ಶ್ರೀಯೆನಗಮುರದ ಮುತ್ತೆನೆ
ಕೇಯೂರಂ
ಬೀರಸಿರಿಯ ಕಣ್ಬೆಳಗೆನೆ ಕೆಂ
ಬಾಯುಮಜನ
ಸತಿಯೆಂದೆನೆ
ಜೀಯೆನಿಸಿದನಮಳಮೂರ್ತಿ
ಕೀರ್ತಿಪತಾಕಂ

ಸಲೆ ಚಿಂತಾಗತಿ ತನ್ನಚಿಂತ್ಯಮಹಿಮಾವಷ್ಟಂಭವಿದ್ಯಾಸಮು
ಜ್ವಲತೇಜಃಪ್ರಭೆಯಿಂದೆ
ತನ್ನ ರುಚಿಮತ್ತಾರಾದ್ರಿಯಂ ಕಾಂಚನಾ
ಚಲಮಂ
ಮಾಡಿಯೆ ಕಾಂಚನಾಚಲಮುಮಂ ತಾರಾದ್ರಿಯಂ ಮಾಡಿದಂ
ನೆಲೆಗೊಂಡೊಪ್ಪುವ
ಕೀರ್ತಿಕೌಮುದಿಯಿನಿನ್ನೇನೆಂಬ ಸಾಮರ್ಥ್ಯಮೋ     ೨

ರಾಗಕ್ಕೊಡವುಟ್ಟುವವೋಲ್
ಭೋಗಮುಮಪಭೋಗಮುಂ
ಶುಭೋದಯದಿಂ ಚಿಂ
ತಾಗತಿಗಾದರ್ಕೇಳ

ನೋಗತಿಯುಂ
ಚಪಳಗತಿಯುಮೆಂಬನುಜಾತರ್      ೩

ವ|| ಅಪ್ಪುದುಮಾಸುರಮಪ್ಪ ಸಿರಿಯನೊರ್ವನೆ ನಿರ್ವಂದದಿನಂತವಂ ತವೆಯುಣಲಾಱದೆ ಬಹುರೂಪಿಣೀವಿದ್ಯೆಯಿಂ ಮತ್ತೆರಡು ರೂಪಾದಂತೆ ತಮ್ಮಂದಿರಿರ್ವರ್ವೆರಸು ಚಿಂತಾಗತಿ ಖೇಚರ ರಾಝ್ಯಮನನುಭವಿಸುತ್ತುಮಿರ್ಪಿಸನಮಾಶ್ರೇಢಿಯರಿಂದಮಪುರಮನಾಳ್ವರಿಂಜಯಖಚರ ಪತಿಗಮಾತನ ಸತಿಯಜಿತಸೇನಾದೇವಿಗಂ ವಿಳಾಸವತಿಯೆಂಬ ಮಗಳಾಗಿ

ರತಿಯಂ ರೂಪಿಂಗೆ ಮೆಚ್ಚಳ್ ಸಿರಿಗೆ ಸಿರಯುಮಂ ಪುಲ್ಗೆ ಕೈಕೊಳ್ಳಳಾ ಭಾ
ರತಿಯಂ
ವಿದ್ಯಾಗುಣಕ್ಕೊಂದಡಕೆಗಮೆಣಿಸಳ್ ಕೇಳಿಮುತ್ಸೇಕಮಂ ಪಾ
ರ್ವತಿಯಂ
ತನ್ನೊಂದು ಪೆಂಪಿಂಗರೆ ಗವಡಿಕೆಯಂ ಕೊಳ್ಳಳೇವೇೞ್ವೆನುದ್ವೃ
ತ್ತತೆಯಂ
ಸೌಭಾಗ್ಯಸಂಪತ್ತಿಗೆ ಖಗನ ಮಗಳ್ ರಂಬೆಯಂ ಸಿಂಬೆಯೆಂಬಳ್        ೪

ತೊಡರ್ದೀಗಾಣದ ಗೂಳಿಯಂತೆ ತಿರಿಯುತ್ತಿಂತಿರ್ಪರೇ ಮೆಟ್ಟಿದೊಂ
ದೆಡೆಯಂ
ಮೆಟ್ಟಿ ತರಸ್ವಿಗಳ್ ಬಡಗಣಿಂ ತೆಂಕಣ್ಗೆ ಮೇಣ್ತೆಂಕಣಿಂ
ಬಡಗಣ್ಗಾಯೆರಡಿರ್ಕೆ
ಮೇಣ್ಪಡುವಣಿಂ ಮೂಡಣ್ಗೆ ತಾಂ ಪಾಱಲಾ
ರ್ಪೊಡೆ
ಬಂದೆನ್ನೊಡವಾಱಗೆಂದು ನುಡಿವಳ್ಮತ್ತಾಕೆ ಮಾರ್ತಂಡನಂ       ೫

ಗಂಡರ ಕೇಡಂ ಪೆಂಡಿರ
ತಂಡಂ
ಮಾಡುತಿರಿರ್ಕೆಮ ಖಚರರವಳ್ಗೇ
ಭಂಡಂ
ಬಾಂಬರಿಯೊಳ್ ಮಾ
ರ್ತಂಡನುಮಂ
ಪುಲ್ಲುಕಡ್ಡಿಗಂ ಕೈಕೊಳ್ಳಲ್    ೬

ಮೇಗಿಲ್ಲಿನ್ನೀಕೆಗಾರುಂ ಗಗನಗತಿಯೊಳೆಂಬೊಂದೆ ಹೃದ್ಗರ್ವಮೇ ವಿ
ದ್ಯಾಗರ್ವಂ
ಪ್ರಾಯಗರ್ವಂ ಕುಲದ ಚಲದ ಗರ್ವಂ ಕಳಾಪ್ರೌಢಿಗರ್ವಂ
ಶ್ರೀಗರ್ವಂ
ರೂಪಗರ್ವಂ ಪ್ರಬಳ ಸಹಜಸೌಭಾಗ್ಯಗರ್ವಂ ಜಯಕ್ರೀ
ಡಾಗರ್ವಂ
ಕೂಡೆ ವಿದ್ಯಾಧರಿಗೆ ಪಡೆದುವೇೞೆಂಟು ಸೊರ್ಕಿಂಗೆ ಸೊರ್ಕಂ  ೭

ಗಾಡಿಗೆ ಮರುಳ್ದು ತನ್ನಂ
ಬೇಡಲೆ
ಸಲೆ ಬಂದ ಖಚರರಂ ಗತಿಯೊಳ್ ಕೀ
ೞ್ಮಾಡಿ
ಕೊಱಚಾಡಿ ಕಿವಿಗಳ
ನಾಡಿಸಿ
ಬಿಡುವಳ್ ವಿನೋದಮಿದು ಖೇಚರಿಯಾ       ೮

ಅಮರಗಿರಿಶಿಖರದಿಂ ಪು
ಷ್ಪಮಾಲೆಯಂ
ಬಿಟ್ಟು ಮೂಮೆ ಬಲಗೊಂಡಾ ಶೈ
ಲಮನವಳಿಳೆ
ಮುಟ್ಟದ ಮು
ನ್ನಮೆ
ಮಾಲೆಯನೆಯ್ದಿ ಪಿಡಿವಳೆನ್ನದೊ ವೇಗಂ         ೯

