ವ|| ಆ ಪ್ರಸ್ತಾವದೊಳ್

ಕಂದಿಸೆ ಭಾಮಂಡಲರುಚಿ
ಸಂದೇಹಂ
ಮೂಡುತಿರ್ಪ ರವಿಮಂಡಲಮೆನೆ
ಬಂದುದು
ತನ್ನಗರಕ್ಕೆ ಸು
ಮಂದಿರ
ಜಿನಪತಿಯ ಸಮವಸೃತಿ ಜಿತದುರಿತಂ       ೫೬

ವ|| ಸುಪ್ರತಿಷ್ಠಂ ಚಾದಗೆಯ ಭಿನ್ನಘನಧ್ವನಿಯಿಂ ಪ್ರಾವೃಡಾಗಮನಮನಱಿವಂತೆ ದೇವದುಂದುಭಿಧ್ವನಿಯಿನಱಿದಱಲ್ಕೊಂಡನ ಮೇಲೆ ತೊಱೆ ಬಂದತ್ತೆಂದು ಸಂತಸಂಬಟ್ಟು ಪಾಪಪ್ರತಿವ್ಯೂಹಭೀತಿಯಿಂ ಸಮವಸರಣ ದುರ್ಗಮಂ ಶರಣ್ಬೊಕ್ಕುಂ

ಎನಸುಂ ಭಿನ್ನಘಟಕ್ಕೆ ತೂಂತಿಡುವುವೇ ನದ್ಯಾದಿಗಳ್ ಭಿನ್ನಭಾ
ಜನವಾದಂದೞಿಯೆಂ
ನಿಜಾಮೃತಮಯ ಶ್ರೀ ಧರ್ಮತೀರ್ಥಕ್ಕೆ ಬಂ
ದಿನಿಸಂ
ಸದ್ಗುಣ ಭಾಜನಂ ಸುಲಭನುಂ ಪುಣ್ಯಾಂಬುವಂ ತನ್ನಕೊ
ಳ್ವನಿತಂ
ಕೊಳ್ಳದೆ ಪೋದ ಕಾಲವೊಳವೇ ನಿರ್ಬಾಧ ಬೋಧಾಂಬುಧೀ     ೫೭

ವ|| ಎಂದು ದೇವಾದಿದೇವನಂ ಸ್ತುತಿಯಿಸಿ

ಜಿನನ ದಿವ್ಯಪಾದಪ
ಯೋಜಾಂತಿಕದಲ್ಲಿ
ದೀಕ್ಷೆಗೊಂಡನಿಳೇಶಂ
ಬೀಜಂಗೊಳ್ವಂತಿರೆ
ವಿ
ಭ್ರಾಜಿಸುವಾರ್ಹಂತ್ಯ
ವಿಪುಳಫಳಮಂ ಪಡೆಯಲ್      ೫೮

ವ್ಯಾಲೋಲರಾಜ್ಯ ವಿಭವ ವಿ
ಶಾಲ
ವಿಭೂಷಣ ಕಳಾಪಮಂ ಕಳೆದೊಲವಿಂ
ದೋಲಾಡುತಿರ್ದನುಪಶಮ

ಲೀಲಾರಸದೊಳ್
ಸರಸ್ವತೀ ಶೃಂಗಾರಂ     ೫೯

ವ|| ಆ ತಪೋಧನರ ತಪೋರಾಜ್ಯಯೋಗಕ್ಕೆ ಯೋಗಿಯಾಗಿ

ನಲಿದು ನವಿಲ್ ಜಗರ್ತುದು ಪಿಕಧ್ವನಿ ಪಣ್ತುದು ಮಿಂಚು ಕಣ್ಗಳೊಳ್
ಮೊಲೆತುದು
ಶಕ್ರಚಾಪಲತೆ ಪೊಣ್ಮಿ ಪಸುರ್ತುದು ಮುಗ್ಧಚಾತಕಂ
ಗಳ
ಸಿತಚಂಚುವುಳ್ಳಲರ್ದುದಂಬರಮೆಂಬ ತಮಾಳಮೀಗಳೀ
ಗಳೆ
ಮುಗಿಲಂ ತಳಿರ್ತುದೆಲೆ ತೀಡಿದುದಕ್ಕುಮೆ ಪಶ್ಚಿಮಾನಿಳಂ  ೬೦

ವ|| ಆ ಘನಾಗಮದೊಳ್
ಸಿಡಿಲ ಸರಿ ಮೊೞಗುಗಳ ಮೞೆ
ಕುಡುಮಿಂಚಿನ
ಸೋನೆಯಾಲಿಗಳ ಬೆಳ್ಸರಿಗಳ್
ಬಿಡದ
ರಜನಿಗಳ ಮೞೆಯೊಳ್
ಮಿಡುಕದೆ
ಮರಮೊದಲೊಳಿರ್ದನಿರ್ಪವೊಲಚಳಂ      ೬೧

ಶಾಳಿಯ ಕಂಪನೊಟ್ಟಿ ನಳಿನಂಗಳನಳ್ಕಿಸಿ ಬೆಳ್ಮುಗಿಲ್ಗಳಂ
ತೂಳಮನೆತ್ತುವಂತಳೆದು
ಸೋಗೆಯ ಹೀಲಿಯ ಬೇರನೆತ್ತಿ ಹಂ
ಸಾಳಿಯ
ತುಪ್ಪುೞಂ ತುೞಿದು ಪಶ್ಚಿಮದಿಂ ಬಡವಾಗಿ ಬರ್ಪಮೇ
ಘಾಳಿಯನೊತ್ತಿ
ತೀಡಿದುದು ಮೂಡಣ ಗಾಳಿ ಹಿಮಪ್ರವೇಶದೊಳ್         ೬೨

ವ|| ಆ ಹಿಮಾಗಮದೊಳ್

ರಂಗತ್ತರಂಗ ಸೀಕರ
ಮಂ
ಗಾಳಿಗಳೊಟ್ಟಿ ಕರಗಿ ಸುರಿದಂತಿರೆ ಬೆ
ಳ್ದಿಂಗಳಮೆಲೈಕಿಲ್
ಬೆ
ಳ್ಳಂಗೆಡೆದಿರೆ
ಯೋಗಿ ಬೆಳ್ಳವಾಸಮನಿರ್ದಂ   ೬೩

