ಅದಲ್ಲದೆಯುಂ –

ಬರಡಗೆ ಯೇಱಿದಂ ದಸಿಯ ಸೂಲಮನೇಱಿದನೊತ್ತೆಗೊಟ್ಟವಂ
ಕರೆದಭಿಮಾನಮಂ
ಪೆಱರ್ಗೆ ಕೊಟ್ಟವನೞ್ಕೞದುಯ್ದು ರಾಗದಿಂ
ನೆರೆದನೆ
ದೂಳಿಯೊಳ್ನೆರೆದನಾಕೆಯ ಹಾಸಮೊ ಬೊಮ್ಮಹಾಸಮೋ
ತರುಣಿಯ
ತೋಳೊ ಬಾಳೊ ಸುಡು ಸೂಳೆಯ ಕೂಟಮೊ ಕಾಳಕೂಟಮೋ        ೧೦೧

ಎಂದು ವಿರಕ್ತನಾದಂ. ಮತ್ತೊರ್ವಂನೀನೀಗಳಾಕೆಯ ನಣ್ಪನೇಕೆಮಾಣ್ದೆಯೆಂದಾ ಕೆಳೆಯಂಗಿಂತೆಂದಂ –

ನುಡಿಯೆಲ್ಲಂ ಹೊಲೆ ಸೂರೂಳೊಳ್ನಿಱಿ ಹೊಸಂತಿಲ್ ಪೊಂಗೊಳಲ್ ಪುತ್ತವಾ
ಯ್ಕುಡಿನೀರೊರ್ಮೆಗೆ
ಕಮ್ಮನಪ್ಪ ಬಳಿನೀರೂರೂರ ದೈವಂಗಳುಂ
ಪಡಿಗೆತ್ತೋಡಿದುವೀಕೆಗಂಜಿ
ವಿಟರೆಂದುಂ ಗೆಂಟು ತಮ್ಮಬ್ಬೆಸ
ತ್ತೊಡಮಿ
ನಂಜಿನ ಪೆಣ್ಣ ಕಣ್ಗೆ ಹುಸಿಕಣ್ಣೀರಲ್ಲದೇಂ ಬರ್ಕುಮೇ     ೧೦೨

ಅದಲ್ಲದೆಯುಂ –

ಮನಮುಂ ಬೆಟ್ಟಿತುಮಾಡಲೆಂದೆ ಬಿಡುವಳ್ ಬಲ್ದೋಂಟಿಯಿಂ ಬೇಂಟದೊಳ್
ಮನಮಂ
ಬೇಂಟಮನಾಗಳಂತೆ ಬಳೆವಳ್ ಬಲ್ಗೆಯ್ತದಿಂದೊತ್ತೆಯಾ
ಣ್ಮನೊಳಂ
ಮೆಯ್ಯನೆ ಮಾಱುವಾಕೆ ಭವಮಂ ಪೇೞ್ಮಾಱಳೇ ಸಂತೆಯೊಳ್
ಧನಕಾನಾಱೆನಿವಳ್ಗೆ
ದೈವವಱಿಗಿನ್ನೀ ಸೂಳೆಯಂ ಡಾಳೆಯಂ    ೧೦೩

ಮತ್ತಮೊರ್ವಂ ಕಾಮಕಳಾಕೇಳೀಶೀಲನಿಂತೆಂದಂ –

ನೆತ್ತಮನಾಡಿ ಸೋಲ್ತಧರಮಂ ಕಡುಪಿಂದೆನಗಿತ್ತು ಕೊಳ್ವ ತಾಂ
ಮತ್ತೞುತೀವ
ಮತ್ತೆ ನಗುತಂ ತೆಗೆದಾಂ ಪಿಡಿದೀಂಟೆ ನೊಂದು ಬೈ
ಯುತ್ತಮೆ
ಮತ್ತೆಯುಂ ಕುಡುವ ಸಾಲ್ವುದು ಸಾಲ್ವುದೆನುತ್ತೆ ಮೋದಿ ಕಾ
ಡುತ್ತುಮೆ
ಮತ್ತೆ ಕೊಳ್ವ ಕಿಳಕಿಂಚಿತಮೊಪ್ಪುವುದೆನ್ನ ನಲ್ಲಳಾ      ೧೦೪

ಮತ್ತಮೊರ್ವ ಸೌಭಾಗ್ಯಭವನಂ –

ತಡೆದಾಂ ಪೋಗೆ ಸಗರ್ವಮಡ್ಡಮಿಡುವಳ್ ವಕ್ತ್ರಾಬ್ಜಮಂ ಜರ್ಬುವಳ್
ಕುಡಿವುರ್ಬಿಂ
ಕುಚವಸ್ತ್ರಂ ತೆಗೆಯೆ ಸಾವನ್ನಂ ನಗುತ್ತಿರ್ಪಳು
ಳ್ಳುಡೆಯಂ
ಮೆಲ್ಲನೆ ಲೀಲೆಯಿಂ ಸೆಳೆದೊಡೆನ್ನಂ ಸಸ್ಪೃಹಂ ಕೊಳ್ವವೊಲ
ಕಡೆಗಣ್ಣಿಂದಮೆ
ಕೂಂಕುವಳ್ ಸಹಜಮಿ ಬಿಬ್ಬೋಕಮೆನ್ನಾಕೆಯಾ ೧೦೫

