|| ಶ್ರೀ ವೀತರಾಗಾಯನಮಃ ||

ಕೇವಲ ಬೋಧಿಯೆಂಬ ನೋಂಪಿಯಂ ಭಾದ್ರಪದ ಮಾಸದ ಶುಕ್ಲಪಕ್ಷದೇಕಾದಶಿಯಂದುಪವಾಸಂಗೆಯ್ದು ಪಂಚ ಪರಮೇಷ್ಠಿಗಳ ಪ್ರತುಮೆಗಭಿಷೇಕ ಅಷ್ಟವಿಧಾರ್ಚ್ಛನೆಯಂ ಮಾಡಿ ಮಱುದಿವಸಂ ಐದು ಬಂಣಿಗೆಯ ಭಕ್ಷಮಂ ತುಪ್ಪಂ ಬೆರಸು ಕಳವೆಯೋಗರಮಂ ತೋಯಂ ಶರ್ಕ್ಕರೆ ಬಾಳೆಯಹಣ್ಣಂ ಪಂಚಾಮೃತಮಪ್ಪ ಚರುವಂ ದೇವರ ಮುಂದೆ ಅರ್ಚಿಸುಉದು ಯುಕ್ತಾಚಾರ್ಯ್ಯರಂ ನವವಿಧ ಪುಂಣ್ಯ ಕ್ರಮದಿಂ ನಿಲಿಸಿ ಸಪ್ತಗುಣ ಸಮನ್ವಿತಂ ಪಂಚಾಮೃತಮಪ್ಪಾಹಾರಮಂ ಕೈಯಲಿಕ್ಕಿ ತಾಂ ಪಾರಣೆಯಂ ಮಾಳ್ಪುದು | ಮಾತ್ತಮಾ ಭಾದ್ರಪದ ಮಾಸದ ಶುಕ್ಲ ಪಕ್ಷದೇಕಾದಶಿಯ ಮೊದಲ್ಗೊಂಡು ತಿಂಗಳು ತಿಂಗಳ ಶುಕ್ಲಪಕ್ಷದೇಕಾದಶಿಯಂದು ಯೀ ಕ್ರಮದಿಂದೊಂಭತ್ತು ತಿಂಗಳು ನೋಂತುಜ್ಜವಣೆಯಂ ಮಾಳ್ಪ ಕ್ರಮಂ | ಸಾವಿರ ತಂಡದ ರುಷಿಯರ್ಗ್ಗಾಹಾರ ದಾನಮಂ ಮಾಳ್ಪುದು | ಮತ್ತಂ ಬಡವರೊಡೆಯರೆನ್ನದೆ ಯಥಾ ಶಕ್ತಿಯಂ ಭಕ್ತಿ ಪೂರ್ವ್ವಕಂ ನೋಂಪುದು | ಯೀ ನೋಂಪಿಯಂ ಫಲಂ ಭವ ಭವಾಂತರದೊಳೆಲ್ಲಂ ಪಂಚಕಲ್ಯಾಣಂ ಪಡೆದು ಶಾಶ್ವತ ಸುಖಮಂ ಪಡೆವರು | ಮಂಗಳ ಮಹಾಶ್ರೀ