ಪರಿಮರಿಯಾಡಿ ದಾವದುರಿಗಾಳಿಗಳೊಳ್ಬಿಸಿಲೊಳ್ಕನಲ್ವ
ಲ್ಸುರಿಯುರಿಯುಯ್ಯಲಾಡಿ
ಪುಡಿಯಾಟಮನಾಡಿ ಚರಾಚರಂಗಳಂ
ಕರಿಮುರಿಯಪ್ಪಿನಂ
ಹುರಿವ ಹಂಚುವೊಲಿರ್ದೆಳೆಯೊಳ್ ಕೃತಾಂತನೆ
ಚ್ಚುರಿಗಣೆಯಂತೆ
ಬಂದುದು ಲಯಾನಿಳ ಕಲ್ಪನಿದಾಘಜಾನಿಳಂ  ೬೪

ವ|| ಶ ಸಮಗ್ರೋಷ್ಮಗ್ರೀಷ್ಮಾಗಮದೊಳ್

ಕೆಳರ್ದುರಿವ ಬಿಸಿಲ ಕೇಸುರಿ
ಗಳ
ಕಿಡಿಗಳುಮನುಗುೞ್ವ ಕಿಚ್ಚಿನ ಸರಿಯಂ
ತಳರ್ದು
ತಳತಳಿಪ ತಪನೋ
ಪಳದೊಳ್
ಶಾಂತ್ಯಮೃತ ಜಳಧಿ ಕಲ್ನಿಲೆ ನಿಂದಂ      ೬೫

ವ|| ಅಂತು ತನ್ನ ತಪಂ ತ್ರಿಕಾಲಮಂ ಗೆಲೆ ತನ್ನ ಬೋಧಂ ತ್ರಿಭುವನಮನೊಳಗು ಮಾಡೆ ತನ್ನ ದರ್ಶನಂ ತ್ರಿದರ್ಶನಮನಧಃಕರಿಸೆ ಸುಪ್ರತಿಷ್ಠವ್ರತಿಪನನನುಕ್ರಮದಿನೇಕಾದಶಾಂಗಧರನಾಗಿ ಸಮ್ಯಕ್ತ್ವಾದಿ ಷೋಡಶ ಭಾವನೆಗಳಂ ಭಾವಿಸಿ ಸದ್ಗುಣಂಗಳಿಂ ತೀರ್ಥಂಕರ ಪುಣ್ಯಮಂ ಕಟ್ಟಿಕೊಂಡು ಒಡನಹಮಿಂದ್ರತ್ವಮಂ ಕುಡಂದು ಜಿನೇಂದ್ರಂಗೆ ಪಾೞಂಬಡುವಂತೆ ತಿಂಗಳ್ ಸನ್ಯಸನಮಿರ್ದೊಡಲನೀಡಾಡಿಯುತ್ತರ ವೈಜಯಂತಿ ವಿಮಾನದೊಳಹಮಿಂದ್ರನಾಗಿ ತ್ರಯ ಸ್ತ್ರಿಂಶತ್ಸಾಗರೋಪಮಾಯುಷ್ಯನುಮೇಕರತ್ನಿ ಪ್ರಮಾಣನುಂಮ ಶುಕ್ಲಲೇಶ್ಯಾ ಪರಿಣಾಮನುಂ ಸಾರ್ಧ ಷೋಡಶಮಾಸ ನಿಶ್ವಾಸನುಂ ತ್ರಯಸ್ತ್ರಿಂ ಶದ್ವರ್ಷಸಹಸ್ರಾಂತೋಪ ಭುಕ್ತಾಮೃತಾಹಾರನುಂ ನಿಃಪ್ರವೀಚಾರ ಸುಖನುಂ ಸಪ್ರವೀಣಾರಾಂತಗುಣನುಂ ಲೋಕನಾಡಿಕಾಭ್ಯಂತರ ಗತಾವಧಿಜ್ಞಾನನುಂ ಸ್ವಾವಧಿಕ್ಷೇತ್ರಬಳ ಪ್ರಕಾಶ ಶರೀರವಿಕ್ರಿಯಾದಿ ಗುಣಾಲಂಕೃತನುಮಾಗಿ ದಿವ್ಯಸುಖ ಮನಾಸ್ವಾದಿಸುತ್ತುಮಿರ್ದಂ

ನಱುಸುಯ್ಗಂಪಿನಲಂಪಿಂ
ದಱುದಿಂಗಳ್ಗೊಮ್ಮೆ
ಪೀರ್ದು ತಣಿದಿರ್ಪಳಿವೋಲ್
ಮಿಱುಗೆ
ನಿಜನೀಲಭೂಷಣ
ಮಱುದಿಂಗಳ್ಗೊಮ್ಮೆ
ಸುಯ್ವನೆಸೆವಹಮಿಂದ್ರಂ          ೬೬

ಅಹಮಹಮಿಕೆಯೆಂತತಿಶಯ
ಸಹಜಾಳಂಕರಣಗಳಮಹಂ
ಪೂರ್ವಿಕೆಯಿಂ
ಬಹು
ಭೋಗಮಹಂಕೃತಿಯಿಂ
ದಹಮಿಂದ್ರಂಗಪ್ಪು
ದಪ್ರವೀಚಾರಸುಖಂ       ೬೭

ಮೇದಿನಿಯೊಳ್ ವಿನೂತ ವನವರ್ಣನಮಾಗೆ ವಸಂತವರ್ಣನಂ
ಸ್ವಾದಮೆನಿಕ್ಕುಮಲ್ತೆ
ನೆಗೞ್ದೀ ಕೃತಿಯೊಳ್ ಕೃತಿನಾಥ ನೇಮಿನಾ
ಥೋದಯ
ವಸ್ತುವರ್ಣನಮೆ ಮುಖ್ಯತೆವೆತ್ತೊಡಮಾದಿಯೊಳ್ ಪೊದ
ೞ್ದಾದರಣೀಯಮಾದುದೆನಗಾತನ
ವಿಶ್ರುತ ವಂಶವರ್ಣನಂ     ೬೮

