ಶ್ರೀಪತಿಯುಂ ಸೈಪಿಂ ಪೃ
ಥ್ವೀಪತಿಯುಂ
ವೀರಪತಿಯುಮಪ್ಪುದುಮಿರದ
ಲ್ತಾಪೊೞ್ತುವಿತ್ತು
ಕೀರ್ತಿ
ಶ್ರೀಪತಿಯಾದಂ
ಸರಸ್ವತೀ ಶೃಂಗಾರಂ       ೧

ಪೊಂ ಪಟ್ಟಮಪ್ಪಮೊಲ್ಮೂ
ರ್ಖಂ
ಪಂಡಿತನಪ್ಪ ತೆಱದೆ ವಾಣಿಯ ದಯೆಯಿಂ
ದಂ
ಪರದನರಸನಾಗಿ
ರ್ದಂ
ಪೃಥ್ವಿಗೆ ಸೈಪು ಸಮೆಯಲಾಱದುದುಂಟೇ         ೨

ವ|| ಒಂದು ದಿವಸಮಾ ಪ್ರತಾಪಮಾರ್ತಂಡಂ ಮಾರ್ತಂಡೋದಯ ಸಮಯದೊಳೊ ಡ್ಡೋಲಗಂಗೊಟ್ಟಿರೆ

ಕರಿಕುಂಭದ ಮುತ್ತಂ
ತ್ತುರಿಮಿಗಮಂ
ಸಿಂಹಶಾಬಮಂ ದರ್ಶನಮಿ
ತ್ತುರವಣಿಸಿ
ಬಂದನಾ ಧೀ
ವರನಾಯಕನಿಭ್ಯಕೇತು
ಭೂನಾಯಕನಂ     ೩

ವ|| ಕಾಣಲೊಡನಾರ್ಗಂ ಮಾಡದ ಮೋಹಮನವಂಗೆ ಮಾಡಿ ಸೇನಾಪತಿ ಪದವಿಯಂ ಕೊಟ್ಟು ತನಗಾತನೇ ಪರಮ ವಿಶ್ವಾಸ ಭೂಮಿಯುಂ ಪರಮ ಪ್ರೇಮ ಭೂಮಿಯುಮಾಗೆ ಮಳಯಾನಿಳಂಬೆರಸು ಬಸಂತಂ ವನರಾಜ್ಯಂಗೆಯ್ವಂತೆ ದೂರಾಯಾತಧೀವರಂ ಬೆರಸು ವಿಳಾಸವಸಂತಂ ರಾಜ್ಯಂಗೆಯುತ್ತುಮಿರ್ದೊಂದು ದಿವಸಮಾ ಮಂದರ ಧೀರಂ ಮಂದರಸ್ಥವಿರಭಟ್ಟಾರಕರ ಸಮೀಪದೊಳ್ ಧರ್ಮಮಂ ಕೇಳುತ್ತುಮಿರ್ದ ದೂರ ದೇಶದೊಳಿರ್ದ ಧೀವರಾಖ್ಯನಲ್ಲಿಗೆ ಮೆಲ್ಲಗೆ ಪತ್ತೆ ಸಾರ್ದು ಸಾರ್ದ್ರ ಹೃದಯನಾಗಿ ಮನಃಪ್ರಿಯ ವಚನಾಮೃತಮಂ ಕಿವಿಗುಡಿತೆಯಿಂ ಕುಡಿಯುತ್ತುಮಿರ್ಪುದಂ ಕಂಡು

ಎನಗೀ ಮೀಂಗುಲಿಗನ ಮೇ
ಗನಿಮಿತ್ತಂ
ಪ್ರೇಮಮಣುಗು ಮಗನೊಳಮೊಲ್ವಂ
ಗನೆಯೊಳಮಾಗದುದಾಯ್ತಿದ

ನನುಪಮ
ನಿರ್ಬಾಧಬೋಧ ಭಾಸುರ ಬೆಸಸಿಂ         ೪

ಎನೆ ನಿನ್ನ ಪೋದ ಭವದಂ
ಗನೆ
ವಾಗುರೆಯೆಂಬಳೀತನಾ ಭವದೊಳೆ ನೀಂ
ವನಚರನೆ
ಎನಲೊಡಂ ತೆ
ಕ್ಕನೆವೋದಂ
ಜನ್ಮನಾಟಕಕ್ಕವನೀಶಂ        ೫

ಆರೇನಾದಪೆಂಬುದ
ನಾರಱಿವರೊ
ಜಗದೊಳುಳ್ಳ ರೂಪುಗಳಂ ಸಂ
ಸಾರಿಯಘಸೂತ್ರಧಾರ

ಪ್ರೇರಣೆಯಿಂ
ಪೊತ್ತು ಸುತ್ತಿ ಕುಣಿಯುತ್ತಿರ್ಪರ್

ವ|| ಎಂದು ಬೇಗದಿಂ ನಿರ್ವೇಗಪರನಾಗಿ ಸುಕೇತುವೆಂಬ ತನ್ನ ತನಯಂಗಿಭ್ಯಕೇತು ರಾಜ್ಯಭಾರಮನಿತ್ತು ತಪೋರಾಜ್ಯಭಾರಮನೆತ್ತಿಕೊಳ್ಳಲೊಡನೆ

