ಮಡಮೇಱಿಸಿ ೧೦ – ೯೭ (ಗ) ಹಿಮ್ಮಡಿಗೆ ಕಟ್ಟಿ
ಮಡಲ್ತ ೧೪ – ೬೪ (ಗ) ವಿಸ್ತಾರವಾದ, ಹೆಚ್ಚಾದ
ಮಣಿಕ ೫ – ೯೩ ಮೊದಲ ಕರು ಹಾಕಿದ ಹಸು
ಮಣಿತ ೧೩ – ೨೬ ಗಳಧ್ವನಿ, ರತಕೂಜಿತ
ಮದಶಿಖಿ ೬ – ೧೨೮ ಮದಿಸಿದ ನವಿಲು
ಮದಿಲು ೬ – ೩ ಗೋಡೆ
ಮನ್ಯು ೧೦ – ೭೪ (ಗ) ದುಃಖ
ಮಯೂಖ ೨ – ೧ (ಗ) ಕಿರಣ
ಮರ್ಚು ೧೪ – ೧೨೫ (ಗ)ಅತ್ಯಂತ ಪ್ರೀತಿ
ಮರಲ್ದ ೧ – ೬ ಹೂಬಿಟ್ಟ
ಮರಾಳ ೩ – ೨೬ ಹಂಸ
ಮರೀಚಿ ೮ – ೯೧ ಕಾಂತಿ
ಮರುಳ್ ೧೦ – ೪೩ (ಗ)ದೆವ್ವ
ಮಱಪು ೧೩ – ೧೨ ಮೆಯ್ಮರೆವು
ಮಱುಮೆಯ್ ೧ – ೬೦ ಪುನರ್ಜನ್ಮ
ಮಲಗು ೯ – ೨೮ (ಗ) ದಿಂಬು
ಮಲರ್ ೧ – ೬೬ ಹೂವು
ಮಲೆ ೨ – ೪೨ (ಗ) ಪ್ರತಿಭಟಿಸು
ಮಲ್ಲಿಕಾವೃತಿ ೧೪ – ೫೪ ಮಲ್ಲಿಗೆ ಬೇಲಿ, ಪೊದೆ
ಮಸಗು ೩ – ೨೦ (ಗ) ಹೆಚ್ಚಾಗು
ಮಹಾಭಾಗ ೧೪ – ೯೪ ಮಹಾನುಭಾವ, ಪುಣ್ಯಶಾಲಿ
ಮಹಾಭಾಗೆ ೧೧ – ೭೧ ಮಹಾನುಭಾವೆ
ಮಹೋಕ್ಷ ೫ – ೮೭ ದೊಡ್ಡ ಗೂಳಿ
ಮಳ್ಗಿಸು ೧೪ – ೬೯ ತಗ್ಗಿ
ಮಾಗೆ ೧೨ – ೩೫ ಮಾಗಿಯ ಕಾಲ, ಶಿಶಿರ
ಮಾತರಿಶ್ವ ೨ – ೧೩೬ ವಾಯು
ಮಾದ್ಯತ್ ೧೧ – ೭೧ ಮದಿಸಿದ
ಮಾದ್ಯದ್ಗಜ ೧೨ – ೫೩ ಮದಿಸಿದ ಆನೆ
ಮಾನಂ ೧೪ – ೪೮ ಪ್ರಣಯಕೋಪ
ಮಾನಿತೆ ೪ – ೬ ಸಂಭಾವಿತಳು
ಮಾಮಸ ೧೪ – ೩೩ (ಗ) ಮಾಮಸಕ
ಮಾಮಿಡಿ ೬ – ೧೧೫ (೧೦ನೆ ಸಾಲು) ಎಳೆ ಮಾವಿನ ಕಾಯಿ
ಮಾಯ್ದ ೧೪ – ೬೧ ಕಾಣದ
ಮಾವುರಿಗ ೯ – ೧೩೬ (ಗ) ಲುಬ್ಧಕ, ಬಲೆಗಾರ
ಮಾಷಮುಖಮ ೧ – ೩೭ ನೊಣ
ಮಾಸರಂ ೧೩ – ೮೧ ಮಸಕಾದ
ಮಾಳಬೆ ೨ – ೧೦೭ ಮಾರಿ
ಮಿಟ್ಟೆ ೮ – ೮೦ (ಗ) ದಿಣ್ಣೆ
ಮಿಟ್ಟೆಗೊಳಿಸು ೧೦ – ೪೫ (ಗ) ಹೆಚ್ಚಿಸು ?
