ಪಕ್ಕ ೬ – ೯೩ ರೆಕ್ಕೆ
ಪಂಕಿಲ ೫ – ೮೪ ಕೆಸರು
ಪಗವಂ ೧೨ – ೧೨ (ಗ) ೯ – ೫೨ (ಗ) ಹಗೇವನ್ನು
ಪಗಿನ್ ೧೧ – ೧೧ ಮರದ ಬಂಕೆ, ಮರದ ಕಾಂಡದಿಂದೆ ಜಿನುಗುವ ದ್ರವ
ಪಗೆವು ೮ – ೨೩ ಹಗೇವು
ಪಂಗು ೯ – ೧೩೮, ೩ – ೨೦ (ಗ) ಹಂಗು
ಪಚ್ಚಡಿಸು ೧೧ – ೨೦ ಅಲಂಕರಿಸು
ಪಚ್ಚಮಾದುದು ೧೪ – ೨೨ (ಗ) ಪಸದನ, ಅಲಂಕಾರ
ಪಚ್ಚವಡಿಕೆ ೧೦ – ೮೩ (ಗ) ಅಲಂಕರಣ
ಪಚ್ಚುಗೊಳ್ ೩ – ೬೩ ಹಂಚಿಕೊಳ್ಳು
ಪಚ್ಚೆಲೆದೊಂಗಲ್ ೬ – ೯೬ ಹಸಿರು ಎಲೆಯ ಗೊಂಚಲು
ಪಚ್ಚೆವಟ್ಟು ೧೩ – ೭೫ ಪಚ್ಚೆಗಳ ರಾಶಿ
ಪಚ್ಚೋಲೆ ೧೧ – ೬೯ ಹಸಿರು ಮಣಿಯ ಓಲೆ
ಪಚ್ಚಳಿಸು ೪ – ೧೦೦ ಪ್ರಜ್ವಲಿಸು, ವಿಶೇಷವಾಗಿ ಹೊಳೆ
ಪಚ್ಚೆ ೪ – ೧೪೩ ಹೆಜ್ಜೆಯ ಗುರುತು
ಪಟಹ ೭ – ೬ ತಂಬಟೆ
ಪಟಾಳಿ ೭ – ೫ ಬಟ್ಟೆಗಳ ರಾಶಿ
ಪಟ್ಟೆ ೧೨ – ೧೨ (ಗ) ಹಳ್ಳಿ, ರೊಪ್ಪ
ಪಡಿ ೫ – ೬ ಪ್ರತಿ, ಬದಲು
ಪಡಿ ೧೧ – ೫೨ (ಗ) ೭ – ೩೮ ಬಾಗಿಲು, ಕದ, ಪ್ರತಿ
ಪಡಿಯಱ ೧೪ – ೭೬ ಪ್ರತೀಹಾರಿ, ಬಾಗಿಲು ಕಾಯುವವ
ಪಣಿದಂ ೬ – ೧೧ ಹೊಡೆತ, ಪೆಟ್ಟು
ಪಣ್ತ ೨ – ೪೬ ಫಲಿಸಿದ
ಪತ್ತುಗೆ ೨ – ೫೨, ೮ – ೬೯ (ಗ) ಸಂಪರ್ಕ
ಪತ್ತೆ ೯ – ೧೯ (ಗ) ಹೊತ್ತಿಕೊಳ್ಳಲು
ಪತ್ತೆಪಾಯ್ದು ೧೪ – ೧೦೫ (ಗ) ಹತ್ತಿರಕ್ಕೆ ಸೇರಿ
ಪತ್ತೆಸಾದು ೯ – ೧೪ – ೧೨೦ (ಗ) ಹತ್ತಿರಕ್ಕೆ ಸೇರಿ
ಪದಪು ೬ – ೧೧೫ ಸಂಭ್ರಮ
ಪದಯಿಸು ೧೩ – ೧೩ ಹದಗೊಳಿಸು
ಪದುಳಂಗೆಯ್ ೧೦ – ೭೪ (ಗ) ನೆಮ್ಮದಿಯಾಗಿಸು
ಪದೆದು ೫ – ೪, ೧೪ – ೯೬ ಉತ್ಸಾಹದಿಂದ
ಪನ್ನತನ್ ೧೧ – ೩೪ ಶೂರ, ಪರಾಕ್ರಮಿ
ಪನಿತಪ್ಪವು ೩ – ೩೬ ಹನಿಯುತ್ತವೆ
ಪಪ್ಪುಕ ೧೨ – ೭೫ ಕೋಮಲ
ಪರಪಿ ೯ – ೧೧೮ ಹರಡಿ
ಪರಭೃತ ೯ – ೧೨೮, ೯ – ೯೬, ೧೪ – ೭೩ ಕೋಗಿಲೆ