ಯುವತಿ ಕಮಳಪ್ರಭೆಯುಮಾ
ತ್ಮವಲ್ಲಭ
ಪ್ರೇಮದಿಂ ತಪಂಬಟ್ಟಳ್ ಕಾಂ
ತವಸಂತಂ
ಬೀತೊಡೆ ಮಾ
ಧವಿಲತೆಯುಂ
ಪಿಂತೆ ಬೀಯದೇನಿರ್ದಪುದೇ  ೭

ವ್ರತಿಪತಿ ಪದಕಮಳ ಮಂ
ಧ್ರುವತನಂದಾಗಿ
ಧೀವರಂ ಲೋಪಿತ ಪಾ
ಪವ್ರಣನಣುವ್ರತಾದಿ
ಗು
ಣವ್ರತ
ದೀಕ್ಷಾ ವ್ರತಂಗಳಂ ಕೈಕೊಂಡಂ       ೮

ವ||ಅಂತು ಮಕರಕೇತುವಿಂಗೆ ಧೂಮಕೇತುವಾಗಿಭ್ಯಕೇತು ದಿವ್ಯಕಾಂತಾ ಕಟಾಕ್ಷಧವಳ ದೀಧಿತಿ ಸುಧಾ ಸೌಧಮಪ್ಪ ಸೌಧರ್ಮಕಲ್ಪದ ಶ್ರೀನಿಳಯ ವಿಮಾನದೊಳ್ ಶ್ರೀದೇವನೆಂಬ ದೇವನಾದಂ ತಪಸ್ತಪನ ವಿಕಸಿತ ವದನ ಕಮಳಪ್ರಭೆಯಪ್ಪ ಕಮಳಪ್ರಭೆಯುಂ ಸುಪ್ರಭವಿಮಾನದೊಳ್ ವಿಮಲಪ್ರಭನೆಂಬ ದೇವನಾದಳ್ ವ್ರತ ಸ್ವರೂಪ ನಿರೂಪಣ ಪ್ರವೀಣ ಪರಮಾಗಮ ಶ್ರವಣ ನಿರ್ಮಳ ಭೂತ ಧೀವರನಪ್ಪ ಧೀವರನುಂ ವಿದ್ಯುತ್ಪ್ರಭವಿಮಾನದೊಳ್ ಶ್ರುತಪ್ರಭಾಂಕನೆಂಬ ದೇವನಾದಂ ಇಂತಾ ಮೂವರುಂ ಸುರಲೋಕ ಸೌಖ್ಯಮನನುಭವಿಸಿ ಬಂದು

ಶ್ರೀದೇವಂ ಚಿಂತಾಗತಿ
ಯಾದಂ
ವಿಮಳಪ್ರಭಂ ಮನೋಗತಿಯುಂ ತಾ
ನಾದಂ
ಶ್ರುತಪ್ರಭಾಂಕನು
ಮೀ
ದುರಿತಾರಾತಿ ಚಪಳಗತಿ ತಾನಾದಂ    ೯

ವ|| ಇದು ನಮ್ಮ ಮುತ್ತಮೂವರ ಭವಪಂಚಕ ಪ್ರಪಂಚಿತ ಪ್ರೀತಿ ನಿಮಿತ್ತಮೊಂದು ಹಿತೋಪದೇಶಮಂ ಕೇಳ್ವೊಡೆ

ಇದಱೊಳನಿರುದ್ಧನವರಂ
ಧ್ರದೊಳಪಘನ
ಘಟದೊಳಯನ ಶೀಲನದಿಂ ಪೋ
ಪುದು
ಚೋದ್ಯಮೆ ಇರ್ದಪುದೆಂ
ಬುದೆ
ಚೋದ್ಯಂ ಪ್ರಾಣಪವನನನುಚಿತ ಭವನಂ        ೧೦

ಎಡೆಯಾಡುತಿರ್ಪ ವೇಣುವೆ
ಕೆಡೆವಂತಿರೆ
ತಂತು ತೀರ್ವುದುಂ ಹತಕಾಯಂ
ಕೆಡೆವುದು
ಕಾಣಲ್ಕಲ್ಲದೆ
ಸಡಪುಡನಱಿವನ್ನನಾವನಾಯುವ
ತವಿಲಂ   ೧೧

ವ|| ತಿಂಗಳಂತೆ ನಿನಗೊಂದೇ ತಿಂಗಳಾಯುಷ್ಯಮವಶ್ಯಂ ಪರವಶನಾಗಿರದೆ ಪರಲೋಕ ಹಿತಮನೆ ಮನದೆಗೊಳ್ಳೆಂಬುದುಮಪರಾಜಿತನಿಂತೆಂದಂ

ಇಂದುಗಮಿನಂಗಮಂಬುದ
ವೃಂದಕ್ಕಂ
ಫಳಿನ ಶಾಖೆಗಂ ಮೇದಿನಿಗಂ
ಮಂದಾನಿಳಂಗಮಿನ್ನೆ

ಮ್ಮಂದಿಗರ್ಗಂ
ಸಲೆ ಪರೋಪಕಾರಮೆ ಶೀಲಂ          ೧೨

ಗುಣದಿಂದಂ ಸಹಜಾತಮೀಹದ ರಿಣಂ ಬಲ್ಲಿತ್ತು ನೀಮೀ ಮಹಾ
ಗುಣದಿಂದಲ್ಲಮರತ್ವಮಂ
ಬಿಸುಟೊಡಂ ತಾಂ ಬಿಟ್ಟುದಿಲ್ಲೆಮ್ಮ ಮೇ
ಗಣ
ನಿಮ್ಮೊಂದು ಮಮತ್ವಮಿಂತುಟು ರಿಣಂ ಕ್ಷೇತ್ರವ್ಯಮೆಂದಂದು ಚಾ
ರಣಯುಗ್ಮಕ್ಕತಿ
ಭಕ್ತಿಯಿಂದೆಱಗಿದಂ ವಿದ್ಯಾವಧುವಲ್ಲಭಂ        ೧೩

