ಖಗಕುಲ ೧೪ – ೧೧೭ ಖೇಚರವಂಶ
ಖದಿರು ೬ – ೧೬ ಗ ವೃಕ್ಷವಿಶೇಷ
ಖರಕರ ೬ – ೮೮ ಚಂಡಕಿರಣ, ಸೂರ್ಯ

ಗಟ್ಟಿಸು ೧೪ – ೩೨ ಹೊಡೆ
ಗರವಸಂಗೊಳ್ ೧೨ – ೬ ಗ ಅಧೀನಪಡಿಸಿಕೊ
ಗೞಪು ೧ – ೨೧ ಹರಟು, ಕೂಗು
ಗೞೆ ೪ – ೬೮ ಗಣಿ ಸ್ತಂಭ
ಗಾಡಿ ೨ – ೪೫ ಅಂದ
ಗಾಣಿಕ್ಯ ೬ – ೧೦೮ ವಾರಾಂಗನೆಯರ ಗುಂಪು
ಗಾವರ ೮ – ೩೦ ಗದ್ದಲ
ಗಾವರಿಸು ೧೦ – ೧೩ ಗದ್ದಲಮಾಡು
ಗಾವಳಿ ೬ – ೫ ಗ, ೧೩ – ೭೬ ಆರ್ಭಟ, ಗದ್ದಲ
ಗಾವಿಲೆ ೧೪ – ೩೭ (ಹಳ್ಳಿಯವಳು) ದಡ್ಡಳು
ಗಾೞೇೞು ೨ – ೪ ರಂಪವಾಗು
ಗಿಡದುಱುಗಲು ೬ – ೧೬ ಗ ಒತ್ತಾದ ಗಿಡಗಳತೋಪು
ಗುಜ್ಜುಗೊಂಡುವು ೧೪ – ೧೨೭ ಸಂಕುಚಿತವಾದವು
ಗುಜ್ಜುವಜ್ಜೆ ೧೧ – ೫ ಪುಟ್ಟಹಜ್ಜೆ
ಗುಣಕೞುಗೊಂಡು ೧ – ೬೦ ಪ್ರೀತಿಸಿ
ಗುಣ್ಪು ೧ – ೫೯ ಗಾಂಭೀರ್ಯ
ಗುಳ್ಳೆ ೧ – ೪೧ ಕೃತಕವಾದ ಮುತ್ತು
ಗೆಡೆ ೧ – ೬೨ ಜೊತೆ, ಕೆಳೆ
ಗೆಡೆಯೊಳ್ ೧೪ – ೫೭ ಸ್ನೇಹಮಾಡಿಕೊಳ್ಳು, ಜೊತೆಯಾಗು
ಗೆತ್ತು ೫ – ೪೬ ಭಾವಿಸಿ
ಗೊಜ್ಜಿಗೆ ೧೦ – ೧೦ ಗೊಜ್ಜಂಗಿ ಹೂ
ಗೊಟ್ಟು ೨ – ೧೦೭ (ಗ) ಮರೆ, ಮೂಲೆ
ಗೊಡ್ಡ ೨ – ೬೬ ಮೋಸ, ಮಾಯೆ
ಗೊಡ್ಡೆಯರ್ ೧೪ – ೪೦ ದಡ್ಡಿಯರು
ಗೊಲೆ ೧೧ – ೬೭ ಗೊಂಚಲು
ಗೊವರ ೧೩ – ೨ ಕೊಮರ – ಕುಮಾರ
ಗೋತ್ರ ೧ – ೯೦ ವಂಶ
ಗೋರಿಗೊಳಿಸು ೫ – ೧೨ ಆಕರ್ಷಿಸಿ ಹಿಡಿ
ಗ್ರಾವ ೯ – ೫೨ (ಗ) ಪರ್ವತ, ಕಲ್ಲು
ಗಂದೆ ೪ – ೧೪೪ ಊತ, ಬಾವು
ಗಂಧವಹನ ೭ – ೮೩ ಗಾಳಿ
ಗಂಧಶಾಲಿ ೬ – ೧೩೦ ಸುವಾಸನೆಯ ಬತ್ತದ ಗದ್ದೆ
ಗುಂಜೆ ೧೧ – ೩ ಗುಲಗಂಜಿ
ಗುಂಡಿಗೆಗಟ್ಟು ೮ – ೫೨ (ಗ) ಉಂಡೆಯಾಗಿ ಕಟ್ಟು
ಗೆಂಟು ೨ – ೧೦೨ ಸ್ನೇಹ, ಹತ್ತಿರ

