ಪಾಡುವ ಗೀತಮಂ ಜತಿಗಳಂ ಶ್ರುತಿ ಸೂಡೆ ವಿಲಾಸ ಲಕ್ಷ್ಮಿಯಂ
ಸೂಡೆ
ವಿಲೋಚನೋತ್ಪಲದಳಂ ಪುಳಕಾಂಕುರ ಸಂಕುಳಂಗಳಂ
ಸೂಡೆ
ನಿಜಾಂಗವಲ್ಲಿ ಮನಮುತ್ಸವದಿಂ ಕುಸುಮಾಸ್ತ್ರಮಾಲೆಯಂ
ಸೂಡೆ
ವಿರೋಧಿರಾಜಕುಳರಾಹುಗೆ ರೋಹಿಣಿ ಮಾಲೆ ಸೂಡಿದಳ್          ೪೦

ವ|| ಸೂಡಲೊಡನೆ ರಾಜಕುಮಾರರ ಮನದೊಳ್ ಸೂಡೆರ್ದಂತಾಗೆ ಚಕ್ರವರ್ತಿಗಂ ಮಂಡಳಿಕರ್ಗಂ ಕುಡಲಿರ್ದ ಕೂಸಂ ದೇಸಿಗಂ ಕೊಂಡನಿದೇನೆಂದು ಮಾಮಸಕಂ ಮಸಗಿ ಮುಳಿದು ಬಾಲಭಾಸ್ಕರನ ಮೇಲೆ ದೊಡ್ಡಿತಪ್ಪ ತಮದೊಡ್ಡು ಕವಿವಂತೆ ಕಿಶೋರಕೇಸರಿಯ ಮೇಲೆ ದಂತಾವಳದೊಡ್ಡು ಕವಿದು ಮುಸುಱಿ ಮುತ್ತುವಂತೆ ವಸುದೇವನ ಮೇಲೆ ರಾಜಕುಮಾರರೊಡ್ಡು ಕವಿದು ಮುಸುಱಿ ಮುತ್ತಿದಾಗಳ್

ಕಿವಿ ಕೋಲಂ ಕೋಟಿಯಂ ಕಾಱಿದಪುಮೊ ಬೆರಲಿಂ ಬಾಣಮಂ ಭೋರೆನೀದ
ಪ್ಪುವೊ
ಚಂಚನ್ಮೌರ್ವಿ ಚುಮ್ಮೆಂದುಗುೞ್ದಪುವೊ ಶರಶ್ರೇಣಿಯಂ ಮಾಣದೆಂಬಂ
ತೆವೊಲಡ್ಡಂ
ಕಾಯ್ಪಿನಿಂದಂ ಕವಿಯೆ ಜವಕೆ ಕೆಯ್ವೊಯ್ದುಪಾಯ್ದಂಬನಂಬ
ಟ್ಟುವವೊಲ್
ಪುಂಖಾನುಪುಂಖಂ ಮೊೞಕಲಿಸೆ ಮನೋವೇಗದಿಂ ಬೇಗಮೆಚ್ಚಂ     ೪೧

ನೀಡಿದ ನಾಲಗೆಯಂತಿರೆ
ಪೂಡಿದ
ಕಣೆ ಕುಣಿದು ತೆಗೆದು ಕೊಮರನ ಬಿಲ್ಲೊಳ್
ಮೂಡಿದುದು
ನುಂಗಲಹಿತರ
ಪಾಡಿಗಳಂ
ಮಸಗಿ ಮಿೞ್ತು ಬಾಯ್ದೆಱೆದ ತೆಱಂ ೪೨

ಅಲಗುನಡೆ ಪರೆದ ಬಿಸಿಲವೊ
ಲಲಗಲಗಿನೊಳೊರಸಿ
ಪುಟ್ಟಿದುರಿ ಸುರಿದುವು
ೞ್ತಲಿಸಿದುದು
ದೆಸೆ ದಿನೇಶಂ
ಪೊಲಗೆಟ್ಟಂ
ಮಸಗಿ ಮಿಸುಕದಿಸೆ ವಸುದೇವಂ         ೪೩

ಮಱಿದುಂಬಿಯಲರ್ದ ಸಂಪಗೆ
ಗೆಱಗದವೊಲ್
ತಪ್ಪಿ ಪಾಱಿದುವು ಪಿರಿಯಣ್ಣಂ
ಪೊಱಮುಯ್ವವರಂ
ತೆಗೆದೆ
ಚ್ಚಱಿಕೆಯ
ಪೊಸಗಱಿಯ ಕಣೆಗಳವನವರಜನಂ        ೪೪

ಅದಟರನೊಂದೆ ಶಾತಶರದಿಂ ತುರಗಂಗಳನೊಂದೆ ಬಾಣದಿಂ
ಮದಗಜದೊಡ್ಡನೊಂದೆ
ಕಣೆಯಿಂದ ನಿವಾರಿಸೆ ಪೊರ್ದೆ ಪಾದಪ
ದ್ಮದ
ಮೊದಲೊಳ್ ನಿಜಾಗ್ರಜನನೆಚ್ಚ ಶಿಲೀಮುಖಮಾಗಳಂಬು
ಪ್ಪಿದೊಡಭಿವಾದ್ಯವೆಂಬತೆಱದಿಂ
ಪೊಡೆವಟ್ಟನಪಾರಪೌರುಷಂ   ೪೫

ವ|| ಪೊಡೆವಡುವುದಂ ನಿರವಿಸಿ ವಸುದೇವನೆಂದಱಿದು

ಕೆಯ್ತಪ್ಪಾದುದು ಕಾದಲೊರ್ವನೆ ಸಮಗ್ರಾನೀಕದೊಳ್ ಕೋದುಕೋ
ಲ್ವೊಯ್ವಂ
ಬಾಳಕನೊಕ್ಕತಪ್ಪಮುಡುಗಲ್ಕೇಂ ಬರ್ಕುಮೇ ಗಂಟಲಂ
ಕೊಯ್ದಂ
ಕೈತವದಿಂದಮೆಂದೊಗೆದ ನೋವಂ ಸಂತಸಂ ನೂಂಕೆ ಮೇ
ಲ್ವಾಯ್ದಿಂದ್ರೇಭಸಮಂ
ಸಮುದ್ರವಿಜಯಂ ತೞ್ಕೈಸಿದಂ ತಮ್ಮನಂ         ೪೬

