(ಮೊದಲನೆಯದು ಆಶ್ವಾಸ ಸಂಖ್ಯೆ, ಎರಡನೆಯ ಪದ್ಯ ಸಂಖ್ಯೆ, ಗ ಎಂದರೆ ಗದ್ಯ)


ಅಗಡು ೨ – ೯೩ ಗ ಒರಟು, ಕ್ರೂರ
ಅಗಿದು ೪ – ೧೪೫, ೧೦ – ೮೦, ೧೪ – ೭೫ ಗ ಅಂಜಿ
ಅಗಿವಿನಂ ೧ – ೩೪ ಅಂಜುವಂತೆ
ಅಗುರ್ವಿಸು ೧ – ಅಂಜಿಸು
ಅಗೆ ೯ – ೫೨ ಗೆ ಮೊಳಕೆ
ಅಗ್ಗಳಿಸು ೧ – ೯೬ ಹೆಚ್ಚಾಗು
ಅಘಜನ ೧೪ – ೫೦ ಪಾಪಿಗಳು
ಅಘಜಾಳ ೩ – ೮೧ ಪಾಪರಾಶಿ
ಅಚ್ಚನೆ ೧೦ – ೬೮ ಸ್ವಚ್ಛ, ತಿಳಿ
ಅಚ್ಚವೆಳಗು ೭ – ೬ ಸ್ಚಚ್ಛವಾದ ಬೆಳಕು
ಅಚ್ಚಿ ೬ – ೮೦ ಕಣ್ಣು (ಅಕ್ಷಿಸಂ)
ಅಚ್ಚಿಗಂ ೧೦ – ೬೮, ೧೦ – ೮೫ ವ್ಯಥೆ
ಅಚ್ಚಿದಳ್ ೧೨ – ೬೩ ಹಚ್ಚಿದಳು
ಅಚ್ಛಾಂಬು ೫ – ೫೪ ಶುದ್ಧವಾದ ನೀರು
ಅಜಾಂಡ ೩ – ೫೮ ಬ್ರಹ್ಮಾಂಡ
ಅಜಿತ ೧ – ೯೪ ಗೆಲ್ಲಲಾಗದ
ಅಟ್ಟಳೆ ೭ – ೫ ಅಟ್ಟಾಲಕ, ಬುರುಜು
ಅಟ್ಟುಂಬುರಿ ೨ – ೧೧೬ ಉಡುಗೊರೆ, ಅಟ್ಟಿಸಿಕೊಂಡುಹೋಗು
ಅಡಪ ೧೪ – ೯೧ ಅಡಿಕೆಲೆ ಭರಣಿ
ಅಡ್ಡವಣೆ ೩ – ೨೦ ಗೆ ಅಡ್ಡಹಲಗೆ, ಮಣೆ
ಅಣಂ ೫ – ೯ ಸ್ವಲ್ಪ
ಅಣಲ್ ೨ – ೬೧, ೬ – ೧೪ ಗ ದವಡೆ
ಅಣುಗು ೧೦ – ೨ ಗ ಪ್ರೀತಿಯ
ಅಣ್ಕೆ ೧೧ – ೫ ಲೇಪಿನ, ಅಣ್ಪು
ಅಣ್ಪು ೯ – ೧೨೭, ೧೧ – ೩ ವಿಲೇಪನ, ಗಂಧ
ಅತನು ೧ – ೧ ಮನ್ಮಥ
ಅತಮ ೧ – ೮೯ ಗ ತಮಸ್ಸು ಇಲ್ಲದವನು
ಅತ್ಯಯ ೯ – ೮೪ ಕಳೆದುಹೋಗುವುದು
ಅದಿರ್ಮುತ್ತೆ ೯ – ೬೨ ಮಲ್ಲಿಗೆ
ಅನಲವನಿತೆ ೧೪ – ೩೩ ಗ ಅಗ್ನಿಯ ಹೆಂಡತಿ, ಸ್ವಾಹಾದೇವಿ
ಅನಾರತ ೧ – ೭೬ ಎಡೆಬಿಡದ
ಅಪಚಯ ೧೧ – ೬ ಸಂಗ್ರಹಣ
ಅಪಚಿತಪ್ರಭರ್ ೩ – ೨೦ ಗ ತಗ್ಗಿದ ಪ್ರಭೆಯುಳ್ಳವರು
ಅಪನೋದನ ೧ – ೧ ಕಳೆಯುವುದು, ಹೋಗಲಾಡಿಸುವಿಕೆ
ಅಪಶದರ್ ೧ – ೨೭ ಬಾಹಿರರು
ಅಪಾಂಗ ೭ – ೧೪ ಕಡೆಗಣ್ಣ ನೋಟ
ಅಪ್ಪು ಕಣ ೮ – ೮೧ ನೀರಿನಹನಿಗಳು
ಅಭಿಜಾತ ೧೧ – ೧ ಶ್ರೇಷ್ಠ, ಕುಲೀನ
ಅಬ್ಜಿನಿ ೩ – ೪೮ ಕಮಲಿನಿ
ಅಭಿಷವ ೧೪ – ೨ ಅಭಿಷೇಕ
ಅಭ್ಯವಹಾರ ೫ – ೬೫ ಆಹಾರ
ಅಭ್ರ ೬ – ೧೧೦ ಮೇಘ
ಅಮರ್ಕೆ ೧ – ೮೩ ಜೋಡಣೆ
ಅಮರೀ ೪ – ೧೩೯ ದೇವತೆ
ಅಮರೀ ಲಾಸ್ಯ ೪ – ೮೫ ದೇವಸ್ತ್ರೀನಾಟ್ಯ
ಅಮೃತದ್ಯುರ್ತಿ – ೭೪ ಚಂದ್ರ
ಅಂಗರಾಗ ೧೪ – ೧೫ ಗಂಧ, ವಿಲೇಪನ
