ಶ್ರೀಪಾದಾಕ್ರಾಂತಲೋಕಂ ಪರಮಹಿಮಕರಂ ನೂತನ ಕ್ಷತ್ರಕಾಂತಂ
ತಾಪಧ್ವಾಂತಾಪನೋದಕ್ಷಮನಮೃತಕಲಾವಲ್ಲಭಂ
ವಿಶ್ವವಿದ್ಯಾ
ಕೂಪಾರೋಜ್ಜೀವಜೈವಾತೃಕನತನುಕೃತಸ್ವಾಂತಸೌಖ್ಯಂ
ತ್ರಿಲೋಕೀ
ದೀಪಂ
ತಳ್ಕೈಸುಗಸ್ಮನ್ಮತಿಕುಮುದಿನಿಯಂ ನೇಮಿಚಂದ್ರಂ ಜಿನೇಂದ್ರಂ   ೧

ವಿಧುಕಾಂತಂ ಕಾಮದಂ ಪ್ರೋದ್ಧತಮಕರಪತಾಕಂ ನತಭ್ರೂಲತಾಪು
ಷ್ಪಧನುರ್ಲೇಖಂ
ಮನೋಲಕ್ಷ್ಯಕಮಸೃಣದರಸ್ಮೇರನೇತ್ರಪ್ರಸೂನಾ
ಯುಧನುದ್ಯದ್ಭಾರತೀಶಂ
ಕುಡುಗೆಮಗಮೃತಶ್ರೀಸಮುತ್ಕಂಠೆಯಂ
ನ್ಮಧುರಾಜಶ್ರೀಮನೋಜ್ಞಂ
ಜಿನವದನಮಯಂ ಮನ್ಮಥಂ ದಿವ್ಯರೂಪಂ   ೨

ಆಯತದಿವ್ಯಮೂರ್ತಿ ಶಿವಸೌಖ್ಯಕರಂ ಹರಿಪೂಜ್ಯನೂರ್ಜಿತ
ಶ್ರೀಯುವತೀಶ್ವರಂ
ಮಧುವಿರುದ್ಧ ವಿಭೂತಿ ವಿಯೋಗಿಚಿತ್ತಮಂ
ನೋಯಿಸದೊಂದಿ
ನಿಂದ ರತಿರಾಗಮನಾಗಿಸದಸ್ಯಪೂರ್ವಪು
ಷ್ಪಾಯುಧನೀವನಕೈಮಗೆ
ಶಾಂತಿಜಿನಂ ವೃಜಿನೈಕಶಾಂತಿಯಂ

ಬೞಲದೆ ಪುಷ್ಪ ಬಾಣಹತಿಯಿಂ ಪುಳಕಂಗಳನಾನದುಣ್ಮಿ ನಾ
ನೞಿಯಂದೆ
ಜಾಣನಿಕ್ಕದೆ ಬೆಮರ್ತಱುತಾಱದೆ ತೀರ್ದು ತಾನೆ ಮೆ
ಯ್ಕೞಲೆ
ಕಡಂಗಿ ಮುಕ್ತಿಯೊಡಗೂಡಿದ ಪೆಂಪಿನ ಸೌಖ್ಯದಿಂಪು ಪೊಂ
ಪುೞಿಯೆನಿಸಿರ್ದ
ಸಿದ್ಧರೆಮಗೀಗೆ ವಿಶುದ್ಧರಭೀಷ್ಟಸಿದ್ಧಿಯಂ        ೪

ಜಿನಪದಬೋಧವಾರ್ಧಿಭವೆ ಭವ್ಯಮನೋಹರಕಾಂತೆ ಕಾಮಸಂ
ಜನನಿ
ಯಶೋವಿಕಾಸಿನಿ ಗುಣೀಕೃತ ಸಂಸೃತಿದೋಷೆ ಪುಣ್ಯಬಾ
ಗಿನಿ
ಭುವನ ಪ್ರಬೋಧಿನಿ ಸುಖಾಮೃತದಾಯಿನಿ ಬಂದು ನೇಮಿಚಂ
ದ್ರನ
ಮುಖಪದ್ಮದೊಳ್ ಸಿರಿವೊಲಿರ್ಪ ಸರಸ್ವತಿ ನಿಲ್ಕೆ ನಲ್ಮೆಯಿಂ         ೫

