ಅಂಗಚಿತ್ತ ಉಡುಗೊರೆ, ಪಾರಿತೋಷಕ, ಬಹುಮಾನ
ಅರ್ಗುವಿಸು ಭಯಪಡಿಸು
ಅನಾಕುಳ ಶಾಂತತೆ, ಕದಡದ ಮನಸ್ಥಿತಿ
ಅಪತ್ಯ ಮಗ
ಅಭ್ಯಾಗತ ಹೊರಗಿನಿಂದ ಬಂದವನು, ಅನಿರೀಕ್ಷಿತ ಅತಿಥಿ
ಅಳುಂಬ ಅತಿಶಯ, ಆಧಿಕ್ಯ
ಆಚಮನ ಬಾಯಿ ಮುಕ್ಕುಳಿಸುವುದು
ಆಢಕಿ ತೊಗರಿ
ಆಹವ ಯುದ್ಧ
ಆಹ್ವಯ ಹೆಸರು
ಈಡಿತ ಹೊಗಳಲ್ಪಟ್ಟ
ಉಗ್ರಾಹಿ ಭಯಂಕರ ಸರ್ಪ
ಉತ್ಸೇಧ ಎತ್ತರ
ಉಪಾಧಿ ಬಿರುದು , ಪ್ರಶಸ್ತಿ
ಋಷಿ (ರಿಷಿ) ಜೈನಮುನಿ
ಎಚ್ಚು ಬಾಣವನ್ನು ಬಿಡು
ಒಸಗೆ ಮಂಗಳಕಾರ್ಯ, ಸಂತೋಷ
ಓಜೆ ಕ್ರಮ
ಕಂತು ಮನ್ಮಥ
ಕಟಾಕ್ಷ ಕುಡಿನೋಟ ಓರೆ
ಕವಳಿಗೆ ಓಲೆಗರಿಕಟ್ಟು
ಕಳತ್ರ ಹೆಂಡತಿ
ಕಳವೆಯ ಕೂಳು ನೆಲ್ಲಕ್ಕಿಯ ಅನ್ನ
ಕಾಲುಷ್ಯ ಕೊಳೆ
ಕೃಷ್ಣಾಗುರ ಕಪ್ಪುಬಣ್ಣದ ಚಂದನ
ಕೋಹು ಮೂಲೆ
ಖರ್ಪರ ತಲೆಬುರುಡೆಯ ಚಿಪ್ಪು
ಖಾತಿಕಾ ಕಂದಕ ಅಗಳು
ಖೇಚರ ಗಗನಚರ, ಆಕಾಶದಲ್ಲಿ ಸಂಚರಿಸುವವನು
ಗಗನಚರ ಖೇಚರ, ಆಕಾಶದಲ್ಲಿ ಸಂಚರಿಸುವವನು
ಗಾಡಿ ಸೌಂದರ್ಯ
ಗುಗ್ಗುರಿ ಹೆಸರು, ಕಡಲೆ ಮೊದಲಾದ ಕಾಳನ್ನು ಬೇಯಿಸಿ ಸಂಬಾರವನ್ನು ಹಾಕಿದ ಉಸಳಿ
ಗೋದೂಮು ಗೋದಿ
ಗ್ರಾಮ ಕಲ್ಲು
ಘಟ್ಟಿವಳ್ತಿ ಗಂಧವನ್ನು ಅರೆಯುವವಳು
ಘನನಿನದ ಗುಡುಗು
ಚಂದ್ರಿಕಾವಿಹಾರ ಬೆಳದಿಂಗಳಲ್ಲಿ ಓಡಾಟ
ಚಣಕ ಕಡಲೆ
ಚತುರ್ದಶರತ್ನ ಚ ೧೪ ರತ್ನಗಳು
