ಜಯನಾಥ ಜಯಜಿನೇಶ್ವರ
ಜಯಜಯಕಂದರ್ಪ್ಪದರ್ಪ್ಪ ರಿಪುಗುಣಮಥನಾ
ಜಯನಷ್ಟಘಾತಿಕರ್ಮ್ಮಕ
ಜಯಜಯ ದೇವೇಂದ್ರಮಕುಟಘಟಿತಾಚರಣಾ ||

|| ವ || ಅದೆಂತೆಂದೊಡೆ ಜಂಬೂದ್ವೀಪದ ಭರತಕ್ಷೇತ್ರದ | ಕುರುಜಾಂಗಣವಿಷಯದ | ಅಮರಾವತಿಯೆಂಬ ಪುರಮನಾಳ್ವ ಯಿಂದ್ರಮಹಾರಾಜಂ | ಆತನರಿಸಿ ಪದ್ಮಾವತೀ ಮಹಾದೇವಿಯುಂ | ತಂನ ವಿಳಾಸಿನಿಯರು ಸಹಿತಂ ಸುಖಸಂಕಥಾ ವಿನೋದದಿಂ | ರಾಜ್ಯಂಗೆಯ್ಯುತ್ತಮಿರೆ | ಆ ಪುರದ ಪಶ್ಚಿಮ ಭಾಗದ ವಿಪುಳವನದ ಮಧ್ಯಪ್ರದೇಶದಲ್ಲಿ ಶ್ರೀ ಮಲ್ಲಿನಾಥತೀರ್ತ್ಥೇಶ್ವರರ ಸಮವಸರಣಂ ಬಿಜಯಂಗೆಯ್ದುದೆಂದು ವನಪಾಲಕಂ ಬಂದಿಂದ್ರಮಹಾರಾಜಂಗೆ ಬಿನ್ನವಿಸೆ | ಹರ್ಷೋತ್ಕರ್ಷ ಚಿತ್ತನಾಗಿ | ಆ ವನಪಾಳಕಂಗಂಗಚಿತ್ತಮಂ ಕೊಟ್ಟು ಆನಂದ ಭೇರಿಯಂ ಪೊಯಿಸಿ ಪರಿಜನಸಹಿತಂ | ಪಾದಮಾರ್ಗ್ಗದಿಂ ಪೋಗಿ | ಸಮವಸರಣಮನೆಯ್ದಿ ಗಂಧಕುಟಿಯಂ ತ್ರಿಃಪ್ರದಕ್ಷಿಣಂಗೆಯ್ದು | ಫಲಮೆಂತೆನೆ | ನೋಂತವರು | ತೀರ್ತ್ಥಕರಪುಣ್ಯಮಂ ಕಟ್ಟಿಕೊಂಬುದರಿಂದಾರೋಗ್ಯಮುಳ್ಳ ಶರೀರರಾಗಿ | ಬಾಳ್ದು | ಕಡೆಯೊಳುತ್ತಮಸಮಾಧಿಯೋಳ್ಕೂಡಿ ಶರೀರಮಂ ಪತ್ತುವಿಟ್ಟು | ಸೌಧರ್ಮ್ಮಾದಿ ಸರ್ವಾರ್ತ್ಥ ಸಿದ್ದಿಗಳಲ್ಲಿ ಉತ್ತಮ ವಿಮಾನಗಳೊಳು ಮೆರೆವ ಪಾಸಿನಪೊರೆಗಳೊಳು | ಪೊನ್ನಕರಂಡದೊಳು ತಗೆದ ರತ್ನದ ಪುತ್ಥಳಿಗಳಂತೆ | ಶುಕ್ಲಶೋಣಿತಂಗಳಿಲ್ಲದೆ | ದಿವ್ಯಶರೀರವನೊಡೆಯರಾಗಿ | ಪಲಕಾಲಂ ದಿವ್ಯಸುಖಮನನುಭವಿಸಿ | ಕಡೆಯೊಳು ಮನುಷ್ಯಲೋಕಕ್ಕವತರಿಸಿಹನೆಂಬುದು | ಸೌಧರ್ಮ್ಮಕಲ್ಪಕ್ಕೊಡೆಯನಪ್ಪ ಸೌಧರ್ಮ್ಮೆಂದ್ರನ ಬೆಸದಿಂ ದಿಕ್ಕುಮಾರಿಯರು | ಜಿನ ಜನನಿಯ ಸೇವೆಯಂ ಮಾಡುವುದು | ಧನದನಾರುದಿಂಗಳು | ಸುವರ್ಣ್ನಾನರ್ಗ್ವ್ಯಮಣಿವೃಷ್ಟಿಯ ಮೂರು ಸಂಜೆಯೊಳಂ ಕೋಟಿತ್ರಯಂ ಮಾಡೆ | ಮುನ್ನ ನೋಂಪಿಯ ನೋಂತವರು | ದೇವಲೋಕದಿಂ ಬಂದು | ಇಕ್ಷ್ವಾಕುವಂಶ ಮೊದಲಾದ ವಂಶದಲ್ಲಿ | ಮುನ್ನಿನಂತೆ ಚತುರ್ನ್ನಿಕಾಯ ದೇವರ್ಕ್ಕಳ ನೆರವಿಯಲ್ಲಮನರಿದು ಬಂದು | ಮಾಯಾಶಿಶುವಂ ತಾಯಮುಂದಿಟ್ಟು ಆ ಕುಮಾರನನೆತ್ತಿಕೊಂಡುಪೋಗಿ | ಮೇರುಗಿರಿಯಂ ಮೂರು ಸೂಳ್ಬಲಗೊಂಡು | ಪಾಂಡುಕಶಿಲೆಯ ಮೇಲೆ ಸ್ಥಾಪ್ಯಂಮಾಡಿ | ಪಾಲ್ಗಡಲ ನೀರಮೀಯಿಸಿ | ಆನಂದನೃತ್ಯಮನಾಡಿ | ತಾಯಿಗೃಹಕ್ಕಂ ತಂದೊಪ್ಪಿಸಿ | ಪಂಚಾಶ್ಚರ್ಯ್ಯಂಮಾಡಿ | ತಮ್ಮ ತಮ್ಮ ಲೋಕಕ್ಕೆ ಪೋದರಿತ್ತಲು | ತಂಮೆಚ್ಚಿದ ವಿನೋದದಿಂ | ಭೋಗೋಪ ಭೋಗಂಗಳನನುಭವಿಸಿ | ರಾಜ್ಯಕಾಲದೋಳ್‌ | ಷಟ್ಖಂಡ ಮಂಡಲದೊಳರಸುಗಳಂ | ತನ್ನಡಿಗೆರಗಿಸಿ | ಕಪ್ಪಂಗೊಂಡು | ನವನಿಧಿ ಚತುರ್ದ್ದಶರತ್ನಂಗಳಿಗೊಡೆಯರಾಗಿ | ತೊಂಭತ್ತಾರು ಸಾಸಿರದಸಿಯರ್ಗ್ಗಂ | ವಿನೆಯರಾಗಿ | ಸುಖಮನನುಭವಿಸಿ | ಪಲಕಾಲಂ ಚಕ್ರವರ್ತ್ತಿ ಶ್ರೀಯನನುಭವಿಸಿಯಿರೆ | ಮುನ್ನಿನ ಚತುರ್ನ್ನಿಕಾಯಾಮರರ್ಬ್ಬಂದು | ತ್ರಿಜ್ಞಾನಧರನಂ | ಮೋಕ್ಷಸುಖಮಂ ಮೆರೆದಿರ್ದ್ದ | ತೀರ್ತ್ಥಕರರಂ ನೆನಯಿಸಿ | ನಿಶ್ಚಯ ವ್ಯವಹಾರ | ರತ್ನತ್ರಯರೂಪ | ಸಮ್ಯಗ್ದರ್ಶನಜ್ಞಾನಚಾರಿತ್ರಂಗಳಂ ಕೈಕೊಳಿಸಿ | ಪರಿನಿಷ್ಕ್ರಮಣ ಕಲ್ಯಾಣಪೂಜೆಯಂ ಮಾಡಿ | ಪೋದರಿತ್ತಲವರು | ಶುಕ್ಲಧ್ಯಾನದಿಂ | ಘಾತಿಕರ್ಮ್ಮಂಗಳಂ ಕೆಡಿಸಿ | ಅನಂತಜ್ಞಾನಾದ್ಯನಂತ ಚತುಷ್ಟಯಶ್ರೀಯೋಳ್ಕೂಡಿ | ಸರ್ವ್ವಜ್ಞರಾದುದಂ | ಚತುರ್ನ್ನಿಕಾಯಾಮರರರಿದು ಬಂದು | ಕೇವಲಜ್ಞಾನ ಪೂಜೆಯಂ ಮಾಡಿ | ಸಮಸ್ತ ಭವ್ಯಸಸ್ಯಮಂ | ಧರ್ಮಾಮೃತಾಸಾರದಿಂ ತಣುಪಿ ಘಾತಿಯಂ ಕೆಡಿಸಿ | ಮುಕ್ತರಾಗೆ | ಚತುರ್ನ್ನಿಕಾಯಾಮರರು ನಿರ್ವ್ವಾಣಪೂಜೆಯಂ | ಮಾಡಿ ದರಿಂತು ಪಂಚಕಲ್ಯಾಣ ಪೂಜೆಯಂ ಮಾಡಿ | ನಿರ್ವ್ವಾಣ ಸುಖದೊಳ್ಕೂಡಿರ್ಪ್ಪುರು | ಇನ್ತೀ ಪಂಚಕಲ್ಯಾಣದ ನೋಂಪಿಯಂ | ನೋಂತವರ್ಗ್ಗಂ ಜಯಮಂಗಳ ಮಹಾ || ಶ್ರೀ ಶ್ರೀ

ಶ್ರೀ ಶಾಂತಿನಾಥಾಯನಮಃ ||