ಅ |
|
ಅಕ್ಕೆ – ದುಃಖ |
೮ – ೬೧ ವ|| |
ಅರ್ಕಸುತಾ – ಯಮುನಾ ನದಿ |
೬ – ೭೯ |
ಅಗರಣ – ಹಗರಣ |
೫ – ೨೬ |
ಅಗಿ – ಅಂಜು |
೮ – ೨ |
ಅಗ್ಗಿವಳದೆಣ್ಣೆ – ಕಾಯ್ದ ಎಣ್ಣೆ |
೮ – ೪೦ |
ಅಗ್ಗಿಸು – ನಾಶಮಾಡು |
೮ – ೮೫ ವ|| |
ಅಗುಂದಲೆ – ಶ್ರೇಷ್ಠ ; ವಿಶಾಲ |
೫ – ೩೧ |
ಅಗುರ್ವು – ಭಯ |
೫ – ೨ ವ|| |
ಅಗುರ್ವು – ಬೆರಗು |
೮ – ೪೮ |
ಅಘ – ಪಾಪ |
೧ – ೧೧ |
ಅಚಿರಂ – ಕೂಡಲೆ |
೫ – ೧೧೫ |
ಅಚ್ಚಿಗ – ಉದ್ವೇಗ, ಗಾಬರಿ |
೧ – ೩೫ |
ಅರ್ಚಿ – ಉರಿ |
೩ – ೧೦೯ |
ಅರ್ಜುನ – ಮತ್ತಿಯ ಮರ |
೨ – ೩೭ |
ಅಟ್ಟುಂಬರಿ – ಅಭೇದ್ಯ ಸಂಬಂಧ |
೫ – ೭೧ |
ಅಟ್ಟೆ – ಮುಂಡ |
೫ – ೪೧ ವ|| |
ಅಡಕ – ಅಡಕವಾಗಿರುವ (ಗುಟ್ಟು) |
೩ – ೮೩ |
ಅಡಪಡಿಸು – ತವಕಪಡು |
೫ – ೨೮ |
ಅಡಸು – ಮೇಲೆಬೀಳು |
೮ – ೪೬ |
ಅಡಹಡಿಸು – ಆವೇಶದಿಂದ ಮುನ್ನುಗ್ಗು |
೮ – ೯೮ |
ಅಡಂಗೊತ್ತು – ತಿರುವು |
೭ – ೫೧ ವ|| |
ಅಡೆ – ಹೊಡೆ |
೭ – ೮೪ |
ಅಡೆ – ತಿಪ್ಪೆ |
೮ – ೧೮ |
ಅಡ್ಡಣ – ಢಾಲು |
೩ – ೧೪ |
ಅಣಕ – ಅಲ್ಪಸ್ವಲ್ಪ |
೧ – ೧೮ |
ಅಣಿ – ಸಿದ್ಧನಾಗು ೫ – ೩೬ |
|
ಅಣ್ಪು – ಲೇಪನ |
೨ – ೧೫ |
ಅಣ್ಮು – ಸಾಮರ್ಥ್ಯ |
೧ – ೩೭ |
ಅಣ್ಮುಕಾಱ – ಸಮರ್ಥ |
೮ – ೭೮ |
ಅರ್ಣವವೃತ – ಸಮುದ್ರದಿಂದ ಸುತ್ತುಗಟ್ಟಿದ |
೧ – ೧೨೦ |
ಅತ್ತಪರ – ರಣಭೇರಿ |
೬ – ೧೧ |
ಅಧರ – ಕೆಳದುಟಿ |
೭ – ೧ |
ಅಧ್ವರ – ಹೋಮಪೂಜೆ |
೪ – ೧೫ |
ಅಪಘನ – ಇಂದ್ರಿಯ |
೪ – ೧೦ |
ಅಜ್ಜಚ್ಛದ – ತಾವರೆಯ ಎಲೆ |
೫ – ೧೧೨ |
ಅಭ್ರಂಕಷ – ಮೋಡಗಳನ್ನು ಮುಟ್ಟುವ |
೪ – ೮೫ ವ|| |
ಅಭ್ರಶ್ರವ – ನಿಮಿರಿದ ಕಿವಿ |
೪ – ೧೨೧ |
ಅಮೃತಾಂಶು – ಚಂದ್ರ |
೪ – ೧೦೨ |
ಅಯನಯ – ಶುಭಕಾಯ್ ನೀತಿಮಾರ್ಗ |
೪ – ೩೩ |