ಬಱಿದೆ ಮರಲ್ದರಲ್ಲ ಕುಕವಿವ್ರಜಶಾಲ್ಮಲಿಯಂ ಮಲಂಗದೆ
ೞ್ಚ
ಱಿಸದೆ ದುರ್ವಿವೇಕಮುಖಕುಟ್ಮಲದಿಂದವಗಂಧಮಂ ಮರು
ಳ್ದೆಱಗದೆ
ಮುಗ್ಧಚಂಪಕದೊಳೊಲ್ದು ಸರಸ್ವತಿಯೆಂಬ ತುಂಬಿ ಬಂ
ದೆಱಗುಗೆ
ನೇಮಿಚಂದ್ರನ ನವಸ್ಮಿತಜಾತಮುಖಾಂಬುಜಾತದೊಳ್        ೬

ಎನಗೆ ಸಮಂತಭದ್ರನೆ ಕವೀಶ್ಚರರೊಳ್ ಸಕಲಾಕಲಂಕದೇ
ವನೆ
ವರವಾದವಿದ್ಯರೊಳಶೇಷವಿಶೇಷಕಪೂಜ್ಯ ಪೂಜ್ಯಪಾ
ದನೆ
ಪದವಾಕ್ಯಕೋವಿದರೊಳತ್ಯಭಿನೂತರನ್ನರಪ್ಪ
ತ್ತಿನ
ಕವಿವಾದಿಶಾಬ್ದಿಕರೊಳಾರ್ಗೆನಿತುಳ್ಳೊಡಮೞ್ಕಱುಳ್ಳೊಡಂ  ೭

ಪಾಪಶುಭೋದಯಮಂ ವಾ
ಗ್ವ್ಯಾಪಾರದಿನನತನತರ್ಗೆ
ಮಾೞ್ಕುಂ ಸಹಜಂ
ಕೋಪಪ್ರಸಾದಮೆಂದೊಡೆ

ಶಾಪಾನುಗ್ರಹಸಮರ್ಥರಲ್ಲರೆ
ಕವಿಗಳ್       ೮

ಕಡುಗೞಿದಯಶಂ ಪೆಸರಿಡೆ
ಕಡುವಿಳಿದಾಯಿತ್ತು
ಕೀರ್ತಿ ಕವಿಗಳ್ ಕಱಿದೆಂ
ದೊಡೆ
ಕಱಿದವರ್ಗಳ್ ಬಿಳಿದೆಂ
ದೊಡೆ
ಬಿಳಿದೇಕವರನುಱದೆ ಕಿಡುವರ್ ಕೆಲಬರ್        ೯

ಸುಭಗಕವಿವೃಷಭಶುಭದ
ಸ್ವಭಾವಸರಸಪ್ರಬಂಧಬಂಧುರಗುಣಸೌ

ರಭಮಂ
ಪೊತ್ತೆಸಗುವ ವಾ
ಗ್ವಿಭವಮುಮುಂಟಾದೊಡವನೆ
ಸೇವ್ಯಂ ಜಗದೊಳ್    ೧೦

ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಸಂತತಿ ವಾಮನಕ್ರಮಂ
ಮುಟ್ಟುಗೆ
ಮುಟ್ಟದಿರ್ಕೆ ಮುಗಿಲಂ ಹರನಂ ನರನೊತ್ತಿ ಗಂಟಲಂ
ಮೆಟ್ಟುಗೆ
ಮೆಟ್ಟದಿರ್ಕೆ ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್
ಮುಟ್ಟಿದರೊತ್ತಿ
ಮೆಟ್ಟಿದರಿದೇನಳವಗ್ಗಳಮೋ ಕವೀಂದ್ರರಾ       ೧೧

ಕಿವಿಯಿಂದೀಂಟಿಸುವರ್ ಸಮಸ್ತ ರಸಮಂ ತೋರ್ಪರ್ ಸರೋಜಾತಮಂ
ಯುವತೀಪ್ರೌಢಲತಾಗ್ರದೊಳ್
ಕುಮುದಮೊಂದೊಂದಲ್ಲಿಯಾ ಬಾಲಪ
ಲ್ಲವಮಂ
ಪುಟ್ಟಿಪರಾರ್ಯ ಮೋಹನಮುಮಂ ಮಾಳ್ಪೀ ಚಮತ್ಕಾರಮಂ
ಕವಿಗಳ್
ಬಲ್ಲವೊಲನ್ಯರೆತ್ತಱಿವರಂತಾ ಬ್ರಹ್ಮನುಂ ಬಲ್ಲನೇ       ೧೨

