ಶ್ರೀರಮಣೀಪ್ರಿಯನತಿ ಗಂ
ಭೀರಂ
ಭುವನೈಕದಾನಿ ಧೀರೋದಾತ್ತಂ
ಸಾರಸ್ವತಪಾರಂ
ಶೃಂ
ಗಾರಾಮೃತಸೇತು
ಸುಕವಿಕಂಠಾಭರಣಂ     ೧

ವಿನಯಿನಿಧಿ ಭಾಗ್ಯವಂತಂ
ಜಿನಶಾಸನದೀಪಕಂ
ಪ್ರತಾಪಿ ಸುವಿಜ್ಞಾ
ತನಯನುದಾತ್ತಂ
ತಡೆಯದೆ
ನಿನಗಾದಪನೆಂದು
ಬೆಸಸಿದರ್ವನಜಮುಖೀ   ೨

ಕರತಳದ ಮುತ್ತನಱಿವಂ
ತಿರೆ
ಮುನಿಪಂ ಚಿಹ್ನಲಕ್ಷಣಾಂಗಂದ ಕಲೆ ಸು
ಸ್ವರಭೌಮವ್ಯಂಜನಮಂ

ತರಿಕ್ಷಮೆಂಬೀ
ನಿಮಿತ್ತಮೆಂಟುಮನಱಿವರ್    ೩

ವ|| ಮತ್ತಮದರ್ಕೊಂದು ಕೂನಮಂ ಪೇೞ್ದರ್ ನಿನ್ನ ಮೊಲೆಗೆಲದೊಳ್ ಚಿನ್ನದಗಲದ ಪೊನ್ನ ಬಣ್ಣದ ಮತ್ತಿ ಮತ್ತೆನಿಸದೆ ಮೂಡಿದುದು ಗಡ ತೋಱೆಂದು ನೋಡುವಾಗಳ್

ಉತ್ತುಂಗ ಕುಚಾದ್ರಿಯ ಪೊ
ಮ್ಮತ್ತಿಯ
ಮೊಳೆ ಮೊಳೆತ ಜರಗಿನಂತಿರೆ ಕಾಣ
ಲ್ಬೆತ್ತ
ಸತಿಗಾಯ್ತು ಸುತನಂ
ಪೆತ್ತಂತಪ್ಪೊಂದು
ಸಂತಸಂ ತತ್‌ಕ್ಷಣದೊಳ್  ೪

ಪಡೆಯಲರಿದೆನಿಸುವಱನಂ
ಪಡೆದಂ
ಜಿನನೆಂಬ ಭವ್ಯಚಿಂತಾಮಣಿಯಂ
ಪಡೆದಂ
ಮಗನೇಗಹನಂ
ಪಡೆಯದುದಿನ್ನೊಂದುಮುಂಟೆ
ನಮಗೆ ಮೃಗಾಕ್ಷೀ      ೫

ವ|| ನೆಲನಂ ಪೊಯ್ದ ಕಯ್ ತಪ್ಪುಗುಮಾಚಾರ್ಯರ ವಚನಂ ತಪ್ಪದು ಧರ್ಮಪರೆ ಯಾಗಿರೆಂದರಸ ನಷ್ಟಾಹ್ನಿಕಮನೆತ್ತಿಕೊಂಡಿತ್ತ ಮಹೇಂದ್ರನುಂ ಮಾಡಲಾಱದ ಮಹಾಮಹಿಮೆಯಂ ಮಾಡುತ್ತಮಿರ್ದನತ್ತಲ್

ಗುಡಿಯಿಂ ತೋರಣದಿಂ
ನ್ನಡಿಯಿಂ
ಕಳಶದಿನನೇಕ ಚಾಮರದಿಂ ಬೆ
ಳ್ಗೊಡೆಯಿಂ
ಮುಡಿಯಿಂ ಮುತ್ತಿನ
ಕಡೆಯಿಂದರ್ಚಿಸಿದಳರಸಿ
ಚಂದ್ರಪ್ರಭನಂ     ೬

ಮಳಯಜದಿಂ ಮಲ್ಲಿಗೆಯಿಂ
ದೆಳಮುತ್ತಿಂ
ಮಗಮಗಿಪ್ಪ ಕಪ್ಪುರದಿಂದು
ತ್ಪಳಲೋಚನೆಯರ್ಚಿಸಿದಳ್

ತೊಳತೊಳತೊಳಗುತ್ತುಮಿರ್ಪ
ಚಂದ್ರಪ್ರಭನಂ        ೭

ಕಳಹಂಸೆಯ ಕರ್ಪೂರದ
ಮಳಯರುಹದ
ಬೆಳ್ಪನಿಳಿಪ ಜಿನರಾಜನ ಮೆ
ಯ್ವೆಳಗಿನ
ಸುರಭಿಯ ಪಾಲಂ
ಪುಳಕಿತತನು
ಪುತ್ರಕಾಮ್ಯದಿಂದಂ ಮಿಂದಳ್