ಮಿಡಿ ೬ – ೭ ಹಿಮ್ಮಡಿ (ಮಡ)
ಮಿಸುಗು ೩ – ೫೭ ಹೊಳೆ
ಮಿಳಿರ್ ೪ – ೪೬ ತೂಗಾಡು
ಮುಕುಳ ೨ – ೬೪ ಮೊಗ್ಗಾಗಿಸು
ಮುಚ್ಚು ೧೪ – ೨೩ ರಹಸ್ಯ, ಮರೆಮಾಚು,
ಮುಚ್ಚೆ ೧೦ – ೭೧ (ಗ) ಮೂರ್ಛೆ (ಸಂ)
ಮುದುಕಿ ೬ – ೧೭ (ಗ) ನುಗ್ಗಿ (?)
ಮುದುಪ ೨ – ೬೧ ವೃದ್ಧ
ಮುನ್ನು ೧೪ – ೩೬ (ಗ) ಮುಂಚೆ, ಮೊದಲು
ಮುಯ್ವು ೧೪ – ೩೬ ಮುಯ್ಯಿ, ಪ್ರತಿರ್ಯಾತನ
ಮುರಿದು ೫ – ೭೦ ತಿರುಗಿ
ಮುಱಿ ೭ – ೧೧೧, ೧೧ – ೩೦ ಚೂರು, ತುಂಡು
ಮುರುಡು ೬ – ೭೪ (ಗ) ಸಸಿ?
ಮುಷಿತ ೭ – ೮೩ (ಗ) ಬಿಟ್ಟುಹೋದ
ಮುಸುಂಬು ೧೧ – ೧೯ ಮುಸುಕು
ಮುೞುಂಕು ೮ – ೯೬ (ಗ) ಮುಳುಗು
ಮೂಡೆ ೧೧ – ೧೧ ದಿಂಬು, ಚೀಲ
ಮೂರಿ ೨ – ೧೨೧ ಬಾಯಿ
ಮೃಗಧರ ೬ – ೯೨ (ಗ) ಚಂದ್ರ
ಮೃಗಮದ ೭ – ೧೨ ಕಸ್ತೂರಿ
ಮೃಗೋದ್ಭವ ೧೦ – ೫ ಕಸ್ತೂರಿ
ಮೃಣಾಳ ೧ – ೯೬ ತಾವರೆಯ ದಂಟು
ಮೆಯ್ಮಱೆ ೧೩ – ೨೦ ಮೆಯ್ಮರವು, ಪರವಶತೆ
ಮೆಯ್ಮೆ ೧ – ೮೧ ಮಹಿಮೆ
ಮೆಲ್ಪು ೨ – ೭೮ ಮೃದು ಸ್ವಭಾವ
ಮೇಗೆ ೮ – ೨೭ ಮೇಲುಗಡೆ
ಮೇಚಕ ೮ – ೬೭ ಪಚ್ಚೆಯಬಣ್ಣ, ಹರಿತವರ್ಣ
ಮೇತ ೮ – ೫ ಮೇವು
ಮೇಪನೆ ೮ – ೩೨ ಮೇವನ್ನೇ
ಮೇಪಂ ೮ – ೭, ೮ – ೮೦ (ಗ), ೧೨ – ೬೦ ಮೇವನ್ನು
ಮೇಳಿಸು ೭ – ೮೬ (ಗ) ಸೇರಿಸು, ಸಮೀಪಿಸು
ಮೊಕ್ಕನೆ ೧ – ೨೯ ತಟ್ಟನೆ
ಮೊಕ್ಕಳಂ ೯ – ೧೯ (ಗ) ಹೆಚ್ಚಾಗಿ
ಮೊಗಂದಿಱಿ ೧೩ – ೧೩೯ ಮುಖತಿರುಗಿಸು
ಮೊಗಸು ೧೧ – ೯ ಆಶೆಪಡು, ಮೇಲೆಬೀಳು
ಮೊಗೆ ೧೩ – ೧೩೧ ಸುರಿದುಕೊಳ್ಳು
ಮೊಗ್ಗೆ ೧೪ – ೫೧ ಸಾಧ್ಯವೇ ? ಸುಲಭವೆ ?
