ತೊಡರ್ದರಿಯಂ ಕೇಸರಿಯೊಳ್
ತೊಡರ್ದಿಭಮೆಂತಂತೆ
ಮಾಡುವಂ ಭುಜಬಳದಿಂ
ಪಡೆದೊಡಮೆಯುಮಂ
ಪೆಣ್ಣಂ
ಪಡೆದಂತಿರೆ
ಬೇಡಿದವರ್ಗೆ ಕುಡುವಂ ಕರ್ಣಂ  ೧೦೧

ವ|| ಮತ್ತಂ ಕೊಂತಿಯ ಕನ್ನೆಸಾಹಸದಿನಾ ಕನ್ನೆವೇಟದೊಳ್

ತರುಣಿಯ ಮೆಯ್ಯ ಬೆಂಕೆಯೊಳೆ ಬಿದ್ದಮೃತಾಂಶು ಮರೀಚಿ ಸುಟ್ಟ
ಪ್ಪುರದವೊಲಾಗೆ
ಸುಟ್ಟ ಪುದಿದಲ್ಲದೊಡೆಲ್ಲಿಯದೆಲ್ಲಿಯ ತಾಪಮೋ
ಸರಿಸದೆ
ಪುಷ್ಟಬಾಣನಿಸೆ ನಾಂಟಿ ಮುರುಂಟಿದ ಪೂವೆ ಪುಳ್ಳಿಯಾ
ಗಿರೆ
ಮನಮೆಯ್ದೆ ಬೆಂದಪುದದಿಲ್ಲದೊಡೆಲ್ಲಿಯದಂಗಜಾನಳಂ     ೧೦೨

ಕಡುದಣ್ಣೆಲಲೆಯೆ ಬೆಮ
ರ್ತೊಡೆ
ಬೀಸುವರಬ್ಜದಳದಿನಬಳೆಗೆ ಬೆಳ್ಳಂ
ಗೆಡೆದೆಳವೆಳ್ದಿಂಗಳೊಳಂ

ಕೊಡೆವಿಡಿವರ್
ಸತಿಯರಂಗತಾಪಮದೆನಿತೋ        ೧೦೩

ವ|| ಅದನಱಿದಭಿಮುಖ ಪ್ರಜಾತಪ್ರಜಾಪತ್ಯ ಸಂಬಂಧ ಬಂಧುರಮಪ್ಪ ಬಂದು ಭಾಮಮೆಸೆಯೆ

ಸಿಂಧು ಸಿರಿಯಂ ವಿಭೂತಿಯು
ಮಂ
ಧರಣಿಧರಂಗೆ ಕೊಟ್ಟವೊಲ್ ಪಾಂಡುನೃಪಂ
ಗಂಧಕವೃಷ್ಣಿನೃಪಂ
ಕೊ
ಟ್ಟಂ
ಧರೆ ಮಿಗೆ ಪೊಗೞೆ ಕೊಂತಿಯಂ ಮಾದ್ರಿಯುಮಂ ೧೦೪

ಆಳಿನೀ ಜ್ಯಾಲೇಖೆಯುಂ ಕಾಮನ ಕುಸುಮಧನುರ್ಲೇಖೆಯುಂ ಪುಷ್ಪ ಬಾಣಾ
ವಳಿಯಂ
ಪೆತ್ತಂತೆ ಪಾಮಡುಕ್ಷಿತಪನ ಸತಿಯರ್ ಕೊಂತಿಯುಂ ಮಾದ್ರಿಯುಂ ಕೋ

ಮಳೆಯರ್ಕಾಮಾನುರಾಂಬಡೆದು ಪಡೆಯೆ ಧರ್ಮಾತ್ಮಜಂ ಭೀಮಸೇನಂ
ಚಳದೊಳ್ತಳ್ತರ್ಜುನಂ
ಸಂದ ನಕುಳಸಹದೇವರ್ಕಳೆಂದಾದರೈವರ್        ೧೦೫

ಕಡುಗಲಿ ಧೃತರಾಷ್ಟ್ರಂಗಂ
ಕುಡೆ
ನರಪತಿ ವೃಷ್ಣಿನೃಪತಿ ನೆಱೆನೂಱೆಸೞಂ
ಪಡೆವಂತಿರೆ
ಪದ್ಮಿನಿ ತಾಂ
ಪಡೆದಳ್
ಗಾಂಧಾರಿ ನೂರ್ವರಂ ನಂದನರಂ ೧೦೬

ಸುತರೊಳ್ ದುರ್ಯೋಧನನದಧಿ
ಕತೆ
ದುಶ್ಶಾಸನನ ದೃಢತೆ ದುರ್ಧರ್ಷಣನು
ದ್ಧತ
ಧೃತಿ ದುರ್ಮರ್ಷಣನ
ಪ್ರತಿಮತೆ
ಗಾಂಧಾರಿಗಿತ್ತುದತಿ ಸಮ್ಮದಮಂ  ೧೦೭

ವ|| ಅಂತು ಹರಿವಂಶಮುಂ ಕುರುವಂಶಮುಂ ಸಿಂಧುಯುಗಳ ಸಂಭೇದದಂತೆ ಭೇದಿಸಲ್ಬಾರದಂತು ಕೂಡಿ ಕೊರ್ವುವಡೆದು ಸುಕೃತಫಲಮಂ ಪಲಕಾಲಮನುಭವಿಸುತ್ತು ಮಿರೆ ಮತ್ತೊಂದು ದಿವಸಂ ಗಂಧಮಾಧನಮೆಂಬುದಯಗಿರಿಯೊಳುದಯಿಸಿದ ಸುಪ್ರತಿಷ್ಠರೆಂಬ ಸೂರಿಸುಧಾಕರರ ಸಮೀಪದೊಳ್ ಸೂರವೀರಂ ಚಕೋರಂ ಪುತ್ರ ಪೌತ್ರಾದಿಗಳ್ವೆರಸು ನಿರ್ಮಳ ಧರ್ಮಾಮೃತಮನೀಂಟಿ ನಿಷ್ಠುರ ಸಂಸಾರ ಪರಿತಾಪ ತೃಷ್ಣೆಯಂ ತೂಳ್ದಿ ಸಂವೇಗಮಂ ಸಂವರಿಸಿಯಂಧಕವೃಷ್ಟಿ ಯೆಂಬರಸು

ಎತ್ತಿದನಧಿಕೋತ್ಸವದಿಂ
ದುತ್ತಮ
ಸತ್ವಂಗೆ ರಾಜ್ಯಭರಮಂ ಪೊಱೆಯಂ
ಪೊತ್ತಿರ್ಪಂತಿರೆ
ಗಾಂಪರೆ
ಮತ್ತಾಂಪವರುಳ್ಳೊಡಮಳ
ಹರಿಕುಳ ತಿಳಕಂ ೧೦೮