ವ|| ಬೞಿಯಮಾ ಬಳವಿರೋಧಿಪೂಜಿತನ ಪದಯೋಜಂಗಳ್ಗುಱೆ ಪೆಱೆನೊಸಲನೆಱಗಿಸಿ

ಸಲಿಯಿಸು ಬಿನ್ನಪಮಂ
ತ್ಕುಲಪಾಲಕ
ಚಂದ್ರನಾಥ ನಿನ್ನ ಸುಧಾನಿ
ರ್ಮಲಮೆನಿಸಿದ
ದೇಹದ್ಯುತಿ
ಮೊಲೆವಾಲಕ್ಕೆನ್ನ
ಸುತಚಕೋರಂಗೆ ಜಿನಾ    ೯

ವ|| ಅಂತು ಜಿನಪೂಜಾಮಹೋತ್ಸಾಹಂಗಳಂ ಪುತ್ರೋತ್ಸವ ನಿಮಿತ್ತಮಾ ಜಿನದತ್ತೆ ಮಾಡುತ್ತುಮಿರ್ಪಿನಮೊಂದುದಿವಸಂ

ಪಾಯ್ವಕುಚಂಗಳಂ ಮಿಡಿದು ನೋಡಿ ಕವುಂಕೞನೆತ್ತಿ ಕಂಪನಾ
ರಯ್ವುದುಮೊತ್ತುತುಂ
ಮೊಡವಿಯಂ ಮೊಗಮಂ ಮೃಗನೇತ್ರೆ ದರ್ಪಣ
ಕ್ಕುಯ್ವುದುಮೆಲ್ಲವಂ
ಕಳೆದು ಮಾಣಿಕಮಂ ಕನಕಂಗಳಿಂದೆ ಕೈ
ಗೆಯ್ವುದುಮಂದು
ಕೈಗೆ ಸೆಳೆಯಂ ಸಖಿ ಕೊಟ್ಟಳದೇಂ ಪ್ರಗಲ್ಭೆಯೋ       ೧೦

ತೊಳಗುವ ಮೈಗಳೊಳ್ ತಿಮಿರ್ದ ಕುಂಕುಮದಿಂ ತೆಗೆದುಟ್ಟ ಮುತ್ತಿನಿಂ
ದಳವಡೆ
ತೊಟ್ಟ ಪೊಂದೊಡಿಗೆಯಿಂ ಚಳಕೋಮಳಹಸ್ತಶಾಖೆಯೊಳ್
ಸೆಳೆ
ಸೆಳೆಗೊಂಬಿನಂತೆ ಪೊಳೆವೊಂದು ವಿಳಾಸದಿನಗ್ಗಳಂ ತಳಿ
ರ್ತೆಳಲತೆಯಂತೆ
ತೋಱುವರುಣಾಧರೆ ಪುಷ್ಪಿತೆಯಪ್ಪುದೊಪ್ಪದೇ         ೧೧

ಚಿಕುರಂ ಪ್ರಜ್ವಲಿಪಿಂದ್ರನೀಲನಿಕರಂ ಬಾಯ್ವಿದ್ರುಮಂ ಛಾಯೆ ಮಾ
ರಕತಚ್ಛಾಯೆ
ನಖಾಳಿ ವಜ್ರಮಮಳಂ ದಂತೋತ್ಕರಂ ವ್ಯಕ್ತ ಮೌ
ಕ್ತಿಕಮಾಗಲ್ಕೆ
ಪರಾರ್ಥ್ಯಮಾಗೆ ನೆಗೞ್ದಾ ಪೆಣ್ಮಾಣಿಕಂ ಮಾಣ ಮಾ
ಣಿಕಗೆಂಟೆಂದೊಡೆ
ಮಾಣ್ದನಂದರಸನಾ ಸ್ತ್ರೀಮಾಯೆಯಂ ಮೀರ್ವರಾರ್  ೧೨

ಅಸಿಯ ಸೆಳೆ ತಳದೊಳತಿರಂ
ಜಿಸೆ
ಪುರ್ವವ್ವಳಿಸೆ ಪತ್ತೆಸಾರ್ವವರಂ
ರ್ಜಿಸಿ
ಕಾಮನ ಪಡಿಯಱತಿವೊ
ಲೆಸೆದಳ್
ಪೊಸದೇಸೆಕಾರ್ತಿ ಪೊಸಕಿಟ್ಟಳದೊಳ್       ೧೩

ವ|| ಅಂತು ರಜಸ್ವಲೆಯಾಗಿ ಚತುರ್ಥದಿನದೊಳ್ ಬಿಸಿಲಂ ಕಳೆದು ಬೆಳುದಿಂಗಳಂ ತೊಡುವ ಗಗನಲಕ್ಷ್ಮಿಯಂತೆ ಕೆಂಪಿನ ಪಸದನಮಂ ಕಳೆದು ತಲೆನೀರ್ಮಿಂದು ಬೆಳ್ಪಸದನಂಗೈದು

ನನೆಗಣೆಯಂ ಸ್ಮರಂ ಪಡೆದ ಪೂಗೂಳದಂತೆವೊಲಿರ್ದುದಚ್ಚಮಿಂ
ಚಿನ
ಸುಲಿಪಲ್ಗಳಚ್ಚಬಿಳಿದೆಂಬಿನಮುಟ್ಟ ದುಕೂಲಮಚ್ಚಗಂ
ಪಿನ
ಸಿರಿಕಂಡದಣ್ಬು ತೊಳಪಚ್ಚ ಬೆಳಂತಿಗೆಯೋಲೆಯಚ್ಚಮು
ತ್ತಿನ
ತೊಡವಚ್ಚಮಲ್ಲಿಗೆಯ ಸೋರ್ಮುಡಿ ಸೋಮಸಮಾನವಕ್ತ್ರೆಯಾ      ೧೪

