|| ಶ್ರೀ ವೀತರಾಗಾಯ ನಮಃ ||

ಶ್ರೀಮಮರಾಧೀಶ ಸುಖದೊಳು ಭೂಮಿಪಶ್ರೀ ಸಿದ್ಧಸುಖದೊಳು ಪ್ರಿಯಮುಳ್ಳೊಡೆ ಕೇಳಿ ಜೀವದಯಾಷ್ಟಮಿ ಕಥೆಯಂ ||

ಶ್ರೀ ಸಮವಸರಣೀಶಜಿನರನು
ಭಾಸುರಾಷ್ಟ ಗುಣಾಢ್ಯಸಿದ್ಧರ
ಲೇಸೆನಿಸುವಾಚಾರಪಂಚಕವಾಗಿ ಸೂರಿಗಳಂ
ದೇಶಕರ ನಿಜಸಮಯ ಶಾಸ್ತ್ರೋ
ದ್ಬಾಸಕರ ಸಾಧುಗಳ ವಂದಿಪೆ
ವಾಸವಾರ್ಚ್ಛಿ ತಪಧರನ ಸಂಮಶವು ಪ್ರಯುಕ್ತರನೂ || ೦೦೧ ||

ಶೀರಧರ ಲಕ್ಷ್ಮೀಧರಾರ್ಚ್ಛಿತ
ಧೀರ ಮುನಿಸುವ್ರತರ ನಿರದಾಂ
ಭಾರತಿಯ ಜಿನವದನಜವಿನಿರ್ಗ್ಗತೇಯನೊಲವಿಂದಾ
ಚಾರುಗುಣಯುತ ಜೈನ ಮುನಿಗಳ
ಭೂರಿ ಭಕ್ತಿಯಿಂ ನತಿಸಿ ರಚಿಸುವೆ
ಧಾರಣೀಶ ಯಶೋಧರಾಖ್ಯನ ಚಾರುಚರಿತವನೂ || ೦೦೨ ||

ಕ್ಷಾರ ನೀರಾಕರ ಪರೀತ ಸು
ಚಾರು ಚಂಬೂದ್ವೀಪ ಮಧ್ಯದ
ಮೇರುವಿನ ದಕ್ಷಿಣದೊಳೊಪ್ಪುವ ಭರತ ಭೂಮಿಯೊಳೂ
ಸಾರತರ ಯೌಧೇಯ ವಿಷಯದ
ಸಾರಮೆನಿಸುವ ರಾಜಗೃಹಮಂ
ಮಾರಿದತ್ತ ನೃಪಾಲಕನು ಪರಿಪಾಲಿಸುವನೊಲಿದೂ || ೦೦೩ ||

ಆಪುರದ ದಕ್ಷಿಣ ದಿಗವನಿಯೊ
ಳೇ ಪೊಗಳ್ವೆನತಿ ರೌದ್ರ ಮೂರ್ತ್ತಿಯ
ವಾಪಿಯೆನಿಸುವ ಚಂದಮಾರಿಯ ಭವನವೆಂದುಟೂ
ಪಾಪದಾಲಯಮಸ್ಥಿಚರ್ಮ್ಮಕ
ಲಾ ಪಮೆಂದೊರುಧಿರಮಾಂಸ
ಸ್ತೂಪಿಯಿಂ ಮಧ್ಯಾದಿಯಿಂದತಿ ರೌದ್ರಮದು ನೋಡೆ || ೦೦೪ ||

ಚಿತ್ರಮೆನಲೀವಿಷಯಮಾಯಸದೊಳು ತಾಂ
ಚೈತ್ರಮಾಸದೊಳಂ ನೃಪಾಲನು
ಪುತ್ರ ಮಿತ್ರ ಕಲತ್ತ ಸಹಿತಂ ವರ್ಷ ವರ್ಷದೊಳೂ
ಯಾತ್ರೆಯನು ಮಾಡಿಱೆದು ತಂನಸಿ
ಪತ್ರದಿಂ ಬಹು ವಿಧ ಮೃಗಂಗಳ
ಪಾತ್ರವಹನ ಘತತಿಗೆ ಕೊಡುವಳು ವರವನವಳೆಂದೂ || ೦೦೫ ||

ಬಂದ ಚೈತ್ರದೊಳೊರ್ಮ್ಮೆಯಾ ನೃಪ
ನೊಂದಿ ರಾಗದೊಳಾಪ್ತ ಪುರಜನ
ವಂದು ಬಂದು ಪ್ರತತಿ ಸಹಿತಂ ಯಾತ್ರೆಗೈತಂದೂ
ನಿಂದು ಬಹು ಮೃಗಯುಗಲಗಳ ಕಂ
ಡೆಂದನಾಗಳು ಚಂಡಕರ್ಮ್ಮಗೆ
ಸುಂದರಾಂಗದ ಮರ್ತ್ತ್ಯಯುಗಲವನಿರದೆ ತಾಯೆಂದೂ || ೦೦೬ ||

ಬೇಗದಿಂದತಿ ರೌದ್ರರೂಪಂ
ಪೋಗಿ ಜವನ ವೋಲಾಪುರದ ದಿ
ಗ್ಭಾಗದೊಳಗಾಚಂಡಕರ್ಮ್ಮನು ತಾಳಲೀ ಯಱಸುತಿರೇ
ಯೋಗಿ ಪಂಚಶತಂ ಪ್ರಯುಕ್ತನು
ಮಾಗಿಯಷ್ಟಮಿಯಲ್ಲಿ ನಿರಸನ
ನಾಗಿ ಬಂದು ಸುದತ್ತ ಮುನಿ ತತ್ಪುರವರದೊಳಿರ್ದ್ದಂ || ೦೦೭ ||

ಅಭಯ ರುಚಿಯುಮನಾವಳಾ ಮುನಿ
ಯಭಯ ಮತಿಯುಮ ಬೆಸಸೆ ಚರಿಗೆಗೆ
ಶುಭ ಮತಿಗಳಾ ಮುನಿಯ ವಂದಿಸಿ ಬರುತಿರಲು ಕಂಡೂ
ಸುಭಟನೆನಿಸುವ ಚಂಡಕರ್ಮ್ಮನು
ರಭಸದಿಂ ಪರಿದೈದಿ ಪಿಡಿದನು
ಅಭಯರನು ಶುಭಲಕ್ಷಣಾಂಗರನಮಲ ಚರಿತರನೂ || ೦೦೮ ||

ಆಗಳಾ ಯುಗರೊರ್ವ್ವರೊರ್ವ್ವರೊ
ಳಾಗದಂತಿರೆ ಭೀತಿ ಸಂಶೃತಿ
ಭೋಗದಂದಮನಱೆಪಿ ಸಂತವಿಡುತ್ತ ಬರುತಿರಲೂ
ರಾಗಯುತನಾ ಚಂಡಕರ್ಮ್ಮನು
ಬೇಗದಿಂ ತಂದರಸಗೊಪ್ಪಿಸಿ
ಲಾಗಿ ಸುಮುದಂ ಮೆಚ್ಚನಿತ್ತನು ನೃಪತಿ ತಳವಱಗೆ || ೦೦೯ ||

ಕರದ ಖಡ್ಗಕಪಾಲಮುರ್ವ್ವಿಸು
ಉರಿಯ ನಾಲಗೆಯೆನಿಪ ನಾಲಗೆ
ಕರುಳ ಮಾಲೆ ಪೊದಳ್ದ ಗಲ್ಲು ಕೋಱದಾಡೆಗಳೂ
ಪರೆದ ತಲೆ ಬಿಡುಗಣ್ಗಳೆಂಬಿಉ
ಮುರುಕುಗುರ್ವ್ವುಗಳಾಗಿ ಮಾರಿಯ
ನಿರದೆ ನೋಡಿದ ನರರು ಮೂರ್ಚ್ಚೆಯಮನೆಯ್ದುವರು ಭಯದಿಂ || ೦೧೦ ||

ಮಾರಿಯನುಮಾ ನೃಪತಿಯನು ಪರಿ
ವಾರ ವನು ವೀಕ್ಷಿಸಿದ ನರನು
ಭೈರವನು ಮೇಣಾದೊಡಂ ಗತಿ ಜೀವನ ಹನೆನಿಪಾ
ಮಾರಿಯಾವಾಸವನು ಪೊಕ್ಕತಿ
ಧೀರತೆಯಿನಿಂದಿರ್ದ್ದ ತರುಣರ
ಸಾರ ಗಂಧಾಕ್ಷತೆ ಸುಪುಷ್ಟಂಗಳಿ ನಲಂಕರಿಸಿ || ೦೧೧ ||

ಪರಸಿ ಪರಸಿ ಮಹಿಪತಿಯನೆನೆ
ಪರಿಜನಂಗಳು ತಮತಮಗೆ ನೃಪ
ವರಚರಾಚರ ಜೀವ ಸಂದೋಹಕ್ಕೆ ಹಿತವೆನಿಪಾ
ಪರಮ ಧರ್ಮ್ಮದಿನಖಿಳ ವಿಶ್ವಂ
ಭರೆಯರಕ್ಷಿಸು ನಿಜ ಕುಲಾಂಬರ
ತರಣಿಯಾಗೆಂದವರು ಮುದದಿಂ ದಿರದೆ ಪರಸಿದರೂ || ೦೧೨ ||

ಅರಸನಾಗಳು ಕೇಳ್ದು ಪರಕೆ ಯ
ನರಸು ಮಕ್ಕಳೋ ಸುರರೋ ವಿದ್ಯಾ
ಧರರೊ ನರರೊಳಗಣ್ಯ ರೊಳಗಿ ಮಹಿಮೆ ಘಟಿಯಿಸದೂ
ತರುಣರೆಂನಯ ಭಗಿನೆಯರು
ಪರಮ ವೈರಾಗ್ಯದೊಳು ಭವ ಸುಖ
ವಿರತರಾದದ ಕೇಳ್ದೆನವರೊ ಪೇಳಿಮಿವರೆಂದಾ || ೦೧೩ ||