ಮಿಸಿಸೆ ಸುಖದಶ್ರು ಪುಳಕಂ
ಪಸರಿಸೆ
ಬಿಲ್ಲೊಂದು ಜಾವಮಪ್ಪಿನಂ ಪಸವೋ
ಡೆ
ಸಮುದ್ರವಿಜಯನಪ್ಪಿರೆ
ವಸುದೇವನುಮಪ್ಪಿಕೊಂಡು
ತೋಱಿದನಳವಂ         ೪೭

ವ|| ಬೞಿಯಂ ಬಳಮುಕ್ಯರಪ್ಪ ಜರಾಸಂಧನಂಗಮಗ್ರಜನ ಬೆಸದಿನೆಱ್‌ಇ ಮಱುದಿವಸಂ ಸ್ವಯಂಬರಕ್ಕೆ ನೆರೆದರಸುಮಕ್ಕಳೆಲ್ಲಂ ನಿಬ್ಬಣಿಗರಾಗೆ ರೋಹಿಣಿಯೊಳ್ ಮದುವೆನಿಂದು ಮಗುೞ್ದು ಸೂರ್ಯಪುರಕ್ಕೆ ಪೋಗಿ ಸುಖಸಂಕಥಾ ವಿನೋದದಿಂದಮಿರ್ದನಾ ಮಹಾನುಭಾವನ ಸೌಭಾಗ್ಯಭಾಗ್ಯ ಸಂಭೋಗಮಂ ಪೇೞ್ವೊಡೆ

ಬರೆ ಭರದಿಂದ ನಿಬ್ಬಣಕೆ ರತಿಯುಂ ವಸಂತನುಂ
ವರ
ವನಲಕ್ಷ್ಮಿಯುಂ ಶಶಿಯುಮಾತನ ರೋಹಿಣಿಯುಂ ಶಿರೀಷಮುಂ
ಸುರಯಿಯುಮಾಮ್ರಮುಂ
ಮಿಸುಪ ಮಲ್ಲಿಗೆಯುಂ ವಸುದೇವನಾಳ್ದ ನೀ
ಧರೆಡ
ಪೊಗೞಲ್ಕೆ ಷೋಡಶಸಹಸ್ರ ವಿವಾಹಮಹೋತ್ಸವಂಗಳಂ ೪೮

ಗುಣನಿಧಿಯುದಯಿಸಿದಂ ರೋ
ಹಿಣಿಗಂ
ವಿಧುವಿಂಗಮುದಯಿಪಂತೆ ಬುಧಂ ರೋ
ಹಿಣಿಗಂ
ವಸುದೇವಂಗಂ
ರಣರಸಿಕಂ
ಪ್ರಬಲನತಿಬಲಂ ಬಲದೇವಂ     ೪೯

ವ|| ಅಂದಾ ಸ್ವಯಂವರದೊಳ್ ತನ್ ಬಲ್ಲ ಬಿಲ್ಲಬಿನ್ನಣಂಗಂಡು ಬಂಟರಾಗಿ ಬೞಿಸಂದು ಬೆಸಕೆಯ್ದು ಬೇಡಿಕೊಂಡ ರಾಜಕುಮಾರರ್ಗೆ ಬಿಲ್ಲವಿದ್ದೆಯಂ ಕಲಿಸುತ್ತುಮಿರ್ಪ ವಸುದೇವನಲ್ಲಿಗೆ

ಸುಡುದಲೆ ಬಿಟ್ಟಕಣ್ ಕಲಿಮೊಗಂ ಕಡಿಗೊಂಡುಡೆ ಬೆಟ್ಟಿತಪ್ಪ ಕೈ
ಯಿಡಿದು
ಪೊರೞ್ಚಿ ಮಾಡಿದಮೊಲಿಪ್ಪೊಡಲೊಪ್ಪುವ ರೂಪು ತುಪ್ಪಮಂ
ತೊಡೆದವೊಲಪ್ಪ
ಮೀಸೆ ಮಿಸುಗುತ್ತಿರೆ ಬಂದನದೊರ್ವನೊಂದು ಬಿ
ಲ್ವಿಡಿದು
ಯುವಾನನಲ್ಲಿಗೆ ನವೀನ ನವೀರನದೋತ್ಕಟಂ ಭಟಂ  ೫೦

ವ|| ಬಂದು ವಸುದೇವಂಗೆ ತುೞಿಲ್ಗೆಯ್ವದುಮರಸನೆತ್ತಣಿಂ ಬಂದೆಯೆತ್ತ ಪೋದಪೆ ನಿನ್ನ ಪೆಸರೇನೆಂಬುದೆನೆ ಭಟನಿಂತೆಂದ

ಜನನಾಥಾ ನಿತ್ಯಚಂದ್ರೋಯ ಧರಣಿಪತೀ ನಾಡುನಾಡುಂ ತೊೞಲ್ದೆಂ
ಧನುವಂ
ಕಲ್ವೞ್ತಿಯಿಂ ಬಿಲ್ಲೊಜನನಱಸಿ ಬಿಲ್ವಲ್ಮೆಯೊಳ್ ದೇವ ನೀಂ ದೇ
ವನೆಯಾನುಂ
ಚಟ್ಟನಾಗಲ್ ನಿನಗೆ ಬಗೆದು   ಯುಷ್ಮದ್ವಿಷಧ್ವಂಸನೆಂ ಕಂ
ಸನೆನೆಂಬೆಂ
ನಿನ್ನ ವಿಖ್ಯಾತಿಯನಖಿಳ ದಿಶಾಚಕ್ರದೊಳ್ ಕೇಳ್ದುಬಂದೆಂ    ೫೧

ವ|| ಎನೆ ಕೈಕೊಂಡು ಕೋದಂಡ ವಿದ್ಯೆಯಂ ಕಲಿಸುತ್ತುಮಿರೆ ಕಂಸಂ ವಸುದೇವಂಗೆ ಚಟ್ಟನಾಗಿ ಮಿಕ್ಕಚಾಪಾಚಾರ್ಯರ್ಗೋಜನಾಗಿ ಧನುರ್ವಿದ್ಯೆಯಂ ಸಾಧಿಸುತ್ತುಮಿರ್ದನನ್ನೆಗಂ

ಪೌದನಪುರವನಿತೆಗೆ
ಮ್ಮೇದನಗಶ್ರೀನಿತಂಬ
ಕಳಕಾಂಚಿಗೆ ತಾ
ನಾದನಭಿನವ
ಪಯೋಧರ
ನಾದಂ
ಪತಿತಾಳಹಸ್ತನೆಂಬನಳುಂಬಂ       ೫೨

