೊಪ್ಪುವ ಚತುರ್ವಿಧ ಭಾಷೆಯೊಳಂ ಸರಸ್ವತೀ
ಸುರಭಿ
ನಿರಂತರಂ ಕಱೆಗೆ ಕಾಮಿತಮಂ ಕವಿರಾಜಮಲ್ಲನಾ      ೨೨

ಸಮಿನಿಸೆ ಪಡೆದುವು ಜಿನಮುಖ
ಕಮಲಂಗಳ್
ವರ ಸರಸ್ವತೀ ಸೌರಭಮಂ
ತಮಗೆಱಪ
ನೇಮಿಚಂದ್ರ
ಭ್ರಮರಂಗುೞಿದಂತಿರದನವೇಗಯದಪುದೋ
          ೨೩

ನೇಮಿಗೆ ಸಮಂತಭದ್ರ
ಸ್ವಾಮಿಯ
ಸಮವಿಷಮ ಕವಿತೆಯಕಲಂಕನ ವಿ
ದ್ಯಾಮಹಿಮೆ
ಪೂಜ್ಯಪಾದ
ಸ್ವಾಮಿಯ
ವಾಣೀವಿಲಾಸಮೀಗಬಿಮತಮಂ  ೨೪

ಕವಿಕುಲಪತಿ ನೇಮಿಗೆ
ನ್ನ
ವಾಣಿಯಂ ಕುಡುಗೆ ನೇಮಿನಾಥಂ ತನಗೊ
ಪ್ಪುವ
ತೊಡವಂ ಮಾಡಿಸಿದಂ
ಸುವರ್ಣಕಾಱಂಗೆ
ಪೊನ್ನನಿಕ್ಕುವ ತೆಱದಿಂ     ೨೫

ರುಚಿರಕಲಾಧರನಿಂ ನೇ
ಮಿಚಂದ್ರನಿಂ
ಸತ್ಕವೀಶಚೂಡಾಮಣಿಯಿಂ
ಶುಚಿಪದ
ಶಶಿಕಾಂತೋಪಲ
ನಿಚಯಂ
ರಸಮೊಸರುತಿರ್ಪುದೇನಚ್ಚರಿಯೋ ೨೬

ಕೇವಣಿಪನೆ ಜೈನ
ಥಾಕಾರ
ಪರಾರ್ಥ್ಯರತ್ನಮಂ ನೇಮಿವಚಃ
ಶ್ರೀಕಟಕಂ
ರತ್ನತ್ರಯ
ದೈಕಟಕಂ
ಕಾಂತಶಬ್ದರುಚಿ ಕಾಂಚನದೊಳ್  ೨೭

ರಸಮೊ ರಸಾಯನಮೋ ಶ್ರುತಿ
ವಸಂತಮೋ
ಕಿವಿಗಳಮೃತಮೋ ನೇಮಿಯ ವಾಕ್
ಪ್ರಸರಮದಱೆಸಕದಿಂ
ನಿ
ಪ್ಪೊಸತಾದುದು
ಜಗಕೆ ನೇಮಿನಾಥಪುರಾಣಂ ೨೮

ಪರಿಭಾವಿಸೆ ಪೂರ್ವಾಪರ
ವಿರೋಧಮಿಲ್ಲುದುದೆ
ತಾಂ ಪುರಾಣಮದಂ ಮಾಂ
ಕರಿಸುವೊಡೇನಿೞಿಗಾಱರ

ಪರಪಿದ
ಮಾತುಂ ಪುರಾಣಮಕ್ಕೆಮಗೇನೋ  ೨೯

ಪ್ರಣುತ ಜಿನಚರಿತಮಂ
ಕ್ಷಣಮಿಲ್ಲದೆ
ಕುಕವಿ ಕಬ್ಬದೊಳ್ ಕಟ್ಟಿ ಮಹಾ
ಮಣಿಯಂ
ಕರ್ಬೊನ್ನೊಳೆ ಕೇ
ವಣಿಸಿದ
ತೆಱನಕ್ಕುಮಲ್ಲದಪ್ಪುದೆ ಶುಭದಂ     ೩೦