ಅಯನಶೀಲ – ಗತಿಶೀಲವುಳ್ಳ |
೪ – ೧೦ |
ಅಯಲತಾ ಸೌಭಾಗ್ಯವೆಂಬ ಬಳ್ಳಿ |
೧ – ೫೨ |
ಅರಿಸ್ಮಯ – ಶತ್ರುಗಳಿಗೆ ಆಶ್ವರ್ಯವನ್ನುಂಟು ಮಾಡುವ |
೫ – ೧೧೭ |
ಅಱ – ಧರ್ಮ |
೧ – ೫೮ |
ಅಱ (ರ) ಗಂಡಿ – ಅಂಧಕಿಂಡಿ |
೮ – ೧೦೬ |
ಅಲಕ್ತಕ – ಅರಗಿನ ಬಣ್ಣ (ಪಾದಗಳಿಗೆ ಹಚ್ಚುವ) |
೨ – ೭೦ |
ಅಲಘು – ಘನವಾದ, ದೊಡ್ಡ |
೧ – ೧೯ |
ಅಲವರಲ್ – ಚಿಂತಿಸು |
೩ – ೭೩ |
ಅಲವರಿಸು – ಆಶೆಬಡು |
೫ – ೨ ವ|| |
ಅಲಂಪು – ಸಂತೋಷ |
೪ – ೨೮ |
ಅಲಂಪು – ಸೌಂದರ್ಯ |
೨ – ೩೭ |
ಅವಕೀರ್ಣ – ಆವರಿಸಿದ |
೩ – ೩೫ |
ಅವಗಾಹ – ಧಾರಣ ಶಕ್ತಿ |
೧ – ೩ |
ಅವಟೈಸು – ಮುಟ್ಟಿಸು |
೪ – ೬೮ ವ|| |
ಅವರಜ – ತಮ್ಮ |
೬ – ೪೬ |
ಅವಷ್ಟಂಭ – ಆಧಾರ |
೩ – ೨ |
ಅವಾರಪಾರ – ಕೊನೆಯಿಲ್ಲದ |
೧ – ೬೮ ವ|| |
ಅವ್ವಳಿಸು – ಮುತ್ತು, ಮುಸುಕು |
೧ – ೬೮ವ|| |
ಅವ್ವಳಿಸು – ಮುತ್ತು, ಮುಸುಕು |
೧ – ೬೮ |
ಅಶ್ಮ – ಕಲ್ಲು |
೭ – ೪೩ |
ಅಷ್ಟಾಹ್ನಿಕ – ಕರ್ಮವಿಶೇಷ |
೨ – ೫ ವ|| |
ಅಸದಳ – ವಿಶೇಷವಾದ |
೧ – ೬೦ |
ಅಸದಳ – ಅಸಾಧ್ಯ |
೭ – ೩ |
ಅಸವು – ಸರಿಯಾದುದು |
೬ – ೭೫ |
ಅಸಿ – ಸ್ತ್ರೀ |
೧ – ೯೩ |
ಅಸಿತಪದ – ಅಗ್ನಿ |
೬ – ೫೭ |
ಅಹಮಹವಿಕೆ – ಅಹಂಭಾವ |
೪ – ೬೭ |
ಅಳಿನಿ – ಹೆಣ್ಣು ತುಂಬಿ |
೪ – ೧೦೫ |
ಅಳ್ಳಿರಿ – ಭೇದಿಸು |
೪ – ೯೫ ವ|| |
ಅಳುರ್ – ಆವರಿಸು |
೩ – ೭೦ |
ಅಳೆ – ಮಜ್ಜಿಗೆ |
೧ – ೪೬ |
ಅಳ್ಕೆ – ಅಳುವುದು |
೧ – ೧೧೨ |
ಅೞಿವೆಂಡಿರ್ – ಅಲ್ಪ ಸ್ತ್ರೀಯರು |
೪ – ೧೪೯ |
ಅೞ್ಗು – ನಾಶವಾಗು |
೪ – ೧೪ |
ಅೞ್ವು – ಕೇಡುಮಾಡು |
೭ – ೭೪ |
ಅಂಕ – ಗುರುತು, ತೊಡೆ |
೪ – ೨೧ |
ಅಂಕಿಸು – ಅಧೀನ ಮಾಡಿಕೊಳ್ಳು |
೫ – ೧೧೫ ವ|| |
ಅಂಬಕ – ಕಣ್ಣು |
೪ – ೯೧ |