ಅವನೊರ್ಮೆ ಪಿಡಿದು ಕಂಠೀ
ರವ
ಪೋತುಮನೋತು ಪೊರೆದು ಪಿರಿದಪ್ಪುದುಮೇ
ಱುವನಾಗಿ
ಪರಿಯುತಿರ್ದಂ
ಭುವನದೊಳಾತಂಗೆ
ಸಿಂಹರಥನೆಂಬ ಪೆಸರ್ ೫೩

ಕುಱಿಯ ಕಡಿಯಣಕೆ ಬಾಯಂ
ತೆಱೆಯದಿರಿಂ
ಬಾಯ ಕರುಳೆ ಕಡಿಯಣಮಾಯ್ತೆಂ
ದುಱನೆ
ನೃಪಸಿಂಹನೇಱಲ್
ಮಱುಗುವನೇಱನೆ
ಕಡಂಗಿ ಸಿಂಹಮನಾತಂ  ೫೪

ಕರಿಯಂ ಸಂಕ್ರಂದನಂ ಮೇಷಮನಸಿತಪದಂ ಕೋಣನಂ ಕಾಲನಾಳಂ
ಕರಸಾದಂ
ಯಾದವೋದಂ ವರುಣನೆರಲೆಯಂ ವಾಯು ಪಾಱಂ ಕುಬೇರಂ
ಪಿರಿಯೆೞ್ತಂ
ರುದ್ರನಾರ್ದೇಱಿಯುಮೊದವಿದಪರ್ ದೇವರೆಂದೆನ್ನವೋಲ್ ಕೇ
ಸರಿಯಂ
ಪಾಯ್ದೇಱಿದಂದೇಂ ತೊಡರ್ವರೊ ಜಡರೆಂದೇೞಿಪಂ ತಾಳಹಸ್ತಂ        ೫೫

ಹರನೆೞ್ತಂ ಯಕ್ಷನೇಳಂ ಪವನನೆರಲೆಯಂ ಸಾಗರಾವಾಸನಂಭ
ಶ್ಚರಮಂ
ನೈಋತ್ಯನಾಳಂ ಯಮನೆ ಮಹಿಷಮಂ ವಹ್ನಿಯಾ ಮೇಷಮಂ ಕೊ
ಕ್ಕರಿಕುಂ
ಸಂಗ್ರಾಮದೊಳ್ ಮನ್ಮೃಗಪತಿಯುಗುರುಂ ತಾಗಲಿಂದ್ರೇಭಕುಂಭಂ
ಬಿರಿವನ್ನಂ
ಪೊಯ್ಗುಮೆಂದೇಂ ಗಜಱುವನೊ ನಿಜಾಸ್ಥಾನದೊಳ್ ತಾಳಹಸ್ತಂ        ೫೬

ಉಕ್ಕಿಟ್ಟುದಕ್ಕೆನೆಂಬವ
ನುಕ್ಕಂ
ತಾಂ ಬಿಟ್ಟನಾಗಿ ಸಿಂಹಮನೇಱಲ್
…………………………………
……………………………….
………………………………..
        ೫೭

………………………………..
…………………………………
ಕೊಟ್ಟೆನಾವಿರೆ
ಗಜಾರಿಯ
ಮಟ್ಟಂ
ಬೆನ್ನೇಱುವರ್ಗೆಯೆಂಟೆರ್ದೆಯುಂಟೇ  ೫೮

ನಾಡೊಳಗೆ ಮೀಸೆದೆಱೆಯಂ
ಬೇಡಿಸುವಂ
ಬೀರರಸಿಯರವೆಸರಿಂ ಕೂ
ಸಾಡಿಸಲೀಯಂ
ಹುಲ್ಲುರಿ
ಯಾಡಿಸುವಂ
ತೇಜದುರಿಯಿನರಮೀಸೆಗಳಂ ೫೯

ವ|| ಎಂಬಗುರ್ವಿನ ಗರ್ವಸಿಂಹರಥನಾಂ ಜೀವಿಸುತ್ತುಮಿರೆ ಮತ್ತೊರ್ವನ ನೆತ್ತಿಯೊಳ್ ಸತ್ತಿಗೆಯಂ ಕಯ್ಯೊಳ್ ಕೈದುವುಂಟೆಂಬುದೆ ಮದೀಯ ರಾಜವೃತ್ತಿಗಂ ವೀರವೃತ್ತಿಗಂ ಭಂಗಮೆಂದು ಸಿಂಹದಸಹಾಯ ಬಲಮುಂ ಕೂರ್ಪುವಡೆದ ಕೈದುವಿನ ಬಲಮುಂ ಮುಪ್ಪುರಿಗೂಡಿದಂತಾಗೆ ಮೇಗೆ ಮೆಯ್ಯಱಿಯದೆ

ಬಿಡುವೆಸರ ಚಕ್ರಿಯಪ್ಪೊಡೆ
ಮಡಕೆಗಳಂ
ಮಾಡಿ ಕಳಿಪುಗಲ್ಲದೊಡೀಗಳ್
ಮಡಕೆಗೆಡೆಮಾಡಿ
ಕೊಳ್ಗೆಂ
ದಡರ್ದು
ಜರಾಸಂಧ ಚಕ್ರಿಗಾತಂ ಭೂತಂ     ೬೦

ವ|| ಅಟ್ಟುವುದುಂ ಪೊಱಮಟ್ಟಾಸುರಂ ಮಸಗಿ ಮೀಸೆಯಂ ಕಡಿದು ಕಿಡಿವೋಗಿ ಕಡೆಗಣ್ಣ ಕೋಪದುರಿ ಪೊತ್ತಿ ಪರಕಲಿಸಿ ಪರ್ವಿದಂತೆ ತಳತ್ತಳಿಸುವ ಚಕ್ರವರ್ತಿಯ ಕಯ್ಯಂ ನೀಡುವುದುಮಾತನಿಂತೆಂದಂ

ಖಳನಂ ಗೆಲ್ವುದೆ ಭಂಗಂ
ಕೆಳೆಗೊಳ್ವುದೆ
ಕಷ್ಟಮವನೊಳಾಗದು ಪಗೆಯುಂ
ಕೆಳೆಯುಂ
ಕರಮರಿಯನೆ ನೀಂ
ಮುಳಿವನ್ನಂ
ನೃಪತಿಮೌಳಿಮಣಿಖಚಿತಪದಾ  ೬೧

