ಶ್ರೀಯಂ ಸರಸತಿಯಂ ಜಯ
ಜಾಯೆಯನಾ
ವೀರಲಕ್ಷ್ಮಿಯಂ ಜಸವೆಣ್ಣಂ
ಜ್ಯಾಯನೆಱಗಿಸಿದ
ನೀಱಂ
ಸ್ತ್ರೀಯರನೆಱಗಿಸುವುದರಿದೆ
ಮನುಜಮನೋಜಂ       ೧

ಅರಸನಱಿದಾಳ್ವ ನಗರದ
ತರುಣಿಯರುಡೆಯುರ್ಚ್ಚಿವೋಗೊದೊರ್ವನೆ
ಸುಮನ
ಶ್ಶರನೇಂ
ಶೂರನೆ ಚೇತಃ
ಪುರಮಂ
ನಿರ್ಧಾಮಧೂಮಮಾಗಿರೆ ಸುಟ್ಟಂ  ೨

ವ|| ಎಂಬಿನಮಾ ಕುಮಾರಂ ಕಣ್ಗಕ್ಕಿದ ಠಕ್ಕುಂ ಮನಕಿಕ್ಕಿದ ಮೂರ್ಛೆಯುಂ ಸುದತಿಯರ್ಗಿಕ್ಕಿದ ಸೊರ್ಕುಮೆನೆ ಬರ್ಪುದಂ ಕಂಡು ಸೌಭಾಗ್ಯಕಾರ್ತಿಯರ್ ಸೌಭಾಗ್ಯಮಂ ಸೇಸಿಕ್ಕಿಯುಂ ಚಲ್ಲಕಾರ್ತಿಯರ್ ಚಲ್ಲದಿಂ ನಿವಾಳಿಸಿ ನಾಣಂಬೞಿದೀಡಾಡಿಯುಂ ಸೋಲಾಕಾರ್ತಿ ಯರ್ ಕಣ್ಸೋಲಮಂ ಕಾಣ್ಕೆಗೊಟ್ಟು ಮನಮಂ ಮೆಚ್ಚುಗುಡೆಯುಂ ರಾಗರಸದೊಳ್ಮು ೞುಗುತ್ತಂತೆ ಪೆಕಾರ್ತಿಯರ್ತೆಮಪ್ಪಂಬಿಡಿವಂತೆ ತಾಪದಿಂ ಮೃಣಾಳನಾಳದ ಪೊರಳಿಯಂ ಪೊರಳ್ದು ತರ್ಕಯಿಸಿಯುಂ ತೀಯಕಾರ್ತಿಯರ್ತಾಯಿಲ್ಲದ ಕೂಸಿನಂತೆ ಬಾಯಂಬಿಡೆಯುಂ ಕಟ್ಟೇಯಕಾರ್ತಿಯರ್ಕೆಟ್ಟು ಮನಮನಸಱುವಂತೆ ಕಾಮಪಿಶಾಚದಿಂ ಪುಗದೆಡೆಯಂ ಪುಗೆಯುಂ ಪೊಸವೇಟಕಾರ್ತಿಯರ್ತಮ್ಮ ಕನ್ನೆವೇಟಮವನೊಳಾಗದೆ ಕೆಟ್ಟೆವೆಂದು ಕಟ್ಟುಗೆಡೆಯೆಯುಂ ಚೇಟಿಗನಿತು ಬೇಟಮಾದೊಡಂ ಮನವಾವೆಡೆಗಮೆಯ್ದದೆಂದಲವರಿಸುವ ಕಡುವೇಟಗಾರ್ತಿಯ ಕಾತರಿ ಕೆಯಂ ಕಳೆಯಲ್ಪಡೆದೆವೆಮ್ಮ ಮಕ್ಕಳ ಮಕ್ಕಳ್ಗಾವಗಮೀಬೇಟಮೆ ಸಾಲ್ಗುಮೆಂದು ಪೞವೇಟಮಂ ಪೊಕ್ಕುಱಗೊಕ್ಕು ಪೆಡೆಗೆ ಹಾರಂ ಪೊಸವೇಟಮಂ ಪೊಯ್ದು ಕೊಳಲುಂ ಮುತ್ತಿನ ಗಂಡರ್ಮೊಱೆಯಲ್ಲರೆಂದು ಮನದೊಳಗೆ ಬೞಿನೀರ್ಗುಡಿದ ಬದ್ದೆಯರೀ ಭವಮಿಂತೆ ಪೋದುದು ಮಱುಭವದೊಳಾದೊಡಮೀತನೊಳೆ ಬೇಟಮಕ್ಕೆಂದು ಪಠಿಸಿ ಪರಿಚ್ಛೇದಿಸಿ ಕಾಮಾಗ್ನಿಯಂ ಪುಗೆಯುಂ ಸತಿಯರ್ ಪತಿವ್ರತಿಕೆಯಂ ನಂಬಿಯಗಲನಿಕ್ಕಿ ತೊಱೆಯೆಯುಂ ಕುಂಟಿಣಿಯರ್ ಸೋಲ್ತ ಸವಿಗಂಡು ಬೇಟಕ್ಕೆ ಕಂಟಕರಾದೆ ವೆಂದು ನೀಕರಿಸೆಯುಂ ಪೞವೆಂಡಿರೆಮ್ಮ ದಿವಸದೊಳೀತಂ ಪುಟ್ಟದೆ ಪರಿಜುಂ ಪ್ರಾಯಮುಂ ಸುಸಿಲುಂ ಬಸನಮುಂ ಬಱುದೊಱೆಯೋದುದೆನೆಯಂ ಸಿರಿಯೊಡೆಯರ ಪೆಂಡಿರೆಲ್ಲಂ ಪರಿಚಾರಕಿಯರಂ ಕೂಡಿಕೊಂಡುಜ್ಜುಗಾಪಿನಜ್ಜರಂ ಪಿಡಿದುರುಳ್ಚಿ ಚೆನ್ನಸಂಕಲೆಯಿಂ ಪೆಡಗೈಗಟ್ಟಿ ಪಲ್ಲಿಲಿವಾಯೊಳ್ ಕ್ರೀಡಾಕಂತುಕಮಂ ತೂಂತಿ ಕಾಲ್ದುಡುಗೆಯಂ ಕಳೆದೀಡಾಡಿ ಕಣ್ದೋಱೆ ಮಾಸಿದ ಸೀರೆಯಂ ಮುಸುಂಕಿ ತೊೞ್ತಿ ರೊಳಗಣ ತೊೞ್ತಿರಾಗಿ ಬೀದಿವರಿಯೆಯುಂ ಜೈನೇಯರ್ಜಿನಪತಿಯೆ ದೈವಮೆಂಬ ನಂಬುಗೆಯೆ ಸಾಲ್ವುದು ಪರಪುರುಷಪರಿತ್ಯಾಗವ್ರತಮಂ ಗುರುಗಳಂ ಬೇಡಿಕೊಂಡು ಬಿಸುಡಿಕೊಂಡಪ್ಪೆವೆಂದು ಮನಂದರೆಯುಂ ಲೋಭಗುಂಟಿಣಿಯರ್ ಗಾಯಿಲೆಯಪ್ಪ ಮಕ್ಕಳನೋವರಿಯೊಳ್ನೂಂಕಿ ಪಡಿಗೆತ್ತು ಪೊಡೆಕಟ್ಟಂಕಟ್ಟಿ ಮುಸುಂಕಿಟ್ಟು ಕುಳ್ಳಿರೆಯುಂ ಆಕೆಗಳ ಕೊಯ್ದಿಕ್ಕಿದ ಕುರುಳ್ಗಳಿಂ ತುಂಬಿಯ ಬಣಂಬೆಯನೊಟ್ಟಿದಂತಾಗೆ ಕಡಿದಿಕ್ಕಿದ ಬೆರಲ ಕಂಡಿಕೆಗಳಿಂ ಪಸಿಯರಸಿನದ ಕೊಂಬನುಡಿದು ಸುಣ್ಣಂದೊಡೆದೀಡಾಡಿದಂತಾಗೆ ಕಿೞ್ತಿಕ್ಕಿದ ಕೆಂಬಲ್ಗಳಿಂ ದಾಳಿಂಬರ ಬಿತ್ತಂ ರಾಸಿಗೆಯ್ದಂತಾಗೆ ಕಿಱುವೆರಲ್ಗಳಿಂ ಕಚ್ಚುವ ಮುಖಮುಕುರಂ ಗಳ್ಚಂದ್ರಮಂಡಲಂ ಪಾವನ ಪೆಡೆಯಂ ನುಂಗುವಂತಾಗೆ ಬಯಲ್ದೊಱೆಯನೀಸುವ ಬಾಲೆಯರಿಂ ಸ್ತ್ರೀರಾಜ್ಯಮಂ ಸೂಱೆಗೊಂಡುಟ್ಟುದಂ ಸುಲಿವಂತಾಗೆ ಸ್ಮರಪರಿತಾಪಕ್ಕೆ ಪಕ್ಕಾಗಿ ಪೊಕ್ಕು ಪೊರಳ್ವ ನರಳ್ವ ನಾರಿಯರ ನೆರವಿಗಳಿಂ ಬನಂಗಳೆಲ್ಲಂ ಮದನ ವ್ಯಾಧನಾಱ ಡಿಗೊಂಡಡವಿಯಂತಾಗೆ ಕಮಳ ಕೇಸರದ ಕಿಸುವುಡಿಯಿಂ ಕೆಚ್ಚನಿರ್ದ ನೀರೊಳ್ಬಿರ್ದ ನೀರರುಹನಾಳಂಗಳನೊಟ್ಟಿಕೊಂಡು ಬೆಂಡುನೆಗೆದ ಬೆಡಂಗಿಯರಿಂ ತಣ್ಮಡುಗಳೆಲ್ಲಂ ನೆತ್ತರುಂ ಕರುಳುಂ ಸುರಿಯೆ ಕಾಮಕಿರಾತಂ ಕೊಂದಿಕ್ಕಿದ ಮಡುಗಳಂತಾಗೆ ತಂಪಿಂಗೆ ಪಿಂಗಲಾಱದಂಗನೆಯ ಪೂೞ್ದು ಕೊಂಡ ಪುೞಿಲೆಲ್ಲಂ ಚಿತ್ತಜಕೋರನರೆಯೆಱಿಗಿಱಿದು ದರಿಗೆಡಪಿದಂತಾಗೆ ಕಾಪೞಿದು ಪೊೞಲೊಳುಳ್ಳ ಬೆಲೆವೆಂಡಿರುಂ ಕುಲವೆಂಡಿರುಂ ಮರುಳ್ಗೊಂಡುದಂ ಕಂಡು ಪಾರ್ವರೆಲ್ಲರುಂ ಗೃಹಿಣೀಗೃಹಮುಚ್ಯತೇ ಎಂಬುದು ಗರತಿಯಿಲ್ಲದೆ ಗೃಹಮೆಲ್ಲಿತ್ತೆಂದು ಗಾರ್ಹಸ್ಥ್ಯಕ್ಕೆಳ್ಳುನೀರೆಱೆದು ಪರದರೆಲ್ಲಂ ಪೆಂಡಿರ್ಜೋಡಾಗೆ ಪರದಾಡುವುದರಿಂದೆಂದಂಗಡಿಯ ಪಡಿಯಂ ಕೆತ್ತು ತಳವರ್ಗಮೆಲ್ಲಂ ತಲೆಯಂ ಪೆಂಡತಿಯುಮಂ ಕಂಡುಪೋಲಮಿದೇಕೆಂದು ಕೈದುವನಿಂಬಿಟ್ಟು ಪುರಜನಮುಮಂ ನೆರಪಿಕೊಂಡು ಬಂದು ಸಮುದ್ರ ವಿಜಯಂಗೆ ಪುಯ್ಯಲ್ಚಿ ಮೆಯ್ಯನಿಕ್ಕಿ ತಂತಮ್ಮ ಮಕ್ಕಳಂ ಮುಂದಿಡುವುದುಂ ಆ ನೃಪಂ ನೋಡಿ ವಸುದೇವನ ದೇಹಮನಗೆವೊಯ್ದಂತೆಯುಂ ಪಱಿದು ಪತ್ತಿಸಿದಂತೆಯುಂ ಮೊಕ್ಕಳಮೀ ಮಕ್ಕಳೇಕಾದುವೆಂದು ಬೆಕ್ಕಸಂಬಟ್ಟು ನೋಡೆ ನುಡಿಯಲವಸರಂಬಡೆದು ಬಳಸಿರ್ದ ವಂದಿವೃದಂಮುಂ ಸೇವಕಸಮೂಹಮುಂ ಎಮ್ಮೆಮ್ಮ ಪುತ್ರಪೌತ್ರಾದಿಗಳು ಮಿನ್ನರೆಂದಱಿವುದೀಪುರದ ಪುಣ್ಯಾಂಗನೆಯರುಂ ಮನಸಿಜನಂತೆ ಮನದೊಳಿರ್ಪ ವಸುದೇವನ ರೂಪು ಗರ್ಭದೊಳ್ಬಿಂಬಿಸಿ ಬಿತ್ತಾದಂ ತೆಯುಮಚ್ಚೊತ್ತಿದಂತೆಯುಮಾತನಂತಪ್ಪ ಪುತ್ರರಂ ಪಡೆವರೊತ್ತೆಯ ಗೂಂಟಂ ಸೊಡರಿಟ್ಟೇಱುವಂತೆರವಿದ ಸಿರಿಯನಱಿದು ಪೊೞಲೊಳಂ ಪೊಱವೊೞಲೊಳಂ ಬೀದಿಯೊಳಂ ಅಂಗಡಿಯೊಳಂ ಕೇರಿಯೋಳಂ ಸೂಳೆಗೇರಿಯೊಳಮೆಲ್ಲಿ ನೋೞ್ಪೊಡಂ ಕಾಮದೇವನೆ ಬವಣಿಗೆ ಬಂದಂತೆ ಬರ್ಪ ವಸುದೇವನನೆ ಕಾಣಲಕ್ಕುಮಿಲ್ಲಿಂ ಮೇಲೆ ದೇವಱಿವಿರೆಂದು ಸಿರದಿರ್ಪುದುಮರಸನವರಂ ಸಂತಸಂಬಡೆ ನುಡಿದು ವಿಸರ್ಜಿಸಿ ವಸುದೇವಾಂಗಳೆ ಬೞಿಯಟ್ಟಿ ಬರಿಸಿ ಊರುಬ್ಬೆ ಯಾದ ತಮ್ಮ ನಗುರ್ವಿನುರ್ವಿಂಗುಬ್ಬೆ ಗಂಬಟ್ಟುಬ್ಬರವರಿದ ಸೊಬಗಿಂಗೆ ಸಂತೋಷಂಬಟ್ಟು ತೆಗೆದು ತೞ್ಕಯಿಸಿ ತೂಪಿಱಿದು ಕೆಲದೊಳ್ಕುಳ್ಳಿರಿಸಿ ಬಾಯ್ವಾಯೊಳ್ ತಂಬುಲಮನಿಕ್ಕಿ ಮೆಲ್ಲನಿಂತೆಂದಂ

