ತಳಿರುಡೆ ಫುಲ್ಲಂ ಕಂಕಣಮಶೋಕೆಯ ಬಿಲ್ ಬಿಳಿಯಂಬು ಕಾಡಪೂ
ಗಳ
ತಲೆಸುತ್ತು ಮಾಂದಳಿರ ಕೈಪೊಡೆ ರಂಜಿಸೆ ಬೇಂಟೆಯಾಡೆ ಚಾ
ಪಳ
ಹರಿಣೀವಿಲೋಕನಮನೀಳ್ಕುೞಿಗೊಂಡಳೆನಲ್ಕೆ ಗಾಳುಗ
ಣ್ಪೊಳೆಯೆ
ಪುಳಿಂದಿ ಬೀರ ಸಿರಿಯಂತಿರೆ ಬೆನ್ನನೆ ಬಂದಳೋಪನಾ         ೬೧

ವ|| ಅಲ್ಲಿಂ ಪೆಱಗೆ

ಶಳ ಸೂಚೀಭಿನ್ನವಕ್ಷಂ ಕಿಟಿರದಲಿಳಿತ ಗ್ರೀವನಾಪೂತಿ ಶಂಕಾ
ವಿಳಚಿತ್ತೋದ್ಘೂಣನುತ್ಪ್ರಸ್ರವಣ
ಸಮಯ ಸೂತ್ಥಾಪಿತೈಕಾಂಘ್ರಿವಕ್ತ್ರಾಂ
ಚಳನಾಳಸ್ಪೃಷ್ಟನೀವೀವೃತ
ವದನ ವಿನಿಷ್ಕ್ರಾಂತ ಜಿಹ್ವಾಪ್ರವಾಳಂ
ಪೊಳೆದೊಂದೇಂ
ಬಂದುದೋ ಬೇಡನ ಬೞಿವೞಿಯಂ ಶ್ವಾನನೇಣಾವಸಾನಂ     ೬೨

ವ|| ಆ ನಾಯ ಸೊವಡಿಂಗೇವಯಿಸಿ

ಒರಸುತ್ತುಂ ಗ್ರಾವಕೋಣಂಗಳೊಳವಯವಮಂ ಕಂಡು ಕಾಡಾನೆಯಂ ಕೇ
ಕರಿಸುತ್ತುಂ
ಕಣ್ಗಳಂ ತಾಗುವ ಬಿಸುಗದಿರಂ ಪೊಯ್ಯುತುಂ ಕೋಪದಿಂ
ರ್ಘರಿಸುತ್ತುಂ
ಗ್ರೀಷ್ಮದೊಳ್ಕೋೞ್ಗೆಸಱನಱಸುತುಂ ಪೋಗುತಿರ್ದತ್ತು ದಂಷ್ಟ್ರಾಂ
ಕುರಘಾತವ್ಯಸ್ತಮುಸ್ತಾಕ್ಷತ
ಸುರಭಿದಂಷ್ಟ್ರಾವರೋಹಂ ವರಾಹಂ ೬೩

ವ|| ಆ ವರಾಹನನವರೋಹಿಸುವಂತೆ

ವನಗಜವೊಕ್ಕವೋಲ್ಮದದ ಕೊೞ್ಗೆಸಱೊಳೆ ಕೆಸಱೌಟವಾಡಿ ಸೊ
ರ್ಕಿನ
ಸೊವಡಿಂಗೆ ಮುತ್ತಿ ಮಱಿದುಂಬಿಗಳಂಬಿಸೆ ರೋಮವಿಕ್ಕಿ ಬಿ
ಕ್ಕನೆ
ಬಿರಿವಂತೆ ಬಂದ ಬಲದೊಳ್ಪೆಳರ್ವಟ್ಟು ಮದಕ್ಕೆ ವಂದ ಕಂ
ಪಿನ
ಕಳಭಂಬೊಲಿರ್ದುದತಿದರ್ಪ ರಸಾಕರನೊಂದು ಸೂಕರಂ  ೬೪

ವ|| ಆ ಪಂದಿಗಳನಾ ನಾಯೆ ಬೆಂಕೊಂಡು ಪೋಗೆ ಮುಂದೊಂದು ಮೇದಿನೀ ಧರದರೀದೇಶದೊಳ್

ಹರಿ ಹೀರೋದ್ರೇಕದಿಂ ಕುಂಜರಗಿರಿಶಿರದೊಳ್ಪಾಯ್ವುದುಂ ಪಿಂತೆ ಮೇಗಂ
ಬರದೊಳ್
ಮೇಘವ್ರಜಂ ಘರ್ಜಿಸೆ ಶರಭರವಾಶಂಕೆಯಿಂ ನಟ್ಟ ಕಾಲ್ನ
ಟ್ಟಿರೆ
ಬೆನ್ನೊಳ್ಪೊಯ್ದುಗುರ್ವಾಯ್ದಿರೆ ಬಿದುತಟದೊಳ್ಕಂದದೊಳ್ಪೊಕ್ಕ ಮೆಯ್ ಪೊ
ಕ್ಕಿರೆ
ಸೋತ್ಕಂಠಂ ಸಧೀರಂ ಸಚಳಿತಪಟಮೊಂದಾಯ್ತು ಸಿಂಹಾವಲೋಕನಂ      ೬೫

ವ|| ಆ ಸಿಂಹಾವಲೋಕನಮನಾ ಶಬರ ಸಿಂಹನವಜ್ಞೆಯಿನವಲೋಕಿಸುತ್ತುಂ ಸಜಳಜಳಧರ ಮಳಿನ ದೃಢಕಠಿನೋತ್ತುಂಗಕಾಯ ಬಳದಿಂ ವಿಂಧ್ಯಕಂ ಮೇಲಪ್ಪ ವಿಂಧ್ಯಕನಂದಿನ ಬೇಂಟೆಯೊಳ್ ಬೆರ್ಚಿ ನೋಡುವ ಪುಲ್ಲೆಗಳೊಳ್ ನಲ್ಲಳ ಕೊಲ್ಲಿ ನೋಟಮಂ ಕಂಡು ಕೊಲಲೊಲ್ಲದೆಯುಂ ಕಾಡಾನೆಯ ಕುಂಭಸ್ಥಳಂಗಳೊಳ್ ಕಾಮಿನಿಯ ಮೊಲೆಯ ಮಿಸುಪಂ ಕಂಡಿಸಲೊಲ್ಲದೆಯುಂ ಸೋಗೆ ನವಿಲ್ಗಳೊಳೆ ವಾಗುರೆಯ ಸೋರ್ಮುಡಿಯ ಸಿರಿಯ ಸೊಬಗಂ ಕಂಡಿಡಲೊಲ್ಲದೆಯುಂ ನಡೆನಡೆಯೆ ಮುಂದೊಂದೆಡೆಯೊಳೊಂದು ಮಹಾಮಹೀಧರ ಮಸ್ತಕದೊಳ್