ಸುದತಿಯ ದಿವ್ಯಗಂಧತನುಚಂದನಶಾಖೆಯೊಳಂಗಜಾಹಿಯಿ
ಕ್ಕಿದ
ಹೆರೆಯಂತಿರುಟ್ಟ ದುಗುಲಂ ಕುಚಕೋಕಯುಗಂಗಳಡ್ಡಗ
ರ್ಚಿದ
ಬಿಸದಂತೆ ಹಾಲತೆ ಕಣ್ಗೆ ಕರಂ ಸುಲಿಪಲ್ಲ ಪಙ್ತಿಯೊ
ಪ್ಪಿದುದು
ಸುಧಾಂಶುಬಿಂಬವೆಳಮುತ್ತನೆ ಮುಕ್ಕುಳಿಸಿರ್ದುದೆಂಬಿನಂ       ೧೫

ಮಿಗೆ ವಿರಹಿಕರಿಗಳಂಳಂ ಪೊ
ಯ್ದುಗಿದಂಗಜನಸಿಯೊಳಡರೆ
ಪತ್ತಿನ ಪೊಸಮು
ತ್ತುಗಳೆನೆ
ಸೋರ್ಮುಡಿಯೊಳ್
ಲ್ಲಿಗೆಯ
ಸರಂ ಕಣ್ಗೆ ವಂದುದಾ ಕಾಮಿನಿಯಾ  ೧೬

ವ|| ಎಂಬಿನಂ ಕೈಗೆಯ್ದು ಕಾಂತನ ಸೂೞ್ಗೆವರೆ ಸಮರತ ಸಮನಂತರ ಸಮಯದೊಳ್

ಅತಿಶಯ ಸಮಾಧಿವಾದಕ
ಯತಿಜನ
ಘನ ನಿನದಮೊದವೆ ಬಂದುದು ಚಿಂತಾ
ಗತಿ
ಜಿನಹಂಸಂ ತನ್ನೃಪ
ಸತಿಯಮಳಿನ
ಗರ್ಭಮಾನಸಕ್ಕತಿಜವದಿಂ   ೧೭

ವ|| ಆ ಪ್ರಸ್ತಾವದೊಳ್ ಕಾಮಕೇಳೀ ವಿನೋದದಿಂ ಶ್ರಮಂಬೆತ್ತು ಸುಖಸುಪ್ತಿಯಾಗಿ ಭಾನುವನಿಂಗಡಲಂ ಮದ
ದಾನೆಯನದಟಲೆವದೊಂದು ಕೇಸರಿಯಂ ಸಂ
ತಾನದ ಪೂವಿನ ಸರಮಂ
ಸ್ನಾನಂಗೆಯ್ಯುತ್ತುಮಿರ್ಪ ಸಿರಿಯಂ ಕಂಡಳ್  ೧೮

ವ|| ಕಂಡು ತನ್ನ ನಿದ್ರೆಯೊಡನೆ ಕೞ್ತಲೆ ಪರೆಯುತ್ತುಂ ಕಣ್ಮಲರೊಡನೆ ಕಮಲದಳವಲರೆ ತನ್ನ ಪಿಂಡುಗಂಕಣದೊಡನೆ ಕೊಳರ್ವಕ್ಕಿಗಳುಲಿಯೆ ತನ್ನ ಮನೋರಥದೊಡನೆ ರವಿರಥೋದಯ ಮಾಗೆ ಮಂಗಳಗೇಯಸ್ತುತಿಯುಂ ತಾಗೆ ಸೆಜ್ಜೆಯಿನುಜ್ಜುಗದಿನೆರ್ದು ಶೃಂಗಾರಗೇಹದೊಳ್ ಶೃಂಗಾರಂಗೆಯ್ಯುತ್ತುಮಿರ್ದಳನ್ನೆಗಂ

ಎಡದ ಕರದೊಳ್ಗಂಧಂ ಪೂಮಾಲೆ ಸಿರ್ಪಿನ ಸೇಸೆ ಪೊಂ
ಬಡಲಗೆಯೊಳೊಂದಂದಂ
ಚೆಲ್ವಾಗೆ ಗಂಧಜಳಂಗಳಂ
ಪಿಡಿದ
ಕಳಸಂ ಕಯ್ಯೊಳ್ಮತ್ತೊಂದಱೊಳ್ಮಿಗೆ ಶೋಭೆಯಂ
ಪಡೆಯೆ
ಪದಪಿಂದೊರ್ವಂ ಬಂದಂ ಪ್ರಗಲ್ಭಪುರೋಹಿತಂ         ೧೯