ಕರಿಗೆ ಹರಿ ಹರಿಗೆ ಶರಭಂ
ಶರಭಕ್ಕೆಲೆ
ನೃಪತಿ ಮುಳಿಗುಮಾ ಭೇರುಂಡಂ
ನರಿಗೆ
ಹರಿ ಕರಿಗೆ ಶರಭಂ
ಹರಿಗೆಂದುಂ
ಮುಳಿಯಲಱಿಯದಾ ಭೇರುಂಡಂ        ೬೨

ವ|| ಎಂಬುದುಮನಂತ ಚಾತುರ್ಬಲನಂ ಬೆಸಸೆ ನೆಲಂ ಬೆಸಲೆಯಾದಂತೆ ಪೋಗಿ ಪೌದನಪುರದ ಪೊಱಗೊಡ್ಡಿನಿಲುವುದುಂ ಅಟ್ಟಿತಿಂಬ ದೈವಕ್ಕೆ ಪಾೞಂಬಟ್ಟಂತಾದುದೆಂದು ಸಿಂಹರಥಂ ಬಲದ ಕಳಕಳಕ್ಕೆ ಕೆಳರ್ದು

ತುೞಿಯೆ ಪದಾತಿಯಂ ತವೆ ತುರಂಗದೞಂ ತುರಗಂಗಳಂ ರಥಂ
ತುೞಿಯೆ
ರಥಂಗಳಂ ತುೞಿಯೆ ದಂತಿಗಳಿಂತರಿ ಸೇನೆಮಿೞ್ತು ತೊ
ತ್ತೞದುೞಿದಂತೆ
ತಮ್ಮೊಳಗೆ ಮುಮ್ಮೞಿಯಾಗಿರೆ ಗರ್ಜಿಸಿತ್ತು ಸೊ
ಕ್ಕೞಿಪಿ
ದಿಶಾಗಜಂ ರಣದೊಳೇಱಿದ ಕೇಸರಿ ತಾಳಹಸ್ತನಾ      ೬೩

ವ|| ಅದನೊರ್ವಂ ಮಾರಿಯುೞಿದಾಡಿನಂತೋಡಿ ಪೋಗಿ ಪೇೞೆ ಕೇಳ್ದುಂ ಜರಾಸಂಧಂ ಜರಾಜರ್ಝರನಂತೆ ಜಕ್ಕನೆ ಜಱಿದು ಸ್ವಯಂಬರದನುವರದೊಳ್ ವಸುದೇವನ ಕೂರ್ಪಂ ಕಂಡನಪ್ಪುದಱಿನವನಲ್ಲದಿವನ ಮಿತ್ತುವಂ ಮಿದಿಯಲಾರ್ಪರಿಲ್ಲೆಂದು ಶೌರಿಪುರಕ್ಕೆ ಪುರುಷರಂ ಕಳಿಪಿ ಸಿಂಹರಥನಾವೊಂ ಪಿಡಿದು ತಂದನವಂಗೆ ತನ್ನ ಮಗುಳುಮಂ ಬೇಡಿದ ನಾಡುಮಂ ಚಕ್ರವರ್ತಿ ಕೊಟ್ಟಪನೆಂದು ಗೋಸಣೆಯಿಡಿಸೆ ಕಂಸಂ ಪಿಡಿದು ವಸದೇವನಲ್ಲಿಗೆ ತಪ್ಪುದುಮಾನಕ ದುಂದುಭಿಧ್ವನಿಯಿಂ ಚಟ್ಟರೊಳಗೆ ಪೆಸರಂ ನಿಲಿಸಿದೆಯೆಂದು ನಲಿದು ಪ್ರಸ್ಥಾನಭೇರಿಯಂ ಪೊಯ್ಸಿ ಪೊಱಮಡುವಾಗಳ್ ನೀಂಬರಮಿದಾವ ಭರಮೆಂದು ಕಂಸಂ ನಿವಾರಿಸಿ ಪೇೞ್ದು ಪಡೆವೆರಸು ಪೌದನಪುರಕ್ಕೆತ್ತಿವರ್ಪುದುಂ ಸಿಂಹರಥಂ ಕೇಳ್ದು ಗಹಗಹಿಸಿ ಬಾಯ ತಂಬುಲಂ ಸೂಸೆ ಸೊರ್ಕಾನೆದಿಂಬಂಗಾಡೆ ಹೋೞಿಗೆಯೆಂಬಂತೆ ಚಕ್ರವರ್ತಿಯ ಬಲಮಂ ಬಱಿಕೆಯ್ದೆನ್ನ ಸಿಂಹಕ್ಕೆಡೆಯ ಕಡೆಯ ಬಡವರ ಬಲವೊಂದು ಪಲ್ಲಕೊನೆಗಂ ಬಾರದೆಂದು ಮದದಿಂ ಮುಂದುಗಾಣದೆ ಕದನಿಕ್ಕಿದಿರ್ವಂದು ಕಂಸನ ಮೇಲೆ ಸಿಂಹರಥಂ ಸಿಂಹಮಂ ಪಾಯಿಸೆ

ಕಂಚನಱಿದೆಚ್ಚ ಕೂರ್ಗಣೆ
ಪಂಚಾಸ್ಯನನುರ್ಚಿ
ಪಾಱಿ ಪೋದುದೆ ನೆಱೆ ಪಾ
ಯ್ದಂಚೆವೊಲಂಬಿನ
ಬೞಿಯನೆ
ಬಂಚಿಸಿ
ಗೞೆವೞಿಯ ಪಾವಿನಂತಿರೆ ಸಿಂಹಂ  ೬೪

ಮುರಿದಂಗಂ ನೀಳ್ದ ಗಾತ್ರಂ ಮೊೞಕಲಿಸಿ ಕರಂದಡೆಯಂ ನೀಡಿದಂದಂ
ಕರುವಿಟ್ಟಂತಿರ್ಪಿನಂ
ಚಪ್ಪರಿಸಿ ಬೆರಸಿ ಕಂಠಾಗ್ರದೊಳ್ ನಾಲ್ಕು ಬಾಯಂ
ತೆರೆದೇಱಪ್ಪನ್ನೆಗಂ
ಕಿೞ್ತಲಗನೊದಱಿ ಮೇಲ್ವಾಯ್ದ ಪಂಚಾಸ್ಯನಂ ವೀ
ರರಸಾಂಗಂ
ಶೂದ್ರಕಂಬೋಲ್ ಕದನದೊಳಿಱಿದಂ ಕಂಸನತ್ಯುನ್ನತಾಂಸಂ        ೬೫

