ಬ |
|
ಬಕ್ಕುಡಿ – ಉದ್ವೇಗ, ಬೆರಗು |
೫ – ೭೧ |
ಬಗರಗೆ – ಒರ್ತಿ (ಚಿಲುಮೆ) |
೬ – ೨೩ ವ|| |
ಬಟ್ಟಸರಿ – ಸುತ್ತಾಡು |
೫ – ೪ ವ|| |
ಬದರ – ಎಲಚೀ ಗಿಡ |
೫ – ೭೮ |
ಬದ್ದವಣ – ಮಂಗಳವಾದ್ಯ |
೨ – ೪೦ |
ಬರ್ದು – ಬದುಕು |
೧ – ೧೧೯ |
ಬದ್ದೆ – ಪತಿವ್ರತೆ |
೫ – ೨ ವ|| |
ಬಯ್ – ಹುಗಿದಿಡು, ನಿಕ್ಷೇಪಿಸು |
೬ – ೧೭ ವ|| |
ಬಱಿಕೆಯ್ – ಬರಿದು ಮಾಡು |
೩ – ೮೦ ವ|| |
ಬಱುದೊಱೆ – ಬರಿದಾಗು |
೫ – ೨ ವ|| |
ಬಲೀಮುಖ – ಮಂಗ |
೪ – ೧೨೬ ವ|| |
ಬಯ್ಕೆ – ಸಮೂಹ |
೫ – ೧೦೦ |
ಬವಸೆ – ಉದ್ಯೋಗ |
೧ – ೭೮ |
ಬಸದನ – ಸಿಂಗರಿಸುವದು |
೬ – ೮ |
ಬಸದು – ತೀಕ್ಷ್ಣ |
೧ – ೪ |
ಬಸನ – ವ್ಯಸನ |
೨ – ೫೫ ವ|| |
ಬಳವಿರೋಧಿ – ಇಂದ್ರ |
೨ – ೯ ವ|| |
ಬಳ್ವಳ – ಅತಿಶಯ |
೩ – ೧೦ ವ|| |
ಬಂಬಲ್ – ಸಮೂಹ |
೮ – ೬೬ |
ಬಾರಸ – ದ್ವಾದಶ |
೬ – ೨೪ |
ಬಾರಿಸು – ನಿವಾರಿಸು |
೬ – ೨೦ ವ|| |
ಬಾಸುಳ – ಬಾಸುಂಡೆ |
೬ – ೬೭ |
ಬಾೞುಕ – ಒಣಗಿದ |
೭ – ೩೫ ವ|| |
ಬಾಂದೊರೆ – ದೇವಗಂಗೆ |
೧ – ೬೨ ವ|| |
ಬಿಕ್ಕು – ಮಾಂಸ |
೫ – ೪೦ |
ಬಿತ್ತರಿಗೆ – ಪೀಠ |
೫ – ೫೬ ವ|| |
ಬಿದುತಟ – ಕುಂಭಸ್ಥಲ |
೩ – ೬೬ |
ಬಿನ್ನಗಾಗು – ಭಗ್ನವಾಗು |
೮ – ೧೧೨ |
ಬಿಸ – ಕಮಲದ ದೇಟು |
೨ – ೧೬ |
ಬಿಸಟಂಬರಿ – ಮನಸ್ಸಿಗೆ ಬಂದಂತೆ ಓಡು |
೫ – ೧೧೩ ವ|| |
ಬಿಸಲತೆ – ತಾವರೆಯ ಬಳ್ಳಿ |
೪ – ೩೭ |
ಬಿಂಜ – ವಿಂಧ್ಯ |
೪ – ೧೧೬ |
ಬಿಂಜ – ಅರಣ್ಯ |
೭ – ೩೫ ವ|| |
ಬೀಗು – ಗರ್ವಪಡು |
೧ – ೫೬ |
ಬೀಸರ – ವ್ಯರ್ಥ |
೪ – ೮೬ |
ಬೀೞುಡೆ – ತೊಟ್ಟು ಬಿಟ್ಟ ಬಟ್ಟೆ |
೮ – ೭೬ ವ|| |
ಬಿೞ್ಗೊಂಬು – ಬಾಗಿದ ಟೊಂಗೆ |
೩ – ೮೦ ವ|| |
ಬುಕ್ಕ – ಹೃದಯ |
೫ – ೪೧ |
ಬಭುಕ್ಷಿತ – ಹಸಿದ |
೫ – ೭೮ |
ಬೆಗಡು – ಸೋಜಿಗ |
೭ – ೧೩ ವ|| |
ಬೆಗಡು – ಭಯ |
೮ – ೧೦ |
ಬೆಡಂಗು – ಸೊಬಗು |
೧ – ೪೨ |
ಬೆದಕು – ಕೆದರು |
೮ – ೯೯ ವ|| |
