ಶ್ರೀಯಂ ಪಡೆದಂ ವಿಬುಧ
ರ್ಗೀಯಲ್ಪಡೆದಂ
ಪ್ರತಾಪಮಂ ಧಾರಿಣಿಯಂ
ಕಾಯಲ್ಪಡೆದಂ
ಪ್ರತಿಭೆಯ
ನಾಯಮನಱಿಯಲ್
ಯಶೋರ್ಥಿಮೂರ್ತಿ ಮುಕುಂದಂ         ೧

ವ|| ಆ ಗಂಡಗೋಪಾಳನ ಗೋಕುಳಕ್ಕೆ ಪುಲ್ಲಂ ನೀರುಮಂ ಸಲಿಸಿ ಬೆರ್ಚಿಬೆಸಕೆಯ್ಯಲೆಂದು

ನೀರಂ ನೀರಂಧ್ರ ಮೇಘಂ ಸುರಿಯೆ ಮೊರೆಯೆ ಭೀಮಾರುತಂ ಮಾರುತಂ ಕೊ
ಳ್ಗಾರಂಗಾರಂಬೊಲಾಯ್ತೆಂದಗಿಯೆ
ಪಥಿಕರುಚ್ಚಾತಕಂ ಚಾತಕಂ ಕಾ
ಸಾರಾಸಾರಾರ್ಥಿ
ಗೋಲಂಗುಡಿಯೆ ನಲಿವೆನೋ ಜಂಬುವಂ ಜಂಬುವಂ ಸೋ
ಕೀರಂ
ಕೀರಂ ಕರ್ದುಂಕುತ್ತಿರೆ ಕೆರಳಿಸಿದತ್ತೋವಿ ಕಾರಂ ವಿಕಾರಂ         ೨

ಎಳಮಿಂಚಂ ತೞಿಯಿಕ್ಕಿ ಚಾದಗೆಗಳಂ ಬಿಟ್ಟೋಡಿ ಬಲ್ಗೆಚ್ಚಲಿ
ಟ್ಟಳಿ
ನೀಳಾಂಬುದದಿಂ ಬೞಲ್ದ ಗಗನಶ್ರೀ ಧೇನುವಂ ಕೋಮಳಾ
ಮಳ
ದೀರ್ಘಾಮೃತ ಧಾರೆಗಳ್ಸುರಿಯೆ ಭೋರ್ಭೋರೆಂಬಿನಂ ಶಕ್ರಚಾ
ಪಳತಾದಾಮಕದಿಂದೆ
ಕಟ್ಟಿ ಕಱೆದಂ ಕಾರೆಂಬ ಗೋಪಾಳಕಂ    ೩

ವ|| ಅಂತುಮಲ್ಲದೆ

ಕಳಕೇಕಾರುತಿ ಪೋಲೆ ವೇಣುರುತಿಯಂ ಬೀಸುತ್ತೆ ಮಿಂಚೆಂಬ ಗೋ
ವಳಿಗೋಲಂ
ಪೊಡೆಸೆಂಸುವೊಯ್ದು ಸಿಡಿಲಂ ಗೀರ್ವಾಣಬಾಣಾಸನ
ಚ್ಛಳದಿಂ
ಕತ್ತರಿವೀಲಿಯೊಂದು ಪಣೆಕಟ್ಟಂ ಕಟ್ಟಿಕೊಂಡಭ್ರಕಂ
ಬಳಮಂ
ಗೋವನವುಂಕಿ ಬಂದೊದಱಿದಂ ಕಾರೆಂಬ ಗೋಪಾಳಕಂ       ೪

ವ|| ಅಂತು ಬಂದ ಕಾರ್ಗಾಲಮಂ ಕಂಡು ಮನಂಗೊಂಡು ಮತ್ತಮಾ ದೇವತೆಯರ್ ಭೇತಾಳನ ಪೆಣದಂತೆ ಬೆನ್ನಕಯ್ಯಂ ಬಿಡದೆ ಕೊಂದಕೊಲೆಯಂ ತಲೆಪನುೞಿಯದುದಕ ಮೂರ್ವೀರದಿಂ ಕೆಟ್ಟುಂಕೆಡದಂತೆ ತಮ್ಮ ಗುರ್ವಿನಗುರ್ವಣೆಯ ಕಾಕಾವಿಕಾರದಿಂ ಸತ್ತುಂ ಸಾಯ ದೊಂದೆಡೆಗೆವಂದು ಪರಿವ ನೀರಂ ಪರಿಯೆ ಪೊಯ್ಯಲುಮುರಿಯನಿಱಿದೇರ್ಪಡಿಸಲುಂ ರಸಮಂ ಸೋಯಿಸಲುಂ ನಮ್ಮಂ ನೋಯಿಸಲುಂ ಇನ್ನುಮೊರ್ವಂ ಪುಟ್ಟುವನುಂಟಕ್ಕುಮೆ ಯೆಂದೋರೊರ್ವರುಂ ಕಯ್ಯಂ ಪೊಯ್ದು ಕಹಕಹಾಟ್ಟಹಾಸದಿಂ ಕರುಳ್ ಪಱಿಯೆ ನಕ್ಕು

ಅದಟಿಂ ಮಂಡೆಯಮಾ ಸಾ
ಱದ
ತರುವಲಿ ನಮಗಮರಿಯನಾದನವಂಪೆ
ರ್ಚಿದೊಡಾ
ಭವನುಂ ಜವನುಂ
ಕದನದೊಳಾನಲ್ಕೆ
ನೆಱೆಯರೆಂಬನಿತಕ್ಕುಂ   ೫

ವ|| ಆದೊಡಮಿನ್ನುಮೊರ್ಮೆ ಎಮ್ಮೊಳಪ್ಪುದು ಮಲ್ಲನಂತೆ ಮೆಯ್ವತ್ತಿರೆ ಧನುರ್ಧರನಂತೆ ದೂರಿದನೆಚ್ಚು ನೋೞ್ಪಮೆಂದು ಕೃಷ್ಣಂ ತುಱುಗಾಯಲೆಂದು ಪೊಲಕ್ಕೆ ಪೋದಲ್ಲಿ

ಪಡೆದರ್ದೆವತೆಯರ್ಮಿಗೆ
ಕಡುಮುಳಿಸಿದಂದುರಿದು
ದಹನ ಶಿಖಿಗಳ ಪೊಗೆಯಂ
ಪಡೆವಂತೆ
ಪತ್ತು ದೆಸೆಗಂ
ಗುಡಿಗಿಱಿದಂತಾಗೆ
ನೀಳಮೇಘಾವಳಿಯಂ    ೬

ಕಡಲೊಳ್ ಪಟ್ಟಿರ್ದವಂ ಪಟ್ಟಿರದಿರೆ ಬನದೊಳ್ ಬಂದ ಸಪ್ತಾರ್ಣವಂ ಮೇ
ಗೊಡೆವಿರ್ದಂತಾಗೆ
ಮಿಂಚೆಂಬುರಿ ಮಿಗೆ ನಭಮಾಶಾಮುಖಶ್ರೇಣಿಯಿಂ ಗೋ
ೞಿಡುವಂತೋರಂದದಿಂದಂ
ಮೊೞಗಿ ಮುಸುಱೆ ಮೇಫೌಘವಚ್ಚಾಕ್ಷನಂ
ಲ್ಸಿಡಿಲಿಂದಿಟ್ಟಾಲಿಕಲ್ಲಿಂದೆಱಗಿ
ಕೆಱೆದುದಾ ಗೋಕುಲಂ ತೇಂಕುವನ್ನಂ      ೭

ಉತ್ಸಾಹರಗಳೆ || ಮೊೞಗಿ ಮಿಂಚಿ ಮುಂಚಿ ಕೊಳ್ವ
ಮೞೆಗಳಂಬುರಾಶಿಯಲ್ಲಿ

ಕೞಿಯೆ
ನೀರನುಂಡು ಮೇಘ
ಮೊೞಱಿ
ಕಾಱವಂತುಟಾಯ್ತು       ೮

ಪೊಡೆವ ಸಿಡಿಲ್ಗಳನೆಳೆಯೊಳ್
ಕೆಡೆದೇೞೆಂಟಣುಕು
ನೆಗೆದು ನುರ್ಗಪ್ಪಿನೆಗಂ
ಪೊಡೆದಂ
ಗೋವಳಿಗೋಲಿಂ
ಪೊಡೆಸೆಂಡಾಡುವವೊಲೇಂ
ಬಲಸ್ಥನೊ ಕೃಷ್ಣಂ         ೯