ಪರಲ್ ೫ – ೮೮ ಕಲ್ಲು, ಹರಳು
ಪರವತ್ಸ ೫ – ೯೧ ಬೇರೆ ಹಸುವಿನ ಕರು
ಪರವರಿ ೪ – ೪೮ ಹೆಚ್ಚಿನ ವೃದ್ಧಿ, ಬೆಳವಣಿಗೆ
ಪರವೃತ್ತ ೪ – ೧೪೬ (ಗ) ಹಿಂತಿರುಗಿದ, ವಿಮುಖ
ಪರಾರ್ಥ್ಯ ೧೪ – ೨೨ (ಗ) ಅತ್ಯಂತ ಶ್ರೇಷ್ಠವಾದ
ಪರಿಕಲಿಸಿ ೧೧ – ೫೬ (ಗ) ತುಂಬಿಕೊಂಡು
ಪರಿಖಾ ೮ – ೬೩ (ಗ) ಕಂದಕ
ಪರಿಪೀಡನ ೧೩ – ೯೩ ಹಿಸುಕುವಿಕೆ, ಮರ್ದನ
ಪಱಮೆ ೭ – ೮೬, ೧೧ – ೫೮ ದುಂಬಿ
ಪರಿವಱಿ ೧೪ – ೧೧೪ ಸಿಟ್ಟುಗೊಳ್ಳು
ಪರಿಖಾವಾರಿ ೭ – ೩ ಕಂದಕದಲ್ಲಿನ ನೀರು
ಪರಿಷ್ವಂಗಂ ೧೩ – ೧೧೩ (ಗ) ಆಲಿಂಗನ
ಪರ್ವು ೨ – ೧೩ ಹಬ್ಬು
ಪಲ್ವಲ ೬ – ೬೭ ಹಳ್ಳ, ಅಲ್ಪಸರಸಿ
ಪಸದನ ೭ – ೧೮ ಅಲಂಕಾರ
ಪಸನು ೨ – ೭೪ ಹಸನು
ಪಸರ ೭ – ೧೨ ಅಂಗಡಿ
ಪಸಲ್‌ವೇಡ ೧೦ – ೮೩ (ಗ) ಹಸಿರು ಹುಲ್ಲಿನ ಬಯಲು
ಪಸಾಯ ೪,೫೮, ೧೦ – ೨ (ಗ) ಬಹುಮಾನ, ಉಡುಗೊರೆ
ಪಸಿಯನೇತ್ರ ೧೪ – ೬೪ (ಗ) ಆತುರದ ನೋಟ
ಪಸುಗೆ ೪ – ೫೭ (ಗ) ಹಂಚಿಕೆ, ವಿಭಾಗ
ಪಸೆ ೯ – ೧೨೧ ಹಸೆ, ಹಾಸಿಗೆ
ಪಳಂಕು ೧೪ – ೪ ಮುನ್ನುಗ್ಗು, ತಳ್ಳು
ಪಳಚನೆ ೯ – ೭೫ ಥಳಥಳಿಸುವ
ಪಳಚ್ಚನೆ ೫ – ೨೫ ಪ್ರಕಾಶಮಾನವಾಗಿ
ಪಳಂಚು ೪ – ೭೬, ೧೩ – ೧೪೦ ಹೊಳೆ, ಥಳಥಳಿಸು
ಪಳಿಕು ೭ – ೮೮ (ಗ) ಸ್ಫಟಿಕ
ಪಳುಕಿನ ಗುಂಡಿಗೆ ೮ – ೯೯ ಸ್ಫಟಿಕದ ಕಮಂಡಲು
ಪಳ್ಳಿವೋದಂತೆ ೧೦ – ೭೧ (ಗ) ನುಗ್ಗಿ ಹೊರಟಂತೆ
ಪೞನೀರ್ಗಳ್ ೧೨ – ೩೮ ಹಳೆಯ ನೀರು
ಪೞಹ ೧೧ – ೬೪ ಪಟಹ, ತಮಟೆ
ಪಱ್ಕೆ ೨ – ೨೮, ೩ – ೯ ಹಾಸಿಗೆ
ಪಕ್ಷ್ಮ ೧೨ – ೪೧ ಕಣ್ಣು ರೆಪ್ಪೆ
ಪಾಕ ಕುಶ ೫ – ೮೦ ಎಳೆಯ ಕುಶದರ್ಭೆ
ಪಾಂಗು ೩ – ೨೦ (ಗ) ರೀತಿ, ಕ್ರಮ
ಪಾಂಚಾಲಿಕಾ ೭ – ೮೦ ಪ್ರತಿಮೆ
ಪಾಟಿಸು ೧೪ – ೪೦ ಬೆಳೆಸು
