ಭಾವಿಪೊಡಾಂ ಜಟ್ಟಿಯವಂ
ಗೋವಳನೆಂದಂದು
ದೇವ ಪೋರ್ತದೊಳವನೆ
ನ್ನಾವೆಡೆಗೆವರ್ಪನೆನಗಂ

ದೇವಕಿಯ
ಸುತಂಗಮಜಗಜಾಂತರಮಲ್ತೇ   ೬೧

ವ|| ಆದೊಡಂ ದೇವರಭಿಪ್ರಾಯಮನಱಿದೆಂ ದ್ರೋಹರನಾನೆಗಿಕ್ಕುವುದು ತಕ್ಕುದಲ್ಲದೆ ತಗದೆನಲಾಗ ನಾಳೆ ದೇವಕಿಯಕ್ಕೆಯನಖ್ಖಡದೊಳೆ ದೇವರ ಕಿವಿಗೆಯ್ದಿಸುವೆನಂತುಮಲ್ಲದೆ

ತನತನಗೀ ಜಗತ್ರಯಮುಮಿರ್ಪುದು ತಾಂ ಗಡ ಪೇೞದೆಲ್ಲಿದ
ರ್ಮುನಿವರುಮೆಲ್ಲಮಲ್ಲಿರದೆ
ಪೂತನಿಯಂ ಖರಕೇಶಿಯಂ ಯಮಾ
ರ್ಜುನರನರಿಷ್ಟನಂ
ಶಕಟನಂ ಪಟುಕಾಳಿಯನಂ ಕಡಂಗಿ ಕೃ
ಷ್ಣನ
ಬಸಿೞಿಂದಮಾಂ ತೆಗೆಯದಿರ್ದೊಡೆ ನೀಂ ತೆಗೆಯೆನ್ನ ಜೋಳಮಂ   ೬೨

ವ|| ಎಂದು ಚಾಣೂರಂ ಪೋಗೆ ಕಂಸಂ ಗೃಹಮಹತ್ತರನಂ ಕರೆದು ನಾಳೆ ಮಲ್ಲಗಾಳೆಗಮೆಂಬುದುಮವಂ ಮಹಾಪ್ರಸಾದಮೆಂದಖ್ಖಡಮಂ ಸಮೆಯೆ

ವಿಕಿರನ್ನಾನಾಪಾತಾಕಾಪಟಳ ಪಟುಪಟೀ ಪಕ್ಷವಿಕ್ಷೇಪದಿಂ ಮೇ
ಚಕಿತಂ
ರತ್ನಾವಳೀ ತೋರಣ ಕಿರಣ ಮರುಚ್ಚಾಪ ಚಾರಂಗಳಿಂ ಚಂ
ದ್ರಕಿತಂ
ಪುಷ್ಪೋಪಹಾರೋಜ್ವಲ ಮುಕುಳಮಿಲತ್ಕೀರ್ಣ ಕರ್ಪೂರದಿಂ ತಾ
ರಕಿತಂ
ತಾನಾಗಿ ಪೋಲ್ತಿರ್ದುದು ವಿಮಳನ ಭೋರಂಗಮಂ ಮಲ್ಲರಂಗಂ ೬೩

ಪಿರಿದುಂ ಪೊತ್ತಿರ್ಪಿನಂ ಕಟ್ಟಿದ ಪೞನೆಗಳ ಕ್ಷೂಣನಕ್ಷತ್ರ ಮಾಳಾ
ಭರಮಂ
ಮುಂದಿರ್ವ ಕಂಭಂ ಕರಮೆನೆ ಕಳಶಂ ಕುಂಭದಂತಾಗೆ ಬೇಗಂ
ಕರೆದತ್ತುತ್ಪಾತಮಂ
ನಿರ್ಗತ ವಿಪುಳ ತಳಾಸ್ಥೂಳವಂತಂ ಗವಾಕ್ಷ
ಸ್ಫುರಿತಾಕ್ಷಂ
ಪಕ್ಷಕೇತುಶ್ರುತ ಧರಣಿಕರೇಣೂತ್ತಮಾಂಗಂ ತವಂಗಂ       ೬೪

ವ|| ಆ ತವಂಗಮಂ ತೋರತುಱುಂಬುಂ ಪೆಡೆಯಂ ಪೋಲೆ ಕೊಂಡ ಖೇಟಕಮುಂ ಕಿೞ್ತ ಕರವಾಳಂ ಭಯಂಕರಾಕಾರಮಾಗೆ ಪೂಸಿದ ಸಿರಿಖಂಡದ ಕಂಪುಂ ಸೂಡಿದ ಕೇದಗೆಯ ಸೊವಡುಂ ದೆಸೆದೆಸೆಗೆ ಸುಟ್ಟುರೆಗೆ ಗರುಡಧ್ವಜನೆಂಬ ಗರುಡನ ಬಾರಿಗೆ ವಧ್ಯಶಿಲೆಯನೇಱುವ ನಾಗಕುಮಾರನಂತೆ ವಿಷಮುಖನಪ್ಪ ಕಂಸಂ ಬಂದೇಱಲೊಡನೆ

ಕೊನರಿಸೆ ಕೇಶಪಾಶರುಚಿ ಕೞ್ತಲೆಯಂ ಮಣಿಭೂಷಣಾಂಶುಗಳ್
ಘನಕುಚಕೋಕಮಂ
ಬಿಸಿಲನಾಗಿಸೆ ಚಂದ್ರಿಕೆಯಂ ತುಳುಂಕೆ ಲೋ
ಚನಮೊಡನೇಱೆ
ನೂಪುರ ಝಣತ್ಕೃತಿ ನೆತ್ತರ ಪಾನಗೋಷ್ಠಿಗಾ
ತನ
ಬೞಿಸಲ್ವ ಯೋಗಿನಿಯರಂತೆವೊಲೇೞಿದುದಂಗನಾಜನಂ  ೬೫

ಪೊಳೆದು ಪಳಂಚಿ ಮಿಂಚಿ ಮಣಿಮಂಗಳ ದೀಧಿತಿಯಲ್ತು ತಾರೆ ಬಾ
ಳ್ವೆಳಗಿನ
ಬಂಬಲೊಳ್ಸಕಳ ನಾಯಕದಾಯಕ ದಂಡನಾಥ ಮಂ
ಡಳಿಕ
ಮಹಾಪ್ರಧಾನ ಮಹಿಪಾಳ ಕುಮಾರಕರೋಳಿಗೊಂಡು ಚೌ
ಪಳಿಗೆಯನೇಱಿದರ್ಮುಗಿಲನೇಱುವ
ಖೇಚರಿರಾಜರಂದದಿಂ     ೬೬

ಅನಿಮೇಷ……………………………….
……………ರ್ಗೆಡೆಯಿಲ್ಲದಂತು
ಗಗನಂ ಬಂದಿರ್ದನಿಂದ್ರಂ ಮಹಾ
ಧ್ವನಿಯಿಂ
ನಾರದನಾಱೆ ತನ್ನ ತನುವಂ ತೀವಿರ್ದ ಕಂಣಾರೆ ಕೃ
ಷ್ಣನ
ಚಾಣೂರನ ಮಲ್ಲಗಾಳೆಗವನಾಗಳ್ ನೋಡುವಾನಂದದಿಂ ೬೭

ವ|| ಅನ್ನೆಗಂ ನೆಲಕ್ಕಮಾಗಸಕ್ಕಂ ಕೀಲ್ಗೊಂಡಂತಪ್ಪ ದೀರ್ಘಾಕಾರಮುಮೇೞೆಂ ಟಾನೆಯನೊಂದು ಮಾಡಿದಂತಪ್ಪ ತೋರಮುಂ ಎರಡು ತೊಡೆಯುಂ ತೋಱೆ ತೆಮಳ್ದಿ ಬಿಗಿದುಟ್ಟ ನೇತ್ರಾವಳಿಯ ಚಲ್ಲಣಮಂ ತಲೆಗೆ ಮೂದಲೆಯಾದ ಭೂರಿಭೂಜಶಿಖರಂಗಳ್ಗೆ ದಿಟ್ಟಿಯಾಗದಂತಿಟ್ಟ ಕತ್ತುರಿಯ ಬೊಟ್ಟುಂ ನೆಲನಂ ತರ್ಕೈಸಲ್ತಕ್ಕಂತಪ್ಪ ತೋಳ್ಗಳುಂ ಮಿಡಿದ ಬೆರಲೊಡೆವಂತಪ್ಪ ಮುಷ್ಟಿಯುಮುರ್ಕಿಂಗೆ ಮೆಚ್ಚಲ್ನೆಱೆವಂತಪ್ಪ ಮುಷ್ಟಿಯುಂ ಸಱಿಯನುರ್ಚಿ ಪೋಗಲ್ ಸಾಲ್ವಂತಪ್ಪ ತಿಣ್ಣುಂ ಮಿಂಚಿಂ ಮಾಡಿದಂತಪ್ಪನುಣ್ಪುಮನೆ ನೇರಿತಾಗಿ ಚೂರಿಸಿದ ಸಿರಿಖಂಡದ ತಿಮಿರುಮಿಕ್ಕಿದ ಜವಿಯ ದಂಡೆಯುಂ ಸೊರ್ಕಾನೆಯ ಕಯ್ಯ ಕರಿಯ ಪಿರಿಯ ಪಿಲ್ಲಣಿಗೆಯಮಗುರ್ವುಮದ್ಭುತಮಾಗೆ