ಕಡುಕಂಪಂ ಪಿಡಿಕೆಯ್ಸ ಬರ್ಕುಮೆ ಬೞಲ್ದೈತಂದ ತಂಗಾಳಿಯಂ
ಪಿಡಿಯಲ್
ಬರ್ಕುಮೆ ತೃಷ್ಣೆಗೊರ್ಕುಡಿತೆಯಿಂ ಕೊಂಡಚ್ಚವೆಳ್ದಿಂಗಳಂ
ಕುಡಿಯಲ್
ಬರ್ಕುಮೆ ಕೊರ್ವಿತೆಂದು ತರುಣೀಸಂಭೋಗ ಸೌಖ್ಯಂಗಳಂ
ನುಡಿಯಲ್
ಬರ್ಕುಮೆ ಬಾರದಿಂತುಟೆ ವಲಂ ಕಾವ್ಯಾಮೃತಾಸ್ವಾದನಂ    ೩೧

ಕಮಳಕ್ಕಾವಗಮಲ್ತು ಲಕ್ಷ್ಮಿಯಿರವಾಸ್ಯಾಬ್ಜಕ್ಕಮುಂಟಗ್ಗದಿಂ
ಪಮರ್ದಿಂಗೊಚ್ಚತಮಲ್ತು
ಮತ್ತಿವರ ವಾಕ್ಪೀಯೂಷಪೂರಕ್ಕಮುಂ
ಟಮರರ್ಗರ್ಪಿತಮಲ್ತು
ಸೌಖ್ಯಮಿವರೀ ಸಂಸೇವ್ಯ ಕಾವ್ಯಂಗಳಂ
ಸಮಸಂದಾಲಿಸುವರ್ಗಮುಂಟೇನಿಪರೀಗೊಳ್ಪಂ
ಕವೀಂದ್ರೋತ್ತಮರ್     ೩೨

ಕುವಳಯದಲರಂ ಕೌಮುದಿ
ವಿಭವಮಂ ಕಂಡು ಕೊಂಡು ಕೊನೆವಂ ಕವಿಯೋ
ರವಿಯೋ
ರವಿ ಕಾಣದುದಂ
ಕವಿ
ಕಾಣ್ಬನೆನಿಪ್ಪ ವಚನಮೇಂ ತಪ್ಪುಗುಮೇ  ೩೩

ಶ್ರೀಯನೊಲಿಸುವೊಡೆ ತಾಂ ಕವಿ
ನಾಯಕನೆನಿಸುವೊಡೆ
ತನ್ನ ಕೃತಿ ಕಲ್ಪಾಂತ
ಸ್ಥಾಯಿಯೆನಿಸುವೊಡೆ
ಬಲ್ಲರ
ಬಾಯಂ
ಪೊಕ್ಕೋದಿ ಕಲ್ಗೆ ಕವಿ ಸಕಲಮುಮಂ          ೩೪

ಬಗೆಗೊಂಡೋದದೆ ಕೇಳದೆಲ್ಲ ಕಳೆಯಂ ಕಾವ್ಯಜ್ಞರಿಂ ಕಲ್ಲದ
ಚ್ಚಿಗದಿಂ
ಕಟ್ಟಿದ ಕೆಟ್ಟ ಕನ್ನಡದ ಕಾೞ್ಗಬ್ಬಂಗಳುಂ ಬಟ್ಟಸಾ
ಮಿಗಳಂ
ಕೇಳಿಸಿ ತಾಮೆ ತಮ್ಮ ಮನದೊಳ್ ಸರ್ವಜ್ಞರೆಂದಿರ್ಪ
ಬ್ಬಿಗರುಂ
ಕಬ್ಬಿಗರೆಂಬ ಲೆಕ್ಕದೊಳಗೇಂ ಭೂಭೃತ್ಸಭಾಭೂಷಣಂ  ೩೫

ನವರಸಪೂರದೊಳ್ ಲಲಿತಬಿಂಬಿತ ಸರ್ವಪದಾರ್ಥದೊಳ್ ಮಹಾ
ಕವಿಕುಲಸೇವ್ಯದೊಳ್
ಲಸದಳಂಕೃತಿ ಕಂಜನಿವಾಸದೊಳ್ ಜನೋ
ತ್ಸವಕರದೊಳ್
ಸರಸ್ವತಿ ಮನೋಮುದದಿಂ ಜಲಕೇಳಿಯಾಡುವಳ್
ಪ್ರವಿಮಳ
ನವ್ಯಕಾವ್ಯ ಕಮಳಾಕರದೊಳ್ ಕವಿರಾಜಮಲ್ಲನಾ    ೩೬