ವ|| ಅದೆಂತೆಂದೊಡೆ ಫುಲ್ಲಶರನ ಶಸ್ತ್ರಶಾಲೆಯಂತಿರ್ಪ ಪುಷ್ಪವಾಟಿಗಳಿಂ ಮನೋಜರಾಜನ ರಾಣಿವಾಸದಂತಿರ್ಪೆಳಲತೆಯ ಬಳ್ಳಿಗಾವಣಂಗಳಿಂ ಅಂಗಜನ ರಾಜಗೃಹಂಗಳಂತಿರ್ಪ ನಾಗವಲ್ಲಿಗಳಿಂ ಶೃಂಗಾರ ಸೂತಿಯ ಶೃಂಗಾರಭವನದಂತಿರ್ಪ ಮಲ್ಲಿಕಾಭವನಂಗಳಿಂ ಲಕ್ಷ್ಮೀಸುತನ ಸೂತಿಕಾಗಾರದಂತಿರ್ಪ ಕದಳಿಯ ಸುತ್ತಿನಿಂ ನನೆಗಣೆಯನ ಗರುಡಿಯಂತಿರ್ಪ ಪೂವಿನ ಪುಡಿಯ ಪುೞಿಲ್ಗಳಿನಲರ್ಗೋಲನೋಲಗಸಾಲೆಯಂತಿರ್ಪ ಜಾದಿಯ ಪಂದರಿಂ ಕಂತುವಿನ ಖೇಡಕುೞಿಯಂತಿರ್ಪ ಕ್ರೀಡಾರಸಂಗಳಿಂ ರತಿಯ ರತಿಗೃಹಂಗಳಂತಿರ್ಪ ಬಾಳ್ಜೊಂಪಂಗಳಿಂ ರತಿಯ ನೃತ್ಯಮಂಡಪಗಳಂರ್ತಿ ನವಮಾಳಿಕಾ ಮಂಡಪಂಗಳಿಂ ಕಂತುಕಾಂತೆಯ ಕಳಕೂಜನದ ಗುಣಾಣೆಯಂತಿರ್ಪ ಸಾರಸರಸಿತ ಕಮಳಕುವಳಯ ಷಂಡಂಗಳಿಂ ಅನಂಗನ ವನಿತೆಯ ವಿನೋದದಳಿಯ ಗಿಳಿಯ ಕೋಗಿಲೆಯ ಕಾಪಿನಾಕೆಗಳಂತಿರ್ಪ ಚೂತಲತೆಗಳಿಂ ರತಿಪತಿಯ ಪಡಿಯಱತಿಯರಂತೆ ತಳಿತ ತುಱುಗಲೊಳ್ ಮೇಯ್ಗರೆದು ಕರೆವ ಕೋಗಿಲೆಯ ದನಿಯಿಂ ಪುಗಿಲ್ಬುಗಿಲೆಂಬ ಸಹಕಾರವಲ್ಲರಿಗಳಿಂ ಮನ್ಮಥನ ಮೆಯ್ಗಾಪಿನಾಕೆಗಳಂತೆ ಸುಕುಮಾರ ಶಾಖಾಭುಜಾಗ್ರ ಭೀಷಣ ಭುಜಂಗಮ ಜಂಗಮ ಲತೆಗಳಂ ತಳೆದ ಚಂದನಲತೆಗಳಿಂ ದರ್ಪಕನ ದೀಪೋತ್ಸವದ ದೀಪಮಾಲೆಗಳಂತೆ ಪೂತು ಸೊಗಯಿಸುವ ಸಂಪಿಗೆಗಳಿಂ ಮನಸಿಜಂಗೆ ಮೀನಕೇತುವನೆತ್ತುವಂತೆ ನೀರ ಮೇಗೆ ನೆಗೆದ ನಿಡಿಯ ನಾಳದ ನಳಿನದರಲೊಳೆ ಪೊಳೆದು ಪಾಱಿ ಬೀೞ್ವ ಬಾಳೆಮೀನಿಂ ತೊಳಪ ತಿಳಿಗೊಳಂಗಳಿಂ ನೀರ ಮೇಲೆ ಪರಿವ ರತಿವಲ್ಲಭನ ವಾಜಿಕುಳದಂತೆ ತೊಡಗಿಸುವ ಜಕ್ಕವಕ್ಕಗಳಿಂ ಚಿತ್ತಭವಚಕ್ರವರ್ತಿಯ ನಡುಪಟ್ಟ ಪಟ್ಟದಾನೆಯಂತೆ ಮಗ ಮಗಿಸುವ ಮದಮದದ ಸೋನೆಯಂ ಬಿಡುವ ಬಾಳರಸಾಳಂಗಳಿಂ ಕಾಮದೇವನ ದೀವದ ಪಿಂಡಿನಂತಿರ್ಪ ಕಳಹಂಸೆಗಳಿಂ ಸ್ಮರನ ಸಿರಿಗೆ ಸೀಗುರಿಯನಿಕ್ಕುವಂತಿರ್ಪ ಸೋಗೆನವಿಲ್ಗಳಿಂ ಅವಳ್ಗೆ ಪೊನ್ನ ಬಟ್ಟಲೊಳ್ಕತ್ತುರಿಯುರುಳಿಯಂ ಪಿಡಿದಿರ್ಪಂತೆ ತುಂಬಿ ಪಾಯ್ವ ಕುಸುಮಂಗಳಿನೆಸೆವ ಕೊಸಗುಗಳಿನಾಕೆಗೆ ಕುಂಕುಮ ದುರುಳಿಯನವಟ್ಟೈಸುವ ಘಟ್ಟಿವೞ್ತಿಯರಂತೆ ಪಣ್ತ ನಾರಂಗವಲ್ಲಿಗಳಿನುದ್ಯಾನದೇಶಮನಾಳಲೆಂದು ಕಾಮನ ಕಯ್ಯೊಳ್ ತೊಳಗಿದ ಪತ್ತಳೆಯಂಕೊಂಡು ಜಾದಂ ತೊಡೆದಂತೆ ತಳಿರ್ತಸುಕೆಗಳಿಂ ಪಂಚಶರನ ಪಾಯ್ದಾಳನಂತೆ ಚಂಚರೀಕದ ಕುಂಚಮನೆತ್ತಿ ಕಿಂಜಲ್ಕದ ಕೆಂದೂಳಿಯೊಳ್ಪೆರೆದು ಮಕರಂದ ಬಿಂದುವೆಂಬ ಬೆಮರಂಪೇಱಿ ಪರಿತರ್ಪ ತಣ್ಣೆಲರಿಂ ಶಂಬರ ಹರನ ಬಿರುದಂ ಪಾಡುವಂತೆ ಮೊರೆವ ಮಧುಕರ ವೃಂದಂಗಳಿಂ ಮಕರಧ್ವಜನ ಸಂಧಿವಿಗ್ರಹಿಗಳಂತಾತನಂಕಮಾಲೆಯನೋದುವರಗಿಳಿಗಳಿಂ ಕುಸುಮಶರ ಸಿರಿಕರಣದಂತಿರಸ್ಥಿತಿಕರಣ ತರುಪತ್ರಂಗಳೆನನಿಳ ಚಳಿತದೀರ್ಘದಳಾಂಗುಳಿ ಕಳಿತ ಕಂಗಳಿಂ ಬರೆವ ಕೇದಗೆಗಳಿಂ ವಸಂತಸಖನ ನಿಸೃಷ್ಟಾರ್ಥ ದೂತಿಯಂತಿರ್ಪ ವಸಂತ ದೂತಿಯಿಂ ಮದನ ಮಹಾರಾಜನರಮನೆಯಂತಿರ್ಪರಮನೆಯಿಂ ಮನಂಗೊಳಿಸಿ ಕಂದರ್ಪನಾದೇಶಂ ಗಳಂತಿರ್ಪ ದೇಶಂಗಳಿಂ ಭರಿತಮಾದ ಭರತಕ್ಷೇತ್ರದೊಳ್