ಅಂಬುಗಂಡಿ – ಬಾಣ ಬಿಡುವ ಕಿಂಡಿ |
೩ – ೧೧೪ |
ಅಂಭಶ್ಚರ – ಮೊಸಳೆ |
೬ – ೫೮ |
ಅಂಭೋರಾಶಿ – ಸಮುದ್ರ |
೪ – ೧೧೧ |
ಆ |
|
ಆಕೃಷ್ಟ – ಜಗ್ಗಿದ |
೧ – ೨ |
ಆಘ್ರಾತ – ಮೂಸಿ ನೋಡಿದ |
೧ – ೨ |
ಆತೋದ್ಯ – ಒಂದು ವಾದ್ಯ |
೬ – ೭೪ |
ಆರ್ತ – ದೀನ |
೧ – ೫ |
ಆದೇಯ – ಸತ್ಪಾತ್ರ |
೬ – ೧೮ |
ಆನೀಕ – ಗುಂಪು |
೪ – ೫೩ |
ಆಭ – ಹೋಲುವ |
೫ – ೯೩ |
ಆಭೀಳ – ಭಯಂಕರ |
೪ – ೧೨೧ |
ಆಮ್ನಾಯ – ಪವಿತ್ರ ಪರಂಪರೆ |
೧ – ೭ |
ಆಯ – ಗುಟ್ಟು, ಗುಪ್ತವಾಗಿರುವದು |
೮ – ೧ |
ಆರ – ಹಾರ |
೧೦ – ೧೦೨ |
ಆರಮೆ – ಉದ್ಯಾನ |
೧ – ೬೩ |
ಆಯತಿ – ಉನ್ನತಿ, ಯೋಗಸಾಧನ ವಿಶೇಷ |
೧ – ೭ |
ಆಯಸ – ಕಬ್ಬಿಣ |
೫ – ೧೭ |
ಆರೋಹಕ – ಹತ್ತುವವ (ಸವಾರ) |
೮ – ೫೫ ವ|| |
ಆಲಾನ – ಆನೆ ಕಟ್ಟುವ ಕಂಬ |
೬ – ೮೨ ವ|| |
ಆಲಿವರಲ್ – ಆಣೆಕಲ್ಲು |
೮ – ೩೮ |
ಆಲೀಢ – ಬಲ ಮೊಣಕಾಲನ್ನು ಮುಂದೆ ಮಾಡಿ ಎಡಗಾಲನ್ನು ಹಿಂದಿಟ್ಟು ನಿಲ್ಲುವುದು |
೩ – ೧೪ ವ|| |
ಆವೇಷ್ಟಿಸು – ಆವರಿಸು |
೬ – ೮೨ ವ|| |
ಆಸಾರ – ಸುರಿಮಳೆ |
೭ – ೪೪ ವ|| |
ಆಹೂತ – ಕರೆಯಲ್ಪಟ್ಟ |
೪ – ೧೧೧ ವ|| |
ಆೞ್ – ಮುಳುಗು |
೪ – ೧೨೦ |
ಇ, ಈ |
|
ಇಕ್ಷುಚಾಪ – ಕಾಮ |
೪ – ೨೩ |
ಇಡಿ – ಹಿಡಿ |
೧ – ೮೪ |
ಇಂದ್ರಗೋಪ – ಹೊನ್ನೀಹುಳ |
೮ – ೧೨೦ |
ಇಱುಂಕು – ಹಿಚುಕು |
೮ – ೯೪ |
ಇರುಪೆ – ಇರುವೆ |
೮ – ೮೩ |
ಈಶಾದಂಡ – (ಬಂಡಿಯ) ಈಸು |
೮ – ೨೨ ವ|| |
ಈೞ್ – ಸೆಳೆ, ಜಗ್ಗು |
೭ – ೪೧ |
ಉ, ಊ |
|
ಉಕ್ಕಡ – ಕಾವಲು |
೭ – ೪೪ ವ|| |
ಉಕ್ಷಿತ್ರ – ನಿರ್ಮಲವಾದ |
೫ – ೭೪ |
ಉರ್ಕು – ಹೆಚ್ಚಳ |
೨ – ೩೫ |
ಉರ್ಕು – ಪರಾಕ್ರಮ |
೮ – ೬೭ ವ|| |
ಉಕ್ಕೆವ – ಕಪಟ |
೪ – ೩೭ |
ಉಚ್ಛಿಷ್ಟ – ಎಂಜಲು |
೪ – ೧೬ |