ವ|| ಎಱಗುವುದುಮವರಭ್ಯುದಯ ಪರಂಪರಾಪ್ರಾಪ್ತನಾಗೆಂದು ಪರಸಿ ಪೋದರಿತ್ತ ಲಪರಾಜಿತನುಂ ಮುನ್ನಿನಂತೆ ನಿರೀಕ್ಷಣ ವಿಕಾರಮುಮಹಂಕಾರಮುಮಿಲ್ಲದೆ ಪರಮವ್ರತಿ ಪೊೞಲಂ ಪುಗುವಂತೆ ಪೊೞಲಂ ಪೊಕ್ಕು ನೆರೆಮನೆಗೆ ಬಂದುಪಸರ್ಗಕ್ಕೆ ಸಲ್ವತ್ತಿಗಿವಗಿಲ್ಲದಿವು ಸಲ್ಲವೆಂದುದ್ಯೋಗಿಸುತ್ತಂ ತ್ಯಾಗ ದಾನಂಗಳೊಳಂ ಸಾಂಯುಗೀನ ಜನಂಗಳೊಳಂ ಕಾಲ್ಗುಡದ ಮೋಹಮಂ ಧರ್ಮಧವಳ ದ್ವಿರದನಮನೇಱಿಸಿ ಪವನ ಜವಸತ್ವ ತುರಂಗಮಂಗಳ ಮೇಗಣ ಮನಮನುಚ್ಚೈಶ್ರವಮಪ್ಪ ವೈರಾಗ್ಯವಾಜಿಯ ಬೆಂಗೆವರಿಸಿ ಮುಂದಲೆಯ ಕಸದಂತೆ ಮುಂತಿರ್ದ ಕಸವರಮಂ ಸತ್ಪಾತ್ರದ ಕಯ್ಗೆ ಮಣ್ಣಿಕ್ಕುವಂತಿಕ್ಕಿ

ಪರಿತಾಪಾತಪೞ್ಗಿದತ್ತೊಗೆದುದುದ್ಭೋಧ ಪ್ರದೀಪಂ ದಮ
ದ್ವಿರದಾರೂಢನೆನಾದೆನೇವೆನಿದನೆಂದಂದಾನೃಪಂ
ಛತ್ರಚಾ
ಮರ
ಸಿಂಹಾಸನಮೆಂಬಿವಂ ತ್ವರಿತದಿಂ ಪ್ರೀತಿಂಕರಂಗಿತ್ತಿನೊ
ಲ್ವರೆ
ಮಿಕ್ಕಚ್ಯುತರಾಜ್ಯಮಂ ಪಡೆವವೊಲ್ ಸಾಮಾನ್ಯ ಸಾಮ್ರಾಜ್ಯಮಂ   ೧೪

ವ|| ಅಲ್ಲಿಂ ಬೞಿಯ ಭಂಡಾರದ ಪೊನ್ನೆಲ್ಲಮಂ ತೆಗೆಸಿ ತ್ರಿಭುವನಾಭರಣಮೆಂಬ ಜಿನಮಂದಿರದ ಮುಂದೆ ಮಂದರಮಂ ಮಾಡಿಸಿ ಪಂಚರತ್ನ ಸಂಚಯಿದಿನದಕ್ಕೆ ಕಲ್ಪ ಕುಜಂಗಳಂ ಕಲ್ಪಿಸಿ ನಕ್ಷತ್ರಮಾಲೆಯೆಂಬ ಹಾರಮಂ ಚಂದ್ರಾದಿತ್ಯರೆಂಬ ಮಣಿದರ್ಪಣಂಗಳುಮಂ ಬಲವರಿಸಿ

ಅನಘಂ ತಾನೆ ಮಹೇಂದ್ರನಾಗಿ ಮಹನೀಯಾನರ್ಘ್ಯಮಾಣಿಕ್ಯಮಂ
ಡನಮಾಳಾಂಶು
ಸಹಸ್ರನೇತ್ರತನುರಾಜೇಂದ್ರ ಜಿನೇಂದ್ರಗೆ
ಜ್ಜನಮಂ
ನಿರ್ಮಿಸಿ ನಿರ್ಮಳಾಧ್ವರಮನಂದಷ್ಟಾಹ್ನಿಕಂ ಮಾಡಿ
ತ್ಕನಕಾದ್ರೀಂದ್ರಮನಿತ್ತನರ್ಥಿನಿಕರಕ್ಕಾ
ಧೈರ್ಯ ವಿದ್ಯಾಧರಂ    ೧೫