ವ|| ನರಪತಿವೃಷ್ಟಿಗಂ ಯುವರಾಜ್ಯಪದಮಂ ಕೊಟ್ಟು ತಪಂಬಟ್ಟನಲ್ಲಿಂ ಬೞಿಯಂ ಪನ್ನೆರಡು ಬರಿಸಂ ಪೋಗೆ

ಶತಪತ್ರಶ್ರೀಯನಿಂದುಪ್ರಭೆಯನಿಳಿಸೆ ವಕ್ತ್ರೇಂದು ಮೆಯ್ ಸೂರ್ಯಕಾಂತ
ದ್ಯುತಿಯಂ
ಚಂದ್ರೋಪಳಚ್ಛಾಯೆಯನೊಲಿಸೆ ಚಕೋರೌಘಮಂ ಚಕ್ರವಾಕೀ
ತತಿಯಂ
ಪಂಚೇಂದ್ರಿಯಂಗಳ್ ಪಗಲುಮಿರುಳುಮೋರಂದದಿಂ ಪೋಲೆ ಪೂತ
ಪ್ರತಿಮಾಯೋಗೈಕನಿಷ್ಠಂ
ನೆಲಸಿದನಗದೊಳ್ ಸುಪ್ರತಿಷ್ಠಂ ವರಿಷ್ಠಂ       ೧೦೯

ಮುನಿಗೆ ಗಜಱಿ ಗರ್ಜಿಸಿ
ಜೀಮೂತಂ
ಮೊೞಗಿ ಮುತ್ತುವಂತಿರೆ ಗಿರಿಯಂ
ಭೀಮೋಪಸರ್ಗಮಂ
ಗಡ
ತಾಮಸದಿಂ
ಮಾಡಿದಂ ಸುದರ್ಶನ ದೇವಂ   ೧೧೦

ರಿಪುವಿನುಪದ್ರವಮಂ
ಸೈರಿಸಿದಾ
ಯತಿಗೆ ಪುಟ್ಟಿದತ್ತು ತಮಸ್ಸಂ
ಹಾರಕಮಮೃತಂ
ಮಥಿತಾಂ
ಭೋರಾಶಿಗೆ
ಪುಟ್ಟುವಂತೆ ಕೇವಲಬೋಧಂ    ೧೧೧

ವ|| ಆಗಳಾ ಗಂಧಮಾದನ ಮೇದಿನೀಧರಕ್ಕೆ ಕೇವಳಿಪ್ರಾಜ್ಯ ಪೂಜಾಪರಮೋತ್ಸವಮಂ ಮಾಡಲ್ಪರ್ಪ ದೇವನಿಕಾಯ ದುಂದುಭಿಧ್ವಾನಾಹೂತನಾಗಿ ಪುರುಹೂತನ ಪಿರಿಯರಸಿವೆರಸಂಧಕವೃಷ್ಟಿಯುಂ ಬಂದು ಭುವನಬಂಧುವೆಂದು ದೇವದುಂದುಭಿ ದೇವಧ್ವನಿ ಪ್ರಭವ ವಿಭವ ವೈಡೂರ್ಯರತ್ನಾಕರ ಪ್ರರೋಹಣರೋಹಣ ನಗೇಂದ್ರ ಖಗೇಂದ್ರ ದೇವೇಂದ್ರ ಗವೇಂದ್ರ ಸಮೂಹ ಸಮಸ್ತಕಪ್ರಕರ್ಷಘರ್ಷಣ ವಿಕೀರ್ಣ ಪಾದಪೀಠ ಪ್ರಕೀರ್ಣಮಣಿ ಗಣಾರುಣ ಕಿರಣರೇಣು ಕ್ರೀಡಾನುರಂಜಿತ ರಾಜಕುಂಜರವೃಂದನಂ ಬಂದಿಸಿ ಮುಂದೆ ಕುಳ್ಳಿರ್ದು ಕಯ್ಗಳಂ ಮುಗಿದು

ಕೇವಳಿ ಬಿನ್ನಪಮಿಂತೀ
ದೇವರ್ಕಳ್
ನಿನ್ನನೊಸೆದು ಪೂಜಿಸಿದಪರಾ
ದೇವಂ
ಮಾಡಿದನೇಕೆಯೊ
ದೈವಗುರೂ
ಪೇೞ ನಿನಗು ರೂಪದ್ರವಮಂ    ೧೧೨

ಎನೆ ಜಿನನೆಂದಂ ಕೇಳಾ
ತನೆ
ಕರಮುಪಕಾರಿಯೆನಗೆ ಪೀಡಿಸಿದೊಡೆ ಕಾಂ
ಚನ
ಪಾಷಾಣಕಮಂ ಪೊ
ನ್ನನೆ
ಮಾೞ್ಪಂ ಪೊಲ್ಲ ಕೆಯ್ತನಪ್ಪನೆ ನೃಪತೀ   ೧೧೩

ವ|| ಅದಂ ಪೇೞ್ವೆಮೀ ಜಂಬೂದ್ವೀಪದ ಭರತಕ್ಷೇತ್ರದ ಚಂಪಾಪುರದ ಪರದರ್ ಸೂರಿದತ್ತನುಂ ಸುದತ್ತನುಮೆಂಬರಿರ್ವರುಂ ಪರದು ಪೋಗಿ ಪಿರಿದಪ್ಪೊಡಮೆಯಂ ಪಡೆದು ಪೊೞಲಂ ಪುಗುವಲ್ಲಿ ಸುಂಕಿಗರ್ಕಾಣ್ಗುಮೆಂಬ ಶಂಕೆಯಿಂದುಸಿರಂ ಬಿಡಲಾಱದಸುವಂ ಬಿಡುವಂತಾಪುರದ ಪೇರಡವಿಯೊಳೊಂದು ಪೊದೞ್ದು ಪರ್ವಿದ ಪೊದಱ ಮೊದಲೊಳ್

ಎರೆದವರ್ಗಮನುಗ್ರಹಿಸುವ
ಪರಮ
ಕವೀಶ್ವರರ್ಗಮೀನ ದಾನಿಗಳೇಂ ಬಂ
ದೆರೆಯದ
ನೆಲಕಂ ಪೀಡಿಸು
ವರಸಂಗಂ
ಕುಡುವ ಕೃಪಣನಗ್ಗಳಮಲ್ತೇ      ೧೧೪