ಚತುರಂಗ ಬಲ ಆನೆ, ಕುದುರೆ, ರಥ, ಕಾಲಾಳು ಎಂಬ ನಾಲ್ಕು ಅಂಗಗಳ ಸೈನ್ಯ
ಚತುರ್ವೇದ ಋಕ್ಕು, ಯಜಸ್ಸು, ಸಾಮ, ಅಥರ್ವಣ ಎಂಬ ನಾಲ್ಕು ವೇದಗಳು
ಚವ್ವೀಸ ೨೪
ಚೀನ ಚೀನಾದೇಶದಲ್ಲಿ ತಯಾರಾದ ರೇಷ್ಮೆಯ ಬಟ್ಟೆ
ಜಂಘೆ ಕಿರುತೊಡೆ
ಜಘನ್ಯ ಕಡೆಯದು , ಅಧಮವಾದುದು
ಜನಕ ತಂದೆ
ಜರತೃಣ ಒಣಗಿದ ಹುಲ್ಲು ಕಡ್ಡಿ
ಜೈನಮಿಥುನ ಜೈನರಾದ ದಂಪತಿಗಳು
ಟೊಂಕೋತ್ಕೀರ್ಣ ಉಳಿಯಿಂದ ಕೆತ್ತಿದುದು
ತಂತುವಾಯ ಬಟ್ಟೆ ನೇಯುವವನು, ನೇಕಾರ, ಜೇಡ
ತಟ್ಟು ಜೈನಮುನಿಗಳ ಹೊದಿಕೆ ಬಟ್ಟೆ
ತನೂಜೆ ತನುಜೆ, ಮಗಳು
ತಾರಾಳಿ ನಕ್ಷತ್ರಗಳ ಗುಂಪು
ತಿಮಿರ ಕತ್ತಲೆ
ತಿಮಿರುದ್ಯಮಣಿ ಸೂರ್ಯ
ತಿಲ ಎಳ್ಳು
ತುಷಾರ ಮಂಜಿನ ಕಣ, ಇಬ್ಬನಿ
ತ್ರಿಕಟುಕ ಕಾರವಾದ ಮೂರು ಔಷಧೀದ್ರವ್ಯಗಳಾದ ಶುಂಠಿ, ಹಿಪ್ಪಲಿ, ಮೆಣಸು
ತ್ರಿಫಲ ಅಳಲೆ, ತಾರೆ (ಪಾರಿಮರ), ನೆಲ್ಲಿ – ಎಂಬ ಮೂರು ಫಲಗಳು
ತ್ರಿಷಷ್ಟಿ ೬೩
ತ್ರಿಸಂಧ್ಯೆ ಬೆಳಗ್ಗೆ, ನಡುಹಗಲು, ಇಳಿಹೊತ್ತು
ದಣಿಂಬ ಮಡಿ, ಶುಭವಸ್ತ್ರ
ದಶಾಂಗಧೂಪ ಕೆಂಡದ ಮೇಲೆ ಹಾಕಿದಾಗ ಹೊಗೆ ಬರುವ ಸಾಂಬ್ರಾಣಿಯ ೧೦ ಬಗೆ ; ಕೃಷ್ಣಾಗರು, ಶ್ವೇತಾಗರು, ಶ್ವೇತಗುಗ್ಗುಳ, ಶ್ರೀಗಧ, ಲಾಕ್ಷಾ, ಬಿಲ್ವಫಲ, ಘೃತ, ಮಧು, ಸರ್ಜರಸ ಮತ್ತು ಕರ್ಪೂರ -ಇದುದಶಾಂಹ ಧೂಪಗಳು.