ರಮಣೀರಾಗ ವಿಕಾಸಕೋಶಲಪನಾಂಭೋಜಾತ ಲಾವಣ್ಯಮಂ
ಮಧೂಚ್ಚಿಷ್ಟಮನುಂಡು ಬೆಂಡುನೆಗೆದಸ್ಪೃಶ್ಯಂಗಳಾಗಿರ್ದ
ನ್ನ
ಮನೋನೇತ್ರಮದಾಳಿಗಳ್ಗೆ ಸಮಗಂಗಾಸ್ನಾನದಿಂ ಶುದ್ಧಿಯಂ
ಸಮೆದಾ
ಸಂಯಮಭಾಜನಂ ಜಿನಪದಾಂಭೋಜಂಗಳೊಳ್ ಸಾರ್ಚಿದಂ  ೧೬

ವ|| ಅನಂತರಂ ಬಾಂಧವಬಂದನಮಂ ಪಱಿದು ಪಂಚಮುಷ್ಟಿಯಿಂ ಕೇಶಪಾಶಮಂ ಪಱಿದು ೞಿದಪ್ಪತ್ತೆರಡು ದಿವಸಮಂ ಪ್ರಾಯೋಪಯೋಗ ಸಂನ್ಯಸನದಿನಿರ್ಪತ್ತೆರಡು ಸಾಗರೋಪಮಾ ಯುಷ್ಯಮಂ ಪಡೆದಂದಚ್ಯುತಕಲ್ಪದ ಸಾಂತಕರ ವಿಮಾನದೊಳಚ್ಯುತೇಂದ್ರನಾಗಿ

ಭೋಗಾಮೃತಮಂ ಪುಣ್ಯನಿ
ಯೋಗದಿನೀಂಟುತ್ತಮಿರೆಯುಮೌರ್ವದ
ತೃಷ್ಣಾ
ಯೋಗಮಿದೇಂ
ದ್ವಾವಿಂಶತಿ
ಸಾಗರಜೀವನಮನೀಂಟಿದತ್ತನಿಮಿಷನಾ
      ೧೭

ಇತರರ ಸಂಪತ್ತೇನ
ಚ್ಯುತಕಲ್ಪದಿನಾಯುರಬ್ಧಿಯವಸಾನದೊಳ

ಚ್ಯುತನುಂ
ಚ್ಯುತನಾದಂ ಯಮ
ಹತಕಂ
ಸುಸ್ಥಿತರನಾರುಮಂ ಸೈರಿಪನೇ      ೧೮

ಎಂದುಂ ಕಾಲಕ್ಕೆ ಚಲಂ
ಸಂದುದು
ಮೂಜಗದೊಳಚಲಮೆಂದೊಡೆ ನಗುತುಂ
ಬಂದು
ತಳರ್ಚುಗುಮಚ್ಯುತ
ನೆಂದೊಡೆ
ಕೆಡಪುಗುಮಮರನೆಂದೊಡೆ ಕೊಲ್ಗುಂ       ೧೯

ನಿರುಪಮ ಜಂಬೂದ್ವೀಪದ
ಭರತಕ್ಷೇತ್ರಕ್ಕೆ
ಸಸ್ಯಸಂಪದಮೆನಿಕುಂ
ಕುರುಜಾಂಗಣ
ಜನಪದಮ
ಲ್ಲಿ
ರಂಜಿಕುಂ ಹಸ್ತಿನಾಪುರಂ ಪೊಸದೆನೆವೋಲ್        ೨೦

ಮೃಗಮೆತ್ತುನ್ಮೃಗ ಮುಗ್ಧವೀಕ್ಷಿತವದೆತ್ತಚ್ಚಾಲಿವೆತ್ತೋಷ್ಠಲ
ಕ್ಷ್ಮಿಗೆ
ನೋಂತಾಲದ ಪಣ್ಣದೆತ್ತ ಬಱಿಯಾ ಪುತ್ತೆತ್ತ ಕೇಶಾಸಿತೋ
ರಗವೆತ್ತಂ
ಕಮವೆತ್ತ ಪೀರ್ವಮೃತಮೆತ್ತಂತಾ ಪುರಸ್ತ್ರೀ ಮುಖೇಂ
ದುಗಳಂ
ಪೋಲಿಸಿ ಪೊಂಗುವರ್ಸಮರತ ಶ್ರಾಂತಂಗಳಿಂ ತಿಂಗಳಂ       ೨೧

ನಡೆನೋೞ್ಪರ ಕಡೆಗಣ್ಣುಂ
ಕಡುನಲ್ಲರ
ಮನವುಮೊಡನೆ ಪೊತ್ತುವು ಪುರದೊಳ್
ಮಡದಿಯರ
ಮೊಲೆಯನಲ್ಲದೊ
ದುಡಿಯವೆ
ಬಳುವಳಿಕೆವಡೆದ ಬಡನಡು ಭರದಿಂ       ೨೨

ಪುರಮನಾಳ್ವನಮೃತಾ
ಳಾಪಂ
ಯಮಕೋಪನತ್ಯುದಾರಂ ಧೀರಂ
ರೂಪೇಕ್ಷುಚಾಪನನ್ವಯ

ದೀಪಂ
ಶ್ರೀಚಂದ್ರನವನತಾರಿ ನರೇಂದ್ರಂ     ೨೩

ದಯಿತೇಕ್ಷಣ ಮಗ್ನ ಮೃಗಂ
ವಿಯತ್ಪದೋದ್ಭಾಸಿ
ರುಧಿರಕರ್ದಮ ವಲ್ಮೀ
ಕಯುತಂ
ಶ್ರೀಚಂದ್ರಮುಖ
ಪ್ರಿಯಚಂದ್ರಂ
ಕೀರ್ತಿಚಂದ್ರನೆಸೆವಸಿಚಂದ್ರಂ  ೨೪