ಆರು ನೀವೆಲ್ಲಿಂದ ಬಂದಿರಿ
ಆರ ಮಕ್ಕಳು ನಿಂಮ ಬರವಿಗೆ
ಕಾರಣಮಿದೇನೆಂದು ಬೆಸಗೊಳಲವರನಾ ನೃಪನೂ
ಧೀರ ನಾವಾರಾದಡೇನೆಲೆ
ಮಾರಿದತ್ತ ನೃಪಾಲ ಮಾಡುವ
ಕಾರ್ಯ್ಯಮುಳ್ಳೊಡೆ ಮಾಡು ಬೇಗದಿನೆಂಮ ನುಡಿಸದಿರೂ || ೦೧೪ ||

ಧರ್ಮ್ಮಾತ್ಮರಿಂಗಲ್ಲದೆಂಮೀ
ನಿರ್ಮ್ಮಲೋಕ್ತಿಗಳರಸರು ಬೆಸವ
ಧರ್ಮ ನಿಂ ಮೊಳು ನುಡಿದ ನುಚಿತಮೆವಗೆನಲು ಕೇಳ್ದೂ
ನಿರ್ಮದಂ ಕೂರಸಿಯ ಬಿಸುಟತಿ
ಕೂರ್ಮ್ಮೆಯಿಂ ಕೈಮುಗಿದು ನಿಂಮಯ
ಧರ್ಮ್ಮವನು ಬೆಸಸೆಂದು ವಿನಯದಿನಂದು ಬೆಸಗೊಳಲೂ || ೦೧೫ ||

ಅರಸ ಕೈಮಿಗಿದಿರಲು ಕಂಡಾ
ನೆರದ ಪುರಜನ ಪರಿಜನಂಗಳು
ಕರದ ಸಿಯ ಬಿಸುಟಿರಲು ದೆಸೆದೆಸೆಯಲ್ಲಿ ಕಯಿಮುಗಿದೂ
ಪರಸಿ ಕರುಣದಿನಾ ಕುಮಾರಕ
ನಿರದೆ ತಂನ ಭವಪ್ರಪಂಚಮ
ನರಸಗಿಂತೆಂದುಸುರಲುದ್ಯತನಾದನುರು ಮದದಿಂ || ೦೧೬ ||

ಅಸಮವೆನಿಸುವವಂತೀ ವಿಷಯದೊ
ಳೆಸೆಉದುಜಯಿನಿ ಪುರಂ ಮ
ತ್ತಸಮ ವಿಕ್ರಮ ನುತ ಯಶೋಘ ನೃಪಾಲನಾಳ್ವನದಂ
ಜಸದಿ ನೊಪ್ಪುವ ಚಂದ್ರಮತಿಯಾ
ವಸುಮತೀಶಂಗರಸಿಯಾದಳು
ಕುಸುಮ ಸರಸಂನೀಬಯಶೋಧರನವರ್ಗ್ಗೆ ಪುಟ್ಟಿದನೂ || ೦೧೭ ||

ಆತಂನಗನೆಯಮಾಮೃತಮತಿ ವಿ
ಖ್ಯಾತೆ ಯವಳವರ್ಗ್ಗೆ ಪುಟ್ಟಿದ
ನಾತ ತಾಮಲಮತಿ ಯಶೋಮತಿಯೆಂಬ ನಂದನನೂ
ಆತಗಾದಳು ಯುವತಿ ಯತಿವಿ
ಖ್ಯಾತೆ ಕುಸುಮಾವಲಿ ಸಮೂಹ್ವಯೆ
ವಿತತ ತ್ರಯಶೌಘನಿರ್ದ್ದನು ರಾಜ್ಯ ಲೀಲೆಯಲಿ || ೦೧೮ ||

ವೊಂದು ದಿನಮೋಲಗದೊಳುರ್ದ್ದಾ
ನಂದಂದಾ ನೃಪತಿ ಮಣಿಮು ಕು
ರಂದಮಂ ನೋಡುತ್ತ ಕೆಂನೆಯ ನರೆಗಳನು ಕಂಡೂ
ವೊಂದಿ ವೈರಾಗ್ಯದೊಳು ರಾಜ್ಯವ
ನಂದನಂಗಿರದಿತ್ತು ಪರಮಾ
ನಂದದಿಂ ತಾಳ್ದಿದನು ದೀಕ್ಷೆಯನು ಘತತಿಕ್ಷಯಮಂ || ೦೧೯ ||

ಧರಿಸಿ ಧರಣಿಯ ನಾ ಯಶೋಧರ
ನೊರಸಿರಿಪುಗಳನಾಜಿಯೊಳು ಬಿ
ತ್ತರಿಸಿ ದೆಸೆಗಳೊಯ್ದೆ ಕಿರ್ತಿಯ ನಿರುತಮಿಂತೊರ್ಮ್ಮೆ
ಸರಸಿಜಾಕ್ಷಿಯೊಲಮೃತಮತಿಯೊಳು
ಬೆರಸಿ ಸುರತಶ್ರಮದಿನಿರ್ವ್ವರು
ಧರಿಸಿ ನಿದ್ರೆಯಲಿರಲು ಶಯನದೊಳಾ ನಿಶಾಂತ್ಯದೊಳೊ || ೦೨೦ ||

ಆ ನಿವಾಸಕ್ಕನತಿ ದೂರದೊ
ಳಾನೆವನೆಯೊಳಗಿರ್ದ್ದ ನಿದ್ರಿತ
ನಾನೆವಂಕನು ಪಾಡೆ ಗೀತಂಗಂಳನು ಸುಸ್ವರದಿಂ
ಆ ನಿತಂಬಿನಿ ನಿದ್ರೆಯಿಂದೆ
ರ್ದ್ದಾ ನಿನಾದಕ್ಕೆ ಸೋಲ್ತು ತನ್ನನೇ
ಹೀನೆಯಾತಗೆ ಮೆಚ್ಚನಿತ್ತಳು ನೋಡಿರಕಟಕಟಾ || ೦೨೧ ||

ಗುಣದ ಕೇಡನು ಶೀಲದಳಿಉಮ
ನೆಣಿಸದಾಖಳೆ ಪೊತ್ತ ಱೊಳೆಸಖಿ
ಗುಣವತಿಗೆ ನಿಜಕಾರ್ಯಮಂ ಪೇಳ್ದಮಲಮಣಿಗಣದಿಂ
ತಣಿಪಿ ಕಳಿಹಿದೊಡವಳು ಗೀತದ
ಕಣಿಯದೀಕ್ಷಿಸಿ ಮರಳಿ ಬಂದೆಲೆ
ಗಣಿಯಿಸಲು ಬೇಡವನಚಿಂತೆಯ ಬಿಸುಡು ಕಮಲಮುಖಿ || ೦೨೨ ||

ಪಱೆದತಲೆ ನವಿರಳ್ದಕೊರಳುಱೆ
ಜೊಱೆವ ಕಣ್ಗಳು ಬಿರಿದ ತಳಪದ
ವೊಱೆವ ಬಾಯಿ ಪೆಱಪಲ್ಲು ಮುರುಟಿ ಕಿವಿಯುನಳಿ ಮೂಗು
ಮುಱಿದ ಬೆನ್ನೆದೆ ಪಱಿದ ಕೈ ಕಾ
ಲ್ನೆಱೆಯೆ ಬಾತೊಡಲವನ ನಾಥಕೆ
ಪಱೆದಪಉ ಕರುಳೆಂತು ಬಯಸಿದೆ ದೇವಿ ನೀನವನಂ || ೦೨೩ ||

ಯೆಂದೊಡಾಗುಣವತಿಗೆಯವಳಿಂ
ತೆಂದಳೆಲೆ ಮಾನದೊಳೊಲೊವಿರೆ
ಸಂದರೂಪುವಿಲಾಸ ಸಂಪದದಿಂದ ಫಲವೇನು
ಯಿಂದು ನನಗವನಿಂದ್ರಚಂದ್ರಮು
ಕುಂದ ಹರ ಚತುರಾಸ್ಯ ನೀಗಳೆ
ತಂದು ನೆರಹಿದೊಡಕ್ಕ ಬದುಕುವೆ ಸಾವೆನಲ್ಲದೊಡೆ || ೦೨೪ ||

ಆ ನುಡಿಯ ನೆಱೆಕೇಳ್ದು ಗುಣವತಿ
ಯಾನೆವಂಕನನೈದಿ ಮತ್ತಾ
ದೀನ ಮನದೊಳು ಮಾಡಿ ಸಂಧಿಯ ನೆರಪಿ ಕುಲಟೆಯನು
ಹೀನೆ ತೆಱದಮೃತಮತಿ ಕಳೆ
ಯಾನಿಕೃಷ್ಟನ ನೆರಉತಿರ್ದ್ದಳು
ದಾನವಾ ಬಳಿಕ ಸಭಾಜನವ ಕಳಿಪಿ || ೦೨೫ ||

ಬಂದನಂದಮೃತಮತಿಯೊಡನೆ
ಮಂದಿರದೊಳಿರೆ ಕಾಮಸೌಖ್ಯದೊ
ಳೊಂದಿ ನಿದ್ರಾಕ್ರಾಂತನಂದದಿ ನೊಱಗಿರಲು ಕಂಡೂ
ಮಂದಮತಿಯ ವಳಷ್ಟವಂಕನ
ಮಂದಿರಕೆ ಪೋಪಾಗಳರಸನು
ಪಿಂದೆ ಪೋದನು ನೋಡುತವಳನು ಖಡ್ಗಯುತನಾಗಿ || ೦೨೬ ||

ತಡೆದುಬಂದಳನಷ್ಟವಂಕನು
ಬಡಿಯೆ ಮಿಳಿಯಿಂ ಮುಲಿಯದವಳವ
ನಡಿಗೆಉ ಬಹು ವಚನ ರಚನೆಯಿಂ ತಿಳಿಪಿ ನೆರಱಗಿತಿರೆ
ಪಿಡಿದ ಖಡ್ಗದಿನಿರ್ವ್ವರುಮ
ನೊಡಗಡಿವೆನೆಂದು ಬರುತ್ತಲಾ ಜಗ
ದೊಡೆಯ ಪೇಸಿ ಮಗುಳ್ದು ಶಯ್ಯಾಗೃಹದೊಱಗಿದನೂ || ೦೨೭ ||