ಉತ್ಕರ್ಣ – ಮೇಲಕ್ಕೆದ್ದಿರುವ ಕಿವಿ |
೫ – ೯೩ |
ಉತ್ತಂಸ – ಶಿರೋಭೂಷಣ |
೪ – ೧೫೨ |
ಉತ್ತಾನ – ವಿಸ್ತಾರವಾದ |
೨ – ೨೨ |
ಉತ್ಪ್ರಸನ – ಮೇಲಕ್ಕೆ ಚಿಮ್ಮುವ |
೩ – ೬೩ |
ಉತ್ಸೇಕ – ಅಭಿಮಾನ |
೩ – ೪ |
ಉದಂಚಿತ – ಹೆಚ್ಚಾದ |
೩ – ೯೮ |
ಉದ್ದವಣ – ಒಂದ ವಾದ್ಯ |
೨ – ೪೦ |
ಉದ್ಭಾಸಿ – ಕಾಂತಿಯುಳ್ಳ |
೪ – ೨೪ |
ಉದ್ವೃತ್ತ – ಉದ್ದಟ |
೩ – ೪ |
ಉದ್ಘುಷ್ಟಿ – ಘೋಷಣೆ |
೮ – ೯೨ |
ಉರ್ದು – ತಿಕ್ಕು |
೭ – ೮೫ |
ಉದ್ಘೂಣ – ನಡುಕು |
೩ – ೬೩ |
ಉನ್ನಿದ್ರ – ಜಾಗ್ರತವಾದ |
೧ – ೩ |
ಉನ್ಮೀಲಿತ – ತೆರೆದ |
೩ – ೨೮ ವ|| |
ಉಪನಿಯುದ್ದ – ಮಲ್ಲಗಾಳಗದಲ್ಲಿದ್ದ |
೮ – ೮೯ |
ಉಪರಿ – ಮೇಲೆ |
೫ – ೧೧೩ ವ|| |
ಉಪಲ – ಕಲ್ಲು |
೧ – ೨೬ |
ಉಪಸರ್ಗ – ತೊಂದರೆ |
೪ – ೧೩ ವ|| |
ಉಪ್ಪರವಟ್ಟ – ಮೇಲ್ಕಟ್ಟಿನ ಬಟ್ಟೆ |
೧ – ೬೪ |
ಉಪ್ಪವಡಿಸು – ಏಳು |
೩ – ೬೦ |
ಉಪಾರ್ಜಿಸು – ಸಂಪಾದಿಸು |
೧೦ – ೧೦೮ |
ಉಪಾಂಸ – ಕಪಟತನ |
೮ – ೫೧ ವ|| |
ಉಮ್ಮಳಿಸು – ದುಃಖಿಸು |
೨ – ೨೩ |
ಉಮುಳ್ – ಉಗುಳು |
೩ – ೮೭ |
ಉರಭ್ರ – ಮೇಷ |
೪ – ೧೧೯ |
ಉರವಣಿಸಿ – ಭರದಿಂದ |
೪ – ೩ |
ಉಱುವ – ಒಪ್ಪುವ |
೩ – ೨೮ |
ಉರ್ವೀಧರ – ಬೆಟ್ಟ |
೧ – ೫೬ |
ಉರ್ವೀಧರವೈರಿ – ಇಂದ್ರ |
೧ – ೫೬ |
ಉಳ್ಕು – ಬೀಳುವ ಚಿಕ್ಕೆ |
೪ – ೫೩ |
ಉಳೂಕ – ಗೂಗೆ |
೭ – ೨೩ |
ಊರ್ಧ್ವಯಾನ – ವಿಮಾನ |
೬ – ೩ |
ಊರುಬ್ಬೆ – ಊರಿಗೆ ತಾಪ |
೫ – ೨ ವ|| |
ಊಷ್ಮ – ಉಷ್ಣತೆ |
೪ – ೬೪ ವ|| |
ಋ |
|
ಋತ – ಸತ್ಯ |
೧ – ೫೯ |
ಋದ್ಧಿ – ಸಿದ್ಧಿ |
೩ – ೩೩ ವ|| |
ಎ,ಏ,ಐ |
|
ಎಕ್ಕೆ – ಬಹಳ ಕಸುವು |
೮ – ೯೨ |
ಎಡೆಗಿರಿದ – ಪುಷ್ಟವಾದ |
೩ – ೨೩ |
ಎಲವ – ಎಲವದ ಗಿಡ |
೫ – ೭೯ |
ಎಸಡಿ – ಏಡಿ |
೬ – ೭೫ |