ಎಂದನಂತರಂ ಭಿನ್ನರುಚಿಗಳಪ್ಪ ವಾಚಾಳವಿಟವಚನಂಗಳಲ್ಲದೆ –

ಕರೆಯದೆ ಕಾಡಿ ಕಂಟಿಸುವ ಕೂಂಟಣಿಯಂ ನೊಣೆಗಬ್ಬೆ ತಿಂಗೆ ಬೆಂ
ಗುರುಟಿ
ಬಳಾರಿ ಬಾಡಿಸುಗೆ ಚಂಡಿಕೆ ನುಂಗುಗೆ ಮಿೞ್ತು ತುತ್ತುಗ
ೞ್ಕುಱಿಸುಗೆ
ಕಾಳಿ ಕೊಳ್ಗೆಱೆಯಪಂ ಮುಱಿದಿಕ್ಕುಗೆ ಮಾರಿ ಭೈರವಂ
ಹರಹುಗೆ
ಮೇಳೆಯಂ ಮುಱಿಗೆ ಮಾಳಬೆಗಿಂದು ಮೊಗಾರಮೆತ್ತುವೆಂ      ೧೦೬

ಗಾಳಿಸು ಗೆಲ್ವನಂ ಹರಹು ಹೂಜೆಗನಂ ಸುಲಿ ಸುತ್ತುಗಾಱನಂ
ತಾಳಿಸು
ತೇವನಂ ಕುಡದೆ ಕಾಡುವನಂ ರಸಬೋನವೆತ್ತು ಮಾ
ಕಾಳಿಗೆ
ಡಾಳನಂ ನೆಗಪು ಟಕ್ಕಿಪನಂ ತುೞೆ ಮೇಗುದೋರ್ಪನಂ
ಮಾಳಬೆಗಿಕ್ಕು
ಪೂೞು ಪುಸಿವನಂ ಪೊಸೆದಿಕ್ಕುಗೆ ಪಚ್ಚೆಗಾಱನಂ  ೧೦೭

ಎಂಬ ದರಿದ್ರವಿಟವೇಶ್ಯಾಲಾಪಂಗಳುಮನಲ್ಲಲ್ಲಿಗೆ ನಿಂದು ಕೇಳುತ್ತ ಮುಚಿತಾನುಚಿತಚೇಷ್ಟೆ ಗಳುಮಂ ಪ್ರಚ್ಛನ್ನದಿಂ ನೋಡುತ್ತುಂ ನಾಗರಕಾದಿಚತುರ ವಚನಂಗಳನಾಲಿಸುತ್ತುಂ ಕಂದರ್ಪದೇವಂ ಬರ್ಪಾಗಳೊರ್ವಳ ಮೊಗದ ನೂಣ್ಪಿಂಗಂ ಕಣ್ಣ ಬೆಳ್ಪಿಂಗಮೊತ್ತೆಯಿ‌ಟ್ಟು ಗೊಟ್ಟಿಗಿರಲ್ಪೋಗಿ ಪರಿತಂದು ವಿದೂಷಕಂ ಸತ್ತನೆಂದು ಭಯಮನಭಿನಯಿಸೆ –

ಕಾವುದು ದೇವ ಯಾಚಕನನಂಜದಿರಂಜದಿರೇಕೆ ನೇಲ್ವ ತೋ
ಲ್ವಾವಲೊ
ಮತ್ತವಾರಣದ ಸೊಂಡಲೊ ಕಾದೆರ್ದೆವುತ್ತಿನಿಂದೆ ಪೆ
ರ್ಬಾವೆರಡೊಡ್ಡುಗೊಂಡು
ಪೊಱಮಟ್ಟುವೊ ಪೋದೊಡೆ ಪೊಯ್ದುವೆನ್ನನೋ
ವೋವತಿಭೀತಿಯಾದಪುದು
ಸೂಳೆಯ ಸೋರ್ಮೊಲೆಗಂಡು ಭೂಪತೀ     ೧೦೮

ಎಂಬುದುಂ ತದೀಯ ಕರಮಂ ಕರದಿಂ ಪೊಯ್ದು ನಿನ್ನ ಸಾವು ಪುಸಿಯಿದಂ ಕೇಳ್ದರಂ ನಗೆಯ ಕೈಯೊಳ್ ಬಿರಿದು ಸಾವಂತೆ ಮಾಡಿದೆಯೆಣದರಸಂ ನುಡಿಯುತ್ತುಂಬರೆ; ಮತ್ತೊಂದೆಡೆಯೊಳ್ –

ಅಡರ್ದ ಕುಚದ್ವಯಂ ದಯಿತೆ ಬಿರ್ದುವಿದೇಕೆನೆ ಬರ್ದೆಯೆಂದಳಿಂ
ತಡಿಗಡಿಗೋಪ
ನೀಂ ಸರಸಕಾಮನಿವಾಸದೊಳಿಟ್ಟ ಕಯ್ಗಳಿಂ
ಪಿಡಿದಿರೆ
ತಮ್ಮೊಳಿಟ್ಟು ಸವಿದೋಱಿದ ದೂಸಱಿನೊಂದಹರ್ನಿಶಂ
ಕೆಡೆದಪುವಿಲ್ಲಿಗಾಸಱಿಗೆ
ಪೆರ್ಮೊಲೆಯಲ್ಲದೊಡಿಂತು ಬೀೞ್ಗುಮೇ  ೧೦೯