ಅಂಗಿಕೆ ೧೦ – ೯೭ ಗ ಕವಚ
ಅಂಬಕ ೨ – ೫೪ ಕಣ್ಣು
ಅಂಬರಮಣಿ ೧೦ – ೨೦ ಸೂರ್ಯ
ಅರಮೆ ೧೦ – ೫೯ ಅರೆ
ಅರಿದು ೭ – ೧೩ ಅಸಾಧ್ಯ
ಅರುಣಾಶ್ಮ ೬ – ೧೮ ಕೆಂಪುಕಲ್ಲು, ಮಾಣಿಕ್ಯ
ಅರೆವೆಸ ೧೧ – ೭೦ ಅರೆಗೆಲಸ
ಅರ್ಣವ ೮ – ೯೧ ಸಮುದ್ರ
ಅರ್ಣವರ್ತಿರ್ಣ ೯ – ೧೩೯ ಸಮುದ್ರ ದಾಟಿದವನು
ಅಲಗಣಸು ೨ – ೬೫ ಗ ಅಸಮಾಧಾನ, ಅಪ್ರೀತಿ
ಅಲತಗೆ ೩ – ೨೬, ೮ – ೮೦ ಗ ೧೪ – ೫೧ ಗೋರಂಟೆ
ಅಲರ್ಗಣ್ ೨ – ೬೫ ಹೂವಿನಂಥ ಕಣ್ಣು (ಅರಳಿದ)
ಅಲರ್ಚು ೧೩ – ೧೩೦ ಅರಳಿಸು
ಅಲರ್ವುದು ೧ – ೧೦೯ ಸಂತೋಷಿಸುವುದು
ಅಲರಂಬು ೧ – ೭೫ ಪುಷ್ಪಬಾಣ
ಅಲೆಪು ೨ – ೬೫ ಬಾಧೆ, ಶಾಖ
ಅಲರ್ವಸೆ ೧ – ೧೪೪ ಹೂವಿನಹಾಸಿಗೆ
ಅಲ್ಲ ೫ – ೬೨ ಹಸಿಶುಂಠಿ
ಅಲಾಬೂ ೫ – ೮೦ ಸೋರೆ
ಅಲಾಬೂ ಫಲ ೧೨ – ೨೭ ಸೋರೆಕಾಯಿ
ಅವಕ್ಕನೆ ೨ – ೭೪ ತಟಕ್ಕನೆ
ಅವಗಾಹ ೬ – ೬೦ ಸ್ನಾನ
ಅವಗೈಸು ೧೧ – ೬೧ ಅವಗ್ರಹಿಸು
ಅವಗಂಧ ೧ – ೬ ಕೆಟ್ಟವಾಸನೆ
ಅವಚತ್ತವೊಲ್ ೨ – ೮೨ ಬೇಸತ್ತಹಾಗೆ
ಅವಟಿಯಿಸು ೬ – ೫೩ ಕಾಣಿಸಿಕೊಳ್ಳುವ, ಪ್ರತ್ಯಕ್ಷವಾಗು
ಅವಲೀಢ ೧೧ – ೬ ಗ ಸೋಲಿಸಲ್ಪಟ್ಟ
ಅಸಕಲಿತ ೧೧ – ೪೨ ಗ ಕೈಮೀರಿದ
ಅಸಕಳಿ ೨ – ೧೩೪ ಗ, ೧ – ೯೩, ೧೪ – ೧೨೮, ಮೇರೆ ಮೀರು
ಅಸದಳ ೨ – ೧೮ ಅಸಾಧ್ಯ
ಅಸಮಾಸ್ತ್ರ ೫ – ೧೪ ಮನ್ಮಥ
ಅಸವಸ ೩ – ೬೬, ೯ – ೧೨೦ ಆತುರ
ಅಸಿ ೨ – ೧೦೧ ಕತ್ತಿ
ಅಸಿಯಳ್ ೪ – ೯, ೯ – ೧೨೫ ಕೃಶಾಂಗಿ, ಸುಂದರಿ
ಅಸುಕೆ ೩ – ೩೮, ೪ – ೮೯, ೪ – ೭೬ ಅಶೋಕ
ಅಸುಗೆ ೧೧ – ೧೧ ಅಶೋಕ
ಅಸ್ತವ್ಯಸ್ತ ೧ – ೨೨ ಚೆದರಿದ, ಅವ್ಯವಸ್ಥಿತ
ಅಳೞ್ ೬ – ೬ ಭಯಪಡು
ಅಳವಿ ೪ – ೩, ೭ – ೧೦೯ ಸಾಮರ್ಥ್ಯ
ಅಳವಿಗೞೆ ೧೧ – ೪೨ ಗ ಮೇರೆ ಮೀರು, ಶಕ್ತಿ ಮೀರು
ಅಳವು ೧ – ೧೧ ಸಾಮರ್ಥ್ಯ ಶಕ್ತಿ
ಅಳಸು ೩ – ೧೯, ೫ – ೭೨ ಗ, ೬ – ೧೦೪ ಸುರತ ಧ್ವನಿ
ಅಳಿಕ ೧ – ೬೭ ಕಪಟ
ಅಳಿಪು ೩ – ೨೦ ಗ, ೭ – ೮೧ ಆಸೆ
ಅಳುಂಬಂ ೭ – ೧೧೬, ೬ – ೧೧೮ ಗ ಆಧಿಕ್ಯ, ಹೆಚ್ಚಳ
ಅಳುರ್ ೧ – ೮೫ ಆವರಿಸು ೧೦ – ೯೭ (ಗ)
ಅಳುರ್ದು ೩ – ೭೮ ಗ ವ್ಯಾಪಿಸಿ
ಅಳುರ್ದುದು ೧೧ – ೩೦ ವ್ಯಾಪಿಸಿತು