ಕೇಸರಿಯುಗುವೊಯ್ಲಿಂ ಪೊಸ
ಬಾಸುೞವೇಂ
ಕಂಸನಂಗದೊಳ್ ನೆಗೆದುವೊ ಕೂ
ರ್ತಾಸತ್ತು
ನೆರೆದ ವೀರ
ಶ್ರೀ
ಸೆಳೆದೊಂದಸಿಯ ಪಸಿಯ ಕೂರುಗುರಿನವೋಲ್  ೬೬

ವ|| ಅಂತು ಸಿಂಹಮಂ ಸಂಹರಿಸಿ ಸಿಂಹದಿಂ ಮುನ್ನಮೆ ನೆಲದೊಳ್ ಬಿರ್ದಿರ್ದ ಸಿಂಹರಥನಂ ಮೇಗೞಿವಕ್ಕುಮೇಕೆ ಬಿರ್ದೆಯೆರ್ದು ನಿನ್ನ ಸಿಂಹದ ಪಲ್ಲನೆಣಿಸಿ ನೋಡೆಂದದಱ ಪಲ್ಗಳಂ ಕಳೆದು ತಲದೊಳಿಕ್ಕಿ ಮಂದಮತಿಯ ಮುಂದೆ ತಲೆಯ ಚುಂಚಂ ಪಿಡಿದು ಚರೆಯಕ್ಕೆ ಬಿಟ್ಟ ಗೂಂಟನೆೞೆದುತಪ್ಪಂತೆ ತಂದು ನಿಮ್ಮ ಸಿತಗನಪ್ಪ ಸಿಂಹರಥನಿವನಪ್ಪನೆ ಬೆಸಗೊಳ್ಳಿಮೆಂದು ಬಂಡಿಯೊಳಿಕ್ಕಿಕೊಂಡೊಯ್ದು ಜರಾಸಂಧನ ಮುಂದಿಡುವುದುಂ ಮಂದಸ್ಮಿತಮುಖನಾಗಿ ಚಕ್ರಿ ಬೆಕ್ಕಸಂಬಟ್ಟಿತ್ತಬಾಯೆಂದು ವಸುದೇವಂಗೋರಾಸನಮನಿತ್ತು ಮೆಚ್ಚಿದಂ ಬೇಡಿಕೊಳ್ಳೆನೆ ವಸುದೇವಂ ದೇವ ಭಿನ್ನಪಮಿದೆನ್ನ ಬೆಸನಲ್ತೆನ್ನ ಚಟ್ಟನ ಬೆಸನೆಂದು ಕಣ್ಸನ್ನೆಯಿಂ ಕಂಸನಂ ಪೊಡೆಮಡಿಸೆ

ಪರಚಕ್ರಹರಿಗೆ ರಣಕೇ
ಸರಿಗೆನ್ನಂ
ಕರ್ಚಿ ಪಾಱಲಾರ್ಪದಟಿನ
ಟ್ಟರದೆನಿಬರುಮೊಳರೆಂದೆನೆ

ದೊರೆಯಾನೇಗಣಿತಮವರೊಳಾನೇವಿರಿಯಂ
          ೬೭

ವ|| ಎನೆ ಕಂಸನಂ ನೀನೆತ್ತಣಿನಾರ ಮಗನೆನೆ ಕಂಸಂ ಕೈಮುಗಿದು ಕೌಶಂಬಿಯ ಕಳ್ಳವತಿ ಮಂಡೋದರಿಯ ಮಗನೆಂಬುದುಮರಸನವನ ನೇಱೆಯುಮಿೞಿಯೆಯುಂ ನೋಡಿ ನೀಡುಂ ನಿರವಿಸಿ ನಿಜಾಂತರ್ಗತದೊಳ್

ಸಿಂಗಮನಿಱಿವೀ ಸಾಸಂ
ಮೀಂಗುಲಿಗರ
ಮಗನೊಳಾಗದಾರ್ಪೊಡೆ ಪಿಡಿಗುಂ
ಮೀಂಗಲನಾಕೃತಿಯೊಳಮು

ತ್ತುಂಗನಿವಂ
ರಾಜಪುತ್ರನಾಗಲೆವೇೞ್ಕುಂ     ೬೮

ಕಾಗೆ ಪೊರೆದನಿತಱಿಂದಂ
ಕೋಗಿಲೆ
ತಾನದಱ ಪಿಳ್ಳೆಯಕ್ಕುಮೆ ಬೇಗಂ
ನೀಗಿ
ನವಚೂತವನದೊಳ್
ಪೋಗಿರ್ಕುಂ
ಕರ್ಮಘಟಿತವಘಟಿತ ಘಟಿತಂ  ೬೯

ವ|| ಎಂದು ಮಂಡೋದರಿಯಂ ತರಿಸಲಟ್ಟಿದರಸಾಳ್ಪೋಗಿ ಬೇಗಂ ಪೊಱಮಡು ನಿನ್ನಂ ಚಕ್ರವರ್ತಿ ಚಕ್ಕನೆ ಪಿಡಿದು ತರವೇೞ್ದನೆನೆ ಪಿಡಿವೆತ್ತ ಕಳ್ಳನಂತೆ ಕಳ್ಳವತ್ತಿಗೆ ತಳವೆಳವೋಗೆ ತ್ತಣಮಿೞ್ತುಮೇ ನಿಮಿತ್ತಮೆನೆ ಸತ್ತೆನಂಜುವೆಡೆಯೊಳ್ ಬೆಳಗಾದುದಾವ ಕಳ್ಳೆಯ ಬಸಿಱಿಂ ಬಂದನೆಂದಱಿಯನೆನ್ನಬಸಿೞೊಳ್ ಕಿಚ್ಚಂ ತಗುಳ್ಚಿದನಟ್ಟಿ ಕಳೆದೊಡಂ ಬೆನ್ನಟ್ಟಿದಪಂ ಮುನ್ನಿನ ಭವದ ಪಗೆಯೆಂದು ಮಂಡೋದರಿ ಮಂದಸಂ ಪೊತ್ತು ತಂದು ಜರಾಸಂಧನ ಮುಂದೀಡಾಡಿ ಬಿಟ್ಟ ತಲೆಯುಂ ಬೆಮರ್ತ ಮೆಯ್ಯುಂ ಬೆಳ್ಮೊಳಗಮುಂ ಬೆರಸು ಕಾವುದು ದೇವ ಎಂದು ಪುಲ್ಗರ್ಚಿ ಪುಯ್ಯಲ್ಚಿ ಮೈಯಿಕ್ಕಿ