ಸಮಪಾದಂ ಪೊರ್ದೆ ಬಲ್ಪಂ ಕರಣಸಮುದಯಂ ತನ್ನೊಳರ್ಕಾಡೆ ಕಣ್ಗಳ್
ನಿಮಿಷವ್ಯಾಸಂಗಮಂ
ಬಿಟ್ಟಿರೆ ಬಳೆಯೆ ಚಿದಾಸ್ವಾದ ಸೌಖ್ಯಂ ನಿದಾಘ
ದ್ಯುಮಣಿ
ಪ್ರೌಢಾಂಶುಗಾಸ್ಯಾಂಬುಜಬಲರೆ ಮನಂ ಧ್ಯಾನದೊಳ್ ಸಿಲ್ಕೆ ಕಯ್ಯಿ
ಕ್ಕಿ
ಮುನೀಂದ್ರದ್ವಂದ್ವಮೊಂದಿರ್ದುದು ಗಿರಿಶಿಖರದ್ವಂದ್ವಮಿರ್ಪಂದದಿಂದಂ          ೬೬

ವ|| ಅಂತು ಕಲ್ನಿಲೆ ನಿಂದ ವಿಮಳಬುದ್ದಿಯುಮಮಳಬುದ್ಧಿಯುಮೆಂಬ ಮುನಿದಾರಕರಂ ದೂರಾಂತರದೊಳ್ಕಂಡು ವಿಂಧ್ಯಕಂ ವಾಗುರೆಗೆಂದನಾ ತೋರ್ಪ ಪುರುಷಮೃಗಂಗಳಂ ಸಿಡಿಲ್ಪೊಡೆಯೆ ಕೋಡುಂಗಲ್ಗಳ್ ಕೆಡೆವಂತೆಯೊಂದೇ ಕೋಲೊಳ್ಕೆಡೆವಿನಮೆಚ್ಚಪೆಂ ಮೆಚ್ಚುಂಟೆಯೆಂಬುದುಮಾಕೆ ನೀಡುಂ ಭಾವಿಸಿ ನೋಡಿ ನಡನದ ನಡುಗಿ

ಇವರನಿಸುವಾಗಳೆನ್ನಯ
ಕಿವಿಯೋಲೆಯನೊಲ್ಲೆಯಕ್ಕುಮೆಂದಾ
ರತಿ ಕಂ
ತುವಿನಿಸುವ
ಕಯ್ಗೆ ಪಾಯ್ವಂ
ತೆವೊಲವಳಾ
ಶಬರನಿಸುವ ಕಯ್ಯಂ ಪಿಡಿದಳ್         ೬೭

ಪುರುಷಮೃಗಂಗಳಲ್ಲಮಿವರಪ್ಪೊಡೆ ದಿವ್ಯ ಮುನೀಂದ್ರರೆಚ್ಚೊಡಂ
ಶರವಿದು
ತಾಗಲಣ್ಮದಿವರಂ ನಡಲೊಲ್ಲದೆ ಸೂರ್ಯರಶ್ಮಿಯೋ
ಸರಿಸಿಯೆ
ಪೋಗುತಿರ್ದಪುದು ನೋಡ ಫದಾಬ್ಜಮನೋಪ ಸಿಂಹಮುಂ
ಶರಭಮುಮೊತ್ತುತಿರ್ಪವಿವಱಿಂ
ಬಲವಂತಮೆ ನಿನ್ನ ಸಾಯಕಂ  ೬೮

ಕೆಳರ್ದು ಪರಿತಂದ ಬೇಗೆಯು
ಮಳುರಲ್ತಾನಳ್ಕಿ
ನಿಂದು ಪೆಱಕಾಲೊಳ್ಕೆಂ
ದಳಿರಂ
ಕೇರ್ಗಟ್ಟಿದವೋಲ್
ಬಳೆಯಿಸಿ
ಮುರಿದಪುದು ನೋಡು ಮುನಿಪುಂಗವರಾ   ೬೯

ವ|| ನೀನಿವರನೆಂತು ಬಲ್ಲೆಯಪ್ಪೊಡೆ

ಹರಿಶಕ್ತೀ ಭವದಸ್ತ್ರ ಭಿನ್ನ ಕರಿಕುಂಭೋನ್ಮುಕ್ತ ಮುಕ್ತಾಫಲೋ
ತ್ಕರಮಂ
ಮಾಱಲೆ ಪೋಗಿ ರಾಜಗೃಹದೊಳ್‌ಕಾಣ್ಬೆಂ ಗೃಹದ್ವಾರದೊಳ್
ಬರ
ಪಾರ್ದಾಗತ ಭೂಪನಾ ವೃಷಭದತ್ತಂ ಭಕ್ತಿಯಿಂದೀ ಮುನೀ
ಶ್ವರರಂ
ತಾನಿದಿರ್ಗೊಂಡು ಕಾಲ್ಗೆಱಗುವಂ ರತ್ನಂಗಳಿಂದರ್ಚಿಪಂ ೭೦

ಎನೆ ಬಿಲ್ಲುಮನಂಬುಮನಾ
ವನಚರನೀಡಾಡಿ
ದಿವಿಜಧನುವಂ ಮಿಂಚಂ
ಘನಮೀಡಾಡುವವೋಲ್
ಭೋಂ
ಕನೆ
ಶರದದೊಳಮಳನಾಗಲುದ್ಯುತನಾದಂ  ೭೧

ವ|| ಆಗಿಯಾ ಬೇಗದೊಳುತ್ತರೋತ್ತರ ಸ್ಥಾನಮಂ ತಾನೇಱುವುದನಱಿಪುವಂತೆ ನಗಾಗ್ರಮನೇಱಿ ತಾಮರೆಗಳ್ಗೆ ತಪ್ಪಂ ಮಾಡಿ ಕಾಲ್ವಿಡಿದ ತುಂಬಿಗಳಂತಾಯೋಗಿಯುಗಳದ ಪದಯುಗಳಂಗಳ ಮುಂತೆ ಮೈಯಿಕ್ಕಿರ್ಪುದುಮನ್ನೆಗಮಾಮುನಿಕುಮಾರರ್ ಕಯ್ಯೆತ್ತಿಕೊಂಡು ಲುಬ್ಧಕನ ಕಾಲಲಬ್ಧಿಕ್ಷಯೋಪಶಮಮಂ ಕಂಡು ಕರ್ನೆಯ್ದಿಲ ಮೇಲೆ ಕುಮುದಪ್ರಿಯನಮೃತ ಮಯ ಮಯೂಖನಂ ತಳಿವಂತೆ ದಯಾಮೃತರಸಮಂ ತಳಿದು ದುಃಪಾತಕನಂ ಪೂತಂ ಮಾಡಿ

ಕೊಲಲಾಗದು ಕಳಲಾಗದು
ಕುಲಟೆಯರೊಳ್
ನೆರೆಯಲಾಗದಾರ್ತದಿನರ್ಥ
ಕ್ಕಲವರಲಣಮಾಗದು
ಪುಸಿ
ಯಲಾಗದೀ
ಬ್ರತಮನೈದುಮಂ ಪಿಡಿ ಮಗನೇ         ೭೨