ಪಾಠೀನ ೫ – ೪೬ ಮೀನು
ಪಾಡಿವ ೯ – ೫೨ (ಗ) ಪಾಡ್ಯಮಿ
ಪಾಂಡುರತೆ ೮ – ೯೬ (ಗ) ಧವಳವರ್ಣ
ಪಾಣ್ಬೆ ೩ – ೧೦, ೪ – ೬೩ (ಗ) ಜಾರೆ
ಪಾತ ೨ – ೧೩೨ ಬೀಳುವಿಕೆ
ಪಾಯೆ ೧೪ – ೮೯ ಹಾಯಲು
ಪಾರದರವು ೧೪ – ೧೧೬ ಪಾರದಾರ್ಯ ? ವ್ಯಭಿಚಾರ
ಪಾರಾವತ ೩ – ೧೯ ಪಾರಿವಾಳ
ಪಾರ್ಥಿ ೧ – ೮೭ ರಾಜ
ಪಾರ್ವಣ ಶಶಿ ೧೪ – ೨೨ ಪರ್ವಕಾಲದ ಚಂದ್ರ
ಪಾಱಿತೆಗೆತ್ತು ೧೨ – ೨೨ ಹಾರಿತೆಂದೇ ಬಗೆದು
ಪಾರೞಿದು ೧೨ – ೨೨ ಅಳತೆಗೆಟ್ಟು
ಪಾರುಂಬಳೆ ೧೦ – ೯೨ ಚಕ್ರ
ಪಾಲೆ ೧೨ – ೭೧ (ಗ), ೬ – ೧೧೫, ೮ – ೩೬ ಕಿವಿಯ ಭಾಗ
ಪಾವಸೆ ೫ – ೯೨, ೧೧ – ೧೧ ಪಾಚಿ,
ಪಿಕ್ಕಿ ೧೩ – ೧೩೦ ಹಿಕ್ಕಿ, ಗೋಜುಬಿಡಿಸಿ
ಪಿಂಜರಿತ ೫ – ೫೫ ಹಳದಿಯಾಗಿಸಲ್ಪಟ್ಟ
ಪಿಂಡ ೮ – ೯೬(ಗ), ೧೨ – ೧೦ ಉಂಡೆ
ಪಿಂಡಿಗೆ ೧೧ – ೫೨ (ಗ) ಪಿಂಡಿ, ಕಟ್ಟು
ಪಿಣಿಲ್ ೧೩ – ೫೬ ಜಡೆ
ಪಿತೃವನ ೭ – ೮೩ ಸ್ಮಶಾನ
ಪಿಪಾಸೆ ೬ – ೪೨ (ಗ)ಬಾಯಾರಿಕೆ
ಪಿಶುನ ೧ – ೧೪ ಚಾಡಿಕೋರ
ಪಿಷ್ಟಾತಕ ೧೪ – ೨೦, ೧೦ – ೯೮ ಸುಗಂಧ ಯುಕ್ತವಾದ ಪುಡಿ
ಪಿಸುಣ್ ೪ – ೧೪೩ ಚಾಡಿ
ಪಿಹಿತ ೧೪ – ೨೦ ಮುಚ್ಚಿದ, ಆವರಿಸಿದ
ಪಿೞಿ ೮ – ೮೦ (ಗ) ಹಿಂಡು
ಪೀಯೂಷ ೧ – ೧೩ ಅಮೃತ
ಪೀಲಿ ೬ – ೪೮, ೧೧ – ೩, ೮ – ೯೮ ನವಿಲಿನ ಬಾಲ
ಪುಗಲ್ ೮ – ೫೩ ಹೊಗಬೇಡ
ಪುಗುೞ್‌೧ – ೯೭ ಬೊಬ್ಬೆ, ಗುಳ್ಳೆ
ಪುಟಿಕೆ ೫ – ೫೯ (ಗ) ಸಣ್ಣ ಬುಟ್ಟಿ
ಪುಡುಕುನೀರ್ ೮ – ೪೮ (ಗ) ಸುಡುನೀರು
ಪುಣಂಬು ೧೦ – ೪೫(ಗ), ೯ – ೭೧ ಬಾಣ
ಪುಣ್ಯಜನ ೧ – ೮೯ (ಗ) ರಾಕ್ಷಸರು
ಪುತ್ತು ೧ – ೧೦೩, ೩ – ೪ ಹುತ್ತ
ಪುತ್ರಿಕೆ ೧೧ – ೬೧ (ಗ) ಬೊಂಬೆ
ಪುದಿ ೨ – ೯, ೧೪ – ೨೨(ಗ)ವ್ಯಾಪಿಸು, ತುಂಬು
ಪುಪ್ಪಕಂ ೧೧ – ೪೫ ಬಿಸಿ.