ಮೊಟ್ಟನೆ ೨ – ೯೪ ಸಣ್ಣಗೆ
ಮೊಟ್ಟೆ ೧ – ೫೫, ೧೧ – ೧೧ ಗಂಟು
ಮೊಡವಿ ೨ – ೨ ಮೊಡಮೆ
ಮೊನಸು ೧೦ – ೮೧ ಮೂಡು
ಮೊಱೆಯಲ್ತು ೧೪ – ೧೧೩ ಸರಿಯಲ್ಲ
ಮೊಲೆನಾಗ ೧ – ೨೧ ಒಳ್ಳೆ
ಮೊೞಕಾಲ್ ೧೪ – ೧೧೩ ಮೊಣಕಾಲು
ಮೊಳೆ ೧ – ೩೫ ಮೊಳಕೆಯಾಗು, ಹುಟ್ಟು
ಮೊೞಗು ೧೦ – ೪೧ (ಗ) ಗುಡುಗು
ಮಂಜರಿ ೧ – ೭೭ ಗೊಂಚಲು
ಮಂದಯಿಸು ೪ – ೧೬ (ಗ) ದಟ್ಟವಾಗು
ಮಂದುರ ೭ – ೨೨ ಅಶ್ವಶಾಲೆ
ಮಾಂಗಾಯ್ ೯ – ೧೦೨ ಮಾವಿನಕಾಯಿ
ಮುಂಚು ೬ – ೫೮ ಮುನ್ನುಗ್ಗು, ಮುಂದಾಗು
ಮುಂಡಾಡು ೧೦ – ೨ ಗ ಮುದ್ದಾಡು
ಮುಂಬಿಡು ೬ – ೧೧೫ ಮುಂದಾಗು, ಪುರೋಗಮನ

ಯಕ್ಷಕರ್ದಮ ೧೪ – ೧೮ ಪರಿಮಳ ಗಂಧಲೇಪನ
ಯೌವತವರ್ಗ ೧೪ – ೮ ಯುವತೀ ಸಮೂಹ

ರಜ ೩ – ೨೦ (ಗ) ಪರಾಗ, ದೂಳು
ರಣರಣಕ ೪ – ೩ ಉತ್ಕಂಠೆ, ಪ್ರಿಯ ಪ್ರತೀಕ್ಷೆ
ರಣಿತ ೩ – ೭೮ (ಗ), ೪ – ೧೨೯ ಶಬ್ಧ, ಧ್ವನಿ
ರತದೀಪಿಕೆ ೩ – ೧೮ ರತಿಕಾಲದ ದೀಪ
ರದ ೧ – ೪೯ ಹಲ್ಲು
ರಯ್ಯಂ ೫ – ೮೦, ೮ – ೫೧ (ಗ) ರಮ್ಯ (ಸಂ)
ರಾಜಾನ್ನ ೫ – ೨೨ (ಗ) ಶ್ರೇಷ್ಠವಾದ ಬತ್ತ
ರಾಜಾವರ್ತ ೧೩ – ೧೫ ಎಳ ನೀಲ ಮಣಿ
ರುತಿ ೪ – ೧೨೯, ೯ – ೧೦೭ ಧ್ವನಿ, ಸದ್ದು
ರೂಪಕ ೧೧ – ೬೭ ಸಾದೃಶ್ಯ, ಹೋಲಿಕೆ
ರೇಚಿಸು ೪೧ – ೧೨೮ ಹೊರಚೆಲ್ಲು
ರೋಚಿರ್ಜಳ ೮ – ೬೬ ಕಾಂತಿಯೆಂಬ ನೀರು ಕಾಂತಿ ಪ್ರವಾಹ
ರೋಸ ೧೩ – ೯೨ ರೋಷ
ರಂಭಾಸ್ತಂಭ ೧೧ – ೫೬ (ಗ) ಬಾಳೆಯ ಕಂಬ
ರುಂದ್ರ ೨ – ೧೭ ವಿಸ್ತಾರ
ಱೋಡಿಸು ೨ – ೫೮ ಹಾಸ್ಯಮಾಡು

ಲಕ್ಕ ೨ – ೭೪ ಲಕ್ಷ
ಲಚ್ಚಣ ೨ – ೯೮, ೧೦೯೬ (ಗ) ಲಕ್ಷಣ, ಚಿಹ್ನ
ಲತಾಂತ ೧೪ – ೨೦ ಹೂ
ಲಪನ ೧ – ೧೦೬ (ಗ) ಮುಖಶ್ರೀ, ಸೌಂದರ್ಯ
ಲಪನಗಂಧ ೬ – ೧೧೫ ಬಾಯಿವಾಸನೆ
ಲಸಿತ ೪ – ೧೧೮ ಚಮತ್ಕಾರ, ಚತುರ
ಲಂಬಣಂ ೬ – ೧೧೫, ೮ – ೮೭ ಹಾರ