ಸೊಂದಿಯವನೆನ್ನ ಮಗನ
ಲ್ಲಂ
ದೇವರ ಪಾದದಾಣೆ ಬಿನ್ನಪಮಾ ಕಾ
ಳಿಂದಿಯೊಳಿರ್ದೀ
ಕಂಚಿನ
ಮಂದಸಿನೊಳ್
ಪುಟ್ಟಿ ಕಂಸವೆಸರಂ ಪಡೆದಂ ೭೦

ವ|| ಎಂದು ಮಂದಸಿನೊಳಗಣ ತಾಯ ಕಲ್ಗಳೀ ಕೊಲೆಯೊಡವುಟ್ಟಿದವೆಂದು ತೀವಿತಂದ ಮಾಣಿಕಂಗಳಂ ಮುಂದೆ ಸುರಿದು ಕೊಲ್ವೊಡಂ ಕಾವೊಡಂ ದೇವರೆ ಬಲ್ಲಿರೆಂಬುದುಮರಸಂ ದರಹಸಿತಮುಖನಾಗಿ ನಾಗಸಂಪಗೆಯೆಸೞಂತಿರ್ದ ಕನಕಪತ್ರಮನಲ್ಲಿ ಕಂಡು ಬೀಸುಂಬೞಿ ಯುಮಿಲ್ಲದೆ ನಿಬಿಡಮಾಗಿ ಬರೆದಿರ್ದಕ್ಕರಂಗಳನನುಮಾನಿಸಿ ತಾನೆ ನೋಡಿ

ಶ್ಲೋ|| ಉಗ್ರಧೀರುಗ್ರಸೇನಾಂಕಾನ್ಮಧುರಾನ್ಮಧುರೇಶಿತುಃ
ಪದ್ಮಾವತ್ಯಾಮ
ಭೂಚ್ಚಂದ್ರಾದುತ್ಕಾಯಃ ಕಾಮವಹ್ನಿವತ್
ದುರ್ಮುಹೂರ್ತ
ಪ್ರಭೂತತ್ವಾದೇಷ ದೋಷಾರುಣೇಕ್ಷಣಃ
ಮಂಜೂಷಾಯಾಂ
ವಿನಿಕ್ಷಿಪ್ಯ ಯಮುನಾಯಾಂ ವಿಸರ್ಜಿತಃ

ವ|| ಎಂದು ವಾಚಿಸಿ ಭಾಗಿನೇಯನಪ್ಪುದನಱಿದು ಸಂತಸದಂತನೆಯ್ದಿ ಬೇಡಿದ ಕಾಡೊಳೆ ಮೞೆಕೊಂಡುದೆಳಕುೞಿಗೊಳ್ವಂಗೆಱಂಗೊಟ್ಟಂತಾಯ್ತು ಕವರು ಕತ್ತಿಗೆ ಕಡಿತಂ ಬಂದಂತಾಯ್ತು ಪ್ರದ್ಯೋತನಂಗೆ ಪದ್ಮಿನಿಯಂ ಪಣಿದಂಬೊಯ್ದಂತಾಯ್ತು ಮುಹೂರ್ತಮೆ ಶುಭಮುಹೂರ್ತ ಮೆಂದು ಮಂಡೋದರಿ ಬೆಕ್ಕಸಂ ಬೆಱಗಾಗಿ ನೋಡುತ್ತುಮಿರೆ

ನಿಸದಂ ನೀನೆನ್ನ ಕೂಸಿಂಗೊಡೆಯನೆಯೆನಗಿನ್ನುಂಣಟೆ ತೇಜಂ ಭವತ್ಸಾ
ಹಸ
ಸಿಂಹಕ್ರೀಡೆಗಾಂ ಪಂಗಿಗನೆನಱಿದಿರೆಂದುತ್ಸವಾತೋದ್ಯಗೀತಾ
ನುಸರಂ
ಟಂಕಾರಮಂ ಮುಂದಿಡೆ ಮದನಧನುರ್ಮಂಜರೀಜೀವೆ ಜೀವಂ
ಜಸೆಯಂ
ಕಂಸಂಗೆ ಕೊಟ್ಟಂ ಜಸಮೆಸೆಯೆ ಜರಾಸಂಧನಾನಂದದಿಂವಂ  ೭೧

ವ|| ಅದಂ ಕಂಡು ಗಲ್ಲದೊಳ್ ಕೈಯನಿಟ್ಟು ಮಱವಟ್ಟಿರ್ದ ಮಂಡೋದರಿಗುಡಲುಂ ತುಡಲುಂ ಕೊಟ್ಟು ಕಳಿಪುವುದುಂ ಪಡೆದ ಮರೆ ಬೆಳಗೆಯ್ಗಂಡಂತೆ ಬದ್ದೆನೆಂದು ಕಳ್ಳವತ್ತಿಗೆ ಚಿತ್ತವಡೆದು ಪೇೞಿತ್ತ ನಿನ್ನ ಮೆಚ್ಚಿದ ನಾಡಂ ಬೇಡಿಕೊಳ್ಳನೆ ಕಂಸಂ ತನಗೆ ತನಯಪ್ರಿಯನಪ್ಪ ತಂದೆಯ ನಾಡನೆ ದಯೆಗೆಯ್ವುದೆನೆ ಕಂಸನ ಕೋಪನಕೋಪಗರ್ಭಗರ್ಭೋದೀರಿತಮನವಧಾರಿಸಿ ಧರಣಿಪತಿ ತನ್ನಂತರ್ಗತದೊಳ್

ಬಿಸಮನುಗುೞ್ದಪ್ಪನೀ ಸಾ
ಹಸಿ
ತಂದೆಗೆ ಕಾಣದೇನೆನಗೀ ಸಂಸಾ
ಸಮುದ್ರದೊಳಗಿದೇ ತಾ
ಮಸವೆಸಡಿಯ
ಬಸಿಱನೊಡೆದು ಪುಟ್ಟವೆ ಮಱಿಗಳ್    ೭೨

ಎನಿತು ಮುನಿದಳುರ್ದೊಡಂ ನೀ
ನಿಧಿಯೊಳೊಗೆದಗ್ನಿ ವಾರ್ಧಿಯುಂ ತವೆ ಸುಡದಂ
ತೆನಿತು
ತನೂಜಂ ತಂದೆಗೆ
ಮುನಿದೊಡಮೞಿವಂತು
ಪೊಲ್ಲಕೆಯ್ಗುಮೆ ಪಿರಿದುಂ     ೭೩