ಬೆರಂಟು – ಕೆದರು |
೧ – ೧೧೪ ವ|| |
ಬೆಸನೆ – ಅಪ್ಪಣೆ |
೨ – ೫೫ ವ|| |
ಬೆಸೆ – ಚಬಕದಿಂದ ಹೊಡೆ |
೭ – ೯೧ ವ|| |
ಬೆಳಂತಿಗೆ – ಹೂಳಪು, ಪ್ರಕಾಶ |
೨ – ೧೫ |
ಬೆಳ್ಳಂಗೆಡೆ – ಬಿಳುಪನ್ನು ಚೆಲ್ಲು |
೨ – ೭೧ |
ಬೆಳ್ಳವಾಸ – ಮೊಣಕಾಲುದ್ದ ನೀರಿನಲ್ಲಿ ನಿಂತು ತಪಸ್ಸು ಮಾಡುವುದು |
೪ – ೬೩ |
ಬೆಳ್ವಟ್ಟೆ – ಬಿಳಿಯ ಮಟ್ಟಿ |
೩ – ೮೯ |
ಬೆಂಚೆ – ಕೊಳ |
೧ – ೬೫ |
ಬೇಳ್ವೆ – ಹೋಮ |
೬ – ೬೧ ವ|| |
ಭ |
|
ಭರಂಗೆಯ್ – ತ್ವರೆಮಾಡು |
೨ – ೪೩ವ|| |
ಭಲ್ಲೂಕ – ಕರಡಿ |
೭ – ೭೧ |
ಭವಬದ್ದ – ಪೂರ್ವಭವದಿಂದ ಬಂದ |
೪ – ೧೨೦ |
ಭಾಗಿನೇಯ – ಸೋದರ ಅಳಿಯ |
೬ – ೭೩ ವ|| |
ಭಾಜನ ಹೊಂದತಕ್ಕವನು |
೪ – ೧೬ |
ಭಾಜನೆ – ವಾಚನ |
೨ – ೩೫ |
ಭಾರತಿಕ – ನೃತ್ಯಗಾರ |
೩ – ೯೮ ವ|| |
ಭಾವಳಯ – ಪ್ರಕಾಶ ಮಂಡಲ |
೧ – ೧ |
(ತೀರ್ಥಂಕರರ ತಲೆಯ ಹಿಂದಿನ ಪ್ರಭಾಮಂಡಳ) |
|
ಭಾಷಿ – ಪ್ರಕಾಶವುಳ್ಳ |
೩ – ೪೧ |
ಭೀಮ – ಭಯಂಕರ |
೪ – ೧೧೦ |
ಭೈಕ್ಷ – ಭಿಕ್ಷೆ |
೧ – ೯೧ |
ಭಂಗಿ – ರೀತಿ |
೧ – ೬೦ |
ಭುಂಭುಕ – ಪ್ರಸಿದ್ಧವಾದ |
೩ – ೯೮ ವ|| |
|
|
ಮ |
|
ಮಚ್ಚ – ಮುಚ್ಚುಗತ್ತಿ, ಕೊಯ್ತ |
೫ – ೪೦ |
ಮಟ್ಟಮಾಗಿ – ಸರಿಯಾಗಿ |
೩ – ೧೪ ವ|| |
ಮಟ್ಟಿಗ(ಮಟಿಗ) – ಜಾತಿ ಸೂಚಕ, ನಾಮಧಾರಿ |
೬ – ೨೬ |
ಮಡ – ಹಿಮ್ಮಡ |
೩ – ೧೭ |
ಮಡಲ್ – ಹಬ್ಬು |
೧*೯೭ ವ|| |
ಮತಂಗಜ – ಆನೆ |
೫ – ೫೫ |
ಮತ್ತಿ – ಮತ್ತಿಯ ಗುರುತು |
೨ – ೩ ವ|| |
ಮದಿಲ್ – ಗೋಡೆ |
೬ – ೨೬ |
ಮಧುಲಿಟ್ – ಭ್ರಮರ |
೫ – ೧೦೧ |
ಮನ್ಯು – ದುಃಖ, ಸಿಟ್ಟು |
೭ – ೩೫ ವ|| |
ಮಮ್ಮೞಿಗೊಳ್ – ಸಾವು ನೋವಿಗೊಳಗಾಗು |
೮ – ೧೦ ವ|| |
ಮರ್ಮವೇದಿ ಗುಟ್ಟನ್ನರಿಯುವವ |
೭ – ೧೮ |
ಮರಮಸಕ – ಬಹಳ ಕೋಪ |
೫ – ೧೧೩ ವ|| |
ಮರೀಚಿ – ಕಿರಣ |
೪ – ೧೦೨ |
ಮರುಚ್ಚಾಪ – ಇಂದ್ರಧನುಸ್ಸು |
೮ – ೬೩ |
ಮರುನ್ನದಿ – ದೇವಗಂಗೆ |
೭ – ೧೭ |
ಮಱಪಿಕ್ಕು – ಅಡಗಿಕೊಳ್ಳು |