ಲಾಜೆ ೧೧ – ೫೬ ಅರಳು
ಲಾವಗೆ ೧೩ – ೨೫, ಲಾವುಗೆ ೫ – ೭೨ (ಗ) ಕಪಿಂಜಲ ಪಕ್ಷಿ
ಲಾಸಿಕ ೪ – ೧೬ ನೃತ್ಯಗಾತಿ
ಲಿಕುಚ ೧೧ – ೭೭ ಗಜನಿಂಬೆ
ಲುಲಾಯಚ್ಛವಿಕಂ ೧೦ – ೨೭ ಕೋಣದ ಮೈಬಣ್ಣ
ಲೋಲುಪ್ತಿ ೧೦ – ೪೫ (ಗ) ಗಾಢವಾದ ಆಸೆ

ವದಾನ್ಯ ೧ – ೫೮ ಧಾರಾಳಿ
ವಧು ೪ – ೧೪ ಹೆಂಗಸು
ವಯಸ್ಯ ೧೧ – ೬ (ಗ) ಸ್ನೇಹಿತ
ವರತ್ರೆ ೧೨ – ೭೨ ಆನೆ ಅಥವಾ ಕುದುರೆಗೆ ಕಟ್ಟುವ ಚರ್ಮಪಟ್ಟಿಕೆ
ವಲ್ಲಕೀ ೬ – ೧೦೮, ೭ – ೬೫, ೮ – ೮೨ ವೀಣೆ
ವಲ್ಗು ೧೪ – ೧೫ ರಮಣೀಯ
ವಲ್ಲಭಾ ೧೨ – ೬(ಗ)ಪ್ರೇಯಸಿ
ವಲ್ಲೀ ೧೦ – ೯೮ಬಳ್ಳಿ
ವಳಿ ೩ – ೩೩ ಹೊಕ್ಕಳ ಮೇಲಿನ ಗೆರೆ, ರೇಖೆ
ವಳಿವೀಚಿ ೩ – ೩೦ ವಳಿಯೆಂಬ ಅಲೆ
ವಕ್ಷೋರುಹ ೧೪ – ೯೫ ಕುಚ
ವಾಮನ ಕ್ರಮಂ ೧ – ೧೧ ವಾಮನನ ಪಾದ
ವಾರ್ಧಿ ೭ – ೧ ಸಮುದ್ರ
ವಾರಾಶಿ ೧ – ೭೧ ಸಮುದ್ರ
ವಾರಿ ೨ – ೫೬ ಸರದಿ, (ಬಾರಿ)
ವಾರುಣಿ ೬ – ೯೦ ಪಶ್ಚಿಮ ದಿಕ್ಕು
ವಾಸವ ೫ – ೨ ಇಂದ್ರ
ವಿಕ್ರಾಂತ ೧ – ೯೮ ಪರಾಕ್ರಮ
ವಿಕಿರ ೫ – ೭೬ (ಗ)ಚೆಲ್ಲಿದ
ವಿಕೀರ್ಣ ೬ – ೯೨ ಚೆದರಿದ
ವಿಟಪ ೮ – ೪೧ ಮರ
ವಿಡಂಬ ೯ – ೫೪ (ಗ) ವೇಷ, ಪ್ರದರ್ಶನ
ವಿತರಣ ೪ – ೨ ಔದಾರ್ಯ, ದಾನ
ವಿತಾನ ೪ – ೮೬ (ಗ) ಗುಂಪು
ವಿದಳಿತ ೪ – ೬೬ (ಗ) ಅರಳಿದ
ವಿದ್ಯಾಬಿಡಂಬನಂ ೧೪ – ೯೪ ಮಾಯಾವೇಷ
ವಿದ್ಯುಲ್ಲೇಖೆ ೧೧ – ೭೧ ಮಿಂಚಿನ ಗೆರೆ
ವಿಧು ೩ – ೧೦, ೭ – ೭೬, ಚಂದ್ರ
ವಿಧುಬಿಂಬ ೨ – ೭ ಚಂದ್ರಮಂಡಲ
ವಿಧುರಿತ ೧ – ೧೬ ಬೇರೆಯಾದ
ವಿಪಂಚಿ ೧೪ – ೧೨೦ (ಗ) ವೀಣೆ
ವಿಪಶ್ಚಿತ್ ೧ – ೧೪ ಪಂಡಿತ, ವಿದ್ವಾನ್
ವಿರುತ ೧೪ – ೭೧ ಧ್ವನಿ,
ವಿಲೋಲ ೧ – ೧೦೬ (ಗ) ಚಂಚಲ
ವಿಶದ ೫ – ೮೦ ಶುದ್ಧ, ಬಿಳಿದು
ವಿಶದೆ ೮ – ೮೮ ಶುದ್ಧಳು
ವಿಶ್ವಕದ್ರು ೬ – ೧೩ ಬೇಟೆಯ ನಾಯಿ