ಕರಗದ ಮುಗಿಲಂ ಪರೆಯದ
ಸುರಧನುವಂ
ಮಿಂಚಿ ಕಿಡದ ಮಿಂಚಂ ಪೊಡೆದೋ
ಸರಿಸದ
ಸಿಡಿಲಂ ಸಮೆಯದ
ಸರಿವೞೆಯಂ
ಕಂಡು ಬೆಗಡುಗೊಂಡರ್ ಗೋವರ್     ೧೦

ವ|| ಆಗಳಂಜಲಿಮಂಜಲಿಮೆಂದು ಬೆಗಡುಗೊಂಡ ಗೋವಳಿಗರನೊಡಗೊಂಡು ದೊಮ್ಮಳಿಸಿ ಮಮ್ಮೞಿಗೊಳ್ವ ಗೋವುಗಳನಟ್ಟಿಕೊಂಡು ಕಿಱಿದಂತರದೊಳಿರ್ದ ಗೋವರ್ಧನ ಗಿರಿಯ ಮಱೆಗೆ ಪೋಗಿಯದೊಂದೆ ಸಱಿಯಪ್ಪುದಱಿಂ ಪಶುಶಿಶು ಪ್ರವೇಶಕ್ಕಂ ತಕ್ಕ ಗುಹೆಯಂ ಕಾಣದೆ

ಪರಲಂ ಬಾರ್ ತೆಗೆಮೀಂಟುವಂತೆ ಚರಣಾಂಗುಷ್ಠಾಗ್ರದಿಂ ಮೀಂಟಿ
ಲ್ಲರಿವೊಲ್
ಝಲ್ಲನೆ ಸೂಸಿ ನಿರ್ಝರಜಲಂ ಬಿೞ್ತರ್ಪಿನಂ ಕಾವಿನಂ
ತಿರೆ
ಕೊಂಡೆತ್ತಿದ ಕೆಯ್ ಮುರಾರಿ ಕೊಡೆಯುಂ ಕ್ರೀಡಾರಸಕ್ಕೆತ್ತುವಂ
ತಿರೆ
ಕೞ್ತೆತ್ತಿದನೊಂದೆ ಕೆಯ್ಯೊಳೆ ಮಹಾಗೋವರ್ಧನಾದ್ರೀಂದ್ರಮಂ        ೧೧

ಪೋಲೆ ಬಲಗಯ್ಯ ಗೋವಳಿ
ಗೋಲೊಡ್ಡಿ
ಸುವರ್ದವಾಗನವಯವದಿಂ ಗೋ
ಪಾಲನೆಡಗಯ್ಯೊಳೆತ್ತಿದ

ಶೈಲಂ
ಸೆಂಡಿನವೊಲಿರ್ದುದೇನಚ್ಚರಿಯೋ    ೧೨

ಹರಿ ಗಿರಿಯ ಪರಲ್ಮೇಗುಗು
ತರೆ
ತಲೆಯಿಂ ತೆಗೆದು ಕಮಠನಂ ಕಮಠಂ ಪೊ
ತ್ತುರಗನನಾತನ
ನಳಿತೋ
ಳುರಗಂ
ಪೋಲ್ತೆಳೆಯನದ್ರಿ ಪೋಲ್ತಿರೆ ಪೋಲ್ತಂ         ೧೩

ಕರಿಕಳಭಪತಿ ಬಯಲ್ದಾ
ವರೆಯಂ
ಕಿೞ್ತೆತ್ತುವಂತೆ ಕಿೞ್ತೆತ್ತಿದನಾ
ಹರಿ
ತರುಣಂ ಗೋವರ್ಧನ
ಗಿರಿಯಂ
ಗೈರಿಕರಜೋವಿರಾಜಿತ ದರಿಯಂ   ೧೪

ಶೈಳಮನೆತ್ತುವುದುಂ ಗೋ
ಪಾಳಂ
ಫಣಮಣಿಗಳೆಸೆಯೆ ಮಣ್ಮಿಣಿಸುವ ಪಾ
ತಾಳಾಹಿವಿತತಿ
ಪಾವಿನ
ಪೇಳಿಗೆಯಂ
ತೆಱೆದ ತೆಱದಿನೇಂ ತೋಱಿದುವೋ      ೧೫

ಕೆಂಡದ ಮೞೆಗಳ್ತಂಡದೆ
ಕೊಂಡಪುವೆನೆ
ಪುಟ್ಟಿಪಾಱೆ ಕಿಡಿಗಳ್ ಕೃಷ್ಣಂ
ಕೊಂಡೆತ್ತಿದಗದ
ಮೇಗಾ
ಚಂಡಿಕೆಯರ್ಮುಳಿದು
ಕಲ್ಲ ಮೞೆಯಂ ಕಱೆದರ್        ೧೬

ವ|| ಅಂತೆಣ್ಬರುಂ ದೇವತೆಯರೇೞು ದಿವಸಮಾವರ್ತನ ಪರಿವರ್ತನಂ ಬಂದು ನಿರ್ವತೀಸಿದ ಸಂವರ್ತನ ಸಮಯ ಪರಿವರ್ತಿತ ಪುಷ್ಕಳಾವರ್ತಂಗಳಂತೆ ಕಗ್ಗನೆಕನಿತು ನೆಗೆದ ನಿಜಜಳಧರಂಗಳ್ ನೀಳ ಮಹೀಧರಂಗಳೆ ವಿಪುಳಪ ಪಾಷಾಣ ಜಾಲನಿರ್ಝರಂಗಳಂ ಕಱೆವಂತೆ ಪೆರ್ಮೞೆಗಳಂ ಕಱೆಯೆ ಗೋವರ್ಧನಂ ಗೋವರ್ಧನ ಗಿರಿಯ ನೆತ್ತುವಂತೆತ್ತಿ ಗೋಕುಳಮಂ ಕಾದುದಂ ಕಂಡು ಗೋವರುಂ ಸೀವರುಂ ಜಕ್ಕರುಂ ಮಕ್ಕಳುಂ ಮಱಿಗಳುಂ ಬೆಕ್ಕಸಂಬಟ್ಟಿವಂ ದೇವನುಂ ದಾನವನು ಮಲ್ಲೆಂದು ಪೊಗೞ್ದು ಪುರುಷೋತ್ತಮನನೆವೆಯಿಕ್ಕದೆ ನೋಡಿ ಪರಮಾನಂದಾಮೃತಮನೊಂದೆ ಮೆಯ್ಯೊಳೆ ಪೀರ್ದ ನಂದನನುಮಂ ಯಶೋದೆಯುಮಂ ದೇವನುಂ ದೇವಿಯುಮೆಂದು ಪೂಜಿಸಿ ಪೊಡೆವಟ್ಟು ಪೋಗೆ ನಾಡುಂ ಬೀಡುಂ ಜಾತ್ರವೋಗೆ ಕೇಳ್ದು ಕಂಸನಾಶಂಕೆಗೊಂಡು ಎನಗೆ ಬಂದ ಮಾರಿಯಾಗದೆ ಮಾಣದೆಂದು ಮನದೊಳೇವಯಿಸುತ್ತುಮಿರ್ಪನ್ನೆಗಮಾ ದೇವತೆಗಳ್ ಪಾೞ್ದೇಗುಲದ ದೇವತೆಗಳಂತೆ ಖಿನ್ನರಾಗಿ ಬನ್ನಂಬೆತ್ತು ಬಂದು ನಿಂದಾ ಪಗೆ ಎಮ್ಮ ಪವಣಲ್ಲೆಂದ ಪೋಪುದುಂ ಪಲ್ಪೋದ ಪಾವಿನಂತಾಗಿ ತಲೆಯಂ ತೂಗಿ

ಮೊಳೆಯೊಳೆ ಪೆರ್ಗೊಡಲಿಗಳುಂ
ಕೊಳಲಾಱದೆ
ಮುಕ್ಕುವೋದುವೆಂದೊಡೆ ಮುಂದಿಂ
ಬಳೆದು
ಮರನಾದ ಕಾಲಂ
ಕೊಳಲುಂ
ಕಡಿಯಲ್ಕಮಾರ್ಪುದಾವುದುಮುಂಟೇ       ೧೭

ವ|| ತನಗಿಷ್ಟನಪ್ಪರಿಷ್ಟನೆಂಬ ದಾನವನ ನಡುವಣಕ್ಕರಮಿಲ್ಲದ ದಾನವನಂ ಪ್ರತ್ಯನೀಕದ ವನಕ್ಕೆಂದು ಬರಿಸಿ “ಯಾವದಸ್ತಿ ಪ್ರತೀಕಾರಸ್ತಾವತ್ಕುರ್ಯಾತ್ ಪ್ರತಿಕ್ರಿಯಾಂ” ಎಂದೋದಿ ಕಜ್ಜಮೆಂದು ಕೃಷ್ಣನ ಮೇಲೆ ಪೇೞಲೆಂದಿರ್ದನನ್ನೆಗಂ ಗೋಕುಲದೊಳ್

