ಅಚ್ಯುತಕಲ್ಪ – ಸ್ವರ್ಗದ ಹೆಸರು. ೪ – ೧೬ ವ||
ಅಣುವ್ರತ – ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಅಪರಿಗ್ರಹ ಎಂಬ ಐದು ವ್ರತಗಳು ೪ – ೮
ಅನುತ್ತರ – ಜೈನ ಮತದಂತೆ ಇರುವ ಸರ್ವಾರ್ಥಸಿದ್ಧಿ ಮೊದಲಾದ ಐದು ವಿಮಾನಗಳಿಗೆ ಅನುತ್ತರೆ ವಿಮಾನಗಳೆಂದು ಹೆಸರು ೨ – ೫೦
ಅಬ್ಬೆಗಳು – ಜೈನ ಸನ್ಯಾಸಿಣಿಗಳು. ೧ – ೭೯ವ||
ಅರಹಂತರು – ಜಿನ, ತೀರ್ಥಕರ; ಕರ್ಮಬಂಧವನ್ನು ಹರಿದೊಗೆದು ಭವ ಬಂಧದಿಂದ ಮುಕ್ತರಾಗಿ ಸಂಸಾರ ನಿಸ್ತರಣೋಪಾಯವನ್ನು “ಭವ್ಯ”ರಿಗೆ ಬೋಧಿಸಿ ಮೋಕ್ಷಕ್ಕೆ ಸಂದ ಮಹಾನ್ ಆತ್ಮರು. ೧ – ೭
ಅವಧಿ ಜ್ಞಾನ – ದ್ರವ್ಯ, ಕ್ಷೇತ್ರ, ಕಾಲ ಮತ್ತು ಆವ ಇವುಗಳಿಂದ ಮರ್ಯಾದಿತವಾದ ಪದಾರ್ಥಗಳನ್ನು ಹಾಗೂ ಕರ್ಮಬದ್ಧ ಜೀವಗಳ ಅನೇಕ ಭವಗಳನ್ನು ತಿಳಿದುಕೊಳ್ಳುವ ಜ್ಞಾನ. ೪ – ೬೫ ವ||
ಅಹಮಿಂದ್ರ – ಅನುತ್ತರ ವಿಮಾನಗಳಲ್ಲಿರುವ ಕಲ್ಪಾತೀತ ದೇವರು. ಈ ಸಂದರ್ಭದಲ್ಲಿ ಸುಪ್ರತಿಷ್ಠನ ದೇವಗತಿ. ೪ – ೬೫ ವ||
ಆಚಾರ್ಯರು – ಪಂಚಾಚಾರ ಮೊದಲಾದವುಗಳನ್ನು ಆಚರಿಸುತ್ತ ಶಾಸ್ತ್ರ ವಿಶಾರದರೂ ಆತ್ಮರತರೂ ಆಗಿ ‘ನಿಶ್ಚಯ’ ಮಾರ್ಗದಲ್ಲಿ ಸಾಗಿದವರು. ಅದರಂತೆ ವ್ಯಾವಹಾರಿಕವಾಗಿ ಶಿಷ್ಯರಿಗೆ ಧರ್ಮೋಪದೇಶ ಮಾಡುವವರು, ಧರ್ಮದಲ್ಲಿ ಶಾಸನಾಧಿಕಾರ ಇದ್ದವರು. ೧ – ೪
ಉಪಸರ್ಗ – ಜೈನ ಮುನಿಗಳಿಗೆ ಕೊಡುವ ಪೀಡೆ, ತ್ರಾಸು, ತೊಂದರೆಗಳಿಗೆ ಈ ಶಬ್ದವನ್ನು ಉಪಯೋಗಿಸುತ್ತಾರೆ. ೪ – ೨೯ ವ||
ಉಪಾಧ್ಯಾಯರು – ರತ್ನತ್ರಯ ಧರ್ಮಯುಕ್ತರಾಗಿ, ಮಹಾವ್ರತಗಳನ್ನಾಚರಿಸುತ್ತ ನಿಜ, ಶುದ್ಧ ಆತ್ಮಾನುಭವ ಆನಂದದಲ್ಲಿರುವವರು; ‘ಭವ್ಯ’ರಿಗೆ ಧರ್ಮೋಪದೇಶ, ಶಾಸ್ತ್ರಜ್ಞಾನ ಮಾಡಿಕೊಡುವವರು. ೧ – ೫