ಪೃಥ್ವೀವೃತ್ತಂ || ಇದೇಕೆ ಮುಖಚಂದ್ರನೀಪಗಲ ಚಂದ್ರನೊಂದಂದಮಾ
ಯ್ತಿದೇಕಧರಪಲ್ಲವಂ
ವಿಧುರಪಲ್ಲವಚ್ಛಾಯಮಾ
ಯ್ತಿದೇಕನುಜ
ನಿನ್ನ ಮೇಯ್ ಪೊಸೆದ ಪೂವಿನಂತಾದುದಾ
ನಿದಂ
ಬಗೆದೆನಾಡುವೋ ಬಿಸಿಲೊಳೀಗಳಬ್ಜೇಕ್ಷಣಾ      ೩

ಇಂತು ತೊೞಲ್ದಲ್ಲದೆ ನಿನ
ಗೆಂತಿರದೇ
ನಮ್ಮ ನೀರೊಳಂ ನೆೞಲೊಳಮೊ
ಲ್ದಂತೆಮೊಲುಟ್ಟುಂ
ತೊಟ್ಟುಂ
ಸಂತಸದಿಂ
ಪೂವಿನಂತೆ ಸುಖಮಿರಲಾಗಾ   ೪

ವ|| ದೇವಕುಮಾರರುಂ ರಾಜಕುಮಾರರುಮಾರ್ಕಂಡರಾರ್ಕೇಳ್ದರೆಂಬತಿರವೇೞ್ದಕುಂತಿಟ್ಟನೆ ತಿರಿದು ಬಟ್ಟಸರಿವಂದೊಡೆ ಮೆಯ್ಯಬಣ್ಣಮುಂ ಪುಣ್ಯಮುಮರಿಸಿನದ ಪಿಂಜಿಯಂತೆ ಪಾಱಿಪೋಕುಂ ಲೋಕದ ಕಿಸುರುಂ ಕಣ್ಣಿಂಜಲುಂ ಪತ್ತುಗುಮಿನ್ನೆಂದುಂ ಮನೆಯ ಪೊಸಂತಿಲಂ ಪೊಱಮಡಲಾಗದು ನೀನೆತ್ತಲಾನುಮಲಸಿಕೆಯಾದೊಡೆ