ಅಡೆಯಂ ಕೋದೆತ್ತುತುಂ ಮಾರ್ದನಿಗೆ ಮಸಗುತುಂ ದರ್ಪದಿಂ ಛಾಯೆಯೊಳ್ ಕೋ
ಡಿಡುತುಂ
ಪೋರ್ದಲ್ಲಿ ಪುಣ್ಬೆತ್ತಿಣಿಗೆಱಗೆನೊಣಂ ಶೀರ್ಣಶೃಂಗಾಗ್ರದಿಂ ಮಾ
ರ್ದೊಡೆಯುತ್ತುಂ
ಪಾಯ್ದು ಪಿಂಡಂ ಕಲಕಿ ಕೆಲೆಯುತಂ ಬೆರ್ಚಿ ಬಲ್ಗೂಳಿಗಳ್ ಬೆಂ
ಗುಡೆ
ಗಂಡಂ ಸೂಸುತುಂ ಬಂದುದು ಮದವಿದಳತ್ಪಿಂಗಳಾಕ್ಷಂ ಮಹೋಕ್ಷಂ        ೧೮

ಆರಣಿಗೊಂಡು ಮುರಾರಿಯ
ನೀರದ
ಸನ್ನಿಭವ ವಿಷಮತರ ವೀರರಸಾ
ಸಾರಕ್ಕಿದಿರಂ
ನಡೆದತಿ
ವಾರಣ
ವೃಷಮಿಱಿವ ಕೋಡನೇಂ ತೋಱಿದುದೋ    ೧೯

ವ|| ತೋಱಲೊಡನೆ

ದಿಟ್ಟಿ ಪೊಱಪಾಯೆ ಗುಱುಗುಱು
ಗುಟ್ಟಿ
ವೃಷಂ ಮಡಿದು ಕೆಡೆಯೆ ಗೋಣ್ಮುರಿಗೊಂಡಂ
ತೊಟ್ಟಜೆಯಿಂದವೆ
ಸುಟ್ಟಿಪ
ಬೊಟ್ಟಿಂದವೆ
ಮೂಗನೂಱಿ ಬಿಟ್ಟಂ ಕೃಷ್ಣಂ     ೨೦

ವ|| ಅಂತು ಶಾಕ್ವರವರನಾಗಿ ಕೆಕ್ಕಳಿಸಿ ಕೆಳರ್ದಟ್ಟಿಕೊಂಡು ಬಂದ ಕಂಸನಟ್ಟಿದರಿಷ್ಟನಂ ಅಂದಿನರಿಷ್ಟನಂ ಕೊಂದಂತೆ ಕೊಲ್ಲದೆ ಪಶುವೆಂದು ಪೇಸಿ ಪಶುಪಾಲನಪ್ಪ ಕಾರಣದಿಂ ಕರುಣಿಸಿ ಕಾದು ಸೋದು ಕಳೆದನದೆಲ್ಲಮಂ ಕೇಳ್ದು ಮೂಱುಂ ಲೋಕಮನಾಳ್ದನಿತು ಸಂತೋಷಂ ಬಟ್ಟುನೋಡಲೆಂದೞ್ತಿವಟ್ಟು ಗೋಮುಖಿಯೆಂಬ ನೋಂಪಿಯ ನೆವದಿಂ ದೇವಕಿಯುಂ ವಸುದೇವನುಂ ಬಲದೇವನುಂ ವಾಸುದೇವನುಮಿರ್ದ ತುಱುಪಟ್ಟಿಗೆ ಪಿರಿದಪ್ಪ ವಿಭವಂಬೆರಸು ಬಂದು ಸೌಖ್ಯದ ಸೀಮೆಗಾಣ್ಬಂತೆ ಕೃಷ್ಣನಂ ಕಂಡು ತೆಗೆದು ತಕ್ಕೈಸಿಕೊಂಡು

ಕಡುದೊರದ ಮೊಲೆಯಿನಂಬಿರಿ
ವಿಡುತಂದುವು
ಪಾಲ ಧಾರೆ ಪಲಕಾಲಮಗ
ಲ್ದೊಡವೆಯನಮೃತ
ಕಾಳಳಿಗ
ಳೊಡರಿಸಿ
ಶಶಿಕಾಂತಮೊಸರ್ವುದೊಂದಚ್ಚರಿಯೇ      ||೨೧||

ವ|| ದೇವಕಿ ಕಡುಗಂದಿಯಪ್ಪುದಱಿಂ ತೊರೆದೆಚ್ಚು ಪಾಯ್ವಂ ಮೊಲೆವಾಲಿಂ ಮಗನಂ ಮಜ್ಜನಂಬುಗಿಸಿ ಮುಗುಳ್ನಗೆಯ ಮುತ್ತುಮಂ ಬೆರಸಿ ಸೇಸೆಯನಿಕ್ಕಿ ಯಕ್ಷಕರ್ದಮದೊಳಣ್ಬನಿಕ್ಕಿ ಕಣ್ಣೆಂಜಲಕ್ಕುಮೆಂದು ಸೊಡರ್ವಕ್ಕನಿಕ್ಕುವಂತೆ ಗಾಳಿಸೋಂಕದ ಸೊಡರಂತಿರ್ದ ಪೊನ್ನ ಸಿಪ್ಪಿನ ಕತ್ತುರಿಯಂ ಕೊಂಡು ಬೊಟ್ಟನಿಟ್ಟು ಬೆಲೆಗೆ ಬಿಣ್ಣಿದುವುಂ ಮೆಯ್ಗೆ ನೊಚ್ಚಿದುವುಮಪ್ಪ ದೇವಾಂಗಮನುಡಿಸಿ ಮಾಣಿಕದೊಡಿಗೆಯಂ ತೊಡಿಸಿಯಮೃತಾನ್ನಮನೂಡಿ ತನಯನ ಪಂತಿಯೊಳ್ ಗೋಪಕುಮಾರರ್ಗೆಯುಡಲುಂ ತುಡಲುಮುಣಲುಮಿತ್ತು ಯಶೋದೆ ಮೊದಲಾದ ಗೋಪಿಯರ್ಗೆಲ್ಲಂ ಪೊನ್ನರನ್ನದ ಬಾಯಿನಂಗಳಂ ಕೊಟ್ಟು ನೋಂಪಿಯ ನೋಂಪ ವಿಧಾನಮಿಂತುಟೆಂದು ತನ್ನ ಮಗನಿದಾರ ಮಗನೀತಂ ಪೊಂಗಮಾದಿತ್ಯಂಗಂ ದೇವಂಗಂ ದೇವಿಗಂ ಪುಟ್ಟಿದಂತಿರ್ದಪನೆಂದು ತೊಡೆಯನೇಱಿಸಿಕೊಂಡು ನೋಡುವಾಗಳ್

ಉಡುಗಣದ ನಡುವೆ ಮೃಗಧರ
ನೆಡೆಗೊಂಡಿರ್ಪಂತೆ
ಕಮಳನಯನಂ ಸಲೆ
ನ್ನೊಡನಾಡುವ
ಗೋವರ್ಕಳ
ನಡುವೆ
ಕರಂ ತನ್ನ ಬೆಳಗೆ ಬೆಳಗಾಗಿರ್ದಂ    ೨೨