ದುರಿತದ ಬೀಜದ ಬಿತ್ತು ಮಾಯೆಯ
ಪಿರಿಯ ಮಡುಸಾಹಸದ ಪೆರ್ಮ್ಮನೆ
ದುರಭಿಮಾನದ ಗೊತ್ತು ದುರ್ಗ್ಗುಣದ ಗಣದ ನೆಲೆವೀಡು
ದುರಿಯ ಶೋಲತೆಯಡರು ದೋಷಾ
ತ್ಕರದತಾಣಂ ದುರಿಹಿತಂಗಳ
ಪುರವನಿತಸತಿಯೆ ಮಾರಿಯಲ್ಲಳೆ ಪುರುಷಗವನಿಯೊಳು || ೦೨೮ ||

ಸೀತೆ ರುಗ್ಮಿಣಿದೇವಿ ಗುಣವತಿ
ಪೂತೆ ರೇವತಿ ಶೀಲವತೆ ವಿ
ಖ್ಯಾತೆ ಚೇಳಿನಿನಿರಿಮದನಾವಳಿ ಜಿನಾಧಿಪರ
ಮಾತೆಯರು ಮೊದಲಾದ ಲೋಕ ವಿ
ನೂತ ಸತಿಯರು ಜಲ್ಮಜಲಧಿಯ
ಸೇತುವಲ್ಲರೆ ತಂಮ ಪುರುಷರಿಗೀ ಧರಿತ್ರಿಯೊಳೂ || ೦೨೯ ||

ನಾರಿಯರ್ಕ್ಕಳ ದೋಷಗುಣಗಳ
ಭೂರಮಣವೆಣಿಸುತ್ತ ಮಿರಲಾ
ಜಾರೆಬಂದೊಡೆನೊಱಗೆ ಮಂಗಳ ಪಾಟಕ ಧ್ವನಿಯಿಂ
ಧೀರನೆರ್ದ್ದು ಕೃತ ಪ್ರಭಾತ
ಚಾರನೋಲಗಕೈತರುತ ಪರಿ
ಚಾರಿಕೆ ಜನವೇಷ್ಟಿಸಿರ್ದ್ದಳ ಕಂಡಳಂಗನೆಯೂ || ೦೩೦ ||

ನುಡಿಯ ಜಾಣ್ಮೆಯಿನಗಿಸಿ ಯವಳನು
ಪಿಡಿದ ನೀಲೋತ್ಪಲ ದೊಳಿಟ್ಟೊಡೆ
ಕೆಡೆದುಮೂರ್ಚ್ಚಿತೆಯಾಗಿ ಸಿಸಿರ ಕ್ರಿಯೆಯಿನೆಚ್ಚಱಿಸಿ
ನುಡಿದನಿಂತು ನೃಪಾಲನಿಂದೆಲೆ
ಮಡದಿ ನಿನಗಾಸಂನವಾದುದು
ಮಡಿಉ ದೈವಸಹಾಯದಿಂ ಪರಿಹರಿಸಿತದು ಕೇಳಾ || ೦೩೧ ||

ಯಿಂತು ರಾತ್ರಿಯವೃತ್ತಕವನಾ
ಕಾಂತೆಗಣಕದಿನಱಿಪಿ ಭೂಪತಿ
ಚಿಂತೆಯಿಂದೈತಂದು ಚಂದ್ರಮತಿ ಸಮೀಪಕ್ಕೆ
ಕುಂತಳಾಳಿಮುಸುಂಕೆ ಚರಣೋ
ಪಾಂತದೊಳು ನತನಾಗಲಂಬಿಕೆ
ಕಾಂತವಚನದಿ ಪರಸಿ ತನಯನ ಮುಖಮನೋಡಿದಳು || ೦೩೨ ||

ತನಯನ ಮುಖಮಿಂತೇ ಕಂದಿತು
ನಿನಗಸಾಧ್ಯವರಾತಿಗಳು ಮೀ
ಜನಪಂದಂಗಳೊಳುಂಟೆ ನಿಂನಂದವನು ಕಂಡೆಂನಾ
ಮನವುಮಲುಮಲ ಮಱುಗಿದಪುದೆನೆ
ಜನನಿ ನಿಂಯನ ಪರಕೆಯಿಂದೆನಗೆ
ಯಿನಿತಸಾಧ್ಯಮುಮಿಲ್ಲನೊಂದೆನ ಕನಪಕಂಡಿರುಳೂ || ೦೩೩ ||

ಕೇಳುಜನನಿಯೆ ನಿಂನ ಪೆಜ್ಜೊಸೆ
ಯೇಳುನೆಲೆಯಪ್ಪರಿಗೆಯಿಂ ಬಿ
ರ್ದ್ದಾಳುತೇಳುತಂ ಬಚ್ಚಲೊಳಗಿರೆ ಕಂಡು ನಾನವಳಂ
ಬಾಲಕೆಗೆ ರಾಜ್ಯವನು ಕೊಟ್ಟ
ಜಾಳಪರಿಪುಗಳಗೆಲಲು ಮಸೆದೊಳು
ಬಾಳೆನಿಪ ಜಿನದೀಕ್ಷೆಯನು ತಾಳ್ದಿದೆನು ಕನಸಿನೊಳು || ೦೩೪ ||

ಕಷ್ಟಕನಸಿದು ಮಗನೆಯಿದರ ತಿ
ಕಷ್ಟ ಕಹಿಫಲವಾದುದಂತಿರೆ
ಶಿಷ್ಟ ಚಂಡಿಕೆಗಾದಿ ಕಂಗಳ ಹತಿಸಿ ನಿಜಕರದಿಂ
ಪುಷ್ಪಮೆನೆ ಪೂಜಿಪುದು ನಿನಗೆಯ
ನಿಷ್ಟಮಂ ನಾಂಪೇಳೆನೆಂಭೀ
ದುಷ್ಟಕವಚನಕ್ಕಂಜಿ ಕರ್ರ್ನದ್ವಯವ ಮುಚ್ಚಿದನು || ೦೩೫ ||

ದೇವಿ ನೀವಕಟಿಂತು ನುಡಿದರೆ
ಜೀವ ಹಿಂಸೆಯಿಂದಾವ ಧರ್ಮ್ಮವು
ಜೀವ ಹಿಂಸಕ ಜಡ ಜನಂಗಳು ಸಲುವರಸುಗತಿಗೆ
ಆವತೆಱದಿಂ ಜೀವತತಿಗಳ
ನೋವೆ ಸುಗತಿಗೆ ಸಲುವರೆಂಬಿ
ಭಾವ ಭವಹರ ಜಿನರವಚನವ ಕೆಳ್ದು ನೀನಱೆಯ || ೦೩೬ ||

ಯೆನಲು ಬಿಡದವನಡಿಗಡಿಗೆ ಹಿಂ
ಸನ ಮನೆ ಸೂಚಿಸಲು ಭೂಪನು
ಜನನಿ ದೇವಿಗೆ ಹಿಂಸೆಯಿಲ್ಲದೆ ರಾಗಮಾಗದೊಡೆ
ಮನಮೊಲಿದು ಮತ್ತಿರದೇನರ್ಚ್ಚಿಪು
ದೆನುತ ಕೊರಳಿಂಗನೆಯಸಾರ್ಚ್ಚಲು
ತನಯ ಹಾಯೆನುತವಳು ಕರದಲಗನು ಮರಳ್ಚಿದಳು || ೦೩೭ ||

ಕಂದ ನಿಂಯನ ಜೀವ ಹಿಂಸೆಯೊ
ಳಂದಭಿವಾಂಚಿತಮುಮದಕ್ಕಿ
ನ್ನೊಂದುಪಾಯವ ಪೇಳೈಮೀಱೆದಿರೆಂನ ವಚನವನು
ದಂದಾವಾಗಿರೆ ಪೆಟ್ಟಿನೊಳು ಸಮೆ
ದೊಂದು ಕೋಳಿಯನಾದೊಡಂ
ತಂದಿಂದು ಗೇದಿಗೆ ಕೊಟ್ಟಡುಳಿವೆನು ಸಾವೆನಲ್ಲ ದೊಡೆ || ೦೩೮ ||

ತನುವನುಳಿದೆಪೆನೆನಲು ಭಯದಿಂ
ಜನಪನವಳೆಂದುದಂನು ದುಃಖದಿ
ಮೆನುತ ಮೋಹದ ಬಲದಿನೆಗೊಳಂದು ಚಂದ್ರಮತಿ
ಮನಮೊಲಿದು ಚಿತ್ರಕರೊಗಳ್ಗನೆನಿಪನಿಂ ಪಿ
ಟ್ಟಿನೊಳು ರಚಿಸಿದರನುಪಮಾನ
ಮೆನಿಷ್ಟ ದಿಗಳಾರು ಕಳಿವರನಂಗನಾಜ್ಞೆಯನೂ || ೦೩೯ ||

ಯೆಂದಿನನುಕೂಲತ್ಸಮವಳೊಳು
ಮಂದವಾಗಿರದೆ ಕಂಡು ಶಂಕೆಯೂ
ಳೊಂದಿ ಚಿಂತೈತನಂತು ವರ್ತ್ತಿಸಿತಿರ್ದ್ದ ನೃಪನೊರ್ಮೆ
ಬಂದು ಸಭೆಯೊಳು ಯುವತಿ ಸಂಯುತ
ನೊಂದು ಪೀಠದೊಳಿರ್ದ್ದು ನಾಟ್ಯಾ
ನಂದದಿಂ ಚಿರಮಿರ್ದ್ದು ದೊಂದನು ಕೋಳಿ ಹುಂಜನನೂ || ೦೪೦ ||