ಎಳವೆರ್ಕು – ಚಿಕ್ಕ ಬೆಕ್ಕು |
೫ – ೮೧ |
ಎೞಲ್ – ಜೋತಾಡು |
೧ – ೮೩ |
ಏಣಾಂಕ – ಚಂದ್ರ |
೪ – ೧೩೬ |
ಏವಯಿಸು – ವ್ಯಥೆಪಡು |
೩ – ೬೩ ವ|| |
ಏೞ್ – ವಾಹನ |
೬ – ೫೮ |
ಐರಾವಣ – ಐರಾವತ |
೮ – ೭೧ |
ಒ,ಓ,ಔ |
|
ಒಚ್ಚತ – ಪೂರ್ಣವಾಗಿ |
೧ – ೩೨ |
ಒಡರಿಸು – ಒಟ್ಟುಗೂಡು |
೮ – ೨೧ |
ಒಱಲ್ – ಒದರು |
೮ – ೫೧ |
ಒಱವು – ಒಱತೆ (ಒರ್ತಿ) |
೧ – ೪೯ |
ಒಱೆ – ಸ್ರವಿಸು |
೮ – ೨೨ ವ|| |
ಒವಜ – ಗುರು |
೮ – ೫೬ |
ಒಳಱ್ – ಒದಱು, ಧ್ವನಿಗೆಯ್ಯು |
೭ – ೯೧ ವ|| |
ಒಂತಿ – ಓತೀಕಾಟ |
೫ – ೮೨ |
ಓ – ಪ್ರೀತಿಸು |
೪ – ೪೮ |
ಓಗಡಿಸು – ಓಕರಿಸು |
೩ – ೫೭ |
ಓವರಿ – ಗುಡ್ಡದ ಓರೆ |
೫ – ೨ ವ|| |
ಔರ್ವು – ಬಡಬಾಗ್ನಿ, ಸಮುದ್ರದಲ್ಲಯ ಉರಿ |
೪ – ೧೭ |
ಕ |
|
ಕಕ್ಕಡೆ – ಈಟಿ |
೩ – ೨೫ |
ಕಕುದ್ಮತ್ – ಎತ್ತು |
೮ – ೮೨ |
ಕಕುಭ – ಮತ್ತೀಗಿಡ |
೮ – ೮೨ |
ಕಚ – ಹೆಳಲು |
೧ – ೬೫ |
ಕರ್ಚು – ತೊಳೆ |
೧ – ೪೮ |
ಕಜ್ಜಳ – ಕಾಡಿಗೆ |
೭ – ೪೩ |
ಕಟ – ಗಂಡಸ್ಥಳ |
೫ – ೯೨ |
ಕಟ್ಟಾಯಕಾರ್ತಿ – ಅತಿಚತುರೆ |
೫ – ೨ ವ|| |
ಕಟ್ಟೇವ – ತಿರಸ್ಕಾರ |
೮ – ೧೧೬ ವ|| |
ಕಡವು – ಕಡವಾಲದ ಮರ |
೪ – ೧೨೭ |
ಕಡಿತಲೆ – (ಖಡ್ಗದ) ಒರೆ |
|
ಕಡೆ – ಕಡಗ |
|
ಕಣಿಕೆ – ಚೂರು |
|
ಕಣ್ಬೊಣರ್ – ಜೊತೆಗಣ್ಣುಗಳು |
|
ಕನತ್ – ಹೊಳೆಯುವ |
|
ಕರ್ಬುರ – ನಾನಾ ವಿಧದ ಬಣ್ಣ, ಬಂಗಾರ |
೧ – ೮೭ |
ಕರಟಿ – ಆನೆ |
೭ – ೩ |
ಕರಪಾತ – ಕಿರಣಗಳ ಬೀಳುವಿಕೆ |
೪ – ೮೩ |
ಕರವಾಳ್ – ಖಡ್ಗ |
೮ – ೬೪ ವ|| |
ಕರಸಿ – ಅನ್ಯರ ಗುಪ್ತವಿಷಯವನ್ನು ಜನರಲ್ಲಿ ಬಿತ್ತರಿಸುವವ |
೫ – ೪೩ |
ಕರಿಮುರಿ – ಸುಟ್ಟು ಕಪ್ಪಾಗುವದು |
೩ – ೧೦೯ |
ಕರುವಿಡು – ರೂಪಿಸು |
೨ – ೫೫ ವ|| |