ಪುಯ್ಯಲ್ಚು ೪ – ೬೭ (ಗ)ಕೂಗಿಡು
ಪುರಾಣಕಮಠ ೧ – ೮೭ ಪುರಾತನವಾದ ಆಮೆ
ಪುರಿವರಲು ೬ – ೧೬ (ಗ) ಸುಡುವ ಕಲ್ಲು
ಪುರುಚರಿತ ೧ – ೯೪ ತೀರ್ಥಂಕರ ಕಥೆ
ಪುರುಡು ೧ – ೧೩, ೧೪ – ೩೩ ಸ್ಪರ್ಧೆ
ಪುರುಳಿ ೫ – ೭೨, ೬ – ೧೨೮ ಹೆಣ್ಣುಗಿಳಿ
ಪುಲಿದೊವಲು ೪ – ೭೦ ಹುಲಿಯ ಚರ್ಮ
ಪುಂಶ್ಚಲಿ ೧೩ – ೧೦೭ ಗಂಡುಬೀರಿ, ಕುಚರಿತೆ ಪುಷ್ಕರ ೬ – ೭೯ ತಾವರೆ
ಪುಷ್ಪಲಾವನೀ ೭ – ೧೪ ಹೂವಾಡಿಗಿತ್ತಿ
ಪುಳಿಂಚಿನ ೮ – ೩೧ ಇಂಬುಳಿಯ
ಪುಳಿಂದ ೧ – ೧೦೬ (ಗ) ಬೇಡ, ಬೇಟೆಗಾರ
ಪುೞಿ ೧ – ೬೪ ಹುಳುಹಿಡಿ
ಪೂದುಱುಂಬು ೧ – ೧೦೬ (ಗ) ಹೂವಿನಿಂದ ಕೂಡಿದ ತುಱುಬು
ಪೂರ ೬ – ೧೧೧ ಪ್ರವಾಹ
ಪೆಡಂಗಾಲ್ ೬ – ೧೬ (ಗ) ಹಿಂಗಾಲು
ಪೆಣ್ಬರಿದು ೩ – ೪೭, ೧೩ – ೧೦೭ ಹೆಣ್ಣಿನ ಆಕಾರ
ಪೆಂಡವಾಸ ೬ – ೭೫ ಅಂತಃಪುರ
ಪೆಂಪು ೧ – ೬೨ ಹೆಚ್ಚಳ, ಹಿರಿಮೆ
ಪೆರ್ಕಳಿಸು ೧೪ – ೧೧೬, ಹೆಕ್ಕಳಿಸು, ಗರ್ವಿಸು
ಪೆರ್ಚು ೧ – ೯೦, ೩ – ೨೦ ಹೆಚ್ಚಳ, ಉಬ್ಬುವಿಕೆ
ಪೆರ್ಮೆ ೩ – ೭೦ ಹಿರಿಮೆ
ಪೆಮ್ಮರುಳು ೧೪ – ೧೩೧ ದೊಡ್ಡದಾದ ದೆವ್ವ
ಪೆಱಗನೆ ೨ – ೫೮ (ಗ) ಹಿಂದೆಯೆ
ಪೆಱೆ ೩ – ೪೩ ಚಂದ್ರ
ಪೆಳಱು ೪ – ೨೨ ಅಂಜು, ಗಾಬರಿಗೊಳ್ಳು
ಪೇಚಕ ೮ – ೬, ೯ – ೪ ಆನೆಯ ಬಾಲದ ಮೂಲ
ಪೊಂಗಿ ೧೩ – ೧೨೪ ಉಬ್ಬಿ, ಉಕ್ಕಿ
ಪೊಡರೆ ೧೧ – ೧೧ ನಡುಗಲು
ಪೊಡರ್ಪು ೩ – ೬೫ (ಗ) ಪ್ರಕಾಶ
ಪೊಣರ್ಗಳಸಂ ೧೩ – ೭೨ ವಿವಾಹ ಕಳಶ ?