ದಿವಿಜಕುಜ ಕಲ್ಪವೃಕ್ಷ
ದುರಿತ ಪಾಪ
ದುರ್ಧರ ಪೂರೈಸಲು ಕಷ್ಟವಾದ
ದೇವಚ್ಛಂದ ಎಂಬತ್ತೊಂದು ಎಳೆಯ ಮುಕ್ತಾಹಾರ
ದೇಹಾರ ದೇವಗೃಹ
ದೌವಾರಿಕ ಪ್ರತೀಹಾರ, ಬಾಗಿಲು ಕಾಯುವನು
ದೌಹಿತ್ರಿ ಮಗಳ ಮಗಳು, ಮೊಮ್ಮಗಳು
ನಕ್ಷತ್ರಮಾಲೆ ಇಪ್ಪತ್ತೇಳು ಎಲೆಗಳುಳ್ಳ ಮುಕ್ತಾಹಾರ
ನವನಿಧಿ ಪದ್ಮ, ಮಹಾಪದ್ಮ, ಶಂಕ, ಮಕರ, ಕಚ್ಛಪ, ಮುಕುಂದ, ಕುಂದ ನೀಲ, ಖರ್ವ – ಎಂಬ ಕುಬೇರನ ೯ ನಿಧಿಗಳು
ನವನಿಧಾನ ನಿಧಿಯೆಂದರೆ ಸಂಪತ್ತು; ನಿಧಾನವೆಂಬುದು ಹುದುಗಿಟ್ಟಧನದ್ರವ್ಯ (ನಿಕ್ಷೇಪ) ನಿಧಿನ್ನಿಧಾನಗಳು ಅಷ್ಟಭೋಗಗಳು.
ನಿಮೀಲ ರೆಪ್ಪೆ ಮುಚ್ಚುವುದು
ನೇತ್ರಪುತ್ರಿಕೆ ಕಣ್ಣಿನ ಗೊಂಬೆ
ಪಂಚಾಶ್ಚರ್ಯ ಉತ್ತಮ ಪಾತ್ರಕ್ಕೆ ಆಹಾರದಾನ ಮಾಡಿದಾಗ ಉಂಟಾಗುವ ೫ ಬಗೆಯ ಅತಿಮಾನುಷ ಸೋಜಿಗಗಳು – ದೇವದುಂದುಭಿ, ಹೂಮಳೆ, ಚಿನ್ನದ ಮಳೆ, ಪರಿಮಳದಗಾಳಿ, ದೇವತೆಗಳ ಮೆಚ್ಚುಗೆ.
ಪಟ್ಟಾವಳಿ ರೇಷ್ಮೆ ಬಟ್ಟೆ
ಪಡಲಿಗೆ ಚಿಬ್ಬಲು ಬಿದಿರಿನ ತಟ್ಟೆ
ಪಡಿ ಬಾಗಿಲು
ಪದ್ಮಷಂಡ ತಾವರೆಯ ಕೊಳ
ಪದೆಪು ಚೆಲುವು
ಪಾಂಡುಕ ಕುಬೇರನ ಒಂಬತ್ತು ರತ್ನಗಳಲ್ಲಿ ಒಂದು
ಪಾವಡೆ ಲೆಗರಿಕಟ್ಟನ್ನು ಸುತ್ತಿಡುವ ಬಟ್ಟೆ
ಪಿಂಗಳ ಕುಬೇರನ ನವನಿಧಿಗಳಲ್ಲಿ ಒಂದು
ಪಿಡಿಕೈ ಹಿಡಿ, ಮುಷ್ಟಿ
ಪುಂಜ ಜೈನ ಬಸದಿಯಲ್ಲಿ ದೇವರ ಮುಂದೆ ಮಣೆಯ ಮೇಲೆ ಅಕ್ಕಿಯ ಕಾಣಿನಿಂದ ಇಡುವ ವಿವಿಧಾಕೃತಿಯ ರಚನೆಯ ಭಕ್ತಿಯ ಅರ್ಪಣೆ.
ಪುರಂಧ್ರಿ ಮುತ್ತೈದೆ
ಪುರುಳು ಸಾರ
ಪುರೋಭಾಗ ಮುಂದುಗಡೆ, ಹೆಬ್ಬಾಗಿಲು
ಪೂತಕಾರ್ತಿ ಪುಣ್ಯವಂತೆ
ಪೆಳಱು ಹೆದರು
ಪೊಂಪುಳಿ ಹೆಚ್ಚಳ, ಪುಳಕ
ಪೊಡವೀಶ ನೆಲದೊಡೆಯ, ರಾಜ
ಪ್ರಧ್ವಸ್ತ ಸಂಪೂರ್ಣ ನಾಶಮಾಡುವಿಕೆ
ಪ್ರಭೃತ್ವಿ ಶ್ರೇಷ್ಠ
ಪ್ರಬೂತಮುದ ಹೆಚ್ಚಾದ ಸಂತೋಷ
ಪ್ರಸ್ಥಪ್ರಮಾಣ ಗೌರವ ಯೋಗ್ಯವಾದದ್ದು
ಪ್ರಸ್ಥಹಸ್ತೆ ನೀರು ಸೋರುವ ಕೈಗಳನ್ನುಳ್ಳವಳು.