ಧರೆ ಲೇಸೆಂಬಾಸೆಗಾಱಂ ಪರಪುರುಷಗುಣಾನ್ವೇಷದೊಳ್ ಸೈಪುಗಾಱಂ
ಸಿರಿಯೊಳ್
ಕಟ್ಟಣ್ಮು ಕಾಱಂ ವಿತತ ವಿತರಣೋತ್ಸಾಹದೊಳ್ ಗೆಲ್ಲಕಾಱಂ
ಪರವಾದಿವ್ರಾತದೊಳ್
ಬಿತ್ತರಿಪ ತುರಿಪಕಾಱಂ ಮಹಾಧರ್ಮದೊಳ್
ಚ್ಚರಕಾಱಂ
ಭಾವಕೋತ್ಪಾದಕ ರಸಿಕಕವಿಸ್ತೋಮದೊಳ್ ನೇಮಿಚಂದ್ರಂ  ೩೭

ಜಗಕೆ ಜೀನೇಂದ್ರರುಕ್ತಿಯೆ ಸರಸ್ವತಿಯಾಕೆಗೆ ರಮ್ಯರೂಪು ಚಿ
ತ್ತಗುಣ
ವಿಳಾಸಮಿಲ್ಲೆನಲೆವೇಡಿವನುತ್ತಮ ಕಾವ್ಯದೊಳ್ ಮೊಗಂ
ನಗೆಮೊಗವಿಲ್ಲಳಂಕೃತಿಯಳಂಕೃತಿ
ಭಾವಗತಂ ರಸಂ ರಸಂ
ಬಗೆ
ಬಗೆ ಮಾತು ಮಾತು ಸತಿ ಭಾರತಿ ಕೊಳ್ಗೆ ವಿದೇಶಿಕಾಱನೊಳ್        ೩೮

ಚರಿತಪುರಾಣದೊಳ್ಮಣಿಗಳಂ ಸರವೇಱಿಪವೋಲ್ ಭವಾವಳೀ
ಸ್ಮರಣಕಥಾ
ಭವಂಗಳನದಾರ್ ಬರೆವರ್ ಸರವೇಱಿಪಂದದಿಂ
ಸರಿಗಳನೀ
ಮಹಾಕಥೆಗಳಂ ಪ್ರಥಿತಂಗಳನೊಂದೆ ಕಾವ್ಯದೊಳ್
ಬರೆದನಿದೇಂ
ಸಮಗ್ರನೊ ಕವೀಶ್ವರರೊಳ್ ಕವಿರಾಜಕುಂಜರಂ  ೩೯

ಎಂದೆಂದು ಪರಸೆ ಗುರುಜನ
ಮೊಂದೊಂದನೆ
ಪೊಗೞೆ ಬುಧಜನಂ ಜನಿಕಥೆಯೊಳ್
ಸಂದಿಸಿ
ವಸುದೇವಾಚ್ಯುತ
ಕಂದರ್ಪರ
ಕಥೆಗಳನಿತುಮಂ ವಿರಚಿಸುವೆಂ  ೪೦

ರಸವತ್ಕೃತಿಯೊಳಹಂ
ಕಾರ
ಜರಾಸಂಧ ಕಾಲನೇಮಿಕುಮಾರರ್
ಶ್ರೀರಮಣರ್
ಧೀರರ್ ಧೃತ
ವೀರಲಲಿತ
ವೀರಶಾಂತ ಧೀರೋದಾತ್ತರ್    ೪೧

ಒಡವುಟ್ಟಿದ ಕೌಸ್ತುಭಮಣಿ
ಯೊಡನಿರಲಾಗೆಂದು
ಬಿಟ್ಟು ವಿಷ್ಣುವಿನುರಮಂ
ಬಿಡುವೆಸರ್ಗೆ
ಪದ್ಮನಾಭನ
ಬೆಡಂಗಿನುರದಲ್ಲಿ
ಲಕ್ಷ್ಮಿ ಸಲೆ ನೆಲಸಿರ್ಪಳ್    ೪೨

ವದನಂ ಚಂದ್ರಪ್ರಭಂ ವಿಕ್ರಮಭುಜಮಜಿತಂ ಪಾಣಿ ಪದ್ಮಪ್ರಭಂ ಸಂ
ಪದೆಮೆಂದುಂ
ವರ್ಧಮಾನಂ ಗುಣತತಿ ವಿಮಳಂ ತನ್ನ ಪೆಂಪೊಂದನಂತಂ
ಹೃದಯಂ
ಸ್ವಾಧೀನಧರ್ಮಂ ಮತಿ ಪುರುಚರಿತಂ ಶೀತಲಂ ಸುವ್ರತಂ ತಾ
ನದಱಿಂ
ಪ್ರತ್ಯಕ್ಷತೀರ್ಥೇಶ್ವರನೆನೆ ನೆಗೞ್ದಂ ಪದ್ಮನಾಭಪ್ರಧಾನಂ          ೪೩