ವಿಷಾಣ ೫ – ೯೬ ಕೊಂಬು
ವಿಷ್ಕಿರ ೮ – ೪೮ (ಗ)ಹಕ್ಕಿ
ವಿಸರ ೪ – ೫೧ ಸಮೂಹ
ವಿಸ್ಮಾಪಕ ೧ – ೨೭ ಆಶ್ಚರ್ಯಕರ
ವಿಹೃತಿ ೧೪ – ೧೦೫ ಆಟ, ವಿಹಾರ
ವೃಜಿನ ೧ – ೩ ಪಾಪ
ವೃತ್ತಕಂ ೭ – ೯೭, ೧೧ – ೬ ಗ ಚರಿತ್ರೆ
ವೃತಿವೀರು ೧ – ೩೬ ವಿಸ್ತಾರವಾದ ಬೇಲಿಯ ಮುಳ್ಳು
ವೃಥೆ ೪ – ೧೨೦ ವ್ಯರ್ಥ
ವೆಜ್ಜ ೧ – ೬೦, ೧೪ – ೧೬ ರಂಧ್ರ
ವೇಣೀಸ್ರಕ್ ೬ – ೫೦ ಮುಡಿದಹೂ
ವೈಜನನಮಾಸ ೭ – ೬೫ (ಗ) ಹೆರಿಗೆಯತಿಂಗಳು
ವ್ಯಾಲೋಲ ೧೪ – ೫ ಅಲೆಗಳ ಚಲನೆ
ವ್ಯಾಹಾರ ೪ – ೧೬ ಭಾಷೆ ಸಂಭಾಷಣೆ
ವ್ಯೋಮ ೭ – ೬ ಆಕಾಶ
ವ್ಯೋಮಗೇ ಹೋದರ ೩ – ೩೩ ಆಕಾಶವೆಂಬ ಮನೆಯ ಒಳಭಾಗ
ವ್ರಜ ೩ – ೬೨ ಸಮೂಹ

ಶಕಲ ೭ – ೧೦೩, ೬ – ೬೦ (ಗ) ಚೂರು
ಶತಪತ್ರ ೬ – ೧೨೬ ತಾವರೆ
ಶತಪತ್ರಷಂಡ ೬ – ೧೨೭ ತಾವರೆ ಕೊಳ
ಶಫರ ೧೪ – ೯೧ ಮೀನು
ಶಫರೇ ಕ್ಷಣ ೫ – ೭೭ ಮೀನಲೋಚನ
ಶಭ ೬ – ೭ ಶವ (ಸಂ)
ಶರ್ವರೀ ೧ – ೯೦ ರಾತ್ರಿ
ಶಾಕ್ವರ ೧ – ೨೦ ಎತ್ತು
ಶಾಡ್ವಲ ೫ – ೭೨(ಗ) ಹಸಿರು ಹುಲ್ಲಿನ ನೆಲ
ಶಾತಶರ ೧೧ – ೮೦ ಹರಿತವಾದ ಬಾಣ
ಶಾತಾಸ್ತ್ರ ೬ – ೧೫ ಹರಿತವಾದ ಬಾಣ
ಶಾಬ ೧೪ – ೧೨೦ ಮರಿ
ಶಾಬ್ದಿಕ ೧ – ೭ ವೈಯಾಕರಣ
ಶಾರಿಕೆ ೬ – ೯೪ ಹೆಣ್ಣು ಗಿಳಿ
ಶಾಲ್ಮಲಿ ೧ – ೬ ಮುತ್ತುಗೆ
ಶಾಲಿವನ ೫ – ೪೭ ಬತ್ತದ ಗದ್ದೆ
ಶಾಲೂರ ೬ – ೬೦ (ಗ) ಕಪ್ಪೆ
ಶಿರಸ್ತೋದ ೩ – ೬೧ ಹೆದೆಯ ಧ್ವನಿ
ಶೀತರೋಚಿ ೨ – ೧೧ ಚಂದ್ರ, ತಂಪುಕಿರಣ
ಶುನಿ ೨ – ೧೨೧ ನಾಯಿ
ಶೈವಾಳ ೪ – ೧೧೪ ಪಾಚಿ
ಶ್ರಾಂತಿ ೩ – ೮೦ ಆಯಾಸ
ಶ್ಲಥ ೩ – ೨೧ ಸಡಿಲ
ಕ್ಷ
ಕ್ಷೀಬ ೪ – ೫೪ ಮದಿಸಿದ
ಕ್ಷ್ವೇಡ ೧ – ೭೧ ವಿಷ

ಸಕೃತ್ ೯ – ೧೨೯ ಒಮ್ಮೆ
ಸಖಾಯ ೧೮ – ೮೭ ಸ್ನೇಹಿತ
ಸಟಾಟವಿ ೮ – ೨೨ ಹೆಚ್ಚಾದ ಕೇಸರ
ಸತಮೆ ೧೪ – ೩೯ ಶಾಶ್ವತವೆ?