ವ|| ಎಂಬ ನೀತಿಯಂ ಮಾಣದೆ ಪೂಣ್ದು ಪೋಪುದುಮೊರ್ವಂ ಕಳ್ಳಸಿಗಂ ಕಳ್ಳಂ ಕೊರ್ವಿಸುವ ಬೇರುಂ ಬಿಕ್ಕೆಯುಮಂ ಬೆರಂಟುತ್ತುಂ ಬಂದಾ ಪೊದಱ ಮೊದಲನಗುೞ್ದು ನೆಗಪಿ ತನ್ನದೆನ್ನದೆಂದು ನಚ್ಚುವರಂ ನಗುವಂತು ಗಜಗಲಿಸುತ್ತು ಮಿರ್ದ ಕಾಂಚನ ಪಂಚರತ್ನ ಸಂಚಯಮಂ ಕಂಡುಕೊಂಡು ಶೌಂಡಿಕಂ ಧನಶೌಂಡನಾಗಿ ಪೋದನಿತ್ತಲಾ ಪರದರಿರ್ವರುಮಡವಿಯೊಳ್ ಮಡಗಿದೊಡವೆಯಂ ಕಾಣದೆ ಕಾೞ್ಕೋಣಂಗಳಂತೆ ಕೆಕ್ಕೆಳಗೆಳರ್ದು ಕೆಚ್ಚನಾದ ಕಣ್ಣಂ ಬಿಚ್ಚನೆ ಬಿಟ್ಟು ಬಿರಿವಿನಮೊದಱಿಯೊರ್ವರೊರ್ವರಂ ನಂಬದ ಬಗೆಯಿಂ ಕನಕಾಸ್ವಾದಮಿಲ್ಲದೆಯುಂ ಮರುಳ್ಮಸಗಿ ಫಸುಗೆಗೆಟ್ಟು ಪಸಿಯ ಬಡಿಗೆಗಳನೆತ್ತಿಕೊಂಡು

ಮಿದುಳ್ಗಳುಗೆ ತಲೆಯ ಸಿರ್ಪುಗ
ಳುದಿರೆ
ದೃಢಕ್ರೋಧಲೋಭಭರದಿಂದಂ ಮೋ
ದಿದ
ಸೂರದತ್ತನುಂ ಕಲಿ
ಸುದತ್ತನುಂ
ಸತ್ತು ಮೊದಲ ನರಕಕ್ಕಿೞಿದರ್  ೧೧೫

ನರಕದಿಂದೆ ಬಿಂಜದ
ಕಾನನದೊಳ್
ಬಂದು ತಗರ್ಗಳಾದರ್ ಪರದರ್
ವಾನೇಯ
ಮತ್ತವಾರಣ
ಪೀನಂಗಳ್
ಶೃಂಗಕುಲಿಶ ದಲಿತ ನಗಂಗಳ್  ೧೧೬

ಅಗಜಗಜಮದಿರೆ ಜಳಮುಗೆ
ಮಿಗೆ
ಮೇಗೆ ಸಡಿಲ್ದೊಡುಣ್ಮಿ ಜಡೆಗೊಂಡುರಿನಾ
ಲಗೆವೊಲಿರೆ
ದಹನನೇಱಿದ
ತಗರಂದದಿನಟ್ಟಿ
ತಾಗಿತಗೆದುವು ತಗರ್ಗಳ್  ೧೧೭

ಮಲೆದಲೆದು ತಾಗೆ ಕೊಂಬಿನ
ತಲೆಯೊಳ್
ಕೋಡೊಣಗಿ ಸಣಗಳಾಗದ ಮಿಗಗಳ್
ಗಲಗಲಕೆ
ನಲುಗೆ ನಲಿದುಲಿ
ವಲಿವಂ
ಕಟ್ಟಿದವೊಲೆಸೆದುದಾ ಮೇಷಯುಗಂ ೧೧೮

ಕಣ್ಣುರಿ ಮುಟ್ಟಿ ನೆಟ್ಟನೆ ಮುರುಂಟಿದವೊಲ್ಮುರಿಗೊಂಡ ಕೋಡು ಮೈ
ಯುಣ್ಣೆ
ಕೞಲ್ವಿನಂ ಕುಡಿದು ಕೆತ್ತುವ ಕಂಡದ ಕೊರ್ವು ಸೌತೆಯೊ
ಳ್ಪಣ್ಣವೊಲುಬ್ಬರಂ
ಬಿರಿಯೆ ರತ್ನಶಿಳಾಳಿ ನೆೞಲ್ಗೆ ಪಾಯ್ವ ಪೆ
ರ್ವುಣ್ಣೊಡೆಯುತ್ತುಮಿರ್ಪ
ಪಣೆಯದ್ಭುತಮಾದುದುರಭ್ರಯುಗ್ಮದಾ         ೧೧೯

ಅವು ತಾರ್ಮಟ್ಟಿನೊಳೊರ್ಮೆ ಕಂಡು ಕಿಡಿಯಂ ಕೆಂಡಂಗಳಂ ಸೂಸಿ ತಾ
ಗುವ
ವೊಲ್ ಬೆಟ್ಟನೊಳೊಂದು ಬೆಟ್ಟು ಭವಬದ್ಧಕ್ರೋಧದಿಂ ಕಾಯ್ದು ತಾ
ಗುವುದುಂ
ಕಂಠದೊಳಾೞೆ ತೋರದಲೆಗಳ್ ಸತ್ತಂದು ಮೇಷಂಗಳಾ
ದುವು
ಗಂಗಾತಟ ಗೋಕುಲಕ್ಕೆ ಜಿತದಿಂ ಜ್ಞಾನಾಳಿಳ್ಗೂಳಿಗಳ್    ೧೨೦

ತಳೆದತ್ತುದ್ವೃತ್ತಿಯಂ ತದ್ವೃಷಭಯುಗಳಮಾಲಾಂಬಿಸಾಸ್ನಾಪಟಂ ಪಾ
ಟಳನೇತ್ರಂ
ವೃದ್ಧವಂಶಾಂಕುರ ವಿಷಮ ವಿಷಾಣದ್ವಯಂ ಗೃಧ್ರಪಕ್ಷೋ
ಚ್ಚಳಿತಾದಭ್ರಶ್ರವಂ
ದುಂದುಭಿನಿಭನಿನದತ್ಕಂಧರಂ ದೀರ್ಘನೀಲೋ
ತ್ಪಳನಾಳಾಲೋಲ
ವಾಳಂ ವಿಪುಳ ಶಫಪರಿಸ್ಥೂಳಮಾಭೀಳಶೀಳಂ       ೧೨೧