ಮತ್ತಮೊರ್ವ್ವನೊಳ್ಕಾಡಿ ಮುಳಿಸಿನೊಳಮಿೞಿಯಿಕ್ಕಿ ಕಾಡುವ ಕಱಂಡು ಬೊಜಗನಂ ಪಿಡಿದು –

ಜಗುಳ್ವೆಯಿದಿರ್ಚೆ ಸಬ್ಬಮೆನಗಿಲ್ಲದ ದೋಷಮನಿಟ್ಟು ಹಟ್ಟಿಗಾ
ಳೆ
ಗಳಹಿಯೆಂಬುದಂ ಕರೆಯದಿರ್ದೊಡೆ ನೀಮ್ಮನೆಗಂಕಮಪ್ಪಿನಂ
ಜಗಳಮೆಯೆಂದೊಡೆಪ್ಪಿಸಿದ
ನಿನ್ನಯ ನಣ್ಪೆ ದಲೆಂದು ತಂದ ಹು
ಟ್ಟಿಗೆಯಿೞಿದೇೞ್ಮೊಳಂಗೞಿದು
ಸೇದೆಯ ಬಾವಿಯೊ ಬಂದದಾವೆಯೋ   ೧೧೦

ಮತ್ತಮೊರ್ವಳ್ ಬಿಡದೆ ಪುರುಡಿಸಿ ಪಿಡಿ ಪಿಡಿಯೆಯುಮೊಟ್ಟೈಸಿ ಪೋಪ ಬೊಜಗನಂ ಪಿಡಿದಿಂತೆಂದಳ್ –

ಆವೆಡೆಯಿಚ್ಚೆ ನೀಂ ತಳರ್ದೊಡೊತ್ತಿದುದಿಂತಿದು ನೀಂ ಕೊರಲ್ಗೆ ಬೆ
ಳ್ಗಾವಿಯ
ಪೊನ್ನೆ ನೀಂ ಕುಡುವ ಹುಟ್ಟಿಗೆ ಕಣ್ಬನಿಯಿಂದೆ ನಾಂಗುಮೇ
ಗೋವನೆಯಪ್ಪೆಯಿರ್ಪೊಡಿರು
ಪೋಪೊಡೆ ಪೋಗಿನಿತೇಕೆ ನಾಯ್ಗೆ ತೆಂ
ಗೇವುದೊ
ಕಾಗೆಗೇವುದೊ ರಸಾಯನಯುಕ್ತದ ಸಾರಭೋಜನಂ ೧೧೧

ಮತ್ತಮೊರ್ವಳೊಂದೆಡೆಯೊಳ್ –

ಕಿತವಯಿದೆಲ್ಲಿಗಂಗಡಿಗೆ ತಂಬುಲಮಂ ಪಿಡಿ ಕೆಮ್ಮಗೆಮ್ಮೊಳೇಂ
ಸಿತಗೆಯಿದಾವ
ಮಾತು ನಡೆ ಪೋಗಿಯೆ ಬಾರೆನೆ ಬಾರದಿಂದೆಯಾ
ಣತಿಬಡೆದುಂ
ಮಗುೞ್ಮಗುೞೆ ಬಂದಪೆ ಬಂದಪೆನೊಲ್ಲೆನೆಲ್ಲಿ ಹು
ಟ್ಟಿತೊ
ಶಿವಧರ್ಮವೆಂದೆೞೆದಳೋವರಿಗೊರ್ವನನೊರ್ವಳೞ್ತಿಯಿಂ        ೧೧೨

ಮತ್ತಮೊಂದೆಡೆಯೊಳ್ –

ನಡೆ ನಡೆವಂತಿರೇಂ ಭಯಮೆ ನೋಡಿರೆ ನೋೞ್ವೊಡೆ ಪೊನ್ನೆ ನಣ್ಪಿನಿಂ
ನುಡಿ
ನುಡಿವಂತು ಬರ್ಕುಡಿಯೆ ಬಾರೆಲೆ ಬರ್ಪೊಡೆ ಮಾವೆ ಮಾನವಂ
ಬಿಡು
ಬಿಡುವಂತಿರೇೞಿದಿಕೆಗಂಡನೆ ಗಂಡನೆ ಕೇಳ ಪೇೞು ಪೇ
ೞ್ವೊಡೆ
ಕವಿರಾಜಕುಂಜರನ ಕಬ್ಬಮೆ ಕೆಮ್ಮನಿದೇಕೆ ಸಮ್ಮದಂ    ೧೧೩

ಅಂತು ಪೊಲ್ಲಕೆಯ್ದ ಕಾದಲಳನುಱದುಱದೇೞಿಂ ನುಡಿದು ಪೋದನೊಂದೆಡೆ ಯೊಳೊರ್ವಳ್ ರತಲಾಂಛನಮಂ ಕಂಡು ಕಡುಮುಳಿದು ಪರ್ದಿಡುವ ಸಮಸಂಕರಮಂ ಪಡಿಯುಮಂ ಕೆಕೊಳ್ಳದಿರ್ದ ಬೊಜಂಗನಲ್ಲಿಗೆ ತಾನೆಪೋಗಿ,

ನೆನೆಯದಿರೇನುಮಂ ನೆನೆವೆಯಪ್ಪೊಡೆ ನೀಂ ನೆನೆಯೆನ್ನ ಮಾೞ್ಪ
ರ್ದನೆ
ನೆನೆವಂದು ಸೂಳೆತನವೆಂಬುದೆ ಕಷ್ಟಮದರ್ಕಿದೇಕೆ ಪೇೞ್
ಮನಕತವೆನ್ನ
ಮಾೞ್ಪ ಬದಗೇಂ ಪೆಱತಾದುದೆ ಬೇಡ ಕೆಮ್ಮಗಂ
ಮನೆ
ಗುಸುಟೇಕೆ ತನ್ನ ಸುಖಕಲ್ಲದೆ ಕೇಳಿಕೆ ಯಾರ ಬಿಟ್ಟಿಯೋ   ೧೧೪