ಸತ್ತಿಗೆ ೪ – ೧೬ (ಗ) ಛತ್ರಿ
ಸನ್ನಿದಂ ೧ – ೮೩ ಜೋಡಣೆ
ಸಪ್ಪಳ ೭ – ೧೦೮ ಶಬ್ದ
ಸಬ್ಬ ೨ – ೧೧೦ ಶಿವ (ಶರ್ವ) (ಸಂ)
ಸಮಕಟ್ಟು ೯ – ೧೩೮ ಸಿದ್ಧಪಡಿಸು
ಸಮವಾಯಂ ೧೨ – ೭ ತಪ್ಪದೆ, ಸಂತತವಾಗಿ
ಸಮೆದು ೬ – ೧೧೫ ರಚಿಸಿ
ಸಮ್ಮದ ೧ – ೮೯ ಸಂತೋಷ
ಸಮ್ಮನಿಸು ೧೪ – ೩೧ ಗಮನಿಸು, ಸಂಭಾವಿಸು
ಸಯೆ ೧೪ – ೧೧೨ ಸಾಯಲು
ಸರದಂ (?) – ಶರದೃತು (ಸಂ)
ಸರಿಗಳ್ ೧೩ – ೮೯ ಮಳೆಗಳು
ಸಱುಸೈಕನೆ ೧೪ – ೬೦ ತಟ್ಟನೆ
ಸರ್ವಾಶೆ ೩ – ೭೭ ಎಲ್ಲದಿಕ್ಕುಗಳು
ಸಲ್ಲಕೀ ೮ – ೩ ತದುಕು ಮರ
ಸವಡಿ ೧೦ – ೧೦೬ ಗ ಜತೆ, ಎರಡು
ಸವನ ೯ – ೫೪ ಗ ಅಭಿಷೇಕ
ಸಹಕಾರ ೬ – ೧೧೩, ೯ – ೮೯ ಮಾವು
ಸಾಚೀಕೃತ ೭ – ೯೪ ಸೊಟ್ಟಗಾಗಿಸಿದ
ಸಾಧ್ವಸ ೬ – ೫ ಭಯ
ಸಾಮೋದೆ ಶೇಷಕ್ಷತಂ ೧೦ – ೯೮ ಪರಿಮಳಯುಕ್ತ ಮಂತ್ರಾಕ್ಷತೆ
ಸಾಯಕ ೧ – ೧೫ ಬಾಣ
ಸಾಯಂತನ ಬಜ್ಜನ ೧೪ – ೧೦೫ (ಗ) ಸಾಯಂಕಾಲದ ಸ್ನಾನ
ಸಾರವಣೆ ೧೦ – ೪ ಸಾರಣೆ ಸಾರಿಸುವುದು
ಸಾಲಭಂಜಿಕೆ ೧ – ೯೧ ಬೊಂಬೆ, ಪ್ರತಿಮೆ
ಸಾಳಂ ೭ – ೨೦ ಕೋಟೆ
ಸಿಕ್ತ ೧೩ – ೧೪೮ ಒದ್ದೆಯಾದ, ನೆನೆದ
ಸಿಗ್ಗಾಗಿ ೮ – ೮೦ (ಗ) ನಾಚಿಕೊಂಡು
ಸಿತಗ ೨ – ೫೬ ಪಾಣ್ಬ, ಲಂಪಟ
ಸಿದಿಗೆ ೧೦ – ೬೫ ಚಿತೆ,
ಸಿಪ್ಪು ೪ – ೭೭, ೧೪ – ೧೬ ಚಿಪ್ಪು, ಕಪಾಲ
ಸಿರಿಸ ೬ – ೧೧೫ ಬಾಗೆಹ್ನೂ, ಶಿರೀಷ ಪುಷ್ಪ (ಸಂ)
ಸಿವಡಿ ೯ – ೮೪ (ಗ) ಕಟ್ಟು, ಕಂತೆ
ಸೀಗುರಿ ೪ – ೮೦ ಚಾಮರ
ಸೀತ್ಕರಿಸಿ ೧೧ – ೧೧ ಕೂಗಿಕೊಂಡು