ಅಳುರ್ವ ೧೦ – ೮೮ ವ್ಯಾಪಿಸುವ
ಅಳ್ವಿಕೊಳ್ವ ೧೨ – ೩೭ ಮುನ್ನುಗ್ಗಿ ಕೊಳ್ಳುವ
ಅಳ್ಳೇಱು ೧೦ – ೯೨ ಸ್ವಲ್ಪವಾದ ಗಾಯ
ಅೞಲ್ ೧೪ – ೮೬ ಗ ದುಂಖಿಸು
ಅೞೆಗಂಡ ೨ – ೬೨ ಕಾಪುರುಷ, ನೀಚನಾದ ಗಂಡಸು,
ಅೞೆವಗೆ ೧೪ – ೪೭ಗ ನೀಚ ಆಲೋಚನೆ
ಅೞುಂಬಂ ೧೧ – ೩೬ ಅಧಿಕ
ಅೞ್ಕಮೆ ೭ – ೧೬ ಕೊರತೆ, ಅಜೀರ್ಣ
ಅೞ್ತೆ ೨ – ೧೧೨ ಪ್ರೀತಿ
ಅೞ್ತೆವಡು ೩ – ೧೯ ಪ್ರೀತಿಹೊಂದು, ಆಸೆಪಡು
ಅೞ್ವೆ ೯ – ೧೩೦ ಸುಡಲು
ಅಱೆಕಿಡು ೬ – ೧೧೬ ಧರ್ಮಕ್ಕೆ ಇಡು
ಅೞಪ ೧೪ – ೬೨ ಹುಡುಕುವ
ಅಱವಟ್ಟಿಗೆ ೬ – ೧೧೬ ಧರ್ಮಾರ್ಥವಾಗಿ ಪಾನೀಯ ಕೊಡುವ ಸ್ಥಳ

ಆಕುಂಚಿತ ೯ – ೨೫ ಸಂಕುಚಿತ
ಆಟವಿಟಂಬರಿಸು ೯ – ೧೧೨ ಗಾಯಗೊಳಿಸಿ
ಆತಪತ್ರ ೭ – ೮ ಛತ್ರಿ, ಕೊಡೆ
ಆತ್ಮಗುಪ್ತಿ ೫ – ೮೦ ನಸುಗುನ್ನಿ
ಆಭೋಗ ೧೩ – ೧೪೮ ಪೂರ್ಣತೆ
ಆಮೋದ ೧೦ – ೮೭ ಪರಿಮಳ
ಆಯತ ೧ – ೩ ದೀರ್ಘ
ಆಯಾತ ೨ – ೪೮ ಗ ಬಂದ
ಆರಡಿಗೊಳ್ ೧೪ – ೪೦ ಅಪಯಶಕ್ಕೀಡಾಗು
ಆಲಿನೀರ್ ೩ – ೮೧ ಆಲಿಕಲ್ಲು ಕರಗಿದ ನೀರು
ಆಶ್ಲೇಷ ೧೦ – ೯೫, ೧೪ – ೯೩ ಆಲಿಂಗನ
ಆಶ್ಮಾಂತಿಕ ೧೧ – ೩೩ ಕಲ್ಲಿನಪಕ್ಕ
ಆಸವ ೯ – ೧೧೭ ಮದ್ಯ, ಮಧು
ಆಸಾರ ೧೧ – ೪೨ ಗ ವೃಷ್ಟಿ, ಮಳೆ
ಆಳವಾಳ ೬ – ೧೨೨ ಪಾತಿ
ಆಳಗೊಳ್ ೧ – ೩೯ ಸ್ನೇಹಮಾಡಿಕೊ
ಆಳೀಜನ ೧೧ – ೪೦ ಸಖಿಯರು
ಆೞ್ ೬ – ೯೨ ಮುೞುಗು
ಆಂಕೆ ೬ – ೮೮ ಹಿಡಿತ
ಆಂಕೆಗೊಡು ೪ – ೬೬ (ಗ) ಹಿಡಿತಕ್ಕೆ ಒಳಪಡು

ಇಕ್ಕೆದಾಣ ೩ – ೪೮ ಗ ಇರುವ ಸ್ಥಳ , ನಿವಾಸ
ಇಟ್ಟಳಂ ೧೩ – ೧೫೮ ದಟ್ಟವಾಗಿ, ಸಂದಣಿ
ಇರಿ ೫ – ೧೦೭ ಧಾರೆ
ಇೞುಂಬು ೬ – ೧೬ ಗ ಇಕ್ಕಟ್ಟಾದ ಸ್ಥಳ
ಇೞೆದು ೫ – ೭ ಸಾಮಾನ್ಯ, ಸ್ವಲ್ಪ
ಇೞೆದುಮಾಡು ೧೨ – ೮ ಗ ಕೀಳುಮಾಡು
ಇರ್ಪು ೬ – ೪೦, ೬ – ೯೪ ತೇವ
ಇೞ್ಕುಳಿಗೊಳ್ ೪ – ೧೨೩ ವಶಪಡಿಸಿಕೊ, ಆಕರ್ಷಿಸು
ಇಷು ೭ – ೮೩ ಬಾಣ
ಇಂದೀವರ ೧೦ – ೩ ಕನ್ನೈದಿಲೆ
ಇಂದೂಪಳ ೧೧ – ೫೮ ಚಂದ್ರಕಾಂತಶಿಲೆ
ಇಂದೊಱಿ ೭ – ೫೬ ಗ ಇನಿದಾದತೊಱು
ಇಂದ್ರಗೋಪಂ ೧೧ – ೫೬ ಗ ಮಿಂಚುಹುಳು
ಇಂದ್ರಾಶಾಕರಿ ೧೪ – ೧ ಪೂರ್ವದಿಕ್ಕಿನ ದಿಗ್ಗಜ
ಇಂಬು ೩ – ೫ ಆವಾಸ, ಆಶ್ರಯ