ಘಟ್ಟವಳ್ತಿ ೭ – ೧೨ ಗಂಧ ತೇಯುವವವಳು
ಘಟೋದ್ನಿ ೧ – ೪೮ ಘಟದಂತಹ ಕೆಚ್ಚಲುಳ್ಳದ್ದು
೫ – ೧೦೭ ಮಡಿಕೆಯಷ್ಟು ದೊಡ್ಡ ಕೆಚ್ಚಲು ಉಳ್ಳ ಹಸು
ಘನಸಮಯ ೫ – ೩೪ ಮೋಡದಕಾಲ
ಘರ್ಮೋದ ೨ – ೧೩೩ ಬೆವರು ಹನಿ
ಘೋಷ ೫ – ೯೮ ಗೊಲ್ಲರಹಳ್ಳಿ

ಚಕ್ಕೞೆದ ೧೩ – ೯೨ ಚಪ್ಪಟೆಯಾದ
ಚಪ್ಪರಿಸು ೮ – ೫೩ ಕೂಗು, ಗದರಿಸು
ಚಲ್ಲ ೧೩ – ೧೫೩ ಸರಸ
ಚಲ್ಲವಾಡು ೬ – ೯೭ ಸರಸಮಾಡು
ಚಷಕ ೧೪ – ೧೮ ಬಟ್ಟಲು
ಚಳಿತುವು ೧೪ – ೭೨ ಸೋತುಹೋದವು
ಚಕ್ಷೂರಾಗ ೧೩ – ೧೬೧ ನೋಟದಲ್ಲಿ ತೋರುವ ಪ್ರೇಮ
ಚಾರಿ ೪ – ೩೭ ನಾಟ್ಯಗತಿ
ಚಿಕುರ ೧೦ – ೩ ತಲೆಗೂದಲು, ಮುಡಿ
ಚಿತ್ರಿಕೆ ೮ – ೮೦ ಗ ಚಿತ್ರದ ಬೊಂಬೆ
ಚಿಬ್ಬಸಲೆ ೫ – ೫೭ ಚಿಕ್ಕ ಹಸಲೆ
ಚೆಚ್ಚರಂ ೧ – ೫೫ ಬೇಗ
ಚೆಲ್ಲ ೧೩ – ೧೫ ಸರಸ
ಚೊಕ್ಕಳ ೩ – ೨೦ ಗ ಅಂದ, ಗರಗರಿಕೆ
ಚೌಕಿಗೆ ೨ – ೩೧ಗ ಒಳಗಿನ ಕೈಸಾಲೆ
ಚಂಕ್ರಮಣ ೧೪ – ೪೯ ಗ ಸಂಚಾರ, ದಾಟುವಿಕೆ
ಚಂಡಿಪ ೧೪ – ೪೭ ಗ ಸಂಚಾರ, ದಾಟುವಿಕೆ
ಚಂಡಿಪ ೧೪ – ೪೭ ಹಟಮಾಡುವ
ಚಂದನಚ್ಛಟಾ ೧೩ – ೬೬ ಗಂಧದ ಉಂಡೆ
ಚಂದನದೊಡ್ಡೆ ೧೨ – ೧೨ ಗ ಗಂಧದ ರಾಶಿ
ಚಾಂಪೇಯ ೩ – ೮೬ ಚಂಪಕ ಸಂಬಂಧವಾದ

ಜಕ್ಕವಕ್ಕಿ ೧೦ – ೧೫ (ಗ) ಚಕ್ರವಾಕ ಪಕ್ಷಿ
ಜಗುೞ್ದು ೩ – ೭೫ (ಗ) ಗದರಿಸುವಿಕೆ
ಜರಚ್ಛದನಂ ೯ – ೧೧೩ ಹಣ್ಣೆಲೆ
ಜಲಜಲಿಸು ೫ – ೨೮, ೧೩ – ೧೦೫ ಥಳಥಳಿಸು ಪ್ರಕಾಶಿಸು
ಜವನಿಕೆ ೧೩ – ೧೧೫ ತೆರೆ, ಪರದೆ
ಜಸ ೪ – ೫೩ ಯಶಸ್ಸು
ಜಳಯಂತ್ರ ೧೩ – ೧೩೦ (ಗ) ಪಿಚಕಾರಿ
ಜಱುಚು ೩ – ೧೧ ಕೂಗು
ಜಾಣ್ಮೆಗೆ ೩ – ೮೬ ಹೆಚ್ಚಿನ ಜಾಣತನದಿಂದ
ಜಾತವೇದ ೧ – ೮೯ (ಗ) ಅಗ್ನಿ
ಜಾದಿ ೧ – ೧೪ ಜಾಜಿಹೂ