ವ|| ಎನೆ ಮಹಾಪ್ರಸಾದಮೆಂದು

ಶರವದು ಕಯ್ಯೊಳ್ ಪಂಕಂ
ಸರಸಿಜ
ಜನಕತ್ವ ಗುಣಮನಳವಡೆ ಕೊಳ್ವಂ
ತಿರೆ
ವಿಮಳಮತಿಯ ಕಯ್ಯೊಳ್
ಪರಮವ್ರತಮಂ
ಕಿರಾತನೊಲವಿಂ ಕೊಂಡಂ  ೭೩

ಜಿನ ಸಮಯವ್ರತಮೆತ್ತಲ್
ವನಚರನೆತ್ತಲ್
ವಿರುದ್ಧವೆನಬೇಡ ಜಗ
ಜ್ಜನನುತ
ಸಿದ್ಧರಸಂ
ರ್ಬುನಮಂ
ಪೊನ್ಮಾಡಲಾಯ್ತು ಪೊನ್ನೇನಾಯ್ತೋ       ೭೪

ವ|| ಅಂತು ಮೇರುವಂ ಸಾರ್ದ ಕಾಗೆ ಪೊಂಬಣ್ಣಮಾದಂತಿರಾ ಜಾತ ರೂಪಧರರಂ ಸಾರ್ದು ಶಬರಂ ಸುವ್ರತ ಸ್ವೀಕಾರಭಾಸುರನಪ್ಪುದುಂ ವಾಗುರೆಯಂ ಮನಮಲ್ಲದ ಮನದೊಳಾಮೀವ್ರತಮಂ ಕೈಕೊಂಡೆನೆಂದು ಪೋಪ ಪರಮೇಶ್ವರಂ ಬೞಿಯನ ವರ್ಮಗುಱ್ದುವಲ್ಲಿವರಂ ಪೋಗಿ ಮಗುೞ್ದು ಬಂದು ವಿಪಿನಮಂ ಪೊಕ್ಕು ತನ್ನ ಮುನ್ನೆಗೆಯ್ದ ವಧಭೀಭತ್ಸ ಸ್ಮರಣಮೆ ಕಂದಮೂಳಫಳಾಸ್ವಾದನದೊಳು ಮುಟ್ಟುಪಡಮಂ ಪಡೆವುದುಮದೇನುಮಂ ನೆನೆಯದೆ ಮದನಾರಿಗಳ ಪದನಳಿನಮಂ ನೆನೆಯುತ್ತುಮಿರೆಯಿರೆ

ಸ್ವಗೃಹೀತೆ ವ್ರತರಕ್ಷಾ
ಪ್ರಗಲ್ಭಮತಿ
ಪುಟ್ಟಿದತ್ತು ತದ್ವನಚರಸೂ
ನುಗೆ
ಕಾಷ್ಠಕ್ಕನಲಂ ಪಂ
ದಿಗೆ
ಮುತ್ತುರಗಂಗೆ ಮಾಣಿಕಂ ಪುಟ್ಟುವವೋಲ್        ೭೫

ವನಚರರಿಲ್ಲದಲ್ಲಿ ಮೃಗದಿಂ ಮೃಗಮಾರಣಮಿಲ್ಲದಲ್ಲಿಯೆ
ಲ್ವಿನ
ಕೊಲಮಿಲ್ಲದಲ್ಲಿ ಖಗದಿಂ ಖಗಮರ್ದನಮಿಲ್ಲದಲ್ಲಿ ತೋ
ಱಿನ
ಕವಿಯಿಲ್ಲದಲ್ಲಿ ಶಿಬಿರಂ ಫಣಿಹಿಂಸನಮಿಲ್ಲದಲ್ಲಿ ತೊ
ಲ್ವನೆ
ಪೊಲಸಿಲ್ಲದಲ್ಲಿ ಶಬರಂ ಸುಖಮಿರ್ಪನಿದೇಂ ಸುಚಿತ್ತಮೋ  ೭೬

ಗಿಳಿ ತಿನ್ನದ ಬಿಂಬಫಲಂ
ಗಳನನ್ಯ
ಭೃತಂ ಕರ್ದುಂಕದಿಮ್ಮಾವಿನ
ಣ್ಗಳನನ್ಯ
ಪಕ್ಷಿಯುಣ್ಣದ
ಶಲಾಟು
ಸಂಕುಳಮನಾಯ್ದು ಮೇಲುವಂ ಶಬರಂ      ೭೭

ಜಳಧರ ವಿಮುಕ್ತಧಾರಾ
ಜಳಮಂ
ಕುಡಿದಿರ್ಪ ಖಗದವೊಲ್ಕುಡಿದು ಮಹಾ
ಚಳ
ಶಿಖರಗಳಿತ ನಿರ್ಝರ
ಜಳಮಂ
ಸಲೆ ಬೇಡನುೞಿದ ಜಲಮಂ ಬೇಡಂ         ೭೮

ವ|| ವಾಗುರೆಯೊಡನಾಡುವ ಬೇಡತಿಯರ್ ಮೇರೆಗೆಡೆದು ಕಂಡುಂ ನೀನುಂ ನಿನ್ನ ಗಂಡನುಂ ಪುಲಿಯಂತಿರ್ದು ನರಿಯಂತಿರೇಕಿರ್ದಪಿರೆನೆ ಕಣ್ಬನಿಯಂ ತೀವಿ ಭಿಲ್ಲಿ ಮೆಲ್ಲನಿಂತೆಂದಳ್

ತುಡೆ ಕೋಲಂ ಮುನಿಗಳ್ಗೆ ಕಾದ ಫಲಮಂ ಕೈಕೆಯ್ಯೊಳುಂಡಪ್ಪೆನಾ
ದಡಿಗರ್
ಮಂತ್ರಿಸಿ ಕಟ್ಟಿದರ್ಕಲಿಯ ಕಯ್ಯಂ ಬಾಯುಮಂ ಕೆಟ್ಟೆನಾಂ
ಪಿಡಿಯಂ
ಪಕ್ಕಿಗಳಂ ಮೃಗಕ್ಕೆ ಬಿಡಲೊಲ್ಲಂ ನಾಯ್ಗಳಂ ಜೇನುಮಂ
ಬಡಿಯಂ
ಗಾಣಮನಿಕ್ಕನೊಕ್ಕನಿನಿಯಂ ತನ್ನಿಕ್ಕೆಯಂ ಬಾೞ್ಕೆಯಂ         ೭೯