ಪೊಣರ್ವಕ್ಕಿ ೧೪ – ೫೭, ೨ – ೪೪ ಚಕ್ರವಾಕ, ಜಕ್ಕವಕ್ಕಿ
ಪೊತ್ತೞ್ ೧ – ೬೧ ಬೆಳಗ್ಗೆ
ಪೊದೞ್ ೩ – ೭, ೧ – ೮೫ ಹೊರಹೊಮ್ಮು, ಕಾಣಿಸಿಕೊಳ್ಳು
ಪೊನ್ನು ೧ – ೪೩ ಚಿನ್ನ
ಪೊದೞ್ದ ೧೩ – ೧೧೦ ಹೊರಹೊಮ್ಮಿದ
ಪೊಮ್ಮಱೆ ೯ – ೪೧ ಚಿನ್ನದ ಜಿಂಕೆ
ಪೊಂಗಳು ೪ – ೪೦ ಹೊನ್ನುಗಳು, ನಾಣ್ಯಗಳು
ಪೊಂಪುಳಿ ೧೦ – ೫, ೧ – ೪ ಆಧಿಕ್ಯ
ಪೊರಜೆ ೮ – ೨೪ ಹಗ್ಗ (ಆನೆ ಕಟ್ಟುವ ಹಗ್ಗ )
ಪೊರೆ ೧ – ೬೪ ಪದರ
ಪೊರ್ಕುೞ್ ೪ – ೧೪೯ ಹೊಕ್ಕುಳು
ಪೊರಪಾಯೆ ೬ – ೮೪ ಹೊರಗೆ ಹೊರಡಲು
ಪೂಱವಾಱ ೧೧ – ೮೮ ನಿತಂಬ
ಪೊಱೆ ೧೧ – ೧೧, ೧೦ – ೯೬ (ಗ) ಹೊರೆ, ಭಾರ
ಪೊಸದಳೆ ೬ – ೫೦ ಹೊಸ ಛತ್ರಿ
ಪೊಸಯಿಸು ೧ – ೬೪ ಸೇರಿಸು ಒಟ್ಟುಗೂಡಿಸು
ಪೊಸವಡಿ ೧೦ – ೩೭ (ಗ) ಹೊಸ ಮಡಿಬಟ್ಟೆ
ಪೊಸೆಯಿಸು ೧೨ – ೫೬ ಹಚ್ಚಿಸು, ಬಳಿ
ಪೊಳೆವಾರಂ ೧೪ – ೧೪ ಹೊಳೆಯುವ ಹಾರ
ಪೊಳ್ಳೆವಂದಿ ೬ – ೧೬ (ಗ) ಓಡುವ ಹಂದಿ
ಪೋತ ೬ – ೭೯, ೮ – ೧೫ ಮರಿ
ಪೋತ್ರ ೬ – ೧೪ (ಗ) ಹಂದಿಯ ಬಾಯಿ
ಪೋತರೆ ೮ – ೧ ಹೋಗಲು
ಪ್ರಕರ ೩ – ೮ ಸಮೂಹ
ಪ್ರಕರ್ಷ ೪ – ೧೧೬ ಆಧಿಕ್ಯ
ಪ್ರಕೋಷ್ಠ ೧೨ – ೭೭ ಮುಂಗೈ
ಪ್ರಚಲ ೧ – ೮೬ ಅಲ್ಲಾಡುವ
ಪ್ರತ್ಯರ್ಥಿ ೧ – ೮೮ ವೈರಿ
ಪ್ರಥಿತ ೧ – ೮೭ ಪ್ರಸಿದ್ಧ
ಪ್ರಧ್ವಾನ ೭ – ೬ ದೊಡ್ಡ ಶಬ್ದ
ಪ್ರಪಾಕಾಂತೆ ೬ – ೧೨೯ ಅರವಟ್ಟಿಗೆಯ ಹೆಂಗಸು
ಪ್ರವಾಳಂ ೧೪ – ೯೮ ಹವಳ
ಪ್ರವೇಕ ೧ – ೧೩ ಶ್ರೇಷ್ಠ
ಪ್ರಷ್ಠೌಹಿ ೫ – ೧೦೮ ಮೊದಲಸಾರಿಗೆ ಈದ ಹಸು
ಪ್ರಸೂನ ೧ – ೨, ೧೦ – ೧೬ ಹೂ
ಪ್ರಸ್ತಾರ ೫ – ೬೩ ಹಾಸಿಗೆ ಹರಡಿದ ಹೂ
ಪ್ರಸ್ಯಂದ ೨ – ೫೯ ಸುರಿಯುವ
ಪ್ರಾಚೀ ೬ – ೮೯ ಪೂರ್ವ
ಪ್ರಾಭವ ೪ – ೬ ಘನತೆ, ಹಿರಿಮೆ
ಪ್ರೀಣಿತ ೧ – ೭೪ ಸಂತೋಷಪಡಿಸಿದ
ಪ್ಲವ ೬ – ೪೨ ಹನಿ
ಪ್ಲುತ ೪ – ೧೬ ನೆಗೆಯುವ
ಫುಲ್ಲಶರ ೯ – ೧೧೧ ಪುಷ್ಪಬಾಣ

ಬಕೋಟನ್ ೧೪ – ೮೧ (ಗ) ಬಕ
ಬಕೋಟ ಕುಟುಂಬಂ ೯ – ೧೪ ಬಕಗಳ ಗುಂಪು
ಬಕ್ಕಂಬಯಲ್ ೭ – ೧೧೭ ಶೂನ್ಯ
ಬಕ್ಕೆವಲಸು ೬ – ೧೨೦ ಸಿಹಿ ಹಲಸು
ಬಗರಗೆ ೬ – ೪೪ ಚಿಕ್ಕಬಾವೀ, ನದೀ ಪಾತ್ರದಲ್ಲಿ ಅಗೆದ ಚಿಲುಮೆ
ಬಗೆ ೫ – ೯ ಮನಸ್ಸು
ಬಜ್ಜರ ೩ – ೧೮ ವಜ್ರ (ಸಂ)
ಬಟ್ಟಿಗೆ ೭ – ೮೮ (ಗ) ಪಟ್ಟಿಕಾ ?