ಬಡಿಣ ಆಹಾರ
ಬಱಿಯೋಗರ ಸಪ್ಪೆ ಆಹಾರ
ಬಾಯಿನ ಶುಭಪ್ರಸಂಗಗಳಲ್ಲಿ ಕೊಡುವ ಉಪಾಯನ
ಬಿಸೂರಿಗೆ ಹೆಂಚಿನ ಮೇಲೆ ಕಾಯಿಸಿ ಮಾಡುವ ಅಗಲವಾದ ಸಿಹಿತಿನಿಸು.
ಸಂಪಾತ ಇಳಿಯುವುದು, ಅವರೋಹಣ
ಬೆವಸ ವ್ಯವಹಾರ
ಬೇಸಳಿಗೆ ?
ಭುಜಗ ಹಾವು
ಭೈಷಜ್ಯ ಔಷಧ
ಮಂಡಗೆ ಗೋಧಿಯ ಹಿಟ್ಟಿನಿಂದ ಮಾಡುವ ಭಕ್ಷ್ಯ
ಮಂಡೆಪಾವಡೆ ತಲೆಗೆ ಹೊದೆಯುವ ಬಟ್ಟೆ
ಮತ್ತವಾರಣ ಮದಿಸಿದ ಆನೆ
ಮಲಗು ದಿಂಬು, ಲೋಡು
ಮಾಷ ಉದ್ದು
ಮಹಾಚೀನ ಚೀನಾ ದೇಶದಲ್ಲಿ ತಯಾರಾದ ಉತ್ತಮ ರೇಷ್ಮೆ ಬಟ್ಟೆ
ಮಾಱಾಂತರ್ ಪ್ರತಿಭಟಿಸಿದವರು
ಮಿಥುನ ಜೋಡಿ
ಮುಡಿವಾಳ ಸುವಾಸನೆಯಿಂದ ಕೂಡಿರುವ ಗಿಡದ ಬೇರು
ಮುದ್ಗ ಹೆಸರು
ಮುಮುಕ್ಷು ಮುಕ್ತಿಯನ್ನು ಬಯಸುವಾತ, ಮೋಕ್ಷಾಪೇಕ್ಷಿ
ಮೊರುಂಡೆ ಸಿಹಿಯಾದ ದುಂಡಗಿನ ತಿನಿಸು
ರತಿಪತಿ ಕಾಮದೇವ, ಮನ್ಮಥ
ರುಜೆ ರೋಗ
ಲಾಮಂಚ ಸುವಾಸನೆಯ ಬೇರಿರುವ ಹುಲ್ಲು, ಬಾಳದ ಬೇರು
ಲೆಪ್ಪ ಮಣ್ಣು, ಎರಕ, ಮೇಣ ಮೊದಲಾದವುಗಳಿಂದ ಬಳಿದು ಮಾಡಿದ ಬೊಂಬೆ.