೮ – ೧೦೨ |
ಮಲಗು – ದಿಂಬು |
೮ – ೧೦೭ |
ಮಲಂಗು – ತಲೆದಿಂಬು, ವಿಶ್ರಮಿಸು |
೫ – ೧೧೧ ವ|| |
ಮಲ್ಲಗಳ – ಕುಸ್ತಿಯ ಕಣ |
೮ – ೯೫ |
ಮಲ್ಲವಱೆ – ಜಟ್ಟಿಗಳ ವಾದ್ಯ |
೮ – ೯೨ |
ಮಲ್ಲವೋರ್ದು – ಮಲ್ಲಯುದ್ಧಮಾಡಿ |
೮ – ೮೪ ವ|| |
ಮಲ್ಲಂತಿಗಿರಿ – ಕಾಸೆಯನ್ನು ತೊಡುವುದು |
೩ – ೨೮ ವ|| |
ಮಲ್ಲಿಕ್ಕು – ಕುಸ್ತಿಯಾಡು |
೮ – ೮೪ ವ|| |
ಮರ್ವು – ಮಬ್ಬು |
೧ – ೬೮ |
ಮಹಿಭಾರ – ಭೂಮಿಯ ಭಾರ |
೧ – ೧೧೯ |
ಮಹೋಕ್ಷ – ಎತ್ತು |
೮ – ೧೮ |
ಮಳೀಮಸ – ಮಾಸಿದ, ಕೊಳಕು |
೫ – ೧೧೩ ವ|| |
ಮಂಜೂಷ – ಪೆಟ್ಟಿಗೆ |
೪ – ೯೬ |
ಮಂಡನ – ಅಲಂಕಾರ |
೩ – ೧೭ |
ಮಂಡನೀಭೂತ – ಅಲಂಕೃತ |
೬ – ೩೯ ವ|| |
ಮಂಡೆ – ತಲೆ |
೧ – ೯೨ ವ|| |
ಮಂದರ – ಪೂಜಾಮಂಟಪ |
೪ – ೧೪ ವ|| |
ಮಂದಸ – ಪೆಟ್ಟಿಗೆ |
೨ – ೩೦ |
ಮಾಣಿ – ವಟು |
೬ – ೩೪ |
ಮಾರತಕ – ಹಸಿರು ಬಣ್ಣದ ರತ್ನ |
೨ – ೧೩ |
ಮಾವಂತ – ಮಾವುತ |
೭ – ೫೭ ವ|| |
ಮಾಂಕರಿಸು – ತಿರಸ್ಕರಿಸು |
೧ – ೨೯ |
ಮಿಸಿಸು – ಪ್ರಕಾಶಿಸು |
೬ – ೪೯ |
ಮಿಳಿ – ಹಗ್ಗ |
೪ – ೧೨೩ ವ|| |
ಮಿಳಿರ್ – ವ್ಯಾಪಿಸು, ನೆಗೆ |
೭ – ೪ |
ಮಿಳಿರ್ – ಅಲುಗಾಡು |
೮ – ೬೮ |
ಮಿಳ್ಳಿಸು – ಅಲುಗಿಸು |
೪ – ೯೫ ವ|| |
ಮೀಂಬೊಣರ್ – ಮೀನಿನ ಜೋಡಿ |
೨ – ೩೬ |
ಮುಖರ – ಧ್ವನಿ |
೫ – ೧೯ |
ಮುಖರಿತ – ಧ್ವನಿಯನ್ನುಂಟು ಮಾಡಿದ |
೮ – ೧೨೦ |
ಮುಟ್ಟಪಡ – ಅಲಾಭ |
೩ – ೭೫ ವ|| |
ಮುಡಿ – ದೇವರ ಕಿರೀಟ |
೨ – ೬ |
ಮುನ್ನೀರ್ – ಸಮುದ್ರ |
೮ – ೪೪ |
ಮುನ್ನೇಸರ್ – ಉದಯಿಸುವ ಸೂರ್ಯ |
೧ – ೧೧೫ |
ಮುಮ್ಮೞಿ – ಭಯಂಕರ ಸಾವು |
೬ – ೬೪ |
ಮುಸ್ತಾಕ್ಷತ – ಜೇಕಿನ ಗಡ್ಡೆಯ ಗಾಯ |
೩ – ೬೪ |
ಮುಸುಂಬು – ಮುಸುಕು |
೫ – ೧೧೩ ವ|| |
ಮುೞ್ತುವು – ಮುದುಡಿದವು |
೭ – ೬೫ |
ಮುಂಜಕೇಶಿ – ಕೃಷ್ಣ |
೮ – ೨೨ ವ|| |
ಮುಂತಾಗಿ – ಮುಖ್ಯವಾಗಿ |
೧ – ೪ |
ಮೂಗೞ್ಕೆ – ಮೂಕರೋದನ |