ವ|| ಅನ್ನೆಗಮತ್ತಾ ನಂದಗೋಪಂ ಗೋಪವೃದ್ಧೆಯರ್ವೆರಸು ವಸುದೇವ ಬಲದೇವರನೊಡಗೊಂಡು ಪೋಗಿ ಪಂಕಜಾಕ್ಷನುಮನೌಂಕಿ ಗೊಂಕೆಯಂ ನುಲಿದ ಕಾಗೆಯಂ ಕನ್ನೆತ್ತರನುಂಡ ನೆಲನೆಲ್ಲಂ ಕೆಮ್ಮಣ್ಣ ನೆಲನಾಗಿ ವಾಸಿಸಿದೊಡೆ ನೆತ್ತರ್ನಾಱುಮಾಗಿ ಪೇಸಂ ಪಡೆದುರ್ವಿಯುಮಂ ದೇವಕೀಪುತ್ರಂ ಪೀರ್ದ ಪೂತನಿಯ ಸತ್ತ ನೆತ್ತರ ಪಲ್ಲೆಗಳಿಂ ಜಾದುಕಲ್ಲಕಣಿಯಂದಮಂ ಮೆಱೆದು ಮೆಟ್ಟಿ ಬಾಣತಿಯ ಮೊಲೆವಾಲ್ ನಂಜಪ್ಪ ವಿಷಮೃತ್ತಿಕೆಯೆಂಬಿವಂ ತಗುಳ್ದಗುೞ್ದೊಡೆ ಕಾಗೆಗಳೆ ಪೊಱಮಟ್ಟು ಪಾಱುವ ಕಾಕಗರ್ಭೆಯೆಂಬ ನಾಮಮನಾಳ ಭೂಮಿಭಾಗಮುಮಂ ಶಕಟ ಕುಠಾರನ ಕಾಲ ಕೋಳಿಂ ನುರ್ಚುನೂಱಾಗಿ ಪಾಱ ಕೆಡೆದ ಕಠಿನ ಶಕಟದೀಷಾದಂಡಹತಿಯಿಂ ಪೃಥ್ವೀತಳಂ ಪಾತಾಳಕ್ಕೆ ತೂತುವೋಗೆ ಬಾಗಿ ನೋಡಿದರ್ಗೆ ಛಾಯಾಭಗವತಿಯಂತೆ ಶಕಟಚ್ಛಾಯೆಯೆ ತೋಱುವ ಶಕಟದ್ವಾರಮೆಂಬ ಬಿಲದ್ವಾರಮುಮಂ ಯಮಳಾರ್ಜುನಭಂಜನಂ ಕಾಕೇಭಕುಂಜಂಗಳಂ ಕಿೞ್ತೀಡಾಡೆ ಕೂಪದನಿತು ಕುೞಿಯಾಗೆ ನೆಲದನಿತು ಮಣ್ಣನಡಕಿ ಪೊಯ್ದೊಡಮಾಶಾಗರ್ತದಂತೆ ಪೂೞದರ್ಜುನಗರ್ತವೆಂಬ ನೆಗೞ್ತೆವಡೆದ ಗರ್ತಮುಮಂ ಮುಂಜಕೇಶಿ ಕಿಶೋರನ ಬಾಯಂ ಸೀೞೆ ಸುರಿದ ರುಧಿರದಿಂ ಧರಣೀರೇಣುಸಿಂದುರಂ ಬಿರ್ದುದು ಪುಸಿಯೆಂದು ಮೆಟ್ಟಿದ ಮೊಗಂಗಳ್ಮಾಲಿನ ಮೊಗದಂತೆ ಕುದರೆ ಮೊಗಮಾಗೆ ತುರಗಮುಖಿಯೆಂಬಾಖ್ಯಾನಮನಾಂತ ಭೂತಳಮುಮಂ ಮುರಾರಿ ಮುಂಖರನಂ ಸಱ್ರನೆ ಸೀೞ್ದಾಱದ ಮುನಿಸಿಂದೊಗೆದಾಱೆ ಪರಪೆ ಧಾತು ನಿರ್ಝರ ದಂತಶ್ರುಜಳ ಮೊಱೆತು ಜುಱಿಯುತ್ತುಮಿರ್ಪ ಧಾತ್ರಿಯಪ್ಪುದುಂ ಕೞ್ತೆಗಱೆವ ಕೞ್ತೆಗಲ್ಲೆಂಬಂಕದ ಕಲ್ಲುಮಂ ನಗಧರಂ ಕಿೞ್ತೆಕ್ಕೆ ಮುನ್ನಿರ್ದಿರವಲ್ಲದೊರ್ಗುಡಿಸಿ ಕೆಡೆದು ಗೋವರ್ಧನಮೆಂಬಭಿಧಾನಮಂ ತಳೆದ ಗಿರಿಯುಮಂ ತೋಱುತ್ತುಂ ಬರ್ಪುದುಮವರ ಪೆಱಪೆಱಗೆ ಗೋಪೀಜನ ಪರಿವೃತೆಯಾಗಿ

ಕಡುಪಿಂದಾ ಕಾಕನಂ ಕುಪ್ಪಳಿಸಿದೆಡೆಯಿದಾ ಪೂತನೀರಕ್ತಮಂ ಪೀ
ರ್ದೆಡೆಯಾ
ತೇರಯ್ವತೇರಂ ಪರಪಿದೆಡೆಯಿದಾಮತ್ತಿಯಂ ಲೀಲೆಯಿಂ ಕಿ
ೞ್ತೆಡೆಯಾತಾೞಂ
ಕುಮಾರಂ ಕೆಡಪಿದೆಡೆಯಿದಾ ಗರ್ದಭಾಶ್ವಂಗಳಂ ಸೀ
ೞ್ತೆಡೆಯೆಂದಾ
ದೇವಕೀದೇವಿಗಮನಿತಡೆಯಂ ತೋಱೆದಳ್ಗೋಪಿಯಾಗಳ್ ೨೩

ನೀಂ ಬೆಸಗೊಳ್ವುದದೇನಾ
ಣಂಬಿಯನವಯವದೆ
ಕೀೞ್ವ ತೆಱದಿಂ ಕಿೞ್ತೀ
ಯಂಬುಜಲೋಚನೆನೇೞುದಿ

ನಂಬರಮೆತ್ತಿರ್ದ
ಗಿರಿಯಿದಂಬುಜವದನೇ     ೨೪

ವ|| ತೋಱೆ ತನ್ನ ಸುತನ ಶಕ್ತಿಗಂ ಸಾಹಸಕ್ಕಂ ವಿಸ್ಮಯಂಬಟ್ಟು ಮನದೊಳ್ಕಂಸಂ ಮುನಿದಪನೆಂದೊಡೆ ಮುನಿಯಬೇಡಾ ಎಂದುಪ್ಪಂ ನಿವಳಿಸಿ ತೂಪಿಱಿದು ಮಗನಂ ಬಿಟ್ಟು ಬರಲಾಱದೆ ದೇವಕೀದೇವಿಯನೆಂತಾನುಮೆೞೆದುಕೊಂಡು

ನಂದನ ವಿಕಸಿತ ಮುಖಮುಕ
ರಂದಮನುಗುೞಿಸೆಯುಮಗಿವ
ದೃಗುವೃಂದಮನಾ
ನಂದದೊಳಾನಕದುಂದುಭಿ

ದುಂದುಭಿಯಂ
ಪೊಯಿಸುತಂದು ಪೊೞಲಂ ಪೊಕ್ಕಂ   ೨೫

ವ|| ಆ ಪ್ರಸ್ತಾವದೊಳಾ ಪೊೞಲ್ಗೆ ಕಾರಣಭೂತಮಪ್ಪ ಚೈತ್ಯಾಲಯದ ಮುಂದಣ ದೇವತಾಯತನಮಪ್ಪ ಬಿಲದ್ವಾರದೊಳ್

ಸುಚಿರ ರುಚಿಗಳ್ ಜಯಶ್ರೀ
ಸಚಿವಂಗಳ್
ಹರಿಯದೊಂದು ಪುಣ್ಯೋದಯದಿಂ
ಶುಚಿನಾಗಶಯ್ಯೆಯುಂ
ಶಾ
ರ್ಙ್ಗಚಾಪಮುಂ
ಪಾಂಚಜನ್ಯಮುಂ ಪುಟ್ಟುವುದುಂ       ೨೬

ಸುರದುಂದುಭಿರವಮೆಸೆದುದು
ಸುರತರುವಿಂ
ಸುರಿದುದಲರ ಸರಿ ಸೂಸಿದುದಾ
ಸುರಮುಖ
ಸರಸಿಜದಿನಹೋ
ಪುರುಷೋತ್ತಮ
ಪುಣ್ಯಮೆಂಬ ನಾದಾಮೋದಂ         ೨೭

ಭೂವಿವರದಿನೊಗೆತಂದಾ
ಪಾವೆಸೆದುದು
ಸಪ್ತಫಣಮಣಿ ಪ್ರಭೆಯಿಂ ಭೂ
ದೇವಿ
ಫಣಿರಾಜ ಸಂಭೋ
ಗಾವಸ್ಥಿತೆ
ಬೆಸಲೆಯಾದ ಪಾವೆಂಬಿನೆಗಂ     ೨೮