ಮಹಿಪತಿಯ ಮನಃಪ್ರಿಯ
ಕಾಮಿನಿ
ಮಿಕ್ಕಗ್ರಮಹಿಷಿ ತಾನೆನಿಸಿರ್ದುಂ
ಶ್ರೀಮತಿಯೆಂಬಳ್
ದಾನ
ಶ್ರೀಮತಿಯಿಂ
ಕಾಮಧೇನುವೆನಿಸಿದಳೆಳೆಯಂ ೨೫

ಅವಳಂಗಚ್ಛವಿಗೋತು ಪಚ್ಚೆ ಕುರುಳಂದಕ್ಕೋತು ನೀಳಂ ನಖ
ಚ್ಛವಿಗೋತುಜ್ವಳವಜ್ರಮೆಲ್ಲ
ಸುಲಿಪಲ್ಗೋತಚ್ಛ ಮುಕ್ತಾಫಳಂ
ಪವಳಂ
ಬಾಯ್ದೆಱೆಗೋತು ಬಂದು ಸಲೆ ಸೇವಾವೃತ್ತಿಗೆಯ್ವಂತೆ
ತ್ನ
ವಿಭೂಷಾವಳಿಯೊರ್ಮೆಯುಂ ತೊಲಗವಂತಾ ಶ್ರೀಮತೀದೇವಿಯಂ   ೨೬

ನೃಪತಿಗಮಾರಾಜ್ಞಿಗ
ಮಾ
ನಾಕಜನೊಸಗೆ ಪುಟ್ಟೆ ಪುಟ್ಟಿ ಮಹಾಪು
ಣ್ಯಾನೀಕಂ
ಪಡೆದಂ ಶಿಶು
ಭಾನುದ್ಯುತಿ
ಸುಪ್ರತಿಷ್ಠನೆಂಬೊಳ್ವೆಸರಂ      ೨೭

ರಾಜಪ್ರಿಯಸೂನು ತನ್ನೆಳವೆಯಂದುದ್ದಾಮ ವಾಗ್ದೇವಿಯಂ
ಧೀರಂ
ಯೌವನದಂದು ಸನ್ನುತ ಸುನಂದಾದೇವಿಯಂ ಕ್ಷತ್ರಿಯಾ
ಚಾರಖ್ಯಾತಿ
ವಿಧೇಯ ನೀತಿಯಱಿಯಲ್ಕಲ್ತಂದು ಲೋಕಸ್ತುತಂ
ವೀರಶ್ರೀಯನಲಂಪಿನಿಂ
ಮದುವೆ ನಿಂದುತ್ಸಾಹಮಂ ತಾಳ್ದಿದಂ  ೨೮

ಬೇಡ ಕೊಲಲೆಂಬ ತೆಱದಿಂ
ಕ್ರೀಡಾರಸದಿಂದೆ
ರಾಜತನಯಂ ಕೊಂಬಂ
ದಾಡೆಯುಮಂ
ಕಿೞ್ತೇನೊಡ
ನಾಡಿಸುವನೊ
ಕಾಡ ಕರಿಗಳಂ ಹರಿಗಳುಮಂ          ೨೯

ವ|| ಅಂತಿಱಿದ ಮೆಱೆವ ಪ್ರಾಯದ ಪುತ್ರನಂ ಕಂಡು ಸಂಸಾರದ ಕಡೆಗಂಡಂತೆ ಸಂತೋಷದಂತನೆಯ್ದಿ

ಚಂದ್ರಂ ಬುಧಂಗೆ ಕೊಡುವವೊ
ಲಿಂದ್ರಪ್ರತಿಮಂಗೆ
ಸುಪ್ರತಿಷ್ಠಂಗಾ ಶ್ರೀ
ಚಂದ್ರಂ
ರಾಜ್ಯಮನಪಗತ
ತಂದ್ರಂ
ಕೊಟ್ಟೊಳ್ದಪಕ್ಕೆ ಕಚಮಂ ಕೊಟ್ಟಂ    ೩೦

ಮಂದರಕುಧರ ಸಮಾನ ಸು
ಮಂದಿರ
ಗುರುಪಾದ ಸೇವೆಗೆಯ್ದಾಚರಿಸು
ತ್ತಂದಂದಿಂಗಕಳಂಕಂ

ಕುಂದಿದನುತ್ತಮ
ತಪಶ್ರಿತ ಶ್ರೀಚಂದ್ರಂ        ೩೧

ವಿಗತ ವಸನಾಂಶುವಿಸರಂ
ಪ್ರಗಲ್ಭ
ನಿಷ್ಕಪಟವೃತ್ತಿರಹಿತಂ ವಿಮಲ
ಪ್ರಗುಣನುಪಶಾಂತ
ಕಾಮಂ
ಪೊಗಸಿನ
ಚಂದ್ರಂಬೊಲಿರ್ದನಾ ಶ್ರೀಚಂದ್ರಂ ೩೨