ಉಂಟು ಕೃತಾರ್ಥಮೆಂಬ ವಿಷಯಂ ವಿಷಯ ದ್ವಿಷರಪ್ಪಿನಂತೆ ನಿ
ಷ್ಕಂಟಕಮಲ್ಲಿ
ಶೌರ್ಯಪುರಮುಂಟು ಸುರೇಂದ್ರಪುರೋಪಮಂ ಪ್ರಭಾ
ಲುಂಟಿತ
ಶೂರ ಸಾರ ಗುಣನಾಳ್ವನದಂ ಕಲಿ ಶೂರಸೇನನಾಂ
ತೆಂಟುಮಿಭಂಗಳಾಂತ
ಧರೆಯಂ ದೃಢದಕ್ಷಿಣ ಬಾಹುದಂಡದಿಂ  ೬೯

ಸುರನಿಭ ಶೂರಸೇನನ ಸುತಂ ಸ್ಮರಸನ್ನಿಭ ಶೂರವೀರನಾ
ನರಪತಿಯಂ
ಪತಿಂವರೆಗೆ ಧಾರಿಣಿಗಂಧಕವೃಷ್ಟಿಯೆಂಬನುಂ
ನರಪತಿವೃಷ್ಣಿಯೆಂಬನುಮುದಾತ್ತರಸಾಢ್ಯ
ಫಲಪ್ರದತ್ವಮುಂ
ಭರ
ಸಹಸತ್ವಮುಂ ನೆಗೞ್ದ ಧಾರಿಣಿಗಾದವೊಲಾ ಧರಾತ್ಮಜರ್   ೭೦

ವಿಜಿಗೀಷುವಿಂಗೆ ವಧುವಂಧಕವೃಷ್ಣಿಗೆ ವಿಷ್ಣುವಿಂಗೆ
ಕ್ಷ್ಮೀವಧುವೋಲ್
ಸುಭದ್ರ ಶುಭಲಕ್ಷಣೆಯಾದಳುಮಾವರಂಗುಮಾ
ದೇವಿವೊಲಾ
ನರಾಧಿಪತಿ ವೃಷ್ಣಿಗೆ ಪದ್ಮದಳಾಯತಾಕ್ಷಿ
ದ್ಮಾವತಿಯಾದಳಂತು
ನೆಗೞ್ದಂಧಕವೃಷ್ಣಿಗಮಾ ಸುಭದ್ರೆಗಂ     ೭೧

ನಾಭಿನಿಭಂ ಸಮುದ್ರವಿಜಯಂ ಮೊದಲಾಗೆ ಪದಿಂಬರಾಧರಾ
ಕ್ಷೋಭನುಮುತ್ಕನುಂ
ಸ್ತಿಮಿತ ಸಾಗರನುಂ ಹಿಮವಂತನುಂ ಧೃತೋ
ರ್ವೀಭರರಾಗಿ
ಸಂದ ವಿಜಯಾಚಳಧಾರಣ ಪೂರಣರ್ಕಳುಂ
ಶ್ರೀಭವನಾಭಿ
ನಂದನನುಮಾ ವಸುದೇವನುಮೆಂಬ ನಂದನರ್  ೭೨

ಕ್ರಮಮುಂ ವಿಕ್ರಮಮರ್ಥಮುಂ ವಿತರಣಂ ವಾಗ್ಮಿತ್ವಮುಂ ನನ್ನಿ ತೇ
ಜಮುಮೈಶ್ಯಂ
ಪ್ರತಿಭಾಸಮುಂ ಸಕಲ ಶಾಸ್ತ್ರಾಭ್ಯಾಸಮಾದಾಭಿಜಾ
ತ್ಶಮುಮಾಚಾರಮಪಾರ
ಸೌಂದರತೆಯಿಂ ಸೌಭಾಗ್ಯಮೊಲ್ದೈದೆ ಮೆ
ಚ್ಚಿ
ಮರುಳ್ಗೊಂಡವೊಲಿರ್ಪುವೊಪ್ಪಿ ಶಿವದೇವೀಕಾಂತನೊಳ್ಸಂತತಂ       ೭೩

ಅದ್ರಿಗಳಿರ್ಕಚೇತನೆಯೊಳೆಂದು ಧರಾಧರ ಕೂರ್ಮ ಶೇಷದಿ
ಗ್ಭದ್ರಗಜಂಗಳೈವ
ದಶಭೂಭುಜರಾದರೆನಿಪ್ಪ ತತ್ಪ್ರತಾ
ಪದ್ರವಿಣರ್ಗೆ
ನೇರ್ಗಿಱಿಯರಾಗಿ ನೆಗೞ್ತೆಗೆ ನೋಂತ ಕೊಂತಿಯುಂ
ಮಾದ್ರಿಯುಮದ್ರಿರಾಜ
ಸುತೆಗಂ ಸತಿಗಂ ಸರಿವಂದರೇೞ್ಗೆಯೊಳ್         ೭೪

ದ್ಯುಮಣಿಪ್ರದ್ಯೋತದಿಂ ಪದ್ಮಿನಿಗೆ ನಗೆಯುಮಾನಂದಮುಂ ಲೀಲೆಯುಂ ಶ್ರೀ
ಯಮನೂನಂ
ಪುಟ್ಟುವಂತಾ ವರನರಪತಿ ವೃಷ್ಣೀಶನಿಂದುಗ್ರಸೇನೋ
ತ್ತಮನುಂ
ಶ್ರೀದೇವಸೇನಾಖ್ಯನುಮೆಸೆವ ಮಹಾಸೇನ ಭೂಮೀಶನುಂ
ತ್ಕ್ರಮದಿಂ
ಗಾಂಧಾರಿಯುಂ ಪುಟ್ಟಿದರೆಸೆದಿರೆ ಪದ್ಮಾವತೀದೆವೀಗೊಳ್ಪಿಂ   ೭೫