೭ – ೩೫ ವ|| |
ಮೂಮೆ – ಮೂರು ಸಲ |
೩ – ೯ |
ಮೂರಿ – ಬಾಯಿ |
೩ – ೪೬ |
ಮೂರಿಗೊಳ್ – ತಿರುವು |
೭ – ೮೪ |
ಮೃಗೋದ್ಭವ – ಕಸ್ತೂರಿ |
೧ – ೬೩ |
ಮೆಡರ್ – ಹೆಣೆ |
೫ – ೫೫ |
ಮೇಚಕಿತ – ಕಪ್ಪಾದ |
೮ – ೬೩ |
ಮೇಷ – ತಗರ್ |
೪ – ೧೧೮ |
ಮೇಳಾಪಕ – ಜೊತೆ |
೫ – ೨೪ |
ಮೊಕ್ಕಳಂ – ಬಹಳ |
೭ – ೩೪ ವ|| |
ಮೊಗಸು – ಆರಂಭಿಸು |
೪ – ೧೩೨ ವ|| |
ಮೊಗಸು – ಮೇಲೆ ಬೀಳು |
೮ – ೭೦ |
ಮೊಗ್ಗರ – ಸಮೂಹ |
೪ – ೫೦ ವ|| |
ಮೊಡವಿ – ಮಡಬಕ್ಕಿ |
೨ – ೧೧ |
ಮೊಳಕಲಿಸು – ಒಂದರೊಳಗೊಂದು ಸೇರು |
೬ – ೪೩ |
ಮೋದು – ಹೊಡೆ |
೪ – ೧೧೫ |
ಯ,ರ,ಱ |
|
ಯಕ್ಷಕರ್ದಮ – ಧೂಪ |
೮ – ೨೧ ವ|| |
ಯಷ್ಟಿ – ದಾರ |
೭ – ೪೨ |
ಯಾದವೋದ – ಮೊಸಳೆ |
೬ – ೫೭ |
ಯುವಾನ – ತರುಣ |
೬ – ೫೨ |
ಯುಷ್ಮತ್ – ನಿಮ್ಮ |
೬ – ೫೩ |
ರತ್ನಗರ್ಭೆ – ಭೂಮಿ |
೪ – ೧೩೦ |
ರಥಾಂಗ – ಚಕ್ರವಾಕ ಪಕ್ಷಿ |
೫ – ೧೦೧ |
ರವಳಿ – ಒಂದು ವಾದ್ಯ |
೮ – ೭೫ ವ|| |
ರುಕ್ – ಕಿರಣ |
೫ – ೭೪ |
ರೋಮಂಥ – ಮೆಲಕು ಹಾಕುವದು |
೩ – ೪೬ |
ರಂಗಕಾಱ – ಅಗಸ (ಬಣಗಾರ) |
೮ – ೭೭ ವ|| |
ಱುಂಜೆ – ಒಂದು ವಾದ್ಯ |
೮ – ೭೫ ವ|| |
ಱೋಡಗ – ಹೀಯಾಳಿಸುವವ |
೫ – ೧೧೩ ವ|| |
ಲ |
|
ಲಕ್ಕೆ – ಲಕ್ಷ(ಸಂಖ್ಯೆ) |
೪ – ೧೫೧ |
ಲಕ್ಷ್ಮೀಸುತ – ಕಾಮ (ಮನ್ಮಥ) |
೪ – ೬೮ ವ|| |
ಲಟಹ – ಝಣತ್ಕಾರ |
೧ – ೧೦ |
ಲಪನ – ಮುಖ |
೧ – ೩ |
ಲಸತ್ – ಪ್ರಕಾಶಮಾನವಾದ |
೧ – ೩೬ |
ಲಾಳಾಜಳ – ಜೊಲ್ಲು |
೩ – ೮೭ |
ಲುಳಿತ – ಅಲ್ಲಾಡುವ |
೨ – ೮೮ |
ಲುಂಟಿತ – ಅಪಹರಿಸಿದ |
೪ – ೬೯ |
ಲೇಲಿಹಾನ – ಹಾವು |
೮ – ೩೩ |
ಲೋಚ – ಕೇಶೋತ್ಪಾಟನ |
೩ – ೨೮ ವ|| |
ಲೋಯಿಸರ – ಲೋಳಸರ |
೭ – ೭೬ ವ|| |
ಲೋವೆ – ಮನೆಯ ಸೂರು |
೧ – ೯೨ ವ|| |
ವ |
|
ವಕ್ತ್ರಪದ್ಮ – ಮುಖಕಮಲ |
೧ – ೧೧೪ |
ವಪ್ರ – ಗೋಡೆ |
೨ – ೮೦ |
ವರುಡು – ಉಜ್ಜು |
೪ – ೧೨೨ |
ವಲ್ಲಕಿ – ವೀಣೆ |
೬ – ೧೯ ವ|| |