ಮರನೀಗುಂ ಮಣಿಯೀಗುಮೊಂದುಪಶುವೀಗಂ ಕೇಳಿಮೆಂದೋಳಿಯೊಳ್
ಪುರುಡಂ
ಪುಟ್ಟಿಸಿ ಕಾಷ್ಠಮಂ ಕೊನರಿಪರ್ ಕಲ್ಲಲ್ಲಿ ನಾರೆತ್ತುವರ್
ಮರುಳಂ
ಪೋಪುರುಗಳಾಗಿಪರ್ ಕಿವಿಗಳೊಳ್ ಪೀಯೂಷಮಂ ಪಿಂಡಲು
ರ್ವರೆಯೊಳ್
ಸಂದ ಕವಿಪ್ರವೇಕರೆ ವಲಂ ಬಲ್ಲರ್ ಪೆಱರ್ ಬಲ್ಲರೇ          ೧೩

ನಿಶ್ಚಿತಮಿದೆನಗೆ ಸಕಲವ
ಚಶ್ಚತುರಜನೋಪದೇಶದಿಂ
ಪಿಶುನವಚೋ
ವೃಶ್ಚಿಕವಿಷಹರಮುಖಿಳ
ವಿ
ಪಶ್ಚಿನ್ನುತಿಮಂತ್ರಮೆಂಬುದಿನ್ನುಂ
ಮುನ್ನುಂ    ೧೪

ಕಾಯಮಿರೆ ಮನಮನಂಗಜ
ಸಾಯಕಮುರ್ಚುವವೊಲುರ್ಚದಿತರೇಷು
ಕುಶಾ
ಗ್ರೀಯಮತಿ
ಕವಿಜನಾಭಿ
ಪ್ರಾಯಮನಱಿವಂತೆ
ಪೆಱನದೇನಱಿದಪನೇ ೧೫

ಅಧಮಕೃತಿವೇಣುವಿದಳನ
ವಿಧುರಿತಮತ್ತಱಿಗುಮರಸವಿಬುಧಭ್ರಮರಂ

ಬುಧವಿಧುವಿಕಸಿತ
ಸುಕವಿ
ಪ್ರಧಾನಕೃತಿಕುಮುದಮಧುರಮಧುರಸದಿಂಪಂ
        ೧೬

ಕವಿಗಳ ಬಿಸುಟ್ಟ ಬಗೆಯುಂ
ತವಗುಂಟೆ
ವಿದಗ್ಧಹೃದ್ಯಕಾವ್ಯವಿಚಾರ
ಕ್ಕವಟವಿಸಿ
ಗಂಟಲೊಡೆದೊಣ
ಗುವಿನಂ
ಬಾಯ್ಮಾೞ್ಪರೇಕೆ ಬೆಳ್ಳಕ್ಕರಿಗರ್     ೧೭

ಔಚಿತ್ಯವೇದಿ ವಿವಿಧ
ಲಾಚತುರನೆನಿಪ್ಪ
ಕವಿಯ ಕಾವ್ಯಾರ್ಥಮದೇಂ
ಗೋಚರಮೆ
ಲೋಕಶಾಸ್ತ್ರವಿ
ಲೋಚನಮಿಲ್ಲದ
ನರಂಗೆ ವಸುಧಾತಲದೊಳ್         ೧೮

ಊದುವ ತಣ್ಣೆಲರುಂ ಶೀ
ತೋದಕಮುಮಸೇವ್ಯಮಲ್ತೆ
ಹಿಮಸಮಯದೊಳಾ
ರಾದರಿಪರುಚಿತವಱಿಯದ

ವೈದಿಕವಿಗಳ
ಕವಿತ್ವಮಂ ವಸುಮತಿಯೊಳ್  ೧೯

ಸೃಕ್ವದಿನುಗೆ ನೊರೆ ದುಷ್ಕವಿ
ಶಾ
‌ಕ್ವರನೇಂ ಮೇದು ಮೆಲ್ಕನಿಱಿಯದೆ ಕಟುಕಂ
ಠಕ್ವಣಿತಮಪರಿಮಿತಪರಿ

ಪಕ್ವತರೋದಾರಕಾವ್ಯಸಸ್ಯೋತ್ಕರಮಂ
     ೨೦

ಲೋಗರ ಬಗೆಗೋದಿನೊಳನು
ರಾಗಮನಾಗಿಸದೊಡೋದಿದಂಗೋದಿದೊಡೋ

ದಾಗದು
ಪೇೞಕ್ಕುಮೆ ಮೊಲೆ
ನಾಗಂ
ಕಿವಿಗಿವುಡುವೀೞ್ವಿನಂ ಗೞಪದುದೇ   ೨೧

ಅಸ್ತವ್ಯಸ್ತಂ ಪದಮ
ಪ್ರಸ್ತುತಮತಿವಿಹಿತಮರ್ಥಮೆನೆ
ದುಷ್ಕೃತಿಯಂ
ವಿಸ್ತಾರಿಸಿ
ಸಲೆ ಸುಜನಶಿ
ರಸ್ತೋದಮನೇಕೆ
ಮಸಗಿ ಮಾೞ್ಪರೊ ಕೆಲಬರ್         ೨೨