ಪಣೆ ವರುಡಲ್ಕೆ ಪರ್ವಿದೆರ್ದೆಯೊಳ್ ಪೊರೆದಳ್ಗೆಸಱಿಂ ವೃಷಂಗಳೊಳ್
ಪೊಣರ್ದಿಱಿಯಲ್ಕೆ
ಪತ್ತಿದರುಣಾಘದಿನಾ ವೃಷಶೃಂಗಯುಗ್ಮ ಮೊಂ
ದಣಿಯರಮಾಯ್ತು
ಸಾರವಿಸಿ ನೆತ್ತರೊಳೊಕ್ಕೆಱೆದರ್ಚಿಸಿರ್ದ ಪೇ
ರಣೆಮಣಿಯೆಂಬ
ಭೈರವನ ಲಿಂಗದ ಸೀಯದರಂಬೊಲದ್ಭುತಂ  ೧೨೨

ಪ್ರತಿವೃಷಭ ಶೃಂಗಸೀರ
ಕ್ಷಿತಿಲೇಖಾಲಕ್ಷಿತಂ
ತದೀಯಕ್ಷೇತ್ರ
ಕ್ಷಿತಿಯಾಯ್ತು
ದರ್ಪಬೀಜಾ
ಕೃತಮೆನೆ
ಬಸವಂಗಳುಕ್ಕದೇನುಬ್ಬಸಮೋ   ೧೨೩

ವ|| ಆ ಮದಕಳಕ್ರೂರ ಶೂರ ಸೌರಭೇಯಂಗಳೊಂದು ದಿವಸಮೊಂದೊಂದಱ ಕೆಲಪಂ ಕೇಳ್ದು ಕೆಳರ್ದು ಕೆಂಗಲ್ಮಸಗಿ ಮೂದಲಿಸಿದಂತೆ ಮಲೆತು ತಾಮಿರ್ದ ಮೊದಲ ನರಕಮಂ ತೆಱೆದು ತೋಱುವಂತೆ ಭೂತಳಮಂ ಕೊಳಗಿಂ ಪರಡುತ್ತುಂ ಮನಂ ವಾಯುಗೆ ಮಿದಿಲ್ದು ಕಯ್ಯಿಕ್ಕುವ ಸೊರ್ಕಾನೆಗಳಂತೆ ತಲೆಯಿಕ್ಕಿ ತೊಲಗದ ಮನದ ಕನಲ್ಕೆಯಿಂ ಕಾದಿ ಕೊಂದು ಬಿರ್ದು ಕಂದಂಗಳೊಳ್ ನಡುಕೋಡುವರಂ ನಟ್ಟಕೋಡುಗಳಿಂ ಮಿಳಿಯಂ ಕಟ್ಟಿ ಗೋಪಾಲಕರ್ ಕೀೞೆ ಸತ್ತು ಸಂಮೇದ ಗಿರಿಯ ಕಾಡೊಳ್ ಕೋಡಗಂಗಳಾಗಿ ಪುಟ್ಟಿದುವಿಂತು

ಅವರವಿವೇಕದಿಂ ಕುಱಿಯ ಪೋರಿಗಳಾದರವುಂ ಪರಸ್ಪರಾ
ಹವ
ರಸಕಾಂಕ್ಷೆಯಿಂ ಕುಱಿಯ ಪೋರಿಗಳೆತ್ತುಗಳಾದುವೆತ್ತುಗಳ್
ತವದತಿ
ಚಂಚಳ ಪ್ರಕೃತಿಪಾಕದಿನಕ್ಕಟ ಮರ್ಕಟಂಗಳಾ
ದುವು
ಪಿರುದುಂ ಶರೀರಿಗಳ ಪಾಪಮಿದೇಂ ಚರಿತಾನುರೂಪಮೋ        ೧೨೪

ಪರಿಗತ ನಿರ್ಝರಿಣಿಯೊಳಾ
ಗಿರಿಯೊಳ್
ಕಿಸಲಯಿತ ಶಿಖರ ಕಾನನಕುಲದೊಳ್
ಶರನಿಧಿ
ಸುತ್ತಿದ ಲಂಕೆಯ
ನುರುಪಿದ
ಕಪಿಪತಿವೊಲಿರ್ಪುದಾ ಕಪಿಯುಗಗಳಂ      ೧೨೫

ವ|| ಆ ವಿಪುಳ ಫಲ ಕುಸುಮ ಕಿಸಲಯ ಕುಳಂಗಳುಂ ಕಪಿಕೇಶಂಗಳುಮಪ್ಪ ಕೇಶಂಗಳುಂ ಶಿಲಾಸಲಿಲ ನಿಮಿತ್ತಮುನ್ಮತ್ತಪರ ಪುರಾಣ ಪುರುಷ ವ್ಯಾಲೀಕೃತ ಬಾಲಿ ಸುಗ್ರೀವಂಗಳಂತೆ ಸುಗಿಯದಗಿಯದೆ ಸಂಗರಮಂ ಮಾಡಿ

ಒಂದಾಗಳೆ ಸತ್ತುದು
ತ್ತೊಂದಿರ್ದುದು
ಸಾಯಲದಱ ತಮಮಂ ಕಳೆಯಲ್
ಬಂದುದು
ಗಗನದಿನಿೞಿದ
ವೀಂದುಗಳವೊಲಾಗಳಂತೆ
ಚಾರಣಯುಗಳಂ         ೧೨೬

ವ|| ಅಸುರಗುರುಗಳುಂ ದೇವಗುರುಗಳುಮೆಂಬ ಚಾರಣರಾ ಮರಣಾಭಿಮುಖನಪ್ಪ ಬಲೀ ಮುಖನಂ ಕಂಡು ಕರುಣಾಜಳಮುಮಂ ಕಮಂಡುಲುಜಲಮುಮಂ ಮೊಗದೊಳ್ ತಳಿಯೆ ಕುಳಿರ್ಕೋಡಿ ಕೋಡಗಂ ಕಣ್ಣಂ ತೆಱೆದು ತಲೆಯನೆಱಗಿ ಪೊಡೆವಡೆ ಪರಸಿ ಪದಿರದಿಂ ಮಾತಲ್ಲ ದಿದಿರ ಮಾತಿನೊಳ್ ಧರ್ಮಮಂ ತಿಳಿಪೆ ಪಂಚನಮಸ್ಕಾರಮಂ ಪೇಱೆ ಕೇಳ್ದು ಶುಭಸಂಸ್ಕಾರದಿಂ ಸತ್ತಾ ಸಂಮೇದಗಿರಿತರು ಶಿಖರದಿನಾಶಾಖಾಚರಂ ಸೌಧರ್ಮಕಲ್ಪತರು ಶಿಖರಕ್ಕೆ ಪಾಯ್ದು ಚಿತ್ರಾಂಗದ ನೆಂಬ ದೇವನಾಗಿ ದಿವ್ಯಸುಖಫಲರಸಮನಾಸ್ವಾದಿಸಿ ಬಂದೀ ಜಂಬೂದ್ವೀಪದ ಭರತಕ್ಷೇತ್ರದ ಸುರಮ್ಯ ವಿಷಯದ ಪೌದನಪುರದರಸಂ ಸುಸ್ಥಿತಂಗಂ ಸುಲಕ್ಷಣಾದೇವಿಗಂ ಸುಪ್ರತಷ್ಠನೆಂಬೊಂ ಸುತನಾಗಿ ಭೋಗೋಪಭೋಗಂಗಳನುಪಭೋಗಿಸುತ್ತು ಮಿರೆ