ಎಂದು ಬಿಸಿದುಮಸಿದುಮಂ ತೋಱಿ ನುಡಿದೊಡಂಬಡಿಸಿದಳಾ ಪ್ರಘಟ್ಟಕಮಂ ಕಂಡು ಮಕರಂದನರಸಂಗಿಂತೆಂದಂ –

ಪಡೆದುಣ್ಬ ಪೆಣ್ಣೊಳಿರ್ದಾ
ಗಡಿನೊಪ್ಪಮೆ
ಸಾಲ್ವುದುೞಿದುಮೊಳ್ಪಱಸುವನೇಂ
ಕಡುಗಾಂಪನೊ
ತಣ್ಗೂೞಂ
ಪಡವಿನೊಳೆಲೆಗಟ್ಟಿ
ಮುಟ್ಟು ಪಡೆದಱಸುವುದೇ         ೧೧೫

ಮತ್ತೊರ್ವವಳ್ ನೀನೇಕೆಯಿಂತಾದೆಯೆಂದು ಮೊಗಮಱಿದಾಕೆಗಿಂತೆಂದಳ್ –

ನಂಬಿಸಲಾನೆ ಬಲ್ಲೆನಿದಿರಂ ಧನಮಂ ಪಡೆದಾನೆ ಬಲ್ಲೆನಿ
ನ್ನೆಂಬುದೆ
ಲಜ್ಜೆ ಪಚ್ಚೆಯ ಪಸುರ್ಮಣಿಯಂ ಕುಡಲಿಲ್ಲದಂತು ಬಾ
ಯ್ತಂಬುಲಮೆಂಬುದಂ
ಪಡೆಯದಂತುಟೆ ಮಾಱುಡೆಗಾಣದಂತಿರ
ಟ್ಟುಂಬರಿಗೊಂಡು
ತೇದಪುದು ಬೇಟಮಿದೆನ್ನಯ ಪಾಪಮಲ್ಲದೇ  ೧೧೬

ಅದಂ ಕೇಳ್ದು ವಿದೂಷಕನೀಕೆ ಹುಟ್ಟುಗೆಟ್ಟ ಹುಟ್ಟಗೆಯಂತೆ ಹಡಣಮೊಣಗಿದ ಹೞೆಯಸಿದ್ಧಿಗೆಯಂ ತೊಣಕುಟ್ಟದೆ ಪತ್ತಿದ ಹಾೞೂರ ನಾಯಂತೆಯೊಡಲಂ ಪತ್ತಿದ ತೊನ್ನರ ತುಟಿಯಂತೆ ಕಣ್ಣಂಬು ಬಿರ್ದ ಕರ್ಬಾಳೆಯಂತೆ ಕಾಗೆ ಹಱಿದ ಹಱುಗಲಂತೆ ಸುಸಿಲ್ದೊಱೆಯಂ ದಾಂಟಿಸಲಾಱದಡಿ ಸತ್ತೊಡೆ ತನ್ನ ದೌರ್ಭಾಗ್ಯಮಂ ಬೇಟದ ಮೇಲೆ ನೆವಮಿಕ್ಕಿದಪಳೆಂದರಸನಂ ನಗಿಸಿದಂ. ಅತ್ತ ಮತ್ತೊಂದೆಡೆಯೊಳ್ –

ನುಡಿದಪೆಯಿಲ್ಲ ನೀಂ ಮಗಳೆ ನಿನ್ನನಿದೇಂ ಪೊಡೆದತ್ತೊ ಬಲ್ಗರಂ
ಪಿಡಿದುದೊ
ಕಂದಿ ಕುಂದಿದೆಯಿದೇನುರಿ ಕೊಂಡುದೊ ಕೊಂಡುದೆನ್ನ ನೆಂ
ದೊಡಮದೆ
ಮಾತೆ ಮತ್ತೆ ಪೆಱತಾವುದನೆಂಬೆನೊ ಬೇಟಮೆಂದೊಡಂ
ಸುಡು
ಗರಮೆಂದೊಡಂ ಸುಡುವ ದಳ್ಳುರಿಯೆಂದೊಡೆಮೊಂದೆಯಲ್ಲವೇ    ೧೧೭

ಮತ್ತೊಂದೆಡೆಯೊಳಗೊರ್ವ ಬೇಟಕಾರ್ತಿಯ ಬೇಟಕ್ಕೆ ಬೇಸತ್ತು ಕೆಳದಿಗಿಂತೆಂದಳ್ –

ಸತ್ತೊಡೆ ಪೋಕುಮಲ್ಲದೆಡೆಯೊಳ್ಕಡಿವೋಕುಮೆ ಬೇಟವಕ್ಕ ಬೇ
ಸತ್ತೊಡೆ
ಮತ್ತೆ ಲಜ್ಜೆ ಗಡ ಮತ್ತೆ ಚಲಂ ಗಡ ಮತ್ತೆ ನಾಣ್ಗಡಂ
ಮತ್ತೆ
ಬೊಜಂಗಗೊಟ್ಟಿ ಗಡ ಮತ್ತೆ ಸೊಗಂ ಗಡ ಮತ್ತೆ ತಾಯ್ಗಡಂ
ಮತ್ತೆ
ಬರ್ದುಂಕುವಾಸೆ ಗಡ ಪೇೞಿದು ಬೇಟಮೊ ದೈವಕಾಟಮೋ         ೧೧೮