ವಲ್ಲರಿ – ಬಳ್ಳಿ |
೧ – ೯೬ |
ವಲ್ಲೂರ – ಒಣಗಿದ ಮಾಂಸ |
೫ – ೪೧ |
ವಸದನ – ಪ್ರಸನ್ನತೆ |
೭ – ೮೮ ವ|| |
ವ್ಯಜನ – ಬೀಸಣಿಕೆ |
೫ – ೭೪ |
ವ್ಯತಿಕೃತ – ಚೆಲ್ಲಿದ, ಹರವಿದ |
೮ – ೧೨೦ |
ವ್ಯವಧಾನ – ತಾತ್ಪೂರ್ತಿಕವಾಗಿ ತಡೆಯುವದು |
೧ – ೯೬ |
ವಾಗುರೆ – ಬಲೆ ಹಾಕುವವಳು |
೩ – ೫೬ |
ವಾಗ್ಗೇಯಕಾರ – ಗಮಕಿ |
೩ – ೯೮ ವ|| |
ವಾಚಾಳ – ಬಹಳ ಮಾತಾಡುವ |
೩ – ೬೧ ವ|| |
ವಾನೇಯ – ಕಾಡಿಗೆ |
೪ – ೧೧೬ |
ವಾನೇಯನಾಗ – ಕಾಡಾನೆ |
೫ – ೯೬ |
ವಾರುವ – ಕುದುರೆ |
೪ – ೧೪೧ |
ವಾಳ – ಬಾಲ |
೪ – ೧೨೧ |
ವಾಳವಾಜಯ – ಒಂದು ಬಗೆಯ ರತ್ನ |
೫ – ೯೧ |
ವಾಂಶಿಕ – ಕೊಳಲು |
೩ – ೯೮ ವ|| |
ವ್ಯಾದಾನ – ವಿಸ್ತಾರವಾದ |
೭ – ೯೦ |
ವ್ಯಾಧೂತ – ಬೀಸಲ್ಪಟ್ಟ |
೫ – ೭೪ |
ವ್ಯಾಳ – ಸರ್ಪ |
೧ – ೨ |
ವ್ಯಾಳೋಳ – ಅಲ್ಲಾಡಿಸುವ, ಹರಣಮಾಡುವ |
೧ – ೨ |
ವಿಕರಿ – ಚಂಚಲ |
೭ – ೮೫ |
ವಿಕಿರ – ಹಾರಾಡುವ |
೮ – ೬೩ |
ವಿಕ್ಷೇಪ – ವಿಸ್ತಾರವಾಗುವುದು |
೮ – ೬೩ |
ವಿಗುರ್ವಣೆ – ಭಯಂಕರತನ |
೮ – ೮೮ ವ|| |
ವಿಚಕಿಳ – ಮಲ್ಲಿಗೆ |
೮ – ೧೨೦ |
ವಿಚಯನ – ಹುಡುಕುವುದು |
೪ – ೮೫ |
ವಿಚ್ಛತ್ತಿ – ನಾಶ |
೧ – ೧೧ |
ವಿಜಗೀಷು – ವಿಜಯಾಭಿಲಾಷಿ |
೪ – ೭೧ |
ವಿದಗ್ಧ – ಪಂಡಿತ |
೧ – ೫೦ |
ವಿದಗ್ಧೆ – ವಿದುಷಿ |
೪ – ೯೪ |
ವಿದ್ರುಮ – ಹವಳ |
೨ – ೧೩ |
ವಿದ್ವೇಷ – ವೈರ |
೮ – ೮೨ |
ವಿಧಾತ್ರ – ಬ್ರಹ್ಮ |
೨ – ೨೪ |
ವಿನಿಷ್ಕ್ರಾಂತ – ಹೊರಗೆ ಚಾಚಿದ |
೩ – ೬೩ |
ವಿಭೂತಿ – ಸಂಪತ್ತು |
೪ – ೧೦೪ |
ವಿಭ್ರಮ – ಶೋಭೆ |
೧ – ೬೮ ವ|| |
ವಿಭ್ರಾಜಿಸು – ಪ್ರಕಾಶಿಸು |
೪ – ೫೮ |
ವಿಯಚ್ಚರ – ಆಕಾಶದಲ್ಲಿ ಚರಿಸುವವ |
೪ – ೮೫ ವ| |
ವಿವರ – ಸಂದು |
೮ – ೨೮ |
ವಿಶಸನ – ಕೊಲೆ |
೫ – ೪೦ |
ವಿಶ್ರುತ – ಪ್ರಸಿದ್ಧವಾದ |
೪ – ೬೮ |
ವಿಷಯ – ದೇಶ |
೨ – ೬೭ |
ವಿಷಾಣ – ಕೊಂಬು |
೪ – ೧೨೧ |
ವಿಷ್ಟರ – ಪೀಠ |