ಚಿತ್ರಲತಿಕೆ || ಕೇದಗೆವೂವಂ ಚಾದಗೆಬಾಯಂ ಬಿಡೆಬಿಡುತಿರೆ ಬಿಡುವನಿ ಕಡವಿಸಿಲಿಂ
ಸೋದು
ಬಿಸುರ್ಪಂ ಜಾದಿಯ ಕಂಪಂ ಕಡವಿನ ಕೊಡಸಿಗೆಯಲರ್ಗಳ ಸೊವಡಿಂ
ಕೋದಿದಿರ್ಗೊಳ್ವಾಹ್ಲಾದಕರಂ
ಸೋಗೆಯ ದನಿ ಪೊಱಮಡೆ ಪಡುವಣ ದೆಸೆಯಿಂ
ದೂದೆ
ಸಮುತ್ಸಹ ಮೋದಮೆಲರ್ಬಂದುದು ಮೊಳೆ ಪಸರಿಸೆ ಪೊಸಮೞೆಗಾಲಂ    ೧೨೭

ವ|| ಅಂದು ಸಿತಗಿರಿಯೊಳಾ ಪ್ರಾವೃಷೇಣ್ಯಜಳಧರಧ್ವನಿಗೆ ಮಸಗಿ ಮುಸುಱಿ ಮುತ್ತಿ ಮೊತ್ತಂಗೊಂಡು ಕಾಡುವ ಕೋಡಗಂಗಳಂ ಕಂಡು ಜಿತಸ್ಮಯನುಂ ಸಂಜಾತವಿಸ್ಮಯನುಂ ಜಾತಿಸ್ಮರನುಂ ವೈರಾಗ್ಯಪರನುಮಾಗಿ ಪೋಗಿ ಸುಧರ್ಮಾಚಾರ್ಯರ ಚರಣೋಪಾಂತದೊಳ್ ತಪಶ್ಚರಣಮುಮಂ ಕೈಕೊಂಡನಾ ಸೂರದತ್ತ ಚರರೆಮಾದೆವು ಇತ್ತ ಸುದತ್ತಚರಶಾಖಾಚರನುಮೀ ಚರಾಚರ ಸ್ವರೂಪಮಪ್ಪ ಸಂಸಾರ ಕಾಂತಾರದೊಳ್ ತಿರಿದು ಬಂದು ಸಿಂಧುತೀರದ ರುಸಿಪಳ್ಳಿಯೊಳ್ ಮೃಗಾಯಣನೆಂಬ ಮುನಿಗಂ ವಿಶಾಕೆಯೆಂಬ ಗೊರತಿಗಂ ಗೌತಮನೆಂಬ ಮಗನಾಗಿ ಪುಟ್ಟಿ ತಪಂಬಟ್ಟು ಬೇಸಗೆಯಾಗೆ

ಭಗ್ನಮನೋರಥಂ ರತಿಸುಖಾಸವ ಸೇವೆಗೆ ಪಂಚಬಾಣ ಪಂ
ಚಾಗ್ನಿತಪಕ್ಕೆ
ನಿಲ್ವ ವಿರಹಾತುರನಂತಿರೆ ಕುತ್ಸಿತಾಗಮ
ತ್ವಗ್ನಿಳಯಂ
ನಿಳಿಂಪ ಸುಖ ಲಂಪಳನಾಗಿಯೆ ನಿಂದನಂದು ಪಂ
ಚಾಗ್ನಿತಪಕ್ಕೆ
ತಾಪಸ ಸಮೂಹ ಮಹೋತ್ತಮನಪ್ಪ ಗೌತಮಂ   ೧೨೮

ಪೞುಗೞಿದ ಪಾಪಮಂ ಕೈ
ಗೞಿದ
ತಪೋನಳನೆ ಸುಡುಗುಮೊಟ್ಟಿದ ಕಿಚ್ಚಿಂ
ತೞಪೞನೆ
ಪುಳ್ಳಯೊಳಗಣ
ಪುೞು
ಬೇಗಂ ಬೇಗುಮೆಗ್ಗ ಬೇಗುಮೆ ದುರಿತಂ ೧೨೯

ವ|| ಆತನಾ ತಪಃಫಲದಿಂ ಜ್ಯೋತಿರ್ಗಣದೊಳಗೆ ಸುದರ್ಶನನೆಂಬ ದೇವನೀತನಾಗಿ ಪೂರ್ವ ಜನ್ಮಜನಿತ ಪರುಷರೋಷಾವೇಶದಿನೆಮಗೀಯುಪಸರ್ಗಮಂ ಮಾಡಿದನೆಂಬುದು ಮದೆಲ್ಲಮನಾ ಸುದರ್ಶನದೇವಂ ಕೇಳ್ದು ಸದ್ದರ್ಶನಮಂ ಕೈಕೊಂಡನಂಧಕವೃಷ್ಟಿಯುಂ ವಿರಕ್ತನಾಗಿ ಸಮುದ್ರ ವಿಜಯಂಗೆ ಪಟ್ಟಂಗಟ್ಟಿ ತಪಂಬಟ್ಟು ಮೋಕ್ಷಕ್ಕೆ ಪೋದನಿತ್ತಲ್

ಸೋದರರೆಣ್ಬರುಂ ಪಸುಗೆಯಂ ಪ್ರತಿಪಾಲಿಸಿ ಲೋಕಪಾಲರಂ
ತಾದರದಿಂದೆ
ಬೆಚ್ಚು ಬೆಸಕೆಯ್ಯೆ ನಿಜಾಜ್ಞೆಗೆ ರತ್ನಗರ್ಭೆಯಂ
ಕಾದು
ಸುವರ್ಣಯುಕ್ತೆಯೆನೆ ತನ್ನ ಕರಕ್ಕೆ ಸಮುದ್ರಮೇಖಲಾ
ಮೇದಿನಿಯಂ
ಸಮುದ್ರವಿಜಯಂ ಮಣಿಮುದ್ರಿಕೆಯಾಗೆ ಮಾಡಿದಂ         ೧೩೦