ಪದ್ಮನಾಭದೇವಂ
ಶ್ರೀಪತಿ
ಪುಣ್ಯಪ್ರಭಾವದಿಂ ನೇಮಿಯ ವಿ
ದ್ಯಾಪೃಥುಳಜಲಧಿ
ಭವಕೃತಿ
ರೂಪದ
ಕೌಸ್ತುಭಕೆ ಸುಭಗವಲ್ಲಭನಾದಂ      ೪೪

ಬೆಲೆಯಿಂದಕ್ಕುಮೆ ಕೃತಿ ಗಾ
ವಿಲ
ಭುವನದ ಭಾಗ್ಯದಿಂದಮಕ್ಕುಂ ನೋೞ್ಪಂ
ಬೆಲೆಗೊಟ್ಟು
ತಾರ ಮಧುವಂ
ಮಲಯಾನಿಲನಂ
ಮನೋಜನಂ ಕೌಮುದಿಯಂ       ೪೫

ಕವಿ ಕಾಂಚನಕಣಿಕೆಗೆ ಮಾ
ಱುವನೇಕೆಯೊ
ಮರುಳನಳೆಗೆ ಮಾಣಿಕಮಂ ಮಾ
ಱುವ
ತೆಱದಿನೀ ಚತುರ್ದಶ
ಭುವನಮೆ
ಬೆಲೆಯೆನಿಪ ಕೃತಿಯನಮಳಾಕೃತಿಯಂ     ೪೬

ಎಣಿಸದೆ ಗುಣಮಂ ಕಾಜಿನ
ಮಣಿಯಂ
ಮಾಱುವವೊಲಹಹ ನಿನಗಂ ತನಗಂ
ಪಣಕೆ
ಕೃತಿಯೆಂಬ ಚಿಂತಾ
ಮಣಿಯಂ
ಮಾಱುವನ ಬುದ್ಧಿಗಾಂ ಬೆಱಗಾದೆಂ         ೪೭

ಒಡವೆ ತನಗಪ್ಪೊಡೆಂತಾ
ದೊಡಮಾದಪುದಿನ್ನದರ್ಕೆ
ಕಬ್ಬಂಬೇೞ್ದುಂ
ಜಡಮತಿಗಳ
ಕರ್ಚದ ಕಾ
ಲ್ವಿಡಿಯಲ್ವೇೞ್ಕುಮೆ
ಬುಧಂಗೆ ವಿದ್ವತ್ಸಭೆಯೊಳ್         ೪೮

ನಿಧಿ ದೊರೆಕೊಂಡೊಡಂ ಜರಗುಗಚ್ಚುವರೇ ಮಿಗೆ ಮುಗ್ಧರುಂ ಸುಧಾಂ
ಬುಧಿ
ದೊರೆಕೊಂಡೊಡೇನೊಱವುದೋಡುವರೇ ಸಕಲಾರ್ಥಸಂಭವಾ
ವಧಿ
ಜಿನರಾಜರಾಜಿತ ಕಥಾಕಥನಂ ದೊರೆಕೊಂಡೊಡಂ ಪಣ
ಕ್ಕಧಮರನಣ್ಣ
ಬಣ್ಣಪರೆ ಚಾರುವಿಚಾರಪರರ್ ಕವೀಶ್ವರರ್       ೪೯

ಇದನಱಿದು ನೇಮಿಚಂದ್ರಂ
ವಿದಗ್ಧ
ವಿದ್ಯಾಧರೇಂದ್ರನಖಿಳ ಕಳಾಕೋ
ವಿದನುಚಿತ
ಶಬ್ದ ವಿದ್ಯಾ
ಸದನಂ
ಕವಿಚಕ್ರವರ್ತಿ ಭುವನಾಭರಣಂ      ೫೦

ಸುಕರ ಕವಿಶೇಖರಂ ತಾ
ರ್ಕಿಕತಿಲಕಂ
ಮಾನಮೇರು ಜಿನಶಾಸನ ದೀ
ಪಕನಕಳಂಕಂ
ಭಾವಕ
ಮುಕುರಂ
ಕವಿರಾಜಮಲ್ಲನಪ್ರತಿಮಲ್ಲಂ       ೫೧