ವಸುದೇವಂ ಪೊಱಗಾಗೆ ಮಿಕ್ಕಿನರಮಕ್ಕಳ್ಗೊಪ್ಪಿರ್ಕಾಮಕೇ
ಳಿ
ಸುಖಾಸಕ್ತೆಯರಾಗಿ ಚಂದ್ರಕಳೆಯುಂ ಮಾರಾಧನುರ್ಲೆಖೆಯುಂ
ಕುಸುಮಾಸ್ತ್ರಾವಳಿಯುಂ
ಮನೋಜನ ವಸಂತ ಶ್ರೀಯುಮೋರಂದದಿಂ
ಮಿಸುಗಲ್ಮೀನ
ಪತಾಕೆಯುಂ ಮದವತೀ ರೂಪಕ್ಕೆ ಪಕ್ಕಾದವೋಲ್         ೭೬

||ಪೃಥ್ವಿ|| ಸುಯುಕ್ತೆ ಶಿವದೇವಿಯುಂ ನವಧೃತೀಶ್ವರಾದೇವಿಯುಂ
ಸ್ವಯಂಪ್ರಭೆಯುಮುದ್ಭವಾನ್ವಿತೆ
ಸುನೀತೆಯುಂ ಸೀತೆಯುಂ
ಪ್ರಿಯಂವದೆಯುಮಾ
ಪ್ರಭಾವತಿಯುಮಂತೆ ಕಾಳಿಂದಿಯುಂ
ಕ್ರಿಯಾನಿಧಿಗಳಂತೆ
ಸುಪ್ರಭೆಯುಮೆಂಬರಬ್ಜಾಕ್ಷಿಯರ್   ೭೭

ವ|| ಅಂತು ಶೂರಸೇನನನೆಡೆಗೊಂಡು ತನ್ನಿಂದಮೇ ಮೊಳೆವೋಗಿ ವೃಷ್ಣಿಯು ಗಳದಿನೀರೆಲೆವೋಗಿ ಸಮುದ್ರ ವಿಜಯೋಗ್ರಸೇನಾದಿಗಳಿಂಮಡಲ್ತ ಹರಿವಂಶವಲ್ಲರಿಗೆ ಮೊತ್ತಮೊದಲಾದ ತನ್ನ ಮಹಿಮೆ ಮಹೀತಳಮಹನೀಯಮಾಗೆ ಶೂರ ವೀರ ಮಹಾರಾಜಂ ರಾಜ್ಯಲತೆಗಡರ್ಪಾಗಿರೆ ಮತ್ತಮತ್ತಲ್

ಕುರುವಂಶ ಪ್ರಭುಶಕ್ತಿಗಂಸವಕೆಗಂತಾ ಪುಟ್ಟಿದಂ ಹಸ್ತಿನಾ
ಪುರದೊಳ್
ಸಂದ ಪರಾಶರಂ ಸರ ಶಿರಂಶೂಲಪ್ರತಾಪಂ ಪರಾ
ಶರನಿಂ
ಸತ್ಯಪರಾಖ್ಯ ಸತ್ಯವತಿಗಾದಂ ಮತ್ಸ್ಯರಾಜಾನ್ವಯಾಂ
ಬುರುಹಶ್ರೀಗೆ
ಸುತಂ ಜಿತವ್ಯಸನನಾ ವ್ಯಾಸಂ ಯಶೋವಲ್ಲಭಂ ೭೮

ಸುತರಾದರಾ ಪರಾಶರ
ಸುತಂಗಮಾ
ಸತಿ ಸುಭದ್ರೆಗಂ ಭದ್ರಮನಂ
ಧೃತರಾಷ್ಟ್ರಂ
ಧೃತರಾಷ್ಟ್ರಂ
ವಿತತಯಶಃ
ಪಾಂಡು ಪಾಂಡು ವಿದುರಂ ವಿದುರಂ     ೭೯

ಅಂತು ಪೊಗೞ್ತೆವೆತ್ತವರೊಳಗ್ಗದ ಪಾಂಡುವಿನಂತರಂಗಮಂ
ಕೊಂತಿಯ
ರೂಪು ವರ್ಣನದ ಮಾತು ಜಗದ್ಗದಿತಂ ಬೞಿಕ್ಕಮಾ
ಕಂತುವ
ಪುಷ್ಪಬಾಣನಿಕರಂ ಸುಖಲಬ್ಧಪಥಂ ಬೞಿಕ್ಕಮಾ
ಕಾಂತೆಯ
ರೂಪಕಂ ಪೊಳೆದು ಪೊಕ್ಕುದು ಕೆಂಡದ ಬೊಂಬೆಯೆಂಬಿನಂ   ೮೦

ಕೆಂಡದ ನೀಳ್ದ ಕೇಸುರಿಯ ಬಣ್ಣದಶೋಕೆಯ ಪುಷ್ಪಪಲ್ಲವಂ
ಪಾಂಡುವಿನಂಗಮಂ
ಸುಡುಗೆ ಪಾಸಿದ ಮಲ್ಲಿಗೆಯುಂ ಮೃಣಾಳಮುಂ
ಕೊಂಡುವು
ಕಿಚ್ಚಿನಿಂದಕವಲ್ಲದೆ ಮೂಡಿದುದೆರ್ದ ಬೂದಿವೋಲ್
ಪಾಂಡುಗೆ
ಕಾಮಪಾಂಡುರತೆ ಸಾರ್ಥಕ ನಾಮಮನುಂಟು ಮಾೞ್ಪವೋಲ್         ೮೧

ಸುಡದೆ ಕನಲ್ವ ಕಿಚ್ಚಿನೊಡನಾಡಿದ ತೆಂಬೆಲರಾತಪಂಗಳಂ
ಕುಡಿವ
ಸರೋರುಹಂ ಸುಡದೆ ನುಂಗುವ ಪಾವಿನ ಪಲ್ಲ ನಂಜು ನಿ
ಚ್ಚಡದಮೃತಾಂಶು
ಮಂಡಳಮದೇಂ ಸುಡದೇ ಹಿಮವುಂಡು ಬಾೞ್ವ
ಣ್ಮಡುವಿನ
ಪೂವೆ ಸುಟ್ಟುಪುದು ಮಾಯ್ದ ವಿಯೋಗಿಯೊಳೆಂತು ಬರ್ದಪರ್ ೮೨

ಪರಿಕಿಸೆ ಪಾಂಚಭೌತಿಕಮಿದೆಂಬುದಸಂಗತಮೇಕ ಭೌತಿಕಂ
ವಿರಹಿ
ಜನಾಳಿಗೀ ಭುವನಮೆಂತೆನೆ ಸೂಸುವ ಶೀತಳಂ ಜಳಂ
ಸುರಭಿ
ಸಮೀರಣಂ ಸ್ಮಿತವನೋಲ್ಲಸಿತಂ ವಸುಧಾತಳಂ ಸುಧಾ
ಕರ
ಕರಪಾತ ಪಾಂಡುನಭಮಾದುದು ಪಾಂಡುಗೆ ಪಾವಕೋಪಮಂ       ೮೩