ಬಾಳಕರುಮುಂತೆ ಪಾಱುಂ
ಬಾಳಂ
ಮಸೆವಂತೆ ಪಾಱುತನಮಿಂತಾಯ್ತಾ
ಕೇಳಿನ್ನೇನುಮನೇನಂ

ಗಾಳಿಗೆ
ಗಱಿ ಮೂಡಿದಂತೆ ಮೋನಂಗೊಳ್ವೆಂ ೧೦

ವ|| ಅಂತು ಖಚರಲೋಕ ಕೋಳಾಹಳಮಾದ ತನ್ನ ಮಗಳ ಗಗನ ಗಮನ ವೇಗಾತಿಶಯ ಮುಮನಭಿನವ ಯೌವನಾತಿಶಯಮುಮನೆಂತಪ್ಪರುಮಂ ಮೆಚ್ಚದ ರೂಪಾತಿಶಯಮು ಮನರಿಂಜಯಂ ಕಂಡು ಕೇವಣಿಸದ ಮಾಣಿಕಮುಂ ಕುಡದ ಕೂಸುಮಿನ್ನಾರ್ಗೋಸುಗಂ ನಾಲಗೆಯುಮಂ ನಲ್ಲನುಮನೊಲ್ಲದ ಪಣ್ಣಸವಿಯುಂ ಪೆಣ್ಣರೂಪುಮೇಂ ಬಾೞ್ತೆ ವಸಂತಮಾಳಿ ಮುಳ್ಳೊಡಮೆನಿತೊಪ್ಪಲಾರ್ಪುದೆಂದಂಬರಗತಿ ಸ್ವಯಂಬರಮಂ ಮಾಡಲ್ಮನಂದಂದು ವಿಜಯಾರ್ಧಪರ್ವತಾಗ್ರವನದೊಳಗೆ ನಳನಳಿಸುವ ಕೆಂದಳಿರ ಕಾವಣಂಗಳುಮಂ ಮಿಳಿರ್ವ ಮಲ್ಲಿಕಾಮಂಟಪಂಗಳುಮಂ ಬಳ್ವಳ ಬೆಳೆದ ಬಾಳಚೂತದ ಬಾೞ್ವೊಂಪಂಗಳುಮಂ ಲಲಿತಲತಾ ನಿಳಯಮನೊಳಗುಮಾಡಿ ಪಲವುಂ ನೆಲೆಯ ಚೌಪಳಿಕೆಗಳನಿಕ್ಕಿಸಿ ಕಾಯ್ತ ಬಳ್ಳಿಗೌಂಗಿನ ಪಸುರ್ವಂದರಂ ಪಣ್ತ ಮಧುರದ್ರಾಕ್ಷೆಯ ಬಾೞ್ವಂದರುಮನಿರ್ಕೆಲದೊಳಿಕ್ಕಿ ನಡೆಪೂವಿನ ಪಂದರುಮಂ ವಿವಾಹವೇದಿಕೆಯುಮಂ ಸವೆಯಿಸಿ ಖಚರಕುಮಾರರೆಲ್ಲಂ ವಿಳಾಸವತಿ ಸ್ವಯಂಬರಕ್ಕೆ ಪೂವಿನ ಮಾಲೆಯಂ ಪಿಡಿದು ತಡೆಯದೆ ಬರ್ಪುದೆಂದುಭಯಶ್ರೇಣಿಯೊಳಂ ಗೋಸಣೆಯಿಡಿಸಲೊಡನೆ

ಬಿರುದಂಕಂ ಸಂದ ವಿದ್ಯಾಧರಿಯ ಮನಮದಂ ಸಾಧಿಸಲ್ ಚಂದ್ರನೊರ್ವಂ
ಸ್ಮರನೊರ್ವಂ
ಚೈತ್ರನೊರ್ವಂ ನೆಱೆಯದೆ ನೆಱೆದೇಂ ಬಂದುದೋ ಚಂದ್ರಸೈನ್ಯಂ
ಸ್ಮರಸೈನ್ಯ
ಚೈತ್ರಸೈನ್ಯಂ ಪಿರಿದಮೆನಿಸಿ ಬಂದತ್ತು ವಿದ್ಯಾಧರೌಘಂ
ಸುರಭಿ
ಶ್ರೀಖಂಡಶುಭ್ರಂ ಮೃಗಮದಮಳಿನಂ ಮಲ್ಲಿಕಾಮೋದವಾಹಂ     ೧೧

ಪನಿಯಂ ನುಂಗುತೆ ತುಂಬಿ ಚಾದಗೆ ಚಳದ್ಗಂಧಾನಿಳಂ ಪಾಯ್ದು
ಲ್ಲನೆ
ಜಂಝಾನಿಳನಾಗೆ ಖೇಚರಚಮೂಹಸ್ತಾಗ್ರಮಾಳೌಘ ಮೇ
ಘನಿಕಾಯಂಗಳಿನೇಂ
ಬೞಲ್ದೆಱಗಿತೋ ರೂಪಾದ್ರಿಯೊಳ್ ಪುಷ್ಪನೀ
ನವಾಸಾರದಿನಿಂದು ಸಾನುತರುಗಳ್ತೇಂಕಾಡುತಿರ್ಪನ್ನೆಗಂ    ೧೨

ವ|| ಅಲ್ಲಿಗಾ ಚಿಂತಾಗತಿಯುಂ ತನ್ನ ತಮ್ಮಂದಿರಿರ್ವರ್ವೆರಸು ಬಂದಿರ್ದನಾಗಳಾ ವಿದ್ಯಾಧರಿ ನೆರೆದ ವಿದ್ಯಾಧರರ್ಗೆ ಬಹುರೂಪಿಣೀ ವಿದ್ಯೆಯಂ ತಾಳ್ದಿದಂತೆ

ಸಮುದಾಳೋಕನದಿಂ ಸಮುನ್ನತ ಕುಚದ್ವಂದ್ವಗಳಿಂ ಸ್ಮೇರಚಾ
ರುಮುಖಶ್ರೇಣಿಗಳಿಂ
ಬೞಲ್ಮುಡಿಗಳಿಂ ವಿದ್ಯುನ್ಮಯಂ ಚಕ್ರನಾ
ಕಮಯಂ
ಚಂದ್ರಮಯಂ ಮಯೂರಮಯಮೆಂಬಂತಭ್ರಮೇನೆಂಬ ವಿ
ಭ್ರಮದಿಂ
ಬಂದರೊ ಸುತ್ತಿಮುತ್ತಿ ಸಖಿಯರ್ ಸಾಸಿರ್ವರಾ ಕನ್ನೆಯಂ       ೧೩

ಪೊದಯಿಸಿದಡ್ಡಣಂಬೊಲಿರೆ ಸುತ್ತಿದ ಸತ್ತಿಗೆ ಡಿಂಡಿಮಸ್ವನಂ
ಕೆದಱೆ
ಬೆಡಂಗಿನಿಟ್ಟು ತಿಳಕಂ ತಿಮಿರೊಪ್ಪಮನೀಯೆ ಕೂರ್ಪ ಕುಂ
ದದ
ಕಡೆಗಣ್ಣ ಗೇಣ್ ಪೊಳೆಯೆ ಪಿಲ್ಲಿಸೆ ಕಟ್ಟಿ ಕಳಕ್ಕೆ ವರ್ಪ
ರ್ಪದ
ಕುಸುಮಾಸ್ತ್ರನಂಕಮೆನೆ ಖೇಚರಿ ಬಂದಳದೊಂದು ದೇಸೆಯಿಂ      ೧೪