ಪೊಸದೇಶಿ ಪೊಂಗು ಪೊಂಗೆಸೆ
ವೆಸಕಂ
ಕಡುಗಾಡಿ ರೂಢಿಯೆಂಬಿವಱಿಂದಂ
ವಸುಧೇಶನಣುಗದಮ್ಮಂ

ವಸುದೇವಂ
ಧರೆಗೆ ಕಣ್ಣುಮುಳ್ಳಾಗಿರ್ದಂ      ೧೩೧

ಪದೆದಡಿಯಿಟ್ಟವೊಲ್ ಕುಸುಮದೊಳ್ ಮದನಾಯುಧಲಕ್ಷ್ಮಿ ಬಾಳಚೂ
ತದೊಳೆ
ವಸಂತಲಕ್ಷ್ಮಿಯತಿವರ್ತಿಯೊಳುನ್ಮದಲಕ್ಷ್ಮಿ ಚಂದ್ರಬಿಂ
ಬದೊಳತಿ
ಪೂರ್ಣಲಕ್ಷ್ಮಿ ನವಯೌವನಲಕ್ಷ್ಮಿ ವಿಳಾಸಲಕ್ಷ್ಮಿಯಂ
ದದಿನಡಿಯಿಟ್ಟುದಂದು
ವಸುದೇವನ ಚೆಲ್ವಡರ್ದಂಗಯಷ್ಟಿಯೊಳ್          ೧೩೨

ವ|| ಅಂತು ಬಂದ ಯೌವನ ವಸಂತದೊಳ್ ವಸುದೇವಕುಮಾರಂ ತನ್ನೋರಗೆಯ ಚೆನ್ನಿಗರುಂ ಚದುರರುಮಪ್ಪ ರಾಜಕುಮಾರರುಮಂ ಮಂತ್ರಿಪುತ್ರರುಮಂ ಕೂಡಿಕೊಂಡು ವನಕ್ರೀಡೆಗೆ ವಿನೋದಜಳಕೇಳಿಗಳಂ ಮೊಗಸಲೊಡನೆ

ಅತನುವನತಿಶಯದಿಂ ಋತು
ತತಿಗಳ್
ಬಳಸುವವೊಲೆಳಸಿ ಬಳಸಿದರಂತಾ
ಕ್ಷಿತಿಪತಿಸುತನಂ
ವಿಟಪಂ
ಡಿತ
ನಟ ಪರಿಹಾಸಕಾದಿ ನರ್ಮಸಹಾಯರ್  ೧೩೩

ಪರಗುಣಗಣಮಂ ಸೈರಿಸು
ವರಮಗನಂ
ಮನುಜರೊಲ್ವರಣಮೆಲ್ಲರ್
ಚ್ಚರಿಪನನುಡುನಿಕರಂ
ಖರ
ಕರನಂ
ಬಿಸುಟಮೃತಕರನನೋಲಗಿಸುವೊಲ್         ೧೩೪

ವ|| ಒಂದು ದಿವಸಂ ಬಂದ ನಂದನವನಮಂ ತಳರ್ದು ಬರ್ಪಂತೆ ತಳ್ತುಪಿಡಿದ ಪೀಲಿಯ ತೞೆಯ ತುಱುಗಲೊಳಗೆ

ಬಳೆದಿರೆ ವೃತ್ತಪಾಠಕ ಶುಕಧ್ವನಿ ತಳ್ತಿರೆ ಮತ್ತಕಾಮಿನೀ
ಕಳಕಳ
ಕೋಕಿಳಾವಿರುತಿ ಗರ್ಭಕ ಗಂಧಭರಕ್ಕೆ ತುಂಬಿಗಳ್
ಬಳಸಿರೆ
ಪೂವಿನಂತೆ ಮುಗುಳಂತಿರೆ ಕೆಂದಳಿರಂತೆ ಮಾಣಿಕಂ
ಗಳ
ತೊಡವೊಪ್ಪ ಬರ್ಪನೊಸೆದಾ ವಸುದೇವ ವಸಂತವಲ್ಲಭಂ  ೧೩೫

ವ|| ಮತ್ತೊಂದು ದಿವಸಂ

ಕುಂಕುಮದಣ್ಪನೆಯ್ದೆ ಕಳೆದಾಗಳೆ ಚಂದನಣ್ಪನಿಕ್ಕುವಂ
ಸೋಂಕುವ
ಬಾಳಕೇಳಿ ಮೃಗಮಂ ತೆಗೆದಪ್ಪುವನಂಗಕಾಂತಿಯಂ
ತಾಂ
ಕುಡುಕಿಕ್ಕುವಂ ಯುವತಿನೇತ್ರಚಕೋರಚಯಕ್ಕೆ ಭೋಂಕನೇ
ಣಾಂಕನ
ಕೆಯ್ತದಿಂ ಕೃತಕಶೈಲಮನೇಱಿ ನರೇಂದ್ರಚಂದ್ರಮಂ   ೧೩೬

ವ|| ಮತ್ತೊಂದು ದಿವಸಂ

ಕತ್ತುರಿಯಣ್ಕೆ ಕೆಂದಳಿರ ಕೆಯ್ಪೊಡೆ ಕೇದಗೆಯೊತ್ತೆ ಪೂವಿನಿಂ
ದೆತ್ತಿದ
ಮೀನಕೇತನಮಶೋಕೆಯ ಸೋರ್ಮುಡಿಕಟ್ಟು ಕೂಡೆ ತೂ
ಗುತ್ತರಲಂಬನಿಕ್ಷುಧನುವಂ
ಗೊಲೆಗೆತ್ತಿ ತೊೞಲ್ವನಂಗನಾ
ಚಿತ್ತದೊಳಂ
ಪುರಾಂತರದೊಳಂ ವಸುದೇವ ಕುಮಾರಮನ್ಮಥಂ          ೧೩೭