ಕಡೆದಂತಪ್ಪಂಗಮುಂ ಕಂಡಿರಿಸಿ ಬೆರಸಿದಂತಪ್ಪಪಾಂಗಂಗಳುಂ ಮು
ದಿಡೆ
ಬಲ್ಪಿಂ ತುಂಬಿ ಬೀಳ್ಗೊಟ್ಟಿದ ಮಳಯಜದೊಳ್ಮುಳ್ಗೆ ನಿಳಾಳಕಂಬೋಲ್
ಕುಡೆ
ಚೆಲ್ವಂ ಚಲ್ಲಣಂ ಚಂಡಿಕೆ ಮಿಳಿರೆ ಭುಜಾಸ್ಫಾಳನಂಗೆಯ್ಯುತುಂ ಬೊ
ಬ್ಬಿಡುತುಂ
ಗಂಡೇಱೆ ಬಂದಂ ಮದಗತಿಯಿಂದುರ್ವಿ ಚಾಣೂರಮಲ್ಲಂ     ೬೮

ಮಲ್ಲನ ಗಂಡಸ್ಥಳಿಗಳ
ವಲ್ಲದೆ
ಕವಿದತ್ತು ಕಿವಿಯ ಕತ್ತುರಿ ಮದಮೊಂ
ದಲ್ಲುಗುವಂತಿರೆ
ತನ್ನೊಳ್
ಪಲ್ಲಟಿಸಿ
ಕರೀಂದ್ರಕಾಯಬಲಮುಂ ಚಲಮುಂ ೬೯

ನಗೆಮೆಂದೆ ಮೊಗಸಿ ಮುತ್ತುವ
ಮುಗಿಲಂತಿರೆ
ಮಲ್ಲನಿಕ್ಕಿದಣ್ಪಿನ ಕಂಪಿಂ
ದಗಿದಗಿದು
ಮುಸುಱೆ ಮುತ್ತಿದು
ವಗಣಿಮತಿ
ಬಹಳ ಮಧುವ್ರತಪಟಳಂ        ೭೦

ಐರಾವಣದಯೆ ಪೆಱಗನೆ
ವಾರಣಗಣವಾಸೆಯಿಂದೆ
ಬರ್ಪಂತಿರೆ ಚಾ
ಣೂರನ
ಪೆಱಗನೆ ಮುಷ್ಟಿಕ
ಧೀರೋದ್ಧತ
ಮುಖ್ಯರಪ್ಪ ಮಲ್ಲರ್ವಂದರ್     ೭೧

ವ|| ಬಂದು ಕಡಿತಮಂ ಬಳಸಿಕೊಂಡಿರ್ಪ ಜೂದುಗಾಱರಂತೆಯಖ್ಖಡಮಂ ಬಳಸಿಕೊಂಡು ಕುಳ್ಳಿರಲೊಡನೆ

ಎಡೆವಿಡದೆ ಮಲ್ಲಗಳನಂ
ಕುಡಿಮಿಂಚಿನ
ತಟ್ಟಿ ಸುತ್ತಿದಂತಿರೆ ಬಾಳುಂ
ಕಡಿತಲೆಯಂ
ಹಲಗೆಯುಮವು
ಕಿಡಿಗುಟ್ಟಿ
ಪಳಂಚೆ ಸುತ್ತಿದರ್ಕೂರಾಳ್ಗಳ್       ೭೨

ಶರನಿಧಿಯೆ ತೆರೆಗಳುಂ ದಿ
ಕ್ಕರಿಕುಳಮಂ
ಬಳಸಿದಂತೆ ನೆಲನಂ ನೆಲೆಯೊಳ್
ತುರಗದೞಮುಂ
ಮಧೇಭೋ
ತ್ಕರಮುಂ
ಬಳಸಿದುವು ಮಲ್ಲರಂಗಮನಾಗಳ್         ೭೩

ವ|| ಅಂತು ಕಂಸಂ ಕೃಷ್ಣಂಗೆ ಕೆಡೆವಂದುದಂ ಕಂಡು ವಸುದೇವಂ ಬಲದೇವಂಬೆರಸು ಚಾತುರ್ದಂತ ಬಲಮಂ ಕೂಡಿಕೊಂಡು ನಿಯುದ್ಧರಂಗದ ಕೆಲದೊಳ್ ಯುದ್ದಸನ್ನದ್ಧ ರಾಗಿರ್ದಾಗಳುದ್ಧತನಾಗಿರ್ದ ಕಂಸಂ ಪಡಿಯಱನಂ ಕರೆದು ಕಿವಿಯೊಳ್ ಪರ್ಚುವುದು ಮಾತನಂತೆಗೆಯ್ವೆನೆಂದು ಪೋಗಿ ಯಶೋದೆಗೆಂದಂ ನಿನ್ನ ಮಗನೆಲ್ಲಿಗಾದೊಡಂ ಕಾಳೆಗವೆಂದೊಡೆ ಪೂಣಿಗನಾಗಿ ಪಱಿವಱಿಯಪ್ಪನ ವ್ಯಸನಮುಂ ಬೆಸನಮುಳ್ಳೊಡೆ ಬಂದು ಚಾಣೂರಮಲ್ಲನೊಳ್ ಮಲ್ಲವೋರ್ದು ಪರ್ವಕ್ಕೆ ನೆರೆದರಸುಮಕ್ಕಳ ಕಣ್ಗೆ ಪರ್ವಮಂ ಮಾೞ್ಕೆಂದು ಕಂಸಮಹಾರಾಜಂ ಬೆಸಸಿಯಟ್ಟಿದನಿದೆ ತಿವುರುಂ ತಿಳಕಮುಂ ಬೆರಸುತ್ಪೂರಿಸಿಕೊಂಡು ಬರ್ಕೆ ಕೊಳ್ಳಿಮಾತನೆಲ್ಲಿದ ನೆಂಬುದಂ ಯಶೋದೆ ಮುಗುಳ್ನಗೆ ನಗುತಿಂತೆಂದಳ್

ಎನ್ನ ಮಗನಾದ ತಿವುರಿಂ
ಮುನ್ನಿಕ್ಕಿದನಣ್ಣ
ಶಕಟನಂ ಪೂತನಿಯಂ
ಪನ್ನಗನಂ
ಯಮಳಾರ್ಜುನ
ರನ್ನರಕನನವನಿನಧಿಕನೇ
ಚಾಣೂರಂ        ೭೪

ವ|| ನಿಜದಿಂ ಕೂರ್ಪುಳ್ಳನುಮಂ ಕತ್ತರಿವಾಣಿಯುಮಂ ಮಸೆಯಲೇಕೆ ಸಿಂಗಮಾನೆಯಂ ಮುಱಿವಲ್ಲಿಗಾವಭ್ಯಾಸಮಂ ಮಾಡಿದುದು ಮುರಾಂತಕನಂ ಅಂತಕನುಂ ಕೊಲ್ವುದನಿನ್ನು ಕಲ್ತಪರೆ ಕೇಳಿಮೆನ್ನ ಮಗಂ ನೀರೊಳ್ನಾನಂ ಬಿಸಿಲೊಳ್ಬಾಡಂ ಬೆಂಕಿಯೊಳ್ಬೇಯಂ ಜವನ ಕಯ್ಯೊಳ್ ಸಾಯಂ ಏನುಂ ಬೇಡೊಡಗೊಂಡು ಪೋಗಿಮೆಂಬನಿತರ್ಕೆಯಂಬುಜೋದರಂ ಬಂದಬ್ಬಾ

ಸಮೆದೆಂ ಮೊಸರಂ ಬಾೞ್ಮೊಸ
ರುಮನಾಂ
ಘನವಾಗಿ ತಂದೆನಿಕ್ಕಿದಪೆಂ ಲಂ
ಚಮನೆನ್ನ
ಮಲ್ಲ ಚಾಣೂ
ರಮಲನಂ
ಮುಱಿದು ಬಂದು ಹಸಿವಂ ಮುಱಿಯಾ     ೭೫