ಹರೆಯದೊಳಾರುಮಾಡರೆ ಗೃಹಾಂಗಣದೀರ್ಘಿಕೆಯಲ್ಲಿ ಹಂಸನಂ
ತಿರೆ
ಗೃಹಮೇಣಿಕಾಕುಟಿಲ ನಿಃಕುಟದಲ್ಲಿ ವಸಂತರಾಜನಂ
ತಿರೆ
ತೊಳಪೀ ಸುವರ್ಣಕೃತಕಾಚಳ ಮೇರುವಿನಲ್ಲಿ ದೇವನಂ
ತಿರೆ
ವಸುದೇವ ನೀನೆಸಗು ನಿನ್ನ ವಿಹಾರವಿನೋದಮಂ ಗಡಾ   ೫

ವ|| ಎಂದು ಸಾಭ್ರಾತಸುಭಗ ಸಹಜಸ್ನೇಹದಿಂ ನಿಜಹೃದಯಮುಮಂ ಮಱಸಿ ತಮ್ಮ ನುಮಱಿದೊಡೆ ನೋಗುಮೆಂದಾರುಮಱಿಯದಂತೆ ಸಕಳಸುಖ ಪರಿಕರಂಗಳಂ ಸಲಿಸಿ ಮನಮಂ ಸೆಱೆಗೆಯ್ವಂತೆ ಸುಖದೊಳ್ ಸೆಱೆಗೆಯ್ದನಾತನು ಮಣ್ಣನಿಕ್ಕಿದಗುೞುಮಂ ದಾಂಟದೆ

ಮನೆಯೊಳಗಿರ್ದು ಪುರಸ್ತ್ರೀ
ಜನಮುಮನಾತ್ಮ
ಪ್ರಭಾವದಿಂದಲರಸಿದಂ
ಘನಪಟಲದ
ಪೊರೆಯೊಳಗಿ
ರ್ದಿನನಲರಿಸುವಂತೆ
ಕಮಳಿನೀ ಕಾನನಮಂ

ವ|| ಅಂತಿರ್ಪುದುಮೊಂದು ದಿವಸಂ

ಈಳೆಯ ಸಾಂದುಮಂ ಪಸಿಯ ಕತ್ತುರಿ ತೀವಿದ ಪೊನ್ನ ಸಿರ್ಪುಮಂ
ಗಾಳಿಯುಮಣ್ಣದಂತಡರೆ
ಕೆಂದಳಿದಿಂದಮೆ ಮುಚ್ಚಿಕೊಂಡು ಮಾ
ಚಾಳಿಕೆಯೆಂದು
ನಕ್ಕು ನಡೆಗೊಳ್ವವೊಲಂತವುರಕ್ಕೆ ಪೋಪಮಾ
ಚಾಳೆಯನೊರ್ವಳಂ
ಚಟುಳ ಚೇಟಿಕೆಯಂ ವಸುದೇವವಲ್ಲಭಂ   ೭

ವ|| ಹಿಡಿದು ಹಿಟಕವಾಡೆ ಚೇಟಿಕೆಯೆಂದಳ್ ಸೆಱೆಯೊಳಿರ್ದುಂ ವಿಕಾರತಮನೊಂದಂ ಕೋಡಗಂಗಳೊಳ್ಕಂಡೆನೊಂದಂ ನಿನ್ನೊಳ್ಕಂಡೆನೆನೆ ಕುತ್ತುವಡೆದಂತೆ ನೊಂದು ಪೇೞೆದೇನೆಂಬುದುಂ ನಂಬಿಸಿ ಬೆಸಗೊಳುತ್ತುಮಿರೆ ಪೇೞದಿರೆ ಪೊಣರ್ವಕ್ಕಿಯುಂ ಪದ್ಮದಲರುಮನೞಲಿಸಲೆಂದು ಕೞ್ತಲೆಯಂ ತೊಡೆವಂತೆ ಕಯ್ಯ ಕತ್ತುರಿಯಂ ಕೊಂಡವಳ ಮೊಲೆಯಂ ಮೊಗಮುಮಂ ತೊಡೆದು ನೀಮರಸಿಗಟ್ಟಿದ ಕತ್ತುರಿಯನಿವಳ್ ತೋಳ್ತೊಡೆಯೊಳ್ತೆಡೆದಳೆಂದರಸರ್ಗೆ ಪೇೞ್ವೆವೆನೆ ಭಯಮುತ್ತು ತೊೞ್ತು ಮಲಹಾರಿಯದ ತೊೞ್ತಿನಂತೆ ನೀರಾಗಿ ಕಾಲ್ವಿಡಿದಾನೆಂದುದಂ ಪೇೞ್ವೆ ನೀನೀ ಪೊೞಲ ಪೆಂಡಿರೆಲ್ಲರಂ ಮಱೆದು ಮಱುಗಿಸಿ ಮರುಳ್ಗೊಳಿಸಿ ನಿಚ್ಚಲ್ಮಚ್ಚುಗೊಳಿಸಿದುದಂ ಕಂಡು ಪೊೞಲಿಚರೆಲ್ಲರುಮೊಲ್ಲನುಲಿದು ಮೊರೆಯಿಟ್ಟು ನಿನ್ನ ಮೊಱೆಗೆಟ್ಟ ನಡೆವಳಿಯನಾಕ್ಷೇಪಿಸಿ ನಿಮ್ಮಣ್ಣಂ ಮುನಿದು ನಿನ್ನನೀನೆವದಿಂ ಸೆಱೆಯಿಕ್ಕಿದನೆಂದು ಮತ್ತಮಿಂತೆಂದಳ್

ನಿಸ್ತ್ರಿಂಶ ನಿನ್ನ ಕತದಸ
ಮಸ್ತ್ರಾಗ್ನಿಯೊಳಗ್ಗಿ
ವಿರಹಪಾಂಡುರಿತಪ್ರೌ
ಢಸ್ತ್ರೀಯರಗ್ನಿ
ಶೋಭದ
ವಸ್ತ್ರದವೋಲ್
ಜಲಕನಾದರೇನಿದನಱಿಯಾ  ೮

ವ|| ಎಂಬುದೆಮೆರ್ದೆ ಪವ್ವನೆ ಪಾಱೆ ಬೆಱಗಾಗಿ ನೋೞ್ಪೆನೆಂದರಮನೆಯಂ ಪೊಱಮಡಲಡಿ ಯಿಡುವುದುಂ ಮಿಡುಕಲೀಯೆಮೆಂದು ಮೊಗಮುಮಂ ಕಟ್ಟಿಗೆಯುಮನಡ್ಡಲಿಟ್ಟು ದೌವಾರಿಕರ್ ನಿವಾರಿಸೆ ಸಿಗ್ಗಾಗಿ ಸುಗ್ಗಿಯಂತೆ ನುಸುಳ್ದುಬನಕೆ ಬಂದು ತನ್ನೊಳಿಂತೆಂದಂ

ಇರು ಮಟ್ಟಮೆಂದು ತಾಂ
ಪ್ಪರಿಸಿದೊಡನಿರೆನೆ
ಮುಚ್ಚುಮಱೆಯೇಕೆಯೊ
ರ್ಕರೆ
ನಾಲಗೆ ನೃಪರೆರ್ದೆ
ರ್ತ
ರಿಯೆಂಬುದು ಜಳಕನಾದುದೆಮ್ಮಗ್ರಜನಿಂ

ತಾಂಗಡಮಿಕ್ಕುವಂ ಸೆಱೆಯೊಳಾಂ ಗಡಮಿರ್ಪೆನಿದಕ್ಕುಮಕ್ಕುಮೆ
ನ್ನಂಗಡ
ಕಂಡನೀ ನೆಗೞ್ದ ತಪ್ಪದನುಳ್ಳೊಡೆ ತಪ್ಪೆ ಕಲ್ಪಿಸ
ಲ್ತಾಂ
ಗುರುವಲ್ಲನೇ ಮುನಿದನೀ ಪುರುಳಿಲ್ಲದ ಪೌರರೂಳ್ದೊಡ
ಣ್ಣಂಗಡ
ಮುಂಎ ತಪ್ಪನಿತುಮೆಮ್ಮದು ಸೈರಣೆ ತಮ್ಮದಲ್ಲದೇ    ೧೦

ಕೂರ್ಮೆಯನೊಕ್ಕು ನಿರ್ಮಳರೊಳಿಲ್ಲದ ದೋಷಮನಿಟ್ಟು ಕಟ್ಟ ಸೌ
ಧರ್ಮಿಕೆಗೆಟ್ಟು
ದೂಱಿ ಪೆಱರೆಂದುದುಗೇಳ್ವುದುಮಗ್ರಜಂಗಿದೇಂ
ಧರ್ಮಮೆ
ಕೆಮ್ಮಗೆಂದನಿದನಾತ್ಮ ಮಹೋದಯದೊಳ್ಸಹೋದರಂ
ಘರ್ಮಮರೀಚಿಯುಂ
ಬೆಳಗಲಿತ್ತನೆ ಬಾಳಸುಧಾಮರೀಚಿಯಂ   ೧೧