ಮಿಗೆ ಪದಮಿಡಲಱೆಯದ ನಾ
ಲಗೆವೆಱೆವರ್
ಸಲೆ ಸದರ್ಥಮಂ ಕಾಣದ ಪೋ
ಬಗೆಗುರುಡರ್
ಬಗೆವೊಡೆ
ಬ್ಬಿಗರಕ್ಕುಮೆ
ಓದುಗೇಳದಕ್ಕರಗಿವುಡರ್      ೨೩

ನೀರೊಳಗಣ ಪೆಣನಂತೆವೊ
ಲಾರೆೞವೊಡಮುರುಳೆವರಿದು
ಪುರುಳಿಲ್ಲದಹಂ
ಕಾರದೊಳೆ
ಬಾತು ಬಲ್ಮೆಗೆ
ಹಾರೈಸುವರೇಕೆ
ಬಯಕೆಗವಿಗಳ್ ಕೆಲಬರ್   ೨೪

ಎಂದುದನೆನುತಿರ್ಪರ್ ಗಿರಿ
ಯಂದದಿನತಿನಿಶಿತಸುಕವಿವಾಕ್ಕುಲಿಶಂ
ಬೀ
ೞ್ತಂದೊಡಮೆರ್ದೆಯಂ
ಸೀೞ್ದೊಡ
ಮೊಂದಕ್ಕರಮಿಲ್ಲೆನಿಪ್ಪ
ಕಲ್ಲೆರ್ದೆಗವಿಗಳ್      ೨೫

ಆನುಂ ಬುಧರೊಡನೆ ನೃಪಾ
ಸ್ಥಾನದೊಳಿರ್ದಪ್ಪೆನೆಂದು
ಕುಕವಿಕದಂಬಂ
ಬಾನುದ್ದಮಪ್ಪುದೇಕು

ದ್ಯಾನದೊಳೊಡನಿರವೆ
ಕಾಗೆಯುಂ ಕೋಗಿಲೆಯುಂ    ೨೬

ಏಪೊೞ್ತುಮುಱಿಗುಮೋ ವಿ
ಸ್ಮಾಪಕಮೋ
ಕಾವ್ಯರಸವಿಶೇಷಕದೊಳ್ ದು
ಷ್ಟಾಪಶದರ್
ಸುಕವಿಯಶೋ
ದೀಪಾಂಕುರದಗ್ಧಕರ್ಣಕೋಟರಕುಟಿಗಳ್
     ೨೭

ಕಸವಂ ಕಿೞ್ತಲ್ಲದೆ ಪೊಸ
ಸಸಿಗಳ್
ಮೈಗೊಳ್ಳವೆತ್ತಿ ಕಳೆಯದೆ ಖಳತಾ
ಮಸಮಂ
ಬೇರ್ವೆರಸಿಂ ಪಸ
ರಿಸುಗುಮೆ
ಬುಧವಿಧುಗೆ ವಿಮಳಕೃತಿದೀಧಿತಿಗಳ್       ೨೮

ತಕ್ಕರನೆ ಮಱಸಲೆಂದೆಡೆ
ವೊಕ್ಕೊಡೆ
ಖಳಱಿವರಱಿದು ಕಳೆದಪರಿನಬಿಂ
ಬಕ್ಕೆ
ಮಱಿಯಪ್ಪ ಮುಗಿಲಂ
ಮೊಕ್ಕನೆ
ಪೋಗಿಸದೆ ಪವನನೆನಗೇಂ ನಿನಗೇಂ        ೨೯