ಇಂಬುವೋಯ್ತು ೩ – ೫ ತನ್ನನೆಲೆಗೆ ಹೋಯಿತು

ಈರಳ್ಳೆ ೬ – ೧೬ ಗ ಎರಡುಪಕ್ಕೆ, ಅಳ್ಳೆ
ಈರಿದುವು ೯ – ೧೧೬ ಬೀಸಿದುವು
ಈಷತ್ ೩ – ೭೫ ಸ್ವಲ್ಪ
ಈಷದುನ್ಮಿಷಿತ ೪ – ೫೭ ಕೊಂಚ ಅರಳಿದ

ಉಚ್ಚ ೭ – ೬ ಎತ್ತರವಾದ
ಉಜ್ಜವಣೆ ೪ – ೨೯ ಉದ್ಯಾಪನೆ ಸಂ
ಉಜ್ಜಳಿಕೆ ೨ – ೨೪ ಪ್ರಕಾಶ
ಉಜ್ಜಳಿಸು ೧೧ – ೩ ಪ್ರಕಾಶಿಸು, ಹೊಳೆ
ಉತ್ಪಲ ೫ – ೪೩ ನೈದಿಲೆ
ಉತ್ಪಾರದ ೧೪ – ೧೦ ಹೆಚ್ಚಾರ ಪಾದರಸ
ಉದ್ಗತೋಷ್ಮ ೧೪ – ೧೭ ಹೊರಹೊಮ್ಮಿದ ಉಮ್ಮಳ
ಉದ್ಗ್ರೀವ ೪ – ೮೬ ಗ ಎತ್ತಿದ ಕೊರಳು
ಉದ್ಯತ್ ೧೪ – ೯೩ ದೊಡ್ಡದಾದ
ಉರ್ದೆ ೮ – ೪೫ ಉಜ್ಜಲು
ಉದ್ವರ್ತ ೭ – ೮೪ ಅಂಗರಾಗ
ಉನ್ಮೋಟಿತ ೬ – ೧೭ ವಿಶೇಷವಾಗಿ ಹೊಡೆಯಲ್ಪಟ್ಟ
ಉಪತ್ಯಕ ೭ – ೧೧೭ ತಪ್ಪಲು ಪ್ರದೇಶ
ಉಪಲ ೧ – ೭೦, ೪ – ೧೬ ಗ ಶಿಲೆ
ಉಪ್ಪಳ ೭ – ೧೦೮, ೯ – ೮೬ ಉತ್ವಲ
ಉಪಾಲಂಭ ೪ – ೫೮ ದೂಷಣೆಮ, ನಿಂದನೆ, ಬೈಗಳು
ಉಬ್ಬಿನಮ್ ೧ – ೬೨ ಶ್ರೇಷ್ಠ, ಹಿರಿದು
ಉರುಪು ೩ – ೫೬ ಉರಿಸು, ಸುಡು
ಉರ್ವೀಜ ೧ – ೭೧ ವೃಕ್ಷ
ಉಱದೆ ೧ – ೯ ಲಕ್ಷ್ಯಮಾಡದೆ
ಉಲ್ಲಟಿಸು ೧ – ೬೧ ತಲೆಕೆಳಕುಮಾಡು
ಉಲ್ಮುಕ ೯ – ೯ ಕೊಳ್ಳಿ
ಉಳ್ವಂತಿರೆ ೧೨ – ೩೨ ಉಳುವ ಹಾಗೆ
ಉಂಡಿಗೆ ೧೦ – ೯೪ ಮುದ್ರೆ

ಊದು ೧ – ೧೯ ಬೀಸು
ಊರ್ಮಿ ೪ – ೬ ಅಲೆ
ಊರಿಚ ೨ – ೧೧೯ ಗ್ರಾಮೀಣ, ಅಸಂಸ್ಕೃತ
ಊಱುವರ್ ೧೪ – ೧೧೫ ಬಾಗಿಸುವರು
ಊೞು ೧ – ೪೦ ಅರಚು, ನರಿಯಂತೆ ಕೂಗು

ಎಕ್ಕಟೆ ೧೪ – ೨೬ ಏಕಾಂತ, ರಹಸ್ಯ
ಎಕ್ಕವಡ ೧೦ – ೯೭ ಗ ಎಕ್ಕಡ, ಚಪ್ಪಲಿ
ಎಡೆಗಿಱೆದ ೧೧ – ೪೨ ಗ ಮುಚ್ಚಿದ
ಎಡೆದೆಱಪು ೭ – ೪ ನಡುವಣ ಅವಕಾಶ
ಎಡೆಯಾಡು ೧೧ – ೫೪ ಗ ಓಡಾಡು ಸಂಚರಿಸು
ಎಡ್ಡಂ ೬ – ೫೧ ಸುಂದರ
ಎಣೆವಕ್ಕಿ ೬ – ೧೧೨ ಚಕ್ರವಾಕಪಕ್ಷ,
ಎದೆಗುದಿಪ ೧೧ – ೪೮ ಹೃದಯವೇದನೆ
ಎಮೆ ೪ – ೧೧ ರೆಪ್ಪೆ
ಎಮದುಱುಗಲ್ ೧೦ – ೮೧(ಗ) ಒತ್ತಾದ ಕೂದಲುಳ್ಳ ಕಣ್ಣು ರೆಪ್ಪೆ
ಎರೆ ೨ – ೫೫ ಪ್ರಾರ್ಥಿಸು
ಎರವನ್ ೬ – ೫೮ ಬೇಡುವವ
ಎಱಂಕೆ ೮ – ೧೧೬ ರೆಕ್ಕೆ
ಎೞಲೆವಿಟ್ಟಂತೆ ೧೧ – ೫೬ ಗ ಜೋತುಬಿಟ್ಟಂತೆ
ಎೞೆವಟ್ಟು ೫ – ೧೦೮ ಗ ಆಶ್ರಯ