ತಮ್ಮರಸೆಂಬುದಂಬುಧಿ ಪರೀತಮೆ ಮಾಣೆಯ ತಮ್ಮಿದೊಂದು ದೇ
ಶಮ್ಮಹಿಗುಳ್ಳನಾದುದೆ
ವಿದೇಶ ವಿಹಾರಮನೆಯ್ದೆ ಮಾಡುವೆಂ
ಸಮ್ಮದದಿಂ
ಸ್ವದೇಶ ಪರದೇಶ ವಿಶೇಷಣಮುಂಟೆ ಮನ್ಮಥಂ
ಗಮ್ಮಳಯಾನಿಳಂಗಮೆನಗಂ
ಮಧುಗಂ ಧರಣೀತಳಾಗ್ರದೊಳ್ ೧೨

ದೂಸಕರ ದೂಱುಗೇಳ್ದುಂ
ಸಾಸಿಗನೆನ್ನಳವನಱಿದುಮಱಯದೆ
ಪಿರಿದುಂ
ದೋಸಿಗನಾದೊಡೆ
ಕೊಲ್ಗುಂ
ಪೇಸುವನಲ್ಲಂ
ಸಮುದ್ರವಿಜಯನಜೇಯಂ    ೧೩

ವ|| ಸಾವಂತಪ್ಪ ಕನಸುಗಂಡೊಡೆರ್ದು ಕುಳ್ಳಿರ್ಪುದುಂ ಕಂಪುಮನೆನ್ನುಮಂ ಸೆಱೆಗೆಯ್ವೊನಾ ವನೆಂದು ಬೇರ್ನೆಲಕ್ಕೆವೋಪುದನೆ ನಿಶ್ಚೈಸಿ ವಸುದೇವನಿರ್ದನನ್ನೆಗಂ

ಪೂಡುವ ಕುದುರೆ ಬೆಸಂಗೊಂ
ಡೋಡುವ
ತೇರ್ಗೊಂದೆ ಗಾಲಿ ಪೊಡೆವಂ ಪೆಱವಂ
ಕೇಡಿಂಗಲಸಿದೊಡಕ್ಕುಮೆ

ನೋಡಿರೆ
ರವಿ ಕೆಡೆದನಸ್ತಗಿರಿ ಮಸ್ತಕದೊಳ್  ೧೪

ಪುಟ್ಟುವಿನಂದಗಿ ಬಸದಿಯ
ಬೆಟ್ಟುಗಳೊಳ್ಮೊೞಗೆ
ಸಂಜೆವೇಳೆಯ ಪಱೆಗಳ್
ತೊಟ್ಟನೆ
ತೀವಿದ ಗೞಿಗೆಯ
ಬಟ್ಟಲವೋಲ್
ದಿನಪನೞ್ದನಪರಾಂಬುಧಿಯೊಳ್        ೧೫

ವ|| ಮತ್ತಮಿನಿಸಱಿಂ

ಸಾವಿತ್ರದ್ಯುತಿ ದಾವ ಶಿ
ಖಾವಳಿ
ಪರಿದಳ್ಗೆ ಪೆಱಗೆ ಕರಿಕೆರ್ದವೊಲೇಂ
ತೀವಿದುದೊ
ಭುವನತಳಮಂ
ಗೋವಳಗೞ್ತಲೆ
ಸಮಸ್ತಭುವನಾತ್ಮಕಮಂ    ೧೬

ವ|| ಅಂತುಮಲ್ಲದೆ

ಪಸರಿಸಿದುದು ಕೞ್ತಲೆ ದೆಸೆ
ದೆಸೆಗಂ
ವ್ಯೋಕಾರನಂತೆ ಕಾಲಂ ಕಡಲೊಳ್
ಬಿಸುಪಡರ್ದ
ತಪನತಪ್ತಾ
ಯಸ
ಪಿಂಡಮನರ್ದೆ ನೆಗೆದ ಪೊಗೆಯೆಂಬಿನೆಗಂ       ೧೭

ಚಳಚಕ್ರಾಂಕಮರಾಳ ಮೇಘಪಟಳ ಶ್ರೀವೃದ್ಧವೇಶ್ಯಾಂಗನಾ
ಪಳಿತಕ್ಕಿಕ್ಕಿದ
ಕರ್ಪು ಸಾರಸರಸೀ ನೀಳಾಬ್ಜ ದೃಗ್ಜಾಳಕ
ಜ್ಜಳಪಂಕಂ
ಪಟುಭೃಂಗಯಾಚಕ ಚಮೂ ಮೂರ್ತಾಂಬುಜಾಮೋದದಾ
ನಳಯೋತ್ಪಾದಕರ
ಪ್ರದೋಷದ ಯಶಂ ಪೆರ್ಚಿತ್ತು ಭೀಮಂ ತಮಂ       ೧೮

ವ|| ಅಂತು ಪುಡಿಗತ್ತುರಿಯೆಂದು ಪಿಡಿಕೈಸಿ ಪೂಸಲೂಮ ಪಾಸಿ ಮೊಟ್ಟೆಗಟ್ಟಲುಂ ಮಿಹಿರಂಗಮಿಂದುಗಂ ಗುದ್ದಲಿಗೊಂಡಗುೞ್ದು ಪೊಱಗಾಗಲುಮಪ್ಪ ಕಾಳದ ಕೞ್ತಲೆಯೊಳ್ ವಸುದೇವನರಮನೆಯ ಮದಿಲಂ ವಿದ್ಯಾಧರಕರಣದಿಂ ಪೊಸಂತಿಲಂ ದಾಂಟುವಂತೆ ದಾಂಟಿ ಪೊೞಲಂ ಪೊಱಮಟ್ಟು ಪೊಱವೊೞಲೊಳಗನೆ ಕಿಱಿದೆಡೆಯಂ ಪೋಗೆವೋಗೆ

ಶಿಖರಿಣಿ || ನಿಶಾಚರ್ಯಾದಾನಂ ಶಬರ ಶಿರಮಾಕ್ರೋಶಮುಖರಂ
ಕೃಶಾನುರ್ವೀದಾಹಶ್ರಮ
ಶಬಮಯೋದ್ರೇಕ ಪಿಶುನಂ
ಪಿಸಾಚಪ್ರೌಢಸ್ತ್ರೀ
ರಸವತಿ ಸುನಿಷಖಾದ್ಯಸದನಂ
ಶ್ಮಶಾನಂ
ದೃಷ್ಟವ್ಯಂ ನೃಪಸುತನ ಕಣ್ಗಾದುದಿದಿರೊಳ್ ೧೯

ವಿಚಳದ್ಬೇತಾಳ ರಾಳಂ ಶಬರಭರವೃತಂ ಧೂಮದಲ್ಲೀವಿಕೀರ್ಣಂ
ಶುಚಿರಕ್ತಾಶೋಕಸಕ್ತಂ
ಶ್ವಗಣಮೃಗಮಯಂ ಮುಗ್ಧಪೈಶಾಚಕೇಶ
ಪ್ರಚಯಂ
ದೀಪ್ರಾಗ್ನಿ ಭಾಗೋನ್ಮುಖ ಮಣಿಫಣಿಭೂತೋಗ್ರ ಮಾತಂಗಮುತ್ತುಂ
ಚಿತೋದ್ಯತ್ಕಾಷ್ಟಮಾಯ್ತಾ ಪಿತೃವನವನಮಾಯ್ತೂಷ್ಮ ಮತ್ಯಂತ ಭೀಷ್ಮಂ       ೨೦

ತೆರೆತೆರೆಗೊಂಡು ಬಾನ್ಗಡರ್ವ ಕರ್ವೊಗೆ ಕರ್ಗಿದ ನೀರೆಕೊರ್ವುವಂ
ತಿರೆ
ವಿಚಳಚ್ಚಿತಾನಳ ಶಿಖಾವಳಿ ವಿದ್ರುಮವಲ್ಲಿ ಪರ್ವುವಂ
ತಿರೆ
ತಲೆಯೋಡಿನೊಳ್ಪೊಳೆವ ಪಲ್ಗಳೆ ಸಿಪ್ಪಿನ ಮುತ್ತು ತೋಱುವಂ
ತಿರೆ
ಪರೆದಾ ಪರೇತವನಮಂಬುಧಿಯಂತಿರೆ ಭೀಕರಂ ಕರಂ     ೨೧

ಅಲರ್ವರಲೊಕ್ಕ ಪಲ್ಪರೆಯದಿರ್ದಳಿಯಿರ್ದಿಲ ರಾಸಿ ಮೂಗುಗೋ
ಗಿಲೆ
ಕರಿಕೊಳ್ಳಿ ಕೆಂದಳಿರೆ ಕೇಸುರಿ ಕಾಮಶರಾಗ್ನಿಯೊಳ್ಪೊರ
ಳ್ದಲಸ
ವಿಯೋಗಿಯುಂ ಪೊಡರ್ದು ಬೇವ ಶಬಾವಳಿಯಾದವಸ್ಥೆಯೊಳ್
ಕಲಸಿ
ಸಿಡಿಲ್ದು ಬಲ್ಮಿಡಿಗಳಿರ್ದ ಪರೇತವನಾಂತರಾಳದೊಳ್     ೨೨