ಪಸರಿಸಿದಮೂರ್ಮಿ ವಿದ್ಯು
ದ್ರಸಿತಮನದು
ತನಗೆ ತಾನೆ ಶಾರ್ಙ್ಗಂ ಸಿಂಗಂ
ಮಸಕದಿನಯ್ವಾಯಿಂ

ರ್ಜಿಸುವವೊಲಯ್ವಾಯ
ಶಂಖಮೇಂ ಗರ್ಜಿಸಿತೋ     ೨೯

ಭುಜಂಗಪ್ರಯಾತ ವೃತ್ತಂ|| ಅವಂ ಕಂಡು ಕಂಸಂ ಭಯಂಗೊಡ ಪೋತಂ
ದವಂ
ಮೂಲ ಚೈತ್ಯಾಲಯಕ್ಕಲ್ಲಿ ಪಾದಾ
ರವಿಂದಂಗಳೊಳ್ಮೊೞ್ಗಿಯೋಗೀಶ್ವರರ್ನ್ನಿಂ

ದಿವಾದೊಂದು
ವೃತ್ತಾಂತಮಂ ಪೇೞಿಮೆಂದಂ         ೩೦

ವ|| ಅವರಿಂತೆದರಿವು ಮೂಱುಂ ಮಹಾರತ್ನಂಗಳ್ ಪರಮ ಪುರುಷ ಪುಣ್ಯಪ್ರೇರಣೆಯಿಂ ಪುಟ್ಟಿದುವಲ್ಲದುತ್ಪಾತಂಗಳಲ್ಲಂ ಆವನಾನುಮೊರ್ವ ಮಹಾಭಾಗನೀ ನಾಗಶಯ್ಯೆಯನೇಱುವನೀ ಶಾರ್ಙ್ಗಧರ್ಮವನೇಱಿಸುವನೀ ಪಾಂಚಜನ್ಯಮಂ ಪೂರಿಸುವನಾತನರ್ಧಚಕ್ರವರ್ತಿಯಾಗಿ ಪೃಥ್ವೀರಾಜ್ಯಗೆಯ್ಗುಮೆನೆ ಕಂಸನಿದನೀಗಳೆ ನೋೞ್ಪೆನೆಂದಾ ನಾಗಶಯ್ಯೆಯನೇಱಿದಂಗೆ ಪಾವಿನ ಪಾಸೆ ಪಸೆಯಾಗಲರಸಂ ತನ್ನ ಮಗಳನಿತ್ತಪನೆಂದು ಸಾಱಿಮೆನೆ ಮಹಾಪ್ರಸಾದಮೆಂದು ಪೆರ್ಗಡೆಗಳ್ ಪೋಗಿ ಗೋಸಣೆಯಂ ಮಾಡೆ

ಪಾವೆಂದೊಡೆ ಪಡೆ ನಡುಗುವು
ದೇವೆಯೊ
ಪಸೆಯಲ್ಲಿ ಪಾವು ಕೊಳ್ವೊಸಗೆಯನೋ
ವೋವೊ
ಪುಸಿಮದುವೆ ಮೊದಲೊಳ್
ಸಾವು
ದಿಟಂಸತ್ತು ಮದುವೆಯಪ್ಪರುಮೊಳರೇ          ೩೧

ವ|| ನಿಮ್ಮರಸನೆ ಕನ್ಯೆ ವಿಷಕನ್ನಿಕೆಗಾಕೆಗಂಜುವೆವಿಲ್ಲೀ ಸೂಲಮನೇಱಿ ಪಾಲ್ಗುಡಿವರಿಲ್ಲೆಂದು ಬೀರರುಂ ಶೂರರುಮಪ್ಪ ರಾಜಪುತ್ರರ್ ಕಿವಿಯಂ ಮುಚ್ಚಿಕೊಂಡು ಪೋದರಾ ಗೋಸಣೆಯಂ ಘೋಷದೊಳಿರ್ದ ಕೃಷ್ಣಂ ಕೇಳ್ದು

ಏನಿಂ ಪಾಸುರಗನೆ ಬಿ
ಲ್ಲಾನದು
ಶೃಂಗಜಮೆ ಶಂಖಮೈವಾಯದೆ ಪೋ
ಗಾನೇಱುವೆನಾನೆತ್ತುವೆ

ನಾನೊತ್ತುವೆನೆಂದು
ಪಿಡಿಸಿದಂ ಡಂಗುರಮಂ ೩೨

ವ|| ಪಿಡಿಸಿ ಮನೆಗೆ ಪೋಗದೆ ಗೞೆವೞೆಯ ಪಾವಿನಂತೆ ಗೋಸಣೆಯ ಬೞಿಯನರಮನೆಗೆ ಪೋಪುದುಂ ಕಂಸಂ ಕಂಡಿದೆನ್ನ ಪಗೆಯುಂ ಬಗೆಯುಂ ಸಾಧ್ಯಮಾದುದು ನೋಂತರ ಪಗೆಯನೆೞ್ತಿದಂತೆ ಮಾೞ್ಪೆನೆಂದು ಚೈತ್ಯಾಲಯದ ಮುಂದೆ ಮಹಾಸ್ಥಾನಮಂ ಮಾಡಿ ವಸುದೇವಬಲದೇವ ಮಂಡಳಿಕ ಮಕುಟ ಬದ್ಧ ಸಾಮಂತ ಮಂತ್ರಿ ಸಮೇತನಾಗಿ ಕುಳ್ಳಿರ್ದು ಮಂತ್ರವಾದಿಗಳಿನವನಾಹ್ವಾನಂ ಮಾಡಲೊಡನೆ

ಮೊದಲೊಳ್ಕಾಳಾಹಿಯಂ ಕಾಱುವವೊಲೊಗೆಯೆ ಧೂಮಾಳಿ ಫೂತ್ಕಾರದಿಂದಂ
ತಿದಿಯಂ
ಕೊಂಡೊತ್ತಿದಂತುಚ್ಚಳಿಸೆ ಬೞಿ ವಿಷಜ್ವಾಲೆ ವಕ್ತ್ರಂಗಳಿಂ ಪಾ
ಱಿದ
ಕೆಂಡಂ ನೆತ್ತಿಯೊಳ್ಬಿರ್ದವೊಲಿರೆ ಫಣಿಮಾಣಿಕ್ಯಸಂದೋಹದಿಂ ತಂ
ದುದೊ
ಕೋಪಾಟೋಪದಿಂ ವಾಸುಗಿಗೆ ವಿಷಯಶಃಶೋಷಮಂ ಲೇಲಿಹಾನಂ       ೩೩

ವ|| ಆ ಕುಂಭೀನಸ ವಿಜೃಂಭಣಕ್ಕೆ ನೆರೆದ ನೆರವಿಯೆಲ್ಲಮೊಲ್ಲದೇ ನುಲಿದೋಡೆ ಕಂಸನೊಳಂಗೊಂಡು ನೋಡಿ ಗದಗಂಪಂಗೊಂಡು ಮಹಾಮಂತ್ರಾದಿಗಳಪ್ಪ ಮುನಿಮುಖ್ಯರ ಮಱೆಗೊಂಡು ಪಂಚನಮಸ್ಕಾರಮಂ ಜಪಿಯಿಸುತ್ತುಮಿದನೇಱುವೆನೆಂದುಬಂದ ಕಲಿಯಂ ಕರೆಯಿಮೆಂಬುದುಮಾ ಮಾತಿಂ ಮುನ್ನಮೆ

ಗರುಡಧ್ವಜನೆೞ್ತರ್ಪುದು
ಮುರಿವುರಿನಂಜುರಿಯ
ಮೇಲೆ ನೀರ್ವೊಯ್ದವೊಲಾ
ಯ್ತುರಗಂಗಂ
ನವಿಲಂ ಕಂ
ಡುರಗನೆ
ತೆಱನಾಯ್ತು ನೆರವಿಗಾಯ್ತತಿಚೋದ್ಯಂ       ೩೪

ಸೂಸೆ ಮಗಮಗಿಪ ಕಂಪಿನ
ವಾಸನೆ
ಪಾಯ್ದೇಱಿದಂತದುರಗೇಂದ್ರನ
ಣ್ಪಾಸನರೆವಿರಿದ
ಜಾದಿಯ
ಬಾಸಿಗದೊಳೆ
ಪಾಯ್ದ ತುಂಬಿಯಂತಿರೆ ಕೃಷ್ಣಂ          ೩೫

ಮಂಡಳಿಸಿದ ಮುಕ್ತಾಫಲ
ಪಾಂಡುರ
ಫಣಿಪತಿಯ ಮೇಲೆ ಶರದದ ಹಿಮ ಕೃ
ನ್ಮಂಡಲದ
ಮೇಲೆ ಚೆಲ್ವಂ
ಕೊಂಡೆಸೆವ
ಕಳಂಕದಂತಿರೆಸೆದಂ ಕೃಷ್ಣಂ     ೩೬