ಸುತ ವಿಕೃತ ಪರಿವಾರ ಸಂಯುತೆ
ಗತ ಸುಕೃತತೆಯೆಳ್ತಂದು ತದ್ದೇ
ವತೆಯಭವನಕ್ಕ ಶುಭಗತಿಗೊಳಿಂತು ತೊಳಲುವರೂ
ಸತತ ಮಸುಹಾತಕರುಮೆಂದೀ
ಕ್ಷಿತಿಯ ಜನಗಳಿಱೆಪುವಂತಿರೆ
ನುತಿಸಿಬಲವಂದವಳುನತಿಸಿದಳಂದು ದೇವತೆಗೆ || ೦೪೧ ||

ಚೆಲುವ ಕೋಳಿಯ ನೊಂದನಿತ್ತಪೆ
ಫಲಉ ಜೀವಕ್ಕೆಂದು ಕನಸಿನ
ಫಲವ ಕೆಡಿಸಿದನೊಪ್ಪುಗೊಳೆಲೆ ದೇವಿ ನೀನೆಂದೂ
ಹಲುಬಿ ಹಿಂಸೆಗೆ ಕೊಕ್ಕೇಪ ಸುತ
ಗಲಗ ನೀಡಿದೊಡಾ ನೃಪಾಲನು
ತಲೆಯಪೊಯ್ದನು ಚರಣಹತಿ ಯಿಂ ಮಾತೆಯಾ ಗ್ರಹದಿಂ || ೦೪೨ ||

ವೆಂತರಾಶ್ರೀತಮಪ್ಪುದದಱೆನ
ತೃಂತ ವಿಕೃತಯನೈದೆ ಮುಂಡಮ
ದಂತರಿಕ್ಷಕೆ ಪಾಱೆ ತಲೆಕುಕ್ಕೂಯೆನುತ ಕೆಡೆಯೆ
ಸಂತಸಂ ಮಿಗೆ ಚಂದ್ರಮತಿಗ
ತ್ಯಂತ ದುಃಖಮದಾಗೆ ಭೂಪತಿ
ಗಂತಾಗ ಪುಂಣ್ಯರುಗಳಿರ್ವ್ವರು ಬಂದರರಮನೆಗೆ || ೦೪೩ ||

ಜಾರೆಯುವತಿಯ ದೂಸಱೆಂದ ವಿ
ಚಾರಿಣಿ ಮಾತೃವನ ದೆಸೆಯಿಂ
ಘೋರ ದುಃಕೃತ ಬಂದಮಾದುದು ತಪದಿನಲ್ಲದಿದೂ
ತೀರದಿಂದು ನಿಜಾಪ್ತಜನಪರಿ
ವಾರ ಜನವನು ಬರಿಸಿ ರಾಜ್ಯದ
ಭೂರಿತ್ಸಂಪತ್ತನು ಸಮರ್ಪ್ಪಿಸಿದನು ಯಶೋಮತಿಗೆ || ೦೪೪ ||

ತಪಕೆ ವಿಘ್ನಮನೋಡರಿಸಿದೊಡೆನ
ಗುಪಪತಿಯೊಳನು ರಾಗದಿಂ ವ
ರ್ತ್ತಿಪುದುಘಟಯಿಸದೆಂದುಪಾಯದಿನೊಂದಪಾಯವನೂ
ನೃಪತಿಗೊಡರಿಪೆನೆಂದು ದುರ್ಮ್ಮತಿ
ಕಪಟದಾಲಯವೆನಿಪಮೃತಮತಿ
ಚಪಳೆ ಮುದದಿಂ ಬಂದಳಂದು ನೃಪಾಲನಂತಿಕೆ || ೦೪೫ ||

ಜನಪ ನಿಂಮಡಿ ದೀಕ್ಷೆಗೊಂಡಡೆ
ಮನೆಯೊಳಿಂನಾಸೆ ಯಾಉದು
ಮನಜೋಪಮ ನಿಂಗಲ್ಕೈಯನೆಂತು ಸೈರಿಪೈನೂ
ಮನಮೊಲಿದು ನಿಂನೊಡನೆ ಬಂದಪೆ
ಜನವಿನುತ ದೀಕ್ಷೆಯನು ತಾಳ್ದಪೆ
ನೆನಲವಳ ನುಡಿಗೇಳ್ದು ನಸುನಗೆ ನಕ್ಕನವನಿಪತಿ || ೦೪೬ ||

ನಗೆಯ ಕಂಡವಳೆಂನ ವರ್ತ್ತನೆ
ಬಗೆಯೊ:ಅತಿ ನಿಶ್ಚಿತಮದಾದುದು
ಜಗದಧೀಶಂಗೆಂದು ಸಂದೆಗಮಿಲ್ಲದಱೆನಂದೂ
ಮಗನ ಪಟ್ಟೋತ್ಸವದೊಳತಿ ಮುದ
ಮೊಗೆಉದೆನಗಿಂದೆಂನ ಮನೆಯೊಳು
ಸುಗುಣ ತಾಯೊಡನುಂಡು ದೀಕ್ಷೆಯನಾಂಪುದೆಂದೆನಲೂ || ೦೪೭ ||

ಯೆಂದು ಕೇಳಿಯೆಗೊಳಿಸಿಗಂಡನೊ
ಳೊಂದಿದತ್ತೆಯುಮಂ ಮನೋಮುದ
ದಿಂದ ಮುಂದೊಡಗೊಂಡು ಬಂದಿಕ್ಕಲು ವಿಷಾಂನವನೂ |
ಅಂದಿರದೆಯುವರುಂಡು ವಿಷಭರ
ದಿಂದ ಕೆಡೆಯಲು ಮೇಲೆ ಬಿರ್ದ್ದಕ
ಟಿಂದು ವಿಷಹರಮಣಿಯ ಕಡೆದೊತ್ತಿದಳು ಗಂಟಲನೂ || ೦೪೮ ||

ಬಿಟ್ಟು ತನುವನು ನೃಪವನು ನೃಪತಿ ಯಾರ್ತ್ಥದಿ
ಮುಟ್ಟಿ ತುಂಗೆತೆಯಿಂದ ಮುಗಿಲನು
ದಿಟ್ಟಿಗೊಪ್ಪುವ ವಿಂಧ್ಯ ಗಿರಿಯೊಳು ನವಿಲ ಬಸುಱೊಳಗೆ
ಪುಟ್ಟಿಲರ್ಬಕನಾ ಮಯೂರಿಯ
ಪೊಟ್ಟೆ ಪಱೆವಿನಮೆಸಲು ಬಿರ್ದ್ದಾ
ಮೊಟ್ಟೆಯನು ಕೃಪಯಿಂದಲೊಯ್ದನು ತಂನ ಮನೆಗವನು || ೦೪೯ ||

ನಿರುಪಹತಮಪ್ಪಂತು ಯತ್ನದಿ
ನಿರಿಸಿ ರಕ್ಷಿಸಿ ಕೆಲ ಉದಿವಸದಿ
ನಿರದೆ ನವಿಲಾಯ್ತದು ಮನೋಹರಮಾಯ್ತು ನರ್ತನದಿಂ
ಭರದಿನದನವನೊಯಿದುಕೊಟ್ಟನು
ನರಪತಿ ಯಶೋಮತಿಗೆ ಯತ್ತಲು
ಕರಹಟದೊಳಾ ಚಂದ್ರಮತಿ ಶುನಿಕಿ ಯಾದಳಘಟವಶದಿಂದ || ೦೫೦ ||

ಬಿಸುಟು ಜಿನ ಮಾರ್ಗ್ಗವನು ಸಪ್ತ
ವ್ಯಸನತರರೊಡನಾಡಿ ಬಂಟೆಯೊ
ಳಸಮಗತಿಯಿಂ ವರ್ತ್ತಿಸುತ್ತಿರಲು ಯಶೋಮತಿಯೂ
ಜಸಮನಾಂತುದು ಬೇಂಟೆಯಿಂದಿ ವ
ಸುಮತಿಯೊಳಾ ಶುನಕಿ ತಂದದ
ಬೆಸನಿಯೊರ್ವ್ವನು ನೃಪತಿಗೊಪ್ಪಿಸಿ ಪಡೆದನಿಪ್ಪಿತಮಂ || ೦೫೧ ||

ವೊಂದು ದಿವಸದೊಳಮೃತಮತಿಯಾ
ನಂದದಿಂದರೆ ಅಷ್ಟವಂಕನೊ
ಳೊಂದಿ ಸೌಧದ ನೆಲೆಯೊಳಾಡುವ ನವಿಲು ಕಂಡವರಂ
ಬಂದು ಜಾತಿಸ್ಮರಣ ಕೋಪದಿ
ನಂದು ಜಾರನ ಕಂಣನಿಱೆಯಲು
ಬೆಂದೆ ಹಾಯೆನುತವಳು ದಂಡದಿ ಪೊಯ್ದು ಕೊಂದಳದಂ || ೦೫೨ ||

ಅರಸನಾಗಳು ನೆತ್ತರವನು ತಂ
ನರಸಿಯೊಡನಾಡುತ್ತ ಮುದದಿಂ
ದರಸಿ ಪಿಡಿಯೆಂದಾರ್ದ್ದುಪಾಯ್ತು ಕುವಪದದೊಳಕ್ಷವನೂ
ತಿರುಗಿ ಬೀಳುವ ನವಿಲನಾ ಶುನಿ
ಪರಿದು ಪಿಡಿದಾಕ್ಷಣದಿ ಭಕ್ಷಿಸ
ಲರಸನದನುಱೆ ಪೊಯ್ದು ಕೊಂದನು ನೆತ್ತವಲಗೆಯಲಿ || ೦೫೩ ||

ಬರ್ಹಿಯೆಯ್ಯ ಮೃಗಂದಲಾದುದು
ಪಿರಿಯ ವಿಂದ್ಯಾಟವಿಯೊಳಲ್ಲಿಯೆ
ಉರಗಿಯಾದುದು ಶುನಕಿ ಮತ್ತಾ ಪಾವನೈಯಾಮೃಗಂ
ಪರಮ ವೈರದಿ ತಿಂದಕ್ಕಟ
ಕರಪಸಿದ ಪುಲಿಬಂದು ತಿಂದುದು
ದುರುಳನೆನಿಸುವ ಬಯ್ಯನೊಡಿರೆ ಸಂಶ್ರುತಿಯ ಪರಿಯ || ೦೫೪ ||

