ಶ್ರೀಪತಿ ಫಣಿಶಯ್ಯೆಗೆ ಗಂ
ಗಾಪುಳಿನತಳಕ್ಕೆ
ದಿವಿಜವಾರಣಹಂಸಂ
ಪೋಪಂತೆ
ಪೋಗಿ ಕೃತಿಕುಲ
ದೀಪಂ
ಪವಡಿಸಿದನಮಳ ಶಯ್ಯಾತಳದೊಳ್

ಅನ್ನೆಗಂ –

ತೊಡರೆ ಮಿನ್ ಮೃಗಲಾಂಛನಧೀವರಂ
ತಡಿಗೆ
ಬೀಸಿದ ಜಾಲಮನೊತ್ತಿತಂ
ದಡಸಿ
ಬಾಂಗೆಱೆಯೊಳ್ ತೆಗೆವಂತೆವೋ
ಲುಡುಗಿ
ವಂದುವು ತಣ್ಗದಿರೋಳಿಗಳ್         ೨

ಅಲ್ಲಿಂ ಬೞೆಯಿಂ –

ವಾರುಣಿ ಕಳ್ಳನೀಂಟಿ ಮಱೆದಿಕ್ಕಿದ ಬಟ್ಟಲೊ ಭೀತಿಯಿಂ ನಿಶಾ
ಸ್ವೈರಿಣಿ
ಪೋಗೆ ಬಿರ್ದ ಕಿವಿಯೋಲೆಯ ಮೌಕ್ತಿಕಪತ್ರಮೋ ನಭೋ
ವಾರಣಮೊಲ್ಲದೊಕ್ಕ
ದಧಿಪಾಂಡುರಪಿಂಡಮೊ ಪೇೞೆನಲ್ಕೆ ನೀ
ಹಾರಮಯೂಖಮಂಡಲಮದೇನೆಸೆದಿರ್ದುದೊ
ಪಶ್ಚಿಮಾದ್ರಿಯೊಳ್       ೩

ಮತ್ತಮಿನಿಸಾನುಂ ಬೇಗದಿಂ –

ಪುಡಿಯಡರೆ ನಿಮಿರ್ದ ಪುತ್ತಿನ
ಪುಡಿ
ಕೆಡೆದತ್ತಾಲಮೊಲೆದುದದಱಡಿಯೊಳ್ ತೂಂ
ಕಡಿಪ
ಮಿಗಂ ಮುಂದಣ್ಗೋ
ರ್ಗುಡಿಸಿದುದೋ
ಪಡುವ ಪಡುವ ಮೃಗಾಲಾಂಛನನಾ

ಪೊಳಪಿಂಬುವೋಯ್ತು ತಾರಗೆ
ಗಳುಗುೞಿದುವು
ಹಿಮಕರಂಗೆ ಮಾಯ್ದ ಚಕೋರಾ
ವಳಿ
ಬೆಱಗಾದುವು ಕುಮುದಂ
ಗಳ
ನಗೆಯೆಗೆಯೆತ್ತಿ ಪೋಯ್ತು ಮುನ್ನೇಸಱೆನೊಳ್     ೫

ಅಲ್ಲಿಂ ಬೞಿಯಿಂ –

ವಾರುಣಿಯನೊಲ್ದು ಮುಟ್ಟಿದ
ಕಾರಣದಿಂ
ಮುೞುಗುವಂತೆ ತನ್ನಯ ಕಱೆಯಂ
ನೀರೊಳಲೆವಂತೆ
ಪಶ್ಚಿಮ
ವಾರಿಧಿಯೊಳ್
ಮಗ್ನನಾದನಂದಮೃತಕರಂ  ೬

ಭುವನಮನಾವಗಂ ಪುದಿದು ತೀವಿದ ತಣ್ಗದಿರ್ಗಳ್ ಪೊದೞ್ದ ಕೈ
ರವವನಮಾದುವೆಯ್ದೆ
ಪೊಸಮಲ್ಲಿಗೆಯಾದುವು ಮೌಕ್ತಿಕಂಗಳಾ
ದುವು
ಸುರಸಿಂಧುವಾದುವು ಸುಧಾರ್ಣವವಾದುವು ಚಂದ್ರಕಾಂತಮಾ
ದುವು
ಹಿಮಮಾದುವಲ್ಲದೊಡೆ ಚಂದ್ರನ ಚಂದ್ರಿಕೆ ಮಾಯವಾದುದೇ       ೭

ನಿರುಪಮಸುಕುಮಾರತೆಯಂ
ಧರಣಿಗೆ
ನೆಱೆಯಱೆಪಲುಷ್ಣಕರನ ಕರಂಗಳ್
ಪರೆಯದ
ಮುಟ್ಟದ ಮುನ್ನಮೆ
ಮುರುಟಿದುವೆನೆ
ಮುಗಿದುವುತ್ಪಲಪ್ರಕರಂಗಳ್         ೮

ತಾರಗೆಯ ಕುಮುದವನದ
ಕೋರಂಗಳ
ಕಣ್ಗೆ ಕವಿದ ಕೞ್ತಲೆಯೆನೆ ನೀ
ಹಾರಕರನಲಸಿ
ಪೞ್ಕೆಗೆ
ಸಾರಲೊಡಂ
ಮಗುೞೆ ಮರ್ಬುಪರ್ಬಿತ್ತಾಗಳ್

ರಮಣವಸತಿಗಳನಿನವ
ಸ್ತಮಿಸಲೊಡಂ
ಬಂದು ಪುಗಿಸಿ ಮಗುೞ್ದುಂ ವಿಧುವ
ಸ್ತಮಿಸೆ
ಪೊಱಮಡಿಸಿ ಕಳೆದುದು
ತಿಮಿರಂ
ಪಾಣ್ಬೆಯರ ದೂತನಾಗಲೆವೇೞ್ಕುಂ ೧೦

ಬೆಳಗಾಗಲೆೞ್ದು ಗೞಪುವ
ಗಿಳಿಗಳ
ಜಱುಚುವ ಪಿಕಂಗಳೆಳಸುವ ಕೋಕಂ
ಗಳ
ಕಳಕಳದಿನಿಸೊಱಗಿದ
ಕುಳಟೆಯರೆೞ್ಚತ್ತು
ಭಯದೆ ತಳವೆಳಗಾದರ್  ೧೧