ವ|| ಅನಿತರ್ಕೆ ನಿನ್ನ ಪೊಡರ್ಪುಂ ಪಸಿವುಂ ಕೂರಿತಕ್ಕುವೆಂಬುದುಮಕ್ಕಟಾ! ಸಗ್ಗಮೆ ಕಾಳೆಗಮುಳ್ಳೊಡೆ ಕೂೞೇವುದೆಂದು ಪಡಿಯಱರನೀ ಬಂದೆನೆ ನಡೆಯಿಮೆಂದು ಮುಂದೆ ಕಳಿಪಿ ತಾನುೞಿಯೆ ತನ್ನೋರಗೆಯ ಗೋಪರೆಲ್ಲರಂ ಮಲ್ಲವಸದನಂಗೊಳಿಸಿ ಗೋವಳರೊತ್ತುವ ತಿತ್ತಿರಿಗಾಳೆಯ ತೂತ್ಕಾರಮುಮೂದುವ ಕೊೞಲ ಸರಮುಂ ಪಿಡಿವ ಕೊಂಬಿನ ನಿನದಮುಂ ಪೊಯ್ವೆಕ್ಕವದ್ದಳೆಯ ದನಿಯುಂ ಊದುವ ಱುಂಚೆಯ ರವಮುಂ ಬಾರಿಪ ಜಿಂಕರಮುಂ ರವಳಿಯಂ ನೆರಪೆ ನರಪತಿಯ ಪುರಕ್ಕಾಗಿ ನರಕಮಥನಂ ಮಸಗಿ ಬರ್ಪನನ್ನೆಗಂ ಕಂಸನಿಂ ಮುಂದೊಂದು ಕಾಲಮುಪಕೃತನಾದ ಮಧುವೆಂಬ ದಾನವನವನ ಬೆಸದಿನಸಗನಾಗಿ ವಿಸರುಹೋದರನನಸಗವೊಯ್ಲಿನುಯ್ವೆನೆಂದು ಬಂದೊಗೆಯುತ್ತುಮಿರ್ಪ ಮಡಿವಳನ ಮುಂದಣ ಮಡಿಯುಮಂ ತನ್ನೊಡನೆಯ ಗೋವಳಿಗರುಟ್ಟ ಮೈಲಗೆಯುಮಂ ಮಧುಸೂದನಂ ಕಂಡು ಸಮೀಪಕ್ಕೆ ವಂದು

ಒಗೆದೊಗೆದು ಮುರಿದು ಜಗುನೆಯೊ
ಳಗಲೊಗೆದುಂ
ಪಿಂಡುತಿರ್ಪ ರಜಕನನೀ ಸೀ
ರೆಗಳನುಡಲೀವುದೆಮಗೆನೆ

ಜಗಳಂ
ಜಕ್ಕುಲಿಸಿದಂತೆ ನಕ್ಕಂ ರಜಕಂ      ೭೬

ವ|| ನಕ್ಕು ರಜಕಂ ಸೀರೆಗಳಂ ಕಂಸದೇವನುಡುಗುಮೆಂದಾತನ ಬೀೞುಡೆಯ ವರುಮುಡುಗುಮಲ್ಲದೆಡೆಯ ಕಡೆಯ ಬಡವರುಡಬಾರದೆನೆ ಮುಕುಂದನಿವನಂದಮಕ್ಕುಮೆಂದು ಮತ್ತಂ ಕೀಱಿ ಬೇಡೆ

ಅಣ್ಣೞಿಯದರಸರುಡುವೀ
ಬಣ್ಣಂಗಳನುಡನೆ
ಬಯಸಿದಣ್ಣನ ನೊಸಲೊಳ್
ಕಣ್ಣುಂಟೆ
ತೋಱೆ ನೊಸಲೊಳ್
ಕಣ್ಣುಳ್ಳನುಮಾಱನಾರ್ಪಡುಡುವನೆ
ತೊವಲಂ          ೭೭

ವ|| ಎನೆ ವನಮಾಳಿ ಮಾಳಾಪ್ರಚಂಡಂ ಬೇಡ ಬಿಡುಬಿಡೆಂದು ರಣರಂಗಾರ್ಥಿಯಾಗಿ ರಂಗಕಾಱನ ಕಯ್ಯ ಸೀರೆಯಂ ಸೆಳೆಯಲನುಗೆಯ್ಯಲೊಡನೆ

ಕಟ್ಟಣ್ಮು ಕಾಱನಿವನಿ
ನ್ನುಟ್ಟಲ್ಲದೆ
ಮಾಣನುಡಿಸುವೆಂ ಗಡಮಿವನಾ
ನುಟ್ಟಪೆನೆಂಬನ
ಮುನ್ನು
ಳ್ಳುಟ್ಟುದುಮಂ
ಸುಲಿದು ದೇಸೆಯಂ ಕಾಸೆಯುಮಂ     ೭೮

ವ|| ಇವಂ ಮುಟ್ಟಿದೊಡೆ ಕಂಸದೇವನಾಣೆಯೆನೆ ನೀ ಕುಡದೊಡೆ ಕಂಸದೇವ ನಾಣೆಯೆಂದಸಿತಾಂಬರಂಗಂಬರನೆ ರಜಕನಂಬರಂಬರಂ ತುಂಬುರಗೊಳ್ಳಿಯಂತೆ ಸಿಡಿದಿಂತಪ್ಪ ಸಿತಗನನೆಲ್ಲಿಯುಂ ಕಾಣೆನಾಣೆಗೆ ಮಾಱೌಣೆಯಿಟ್ಟಪಂ ನಾಯ ಬಾಯ ಸೀರೆಯಪ್ಪೊಡೆ ಸೀರೆಯತ್ತ ಸಾರೆಂದು ಮುಂದೀಡಾಡಿ

ಉಡುವೊಡುಡು ಪೇೞ್ವೆನರಸರ
ಮಡಿವರ್ಗಮಿವುಟ್ಟುಕೊಳ್ವ
ಕಲಿಗಳ ಕಾಲಂ
ಪಿಡಿದಡಿಸಿ
ಕಂಸದೇವನ
ಮಡಿವಳನೊಗೆದಾಱೆ
ಪರಪಲಿಂ ಕಲ್ತಪನೇ    ೭೯

ವ|| ಎನೆ ಕೃಷ್ಣಂ ಕಿಱುಮುನಿಸು ಮುನಿದು

ಇದು ಸತ್ಯಮೊಗೆವ ಕಯ್ಯಾ
ವುದು
ತೋಱೆಂದಸಗನೆರಡು ಕಯ್ಯಂ ಮುಱಿದಿ
ಕ್ಕಿದನೂರ
ಸೀರೆಗಸಗಂ
ತದೆವಡೆದನಿಪ್ಪ
ನಾಡ ನುಡಿ ಪರೆವಿನೆಗಂ     ೮೦

ವ|| ಮುಱಿದಿಕ್ಕಿ ಸುಬ್ಬರಸೂಱೆಯಾಗೆ ಮಡಿವರ್ಗಮಂ ಗೋವರ್ಕಳ್ಗೆ ಸೂಱೆಗೊಟ್ಟಸಗವೊೞೆಯಂ ಪುಯ್ಯಲಿಡಿಸೆ ಪೊೞಲಂ ಪುಯ್ಯಲಿಡಿಸಲೆಂದು ಪುರುಷೋತ್ತಮನಾ ಪುರದ ಗೋಪುರಮಂ ತಾಗೆವರೆ ತೊಟ್ಟನೆ ಕಟ್ಟಿದಿರೊಳ್

ಮುಗಿಲಂ ಮುಟ್ಟಿದ ಕಾಳಕಾಯ ಬಲದಿಂದರ್ಕಂಗೆ ಕೋಡಿಟ್ಟ ಕೋ
ಡುಗಳಿಂ
ಬೆಟ್ಟದ ಬೀೞಲಂತಲೆವ ಕಯ್ಯಿಂ ಪೃಥ್ವಿಪಾತಾಳಮಂ
ಪುಗೆ
ಗಾತ್ರಾಪರಮಿಟ್ಟು ಮೆಟ್ಟುವಳವಿಂ ಸಪ್ತಾರ್ಚಿಯಂ ಸೂಸುವ
ರ್ಚಿಗಳಿಂದೇಂ
ಕೆದಱುತ್ತೆ ಬಂದುದೊ ಮದಸ್ತಂಬೇರಮಂ ಬೀರಮಂ       ೮೧