ಕರೇಣು – ಹೆಣ್ಣಾನೆ |
೨ – ೬೭ |
ಕಲಲ – ಮಾಸ |
೭ – ೪೪ ವ|| |
ಕಲಂ – ಪಾತ್ರೆ |
೩ – ೫೨ |
ಕಲ್ಗೆ – ಕಲಿಯಲಿ |
೧ – ೩೪ |
ಕವ – ಕ್ರಮ |
೨ – ೨೪ |
ಕವಿ – ಮುತ್ತುವಿಕೆ |
೩ – ೭೭ |
ಕವಿಲ್ತ – ಕಂದು ಬಣ್ಣದ |
೬ – ೨೪ |
ಕುವುಂಕೞ – ಕೊಂಕುಳ |
೨ – ೧೧ |
ಕರ್ವು – ಕಬ್ಬು |
೧ – ೬೪ |
ಕಳಲ್ – ಹೊಳೆ |
೮ – ೪೫ |
ಕಳ್ಳವತ್ತಿಗೆ – ಕಳುವಿನ ವಸ್ತುಗಳನ್ನು ಇಟ್ಟುಕೊಳ್ಳುವವಳು |
೬ – ೭೦ ವ|| |
ಕಳ್ಳಸಿಗ – ಹೆಂಡ ಮಾರುವವ |
೪ – ೧೧೪ ವ|| |
ಕಳಿಂಚು – ವಂಚನೆ |
೩ – ೨೮ ವ|| |
ಕೞಲ್ – ಸಣ್ಣದಾಗು |
೫ – ೨೩ |
ಕೞಿ – ಇಲ್ಲವಾಗು |
೩ – ೬೦ |
ಕಂಕಪತ್ರ – ಹದ್ದಿನ ರೆಕ್ಕೆಗಳುಳ್ಳ ಬಾಣ |
೩ – ೬೧ ವ|| |
ಕಂಕಾಳಿಕೆ – ಅಸ್ಥಿಪಂಜರ |
೭ – ೨ |
ಕಂಚುಕಿತ – ಹೊಂದಿದ |
೩ – ೧೮ ವ|| |
ಕಂಟಣಿಪು – ಹಿಗ್ಗು |
೪ – ೧೪೮ |
ಕಂಡರಿಸು – ಕೆತ್ತು |
೨ – ೫೫ ವ|| |
ಕಂತುಕ – ಚೆಂಡು |
೫ – ೨ ವ|| |
ಕಂತುಮನ – ಕಾಮಾಪೇಕ್ಷೆ |
೪ – ೯೯ |
ಕಂದಲ್ – ಗಡಿಗೆ |
೭ – ೮೦ |
ಕಂದಳ – ಚಿಗುರು, ಕುಡಿ |
೭ – ೪೩ |
ಕಂದುಕ – ಚೆಂಡು |
೩ – ೧೧೫ |
ಕಾಕಳಿ – ಶ್ರುತಿ ಕೂಡಿಸುವದು |
೬ – ೩೮ |
ಕಾಗುವ – ಒಂದು ತರದ ಧ್ವನಿ ಉಂಟಾಗುವ |
೫ – ೭೬ |
ಕಾದಲ – ಪ್ರೀಯ |
೧ – ೭೫ |
ಕಾನೀಕ – ಕಿವಿ |
೩ – ೮೭ |
ಕಾನೀನ – ಕನ್ಯಾಪುತ್ರ, ಕರ್ಣ |
೪ – ೬೭ |
ಕಾಮ್ಯ – ಬಯಸತಕ್ಕ |
೨ – ೯ |
ಕಾವಣ – ಹಂದರ |
೩ – ೧೦ ವ|| |
ಕಾವಲಿ – ಕರಿಯುವ ಬಾಣಲಿ |
೬ – ೪ |
ಕಾಸರಪತಿ – ಕೋಣ |
೩ – ೪೫ |
ಕಾಸೆ – ಚಡ್ಡಿ |
೮ – ೭೮ |
ಕಾಳ್ಮೋರೆ – ? |
೨ – ೩೭ |
ಕಾೞ್ಪುರ – ಕಾಡಿನ ಪ್ರವಾಹ |
೨ – ೨೬ |
ಕಿಟ್ಟಳ – ಉಪಟಳ |
೮ – ೮೪ ವ|| |
ಕಿತಕ – ಠಕ್ಕ |
೭ – ೫೦ |
ಕಿನಿಸು – ಸಿಟ್ಟಾಗು |