ವ|| ಬಿಸುನೀರ್ ಮನೆಯಂ ಸುಡುಗುಮೆ ಕುಡುವೆನೆಂದು ಕೊಟ್ಟು ಕಳಿಪೆ ಕಂಸಂ ಜರಾಸಂಧಚಕ್ರವರ್ತಿ ಪೇೞ್ದ ಚತುರಕ್ಷೋಹಿಣೀಬಲಂಬೆರಸು ವಸುದೇವ ಸಹಿತಮೆತ್ತಿ ಪೋಗಿ ಮಧುರಾಪುರಮಂ ಕೊಳ್ವಂತೆ ಲೀಲಾಮಾತ್ರದಿಂ ಕೊಂಡು

ಅರಣಿಯನುರಿಪುವ ವ್ವೆಶ್ವಾ
ನರನಂತಿರೆ
ಮನಮನಿಸುವ ಮನಸಿಜನಂತಂ
ತಿರೆ
ಪಿಡಿದು ಕಟ್ಟಿ ಕಂಸಾ
ಸುರನಿಕ್ಕಿದನಕಟ
ಜನಕನಂ ಸಂಕಲೆಯೊಳ್  ೭೪

ವ|| ಅಂತು ಪುಳ್ಳಳೆಪಾಲಂ ಕಿಡಿಸುವಂತುಗ್ರಸೇನನಂ ಕಿಡಿಸು ಮಧುರಾಪುರ ದ್ವಾರದೊಳ್ ಸಂಕಲೆಯೊಳ್ ಸೆಱೆಗೆಯ್ದುದೆ ಸಂಸಾರ ಶರೀರ ಭೋಗನಿರ್ವೇಗಕ್ಕೆ ಕಾರಣಮಾಗೆ ಯುಮರಾಜಲಕ್ಷ್ಮಿ ಯನುೞಿದ ಯತಿಮುಕ್ತಕಂ ತಪಸ್ಸಾಮ್ರಾಜ್ಯಲಕ್ಷ್ಮೀ ಸಂಭೋಗ ಶೃಂಗಾರ ಪಯಃ ಪಯೋಧಿನಿಮಗ್ನ ಸರೋಜನಾಗೆ ಕಂಸಂ ವಸುದೇವನಂ ಬರಿಸಿ ಸಿಂಹಾಸನಾಲಂಕೃತನಂ ಮಾಡಿ ಸಾಷ್ಟಾಂಗ ಪ್ರಣತನಾಗಿ ನಿಟಿಲತಟಘಟಿತ ಕರಕುಶಲೆಯ ಕುಟ್ಮಲನಿಂತೆಂದು ಬಿನ್ನವಿಸೆ

ಹರಿವಂಶಂ ಹರಿವಂಶದಂತತುಲ ಭೋಗಖ್ಯಾತಮಾಯ್ತುರ್ವರಾ
ಧರದಿಂದಂ
ಸ್ಥಿರಮಾಯ್ತು ಶಾಸ್ತ್ರಮಯಮಾಯ್ತಾನರ್ಥಮೆಂಬಂತೆ ಪು
ಷ್ಕರಿಯಂತಗಾಯತದಾನಮಾಯ್ತುದಧಿಯಂತುದ್ಯತ್ಸುಧಾಧಾಮಮಾ

ಯ್ತರವಿಂದಾಕರದಂತೆ
ಲಕ್ಷ್ಮಿಗಿರಲಾಯ್ತೇ ನಿಮ್ಮ ಕಾರುಣ್ಯದಿಂ    ೭೫

ಆನೆತ್ತರ್ಕಸುತಾ ಪ್ರವಾಹಭರಮೆತ್ತಲ್ಲಿರ್ದ ಮಂಜೂಷವೆ
ತ್ತಾನೀಚಾಶ್ರಯವೆತ್ತ
ನಿಮ್ಮ ಬರವೆತ್ತೀ ಶಾಸ್ತ್ರ ಶಸ್ತ್ರ ಶ್ರಮಂ
ತಾನೆತ್ತಿಕ್ಕುವುದೆತ್ತ
ಸಿಂಹರಥನಂ ಚಕ್ರಿಪ್ರಸಾದೋದಯಾ
ಧೀನಂ
ರಾಜ್ಯಮಿದೆತ್ತದೇವುದಿನಿತುಂ ಯುಷ್ಮತ್ಪ್ರಸಾದೋದಯಮ        ೭೬

ಅದಱಿಂದೆನ್ನುಮನೆನ್ನ ರಾಜ್ಯಭರಮಂ ಸಪ್ತಾಂಗಮಂ ಸಸ್ಯ ಸಂ
ಪದಮಂ
ವಾರಿದಮಂಬುಜಾತವನಮಂ ತಿಗ್ಮಾಂಶು ನೀಲೋತ್ಪಳಾ
ಸ್ಪದಮಂ
ಶೀತಮರೀಚಿ ರಕ್ಷಿಸುವವೊಲ್ ನೀಂ ರಕ್ಷಿಸೆಂದಂದು ಬೇ
ಡಿದನಾತಂ
ನತಮೌಳಿರತ್ನರುಚಿಗಳ್ ತಳ್ಪೊಯ್ಯೆದಿಗ್ಭಾಗಮಂ  ೭೭

ವ|| ಅಂತು ಬೇಡಿಕೊಂಡು ತನ್ನಯ ಮನೆಯ ಬಲ ಕೆಲದೊಳನೇಕ ನೂತ್ನ ರತ್ನರಾಜಿರಾಜಿತ ಚಂಚತ್ಕಾಂಚನಮಯ ಮಹಾರಾಜಭವನಮುಮಂ ಮಾಡಿಸಿ ಕೊಟ್ಟು ಮುನ್ನಮೆ ವಸುದೇವನ ರೂಪವಿಲಾಸ ಸೌಭಾಗ್ಯ ಭಾಗ್ಯೋದಯಮಂ ಕೇಳ್ದು ಕಿವಿವೇಟಂಗೊಂಡು ಕಾಮಕಾರ್ಮುಕ ನಿರ್ಮುಕ್ತ ಶಿಲೀಮುಖ ಸಹಸ್ರ ಸಮಾಘ್ನಾತಮನಃಸರೋಜ ಸಂಭಾವಕಿಯಾದ ದೇವಕಿಯ ಭಾವಮನಂತಃಪುರ ಪರಿಚಾರಕಿಯರಿಂ ಕೇಳ್ದು