ಏಕಾದಶಾಂಗ – ಜೈನರ ೧೧ ಅಂಗಗಳು ಆಚಾರಾಂಗ, ಸೂತ್ರಕೃತಾಂಗ ಮೊದಲಾದ ಹನ್ನೊಂದು ಅಂಗಗಳು. ೪ – ೬೫ ವ||
ಕಾಲಲಬ್ಧಿ – ಜೀವಾತ್ಮನಿಗೆ ಊರ್ಧ್ವಗತಿಯನ್ನುಂಟುಮಾಡಲು ಸನ್ನಿಹಿತವಾಗುವ ಕಾಲ. ೩ – ೨೭ ವ||
ಕೇವಲಬೋಧ – ಕೇವಲಜ್ಞಾನ  
ಇಲ್ಲಿ ೫೫೪ ನೇ ಪುಟ ಇಲ್ಲ  
ಪರ್ಣಲಘುವಿದ್ಯೆ – ತಪಸ್ಸಿನಿಂದ ಸಾಧಿಸುವ ಒಂದು ಋದ್ಧಿ. ಇದರಿಂದ ಗಾಳಿಯಲ್ಲಿ ಎಲೆ ಹಾರುವಂತೆ ಹಾಯಾಗಿ ಹಾರಿಹೋಗಿ ಬೇಕಾದಲ್ಲಿ ಇಳಿಯಬಹುದು, ಇಳಿಸಬಹುದು. ೧ – ೪
ಪರಿಗ್ರಹ – ಸ್ವೀಕರಿಸುವುದು. ಜೈನಮತದಂತೆ ಇದೊಂದು ವ್ರತವು. ಇದರಲ್ಲಿ ಎರಡು ವಿಧ:  
(೧)ಧನಧ್ಯಾನ್ಯ ಮೊದಲಾದವುಗಳ ಸಂಗ್ರಹ – ಬಾಹ್ಯ ಪರಿಗ್ರಹ.  
(೨) ಮಿಥ್ಯಾತ್ವಕ್ರೋಧಾದಿ ಕಷಾಯಗಳ ಸಂಗ್ರಹ – ಅಭ್ಯಂತರ ಪರಿಗ್ರಹ. ೧ – ೫೯
ಪಂಚನಮಸ್ಕಾರ – ಪಂಚ ಪರಮೇಷ್ಠಿಗಳಿಗೆ ಮಾಡುವ ನಮಸ್ಕಾರ  
ಪಂಚಪರಮೇಶ್ವರರು – ಅರಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸರ್ವಸಾಧುಗಳು. ೨ – ೨೨ ವ||
ಪಂಚಾಶ್ವರ್ಯ – ತೀರ್ಥಂಕರಂಥ ಉತ್ತಮ ಪಾತ್ರಕ್ಕೆ ಆಹಾರದಾನಮಾಡಿದಾಗ ದೇವತೆಗಳು ಮಾಡುವ (೧)ದೇವದುಂದುಭಿ (೨) ಸುವರ್ಣವೃಷ್ಟಿ (೩) ಸುವಾಸನೆಯಿಂದ ಕೂಡಿದ ಶೀತಲವಾಯು (೪) ಪುಷ್ಪವೃಷ್ಟಿ (೫) ಅಹೋದಾನ, ಅಹೋದಾನಿ ಎಂಬ ಸ್ತುತಿ ಇವು ಪಂಚಾಶ್ವರ್ಯಗಳು. ೪ – ೪೦
ಪಾಂಚಜನ್ಯ – ಮಧುರಾನಗರದ ಚೈಯಾಲಯದಲ್ಲಿ ಹುಟ್ಟಿದ ಶಂಖ. ಕೃಷ್ಣನು ಇದನ್ನು ವಶಪಡಿಸಿಕೊಳ್ಳುತ್ತಾನೆ. ೮ – ೨೬
ಪಾಂಡುಕ ಶಿಲಾತಲ – ಮೇರು ಪರ್ವತದ ಮೇಲಿರುವ ಅರ್ಧಚಂದ್ರಾಕೃತಿಯ ಒಂದು ಶಿಲೆ. ಇಲ್ಲಿ ತೀರ್ಥಂಕರರ ಜನ್ಮಾಭಿಷೇಕ ನಡೆಯುವದು. ೩ – ೧೮ ವ||
ಪ್ರತಿಮಾಯೋಗ – ಆಹಾರತ್ಯಾಗ ಮಾಡಿ ಒಂದು ವರ್ಷದ ವರೆಗೆ ಒಂದೇ ಸ್ಥಳದಲ್ಲಿ ನಿಂತುಕೊಂಡು ತಪಸ್ಸು ಮಾಡುವದು.  