ವ|| ಬಂದು ದೇವರ ಬರವಂ ಕಾಣ್ಬಂತೆ ತನ್ನ ಬರವಂ ಕಂಡಿದಿರೆರ್ದು ಕಯ್ಗಳಂ ಮುಗಿದ ರಾಜವಲ್ಲಭೆಯ ಮುಂದೆ ನಿಂದು

||ಆಶೀರ್ವಾದ , ಸಂಸ್ಕೃತ||

ಲಕ್ಷ್ಮ್ಯೈತವ ಪ್ರಥಮ ಪುಣ್ಯಫಲಂ ಪ್ರಸೂತಾಂ
ಶೀತಾಂಶುಲಾಂಛನವತಾಂ
ವಿತತಿರ್ನಖಾನಾಂ
ರುಙ್ಮಂಜರೀಚರಣಪಲ್ಲವಫುಲ್ಲಕಾನಾಂ

ಶೋಭಾಜನಿರ್ಜಿನಪತೇಃ
ಫಲಿನಶ್ಚ ನಿತ್ಯಂ    ೨೦

ವ|| ಎಂದೋದಿ ಗಂಧೋದಕಮುಮಂ ಸಿದ್ಧ ಸೇಸೆಯುಮಂ ಕುಡೆ ಕೊಂಡು ಕುಳ್ಳಿರಿಸಲ್ಕುಡಿಸಿ ತನ್ನ ಕಂಡ ಕನಸುಗಳನನುಕ್ರಮದಿಂ ಪೇೞೆ ಕೇಳ್ದು

ಭಾನುವಿನಂತೆ ತೇಜದೊಡೆಯಂ ಕಡಲಂತೆ ಗಭೀರನಾನೆಯಂ
ತಾನತ
ಲೋಕದಾನಪತಿ ಕೇಸರಿಯಂತೆ ಪರಾಕರಮಾರ್ಥಿ ಸಂ
ತಾನದ
ಪೂವಿನಂತೆ ಲಲಿತಂ ಸಿರಿಯಂತೆ ಸಮಗ್ರಭಾಗ್ಯನು
ತ್ತಾನಯಶೋತ್ತಮಂ
ನಿನಗೆ ಪುಟ್ಟಿದಪಂ ಕುಲರತ್ನಭೂಷಣಂ     ೨೧

ವ|| ಎಂದು ಸ್ವಪ್ನಫಲಮಂ ಪೇೞ್ದಾ ಪುರೋಹಿತನಂ ಮಣಿಕುಂಡಲಾದಿಗಳಿನರ್ಚಿಸಿ ಪಂಚಪರಮೇಶ್ವರರ ಪೂಜಾಪ್ರಭಾವತತ್ಪರೆಯಾಗಿರೆ ಕೆಲವಾನುಂ ದಿವಸದಿಂ

ಸೆಳೆನಡುವನುಡಿವ ಭರದಿಂ
ಬಳೆವಂತಿರೆ
ಬಳೆಯೆ ಮೊಲೆಗಳವಱಯೆ ಚಲದಿಂ
ಬಳೆವಂತೆ
ಬಳೆಯೆ ನಡುವು
ಮ್ಮಳಿಸಿದವೋಲ್
ಕರ್ಗಿಕೊಂಡುವವಱ ಮೊಗಂಗಳ್   ೨೨

ನೆಗೆದ ಪಯೋಧರದ್ವಯದೊಳಾಕೆಯ ಗರ್ಭದ ರಾಜಪುತ್ರನಾ
ರೊಗಿಸುವ
ಪಾಲ್ಗಳಂ ಮಡಗಿ ಮುದ್ರಿಸಿದಂತೆ ವಿಧಾತ್ರನೊಯ್ಯಗೊ
ಯ್ಯಗೆ
ಕುಚಚೂಚುಕಂಗಳೊಳೆ ಕಣ್ಗಳೊಳಂಗನೆಯೆಚ್ಚಿಕೊಳ್ವ ಕಾ
ಡಿಗೆಯುದಿರ್ದಂತೆ
ಕರ್ಪು ಕವದಿಂದಡಿಯಿಟ್ಟುದು ಭೃಂಗಭಾಸುರಂ         ೨೩

ವ|| ಅಂತುಮಲ್ಲದೆ

ಬಿದಿ ಪಚ್ಚೆಯ ಕಾವಿನ ನೀ
ಲದ
ಕಳಸದ ಸವಡಿಗೊಡೆಯನಾ ವನಿತೆಯ
ರ್ಭದ
ಬಾಳಂಗೆತ್ತಿದನೆನಿ
ಸಿದುದು
ಸರೋಮಾಳಿ ಕುಚಯುಗಂ ಕೃಷ್ಣಮುಖಂ      ೨೪

ಕಾೞ್ಪುರವೇೞೆ ಪಾಲಮಯಮುಂ ಜಸಮುಂ ಜಿನಮಜ್ಜನಂಗಳಂ
ಮಾೞ್ಪ
ಜಿನೇಂದ್ರಪೂಜೆಯನೆ ಮಾೞ್ಪ ಜಿನಾಲಯ ಸಂಕುಲಂಗಳಂ
ಮಾೞ್ಪ
ಜಿನಪ್ರತಿಷ್ಠೆಯನೆ ಮಾೞ್ಪ ಚತುರ್ವಿಧಮಪ್ಪ ದಾನಮಂ
ಮಾೞ್ಪ
ಬಯಂಕೆಯಾಯ್ತು ಜಿನದತ್ತೆಗೆ ಭವ್ಯನಮೇರುಗರ್ಭದೊಳ್         ೨೫