ರಸದ ಮಳಯಜದ ಘಸೃಣದ
ಕುಸುಮದ
ಕಪ್ಪುರದ ಕವಿವ ಸೊವಡಿಂಗಳಿಗಳ್
ಮುಸುೞೆ
ನವನೀಲಪಟಮಂ
ಮುಸುಕಿದವೋಲಸತಿಯೊರ್ವಳಡಿಯಿಡುತಿರ್ದಳ್
      ೧೨

ಮತ್ತಮೊರ್ವಳ್ –

ಮೊಲೆವಿಣ್ಪಿಂ ಬಳ್ಕುತುಂ ಮೆಲ್ಲನೆ ಪದವಿಡುತುಂ ನೀಳ್ದಪಾಂಗಂಗಳಿಂದಿ
ರ್ಕೆಲನಂ
ನೋಡುತ್ತು ಮೆತ್ತಂ ಸುೞಿವ ನೆೞಲನಾರಯ್ಯತುಂ ದೂರದಿಂ
ರ್ಪುಲಿಯಂ
ಕರ್ಣಾವತಂಸಕ್ಕೆಳಸುವಳಿಗಳಂ ಸೋವಿ ನಿಂದಾಲಿಸುತ್ತುಂ
ಚಳವೇಣೀಭಾರದಿಂದೋಸಱಿಸುವ
ಮುಸುಕಂ ಸಾರ್ಚತುಂ ಪಾಣ್ಬೆ ಪೋದಳ್     ೧೩

ಉಗುತುಂ ಪೂಮಾಲೆಯಂ ಸೋರ್ಮುಡಿಯಿನೆಡೆಗೆ ಬಿಣ್ಪೆಂಬವೋಲ್ ನೀವಿಯಂ ಸಾ
ವಗಿಸುತ್ತುಂ
ತೂಕದಿಂದಂ ನಡೆಗಿಡಿಪ ನಿತಂಬಂಗಳಂ ಕಟ್ಟುವಂತ
ಕ್ಷಿಗಳಂ
ಮುಚ್ಚುತ್ತೆ ನಿದ್ರಾಜಡತೆಯಿನಡಿಗೋರೊರ್ಮೆ ಭೂಚ್ಛಾಯೆಯಮ ನುಂ
ಗುಗುಮೆಂಬಂತಾಗಳಕೋದಯಭಯವಶದಿಂ
ಪಾಣ್ಬೆ ಪೋತಂದಳೊರ್ವಳ್        ೧೪

ಪದುಳಿಸದಂಗಮೆೞ್ಚಱದ ಕಣ್ಮಲರಾಱದ ಸೇದೆ ಮಗ್ಗುಲಿ
ಕ್ಕದ
ಪುಳಕಂಗಳಿಂಗದ ಬೆಮರ್ಮಿಡುಕೋಡೆದ ಪುರ್ವು ಬೀಗಿ ಬೀ
ಯದ
ತುಟಿ ಕೆತ್ತುಗುಂದದ ಕುಚಂ ನಡುಕಂಗಿಡದೂರು ಗಂದೆಯೇ
ೞದ
ಕರಘಾತಮೊಪ್ಪೆ ಸುಸಿಲಿಂ ತಣಿದೊಯ್ಯನೆ ಜಾರೆ ಜಾಱಿದಳ್         ೧೫

ಮತ್ತಮೊರ್ವಳ್ –

ಇನಿಯನಲಂಪಿನಿಂ ತೆಗೆದು ಚುಂಬಿಸಿ ತುಂಬುಲಮಿಕ್ಕಿ ಸುಯ್ದು ಪೊ
ಯ್ದನುವಿಸಿ
ಕೂಡೆ ನೊಂದ ತುಟಿಯಂ ತುದಿನಾಲಗೆಯಿಂದೆ ಪತ್ತಿದಿಂ
ಪನೆ
ಸವಿವಂತಿರೀಂಟಿ ಕುಚದೊಳ್ ನಸು ನಾಂಟಿದ ತನ್ನಖಾಂಕಮಂ
ತನುರುಹದೇೞ್ಗೆಯಿಂದೆಳಸಿ
ನೋಡುತದೇಂ ಕಿಱುಜೋಡೆ ಪೋದಳೋ   ೧೬

ನಸು ನೆನೆದೊಯ್ಯನುಳ್ಳಲರೆ ಪೋಳ್ದೆಲೆ ಕಂದದೆ ಕೂಡೆ ಕೆಂಪಿನಿಂ
ರಸಮೊಸರ್ವಂತಿರೊಕ್ಕ
ನಱುದಂಬುಲಕಂ ಕುರುಳಿಂ ಕಳಲ್ದು ಬಿ
ರ್ದೆಸೆವಲರ್ಗಂ
ಮದಾಳಿ ಮೊರೆದೆರ್ದೆಱಗುತ್ತಿರೆ ಬೀದಿಗಳ್ ಜನ
ಕ್ಕಸತಿಯರೆರ್ದು
ಪೋದುದನೆ ಪೇೞ್ವವೊಲಿರ್ದುವು ಸುಪ್ರಭಾತದೊಳ್     ೧೭

ಉಗುೞ್ದುವು ಪೀರ್ದ ಕೞ್ತಲೆಯನೞ್ಕಿ ಸಲಾಱದೆ ಕಾಱುವಂತೆ ಕಾ
ಡಿಗೆಗಳನಾಗಳೋಪವರ
ಕೇಳಿಗಳಂ ಕೊರಲೆತ್ತಿ ನೋಡುವಂ
ತೊಗೆದುವು
ನೋಡಿ ನಾಣ್ಚಿ ತಲೆಯಂ ತೆಗೆವಂತಿರೆ ಪಾತ್ರಮಧ್ಯದೊಳ್
ತೆಗೆದುಡುಗಿರ್ದವೊಳ್ಗುಡಿಗಳಂ
ರತದೀಪಿಕೆಗಳ್ ನಿಶಾಂತದೊಳ್         ೧೮