ಸೀತ್ಕಾರ ೨ – ೧೩೪ ಸುರತಧ್ವನಿ
ಸೀಧು ೪ – ೫೪ ಆಸವ, ಮದ್ಯ
ಸೀಯನಪ್ಪ ೩ – ೬೧ ಸಿಹಿ, ಇಂಪು
ಸೀರ್ಪನಿ ೫ – ೫೯ (ಗ) ೯ – ೭೩ ತುಂತುರು
ಸುಡುಪುಡು ೧೧ – ೩೬ ಬಿಸಿಬಿಸಿ
ಸುಧಾಕರ ೬ – ೯೨ ಅಮೃತಕಿರಣ, ಚಂದ್ರ
ಸುಭಗ ೪ – ೩೮ ಭಾಗ್ಯಶಾಲಿ, ಮಹಿಮಾವಂತ
ಸುರಭಿ ೧ – ೯೫ ಸುಗಂಧ
ಸುರಭಿಲಾಲೆ ೭ – ೩೫ ಗಂಧೋದಕದಧಾರೆ
ಸುರಭಿ ಸಮಯ ೧೧ – ೫ (ಗ) ವಸಂತಕಾಲ
ಸುರ್ಬುಗೊಳ್ ೫ – ೫೯ (ಗ) ಹುಲುಸಾಗಿ ಬೆಳೆ
ಸುಸಿಲ್ ೨ – ೭೪, ೩ – ೧೫, ೧೪ – ೩೫ ಉಪರತಿ
ಸೂರುಳ್ ೨ – ೧೦೨ ಆಣೆ, ಪ್ರಮಾಣ
ಸೂಱೆ ೧ – ೪೨ ಲೂಟಿ
ಸೂಲ ೧೨ – ೩೭ ಶೂಲ (ಸಂ)
ಸೃಕ್ವ ೧ – ೨೦, ೮ – ೧೨ ಕಟವಾಯಿ
ಸೆಡೆ ೨ – ೭೬ ಅಂಜು
ಸೆಳೆಗೊಂಬು ೯ – ೯೪ ರೆಂಬೆ, ಸಣ್ಣ ಕೊಂಬೆ
ಸೆಳ್ಳುಗುರ್ ೧೪ – ೧೦೫ (ಗ) ಉದ್ದವಾದ ಉಗುರು
ಸೇದೆವಡು ೪ – ೩೦ ಆಯಾಸಪಡು
ಸೇಸಕ್ಕಿ ೪ – ೭೮ ಶೇಷಾಕ್ಷತೆ
ಸೈತು ೨ – ೧೦೦ ಚೆನ್ನಾಗಿ
ಸೈಪು ೧೦ – ೧ ಭಾಗ್ಯ
ಸೊಕ ೩ – ೨೦ (ಗ) ಸುಖ (ಸಂ)
ಸೊಡರ್ಗುಡಿ ೧೪ – ೯೪ ದೀಪದಕುಡಿ
ಸೊದೆವೞೆ ೬ – ೫೪ ಗ ಅಮೃತದ ಮಳೆ
ಸೊಪ್ಪಡಗು ೧೩ – ೧೭ ತೆಳ್ಳಗಾಗು
ಸೊಪ್ಪಾಗು ೧೪ – ೯೭ (ಗ) ಕೃಶವಾಗು, ತಗ್ಗು
ಸೊರೆ ೨ – ೩೧ ಸೋರೆ, ವೀಣೆಯ ಬುರುಡೆ
ಸೊವಡು ೩ – ೧೨, ೯ – ೮೬, ೮ – ೩ ಪರಿಮಳ
ಸೋಕ ೮ – ೩೨ ಸ್ಪರ್ಶ
ಸೋಗೆ ೬ – ೪೮, ೧೪ – ೯೦ ಗಂಡುನವಿಲು
ಸೋಲ್ವಾಯಿನಂ ೧೧ – ೫೭ ಗ ಪ್ರೀತಿಯ ಬಾಗಿನ