ಪರಮಾರ್ಥಂ ನೇಮಿನಾಮಗ್ರಹಣಮೆ ಪರಮೈಶ್ವರ್ಯದಂ ತತ್ತ್ರಿಲೋಕೀ
ಗುರುಪುಣ್ಯಶ್ಲೋಕ
ಸಂಕೀರ್ತನಮೆ ತನಗೆನಿಪ್ಪಾತನೈಶ್ವರ್ಯವಿನ್ನೇ
ವಿರಿದೊ
ಪೇೞೆಂದು ಪಾಪಕ್ಷಯಮನಯಲತಾ ಕಂದಮಂ ಭಕ್ತಿಯಿಂದಂ
ಹರಿವಂಶಕ್ಷತ್ರಚೂಡಾಮಣಿಯ
ಚರಿತಮಂ ಪೇಱಲುದ್ಯುಕ್ತನಾದಂ          ೫೨

ವ|| ಅದೆಂತೆಂದೊಡೆ

ನಿಯತಪ್ರಾಲೇಯ ದೀಪ್ತಿದ್ಯುಮಣಿ ಭಗಣ ದೀಪೋಜ್ಜಳಾಕೃತ್ರಿಮಾತ್ಮೋ
ದಯಮಪ್ಪಾಕಾಶಮೆಂಬಾಗಸವಳಿಕನನಂತೈಕ
ಸಂಶುದ್ಧಸಿದ್ಧಾ
ಲಯದೊಳ್
ಸಾಮರ್ಥ್ಯದಿಂ ಮುಟ್ಟದೆ ನತಭುವನರ್ ಸಿದ್ಧರೇಱಿರ್ದ ಪೀಠ
ತ್ರಯಮೆಂಬಂತಿರ್ಪುದವ್ಯಾಹತ
ಜಿನಪತಿ ಭೋಧಾನಲೋಕಂ ತ್ರಿಲೋಕಂ          ೫೩

ಅಂತೆಸೆದಿರ್ಪುದಧೋಲೋ
ಕಂ
ತಿರ್ಯಗ್ಲೋಕಮೂರ್ಧ್ವಲೋಕಮದವಱೊಳ್
ಕಾಂತಮೆನಿಸುವುದು
ನರಲೋ
ಕಂ
ತನುಭೃತ್ಪುಣ್ಯ ಪಾಪ ಸಸ್ಯಕ್ಷೇತ್ರಂ        ೫೪

ವ|| ಆ ಮಧ್ಯಮಲೋಕದ ಮಧ್ಯಪ್ರದೇಶದೊಳ್

ಅಂಬುಧಿಯೊಳುದಿರ್ದು ತೇಂಕುವು
ದುಂಬರ
ಜಂಬುವಿನ ದೋರೆವಣ್ಣವೊಲೆಸಗುಂ
ಜಂಬೂದ್ವೀಪಂ
ಮಂದರ
ಮಂ
ಬಲವರ್ಪರುಣ ಕಿರಣದಿಂ ಕೞ್ತಲೆಯಿಂ   ೫೫

ವ || ಆ ಶರಧಿ ಸರೋವರಕ್ಕಳಂಕಾರಮಾದ ಜಂಬೂದ್ವೀಪಮೆಂಬ ಕಮಲದ ಕರ್ಣಿಕೆಯಂತೆ

ಎನಗುರ್ವೀಧರವೈರಿ ಬಂಧು ಜಯದರ್ ದೇವರ್ಕಳೆನ್ನಲ್ಲಿ ಕಲ್
ಕನಕಂ
ಪಾಱುವ ಪಕ್ಕಿ ಭಾನು ಮರನೆಲ್ಲಂ ಬಂದ ಮಂದಾರಮಾ
ವನಗಂ
ಮತ್ಸಮಮೆಂದು ಬೀಗಿ ಬಳೆದಂತಿರ್ಕು ಜಿನಸ್ನಾನಪಾ
ವನವಾರ್ನಿರ್ಜರ
ನಿರ್ಜರೋಜ್ವಲಮಣಿ ಶ್ರೀಕಂದರಂ ಮಂದರಂ ೫೬