ಪೊಗೆವ ಚಿತಾಗ್ನಿ ಪೊತ್ತುವ ಚಿತಾಗ್ನಿ ಪೊದೞ್ವ ಚಿತಾಗ್ನಿ ಬಾಂಬರಂ
ನೆಗೆವ
ಚಿತಾಗ್ನಿ ನಂದುವ ಚಿತಾಗ್ನಿ ಕನಲ್ವ ಚಿತಾಗ್ನಿ ಗಾಳಿಯಿಂ
ಮಗುೞ್ವ
ಚಿತಾಗ್ನಿ ಮಗ್ಗುವ ಚಿತಾಗ್ನಿ ಕೞಲ್ವ ಚಿತಾಗ್ನಿಯಲ್ಲಿಗ
ಲ್ಲಿಗೆ
ಪುದಿದಿರ್ದುವಾ ಮಸಣದೊಳ್ ವಿಳಯಾಗ್ನಿಯೆ ಬಿಟ್ಟ ಬೀಡುವೊಲ್    ೨೩

ತಾಪಸ ಭದ್ರವಾಂಬುಧಿಯೆನುಣ್ಬುರಿ ಬಾಡವೆ ವಹ್ನಿ ಬೇಗಮಿ
ಲ್ಪಾಪೆಯ
ಬೇಗೆ ಪತ್ತಿ ನೆಲನಂ ಸುಡುವಗ್ನಿ ದವಾಗ್ನಿ ಕೊಳ್ಳಿಗಳ್
ಪೋಪ
ಮರುಳ್ಗಳಂ ಪಿಡಿದು ಪಾಯ್ವ ಸಿಡಿಲ್ಪಲವಾಗೆ ವಹ್ನಿ ಮೇ
ಳಾಪಕವಾದವೊಲ್
ಪ್ರತಿಭಯಂ ಪ್ರತಿವಾಸರಮಾ ಶಬಾಲಯಂ ೨೪

ಉರಿದುದು ಚಿತಾಗ್ನಿ ನೆಲದಡಿ
ವರೆಗಂ
ಬಾಂಬರೆಗಮವರ ಪೆಣನೆಯ್ದುವ ವೋಲ್
ನರಕಂಬೊಕ್ಕರುಮಂ
ಸುರ
ಶರಣಂಬೊಕ್ಕರುಮನಳುರಲವ್ವಳಿಸುವವೋಲ್
        ೨೫

ನೆಗೆದುರಿಪಿದೆಗೆಯ ತಲೆಯಂ
ಮೊಗವಿಡೆ
ಮರುಳಲ್ಲಿ ಮೊೞಗೆ ಪೆಣವಱೆ ಭೇತಾ
ಳಗಣಮಗಿದಾಡೆ
ರಕ್ಕಸ
ವಗರನವಾಡಿದುದು
ನೋಡೆ ಸೂಲದ ಪೆಣಗಳ್        ೨೬

ನಾಲಗೆಯಾಡಿಸಿತುಂ ಕೀ
ಲಾಲಮನುಗುೞುತ್ತೆ
ಶುಷ್ಕತನುಬೇತಾಳಂ
ಸ್ಥೂಲಶಿರನಾರ್ದು
ಕುಣಿದಂ
ಸೂಲದ
ತಲೆ ಕುಣಿವ ತೆಱದೆ ಕುಣಪಾಲಯದೊಳ್     ೨೭

ಪಡಿದಡಸಿ ನುಂಗಿ ಪಸಿದಡ
ಹಡಿಸುವ
ಬೇತಾಳನುರಿವ ಪೆರ್ವೆಣನಂ
ನ್ನೊಡಲಸ್ಥಿಕಾಷ್ಠದಿಂ
ಪೆಣ
ತೊಡವೆಂದುದು
ಬಸಿಱನೊಱಸಿ ಹಾಹಾಯೆನುತುಂ    ೨೮

ಇಡಿದು ಕೊರಲ್ವರೆಗಂ ಪೂ
ೞ್ದೊಡೆಮಸುವಂ
ಕಳೆಯದಿರ್ಪ ಕಡುಗಳ್ಳರನೇಂ
ಪಿಡಿದುರ್ಚಿಕೊಂಡರೋ
ಕೂ
ಗಿಡೆಯಿಡೆ
ನರಕಕ್ಕೆ ನಾರಕರ್ ಪಿತೃವನದೊಳ್         ೨೯

ಅಸುವಿರ್ದಂತಿರೆ ಸೂಲಂ
ಬಸಿದಸುವಂ
ಪಿಡಿದು ತೆಗೆದ ಕಲಿಗಳುಮಂ
ಲ್ಮಸೆದು
ತಿನಲ್ಮಸಗುವ
ಕ್ಕಸರುಮನುಗ್ಗಡಿಸಿ
ತಸ್ಕರರ್ ಪಿಡಿದುಯ್ವರ್ ೩೦

ಅರೆಮುಗಿದಿರ್ದ ಕಣ್ ಮುರಿದ ಮೀಸೆ ತುರುಂಬಿದ ಜಾಜಿಪತ್ತೆ
ತ್ತರಿಸಿದ
ಗಡ್ಡಮಿಟ್ಟ ತಿಲಕಂ ಬಳಪಂದೊಡೆದೋಲೆ ದೇಸೆಯಂ
ತಿರೆ
ಸುಲಿಪಲ್ ತಳತ್ತಳಿಸಿ ತುಂಬುಲಮಂ ಪೊಳಕುತ್ತೆ ರಾಗದಿಂ
ಪರಕೆಗೆ
ಕೊಟ್ಟ ಪಂದಲೆಯಗುಂದಲೆಯಾದುದು ಬೀರನಣ್ಮಿನಾ   ೩೧

ತೊಡೆದು ಸುಗಂಧಮಂ ನನೆಯ ಜಾದಿಯನೆತ್ತಿ ತುಱುಂಬಿ ಪಾಲ್ಗಳಂ
ಕುಡಿಯಿಸಿ
ಕೂಡೆ ಕಾಸಿ ಬಿಸುಸುಯ್ಯೊಳೆ ತನ್ನನೆ ನೋಡಿ ಜೀವಮಂ
ಪಿಡಿದಿನಿಸಿರ್ಪ
ಶೂಲದವನಂ ನಡೆನೋಡಿಯೆ ಮೀಸೆದಿರ್ದುತುಂ
ಮಡಿದೆಲೆಯಂ
ನಖಾಗ್ರದೊಳೆ ಕಣ್ಬನಿಯಂ ಸಿಡಿಯುತ್ತೆ ನೀಡಿದಳ್        ೩೨

ಕಿವಿಗಿನಿದಾಗೆ ತಮ್ಮ ಕಳವಂ ಕತೆಮಾಡಿ ಮರುಳ್ಗೆ ಪೇೞ್ದು ಪೊಂ
ಗುವ
ರಸಮಗ್ಗಳಂ ಬಸಿಯೆ ತಂಬುಲಮಂ ಪಿಡಿದಿಕ್ಕಿ ಪಿಂಡಿ ತೋ
ಱುವ
ತಿನಲೆಂದು ಸಾರ್ದುಸಿರನಾಲಿಸೆ ಸೋಲ್ವಿನಮಿಂಪು ಸೂಸೆ ಪಾ
ಡುವ
ಪಿಶಿತಾಶರಂ ಪಿಡಿದು ಕಾಡುವ ಸೂಲದ ಬೀರರೊಪ್ಪಿದರ್  ೩೩

ಅಂಗಡಿಯಾನೆಯೆ ಬೀದಿಯ
ಸಿಂಗಮೆ
ಲಲನೆಯರ ಕಣ್ಣಪುಣ್ಯಮೆ ನಿನ್ನಂ
ಜಂಗಮ
ವಿಷಮಂ ಪಿಡಿದಾ
ವಂಗಡ
ಪಿತೃವನಕೆ ತಂದು ತುಡಿಸಿದ ಬಂಟಂ          ೩೪

ಊಡಿದೆನೋದಲಿಟ್ಟೆನುಡಕಲ್ವುದುಮಣ್ಣನ ಕೂಸುದಂದೆನಾಂ
ಬೇಡೆನೆ
ಮೀಱಿ ಕಳ್ಳರೊಡನಾಡಿಯೆ ಪೆತ್ತ ಬಸಿರ್ಗೆ ಸಂತಸಂ
ಮಾಡಿದೆಯಿಂದಿದೇಂ
ಮಗನೆ ಪಣ್ಣನೆ ನುಣ್ಮೊಗದಲ್ಲಿ ಮೀಸೆಗಳ್
ಮೂಡದ
ಮುನ್ನ ನಿನ್ನ ಪೆಗಲೊಳ್ ಪೊಸಸೂಲಮಿದೆಂತು ಮೂಡಿತೋ    ೩೫