ಪುಗುವನದೊರ್ಮೆಯುಂ ನಗುವ ದೃಗ್ವನದಂತಿರೆ ತೊಟ್ಟ ಪೂವಿನಂ
ಗಿಗೆ
ಪೊಳೆದೊಪ್ಪಿ ಕೆಂದಳದೊಳಂಕುಶವಜ್ರವಿಭಾದ್ರಿಭೇದಿ ಮು
ತ್ತುಗಳಗುಳಂ
ತಳತ್ತಸುವೇಱಿದ ದಂತಿ ಸುರೇಂದ್ರದಂತಿಯಂ
ನಗೆ
ಸುರರಂತೆ ನೋಡೆ ಜನಮಾ ಪೊೞಲಂ ವಸುದೇವ ವಾಸವಂ        ೧೩೮

ವಿದಳಿತ ಪದ್ಮಲೋಚನ ನಮೋ ಗರುಡಧ್ವಜ ಕಾವುದೆಂದು ಲೋ
ಕದ
ಜನಮೆಲ್ಲಮೊಲ್ದೆಱಗೆ ಕಟ್ಟಿದ ಚೌರಿಯೆಱಂಕೆ ಮೂಗರ
ನ್ನದ
ಮೊಗಮುಟ್ಟನಾಂತ ಮೊಗಮಾಗಿರೆ ತಾರ್ಕ್ಷ್ಯನನೇಱುವಂ ಕದ
ಕ್ಕದಿಸೆ
ನಿರರ್ಗಳಂ ಪೊಳೆದು ಪಾಱುವಿನಂ ವಸುದೇವವಲ್ಲಭಂ (?)          ||೧೩೯||

ಕಾಜಿನ ಬೀಣೆಯಂ ಕಳೆದುಕೊಂಡು ತಳಂಗಳನೆತ್ತಿಕೊಂಡು ನು
ಣ್ಬೋಜೆ
ಬೆಡಂಗು ಬಣ್ಣಸರಮೊಪ್ಪೆ ಕರಂ ಯತಿ ಧಾತು ಮೂರ್ಛನಾ
ಬ್ಯಾಜದೊಳಾಡೆ
ಕೂಡೆ ಕುಡುಪುಂ ಬೆರಲುಂ ಕೃತಕಾದ್ರಿ ಕೂಟದೊಳ್
ಬಾಜಿಸುವಂ
ಜಸಂಬಡೆಯೆ ಕಿನ್ನರನಂತೆ ನರೇಂದ್ರನಂದನಂ    ||೧೪೦||

ವಾರಿಜಮನಿಟ್ಟು ಕಿವಿಯೊಳ್
ವಾರುವಮಂ
ಪೀಲಿಯಿಂದೆ ಪಕ್ಕರಿಸಿ ಮನೋ
ಹಾರಿಯೆನೆ
ಮೂಱುಮೊಗದ ಕು
ಮಾರನವೊಲ್
ನೃಪಕುಮಾರನೇಱುವನೊಲವಿಂ      ||೧೪೧||

ಇಂತು ಕಡುಚೆಲ್ವ ನಾ ತನ
ನಿಂತಾಯ್ತಾದೆಸೆವ
ಪಸದ ನಂ ವಸುಮತಿಯಂ
ಕಂತುಗೆ
ನನೆಗಣೆಯಲರ್ವಿ
ಲ್ಲಂತಿರೆ
ಸೋಲಿಸುವುದರ್ಕೆ ಸಂದೆಯಮುಂಟೇ         ||೧೪೨||

ಆವೊಳ್ಗಾವುದು ಕೆಯ್ತಮೞ್ತಿಮತಿಗೆಟ್ಟಾವಾಕ್ಕೆ ತೋಳಪ್ಪಳೊ (?)
ಲ್ದಾವೊಂದಾಕೃತಿಗಾವೊಳಾವೆಸೆವ
ನೇಪಥ್ಯಕ್ಕೆ ಕಣ್ಸೋಲ್ವರಾ
ಭಾವಂ
ಚೆಲ್ವೆವೊಲಂದ ಮಚ್ಚಿಱಿದವೊಲ್‌ಶೃಂಗಾರಮೊಲ್ದಿರ್ದವೋಲ್
ತೀವಿರ್ದಾ
ರತಿರತ್ನ ಮೇರುಗೆ ಮರುಳ್ಗೊಂಡಿರ್ದರಬ್ಜಾಕ್ಷಿಯರ್   ||೧೪೩||

ಅವಳನೆಸುವೆಂ ಕೆಡಪುನೆ
ನಾವಳನಿನ್ನಾವಳಂ
ಪೊರಳ್ಚುವೆನೆನುತುಂ
ತೀವಿ
ತೆಗೆದಿಕ್ಷುಧನುವಂ
ಕಾವಂ
ಕಟಕಕ್ಕೆ ಸುರಿಗೆಗೆೞ್ವವೊಲಾದಂ       ||೧೪೪||

ಅಲರ್ಗಣ್ಗಂ ಬಾಳವೆಂದಿಕ್ಷುವ ಧನುಲತೆಯಂ ತುಂಬಿಯಂ ಬಿಟ್ಟು ಪಂಕೇ
ಜಲತಾಜ್ಯಾಲೇಖೆಯಂ
ಕೆಂದಳಿರ ತಳಮಿದೇಕೆಂದು ಹಸ್ತಾಗ್ರದೊಳ್
ಚ್ಚೆಲೆಯಂ
ಕೊಂಡಿಟ್ಟು ಕಟ್ಟುತ್ತೊರೆದು ಸಿಡಿವಿನಂ ಕಯ್ಬೆರಲ್ಪೊಂಗೆ ಮುಂಗೈ
ಸುಲಿವನ್ನಂ
ಕಾಮನೆಚ್ಚಂ ಪಡಲಿಡುವಿನೆಗಂ ಪೌರನಾರೀನಿಕಾಯಂ (?)    ||೧೪೫||

ಪುಸಿಯೆಂದಾದನದಿರ್ಪಿ ತಪ್ಪಿಸಿ ಸರಲ್ಮತ್ತೊಂದು ತಾಂ ಪೋಗೆ ನು
ಣ್ಬಸೆಯಂ
ಮುಟ್ಟದೆ ಮತ್ತಮೊಂದು ಕಣೆ ಕಲ್ಲಂ ತಾಗಿದಂತಾಗೆ ಕೊಂ
ಡಸಿಯಂಬೊಂದನೆ
ದಡ್ಡುವಿರ್ದ ಹೃದಯಂ ಜಾಳಾಂದರಂಬೋಪಿನಂ
ಬೆಸೆದೆಚ್ಚಂ
ಕಡುದೇಸಿವೆಂಡಿರನ ದೇಂ ಕಾಮಂ ಛಲಗ್ರಾಹಿಯೋ ೧೪೬