ಆಗಳೊಂದು ಸುರತಾಲಯದೊಳ್ –

ಕಡುನಲ್ಲಂ ನೆರೆದಪ್ಪೊಡೆಣ್ಣೆ ಸವೆದತ್ತಿಲ್ಲಿನ್ನುಮೋವೆತ್ತ ಸೋ
ರ್ಮುಡಿಯಿಂ
ಸೋರ್ದುದೊ ಪುಷ್ಪಮಾಲೆಯೆನುತಂ ಮುಗ್ಧಾಕ್ಷಿ ಚಿಂತಾಂತರ
ಕ್ಕೆಡೆಯಾಗಿರ್ಪಿನಮೆರ್ದೆಱೆಂಕೆಯೆಲರಿಂದುದ್ಬುದ್ಧಪಾರಾವತಂ

ಸೊಡರಂ
ಪೊಯ್ದುದು ಕೇಳಲಾಕೆಯಳಸಂ ತಾನೞ್ತಿವಟ್ಟಂತೆವೋಲ್      ೧೯

ಮತ್ತೊಂದೆಡೆಯೊಳ್ –

ಅವಚಱಿಸಿ ಪೊಯ್ದ ನೇಹಂ
ತವೆಯಲೊಡಂ
ಗುಣಮನುರುಪಿ ಪಿರಿದಾಗಿರೆ ಪೆ
ರ್ಚುವ
ಸೊಡರ್ಗಳ ಪೆರ್ಚಂ ನಗು
ವಮೊಲುಜ್ಜಳಿಸಿದುವು
ವಿಮಳಮಣಿದೀಪಿಕೆಗಳ್         ೨೦