ಒಳಗಱಿಯರ್ ಪೊಱಗಱಿಯರ್
ವಿಳಸತ್ಕೃತಿಯನೆ
ತಗುಳ್ದು ದೂಷಿಸಲುಚ್ಛೃಂ
ಖಳಖಳರತಿಪ್ರಸಾರಿತ

ಗಳರಪ್ಪರ್
ಗಳಿತಲಜ್ಜರೇಂ ಗಳ ಗೆಯ್ಯರ್     ೩೦

ಆತಂಗೆ ನಮಸ್ಕಾರಮ
ಚಾತುರ್ಯಂ
ರಾಜತತಿಗೆ ರಾಹುವ ವದನಂ
ಶೀತಾಂಶುಗೆ
ಕಾವ್ಯಮಣಿ
ಜ್ಯೋತಿಗೆ
ದುರ್ಜನಪತಂಗಮಾವನಿನಾಯ್ತೋ          ೩೧

ಕೇಳೆ ಕಡುಸುರ್ಕಿ ಕುಸಿದಪು
ದೇಳಿಸಿ
ಗುಣಮೆಂದೊಡಮಮ ದೋಷಕ್ಕೊರ್ಮಾ
ರ್ನೀಳಂ
ನಿಮಿರ್ದಪುದತಿವಾ
ಚಾಳರ
ನಾಲಗೆಗೆ ಜಿಗುೞೆಯೇನಪ್ಪುದೊ ಪೇಳ್        ೩೨

ಪರಿಕಿಪೊಡೆ ಪಿಶುನನಗ್ಗದ
ಹರನೊಳ್
ಪುರುಡಿಸುವನೆಂದೊಡುೞಿದರ ಪುರುಳೇಂ
ಕೊರಲೊಳ್
ವಿಷಮಂ ತಳೆದೊಡೆ
ಗಿರಿಶಂ
ತಾಂ ತಳೆದನಲ್ತೆ ತುದಿನಾಲಗೆಯೊಳ್         ೩೩

ನಿನಗೆ ನಗೆಯಲ್ಲದೇಂ ದು
ರ್ಜನನೆಂಬೀಪೆಸರ್ಗೆ
ಮೆಯ್ಯಗುರ್ವಿಸುವುದು ಕೇಳ್
ಕನಸಿನೊಳಂ
ಗರ್ದಭದ
ರ್ಶನಮಗಿವಿನಮಾರ್ಗೆ
ಮಾಡದಶುಭೋದಯಮಂ    ೩೪

ಭೀತನುಮಂ ಖಳಕೃಪಣಕ
ಪೋತನುಮಂ
ಪಡೆದು ಲೋಕಮಂ ಕಿಡಿಸಿದ
ಮ್ಮೇತಿಯಲೆಯದೊಡೆ
ಮೊಗದೊಳ
ಗೇತರ್ಕೆ
ಪಿತಾಮಹಂ ಚತುರ್ಮುಖನಾದಂ   ೩೫

ಅತಿಪೀಡಿಸುಗುಂ ಸ್ಥಾನ
ಚ್ಯುತನಾಗಿಯುಮಖಿಳಮಂ
ಖಳಂ ವೃತಿವೀರು
ತ್ಪತಿತಂ
ಪಥಿಕರ ಪದತಳ
ಹತಿಯಂ
ಹತಕಂಟಕಾಂಕುರಂ ಮಾಡುವವೊಲ್       ೩೬

ಸತ್ತುಂ ಪಿಶುನಂ ಪೆಱರ್ಗಾ
ಪತ್ತಂ
ಮಾಡದಿರನೆಂದು ಮಱುಗಿದುಪುದು
ಚ್ಚಿತ್ತಂ
ಮೃತಮಾಷಮುಖಂ
ಮತ್ತೆನಿಸದೆ
ಬವನಮೆಯ್ದಿ ಪವೊಲುಂಬವನಂ ೩೭

ಕಡೆಗಣಿಸಿದೊಡಂ ದರ್ಪಂ
ಗಿಡಿಸಿದೊಡಂ
ಕಳೆವುದರಿದು ಖಳನಂ ರಸೆಯೊಳ್
ಮಡಗನೆ
ಬಿದಿ ಪದಮುಮನೇಂ
ಪಡೆದನೆ
ಬಂದೇಕೆ ಪಿಡಿವುದುರಗಂ ಧರೆಯೊಳ್        ೩೮

ನೋಡಿರೆ ಸದ್ಗುಣಂಗಳನೆ ಕೇಳ್ದು ಕನಲ್ವ ಖಳಂಗೆ ಕರ್ಣಮಂ
ಮಾಡಲೆ
ಪೋಗಿ ಮಸ್ತಕಮನಯ್ಯೊ ವಿಧಾತ್ರನದೆಂತು ಸರ್ಪನೊಳ್
ಮಾಡಿದನಾಬುಧಂಗಮಿದು
ಸರ್ಪನಿವಂ ಖಳನೆಂಬ ಬುದ್ಧಿ ಮೇಣ್
ಕೂಡದೊ
ಕಂಡೊಡಂ ಕಮಲಗರ್ಭನುಮಂ ಖಳನಾಳಿಗೊಂಡನೋ       ೩೯