ಕಕುಭಂ ಮುಂಗಾಲ್ ಕಕುದ್ಮತ್ವತಿ ವಿಷಮ ವಿಷಾಣಂ ರದಂ ಪೂತನಾ ತುಂ
ಗಕುಚಂ
ಕುಂಭಸ್ತಳಂ ಕಿೞ್ತವನಿಧರಮೊಡಲ್ಕಾಳಿಯಂ ಸ್ಥೂಳಹಸ್ತಂ
ಶಕಟಂ
ಪೃಷ್ಠಪ್ರದೇಶಂ ಹರಿಖರಪರಿಕೋಪಾಗ್ನಿ ಕಣ್ಣುಗ್ರ ವಿದ್ವೇ
ಷಕವೊರ್ಮೆಯ್ಯಾಗೆ
ಮತ್ತಂ ಹರಿಗೆ ಮುನಿದು ಬರ್ಪಂತೆ ಬಂದತ್ತಿಭೇಂದ್ರಂ          ೮೨

ಜಗಳದಿಭ ಮಾಡುವಂತೆವೊ
ಲುಗೆ
ನೆತ್ತರ್ಕುತ್ತಿ ಕೆಡಪೆ ಮದದಾನೆಗಳಂ
ಮೊಗಮಿಕ್ಕಿದ
ತೆಱದಿನಿರ್ದುದೇಂ ಕರಿ ಪಿರಿದೋ        ೮೩

ಅಂಗಕ್ಕೆಯ್ದದು ಗಗನಂ
ತುಂಗರದಕ್ಕೆಯ್ದದಿಱಿಯಲಗನಿಕರಂ
ಧೀಂ
ಕಿಂಗೆಯ್ದದು
ಧಾರಿಣಿ ಮುಳಿ
ಸಿಂಗೆಯ್ದದು
ಮೂಱು ಲೋಕಮಾ ಮದಗಜದಾ        ೮೪

ವ|| ಆ ಕೈಟಭನೆಂಬ ಕಟ್ಟಾನೆ ಮುನ್ನಮೆ ತಾಂ ರಕ್ಕಸನಪ್ಪುದಱೆಂ ಮಾನಿಸರನೆ ಕಡಿಗೊಂಬುಗೊಂಡುಮೆಂತಾಂ ಮೆಚ್ಚಿದ ಕೊಗೆಗಡಿಯಾಗಿ ಬಿಟ್ಟ ಕಣ್ಣುಂ ಬಿಗಿದ ಮೊಗಮುಂ ಮನದ ಮುನಿಸುಂ ಮೆಯ್ಯ ಮುಱುಕಮುಂ ಪ್ರತಿಮಾನದ ಪೆಣನುಮಣ ಲೊಳಡಸಿದಾನೆಯಡಂಗುಂ ಕೋಡ ಕಯ್ಯ ಪೊಂತಿವಣಿಯ ನೆತ್ತರನೊಂದು ನಿಮಿಷಮುಂ ಕುಂದಿಸದ ಕ್ರೋಧಿನಿಯೆಂಬಯ್ದಾನೆಯ ಮದದೊಳ್ ಮದಕ್ಕೆ ವಂದ ಕೀನಾಶನಂತೆ ಮಾಮಸಕಂ ಮಸಗಿ ಬರೆ ಮುಂದೆ ಪರಿತಪ್ಪ ಪರಿಕಾಱರ್ ರಾಮಕೃಷ್ಣರಂ ತೊಲಗು ತೊಲಗೆನೆ ಗೋವರೇಕಣ್ಣ ಕಣ್ಣ ತಲೆಯೊಳ್ತೊಲಗುವಂತಾಗಿ ಕಟ್ಟಾನೆಗೆ ಕಿಟ್ಟಲಮಾದುದೇಮಾನೆಯುಮಿದಿರ್ವಪ್ಪುದ ನಾರ್ಪಡೆವರೆನೆ ಪರಿಕಾಱರೆಳೆಗೊರ್ವಂಗೊರ್ವಿದ ಗೋವಳಿಗರ ಗರವಂ ಕಳೆದಾನೆ ತಾನೆ ತೊಲಗಿಸಿದಪುದು ನಮ್ಮಚ್ಚಿಮೇಕೆಂಬನಿತು ಬೇಗೆಯುಂ ಅಂಬುಂ ದೃಷ್ಟಿವಿಷಮುಂ ದಿಷ್ಟಿಯ ಮುಖಮಂ ಮುಷ್ಚಿಯುಮಪ್ಪ ಮದದಾನೆಯೊಳ್ ಕೃಷ್ಣಂ ಕಯ್ಯಿಕ್ಕಿ ಕರಿಯ ಕಯ್ಯಂ ತನ್ನ ಕಯ್ಯ ಪವಣುಂ ತ್ರಾಣಮುಮಂ ಪಡಿಯಿಟ್ಟುನೋೞ್ಪಂತೆ ಪಿಡಿದು ಪೊಣರ್ದು ಬಣೆವಾವಿನಂತೆ ಪೆಣೆದ ಕಯ್ಯ ಕಾಲ ಕೊಂಬಿನ ಕುಂಭಸ್ಥಳದೆಡೆಗಳೊಳ್ ಬೆಣ್ಣೆದೊಡೆದ ಬಟ್ಟಿನಂತೆ ನುಣ್ಚಿ ನುಸುಳ್ದು ನೆರೆದು ನೋೞ್ಪರ ಕಣ್ಣಾರೆ ತನ್ನ ಮನಮಾರೆ ವಿನೋದಕ್ಕಾನೆಯೊಳೊಡಕೊಂಡಲಿಕ್ಕಿ ಲಕ್ಕೆತೆಱದಿಂ ಚಾಣೂರಮಲ್ಲನೊಳ್ ಮಲ್ಲಿಕ್ಕುವುದಕ್ಕೆ ಶ್ರಮಮಂ ಮಾಡುವಂತೆ ಗಜಮಲ್ಲನೊಳ್ ಪ್ರತಿಮಲ್ಲಂ ಮಲ್ಲವೋರ್ದು ಸಿಂಹನಾದದಿನಾರ್ದು

ಒತ್ತಿದೊಡೊತ್ತಿ ಪತ್ತಿದೊಡೆ ಪತ್ತಿ ಪೊರಳ್ಚಿದೊಡಂ ಪೊರಳ್ಚಿ ಕಾ
ಯ್ದೆತ್ತಿದೊಡೆತ್ತಿ
ಕುತ್ತಿದೊಡೆ ಕುತ್ತಿದ ಕೊಂಬನೆ ಕೂಂಕಿ ಕುತ್ತಿ ಕೂ
ರ್ಗತ್ತಿಗೆಯಂ
ಕನಲ್ದೊಱೆಯಿನುರ್ಚುವವೋಲ್ ಮೊಗದಿಂದಮುರ್ಚ್ಚಿ ಮು
ನ್ನೆತ್ತಿ
ಪಿಸುಳ್ದು ಮುತ್ತನುಗೆ ಮತ್ತಿಭಮಂ ಹರಿ ಪೊಯ್ದುರುಳ್ಚಿದಂ   ೮೫

ವ|| ಕಮ್ಮಱನಂಬು ಕಮ್ಮಱಂಗೆಂಬಂತೆ ಬಟ್ಟ ಉತ್ತರಬಾಳಂತೆ ತನ್ನ ಕೊಂಬೆ ತನಗೆ ಘಾತಕಮಾಗೆ ಸೊವಡಿಂಗಮಗ್ಗಿಸಿ ತುಂಬಿವೆರಸು ಕೂಂಕಿ ಬಂಕಿ ಬಿೞ್ದ ಕುವಳಯಾಪೀಡನಂ ಕುವಳಯಾಪೀಡನಂ ಮಾಡಿ

ಮತ್ತಗಜೇಂದ್ರದೊಳ್ಪೊಣರ್ದು ಪೋರೆ ಮದಂಬೊರೆದಂಗಯಷ್ಟಿಯೊ
ಳ್ಕತ್ತುರಿಯಣ್ಪಿನಂತೆಸೆಯೆ
ನೆತ್ತಿಯ ಸಿಂಧುರಮುಂ ಲಲಾಟದೊ
ಳ್ಪತ್ತಿ
ಲಲಾಮದಂತಮರೆ ಕುಂಭಿಯ ಕೊಂಬರುಣಂ ಕವುಂಕುಳೊ
ಳ್ಕುತ್ತಿದ
ಪೊನ್ನ ಪಿಲ್ಲಣಿಗೆಯಂತಿರೆ ಕೈಟಭಮಲ್ಲನೊಪ್ಪಿದಂ        ೮೬