ವ|| ಎಂಬುದುಮಾಕೆಗಳೆಂದರ್ ನೀನೆಮ್ಮಮನೆಯೊಳ್ ಬಾಯ್ಗೆ ಬಯಸಿದುದನುಂಡು ಮೆಯ್ಗೆ ಮೆಚ್ಚಿದಂತಿರು ಬಾಯೆಂಬುದುಂ ವಾಗುರೆ ತಲೆಯನಲುಗಿ ಬೆರಲಂ ಮಿಡಿದು ಮನದೊಳಿರ್ದುದಂ ಮಾತಿನೊಳ್ ಬಱಿಕೆಯ್ದೆನಲ್ಲದೆ ಬೇಱೊಂದರ್ಕೆ ಬಗೆದವಳೆನಲ್ಲೆ ನಿನ್ನೆನ್ನ ನಲ್ಲನಪ್ಪುದನಪ್ಪೆನದು ಲೇಸಾದೊಡಂ ಪೊಲ್ಲಾದೊಡಮೆನ್ನ ಪುಣ್ಯಮೆಂದು ಪೂಣ್ದಿರ್ದಳಿರ್ಪುದು ಮೊಂದು ದಿವಸಂ ವಿಂಧ್ಯಕನೆಲ್ಲಿಯ ಮೊಳ್ಳಿದುವಪ್ಪ ಫಲಂಗಳಂ ಪಡೆಯದಱಸುತ್ತುಂ ಬಂದೊಂದು ಕುಬ್ಜಾಮ್ರಕುಜದ ಬೀೞ್ಗೊಂಬಿನ ಪಸುರೆಲೆಯ ಕುಸುಂಕುಱೊಳಗೆ ರಸಾಯನದ ಕುಪ್ಪಿಗೆಯಂತೆ ತೋರ್ಪ ತನಿವಣ್ಣಂ ತಿಱಿಯಲೊಡನೆ

ತರುಣತರು ವಿಷಧರಂ ಕೋ
ಟರಮುಖದಿಂ
ನುಂಗಿದಂತಘಪ್ರೇರಣೆಯಿಂ
ಪಿರಿದಪ್ಪ
ಪೋೞಲೊಳಗಾ
ಸರಸಫಳಂ
ಕೈಬರ್ದುಂಕಿ ಬಿರ್ದತ್ತಾಗಳ್     ೮೦

ಪಣ್ಣನಱಸುವಳಿಪಿಂ
ದಾ
ಪೋೞಲ್ಗುಯ್ದ ತತ್ಕಿರಾತನ ಕರಮಂ
ಕೋಪದೊಳಹಿ
ಕೊಂಡುದು ತರು
ಚಾಪದಿನಂತಕನ
ಕಣೆಯೆ ಕೊಳ್ವವೊಲೆನಸುಂ          ೮೧

ಅಯ್ಯೊ! ಫಳಾಮೃತರಸಮಂ
ಕಯ್ಯಿಂದಂ
ಪಿಡಿಯೆ ವಿಷಮದಾಯ್ತೇ ಬೇಡಂ
ಗಯ್ಯ
ನೃಶಂಸ ಕೃತಾಂತನ
ಕಯ್ಯಡಕಮನಱಿವೆನೆಂಬ
ದೇವನುಮೊಳನೇ ೮೨

ಪಿಕ ಹಾಹಾಕ್ರಂದನಮಂ
ವಿಕಳೆ
ವನಾಗ್ರಸ್ತೆ ಮಾಡಿ ಸತಿ ಸತ್ತು ಯಶೋ
ಧಿಕ
ವೃಷಭದತ್ತ ಮಿಭುಗಿ
ಭ್ಯಕೇತುವೆಂಬಾತ್ಮಜಾತನಾದಂ
ವ್ಯಾಧಂ    ೮೩

ವನಚರಿಯುಮೆನಗೆ ಮತ್ಕಾಂ
ತನ
ಲೋಕಮೆ ಲೋಕಮೆಂದು ಹಸ್ತಮನಾ ಪಾ
ವಿನ
ಪಲ್ಗೆ ಕೊಟ್ಟು ಸತ್ತಾ
ತನ
ಪೊೞಲೊಳೆ ಮುಖ್ಯನಪ್ಪ ದೀವರನಾದಂ ೮೪

ವ|| ಆ ವೃಷಭದತ್ತ ವೈಶ್ಶೋತ್ತಮನ ವಿಭವಮಂ ಪೇೞ್ವೊಡೆ

ಪಿಂಗದ ಪೊನ್ನರಾಸಿಯ ಬಿಸಿಲ್ಗಳೆ ಮುತ್ತಿನ ಮೊತ್ತದಚ್ಚವೆ
ಳ್ದಿಂಗಳೆ
ಮಾಣಿಕಂಗಳಿಳಸಂಜೆಯ ನೀಳ್ದೊಗೆದಿಂದರನೀಲಜಾ
ಲಂಳ
ಮರ್ವೆ ವಜ್ರರುಚಿಯೇೞ್ಗೆಯೆ ಪಚ್ಚೆಯ ರೋಚಿಯಚ್ಚಜಾ
ಳಂಗಳೆ
ಸಂತತಂ ವೃಷಭದತ್ತ ವಣಿಕ್ಪತಿಯೊಂದು ಗೇಹದೊಳ್  ೮೫

ಉಮುೞ್ದಿಭಮದಕರ್ದಮಮಂ
ಕ್ರಮದೊಳೆ
ಕಾನೀಕಜಾನುದಘ್ನಮನೆ ತರುಂ
ಗಮ
ಲಾಳಾಜಳದ ಪೊನಲ್
ತೆಮಳ್ದಿ
ತೊಳೆವುದು ತದೀಯ ಗೇಹಾಂಗಣದೊಳ್     ೮೬

ತೆಗೆದತಿವರ್ತಿಗಳಂ ದಂ
ತಿಗಳ
ಮೊಗಂಗಾಣದತ್ತ ಕಟ್ಟಿದೊಡೆ ಮೊಗಂ
ಬುಗಲವ್ವಳಿಪುಪು
ಮಣಿಹ
ರ್ಮ್ಯಗತ
ನಿಜಚ್ಛಾಯೆಯೊಳ್ ವಣಿಗ್ವಲ್ಲಭನಾ  ೮೭

ಪರದನ ಪೆರ್ಮನೆಯೊಳ್
ಪ್ಪುರಮಂ
ಬೆಳ್ವೆಟ್ಟಿದೆಂದು ಚೇಟಕೆಯರ್
ತ್ತುರಿಯಂ
ಹರಿನೀಲ ಮನೋ
ಹರ
ಕುಟ್ಟಿಮರಜಮಿದೆಂದು ಪೊಱಗುತ್ತಿರ್ಪರ್ ೮೮

ಪದ್ಮದ ಸುತನಖಿಳ ಕಳಾ
ಸದ್ಮಂ
ಚತುರಾಸ್ಯನಾದ ತೆಱನಂ ತೋಱಲ್
ಪದ್ಮಶ್ರೀಯ
ಸುತಂ ವಿಪ
ಪದ್ಮರ
ಸುತನಿಭ್ಯಕೇತು ಕಳೆಗಳನಾಳ್ದಂ      ೮೯