ಬಟ್ಟಿತ್ತು ೬ – ೧೬ (ಗ) ವರ್ತುಲಾಕಾರ
ಬಟ್ಟು ೧೪ – ೧೦೬ ತೂಕದ ಬಟ್ಟು
ಬಟ್ಟೆ ೬ – ೯೪, ೭ – ೪ ದಾರಿ
ಬಣ್ಣಸರ ೧ – ೬೧ ಬಣ್ಣದ ಹಾರ, ಬಂಗಾರದ ಹಾರ
ಬದಗ ೨ – ೩೪, ೪ – ೬೬ (ಗ) ಅಲ್ಪ, ಕೀಳುಮನುಷ್ಯ
ಬದಗು ೨ – ೭೮ ಕೌಟಿಲ್ಯ
ಬದಂಗ ೨ – ೭೬ ಕೀಳಾಳು, ನೀಚ ಪುರುಷ
ಬಮ್ಮೇತಿ ೧ – ೩೫ ಬ್ರಹ್ಮೇತಿ (ಸಂ)
ಬರಿ ೧೧ – ೧, ೧೩ – ೯೯ ಪಕ್ಕ
ಬರ್ದಿರಿ ೪ – ೧೧೯ ಕೆಟ್ಟಿರಿ
ಬರ್ದು ೨ – ೭೮, ೮೨ ಪ್ರೌಢಿಮೆ
ಬರ್ಮನ್ ೧೧ – ೫೨ ಬ್ರಹ್ಮ
ಬರ್ದೆಗೆಯ್ತ ೨ – ೭೨ ಪ್ರೌಢ ಕಾರ್ಯ
ಬಲಗೊಂಡು ೨ – ೧೧೭ ಬಲಿಷ್ಠವಾದ ಗ್ರಹ
ಬಲ್ವಲನೆ ೧೦ – ೫೩ ಬಹಳ ರಭಸದಿಂದ
ಬವನ ೧ – ೩೭ ವಾಂತಿ (ವಮನ) (ಸಂ)
ಬಸ, ಬಸಂ ೩ – ೫೫, ೪ – ೫೭ (ಗ) ೧೪ – ೪೦ ವಶ(ಸಂ)
ಬಸದಾಗಿಪ ೧ – ೬೪ ವಸನ, ಬಟ್ಟೆ,
ಬಸನಿ ೨ – ೯೭ ವ್ಯಸನಿ, ಚಟವುಳ್ಳವ
ಬಸನಿಗ ೨ – ೭೪ ವ್ಯಸನಿ, ಚಟವುಳ್ಳವ
ಬಸನಿಗೆ ೯ – ೧೦೯ ಬಸನವುಳ್ಳವಳು
ಬಸೆ ೮ – ೧೮ ಹೆಣ್ಣಾನೆ
ಬಳ ೬ – ೧೨೮ ಬಲ, ಸೈನ್ಯ
ಬಳವಿ ೫ – ೮೫ (ಗ) ಅಭಿವೃದ್ಧಿ, ಹೆಚ್ಚಳ
ಬಳುಂಕು ೮ – ೨೪ ಬಳುಕು, ನಡುಗು
ಬಳ್ಕಂ ೧೩೭೧ ನಡುಕವನ್ನು
ಬಳ್ವಳ ೪ – ೧೦೨ ಬೇಗಬೇಗ, ಹೆಚ್ಚಾಗಿ
ಬಳ್ವಳಿಕೆ ೭ – ೧೦ ಬೆಳವಣಿಗೆ
ಬಳಲ್ಮುಡಿ ೯ – ೧೦೩ ಬಿಚ್ಚಿದ ಜಡೆ, ಸೋರ್ಮುಡಿ
ಬಾಕುಲ ೧೪ – ೮೨ ಆಸೆಯಿಂದ ಕೂಡಿದ
ಬಾಕುಳಿ ೩ – ೨೦ (ಗ) ೧೪ – ೧೪ ಆಸೆಗಾರ, ಅತಿ ಆಸೆಯ
ಬಾದುಗೈದು ೮ – ೪೧ (ಗ) ವಾದಮಾಡಿ, ಪೈಪೋಟಿ ಹೂಡಿ
ಬಾನಲು ೬ – ೧೬ (ಗ) ಮಸುಳಿದ ಕಾಂತಿ
ಬಾನುದ್ಧ ೧ – ೨೬ ಆಕಾಶದಷ್ಟು ಎತ್ತರ
ಬಾರಿಸು ೧೪ – ೧೧೬ ನಿವಾರಿಸು, ವಾರಿಸು