ವ|| ಬಂದರ್ಚಿಸಿರ್ದ ಗತಿಯುದ್ಧ ಶಿಲಾಪಟ್ಟಮಂ ಮೆಟ್ಟಿ ಮಟ್ಟಮಾಗಿ ಪೂಮಾಲೆಯಂ ಪಿಡಿದಾಲೀಢಸ್ಥಾನಮಂ ಕೈಕೊಂಡು ನಿಲ್ವದುಮಾಖೆಯ ಕೆಳದಿ ಚಂದ್ರಲೇಖೆಯೆಂಬಳಂಬರ ಚರಕುಮಾರರ್ಗಿಂತೆಂದಳ್: – ಈ ಕುಮಾರಿಯೊಡನೀಗಿರಿಯಿಂ ಮೇರುಗಿರಿಗೆ ಪಾಱಿ ಜಿನಪತಿಸವನ ಸುಧಾಸಿಂಧುಸಲಿಲಘೇನ ಪಿಂಡ ಪಾಂಡುರಮಪ್ಪ ಪಾಂಡುಕವನಮಂ ಬಲಗೊಂಡಲ್ಲಿಯ ಜಿನಪ್ರತಿ ಮೆಯ ಪಾದಪದ್ಮಂಗಳನೆರಡುಂ ಕಯ್ಯ ಬಾಸಿಗಂಗಳಿನರ್ಚಿಸಿ ಮುನ್ನಮರ್ಚಿಸಿರ್ದ ಮಂದಾರ ಮಾಲೆಯಂ ಕಳೆದುಕೊಂಡೀಕೆಯಂ ಮಿಕ್ಕು ಬಂದ ಮಹಾಭಾಗನೀಪೂವಿನ ಪಂದರೊಳೀ ಪಂಕಜ ಮುಖಿಯೊಳ್ ಮದುವೆನಿಲ್ವನೆಂಬುದುಂ ಎಮಗೆ ತಮಗೆಂಬ ವಿದ್ಯಾಧರರಂ ನೀಮನ್ನೆಗ ಮಿರಿಮೆಂದು ತಾನುಮೊರ್ಮೆ ತನ್ನ ತಮ್ಮಂದಿರಾಕೆಗೆ ಸೋಲ್ತು ಸಿಗ್ಗಾಗಿ ಬಂದ ಪರಿಭವಮಂ ಪರಿಭಾವಿಸಿ ಚಿಂತಾಗತಿಯುಂ ಗತಿಯುದ್ಧಶಿಳಾತಳದೊಳ್ ಪ್ರತ್ಯಾಲೀಢ ಸ್ಥಾನಮಂ ಕಳೆದುಕೊಂಡು

ನಿಲ್ತ ತನು ನಿಂದ ನಿಲವಂ
ಪೋಲ್ತಾತನ
ಗಾಡಿವಿಗಳ ಕಣ್ಣುಂ ಮನಮುಂ
ಸೋಲ್ತುವು
ಘನಪದಗತಿಯೊಳ್
ಸೋಲ್ತಪಳಿವಳೆಂದು
ಸೂಚಿಪಂತೆವೊಲಾಗಳ್         ೧೫

ನೋಡಿರೆ ಕೇಳ್ದವರೆಲ್ಲಂ
ನೋಡಲ್ಬಯಸುವ
ವಿವೇಕವಿದ್ಯಾಧರನಂ
ನೋಡಿದ
ಕಣ್ಗಳ್ ಪೆಱರಂ
ನೋಡವು
ವೀಕ್ಷಣ ವಿವೇಕ ವಿದ್ಯಾಧರಿಯಾ    ೧೬

ವ|| ಅಂತು ವಿಳಾಸವತಿಯುಂ ಕೆಳರ್ದು ಗತಿಯುದ್ಧಕ್ಕೆ ಕಳನೇಱಿ ನಿಲ್ವುದುಂ ಉಭಯ ಪಕ್ಷದೊಳ್ ಸೂಳೈಸುವ ದುಂದುಬಿಗಳ ಪೊಡೆವ ಪಟಹ ಡಕ್ಕೆಗಳ ಬೊಬ್ಬಿಱಿವ ಖೇಚರರ ಕಳಕಳಿಸುವ ಖೇಚರಿಯರ ತುಮುಳ ರವದೊಳ್ ತೊಡರ್ದು ಪರಿವಂತೆ ಮನದೊಳ್ಮಚ್ಚರಿಸಿ ಪಾಱುವಂತೆ ನುಸುಳಂ ನೊಪ್ಪುಮನಪ್ಪುಕೆಯ್ದು

ನಸುಮಸುಳ್ದಂಗಲೇಖೆ ಪೊಱಮಟ್ಟೆಡೆಗಾಲ್ ಪೊಱವಾಱಮೇಲೆ
ತ್ತಿಸಿದ
ಮಡಂ ಕರದ್ವಯದೆ ಬಿದ್ದೆಸೆದೆತ್ತಿದ ಮಾಲೆಮಂಡನಂ
ಕಿಸುವ
ಮುಖೇಂದು ಮುಂಚಲೊನುಗೆಯ್ದ ಕುಚಂ ಮುರಿ ಕಲ್ಪಭಂಗಿ
ಣ್ಗೆಸೆದಿರೆ
ಪಾಱಿದಳ್ ಪೊಳೆದು ಖೇಚರಿ ಮಿಂಚಿನ ಬೊಂಬೆಯೆಂಬಿನಂ     ೧೭

ಸಱಿಗಲ್ಲಂ ದಬ್ಬುಕದಿಂ
ದಿಱಿದೊಡೆ
ಕಡಿ ಹಾಱುವಂತೆ ಮುಂತೊಗೆದ ಮುಗಿ
ಲ್ದುಱುಗಲನೆ
ಖಚರಿ ಕುಚದಿಂ
ದಿಱಿದಳ್
ಕಿಱುಮಿಂಚು ನುಚ್ಚುನುಱಿಯಪ್ಪಿನೆಗಂ       ೧೮