ಸಮಸಂದಾ ರತಿಯಿಭ್ಯಕೇತುವಿನ ರೂಪಂ ಕಂಡು ಕಣ್ಸೋಲ್ತು ಕೂ
ಡುವ
ಕಾಯ್ಪಿಂದಭಿಸಾರಿಕಾ ಪದವಿಗಂದೊಂದಾಸೆಯಂ ಮಾಡುವಳ್
ಭವನಿನ್ನೊರ್ಮೆ
ಮನೋಜನಂ ಮುನಿದುನೋೞ್ಕೆಂದೇನೊಪ್ಪುವಳ್ ವಸಂ
ವಿಳಾಸಕ್ಕೆ ಕನಲ್ವಳೆಂದೊಡೆ ವಣಿಕ್ಕಾಮತಂ ಕರಂ ಕಾಂತನೋ        ೯೦

ಶ್ರುತವಧು ಕೂರ್ತು ಕೊಟ್ಟ ತೆಱದಿಂದೆಸೆದಿರ್ಪುದು ನಾಟಕ ಪ್ರವೀ
ಣತೆ
ಕೃತಿಭಾವಕೋವಿದತೆ ಶಬ್ದಸಮಗ್ರತೆ ತರ್ಕರೀತ್ಯಭಿ
ಜ್ಞತೆ
ನಯವಾಗ್ವಿಚಕ್ಷಣತೆ ವಾದ್ಯವಿದಗ್ಧತೆ ನರ್ತನ ಪ್ರಗ
ಲ್ಭತೆ
ರಸಗಾನಮಗ್ನತೆ ವಿಳಾಸರಸಜ್ಞತೆ ವೈಶ್ಯಪುತ್ರನಾ         ೯೧

ಬಾಧಿಸುವಂ ಮನೋಮೃಗಮನಂಗಜ ದಾಮಮನಿಟ್ಟು ಸೋಲ್ತ ಬಿಂ
ಬಾಧರೆಯರ್ಕಳೊಪ್ಪುವ
ಪಿಣಿಲ್ನವಿಲಂ ಪಿಡಿವಂ ವಿವೇಕವಿ
ದ್ಯಾಧರನಂಗಜಾಳದೊಳೆ
ಸಿಲ್ಕಿಸುವಂ ಸಲೆ ಪೋದ ಜನ್ಮದಾ
ಪೋದನಕೆಯ್ತಮಂ
ಕೆದಱುವಂತಿರೆ ಲೋಚನ ಮತ್ಸ್ಯಜಾಳಮಂ ೯೨

ಅಪ್ರತಿಮ ರಾಜಗೃಹ ನಗ
ರಪ್ರಭು
ಜಿತಶತ್ರುವೆಂಬನಾ ಭೂಪಂಗಂ
ಸುಪ್ರಭೆಗಂ
ಪುಟ್ಟಿದ ಕಮ
ಳಪ್ರಭೆ
ರೂಪಾತಿಶಯದ ಸಿರಿಯಂ ಪಡೆದಳ್ ೯೩

ವ|| ಆಕೆಯ ನೂತನ ತನುವನಕ್ಕೆ ವಸಂತದಂತೆ ಬಂದ ಪೊಸಜವ್ವನಮಂ ಜಿತಶತ್ರು ಮಹಾರಾಜಂ ಕಂಡು ಭೂಮಂಡಲದೊಳುಳ್ಳ ರಾಜಕುಮಾರರಂ ಬರಿಸಿ ಸ್ವಯಂಬರಮಂ ಸ್ಮರಂ ಬರಮಿತ್ತಂತೆ ಮಹಾವಿಭೂತಿಯಿಂ ಮಾೞ್ಪುದುಂ ವನದೊಳಗೆ ಬಳೆಯುತ್ತುಮಿರ್ಪ ಮೀನಕೇತುವಿನಂತೆ ನೆಲನುಂ ನೇಸಱುಂ ಕಾಣದಂತು ಮನೆಯೊಳಗೆ ಬಳೆಯುತ್ತುಮಿರ್ದಿ ಭ್ಯಕೇತುಕುಮಾರಂ ಬೇಡವೇಡನೆಯುಂ ನಿಜಜನಕನೊಡನೆ ಬಂದು ನೋಡುತ್ತುಮಿರೆ

ಎನಿತಲರ್ಗಳಲರ್ದೊಡಂ ಭೃಂ
ಗನಾಯಕಂ
ಜಾತಿಗೆಱಗುವಂತಿರೆ ನೃಪನಂ
ದನರೆನಿತೆಸೆದಿರ್ದೊಡಮಂ

ಗನೆಯಲರ್ಗಣ್ಣಿಭ್ಯಕೇತುಗೆಱಗಿದುವಳಿಪಿಂ
     ೯೪

ರಾಗದಳುರ್ಕೆಯಿಂ ನೆರೆದ ರಾಜಕುಮಾರರ ಕಣ್ಗಳೆಯ್ದೆ ಸಿ
ಗ್ಗಾಗಿರೆ
ಕಾಮಿನೀಜನದ ಕಣ್ಗಳೆೞಲ್ತರೆ ತನ್ನನುರ್ಚಿದಾ
ಪೂಗಣೆಪಲ್ಲವಂಬಿಡಿದು
ಮಾಲೆಯನೇಱಿಸಿ ಮೇಲೆ ಸೂಸುವಂ
ತಾಗಿರೆ
ವೈಶ್ಯಸೂನುಗೊಲವಿಂ ಕಮಳಪ್ರಭೆ ಮಾಲೆ ಸೂಡಿದಳ್ ೯೫

ಅಱಿದು ಜಿತಶತ್ರು ಭೂಪನ
ಕಿಱಿಯರಸಿ
ವಸಂತಸೇನೆಯಾ ಕಾಮಿನಿಯ
ೞ್ಕಱ
ತನುಜೆ ಮದನಸೌಂದರಿ
ನೆಱೆದಳ್
ನೃತ್ಯದೊಳಮಸಮ ಸಾಹಿತ್ಯದೊಳಂ       ೯೬

ವನಿತೆಯ ರೂಪುಂ ಪೊಸಜ
ವ್ವನಮುಂ
ಮೋಹನಮದಿನ್ನುದಂಚಿತ ರಸ
ರ್ತನ
ಭಾವಭಾವಿತಂ ಗಡ
ನನೆ
ಕಾಮನಮೋಘಬಾಣಮಾದುದು ಪೆಱತೇಂ        ೯೭