ಆಗಳ್ ಕುಮುದಕಾಮುಕನಗಲ್ಕೆಯೊಳ್ ಕುಮುದಿನಿಗೆ ನೆಗೆದ ಬಾಷ್ಪಜಳಕಣಂಗಳಂತೆ ಮುಗುಳ್ದು ಮುಗಿವೆಸಳ್ಗಣ್ಗಳೊಳುಗುವ ತುಹಿನ ಕಳಿಕೆಗಳಿಂ ಕೆಸರ್ಮಸಗಿದ ಕುಮುದಕೇಸರದ ರಜದೊಳರ್ದ ಚರಣಚಯಮಂ ಕೀೞಲಾಱದೆ ಪೞವಂಡಿನೊಳ್ಬೆಂಡು ನೆಗೆದು ಪೊರಳ್ದು ನರಳ್ದು ಮೊರೆವ ಮಱಿಮಂಬಿಗಳ ಗಱಿಯಂ ಗಿಱ್ಱನೆ ತೆಗೆದು ನೆಗಪಿಯುಂ, ಚೊಕ್ಕಳತನದಿಂ ಮಿಕ್ಕಲರ್ಗೆ ಮೊಗಸದಿರುಳುಣ್ಣದೊಡಲ ಪಸಿವಿಂಗೆ ಪಾಯ್ದು ಬಿರ್ದಲರದ ಮುನ್ನ ಮಲ್ಲಿಗೆಯರೆಬಿರಿವ ಬಿಸರುಹದೆಸಳ್ವೊರೆಯ ನಸುದೆಱಪಿನೊಳ್ ಮುಸುಂಡುನಿಟ್ಟು ಬೀಸರವಾಗದೊಸಗೆಗಂಪನುಣ್ಣ ಬಾಕುಳಿ ದುಂಬಿಗಳ ಪಡೆದಲೆಯಂ ಪಿಡಿದು ಮಂದೈಸಿ ಮುಂದೆ ಕವಿದ ಮಧುಕರ್ದಮದೊಳರ್ದಿಯುಂ, ಉರಿ ಕೊಂಡ ವಿರಹದುರಿಗಿರಲಾಱದೆ ಇರುಳೆಲ್ಲಮಱಸಿ ಮಲುಮಲಮಱುಗಿ ಕೊಳಗೊಳಂಗಳೊಳ್ ತೊೞಲ್ದು ಬೞಲ್ದು ಬೆಂಡಾಗಿ ಜಕ್ಕನೆ ಜಱೆವ ಜಕ್ಕವಕ್ಕಿಗಳ ಪಕ್ಕೆಯೊಳ್ ಪೊಡರ್ವ ಪಕ್ಕಕ್ಕೆ ಪಕ್ಕುಗೊಟ್ಟು ನೆಗಪಿ ರಥಾಂಗನಾಮಕ್ಕಿದುಚಿತಮೆಂಬಂತವುಂಕಿ ನೂಂಕಿ ತಂದೊಂದೊಂದೆ ಱೊಳೊಡಗೂಡಿ ಬೇಟದಚ್ಚಿ ನೊಳಮರ್ಚಿ ಪೂಡಿ ಕಾಮಮನೋರಥಮಂ ತೀರ್ಚಿಯುಂ, ಬಿಸಲತೆಯ ಕುಸುಮದೊಳ್ ಕಣ್ಗೆಯ್ದ ಕಳಹಂಸತರುಣನಂ ತೆರೆಗೊನೆಯ ತುಂತುರ್ವನಿಯಂ ಮೊಗದೊಳೆ ತಳಿದು ತಳವೆಳಗಾಗಿಸಿಯುಂ, ಪುಳಿನತಳದೊಳುಪ್ಪವಡಿಸಿದ ರಾಜಮರಾಳನಂ ತೊಡೆವಿಡಿದು ನೆಗಪಿ ಬಾಳಕಿಯಾರ್ಗೆ ನಡೆಗಲಿಸಲ್ ನಡೆಯೆಂದು ನಡೆಯಿಸುವಂತೆ ಬೞಿವಿಡಿದು ನಡೆದು ಸೌಭಾಗ್ಯಭವನಾಂಗಣಂಗಳೊಳಪುಗಿಸಿಯುಂ, ಕೊನೆಗೊಂಬಿನ ಕೆಲದೆಲೆಗಳೊಳ್ ತಲೆಗರೆದು ಮೊರೆವ ಮಧುಕರನಿಕುರುಂಬದ ಗಾನದಿಂ ಬೇನೆ ಮಸಗಿ ನರಳ್ದಪುವೆನಿಸಿ ಭವನಭಿತ್ತಿಗಳಂ ಪತ್ತಿ ಪೊರೞ್ವ ಪಿತ್ತಿಲ ಪೂಗಿಡುಗಳಂ ಪೊಸಕುಸುಮಮಂ ಬೆಸಲೆಯಾಗಿಸಿಯುಂ, ಕೇಳೀನಿಳಿಯದ ಕೆಲದೊಳ್ ನಟ್ಟ ಕನಕಯಷ್ಟಿಗಳ ಮೇಗಣಡ್ಡವಣೆಗಳೊಳ್ ಕಣ್ಮುಚ್ಚಿ ಬೆಚ್ಚಿದಂತೆರ್ದು ತೀರ್ದುಗೊಂಡು ಕೆಲಕ್ಕೊಱಗುವ ಕುಕ್ಕುಟಂಗಳ ಕೋಡೆಱೆಂಕೆಯ ಕಡೆಯಂ ಪತ್ತಿ ಪೊತ್ತೆತ್ತಿಯುಂ, ಬಳ್ಳಿಮಾಡಂಗಳಳ್ಳೆಗಳೊಳ್ ಬಳ್ಳಿವರಿದ ಬಳ್ಳಿವಂದರದ ಬಳ್ಳಿಗಳೊಳ್ ನಿಮಿರ್ವ ನಿಡುಗುಡಿ ಗಳಳ್ಳಿಱೆಯೆ ಪಾರ್ಶ್ವ ಪ್ರರೂಢಬಾಳರಸಾಳಸರಳ ಶಾಖಾಶಯನದಿನೆರ್ದು ಕರೆವ ಪರಭೃತಂಗಳ ಪಂಚಮದ ನುಣ್ಚರಮನುಯ್ದು ಬಂಚದಿಂಚರದಂಚೆಯೊಳ್ ಪಳಂಚಿಯುಂ, ಸೂಳೆಗೇರಿಯ ಮುಂದಣ ಮತ್ತವಾರಣದ ಮೇಲೆ ಮೆಲ್ಲನೆ ಮರುಳ್ದು ಮಱೆದೊಱಗಿದೆಡ್ಡ ಮಿಂಡಿಯರ ಮೇಲುದಂ ಸೆಳೆದು ಕುಸಿದು ಕೆಲಕ್ಕೆ ಎೞೆದು ಜಕ್ಕುಗೊಂಡು ತಕ್ಕೆಗೆ ತೋರವಾದ ಪೇರುರದ ಮೊಲೆಗಳೊಳಪೊಕ್ಕು ಮುಂಡಾಡಿಯುಂ, ಸುರತಶ್ರಮ ಸುಷುಪ್ತಿಯಿಂ ಕಣ್ದೆಱೆಯಲಾಱದ ಪಾರಾವತಂಗಳ್ಗೆ ಸುಖಪ್ರಬೋಧಮಂ ಕಣ್ದೆಱೆಯಿಸುತ್ತುಮರೆದೆಱೆದ ಗವಾಕ್ಷ ವಿವರದಿಂ ಸುರತಸೌಧಂಗಳೊಳಪೊಕ್ಕು ನಿಧುವನಪ್ರಥನದಿಂ ತಾಱುಂತಟ್ಟುಂ ಬಿರ್ದ ಕಾಮುಕಜನಕ್ಕೆ ಮುಡಿದಲರ ತೊಡೆದನುಲೇಪನದ ಸೊವಡು ಸವೆದುರನಱೆಯದಂತಿರೋಗರಗಂಪನೋಲಗಿಸಿಯುಂ, ಮದನ ಮೋಹನ ಮೂರ್ಛಾ ಸುಪ್ತಸೀಮಂತಿನೀವದನ ಮದಿರಾಮೋದಮಿಶ್ರನಿಶ್ವಾಸಶ್ವಸನದ ಸೋಂಕಿನಿಂ ಸೊರ್ಕಿ ತೂಗಿ ತೊನೆದಪುವೆನಿಸಯುಂ, ಉರಿಯೊಳುರುಳ್ದು ಪರುದಂತಿರಾದ ಪದಂಗಳ ಪಿಂಗದ ಕಾಯ್ಪಿಂಗೆ ಕೊಕ್ಕರಿಸಿ ಕಂಪಿಸಿದಪುವೆನಿಸಿಯುಂ, ನಂದುವ ಪದದೊಳ್ ನಿಂದಿರಲಳವಲ್ಲದೆ ತಡದಡಿಸಿದವು ವೆನಿಸಿಯುಂ, ದುರ್ಜನರಂತೆ ದಗ್ಧಗುಣಂಗಳುಂ, ಗಣಿಕಾಜನಂಗಳಂತೆ ವಿಗಸ್ನೇಹಂಗಳುಂ, ವಿಪನ್ನ ಪಾರ್ಥಿವರಂತೆ ಅಪಚಿತಪ್ರಭಂಗಳುಂ, ಕಾಳಾಂತವರ್ತಿಗಳಂತೆ ಮಳಿನ ಮುಖಂಗಳುಂ, ದಾನಿಯ ಧನಂಗಳಂತೆ ಪಾತ್ರಮಾತ್ರಶೇಷಂಗಳುಮಾದ ಸೊಡರ್ಗುಡಿಗಳನಳ್ಕಾಡಿಯುಂ, ಸಹಜಲಜ್ಜಾರಸನಿಮಗ್ನೆಯರಪ್ಪ ಮುಗ್ಧೆಯರಂ ಬಱೆದೆ ನಾಣ್ಚಸದಿರೆಂದು ಬಾಯಂ ಮುಚ್ಚುವಂತೆ ಸುರತವಿಚಿತ್ರ ವಯಸ್ಯವಚನ ಶತಮಂ ಪರಿವಿಡಿಗೆಯ್ವ ಪುರುಳಿಯರಗಿಳಿಯ ಚಂಚುಪುಟಮಂ ಪಳಂಚಿಯುಂ, ಎಸಳ್ ನಸುಗಂದೆ ಕಂಪು ಕಡುನಾಱೆ ಕೇಸರಂ ಕೆದಱಿ ಪೋಗೆ ಪಾಂಗಱಿದು ಮುಗ್ಧಮಧುಕರನಿಕರಕಳರವದಿಂ ಕಳೆಯ ಲಾಱದಳಲುರುಳಿವಡೆದಂತಿರ್ದ ಸಹಕಾರದ ಕುಸುಮಂಗಳನಾಶ್ವಾಸಿಸುವಂತೆ ಮೆಲ್ಲನೆಳವಿಯುಂ, ನಿತಂಬಭರಮನೆತ್ತೆಂಬತೆ ವಾಮಕರತಳಮಂ ಶಯ್ಯಾತಳದೊಳೂಱಿ ಬಲಗೈಯಂ ಬೞಲ್ದುಡೆಯೊಳ್ ತೊಡರ್ಚಿ ಬಿಡುಮುಡಿಯಂ ಕೊಂಕಿದ ಕೊರಲಿಂದೌಂಕಿ ಪೊಱವಾಱ ಪೊಱೆಗಮೋಱಂಡಲಮಾಗಿ ಕೊಂಡು ಜೋಲ್ವ ಕಚಭರಮನುರದೆಗೊಂಡು ನೆಗಪಲ್ ಪೋಪ ನಲ್ಲರಳಿಪಂ ತೋಱಿ ತುಡುಕಿ ತೆಗೆದಪಾಂಗಕ್ಕೆ ಪಂಗಾಗಿ ಸಡಗರದಿನೇೞ್ವ ಸೌಭಾಗ್ಯವತಿಯರೞಿದಳಕದಿನಲ್ಲುಗುವ ಬಿರಿಮುಗುಳ ಪರಿಮಳಮನೆಡೆಸೂಱೆಗೊಳ್ವ ನಿಱೆ ದುಂಬಿಗಳ ಗಱೆಯ ಗಾಳಿಯನುಱೆ ಸೆಱೆವಿಡಿದುಂ ಸೋಂಕಿನ ಸೊಕದ ಸೀತ್ಕಾರಮೆ ವೇದನಾಸೀತ್ಕಾರಮೆಂಬ ಸಂದೆಗಮನೀವ ಪುರಸೌಂದರಿಯರ ಪಂದೆಮೊಗದ ಮುದ್ದುಗೆಯ್ತಕ್ಕೆ ಮುಗುಳ್ನಗೆನಗುತ ಮುಗುಳೊತ್ತಿನೊಳ್ ಪತ್ತಿದ ತುದಿಗೂದಲನೂದಿಯೂದಿ ಬಿಡಿಸುವ ಕಾದಲರ ಸುಯ್ಯೆಲರ್ಗೆ ಸಹಾಯನಾಗಯುಂ, ಅಳಿಮುಳಿಸಂ ಬಿದಿರ್ಚಿಯುಮಪ್ಪಿ ದಪ್ಪುಗಳನಮರ್ಚಿಯುಂ, ಪಾಸಿನೊಳ್ ಪೊರಳ್ಚಿಯುಂ, ಪೋದ ಸವಿಯಂ ಮಗುೞ್ಚಿಯುಮಿಲ್ಲ ದಳವನೊಡರಿಸಿಯುಂ, ಕೂಟದ ತೋಟಿಯೊಳ್ ತೊಡರಿಸಿಯುಂ, ಅಗಲ್ದ ಮನಮಂ ಮಣಿಯಿಸಿಯುಂ, ತಣ್ಪಿನೊಳ್ ತಣಿಯಿಸಿಯುಮಿಂತು ಸುಪ್ರಭಾತಸಮಿರಣಂ ತೀಡುತ್ತಿರೆ –