ಭೂವರ ವಸುದೇವಂಗೆ
ಹೀವಿಶ್ರುತ
ಕಂಸರಾಜನಿತ್ತಂ ಬುಧಸಂ
ಭಾವಕಿಯಂ
ಮನ್ಮಥ ಸಂ
ಜೀವಕಿಯಂ
ವಿಹಿತ ವಿಭವದಿಂ ದೇವಕಿಯಂ   ೭೮

ಸರಸಿಜಸಂಭವಂ ಕುಸುಮಸಾಯಕನಾಗಿ ಸುಧಾಂಶು ಚಂದನಂ
ಸರಸಿಜಮುತ್ಪಲಂ
ಸರಸಿ ಚಂದ್ರಿಕೆ ಮಾಲತಿ ಚಂದ್ರಕಾಂತ ಬಂ
ಧುರಪರಮಾಣುವೆಂಬಿವಱಿನಾತ್ಮ
ಮನಃಸುಕುಮಾರ ಹಸ್ತದಿಂ
ವಿರಚಿಸಿದಂ
ನಿಜೇಶಮುಖಸೌರಭಭೃಂಗಿಯನಾ ಲತಾಂಗಿಯಂ ೭೯

ವ|| ಮತ್ತಮಾ ಮನೋಜರಾಜಯೌವನವನವಸಂತಲಕ್ಷ್ಮಿಯ ಚರಣಪಲ್ಲವಾರುಣಿತನಖ ಮುಯೂಖಮಣಿಮಾಲಾಮಂಜರಿಯಾ ರಾಜಶಿರೋರತುನಗೆ ಚೂಡಾಮಣಿಯಾಗೆಯುಂ ಆ ರತಿಪತಿ ಕೃತಕಗಿರಿಸಾಮಾ ಕಲ್ಪಲತೆಯಾಜಾನು ಕಲ್ಪಲತೆಯಾ ಹರಿವಂಶಪಾರಿಜಾತನ ಪಾರಿಜಾತ ಶಾಖಾನುಕಾರಿಯಾಜಾನುಶಾಖಾದ್ವಯಮನಾವೇಷ್ಟಿಸಿಯುಂ ಆ ಮನ್ಮಥ ಮಹಾರಾಜಭವನ ಮೂಲಸ್ತಂಭ ಪಾಂಚಾಳಿಕೆಯ ರಂಭಾಸ್ತಂಭಾನುಕಾರಿಯಾದೂರು ಶಾಖೆಯಾದ ಕುಮಾರಕುಂಜರನ ಮನಃಕುಂಜರಾಲಾನಸ್ತಂಭಮಾಗೆಯುಂ ಆ ಕಂತುಕೇಳೀತರಂಗಿಣೀ ಪುಳಿನ ಸ್ಥಳಿಯ ನಿತಂಬ ಪುಳಿನಸ್ಥಳ ಮಹಾರಾಜ ರಾಜಹಂಸನ ಲೀಲಾರಾಜಹಂಸೀವಿನೋದಕ್ಕೆ ಪುಳಿನ ಸ್ಥಳಮಾಗೆಯುಮಾ ಕಾಮಕಾರ್ಮುಕಾಯಮಾನ ಭ್ರೂಲೇಖೆಯ ಮುಷ್ಟಿಗ್ರಾಹ್ಯಮಾಧ್ಯಮಾ ಧನುರ್ವಿದ್ಯಾವಿಶಾರದ ಪ್ರತ್ಯಾದೇಶನ ಕೋದಂಡ ಮಧ್ಯ ಪ್ರದೇಶಮಾಗಯುಮಾ ಕುಸುಮಾಯುಧಕುಂಭಿ ಲೀಲಾಕುಂಭಿನಿಯ ಕುಚಕುಂಭಮಾರಾಜಮೂರ್ಧಾಭಿಷಿಕ್ತನ ಸಾಜ್ರಾಜ್ಯಭಿಷೇಕ ಶಾತಕುಂಭಮಾಗೆಯುಮಾ ಶೃಂಗಾರಸಂಭವ ಶರಚ್ಚಂದ್ರ ಚಂದ್ರಿಕೆಯ ಮುಖಚಂದ್ರನಾ ಹರಿವಂಶ ಚಕೋರೀ ಚಂದ್ರನ ಚಂದ್ರಿಕಾವಿಹರಣಕ್ಕೆ ಸಂಪೂರ್ಣಚಂದ್ರನಾಗಯುಮನೂನ ಕಾಮಸಾಮ್ರಾಜ್ಯ ಸುಧಾಪಯೋನಿಧಿ ಯೊಳೋಲಾಡುತ್ತುಮಿರೆಯಿರೆ

ತನುಸೋಂಕಿಂ ಮದುರಾಧರಾಮೃತದೆ ಸರ್ವಾಂಗೀಣಸೌಗಂಧದಿಂ
ಘನಲಾವಣ್ಯಸಮೃದ್ಧಿಯಿಂ
ಪಿಕನಿನಾದ ಖ್ಯಾತಿಯಿಂದೀಯೆ ಕಾ
ಮಿನಿ
ಪಂಚೇಂದ್ರಿಯ ಸೌಖ್ಯಮಂ ತಳೆದನುರ್ವೀಪಾಲಮೌಳಿಪ್ರಭಾ
ದ್ಯುನದೀದ್ಯೋತಪದಾಂಬುಜಂ
ಪ್ರತಿದಿನಂ ಸಾಹಿತ್ಯವಿದ್ಯಾಧರಂ         ೮೦

ಇದು ಮೃದುಪದಬಂಧಬಂಧುರ ಸರಸ್ವತೀ ಸೌಭಾಗ್ಯವ್ಯಂಗ್ಯ ಭಂಗಿ ನಿಧಾನ ದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೇಮಿಚಂದ್ರ ಕೃತಮುಂ ಶ್ರೀಮತ್ಪ್ರತಾಪಚಕ್ರವರ್ತಿ ವೀರಬಲ್ಲಾಳ ದೇವ ಪ್ರಸಾದಾಸಾದಿತ ಮಹಾಪ್ರಧಾನ ಸೆಜ್ಜೆವಳ್ಳ ಪದ್ಮನಾಭದೇವ ಕಾರಿತಮುಮಪ್ಪ ನೇಮಿನಾಥಪುರಾಣದೊಳ್

ಷಷ್ಠಾಶ್ವಾಸಂ

ಸಮಾಪ್ತಂ