ಮತ್ತಮೊಂದು ತಾಣದೊಳ್ –

ಅಡಿಯನದೇಕೆ ದಂಡೆಗೊಳುತಿರ್ದಪೆಯೀೞ್ದುಗುಳಿಂದೆ ಸೋವಡಂ
ತೊಡೆ
ತೊಡೆಯಿಂದಿಱುಂಕದಿರು ಮೆಲ್ಲನೆ ಪಾಯ್ದ ಪೆಯೌಂಡುಗರ್ಚದಿರ್
ಪಿಡಿಯೆನಡರ್ತು
ಬಾಯ್ದೆಱೆಯದಿರ್ ಮೊಲೆಯಂ ನಿನಗಬ್ಬೆಯಕ್ಕಟಾ
ಕುಡಳೆಯಿದೇಕೆ
ಬಿಕ್ಕಿ ಬಿರಿದೞ್ತಪೆಯೆಂದನದೊರ್ವ ನೂರಿಚಂ    ೧೧೯

ಎನೆ ಕೇಳ್ದು ಕಡ್ಡಗೂಂಟಣಿ ಕಿಡಿಯಂ ಮೆಟ್ಟಿದಂತಾಗೆ ಚೌಕಿಗೆಯ ಬಾಗಿಲ್ಗೆ ಬಂದಿಂತೆಂದಳ್

ಕೇಳತನಕ್ಕೆ ನೀನಿನಿದನಿಕ್ಕದೆ ಗರ್ಭದೊಳಿಂತು ಕೊಲ್ವರೇ
ಸೂಳೆತನಂಗಳಂ
ಸರಸವಿಲ್ಲದೆ ತಳ್ತೊಡನಿತ್ತು ಪೋಪುದಿ
ನ್ನಾಳಿಯರೊತ್ತಿನೀ
ಮಗವು ನಿನ್ನೆರ್ದೆಗೆಯ್ದೊಡನೆರ್ದು ಪೋಪ ಬೆ
ಳ್ಳಾಳೆ
ಬೊಜಂಗ ಪಿಡಿ ನೀಂ ಕುಡುವೊತ್ತೆಯಿನಿಕ್ಕುಕಾಡಿನೊಳ್   ೧೨೦

ಮತ್ತಮೊರ್ವ ನಿರ್ಲಜ್ಜಕೂಂಟಣಿ –

ಮತ್ತೆ ಬೊಜಂಗರಿಲ್ಲ ಪೊಱಗೊಚ್ಚತವೇಂ ನಿನಗುಂಟು ತೋಳಚಿ
ಕ್ಕೊತ್ತೆಗೆ
ಪೊಕ್ಕೆಯಿಂತು ಶುನಿಯಂತಿರೆ ನಿಲ್ವರೆ ಸೂಳೆ ಕೇಣಿಯೇ
ಒತ್ತೆಗೆ
ನಾಣ್ಚಿಯುಂ ಪೊಱಮಡಾಂ ಮೊಱೆಯಿಟ್ಟಪೆನೆಂದು ಸುತ್ತಿದಳ್
ಮುತ್ತಿದಳಬ್ಬೆ
ಚೌಕಿಗೆಯನೊರ್ಬಳೆ ಮಾರಿಯ ಮೂರಿಯಂದದಿಂ          ೧೨೧

ಮತ್ತಮೊರ್ವಳ್ ಮಗಳಂ ನೀರುಂ ಮಾಱುಮಾಡಿ ಕೊಳಲಣ್ಮದೆ ಚದುರಗೂಂಟಣಿ –

ನಾಣಿಲಿ ನಿಟ್ಟುರಂ ಸಿತಗನಾಟವಿಟಂ ತುದಿಗೋಡ ಪಾಱು ನಿ
ನ್ನಾಣೆ
ಗಡಾಗಡುಂ ನಿನಗೆ ಕೂರದರೊಳ್ ಬೆರಸಿರ್ಪನಾತನೇಂ
ಮಾಣಿಕದನ್ನರಪ್ಪ
ಪೊಸಚೆನ್ನರನೀಗಳೆ ತರ್ಪೆನೆನ್ನ ನೇ
ರಾಣಿಯ
ಹೊನ್ನೆ ಬೇಡವನ ನಣ್ಪಿದನಾಂ ಸೆಱಗೊಡ್ಡಿ ಬೇಡುವೆಂ  ೧೨೨

ಮತ್ತೊಂದೆಡೆಯೊಳ್ –

ರತಮನೆ ಮಧ್ಯದೊಳ್ ಮುಱಿದು ತಾಂ ಮಗುವಂ ಮೊಲೆಯೂಡಲೀಶಚುಂ
ಬಿತವದನಾಬ್ಜಮಂ
ತೆಗೆದು ತಾಂ ಶಿಶುವಂ ನುಡಿಸಲ್ಕೆ ಬಲ್ಪಿನಿಂ
ಪತಿಪರಿರಂಭಮಂ
ಬಿಡಿಸಿ ಕೂಸಳೆ ನಂಬಿಸಲಿರ್ದ ಸೂಳೆವಾ
ಣತಿಯೆರಡರ್ಕೆ
ಬಿಟ್ಟ ಕಱುಮೋಲೆಡೆಯಾಡಿದಳೊಂದುಗೇಹದೊಳ್        ೧೨೩