ತಲೆಯಂ ತೂಗುವನೊರ್ವನುರ್ವಿ ಕೆಲದೊಳ್ ಕಾೞ್ಕಬ್ಬಮಂ ಕಟ್ಟಿ ಕೋ
ಟಲೆಗೊಂಡೞ್ಪವನೊರ್ವನೊಲ್ದವರ
ಚಾತುರ್ಯಕ್ಕೆ ಕೈವಾರಮಂ
ಪೊಲೆಗೆಟ್ಟೀವವನೊರ್ವನಿಂತಕಟ
ಯಕ್ಷೋಯಾದೃಶಸ್ತಾದೃಶೋ
ಬಲಿಯೆಂಬುಕ್ತಿಗೆ
ದುರ್ವಿದಗ್ಧರೆ ವಲಂ ನೋಂತರ್ ಪೆಱರ್ ನೋಂತರೇ    ೪೦

ನೆಲಕೆ ನೆಗೞ್ತೆಗರ್ಥಮನೆ ಮಾೞ್ಪುದಱಿಂ ಬಿದಿ ಮಾೞ್ಪಿದೇಕೆ
ಲ್ಗಲನಹಿಮಸ್ತಕಕ್ಕೆ
ಮಣಿಯಂ ಪಲವಾಗಿರೆ ಲೋಭಿಯೆಂಬ ಕಾ
ವಲುಮನೊಱಲ್ದು
ಮಾಡುವುದಱಿಂದುಱೆ ಮಾಡನದೇಕೆ ಮತ್ತಮೊಂ
ದೆಲವಮನೊಡನಂದೊಡೆದ
ಗುಳ್ಳೆಯನೊಳ್ಳೆಯನಬ್ಜಸಂಭವಂ  ೪೧

ಬೇಱೆ ಕವಿಗಳ್ಗೆ ವಿನಯಂ
ದೋಱದೆ
ಬೇೞ್ಪವರ್ಗೆ ಬೇೞ್ಪ ತೆಱದಿಂ ಧನಮಂ
ಬೀಱದೆ
ಬರ್ಕುಮೆ ನಿಂಬಿಯ
ಸೂಱೆಯೆ
ವಿಧುವಿಶದಕೀರ್ತಿ ಭನತ್ರಯದೊಳ್         ೪೨

ಬಳ್ಳಿ ಮೊದಲಾಗಿ ಮೊದಲೊಳ
ಗೆಳ್ಳನಿತುಂ
ಪೊನ್ನನಿಕ್ಕದೊಡೆ ಪರ್ಬದು ಪೊ
ನ್ನುಳ್ಳ
ನರನಿತ್ತೊಡಲ್ಲದೆ
ಬೆಳ್ಳನೆ
ಪರ್ಬುಗುಮೆ ಕೀರ್ತಿಲತೆ ದಿಕ್ತಟಮಂ  ೪೩

ಜೀವಿಸುಗೆ ವಜ್ರಲೋಭಿ ಯು
ಗಾವಧಿವರಮಲ್ಲದಂದು
ಧಾತ್ರನ ಬಲದಿಂ
ಪಾವಾಗಿ
ಪುಟ್ಟಿ ಧನಮಂ
ಕಾವಂತುಟೆ
ಲೋಕಮೆಲ್ಲಮಂ ಮೆಲ್ಲದಿರಂ    ೪೪

ಕಾಣನೆ ಜವನೇಕೆ ನಿಜ
ಪ್ರಾಣಮನಿಡುವನೊ
ಮಡಂಗಿದೊಡಮೆಯೊಳಧಮಂ
ಕ್ಷೋಣಿಯೊಳಗಬ್ಬೆಯುಱಿಯದ

ಕೋಣೆಯುಮಾತೂಣನಾಡದೆಡೆಗಳುಮೊಳವೇ
        ೪೫

ಪಾಷಾಣಮುಮೊಳಗಾಗಿ ವಿ
ಶೇಷಣಮಂ
ಪಡೆದು ದೇವಕುಳಮಕ್ಕುಮದೇಂ
ದೋಷಮೆ
ಪುರುಷಾಕಾರದ
ಪಾಷಾಣಮದೆಲ್ಲಿ
ಬಾರ್ತೆಯಾದುದು ಪೇೞಿಂ ೪೬