ಪ್ರಾಯೋಪಯೋಗ ಸಂನ್ಯಸನ – ತನಗೊದಗಿದ ರೋಗಾದಿಗಳಿಗಾಗಿ ತಾನೂ ಉಪಚಾರವನ್ನು ಮಾಡಿಕೊಳ್ಳದೆ ಇತರರಿಗೂ ಉಪಚಾರವನ್ನು ಮಾಡಿಗೊಡದೆ ಸಂನ್ಯಾಸ ಧರಿಸಿದಲ್ಲಿಯೇ ಸ್ಥಿರವಾಗಿ ನಿಂತು ಆತ್ಮಚಿಂತನೆ ಮಾಡುತ್ತ ಪ್ರಾನತ್ಯಾಗ ಮಾಡುವುದು. ೪ – ೧೬ ವ||
ಭೋಗಾಂತರಾಯ – ಭೋಗದಲ್ಲಿ ವಿಘ್ನವನ್ನುಂಟುಮಾಡುವ ಕರ್ಮ. ೧ – ೯೨ ವ||
ಮಹೇಂದ್ರ ಕಲ್ಪಜೈನರ ಒಂದು ಸ್ವರ್ಗ ೩ – ೩೨ ವ||
ರತ್ನತ್ರಯ – ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ. ೧ – ೨೭
ಲೋಕನಾಡಿ – ತ್ರಸಜೀವಗಳ ಉತ್ಪತ್ತಿ ಸ್ಥಳ. ೪ – ೬೫ ವ||
ವಿಕ್ರಿಯೆಶರೀರವನ್ನು ಸಣ್ಣದು, ದೊಡ್ಡದು, ಹಗುರು, ಜಡ ಮಾಡುವ ಸಾಮರ್ಥ್ಯ ೪ – ೬೫ ವ||
ವಿದ್ಯುತ್ಪ್ರಭ – ವಿಮಾನದ ಹೆಸರು. ೪ – ೮ವ||
ಶಾರ್ಙ್ಗಚಾಪ – ಮಧುರಾನಗರದ ಚೈತ್ಯಾಲಯದಲ್ಲಿ ಹುಟ್ಟಿದ ಧನುಸ್ಸು. ಇದನ್ನು ಕೃಷ್ಟನು ವಶಮಾಡಿಕೊಳ್ಳುತ್ತಾನೆ. ೮ – ೨೬
ಶಾದ್ವಾದ(ಸಪ್ತಭಂಗಿ ನಯ) – ವಸ್ತು ನಿರೂಪಣೆಯ ಏಳು ಪ್ರಕಾರಗಳು. ೧ – ೧೦
ಶಿಕ್ಷಾವ್ರತದೇಶಾವಕಾಶಿಕ, ಸಾಮಯಿಕ, ಪ್ರೋಷಧೋಪವಾಸ, ವೈಯ್ಯಾವೃತ್ಯ ಎಂಬ ನಾಲ್ಕು ಶ್ರಾವಕನ ವ್ರತಗಳು. ೪ – ೮
ಶ್ರೀನಿಳಯವಿಮಾನದ ಹೆಸರು. ೪ – ೮ ವ||
ಶುಕ್ಲಲೇಶ್ಯಾ – ಆರು ಲೇಶ್ಯೆಗಳಲ್ಲಿ ಒಂದು. ೪ – ೬೫ ವ||