ಅದಱಯೆ ಪೂರ್ವಾಪರದೊಳ್
ವಿದೇಹವೆರಡಿರ್ಪುವವಱೊಳೊಂದದೊಂದಱೊಳಂ

ಪದಿನಾಱು
ನಾಡು ಚಂದ್ರನ
ಪದಿನಾಱುಂ
ಕಳೆವೊಲಖಿಳ ನಿರ್ಜರಸೇವ್ಯಂ  ೫೭

ಪರಭೃತಭೃಂಗ ಕೀರಕಳಹಂಸೆಗಳಲ್ಲದೆ ಕಾ ಘೋಕ ಭೀ
ಕರ
ಖಗಮಿಲ್ಲ ಮೇಲ್ಮರಗಳಲ್ಲದೆ ಕೀೞ್ಮರನಿಲ್ಲ ಹಸ್ತಿ
ತ್ತುರಿ
ಮಿಗಮಲ್ಲದುಗ್ರಮೃಗಮಿಲ್ಲಱಮಲ್ಲದೆ ಪಾಪಮಿಲ್ಲ ಭಾ
ಸುರ
ಜಿನಧರ್ಮಮಲ್ಲದೆ ಕಧರ್ಮದ ವಾರ್ತೆಯುಮಿಲ್ಲ ದೇಶದೊಳ್       ೫೮

ಋತಮೆಸೆದಿರ್ಪ ನಿಸ್ಪೃಹತೆಯಿರ್ಪ ದಯಾಗುಣಮಿರ್ಪ ಶೋಭಮಿ
ರ್ಪತಿಶಯ
ತೋಷಮಿರ್ಪ ಮತವಿರ್ಪೆಡೆಯೊಳ್ ಪುಸಿಯಿರ್ಪ ಚೌರ್ಯಮಿ
ರ್ಪತಿವಧೆಯಿರ್ಪ
ಪಾರದರಮಿರ್ಪ ಪರಿಗ್ರಹಕಾಂಕ್ಷೆಯಿರ್ಪ ಕು
ತ್ಸಿತಮತಮಿರ್ಪುದಲ್ತು
ಬೆಳಗಿರ್ಪೆಡೆಯೊಳ್ ತಮಮೆಂದುಮಿರ್ಪುದೇ      ೫೯

ಅಸದಳಮಾಗಿ ಸಂದ ಜಿನಶಾಸನ ವರ್ತನೆಯಿಂ ಜಿನಾಗಮಂ
ಬೆಸಸಿದ
ಭಂಗಿಯಿಂ ನೆಗೞ್ದ ಶಾಂತಿಕದಿಂ ಸಿರಿ ತುಳ್ಕೆ ಸಂತಸಂ
ಪಸರಿಸೆ
ಕೆಯ್ಯೊಳಂ ಕಳದೊಳಂ ಬೆಳೆದೊಟ್ಟುವ ಧಾನ್ಯವರ್ಗದಿಂ
ಪುಸಿ
ಪುಸಿ ಗೞ್ದಿಯಿೞ್ದಿಗೆ ಬಱಂ ಬಱಕಾದುದು ತನ್ಮಹೀತಳಂ     ೬೦

ವ|| ಆ ವಿದೇಹಂಗಳೊಳಪರ ವಿದೇಹಮೆ ದೇಹಮಾಗೆ

ಮೇದಿನಿ ಬೆಂಗೆ ಬಿಟ್ಟ ಮುಡಿಯಂತೆಸೆದಿರ್ಪುದು ಪುಷ್ಪಿತಂ ತಟೀ
ಪಾದಪವೀಥಿ
ಪಂತಿಗುರುಳಂತಿರೆ ಸಂಚಳ ಮೀನ ಸಂಚಯಂ
ಪೂದುಱುಗಲ್
ತಡಂ ತೊಡರ್ದು ತೋರ್ಪವೊಲೊಪ್ಪಿರೆ ಕೊಂಕುವೆತ್ತ ಸೀ
ತೋದೆ
ಸಡಿಲ್ದುನೀಳ್ದ ಶರದಿಂ ನಿಱೆಗೊಂಡು ಬೞಲ್ದ ಭಂಗಿಯಿಂ  ೬೧

ತೆರೆ ಪಲ್ಲೆನೆ ಪಲ್ಲವತರು
ಪರಿವೃತ
ದರಿಯಧರವೆನೆ ಪರಾಗದ ಕಂಪಂ
ಪರಪುವೆಲರ್
ನಱುಸುಯ್ಯೆನೆ
ಧರಣಿಯ
ಬಾಯ್ದೆಱೆಯ ತೆಱದಿನಾ ತೆಱದಿ ಚೆಲ್ವಿಂ      ೬೨