ಮತ್ತಮೊಂದೆಡೆಯೊಳೊತ್ತೆಗೆ ನಿಂದ ವೃದ್ಧವೇಶ್ಯೆಯಂ ನಾಣ್ಚಿಸಲೆಂದು ವಿದೂಷಕಂ ಪೋಗಿ,

ಪಿಡಿ ನಡೆಯೊತ್ತೆಯೇಂ ನಿನಗೆ ನೀನೊಸೆದಿತ್ತುದೆ ತೋಱ ಸೂಳೆಯಾ
ವೆಡೆ
ಸುಡು ಕಾಣ ಕಣ್ಣೊಡೆದುವೇ ಹರೆಯಂ ಪಿರಿದಬ್ಬೆ ನೀಮುಮೇಂ
ನುಡಿವಿರೆ
ಮೂರ್ಖನಪ್ಪೆ ಧನಮಂ ನಿಮಗೀ ಪೊಸವೆಂಡಿರಿರ್ದವೋಲ್
ಕುಡುವರೆ
ಕಾಯ್ಗಳಿದಂಱಿಯೆ ಪಣ್ಣಿನಿದೆಂಬುದನಣ್ಣ ಕಾಣಿರೇ      ೧೨೪

ಎಂದು ಸೂೞ್ಮಾತನಾಡಿ ಸೋಲ್ತು ಕಂದರ್ಪದೇವಕಟಾಕ್ಷಪ್ರೇಷಿತ ಪೀಠಮರ್ದಕನಿಂದರ್ಧ ಚಂದ್ರನಂ ಪಡೆವುದುಮೊರ್ವಳೀಂಟಿಯುಮಾಱದಿರೆ ಮಗುೞೆ ಕಳ್ಳನೊಱಸಿಕೊಂಡು ಕಾದಲಂ ನೀಡೆ ನೀಡುಂ ಭಾವಿಸಿ ನೋಡಿ,

ಪಿಡಿಯೆಲೆ ಬಾಳೆಯಿತ್ತೆಯಿದನೇಕೆಯೊ ಬಾಲಕಿ ದೈವ ತಾನೆ ಕಾ
ಡಿದಪುದು
ನೋಡ ಕಲ್ಲೊಲೆಗೆ ಬಿತ್ತಿಯ ಬತ್ತಲೆದಾೞಿತೆನ್ನ ಬಾಯ್
ಕುಡಿದಪೆನೆಂದೊಡೇಂ
ನುಡಿದಳೋ ಪ್ರಿಯನೊಳ್ವಧು ಮತ್ತೆ ಮಾತಿನೊಳ್
ತೊಡಳೆಸೆಯಲ್ಕೆ
ಕಂಡು ಮಣಿಪಾತ್ರದ ಮಧ್ಯದೊಳಿಂದುಬಿಂಬಮಂ      ೧೨೫

ಮತ್ತಮೊಂದು ಮಣಿಗೇಹಾಂತರದೊಳ್ –

ಕರಜಾತಾರ್ದ್ರಕ್ಷತಂ ಕುಂಕುಮಲಿಖಿತಮನೋಮೋಹಯಂತ್ರಂಬೊಲಿಂಬಾ
ಗಿರೆ
ಮೆಯ್ಯೊಳೆ ಕೈಯ ಪಾತ್ರಂ ಕರಮೆಸೆಯೆ ರಣನ್ನೂಪುರಂ ಮುಕ್ತಕೇಶ
ಸ್ಮರಮಂತ್ರಾರಾಧನಾದೇವತೆಯೇ
ಕುಣಿವವೋಲಾಡಿದಳ್ ಪೀರ್ದ ಮದ್ಯಂ
ಸುರಿವಂತೂರುಪ್ರದೇಶಂಬಿಡಿದು
ಬಿಡೆ ಪದಂ ಕಾಂತೆ ನಿರ್ಗ್ರಂಥದಿಂದಂ   ೧೨೬

ಮತ್ತಮಲ್ಲಿ –

ಪೞಗಳ್ಳಂ ಕುಡಿದುರ್ಕಿ ಸೊರ್ಕಿ ಕೆಡವುತ್ತೋರೊರ್ವರೊಳ್ ಪೋರ್ದು ಪೊ
ಯ್ದೆೞೆಯುತ್ತುಂ
ಪಿಡಿಯುತ್ತುಮಿರ್ಪ ಗಣಿಕಾಸಂದೋಹದೋರಂತೆವೋಲ್
ನೆೞಲೇನಿರ್ದುವೊ
ಕಾಚಕುಟ್ಟಿಮತಳಾಂತರ್ದೇಶದೊಳ್ ಪಾಪದಿಂ
ದಿಱಿದಂತಾಗಳೆ
ನಾರಿಯರ್ ನರಕದೊಳ್ಕೂಡುತ್ತುಮಿರ್ಪಂತೆವೋಲ್     ೧೨೭

ಮತ್ತಮೊಂದು ಮದನಮಮಂಗಳಮಂದಿರವೆನಿಪ್ಪ ನಿಧುವನನಿಳಯದೊಳ್

ಪೊದೞೆ ಕುಚಮೊಂದು ಕಾಂತನ
ಮೃದುಕರಪಲ್ಲವಮನುೞಿದ
ಕುಚಕೂಟದೊಳೊ
ತ್ತಿದಳೆಣೆಗಾಣದೆ
ಕರೆವಂ
ದದಿನೊಂದು
ರಧಾಂಗ ಮುಲಿವ ಶಕುನಿಯನೊರ್ವಳ್ ೧೨೮