ನಿಲ್ಮಾನಸನೆಂಬರೆ ನೀ
ಲ್ವಲ್ಮೀಕೋರಗನನಪ್ರತೀಕಾರಶ್ರೀ

ಗುಲ್ಮವ್ಯಾಧಿಯನೀವನ

ಶಾಲ್ಮಲಿಯಂ
ಲುಬ್ಧನೆಂಬ ಗೃಹಲಬ್ಧಕನಂ     ೪೭

ಕಾಡಿ ಕಱೆಯದ ಘಟೋಧ್ನಿಯ
ಕೋಡಿಯನೋಡಿಸದ
ಕೆಱೆಯ ಕುಡದೊಡಲೊಳಗ
ೞ್ಕಾಡುವ
ಕುಬುದ್ಧಿಯೋದಿನ
ಕೇಡಂ
ಕಾಣರೆ ಕದರ್ಯರೇಕೆಯೊ ಕೆಡುವರ್  ೪೮

ಫಣಿಯ ಫಣಾಮಣಿಯುಂ ವಾ
ರಣರದಮುಂ
ವ್ಯಾಘ್ರಚರ್ಮಮುಂ ಚಮರಮೃಗೀ
ಗಣವಾಲಮುಮತಿಕೃಪಣನ

ಪಣಮುಂ
ಬಾೞಲ್ಕೆ ಸಾರವಾರುಮನೆಂದುಂ  ೪೯

ಸಾಯದ ದೇವಗೆ ಸುಡೆಯುಂ
ಸೀಯದೆ
ಸಲೆ ಪಿಶುನಶುನಕನೋಯದೆ ತಿನಿಯುಂ
ನೋಯದ
ಬೇಯದ ಬಾಯದ
ಕೀಯದ
ಪೆಣನಲ್ತೆ ಕುಡದ ಕೊಳ್ಳದ ಕೃಪಣಂ  ೫೦

ಕರೆದುಚ್ಚಾಸನದಲ್ಲಿ ಕುಳ್ಳಿರಿಸಿ ಪೂಜಾಪೂರ್ವಕಂ ಕಾವ್ಯಸಾ
ಗರಮಂ
 ಪೊಯ್ದೊಡಮಿನ್ನದೇಕೆ ನೆನೆಗುಂ ಮೂರ್ಖಂ ಮಹೋತ್ತುಂಗಮಂ
ದಿರಮಧ್ಯಸ್ಥಿತಪೀಠದೊಳ್
 ನಿಱಿಸಿ ದೈವಂಮಾಡಿ ತೀರ್ಥಾಬುವಂ
ಸುರಿದೆಲ್ಲಂ
 ಪೊಡೆವಟ್ಟು ಪೂಜಿಸಿದೊಡಂ ಕಲ್ ಮೆಲ್ಲಿತೇನಾದುದೇ         ೫೧

ನಿಂದಿಸಿದಪರೆಂದಾದೊಡ
ಮೊಂದನೆ
 ಗುಣದೊಳ್ ದುರಾತ್ಮನೆಂದಿನಿತುಮನಾ
ನೆಂದೆನುೞೆದಂತಿರೆಮಗೇ

ವಂದಪ್ಪುದೊ
 ಪೆಱರ ಗುಣದೊಳಂ ದೋಷದೊಳಂ     ೫೨

ಆರ್ಯರ ಯಶಮಿದು ಖಳರ ಕ
ದರ್ಯರ
 ದುರ್ಯಶಮಿದೆಂದು ತೋರ್ಪಲ್ಲಿಯೆ ತಾ
ತ್ಪರ್ಯಮೆನಗಾಂ
 ಜಗಕ್ಕಾ
ಚಾರ್ಯನೆ
 ಕಣ್ಣೂಱಿ ಕಲ್ಪಿಪಂತೆಲ್ಲರುಮಂ     ೫೩

ಅದಱಿಂ ಜಸಮಂ ಪಡೆವೊಡೆ
ವಿದಗ್ಧ
 ಕವಿವೃಷಭನಪ್ಪುದೇಗೆಯ್ದುಮದಾ
ಗದೊಡೆ
 ಗುಣಿಯಪ್ಪುದದುಮಾ
ಗದೊಡೊಪ್ಪುವ
 ಚಾಗಿಯಪ್ಪುದಪ್ಪೊಡೆ ಪುರುಷಂ        ೫೪