ವ|| ಆ ತೊಱೆಯ ಬೆಡಂಗುವದೇ ಬಡಗಣ ತೆಂಕಣ ತಡಿಯೊಳ್ ಬಾಂದೊಱೆಯ ತಡಿಯ ಪದಿನಾಱುಂ ಸಗ್ಗಂ ಪದಿನಾಱುಂ ನಾೞ್ಕಳೊಳಗೆ ಬಡಗಣ ತಡಿಯ ವಪ್ರೆ ಮವಪ್ರೆ ಮಹಾವಪ್ಪೆ ಗಂಧೆ ಸುಗಂಧೆ ಗಂಧಿಲೆ ಗಂಧಮಾಳಿನಿಯೆಂಬ ನಾೞ್ಕಳೊಳಗೆ

ತಿಳಿಗೊಳನಬ್ಜಗಂಧಿಯದಱೂರಮೆ ಚಂಪಕಗಂಧಿ ಕಾನನಂ
ಮಳಯಜಗಂಧಿ
ಕೇಳಿನಗಸಾಮ ಮೃಗೋದ್ಭವಗಂಧಿ ಕೆಯ್ವೊಲಂ
ಕಳಮ
ಕದಂಬಗಂಧಿಯೆನೆ ಸಾರಸುಖಾಮರ ಗೇಹಗಂಧಿ ಗಂ
ಧಿಳವಿಸಯಂ
ಸಮಸ್ತವಿಷಯಂಗಳ ವಲ್ಲಭನಪ್ಪುದೊಪ್ಪದೇ       ೬೩

ಮದನಂಗುಪ್ಪರವಟ್ಟವಾಗದ ತಳಿರ್ ಕಾಮಂಗೆ ಕೋದಂಡಮಾ
ಗದ
ಕರ್ವಂಗಭವಂಗೆ ಭಂಗುರ ಧನುರ್ಜ್ಯಾಲೇಖೆ ತಾಗಾನದು
ನ್ಮದ
ಭೃಂಗಾವಳಿ ಚಿತ್ತಜಂಗೆ ಜಗಮಂ ಗೆಲ್ದೀವ ಬಾಣಂಗಳಾ
ಗದ
ಪೂಗಳ್ ಮಱೆದಾಗವೆಂಬ ವಿವಿಧೋದ್ಯಾನಂಗಳಾ ದೇಶದೊಳ್     ೬೪

ಎಳಸುತ್ತಿರ್ಕುಂ ಪಿಕಾಳಾಪೆಯರೆ ಕಳಿಕೆಗೌತ್ಸುಕ್ಯದಿಂದಂ ಶುಕಶ್ಯಾ
ಮಳೆಯರ್
ಮಾಂಗಾಯ್ಗೆ ಭೃಂಗಾಳಿಕೆಯರರಲ್ಗೆ ಚಂಚಚ್ಚಕೋರಾಕ್ಷಿಯರ್ ತಾ
ಮೆಳೆನೀರ್ವೆಳ್ದಿಂಗಳೊಳ್
ಬೆಂಚೆಗೆ ಸಮದ ಮರಾಳಾಂಗನಾಯಾನೆಯರ್ ಪೂ
ಗೊಳಕುದ್ಯಾನಂಗಳೊಳ್
ಬರ್ಹಿಣಕಚಭರೆಯರ್ ಕೇಳಿಮೇಳಕ್ಕೆ ನಿಚ್ಚಂ    ೬೫

ಎಳನೀರಂ ಜಿನಮಜ್ಜನಕೆ ಜಿನಪಾದಾಬ್ಜಕ್ಕೆ ಪೂವಂ ಫಳಾ
ವಳಿಯಂ
ಪೂಜೆಗೆ ತೋರಣಕ್ಕೆ ತಳಿರಂ ತಾಮಿತ್ತು ಪುಣ್ಯಪ್ರಭಾ
ಫಳಮಂ
ಪೇಱಿದ ನಾಡ ನಂದನವನಂ ಸಗ್ಗಕ್ಕೆ ಪೋದಂತೆ
ಣ್ಗೊಳಿಕುಂ
ನಂದಮಲ್ಲದಂದು ಬನಕಂ ಸಗ್ಗಕ್ಕಮೇಂ ಸಂಮದಂ  ೬೬