ಚಾಳಕ ೪ – ೧೪ ಸಮೂಹ
ಜಿಗಿಲ್ತಿರೆ ೮ – ೪೫ ಅಂಟಿರಲು
ಜಿಗುೞೆ ೧ – ೩೨ ಜಿಗುಳೆ, ಜಿಗಣೆ
ಜೀವದನ ೧೨ – ೬೦ ಜೀವಧನ, ಪಶುಗಳು
ಜೇವಣಸಾಲೆ ೬ – ೭೫ ಊಟದ ಮನೆ
ಜಿಂಹ ೭ – ೧೧೩ ವಕ್ರ
ಜೇವೆ ೧೦ – ೧೧ ತಂಬೂರಿಯ ಜೀವಾಳ
ಜೈವಾತಖ ೧ – ೧ ಆಯುವಂತ, ಚಂದ್ರ
ಜೊತ್ತು ೩ – ೫೮ (ಗ) ರಾಶಿ
ಜೊನ್ನಂಗಳ್ ೭ – ೮೦ ಬೆಳದಿಂಗಳು
ಜೋಡೆ ೨ – ೫೨ ಸ್ವೈರಿಣಿ
ಜ್ಯಾ ೨ – ೯೮ ಹೆದೆ
ಜ್ಯಾಕಿಣ ೧ – ೮೬ ಹೆದೆ ತಗಲಿ ಆಗುವ ಜಡ್ಡು
ಜಂತದ ಪಾಪೆ ೧೨ – ೧೪ ದಂತದ ಬೊಂಬೆ
ಜಂಬಾಲ ೫ – ೫೮ ಕೆಸರು
ಜೊಂಡೆಗರ್ಬು ೧೧ – ೫೬ (ಗ) ದಪ್ಪ ಜಲ್ಲೆ
ಜೊಂಪ ೪ – ೧೪ ಗೊಂಚಲು
ಝಳಂಬಂ ೯ – ೫೫ ಹೊದಿಕೆ, ಮೇಲು ಮುಸುಕು
ಟೊಪ್ಪರ ೪ – ೩೩ ಶಿರಸ್ತ್ರಾಣ, ಟೋಪಿ

ತಕ್ಕರ್ ೧ – ೨೯ ಯೋಗ್ಯರು
ತಕ್ರ ೫ – ೧೧೦ ಮಜ್ಜಿಗೆ
ತಗುಳ್ ೧ – ೩೦ ಅ‌ಟ್ಟು
ತಟಾಕ ೫ – ೪೨ (ಗ) ಕೆರೆ
ತಡೆದಡಿಸು ೩ – ೨೦ (ಗ) ತತ್ತರಿಸು
ತಡಂಗು ೧೪ – ೪೩ ಅಡ್ಡಿ
ತಣಿ ೨ – ೯೫ ನಾಚಿಕೆ, ಲಜ್ಜೆ
ತಣ್ಣಸಗೊಂಡ ೯ – ೫೧ ತಣ್ಣಗಾದ
ತದುಕು ೯ – ೬೨ ಸಲ್ಲಕೀ ವೃಕ್ಷ
ತಪನೋಪಲ ೧೪ – ೩೩ ಗ ಸೂರ್ಯಕಾಂತ ಶಿಲೆ
ತಮಸೃಣ ೧ – ೨ ಪ್ರಕಾಶಮಾನ, ಮೃದು
ತಮಾಳ ೪ – ೧೪ ಹೊಂಗೆ ಗಿಡ
ತಳರ್ ೧ – ೮೯, ೬ – ೧೦೧ ಹೊರಡು, ಚಲಿಸು
ತಳರದೆ ೯ – ೧ ಕದಲದೆ
ತಳಾಮಳಕ ೨ – ೨೪ ಸ್ಪಷ್ಟ, ಅಂಗೈಯ ನಲ್ಲಿಯ ಕಾಯಿ
ತಳೆಯಿಕ್ಕು ೫ – ೧೦೪ ದನವನ್ನು ಕಟ್ಟು (ಕಾಲು ಕಟ್ಟು, ಒದೆವ ಹಸುವಿಗೆ)
ತೞೆ ೮ – ೪೬ ಗ ಛತ್ರಿ
ತಾತ್ಪರ್ಯ ೧ – ೫೩ ಉದ್ದೇಶ
ತಾರಗೆ ೪ – ೮೩ ನಕ್ಷತ್ರ
ತಾತ್ಪರ್ಯ ೧ – ೫೩ ಉದ್ದೇಶ
ತಾರಗೆ ೪ – ೮೩ ನಕ್ಷತ್ರ