ಇತ್ತ ಪಿತೃವಿತ್ತ ರಾಜ್ಯಮ
ನಿತ್ತು
ಭುಜಕ್ಕಾಜ್ಞೆಯಂ ವಿರೋಧಿಗಳ ನೊಸ
ಲ್ಗಿತ್ತರಸುಗೆಯ್ದನಾತ್ಮ

ಯತ್ತಂ
ಕಲಿ ಸುಪ್ರತಿಷ್ಠನಯನಯನಿಷ್ಠಂ       ೩೩

ಧೃತಿವೆತ್ತಾ ತವದಿಗ್ಜಯೋದ್ಯಮ ಭವದ್ಭೇರೀ ಪ್ರಣಾದಕ್ಕೆ ಕಂ
ಪಿತಮಪ್ಪಾದಿಯ
ಕೂರ್ಮನುಂ ಫಣಿಪನಂ ದಿಗ್ದಂತಿಯಂ ಗೋತ್ರಪ
ರ್ವತಮಂ
ಭೂಮಿ ಬಿಸುಟ್ಟು ಬಂದು ಪಿರಿದುಂ ನಿಶ್ಚಿಂತದಿಂ ಸು
ಪ್ರತಿಷ್ಠತಮಾಗಿರ್ಪುದು
ಸುಪ್ರತಿಷ್ಠನ ಪಟಿಷ್ಠೋದ್ದಂಡ ದೋರ್ದಂಡದೊಳ್ ೩೪

ಮಾನಂ ಸದ್ಧೈರ್ಯ ದೀಕ್ಷಾಗುರು ಸುರಗಿರಿಗಂ ಕಲ್ಪವೃಕ್ಷಕ್ಕೆ ಹಸ್ತಂ
ದಾನೋಪಾಧ್ಯಾಯನಾತ್ಮಾಕೃತಿಯ
ತನುಗೆ ಬಿಲ್ಲೋಜನೋಜಃ ಪ್ರಸಾದಾ
ಧೀನಂ
ತನ್ನುಕ್ತಿ ವಾಗ್ನರ್ತಕಿಗಖಿಳ ಕಳಾಲಾಸ್ಯ ಶೈಲೂಷನಾಗ
ಲ್ತಾನಾಯ್ತೆಂಬನ್ನಮಾದಂ
ಜಗಮನೆಱಗಿಸಲ್ ಸುಪ್ರತಿಷ್ಠಂ ಗರಿಷ್ಠಂ         ೩೫

ಆದತ್ತು ಸುಪ್ರತಿಷ್ಠ
ರಾದಯಿತಂಗಧಿಕದೃಷ್ಟಿಯೆನೆ
ಮೇದಿನಿ ಭಾ
ಗ್ಯೋದಯಮಂ
ಪಡೆದ ಸುನಂ
ದಾದೇವಿ
ಸುದೃಷ್ಟನೆಂಬ ಮಗನಂ ಪಡೆದಳ್  ೩೬

ಉಕ್ಕೆವದೆಲೆ ಮಾಯದ ಕೊಳ
ರ್ವಕ್ಕಿಯ
ಗೆಳೆ ತಿಳಕಮಿಡುವ ಪೊಳೆ ಪುಸಿಯ ಪುಣಿಲ್
ಟಕ್ಕಿನ
ಬಿಸಲತೆ ಮುತ್ತಂ
ಮುಕ್ಕುಳಿಸಿದ
ಪವಳಮಮಳ ಮರುಳಿಸುವಂಗಂ       ೩೭

ಊಡುವ ಪೊಸದಳಿರಲರಂ
ಸೂಡಿರ್ಪಳಿ
ಕಂಪನಱಿವ ಸಂಪಗೆ ನಯದಿಂ
ನೋಡುವ
ನಿಡುನೈದಿಲ್ಮಾ
ತಾಡುವ
ತಾವರೆ ವಿರಾಜಿಕುಂ ನೃಪಸತಿಯಾ ೩೮

ಪ್ರಭೆಯಿಂ ಚಿಂತಾಮಣಿ
ಲ್ಪಭೂರುಹಂ
ಪುಷ್ಪಮಂಜರಿಯಿನೆಸೆವವೊಲಾ
ತ್ರಿಭುವನ
ಭೂಷಣನೆಸೆದಂ
ಶುಭನಂದನೆಯಿಂ
ಸುನಂದೆಯಿಂದನವರತಂ ೩೯

ಪಡೆದು ಯಶೋಧರ ಯತಿಪತಿ
ಯಡಿದಳಿರ್ಗಳನೆಱಗಿ
ಕಯ್ಯೊಳಿಕ್ಕಲ್ಪಡೆದಾ
ಗಡೆ
ಪಂಚಾಶ್ಚರ್ಯಮುಮಂ
ಪಡೆದಂ
ಸತ್ಪಾತ್ರದಾನಿ ಪಡೆಯದುದುಂಟೇ   ೪೦

ಪಡೆಯಲೆ ಬರ್ಪುದಾ ಪುರುಷವೇದಿಯನಿಂದ್ರನರೇಂದ್ರಲಕ್ಷ್ಮಿಯಂ
ಪಡೆಯಲೆ
ಬರ್ಪುದಾರಯೆ ಸುಪಾತ್ರಮನೊಂದನೆ ಯೋಗ್ಯಕಾಲದೊಳ್
ಪಡೆಯಲೆ
ಬಾರದಲ್ಲದೆಡೆಗೀವವನೇವಡೆವಂ ಸುಪಾತ್ರಮಂ
ಪಡೆದನೆ
ವಸ್ತುವಂ ಪಡೆದನಾತನ ಪುಣ್ಯಮೆ ಪುಣ್ಯಕಾರಣಂ      ೪೧