ವ|| ಚಿಂತಾಗತಿಯುಂ ತನ್ನ ಪೆಸರಂ ನನ್ನಿಮಾಡಿ ತರುಣಿಗೆ ತಕ್ಕುಗೊಟ್ಟು ಪೆಱಗೆ ಪಾಱಿ ಪೋಗಿ ಮಿಡಿದನಿತು ಬೇಗಕ್ಕೆ ಮಂದರಮನೆಯ್ದಿ ಪಾಂಡುಕ ಶಿಲಾತಳಮಂ ತ್ರಿಃಪ್ರದಕ್ಷಿಣಂ ಗೆಯ್ದಲ್ಲಿಯ ಪರಮೇಶ್ವರ ಪ್ರತಿಬಿಂಬದ ಪಾದಾಂಭೋಜಕ್ಕೆ ಕಯ್ಯ ಕುಸುಮದಾಮಮನೇಱಿಸಿ ನೊಸಲೊಳಿಟ್ಟು ಪೊಡೆವಟ್ಟು ರೂಪಸ್ತವ ವಸ್ತುಸ್ತವ ಗುಣಸ್ತವಂಗಳಿಂ ಸ್ತುತಿಯಿಸಿ ಪಂಚಗುರುಭಕ್ತಿಪೂರ್ವಕಂ ಪಿರಿದು ಪೊೞ್ತು ದೇವರಂ ಕಂಡು ದೇವರ್ಕಳರ್ಹದ್ದೇವನ ದಿವ್ಯಶ್ರೀ ಪಾದಪದ್ಮದ ಮೇಗೆ ಮಂದಮಾಗೊಟ್ಟಿದ ಮಂದಾರಮಾಳೆಯುಮಂ ಚಂದನಕರ್ದಮುಮಂ ಮುತ್ತಿನ ಸಲಗೆಯಂತೆ ನವಮಾಳಿಕೆಯ ನನೆಗಳಂತೆ ನಿಡಿಯವುಂ ಕಮ್ಮಿದುವುಮಪ್ಪ ಕಳಮಾಕ್ಷತಂಗಳಮಂ ತುಱುಬಿ ತಿಳಕಮಿಕ್ಕಿ ತನ್ನ ಗೆಲವಿಂಗೆ ಸೇಸೆಗೊಳ್ವಂತೆ ಸೇಸೆಗೊಂಡು ಹರ್ಷೋತ್ಕರ್ಷಚಿತ್ತನುಂ ರೋಮಾಂಚಕಂಚುಕಿತ ಶರೀರನುಮಾಗಿ ಬೞಿಕಮಕೃತ್ರಿಮ ಚೈತ್ಯಾಲಯಂಗಳೆಲ್ಲಮಂ ಬಂದಿಸಿ ದೇವಗಿರಿಯಂ ದೇವನಂತೆ ಮಗಮಗಿಸಿ ಮಗುಳ್ದು ಬರುತ್ತುಂ ತನ್ನೊಳಿಂತೆಂದನಮರ್ದಂ ಮರ್ದುವೇೞ್ದಂತೆಯುಂ ಮಲರಮೇಲೆ ಮದಾಳಿಗೆ ದಾೞಿವೇೞ್ದಂತೆಯು ಮಿನ್ನೆವರಮೆನ್ನ ಪುರುಳ್ಕೆಟ್ಟು ದುರಾಗ್ರಹಂ ದುರಿತಹರಮಾದುದು ಲತೆಯೆನಿತ್ತು ಬಲ್ಲಿತ್ತಾದೊಡಂ ಮರದಿಂ ಬಲ್ಲಿತ್ತಲ್ತು ಪಾರ್ವೊಡೆ ಪೂಮಾಲೆಗಂ ಪಾಶಕ್ಕಮಜಗಜಾಂತರಂ ಚಪಳಪ್ರಕೃತಿಯಪ್ಪ ಪೆಂಡಿರ್ಗೆತ್ತಾನುಮೊಂದು ಗುಣಲವಂಘುಣೂಕ್ಷರ ನ್ಯಾಯದಿನಾದುದಾದೊಡದನಗುರ್ವು ಮಾಡಿಕೊಂಡು ಕೊನೆದು ಕೊಣಕಿಟ್ಟು ಕೋಣನನೇಱಿದ ಭಗವತಿಯಂತೆ ಬಿಱ್ರನೆ ಬೀಗಿಯದನೆ ಮುಂದೇಂಗೊಡಿರ್ಪರೆಂದು ನಸುನಗುತ್ತುಂ ಮೆಲ್ಲಮೆಲ್ಲನೆ ಖಚರಗಿರಿಗೆ ವಂದು ಗತಿ ಯು‌ದ್ಧ ಶಿಲಾತಳಮನೇಱಲೊಡನೆ

ಪೂವಿನ ಮೞೆಯಂ ಸುರಿದರ್
ದೇವರ್ಕಳ್
ದೇವದುಂದುಭಿಧ್ವನಿ ನಭಮಂ
ತೀವಿದುದು
ವೇಗಮಂ ಖಚ
ರಾವಳಿ
ಪೊಗೞ್ದುದು ವಿವೇಕ ವಿದ್ಯಾಧರನಾ   ೧೯

ದೊರೆವೆತ್ತೀ ವ್ಯೋಮಯಾನೋನ್ನತಿವಿತರಣ ವಿದ್ಯಾಧರಂಗಿಂದು ತಾನೊಂ
ದರಿದಲ್ಲೀ
ಪೇೞ್ದ ಪುಣ್ಯಾಂಬುಧಿಯೆ ವಿಬುಧವೃಂದಸ್ತುತಂ ನೇಮಿನಾಮಾ
ಚರಣಂ
ತಾನಾಗಿ ಶುಂಭತ್ಸಮವಸೃತಿ ಸಭಾಸಂಯುತಂ ಶೋಭೆವೆತ್ತಂ
ಬರಯಾನಶ್ರೀಯ
ಪೆಂಪಂ ತ್ರಿಭುವನ ಜನಕಾಶ್ಚರ್ಯಮಪ್ಪಂತು ತೋರ್ಪಂ         ೨೦

ವ|| ಎಂದೊಂದೆ ಕೊರಲಿಂ ವೃಂದಾಕರವೃಂದಂ ಪೊಂಗಿ ಪೊಗೞುತ್ತುಮಿರ್ಪಂ ತನ್ನೆಗಮರ್ಧಮಾರ್ಗದೊಳ್ ಮಗುಳ್ದು

ಪಿಂತೆನೆ ಬಂದಳಾಕೆ ಮದನಾನಳನುರ್ವೆ ಕರಂ ಬೞಲ್ದು
ನ್ನಂ
ತೆಗೆದೆತ್ತಿಕೊಂಡು ನವಿಲುಂ ಪೊಣರ್ವಕ್ಕಿಯ ಮೇರೆ ಪಾಱಿ
ರ್ಪಂತೆವೊಲೊಪ್ಪೆ
ಬಿಟ್ಟ ಮುಡಿಯಂ ಮೊಲೆಯುಂ ವಧು ನಾಡೆಯೋಡೆ ಬೆ
ನ್ನಂ
ತಗುಳ್ದೆಚ್ಚ ಕಾಮನಲರಂಬಿನ ಬಾಯೊಳೆ ಬಂದಳೆಂಬಿನಂ   ೨೧

ಬೆಮರಂ ವ್ಯೋಮಪ್ರಯಾಣಂ ಪಡೆದ ಬೆಮರ್ಗಳೊಳ್ ಬಾಷ್ಪಮಂ ಸೋಲ್ತ ಸಿಗ್ಗಿಂ
ದಮೆ
ಪೂರಂಬಾಯ್ವ ಬಾಷ್ಪಂಗಳೊಳೆ ಸಮಶರಂ ಮಾಡಿದುಛ್ವಾಸ ಖಿನ್ನ
ಶ್ರಮಮಂ
ಪ್ರೋಡ್ಡೀನದೀನಶ್ರಮದೊಳೊಗೆದ ರೋಮಾಂಚಮಂ ಶೀತವಾತ
ಸ್ತಿಮಿತೋಪಸ್ಪರ್ಶ
ರೋಮಾಂಚದೊಳೆ ಬೆರಸಿದಳ್ಕನ್ನೆಗೇಕಿನ್ನವಂದಂ     ೨೨

ಎಡೆಗಿಱಿದಬಲೆಯ ಮೊಲೆಯಿ
ಟ್ಟೆಡೆಯೊಳೋ
ಕೆಳೆಗೊಂಡು ನಿಂದುವಲ್ಲದೆ ನುಸುಳರ್
ಪಡೆಯವು
ಮದನಾಸ್ತ್ರಗಳೆಂ
ದೊಡೆ
ಮುತ್ತಿನ ಹಾರಮೆಂತು ಪೇೞ್ನುಸುಳ್ದಪುದೇ       ೨೩

ಜವದಿಂ ವಿದ್ಯಾಧರಿಯಿಂ
ವಿವೇಕ
ವಿದ್ಯಾಧರಾಂಕನೇಂ ಗೆಲ್ದನೆ ಕೈ
ತವದಿಂ
ಬೞಲಿಸಿ ಗೆಲಿಸಿದ
ನಿವನೆನೆ
ಕಾಮಂ ವಿಕಾರಭರಮಂ ಪಡೆದಂ   ೨೪