ತಾರಾಧ್ವ ೬ – ೫ ನಕ್ಷತ್ರ ಪಥ, ಆಕಾಶ
ತಾರ್ಕ್ಷ್ಯ ೧ – ೮೯ (ಗ) ಗರುಡ
ತಾಱುಂತಟ್ಟುಂ ೧೩ – ೧೩೦ (ಗ) ಸಿಕ್ಕಾಪಟ್ಟೆ,
ತಾಱಿ ೮ – ೬೨ ಒಣಗಿ
ತಿಗ್ಮಾಂಸು ೬ – ೫೦ ಸೂರ್ಯ
ತಿಮಿರ್, ತಿಮಿರ್ದು ೬ – ೧೬ (ಗ) ಉಜ್ಜಿ, ಒರಸಿ
ತಿಱಿದು ೧೧ – ೭ ಗ ಆಯ್ದು, ಕಿತ್ತು
ತಿಱಿಯದಿರ್ ೭ – ೮೬ ಕೀಳದಿರು,
ತಿರುಗೊಲೆ ೧೩ – ೧೩೮ ಹೆದೆಯ ಗಂಟು, ಬಿಲ್ಲಕೊಪ್ಪು
ತಿಲಕ ೧೪ – ೧೨೬ ವೃಕ್ಷ ವಿಶೇಷ
ತೀನುಮನ್ ೮ – ೫ ತಿಂಡಿಯನ್ನು
ತೀವು ೧ – ೫೯ ತುಂಬು
ತುಡಿಸು ೧ – ೮೨ ತೊಡಿಸು, ಧರಿಸು
ತುಯ್ಯಲು ೩ – ೮೭ ಪಾಯಸ
ತುರಿತ ೧೦ – ೬೬ ಗ ತ್ವರಿತ
ತುಱುಕಾರ್ತಿ ೫ – ೫೯ (ಗ) ಹಸ ಕಾಯುವವಳು
ತುಱಿಸು ೫ – ೧೦೪ ಗ, ೨ – ೪೩ ಗ ಕೆರೆಯುವುದು
ತುಱುಗಲು ೫ – ೨೧, ೯ – ೮೯ ಗೊಂಚಲು, ಗುಂಪು
ತುಱುಗಿ ೫ – ೭೨, (ಗ), ೯ – ೯೦ ದಟ್ಟವಾಗಿ
ತುಱುಗು ೬ – ೧೧೨ ಒತ್ತಾಗು, ದಟ್ಟವಾಗು
ತುಱಿಪ ೧೦ – ೭೪ (ಗ) ವೇಗ, ಬೇಗ
ತುಱುಂಬಿ ೮ – ೩೦ ಮುಡಿದುಕೊಂಡು
ತೂಣ ೧ – ೪೫ ಆವೇಶ ಬಂದವನು
ತೂಣೀರ ೯ – ೯೬ ಬತ್ತಳಿಕೆ
ತೂಪಿಱಿ ೧೪ – ೧೨೦ ದೃಷ್ಟಿತೆಗೆ, ಉಃಪ್ ಎಂದು ಊದು
ತೂಳ ೯ – ೨ ಹತ್ತಿ
ತೆಮಳ್ದು ೫ – ೩೩, ೧೨ – ೩೮ ಸಂಗ್ರಹಿಸಿ
ತೆರೆಸುತ್ತು ೧೧ – ೫೨ ಗ ತೆರೆಯ ಮರೆ
ತೆಳ್ವದ ೨ – ೩ ತೆಳುವಾದ ಹದ, ಲಘುವೃಷ್ಟಿ
ತೆಳ್ಳೊಱತೆ ೬ – ೪೬ ಗ ಚಿಕ್ಕ ಚಿಲುಮೆ
ತೇಪೆ ೨ – ೯೬, ೧೪ – ೪೧(ಗ) ಕುಂಟೆಣೆ
ತೇೞು ೧೪ – ೧೧೭ (ಗ) ಚೇಳು
ತೊಡರ್ಪು ೧೪ – ೩೬ ಗೋಜು
ತೊಡಳು ೨ – ೧೨೫ ತೊಡಗಲೊಲ್ಲಳು
ತೊವರ್ಗಂಪು ೧೩ – ೩೯ ಕಷಾಯದ ವಾಸನೆ
ತೊವಲು ೨ – ೯೮ ತೊಗಲು,
ತೊಳಪ ೪ – ೯೯ ಹೊಳೆಯುವ