ಎಲವ ೧ – ೪೧ ಬೂರುಗದಗಿಡ
ಎಸಕ ೪ – ೨೯ ತೇಜಸ್ಸು
ಎಸಪಂ ೧೦ – ೧೭ ನಡೆಸುವನ, ಸಾರಥಿ
ಎಳವಿ ೧೪ – ೧೦೫ ಗ ಸರಿಪಡಿಸಿ
ಎಳವೇಟೆ ೧೪ – ೩೫ ಪ್ರೇಮಾಂಕುರ
ಎೞಲೆ ೧ – ೧೧೮ ಜೋಲಾಡುವಂತೆ
ಎೞಲಿಕ್ಕು ೬ – ೧೧೫ ನೇತುಹಾಕು
ಎಂತುಗೆ ೧೪ – ೬೦ ಹೇಗೆ

ಏಗೊಂಡಳ್ ೧೪ – ೪೭ ಒಪ್ಪಿಕೊಂಡಳು
ಏಣ ೧ – ೭೪ ಜಿಂಕೆ
ಏಣಿ ೧೪ – ೭೧ ಹೆಣ್ಣು ಜಿಂಕೆ
ಏಣೀದೃಶೆ ೮ – ೩೩ ಜಿಂಕೆಯಂಥ ಕಣ್ಣುಳ್ಳವಳು

ಐಕಿಲ್ ೯ – ೬ ಹಿಮ
ಐಂದ್ರೀನಾರಿ ೬ – ೯೦ ಪೂರ್ವದಿಗಂಗನೆ

ಒಟ್ಟೈಪ ೩ – ೮೪ ಆಕ್ರಮಿಸುವ
ಒಡ್ಡಣ ೭ – ೭, ೧೧ – ೮೫ ಗ ಸೈನ್ಯ; ಪರಿವಾರ
ಒತ್ತಂಬ ೪ – ೧೯ ಒತ್ತಾಯ; ಬಲಾತ್ಕಾರ
ಒನಕೆನಾಡು ೨ – ೪೧ ಕುಟ್ಟುವಾಗ ಹೇಳುವ ಹಾಡು
ಒನಲು ೩ – ೭೮ ಗ ಸಿಟ್ಟಾಗಿ ತಿರಸ್ಕರಿಸು
ಒಪ್ಪಂಗಿಡು ೧೪ – ೫೩ ಕಾಂತಿಹೀನವಾಗು
ಒಮ್ಮುಕ್ಕುಳ್ ೧೪ – ೧೦೪ ಒಂದು ತುತ್ತು
ಒಯ್ಕನೆ ೪ – ೧೦ ಕ್ರಮವಾಗಿ, ನೆಟ್ಟಗೆ
ಒಱತೆ ೬ – ೪೩ ಚಿಲುಮೆ
ಒಱಲ್ದು ೧೦ – ೫೦ ಗ ಪ್ರೀತಿಸಿ
ಒಳವಗೆ ೪ – ೪೪ ಒಳಗಿನ ಹಗೆ, (ಅರಿಷಡ್ವರ್ಗ)
ಒಳ್ಳೆ ೧ – ೪೧ ಡುಂಡುಭ, ನೀರಹಾವು

ಓಗರ ೫ – ೬೭ ಅನ್ನ
ಓಜೆ ೨ – ೩೧ ಕ್ರಮ
ಓತರು ೧ – ೮೨ ಒಲದಿವರು, ಪ್ರೀತಿಯವರು
ಓಪಳ್ ೨ – ೪೭ ಪ್ರಿಯೆ
ಓಳಿ ೧ – ೧೩ ಸಾಲು, ಸಮೂಹ

ಕಕುಭ ೨ – ೩೦ ವೀಣೆಯ ಕುಂಬಳಕಾಯಿ (ಬುರುಡೆ)
ಕಜ್ಜಲ ೧೨ – ೬೩ ಕಾಡಿಗೆ
ಕಟಕ ೧ – ೮೮ ಸೈನ್ಯ
ಕಡಸು ೫ – ೯೨ಇನ್ನೂ ಕರು ಹಾಕದಿರುವ ಹಸು
ಕಡುಗಾರಂ ೧೧ – ೪೨ ಗ ಬಹಳ ಖಾರ
ಕಡುಪು ೧೦ – ೧೮ ರಭಸ
ಕಣಿ೧ – ೬೦ ಗಣಿ
ಕಣಿಕಾಲ್ ೭ – ೧೩ ಜಂಘೆ
ಕಣಿಕೆ ೭ – ೮೨ ಜಂಘೆ
ಕಣಿಶ ೫ – ೫೦ ತೆನೆ
ಕಣಿಸು ೮ – ೮೧ ತೋರು
ಕಣ್ಬೊಣರ್ ೧೩ – ೧೩೭ ಕಣ್ಣಿನ ಜತೆ
ಕತ ೪ – ೧೦೨ ಕಾರಣ
ಕತಕ ಫಲ ೫ – ೧೦೨ ಚೆಲ್ಲದಕಾಯಿ
ಕದಪು ೯ – ೧೨೭, ಕದಂಪು ೪ – ೧೪೦ ಕೆನ್ನೆ
ಕದರ್ಯ ೧ – ೪೮ ಕೃಪಣ
ಕದಿರ್ ೬ – ೩೯ ಕಿರಣ
ಕದಿರ್ವರಿ ೧೨ – ೫ ಬೆಳಕು ಬೀಳು
ಕನರ್ಗಂಪು ೧೩ – ೩೯ ಕೆಟ್ಟ ವಾಸನೆ
ಕನ್ನಡವಕ್ಕಿ ೯ – ೬೬ ಗಿಳಿ
ಕನ್ನವುರ ೪ – ೧೧೯ ಕಿವಿಯ ಆಭರಣ (ಕರ್ಣಪೂರ)