ಜಿನತೀರ್ಥಾತಿಶಯಮುಮಂ
ಜಿನಜನನೀಗರ್ಭದೋಹಳಾತಿಶಯಮುಮಂ

ಜಿನಧರ್ಮಾತಿಶಯಮುಮಂ

ಜಿನದತ್ತಾದೇವಿ
ಕೇಳಲೞ್ತಿಗೆಯಾದಳ್        ೨೬

ವ|| ಅಂತು ಬಯಸಲ್ತಕ್ಕ ಬಯಕೆಗಳಿಂ ನವಮಾಸಂ ತೀವೆ

ಮಣಿಮಯ ಪುತ್ರಿಕೆ ಚಿಂತಾ
ಮಣಿಯಂ
ಲತೆ ಪಾರಿಜಾತಮಂ ಕನ್ನಡಿ ಪಾ
ರ್ವಣ
ಶಶಿಯಂ ದೀಪಿಕೆ ದಿನ
ಮಣಿಯಂ
ಪಡೆವಂತೆ ಪಡೆದಳಾ ಸತಿ ಸುತನಂ        ೨೭

ಜಯಪತಿ ಪುಟ್ಟಲೊಡಂ
ತೇಜಮನಿಂಬಿಟ್ಟು
ಬಂದು ಪೊಡೆವಟ್ಟ ಸುಹೃ
ದ್ರಾಜಕಮಗಿದಾತಂಗಪ

ರಾಜಿತನೆಂದಿಟ್ಟರಮರ್ದಿನೊಸರಂ
ಪೆಸರಂ   ೨೮

ಮಂದಸಿನೊಳೆ ಮಾಣಿಕಮಿ
ರ್ಪಂದದಿನತಿಶಯ
ಮರಾಳವಾಳೋದರದೊಳ್
ಮಂದಾರದ
ಸಸಿಯೆಸೆದಿ
ರ್ಪಂದದಿನಭಿಮಾನ
ಮೇರು ತೊಟ್ಟಿಲೊಳೆಸೆದಂ       ೨೯

ತೂಗುವ ತೊಟ್ಟಿಲೊಳಾಡಿದ
ನಾ
ಗುಣನಿಧಿ ಪೊಳೆದು ಪಾಱಿ ಪೆಱಗಾದೆಂ ಚಿಂ
ತಾಗತಿ
ಖಚರನೆನೆಂದು
ಭೋಗತಿಯಂ
ನಭದೊಳಾಡಿ ತೋಱುವ ತೆಱದಿಂ      ೩೦

ನಡೆಗಲ್ವಂದೆ ತಳರ್ನಡೆ
ನಡೆಯಿಸಿದಂ
ನೃಪಕುಮಾರನೆಳೆಯಂ ಬಿಣ್ಪಿಂ
ನುಡಿಗಲ್ವಂದೆ
ತೊದಳ್ನುಡಿ
ನುಡಿಯಿಸಿದಂ
ತನಗೆ ಸೋಲ್ತ ವಾಕ್ಕನ್ನಿಕೆಯಂ          ೩೧

ಗರ್ವಾರಿಗೆ ಷಟ್ಪ್ರತ್ಯಯ
ನಿರ್ವಾಹಂ
ಛಂದದೊಳ್ ಸ್ವರಜ್ಞಾನಂ ಗಾಂ
ಧರ್ವದೊಳನುಭವಚರಮಾ

ಯುರ್ವೇದದೊಳಾದುದಿನ್ನರಾರ್
ನೃಪತನಯರ್      ೩೨

ವೀರಶ್ರೀಯಂ ನಿಡುದೋಳ್
ಕೂರಿಸಿದುದು
ಕೈದುಗಲ್ತು ಜಸವೆಣ್ಣಂ ದಿ
ಗ್ವಾರಣಮನೇಱಿಸಿತ್ತು

ಜಾರೂಢಪ್ರೌಢಿ
ರಾಜರಾಜಾತ್ಮಜನಾ         ೩೩

ಕುವರಂಗೆ ಬಾಜನೆ ಲಿಪಿವ್ರಜದೊಳ್ ಪದಸಿದ್ಧಿಪಾಠಮಾ
ವ್ಯಾಕರಣಂಗಳೊಳ್
ಮತಿಯಳಂಕೃತಿಯೊಳ್ ಪರಪಕ್ಷ ದೂಷಣಾ
ಲೋಕನದುರ್ಕು
ತರ್ಕದೊಳಭಿಜ್ಞತೆಯಾಗಮದೊಳ್ ಪ್ರಸನ್ನ ಲೀ
ಲಾಕವಿತಾಗುಣಂ
ಸಕಲ ಭಾಷೆಯೊಳಾದುದು ತಜ್ಞರಂಜನಂ    ೩೪