ವ|| ಆ ಗಜಮಲ್ಲನೋಳ್ಪೋರ್ತಂಗೊಂಡುದೆ ಮಲ್ಲಸಿಂಗರಂಗೆಯ್ದಂತಾಗೆ ಗೆಲ್ಲಂಗೊಂಡು ಜೀವವಿರ್ದಂದೊಳಾ ದ್ವಿಪದ ಪಿಂಗಾಲಂ ಪಿಡಿದು ಪಂದಿಯನೆೞೆವಂತೆೞೆದುಕೊಂಡು ಬಂದು ಮೂಱುಂ ಲೋಕಮುಮೊಂದೆಡೆಗೆ ವಂದಂತಿರ್ದ ಮಲ್ಲಗಜದ ನಡುವೆ ತಂದಿಡೆ ತವಗದ ಮೇಲಿರ್ದ ಕಂಸಂಗೆ ಹಾಸ್ಯಗರ್ಭಮಪ್ಪ ಗಂಡಗರ್ವದಿಂ ಕೃಷ್ಣನಿಂತೆಂದಂ

ಅವಧರಿಸು ದೇವ ನಿನ್ನಂ
ತೆವೊಲಾರ್ಮೆಯ್ಯಱಿಯದರಸಾರಿರ್ದರಿದಂ

ನವನವದಾವಸ್ಥಿತಮಿ

ನ್ನವು
ಮದಗಜಮೊಳವೆ ಕಾಡೊಳಂ ಕಂಜದೊಳಂ     ೮೭

ಬಳವದ್ದಂತಿಯನಿಂತುಪೇಕ್ಷಿಸುವರೇ ಬಿದ್ದಿರ್ದುದೀ ದಂತಿ ಭೂ
ತಳದೊಳ್
ತೋಱುವೆನೆಂದು ತಂದೆನಿದನಾಂ ದೇವರ್ಗಿದೆನ್ನೋಲಗಂ
ಗಳಮೋ
ಗಾಳಿಯೊ ಸಪ್ತಮೋಗ್ರಮದಮೋ ಕಾಷ್ಠಾಗ್ನಿಯೋ ಕೂಟಪಾ
ಕಳಮೋ
ತೋಱಿಸು ವೈದ್ಯರಂ ಕರೆದೆಲೇ ಕಂಸಾವನೀಪಾಳಕಾ ೮೮

ವ|| ಈ ದಂತವೆೞೆತರ್ಪಲ್ಲಿ ಕಯ್ಯ ಬಾಯಿಗೆ ಬಂದುದಿವಂ ದೇವರವಧಾರಿಸಿ ಭಂಡಾರದೊಳಿರಿ ಸುವುದೆಂದೆಳವೆಱೆಯನೀಡಾಡುವ ಸೈಂಹಿಕೇಯಂತೆ ಮುಂದೀಡಾಡುವನಿತಕ್ಕೆ ಕರಿಯ ಕಯ್ಯಂ ಕಾಲುಮಂ ಬಡಿದಸುವಂ ಕಳೆಯೆ ಕಾಳಿಯ ಮಥನನಕ್ಕಟಾ ಸತ್ತುದೀಯಾನೆ ಯಾನೆಯನಡ್ಡದೆಗೆದಂತಿರ್ದೀ ಚಾಣೂರ ಮುಷ್ಟಿಕಾದಿಗಳಪ್ಪ ಮಲ್ಲರಿಂದಮೆೞೆದೀಡಾಡಿಂ ಪೋರ್ತಕ್ಕೆ ಪೊತ್ತುವೆಳದಪರೆನೆ ಮಲ್ಲರೆಲ್ಲರ ಮೊಗಮೊಯ್ಯನಾದುದಿನಿಸಱಿಂ ಕಂಸಂ ಗಂಡಗರ್ವದೊಡನೆ ವಿಗುರ್ವಣೆಯನೆ ತನಗೆ ತಾನೆ ಕಾರ್ಮುಗಿಲಂತೆ ಕರಗಿ ಪೋಗಿ

ಗಜಮದವಿಲಿಪ್ತನಿಜಗುರು
ಭುಜಯುಗದೊಳ್
ಪಾಯ್ದ ಮಧುಪಮಾಳಾಯುಗದಿಂ
ವಿಜಯೋತ್ಸುಕನಾಗಿ
ಚತು
ರ್ಭುಜನಾದವೊಲಿರ್ದನುಪನಿಯುದ್ಧಂ
ಕೃಷ್ಣಂ ೮೯

ವ|| ಇರ್ಪುದುಮೇವಯಿಸಿ ಕಂಸಂ ಕುಂಚಮಂ ಬೀಸುವುದುಂ

ಎಲೆಯಿತ್ತಿತ್ತದಿರ್ಚಿದಿರ್ಚು ಕಡುಕೆಯ್ ನೀಂ ಬೇಗವಣ್ಮಣ್ಮು ಮೆ
ಯ್ಗಲಿಯಾಗಾಗು
ಕೊಲಲ್ಕೆ ನಿನ್ನ ಪವನಂ ಸುತ್ತಿತ್ತು ಮುತ್ತಿತ್ತು ಪೆ
ಣ್ಗೊಳೆಯೇನೀಗುಮೆ
ಪೋಗಲುಣ್ಣದುರಿದೈ ಮಣ್ಣಾಗಲೆಂದೆನ್ನ ತೋ
ಳ್ವಲೆಯೊಳ್
ಸಿಲ್ಕಿದೆಯಿಂದೆ ಸತ್ತೆಯೆನುತುಂ ಚಾಣೂರನೊಟ್ಟೈಸಿದಂ     ೯೦

ವ|| ಒಟ್ಟೈಸೆ ಮುಕುಂದಂ ಮುಗುಳ್ನಗೆ ನಗುತ್ತುಮಟ್ಟಿ ತಿಂಬ ದೈವಕ್ಕೆ ಪಾೞಂಬಟ್ಟೆ ಯೆಂದೇಱೆಂಟುಗೊಂಡು ಸಪಶಿರದಿಂದಪ್ಪಳಿಸಲೊಡನೆ

ಮುಱಿವನ್ನ ಮೋದಿ ಮಾರ್ಮಲ್ಲರ ಗುರುಭುಜಮಂ ಶೇಷನಂ ಧಾತ್ರಿ ಮುಂದ
ಣ್ಗೆಱಪನ್ನಂ
ಪೊಯ್ದು ಪಾಯ್ದಪ್ಪಳಿಸಿ ಶಿಖರಶೃಂಗಂಗಳಂ ಮಚ್ಚರಂ ಬೇ
ಡೆಱಗಿಂ
ನೀವೆಂಬವೊಲ್ ಡೊಕ್ಕರಿಸಿ ದಿಗಿಭಹಸ್ತಂಗಳಂ ಮೂಜಗಂ
ಳ್ಕುಱೆ
ಪರ್ವಿತ್ತುರ್ವಿ ವೈಕುಂಠನ ವಿಜಯಭುಜಾಸ್ಫಾಳನಾಭೀಳನಾದಂ    ೯೧

ಉಭಯವ್ಯೂಹಭವನ್ಮ ಹಾಕಳಕಳಂ ದೌವಾರಿಕೋದ್ಫುಷ್ಟ
ಲ್ಲಭುಜಾಸ್ಫಾಳನನಿಸ್ವನಂ
ನೃಪಸಭಾಕೋಳಾಹಳಂ ದೇವದುಂ
ದುಭಿನಾದಂ
ಮೊಳಪೆಲ್ಲ ಮಲ್ಲವಱೆಯೊಂದಿಂದೋಳಮೆಕ್ಕೆಕ್ಕೆಯಿಂ
ನಭಮಂ
ದಿಕ್ಕುಮನೊಕ್ಕಲಿಕ್ಕಿ ಪೊಣರ್ದರ್ ಚಾಣೂರಚಕ್ರಾಯುಧರ್      ೯೨

ತಳಗಳ ಕೋಳ್ ಛಟಚ್ಚಟೆನೆ ಮಲ್ಲರ ತೋಳ್ಗಳ ಕೋಳ್ಕರಂ ಫಳಿಲ್
ಫಳಿಲೆನೆ
ಥಟ್ಟು ಪೊಟ್ಟೆನೆ ಘನೋರುಯುಗಂಗಳ ಕೋಳ್ಕರಂಗಳಂ
ಬಳಸುವ
ಬೇಡಿಕೊಳ್ವ ಪಿಡಿಪೀವ ಮರುಳ್ಚುವ ನುಣ್ಚುವಾಸೆಯೊಳ್
ಸೆಳೆವೆಡೆ
ಸಾರ್ವ ಪೋರ್ವಳವಿಯೊಪ್ಪಿದುದಿರ್ವರ ಹಸ್ತಯುದ್ಧದೊಳ್      ೯೩