೧ – ೧೦೯ ವ|| |
ವಿಹಾಯಸ – ಆಕಾಶ |
೮ – ೫೭ |
ವೀತ – ಮಾಯವಾದ, ಹೋದ |
೧ – ೧೦೭ |
ವೀಪ್ಸೆ – ಬಯಕೆ |
೨ – ೮ |
ವೀವೃತ – ಆವರಿಸಿದ |
೩ – ೬೩ |
ವ್ರೀಡಾ – ಲಜ್ಜೆ |
೭ – ೩೪ ವ|| |
ವೃಜಿನ – ಪಾಪ |
೧ – ೧೦೭ |
ವೃತ್ತಕ – ವೃತ್ತಾಂತ |
೫ – ೬೭ |
ವೇದಂಡ – ಆನೆ |
೫ – ೧೧೦ |
ವೇಲೆ – ತೆರೆ |
೧ – ೭೭ |
ವೈಕುರ್ವಣ – ರೂಪವನ್ನು ಬದಲಿಸುವ ವಿದ್ಯೆ |
೬ – ೩೭ ವ|| |
ವೈಶ್ವಾನರ – ಬೆಂಕಿ |
೬ – ೭೭ |
ವ್ಯೋಕಾರ – ಕಮ್ಮಾರ, ಲೋಹಕಾರ |
೫ – ೧೭…. |
ಶ,ಷ |
|
ಶಕುಂತ – ಪಕ್ಷಿ |
೨ – ೪೧ ವ|| |
ಶಕ್ರಚಾಪ – ಕಾಮನ ಬಿಲ್ಲು |
೪ – ೬೦ |
ಶಠ – ನಾಯಕನಲ್ಲಿನ ಒಂದು ಭೇದ |
೧ – ೧೫೪ |
ಶಫರಿ – ಹೊಳೆಯುವ ಹೆಣ್ಣು ಮೀನು |
೩ – ೫೬ |
ಶಬಾಲಯ – ಹೆಣಗಳ ಸಾಲು |
೫ – ೨೨ |
ಶಲಾಟು – ಹೀಚು |
೩ – ೭೮ |
ಶಶಿಮಣಿ – ಚಂದ್ರಕಾಂತ ಮಣಿ |
೪ – ೯೨ ವ|| |
ಶಳ – ಮುಳ್ಳು ಹಂದಿ |
೩ – ೬೩ |
ಶ್ವಗಣ – ನಾಯಿಗಳ ಗುಂಪು |
೫ – ೨೦ |
ಶಾಕ್ವರ – ಎತ್ತು |
೮ – ೨೦ ವ|| |
ಶಾಣ – ಮಸೆಯುವ ಕಲ್ಲು |
೪ – ೯೧ |
ಶಾತ – ಹರಿತವಾದ |
೬ – ೪೭ |
ಶಾತಕುಂಭ – ಬಂಗಾರ |
೬ – ೮೨ ವ|| |
ಶಾಬಕ – ಮರಿ |
೧ – ೯೪ |
ಶಾರಿಕೆ – ಹೆಣ್ಣು ಗಿಳಿ |
೧ – ೯೪ |
ಶಾರ್ವರಿ – ರಾತ್ರಿ ೧ – ೯೬ |
|
ಶೀರ್ಣ – ನೋವಾದ |
೮ – ೧೮ |
ಶ್ರುತ – ಶಾಸ್ತ್ರ (ಜೈನ ಆಗಮ) |
೧ – ೧೨ |
ಶ್ರುತದೇವಿ – ಶಾರದೆ |
೧ – ೧೬ |
ಶುಂಭತ್ – ಹೊಳೆಯುವ |
೩ – ೨೦ |
ಶೈಲೂಷ – ನಟ |
೩ – ೯೮ ವ|| |
ಶೌಂಡಿಕ – ಮದ್ಯೆ ಮಾಡುವವ |
೪ – ೧೧೪ ವ|| |
ಸ |
|
ಸಂಕಿಚನ – ಪರಮಾವಧಿ |
೩ – ೯೯ ವ|| |
ಸಪ್ಪಸಿರ – ಮುಷ್ಟಿಯ ಒಂದು ರೀತಿ |
೮ – ೯೦೨ ವ|| |
ಸಪ್ತಾರ್ಚಿ – ಧೂಮಕೇತು, ಬೆಂಕಿ |
೪ – ೫೪ |
ಸಮಗ್ರನ್ – ಪರಿಪೂರ್ಣನು |
೧ – ೩೯ |
ಸಮನಿಸು – ಒದಗು, ಪ್ರಾಪ್ತವಾಗು |
೧ – ೨೩ |
ಸಮಯ – ಸಿದ್ಧಾಂತ |
೧ – ೧೩ |
ಸಮವಾಯ – ಒಟ್ಟಿಗೆ ಸೇರುವದು |
೫ – ೪೧ ವ|| |