ಪಡೆದುಂ ಪಣಮಂ ಪಾತ್ರಂ
ಬಡೆಯದೊಡದು
ನಿಃಫಲಂ ಫಲಾರ್ಥಿಗೆ ಪಾತ್ರಂ
ಬಡೆವುದೆ
ಪುಣ್ಯಂ ಪಣಮಂ
ಪಡೆವುದು
ಪುಣ್ಯಮೆ ಪಣಂ ಮಹಾಹಿಗಮಿಲ್ಲಾ  ೪೨

ತಡೆಯದೆ ಮುಗಿಲ್ಗೆ ಕುಡುವುದು
ಕಡಲಿತರ
ಜನಕ್ಕೆ ಕೈಪೆಯಪ್ಪುದು ಕುಡಲು
ಳ್ಳೊಡೆ
ಪಾತ್ರಮಱಿದು ಮಾಣದೆ
ಕುಡುವುದಪಾತ್ರಕ್ಕೆ
ಕೊ‌ಟ್ಟೊಡೇಂ ಪುರುಳುಂಟೇ        ೪೩

ಸ್ವಾತಿಯ ಮುಗಿಲ್ಗೆ ತಾನಿ
ತ್ತಾ
ತೋಯಂ ರತ್ನಮಾಗೆ ರತ್ನಾಕರಮಾ
ಯ್ತಾ
ತೋಯದಿನೆಡೆಯಱಿಯದೆ
ಪಾತಾಳಕ್ಕಿತ್ತ
ತೋಯಮೇನಾಯ್ತಱಿಯಾ    ೪೪

ದೇವರ್ಗಲ್ಲದೆ ಕಳೆಯಂ
ಜೈವಾತೃಕನೀಯದಂತಿರುತ್ತಮ
ಪಾತ್ರ
ಕ್ಕೀವುದು
ಧನಮಂ ಸೌಖ್ಯಮ
ನೀವುದದುಂ
ತವೆಯದಾ ಯುಗಾಂತಂಬರೆಗಂ         ೪೫

ತರಳಜಳಬಿಂದು ಮೌಕ್ತಿಕ
ಭರಮಪ್ಪವೊಲುದಧಿ
ಶುಕ್ತಿಪತಿತಂ ನೀರುಂ
ಪಿರಿದಪ್ಪ
ಪುಣ್ಯಮಕ್ಕುಂ
ಪರಮ
ತಪೋಧನರ ಪಾಣಿಸಂಪುಟ ಪತಿತಂ ೪೬

ಕುಡುವಾತನರ್ಥಿಯಪ್ಪಂ
ತೊಡರದೆ
ಕೊಳ್ವಾತನುತ್ತಮ ಪ್ರಭುವಪ್ಪಂ
ಕಡೆಗಣಿಸಿ
ಧರ್ಮಪಾತ್ರಂ
ಪಡೆದುನ್ನತಿಯಂ
ಸುರಾದ್ರಿಯುಂ ಪಡೆದಪುದೇ         ೪೭

ಓವಿ ಫಳತರುಗೆ ನೀರ್ಗಳ
ನೀವುದುಮಂ
ಬೈತು ಬಿತ್ತನೊಲವಿಂ ಬೆಳಗೈ
ಗೀವುದುಮಂ
ಸತ್ಪಾತ್ರ
ಕ್ಕೀವುದುಮಂ
ದಾನಮೆಂಬ ನಾಣ್ಚಿಕೆಯುಂಟೇ          ೪೮

ಬಿಡುಮುತ್ತಂ ಮಾಣಕಮಂ
ಪಿಡಿದೊಡ್ಡಿದ
ಯತಿಯ ಕಯ್ಯೊಳಿಕ್ಕಿದಪರೆಯೊ
ರ್ಪಿಡಿಗೂೞನಿಕ್ಕಿ
ಸಗ್ಗಂ
ಬಡೆಯದ
ನರನೆಗ್ಗನಲ್ತೆ ಭುವನಾಭರಣಾ      ೪೯

ವ|| ಎಂದು ಪೇೞ್ವ ಧರ್ಮೋಪಾಧ್ಯಾಯರ ವಚನಾಮೃತದಿಂ ಮೂಡಿ ಮಡಲ್ತದಾನ ಬುದ್ಧಿಕಲ್ಪಕುಜಂ ಸತ್ಪಾತ್ರ ಪೋಷಣಮಾಗೆ ಧರ್ಮವಿಜಯಿಯಾಗಿ ರಾಜ್ಯಂಗೆಯುತ್ತುಮಿರೆ

ಅತಿ ಸಂಗ್ರಾಹ್ಯಮೊ ಮಲ್ಲಿಕಾಪರಿಮಳಂ ಮಾಕಂದದಾಮೋದಮೊ
ಳ್ಳಿತೊ
ವಾಸಂತಿಯ ಕಂಪು ಲೇಸೊ ಸುರಭಿ ಶ್ರೀಸೌರಭಂ ಯೋಗ್ಯಮೋ
ಸ್ತುತಮೋ
ಪಾಟಳಗಂಧಮೆಂದು ಪಿಡಿಯಲ್ಬರ್ಪಂತೆ ಬಂದತ್ತು ಪಂ
ಡಿತಶೀಲಂ
ಮಳಯಾನಿಳಂ ಮಲಯಜಾಮೋದೈಕ ಸಂಸಕ್ತನೋ         ೫೦