ಯೆಸೆವ ಸೀತಾನದಿಯೊಳುರಗಿಯು
ಮೊಸಳೆಯಾದಂತೆಯ್ಯುಮಲ್ಲಿಯೆ
ಪೆಸರಿನಾದುದು ಲೋಹಿತಾಕ್ಷಂ ಮತ್ಸ್ಯಮದನೊರ್ಮ್ಮೆ
ಪಸಿದು ಬೆಂನಟ್ಟಿದುದು ಜವದಿಂ
ಮೊಸಳೆ ಮತ್ಸ್ಯಮದೋಡಿಪೋಗಲು
ವಸುಮತೀಶನ ಗಜಂ ಕಂಡಿರದೆ ನುಂಗಿದುದು || ೦೫೫ ||

ಕೆಲಬರಾವಾರ್ತ್ತೆಯನು ಪೇಳಲು
ಕಲುಷವಶಗತನಾ ಯಶೋಮತಿ
ಕೊಲಿಸಿದಂ ಪಿಡಿತರಿಸಿ ದೀವರರಿಂದ ಮೊಸಳೆಯನು
ಚೆಲುವನೆಸಿರ್ಪ ಪುರದ ಪೊಱಗಣ
ಪೊಲೆಯರಾವಾಸದೊಳಗಾಗಳೆ
ಯಲಘುಕರ್ಮ್ಮಾದಿನದಿಂದೊರಾದುದು ಮೊಸಳೇ || ೦೫೬ ||

ವೊಂದು ದಿನವಾ ಮೀನನರಸ್ಗಗೆ
ತಂದು ದೀವರನೀಯೆ ಖಂಡಿಸಿ
ಯೆಂದ ನೀರೊಳಗಿರಿಸಿ ಮಹಳಕ್ಕಿತ್ತನೊಂದನಂ
ತಿಂದು ಪಾರ್ರ್ವರು ಪರಸಿ ಕೇಳ್ದುದು
ತಿಂದರೆಂನನೆ ಪರಸಿದ ಪರಿವ
ರೆಂದು ಚಿಂತಿಸಿ ಸತ್ತು ಮುಂಪೇಳ್ದ ಜೇಗೆ ಮಱೆಯಾಯ್ತೂ || ೦೫೭ ||

ತಂನ ತಾಯೊಳು ತಾ ನೆರೆಯಲು
ಮಂನ್ಯುಮಿಗೆ ಮತ್ತೊಂದು ಪೊಂತು ಸ
ಮುಂನತಂ ಕರುಳುರ್ಚ್ಚವಂದದಿನಿಱೆಯೆ ಕೋಡುಗಳಿಂ
ತಂನಯಂತಿಮ ಧಾತು ತಂನು
ತ್ಪಂನತೆಗೆ ಕಾರಣಮದಾಗಲು
ತಂನ ತಾಯುದರದೊಳು ತನಜಮಾಯ್ತು ಚಿತ್ರಮಿದೂ || ೦೫೮ ||

ನೆಱೆದಗರ್ಬ್ಬಿಣಿಯಜೆಯುಮೂರಿಂ
ಪೊಱಗಿರಲು ನೃಪನಂದು ಬೇಂಟೆಯೊ
ಳಱಸಿ ಮೃಗಮಂಪಡೆಯದೂರಿಗೆ ಬರುತ ಮದನೇಸಲೂ |
ಪಱೆದ ಪೊಟ್ಟೆಯವನವನಿಗಾಗಳೆ
ಮಱೆ ಕೆಡೆಯೆ ಮಾತಂಗನೀನೀ
ಮಱೆಯ ಸಲಹೆಂದಿತ್ತನವನದನೊಲಿದು ಸಲಹಿದನೂ || ೦೫೯ ||

ಪರಸಿ ದೇವಿಗೆ ಬೇಂಟೆ ಪರಿದಡೆ
ಪಿರಿಯ ಕೋಣಂಗಳನು ಕೊಟ್ಟೆಪೆ
ನಿರದೆ ನಾನೆಂದರಸ ಬೇಂಟೆಯೊಱೆದು ಮೃಗಗಣಮಂ
ತರಿಸಿ ಕೋಣಂಗಳನು ಮುದದಿಂ
ದರಿದು ಶಿರಗಳನವಱಮಾಂಸಮ
ನಿರದೆಮಹಳಕಿತ್ತನವರದ ಬಿಸಿಲೊಳೊರಿಸಿದರೂ || ೦೬೦ ||

ಕಾಗೆ ನಾಯಿಗಳು ಮುಟ್ಟಲದ ಕಂ
ಡಾಗಳಾ ಪಾರ್ವ್ವರುಗಳೆಲ್ಲರು
ಚ್ಚಾಗ ಮುಖದಿಂದಲ್ಲ ದಾಗದು ಶುದ್ಧಮೆನೆ ನೃಪತಿ
ಚ್ಚಾಗಮಂ ಮಾದೆಗನ ಮನೆಯಿಂ
ಬೇಗ ತರಿಸಿದನಱ ಮುಖದಿಂ
ದಾಗಳಾಗಿಸಿ ಶುದ್ಧಮಂ ಬಹುವಿದದಿ ನಟ್ಟರದಂ || ೦೬೧ ||

ಬಂದ ಬ್ರಾಹ್ಮಣರುಂಡುಮುದದಿಂ
ಸಂದ ಚಂದ್ರಮತಿ ಯಶೋಧರ
ರೊಂದಿನಾ ಕದೊಳುರು ಸುಖಮನುಣಲೆಂದು ಘೋಷಿಸಲೂ
ಅಂದು ಜಾತಿ ಸ್ಮರಣದಿಂದ ಜ
ಮೆಂದುದಾನಿಲ್ಲಿರಲು ಭೋಜನ
ದಿಂದ ತಣಿದರು ಮಾತನಕ್ಕಟ ನಂಬಿದಪನರಸಂ || ೦೬೨ ||

ದಾಗಿಸತ್ತು ಕಳೀಂಗ ದೇಶದೊ
ಳಾಗೆ ಕೋಣನು ಪರದವದಱೆಲು
ವಾಗುವಂತಿರೆ ಪೆಱೆತಂದುಜ್ಜಯನಿಯೊಳು ಬಿಡಲೂ
ಪೊಗಿಸಿ ಕೆಱೆಯೊಳೀಂಟಿ ನೀರನು
ವೋಗದಿರೆ ತೃಷೆಯಲ್ಲಿ ಕೋಡೊಳ
ಗಾಗಿ ಮುಳಿಗಿರಲಂದು ಮಾರ್ಗ್ಗ ಕ್ರಮಭರಂ ಮಹಿಷಂ || ೦೬೩ ||

ಅರಸನೇಱುವ ಪಟ್ಟದಶ್ವರನು ಭರದಿ
ನೀರ್ಗ್ಗೆಯ್ತುಂದುದಲ್ಲಿ ಪರಮ
ವೈರದಿ ಪೊಯಿದು ಕೊಂದುದು ಕೋಣನಾ ಹಯಮಂ
ಅರಸನಾಗಳು ಕೇಳ್ದು ಕೋಣನ
ತರಿಸಿ ಕೊಲಿಸಿ ಬಹು ಪ್ರಕಾರದಿ
ಪರದನಂ ಪಿಡಿತರಿಸಿ ಭೀದನುಸೂಱೆಗೊಂಡನವಂ || ೦೬೪ ||

ಸುಟ್ಟು ಕೋಣನ ಮಾಂಸಮಂ ನೃಪ
ನಟ್ಟಿತಾಯ್ಗದ ತಿಂದು ತಣಿಯದೆ
ಕಟ್ಟಿದಜಮಂ ಕೊಯ್ದು ಕೊಯ್ದುಱೆ ತಿಂದಳಾ ಎರಡಂ
ಕಟ್ಟಿದಘವಶದಿಂದ ದುಃಖಂ
ಬಟ್ಟು ಮತ್ತಿರದಾದುವಂತಾ
ಪಟ್ಟಣದ ಮಾದಗೆಗನ ಮನೆಯೊಳು ಚಲುವ ಕೋಳಿಗಳೂ || ೦೬೫ ||

ಕರಮೆಸೆವ ಚರಣಾಯುಧಗಳ
ನರ್ಸಗಾಮಾದೆಗನು ಕೊಡಲಿವ
ನಿರದೆ ಸಲೆಹಂದರಸನಿತ್ತನು ಚಂಡಕಮ್ಮಟ್ಟಿಗೆ
ಯಿರಿಸಿ ಕರುಣದಿ ಪಂಜರದೊಳವ
ನುರು ನುದದೆ ಸಲಹುತಿರೆ ಬಂದುದು
ವಿರಹಿ ನಿಕರ ಕೃತಾಂತಮಂದು ವಸಂತಮತಿಕಾಂತಂ || ೦೬೬ ||

ವನತರುಲತಾಗುಲ್ಮ ಸಂತತಿ
ಘನಪಲ್ಲವ ಪ್ರಸವ ಫಲಗಳಿ
ನನಣಶೋಭೆಯಧರಿಸಿಕೀರಪಿಕಾಳಿ ಮೆಯ್ವೀರ್ಚ್ಚೆ
ಘನ ಶೈತ್ಯ ಸೌರಭ್ಯ ಮಾಂದ್ಯದಿ
ನನಿಲನವನಿಯೊಳೆಯ್ದೆ ಸುಳಿಯಲು
ಮನಸಿಜನ ಸಾಮ್ರಾಜ್ಯ ಸಂಪದ ಮೆಸೆದುವಾ ಚೈತ್ರಂ || ೦೬೭ ||