ಸಮಸಂದು – ಆಸಕ್ತಿ ವಹಿಸಿ |
೧ – ೩೨ |
ಸಮ್ಮದ – ಆನಂದದಾಯಕ |
೧ – ೧೦೭ |
ಸಯ್ತಡಿ – ನೇರವಾದ ಪಾದ |
೨ – ೫೮ |
ಸರವೇಱಿಸು ಪೋಣಿಸು |
೧ – ೩೯ |
ಸರಸರಿಸು – ತ್ವರೆ ಮಾಡು |
೭ – ೪೪ ವ|| |
ಸರಿಗಲ್ಲು – ಬಂಡೆಗಲ್ಲು |
೨ – ೧೮ |
ಸರೋಮಾಳಿ – ರೋಮ ಪಂಕ್ತೆ |
೨ – ೨೫ |
ಸಱಿ ಬಿಗಿಯಾದ ಹಿಡಿತ |
೮ – ೬೭ ವ|| |
ಸಱಿ – ಬಿಗಿಯಾದ ಹಿಡಿತ |
೮ – ೬೭ ವ|| |
ಸಱಿ – ಕಡಿದಾದ ಸ್ಥಳ, ಕಮ್ಮರಿ |
೮ – ೧೦ ವ|| |
ಸಱಿಮೊಲೆ – ದೊಡ್ಡಮೊಲೆ |
೭ – ೭೦ |
ಸಲಗ – ಶಲಾಕೆ |
೧ – ೭೪ |
ಸವಡಿ – ಜೋಡಿ |
೨ – ೨೫ |
ಸವನ – ಅಭಿಷೇಕ |
೨ – ೭೭ |
ಸಸಿನ – ಸರಳವಾಗಿ |
೧ – ೮೧ |
ಸಹಕಾರ – ಮಾವು |
೨ – ೭೨ |
ಸಹಪಾಂಶುಕ್ರೀಡಿತ – ಬಾಲ್ಯ ಸ್ನೇಹಿತ |
೭ – ೭೮ ವ|| |
ಸಹಸ್ರಾಕ್ಷ – ದೇವೇಂದ್ರ |
೧ – ೮೪ |
ಸಂಚಳ – ಚಂಚಳ |
೧ – ೬೧ |
ಸಂಛನ್ನ – ಮುಚ್ಚಿದ |
೩ – ೯೮ ವ|| |
ಸಂತಾನ – ಇಂದ್ರನ ವನ(ನಂದನ)ದಲ್ಲಿಯ ಒಂದು ಹೂವಿನ ಗಿಡ |
೨ – ೧೯ |
ಸಂಭೇದ – ಕೂಡುವಿಕೆ |
೪ – ೧೦೭ ವ|| |
ಸಂಮದ – ಸಂಬಂಧ |
೧ – ೧೬ |
ಸಂವೇಗ – ಉದ್ವೇಗ |
೪ – ೧೧೭ ವ|| |
ಸಂಸಕ್ತ – ಹೊಂದಿದ, ಉಳ್ಳ |
೧ – ೩ |
ಸ್ತಂಬೇರಮ – ಆನೆ |
೮ – ೮೧ |
ಸ್ವರ್ಗೌಕಸ – ದೇವತೆ |
೭ – ೪೪ ವ|| |
ಸಾಚಿನ್ಯ – ಸ್ನೇಹ |
೧ – ೪ |
ಸಾರ್ಧ ಷೋಡಸಮಾಸ – ಹದಿನಾರುವರೆ ತಿಂಗಳು |
೪ – ೬೫ ವ|| |
ಸಾನು – ತಪ್ಪಲು ಪ್ರದೇಶ |
೧ – ೬೩ |
ಸಾರಸ್ವತ – ಪಂಡಿತ |
೨ – ೧ |
ಸಾಸ್ನಾಪಟ – ಗಂಗೆದೊಗಲು |
೪ – ೧೨೧ |
ಸ್ಫಾರ – ಪ್ರಕಾಶಿಸುವ |
೩ – ೩೬ |
ಸ್ವಾಯತ್ತ – ಸ್ವಾಧೀನವಾದ |
೧ – ೧ |
ಸಾಂಪ್ರಯೋಗ – ಕೂಡುವಿಕೆ |
೪ – ೮೭ |
ಸಾಂಯಾತ್ರಿಕ – ಸಮುದ್ರ ವ್ಯಾಪಾರಿ |
೬ – ೨ |
ಸಾಂಯುಗೀನ – ಯುದ್ಧಚತುರ |
೪ – ೧೩ ವ|| |
ಸಿಗ್ಗು – ನಾಚಿಕೆ |
೩ – ೨೨ |
ಸಿಗತ – ತುಂಟ |
೭ – ೮೪ |
ಸಿರ್ಪು – ಸಿಪ್ಪು |
೪ – ೧೧೫ |
ಸಿರಿಕಂಡ – ಶ್ರೀಗಂಧ |
೨ – ೧೫ |