ವ|| ಅಂತು ಭುವನ ಭುಂಭುಕಮಾದ ತನ್ನ ಮಗಳ ವಿಚಿತ್ರ ನೃತ್ಯ ವಿದ್ಯಾವಿಳಾಸಮಂ ಕಂಡು ಜಿತಶತ್ರು ಮಹಾರಾಜನೀ ವಿದ್ಯೆಗಿಭ್ಯಕೇತುಕುಮಾರನೆ ಬಲ್ಲನಾತನಲ್ಲದೆ ಶರ್ವನುಮಱಿಯನೆಂದು ವಿವಿಧವಾದ್ಯವಾದನ ವಾಚಾಳಮುಂ ಗಾಯಿಕಾ ಜನಸಂಛನ್ನಮುಂ ವಾಂಶಿಕಸಂಕುಳ ಸಂಕೀರ್ಣಮುಂ ಶೈಲೂಷಸಮೂಹ ಸಂಮರ್ದಮುಂ ಭಾರತಿಕವೃಂದಭರಿತಮುಂ ವಾಗ್ಗೇಯಕಾರ ವಿಳಸಿತಮುಂ ಪ್ರಗೀತಪ್ರಕೀರ್ಣಮುಂ ತಾಳಧರಾಧಿಷ್ಟಿತಮುಮಪ್ಪ ಮಣಿಮಯ ನೃತ್ಯಮಂಟಪಕ್ಕೆ ಇಭ್ಯಕೇತುಕುಮಾರನಂ ಬರಿಸಿ

ಇಕ್ಕಿದ ಮುತ್ತಿನೆಕ್ಕಸರದೋಲೆ ತುಱುಂಬಿದ ಜಾದಿವೂವೆ ತೊ
ಟ್ಟೆಕ್ಕಸರಂ
ಕೆಲಕ್ಕೆ ನಸುಕೊಂಕಿನ ಕತ್ತುರಿಯಡ್ಡಬೊಟ್ಟು
ಳ್ತಿಕ್ಕಿದ
ಚಂದನಂ ಮುರಿದು ಸುತ್ತಿದ ಚಂಪಕಮಾಲೆ ಕಣ್ಗಳಂ
ಜಕ್ಕುಲಿಸಿತ್ತು
ಪಜ್ಜಳಿಪ ವಜ್ರದ ಕಂಕಣಮಾ ಕುಮಾರನಾ         ೯೮

ವ|| ಅಂತು ಕಂತುವಿನಂತೆ ಬಂದ ಸೌಭಾಗ್ಯಸಕಿಂಚನನಂ ಕಾಂಚನಪೀಠದೊಳ್ಕುಳ್ಳಿರಿಸಿ ಕೇಳಿಕೆಯಂ ಮಾಡೆ

ವನಿತಾಪಾದ ಪಯೋಜಸಂಗಸುಖದಿಂದಂಗಕ್ಕೆ ರೋಮಾಂಚಮಾ
ಯ್ತೆನೆ
ನಟ್ಟಂತಿರೆ ಸೂಸೆ ಸೂಜಿಗಳನಾ ಪೊಂಜಾಜಿಯೊಂದೊಂದು ಚೂ
ರ್ಮೆನೆಗೊಂಡೊಂದಲರಾಯ್ದು
ಕೋದ ತೆಱದಿಂದಿರ್ಪಂತು ಫುಲ್ಲಾಂಬುಜಾ
ನನೆ
ಪುಷ್ಪಾಂಜಲಿಗೊಟ್ಟಳಂಗಜ ಸುಧಾಸಾರಂ ಪೊದೞ್ದಂದದಿಂ ೯೯

ಬಾಡಿದಲಱಿಪೆ ನೆಱೆನಂ
ಜೂಡಿದ
ಸೂಜಿಗಳನುಳಿಪಿ ತುಂಬಿಯೊಲವನೇ
ನಾಡಿದಳೊ
ಸೂಜಿಗಳ ಕೂ
ರ್ಪೊಡೆದ
ಮೊನೆಯಲರ ಮೇಲೆ ನಾನಾವಿಧದಿಂ        ೧೦೦

ಪರೆದ ತಿಳಕಮನೆ ಕಂಡೆಸಿ
ದಿರೆ
ಕೊಟ್ಟುದ್ದಂಡಪಾದದುಗುರ್ಗನ್ನಡಿಯೊಳ್
ತರಳಾಕ್ಷಿ
ತಿರ್ದಿದಳ್ ಚೆ
ಚ್ಚರದಿಂ
ಮತ್ತೊಂದು ಪಾದದುಂಗುಟದಿಂದಂ ೧೦೧

ವ|| ಅಂತು ಸಮ ವಿಷಮಮೆಂಬೆರಡುಂ ತೆಱದ ನೃತ್ಯಮತ್ಯಂತ ಮನೋಹರಮುಂ ಕೌತುಕಕರಮುಮಾಗೆ ಮಗಧಸುಂದರಿ ಪಿರಿದುಬೇಗಮಾಡುತ್ತುಮಿರೆ ಮೆಯ್ಮಱೆದು ನೋಡುತ್ತುಮಿರ್ದು ನಯನಹಂಸಂಗಳ್ಗೆ ಪಯೋವರ್ಷವಯದ ಪಯಂಗಳುಮಂ ಬೆಳಂಗಿರ್ಪ ಪೊಳೆಯಕ್ಕೆ ಚಾಳಯಮಾದ ಚಾಳೆಯಂಗಳುಮಂ ಚತುಃಷಷ್ಟಿ ಕರ್ಮಂಗಳಾಲಂಬ ಹಸ್ತಮಾದ ಹಸ್ತಗಳುಮಂ ಭಾವ ರಸಾಕೃಷ್ಠಿಗಳಾದ ದೃಷ್ಟಿಗಳುಮಂ ಸರಸ್ವತಿಗಳಂ ಕರಣಂಗಳಾದ ಕರಣಂಗಳುಮಂ ಶೃಂಗಾರಶ್ರೀಗೆ ಹಾರಮಾದಂಗಹಾರಂಗಳುಮಂ ನರ್ತನಕ್ಕೆ ಚಾರುತ್ವಂಬಡೆದ ಚಾರಿಗಳುಮಂ ನೃತ್ಯವಿದ್ಯಾದೇವತೆಗೆ ಮಂಡನಮಾದ ಮಂಡನಂಗಳುಮಂ ಸುಲೇಖೆಗೆ ನೆಲೆಯಾದ ನಿಲವುಗಳುಮನವರವರ ಬಂದೆಡೆಗಳೊಳೆ ಪೊಸಯಿಸಿ ಪೆಸರಿಟ್ಟುತಾಳದೊಳ್ತೂಗಿದಂತೆ ವಾದ್ಯದೊಳಳದಂತೆ ನಿರುತಮಾದ ನೃತ್ಯಂ ನೃತ್ಯಶಾಸ್ತ್ರಮನಭಿನಯಿಸುವಂತಾದುದೀ ಕಪೋತ ಕರ ವಿಕೀರ್ಣಕನಕ ಸೂಚೀ ಸಂಚಯ ಸ್ಥಾಪನ ಕೌತುಕ ಕ್ರಿಯಾಕೌಶಲಮುಮೀ ಪುಷ್ಪಾಂಜಲೀ‌ಕ್ಷೇಪಣನೈಪುಣ್ಯಮುಮೀ ವಿಷಮ ವಿದ್ಯಾಸಾಧನಮುಂ ಸರಸ್ವತಿಗಂ ಸಾರದೆಂದು ಕುಮಾರಂ ಮೆಚ್ಚಿ ಮೆಚ್ಚಿಂಗೆ ಮೆಚ್ಚುಗುಡು ವಂತೆ ಮಹೀನಾಥನಾ ಕುಮಾರಿಯುಮಂ ಕುಡೆ ಮಹಾವಿಭೂತಿಯಿಂ ಮದುವೆ ನಿಂದು

