ಶ್ರೀ ವರ್ಧಮಾನ ಜಿನರಂ ಭಾವಿಸಿ ನಾಂ ಪೇಳ್ವೆನತಿ ಮುದದಿಂದಂ | ತ್ರೈಜಗನುತ ಹಿತವೆನಿಪೀ ತ್ರೈಲೋಕ್ಯ ಭೂಷಣಮೆಂಬ ನೋಂಪಿಯ ಕಥೆಯಂ ತ್ರೈಲೋಕ್ಯ ಭೂಷಣದ ನೋಂಪಿಯೆಂತೆಂದೊಡೆ | ಪುಷ್ಯ ಮಾಸದ ಶುಕ್ಲ ಪಕ್ಷದ ತದಿಗೆಯೆಂದುಪವಾಸಗೆಯ್ದು ಶ್ರೀ ಬರ್ದ್ಧಮಾನ ಭಟ್ಟಾರಕರ ಪ್ರತುಮೆಯಂ ಯಕ್ಷ ಯಕ್ಷಿ ನವದೇವತೆ ಸಹಿತಮಪ್ಪುದಂ ಅಭಿಷೇಕಗೆಯ್ದು ಅಷ್ಟವಿಧಾರ್ಚ್ಚನೆಯು ಮಾಡಿ ಕಂಮನಪ್ಪ ಪೂವಿನ ಮಾಲೆಗಳಿಂದವನ ಗಹನ ಮಿರಿಸುಉದಿಂತು ಮೂವತ್ತೆಱಡು ತದಿಗೆ ನೆಱೆದಂದು ಮುಂದಿನ ಪ್ರಮಾಣದೊಳು ಶ್ರೀ ವರ್ದ್ಧಮಾನ ಭಟ್ಟಾರಕರ ಪ್ರತುಮೆಯ ನೋಂಪಿಯಂ ಕೈಕೊಂಡುಮಿಂತೆಂಟು ತದಿಗೆವರಂ ಕಂಪಿದವಪ್ಪ ಪೂವಿನಲವಗಾಹನಮಿರಿಸೂದು | ಮತ್ತೆಂಟು ದಿನಂ ನಡದಂದು ತಂಮುಂಚಿರ್ದ್ದ ಪ್ರಮಾಣದೊಳೂ ಶ್ರೀವರ್ದ್ಧಮಾನ ಭಟ್ಟಾರಕರ ಪ್ರತುಮೆಯ ನೋಂಪಿಯಂ ಕೈಕೊಂಡುಮಿಂತೆಂಟು ತದಿಗೆವರಂ ಕಂಪಿದವಪ್ಪ ಪೂವಿನಲವಗಹನಂಮಿರಿಸುಉದು | ಮತ್ತೆಂಟು ದಿನಂ ಬರಂ ಕಬ್ಬಿನ ಕಂಡಿಕೆವರಂ ಅವಗಾಹನಮಿರಿಸುಉದಂತು ಮೂವತ್ತೆರಡು ತದಿಗೆ ನೆಱೆದೆಂದು ತಂಮುಂಚಿರ್ದ್ದ ಪ್ರಮಾಣದೊಳು ಶ್ರೀ ವರ್ದ್ಧಮಾನ ಭಟ್ಟಾರಕರ ಪ್ರತುಮೆ ಯಂ ಕೇರೊಳಾನುಂ ಪಟದೊಳಾನುಂ | ಚಿತ್ರದೊಳಾನುಂ | ಕೋಷ್ಢದೊಳಾನುಂ | ಕಲ್ಲೊಳಾನುಂ | ಕಾಷ್ಟದೊಳಾನುಂ | ಕಂಣಿನೊಳಾನುಂ | ಬೆಳ್ಳಿಯೊಳಾನುಂ | ಪೊಂನೊಳಾನಂ | ಪ್ರತುಮೆಯಂ ಮಾಡಿಸಿಯಾ ದೇವರ ಪ್ರತುಮೆಯಂ ಪ್ರತಿಷ್ಠಾವಿಧಾನದಿಂ ಪ್ರತಿಷ್ಠೆಯಂ ಮಾಡಿಸಿ ಯಾ ಪ್ರತುಮೆಯಂ ಮಂಟಪದೊಳು ಬಿಜಯಂಗೆಯ್ಯಸಿ | ಅಭಿಷೇಕಂಗೆಯ್ದು ಪಲವು ತೆಱದಷ್ಟವಿಧಾರ್ಚ್ಚನಾದ್ರವಂಗಳಿಂದರ್ಚ್ಚಿಸುಉದು | ನೋಂಪಿ ನೆಱಗುಮೀ ನೋಂಪಿಯ ಫಲಮೆಂತೆಂದೊಡೆ ನೋಂತುಜ್ಜವಣೆಯಂ ಮಾಡಿದ ಮಱುಭವಾಂತರದೊಳು ಕುಲಜರುಂ ಗುಣಿಗಳುಂ ಸ್ವರೂಪಿಗಳೂ | ಆರೋಗ್ಯವಂತರುಂ | ಆಯುಷ್ಯವಂತರುಂ | ತ್ಯಾಗಿಗಳುಂ ಜ್ಞಾನಿಗಳುಮಾಗಿ ಪುಟ್ಟಿ ಬೆಳೆದು ಮತ್ತೆಮಿಂತೆ ಪೇಳಲ್ಪಟ್ಟ ಗುಣಂಗಳಿಂ ನೆಱೆದು ಕಲತ್ತ ಪುತ್ರ ಮಿತ್ರ ಪ್ರವೃತ್ತಿವರ್ಗ್ಗಂಗಳಿಂದಂ ಪ್ರಿಯರಾಗಿ ಧನದಾನ್ಯ ಸಮೃದ್ಧರಾಗಿಯನೇಕ ಮಣಿ ಮಾಣಿಕ್ಯಂಗಳಿಂ ಸಮೇದ ಮುಕುಟ ಕುಂಡಳ ಕೇಯೂರ ಹಾರ ಕಟಕ ಕಟಿಸೂತ್ರಂ ನೂಪುರಾದ್ಯಾಭರಣಂಗಳಂ ತೊಡಲ್ಕೊಡೆಯರಾಗಿ | ಬೆಲೆಗೆ ಪಿರಿಯವಪ್ಪ ಪರಿಣ ಮುಂಣಿದವಪ್ಪ ಚೀನ ಮಹಾಚೀನ ಮೊದಲಾಗೊಡೆಯವನೇಕ ವಸ್ತ್ರಾಭರಣಂಗಳುಂ ಪಡೆಯಲುಂ ಬೆಸಗೆಯ್ಯುಲುಂ ಬೇಡಿದವರ್ಗುಡ ಕೊಡಲುಂ ನೆಱೆದು ಕಡೆಯೊಳು ನಿಜವೈರಾಗ್ಯ ಪರಾಯಣರಾಗಿ ದೀಕ್ಷಾಸ್ವೀಕಾರಂಗೆಯ್ದುಗೋಗ್ರ ತಪಃ ಪ್ರಭಾವದಿಂ ಮತಿಶ್ರುತಾವಧಿ ಮನಃಪರ್ಯಾಯ ಕೇವಲ ಜ್ಞಾನ ಪಂಚಕಮಂ ಪಡೆದು ಮೋಕ್ಷ ಶ್ರೀಯೊಳ್ಕೂಡಿ ನಿಶ್ರೇಯ ಸುಖಮನುಣುತಿರ್ಪರುಮಿಂತೀ ನೋಂಪಿಗೆ ಮಂಗಳ ಮಹಾಶ್ರೀ