ಸೋವು ೩ – ೧೩ ಓಡಿಸು, ಅಟ್ಟು
ಸೌಪರ್ಣಂ ೬ – ೧೪ ಗ ಗರುಡ
ಸೌಸವ ೭ – ೨೬, ೧೦ – ೩೯ ಪರಿಮಳ
ಸಂಕಂಪಿತ ೨ – ೩೦ ಬಹಳ ಚಂಚಲ, ನಡುಗುವ
ಸಂಗಳಿಸು ೪ – ೧೦೮ ಒಟ್ಟುಗೂಡು
ಸಂದ ೧ – ೯೧ ಪ್ರಸಿದ್ಧವಾದ
ಸಂದೆಗ ೪ – ೧೬ ಗ ಸಂಶಯ
ಸಂಪ್ರಯೋಗ ೧೩ – ೧೬ ಮೈಥುನ
ಸಂಯುಗ ೬ – ೧೪ ಯುದ್ಧ
ಸಂವಾಹನ ೫ – ೬೫ ಮರ್ದನಿಗನ ಸೇವೆ ಮೈ ಕೈ ಹಿಸುಕುವುದು
ಸಂವೀತಂ ೧೪ – ೧೦೨ ಕೂಡಿದ
ಸಂಸ್ಕೃತಿ ೧ – ೫ ಸಂಸಾರ
ಸಂಸ್ತಾರ ೯ – ೧೨೮ ಹರಡಿದ್ದು
ಸಂಹತ ೪ – ೧೨೪ ಕೂಟ, ಒಟ್ಟುಗೂಡಿಸಿದುದು
ಸಾಂದ್ರ ೨ – ೨೧ ದಟ್ಟ
ಸಿಂಧುವಾರ ೧೧ – ೫೩ ನಿರ್ಗುಂಡಿ ಮರ
ಸಿಂಪಿಸು ೧೧ – ೫೬ ಗ ಚಿಮುಕಿಸು
ಸೀಂಟು ೬ – ೪೨ ಒರೆಸು
ಸೆಂದುರ ೨ – ೬ (ಸಂ) ೯ – ೫೨ ಗ
ಸೊಂದಿಗೋಗಿಲೆ ೧೪ – ೭೫ ಪೋಕರಿ ಕೋಗಿಲೆ (ಸಿತಗ)
ಸೋಂಬತನ ೬ – ೧೨೧ ಸೋಮಾರಿತನ
ಸ್ಯಂದಿ ೭ – ೧೦೪ ಸುರಿಯುವ, ಜಿನುಗುವ
ಸ್ವಾಂತ ೧೨ – ೨೫ ಅಂತರಂಗ
ಸ್ಪುರತ್ ೧ – ೧೦೬ ಗ ಹೊಳೆಯುವ
ಸ್ಫುರಿತ ಸ್ಫೀತಾಧರಂ ೧೧ – ೭೮ ಅದುರುವ ಊರಿದ, ತುಟಿ
ಸ್ಮರಾಮರ್ಶಿತೆ ೧೪ – ೪೮ ಪ್ರಣಯಕುಪಿತೆ

ಹಡಹು ೨ – ೭೫ ೨ – ೯೦ (ಗ) ಸಂಭೋಗ ?
ಹನು ೧೪ – ೧೦೫ (ಗ) ಕೆನ್ನೆ
ಹರಕಲಿಸಿತು ೧೦ – ೭೮ ವ್ಯಾಪಿಸಿತು
ಹರಿತ ೫ – ೫೦ ಹಸುರುಬಣ್ಣ
ಹಾರಿಯ ೯ – ೩೪ ಸುಂದರ, ಆನಂದಕರ
ಹುಟ್ಟಗೆ ೨ – ೧೧೬ (ಗ) ಉಡುವ ಬಟ್ಟೆ, ವಸ್ತ್ರ
ಹೂಜೆಗೆ ೨ – ೧೦೭ ಅಸೂಯಾಪರ