ಸಿಂಜಿನಿ – ಹೆದೆ |
೬ – ೧೭ ವ|| |
ಸ್ತಿಮಿತ – ತಡೆದ |
೩ – ೨೨ |
ಸೀಕರ – ತುಂತುರು ಹನಿ |
೪ – ೬೩ |
ಸೀಗುರಿ – ಚಾಮರ |
೧ – ೮೮ |
ಸೀವರ – ತುಂತುರು ಹನಿ |
೫ – ೯೨ |
ಸುಟ್ಟಿಪ – ತೋರಿಸುವ |
೮ – ೨೦ |
ಸುಟ್ಟುರೆ – ಸುಟ್ಟುರೆ ಗಾಳಿ |
೮ – ೬೪ ವ|| |
ಸುಧಾಂಶು – ಚಂದ್ರ |
೨ – ೧೬ |
ಸುಭಗ – ಸೌಭಾಗ್ಯ |
೧ – ೪೪ |
ಸುರಭಿ – ಕಾಮಧೇನು |
೧ – ೨೨ |
ಸೂಡು – ಸುಡು, ಗುಂಪು ಹಾಕು |
೩ – ೫೧ |
ಸೂಡು – ಬೆಂಕಿ, ಕಿಚ್ಚು |
೬ – ೪೨ ವ|| |
ಸೂರಿ – ಪಂಡಿತ |
೪ – ೧೦೭ ವ|| |
ಸೂಸು – ಚೆಲ್ಲು |
೧ – ೮೧ |
ಸೂಳೈಸು – ಶಬ್ಧಮಾಡು |
೨ – ೫೪ |
ಸೆಕಳಿ – ಉಷ್ಣತೆ |
೭ – ೪ |
ಸೆಜ್ಜೆವುಳ್ಳ – ಶಯ್ಯಾಗೃಹದ ಅಧಿಕಾರಿ |
೧ – ೧೨೧ವ|| |
ಸೆಯ್ವೆಱಗು – ಬಹಳ ಆಶ್ಚರ್ಯ |
೬ – ೭ |
ಸೆಲ್ಲಿಸು – ಸಿಕ್ಕಿಸು |
೩ – ೨೫ |
ಸೆಳೆಗೊಂಬು – ತೆಳುವಾದ ಕೊಂಬೆ |
೨ – ೧೨ |
ಸೇದೆ – ಬಳಲಿಕೆ |
೫ – ೧೧೧ |
ಸೇದೆಪಡು – ಬಳಲು |
೪ – ೫೦ ವ|| |
ಸೈಪು – ಪುಣ್ಯ |
೧ – ೩೭ |
ಸೈರಿಭ – ಕೋಣ |
೩ – ೪೫ |
ಸೊಡರ್ವಕ್ಕು – ದೀಪದ ಕಾಡಿಗೆ |
೭ – ೫೬ |
ಸೊದೆಗಡಲು – ಕ್ಷೀರ ಸಮುದ್ರ |
೭ – ೧೭ |
ಸೊಂದಿಯವನ್ – ವ್ಯಭಿಚಾರದಿಂದ ಹುಟ್ಟಿದವನು |
೬ – ೭೧ |
ಸೊವಡು – ವಾಸನೆ |
೮ – ೬೪ ವ|| |
ಸೋದು – ಓಡಿಸು |
೪ – ೧೨೭ |
ಸೋನೆ – ಜಡಿಮಳೆ |
೪ – ೬೮ ವ|| |
ಸೋಲಕಾರ್ತಿ – ಮೋಹಿಸುವವಳು |
೫ – ೨ ವ|| |
ಸೋವು – ಎಬ್ಬಿಸು ಓಡಿಸು |
೪ – ೮೪ ವ|| |
ಸೋಂದು – ಓಡಿಸು |
೪ – ೫೦ ವ|| |
ಸ್ರೋತ – ಹರಿಯುವ |
೩ – ೪೯ |
ಸೌಧರ್ಮಿಕೆ – ಧರ್ಮವಂತಿಕೆ |
೫ – ೧೧ |
ಸೌಭ್ರಾತ್ರ – ಒಡಹುಟ್ಟಿದ |
೫ – ೫ ವ|| |
ಸೌರಭೇಯ – ಎತ್ತು |
೪ – ೧೨೩ ವ|| |
ಹ |
|
ಹರ್ಯಕ್ಷ – ಸಿಂಹ |
೭ – ೯೨ |
ಹರಿ – ಸಿಂಹ |
೧ – ೮೦ |
ಹೀಲಿ – ನಲಿಲ ಗರಿ |
೪ – ೬೨ |
ಹೂಹೆ – ಗೊಂಬೆ |
೪ – ೧೫೦ |
ಹೆರೆ – ಚಂದ್ರ |
೨ – ೧೬ |
Leave A Comment