ವ|| ಅಂತಾಕೆ ಯಾವ ಮೆಯ್ಯೊಳಂ ಸೋಲ್ತು ಚಿಂತಾಗತಿಗೆ ಜಿನಪೂಜೆಗೆಂದು ಪಿಡಿದು ಹೋದ ಪೂಮಾಲೆಯನಿದಕ್ಕೆ ಮತ್ತಾವನುಂ ಯೋಗ್ಯನಲ್ಲಂ ಭಾವಿ ಜಿನನಪ್ಪ ನೀನೇ ಯೋಗ್ಯನೆಂಬಂತೆ ಮಾಲೆಸೂಡಲೆತ್ತಿದೊಡೆ ಪಾವಂ ಕೊರಲೊಳಿಕ್ಕಲೆತ್ತಿದಂತಗಿದು ಪಾಱಿ ಪೆಱಮೆಟ್ಟಲೊಡನೆ

ಮುರಿದಿಸುವಂತೆ ಮೊಲ್ಲೆಯೆಸಳಿಂ ಮಿಗೆ ಸೆಲ್ಲಿಸುವಂತೆ ಕಾಂತೆ ತಾ
ವರೆಯೆಸಳಿಂದೆ
ಕೇದಗೆಯ ಕೂರೆಸಳಿಂದವನೊಲ್ಲದೇವದಿಂ
ಸುರಿಗಿಱಿಯಂತೆ
ನೆಯ್ದಿಲೆಸಳಿದಂತೆ ನವೀನ ಕಾಂತಿ ನೀ
ಳ್ದಿರೆ
ಕಡೆಗಣ್ಣ ಕಕ್ಕಡೆಯಿನೇಂ ಮುನಿದಿಟ್ಟಳೊ ಮಾನವೇಂದ್ರನಂ ೨೫

ಅವನೀ ಭರ್ತಾರನ ಚಿ
ತ್ತವಜ್ರಮಂ
ತಾಗಿತಾಗಿ ತರಳಾಪಾಂಗಂ
ಸಿವುಱೆದಂತೆವೊಲೆಸೆದುವು

ಯುವತಿಯ
ನವಕರ್ಣಪೂರಕುವಲಯದಲರ್ಗಳ್      ೨೬

ವ|| ಆಕೆಯ ನೋಟಕ್ಕೆ ನಸುನಗುತ್ತುಮೀ ಗೆಲವೆನ್ನ ತಮ್ಮಂದಿರ ಸೋಲವಲ್ಲದೆನ್ನ ಗೆಲವಲ್ಲ ದಿವರಿರ್ವರೊಳಾವಂ ನಿನ್ನ ಮನಕ್ಕೆ ವಂದಪನವಂಗೆ ಮಾಲೆಯಂಸೂಡೆನೆ ಸಿಗ್ಗಾಗಿ ವಿಳಾಸವತಿಯಿಂ ತೆಂದಳ್

ನೀರೇಜಿನಿಯೆನಿತಲರ್ದೇಂ
ಸಾರದೆ
ಪೋದಂ ದಿನೇಶನಂತೆನಗಂ ನೀಂ
ದೂರಪ್ರಿಯನಾದೈ
ಸಂ
ಸಾರಂ
ವೃಥೆಯಾದುದೆಂದು ಬೆಚ್ಚನೆ ಸುಯ್ದಳ್         ೨೭

ನಿನ್ನೊಂದೆ ನೋಟಗುಣದಿಂ
ನಿನ್ನಿಂದಮುಮುಱುವ
ಮದವನೊಳ್ ಮದುವೆಯನಿಂ
ದಾನ್ನಿಲ್ಲದಂತು
ತಪ್ಪೆಂ
ನನ್ನಿಗೆ
ಪುಸಿದಂದು ನಗಿಸದೇ ಮತ್ಕುಲಮಂ  ೨೮

ವ|| ಉತ್ತುಂಗ ನಿನಗಾಂ ಮುನಿಯಲೇಕೆ ಪಸೆಯೊಳ್ ಪಾವು ಕೊಂಡುದೆಂಬಂತೆನಗೆ ನಿನ್ನಂತಪ್ಪ ಪುರುಷನಂ ದೊರೆಕೊಳಿಸಿ ಕಳಿಂಚುಮಾಡಿ ಕಳೆದ ದುರ್ವಿದಗ್ಧ ವಿಧಾತ್ರಂಗೆ ಮುನಿವೆನಾಂ ಮುನ್ನಂ ಬೇಱೆ ನೋಂತೆನಿಲ್ಲಕ್ಕುರ್ಹದ್ದೇವನೊಂದು ಚರಣಕ್ಕೆ ಪೂವಂ ಮಿಗೆಯೇಱಿಸಿ ಮತ್ತೊಂದು ಚರಣಕ್ಕೆ ಏಱಿಸಲ್ಮಱದೆ ನಕ್ಕುಮೆಂದಾ ನಿರ್ವೇಗದೊಳೆ ಬೇಗಂ ಪೋಗಿ ಮುನ್ನ ತನ್ನ ಮದುವೆಗಿಕ್ಕಿದ ಪೂವಿನ ಪಂದರೊಳ್ ತಪಮೆಂಬ ಮದವನಿಗನೊಳ್ಮದುವೆ ನಿಲಲ್ಬಗೆದು ಪಾಸಿದ ಪಸೆಯ ಮೇಲೆ ಮಲ್ಲಂತಿಗಿಱಿದಱಿದು ಕುಳ್ಳಿರ್ದು ಕಯ್ಯಿಕ್ಕಿಕೊಂಡಿರ್ಪುದುಮಾ ಉನ್ಮೀಲಿತ ಲೋಚನೆ ಲೋಚಂಮಾಡಲೆಂದು ರಾಮಾರ್ಜಿಕಾಕರೇಣು ಕರಕೋಮಲಾಂಗುಲಿ ಗಳಗಳಿಸಿಯಳಿ ಕುಳಮಳಿನಮಪ್ಪ ಕುಂತಳಕಮಳವನದೊಳಗೆ ಪುಗುವಾಗಳ್

ಅಳಕೆಯ ಕಂಪಿಂಗೆಱಗಿ
ರ್ದಳಿಗಳ್
ಪಾಱಿದುವು ಕುಸುಮಕೋಮಳೆಯೇನಾ
ರ್ಪಳೆ
ಕೀೞೆ ಸೈರಿಸಲ್ಕೆಂ
ದಳಕಂಗಳ್
ತಮಗೆ ತಾಮೆ ಪಾಱುವ ತೆಱದಿಂ         ೨೯

ಬೆದಱಿ ಕಡುತಪದ ಕಿರ್ಚೆ
ರ್ದುದನೀಕ್ಷಿಸಿ
ಪಿಡಿದು ರತಿಯ ಕಯ್ಯಂ ಮಿಗೆ ತೀ
ವಿದ
ಮನೆ ತೀವಿರ್ದಂದದೆ
ಮದನಂ
ತದ್ರೂಪಭವನದಿಂ ಪೊಱಮಟ್ಟಂ    ೩೦

ವ|| ಅಂತು ತನ್ನೊಡವಂದ ಸಾಸಿರ್ವರ್ಸಖಿಯರ್ವೆರಸು ತಪಂಬಟ್ಟು ಮುನ್ನೆ ತನ್ನ ಕುಚಕಚ ವಿಳೋಚನಾದ್ಯವಯಂಗಳ್ಗೆಱಗದಾತನ ನಿಜಚರಣಕ್ಕೆಱಗಿಸಿದ ಖಚರಿಯ ಪರಿಚ್ಛೇದಕ್ಕೆ ಮೆಚ್ಚಿ