ಶರಶಲ್ಯಮಿನಿತು ಸಿಲ್ಕಿಯು
ಮರದಸುವಂ
ಪಿಡಿಯಲೆರ್ದೆಯನಲ್ಲದೆ ನಡೆ ವಿ
ಸ್ಮರಶರತತಿ
ಕಿೞಲರಿಯವು
ವಿರಹಿಯ
ನೋವಿಂಗೆ ಸಾಯಲಿಲ್ಲದಱಿಂದಂ  ೮೪

ವ|| ಅಂತು ಕಂತುರಾಜನ ಕೊಂತದಂತೆ ಕೊಂತಿಯ ರೂಪುಮೆರ್ದೆಯಂ ನಡೆನಾಡೆಯುಂ ನೊಂದು ಮದನದಾಹದಿಂ ದೇಹಂ ಕೊರಗೆ ಮಲ್ಮಲ ಮಱುಗಿ ಮನಮಂ ನಿಲೆ ಪಿಡಿಯಲಾಱದೆ ಪಾಂಡುರಾಜಂ ಪುಂಡರೀಕದಂತೆ ವನಮೆ ಭವನಮಾಗಿರ್ಪುದುಮೊಂದು ದಿವಸಮಾ ವಸಂತವಾಸವೆಂಬ ಭವನದ ಮನೋಹರತೆ ಮನಮೆಳದುವರಿಯೆ ಮನೋಹರಿಯೆಂಬ ಮನಃ ಪ್ರಿಯೆವೆರಸು ವಜ್ರಮಾಳಿಯೆಂಬ ವಿದ್ಯಾಧರಂ ಬಂದೊಂದು ಬಂಧುರಮಪ್ಪ ಮಾಧವೀಮಂಡಪದೊಳ್ ಮನೋಭವ ಸುಖಮನನುಭವಿಸಿ ತನ್ನ ಬೆರಲುಂಗುರದ ಕೆಂಬರಲುಗೆ ಕಣ್ಬೊತ್ತು ದಾಡಿಂಬಧ ಬಿತ್ತು ಗೆತ್ತು ಸೋವುದ ಶುಕಶಿಶುಗೆ ಮಣಿಮುದ್ರಿಕೆಯಂ ಕಳೆದು ನೀಡಿ ನೀಡಿ ಮೆೞವಾಡಿ ಮಱೆದೀಡಾಡಿ ಪೋಪುದುಮಾ ಪದದೊಳ್ ಪಾಂಡುರಾಜಂ ಬಂದು ಮನೋಜಬಾಣ ಭಿನ್ನಮಪ್ಪ ಬಿರಯಿಯೆರ್ದೆಯಿನುದಿರ್ದ ವಿರಹಾಗ್ನಿಯಂತಿರ್ದುಗುರಮಂ ಕಂಡು ನೀಡುಂ ಭಾವಿಸಿ ನೋಡುತ್ತುಮಿರೆ

ವಜ್ರಮಾಳಿ ಮಣಿಯು
ಧ್ರಾವಿಚಯನಚಳಿತ
ನಯನನಾಕಾರ ಕಳಾ
ಕೋವಿದನಾತನ
ಭಾಗ್ಯದ
ದೇವತೆ
ಬರ್ಪಂತೆ ಬಂದನತಿ ಸಂಭ್ರಮದಿಂ   ೮೫

ವ|| ಬರೆ ಕಂಡರಸಂ ದರ್ಶನೇಂಗಿತದಿನೀತನುಂಗುರಮೆಂದಱಿದು ಕುಡುವುದುಮಾ ವಿವೇಕಕ್ಕೆ ಮೆಚ್ಚಿ ವಿಯಚ್ಚರನಿದು ಕಾಮರೂಪ ಸಾಧನಮೆಂಬುದು ನೀನುಂ ದುರ್ಲಭದಯಿತಾನುರಾಗ ರಾಶಿಯಾದ ತೆಱದಿಂ ತೋಱಿದಪ್ಪೆಯೀ ಮದೀಯಮುದ್ರಿಕೆ ನಿನ್ನ ಕಯ್ಯೊಳೊಂದೆರಡು ದಿವಸಮಿರ್ದ ಸುರತಸಾರಥಿಯಕ್ಕೆಂದು ಕೊಟ್ಟು ಪೋದನಿತ್ತ ಪಾಂಡುರಾಜನುಮಾ ಪೊೞ್ತೆ ಪೊೞ್ತಾಗಿ ಕೊಂತಿಯಲ್ಲಿಗೆ ಕೂಟಂಬಡೆವಾಣತಿಗೆಂದು ಮದನಮುದ್ರಿಕೆಯಂ ಕೊಂಡು ಪೋಪಂತೆ ಮಣಿಮುದ್ರಿಕೆಯನಿಟ್ಟದೃಶ್ಯರೂಪವಾಗಿ ಹಸ್ತಿನಾಪುರಕ್ಕೆ ಪೋಗಿ ಕನ್ಯಾವ್ರತಭಂಗಭೀತಿಯಿಂ ಗಂಡುನೊಣಮಡ್ಡಂ ಪಾಱದಂತಾಗಿ ಸುತ್ತಲುಂ ಕಟ್ಟಿದ ಕಟ್ಟಾಣೆಗಳಿಂ ಪ್ರತ್ಯಂತ ಪರ್ವತಂಗಳ ಬಳಸಿನಿಂ ಬಗೆಗೊಳಿಸುವ ಕನಕನಗದಂತಿರಭ್ರಂಕಷಮಾದ ಕೆಂಬೊನ್ನ ಕನ್ನೆಮಾಡದೇೞನೆಯ ನೆಲೆಯೊಳ್ ಸಮಾನವಯೋ ವಿಳಾಸವಿಭ್ರಮ ವಿಭವೆಯರಪ್ಪ ವಿಳಾಸಿನಿಯರ್ವೆರಸು ಕೆಮ್ಮುಗಿಲ ಪೊರೆಯೊಳ್ ಪೊಳೆವೆಳಮಿಂಚಿನ ಗೊಂಚಲಂತೆ ತಳತ್ತಳಿಸಿ ಕೇಳೀ ಕಲಹದಿಂ ಮುಳಿದ ಕಾಮನ ಕಾಲ್ವಿಡಿವ ರತಿಯಂತೆ ಕಾಮದೇವನಂ ಪೂಜಿಸಿ ಪೊಡೆವಡುತ್ತುಮಿರ್ದ ಕೊಂತಿಯಂ ಕಂಡು ಕೂಡಲ್ ಬಯಸಿ ತನ್ನೊಳಿಂತೆಂದಂ