ಜಳಜಲೋಚನಂಗೆ ವಿ
ರಾಜಿಸೆ
ಜಯಲಕ್ಷ್ಮಿ ತನ್ನದೊಂದೊಲವಿಂ ನೀ
ರಾಜಿಸುವಂತೆಸೆದುವು
ಫಣಿ
ರಾಜನ
ಬಿಡದೊಲೆವ ಪೆಡೆಯ ಮಣಿದೀಪಿಕೆಗಳ್        ೩೭

ಒಡೆವಂತಾಗಿರೆ ಭೂತಧಾತ್ರಿಯೆರ್ದೆ ಕಾಲ್ಮೇಲಾಗಿ ದಿಗ್ದಂತಿಗಳ್
ಕೆಡೆವಂತಾಗಿರೆ
ಲೋಕವಾಲಿವರಲೆಂದಾರಯ್ದುಮಾಕಾಶದಿಂ
ಬಿಡುವಂತಾಗಿರೆ
ತಾರಕಾನಿಕರವೀ ಬ್ರಹ್ಮಾಂಡಭಾಂಡಂ ಸಿಡಿ
ಲ್ದೊಡೆವಂತಾಗಿರೆ
ಪಾಂಚಜನ್ಯ ನಿನದಂ ಪರ್ವಿತ್ತು ದಿಕ್ಪಾರವಂ   ೩೮

ವ|| ಈ ಶಂಕಮನಿನ್ನುಂ ಪಿಡಿದೊಡೆ ಮಗಂ ಪಿಡುಗಿ ಕೆಡುಗುಮೆಂದು ಕರುಣಿಸಿದಂತೆ ಮನಿವರ್ ಮನಮಿೞಿಪೆ ಶಾರ್ಙ್ಗಶಂಖಮನಿೞಿಪಿ ನಾಗಶಯ್ಯೆಯಿಂದಿೞಿದು ಪೋಪುದಂ ಕಂಡು ಕರೆದು ಕಂಸನಿಂತೆಂದಂ

ತೊದಳೇನೊ ಮೆಚ್ಚಿದೆಂ ನಿ
ನ್ನದಟಿಂಗೆಲೆ
ಗೋಪ ತರ್ಪುದೀ ಬಸದಿಗೆ ನೀ
ನುದಯಕ್ಕೆ
ಮುಂಚೆ ನಾಗ
ಹ್ರದದೊಳಗಣ
ಸಾವಿರೆಸೞ ತಾವರೆಯಲರಂ ೩೯

ವ|| ತಂದು ದೇವರ ಶ್ರೀಪಾದಪದ್ಮದೊಳೇಱಿಸಿದೊಡೆ ನಿನ್ನನಾನೆಯೇ ಱಿಸುವೆನೆಂಬುದುಮದರ್ಕೊಂದು ಕಯ್ಯನೆ ತಂದಪೆನೆಂದಾ ಕಯ್ಯೊಳೆ ಕೃಷ್ಣನಾ ಯಮುನಾ ನದಿಯ ನಾಗಹ್ರದಕ್ಕೆ ಪೋದನದೆಂತಿರ್ದುದುದೆಂದೊಡೆ

ಬಳೆದು ವಿಷಾಗ್ನಿಯಗ್ಗಿವಳೆದೆಣ್ಣೆಯೊಳೆೞ್ದುರಿವಗ್ನಿಯಂತೆ ನೀ
ರೊಳಗುರಿದೇೞೆ
ಪರ್ವಿ ಬಡಬಾಗ್ನಿವೊಲಾ ಮಥನಾದ್ರಿ ಪೀಡೆಗು
ಮ್ಮಳಿಸಿ
ಲಯಾಗ್ನಿ ಘೋರ ಗರಳಾಗ್ನಿಯನೀ ಭುವನತ್ರಯಂ ಭಯಂ
ಗೊಳೆ
ಕೆಳರ್ದಾಸುರಕ್ಕುಗುೞ್ವ ವಾರ್ಧಿವೊಲಿರ್ದುದು ಕಾಳಿಯಹ್ರದಂ       ೪೦

ಮಿಗೆ ನಂಜು ತಾಗೆ ನೀರ್ಗಂ
ಪುಗಳೊಗೆದವೊಲೊಗೆಯೆ
ಬುದ್ಬುದಾವಳಿ ಕಾಳೋ
ರಗ
ನಿಶ್ವಾಸಾನಿಳನಿಂ
ಜಗುನೆಯ
ಮಡು ತೆಕ್ಕತೆಕ್ಕನು‌ಕ್ಕುತ್ತಿರ್ಕುಂ    ೪೧

ಕಾಳಿಯನ ವಿಷದ ಪೊಗೆ ಮಿಗೆ
ಕಾಳಿಂದಿ
ಕಱಂಗಿ ಕೂಡಿ ಕಾಡಿಗೆಗೊಂಡೀ
ಭೂಲಲನೆಯ
ಬಾಸೆವೊಲಾ
ಯ್ತಾಲೋಕಿಗೆ
ಕಱೆಯತೊಱೆಯ ಪರಿದೆಡೆಯುಂಟೇ    ೪೨

ಅನಿಲಂ ಮೇಗಡೆ ಪೋಗಲಣ್ಮನಿವನಿಂತಂದಾದೊಡಾ ಶಂಖಚೂ
ಳನನೇಂ
ಕಾವನೆ ಸರ್ಪವೈರಿ ಸರಮಂ ಕೊಂಡಂದು ಗುಳ್ಕೆಂದು ನುಂ
ನಗೆ
ದಲ್ ಪೋಳಿಯನೆತ್ತಿ ತುತ್ತನೆ ಲಯೋಗ್ರಜ್ವಾಳೆಯಂ ತಿಂದು ತೇ
ಗನೆ
ಮಾಕಾಳಿಯನುರ್ಚಿ ಮುಕ್ಕನೆ ವಿಯನ್ನಾಕಾಳಿಯಂ ಕಾಳಿಯಂ        ೪೩

ಬಿಸಮಂ ನುಂಗಿದನೆಂದು ಕೇಳ್ದೆನದು ಮುನ್ನೀರ್ಗ್ಗುಂಟೆ ಮುನ್ನಾ ವಿಷಂ
ಪುಸಿ
ಪೋಗಾನುಗುೞ್ದಿಪ್ಪೆನೆನ್ನ ವಿಷಮಂ ತಾಂನುಂಗಿ ನೋೞ್ಕೆಂದು
ರ್ಜಿಸಿದೂತಟ್ಟಿದ
ತನ್ನ ಪಾವುಗಳನೀಶಂ ಭೂಷಣಂ ಮಾಡಿ
ನ್ನಿಸಿದಂ
ಪೇೞುೞಿದಂದು ತೀರ್ಚ್ಚನೆ ಕನಲ್ದಾ ಶೂಲಿಯಂ ಕಾಳಿಯಂ       ೪೪

ವ||ಎನಿಪ ದಂದಶೂಕನ ದಾಡೆಗಳಿನೊಸರ್ತ ವಿಷದ ಮಡುವಿನಂತಿರ್ದ ಜಗುನೆಯ ಮಡುವಂ ಕ್ರೀಡಾಸರೋವರವಂ ಪುಗುವಂತೆ ಪೊಕ್ಕು

ಅೞಲೆ ಫಣಿ ಕೞಲೆ ಕೇಸರ
ವೆೞಲೆ
ರುವನ್ಮಧುಪಮಾಳೆ ಹರಿ ತನ್ನಯ ಪೊ
ರ್ಕುೞ
ಕಮಳದಂತೆ ಜಗುನೆಯ
ಸುೞಿಯೊಳ್
ಸೊಗಯಿಸುವ ಕಮಳದಲರಂ ಕೊಯ್ದಂ ೪೫

ವ|| ಕೊಯ್ದು ಗೋಪರ ಕಯ್ಯೊಳ್ಕೊಟ್ಟು ಮಗುಳೆ ಕಾಳಿಯನ್ವೇಷಣದಿಂ ಪೊಕ್ಕು

ಕಾಳಿಂದಿಯ ಮಡುವಂ ಹರಿ
ತೋಳಿಂ
ತುಳ್ಕಾಡಿ ಮೊರೆದು ಮೇಲ್ವಾಯ್ದು ಮಹಾ
ಸ್ಥೂಳ
ತರಂಗಾವಳಿಯಂ
ಕಾಳಿಯನೆಂದಡಸಿ
ಪಿಡಿದು ಪೊಡೆದಂ ತಳದಿಂ         ೪೬