ಉತ್ತಮಸತ್ವದಿಂ ಪಿಡಿದು ಚಾಣುರನಂ ನೆಲಕಿಕ್ಕಿ ಕೃಷ್ಣನಾ
ಳ್ದೊತ್ತಿದೊಡೊತ್ತಿ
ಧಾತ್ರಿ ರಸೆಗರ್ದುದು ರಕ್ಕಸನೊಯ್ದ ಧಾತ್ರಿಯಂ
ತೆತ್ತಿದನಾತನುಂ
ಹರಿಯ ಗೋಣನಿಱುಂಕಿ ತದಂಘ್ರಿಘಾತದಿಂ
ದತ್ತ
ಪತಂಗಮೊಂದು ಶಕಟಂ ಮುಱಿದಾ ಶಕಟಂಬೊಲೊಪ್ಪಿದಂ          ೯೪

ಓರೊರ್ವರನಕ್ಖಡದಿಂ
ದೂರಂ
ಪೊಱಗಿಕ್ಕಿ ಪೋರ್ದು ಪಾದಾಹತಿಯಿಂ
ಭೂರೇಣುವಾಗೆ
ಹರಿಚಾ
ಣೂರರ್ಮತ್ತೊಂದು
ಮಲ್ಲಗಳನಂ ಸಮೆದರ್  ೯೫

ಬೆದಱಿದ ಬೆಱಗಿಂ ಬೆನ್ನಿ
ಕ್ಕಿದ
ಕೃಷ್ಣಂ ಮೊಗದೆಗೊಂಡು ಮೊಗದೊಳ್ಮೆಯ್ಯಿ
ಕ್ಕಿದ
ಚಾಣೂರನನಾರ್ದೆ
ತ್ತಿದನವನಿಯನೆತ್ತುವಂತಿರಾದಿವರಾಹಂ
      ೯೬

ಕೆಡೆದರ್ಪೋರ್ದರ್ ಪೊರಳ್ದರ್ಮಿಗೆ ಪಿಡಿಯದರಾರ್ದೊತ್ತಿದರ್ಮತ್ತಮೆರ್ದರ್
ನಿಡುಗಯ್ಯಂ
ಬೇಡಿದರ್ನೀಡಿದರೆೞೆದು ನೆಲಕ್ಕಿಕ್ಕಿದರ್ಕೂಂಕಿದರ್ಮೇ
ಗಡಿಯಾದರ್ಪತ್ತಿ
ಗಾಯಂಗೊಳಲೆ ಮಿಡುಕದಾರಯ್ದರಾರಯ್ದ ಗಾಯ
ಕ್ಕೆಡೆಗೊಟ್ಟರ್ಕೊಟ್ಟುಕೊಂಡರ್ಪೊಳೆದು
ಬಿಡಿಸಿದರ್ ಕೃಷ್ಣಚಾಣೂರಮಲ್ಲರ್ ೯೭

ಪಿಡಿವಡೆ ಕೃಷ್ಣನ ತೋಳುಂ
ತೊಡೆಯುಂ
ದೊಡ್ಡಿದುವಿದೆನ್ನ ಮುಷ್ಟಿಗೆ ಪವಣೆಂ
ದಡಹಡಿಸಿ
ನಳಿನನಾಭನ
ನಡುವಂ
ಮುಱಿಯಲ್ಕೆ ನೋಡಿದಂ ಚಾಣೂರಂ        ೯೮

ಮರನಂ ಕಿೞ್ತಮುರಾರಿಯಾಱನೆ ಕಿೞಲ್ಮುಂಗಯ್ಯ ರೋಮಂಗಳಂ
ಕರಮಂ
ಕೊಟ್ಟೊಡಮಾರ್ತನಿಲ್ಲ ಪಿಡಿಯಲ್ತತ್ಕಾಳಿಯಗ್ರಾಹಕಂ
ಧರೆಯಂ
ಬೆಂಬಲದೊತ್ತಿಪತ್ತೆ ಗಿರಿಯಂ ಮುನ್ನೆತ್ತಿ ಪೊತ್ತಾ ಮಹೀ
ಧರನಂತಿಂತು
ತಳರ್ಚಲಾಱನೆ ಕರಂ ಚಾಣೂರನೇಂ ಶಕ್ತನೋ  ೯೯

ವ|| ಅಂತು ಮುನ್ನ ಮಾಡಿದ ಸಾಹಸಂಗಳಂ ಮಾೞ್ಪಂತೆ ಮುಂಗೆಯ್ವಲದೊಳ್ ಬೆದಕಿ ನೋಡಿಯವನರಿಯನುಂ ಪರಿಯನುಮಪ್ಪದನಱಿದು

ನರರುಂ ದೇವರ್ಕುಳುಂ ನೋಡಿದಪರಿಳೆಯೊಳಂ ಬಾನೊಳಂ ನೂಂಕಿ ನುಗ್ಗಾ ಗಿರೆ ನೋೞ್ಪರ್ ನಾಳೆಯೇಂ ನೋಡಿದಪರೆ ನೆಱೆನೋೞ್ಕೆಂದು ಚಾಣೂರನಂ ನೋ
ೞ್ಪರ
ನೇತ್ರಾನಂದಮಂ ನಂದಿಸುವುದುಚಿತಮಲ್ತೇಂ ಪೊಡರ್ದಂ ವಿನೋದ
ಕ್ಕರಿಗಾತ್ಮ
ಪ್ರಾಣಮಂ ತೋಱದ ಹರಿ ಹರಿಗೊಟ್ಟಿಂತು ಬಲ್ಲೊಂದು ಜಾವಂ          ೧೦೦

ವ|| ಇವನನೆನಿತೆನಿತಂ ಕೊಂಡಾಡುವೆನೆಂದು ವಿಶ್ವಂಭರಂ ಭರಂಗೆಯ್ಯಲೊಡನೆ

ದಾರುಣದೊಳ್ ನಿಷ್ಠುರ ಚಾ
ಣೂರ
ಭೂಜಾದಂಡ ಪೃಷ್ಠದೊಳ್ ಪುಟ್ಟಿದುದಾ
ನಾರಾಯಣನುರು
ಭುಜಶಾ
ಖಾರಣಿಯೊಳ್
ಶಕ್ತಿರೂಪ ತೇಜೋಜ್ವಲನಂ  ೧೦೧

ವ|| ಅಂತು ಜಳಧರದೊಳಶನಿ ಪುಟ್ಟುವಂತೆ ಜಳಧರಶ್ಯಾಮನೊಳ್ ಸರ್ವಶಕ್ತಿ ಪುಟ್ಟಿ

ಎೞವಿ ಮಳಪಿಕ್ಕಿ ಕಳಲುಂ
ಕೆೞಗಂ
ತರಹರಿಸಿಕೊಳಲುಮಿಕ್ಕಿದ ಕಯ್ಯಂ
ಕಿೞಲುಮಣಮಾಱದಸುರಂ

ನೆೞಲೊಳ್ಪೊಣರ್ವಂತೆ
ಪೋರ್ದು ಕೞಿಯೆ ಬೞಲ್ದಂ    ೧೦೨

ಪೋರ್ಕುಳಿಯಾದಡೆ ಹರಿಯಂ
ಮಾರ್ಕೊಳ್ಳದೆ
ತೆಗೆದ ಕಯ್ಯ ಬೞಿಯನೆ ಬಂದಂ
ಸೊರ್ಕಿದಿಭಪತಿಯ
ಕಯ್ಯೊಳ್
ಸಿಕ್ಕಿ
ತೊಗಲ್ಪಾಪೆಯಂದದಿಂ ಚಾಣೂರಂ     ೧೦೩

ಹೂಣಿಸಿದಿನ ಕತ್ತುರಿಯಂ
ಕಾಣಿಸೆ
ಕತ್ತುರಿಯ ನಡುವಣಳಿರೋಮದವೋಲ್
ಚಾಣೂರನಿರ್ದನೆನೆ

ಪ್ರಾಣದೊಳೇನವನಿಸಾರನೋ
ಪುರಮಥನಂ ೧೦೪

ಪೊರೆದು ಪೊರಲ್ವನವ್ವಳಿಪೆ ತೇಂಕುವ ತೇಂಕದೆ ಸುಯ್ವ ಸುಯ್ಯದೆ
ರ್ದರೆ
ಜಡಿವ ಜವಂಗಿಡುವನೂರ್ಮಡಿಯಪ್ಪ ಬೆಮರ್ತು ಮಲ್ಲರಂ
ಗುರುಗುಣರೇಣುವಂ
ತೊಡೆವ ಮೆಯ್ಬೆಮರೇೞದ ಭಂಗಿ ಕಣ್ಗೆ ಚಾ
ಣುರನುರು
ಸೋಲಮಂ ಹರಿಯ ಗೆಲ್ಲಮನೇಂ ಪಿಸುಣಾಡುತಿರ್ದುದೋ    ೧೦೫