ತೋಟೆ ೨ – ೩೭, ೩ – ೨೦ ಗ, ೧೪ – ೩೭ ಜಗಳ
ತೋರಗಾವು ೧೧ – ೫೨ ಗ ದಪ್ಪನಾದ ಕಾವು, ದಂಟು
ತೋಱಗೆ ೧೪ – ೫೮ ತೋರಿಸು
ತಂದಲ್ ೧೨ – ೮೦ ಮಳೆ
ತಿಂಗಳ್ ೫ – ೨೫ ಚಂದ್ರ
ತಿಂಗಳ ಕೂಸು ೯ – ೮ ಬಾಲಚಂದ್ರ
ತಿಂಬು ೫ – ೫೬ ತುಂಬು, ಭರ್ತಿಮಾಡು
ತುಂಡ ೧೪ – ೨೦ ಚಂಚು, ಕೊಕ್ಕು
ತುಂಡಯುಗ ೮ – ೨೭ ಎರಡು ಚಂಚು
ತುಂಬ ೫ – ೫೬ ಆಧಿಕ್ಯ
ತುಂಬುಕಂ ೧೪ – ೬೮ ರಭಸದಿಂದ
ತೇಂಕುದಾಣಂ ೯ – ೨೧ ನಾಡಿಯ ಸ್ಥಾನ
ತೊಂಡಲ್ ೨ – ೫ ಮುತ್ತಿನ ಹಾರ

ದಮ ೪ – ೫೭ ಆತ್ಮಸಂಯಮ
ದಯಿತ ೧೦ – ೨ ಗ ಪ್ರೇಮಿಕ
ದರ್ದುರ ೨ – ೬೫ ಕಪ್ಪೆ
ದರ್ಪಕ ೨ – ೫೪ ಮನ್ಮಥ
ದಶನ ೧ – ೭೯ ಹಲ್ಲು
ದಶನ ಮಣಿ ೩ – ೩೯ ಹಲ್ಲೆಂಬ ಮಣಿ
ದಹನ ೫ – ೩೭ ಅಗ್ನಿ, ೯ – ೧೧೯ (ಗ) ೯ – ೧೩೨,
೧೦,೯೫ (ಗ) ಜ್ವಾಲೆ
ದಹನಾಶೆ ೯ – ೩ ಆಗ್ನೇಯ ದಿಕ್ಕು
ದಳಿತೇಕ್ಷಣೆ ೭ – ೯೦ ಬಿಚ್ಚು ಗಣ್ಣಿನವಳು
ದಳ್ಳಿಸು ೪ – ೧೧೨ ಜ್ವಲಿಸು
ದಾಮ ೨ – ೧೫ ಹಗ್ಗ
ದಾಯೆ ೭ – ೭೭ ದಾಯಾದಿ (ವೈರಿ)
ದಾರವಂದ ೧೧ – ೫೨ (ಗ) ದ್ವಾರ ಬಂಧ
ದಾರಿತ ೧೪ – ೧೬ (ಗ) ಸೀಳಲ್ಪಟ್ಟ
ದಾವಣಿ ೧೨ – ೬೦ ಹಗ್ಗ
ದಾಹ ೧೦ – ೬೫ (ಗ) ಸುಡುವಿಕೆ
ದಿಗಿಭ ೧ – ೮೭ ದಿಗ್ಗಜ
ದಿನಶಿರ ೧೦ – ೧೯ ನಡು ಹಗಲಿನ ಸೂರ್ಯ
ದಿವಾಸ್ವಾಪ ೯ – ೮೭ ಹಗಲು ನಿದ್ದೆ
ದೀಧಿತಿ ೪ – ೧೦೦, ೧ – ೨೮ ಪ್ರಕಾಶ
ದೀ ಧಿತ್ಯಂಬು ೧೪ – ೮ ಕಾಂತಿಜಲ
ದೂದವಿ ೨ – ೯೬ ದೂತಿ
ದೂರಿಸು ೫ – ೮೨ ಚಿಂತಿಸು, ಸ್ಮರಿಸು
ದೂವೆ ೧೦ – ೭೧ (ಗ) ಹೊಗೆ (ಧೂಮ)
ದೂಸರಂ ೬ – ೮೭ (ದ್ಭ) ಧೂಸರ, ಬೂದಿ ಬಣ್ಣ, ಕೊಳೆ
ದೂಸಿಗ ೭ – ೧೯ ಬಟ್ಟೆ ವರ್ತಕ