ಅಡಗಿದ ಪಾವಂ ಜಗುನೆಯ
ಮಡವಿನೊಳಱಸುವನ
ಕರನಖಾರುಣರುಚಿಗಳ್
ಕಡು
ಕೞ್ತಲೆಯೊಳ್ ಪಲವುಂ
ಸೊಡರಂ
ಕೊಂಡಱಸುವಂತಿರೇಂ ತೊಳಗಿದುವೋ    ೪೭

ಫಣರತ್ನಜ್ಯೋತಿಯಿಂ ಕಾಳಿಯನೆಯಱಸಿ ಕಂಡೆಯ್ದಿ ಗೋಪಾಳಚೂಡಾ
ಮಣಿ
ಜೀವಂಬೆತ್ತ ಗಾರುತ್ಮತ ಮಣಿಯವೊಲಂಗ ಪ್ರಭಾಮಾಲೆ ದುರ್ವಾ
ಪಣಮಂ
ಕಾಳಿಂದಿಯೊಳ್ ಪುಟ್ಟಿಸಿ ಪಿಡಿಯಲೊಡಂ ಕೃಷ್ಣನಂ ಕಾಳಿಯಾಂಗಂ
ಪೆಣೆದತ್ತಾಪಾದಮಸ್ತಂ
ಲತೆಯೊಳೆ ಬಿದಿರಂ ಪರ್ವುವಂತೊಂದಗುರ್ವಂ   ೪೮

ಬಿಸುಸುಯ್ದೀಕ್ಷಿಸಿ ನುಂಗುವಂತೆ ಮೊಗಮಂ ಪ್ರೋದ್ಯತ್ಫಣಾ ಹಸ್ತದಿಂ
ಮಸಕಂಗುಂದದೆ
ಪೊಯ್ದು ಮುಂದಲೆಯನಂಗೋಪಾಂಗಮಂ ಕೂಡೆ ಬಂ
ಚಿಸಿ
ಮೈ ಬೇಱೆರಡಿಲ್ಲೆನಲ್ಸಮರತತ್ವಾಟೋಪದಿಂ ತಳ್ತು ಪು
ಟ್ಟಿಸಿದಂ
ಪಂಕಜಲೋಚನಂಗೆ ವಿಜಯಶ್ರೀ ಕೇಳಿಯಂ ಕಾಳಿಯಂ ೪೯

ಮತ್ತಮಯೂರಗರ್ಜನೆಗೆ ಚಂದನಮಂ ಬಳಸಿರ್ದ ಪನ್ನಗಂ
ಸುತ್ತೞಿವಂತೆ
ನನ್ನ ಗಳಗರ್ಜನೆಗಂಜಿ ನಿಜಾಂಗಯಷ್ಟಿಯಿಂ
ಸುತ್ತೞಿದಿರ್ದ
ಪನ್ನಗನ ಗಂಟೊನೊತ್ತಿದನೊತ್ತಿದೊಂದು ಕೆ
ಯ್ಮತ್ತಮದೊಂದು
ಕಾಲಭುಜಗಂ ಪಿಡಿದಂತಿರೆ ಕಾಳಿಯಾಹಿಯಂ          ೫೦

ವ|| ಅಂತು ಕಾಳಿಯುಂ ಗಾಳಿಯುಂ ಗರಳಮುಮನೊಳಗಾಗಿ ಕಾಱೆ ಕಾಳಿಂದಿಯ ಸೋರ್ಮುಡಿಯಂ ಪಿಡಿತರ್ಪಂತೆ ಪಿಡಿತಂದು ಗೋಪಾಲಬಾಲಕರ ಕಯ್ಯೊಳ್ಕೊಟ್ಟು ಕಂಸನಲ್ಲಿಗೆ ಕಮಳದೊಡನೆ ಕಳಿಪಿ ಕೃಷ್ಣಂ ಗೋಕುಳಕ್ಕೆ ಮಗುಳ್ದಾಗಳ್

ಅಯನಯ ನಿಧಾನ ತೇಜೋ
ಮಯ
ಕೆಂಡಮನೊಱಲೆ ಪತ್ತಲಾರ್ಕುಮೆ ಜಗತೀ
ಜಯಿಯೆನಿಪ
ಕಂಸನೆಸಗುವ
ಕುಯಕಂ
ಕೊಳ್ಗುಮೆ ಪರಾಕ್ರಮೋನ್ನತ ನಿನ್ನಂ ೫೧

ವ|| ಎಂದಶರೀರ ವಾಕ್ಯಮಂ ಕೇಳ್ದು ಪೂತನೆ ಮೊದಲಾಗಿ ಕಾಳಿಯಂಬರಂ ಮಾಡಿದಪಚಾರಮೆಲ್ಲಮವನ ಮಾಟಮೆಂದು ನಿಶ್ಚೈಸಿ ಪಲವು ಮುನಿಸುಮನೊಂದೆ ಮುನಿಸುಮಾಡಿ ಮುನಿದು ಕಂಸಂ ಮಾಡುವುಪಾಂಸಮೆಲ್ಲಮನಱಿದುಮಿರ್ದನತ್ತ ಸಹಸ್ರ ಪತ್ರದೊಡನೆ ಕಾವುವೆರಸಿದ ಕರಿಯ ನೆಯ್ದಿಲನಟ್ಟುವಂತೆ ನಾರಾಯಣನಟ್ಟಿದ ಪಾವುಮಂ ಪೂವುಮಂ ಕಂಸಂ ಕಂಡು ಪಾವಡರ್ದ ಪಂದೆಯಂತೆ ಕಿಱಿದು ಬೇಗಮಿರ್ದು ತನ್ನೊಳಿಂತೆಂದಂ

ಬಲಯುತನಾದಂ ಪಗೆವಂ
ಕೊಲಲಾಱಂ
ಕಾಳಿಯಂ ಗಡಿನ್ನಾರ್ಪವರಾರ್
ಸಲೆ
ಕೊಲಬಾರದ ಪಗೆಯಂ
ಗೆಲವಾರದದೆಂದುಮೆಂತುಮೆಂಬುದು
ಪದನೇ          ೫೨

ವ|| ಎಂದು ಮಂತ್ರಶಾಲೆಗೆ ಪೋಗಿ ಮಂತ್ರಿಗಳಂ ಬರಿಸಿ ಬೆಸಗೊಂಡೊಡವರಿಂತೆಂದರ್

ಪಗೆವಂ ಬಲ್ಲಿದನಾದನಾದ ರಸದ ಪ್ರಚ್ಛನ್ನ ಶಿಕ್ಷಾದಿ ಬಾ
ಧೆಗಳಂ
ಗೆಲ್ದನದೇಕೆ ಮುಚ್ಚುಮಱೆಯಿನ್ನುರ್ವೀಶ್ವರರ್ತಮ್ಮ ವೈ
ರಿಗಳಲ್ತಾರುಮನಿಕ್ಕಿ
ಬಾರಿಸುವರಾರ್ ಕೇಳ್ಮಂತ್ರಮಂ ಮಲ್ಲಗಾ
ಳೆಗಮಂ
ಮಾಡಿಸಿ ಕೊಲ್ವುದುಳ್ಳೊಡರಿಯಂ ಕಂಸಾವನೀವಲ್ಲಭಾ         ೫೩

ಜಗಮೆಲ್ಲಮಱಿಯೆ ತಂಗೆಯ
ಮಗನನದೆಂತಿಱಿವೆಮೆಂಬೊಡನುಜರ್ತನುಜಾ

ದಿಗಳಲ್ಲದೆ
ಭೂಪಾಳರ
ಪಗೆವರ್ಮತ್ತೊಂದು
ದೀವದಿಂ ಬಂದಪರೇ     ೫೪

ಮೊದಲೊಳ್ಮೆಲ್ಲನೆ ಮಲ್ಲರಿಂ ಮುಱಿಸು ಮಲ್ಲರ್ ಸೋಲ್ತೊಡಾ ಬೇಗದೊಳ್
ಮದವದ್ದಂತಿಯಿನೊಕ್ಕಲಿಕ್ಕಿಸು
ಮದೇಭವ್ರಾತಮುಂ ಸೋಲ್ತೊಡೊ
ಟ್ಟಿದ
ಕಿರ್ಚಿರ್ಪವೊಲಿರ್ದ ಖೞ್ಗಿಬಲಮಂ ಪೇೞ್ ಖೞ್ಗಿಗಳ್ ಸೋಲ್ತೊಡೋ
ವದೆ
ನೀನೊರ್ವನೆ ಕಾದಿಕೊಲ್ ಪಗೆವನಂ ಕಾಳಾಂತಕಂ ಕೊಲ್ವವೊಲ್   ೫೫