ವ|| ಎನೆ ಸೊಗಯಿಸುವ ಸುಗಂಧಿಳ ವಿಷಯಕ್ಕೆ ಭೂಷಣಮಾಗಿ

ಮುತ್ತಿನ ತೋರಣಂ ಗಜದ ನೆತ್ತಿಯ ಮುತ್ತುಗಳೆಲ್ಲ ಪಲ್ಗಳೊಳ್
ಪತ್ತಿದ
ಪೋಲ್ವೆಯಂ ಪಡೆವ ಗೋಪುರ ಪಂಚಕಮಾಸ್ಯಮಾಗೆ ಮೈ
ವೆತ್ತಿರೆ
ಪಾಯ್ದು ಕುಂಭಿನಿಯ ಮೇಲೆ ಸುಧಾಧವಳಂ ಪ್ರತಾಪಮಂ
ಪೊತ್ತುದದೊಂದು
ಸಿಂಹಪುರಮೆಂಬ ಪುರಂ ಘನ ಘೋಷಗರ್ಜಿತಂ        ೬೭

ಸುರತದ ಸುಗ್ಗಿ ಕಾಮನ ಸರಲ್ಗಳ ಪೂವಿನ ಪೊೞ್ತು ಮುತ್ತಿನಾ
ಭರಣದ
ಜೊನ್ನಮವ್ವಳಿಪ ನೀಲದ ಕಾಳದ ಮರ್ವು ಬೆಟ್ಟದೊಂ
ದುರಿಗಳ
ಬೆಟ್ಟ ಬೇಸಗೆ ಸುರಾಗರಸಂಗಳ ಕಾರ ಮುಂಬು
ತ್ಪುರವರದಲ್ಲಿ
ಸಾತ್ವಿಕದ ಮೈನಡುಕಂಗಳ ಮಾಗಿಯಾಗಳುಂ   ೬೮

ವ|| ಆ ಪುರದ ಪರಮೇಶ್ವರನ ಪರಮ ಪುರುಷೋತ್ತಮಾವತಾರನವಾರಪಾರ ಗಂಭೀರನಪಾರಪುರಷಾರ್ಥಪ್ರಸೂತ ಶೀತಳನಭಸ್ಥಳ ತಿಳಕ ತುಷಾರಕರ ಶಿಶಿರ ಶರದಭ್ರವಿಭ್ರಮ ದಶದಿಶಾ ಮುಖಮಂಡಲಮಂಡನೀಭೂತ ವಿಶದ ಯಶಃಪ್ರಹಾಸನ ನರ್ಹದ್ದಾಸನೆಂಬೊಂ

ಮದನಂ ರೂಪಿಂಗೆ ದಾಸಂ ಮನೆಗೆ ನೃಪನ ಪುಣ್ಯೋದಯಂ ದಾಸನರ್ಕಂ
ಮದವತ್ತೇಜಕ್ಕೆ
ದಾಸಂ ವಿಧು ವದನ ಯಶಃಶ್ರೀಗೆ ದಾಸಂ ಕೃತಾಂತಂ
ಕದನ
ಕ್ರೋಧಕ್ಕೆ ದಾಸಂ ಗುರುಭುಜಕೆ ಜಯಂ ದಾಸನೆಂದಂದಂದಿನ್ನಾ
ರ್ಪುದೆನರ್ಹದ್ದಾಸ
ಭೂಪಂಗರಸರೆಸಕದಿಂದಾಸೆಯಿಂ ದಾಸರಾದರ್      ೬೯

ಪೂಸಲ್ ಮೆಯ್ಗರ್ಹದಂಘ್ರಿದ್ವಯ ಪರಿಚಯ ಪೂತೋತ್ತಮಂ ದಿವ್ಯಗಂಧಂ
ಸೇಸಿಕ್ಕಲ್
ಗಂಧಶಾಲ್ಯಕ್ಷತ ಶತಮನಿಶಂ ಪುಷ್ಪದಾಮಂ ತುಱುಂಬಲ್
ಸೀಸಕ್ಕಿಂಬಾದುದೆಂಬಂದೆಲೆ
ಕುಲವೞಿಯಿಂ ಬಂದ ದಾಸತ್ವಮರ್ಹ
ದ್ದಾಸಂಗೇನಣ್ಣ
ನಾೞ್ವರ್ತನಮೆ ಸಕಲ ಪೃಥ್ವೀಪತಿಪ್ರಾರ್ಥನೀಯಂ         ೭೦