ಬಾರ್ತೆ ೧ – ೪೬ ಉಪಯುಕ್ತ
ಬಾಸಿಗ ೧ – ೬೨ ಪುಷ್ಬಾಭರಣ, ಅವತಂಸ
ಬಾಸಣಿಸು ೧೦ – ೫೦ ಮುಚ್ಚು, ಮುಸುಕು
ಬಾಳ್ ೧ – ೧೦೨ ಕತ್ತಿ
ಬಾೞ್ನೆಲ ೮ – ೮೦ (ಗ) ಫಲಭರಿತವಾದ (ಜೀವಂತ) ಭೂಮಿ
ಬಾೞ್ವನೆ ೯ – ೧೨೮ ವಾಸದ ಮನೆ
ಬಾೞ್ವೂಗಳ್ ೭ – ೧೦೧ (ಗ) ಹೊಸ ಹೂಗಳು
ಬಿಚ್ಚತಂ ೧೩ – ೬೩ ಯಥೇಷ್ಟವಾಗಿ
ಬಿಚ್ಚಳಿಸು ೭ – ೯೮ (ಗ) ವಿಸ್ತರಿಸು, ವಿವರಿಸಿ ಹೇಳು
ಬಿಜ್ಜೋದರಿ ೧೦ – ೧೦ ವಿದ್ಯಾಧರಿ (ಸಂ)
ಬಿಡಾಲ ೧ – ೧೦ರ ಬೆಕ್ಕು
ಬಿಣ್ಗೊಂಚಲ್ ೧೪ – ೯೩ ದಪ್ಪನಾದ ಗೊಂಚಲು
ಬಿಣ್ಪು ೧೪ – ೧೫ ಹೆಚ್ಚಳ, ಭಾರ
ಬಿದಿರ್ದು ೧೪ – ೪೪ ಚದುರಿಸಿ
ಬಿನದ ೨ – ೯೮, ೭ – ೯೮ ವಿನೋದ
ಬಿನ್ನಗೆ ೧೫ – ೫೩ ಮೌನವಾಗಿ
ಬಿನ್ನನೆ ೪ – ೩೧ (ಗ) ೭ – ೮೬ (ಗ) ಮೌನವಾಗಿ
ಬಿಬ್ಬೋಕ ೨ – ೧೦೫, ೧೪ – ೧೦೫ ಪ್ರಿಯನ ಮೇಲೆ ಔದಾಸೀನ್ಯದ ನಟನೆ
ಬಿಯ ೨ – ೮೦ ವೆಚ್ಚ
ಬಿಯಕಾರ ೨ – ೩೯ ವೆಚ್ಚ ಮಾಡುವವ
ಬಿಯದರ್ ೭ – ೧೦೭ ವ್ಯಾಧರು
ಬಿರಯಿಸು ೧೪ – ೪೮ ವಿರಹಿಸು, ವಿರಹ ತಾಳಿಕೊ (ಸಂ)
ಬಿಱುತು ಓಡು ೬ – ೧೩ (ಗ) ವೇಗವಾಗಿ ಓಡು
ಬಿಸ ೧೪ – ೩೩ (ಗ) ವಿಷ
ಬಿಸ ೨ – ೨೧ ತಾವರೆಯ ದಂಟು
ಬಿಸಕಾಂಡ ೧೧ – ೮ ತಾವರೆಯ ದಂಟು
ಬಿಸುಗದಿರ್ ೫ – ೨೦ (ಗ) ನಾಶ
ಬೂತು ೨ – ೩೪ ನಾಚಿಕೆಗೆಟ್ಟವ
ಬೂದವೇಱಿ ೮ – ೪೧ (ಗ) ಬೂದುಬಣ್ಣಕ್ಕೆ ತಿರುಗಿ
ಬೂವ ೧೩ – ೪ (ಗ) ಭೂಮ (ಸಂ)
ಬೆಗೞ್ವಿನಂ ೧೩ – ೧೫೫ ಬೆಗಡುಗೊಳ್ಳುವಂತೆ
ಬೆಟ್ಟಿತ್ತು ೨ – ೧೦೩ ಗಟ್ಟಿ, ಗಡಸು
ಬೆಬ್ಬಳಿಸಿ ೧೦ – ೧೬ (ಗ) ೧೩ – ೧೨೯ ಗಾಬರಿಗೊಂಡು
ಬೆಯ್ವೊಲನ್ ೬ – ೧೬ (ಗ) ಸುಡುನೆಲ