ವ|| ಎಂಬುದುಮಿದೇ ಮಂತ್ರಮೆಂದು ನಿಶ್ಚೈಸಿರ್ದನಾ ಪ್ರಸ್ತಾವದೊಳ್ ಪಡಿಯಱಂ ಪೊಡೆವಟ್ಟು ಮಹಾಮಾತ್ಯಂ ಬಾಗಿಲೊಳ್ಬಂದಿರ್ದಪನೆನೆ ಕಂಸಂ ಬರವೇೞೆಂಬುದುಮಾರೋಹಕಂ ಬಂದು ಕಂಡು ಸಾಷ್ಟಾಂಗವೆಱಗಿ ಮುಂದೆ ನಿಂದು

ಕರಿ ಕೊಲೆಯೊಳ್ಜವಂಗೆ ಪುದು ಕಾಯ್ಪಿನೊಳಗ್ನಿಗೆ ದಾಯಿಗಂ ಸಹೋ
ದರವಳವಿಂ
ಸಿಡಿಲ್ಗೆ ಮದಡೊಳ್ಕೆಳೆ ಕಾಳಿಗೆ ಕಾಲತಕ್ಕಿನೊಳ್
ಗುರು
ಗರುಡಂಗೆ ಮಾರಿಗೊವಜಂ ಮುಳಿಸಿಂದೆನೆ ನಿನ್ನ ಗಂಧ ಸಿಂ
ಧುರಪತಿಯುಗದಗ್ಗಳಿಕೆಯಗ್ಗಳಮಾದುದಿಳಾಧಿನಾಯಕಾ
        ೫೬

ಗಿರಿ ಪರಮಾಣುವಾಗೆ ಕಡಲೆಯ್ದೆ ಲಯಾನಳನೆಯ್ದೆ ಲೋಕಮಂ
ಧರಿಯಿಸಿ
ನಿಂದ ವಾಯುಚಯಮೆಯ್ದೆ ವಿಹಾಯಸಮೆಯ್ದೆ ಕಾರಣಂ
ಕರಿಗುೞಿದಂತು
ದಂತಿಗಳೊಳೀ ಬಲಮೀ ಮದಮೀ ಪ್ರತಾಪಮೀ
ಭರಸಹಸತ್ವಮೀ
ಸ್ಥಿರ ಮಹೋದಯಮಕ್ಕುಮೆ ಕಂಸ ಭೂಪತೀ  ೫೭

ವ|| ಎಂದು ಬಿನ್ನವಿಸಿ ತನ್ನ ಮನದ ವಿಷಾದಮಂ ಕಳೆದ ನಿಷಾದಿಗೆ ಚಿತ್ತಮು ಮನಂಗಚಿತ್ತಮುಮನಿತ್ತೆನ್ನ ಪಗೆಯುಂ ಬಗೆಯುಮಿಂದು ಸಾಧ್ಯಮಾದುದು ಮಧುಸೂದನನಂ ಮುನ್ನಂ ಕೊಲ್ವೆನಿನ್ನು ಕೊಂದಪನೆಂದು ತೊಡೆಯಂ ಪೊಯ್ದು ತಡೆಯದೆ ಚಾಣೂರ ಮಲ್ಲನಂ ಕರೆಯಲ್ಕಳಿಪಿ ವೀರಾವೇಶದಿಂ ಮೆಯ್ಯಱಿಯದೆ ಕಂಸನಿಂತೆಂದನೆಂದಾನುಮೊರ್ಮೆ ಗಂಡಗರ್ವದ ದೆಸೆಯಿಂ ಕೈಟಭನೆಂಬ ದಾನವಂಗಾಂ ಪ್ರಾಣ ದಾನಂಗೆಯ್ದೊಡಾತಂ ವಿನೀತನಾಗಿ ನೀನೆನಗೆ ಪರೋಪಕಾರಿಯೈ ನಿನಗೀ ಭವದೊಳ್ಬೆಸಕೆಯ್ದಪ್ಪೆನಲ್ಲದೆ ಬೆಸೆದಿರ್ಪೆನಲ್ಲೆನೆನಗೆ ಬೆಸೆನೇ ನೆಂದೊಡಾನಾ ದಾನವನಳವಂ ಕಡುಪುವಂ ಕಾಯ್ಪುಮಂ ಕಂಡೀ ರಕ್ಕಸನಾನೆಯಾಗಲ್ತಕ್ಕನೆಂದು ಬಗೆದು ನೋಡಿ ನೀನೆನಗೆ ಸಾಂ ಗ್ರಾಮಿಕನಪ್ಪ ನಾಗನಾಗಿರೆಂದೊಡಾಗೆ ನಿಜಗಲಿಯಪ್ಪಜಿತನೆಂಬ ಗಜಮಂ ಪರಾಜಿತಂ ಮಾಡಿಯಜಿತಂ ಜಯನೆಂಬ ಪೆಸರುಮಂ ವಿಕಾಸಿಸಿ ತಾನೇಕ ಕುಸುಮ ಕಾಸಾರ ಸರಿತ್ಸರೋವರಂಗಳೊಳಪೊಕ್ಕು ಕುವಳಯಮನೆ ಕಿೞ್ತು ಮಸ್ತಕ ಪಿಂಡದೊಳೊಟ್ಟಿಕೊಂಡು ಕುವಳಯಾಪೀಡನುಮೆಂಬ ಪೆಸರುಮಂ ಪಡೆದುದೆಂದದಱ ಪೂರ್ವಾಂತರಮಂ ತಿಳಿಪಿ ಮಾವಂತನಂ ಕರೆದು ಕಿವಿಯೊಳ್ ನಾಳೆ ನೀನುಂ ನಿನ್ನಾನೆಯುಂ ಗೋಪುರದೊಳ್ ಕಟ್ಟುಗೊಂಡಿರ್ದು ಪುರಮಂ ಪುಗುವ ನಂದನ ಮಗನಂ ಯಮಪುರಮಂ ಪುಗಿಸಿ ನೋಂತರ ಪಗೆಯನೆತ್ತಿಱಿದಂತೆ ಮಾಡೆಂದು ಕಳಿಪಿದನನ್ನೆಗಂ ಚಾಣೂರಂ ಬಂದು ಭುಜಾಸ್ಫಾಲನ ಪುರಸ್ಸರಂಬೆಸಸು ಬೆಸಸೆನ ಕಂಸನಿಂತೆಂದಂ

ಮೆಚ್ಚುಂಟು ನಾಳೆ ನಿನ್ನೊಳ್
ಮಚ್ಚರಿಸುವ
ನಂದಸುತನ ಮೂಗಿಂ ಬಾಯಿಂ
ದುಚ್ಚಳಿಸೆ
ರುಧಿರಮೆನಗಾ
ದಚ್ಚಿಗಮಂ
ಮುಱಿವಡೊತ್ತಿ ಮುಱಿ ಚಾಣೂರಾ         ೫೮

ವ|| ಎಂದ ಕಂಸಂಗೆ ಚಾಣೂರಮಲ್ಲಂ ಮುನಿದು

ಕ್ಷೋಣಿಪ ನೀವೀ ಮಾತಂ
ಮಾಣಕ್ಕಟ
ಕೀಡೆಯಂ ಕಿಮುೞ್ಚುವುದದಕ್ಕೀ
ಚಾಣೂರನೇಕೆ
ಮುಳಿದಾಂ
ಪೂಣಿಸಿದೊಡೆ
ಕೃಷ್ಣನೆಂಬ ಮಾನಸನೊಳನೇ ೫೯

ದೆಸೆಯಂ ನುಂಗೆಂಬುದೇಕಾಗಸಮನುಡುಗಿ ಕಟ್ಟೆಂಬುದೇಕರ್ಕನಂ ನೀಂ
ಪೊಸೆದೀಡಾಡೆಂಬುದೇಕಾ ದಿಗಿಭದೊಡನೆ ಪೋರೆಂಬುದೇಕೆನ್ನನೆಮ್ಮೀ
ಪಸುವಂ ಕಾದುಂಬ ಪಾಲ್ವಲ್ಗಳ ಹಸುಳೆಯನಿಕ್ಕೆಂದು ಬಾಳರ್ಗೆ ಪೇೞ್ವೀ
ಬೆಸನಂ ಚಾಣೂರಮಲ್ಲಂಗೆನಗೆ ಬೆಸಸಲೇಂ ತಕ್ಕುದೇ ಕಂಸರಾಜಾ       ೬೦