ಅನುರಾಗಾಂತಂ ವಸಂತಪ್ರಿಯನ ವಿರಹದೊಳ್ ಗ್ರೀಷ್ಮ ತಾಪಜ್ವರಂ ಮೇ
ದಿನಿಗಾದಂ
ಪುಟ್ಟಿ ಮೇಲೇಂ ತಳಿದುದೊ ಮೞೆಯಂ ಪ್ರಾವೃಷಂ ಚಂದ್ರಿಕಾ ಚಂ
ದನಮಂ
ಸೂಸುತ್ತುಮೆತ್ತಂ ಶರದಮಿರದೆ ತಂದತ್ತು ತೆಂಗಾಳಿಯಂ ಹೈ
ಮನಮಂ
ಹೇಮಂತಮೆತ್ತಂ ಸುರಿದುದು ಶಿಶಿರಶ್ರೀತುಷಾರಂಗಳಿರ್ಪಂ    ೧೦೨

ವ|| ಅಂತು ಬಂದಾಱುಂ ಋತುಗಳೊಳಾದನುಭಾವೋಚಿತ ಕ್ರೀಡಾರಸಂಗಳನಾಱುಂ ರಸಂಗಳಿಂ ಸವಿಯಂತೆ ಸವಿದು ಸಕಳಕಳಾಸೌಕರ್ಯಕ್ಕಂ ಸೌಭಾಗ್ಯಕಮೇಕಪತಿಯಾಗಿ

ಅನುಪಮರಾಜ್ಯನಂದನೆಯರಾ ಕಮಳಪ್ರಭೆಗಂ ವಿಲಿಪ್ತಚಂ
ದನಧವಳಾಂಗಿಗಾ
ಮಗಧಸೌಂದರಿಗಂ ಪತಿಯಾದನಾ ವಣಿ
ಗ್ಜನದಧಿನಾಥನೊಂದೆ
ಕೊಳನಲ್ಲಿಯೆ ಪುಟ್ಟಿ ಪೊಗೞ್ತೆವೆತ್ತ
ದ್ಮಿನಿಗಮನಾರತಂ
ಸಿತಸರೋಜನಿಗಂ ದಿನನಾಥನಾದವೋಲ್ ೧೦೩

ಅಸಿಯಳ ವಿದ್ಯೆ ಕೂರಿಸಿದುದಿಲ್ಲ ನೃಪಾಗ್ರತನೂಜೆಯಿಂದೆ ಕೂ
ರಿಸಿದುದಧೀಶರಂ
ಸೊಬಗು ಕೂರಿಸುವಂತಿರೆ ಪೆಣ್ಣ ವಿದ್ಯೆ ಕೂ
ರಿಸುಗುಮೆ
ತುಂಬಿ ಮಲ್ಲಿಗೆಗೆ ಕೂರ್ಪವೊಲೊಪ್ಪೆ ವಿಚಿತ್ರಬಂಧದಿಂ
ದೆಸೆದಿರೆ
ಕಟ್ಟಿ ತಂದು ಸೊವಡಿಲ್ಲದೆ ಮಾಲೆಗೆ ಕೂರಲಾರ್ಕುಮೇ  ೧೦೪

ವ|| ಅಂತು ಮಗಧಸೌಂದರೀ ವಿವಾಹ ವಿಹಿತಮನಾ ದೀನಮಾನಸೆಯಾದ ಕಮಲಪ್ರಭೆಯ ಮುದ್ದುಮೊಗಮಂ ನೋಡಿ

ಹೃದಯಾಧೀಶಂ ಕುರುಳ್ಗವ್ವಳಿಸೆ ನುಡಿಸೆ ಮೇಲ್ವಾಯೆ ಲಲ್ಲೈಸೆ ಮೆಲ್ಪಿಂ
ಮೊದಲೊಳ್
ಸರ್ವಾಕ್ಷಿಪಾತಂ ಬೞಿಕದು ನಯನಾರ್ಧಾವಲೋಕಂ ಬೞಿಕ್ಕೊಂ
ದುದಯಂ
ನೇತ್ರತ್ರಿಭಾಗಂ ಬೞಿಕಿೞಿದುದಪಾಂಗೇಕ್ಷಣಂ ತಾಂ ಬೞಿಕ್ಕಾ
ವುದುಮಿಲ್ಲಾಯ್ತಗ್ಗಳಂ
ಕಾಮದಮಿನಿಯಳ ಸನ್ಮಾದದಿಂ ಮಾನಮಲ್ತೇ     ೧೦೫

ವ|| ಎಂಬಿನಂ ಕಮಳಪ್ರಭೆಗಂ ತನಗಂ ಹುರುಡಿಂದಮೇ ಪರಸ್ಪರಾನುರಾಗ ಮಳವಿಗೞಿಯೆ

ಪುಳಕಂ ಪಕ್ಕೆಗೆ ಸಾರದಂತು ಬೆಮರೆಂದುಂ ಕುಂದದಂತರ್ಧಕು
ಟ್ಮಳಿತಂಗಳ್ನಯನಂಗಳುಳ್ಳಲರದಂತೊಂದೊಂದಱೊಳ್
ಪತ್ತಿ ಮೆ
ಯ್ಗಳಲಂಪಂ
ಬಿಡದಂತು ಸೈಸಮಯದಂತಾನಂದ ವಾರಾಶಿಯೊಳ್
ಮುೞುಗಿರ್ದಳ್ಳೆರ್ದೆ
ಮೂಡದಂತು ಕುವರಂ ಕೂಡಿರ್ದನಬ್ಜಾಕ್ಷಿಯೊಳ್      ೧೦೬

ವ|| ಇತ್ತ ಮಗಧ ಸೌಂದರಿ ತನ್ನ ಪಾಳೆಯದೊಳಂ ವಾಸವಸಜ್ಜಿಕೆಯಾಗಿ

ಪತಿಚಿತ್ತಾನರ್ದ ನಿದ್ರಾವಿರಹಿತೆಯಿರುಳಿಂತಪ್ಪುದುಂ ಸುಪ್ತಪಾರಾ
ವತಮಂ
ಬಂದೆತ್ತುವಳ್ ಹಂಸೆಗಳೆರಡೆಮೆಯೊಂದಾಗಲೀಯಳ್ ನವಿಲ್ವಾ
ಣತಿಯಂ
ಕಣ್ಮುಚ್ಚಲೀಯಳ್ ಗೞಪುವ ಗಿಳಿಯಂ ತೂಂಕಡಂ ಕಾಣಲೀಯಳ್
ಕತೆಯಂ
ಪೇೞೆಂದವಳ್ ಸಾರಿಕೆಯುಮನನಿವಂಗೆಯ್ದು ಕಣ್ಗೆಯ್ಯಲೀಯಳ್ ೧೦೬