ವ|| ಅಂತು ಸಕಳ ಶಾಸ್ತ್ರ ಶಸ್ತ್ರಾಭ್ಯಾಸನ ತ್ರಾಣ ಶ್ರೇಣಿಕರ್ಷಣ ನಿರತಿಶಯನಿಶಿತಪ್ರಗಲ್ಭ ಪರಾಕ್ರಮನುಂ ಚಿರಾರೂಢ ಯೌವನನುಮಪ್ಪ ಮಗನಂ ಕಂಡು ತದೀಯ ಪಾಣಿಪಲ್ಲವಮನನು ರೂಪ ಕನ್ಯಾ ಕರಕಿಸಲಯದೊಳ್ ತೊಡರ್ಚಲ್ ಬಗೆದು ಭಗವದರ್ಹತ್ಪೂಜಾಪೂರ್ವಕ ಮರ್ಹದ್ದಾಸನಪೂರ್ವ ನಿವಾಸನಂ ಪೂರ್ವಭವ ಪ್ರೇಮ ಪ್ರೇರಿತಮತಿಯಪ್ಪ ಪ್ರೀತಿಮತಿಯೆಂಬ ರಾಜಕುಮಾರಿಯೊಡನೆ ಮಹೋತ್ಸವದಿಂ ಮದುವೆಮಾಡಿ

ಅಂಗಜಮಂತ್ರ ಸಿದ್ಧಿವಡೆದಂತಿರೆ ಮೀಂಬೊಣರಾಗಿ ಬಾಳ ಜಾ
ಳಂಗಳ
ಸಿಲ್ಕುಗಂಡುವು ಕುಮಾರಿಯ ಕಣ್ ಮಱಿದುಂಬಿಯಾಗಿ ಸೊ
ರ್ಕಿಂಗೆ
ಸರೋಜದೊಂದು ಸವಿಗಂಡುವು ಬಾಳಚಕೋರವಾಗಿ ಬೆ
ಳ್ದಿಂಗಳ
ಸುಗ್ಗಿಗಂಡುವು ಕುಮಾರನ ಕಾಂತಿ ಮುಖೇಕ್ಷಣಂಗಳೊಳ್        ೩೫

ತುಱುಗೆವೆನಿಂದು ನೋಡೆ ಕಡೆಗಣ್ಣಿದಿರ್ಗೊಳ್ವಳಿಪಾಡೆ ಪೊಕ್ಕು ಸೈ
ಪೆಱಗಿದಿರ್ಗೊಳ್ವ
ಸೋಂಕು ನಳಿತೋಳಿದಿರ್ಗೊಳ್ವ ತೊಡಂಕಿನಪ್ಪು ಬಾ
ಯ್ದೆಱೆಯಿದಿರ್ಗೊಳ್ವ
ಚುಂಬನಮಲಂಪಿದಿರ್ಗೊಳ್ವುಗಿ ಮೇರೆದಪ್ಪಿ ಕಾ
ಳ್ಮೊಱೆಯಿದಿರ್ಗೊಳ್ವ
ಲಲ್ಲೆಯಿದಿರ್ಗೊಂಡುದು ಕೂಟದ ಕಾಯ್ಪುಮೋಪರಾ          ೩೬

ವ|| ಅದಲ್ಲದೆಯುಂ

ಅರಮಗನಿರ್ಪನೋಲಗದೊಳೋಲಗಕಾರ್ತ್ತಿಯರೞ್ತಿಗಿಟ್ಟ
ಪ್ಪುರದ
ಪರಲ್ಗೆ ಬಿರ್ದರಲ್ಗೆ ಸೂಸಿದ ಕುಂಕುಮರೇಣುಗೊಕ್ಕ
ತ್ತುರಿಯ
ರಜಕ್ಕೆ ಪಾಯಲೆಡೆಯಿಲ್ಲದ ಕರ್ಪು ಕೆರಳ್ದು ದರ್ಪಕಂ
ತಿರಿಪುವ
ಚಕ್ರದಂತೆ ತಿರಿಯುತ್ತಿರೆ ಮೇಲೆ ಮದಾಳಿಮಾಳೆಗಳ್   ೩೭

ಕನಕಾಂಗಚ್ಛವಿ ಪದ್ಮರಾಗಚರಣಂ ನೀಳಾಳಕಂ ಜಾತಿವ
ಜ್ರನಖಂ
ಮೌಕ್ತಿಕಕಾಂತಿದಂತನಕರಂ ಬಾಳಪ್ರವಾಲಾಧರಂ
ವನಿತಾಸಂಕುಲಮೊಪ್ಪೆ
ಕಣ್ಣಬೆಳಗಿಂ ಕಣ್ಗೊಪ್ಪುಗುಂ ಕಾಮದೇ
ವನ
ಭಂಡಾರದ ಬಾಗಿಲಂ ತೆಱೆದವೋಲ್ ಭೂಪಾಲಕೇಳೀಗೃಹಂ         ೩೮

ವ|| ಅದಂ ಕಂಡರ್ಹದ್ದಾಸದೇವಂ ಕಾಮದೇವಂಗೆ ಪಟ್ಟಂಗಟ್ಟಿ ಕೊಟ್ಟ ರಾಗರಾಜ್ಯಕ್ಕೆ ತೆಲ್ಲಂಟಿಯಾಗಿ

ಮುದದೆಸೆದಿರ್ಪ ಬದ್ದವಣಮುದ್ದವಣಂ ರಿಚೆ ಪಾಟವಾಟವೆ
ತ್ತಿದ
ಗುಡಿ ತೋರಣಂ ಸಸಿ ಮೊಸರ್ ಪಸೆ ಸೇಸೆ ವಿಳಾಸಿನೀಜನಂ
ಚದುಕಮಿವೊಡ್ಡುಗಟ್ಟೆ
ಮದಮಂ ರಿಪುವಾರಣನೆತ್ತಿ ಕಟ್ಟೆ
ಟ್ಟಿದನಪರಾಜಿತಂಗೆ
ಪರಮೋತ್ಸವದಿಂ ಯುವರಾಜಪಟ್ಟಮಂ    ೩೯