ವ|| ಎಂದು ಬಾಯಂ ಬಡಿದು ಬಸಿಱಂ ಬಡಿದುಕೊಳ್ವ ತಾಯ್ಗೆ ತರಳನಿಂತೆದಂ

ಪಣವುಂಡೆಂ ಬಂದಿಯೊಳ್ಬಾಲಕನೆ ಪಲಗೆ ಜೂಜಾಡಿದೆಂ ಸೂಳೆಗೆಯ್ದೆಂ
ಪಣಿದಂಬೊಯ್ದೆಂ
ತೊೞಲ್ದೆಂ ಪಿರಿಯ ಕಳವುಮಂ ಕಳ್ದೆನಿಂದಣ್ಮಿ ಸಾಯ
ಲ್ಕಣಿದೆಂ
ಪೊತ್ತತ್ತು ಸೂಲಂ ಬಲದ ಪೆಗಲೊಳಾಂ ಬೀರನಾದೆಂ ಮರುಳ್ನಾ
ಯ್ಗುಣಿಸಾದೆಂ
ಮೆಚ್ಚಿದಂತುಳ್ಳವರನೆ ಪಿಡಿದುಂಡಪ್ಪೆನೆಂದುರ್ವುತಿರ್ದಂ    ೩೬

ವ|| ಇಂತಿರ್ಪ ಮಗನ ನೆತ್ತರ್ಗೆ ಸಾರ್ವನಾಯಂ ನರಿಯುಮಂ ಸೋವುತುಂ ರಕ್ಕಸರ್ಗೆ ಕೆಯ್ಮುಗಿಯುತ್ತುಂ ರಕ್ಕಸಿತಾಯ್ ಕಾದುಕೊಂಡಿರ್ಪುದಂ ನೋಡುತ್ತುಂ ಪೋಗೆವೋಗೆ

ತಲೆಕೆಳಗಾಗಿ ನೇಲ್ವುದು ಶಬಾವಳಿ ಬಲ್ವಲ ಪಿಂಡು ಬಲ್ಗರುಳ್
ನುಲಿಗಳೆೞಲ್ಕೆ
ಬೀೞಲ ಬೞಲ್ಕೆ ಕರಂ ಕುಱಿತೊಕ್ಕುತಿರ್ಪ ಪಂ
ದಲೆಗಳೆ
ಜೇನಪುಟ್ಟಿಯೆನೆ ಕೊರ್ವಿದ ಕೊಂಬುಗಳಲ್ಲಿ ಪಕ್ಕೊವೋಲ್
ಚಿಲಿಮಿಲಿಯೆಂದುವೆರ್ದ
ಕೊಲೆಗಳ್ಕುಣಪಾಲಯದಾಲದೋಳಿಯೊಳ್      ೩೭

ಸೂಲಮನೆತ್ತಿ ಹೂಂಕರಿಪ ಭೈರವಿ ಕತ್ತಿಗೆಗೊಂಡು ಬರ್ಪ ಮಾ
ಕಾಳಿ
ಕುಕಿಲ್ವ ಶಾಕಿನಿ ಶಬಾಳಿಗೆ ನಾಲಗೆಗಿೞ್ತುಕೊಳ್ವ ಬೇ
ತಾಳರೞಲ್ದು
ಪಲ್ಮರೆವ ಪೂತನಿ ಪೂತ್ಕರಿಸುತ್ತೆ ಪೊತ್ತುಕಂ
ಕಾಳಮನತ್ತಲಿತ್ತ
ಪರಿದಾಡುವ ಖಂಡ ಕಪಾಳಿ ಕಾಡಿನೊಳ್      ೩೮

ಬಾಯ್ದೆಱೆಯುತ್ತೆ ತೂಂಕಡಿಪ ಕಿಂಕಿಮ ಬೇವವರಂಕಜಾಳಮಂ
ಪೊಯ್ದು
ತಳಂಗಳಿಂ ಪೊಸೆದು ಮುಕ್ಕುವ ರಕ್ಕಸರಿರ್ದ ತೋಱಿನ
ತ್ತೆಯ್ದುವ
ಕಾಳ ರಕ್ಕಸಿ ಶುಭಂಕರಿ ಕತ್ತಿಗೆಯಿಂದೆ ಗಂಟಲಂ
ಕೊಯ್ದು
ಕಪಾಳದಿಂ ರುಧಿರಮಂ ಪಿಡಿದೀಂಟುವ ಭೂತಮದ್ಭುತಂ         ೩೯

ಮರುಳೆತ್ತಿತ್ತೊಂದು ಬಿಕಕಂ ಮುಱಿದು ಮರುಳ ಮುಂಗಯ್ಯುಮಂ ಬಿಕ್ಕುಮಂ ನಿ
ಬ್ಬರಿಬಾಯೊಳ್ಪೊಕ್ಕೊಡಂ
ಕಂಡಿಸುವ ಸಿಡಿದ ಬೇತಾಳನಂ ಮಚ್ಚದಿಂ ಚೆ
ಚ್ಚರದಿಂದಂ
ಕೞ್ತು ಬೇತಾಳನ ತಲೆಯನೆ ನಕ್ತಂಚರಂ ತಿಂದ ನಕ್ತಂ
ಚರನಂ
ನುಂಗಿತ್ತು ಭೂತಂ ಬಹುವಿಶಸನಮೇಕಾರ್ಥಲೋಲಾತಿರೇಕಂ    ೪೦

ಕಬಳಿತವಲ್ಲೂರಂ ಗಿಳಿ
ತಬುಕ್ಕಮಾ
ಪೀತರಕ್ತಮೇಂ ತಿಂದುದೊ
ಸ್ತಬೃಹನ್ಮಸ್ತಿಷ್ಕಂ
ತಾ
ಬಾಯ ಮಾಂಸವನೆ ತೋಡಿ ರಾಕ್ಷಸಲೋಕಂ      ೪೧