ಷೋಡಶ ಭಾವನೆಗಳು(೧) ದರ್ಶನ ವಿಶುದ್ಧಿ (೨) ವಿನಯ ಸಂಪನ್ನತೆ (೩) ಶೀಲ ವ್ರತಾನತೀಚಾರ ತಪಸ್ಸು (೮) ಸಾಧು ಸಮಾಧಿ (೯) ವೈಯಾವೃತ್ತೀಕರಣ (೧೦)ಅರ್ಹದ್ಭಕ್ತಿ (೧೧) ಆಚಾರ್ಯಭಕ್ತಿ (೧೨) ಉಪಾಧ್ಯಾಯ ಭಕ್ತಿ (೧೩) ಶಾಸ್ತ್ರಾನುರಾಗ (೧೪) ಅವಶ್ಯಕ ಪರಿಹಾಣಿ (೧೫) ಮಾರ್ಗಪ್ರಭಾವನೆ (೧೬) ಪ್ರವಚನ ವಾತ್ಸಲ್ಯ. ೪ – ೬೫ ವ||
ಸಮವಸರಣತೀರ್ಥಂಕರರಿಗೆ ಕೇವಲ ಜ್ಞಾನ ಉಂಟಾದಾಗ ಧರ್ಮೋಪದೇಶಕ್ಕಾಗಿ ದೇವೇಂದ್ರನ ಅಪ್ಪಣೆಯಂತೆ ಕುಬೇರನಿಂದ ನಿರ್ಮಿಸಲ್ಪಟ್ಟ ಸಭೆ. ೨ – ೪೨
ಸಮವಸೃತಿಸಮವಸರಣ ೪ – ೫೬
ಸಮ್ಯಗ್ಧರ್ಶನ, ಜ್ಞಾನ, ಚಾರಿತ್ರ – ಜೈನರ ರತ್ನತ್ರಯಗಳು. ಇವೇ ಮುಕ್ತಿಯ ಉಪಾಯಗಳು. ೧ – ೬
ಸರ್ವಾರ್ಥಸಿದ್ಧಿಅನುತ್ತೆ ವಿಮಾನಗಳಲ್ಲಿ ನಟ್ಟನಡುವಿನ ವಿಮಾನ. ೨ – ೫೦
ಸಂಹನನಭೋಗ ಭೂಮಿಜರ ಶರೀರವು ಮೊದಲನೆಯ ಸಂಹನದ್ದು ಆಗಿರುತ್ತದೆ. ಅಂದರೆ ಅವರ ಶರೀರದೊಳಗಿನ ಎಲುವು, ಸ್ನಾಯು, ಸಂದುಗಳು ವಜ್ರದಂತೆ ಗಟ್ಟಿಮುಟ್ಟಾಗಿರುತ್ತವೆ. ೭ – ೪೪ ವ||
ಸಾಗರೋಪಮ – ಕಾಲದ ಪರಿಮಾಣ. ೪ – ೧೬ ವ||
ಸಾಧುಸರ್ವಸಾಧುಗಳು. ಮುನಿದೀಕ್ಷೆಯನ್ನು ಹೊಂದಿ, ರಾಗದ್ವೇಷಾದಿಗಳನ್ನು ತೊರೆದು, ಜ್ಞಾನ ಧ್ಯಾನಗಳಲ್ಲಿ ಆಸಕ್ತರಾಗಿ ಸಿದ್ಧಿಯ ಸಾಧನೆಯಲ್ಲಿರುವ ಜಿನಮುನಿಗಳು. ೧ – ೬
ಸಾಮಾನಿಕದೇವತೆಗಳಲ್ಲಿನ ಒಂದು ಭೇದ. ೩ – ೩೨ ವ||
ಸಾಂತಕರವಿಮಾನದ ಹೆಸರು. ೪ – ೧೬ ವ||
ಸಿದ್ಧರುಅಷ್ಟಕರ್ಮದಿಂದ ಮುಕ್ತರಾಗಿ, ಅಷ್ಟಗುಣಗಳನ್ನು ಹೊಂದಿ, ಸಿದ್ಧ ಶಿಲೆಯಲ್ಲಿ ವಿರಾಜಮಾನರಾದ ಪರಮ ಆತ್ಮರು. ೧ – ೭
ಸುಪ್ರಭವಿಮಾನದ ಹೆಸರು. ೪ – ೮ ವ||
ಸೂರಿಗಳುಆಚಾರ್ಯರು. ೧ – ೭
ಸೌಧರ್ಮಕಲ್ಪ – ಸ್ವರ್ಗದ ಹೆಸರು. ೪ – ೮ ವ||