ಗರಗರನಾಗಿ ಭೋಗಪೊಡೆ ಮೇಳಿಸಿ ಮುಗ್ಧೆಯನಾಗುಮಾೞ್ಪುದೋ
ಗರದಧರಾಮೃತಂ
ತುಳುಕಲಾಗದು ಬೀಸರವಾಗದಪ್ಪು
ಣ್ಬರಿಯಣಮಾಗದಣ್ಣಳಿಯದೀ
ಪರೆಯಾಗದಲಂಪು ಮೀಸಲಂ
ತಿರೆ
ಮನಮಿರ್ಪುದೇಱಿಸಿದ ಲಜ್ಜೆಯ ಲಚ್ಚಣವಂಗಜಾಜ್ಞೆಯಾ    ೮೬

ಸೈರಣೆಗುಂದದತ್ತ ಮೊಗಮಾದೊಡೆ ಬೆಚ್ಚಿ ಮನಕ್ಕೆ ಬೇಸಱಂ
ತಾರದೆ
ಮೀಱಿ ಮೈದೆಗೆಯೆ ಮಾಣದೆ ಪೋದೊಡೆ ಪೋಗದಿಚ್ಛೆಯಿಂ
ಗೋರಿಗೆ
ತಂದು ಮುಗ್ಧೆಯ ಮನೋಮೃಗಮಂ ನವಸಾಂಪ್ರಯೋಗ ಶೃಂ
ಗಾರಮನಾಳ್ದವಂ
ಮದನರಾಜನ ರಾಜ್ಯಮನಾಳ್ದನಲ್ಲನೇ        ೮೭

ವ|| ಅಂತುಮಲ್ಲದೆ

ಪೆಣ್ಣೆಱಗದೆ ಕೂರ್ತೆಱಗಿದ
ಕಣ್ಣಱಿದುರದಂತೆ
ಬಿಡುಗೊಡಂಬಡುಗೆ ನೊಣಂ
ಪುಣ್ಣಂ
ಸಾರ್ವವೊಲೊಲ್ಲದ
ಪೆಣ್ಣಂ
ಸಾರ್ದಹಹ! ಸಾಸಿಕೊಳ್ವದ ಕೇಳಂ    ೮೮

ವ|| ಎಂದು ನಿಜಸ್ವರೂಪಮನಾ ತರುಣಿಗೆ ತೋಱಲೆಂದು ಬಗೆದು

ಉಂಗುರಮಂ ಕಳೆಯಲೊಡಂ
ಪಿಂಗಿದುದು
ಶರೀರಮಾಯೆ ಕೊಂತಿಯ ಪೂಜಾ
ಸಂಗಕ್ಕೆ
ಮೆಚ್ಚಿ ಮೆಚ್ಚಿದ
ನಂಗಂ
ಪ್ರತ್ಯಕ್ಷಮಾದವೋಲ್ ನೃಪನೆಸೆದಂ  ೮೯

ವ|| ಆಗಳ್

ಗೊಂಚಲ್ಲಿರೆ ಚಲ್ಲುವ ನಯ
ನಾಂಚಳಮಂ
ನಾಣ್ಚಿ ತೆಗೆವ ಕರಿಯಸಿಯಳ್ ಚೆ
ಲ್ವಂ
ಚಲ್ಲಿದಳಿನನಿದಿರೊಳ್
ಮಿಂಚುವ
ನವಮೇಘಮಾಲೆವೊಲ್ಕಾರಿರುಳೊಳ್       ೯೦

ಚಕಿತಪ್ರಕ್ಷಿಪ್ತ ಪಕ್ಷ್ಮಾಂತರದೊಳೆಳವೆಯಂ ಮೀಱಿದಂತಿರ್ಪ ದೀರ್ಘಾಂ
ಬಕ
ಶಸ್ತ್ರಾಲೇಖೆಯಂ ತತ್‌ಶ್ರವಣಕುವಳಯ ಶ್ರೇಣಿಶಾಣಾಗ್ರದೊಳ್
ರ್ಪಕದೇವಂ
ದರ್ಪದಿಂ ಮಿಂಚಡರೆ ಮಸೆವವೋಲ್ ಚೆಲ್ವನಾಯ್ತಾಕೆಯತ್ಯು
ತ್ಸುಕಯಾತಾಯಾತ
ವಕ್ತ್ರೋತ್ತರಳ ತರುಣಿಮಾನೀತ ನೇತ್ರ ತ್ರಿಭಾಗಂ   ೯೧

ಮದನಂ ಮಧುಮಯ ವರುಣಾ
ಸ್ತ್ರದಿನೆಚ್ಚನೊ
ಮದನಮೋಹರಸಮಂಗಜತಾ
ಪದಿನುಕ್ಕಿದತ್ತೊ
ಪೇೞೆನೆ
ಸುದತಿ
ಬೆಮರ್ತಳ್ ಕುಮಾರನಂ ಕಾಣಲೊಡಂ        ೯೨

ವ|| ಅಂತು ಚಂದ್ರೋದಯದೊಳ್ ಬಿಂದುವಿಡುವ ಶಶಿಮಣಿಶಲಾಕೆಯಂತಿರ್ದಾಕೆಯಂ ಕಂಡು ಮನಂಗೊಂಡು

ಅಳಿ ಮುಗುಳಂ ತುಡುಂಕಿ ಮದಸೌರಭಮಂ ಸವಿವಂತೆ ಗಂಡುಗೋ
ಗಿಲೆ
ಪಡೆವಂತೆವೋಲ್ ಕಳಿಕೆಯೊಳ್ ರಸಮಂ ದಿವಸೇಂದ್ರನಬ್ಜಕು
ಟ್ಮಲಮನಲರ್ಚುವಂತೆ
ಮಧುಮುಗ್ಧವನಾಂಗನೆಯೊಳ್ ವಿಕಾಸಮ
ಗ್ಗಳಿಸಿರೆ
ಕೂಡುವಂತೆ ಗಡ ಕೂಡಿದನಾಗಳೆ ಪಾಂಡು ಕೊಂತಿಯೊಳ್      ೯೩

ವ|| ಕೂಡಿ ಸುಖಸ್ವಪ್ನದಂತದೃಶ್ಯಮಾಗಿ ಪೋಗೆ ಕೆಲವಾನುಂ ದಿವಸದಿಂ

ಎಳವಸುಱಾಗೆ ಬಾಳಕಿಗೆ ಬೆಳ್ಪಡರ್ದಂಗದೊಳಣ್ಪನಿಕ್ಕಿದರ್
ಮಳಯಜಪಂಕದಿಂ
ಕಮಳಕುಟ್ಮಳದೊಳ್ ಮಱಿದುಂಬಿ ಪಾಯ್ದವೊಲ್
ತೊಳಪ
ಕುಚಂಗಳೊಳ್ತುದಿಯ ಕತ್ತುರಿಯಂ ತೊಡೆದರ್ವಿದಗ್ಧೆಯರ್
ಕೆಳದಿಯರೊಮ್ಮೆಯುಂ
ಮಱೆಸಲೆಂದು ಕುಮಾರಿಯ ಗರ್ಭಚಿಹ್ನಮಂ      ೯೪