ವ|| ಅಲ್ಲಿಂ ನೀರ್ಗುಂದಿ ಕುಮುದಕೊಂಡದಂತಿರ್ಪ ನೆತ್ತರ ಕೊಳಂಗಳೊಳ್ ಜಲಕ್ರೀಡೆಯಾಡುವ ಶಾಕಿನಿಯರುಮಂ ಪ್ರಸ್ತಾವಕ್ಕೊಂದು ಪೆಣಂ ಪಕ್ಕೆಗೆರಡು ಪೆಣನೆಂದು ರಕ್ಕಸಬೊಜಗರ ಶುಭಂಕರಿ ಕತ್ತಿಯನೊತ್ತೆಗೊಳ್ವ ರಕ್ಕಸಿ ಸೂಳೆಯರುಮಂ ಬೇವ ಪೆಣದ ಬಿಸಿಯಡಗಂ ತುತ್ತಿ ಬಾಯ್ ಬೇಯೆಯುಮುಗುೞದೆ ಮೀನಂತೆ ಮಿಡುಕಿ ಬೆರಲಂ ಮಿಡಿದು ಬಿರ್ದೞ್ವ ತಮ್ಮ ಕೂಸುಗಳ ಬಾಯ ಬಿಸಿಯಡಗಂ ತೋಡಿ ಕಳೆದು ತಮ್ಮ ತಿಂಬಡಗಂ ಬಾಯ್ವಾಯೊಳಿಕ್ಕಿ ನಂಬಿಸುವ ನಿಶಾಚರಿಯರುಮಂ ಎನಿತಡಗನೂಡೆಯುಂ ಬಾಯಾಡಿ ನಲಿಯದೆ ತಿಂಬಡಗಂ ತೋಡಿಕೊಂಡು ಕಾಡುವ ಕೂಸಂ ದಸಿಯೊಳಸೆಯಿಱಿದು ಬಿಸಿಯಡಗಂ ಬಾಯೊಳ್ಗಿಡಿದು ತಿನ್ನುತಿನ್ನೆಂದವುಡಂ ತಿಂಬ ತಾಯಿ ರಕ್ಕಸಿಯರುಮಂ ಸಱುಸೈತನೆ ನೀಡಿದ ನಿಡುಗಾಲ ಮೇಲೆ ಪಟ್ಟಿರಿಸಿ ಪೊಸಮಿದುಳಂ ಬೆಣ್ಣೆಯಿಕ್ಕಿ ತಲೆಯ ಸಿರ್ಪಿನಿಂ ನೆತ್ತರನೆಱೆದು ಬಾಯಂ ತೊಡೆದು ಕೆಯ್ಯಂ ನೀವಿ ತೂಪಿಱಿದೆತ್ತಿಕೊಳ್ವ ಮರುಳ್ವಾಣತಿಯರುಮಂ ಬೇವ ಪೆಣದುರಿವ ಬಾಯ್ಗೊಂಡದೊಳ್ ತಮ್ಮ ತನುವಂ ಪಿಡಿಖಂಡಂಗೊಯ್ದು ಬೀೞ್ವ ಸಾಧಕರುಮಂ ಬಲಗೆಯ್ಯ ಬಾಳ್ವೋಗಮಮುಮೆಡದ ಕೆಯ್ಯಡಗುಂ ಬೆರಸು ಮಹಾಮಾಂಸಮುಮಂ ಸಾರಲಮ್ಮದೆ ಸುತ್ತಿಸುೞಿವ ಭೂತಕ್ಕಂ ಪ್ರೇತಕ್ಕಂ ಮೆಯ್ಯ ಮಾಂಸಮಂ ಕೊಯ್ದೀಡಾಡುವ ಕಲಿಗಳುಮಂ ಘಟೋತ್ಕಚನ ತಲೆಯಂತೆ ಮರುಳ ಕಾಳೆಗಕ್ಕಾರ್ವ ಸೂಲದ ತಲೆಗಳಂ ತಮ್ಮಟ್ಟೆಯಾಟಕ್ಕೆ ಬಾಯ್ದಿಱಗುಟ್ಟುವ ಸಿಡಿದಲೆಗಳುಮಂ ಪೊರೆಯೊಳ್ಬೇವ ಪೆಣದ ಪೋಗೆ ಕಣ್ಣೊಳ್ ಪುಗೆ ಸಮುವಾಯಂ ಕಂಬನಿಗಳೊಳ್ ಪಾಯ್ದೊಡೆ ಪಿಡಿಯೆಂಗುಮೆಂದು ಕಾಲಡಗಂ ಕಾಯ್ಗಾಲಿಗೊಟ್ಟು ರಕ್ಕಸರಂ ಕರೆದು ತಮ್ಮ ನೆತ್ತರಿಂ ನಂದೆವೊಯ್ಸುವತಿ ಪ್ರತ್ಯಗ್ರ ವಿಶಾಲ ಶೂಲಭಿನ್ನರಪ್ಪ ಸುಭಟರುಮನಡಿಗಡಿಗೆ ನಿಂದು ನೋಡುತ್ತುಂ ಬಂದು ಮುಂದೊಂದೆಡೆಯೊಳ್ ಸೂಲದ ಪೆಣದ ಸೆರಗಂ ಸೀೞ್ದುಕೊಂಡದಱ ಬಾಯಿಂ ಬಸಿವ ನೆತ್ತರೊಳ್ಮರುಳ ಕರುಳಂ ಕಿತ್ತು ಪೊಸೆದು ತೂಳಿಕೆಯೊಳರ್ದಿಕೊಂಡು ಮರುಳ ಕಯ್ಯ ಕೊಳ್ಳಿಯ ಬೆಳಗಿನೊಳೆ ಬರೆದ ಬಿಳಿಯ ಪಟಮಂ ಪೊರೆಯ ಮರದ ಕೊಂಬಿನೊಳ್ಕಟ್ಟಿಯುರಿವ ಸಿದ್ದಿಗೆಯ ಕೆಲದೊಳ್ ತನ್ನ ತೊಟ್ಟ ತೊಡವಂ ಕಳೆದಿಕ್ಕಿ ಪಾಯ್ದು ಪೋದುದಕ್ಕಂ ಮೆಟ್ಟಿ ಕಿಚ್ಚಿನೊಳೆ ಪಾಯ್ದ ಪಜ್ಜೆಯಂ ಮಾಡಿ ಕಿಂಕಿಣಿಯ ಬೇತಾಳನನಿತ್ತ ಬಾಯೆಂದು ಕೆಲಕ್ಕೆ ಕಯ್ಯಂ ನೀಡೆಂದು ನೀಡಿದ ಕಯ್ಯ ನಡುವಂ ಪಿಡಿದಡರ್ದು ಪೆಗಲನೇಱಿ ಪರೇತವನದಿಂ ಪೊಱಮಟ್ಟು ತನ್ನ ಪಜ್ಜೆಯಂ ಪಜ್ಜೆಕಾಱಯದಂತು ವಸುದೇವಕುಮಾರಂ ಪಾಯ್ದು ಪೋದಂ ಇತ್ತಲ್ನೇಸಱು ಮೂಡಲೊಡನಾಡಿಗಳುಂ ಕಾಪಿನವರುಂ ಕಾಪಿನೋವರಿಯೊಳ್ ವಸುದೇವನಂ ಕಾಣದೆಲ್ಲೆಡೆಯೊಳಮಱಸಿ ಸಮುದ್ರವಿಜಯಂಗೆ ಬಿನ್ನವಿಸುವ ಸಮಯದೊಳ್ ಬಂದು ಪಡಿಯಱಂ ಪೊಡವಟ್ಟು ಪರೇತವನದೊಳಗೆ ಪೊಸದೂವೆಯ ಕೆಲದೊಳ್ ಕಳೆದೊಟ್ಟಿದ ತೊಡವುಗಳುಮಂ ಮರದ ಕೊಂಬಿನೊಳ್ ಬರೆದು ಕಟ್ಟಿದ ಕಪ್ಪಡಮುಮಿರ್ದಪ್ಪುದೆಂದು ಪಿತೃವನಪಾಳಕಂ ಕಪಾಳಕುಂಡಳಂ ದಾರವಟ್ಟಕ್ಕೆ ಬಂದು ಬಿನ್ನವಿಸಿ ಮುಟ್ಟಿದನೆಂಬುದು ಮರಸನಱಿದಂತರಗಿದು ಪಾಱಿ ಪೋಗಿಮೆಂದು ಕಿಂಕರರಂ ಕಳಿಪುವುದುಮವರ್ಪರಿತಂದವಂ ಮುಂದಿಡಲೊಡನೆ ತನ್ನ ತಮ್ಮನ ಮಣಿಮಂಡನಮೆಂದಱಿದು ಮಂದರಾಗನಾಗಿಯುಂ ಧೃತಿಯಿಂ ಮಂದರಾಗನಾಗಿ ಪಟದ ಬರೆಪಮಂ ಬಾಚಿಸೆಂದು ಸಂಧಿವಿಗ್ರಹಿಗೆ ಬೆಸಸಲೊಡನೆ

ಪಾದರಿಗನೆಂದು ಪರಪರ
ವಾದ
ಭವಪ್ರಭುಗೆ ದೂಱಿದರ್ಗಡ ತಮಗಾಂ
ಸೋದರನಲ್ಲೆಂ
ಬಸದಿಯೊ
ಳೋದೆಂ
ಪರವೆಣ್ಗೆ ಮಱೆದುಮೆಱಗಿದ ದಿವಸಂ          ೪೨

ಆಯಸಮಿದು ತೊಡೆವೊಡಖಿಲೋ
ರ್ವಿಯಿಂದಮಾಯ್ತಾಯ್ತೆ
ಕೆಲಬರಿಂ ಬರ್ಕುಂ ಕೆರೆಯ
ಬಾಯಂ
ಮುಚ್ಚಲ್ ಕೆರಸಿಯ
ಬಾಯಂ
ತಾಂ ಮುಚ್ಚಲಾರ್ಗುಮೇಂ ಬಂದಪುದೇ      ೪೩

ದೂಱಿದು ತಮ್ಮಯ ಚಿತ್ತ
ಕ್ಕೇಱಿದ
ದಿವಸದೊಳೆ ಪೊಲ್ಲಕೆಯ್ದೆಂ ಮೊಲೆಮೇ
ಲೇಱೌಗಿ
ಬದುಕಲಕ್ಕುಂ
ದೂಱಿಂ
ದುರ್ಯಶಮುಮಾಗೆ ಮಾೞ್ಪಂ ಭಟನೇ        ೪೪

ಪಿಡಿದೆಂ ತಮ್ಮಡಿಗಳ ಕೇ
ಸಡಿಯಂ
ಸೈರಿಸುವುದಪ್ಪಿದೆಂ ಪುಳಕಂಗಳ್
ನಡುವಿನೆಗಂ
ತಂಬುಲಮಂ
ಕುಡದೊಡಮಲ್ತೆೞೆದುಕೊಂಡೆನಾಂ
ಬಾಯ್ವಾಯೊಳ್   ೪೫

ಪ್ತಾಯಶ್ಚಿತ್ತಂ ಗಡ
ಪ್ತಾಯಸಪುತ್ರಿಕೆಯನಂಜದಪ್ಪುವುದು
ಪರ
ಸ್ತ್ರೀಯರ
ನಲ್ಲರ್ಗೆಸಗಿದ
ನೀಯರ್ತಾಮೆಂದು
ಮಸಣದುರಿಯೊಳ್ ಪೊಕ್ಕೆಂ      ೪೬

ಇದು ತಮ್ಮಿಂದಾದುದೆ
ನ್ಮಥನ
ಮದಾವೇಶದಿಂದಮಾಯ್ತೆನ್ನಯ ತು
ಪ್ಪದೊಳಾನೆ
ಬೆಂದೆನೆನಗೞ
ಲದಿರಿಂದಡಮಱಿಯದಱಿದನೇ
ವಸುದೇವಂ ೪೭