ಸ್ಫುರಿತಂ ತಾಮ್ರಧರೋಷ್ಠಂ ಸುಖದರದಳಿತಂ ದೀರ್ಘನೇತ್ರೋತ್ಪಳಂ ನಿ
ಸ್ಸರದಲ್ಪಶ್ವಾಸರಮ್ಯಂ
ಸ್ಮಿತವದನವನೇಜಂ ನಿವರ್ತಶ್ಲಥಂ ಭಂ
ಗುರಭಾಗೋದ್ಬದ್ಧಕೇಶಂ
ಶ್ರಮಜಳಲುಳಿತಂ ರೋಮಭೇದಂ ಕರಂ ಸುಂ
ದರಮಾದತ್ತಾಕುಮಾರಂ
ಪರವಶನಿರೆ ನಿದ್ರಾಂಗನಾಸಂಗದಿಂದಂ        ೨೧

ನೆರವಾಯ್ತು ಕೆತ್ತುವಂತಃ
ಕರಣಂ
ಪ್ರಸ್ಪಂದಸುಭಗದಕ್ಷಿಣಭುಜಕಂ
ದಿರೆ
ವಾಮಪಾರ್ಶ್ವಶಯನದೊ
ಳರಸಂ
ಕಾಣ್ಬಂತೆ ಯುವತಿನವದರ್ಶನಮಂ  ೨೨

ಪಿರಿದುಂ ಕಣ್ಣಿಂ ಮುನ್ನಂ
ನೆರೆದುದು
ತವಕದೊಳೆ ಚಿತ್ತವೆನೆ ಕನಸಿನೊಳಾ
ದರಿಸಿ
ಪದಿನಾಱುಬರಿಸದ
ಹರೆಯದ
ಕನ್ನಿಕೆಯನವನಿಪಾಲಂ ಕಂಡಂ     ೨೩

ತರುಣಿ ತರಳಲೋಚನೆ
ಯಾತನ
ಕಣ್ಬರಿಗೆ ನಾಣ್ಚಿದಂತಿರೆ ನಿದ್ರಾ
ದೂತಿ
ತರೆ ಬಂದು ಮನಮಂ
ಚೇತೋಭವಮಾಯೆಯಂತಿರಂದೊಳಪೊಕ್ಕಳ್
        ೨೪

ಮತ್ತೆ ನಿಜಭಾಮಮಲ್ಲದೆ
ಮತ್ತಿನ
ಭಾವಂಗಳುದಯಮಿಲ್ಲದ ಪದದೊಳ್
ಮತ್ತಗಜಗಮನೆ
ರಮಣನ
ಚಿತ್ತಮನೊತ್ತರಿಸಿ
ಬಂದು ಪುಗುತರ್ಪಾಗಳ್  ೨೫

ಉನ್ನತನಿತಂಬಭರದಿಂ
ಮುನ್ನುಂಡಲತಗೆಯ
ರಾಗಮಂ ಕಾಱುವವೋಲ್
ಮುನ್ನಂ
ಸೊಗಯಿಸಿದುವು ಮಿಗೆ
ಕನ್ನೆಯ
ಕನದರುಣಚರಣಕೋಕನದಂಗಳ್   ೨೬