ಬೆಳತಿಗೆ ೨ – ೨೧ ಬಿಳುಪು, ಪ್ರಕಾಶ
ಬೆಳತಿಗೆ ೬ – ೪೨ ಬಿಳಿಯ ಹಕ್ಕಿ
ಬೆಳಪ ೪ – ೨೮ ಬೆಳಗುವ, ಪ್ರಕಾಶಿಸುವ
ಬೆಳ್ವಾಯ್ ೫ – ೬೫ ದೊಡ್ಡಬಾಯಿ
ಬೆಳ್ಸರಿ ೨ – ೨೦ ದಡ್ಡನಾದ ಅಕ್ಷರಸ್ಥ
ಬೆಳ್ಳೆ ೯ – ೫ ಶುಕ್ರಗ್ರಹ
ಬೆಳ್ಳುಂಬಟ್ಟೆ ೧೨ – ೮೭ (ಗ) ಬಿಳಿಯಬಟ್ಟೆ
ಬೇಟದಚ್ಚಿಗಂ ೧೪ – ೩೭ ಪ್ರಣಯದ ಕಳವಳ
ಬೇೞ್ಪ ೩ – ೭೯ ಬೇಡುವ
ಬೊಜಗ ೨ – ೮೧ ವಿಟ
ಬೊಮ್ಮಹಾಸ ೨ – ೧೦೧ ಬ್ರಹ್ಮನಪಾಶ (ಸಂ)
ಬ್ರಜಂ ೬ – ೫೦ ಸಮೂಹ (ವ್ರಜಸಂ)
ಬಂಡು ೯ – ೯೮ ಮಕರಂದ
ಬಂದುಗೆ ೫ – ೩೮, ೧೧ – ೬೧ ಬಂಧೂಕ ಪುಷ್ಪ (ಸಂ)
ಬಂಧುರ ೧ – ೧೦ ಮನೋಹರ
ಬಂಬಲ್ ೭ – ೨೩, ೮ – ೬೧, ಬಂಬಲು ೧೪ – ೭೬ (ಗ), ೬೭ ರಾಶಿ, ಗುಂಪು
ಬಾಂಜಗುನೆ ೫ – ೨೨ ಆಕಾಶದ ಯಮುನೆ
ಬಿಂಜ ೬ – ೧೯ ವಿಂಧ್ಯಾ (ಸಂ)
ಬೆಂಕೆ ೨ – ೯೦ ತಾಪ, ಉರಿ
ಬೆಂಕೊಳಿಪು ೪ – ೮೩ ಅಟ್ಟು, ಬೆಂಬತ್ತು
ಬೆಂಚೆ ೪ – ೨೫, ೧೨ – ೨೪, ಸಣ್ಣಕುಂಟೆ, ನೀರು ನಿಂತ ಜಾಗ
ಬೆಂಬರಂ ೬ – ೭ ಬೆನ್ನಿರವರೆಗೆ
ಬೇಂಟ ೧ – ೬೧, ೬ – ೧೨೯ ಪ್ರೇಮ
ಭಗಣಂ ೭ – ೪ ನಕ್ಷತ್ರ ಸಮೂಹ
ಭಯಮುತ್ತು ೮ – ೨೮, ೧೦ – ೩೦ (ಗ) ಭಯಗೊಂಡು
ಭಾಮಂಡಲ ೮ – ೯೫ ಕಾಂತಿ ಮಂಡಲ
ಭಾವಭವ ೧೧ – ೯೧ ಮನ್ಮಥ
ಭೂಜ ೧೪ – ೧೨೬ ಗಿಡ
ಭೃಂಗಾರ ೮ – ೮೧ (ಗ) ೬ – ೧೨೬ ಚಿನ್ನದ ೧೨ – ೩೯ ಗಿಂಡಿ! ಕನಕಾಲುಕ
ಭೇಕ ೬ – ೩ ಕಪ್ಪೆ
ಭೈತ್ರ ೮ – ೯೬ (ಗ) ಹಡಗು, ಯಾನಪಾತ್ರ
ಭಂಗಿ ೯ – ೧೩೭ ರೀತಿ
ಭ್ರಮರಕ ೧೨ – ೬೭ ಮುಂಗುರುಳು
ಭ್ರಾಜಿ ೬ – ೫೦ ಹೊಳೆಯುವ
ಭ್ರಾಜಿತಂ ೧೧ – ೫೭ ಪ್ರಕಾಶಿಸುವ, ಹೊಳೆಯುವ
ಭ್ರೂ ೪ – ೬೬ ಹುಬ್ಬು,