ಗುಣವತಿಯ ತಪಂ ನಿ
ರ್ವೇಗಕ್ಕೆ
ನಿಮಿತ್ತಮಾಗೆ ನಿಶ್ಚಿಂತಂ ಚಿಂ
ತಾಗತಿಯನುಜಸಮೇತಂ

ಭೋಗಮನಿಂಬಿಟ್ಟು
ದೀಕ್ಷೆಯಂ ಕೈಕೊಂಡಂ   ೩೧

ಅಸಿಯಳ್ ಖೇಚರನೊಲ್ಲದಿರ್ದೊಡೆ ತಪಂಬಟ್ಟಂದದಿಂದಾ ಬುಧಂ
ಬಿಸುಟುರ್ವೀವಧು
ಭೂಮಿಭೃದ್ಭುಜವನಕ್ಕೇೞ್ತಿಂದು ವೈರಾಗ್ಯದಿಂ
ದಸಿಧಾರಾವ್ರತಮಂ
ನೆಗೞ್ಚೆ ತಳೆದಳ್ತನುಂ ಕ್ಷಮಾರೂಪಮಂ
ಮಸೆದಂ
ಕಲ್ಪಿಸವೇೞ್ಪುದೇ ಪುರುಡಿನೊಳ್ ಪೆಂಡಿರ್ಗೆ ಪಾಂಡಿತ್ಯಮಂ     ೩೨

ವ|| ಅಂತು ಮೂವರುಮೊರ್ವಳೊಳೆ ಮದುವೆನಿಂದುನಿಜಾಯುರವಸಾನದೊಳ್ ಮಹೇಂದ್ರಕಲ್ಪದೊಳ್ ಸಾಮಾನಿಕ ನಿಳಿಂಪರಾದರ್

ಚಿಂತಾಗತಿಯೈ ನೀಂ
ಭೂಚರಪತಿ
ಮಕುಟಮಣಿಗಣಗಣಾರ್ಚಿತ ಪದಕಮ
ಳಾಚಪಳಗತಿ
ವಿಯಚ್ಚರ
ನೀ
ಚಾರಣತಿಲಕನಾಂ ಮನೋಗತಿಯೆಂಬೆಂ ೩೩

ವ|| ಅಲ್ಲಿ ಸಪ್ತಸಾಗರ ಜೀವನಮಂ ಜೀವನೆಂಬಗಸ್ತ್ಯನೀಂಟೆ ನೀಂ ಬಂದಪರಾಜಿತನಾ ದೆಯಾಮಿರ್ವರುಂ ಮುಂಬಂದು ಜಂಬೂದ್ವೀಪದ ಪೂರ್ವ ವಿದೇಹದ ಪುಷ್ಕಳಾವತೀ ವಿಷಯದ ವಿಜಯಾರ್ಧದುತ್ತರಶ್ರೇಢಿಯ ಗಗನ ವಲ್ಲಭನಗಮನಾಳ್ವ ಗಗನಚಂದ್ರಖಚರೇಂದ್ರಂಗಂ ಗಗನ ಸೌಂದರಿಗಮನಮಿತಗಿಯುಮಮಿತರಾಜನುಮೆಂಬ ತನುಜರೆಮಾಗಿ ಪುಂಡರೀಕಿಣಿಯೊಳ್ ಪುಂಡರೀಕತ್ರಯಾದಿ ವಿಭವ ವಿಭ್ರಾಜಿತನಾಗಿರ್ದ ಸ್ವಯಂಪ್ರಭ ಜಿನಪ್ರಭುವಂ ಪೂಜಿಸಲ್ಪೋಗಿ ಭವದೀಯ ಭವತ್ರಯಮಂ ಜಗತ್ರಯಪತಿಯ ಪಕ್ಕದೊಳ್ಕೇಳ್ದು ಸರ್ವಸಂಗಮುಮಂ ಬಿಸುಟ್ಟು ಸಂಯಮ ಮಂ ತಳೆದುಕೊಂಡು ಸದಾಚರಣದಿಂ ಗಗನಚಾರಣ ಋದ್ಧಿಸಂಪನ್ನರೆಮಾಗಿ ನಿನ್ನಂ ನೋಡಲೆಂದು ಬಂದೆವಲ್ಲದೆಯುಂ ನಮ್ಮನ್ಯೋನ್ಯಪ್ರೀತಿ ನಿಮಿತ್ತಮಪ್ಪ ಪೂರ್ವಭವ ಪ್ರಪಂಚಮಂ ಪೇೞ್ವೊಡೆ

ಬಳೆದೆಸೆವ ಮಗಧಮಂಡಳ
ದೊಳಗೆಸೆವುದು
ಕಾನನಂ ಕಳಂಕಂ ಶಶಿಮಂ
ಡಳದೊಳೆಸೆವಂತೆ
ಮೃಗಮದ
ಮಳಿನಂ
ವಲ್ಮೀಕ ಮೃಗ ಮಹಾಮಹಿಮಜಯಂ         ೩೪

ಅದು ಜಂಬೂ ಜಂಭ ರಂಭಾ ಕುಳಕ ಬಕುಳ ಕಂಪಿಲ್ಲ ಸತ್ರಾರ್ಣ ಸಪ್ತ
ಚ್ಛದನಾದೇಯ
ಪ್ರಿಯಾಳ ಪ್ರಿಯಕ ಕುರವಕಾಶೋಕನಿಂಬಾಮ್ರ ಕುಂಭೀ
ಬದರ
ನ್ಯಗ್ರೋಧ ಗುಂದ್ರಾ ಪಿಚುಳ ನಿಚುಳ ಕಾಶ್ಮರ್ಯ ಮಾಲೂರ ಲೋಧ್ರೇಂ
ಗುದಿ
ಕಾಕ್ಷಪ್ಲಕ್ಷಪಥ್ಯಾಮಳಕ ತಿಳಕಭೂರ್ಜಾದಿ ಭೂಜಾವಕೀರ್ಣಂ         ೩೫

ನವನಿರ್ಮೋಕಗ್ರಹ ವ್ಯಾಕುಳ ನಕುಳ ಕುಳಂ ಫೇರವಸ್ಫಾರಢಕ್ಕಾ
ರವವಲ್ಲದ್ವಾನರಂ
ಮಾರುತ ಚಳಿತ ತಮಾಳಾಹಿತೋತ್ಕಂಠ ಕಂಠೀ
ರವದಂತಿ
ಭ್ರಾಂತಿದಾವದ್ದವ ಕಿಸಲಯ ಜಾಲಾನು ಸಂಸರ್ಪಿಶೂರ್ಪ
ಶ್ರವ
ಸಂಭ್ರಶ್ಶತ್ಪತಂಗಾಶಯ ಶಯಗಳಿತಾಪತ್ತಿಂತತ್ಕೀರ್ಣ ಪರ್ಣಂ       ೩೫

ಕದಳೀಪ್ರಿಯಕ ಶಿವಾರ್ಜುನ
ಕದಂಬ
ಪುನ್ನಾಗ ತಾಳ ಚಮರಕ ಶಲ್ಯಾ
ಸ್ಪದಮಾಯ್ತು
ಪುದಿವ ಪಾದಪ
ಕದಂಬದಿಂ
ಮೃಗಕದಂಬದಿಂದಾ ವಿಪಿನಂ    ೩೬

ಅಳಗರ್ದಮಾಳು ಧಾನಕ
ತಿಳಿಂಪ
ನಿರ್ಮುಕ್ತ ಶೇಷಶಯು ವಾಸುಕಿ ರಾ
ಜಿಳಜಾಳ
ನಿಕೇತಂ
ೞ್ತಳಿಪುದು
ಫಣಿಲೋಕದಂತೆ ತತ್ಕಾಂತಾರಂ  ೩೭