ಡೊಕ್ಕರಮಿಕ್ಕಿ ತಾಯೆನಿಸಿ ಕರ್ಚಿ ಬೆರಲ್ಗೊನೆಯಂ ಧರಾತಲ
ಕ್ಕಿಕ್ಕಿ
ಮರುಳ್ಚಿಣೈಕಟಿಯಕೞ್ತಲೆಗಳ್ಕಿ ಸಡಿಲ್ಚಿ ಕಂದರ
ಕ್ಕಿಕ್ಕಿದ
ಬಾಹುಕತ್ತರಿಗೆ ಬಾಯ್ವಿಡೆ ಕಾಯ್ದು ಪೊರಳ್ದು ಪೋಗೆ ಗಾ
ಯಕ್ಕೊಳಗಾದೊಡಂ
ಮುಱಿಯಲೊಲ್ಲದೆ ಬಿಟ್ಟಱಗಂಡಿವಿಟ್ಟವೋಲ್       ೧೦೬

ವ|| ಅಂದಂ ಕಂಡು ಕಂಸಂ ಪಂದಿಗೆಱಗಿದ ನಾಯಂ ಹೆಕ್ಕಳಿಸುವಂತೆ ತೊಡೆಯ ನಪ್ಪಳಸಿದುಲ್ಲಹಮಲ್ಲದೊಳ್ ಘಟಶೂರಚಾಣೂರವಿಕ್ರಮದಿಂ ಸಮಕರ್ತರಿಯನೆನ್ನಯ್ಯಂ ಕೊಂಡನೆಂದು ಪಡಿಯಿಸಲೊಡನೆ ಸಿಗ್ಗಾಗಿ ಬೇಗಮಾಗಿ ಮನಂಗೆಯ್ದು

ಹರಿಹೊಂಗಿಬಿಟ್ಟು ಮಿಡುಕದೆ
ಶರೀರದೊಳ್
ಕೂಡೆ ಶಕ್ತಿಯಂ ಪೂರಿಸೆ ಸೈ
ತೆರೆಯಂ
ವೇಲ್ವಾಯ್ದಲಗಿನ
ಗರುಡನನಪ್ಪಿದವೊಲಾದನಾ
ಚಾಣೂರಂ     ೧೦೭

ಚಳಕಿ ಚಳವಾಗೆ ಪಾರಂ
ಸೆಳೆವೆಳೆವಂ
ಪಟ್ಟಿ ಸಂಡಿ ಪುಟಪಟ್ಟಿರೆ ಕೆ
ಚ್ಚಳುರ್ದರಿಲೋಹದವೊಲ್
ಕಂ
ತಳಲೋಹಂ
ಕರಗಿ ಕೊರಗಿದಂ ಚಾಣೂರಂ  ೧೦೮

ಒಡೆದುದು ಮುಷ್ಟಿಯಂ ಪಿಡಿದ ಕಯ್ಯತಳಂ ಕಡು ಸೋಂಕು ಸೋಂಕಿ ಮೆ
ಯ್ಯಡಗಡಗಾಯ್ತು
ಡೊಕ್ಕರಿಸಿ ಕಂಸನ ಮಲ್ಲನ ಕಕ್ಷವಕ್ಷದೆ
ಲ್ವುಡಿದುವು
ಪೊಯ್ಯುತುಂ ತುಡುಕಿ ತುಟ್ಟಿಸಿ ಕತ್ತರಿವಾಣಿಯಲ್ಲಿ ಕೆ
ಯ್ದುಡುಕಿದಿವೊಲ್
ಬೆರಲ್ಪಱಿದುವಾ ಹರಿ ಪೂರಿಸೆ ಮೆಯ್ಯ ಶಕ್ತಿಯಂ        ೧೦೯

ಮಸಗದೊಡೆ ತನ್ನ ನೆಲೆಯಂ
ಮಿಸಕದೆ
ಮುನ್ನಿರ್ದ ತೆಱದಿನಿರ್ದುದೆ ಕಡೆಯೊಳ್
ಮಸಗಿದೊಡೋವೋವೇಕ

ಗ್ರಸನಂಗೊಳ್ಳದೆ
ಮಹಾಬ್ಧಿ ಮೂಱುಂ ಜಗಮಂ         ೧೧೦

ನೆಲನುಂ ಜಲನಿಧಿಯುಂ ಸಲೆ
ತಲೆವತ್ತುವ
ತೆಱದಿನಿರ್ದು ಕಡೆಯೊಳ್ ನೆಲನಂ
ಜಲಧಿ
ಕಿಡಿಪಂತೆ ಕಿಡಿಸಿದ
ನಲಸದೆ
ಚಾಣೂರಮಲ್ಲನಂ ಮುರಮಥನಂ  ೧೧೧

ಬಿನ್ನಾಣಂ ಬಿನ್ನಗಾಯ್ತೆನ್ನಳವಳವೞಿದತ್ತೆನ್ನ ಬಲ್ಪೆಯ್ದೆ ಮೆಲ್ಪಾ
ಯ್ತೆನ್ನಣ್ಮಿಂತಣ್ಮಿತಾಯ್ತಂ
ನಿಮಗೆಮಗಿದುನ್ನೋಜೆ ಕಟ್ಟೋಜೆಯಾಯ್ತಾ
ನಿನ್ನೇವೆಂ
ಸಾವೆನೆಂಬಂತಿರೆ ಬಳಲಿಸಿ ಚಾಣೂರನಂ ಭೂತಳಕ್ಕಂ
ಬನ್ನಕ್ಕಂ
ತಂದು ತಂದಂ ರಿಪುನೃಪನ ಮನಕ್ಕಂದು ಕುಂದಂ ಮುಕುಂದಂ ೧೧೨

ವ|| ಆಗಳ್ಮುಷ್ಟಿಕಂ ಮುಷ್ಟಿಗೊಂಡು ಮುನಿದು ಮೇಲ್ವಾಯಲೊಡನೆ

ಎರಡುಂ ಕಯ್ಯಿಂ ಕೊಂಡಿ
ರ್ವರುಮಂ
ಬೊಂಬೆಗಳನಾಡಿಪವನವೊಲವನೀ
ರ್ವರ
ತಲೆಯಂ ತಾಟಿಸಿದಂ
ಬಿರಿವಿನೆಗಂ
ತಾಳಕಾಯ್ಗಳಂ ತಾಟಿಪವೋಲ್ ೧೧೩

ವ|| ಅಂತು ತಾಟಿಸಿ ಮಲ್ಲರಂಗದೊಳ್ ಪೂವಲಿಗೆದಱಿದಂತೆ ಮಸ್ತಿಷ್ಕಮೆತ್ತಲುಂ ಸೊಸೆ ಕುಂಕುಮರಸದಿಂ ಜೀರ್ಕೊೞವಿಯನೊತ್ತಿದಂತೆ ಮೂಗಿಂ ಬಾಯಿಂ ಬಿಸುನೆತ್ತರುಚ್ಚಳಿಸಿ ಸೂಸೆ ಬಿಸುಬಿಸುವೊಯ್ದು ಚಾಣೂರನ ಮುಷ್ಟಿಕನ ಪೆಣದ ಪೊಣರನಿಪ್ಪುರಿಗೂಡೆ ಕಂಡು ಕೆಳರ್ದು ಧೀರೋದ್ಧತ ದುಂದುಭಿಧ್ವಾನಮಹೀಧರ ದುರ್ಧರ ಮಹಾಕಾಳ ಪ್ರಳಯಕಾಳ ಕೋಳಾಹಳ ತಾಳ ಜಂಘತಳ ಪ್ರಹಾರಿ ವಜ್ರಮುಷ್ಟಿ ಮೊದಲಾಗೆ ಪೂಸಿದ ಸಿಂಧುರಮುಂ ಬೀಸುವ ಬಾಲಗಚ್ಚೆಯುಂ ಬೆರಸು

ತೆರ್ಕೆಯೊಳುಲಿದೆಯ್ತಂದು ಪೊ
ಣರ್ಕೆಗೆ
ಮೇಲ್ವಾಯೆ ಮುಸುಱಿ ಮಲ್ಲ ಸಹಸ್ರಂ
ಮರ್ಕಟಕಟಕಂ
ಮುತ್ತಿದ
ಳುರ್ಕೆಯ
ನೀಳಾಚಲಂಬೊಳಿರ್ದಂ ಕೃಷ್ಣಂ    ೧೧೪

ವ|| ಅಂತು ಮುಂತಣ ಶೂಲಮನೇಱುವಂತೇಱಿದ ಮಲ್ಲರ ಮೆಯ್ಗಳೆಲ್ಲಂ ಮುಱಿದು ನುರ್ಗುನುರ್ಗಾಗೆ ಮಲ್ಲಲಂಘನಂಗೆಯ್ದು