ಆಗಳ್

ಪಿಡಿದುಗುೞ್ದಧರಮನಮೃತದ
ಕಡವರಮಂ
ಕಂಡು ತೆಗೆಯೆ ವಿಟಸಧಕನಿಂ
ಪಡರೆ
ಮದನಂಗೆ ಪುಯ್ಯ
ಲ್ಗುಡುವಂತೆವೊಲೊಗೆದುವವಳ
ಗಳರವನಿನದಂ       ೧೨೯

ಆಗಳ್

ಘುರುಘುರಿಸಿ ಪೀರ್ದು ಚುಂಬಿಸಿ
ಮುರಿದುಗುರಿಂ
ಸೀೞ್ದು ಸೆಳೆದು ಕೈಯಿಟ್ಟಂ ಸುಂ
ದರಿಯುರದ
ಕರಿಯ ಕಡುವೊಡೆ
ದರನೇಱಿಲ
ಪಣ್ಣನೊಡೆದವೋಲ್ ತೋಱುವಿನಂ       ೧೩೦

ಮತ್ತಮೊಂದು ಮುತ್ತಿನ ಮೊಗಸಾಲೆಯೊಳಗಣ ವೈಡೂರ್ಯವೇದಿಕಾ ಮಧ್ಯಸ್ಥಿತಮಣಿಮಂಚಾಗ್ರತಳ್ಪಪುೞಿಲ ಸ್ಥಳದೊಳೊರ್ವಳ್

ಅಳಕಂ ತುಂಬಿಯೊಲಾಡೆ ತುಂಬಿದ ಕುಚಂ ಚಕ್ರಾಂಕದಂತಾಡೆ
ಣ್ಣೆಳಮಿನಾಟಮನಾಡೆ
ಮುದ್ದುಮೊಗಮಂಭೋಜಾತದಂತಾಡೆ ಮೆಯ್
ತಿಳಿನೀರಾಟಮನಾಡೆ
ನೂಪುರಮರಾಳೋನ್ನಾದವಾದ್ಯಕ್ಕೆ ಪೂ
ಗೊಳನೆರ್ದಾಡುವವೋಲದೇಂ
ಮೆಱೆದಳೋ ಕಾಂತಾಯತಪ್ರೌಢಿಯಂ   ೧೩೧

ಮತ್ತೊಂದು ಸುಧಾಧವಳಿತಸೌಧಾಗ್ರತಳದ ಕುಂಕುಮರಕ್ತಪ್ರಚ್ಛದಾಚ್ಛಾದಿತ ಶಯ್ಯಾತಳಮಧ್ಯಶಿಲಾತಳದೊಳ್ –

ಉಗುರೇಱಿಂ ಬಾಸುಳೊಂದಾಸುರಮೊಗೆಯೆ ಕರಂ ಬೀಗೆ ಬಿಂಬಾಧರಂ ಪಾ
ಯ್ದುಗಿವನ್ನಂ
ಬೆಂಗೆ ಪೊಯ್ದಾ ಗುರುಕುಚಯುಗಳಂ ಸೊಪ್ಪು ಸೊಪ್ಪಾಗೆ ಕಳ್ಗಳ್
ಮುಗಿವನ್ನಂ
ಪಾತದಿಂ ಪಿಳ್ಳನೆ ಪಿಱಿದವೊಲೞ್ಕಾಡೆ ಮೆಯ್ ಕೇಶಕೃಷ್ಣೋ
ರಗನಂ
ಪಿಂತಿಕ್ಕಿ ತನ್ನಂ ಪ್ರಿಯತಮಗರುಡಂ ಕಿತ್ತವೋಲ್ಕೂಡುತಿರ್ದಳ್   ೧೩೨

ಮತ್ತಮೊಂದು ಸುರತಾಲಯದೊಳ್ ಮಣಿಪ್ರದೀಪಮಂಜರೀಪ್ರಭಾ ಭಾಸುರ ಪರಿಸ್ಫುಟಸ್ಫಟಿಕವೈಶದ್ಯಮಂಚಾಗ್ರದರ್ಶಿತ ಸುರತರಮಣೀಯರಮಣೋಪರಮಣಾರಕ್ತರೂಪೆ –

ಸವಿದಪ್ಪೆಂ ನಿನ್ನುಮಂ ಕೇಳಲೆ ವಧುಮಧುಬಿಂಬಾಧರಂ ಕಣ್ಗೆ ಕಣ್ಕೆ
ತ್ತುವವೋಲ್ತಾಂ
ಕೆತ್ತೆ ಕೈಕೂರುಗುರಿನುರಿಯೆ ಮೇಣ್ ಕೈಯ್ದುಗೆಯ್ವಂತೆ ರೋಮಾಂ
ಚವನೆತ್ತಂ
ತಾಳ್ದೆ ತಣ್ಪಿಂ ಸಡಿಲೆ ಮದನಮೋಹಾಮೃತಂ ಮೆಯ್ಗಳಿಂ ಪೊಣ್ಮುವ
ವೋಲ್
ಘರ್ಮೊದಮಾದಂ ಬಿಡುತರೆ ನೆರೆದಳ್ ಕಾಂತನೊಳ್ಕಾಂತೆಯೊರ್ವಳ್    ೧೩೩