ಕುಡುವವನೇನನಿತ್ತಪನೊ ಕಟ್ಟಿ ಬುಧಾಳಿಗೆ ಪೊನ್ನ ಮೊಟ್ಟೆಯಂ
ಕುಡುವೊಡೆ
 ಚೆಚ್ಚರಂ ಕುಡುವುದುಳ್ಳುದನಂತದು ತೀರಿದಂದು ಕೈ
ಯುಡುಗದೆ
 ತಂಬುಲಂಗುಡುವುದಂತದು ತೀರಿದೊಡಂ ಪ್ರಭೂತ್ವದೊಳ್
ತೊಡರ್ದಿರದಾಱೆ
 ಕೂಱೆ ನಯದಿಂ ವಿನಯಂಗೆಯಲೇನೊ ತೀರದೇ      ೫೫

ಕಾಯಿಲ್ಲದೆ ಪಣ್ಣಂ ತನ
ಗಾಯಿಲ್ಲದೆ
 ಬಾೞನುತ್ತು ಬಿತ್ತನೆ ಫಲಮಂ
ಈಯದೆ
 ವಿಧುವಿಶದಯಶಃ
ಶ್ರೀಯಂ
 ಬಯಸಿದೊಡೆ ಬರ್ಕುಮೇ ಬಗೆವಾಗಳ್       ೫೬

ಇತ್ತು ಶರೀರಮಂ ಖಚರನಂದಹಿವೈರಿಗೆ ಮರ್ತ್ಯಲೋಕಸಂ
ಪತ್ತುಮನೈದೆ
 ಕಾದನಹಿಲೋಕಮನೊಂದನೆ ಕಾದನಲ್ತವಂ
ತುತ್ತಿದೊಡುರ್ವಿಯಂ
 ತಳೆದ ಶೇಷನನೆತ್ತಣ ಭೂತಧಾತ್ರಿ ತಾ
ನೆತ್ತಣ
 ವಾರ್ಧಿಯೆತ್ತಣ ಕುಲಾಚಲಮೆತ್ತಣ ಜೀವರಾಶಿಗಳ್        ೫೭

ಭಯಮಿನಿತೇಕೆ ಕಾಂಚನಕೆ ಸಜ್ಜನರತ್ತಣಿನಿಂದುಕಾಂತಕೀ
ರ್ತಿಯೊಳೆ
 ನಿಜಾಂಗಮಂ ಬಿಳಿದುಮಾಡಿದಪರ್ ಬುಧರೆಂದು ತಾಂ ಧರಿ
ತ್ರಿಯೊಳಡಗಿರ್ದೊಡಂ
 ಕರೆದು ಕಲ್ಲೊಳಗಿರ್ದೊಡಮೊಲ್ಲದೊಡೀ ಲೋ
ಭಿಯ
 ಮಱೆವೊಕ್ಕೊಡಂ ತೆಗೆದು ಕೊಟ್ಟಪರಲ್ತೆ ವದಾನ್ಯವಲ್ಲಭರ್ ೫೮

ಆವ ಗುಣಕ್ಕಮಿವ ಗುಣಮಗ್ಗಳಗುಣಮೊಂದೆ ಮರ್ತ್ಯರೊಳ್
ತೀವಿದೊಡಾಗಳಂತೆ
 ಕವಿತಾರದೆ ತಾನೆ ಪಯೋಧಿಗುಳ್ಳ ಗು
ಣ್ಪಾವಗಮಿಂದ್ರ
 ಜಾತನದಟಾವಗಮಾಗಸದೊಳ್ ಪೊದೞ್ದ ಪೆಂ
ಪಾವಗಮಬ್ಜಗರ್ಭನಱೆವಾವಗಮರ್ಕನ
 ತೇಜಮಾವಗಂ         ೫೯

ಕಣಿಯೊಳಪೊಕ್ಕು ತಾರದೆ ಪರೀಕ್ಷೆಗೆ ಪಾರದೆ ತೂಗಿ ಕೊಂಡು ಕೇ
ವಣಿಸದೆ
 ವೆಜ್ಜಮಂ ಕಳೆದು ಕೋಯದೆ ತಾಂ ಮಱುಮೆಯ್ಗೆವರ್ಪ ಸ
ದ್ಗುಣಮಣಿಯೆಂಬ
 ಭೂಷಣದಿನಾವನಲಂಕೃತನಾ ಮಹಾತ್ಮನಂ
ಗುಣಕಱುಗೊಂಡು
 ಕೊಂಡು ಕೊನೆದಾರ್ಗಳ ಕೀರ್ತಿಸರೀಧರಿತ್ರಿಯೊಳ್    ೬೦