ಪಡೆಯೆ ಮಗನಂ ನಿದಾನಮ
ನಿಡುವಂತೆವೊಲಿಟ್ಟು
ಪೊನ್ನ ಮಂದಸಿನೊಳಗಾ
ಗಡೆ
ಗಡ ಬಿಟ್ಟರ್ಜಗುನೆಯ
ಮಡುವಿನೊಳೀ
ಕೆಳದಿಯರ್ಗೆ ಕೊಂತಿಯೆ ನೋಂತಳ್ ೯೫

ವ|| ಅದನಾದಿತ್ಯನೆಂಬರಸನಾದಿತ್ಯನುದಯನಗನೇಱಿ ನಳಿನವನಮನಲರಿಸುವಂತಿರುತ್ತುಂಗ ಪ್ರಾಸಾದಮನೇಱಿ ಸೌಂದರರಾಜಪುರದ ಸೌಂದರಿಯರ ನಳಿನವನಮನಲರಿಸುತ್ತುಂ ಯಮುನಾ ಮನೋಹರತೆಯಂ ನಿರೀಕ್ಷಿಸುತ್ತುಮಿರ್ದು ಪರಿವ ಕರಿಯ ನಿಱಿಮುಗಿಲ ಮೇಗೆ ಪರಿವ ರವಿಮಂಡಲದಂತೆ ತೆರೆಮಸಗಿ ಪರಿವ ಜಗುನೆಯ ಪೊನಲೊಳೆ ಪೋಪ ಪೊನ್ನಮಂದಸಂ ಕಂಡು ತರಿಸಿ ಕಮಳಕುಟ್ಮಳ ದಳಪುಟಮಂ ತೆಱೆವಂತೆ ತಾನೇ ತೆಱೆದು ನಲಿದು ನೋಡಿ ಕೆಲದೊಳ್ಕುಪ್ಪೆಗೊಂಡ ಮಾಣಿಕಂಗಳ ಬೆಳಗಿನೊಡನೆ ಬಾಳಕನ ಮೆಯ್ವೆಳಗು ದಳವೇಱೆ ಮಿಳ್ಳಿಸಿದೊಡಳ್ಳಿಱೆದಾಡುತ್ತುಂ

ಕನಕಸರಸೀರುಹದೊಳೆ ಸಿರಿ
ಮನಸಿಜರಂ
ಪೆತ್ತುಬಿಟ್ಟು ಪೋದಂತಿರೆ ಕಾಂ
ಚನ
ಮಂಜೂಷದೊಳೊಪ್ಪುವ
ಜನಪತಿ
ಸುತನಂ ನೃಪಾಳ ಕೃಷ್ಣಂ ಕಂಡಂ   ೯೬

ವ|| ಕಂಡು ಮನಂಗೊಂಡು ಬಾಳಕಂ ನಿಮ್ಮೊಳಾರ ಕಯ್ಗೆ ನಗುತ್ತುಂ ಬಂದನವಳ್ಗೆ ಕುಡುವೆನೆಂಬುದುಮರಸಿಯರೆಲ್ಲಮೆಮಗೆ ಮೆಮಗೆ ತಮಗೆಂದು ಗೊಂದಳಿಸಿ ಕರಕಿಸಲಯಂಗಳನಡಸಿನೀಡುವುದುಂ ತಳಿರ ತುಱುಗಲಂ ತೊಱೆದು ತಾಮರೆಗೆಱಗಲ್ಮಱುಗುವ ಮಱಿದುಂಬಿಯಂತೆ ಮಂದಸಿನಿಂ ರಾಧೆಯೆಂಬರಸಿಯ ಪಾಣಿಪದ್ಮಕ್ಕೆ ಬಂದು ವಿಶಾಖೆಯಿಂದನೂರಾಧೆಗೆ ಬಂದ ಬಾಳೇಂದುವಿನಂತೆ ಬಾಳಕಂ ದರಹಸಿತ ಧವಳದೀಧಿತಿಗಳಂ ಪರಪೆ ಪುತ್ರವಿಶೇಷದಿಂದಾಕೆ ಕೋೞ್ಮೊಗಂಗೊಂಡು ಕೊಂಡಾಡಿ ನಡಪೆ

ಕಿವಿವಿಡಿದು ಪುಟ್ಟಿ ಕನ್ನೆಗೆ
ದಿವಾಕರಂ
ರಾಧೆಗೀಯೆ ಮಗನಾದುದಱಿಂ
ದವೆ
ಕರ್ಣಂ ಕಾನೀನಂ
ರವಿಜಂ
ರಾಧೇಯನೆಂಬ ಪೆಸರಂ ಪಡೆದಂ   ೯೭

ಅವಿಹಿತ ಕುಮತಕಥಾಂಬು
ಪ್ರವೇಶದಿಂ
ಕರ್ಣಶೂಲಮಾರ್ಗಾಗದೊ ಪೇ
ೞ್ಕಿವಿಯೊಳ್
ಕರ್ಣಂ ಗಡ ಸಂ
ಭವಿಸಿದನಿಂತಪ್ಪ
ಪುಸಿಯ ಪೊಟ್ಟಣಮೊಳವೇ ೯೮

ತನ್ನಂ ಪಾಂಡುಗೆ ಕೊಟ್ಟು ಕನ್ನೆಯರೊಳಾರ್ಗೀಸಾಹಸಂ ಕೂಡಿತೆಂ
ಬನ್ನಂ
ಕೂಡಿದ ಕೊಂತಿ ಕಂತುಮನದೊಳ್ತಾಂ ರಚ್ಚೆಯೊಳ್ಪುಟ್ಟಿ ಪೆ
ತ್ತೆನ್ನಂ
ತಾನೆನೆ ತಾಗಿದಾಗಿ ಸುಭಟಂ ಸೌಭಾಗಿನೇಯಂ ದಲೆಂ
ದೆನ್ನಂ
ಕೀರ್ತಿಸನಾರ್ತು ಕೂರ್ತು ಕೃತಭೂಲೋಕರ್ಣನಂ ಕರ್ಣನಂ       ೯೯

ಧರೆಗಿತ್ತುದಸ್ತನಾದನೆ
ಸಿರಿವಂತಂ ಕೀರ್ತಿಗಂಜುವನೆ ಕಲಿ ಪಿರಿದುಂ
ಪೊರೆದಾಳ್ದನ ಕಾರ್ಯಕ್ಕೋ
ಸರಿಸದೆ ಸತ್ತವನೆ ಬೞ್ದನೆಂಬಂ ಕರ್ಣಂ        ೧೦೦