ರಮಣಾಕೃಷ್ಣಾಳಿಕಾಗ್ರಾಳಕತತಿ ವಿಟವಿಕ್ರಾಂತಭುಕ್ತಾದರಂ ಕೃ
ತ್ರಿಮಮೋಹಭ್ರಾಂತನೇತ್ರಂ
ಕೃತಕಕರಲತಾನೃತ್ಯಗೀತಂ ವೃಥಾವಿ
ಭ್ರಮಮದ್ಬ್ರೂ
ಭಂಗರಮ್ಯಂ ಮಣಿತರುದಿತರೋಷೋತ್ಕಟಂ ಕುಟ್ಟಿನೀ ಕು
ಟ್ಟಮಿತಂ
ಮತ್ತೊಂದು ಸೌಧಾಗ್ರದೊಳೊದವಿದುದುಚ್ಛುಷ್ಕ ಸೀತ್ಕಾರಸಾರಂ        ೧೩೪

ಮತ್ತೊಂದು ಚಂದ್ರಮರೀಚಿಚಂದನಚ್ಛಟಾಸಿಕ್ತವ್ಯಕ್ತರತಿರಮ್ಯಹರ್ಮ್ಯಾಂಗಣವೇದಿಕಾ ವಿಲಾಸ ಧವಳದುಕೂಲವಸನವಿಶದಶಯ್ಯಾಮನೋಹರಮಣಿಮಂಚದೊಳ್ –

ಕಾದಲನುಟ್ಟುದಂ ಸೆಳೆದೊಡೆನ್ನುಮನೆನ್ನ ಮೊಗಕ್ಕೆ ಸೋಲ್ತು ತಾ
ನಾದವೊಲಿಂದು
ನಾಣ್ಚಿಸಿದಪಂ ಸಮಯಂಬಿಡೆನೆಂದು ಚಂದ್ರನೊಳ್
ಕಾದುವವೋಲ್
ಸೆಱಂಗಿನೊಳೆ ಬೀಸಿದಳುಜ್ಜ್ವಲಪುಷ್ಪಮಾಲೆಯಿಂ
ಮೋದಿದಳೂದಿದಳ್
ತರುಣಿ ತಂಬುಲದಿಂದುಗಿದಿಟ್ಟಳಿಂದುವಂ  ೧೩೫

ಅಂತುಮದನೆಲ್ಲಮನಲ್ಲಲ್ಲಿಗೆ ನಿಂದು ನೋಡುತ್ತಂ ನರ್ಮ ಸಚಿವರೊಳ್ ನುಡಿಯುತ್ತುಂ ಅರಸಂ ಬರ್ಪನ್ನೆಗಂ –

ಊದಿತ್ತುದ್ದಾಮರಾಮಾರತಿಪರಿಮಳಭಾರಾನ್ವಿತಂ ಕಾಮಮೋಹೋ
ನ್ಮಾದಜ್ಞಾನಾಂಗನಾದೃಕ್ಕುವಲಯಮುಕುಳಾರಂಭಿ
ಸಂಭುಕ್ತಕಾಂತಾ
ಸ್ವೇದಾಸ್ವಾದಪ್ರಗಲ್ಭಂ
ಸಮರತಸಮರಶ್ರಾಂತಸೀಮಂತಿನೀಸಾ
ಮೋದಪ್ರೋನ್ಮಂದಮಂದಶ್ವಸಿತಮೃದು
ಮರುನ್ಮಾರ್ಗಗಂ ಮಾತರಿಶ್ವಂ ೧೩೬

ಅಂತುವೇಳಾತಿಕ್ರಮಮುಮನ್ ಇಂತೀ ಕಾಮಿನೀಸಮೂಹ ಸುರತಶ್ರಾಂತಸುಪ್ತಂ ಸಂದರ್ಶನೀಯಮಲ್ತೆಂಬುದಂ ಮಾನವಮದನಂಗೞಿಪಲೆಂದು ಬಂದಂತೆ ಬಂದಾ ಮಂದಮಾರುತಂ ತೀಡಲೊಡನೆ,

ಅಂತಪ್ಪಾ ರಾತ್ರಿಸಂಭೋಗಮನತಿಮುದದಿಂ ನೋಡಿಯುಂ ನಿರ್ವಿಕಾರ
ಸ್ವಾಂತಂ
ನರ್ಮಪ್ರಧಾನೋತ್ತಮ ಕರತಲ ಕರ್ಪೂರತಾಂಬೂಲದಾನಾ
ತ್ಯಂತಾಭಿಖ್ಯಾನ್ವಿತಂ
ಮನ್ನಿಸಿ ಕಳುಪಿ ಬೞಿಕ್ಕಂದು ಪೋದಂ ಜಯಶ್ರೀ
ಕಾಂತೇಶಂ
ತನ್ನ ರಾಜಾಲಯಕೆ ಜನನುತಂ ರೂಪಕಂದರ್ಪದೇವಂ       ೧೩೭

ಇದು ವಿದಿತವಿವಿಧಬಂಧವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಲೋಚ್ಚಲಿತ ನಖಮಯೂಖಮಂದಾಕಿನೀ ಮಜ್ಜನಾಸಕ್ತ ಸಂತತೋತ್ಸಿಕ್ತದಾನಾಮೋದ ಮುದಿತಬುಧಮಧುಕರಪ್ರಕರ ಕವಿರಾಜಕುಂಜರವಿರಚಿತಮಪ್ಪ ಶ್ರೀ ಲೀಲಾವತಿಯೊಳ್ ರಾತ್ರಿ ವಿಹಾರವರ್ಣನಂ

ದ್ವಿತೀಯಾಶ್ವಾಸಂ