೭ – ೨೬ ವ|| |
ಕಿಸಲಯ – ಚಿಗುರು |
೧ – ೧೦೧ |
ಕಿಸುರು – ಜಗಳ, ಅಸಹ್ಯವಾದುದು |
೪ – ೧೪೯ |
ಕಿಳಿರ್ – ಧ್ವನಿಮಾಡು |
೭ – ೭೭ ವ| |
ಕಿಂಜಲ್ಕ – ಕಮಲದ ಅರಳುವಿಕೆ |
೪ – ೬೮ ವ|| |
ಕೀಚಕ – ಗಾಳಿಯಿಂದ ಧ್ವನಿ ಮಾಡುವ ತೂತುಗಳನ್ನುಳ್ಳ ಬಿದಿರು |
೫ – ೯೬ |
ಕೀನಾಶ – ಯಮ |
೮ – ೮೪ ವ|| |
ಕೀಲಣೆ – ಜೋಡಿಸುವಿಕೆ |
೫ – ೧೦೭ |
ಕೀಲಾಲ – ರಕ್ತ |
೫ – ೨೭ |
ಕೀಲ್ಗೊಳ್ಳು – ಸಂದಿಸು |
೮ – ೬೭ ವ|| |
ಕೀಱು – ಚೀರು |
೮ – ೭೬ ವ|| |
ಕುಕ್ಕುಟಾಸನ – ಯೋಗಾಸನದ ಒಂದು ಪ್ರಕಾರ |
೧ – ೮೨ |
ಕುಟ್ಟಿನಿ – ಕುಂಟಿಣಿ |
೪ – ೧೫೦ |
ಕುಣಪಾಲಯ – ಸ್ಮಶಾನ |
೫ – ೨೭ |
ಕುತ್ಸಿಕ – ತುಚ್ಛ, ಹೀನ |
೧ – ೫೯ |
ಕುತ್ತು – ಬಾಗು |
೨ – ೭೮ |
ಕುತ್ತು – ಹೊಡೆ |
೪ – ೫೨ |
ಕುತ್ತು – ಆಪತ್ತು, ಅನಿಷ್ಟ |
೭ – ೧೬ ವ|| |
ಕುತ್ತುಂಗರಿ – ಸಣ್ಣಗರಿ |
೫ – ೫೫ ವ|| |
ಕುತ್ತುವಡೆ – ಗಾಬರಿಯಾಗು |
೫ – ೭ ವ|| |
ಕುಧರ – ಪರ್ವತ |
೪ – ೩೧ |
ಕುನುಂಗು – ಸಂಕೋಚಿಸು, ನಾಚು |
೬ – ೩ |
ಕುಪ್ಪೆ – ರಾಶಿ |
೪ – ೯೫ ವ|| |
ಕುಮತ – ಕೆಟ್ಟ ಧರ್ಮ |
೪ – ೯೮ |
ಕುಯಕ – ಕುಹುಕ, ಕಪಟ |
೮ – ೫೧ |
ಕುಱುಕುಱು – ತೀರ ಸಣ್ಣ(ಹೆಜ್ಜೆ) |
೭ – ೪೪ ವ|| |
ಕುಶೇಶಯ – ಕಮಲ |
೬ – ೭೭ ವ|| |
ಕುಸುಂಕುರು – ಗುಂಪು |
೩ – ೮೦ ವ|| |
ಕುಸುಮಶರ – ಕಾಮದೇವ |
೧ – ೭೪ |
ಕುಳವೞಿ – ವಂಶಪರಂಪರೆ |
೧ – ೭೦ |
ಕುಂಚ – ಚವರಿ |
೮ – ೮೯ ವ|| |
ಕುಂಬು – ನಮಸ್ಕರಿಸು |
೨ – ೮೬ |
ಕುಂಭೀನಸ – ಸರ್ಪ |
೮ – ೩೩ ವ|| |
ಕೂಜನ – ಉಲಿವು |
೪ – ೬೮ ವ|| |
ಕೂಟ – ಬೆಟ್ಟದ ತುದಿ |
೭ – ೩೬ |
ಕೂನ – ಗುರುತು, ಚಿಹ್ನ |
೨ – ೩ ವ|| |
ಕೂಪಾರ – ಸಮುದ್ರ |
೬ – ೧ |
ಕೂಂಕು – ಕೂಗು |
೭ – ೮೪ |