ಅಂತೆಸೆವ ಚೈತ್ರದೊಳು ಶುಕ ಪಿಕ
ಸಂತತಿಯನಳಿ ಮಾಲೆಯಿಂದಲ
ತಾಂತಪಲ್ಲವ ಫಲನಿಕಾಯದಿ ನೆಸವನಿ ಜವನಕೆ
ಕಂತು ಸಂನಿಭನಾ ಯಶೋಮತಿ
ಕಾಂತೆಯುಂಕತಿಪಯಜನಂ ಬರೆ
ಸಂತಸದಿ ಬಂದಲಿ ವನ ಜಲಕೇಳಿ ಲೀಲೆಯೊಳೂ || ೦೬೮ ||

ಯಿರಲು ವನಪ ರಿಶೋಧನಾರ್ತ್ಥಂ
ತಿರುಗುತಿರ್ದಾ ಚಂಡಕರ್ಮ್ಮಗೆ
ಪರಮಯೋಗಿಯ ಕಂಪನಂ ಮದನಾರಿ ನಿಜ ನಿಷ್ಠಂ
ನಿರುಪಮಾಗಮಿಯವದಿ ಭೋದಂ
ಸುರನರೋರಗವಂದ್ಯ ಪಾದಂ
ನಿರುತ ಕಣ್ಬೋಲನಾದನಾತನ ಭವ್ಯತೋದಯದಿಂ || ೦೬೯ ||

ನುಡಿಸಿ ಕೇಳುವೆನಿವನೆಂನನು
ನುಡಿದು ತಿಳಿಪಲ್ಯಾಱದಿರ್ದ್ದರೆ
ತಡೆಯದಿಲ್ಲಿಂ ತಾನೆ ಪೋದಪನೆನುತ್ತಮಾಧೂರ್ತಂ
ನಡೆ ತರಲು ಮುನಿಕ್ಕೆಯ ನೆತ್ತಿರೆ
ಪಡೆದುರಾಗನಾಗ ನಮ್ರನು
ಪಡೆದನಾ ಮುನಿಯಿಂದ ಸುಖಿಯಾಗೆಂಭ ಪರಕೆಯನೂ || ೦೭೦ ||

ಮುನಿಯನಿಕಟದೊಳಂದು ಕುಳ್ಳಿ
ರ್ದ್ದನಘಕಣ್ಗಳನಿಂತು ಮುಚ್ಚಿ
ರ್ದ್ದಿನಿತು ಪೊತ್ತು ಮದೇನ ಚಿಂತಿಸುತಿರ್ದ್ದರದನೆನಗೆ
ಮನಮೊಸೆದು ಪೇಳಿಗಳೆಂದ
ತಿನಯದಿಂ ಬೆಸಗೊಳೆತಳಾಱನು
ಮುನಿಯಱೆದನಾಸಂನ ಭವ್ಯನು ತಪ್ಪದಿವನೆಂದೂ || ೦೭೧ ||

ಮಗನೆ ನಿಂನೀ ಪ್ರಶ್ನೆ ಲೇಸೈ
ಬಗೆದು ನೋಳ್ಪಡೆ ಜಡನುಮರ್ತ್ತಂ
ನಿರ್ಗ್ಗುಣಮಶುಭಮನಿತ್ಯಮಪ ಶುಚಿ ಹೇಯಮೀ ಯೊಡಲಿಂ
ಅಗಣಿತಂ ನೃದ್ಭೋಕ್ತೃ ನಿತ್ಯಂ
ಸುಗುಣನಖಿಳ ವ್ಯಾಪ್ಯಮೂರ್ತ್ಥಂ
ಬಗೆಯೊಳತಿ ಶುದ್ಧಾತ್ಮನಂ ಚಿಂತಿಸುತಿರ್ದ್ದೆವೆನೆ || ೦೭೨ ||

ಯೆನಲು ಕೇಳ್ದಾ ಚಂಡಕರ್ಮ್ಮನು
ಮುನಿಪ ಕಳ್ಳನರ್ನ್ವೊನಂ ಕೃಪೆವ
ಯನಿತುಮಿಲ್ಲದೆ ಕುದಿರೊಳಿಟ್ಟದ ಮುಚ್ಚಿ ಸೋಥೆಯಿಟ್ಟೂ
ದಿನಗಳಾಱೇಳ್ಪೋದಬಳಿಕದ
ನನುನಯದಿ ನೊಡೆದಲ್ಲಿ ನೋಡಲು
ತನುವ ಕಂಡೆನುಜೀವಮುಳ್ಳೊಡೆ ಪೋದುದೆಲ್ಲಿಯದೂ || ೦೭೩ ||

ಯೆನೆ ಮುನೀಶ್ವರನೆಂದನಿಂತೆ ಲೆ
ತನಯ ಕುದಿರೊಳು ಶಂಖ ಸಹಿತನ
ಮನುಜನಂ ಪೊಗಿಸಿಟ್ಟು ಸೋಥೆಯಂ ಶಂಖ ವೂದಲವಂ
ದನಿಯೆ ಪೊಱ ಪೊಣ್ಮಿದುದು ಮತ್ತಾ
ದನಿಯ ಮಾರ್ಗಮದೆತ್ತ ಪೋದುದೊ
ದಿನುತ ಮಾತ್ಮನುಮೆತ್ತ ಪೋಪಡಮಾರು ಕಂಡಪರೋ || ೦೭೪ ||

ತೂಗಿ ತೊಲೆಯಿಂದೋರ್ವ್ವ ಕಳ್ಳನ
ಪೋಗದಂತಿರೆ ನೆಣನೆ ರಕ್ತಂ
ಮೂಗು ಬಾಯುಂಗಂಟಲುಮನಿರದೊತ್ತಿ ಕೊಂದವನಂ
ಬೇಗಮಾತೊಲೆಯಿಂದ ಮತ್ತಾಂ
ತೂಗೆ ತೂಕಂ ಕುಂದದಿರ್ದ್ದುದು
ಯೋಗಿ ಬೇಱೊಬ್ಬಾತನುಳ್ಳೊಡೆ ಕುಂದಬೇಕೆಂದಂ || ೦೭೫ ||

ತಿದಿಯೊಳನಿಲನ ತುಂಬಿಯಂತದ
ಪುದಿದು ಪೊಲಿದದ ಪೋಗದಂತಿರೆ
ಮುದದೆ ತೂಗಲುಮದನೆ ವಾಯುವನಿಳಿಪಿ ತೂಗಿದೊಡಂ
ತಿದಿಯ ತೂಕಂ ಸರಿಯದಾಗದೆ
ವಿದನಮೂರ್ತಸಚ್ಚಿದಾತ್ಮನೊ
ಲಿದುದನುಚಿತಮೆ ಮಗನೆ ಗೌರವಲಾಘವಾ ರೋಷಂ || ೦೭೬ ||

ಪಿಡಿದು ಕಳ್ಳನ ನಡೆಯೊಳಿಟ್ಟಾಂ
ಕಡಿದು ಕಿಱಿಕಿಱಿದಾಗಿ ನೋಡಿಯು
ಪಡೆಯೆನಾತ್ಮನನೆನೆ ತಳಾಱಂ ಮುನಿಪನಿಂತೆಂದಂ
ಕಡಿದು ಕಾಷ್ಟವನೊಡೆಯೆ ವಹ್ನಿಯ
ಪಡೆವರೆನೆಱೆ ಪೊಸೆಯದಂತೆಲೆ
ಪಡೆವರೆ ಸತ್ಕ್ರಿಯೆಯಿ ನಲ್ಲದ ಮೂರ್ತ್ತನಾತ್ಮನನೂ || ೦೭೭ ||

ಜೀವನಮದೆಂತುಂಟೆಂದೊಡ
ತೀವ ಪೂತನಮೇಯನ ಜರಂ
ಭೂ ವಿನೂತನನಾದ್ಯನಿದನನ ಪ್ರತ್ಯಾಖ್ಯಾನ ಗುಣಂ
ಆವ ಕಾಲದೊಳತುಳಸೌಖ್ಯಂ
ಕೇವಲಾಖ್ಯ ಜ್ಞಾನ ರೂಪಂ
ಭಾವ ಗಮ್ಯಗಮೂರ್ತ್ತನೆಂದೆಲೆ ನಂಬು ಜೀವನನೂ || ೦೭೮ ||

ಆತನಾದಿವಿಹೀನ ಕರ್ಮ್ಮ
ವ್ರಾತ ಬಂಧದೀ ದುಃಖದಾಲಯ
ಮಾತ ತಾಖಿಲ ಕರ್ಮ್ಮ ನಿಕರ ವಿನಾಶದಿಂ ಮುಕ್ತಂ
ಖ್ಯಾತನಾತ್ಮನ ನಿಂತುಳಿದೆಲೆ
ಜಾತತನು ಭಾವಮನು ಬಿಸಟು
ಪೂತ ಭಾವದೊಳೈದೆ ಭಾವಿಸಿ ಸಿದ್ಧಿಕುಂ ಜೀವಂ || ೦೭೯ ||

ಜೀವ ಮೊದಲಾದವನು ನಂಬುವ
ಭಾವಮಧು ಸಮ್ಯಕ್ತ್ವ ಮತ್ತಾ
ಜೀವ ಮೊದಲಾದವನು ತಥ್ಯದಿನಱೆವ ಬಗೆ ಬೋಧಂ
ಆವ ತೆಱದಿಂ ರಾಗ ರೋಷ
ಭಾವಮದು ಚಾರಿತ್ರಮೀ ಮೂ
ಱೌವನೊಳವ್ರತ ಪಂಚಕಾಂಚಿತಮಕ್ಕು ಸುಖಿಯವನೂ || ೦೮೦ ||

ಭೂರಿ ಮಿಥ್ಯೆಯಮವ್ರತಂಗಳು
ಘೋರ ಸಂಸ್ಕೃತಿ ವರ್ಧಂಕಂಗಳು
ಧೀರಜಿನನುಸಿದ್ಧರ್ತ್ವ ವಿಪರೀತಾಂಭಿರುಚಿ ಮಿಥೆ
ಧೀರಕೊಲೆ ಹುಸಿಕಲವು ಮನ್ಯರ
ಭಿರು ರತಿ ಬಹು ಕಾಂಕ್ಷಿಯೆಂಬಿಉ
ಧಾರುಣಿಯೊಳವ್ರತಗಳಿವನುಳಿದಾತನೆ ಬುಧನೂ || ೦೮೧ ||