ವಾರುವ ಕುದುರೆ
ವಿಕಚೋತ್ಪಲ ಅರಳಿದ ಕನ್ನೈದಿಲೆ
ವಿಗುರ್ವಿಸು ಮಾಯೆಯಿಂದ ಸೃಷ್ಟಿಸು
ವಿಶೋಧಿ ಶುಚಿತ್ವ
ವೃಜಿನ ಪಾಪ
ವೈಹಾಳಿ ಕುದುರೆ ಅಥವಾ ಆನೆಯ ಮೆಲೆ ಕುಳಿತು ಮಾಡುವ ಸವಾರಿ, ವಿಹಾರ
ಶರಭ ಸಿಂಹಕ್ಕಿಂತಲೂ ಬಲಿಷ್ಠವಾದ, ಎಂಟು ಕಾಲುಗಳಿರುವ ಪ್ರಾಣಿ
ಶಾತಕುಂಭ ಚಿನ್ನ
ಶಾರ್ದೂಲ ಹುಲಿ
ಶಾಲಿ ನೆಲ್ಲು
ಶಿಖಿ ನವಿಲು
ಶ್ರಾವೆ ಅಗಲವಾದ ಮಣ್ಣಿನ ಪಾತ್ರೆ
ಷೋಡಶ ೧೬
ಸಂಭಾರಗಡಲೆ ಉಪ್ಪುಕಾರ ಮಸಾಅಲೆ ಹಚ್ಚಿದ ಕಡಲೆ
ಸತ್ತಿಗೆ ಕೊಡೆ
ಸಪ್ತಚ್ಛದ ಏಳೆಲೆಗಳುಳ್ಳ ಬಾಳೆಗಿಡ
ಸಪ್ತವ್ಯಸನ ಹೆಣ್ಣು, ಜೂಜು, ಬೇಟೆ, ಕುಡಿತ, ಕೆಟ್ಟಮಾತು, ಕೆಟ್ಟಶಿಕ್ಷೆ ಕೊಡುವುದು ಮತ್ತು ಅರ್ಧದೂಷಣವೆಂಬ ೭ ವ್ಯಸನಗಳು
ಸಪ್ತಾಂಗ ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ಬಲ, ರಾಷ್ಟ್ರ, ದುರ್ಗ – ಎಂಬ (ರಾಜನ) ಏಳು ಬಗೆಯ ರಾಜ್ಯಾಂಗಗಳು.
ಸರೀಸೃಪ ಹಾವು
ಸಾಷ್ಟಾಂಗ ಎದೆ, ಹಣೆ, ಎರಡೂಕ್ಕೆ, ಎರಡೂ ಮಂಡಿ, ಎರಡೂ ಪಾದ – ಈ ೮ ದೇಹದ ಅಂಗಗಳಿಂದ ಕೂಡಿದುದು
ಸೀಯಳೆ ಒಂದು ಬಗೆಯ ಸಿಹಿ ಖಾದ್ಯ, ಸೀಯಾವಳಿ
ಸೂರ್ಪ ಮೊರೆ
ಸೆಜ್ಜೆವಳ ಮಲಗುವ ಮನೆಯ ಮೇಲ್ವಿಚಾರಕ
ಸೇಸಾಕ್ಷತೆ ಮಂತ್ರಾಕ್ಷತೆ
ಸೈಪು ಪುಣ್ಯ
ಸೊವಾಸಿನಿ ಮುತ್ತೈದೆ, ಸುಮಂಗಲಿ
ಸೌರಭ ಸುವಾಸನೆ
ಸ್ತವನ ಸ್ತೋತ್ರ, ಸ್ತುತಿ
ಸ್ತೋಕನಾಸಿಕೆ ಸಣ್ಣದಾದ ಮೂಗಿನವಳು
ಸ್ವಪ್ನ ಸ್ನಾನ
ಹಯೋತ್ಕರ ಕುದುರೆಗಳ ಸಮೂಹ
ಹರಿವಿಷ್ಟರ ಸಿಂಹಾಸನ
ಹೀಳಿವಳಿಗೆ ಪೀಲಿದಲೆ, ನವಿಲು ಅರಿಯ ಕೊಡೆ
ಹೂರಣಗಡುಬು ಕೊಬ್ಬರಿ ಸಕ್ಕರೆ ಕಡಲೆ ಮೊದಲಾದ ಹುದುಗಲನ್ನು ತುಂಬಿಸಿ ಮಾಡಿದ ಕಡುಬು
ಹೂರಿಗೆ ಪೂರಿಗೆ, ತಪ್ಪುಸವರಿ ಹಂಚಿನಮೇಲೆ ಬೇಯಿಸಿ ಮಾಡುವ ಸಿಹಿತಿನಿಸು
ಹೊಸಣಂಬ ಸಿಹಿಭಕ್ಷ್ಯ