ದೃಕ್ಕುವಲಯ ೨ – ೧೩೬ ದೃಷ್ಟಿಯೆಂಬ ನೈದಿಲೆ
ದೃಗ್ದಾಮ ೩ – ೬೮ ದೃಷ್ಟಿಯೆಂಬ ಹಗ್ಗ
ದೃಶ್ಯಂ ೬ – ೪೩ (ಗ) ನೋಡಬಹುದಾದ್ದು
ದೊಣೆ ೧೧ – ೨೨ ಬತ್ತಳಿಕೆ
ದೇಸೆ ೧ – ೭೩ ಸೊಗಸು
ದೋರ್ಲತೆ ೩ – ೮೦ ಬಾಹುಲತೆ
ದ್ರೋಣಘೆ ೫ – ೧೦೮ ದ್ರೋಣದಷ್ಟು ಹಾಲು ಕೊಡುವ ಹಸು
ದ್ವಿಷಜ್ಜಾತ ೭ – ೮೩ ಶತ್ರುವಿನ ಮಗ
ದಾಂಗುಡಿ ೨ – ೨೦ ದಾಟುಕುಡಿ, ಬಳ್ಳಿ, ಚಿಗುರು
ದುಂಡಿಸು ೨ – ೯೩ ತಿರುಗಿಸು, ಅಲೆದಾಡಿಸು

ಧನದ ೧ – ೮೯ (ಗ) ಕುಬೇರ
ಧನುರ್ಗುಣಕ್ವಣಿತ ೬ – ೫ (ಗ) ಬಿಲ್ಲ ಹೆದೆಯ ಧ್ವನಿ
ಧಮ್ಮಿಲ್ಲ ೧೧ – ೮೩ ಕಟ್ಟುಮುಡಿ
ಧವಳಿಸಿ ೧೦ – ೯೦ ಬೆಳ್ಳಗೆ ಮಾಡಿ
ಧಾತ್ರ ೫ – ೩ ಬ್ರಹ್ಮ
ಧಾತ್ರಂ ೭ – ೨ ಬ್ರಹ್ಮ
ಧೀವರ ೩ – ೨ ಬೆಸ್ತ, ಮೀನುಗಾರ
ಧೃತಿ ೬ – ೪೨ (ಗ) ಧೈರ್ಯ
ಧೈವತ ೨ – ೩೦ ಸಪ್ತಸ್ವರಗಳಲ್ಲಿ ಆರನೆಯ ಸ್ವರ ಧ್ವಾಂತ ೧ – ೧ ಕತ್ತಲೆ

ನಕ್ಕುದು ೧೪ – ೧೦೪ ಬಚ್ಚಿಟ್ಟುಕೊಂಡಿತು; ಸಂಕುಚಿತವಾಯಿತು
ನಗೆವೆಳ್ಪು ೧೪ – ೪೨ ನಗೆಯ ಬೆಳ್ಪು, ನಗೆಯ ಕಾಂತಿ
ನಚ್ಚಣಿ ೪ – ೧೧೦ ನರ್ತಕಿ
ನಣ್ಪ ೧೦ – ೮೮ ಪ್ರೇಮದ
ನಣ್ಪು ೨ – ೭೮, ೨ – ೧೦೧ (ಗ) ಸ್ನೇಹ
ನದಿಪು ೯ – ೧೯ ಆರಿಸು
ನನೆಲತೆ ೪ – ೧೬ (ಗ) ಹೂ ಬಳ್ಳಿ
ನನೆಗೋಲ್ ೫ – ೧೨ ಹೂವಿನ ಬಾಣ
ನನಗಣೆ ೩ – ೫೧ ಪುಷ್ಪಬಾಣ
ನನೆ, ಗಂಧಂ ೩ – ೭೧ ಹೂವು ಗಂಧ
ನನೆವಿಲ್ಲು ೨ – ೨೬ (ಗ) ಪುಷ್ಟ ಧನುಸ್ಸು
ನಸಿದು ೫ – ೪೧ ಒಣಗಿ ಕೃಶವಾಗಿರಲು
ನಳಿಯೆ ೧೧ – ೧೧ ಕೃಶವಾಗಲು
ನಱುನೆಯ್ ೫ – ೯೯ ಸುವಾಸನೆಯ ತುಪ್ಪ
ನಱುಸುಯ್ ೧೦ – ೬೨ ಸುವಾಸನೆಯ ಉಸಿರು
ನಾಕಿನೀ ೪ – ೮೬ (ಗ) ಸ್ವರ್ಗವಾಸಿನಿ, ಅಪ್ಸರೆ
ನಾಗ ಕೇಸರಿ ೬ – ೬೯ ಬಕುಳ ಪುಷ್ಪ
ನಾಡಾಡಿ ೮ – ೬೨ (ಗ) ಸಾಧಾರಣ
ನಾಡೆ ೪ – ೯೨ ವಿಶೇಷವಾಗಿ
ನಾಣ್ ೧ – ೩ ನಾಚಿಕೆ
ನಾಣಿಲಿ ೨ – ೭೪ ನಾಚಿಕೆಯಿಲ್ಲದ
ನಾದಿಪಂಚೆ ೧೧ – ೨೨ ಧ್ವನಿಮಾಡುವ ಹಂಸ
ನಾದುದು ೯ – ೧೧೪ ನೆನೆಯಿಸಿತು
ನಾದೇಯಾಂಬು ೮ – ೧೦ ನದಿಯ ನೀರು
ನಾನಲಿ ೫ – ೪೧ ಒಂದು ಬಗೆಯ ಜೊಂಡು ಹುಲ್ಲು
ನಾನಲು ೬ – ೧೬ (ಗ) ಜೊಂಡು
ನಾಭಿದಘ್ನಂ ೧೩ – ೧೫೨ ಹೊಕ್ಕುಳಷ್ಟು ಎತ್ತರ
ನಿಕಷ ದೃಷದಂ ೧ – ೬೯ ಬರೆಗಲ್ಲು
ನಿಕಾಮಂ ೧೪ – ೯೩ ಸಂತೃಪ್ತಿಕರ
ನಿಕುರುಂಬ ೩ – ೨೦ (ಗ) ಗುಂಪು
ನಿಕುಂಜ ೧೪ – ೫೧ (ಗ) ಬಳ್ಳಿವನೆ
ನಿಕೇತನ ೧೪ – ೯೭ (ಗ) ಮನೆ
ನಿಕ್ವಾಣಂ ೧೩ – ೪೫ ಶಬ್ದ
ನಿಟ್ಟೆ ೧ – ೬೨, ೩೬೨ ನಿಷ್ಠೆ
ನಿಟ್ಟೆಸಳ್ ೯ – ೧೩೧ ನಿಡಿದಾದ ಎಸಳು
ನಿಡಿಯ ೭ – ೮೭ ಉದ್ದವಾದ
ನಿಡುಗುಡಿ ೧೧ – ೫೮ (ಗ) ಉದ್ದವಾದ ಬಾವುಟ
ನಿಡುವೊಡೆ ೫ – ೫೯ (ಗ) ನಿಡಿದು ಪೊಡೆ, ಉದ್ದತೆನೆ
ನಿತ್ತರಿಸು ೩ – ೫೭ (ಗ) ಸಹಿಸು, ತಾಳು
ನಿದಾಘ ೧ – ೯೭ ಬೇಸಿಗೆ
ನಿಧಾನ ೬ – ೬೨, ೮ – ೧೦೧ (ಗ) ಬಚ್ಚಿಟ್ಟ ನಿಧಿ
ನಿಪ್ಪೊಸತು ೨ – ೭೯ ಬಹಳ ಆಶ್ಚರ್ಯಕರ
ನಿಪ್ಪೊಸತು ೬ – ೮೩ (ಗ) ಬಹಳ ಸುಂದರ
ನಿಮ್ನಗೆ ೧೨ – ೩೫ ನದಿ, ತೊಱೆ
ನಿರವಿಸಿ ೧೪ – ೯೨ (ಗ) ನಿರೂಪಿಸು, ಹೇಳು
ನಿರೆದಪನ್ ೧೪ – ೬೧ ಕೊಲ್ಲುತ್ತಾನೆ
ನಿರುತಿ ೪ – ೬೧ ಒಬ್ಬ ದಿಕ್ಪಾಲಕ
ನಿರ್ಗಾವಿಲ ೨ – ೭೧ ಗಾವಿಲನಲ್ಲದವ
ನಿರ್ಗುಂಡಿ ೫ – ೮೦ ಲಕ್ಕಿ ಗಿಡ, ಸಿಂಧುವಾರ
ನಿರ್ಝರಪ್ಲವ ೧೩ – ೧೪ ಪ್ರವಾಹದಾಟುವ ತೆಪ್ಪ
ನಿರ್ಯಾಸ ೭ – ೧೦೯ ಮರದ ಬಂಕೆ, ಅಂಟು
ನಿರ್ವಿನಿಸಿ ೧೪ – ೨೪?