ನೆರವುಳ್ಳೊಳುನಡೆಯೊಳ್
ಚ್ಚರವುಳ್ಳೊಡೆ
ಬರ್ಪುದೆಂದು ಬಾಲಮರಾಳೋ
ತ್ಕರಮಂ
ಬಯಲ್ಗೆ ಕರೆವಂ
ತಿರೆ
ತರುಣಿಯ ಚರಣರಣಿತನೂಪುರಮೆಸೆಗುಂ         ೨೭

ಮೃಗಲೋಚನೆಯೊಳ್ದೊಡೆಗಳ
ನಗಲದೆ
ನೋಡಿದರ ನಯನರುಚಿಗಳ್ ನುಣ್ಪಿಂ
ಜಗೞ್ದು
ಕೆಡೆದಿರ್ದುವೆನೆ ಕಾ
ಲುಗುರ್ಗಳ
ಕಿಱುವೆಳಗು ಕೆದಱಿ ಕರಮೆಸದಿರ್ಕುಂ      ೨೮

ಕ್ರೀಡನಶೀಲಂ ಮದನಂ
ಮಾಡಿಸಿದಂ
ನಿಜನಿಕೇತನೋಪಾಂತಿಕದೊಳ್
ಕ್ರೀಡಾದ್ರಿಯನೆನೆ
ಚೆಲ್ವಂ
ನೀಡಿದುದಾ
ಘನನಿತಂಬೆಯಲಘುನಿತಂಬಂ  ೨೯

ಸುದತಿಯ ತನುರುಚಿಜಳದೊಳ್
ವದನಾಂಬುಜರೆಣುವುದಿರ್ದು
ವಳಿವೀಚಿವಿಘಾ
ತದೆ
ನೊರೆಗಟ್ಟಿತ್ತೆನೆ ಪೊಳೆ
ದುದು
ಕಾಂಚನಕಾಂಚಿ ಜಘನಪುಳಿರಸ್ಥಳದೊಳ್       ೩೦

ಸ್ತನದುನ್ನತಿಯಂ ಜಘನದ
ತನಿವೆರ್ಚಂ
ನೋಡಿ ನೋಡಿ ಬಡವಾಯ್ತೆನೆ ಕಾ
ಮಿನಿಯ
ನಡುವೆಸೆದುದಲ್ಪಂ
ಘನಮೆನಿಸಿದ
ನೆರೆಯ ಸಿರಿಗೆ ಸೈರಿಸಲಾಱಂ ೩೧

ಶೈವಾಳಜಾಳವಲ್ಲರಿ
ಪೀವರಕುಚಕೋಕಮಿಥುನಮೊಲೆದೊಂದೊಂದ

ರ್ಕೀವಲ್ಲಿ
ಜಗೞ್ದುದೆನೆ ರೋ
ಮಾವಳಿ
ರಂಜಿಸಿದುದಾ ಸರೋಜಾನನೆಯಾ ೩೨

ಸ್ತನದ ನಿತಂಬದ ಬಿಣ್ಪಂ
ವನಜಭವಂ
ತೂಗಿ ನೋಡೆ ನಡುವಂ ಪಿಡಿದಾ
ತನ
ಬೆರಲ ಪಜ್ಜೆ ಪತ್ತಿದು
ವೆನೆ
ವಳಿಗಳ್ ಕಣ್ಗೆವಂದುವಾ ಕೋಮಳೆಯಾ ೩೩

ಚಿತ್ತಭವಚಕ್ರವರ್ತಿಗೆ
ತತ್ತರುಣಿಮಚಕ್ರಮೊಗೆಯೆ
ದಿಗ್ವಿಜಯಕ್ಕೆಂ
ದೆತ್ತಿದಮಳ್ಗೂಡಾರದ

ಬಿತ್ತರಮಂ
ಗೆಲ್ದುವವಳ ವೃತ್ತಕುಚಂಗಳ್      ೩೪

ಮದನನವಳಂಗದೊಳ್ ಮಾ
ಣದೆ
ತಿರಿತರುತುರುಳೆ ನಾಭಿಕೂಪದೊಳವನ
ಭ್ಯುದಯಕ್ಕೆ
ವದನವಿಧು ನೀ
ಡಿದ
ಬಿಸಲತೆಯಂತೆ ಹಾರಲತೆ ಸೊಗಯಿಸುಗುಂ      ೩೫

ಬೆಳದಿಂಗಳ ಕುಡಿವೆಳಗಿಂ
ನಳಿತೋಳಂ
ಮಾಡೆ ಧಾತ್ರನೊಸರ್ವಮರ್ದಿನೊಳ
ಗ್ಗಳಿಸಿದ
ಲಾವಣ್ಯರಸಂ
ಗಳೆ
ಪನಿತಪುವೆನಿಸಿ ವನಿತೆಯುಗುರ್ವೆಳಗೆಸೆಗುಂ      ೩೬

ಅಲರ್ಮುಡಿಯೆತ್ತಿದ ಪೞಯಿಗೆ
ಮಲಗಿದ
ಕಿವಿವಾಲೆಯೋಲೆ ಗಾಲಿಗಳೆನಲಾ
ನಲಿನಾಕ್ಷಿಯ
ಮುದ್ದುಮೊಗಂ
ಗೆಲೆವಂದುದು
ಕುಸುಮಶರನ ಪೂವಿನ ರಥಮಂ       ೩೭

ಕಂದರ್ಪಂ ಪೊಳೆವಸುಕೆಯ
ಕೆಂದಳಿರಿಂ
ಸಮೆದು ತನ್ನ ಕೈಪೊಡೆಯಂ ಪೂ
ರ್ಣೇಂದುಗೆ
ಕೈಯೆಡೆಯಂ ಕೊ
ಟ್ಟಂದದಿನಾ
ಚಂದ್ರಮುಖಿಯ ಬಾಯ್ದೆಱೆಯೆಸೆಗುಂ      ೩೮

ಪವಳದ ಬಟ್ಟಂ ನುಣ್ಪಿಡು
ವವೊಲಾನನಲಕ್ಷ್ಮಿ
ಮುತ್ತುಗಳ ಬೆಳಗಿಂದಾ
ಯುವತಿಯ
ಬಾಯ್ದೆಱೆಯೊಳ್ ಮಿಂ
ಚುವ
ಬೆಳಗಂ ದಶನಮಣಿಗಳೇಂ ತುಳ್ಕಿದುವೋ        ೩೯