ಕಡುಗೆಚ್ಚುವಿರ್ದ ಮನಮಂ
ನಡದೊಡೆ
ಬಿಸುಟರಲಸರಲನೀರದ ಸರಮಂ
ನಿಡುನನೆಯಂಬಿಂ
ಕೆಡೆಕೆಡೆ
ಕೆಡೆಯೆಂದೆಚ್ಚಾರ್ದು
ಕೆಡಪಿದಂ ಡಾಳೆಯರಂ  ೧೪೭

ಕಂಟಣಿಪಿನಮಲರಿಸಿದಂ
ಕುಂಟಣಿಯರ
ಕೊರಡುಗೊಂಡ ಮನಮಂ ಮದನಂ
ಗೆಂಟಾಗಿ
ವಿಕಾಸಕ್ಕೆ ಮು
ರುಂಟಿದ
ಮಲ್ಲಿಗೆಯನಲರಿಪಂತೆ ವಸಂತಂ   ೧೪೮

ಕಿಸುರಕಸಗಳೆದುಮೆತ್ತಿಸಿ
ಪೊಸಬಗೆಯಂ
ಪೂಸಿ ರಾಗರಸದಿಂ ಪೊಕ್ಕಂ
ಪುಸಿದೞಿವೆಂಡಿರ
ಬೇಟಂ
ಬಿಸುಟೆರ್ದೆಯಂ
ಸ್ಮರನೆ ಪುಗುವವೊಲ್ ಪೊಸಮನೆಯಂ        ೧೪೯

ನಟ್ಟುದು ನೊಂದೆನೆಂದೆರ್ದೆಯನೊತ್ತಿಕೊಳುತ್ತುಮೆ ಬಂದೊಡೇನುಮಂ
ನಿಟ್ಟಿಸಿ
ನೋಡಿ ಕಾಣದೆಲೆ ನೋಡದೆ ಮಾಣದೆ ಕೀೞುಮಾರನಂ
ಪುಟ್ಟಿರೆ
ಪೆಂಡಿರೆಂತೆನಗೆ ಹೂಹೆಯನೆಚ್ಚಪನೆನ್ನನೆಂದವಳ್
ಕುಟ್ಟಿನಿ
ಕಯ್ಗಳಂ ಮುರಿದು ಬಯ್ದಳನಂಗನನಾ ಪ್ರಸಂಗದೊಳ್  ೧೫೦

ಅರಸಂಗೀತಂಗೆ ಕಣ್ಸೋಲ್ತಬಲೆಯರವರೇನಿರ್ವರೋ ಮೂವರೋ ನಾ
ಲ್ವರೊ
ಲೆಕ್ಕಂ ಲಕ್ಕೆಯುಂ ಕೋಟಿಯುಮೆನೆ ವಶವಾದಪ್ಪರೇಗೆಯ್ವೆನೊರ್ವಂ
ಸ್ಮರಕೋಟಾಕೋಟಿಯಂ
ಪೂಣ್ದಿಸಲೆ ಪಡೆವೆನೆಂದಂದು ಪೆತ್ತಂ ಕರಾಬ್ಜಾಂ
ಕುರ
ಸತ್ಸಂದರ್ಭದರ್ಭಂ ಧೃತಸಕಲ ಕಲಾಗರ್ಭನಂಭೋಜಗರ್ಭಂ       ೧೫೧

ವ|| ಅಂತು ಪಡೆಯಲೊಡನೆ

ಜಿನನಂಘ್ರಿದ್ವಂದ್ವದೊಳ್ ಧೂರ್ಜಟಿಯ ಜಡೆಗಳೊಳ್ ಬ್ರಹ್ಮನುತ್ತಂಸದೊಳ್ ಕೃ
ಷ್ಣನ
ಕೇಶಾದ್ದೇಶದೊಳ್ ಬಂದಱಗಿ ತುಱುಗಿ ಪುಷ್ಪೇಷುಚಾರಂ ನಭಂ ಪೂ
ವಿನ
ಪಂದರ್ ಭೂತಲಂ ಪೂವಿನ ಪೊಸಪಸೆಗಳ್ ದೇಸೆವೆತ್ತಿರ್ಪಿನಂ ಪೂ
ವಿನ
ತೇರಂತೆಚ್ಚುವಂತಾ ಪುರವರ ವನಿತಾಸೈನ್ಯಮಂ ಕಾಮಸೈನ್ಯಂ    ೧೫೨

ಅಂತೆಸುವ ಮದನನಂ ಕಂ
ಡಂತೆಯ್ದಿಪೆನಿವರ್ಗೆ
ಸರಲನೆನಿತುಂ ನನೆವೂ
ವಂ
ತುಱುಗೆ ಪನಸ ಪಿಪ್ಪಲ
ಸಂತತಿಗಳೊಳಂ
ವಸಂತರಾಜಂ ಪಡೆದಂ   ೧೫೩

ನಿಕರಂ ತೆಂಕಣಗಾಳಿ ನಾಗರಿಕನಾಗಲ್ ದರ್ಪಕಂ ಪೀಠಮ
ರ್ದಕನಾಗಲ್
ಮಧುಮಾಸವೊಲ್ದು ವಿಟನಾಗಲ್ ಚಂದ್ರಬಿಂಬಂ ವಿದೂ
ಷಕನಾಗಲ್
ಪರಿಹಾಸಕಂ ಕುಮುದಿನೀವೃಂದಕ್ಕೆ ಸೌಭಾಗ್ಯ ನಾ
ಯಕನಾದಂ
ಶಠಧೃಷ್ಟ ದಕ್ಷಿಣ ಶೃಂಗಾರ ಕಾರಾಗೃಹಂ  ೧೫೪

ಇದು ಮೃದುಪದಬಂಧುರ ಸರಸ್ವತೀ ಸೌಭಾಗ್ಯವ್ಯಂಗ್ಯ ಭಂಗಿ ನಿಧಾನ ದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೇಮಿಚಂದ್ರಕೃತಮುಂ ಶ್ರೀಮತ್ಪ್ರತಾಪ ಚಕ್ರವರ್ತಿ ವೀರಬಲ್ಲಾಳದೇವ ಪ್ರಸಾದಾಸಾದಿತ ಮಹಾಪ್ರಧಾನ ಸೆಜ್ಜೆವಳ್ಳ ಪದ್ಮನಾಭದೇವ ಕಾರಿತಮುಮಪ್ಪ ನೇಮಿನಾಥಪುರಾಣದೊಳ್ ವಸುದೇವ ಪ್ರತಾಪವರ್ಣನಂ

ಚತುರ್ಥಾಶ್ವಾಸಂ

ಸಮಾಪ್ತಂ