ತ್ರಿಪದಿ || ವಾಮಾಳಿಕ ಪುನ್ನಾಗಗಂತವೆಮೆಂ
ದೀ
ನಡೆದಪುದೆ ತಿಮಿರದೊಳೆನಿಪುವು
ನಾನಾಹಿಮಸ್ತಮಣಿದೀಪಾ
೩೮

ಕರಟತಟ ಘಟಿತ ಮದ ಸುಂ
ದರ
ಸುಭಗ ಸಲೀಲಗತಿಗೆ ಸೋಲ್ತು ಕರಂ ಕೇ
ಸರಿಣಿ
ನಡೆ ನೋಡೆ ರದನಿಗೆ
ಪುರುಡಿಸಿ
ಪಾಯ್ವಂತೆ ಪಾಯ್ದುದಲ್ಲಿ ಮೃಗೇಂದ್ರಂ       ೩೯

ಭೃಂಗ ಮಲಿನೋಪಕಂಠಂ
ತುಂಬ
ಶಿಖಾ ಚುಂಬಿಚಳಿತ ಚಂದ್ರಂ ಗಿರಿಜೇ
ಶಂಗೆಣೆವಂದುದು
ಜಗದ ಭೂ
ಜಂಗಮವಳಯಾದಿಭಾಸಿ
ಚಂದನನಿವಹಂ   ೪೦

ಅಡಸಿ ಫಣಿ ಸುತ್ತೆ ಚಂದನ
ದಡಿ
ಮೊದಲುಮನೊರಸಿಕೊಳ್ವ ಕೊರಲುಮನೆಳಸೊ
ರ್ಕೊಡೆದು
ಕಟತಟದಿನಿೞಿತರೆ
ನಡುಪಟ್ಟಿಭಮಲ್ಲಿ
ಕಟ್ಟುವಟ್ಟವೊಲಿರ್ಕುಂ       ೪೧

ಪಿಡಿದು ಕೊಲೆ ಜೀವರಾಶಿಯ
ನಡಿಗಡಿಗೆಯಾದೊಡಾಯುಗಳ
ಪ್ರಾಣಮನಾ
ಗಡೆ
ಪಾಯ್ದು ಕೊಳ್ವ ತೆಱದಿಂ
ಕುಡಿವುವು
ಬಾಯ್ದೆಱೆದು ಪವನನಂ ಫಣಿತತಿಗಳ್       ೪೨

ಜೆಡೆಯಂ ಬಕ್ಕಳೆಯುಮನಾ
ಳ್ದಡವಿಯೊಳಿರ್ದೆಲರನಲದೆ
ಕೋಟರ ಮುಖದಿಂ
ಕುಡಿವ
ವಟವಿಟಪಿಪಟಳಂ
ತುಡುಂಕುವಂತಿರ್ಪುದಾವ
ಚೋದ್ಯಮೊ ದಿವಮಂ      ೪೩

ನೀರಡಸಿದ ಕಾಸರಪತಿ
ಕೇರೆಯ
ನಗದೊಸರೆಗೆತ್ತು ನಕ್ಕುವುದಹಿಯುಂ
ಸೈರಿಭದ
ಬಾಯ ನೊರೆಯಂ
ಸೈರಿಸಿ
ಪಾಲೆಂದು ನಕ್ಕುವುದು ಕಾನನದೊಳ್         ೪೪

ತಾರಗೆಯೆನೆ ತೊನೆದೊಟ್ಟಿದ
ಮೂರಿಯ
ರೋಮಂಥ ಫೇನ ಮಂಜರಿ ನಿಕರಂ
ಕಾರಿರುಳ
ತಿರುಳಿದೆನೆ ಮದ
ಸೈರಿಭಮಿರ್ಪುವು
ಚಳತ್ತಮಾಳದ ನೆೞಲೊಳ್ ೪೫

ಗಿರಿಗುರುಚಪೇಟ ಪಾಟಿತ
ಕರಿಯಂ
ಹರಿಕೊಂಡು ಕೀಱಿ ಪಾಱುವುದರುಣಾ
ತ್ಯರುಣತನು
ತರುಚರೇಂದ್ರಂ
ಶರಧಿಗೆ
ಕೈಬೆಟ್ಟವೆತ್ತಿ ಪಾಱುವ ತೆಱದಿಂ       ೪೬

ಬಲಿದುಗುರ್ಗಳಿಲ್ಲ ಪಲ್ಗಳ
ಬಲಮಿಲ್ಲ
ಕಡಂಗಿ ಕಾದುವುವು ಕಾನನದೊಳ್
ತೊಲಗದೆಳವೆಳಗುಮೆಳಗ

ೞ್ತಲೆಯುಂ
ತಲೆಯೆತ್ತವಂತೆ ಹರಿಕರಿಶಿಶುಗಳ್ ೪೭

ತನುಮಂ ಕಾಡೊಳಕೊಂಡು ಕಾದ ಪಗೆ ತಮ್ಮಿರ್ವರ್ಗಮಂತಾದೊಡಂ
ಸಮಮರ್ಕಂ
ಸುಡುತುಂ ನಿಜಾತ್ಮಶಿಖಿಯಿಂದಾನಂದಿಪಂ ಚಂದ್ರನಿಂ
ದುಮಣಿ
ಸ್ರೋತದಿನೆಂಬವೋಲ್ ವಿಪಿನದೊಳ್ಕಾದುತ್ಪಳಾನೀಕಮಂ
ಕಮಳಾನೀಕಮನರ್ಕ
ಗೃಹ್ಯಕುಲಮಂ ಕೊಲ್ಗುಂ ವನೇಭೋತ್ಕರಂ         ೪೮

ವನದೊಳಿರ್ಪುದವ ತಮ
ಸಾವೃತದೊಳದೊಂದು
ಶಬರ ಶಿಬಿರಂ ಪಾವಂ
ತೀವಿದವೊಲ್ಪಾತಾಳದೊ

ಳಾವಗಮಿರ್ಪಂತೆ
ದುಷ್ಟದಾನವಶಿಬಿರಂ      ೪೯

ಪೊಡೆದೆತ್ತಂ ಪರಿಯುತ್ತುಮಿರ್ಪ ಪುೞುವಂ ತಿಂಗುಂ ಶಿಶುಶ್ರೇಣಿಗಳ್
ಪಿಡಿದುರ್ಕಿಂ
ಪೊಲಗೆಟ್ಟು ಪೊಕ್ಕ ಮೃಗಶಾಬಾನೀಕಮಂ ಕೊಂದು ಕೇ
ಸಡಗಂ
ಸೂಡುವರಲ್ಲಿ ಬಾಲೆಯರೆನಲ್ಕೂರ್ಮೆತ್ತದಿಂ ಮತ್ತಮೊಂ
ದೆಡೆಗೇನೀಗುಮೆ
ಪೋಗಲುತ್ಕಟ ಮಹಾಪಾಪಕ್ಕೆ ತಾಂ ಪಕ್ಕಣಂ ೫೦

ಮದಗಜಕುಂಭಕೋಟಿಯ ಕಲಂ ಕರಿದಂತದಕೇ ತರಕ್ಷು
ರ್ಮದ
ತೆರೆಸುತ್ತು ಕೇಸರಿಯ ದಾಡೆಯ ಜೂದಿಯ ದೀಂಟೆ ಪೀಲಿಯಂ
ಪೊದೆಸಿದ
ಪಂದರಾಳಿಯಲರಾನೆಯ ಮುತ್ತಿನ ರಾಸಿ ಜೇನ ತು
ಪ್ಪದ
ಕೆಱೆಯಲ್ಲಿ ನೆತ್ತರ ಕೊಳಂ ಚಮರೀ ಮೃಗವಾಳ ತೋರಣಂ ೫೧