ಕನ್ನೆವೇಟ ೧೨ – ೩೫ ಕನ್ಯೆ ಪ್ರೇಮ
ಕಪ್ಪಡ ೨ – ೬೪ ಬಟ್ಟೆ
ಕಪೋತ ೫ – ೨೨ ಗ ಪಾರಿವಾಳ
ಕಪೋತ ಪಾಲಿಕೆ ೮ – ೮೦ ಗ ಪಾರಿವಾಳದ ಗೂಡು
ಕಬ್ಬ ೧ – ೬೪ ಕಾವ್ಯ ಸಂ
ಕಮ್ಮಗೞವೆ ೫ – ೫೧ ಪರಿಮಳದ ಅಕ್ಕಿ
ಕರಕ ೧೧ – ೨೯ ಕಳಶ, ಕರಗ
ಕರಕಾಂಬು ೧೧ – ೧೩ ಕಳಶೋದಕ
ಕರಗ ೧೦ – ೭೫ ಕಲಶ
ಕರಟೆ ೨ – ೧೧ ಆನೆ
ಕರಹ ೨ – ೬೯ ಆಮಂತ್ರಣ
ಕರು ೮ – ೯೬ ಗ ಪುತ್ಥಳಿ
ಕರುಮಾಡ ೭ – ೭೦ ಉಪ್ಪರಿಗೆ
ಕರೇಣು ೮ – ೩ ಹೆಣ್ಣಾನೆ
ಕಱಂಡು ೨ – ೧೦೯ ಗ ಒರಟು
ಕಱಿಕೆ ೪ – ೨೦ ಗರಿಕೆ
ಕೞೆಕೆಯೆಸಳ್ ೧೧ – ೧೧ ಗರಿಕೆಯ ಹುಲ್ಲು
ಕಱುಂಬು ೬ – ೧೬ ಗ ಅಸೂಯೆ
ಕರ್ಗಿ ೭ – ೬೩ ಕಪ್ಪಗಾಗಿ
ಕರ್ಗುಡಿ ೨ – ೫೪ ಕರಿಯ ಕುಡಿ
ಕರ್ಚಿ ೯ – ೧೩೫ ಕಚ್ಚಿ
ಕರ್ಣಪೂರ ೬ – ೧೧೫ ಕಿವಿಯ ಆಭರಣ
ಕರ್ಣಿಕಾರ ೯ – ೧೧೮ ಬೆಟ್ಟದಾವರೆ
ಕರ್ಣಿಕಾರಕ ೯ – ೬೨ ಬೆಟ್ಟದಾವರೆ
ಕಲ್ಪಿಪಂತೆ ೧ – ೫೩ ಕಲಿಸುವಂತೆ
ಕವಲ್ತು ೪ – ೧೦೨ ಕವಲೊಡೆದು
ಕವರೆ ೯ – ೨೩ ಸೂರೆಮಾಡಲು
ಕವಿತಾರದೆ ೧ – ೫೯ ಕವಿದುಕೊಂಡು ಬರದೆ?
ಕಷಣ ೫ – ೯೬ ಉಜ್ಜುವಿಕೆ
ಕಳಭ ೬ – ೧೨೬ ಆನೆಮರಿ
ಕಳಮ ೫ – ೪೨ (ಗ)ಬತ್ತ
ಕಳಾಪಿ ೯ – ೫೨ ಗ ನವಿಲು
ಕಳಾಪಿನಿ ೧೧ – ೧೩ ಹೆಣ್ಣು ನವಿಲು
ಕಳಿಕಾ ೬ – ೧೨೬ ಹನಿ
ಕಳಿಕೆ ೩ – ೨೦ ಗ, ೮ – ೫೨ ಹನಿ
ಕಳಿತಪ್ಪು ೧೧ – ೩೬ ಹರಿದು ಬರುವ
ಕೞಲೆ ೧ – ೪ ಕೃಶವಾಗಲು
ಕೞೆ ೧೪ – ೩೮ ದಾಟು
ಕೞ್ತಲೆವಕ್ಕಿ ೭ – ೧೧೫ ಗೂಬೆ
ಕೃಷ್ಣಲಾ ೫ – ೮೦ ಗುಲಗಂಜಿಬಳ್ಳಿ
ಕ್ರಕಚ ೧೪ – ೬೯ ಗ ಗರಗಸ
ಕ್ವಣಿತ ೪ – ೮೦ ಧ್ವನಿ, ಶಬ್ದ
ಕಾಕಳಿ ೧೦ – ೧೨ ಮಧುರಧ್ವನಿ
ಕಾಡಿಗೆಯನೆಚ್ಚಿ ೧೨ – ೨೪ ಕಾಡಿಗೆಯನ್ನು ಹಚ್ಚಿ
ಕಾದಂಬಿನಿಒ ೧೪ – ೩೩ ಗ ಮೇಘಮಾಲೆ
ಕಾದಲ ೭ – ೮೧, ೧೨ – ೩೭ ಪ್ರೇಮಿಕ
ಕಾದಲಿಸು ೧೩ – ೧೬೦ ಪ್ರೇಮಿಸು
ಕಾದಲ್ಮೆ ೬ – ೧೦೪ ಪ್ರೇಮ
ಕಾದ್ರವೇಯ ೬ – ೧೪ ಗೆ ಹಾವು
ಕಾಯ್ದು ೫ – ೩೫ ಕಪ್ಪುಬಣ್ಣದ ಬರೆ
ಕಾಲುಷ್ಯ ೪ – ೫೪ ಕದಡಿರುವಿಕೆ
ಕಾವಣ ೬ – ೧೧೫ ಚಪ್ಪರ
ಕಾಶ ೫ – ೮೦ ಒಂದು ಬಗೆಯ ಚೊಂಡು
ಕಾಸಟ ೧೪ – ೪೬ ಕೀಳುಬಟ್ಟೆ?