ನಿರ್ವೇದ ೪ – ೫೯ ದುಃಖ, ಖೇದ
ನಿಲುಂಬಿದ ೧೧ – ೭೦ ಕುಪ್ಪಳಿಸಿದ, ಹಾರಿದ
ನಿಱಿಸು ೪ – ೧೬ (ಗ) ಜೋಡಿಸು
ನಿಸೃತ ೮ – ೪೯ ಸುರಿದ
ನಿಸೆ ೨ – ೫೨ ರಾತ್ರಿ
ನಿಷ್ಪಾದನ ೪ – ೨೯ ಸೃಷ್ಟಿ, ಹೆರುವಿಕೆ
ನಿಳ್ಕು ೧೩ – ೭೪ ನಿಲುಕು
ನೀರದ ೫ – ೨೧ ಮೇಘ
ನೀರಾಜಿತ ೧೦ – ೬೬ (ಗ) ಪ್ರಕಾಶಗೊಳಿಸಲ್ಪಟ್ಟ
ನೀರಾಟ ೧೪ – ೮೭ ಸ್ನಾನ, ಜಲಕ್ರೀಡೆ
ನೀರೇಜ ೧ – ೬೮ ಕಮಲ
ನೀರ್ಗಿಚ್ಚು ೭ – ೮೩ (ಗ) ಔರ್ವಾಗ್ನಿ
ನೀರ್ದಂದಲ್ ೬ – ೬೦ ನೀರ ತಂದಲ್, ಮಳೆ
ನೀಲಾಳಕ ೪ – ೧೪೩ ಕಪ್ಪು ಮುಂಗುರುಳು
ನೀಹಾರಕರ ೩ – ೯ ಚಂದ್ರ
ನುಣ್ಗರೆ ೨ – ೨೭ ನುಣುಪಾದ ಕರೆ
ನುಳಿ ೬ – ೧೬ (ಗ) ನುಲಿ, ಬಲೆ
ನೆಯ್ದಿಲ್ ೨ – ೧೩ ನೈದಿಲೆಹೂ
ನೆಯ್ಯೇಱಿಸು ೧೨ – ೫೧ ಅಭ್ಯಂಜನ ಮಾಡಿಸು
ನೆಱನಂ ೭ – ೯೬ (ಗ) ಮರ್ಮಸ್ಥಳವನ್ನು
ನೆರ್ಮಿ ೮ – ೮ ನೆಮ್ಮಿ, ಒರಗಿಕೊಂಡು
ನೇಯಂ ೭ – ೭೭ ಒಂದು ಅರ್ಥದೋಷ
ನೇಱಿದ ೧೧ – ೫೬ (ಗ) ಜೋತುಬಿಟ್ಟ
ನೇಲ್ದು ೧೪ – ೧೨೮ ನೇತು ಬಿದ್ದು
ನೇಲ್ವ ೨ – ೧೦೮ ಜೋತಾಡುವ
ನೇವುರ ೧೧ – ೫೬ (ಗ) ನೂಪುರ, ಪಾದಾಭರಣ
ನೇಹ ೩ – ೨೦ ಎಣ್ಣೆ
ನೊಣೆ ೨ – ೧೦೬ ನುಂಗು
ನೊಪ್ಪಿದುವು ೧೩ – ೧೨೪ ಹಗುರ
ನಾಂದು ೭ – ೧೦೪, ೧೪ – ೧೨೦ (ಗ) ನೆನೆಯಿಸು