ವ|| ಆ ಬಂದ ಮಂದಮಳಯಾನಿಳನನಿದಿರ್ಗೂಳಲೆಂದೊಂದಿರುಳಾ ಮಾನವೇಂದ್ರನಿಂದ್ರ ವಿಮಾನವನೇಱುವುದನನುಕರಿಸುವಂತೆ ಕರುಮಾಡಮನೇಱಿ ಪಾಸಿನ ಪೊರೆಯೊಳ್ಪಟ್ಟಿರ್ಪು ದನಭಿನಯಿಸುವಂತೆ ಪರಾಂಗಣದೊಳ್ ಪಚ್ಚವಡಿಸಿರ್ದಮೃತಾರ್ಣವ ತರಂಗ ಸ್ಥೂಲ ಹಂಸತೂಳ ತಳ್ಪದೊಳ್ ಮಗ್ನಮೂರ್ತಿಯಾಗಿ ಕುಳ್ಳಿರ್ದಬಲೆಯ ಕಣ್ಣಬೆಳಗಿಂಗೆ ಬೆದಱಿ ಕೞ್ತಲೆಯ ಮೊಗ್ಗರಂ ಮಗುಳ್ದು ಮೂದಲಿಸಿ ಕವಿವಂತೆ ಕನಕಕೇತಕೀ ದೀರ್ಘದಳದಾಮಾನುಲೇಪನ ಕರ್ಪೂರ ತಾಂಬೂಲ ಬಹಳ ಪರಿಮಳಕ್ಕೆ ಪರಿತಂದು ಮುಸುಱಿ ಮುತ್ತುವ ಮತ್ತ ಮಧುಕರ ನಿಕರಮಂ ಲೀಲಾ ಕಮಲದಿಂ ಸೋಂದು ಸೇದೆವಡುವ ಸುನಂದಾದೇವಿಯ ಮುದ್ದುಮೊಗಮಂ ನಸುನಗೆವೆರಸು ನೋಡುತ್ತುಮಿರೆ

ಬಿರಿವನ್ನಂ ತಮಮೆಂಬ ನೀಳಗಿರಿಯಂ ತಾರಾಸಹಸ್ರಾಕ್ಷನಂ
ಬರ
ಗೋತ್ರಾಂತಕನಿಟ್ಟ ವಜ್ರವೆನಸುಂ ಬೀೞ್ವಂತೆ ಕಣ್ಣುಳ್ಕೆ
ಣ್ಮರಲಂ
ಪೆಣ್ಬಡೆ ಮುಚ್ಚೆ ಭೂಪನರಸೆಂಬೊಳ್ಪುಲ್ಲಮೇಲೊಂದು
ಳ್ಳುರಿ
ಬೀೞ್ವಂತೆವೊಲಳ್ಕು ಬಿರ್ದುದು ನೃಪಂ ಬೇಂಬೀಱೆ ನಿರ್ವೇಗದಿಂ     ೫೧

ಅದಟಲೆವ ಕೊಳ್ಳಿಯಂತು
ಳ್ಕುದ
ಕೊಳ್ಳಿ ಕನಲ್ದು ಬಿೞ್ದುದಂ ಕಂಡು ಕರಂ
ಬೆದಱಿ
ಮಿಗೆ ಕೊಳ್ಳಿಯಿಂ ಕು
ತ್ತಿದವೊಲ್ಮ
ಱುಗಿತ್ತು ಚಿತ್ತಮವನೀಪತಿಯಾ    ೫೨

ವ|| ಎಂದು ತನ್ನೊಳಿಂತೆಂದಂ

ಏಕುಳ್ಕಂ ಪೊಲ್ಲೆಂಬುದೊ
ಲೋಕಂ
ಪೋಯ್ತೆನ್ನ ಮನದ ಮೋಹಧ್ವಾಂತಾ
ನೀಕಂ
ಪ್ರಯೋಜನಾರ್ಥಾ
ಲೋಕನಮುಳ್ಕಾಪ್ರದೀಪದಿಂದಾಯ್ತಾಗಳ್
   ೫೩

ತೇಜಂ ಬಾಡಿಸುತಿರ್ಪ ರೇಖೆಯೊ ಚಿರಂ ಬಾೞ್ವಾಸೆಯಿಂದೀ ಮಹಾ
ರಾಜರ್ನೋಡುವ
ತೀವ್ರತೇಜದ ಮಹಾಸಪ್ತಾರ್ಚಿಗಂಡುಂ ಮಹಾ
ತೇಜಂ
ಭಾಸ್ಕರನಸ್ತದೊಳ್ಕೆಡೆವುದಂ ಕಂಡುಂ ಮಹೋಳ್ಕಂಜ್ವಳ
ತ್ತೇಜಂ
ಬೀೞ್ವುದುಗಂಡುಮುದ್ಧತ ಮಹಾ ಮೋಹಾಂಧಕಾರಾಂಧಕರ್     ೫೪

ಪುಟ್ಟುಂಗುರುಡಂ ಕಾಣ್ಬನೆ
ಬಟ್ಟೆಯನಮಳಾಕ್ಷನಂತೆ
ಸದ್ದೃಷ್ಟಿಯೆ ಬಾ

ಯ್ಕುಟ್ಟದೆ ಕಾಣ್ಗುಂ ಧರ್ಮದ
ಬಟ್ಟೆಯ
ನೆಱೆ ಕಾಣಲಱಿವನಕ್ಕು ಮದಾಂಧಂ ೫೫