ಕಾಳದ ಕೞ್ತಲೆ ೭ – ೭೬ ಕಾರ್ಗತ್ತಲೆ
ಕಾೞ್ಕಬ್ಬ ೧ – ೪ ನೀಚಕಾವ್ಯ
ಕಾೞ್ತುೞು ೫ – ೮೫ ಗ ಕಾಡು ದನ
ಕಾೞ್ಪ್ರರಂ ೭ – ೯೬ ಗ ಸಣ್ಣತೊರೆ
ಕಾೞ್ಮನ ೧೪ – ೩೪ ಕೆಟ್ಟಮನಸ್ಸು
ಕಿಟಿ ೬ – ೧೪ ಗ ಹಂದಿ
ಕಿಟ್ಟ ೧೦ – ೩೭ ಗ ಕೊಳೆ
ಕಿಣ ೨ – ೯೮ ಜಡ್ಡುಗಟ್ಟಿರುವಿಕೆ
ಕಿತವ ೨ – ೧೧೨ ಮೋಸಗಾರ
ಕಿತ್ತಲಗು ೨ – ೫೬ ಬಿಚ್ಚುಕತ್ತಿ
ಕಿನಿಸು ೧೪ – ೨೪ ಕೋಪಗೊಳ್ಳು
ಕಿನ್ನೆಲ ೫ – ೨೮ ತಗ್ಗು
ಕಿಱುಪು ೮ – ೨೧ ಚಿಕ್ಕದಾಗು
ಕಿಲಕಿಂಚತ ೧೪ – ೧೦೫ ಗ ಶ್ರವಣ ಮಾತ್ರದಿಂದ ಪ್ರೇಮಿಸು
ಕಿಸುಗಣ್ಣು ೭ – ೮೨ ಕೋಪಗೊಳ್ಳು
ಕಿಸುಗಲ್ಲು ೭ – ೧೦೧ ಕೆಂಪುಗಲ್ಲು
ಕಿಸುಪು ೧೪ – ೬೭ ಕೆಂಪು
ಕೀರ ೬ – ೯೩ ಗಿಳಿ
ಕುಟೆ ೧ – ೨೭ ಗುಡಿಸಲು
ಕುಟ್ಟಿಮ ೧೧ – ೫೨ (ಗ) ನೆಲಗಟ್ಟು
ಕುಟ್ಮಲ ೧ – ೬ ಮೊಗ್ಗು
ಕುಟ್ಮಳ ೯ – ೧೧೭ ಮೊಗ್ಗು
ಕುಡಿತೆ ೧೦ – ೭೮ ಬೊಗಸೆ
ಕುಡುಕು ೭ – ೮೪ ಹಕ್ಕಿಯ ಆಹಾರ (ಧಾನ್ಯ)
ಕುತ್ತಿದ ೧೨ – ೧೯ ಸೆಕ್ಕಿದ
ಕುಪ್ಪಿಗೆ ೮ – ೮೧ ಭರಣಿ
ಕುರವಕ ೧೪ – ೧೧೭ ಮದರಂಗಿ, ಮುಳ್ಳುಗೋರಂಟೆ
ಕುರುಣೆ ೮ – ೨ ಮರಿ
ಕುಱುಕು ೭ – ೧೦೦ ಕಚ್ಚು, ಆಗಿ
ಕುಲಿಶ ೧ – ೨೫ ವಜ್ರಾಯುಧ
ಕುಶಾಗ್ರೀಯ ಮತಿ ೧ – ೧೫ ಸೂಕ್ಷ್ಮ ಬುದ್ಧಿಯುಳ್ಳವ
ಕುಶೇಶಯ ೭ – ೭೮ ನೀರಿನಲ್ಲಿ ನೆಲಸಿರುವುದು, ಕಮಲ
ಕುಸುಂಕು ೫ – ೭೨ ಘಾತನ
ಕುಳಿರ್ಕೋಡು ೮ – ೯೬ (ಗ) ಚಳಿ ಹಿಡಿ, ತಣ್ಣಗಾಗು
ಕುಳಿರ್ವ ೬ – ೫೫, ೮ – ೩೨ ಗ ತಣ್ಣಗಿರುವ
ಕುಳಿಸ ೮ – ೭೩ ಕುಲಿಶ, ವಜ್ರಾಯುಧ
ಕೂಜಿಸು ೫ – ೭೨ ಗ ಧ್ವನಿಮಾಡು
ಕೂಪಾರ ೧ – ೧ ಸಾಗರ
ಕೂರ್ಚ ೯ – ೨೦ ಗಡ್ಡ, ಮೀಸೆ
ಕೂೞ್ಕುದಿ ೧೦ – ೭೦ ಅನ್ನದ ಕುದಿ
ಕೂಂಕಿ ೧೨ – ೬ ಹಾರಿ
ಕೆಚ್ಚಗೆ ೧೪ – ೪೨ ಕೆಂಪಗೆ
ಕೆತ್ತು ೩ – ೧೫ ಅದಿರು, ನಡುಕ