ಭ್ರಮಿರಿಗುಡೆ ಕೃಷ್ಣನಾ ಸಂ
ಭ್ರಮದಿಂ
ಮತ್ತಿರ್ದ ಮಲ್ಲರೆಂಟುಂ ದೆಸೆಗಂ
ದಮರಿಸಿದ
ಮದಸ್ತಂಭೇ
ರಮದಿಂದುದಿರ್ವಂತಿರುದಿರ್ದು
ಪಱಿವಱಿಯಾದರ್    ೧೧೫

ಗುರುಭುಜದಂಡಿದ್ವಯದೊಳ್
ತಿರಿತರೆ
ಪತ್ತಿರ್ದ ಮಲ್ಲರುಲ್ಲಸಿತಾಕ್ಷಂ
ಹರಿಜಕ್ಕಮದೊಳಲಿಯನನು

ಕರಿಸಿರ್ದಂ
ಬಹಳ ಬಾಹುಚಾಳನ ಗತಿಯೊಳ್          ೧೧೬

ವ|| ಮತ್ತಂ ಪತ್ತಿ ಬಿಡದ ಮಲ್ಲರನಾನೆ ಮೆಟ್ಟಿದುದೆ ಸಂತೆಂಬಂತಾವೆಡೆಯಂ ಪಿಡಿದೊಡಂ ಪಿಡಿದೆಡೆಯೆ ಗಾಯಮಾಗೆ ಬಳೆಯ ಪೇಱನಾನೆ ಮೆಟ್ಟಿದಂತೆಲುವೆಲ್ಲಂ ನುರ್ಗುನುರ್ಗಾಗೆ ಮೆಯ್ಯ ತೊವಲಾಗೆ ಸಡಿಯೋಡುಗಳಂ ತೀವಿದವಲ ಬೇರಂಗಳ ನೀಡಾಡುವಂತೀಡಾಡಿದ ಚಾಣೂರ ಮಥನದ ಮೇಲೆಯಗಸ್ತ್ಯದ ಮೇಲೆ ಕವಿದ ಕಡಲಂತೆ ಕವಿವ ಕಂಸನ ಚಾತುರ್ವಲಮಂ ಬಲದೇವನುಂ ವಸುದೇವನುಂ ಕಂಡು ತಮ್ಮ ಬಲಮಂ ಕೈವೀಸೆ ಪೆಣಮಯಂ ಮಾಡೆ ನೆತ್ತರುಗಡಲಂ ಪರಿಯಿಸೆ ಕಟ್ಟೇವಮುಂ ಕಡುಮುಳಿಸುಮಳವಿಗೞಿಯೆ ಸಿಗ್ಗಾಗಿ ಸೈರಿಸಲಾಱದೆ ಅಭಿನವ ನಾರಸಿಂಹಾಡಂಬರ ಮಗುರ್ವುಮದ್ಭುತಮುಮಾಗೆ

ಮಾಡದ ಕಂಭಮಂ ಮಲಗಿನೊಳ್ಪರಿಪಾಯ್ದು ನೆಲಕ್ಕೆ ಬಾಳನ
ಲ್ಲಾಡೆ
ನೆಗಪ್ಪಿಕೊಂಡು ತೊಡೆಗಾ ನರಸಿಂಹನವುಂಕಿ ಕಂಭದಿಂ
ಮಾಡಿದ
ಕಾಳರಕ್ಕಸನನಿಕ್ಕುವವೋಲ್ ನಖದಿಂ ಕರುಳ್ಗಳಂ
ತೋಡಿ
ಪಿಸುಳ್ದು ಸೀೞ್ದು ಬಿಸುಟಂ ಕಲಿಕಂಸನನಬ್ಜಲೋಚನಂ   ೧೧೭

ವ|| ಅಂತು ಸೀೞ್ದೀಡಾಡೆಯುಮದಂ ಕೈಕೊಳ್ಳದೆ ಕೊಳ್ಳೆನಾರ್ದು ಮುರಿದೆರ್ದು ಖೇಟಕದಿಂ ಕರುಳಂ ತರ್ಕ್ಕೈಸಿ ಕತ್ತಿಗೆಯನೆತ್ತಿ ಮೇಲ್ವಾಯ್ದು ಪೊಯ್ವ ಕಂಸನ ಕಲಿತನಕ್ಕೆ ಕೌತುಕಂಬಟ್ಟು ಕಡಿತಲೆಯನೆಡದ ಕಯ್ಯೊಳ್ಪಿಡಿದು ತಱಗೆಲೆಯ ನೊರಸುವಂತೊರಸಿ ಬಿಸುಟು

ಕೆಡೆ ಕೆಡೆಯೆಂದರಮಗನೊದೆ
ದೆಡಗಾಲೊಳ್
ತೊಡರ್ದು ಕರುಳೊಳೇನಿರ್ದಂ
ರ್ದಡಿಗಂ
ಗೋವಳನಿಕ್ಕಿದ
ತೊಡರೊಳ್
ಮಿಗೆ ಕೋದೆೞಲ್ವ ಪಾಪೆಯ ತೆಱದಿಂ     ೧೧೮

ಕ್ಷಿತಿಗೊರ್ವನೆ ದುರ್ಜನನೊಂ
ದತಿವೇಗದೆ
ಸತ್ತು ಮಾಡುವುಪಕಾರಮನ
ಪ್ರತಿಮರ್
ಸಜ್ಜನರಾಚಂ
ದ್ರತಾರಕಂ
ಬರ್ದು ಮಾಡಲೇನಾರ್ತಪರೇ    ೧೧೯

ವ|| ಅಂತು ಮಲ್ಲಾಮಲ್ಲಿಯಾಗಿ ಪೋರ್ದ ಮಲ್ಲರಂ ಮೇಲ್ವಾಯ್ದು ಕಂಸನುಮಂ ಕೃಷ್ಣನೊಂದೆ ಕಯ್ಯೊಳೆ ಕಯ್ಯಕೂಸನಿಕ್ಕುವಂತಿಕ್ಕಲೊಡನೆ

ಅನಿಮೇಷಾಂಬೋಧಮುಕ್ತಂ ಸುರಿದುದಲರನಟ್ಟೇೞು ಬಾನ್ವಟ್ಟೆಯುಂ ಕೃ
ಷ್ಣನ
ಮೇಗೋರಂತೆ ಭೃಂಗವ್ಯತಿಕೃತ ಸುಮನೋ ರೇಣು ಗೀರ್ವಾಣ ಬಾಣಾ
ಸನರಮ್ಯಂ
ಚೈತ್ರತೂರ್ಯಸ್ತನಿತಮುಖರಿತಂ ಮಾಕರಂದಾರ್ದ್ರಧಾರಾ
ತನುಬಂಧೂಕೇಂದ್ರಗೋಪಂ
ವಿಚಕಿಳಕುಳ ಮೇಘೋಪಳಾಸಾರ ಸಾರಂ ೧೨೦

ಮಧುಮಾಯಾ ಮಥನಂ ಸಮುದ್ಧೃತ ಮಹಾಗೋತ್ರಂ ಗುಣೋದ್ಧಾಮ
ರ್ಮ
ಧರಾ ಕಂಟಕ ಕೈಟಭಾಪಹರಣಂ ವಾಚಾಳ ಚಾಣೂರ ವಾ
ರಿಧಿ
ಸಂಶೋಷಣ ಬಾಡಬಾಗ್ನಿ ಕಲಿಕಂಸಧ್ವಂಸಕಂ ತಾಳ್ದಿದಂ
ಕದನಕ್ರೀಡೆಯನಾಡಿ
ನಿತ್ಯಜಯಮಂ ಶ್ರೀ ವೀರನಾರಾಯಣಂ   ||೧೨೧||

ಇದು ಮೃದುಪದಬಂಧ ಬಂಧುರ ಸರಸ್ವತೀ ಸೌಭಾಗ್ಯ ವ್ಯಂಗ್ಯಭಂಗಿನಿಧಾನ ದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೇಮಿಚಂದ್ರಕೃತಮುಂ ಶ್ರೀಮತ್ಪ್ರತಾಪ ಚಕ್ರವರ್ತಿ ವೀರಬಲ್ಲಾಳದೇವ ಪ್ರಸಾದಾಸಾದಿತ ಮಹಾಪ್ರಧಾನ ಸೆಜ್ಜೆವಳ್ಳ ಪದ್ಮನಾಭದೇವ ಕಾರಿತಮುಮಪ್ಪ ನೇಮಿನಾಥಪುರಾಣದೊಳ್

ಅಷ್ಟಮಾಶ್ವಾಸಂ

ಸಮಾಪ್ತಂ

ಅರ್ಧನೇಮಿಪುರಾಣಂ ಸಮಾಪ್ತಂ