ಒಂದಡಿಯಿಟ್ಟುದು ಸಿರಿ ನೃಪ
ನಿಂದಪರಾಜಿತನೊಳೆಸೆವ
ಪೊಸ ಜವ್ವನದೊಳ್
ಬಂದ
ಬಸಂತದೊಳಡಿಯಿಡು
ವಂದದಿನುತ್ಸವದೊಳಿರ್ದ
ಸಿರಿ ಸರಸಿಜದೊಳ್         ೪೦

ವ|| ಅಂತು ಸುತವಿಭಕ್ತ ರಾಜ್ಯಭಾರನುಂ ಕಾಲವಿಭಕ್ತ ವಯೋಭಾರನುಮಾಗಿ ಪಂಜರದಿಂದರೆನುಸುಳ್ವ ಶಕುಂತನಂತೆ ಭೂಕಾಂತನಿರ್ಪಿನಮೊಂದು ದಿವಸಂ

ತಂದಿಳೆಗಱನೆಂಬಮರ್ದಿನ
ತಂದಲನುಗುೞುತ್ತುಮೊಂದು
ಜಳಧರಪಟಳಂ
ಬಂದುದೆನೆ
ಸಮವಸರಣಂ
ಬಂದುದು
ಭೋರೆಂದು ವಿಮಲವಾಹನ ಜಿನನಾ        ೪೧

ನೀಲದ ನೆಲಗಟ್ಟುಂ ಮಣಿ
ಧೂಲೀಸಾಳಂ
ಪ್ರಲಂಬಪಲ್ಲವಮೆಸೆಗುಂ
ಭೂಲಲನೆಗೆ
ಬಿದಿಯೆತ್ತಿದ
ಪೀಲಿಯ
ಕೊಡೆಯಂತೆ ಸಮವಸೃತಿ ಜಿನಪತಿಯಾ     ೪೨

ವ|| ಆ ಸಮವಸರಣಕ್ಕರ್ಹದ್ದಾಸನುಂ ವಂದನಾಭಕ್ತಿ ನಿಮಿತ್ತಂ ಪುತ್ರ ಮಿತ್ರ ಸಮೇತನಾಗಿ ಪೋಗಿ ವಿಮಲವಾಹನ ಜಿನಪತಿಯಂ ಪ್ರದಕ್ಷಿಣಂಗೆಯ್ದು ಪೂಜಿಸಿ ಪೊಡೆವಟ್ಟು ಧರ್ಮಮಂ ಕೇಳ್ದು ಸಂಸಾರಶರೀರನಿರ್ವ್ವೇಗದಿಂ ಬೇಗಮಪರಾಜಿತಂಗೆ ರಾಜ್ಯಮಂ ಕೊಟ್ಟಯ್ನೂರ್ವ್ವ ರರಸುಮಕ್ಕಳ್ವೆರಸು ತಪೋಂಗನಾಲಿಂಗಿತನಾದನದರ್ಕೆ ಪುರುಡಿಸಿದಂತೆ ಜಿನದತ್ತೆಯುಂ ಸಂಯಮದತ್ತಚಿತ್ತೆ ಯಾದಳಪರಾಜಿತನುಂ ಸಮ್ಯಗ್ಧರ್ಶನಾದಿ ಶ್ರಾವಕವ್ರತಂಗಳಿನಳಂಕೃತನಾಗಿ ಪೊೞಲ್ಗೆವಂದು ಪರಿಜನದಮನಕ್ಕೆ ವಂದು ತಂತ್ರಾವಾಪದೊಳ್ ಭರಂಗೆಯ್ದು ಪೃಥ್ವೀಪಾಲನಮನಪ್ಪುಕೆಯ್ಯೆ

ತೀಡುವ ಗಾಳಿಯುಂ ಸೆಳೆಯಲಣ್ಮದು ಮೇಲುದನಂಜಿ ಪಣ್ಗಳಂ
ಕೋಡಗಮಿಕ್ಕಿದಲ್ಲದೆ
ಕರ್ದುಂಕದು ಪೆಂಡಿರ ಪೊನ್ನಮಾಲೆಯಂ
ಸೂಡಿಯೆ
ಬಟ್ಟೆವೋಪಳಗಿದನ್ಯ ರಥಾಂಗಿಕೆಯೊಳ್ ರಥಾಂಗಮಂ
ಕೂಡದೆನಿಪ್ಪುದಾಜ್ಞೆಯಪರಾಜಿತಭೂಪನ
ರಾಜ್ಯಲಕ್ಷ್ಮಿಯಾ       ೪೩

ನರಪತಿಯಾಜ್ಞೆಗೆ ಬಿಸಿಲೋ
ಸರಿಸಿರ್ದುದು
ಕೊಲ್ಲದಂಧಕಾರಮನೆನೆ ಕೆಂ
ಬರಲ
ರುಚಿ ನೀಲರುಚಿಯೊಳ್
ಬೆರಸಿರ್ಪುದು
ದೇಶದೊಳಗೆ ತನ್ನೃಪಸುತನಾ ೪೪