ಯೆನಲು ಕೇಳ್ದಾ ಚಂದಕರ್ಮ್ಮನು
ಮುನಿಪ ನೀವೆಂದುದನು ನಂಬಿದೆ
ನನಘನಿಂಮಡಿ ಪೇಳ್ದ ಸುವ್ರತ ಪಂಚಕವನೊಲವಿಂ
ಹವನ ವೊಂದನೆ ಬಿಟ್ಟುಧರಿಸದೆ
ನೆನುತ ಕರಗಳ ಮುಗಿದು ಧರಿಸಿರೆ
ಮುನಿಪ ನುಡಿದನು ದಶನ ದೀಧಿತಿ ದೆಸೆಗೆ ಪಸರಿಸಲೂ || ೦೮೨ ||

ಪಿಟ್ಟಿನೊಳು ಕರಚೆಲುವನೆನೆ ಕರು
ವಿಟ್ಟ ಕೋಳಿಯನೊಂದ ದೇವಿಗೆ
ಕೊಟ್ಟು ಚಂದ್ರಮತಿಯಶೋಧರ ಭೂಪರಘು ವಶದಿಂ
ಪುಟ್ಟಿ ಕುಗತಿಯೊಳೊರ್ವ್ವ ರೊರ್ವ್ವರ
ನಟ್ಟಕೊಂದುಂ ತಿಂದು ಮೀನುಗಳು
ಪುಟ್ಟಿ ಕೋಳಿಗಳಾಗಿ ನಿಂನಯ ಕೆಲದೊಳಿರ್ದ್ದಪರೂ || ೦೮೩ ||

ಆತನಾನುಡಿಗೇಳ್ದು ಭಯದಿಂ
ದಾತ ಕೊಲೆಯುಮನುಳಿದೆನೆಂದೆನೆ
ಜಾತಜಾತ ಸ್ಮೃತಿ ಪದಾಯುಧ ಯುಗಲಮಾವ್ರತಮಂ
ಪ್ರೀತಿಯಿಂ ಕೈಕೊಂಡು ಕೂಗಲು
ದೇಂತೊದಳೋ ರವವೆ ಧೀಶರದಿಂ
ಖ್ಯಾತ ನೃಪನವನೆಚ್ಚು ಕುಸುಮಾವಲಿಯ ಮೆಚ್ಚಿಸಿದಂ || ೦೮೪ ||

ಸರಳು ಭರದಿಂ ಪೋಗಿನಟ್ಟಾ
ಚರಣಹತಿ ದ್ವಯದ ಕೊರಳ್ಳಳ್ಗೊ
ಳಿರದಡುರ್ಚ್ಛಲು ಗುರು ನಿಗದಿತ ವ್ರತಸುಭಾವನೆಯಿಂ
ಯೆರಡು ಮಂಗವನುಳಿದು ಪುಟ್ಟಿದ
ವರಸಿ ಕುಸುಮಾವ ಲಿಯ ಗರ್ಭ್ಭದೊ
ಳಿರದೆ ನರಗತಿ ನಾಮಕರ್ಮ್ಮದುದಯದಿನಂದೊಡನೆ || ೦೮೫ ||

ಶುಭ ಗುಣಾಲಯ ಕೃಪೆಯ ಮೂರ್ತ್ತಿಗ
ಳಭಯರನುಪಮರೆನಿಪ ಶಿಶುಗಳು
ಯಿಭಗಮನೆಯುದರದೊಳಗಿರ್ದ್ದುದಱೆಂದಲಾ ಸತಿಗೆ
ಅಭಯ ಘೋಷವ ಮಾಳ್ಪೆನೆಂಬೀ
ಶುಭದೋಹಳಂ ಪುಟ್ಟಲದಱೆಂದಾ
ವಿಭುಗ ಯಶೋಮತಿಯಭಯ ಘೋಷವನಿರದೆ ಮಾಡಿಸಿದಂ || ೦೮೬ ||

ಶುಭ ದಿನದೊಳಾ ಕಾಂತೆ ಪಡೆದಳು
ಸುಭಗ ಸುತೆಯಂ ಸುತನನೊಲವಿಂ
ವಿಭು ಯಶೋಮತಿಯತಿ ವಿಭೂತಿಯಿನಂದು ಮುದದಿಂದಾ
ಅಭಯರುಚ್ಯಭಿದಾನಮಂ ಸುತ
ಗಭಯನತ್ಯಭಿದಾನವನು ವಾ
ಶುಭಚರಿತ ಸುತ್ತೆಗಿತ್ತ ಸುಖದಿಂದರ್ದ್ದರವರಿಂತೂ || ೦೮೭ ||

ವೊಂದು ದಿನದೊಳು ನೃಪತಿ ,ಮೃಗಯಾ
ನಂದದಿಂ ಪೋಗುತ್ತಮಿದಿರೊಳು
ನಿಂದ ಯೋಗಿ ಸುದತ್ತನಂ ನೆಱೆ ಕಂಡು ವಿಪಿನದೊಳೊ
ವೊಂದು ಮೃಗಮಂ ಪಿಡಿಯದತಿಮು ಳಿ
ಸಿಂದ ಬಂದೊಡನಿರ್ದ್ದನಾಯೀಗಳ
ವೃಂದಮಂ ಮುನಿಪತಿಗೆ ಬಿಟ್ಟನು ವಿಗತ ಕೃಪನಂದೂ || ೦೮೮ ||

ಬಿಟ್ಟೊಡಾತನ ತಪದ ಮಹಿಮೆಯಿ
ಮುಟ್ಟದಂತರದಲ್ಲಿ ನಿಂದಿರೆ ಕಟ್ಟಿದನು
ಕುಂನಿಗಳ ಬಾಯ್ಗಳನೆಂದು ಕಡು ಮುಳಿದೂ
ದಿಟ್ಟನಿವನಂ ಕುತ್ತಿ ಕೆಡಹುವೆ
ನೆಟ್ಟನೀಗಳೆನುತ್ತ ಕಟಿಯೊಳು
ಕಟ್ಟಿದಲಗಂ ಕಿತ್ತು ಘರ್ಜ್ಜಿಸುತೆಯ್ದೆ ವಂದನವಂ || ೦೮೯ ||

ಆ ನರೇಶನ ಮಿತ್ರನೊರ್ವ್ವಂ
ಮಾನನಿಧಿ ಕಲ್ಯಾಣ ಮಿತ್ರಂ
ದಾನಿದೇಶಾಂತರ ದಿನೆಳ್ತಂದಾಗಳಾ ಪುರಕೆ
ಜ್ಞಾನಿ ಮುನಿಯಪಸರ್ಗ್ಗಮಂ ತಿಳಿ
ದಾ ನಿಕೃಷ್ಟನ ತಡವೆನೆನುತಂ
ತಾನೆ ಬಂದರಸಂಗೆ ಕಾಣಿಕೆಗೊಟ್ಟು ಕಂಡೆಂದಂ || ೦೯೦ ||

ಅರಿ ನೃಪತಿ ಮೇಲೆತ್ತಿ ಬಂದನೆ
ಯರಸ ನೀನಿಂತಲಗ ಕೀಳ
ಲ್ಪರಿದು ರೋಷವ ಧರಿಸಲೆನಲಾ ನೃಪತಿ ಸಿಗ್ಗಾಗಿ
ಪರದ ಕೇಳಿವನೆಂನ ಬೇಂಟೆಯ
ನಿರದೆ ಕೆಡಿಸಿಯು ಸಾರಮೆಯೋ
ತ್ಕರವ ಬಾಯಿಗಳ ಕಟ್ಟಿದಂ ದೆಸೆಗಿವನ ಬಲಿಗೆಯ್ವೆಂ || ೦೯೧ ||

ಯೆನೆ ಪರ ದನಿಂತೆಂದನಘ ತತಿ
ಜನಪ ಘಟಿಯಿಪುದೆ ದಯಾಪರ
ಮುನಿಯ ದರ್ಶನದಿಂದ ಮೀತಗೆ ತಂನ ತನುವಿನೊಳೂ
ಯಿನಿತು ಮೋಹಮದಿಲ್ಲ ಶುನಕಾ
ನನಗಳಂ ಬಂಧಿಸುಗುಮೆನೀಂ
ಘನ ದುರಿತ ಕೆಡೆಯಾಗದೀಗಳೆ ನಮಿಸು ಮುನಿಪತಿಗೆ || ೦೯೨ ||

ಸ್ನಾನ ರಹಿತಂಗವಿಧಿತಾನ್ವಯ
ಗೇನುಮಱಿಯದ ಹೀನ ತಾಪಸ
ಗಾನು ಪೊಡವಡೆನೆನಲು ಕೇಳ್ದಾ ಪರದನಿಂತೆಂದಂ
ಧ್ಯಾನ ಜಲದೊಳು ನಿಚ್ಚಮಿವನು
ಭೂನುತೋಂನತಗಂಗಕುಲಭಿ
ದಾನದಿಂದ ಸುದತ್ತಮುನಿ ಧರೆಯೊಳವಿಧಿತನೆ || ೦೯೩ ||

ಬಿಟ್ಟು ತಂನ ದುರಾಗ್ರಹವನಾ
ಶೆಟ್ಟೆಯೊಡನೆಳ್ತಂದು ಭೂಪತಿ ಪುಟ್ಟಿ
ದನುರಾಗದೊಳು ಮುನಿಚರಣಂಗಳಿಗೆಱಗೆ
ದಿಟ್ಟಿದೆಱದಾ ಪೂಣ್ಕೆ ತೀರಲು
ಬಿಟ್ಟು ಮೌನಮನಿರದೆ ಮುನಿ ಮನ
ಮುಟ್ಟಿ ಧರ್ಮ್ಮ ಸಮೃದ್ಧಿರಸ್ತುದಲೆಂದು ಪರಸಿದನೂ || ೦೯೪ ||

