ಚಾರಿತ್ರಮಾನಮೆಂಬ ನೋಂಪಿಯಂ ಆಶ್ವಯುಜ ಮಾಸದ ಪೂರ್ಣಿಮೆಯಂದು ಉಪವಾಸವಿರ್ದು ಪಗಲು ನಾಲ್ಕುಜಾವಂ ನಾಲ್ಕು ಅಭಿಷೇಕವಂ ಮಾಡಿ ಇರಳು ನಾಲ್ಕು ಜಾವಂ ಜಾಗರಮಿರ್ದು ಅಭಿಷೇಕಮಂ ಮಾಡಿ ಯರ್ಚ್ಚಿಸಿ ಆ ಮೊದಲ್ಗೊಂಡು ಇಪ್ಪತ್ತೇಳು ಪೌರ್ಣಮಿವರಂನೋಂತುಜ್ಜವಣೆಯೆಂದು ಉಪವಾಸಮಂ ಮಾಡಿ ಪರಮೇಷ್ಠಿಗಳ ಪ್ರತಿಮೆಯಂ ಮಾಡಿಸಿ ಯೆಂಟು ಜಾವದೊಳಂ ಜಾಗರಮಿರ್ದು ಮಹಾ ಪೂಜೆಗಳಂ ಯಥಾಕ್ರಮದಿಂ ಮಾಡಿಸಿ ಪ್ರತಿಮೆಯಂ ವಸತಿಗೆ ಕೊಡುವುದು ಐವರಾಚಾರ್ಯರ್ಗೈದು ಆಸನ ವಟ್ಟಗೆಯಂ ಕೊಡುವುದು ಉಜ್ಜವಣೆಯಂ ನೆರಪುವುದಂ ಈ ನೋಂಪಿಯ ಫಲದಿಂ ಭವಭವಾಂತರದಲ್ಲು ನೋನುವರೆಲ್ಲಂ ಮರುಭವಾಂತರದೊಳೆಲ್ಲಂ ಸಮ್ಯಕ್‌ಜ್ಞಾನ ಸಮ್ಯಕ್‌ಚಾರಿತ್ರವಂತರುಮಾಗಿ ಸಮ್ಯಗ್ದರ್ಶನ ಫಲದಿಂ ಮಹಾಬಲ ಪರಾಕ್ರಮ ಮಹಾಮಹಿಮೆಗಳುಂ ಭೋಗೋಪಭೋಗಂಗಳಿಗೆ ವಡೆಯರಾಗಿ ಪಂಚಾಚಾರದೊಲು ನೆರಪಿ ತದನಂತರಂ ಸುಖಸಂಕಥಾ ವಿನೋದದಿಂ ಧನ ಕನಕ ಪರಿವಾರದೊಳು ಬಲ್ಲಿದರಾಗಿ ತನ್ನ ಆಜ್ಞೆಯಿಂದ ರಾಜ್ಯಂಗೆಯರು ತದನಂತರಂ ಮುಕ್ತಿಶ್ರೀಯನ್ವೈದಿ ಸುಖದೊಳಿರ್ಪರು

ಜಯ ಮಂಗಳಮಹಾ