ಎನೆ ಮುನ್ನಂ ನೃಪತಿ ಸಭಾ
ಜನಮನಿತುಂ
ಬೞಿಕ ಮೂರ್ಛೆವೋದುದು ಕಡುನಂ
ಜಿನ
ಗಾಳಿಯೊ ಮೇಣ್ಸಂಮೋ
ಹನಾಸ್ತ್ರಮೋ
ನೃಪಕುಮಾರ ಪಾತಶ್ರವಣಂ   ೪೮

ಬಂದರನಿಮಿತ್ತಮಲ್ಲಿಗ
ರಿಂದಮರಂಗತಿ
ವಿರುದ್ಧ ಮಹಿಪತಿಸಭೆಗಾ
ರ್ತಂದರೊ
ಮುಕುಳಿತ ಕಮಲಾ
ನಂದಾರ್ಥಂ
ಸುಪ್ರಭಾತದೊಳ್ ಭಾಸ್ಕರನಂ ೪೯

ಸಕಳರ್ಧಿ ಸಮೇತಂ
ವಾಸನೆಯಂ
ಪೊತ್ತುಕೊಂಡು ಪಾವನ ಪವನಂ
ಬೀಸೆ
ಬಸವಳಿದು ಸೋಂಕೆ
ಭಾಸಹಿತಂ
ಲಬ್ಧಸಂಜ್ಞನಾಗಿ ನೃಪಾಳಂ       ೫೦

ಹಾ ವಸುದೇವ ಹಾ ಹರಿಕುಲಾಂತಕ ಹಾ ಚಿರಜೀವ ನಿನ್ನನಿ
ನ್ನಾವೆಡೆಯಲ್ಲಿ
ಕಾಣ್ಬೆನನುಜಂ ಪಡೆದಂತುಟನಗ್ರಜಂಗೆ ಮು
ನ್ನೀವುದು
ಪಂಥಮಿಂತು ವಿನಯಂಗಿಡಲಕ್ಕುಮೆ ವತ್ಸ ಪೊಕ್ಕು ಮುಂ
ಪಾವಕನೊಳ್
ಬೞಿಕ್ಕೆನಗೆ ಕೊಟ್ಟೆಯಿದೇಕೆಯೊ ಶೋಕವಹ್ನಿಯಂ          ೫೧

ಮನಸಿಜನಂದು ಬೆಂದನೆ ಹರಾನಳನಿಂ ಪುಸಿಯಿಂದು ಬೆಂದನೇ
ವೆನೊ
ವನಮಿಂದು ಶೂನ್ಯಮೆಳವೆಂಡಿರ ಗಾವಣ ಮಿಂದು ಶೂನ್ಯಮಂ
ಗನೆಯರುಮಿಂದು
ಶೂನ್ಯಮೆರುವನ್ಮೃಗಲಕ್ಷ್ಮನುಮಿಂದು ಶೂನ್ಯಮಿಂ
ಪಿನ
ಪೆಸರಿಂದು ಶೂನ್ಯಮುರಿದೆನ್ನಯ ರಾಜ್ಯಮುಮಿಂದು ಶೂನ್ಯಮೇ      ೫೨

ಬೇವುದವಂ ಪುಸಿ ಕಾಣಿರೆ
ಪಾವಕನುಂ
ಕಂಡೊಡವನನೊಳಕೊಳ್ಗುಂ ಸ್ವಾ
ಹಾವದು
ತನ್ನಿನಿಯೊಳ್ ವಸು
ದೇವನ
ರೂಪಿಂಗೆ ಸೋಲ್ಗುಮೆಂಬೀ ಭಯದಿಂ ೫೩

ವ||ಎಂದು ಶೋಕಿಸುವುದುಂ ನೀನೆಂದಂತೆ ವಸುದೇವನಂ ವಸುದೇವನೊಳಕೊಳ್ವನಲ್ಲಂ ಕೆಲವಾನುಂ ದಿವಸಕ್ಕೆ ನಿನ್ನ ತಮ್ಮಂ ಬಂದಪನೞಲುಂ ಬೞಲುಂ ಬೇಡೆಂದರಿಂದಮರರಸನಂ ಸಂತೈಸಿಪೋಗೆ

ಆನಿಯಮೆ ನಿಜಾಗತ ವಾ
ಣೀನದಿ
ತೀವದೊಡೆ ತನ್ನೊಳೇನುೞಿವುದೇ ಯೋ
ಗ್ಯಾನುಜ
ವಿಯೋಗ ಶೋಕೌ
ರ್ವಾನಳನಿಂದಾ
ಸಮುದ್ರವಿಜಯ ಸಮುದ್ರಂ ೫೪

ಅತ್ತ ನಿರಂಕುಶಂ ಮೆಡರಿದಾಳಿಣಿಯಂ ಮಱಿದಂಜನನ್ಮನು
ನ್ಮತ್ತ
ಮತಂಗಜಂಬೊಲೆಸೆದಾ ವಸುದೇವನುಮುತ್ತಮಾಂಗನಾ
ವೃತ್ತಕುಚಾದ್ರಿಕಂಟಕವನೋತ್ಕಟರಾಗನದೀ
ಪ್ರಚಾರ ಚಿಂ
ತೋತ್ತರನೆಯ್ದಿದಂ
ವಿಜಯಖೇಟಮನಂಗಜ ಸೌಖ್ಯವಾಟಮಂ   ೫೫

ವ|| ಎಯ್ದಿ ಪೊಱವೊೞಲೊಳೊಂದು ನಂದನವನಮಂ ಪೊಕ್ಕು ಪದ್ಮಾಕರದೊಳೊಲೆ ದೋಲಾಡಿ ಕೊಳನ ತಡಿಯೊಳಿಕ್ಕಿರ್ದ ಮೃಗಮದಮುಮಂ ಸೆಳೆಗೊಂಬು ಕೊಂಬನೊರಸೆ ಸುರಿದ ಸಿರಿಕಂಡದ ರಸಮುಮನಣ್ಪಿಕ್ಕಿ ಪೂವಂ ತುಱುಂಬಿ ತುಱುಂಬಿಗೆ ತುಱುಗಿ ಮುಸುಱಿದ ಮಱಿದುಂಬಿಯಿಂ ಕಣ್ಬೀಲಿಯ ತಲೆಸುತ್ತಂ ಸುತ್ತಿದಂತೆ ಸೊಗಯಿಸಿ ಸುರಯಿಯ ಸುರಹೊನ್ನೆ ಯಲರ ಬಿರಿಮುಗುಳ ಬೆರಕೆವಾಸಿಗಮಂ ತಲೆಸುತ್ತಿ ಕೇದಗೆಯ ಕುತ್ತುಂಗಱಿಗಳಂ ಕುತ್ತಿ ಕೇಶದ ಕೊನೆಯೊಳ್ ಕೇಸರದ ಕಿಸುವುಡಿಯಂ ಕೆದಱಿ ತಿಳಕದ ತಿಳಕಮಂ ತಳೆದು ಕೇದಗೆಯ ಬಿಳಿಯೆಸೞ ಬಳಪದೋಲೆಯನಿಟ್ಟು ಪೂಗೊಂಚಲಂ ತೂಗಿ ತೊನೆಯೆ ಕನ್ನವುರಂದೀವಿ ಮುಗುಳ ಮುದ್ರಿಕೆಯನಿಕ್ಕಿ ಕುಸುಮಕಂಕಣಮನೇಱೊನೂಂಕಿ ನಿಱಿದಳಿರ ತೊಂಗಲಂ ತೋಳೊಳ್ತೊಡರ್ಚಿ ಚಂಪಕಮಾಲೆಯೊಳ್ಬೆರಸಿ ಕೊಳದ ಮಲ್ಲಿಗೆಯ ತಿಸರಮಂ ತೊಟ್ಟು ತಾವರೆಯ ನೂಲ ತಿರುವಂ ತೀಡೆ ವಕುಳದ ಪೂತ ಸೆಳೆಯ ಸೆಳೆವಿಲ್ಲಂ ಗೊಲೆಗೊತ್ತಿ ಪೊಸನನೆಯ ಪುಳುಂಬಂ ಪೊಸೆದು ಸಲಿಸಿ ಕಿಱುದಳಿರಂ ಗಱಿಗಟ್ಟಿ ಮಾವಿನಂಕುರದ ಕೂರ್ಗಣೆಗಳಂ ತಳಂ ತೀವೆ ಪಿಡಿದು ಪೊಲಗೆಟ್ಟ ಕಾಮದೇವನಂತೆ ವಸುದೇವನಾವನದೊಳಗೆ ವರ್ಷಾಗಳೊಂದು ತಿಳಿಗೊಳದ ತಡಿಯೊಳ್