ಅರಗಿಳಿಯಂ ಮೃಗಾಕ್ಷಿ ಪಿಡಿದೋದಿಸಲಣ್ಮಳೆಸುಯ್ಯ ಬೆಂಕೆಯಿಂ
ಕರಿಮುರಿಯಕ್ಕುಮೆಂದು
ತೆಗೆದಪ್ಪಲುಮಣ್ಮಳೆ ಮೆಯ್ಯ ತಾಪದಿಂ
ಕುರವಕಮೆಯ್ದೆ
ಸೀದಪುದಿದೆಂದು ಕರಂ ತಿಳಕಾವನೀಜಮಂ
ಕೊರಗುಗುಮೆಂದು
ನೋಡಲಣಮಣ್ಮಳೆ ತಪ್ತ ವಿಳೋಚನಾರ್ಚಿಯಿಂ      ೧೦೮

ಪರಪಿ ನಱುಸಯ್ಯ ಕಂಪಂ
ಸುರತ
ಸುಖಾಸ್ವಾದ ಸುಭಗ ಚಿಂತಾಭರದಿಂ
ಪಿರಿದು
ವಿರಹಾರ್ತಿ ಬೇಟದ
ಬಿರಿಮುಗುಳವೊಲಿರ್ಪಳಳಿಕುಳಾಳಕಿ
ಬನದೊಳ್      ೧೦೯

ತಡೆದು ಬರೆ ನಲ್ಲನೀಕ್ಷಿಪ
ಮಡದಿಯ
ಕೞ್ತಲಿಪ ಮೊಗಮುಮರುಣೇಕ್ಷಮುಂ
ತೊಡೆದಂಜನಮುಂ
ಮಱೆದಳ
ವಡೆ
ನೀರ್ಗುಂಕುಮಮನೆಚ್ಚಿಕೊಂಡವೊಲೆಸೆಗುಂ       ೧೧೦

ವ|| ಆ ಮಗಧಸೌಂದರಿಯ ಸೌಂದರವಿದ್ಯೆಯ ದೌರ್ಭಾಗ್ಯಮೆ ನಿರ್ವೇಗ ನಿಮಿತ್ತಮಾಗೆ

ಮನಮಂ ವಿರಕ್ತಿಗಿತ್ತೊ
ಳ್ಪಿನ
ರಾಜ್ಯಮನಿಭ್ಯಕೇತು ಕುವರಂಗಿತ್ತಂ
ತನುವಂ
ತಪಕ್ಕೆ ಜಿತಶ
ತ್ರುನೃಪಂ
ನಿಯಮಸ್ಥಯತಿಯ ಪಾದಾಂತಿಕದೊಳ್    ೧೧೧

|| ದ್ರುತವಿಲಂಬಿತ|| ಅವನಿ ಕೀರ್ತಿಸೆ ತಾಳ್ದಿದನಿಭ್ಯಕೇ
ತುವಿನ
ತಂದೆಯುಮೊಳ್ತಪಮಂ ಮನೋ
ಭವನನಂಡಲೆದಿಕ್ಕಿದ
ಮಂದರ
ಸ್ಥವಿರರೆಂಬ
ಮುನೀಂದ್ರರ ಪಕ್ಕದೊಳ್        ೧೧೨

ಇನಬಿಂಬಂ ಕೋಂಟೆಯ
ಟ್ಟಿನ
ಕೊತ್ತಳದಂಬುಗಂಡಿಯೊಳ್ನುಸುಳುತ್ತೊ
ಯ್ಯನೆ
ಸಿಲ್ಕಿ ನಿಲ್ವುದಾ ಪುರ
ವನಿತೆಯ
ನವಕರ್ಣಪೂರ ಕಮಳದ ತೆಱದಿಂ ೧೧೩

ಇಂದುವ ಬಿಂಬಂ ಪೞಯಿಗೆ
ಯೆಂದುಂ
ಪಿಡಿವಡೆದು ಕಿಱಿದುಬೇಗಂ ನಗರೀ
ಸೌಂದರಿಯ
ಕಯ್ಯ ಕೇಳಿಯ
ಕಂದುಕದಂತಿರ್ಪುದೊಪ್ಪೆ
ಪತನೋತ್ಪತನಂ  ೧೧೪

ಅವಿರಳ ಕೇತಕ ಪರಿಮಳ
ನವಾಪ್ತ
ಶೈತ್ಯಂ ಸಮಾಂದ್ಯ ನಳಿನೀಳ ಗುಣಂ
ಪವನ
ಪವನಾಶನೀಂಟುವು
ದು
ವಿಯೋಗಿಪ್ರಾಣ ಪವನನಂ ಪುರವರದೊಳ್        ೧೧೫

ವ|| ಎಂಬ ಪೊಗೞ್ತೆಗೆ ಜನ್ಮಗೃಹಮುಂ ಲಕ್ಷ್ಮಿಗೆ ಕುಳಗೃಹಮುಂ ಕಳಾಧಿದೇವತೆಗೆ ಕೇಳೀಗೃಹಮುಮಪ್ಪ ರಾಜಗೃಹಕ್ಕಧಿರಾಜನಾಗಿ

ಕರಸಾರಾಸ್ವಾದನಂ ಚುಂಬನ ಮಧುಪ ಸುಹೃತ್ಸಂಗಮಾಲಿಂಗನಂ ವೀ
ರಸಸ್ವೇದಾಂಬು ದೃಪ್ತಾಹತ ಹತಿಸಿತ ಕಾಮಾದಶಾಗ್ರಕ್ಷತಂ ಕುಂ
ಜರಕುಂಭಾಸ್ಫಾಲನಂ
ಪೀವರಕುಚಕಲಶಾಸ್ಫಾಲನಂ ಲೀಲೆಗಾಗು
ತ್ತಿರೆ
ರಾಜ್ಯಶ್ರೀಯ ಸಂಭೋಗಮನೊದವಿಸಿದಂ ರಾಜವಿದ್ಯಾವಿಳಾಸಂ    ೧೧೬

ಇದು ಮೃದುಪದ ಬಂಧಬಂಧುರ ಸರಸ್ವತೀ ಸೌಭಾಗ್ಯ ವ್ಯಂಗ್ಯ ಭಂಗಿ ನಿಧಾನ ದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೇಮಿಚಂದ್ರ ಕೃತಮುಂ ಶ್ರೀಮತ್ಪ್ರತಾಪ ಚಕ್ರವರ್ತಿ ವೀರಬಲ್ಲಾಳದೇವ ಪ್ರಸಾದಾಸಾದಿತ ಮಹಾಪ್ರಧಾನ ಸೆಜ್ಜೆವಳ್ಳ ಪದ್ಮನಾಭದೇವ ಕಾರಿತಮುಮಪ್ಪ ನೇಮಿನಾಥಪುರಾಣದೊಳ್

ತೃತೀಯಾಶ್ವಾಸಂ

ಸಮಾಪ್ತಂ