ಸ್ಮರನ ಬಿನದಕ್ಕೆ ಲೋಚನ
ಕರಿಗಳ್
ಕೈಯಿಕ್ಕಲೆಂದು ನಿಲೆ ಸಂಪಗೆಯೊ
ಳ್ಬಿರಿಮುಗುಳ
ತೊಳಪ ತಳಿಯೆನೆ
ಕರಮೆಸೆದುದು
ಕಮಳಮುಖಿಯ ನಾಸಾಮುಕುಳಂ    ೪೦

ಒಂದೊಂದಱ ಸೌಂದರ್ಯಮ
ನೊಂದೊಂದೀಕ್ಷಿಸಲೆ
ಬಯಸಿ ನಾಸಿಕೆಯಡ್ಡಂ
ಬಂದಿರೆ
ಪೊಱವಳಸಿಂದಂ
ಬಂದಪುವೆನೆ
ನಿಮಿರ್ದುವವಳ ನಿಡಿಯಲರ್ಗಣ್ಗಳ್      ೪೧

ತರುಣಿಯ ಮುಖಚಂದ್ರಮನೊಳ್
ಹರಿಣನುಮಂ
ಬರೆಯಲೆಂದು ಭಾವಿಸಿ ಬಿದಿ ಸುಂ
ದರತೆಗೆ
ಮರುಳ್ದು ಬಱಿಗೊಂ
ಬೆರಡನೆ
ಬರೆದಂತಿರಸಿಯ ಪುರ್ವುಗೆಳೆಸೆಗುಮ         ೪೨

ಇಂಬಾದುದವಳ ಧವಳಚ
ಳಾಂಬಕ
ವಿಷಮಾಂಬಕಂ ಕರಂ ಕೊಂಕಿದ ಪು
ರ್ಬೆಂಬ
ಜಡೆಯಲ್ಲಿ ತೊಳಗೆ ತು
ಱುಂಬಿದ
ಪೆಱೆಯಂತೆ ಪೆಱೆನೊಸಲ್ ಬಾಲಕಿಯಾ     ೪೩

ಕೆಳೆಗೊಳಲೆಂದನುನಯದಿಂ
ದೆಳವೆಱೆಯೊಡನಾಡುತಿರ್ಪ
ಮಱೆಗೞ್ತಲೆಗ
ಳ್ಗೊಳಗಾದ
ಚೆಲ್ವನೊಲಿಸಿದು
ವಳಿಕುಳಕುಂತಳೆಯ
ನೊಸಲೊಳಲೆವಳಕಂಗಳ್      ೪೪

ತಳರದೆ ನಡೆ ನೋಡಲೊಡಂ
ಬಳೆಯಿಸಿ
ಮೋಹನಮನಸಿತಸರ್ಪನ ಮದಮಂ
ಗಳಿಯಿಸಿದ
ಲತಾಂಗಿಯ ಮುಡಿ
ಯೆಳಲತೆಯೊಳ್
ಸೋಗೆಪಾಯ್ದವೊಲ್ ಸೊಗಯಿಸುಗುಂ       ೪೫

ಕರುವಿಟ್ಟಂ ಕಾಮದೇವಂ ರತಿಯತಿಶಯದಿಂ ಬಣ್ಣವಿಟ್ಟಳ್ ಬಸಂತಂ
ಬರೆದಂ
ಸರ್ವಾಂಗಮಂ ಕಣ್ದೆಱೆದನೊಸೆದು ಶೀತಾಂಶು ಚೈತ್ರಾನಿಳಂ ತೀ
ವಿರೆ
ಜೀವಂಬೊಯ್ದನಂತಲ್ಲದೊಡೆ ಸೊಗಯಿಪೀ ರೂಪಮೀ ಬಣ್ಣಮೀ ಮೆ
ಯ್ಸಿರಿಯೀ
ಕಣ್ಚೆಲ್ಲಮೀ ಭಾವಕಮೊಗೆಯದೆನಲ್ಕಾಂತೆ ಕಣ್ಗೆಡ್ಡಮಾದಳ್     ೪೬

ಮನಮಂ ಸೋಲಿಸಲಂಗಜಂ ಬಯಸಿ ಕಾಂತಾರೂಪದೊಳ್ತಳ್ತ ಮೋ
ಹನಮೋ
ಸುವ್ರತಿಯಾಗಿ ಪೆತ್ತನೊ ವಸಂತಂ ಪೆಣ್ಣರೂಪಂ ಗಿರೀ
ಶನನಾಧಿಸಿ
ಮೇಣ್ ವರಂಬಡೆದನೋ ಪೆಣ್ಗಾಡಿಯಂ ಚಂದ್ರಮಂ
ನನೆಯಂಬಂ
ತವೆನೋಂತು ಪೆಣ್ಬರಿಜನೆಂಬಂತಾಕೆ ಕಣ್ಗೊಪ್ಪಿದಳ್        ೪೭

ಬೆಳತಿಗೆಗಣ್ಗೆ ನೋಂತ ಲತೆಯೋ ಲಲಿತಾಂಗಿಯೊ ಮುದ್ದುಗೆಯ್ತಮೊ
ಲ್ದೆಳಸಿದ
ಪೊನ್ನ ಪುತ್ಥೞಿಯೊ ಕಾಂತೆಯೊ ಪೂಮುಡಿ ಬಿಟ್ಟು ಬೆನ್ನನ
ಪ್ಪಳಿಸುವ
ಸೈಪಿನಬ್ಜಿನಿಯೊ ಕಾಮಿನಿಯೋ ಮೊಲೆವೊತ್ತಭಾಗ್ಯಮಂ
ತಳೆದೆಳಮಿಂಚೊ
ಕೋಮಳೆಯೊ ಪೇೞೆನ ಬಾಳಕಿಯಾದಮೊಪ್ಪಿದಳ್    ೪೮