ಪಳ್ಳಿಗಧಿಪನಾದಂ
ಕೋಪದೊಳಿರದರುಣನಾದ
ಸಂಗರ ವಿಚಳ
ಚ್ಚಾಪದೊಳರ್ಜುನನಾದಂ

ರೂಪದೊಳತಿಕೃಷ್ಣನಾದ
ವಿಂಧ್ಯಕನೆಂಬಂ    ೫೨

ಪೊಸಕೋಲಂ ಗಱಿಗಟ್ಟುವಂ ಗರುಡ ಪಕ್ಷಚ್ಛೇದದಿಂ ತಿರ್ದುವಂ
ಪ್ರಸರದ್ದಂತಿಯ
ದಂತದೊಳ್ ಹರಿಯ ದಂಷ್ಟ್ರಾಲೇಖೆಯಂ ಕಿೞ್ತು ತೆ
ತ್ತಿಸುವಂ
ಲೀಲೆಯೊಳರ್ಧಚಂದ್ರಶರಮಂ ಮಾೞ್ಪೞ್ತಿಯಿಂದಣ್ಮುದ
ಳ್ಳಿಸೆ
ಸಿಂಹೀಶತ ನೇತ್ರದತ್ತ ಪತಿಶೋಕಾವೃಂದಕಂ ವಿಂಧ್ಯಕಂ   ೫೩

ಜಯವಡೆದಾ ಪುಳಿಂದಪತಿಯಾಡುವ ಬೇಂಟೆಗೆ ಬೆರ್ಚಿ ಪೋಗಿ ಚಂ
ಡಿಯ
ಮಱೆಯಂ ಮೃಗಾರಿ ಮುರವೈರಿಯ ಮೈಮಱೆಯಂ ಖಗೇಂದ್ರನು
ರ್ವಿಯ
ಮಱೆಯಂ ಮಹಾಪ್ರಳಯದಾದಿ ವರಾಹನಿದದ್ಭುತಂ ದಿಶಾ
ಳಿಯ
ಮಱೆಯಂ ಗಡಿನ್ನುಮವೆ ಪೊಕ್ಕುಳಿದಿರ್ದಪುವಷ್ಪದಂತಿಗಳ್         ೫೪

ವನಚರನ ಮನಃಪ್ರಿಯೆ
ಪೂವಿನಬಿಲ್ಲಾಳತನವಳ
ಯೌವನ ಸಲ್ಲ
ಕ್ಷ್ಮೀವನಚರನೆನೆ
ದೃಕ್ ಶಫ
ರೀವಾಗುರೆ
ಪೆಸರೊಳಾಕೆ ವಾಗುರೆಯೆಂಬಳ್ ೫೫

ವಾಗುರಿಕೆಯ ಮೊಲೆವೆಟ್ಟದ
ಮೇಗಣ
ಪರಿಪಕ್ವ ಬಿಂಬ ಫಲರಸಮಂ ಪೀ
ರ್ದಾಗಳುಮೆರ್ದೆ
ತಣ್ಣನೆ ತಣಿ
ದೋಗಡಿಸಿರಲುೞಿದ
ಪಣ್ಣನೊಲ್ಲಂ ಭಿಲ್ಲಂ     ೫೬

ಎನಿತುಂ ಕೞ್ತಲಿಸಿದೊಡಂ
ವನೇಚರಂ
ನಡೆವನಡರೆ ಪೊಳೆದಡಗದ ಮಿಂ
ಚಿನ
ಗೊಂಚಲಂತೆ ಮಿಂಚುವ
ವನೇಚರಿಯ
ಬಿಳಿಯ ಕಣ್ಣ ಬೆಳಂಗಿ ಬನದೊಳ್         ೫೭

ಧವಳವಿಲೋಚನಂ ಪೊಳೆವ ಪೂವನೆ ಪೀನಕುಚಂ ಪ್ರಗಲ್ಭಗು
ತ್ಸವಮನೆ
ನಮ್ರಬಾಹು ಸೆಳೆಗೊಂಬನೆ ಜಾತ್ಯರುಣಾಧರಾಂಶು
ಲ್ಲವಮನೆ
ಪೋಲೆ ವಿಂಧ್ಯಕನ ಬೆಂಬೞಿಯಂ ವನಲಕ್ಷ್ಮೀ ಕೂರ್ತು
ರ್ಪವೊಲಿರೆ
ಬರ್ಪಳಾ ಶಬರಿ ಸೋರ್ಮುಡಿ ಕೞ್ತಲಿಸುತ್ತುಮಿರ್ಪಿನಂ        ೫೮

ವ|| ಅಂತವರ್ ಕೃತಕಕಿರಾತ ಭೂಪತಿಯುಂ ವನಚರೀ ವೇಷ ವಶಗತ ಭವಾನಿಯು ಮಿರ್ಪಂತಿರ್ಬರುಮನ್ಯೋನ್ಯಸಕ್ತರುಮವಿಯುಕ್ತರುಮಾಗಿ ರಾಗದಿಂದಿಮಿರೆ

ಕೞಿದುದು ಮೊಲ್ಲೆ ಮಲ್ಲಿಗೆ ಮುಗುಳ್ತುದು ಕೊಂಚೆಯ ಪಂಕ್ತಿಯಿಂಚರಂ
ಪೞಮರವಾದುದುಪ್ಪವಡಸಿತ್ತು
ಪಿಕಧ್ವನಿ ಪೋಯ್ತು ನೇಳಲಂ
ಗೊೞಿಯದೆ
ಮಾವು ಬಂದುದದೞಿಂ ಶಿಶಿರಾಧಮನಂ ಜಡಾತ್ಮನೆಂ
ದುೞಿದು
ಬಸಂತನಂ ಕರೆದಳಕ್ಕುಮೆ ಭೂವಧು ವೇಶ್ಯೆಯಂದದಿಂ         ೫೯

|| ಸ್ವಾಗತ|| ನೋಡಿ ನೋಡ ರತಿ ಮಲ್ಲಿಗೆಯಂ ಕೈ
ನೀಡಿ
ತಾಂ ತಿಱಿಯಲಾಱದೆ ಕಂಪಿಂ
ದೂಡುತಿರ್ಪಳೆನೆ
ಕುಂತಳಮಂ ಸಾ
ರ್ದಾಡುತಿರ್ದುವದಱೊಳೆ
ಮಧುಪಂಗಳ್     ೬೦

ವ|| ಆ ವಸಂತದೊಳಾ ತಮಾಳ ಶ್ಯಾಮಳನಪ್ಪ ವಿಂಧ್ಯಕನೊಂದು ದಿವಸಂ ಶಾರ್ದೂಲ ಸ್ನಾಯು ಸಂಜನಿತ ಸಿಂಜಿನೀಸಮಾಸ್ಫಾಳನ ವಾಚಾಳ ಚಪಳ ಚಾಪನುಂ ಕರತಳಕಲಿತ ಕಂಕಪತ್ರತನುಮಾಗಿ ಮೃಗಯಾ ವಿನೋದದಿಂ ತೊೞಲುತಿರ್ಪಾಗಳ್ ಪೂಗಣೆಯದ ಪೆಱಗೆ ಬರ್ಪ ರತಿಯ ರಮಣೀಯಮನೊಳಗುಮಾಡಿ