ಕೃತಾಂತ – ಯಮ |
೧ – ೬೯ |
ಕೆಕ್ಕಳ – ಭಯ |
೪ – ೧೧೪ ವ|| |
ಕೆಕ್ಕಳಿಸು – ಸಿಟ್ಟಿನಿಂದ ಉದ್ರೇಕಗೊಳ್ಳು |
೮ – ೨೦ವ|| |
ಕೆತ್ತ – ಮುಚ್ಚಿದ |
೧ – ೮೯ |
ಕೆಯ್ವಲ – ಕೈಬಲ |
೧ – ೭೪ |
ಕೆಯ್ಪೊಡೆ – ಬಾಣದ ತುದಿ |
೪ – ೧೩೭ |
ಕೆಳರ್ – ಕೂಗು |
೮ – ೨೦ ವ|| |
ಕೆಂದಳ – (ಹಸ್ತವೆಂಬ) ಕೆಂಪು ಎಲೆ |
೭ – ೭೮ |
ಕೇರ್ಗಟ್ಟು – ಗೋಡೆ ಕಟ್ಟು |
೩ – ೭೦ |
ಕೇಯೂರ – ಭುಜಕಿರೀಟ |
೩ – ೧ |
ಕೇರೆ – ಕೇರೆ ಹಾವು |
೩ – ೪೫ |
ಕೇವಣಿಸು – ಜೋಡಿಸು, ಪೋಣಿಸು |
೧ – ೨೭ |
ಕೈಗೞಿ – ಅತಿಯಾಗು |
೪ – ೧೨೯ |
ಕೈತವ – ಮೋಸ |
೩ – ೨೪ |
ಕೈಪೆ – ಕಹಿ |
೪ – ೪೩ |
ಕೈಪೊಡೆ – ಕೈಚೀಲ |
೩ – ೬೨ |
ಕೈವಾರ – ಹೊಗಳಿಕೆ |
೫ – ೬೮ |
ಕೊಕ್ಕರಿಕುಂ – ಅಸಹ್ಯಪಡಿಸುವದು |
೬ – ೫೮ |
ಕೊಡಸಿಗೆ – ಒಂದು ಜಾತಿಯ ಗಿಡ |
೪ – ೧೨೬ |
ಕೊಣಕಿಡು – ಹಾರು, ನೆಗೆ |
೧ – ೯೨ ವ|| |
ಕೊಣಸು – ಕರು |
೧ – ೯೨ ವ|| |
ಕೊನೆ – ಯಶಸ್ವಿಯಾಗು |
೧ – ೩೩ |
ಕೊರ್ವು – ಕೊಬ್ಬು |
೪ – ೧೦೭ ವ|| |
ಕೊಲ್ಲಿ – ನೋಟ, ಕೊಂಕು ನೋಟ |
೩ – ೬೬ ವ|| |
ಕೊಸಗು – ಬೆಟ್ಟದಾವರೆ |
೪ – ೬೮ ವ|| |
ಕೊಂತ – ಭಲ್ಲೆ, ಈಟಿ |
೪ – ೮೪ ವ|| |
ಕೋಟರ – ಮರದ ಹೊದರು |
೩ – ೪೪ |
ಕೋಣ – ವೀಣೆಯನ್ನು ನುಡಿಸುವ ಸಾಧನ |
೬ – ೧೯ ವ|| |
ಕೋದಂಡ – ಬಿಲ್ಲು |
೧ – ೬೪ |
ಕೋದು – ಪೋಣಿಸಿ |
೪ – ೧೨೭ |
ಕೋವಣ – ಕೌಪೀನ |
೬ – ೨೪ |
ಕೋವಿದ – ಬಲ್ಲವ |
೧ – ೫೦ |
ಕೋಳ್ – ಹಿಡಿತ (ಪೇಚು) |
೮ – ೯೩ |
ಕೋಳ್ಮೊಗ – ಕೊಂಬು ಮೂಡಿದ ಮುಖ |
೪ – ೯೬ ವ|| |
ಖ |
|
ಖದಿರ – ಕಾಚಿನ ಮರ |
೫ – ೮೨ |
ಖರಕರ – ಸೂರ್ಯ |
೪ – ೧೩೪ |
ಖರತಾ – ಉಗ್ರತೆ |
೭ – ೯೩ |
ಖೇಟಕ – ಢಾಲು |
೮ – ೬೪ ವ|| |
Leave A Comment