ತಲ್ಲಣಿಸಿ ನೆಗೞ್ದ ಪಾಣ್ಬರ
ಮಲ್ಲನ
ತೇಜಕ್ಕೆ ತನ್ನ ಕರಮಂ ವಸುಧಾ
ವಲ್ಲಭನ
ದೇಶದೊಳ್ ದಿನ
ವಲ್ಲಭನಿಡಲಣ್ಮನನುದಿನಂ
ಕುಮುದಿನಿಯೊಳ್          ೪೫

ವ|| ಎನಿಪಗ್ಗಳವೊಗೞ್ತೆಗೆ ನೆಲೆಯಾಗೆ ಪ್ರೀತಿಮತಿ ಪ್ರೇಮಪರವಶಾಪಾಂಗನಪರಾಜಿತಂ ರಾಜ್ಯಲಕ್ಷ್ಮೀವಿರಾಜಿತನಾಗಿರ್ಪನ್ನೆಗಂ ವಿಮಲವಾಹನನುಮರ್ಹದ್ದಾಸನುಂ ನಿರ್ಮೂಲಿತ ಕರ್ಮರಾಗಿ

ಎರಡಳಿಯೆಕ್ಕೆಯ ಪೂವಿನೊ
ಳಿರಲೊಲ್ಲದೆ
ಬಿಟ್ಟು ಪಾಱಿ ಪಿರಿದೆನಿಸಿದ ಪಾ
ದರಿಯ
ತುದಿಗೊಂಬಿನಿಂಬಿನ
ಬಿರಿಮುಗುಳೊಡನೆಱಗುವಂತೆ
ಮುಕ್ತಿಗೆ ಸಂದರ್       ೪೬

ಅವರಿರ್ವರುಮೊರ್ವಳೆ ಮು
ಕ್ತಿವಧುಗೆ
ಕಡುಗೂರ್ತು ಕೂಡಿ ಪೋದೊಡಮದನೆಂ
ದವರಾರೆಱಗಿದುದವರ್ಗೀ

ಭುವನಜನಂ
ಸಮೆದುದರ್ಕೆ ಶಾಸ್ತ್ರಮುಮುಂಟೇ        ೪೭

ವ|| ಆ ಪ್ರಸ್ತಾವದೊಳ್

ಜನಪಂ ತದ್ಯಜನಕ್ಕೆ ಪೋಪ ಸುರಭೇರೀನಾದಮಂ ಕೇಳ್ದಿದೇ
ನೆನೆ
ಪೋದಂ ಗಡ! ಮುಕ್ತಿಗರ್ಹನೊಡನರ್ಹದ್ದಾಸನುಂ ಕೇಳಿಮೆಂ
ದೆನೆ
ಮಾತಿಂದಮೆ ಮುನ್ನಮುನ್ನತಗುರು ಶ್ರೀಪಾದಮಂ ಮರ್ಚಿ ಬೆ
ನ್ನನೆ
ಪೋದಂತಿರೆ ಮೂರ್ಛೆವೋದನರಸಂ ವ್ಯಾಮೋಹಮೇಗೆಯ್ಯದೋ  ೪೮

ವ|| ಇನಿಸಾನುಂ ಬೇಗಕ್ಕೆ ಮೂರ್ಛೆದಿಳಿದುಂ ಮೋಹಮೂರ್ಛೆ ತಿಳಿಯದಿರೆ ತಳವೆಳಗಾಗಿ ತನ್ನೊಳ್ತಾನೆ ಬಗೆದು

ನೆಲೆಮಾಡಂಗಳನೇಱಿ ನೋೞ್ಪ ತೆಱದಿಂ ನಿಶ್ರೇಣಿಯಂ ಕಾಂಚನಾ
ಚಲದಿಂ
ನಾಕಮನೇಱಿ ನೋೞ್ಪೆನಡರ್ವೆಂ ಗ್ರೈವೇಯಕಕ್ಕೆಯ್ದುವೆಂ
ಲಲಿತಾನುತ್ತರೆಗಳ್ಗೆ
ಪೋಪೆನದಱಿಂ ಸರ್ವಾರ್ಥಸಂಸಿದ್ಧಿಗಂ
ಬಲಗೊಳ್ವೆಂ
ಬೞಿಕೆನ್ನ ಸದ್ಗುರುಗಳಂ ಸನ್ಮೋಕ್ಷದೊಳ್ ಮೋಕ್ಷದೊಳ್    ೪೯

ವ|| ಇದು ನಿನಗಿನ್ನೇೞನೆಯ ಭವಕ್ಕಾದಪುದೆಂದಾಕಾಶವಚನಮನವಕರ್ಣಿಸಿ ಮತ್ತಮಿಂತೆಂದಂ

ವಿಧುವೊಂದು ಪೊೞ್ತು ವರವಾ
ರಿಧಿಯಲ್ಲಿಗೆ
ಪೋಪುದಾಗಿ ಸುಖಮಿರ್ಕುಂ ವಾ
ರಿಧಿ
ಮುಕ್ತಿಗೆ ಪೋದೊಡೆ ಪೇೞ್
ವಿಧು
ಪೆಱಗೆಂತಿರ್ಕುಮೆಂತು ಸೈರಿಸಲಾರ್ಕುಂ          ೫೦