ಅರಿ ಸಹಾಯದಿ ಭಾವವಿಲ್ಲದ
ಪರಮ ಮುನಿಯಂ ಕೊಲುವೆನೆಂದಾ
ನೆರಪಿದಘ ತತಿಯೀತಗೇನಿಂ ಮಸ್ತಕಾಂಬುಜಮಂ
ಭರದಿನರಿದಚ್ಚಿಸಿದೊಡಲ್ಲದೆ
ಪರೆಯದೆಂದಾ ನೃಪತಿ ಬಗೆಯಲು
ಕರಮಕೃತ್ಯಮನರ ಬಗೆಯದಿರೆಂದನಾ ಮುನಿಪಂ || ೦೯೫ ||

ಮನದೊಳಿರ್ದ್ದುದ ಪೇಳೆ ಚೋದ್ಯದಿ
ಜನಪನಾ ಮುನಿವರನ ಬೆಸೆಗೊಳೆ
ವಿನಯದಿಂ ಭವತತಿಯನಾತ್ಮ ಪಿತಾಮಹಾದಿಗಳಾ
ಮುನಿಪನೆಂದಂ ನೃಪ ಯಶೌಘಂ
ತಪದಿ ಸುರನಾದನತ್ತೆಯು ನೀನೀ
ಯನು ಮನಳಿದಿಳಿದಳಾಱನೆಯವನಿಗಮೃತ ಮತಿ || ೦೯೬ ||

ಕಂದ ನಿಜ ಪಿತೃ ಚಂದ್ರಮತಿಗೆ
ಳ್ಕೊಂದು ಪಿಟ್ಟಿನ ಕುಕ್ಕುಟನನಘ
ದಿಂದ ನವಿಲೆಯೀ ಮೀನುಮಜಕೋಳಿಯಭಯರುಚಿ
ಸಂದ ಸುನಕಿ ಭುಜಂಗಿ ಮೊಸಳೆಯೊ
ಳೊಂದಿದಾಡು ಹಯಾಳಿ ಕುಕ್ಕುಟಿ
ಯಿಂದು ಮುಖಿಯೆನಿಪಭಯಮತಿಯುಂ ಕ್ರಮದಿನಾದರೆನೆ || ೦೯೭ ||

ಯಿಂತು ಕಲ್ಪಿತ ಹಿಂಸೆಯಿಂದ
ತ್ಯಂತ ದುಃಖಂ ಬಡಿಸಿತೆಂದೊಡೆ
ಸಂತತಂ ಬಹು ಜೀವತತಿಗಾಂ ಮಾಡಿದೀ ಹಿಂಸೆ
ಅಂತ್ಯವಿಲ್ಲದ ದುಃಖ ಮೆಯ್ದಿಸ
ವೆಂತು ಬಿಟ್ಟಪುದೆಂನನೆಂದೀ
ಚಿಂತೆಯಿಂ ವೈರಾಗ್ಯರಸಮಯನಾದನಾ ನೃಪತಿ || ೦೯೮ ||

ತಂನ ತನಯಂಗಭಯರುಚಿಗ
ತ್ಯುಂನತನೆ ಕೊಡೆ ರಾಜ್ಯ ಲಕ್ಷ್ಮಿಯ
ಬಂನ ಬಡಿಪೀ ರಾಜ್ಯ ಲಕುಮಿಯನೊಲ್ಲೆನೆನೆ ಕುವರಂ
ನಿಂನ ತಂದೆಯ ತಪಕೆ ವಿಘ್ನವ
ಮಾಂನ್ಯ ಮಾಡದೆ ಬೇಗಮೇ ಗೊಂ
ಡಂನ್ಯದಿನದೊಳು ಜೈನ ದೀಕ್ಷೆಯ ಧರಿಸು ಮುದದಿಂದಾ || ೦೯೯ ||

ಯೆಂದು ನುಡಿದೆದೆಗೊಳಿಸಿ ರೂಢಿಗೆ
ಸಂದಗುಣ ಕಲ್ಯಾಣಮಿತ್ರನು
ಬಂದು ಭೂಪತಿಯೊಡನೆ ನಿತ್ತ ಸುದತ್ತ ಮುನಿಪತಿಯಾ
ಮುಂದೆಯುಭಯ ಪರಿಗ್ರಹಂಗಳ
ನೊಂದು ಮುಳಿಯದೆ ಬಿಟ್ಟುದೀಕ್ಷೆಯ
ನಂದು ತಾಳ್ದಿದರಾದರಾಗಮ ಸಂಯಾಮಾನ್ವಿತರೂ || ೧೦೦ ||

ಮದುವೆಯಂ ಮಾಡಲು ಕುವರಂಗೆ
ಮುದದಿಮಂತ್ರಿಗಳೆಲ್ಲ ನೆರದಿರೆ
ಯದನು ಕೇಳ್ದು ಕುಮಾರನಾತ್ಮನು ಜಯ ಯಶೋಧರೆಗೆ
ಪಡೆದು ರಾಜ್ಯವನಿತ್ತು ಸಾನುಜ
ನುದಿತ ಮುದದಿಂದಾ ಸುದತ್ತನ
ಪದ ಸಮೀಪದ ಪೊರ್ದ್ದಿ ಪರಮಾಗಮವನೋದುತಿರೆ || ೧೦೧ ||

ಮಾರಿದತ್ತ ನೃಪಾಲ ನೀನೀ
ಚಾರುತರಪುರವರಕೆ ಬಂದಾಮಾರ
ವೈರಿ ಸುದತ್ತರನಶರಿರ್ದ್ದರಿಂದೆಂದಮಂ
ಭೂರಿ ಕರುಣಾದಿ ಬೆಸಸಿ ಚರಿಗೆಗೆ
ಧೀರಮುನಿಗಾವೆಱಗಿ ಬರುತಿರೆ
ಕ್ರೂರ ತಳವರ ಪಿಡಿದು ತಂದನಿದೆಂಮ ವೃತ್ತವೂ || ೧೦೨ ||

ನಾನೆ ದಲ್ ಮುಂನಿನ ಯಶೋಧರ
ನೀನಿತಂಬಿನಿ ಚಂದ್ರಮತಿ ಮಾ
ತೇ ನೊಕಲ್ಪಿತ ಹಿಂಸೆಯಿಂ ಬಹು ದುಃಖವುಂಡೆವೆನೆ
ಮಾನ ನಿಧಿಯಾ ಮಾರಿದತ್ತನು
ತಾನೆ ಬಹುವಿಧ ಜೀವತತಿಗಳ
ನೇನುಮೋವದೆ ಕೊಂದೆನ ಕಟಕಟೆಂದು ನಡುಗಿದನೂ || ೧೦೩ ||

ಮಾರಿ ಪೀಠದಿ ನಿಳಿದು ತರುಣರ
ಚಾರು ಚರಣಂಗಳೊಳು ಕುಸುಮಾ
ಸಾರಮಂಸುರಿವೆಱಗಿ ದರ್ಶನ ಶುದ್ಧೆಯಾಗಿರದೆ ||
ಪೌರ ಜನಕ್ಕಿಂತೆಂದಳೆಂನ
ನೀರು ಗಂಧಾದಿಗಳಿನರ್ಚ್ಚಿಪು
ದಾರು ಮೃಗ ಬಲಿಯ ಗೊಟ್ಟರವರನು ಕೊಲುವೆನೆಂದಡೆಗೆ || ೧೦೪ ||

ನೆರೆಪಿದಘಮಿದು ಜೈನ ದೀಕ್ಷೆಯ
ಧರಿಸಿದಲ್ಲದೆ ಪೋಗದೆಂದಾ
ನರನಾಗಳು ಕುಸುಮದತ್ತಂಗಿತ್ತು ರಾಜ್ಯವನೂ ||
ಭರದಿನವರನು ಬೇಡಿ ದೀಕ್ಷೆಯ
ನುರುಗುಣಿಗಳಾಯುವರು ಮುದದಿಂ
ಗುರು ನಿಕಟಕೊಡಗೊಂಡು ಬಂದರು ಮಾರಿದತ್ತನನೂ || ೧೦೫ ||

ಭುವನಪತಿಯಾ ಮಾರಿದತ್ತನು
ಭುವನ ವಂ ದಿತರಾಕುಮಾರರು
ಭವವಿಚಿತ್ರಮಕೇಳಿಯಂಜಿದನೇಕ ಭೂವರರೂ
ಅವನಿ ವಿತ್ತ ಸುದತ್ತ ಯೋಗಿಗೆ
ತವದ ಭಕ್ತಿಯಿನೆಱಗಿ ದೀಕ್ಷೆಯ
ಭವ ಹರನಮನಾಂತಾದ ರಾಗಮಸಂ ಮಮಾನ್ವಿತರೂ || ೧೦೬ ||

ಮಾರಿದತ್ತ ಸುಪ್ರತಿ ಸುತಪದಿಂ
ಭೂರಿ ಸೌಖ್ಯ ತ್ರಿತೀದಿ ವಮಂ
ಚಾರುಗುಣಯುತ ಯುಗಮಿರದೀಶಾನ ಕಲ್ಪವನೂ
ಧೀರರೀತರ್ಸ್ಸು ಚಿತಂಗಳ
ಚಾರುನಾಕಂಗಳು ಮನೈದಿದ
ರಾರು ಬಂಣಿಪರಾತ್ಮ ಪರಿಣಾಮದ ವಿಚಿತ್ರತೆಯಂ || ೧೦೭ ||

ಶ್ರುತಮುನೀಶ್ವರವರ ತನೂಭವ
ಜಿತ ಮದನ ಶುಭಚಂದ್ರ ಮುನಿಪನ
ಸುತನು ಚಂದಂ ಣವರ್ಣ್ನಿ ರಚಿಸಿದ ಕಥೆ ಯಶೋಧರನಾ
ವಿತತಮಾಗಿ ಜಗದೊಳೆಸೆಯಲಿ
ಸತತಮಿದನೊಲಿದೋದುವಾಲಿಪ
ನುತಿಪರಿಗೆ ಮುನಿಸುವ್ರತಂ ನಿಜಸುಖ ಮನೊಲಿದೀಗೆ || ೧೦೮ ||