ಆ ಕೋಮಳೆ ವಿಕಸಿತಕಮಳಲೋಚನೆಯಾಗಿಯುಂ ಚಂದ್ರಾನೆನೆಯುಂ, ಕರ್ಣ ವಿಶ್ರಾಂತವಿಶಾಲಾಪಾಂಗೆಯಾಗಿಯುಮತನುವಿಜಯಪತಾಕೆಯುಂ, ಅಳಿಕಳಭಕುಳ ಕಾಂತಕುಂತಳೆಯಾಗಿಯುಂ ನಿರವಧಿಮಾಧುರ್ಯನಿಧಿಯುಂ, ಸಮದಾಳಿ ಸುಭಗಭ್ರೂಲತೆಯಾಗಿಯುಮುತ್ತುಂಗಪಯೋಧರೆಯುಮೆನಿಸಿದಳಂತುಮಲ್ಲದೆಯುಂ; ವನಲಕ್ಷ್ಮಿಯಂತೆ ಮೃದುಲತಾಳಂಕಾರೆಯುಂ, ನಾಕವನಲೇಖೆಯಂತಿರವಗಾಢ ಸರೋಮರಾಜಿಸುಂದರಮಧ್ಯೆಯುಂ, ಶೈಲಸುತೆಯಂತೆ ಸುವಿಕಾಶಕಶಹಸ್ತಚುಂಬಿತನಿತಂಬೆಯುಂ, ಸೌಂದರ್ಯಶ್ರೀಯಂತೆ ಸುಲಲಿತಗುಣಬಾಹುಲತೆಯುಂ, ಉದಧಿವೇಲೆಯಂತಿರಧರ ಪ್ರವಾಳವಿಳಸಿತೆಯುಂ, ಸಿರಿಯಂತೆ ಸುರಭಿಸರೋಜವಾಸೆಯುಂ, ಸರಸ್ವತಿಯಂತೆ ಕಳಹಂಸಯಾನೆಯುಂ, ಪುಣ್ಯಲಕ್ಷ್ಮಿಯಂತಿರದೃಷ್ಟ ಪೂರ್ವೆಯುಂ, ವಿಭಾತವೇಳೆಯಂತೆ ಶುಭಸ್ವಪ್ನದರ್ಶಿತಫಲೆಯುಂ; ಪುಷ್ಟಪಚಾಪಂಗೆ ಚಾಪಾಗಮಾಶ್ರಯಭುಮಿಯುಂ, ಸ್ಮರಸಾಧಕಂಗೆ ಶೃಂಗಾರನಿಧಾನದೀಪವರ್ತಿ ಕೆಯುಂ, ಮಕರಧ್ವಜಸಿದ್ಧಂಗೆ ವಶೀಕರಣಮಂತ್ರಸಿದ್ಧಿಯುಂ, ಮದನಮಾತಂಗಕ್ಕೆ ಮದಲಕ್ಷ್ಮಿಯುಂ, ಮಾರಮಾಂತ್ರಿಕನ ಮಾರಣಯಂತ್ರಲೇಖೆಯುಂ, ಮಧುಮಿತ್ರ ವಿಧಾತ್ರನ ಭುವನವಿಲೋಚನ ಸೃಷ್ಟಿಯುಂ, ಚಿತ್ತಭಿತ್ತಿಗೆ ಚಿತ್ರಲೇಖೆಯುಂ, ಮನಕ್ಕೆ ಮೋಹನಶಕ್ತಿಯುಂ, ಲೋಚನಲೋಹಕ್ಕಯಸ್ಕಾಂತಪುತ್ರಿಕೆಯುಂ, ಇಂದ್ರಿಯ ಮೃಗಕ್ಕೆ ಮರುಮರೀಚಿಕೆಯುಂ, ಸೊಕ್ಕಿನಿಕ್ಕೆದಾಣಮುಂ, ಪೊಸದೇಸೆಯ ಒಕ್ಕಲುಂ, ಕೌತುಕದ ಕಣಿಯುಂ, ಕಾಮನ ಚಿಂತಾಮಣಿಯುಂ, ಯೌನದ ಜೊತ್ತುಂ, ಬೆಡಂಗಿನ ಬಿತ್ತುಂ, ಚೆಲ್ವಿನ ಚಿತ್ತಮುಂ, ವಿಳಾಸದ ವಿತ್ತಮುಂ, ಕಂತುಕೀರ್ತಿಕುಸುಮದ ಕಂಪುಂ, ಸುರತಸುಖದಿಂಪುಂ, ರಾಗಲತೆಯ ಕುಡಿಯುಂ, ಕಾಂತಿಯಂಕುರದ ಮುಡಿಯುಮೆಮಿಸಿದ ಸರ್ವೈಶ್ವರ್ಯರೂಪಾತಿಶಯಮಂ ಮನಮೆ ಕಣ್ಗಳಾಗೆ ಕಂದರ್ಪದೇವಕುಮಾರನತಿಕೌತುಕದಿಂ ತೀಡುಂ ಭಾವಿಸಿ ನೋಡುತ್ತಿರ್ಪುದುಂ –

ಸುದತೀಸಸ್ಮೇರವಕ್ತ್ರೇಂದುವನಿದೆ ಮಱೆಗೊಂಡೆಚ್ಚಪಂ ಕಾಮನಂತ
ಲ್ಲದೊಡೇಕೀ
ಭ್ರೂಲತಾಚಾಪದ ತನಿಮಿಡುಕೇಕೀ ಚಳತ್ಪಕ್ಷ್ಮ ಮಾಳಾ
ಮದಭೃಂಗಶ್ರೇಣಿಮೌವೀಸ್ಫುರಣೆ
ಮುಸುಱಿ ಮೇಲೇಕೆ ಪಾಯ್ದಪ್ಪುವೀ
ಮ್ಮದ
ಸಾಹಂಕಾರ ಸಾರೋತ್ಪಳ ಚಳದಳ ದೀರ್ಘಾಕ್ಷಿಬಾಣಪ್ರಪಾತಂ    ೪೯

ಎಂಬಿನಮಾತನನಾ ದಳಿ
ತಾಂಬುಜಮುಖಿ
ಸೋಲ್ತ ಭಾವಮಂ ಬೀಱುವ ನೇ
ತ್ರಾಂಬುಜದಿಂ
ಮೋದಿದಳೇ
ನೆಂಬೆನೊ
ಬಿನದಮನಪೂರ್ವಮಂ ಪದ್ಮಜನಾ         ೫೦