ಕೆಮ್ಮಡ ೧೪ – ೩೩ ಕೆಂಪಾದ ಹಿಮ್ಮಡಿ
ಕೆಯ್ತ ೨ – ೮೪ ಕೆಲಸ
ಕೆಯ್ಯೆಡೆ ವೇಳ್ ೧೧ – ೭ ದಾನವೊಪ್ಪಿಸು
ಕೆಯ್ವೊಲ ೬ – ೧೬ ಗ ಚಿಕ್ಕಹೊಲ
ಕೆಳಗಿವಿಗೇಳು ೧೪ – ೫೧ ಗ ಅಸಡ್ಡೆಮಾಡು
ಕೇಕರ ೧೩ – ೭೮ ಕಡೆಗಣ್ಣು
ಕೇಕಿ ೪ – ೧೪೮, ೭ – ೨೫ ನವಿಲು
ಕೇಗು ೧೧ – ೨೨ ನವಿಲಿನ ಕೇಕೆ
ಕೇಣ ೨ – ೯೭ ಮತ್ಸರ
ಕೇಣಿ ೨ – ೧೨೧ ಗುತ್ತಿಗೆ
ಕೇತನ ೭ – ೫ ಬಾವುಟ
ಕೇತು ೭ – ೬ ಬಾವುಟ
ಕೇದಾರ ೫ – ೪೨ ಗ ಗದ್ದೆ
ಕೇರ್ಗಲ್ ೧೧ – ೫೨ ಗ ಗೋಡೆಗಳು
ಕೇವಣಿಸು ೧ – ೬೦ ಪೋಣಿಸು, ಸರಮಾಡು
ಕೊನರಿಪರ್ ೧ – ೧೩ ಚಿಗುರಿಸುವರು
ಕೊಲ್ಲಿನೋಟ ೧೩ – ೫೯ ಗ, ಅಪಾಂಗ ವೀಕ್ಷಣ
ಕೊಸಗು ೬ – ೬೦ ಗ ಬೆಟ್ಟದಾವರೆ
ಕೊಳರ್ವಕ್ಕಿ ೬ – ೭೧ ಪಕ್ಷಿ ವಿಶೇಷ
ಕೊಳವೇರ್ಗಳ್ ೧೧ – ೧೧ ಲಾಮಂಚದ ಕಡ್ಡಿಗಳು
ಕೊಳ್ದಪ್ಪಿದ ೧೪ – ೩೩ ಗ ಹಿಡಿತ ತಪ್ಪಿದ ಕೋಡಿತು ೯ – ೩ ಚಳಿಯಾಯಿತು
ಕೋದು ೪ – ೮೩ ಪೋಣಿಸಿ
ಕೋರಕ ೫ – ೩೩ ಮೊಗ್ಗು
ಕೋಲ್ ೬ – ೧೬ ಬಾಣ
ಕೋೞ್ಕಂಪು ೯ – ೭೪ ಆಕರ್ಷಕವಾದ ಪರಿಮಳ
ಕೋವಿದ ೭ – ೭ ಪಂಡಿತ
ಕೋೞ್ ೪ – ೧೬ ಗ ತಾಕುವಿಕೆ
ಕ್ರೋಡ ೬ – ೧೫ ಹಂದಿ
ಕ್ವಾಣ ೧೧ – ೬೨ ಧ್ವನಿ
ಕೌಮುದಿ ೨ – ೨೬ ಬೆಳದಿಂಗಳು
ಕಂಕೆಲ್ಲಿ ೯ – ೧೧೦ ಅಶೋಕ
ಕಂಜ ೫ – ೫೫ ಕಮಲ
ಕಂಟಳಿಸು ೧೨ – ೩೮ ನಿರ್ಬಂಧಿಸು
ಕಂಟಿಸು ೨ – ೧೦೬ ಕಾಡಿಸು, ಪೀಡಿಸು
ಕಂದಲು ೫ – ೧೦೪ ಸಣ್ಣ ಮಣ್ಣಿನಪಾತ್ರೆ
ಕಂದು ೧೨ – ೬೭ ಸಾರಸದ ಗೆಡ್ಡೆ
ಕಾಂತಂ ೫ – ೨೦ ಪ್ರಿಯ
ಕಿಂಕಿರಾತ ೧೩ – ೧೪೧ ಬಿಳಿಯ ಗೋರಂಟೆ
ಕಿಂಜಲ್ಕ ೫ – ೨೮ ಕಮಲ ಪರಾಗ
ಕುಂಚ ೧೨ – ೪೮ ಗ ಭರ್ಜಿ
ಕೂಂಕು ೨ – ೪೮ ಹಾರಿಸು
ಕೂಂದಲ್ವೊಱು ೧೩ – ೮ ಕೂದಲಿನ ಹೊರೆ
ಕೆಂಬರಲ್ ೬ – ೧೧೯ ಕೆಂಪು ಹರಳು
ಕೊಂಚೆ ೬ – ೧೨೮ ಕ್ರೌಂಚಪಕ್ಷಿ